Tag: drugs

  • ನೀವು ಚಿಕನ್ ಪ್ರಿಯರೇ.. ಹಾಗಿದ್ರೆ ಈ ಸುದ್ದಿಯನ್ನು ಮಿಸ್ ಮಾಡ್ದೆ ಓದಿ

    ನೀವು ಚಿಕನ್ ಪ್ರಿಯರೇ.. ಹಾಗಿದ್ರೆ ಈ ಸುದ್ದಿಯನ್ನು ಮಿಸ್ ಮಾಡ್ದೆ ಓದಿ

    ನವದೆಹಲಿ: ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಪೌಲ್ಟ್ರಿ ಉದ್ಯಮವು ಮನುಷ್ಯನ ಆರೋಗ್ಯ ಮೇಲೆ ಗಂಭೀರ ಸಮಸ್ಯೆಯನ್ನು ತಂದೊಡ್ಡುವ ಪ್ರತಿಜೀವಕ-ನಿರೋಧಕ ಉತ್ಪತ್ತಿ ಮಾಡುವ ತಾಣವಾಗಿದೆ ಅನ್ನೋ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.

    ವಿಶ್ವ ಆರೋಗ್ಯ ಸಂಸ್ಥೆಯೂ ವಿನಾಶಕಾರಿ ಡ್ರಗ್ಸ್ ಗಳು ಜೀವಸಂಕುಲಕ್ಕೆ ಮಾರಕ ಎಂದು ಹೇಳಿದೆ. ಭಾರತದ ಪಂಜಾಬ್ ರಾಜ್ಯದಲ್ಲಿನ ಪೌಲ್ಟ್ರಿ ಉದ್ಯಮದಲ್ಲಿ ಸಂಶೋಧನೆ ನಡೆಸಿರುವ ವಿಜ್ಞಾನಿಗಳು ಕೋಳಿಗಳಿಗೆ ಯಾವುದೇ ರೋಗ ಹರಡದಂತೆ ನೀಡುವ ಪೆನ್ಸಿಲಿನ್ ಮತ್ತು ಸೆಫಲೋಸ್ಪೊರಿನ್ ಎಂಬ ರೋಗನಿರೋಧಕ ಔಷಧಿ ಸಖತ್ ಡೇಂಜರ್ ಅಂತ ಹೇಳಿದ್ದಾರೆ.

    ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯ ಮಾಂಸದ ಬೇಡಿಕೆಯನ್ನು ನೀಗಿಸಲು ಕಡಿಮೆ ಅವಧಿಯಲ್ಲಿ ಕೋಳಿಗಳು ದಷ್ಟಪುಷ್ಟವಾಗಿ ಬೆಳೆಯುವಂತೆ ಮಾಡಲು ನೀಡುವ ನಿರೋಧಕಗಳಿಂದ ಕೋಳಿಗಳಲ್ಲಿ ಅಪಾಯಕಾರಿಯಾದ ಬ್ಯಾಕ್ಟೀರಿಯಾಗಳ ಉತ್ಪತ್ತಿಗೆ ಸಹಾಯಕಾರಿಯಾಗಿವೆ. ಅದ್ರಲ್ಲೂ ಭಾರತದಲ್ಲಿ ಇಂತಹ ಔಷಧಿಗಳನ್ನು ನೀಡಿ 35 ದಿನಗಳಿಗೆ ಬರುವ ಕೋಳಿಗಳು 30 ದಿನದಲ್ಲಿ ಮಾರುಕಟ್ಟೆಗೆ ಬರುವಂತೆ ಮಾಡಲಾಗುತ್ತೆ.

    ಇಂತಹ ವಿಷಕಾರಿ ಕೋಳಿಮಾಂಸ ಬಳಸಿದ ಬಳಿಕ ಉಳಿದ ತ್ಯಾಜ್ಯ ಮತ್ತೆ ಪರಿಸರ ಸೇರೋದ್ರಿಂದ ಗಾಳಿ, ಅಂತರ್ಜಲ, ಮಣ್ಣು ಸೇರಿ ಇಡೀ ವಾತಾವರಣವೇ ಕಲುಷಿತವಾಗುತ್ತದೆ. ಇದರಿಂದ ಕೋಳಿ ಮಾಂಸ ಸೇವಿಸದೇ ಇರೋರಿಗೂ ಈ ಸೋಂಕು ಅಂತರ್ಜಲವನ್ನು ಸೇವಿಸುವ ಮನುಷ್ಯರಿಗೆ ಹರಡುತ್ತೆ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಇಂತಹ ಮಾಂಸದ ಸೇವನೆಯಿಂದ ಪ್ರಮುಖವಾಗಿ ಕಿಡ್ನಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಲದೇ ವಿಶೇಷವಾಗಿ ಪುರುಷರಿಗೆ ನಪುಂಸಕತೆಯನ್ನು ಉಂಟುಮಾಡುತ್ತದೆ. ಬಳಿಕ ಮನುಷ್ಯನಲ್ಲಿ ವಿಪರೀತ ಕೊಬ್ಬು ಬೆಳೆಯುವಂತೆ ಮಾಡುತ್ತದೆ. ಇದು ಸ್ಥೂಲಕಾಯಕ್ಕೂ ಆಹ್ವಾನ ನೀಡುತ್ತದೆ.

    ಇನ್ನೂ ಕೆಲವು ಕೋಳಿಮಾಂಸದಲ್ಲಿ ಆರ್ಸೆನಿಕ್ ಎಂಬ ಭಯಾನಕ ವಿಷದ ಕಣಗಳು ಕಂಡುಬಂದಿವೆ. ವಿಚಿತ್ರ ಅಂದ್ರೆ ಈ ವಿಷ ಕೋಳಿಗಳ ದೇಹದಲ್ಲಿದ್ರೂ ಸಾಯಲ್ಲ, ಬದಲಿಗೆ ಇಂತಹ ಮಾಂಸ ತಿಂದ ಮನುಷ್ಯನ ಪ್ರಾಣಕ್ಕೆ ಕುತ್ತು ತರುತ್ತೆ. ಹೀಗಾಗಿ ಕೆಲವು ಮುನ್ನೆಚ್ಚರಿಕೆಗಳನ್ನು ಕೂಡ ವಿಜ್ಞಾನಿಗಳು ಹೇಳಿದ್ದಾರೆ. ಮಾಂಸವನ್ನು ತೊಳೆದುಕೊಳ್ಳುವ ಮುನ್ನ ಮತ್ತು ಬಳಿಕ ಸೋಂಕು ನಿವಾರಕ ದ್ರವದಿಂದ ಸ್ವಚ್ಛಗೊಳಿಸುವುದು ಅಗತ್ಯ, ಮಾಂಸವನ್ನು ಚೆನ್ನಾಗಿ ತೊಳೆದು ರಕ್ತವೆಲ್ಲಾ ಹೋದ ಬಳಿಕವೂ ಚೆನ್ನಾಗಿ ಬೇಯಿಸಬೇಕು ಅಂತ ಹೇಳಿದ್ದಾರೆ.

  • ಶಾಕಿಂಗ್: ಅಪಹರಣ, ಅತ್ಯಾಚಾರಕ್ಕೆ ಸುಪಾರಿ? ಬಹುಭಾಷಾ ನಟಿ ಹೇಳಿದ್ದೇನು?

    ಶಾಕಿಂಗ್: ಅಪಹರಣ, ಅತ್ಯಾಚಾರಕ್ಕೆ ಸುಪಾರಿ? ಬಹುಭಾಷಾ ನಟಿ ಹೇಳಿದ್ದೇನು?

    ಕೊಚ್ಚಿ: ಕೇರಳ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರಕ್ಕೆ ಸುಪಾರಿ ನೀಡಲಾಗಿತ್ತಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಫೆಬ್ರವರಿ 17ರ ಶುಕ್ರವಾರ ರಾತ್ರಿ ತನ್ನ ಮೇಲಾದ ಪಾತಕ ಕೃತ್ಯದ ಬಗ್ಗೆ ಕಳಮಶೇರಿ ಮ್ಯಾಜಿಸ್ಟ್ರೇಟರ್ ಮುಂದೆ ನೀಡಿದ ಹೇಳಿಕೆಯಲ್ಲಿ ಸ್ವತಃ ನಟಿಯೇ ಈ ಭಯಾನಕ ಸಂಗತಿಯನ್ನು ಹೊರಹಾಕಿದ್ದಾರೆ ಎಂದು ಸ್ಥಳಿಯ ವಾಹಿನಿಯೊಂದು ಸೋಮವಾರ ಮಧ್ಯಾಹ್ನ ವರದಿ ಮಾಡಿದೆ.

    “ನಿನ್ನ ಮೇಲೆ ಕೃತ್ಯ ಎಸಗುವುದಕ್ಕೆ ನಮಗೆ ಸುಪಾರಿ ನೀಡಲಾಗಿದೆ. ಆ ಕಾರಣದಿಂದ ನೀನು ನಮ್ಮೊಂದಿಗೆ ಸಹಕರಿಸಬೇಕು. ಒಂದು ವೇಳೆ ಪ್ರತಿರೋಧಿಸಿದರೆ ಅದರಿಂದಾಗುವ ಕೆಟ್ಟ ಪರಿಣಾಮಗಳಿಗೆ ನಾವು ಹೊಣೆಯಲ್ಲ. ನೀನು ಈ ರೀತಿ ಪ್ರತಿರೋಧಿಸಿದರೆ ನಿನ್ನನ್ನು ಹತ್ತಿರದಲ್ಲೇ ಇರುವ ತಮ್ಮನಂ ಫ್ಲಾಟ್‍ಗೆ ಎತ್ತಿಕೊಂಡು ಹೋಗಿ ಡ್ರಗ್ಸ್ ಚುಚ್ಚುಬೇಕಾಗುತ್ತದೆ. ಅಲ್ಲಿ 20 ಜನ ನಿನ್ನ ಮೇಲೆ ದೌರ್ಜನ್ಯ ಎಸಗಲು ಕಾಯುತ್ತಿದ್ದಾರೆ” ಎಂದು ಅವರು ಬೆದರಿಕೆ ಹಾಕಿದ್ದ ವಿಚಾರವನ್ನು ನಟಿ ಮ್ಯಾಜಿಸ್ಟ್ರೇಟರ್ ಮುಂದೆ ಹೇಳಿಕೆ ನೀಡಿದ್ದಾರೆ.

    ನಿರ್ಮಾಪಕನಿಗೆ ನಂಟು: ಕೃತ್ಯ ನಡೆದ ರಾತ್ರಿಯೇ ಪ್ರಮುಖ ಆರೋಪಿಯಾಗಿರುವ ಪಲ್ಸರ್ ಸುನಿಗೆ ಪ್ರಮುಖ ನಿರ್ಮಾಪಕರೊಬ್ಬರು ಕರೆ ಮಾಡಿ ಮಾತಾಡಿದ್ದಾರೆ. ಬಳಿಕ ಆ ನಂಬರ್ ಸ್ವಿಚ್ ಆಫ್ ಆಗಿದೆ. ನಿರ್ಮಾಪಕರು ಮಾತ್ರವಲ್ಲದೇ ಸಿನಿಮಾ ಇಂಡಸ್ಟ್ರಿಯ ಉಳಿದ ಐವರೊಂದಿಗೂ ಈತನಿಗೆ ಉತ್ತಮ ನಂಟಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಸುನಿ ಎಸ್ಕೇಪ್: ಪೊಲೀಸರ ಬಲೆಯಿಂದ ಕೂದಲೆಳೆ ಅಂತರದಲ್ಲಿ ಸುನಿ ಎಸ್ಕೇಪ್ ಆಗಿದ್ದಾನೆ. ಆತನ ಮೊಬೈಲ್ ಟ್ರೇಸ್ ಮಾಡಿದ್ದ ಪೊಲೀಸರು ಅಳಪುಜ್ಜಾದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದು ಬಂಧನಕ್ಕೆ ಹೋಗ್ತಿದ್ದಂತೆ ಆತ ಅಲ್ಲಿಂದ ಪರಾರಿಯಾಗಿದ್ದಾನೆ.

    ಜಾಮೀನಿಗೆ ಮೊರೆ: ನಿರೀಕ್ಷಣಾ ಜಾಮೀನಿಗಾಗಿ ಪಲ್ಸರ್ ಸುನಿ, ಮಣಿಕಂಠನ್ ಮತ್ತು ವಿಜ್ಞೇಶ್ ಹೈಕೋರ್ಟ್ ಕದ ತಟ್ಟಿದ್ದಾರೆ. ಸೋಮವಾರ ಮಧ್ಯಾಹ್ನ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಮಂಗಳವಾರ ಈ ಅರ್ಜಿಯ ವಿಚಾರಣೆ ಹೈಕೋರ್ಟ್ ನಲ್ಲಿ ಬರಲಿದೆ.