Tag: drugs

  • ನಿಷೇಧಿತ ಡ್ರಗ್ಸ್ ಸೇವನೆ: ವಿಶ್ವಕಪ್ ತಂಡದಿಂದ ಇಂಗ್ಲೆಂಡ್ ಆಟಗಾರ ಔಟ್

    ನಿಷೇಧಿತ ಡ್ರಗ್ಸ್ ಸೇವನೆ: ವಿಶ್ವಕಪ್ ತಂಡದಿಂದ ಇಂಗ್ಲೆಂಡ್ ಆಟಗಾರ ಔಟ್

    ಲಂಡನ್: ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಅಲೆಕ್ಸ್ ಹೆಲ್ಸ್ ನಿಷೇಧಿತ ಡ್ರಗ್ಸ್ ಸೇವನೆ ಹಿನ್ನೆಲೆಯಲ್ಲಿ ವಿಶ್ವಕಪ್ ತಂಡದಿಂದ ಕೈಬಿಡಲಾಗುತ್ತಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಸಮಿತಿ ಮಾಹಿತಿ ನೀಡಿದೆ.

    ವಿಶ್ವಕಪ್ ಮಾತ್ರವಲ್ಲದೇ ಐರ್ಲೆಂಡ್ ಹಾಗೂ ಪಾಕಿಸ್ತಾನದ ವಿರುದ್ಧ ನಡೆಯುವ ಸೀಮಿತ ಓವರ್ ಗಳ ಸರಣಿಯಿಂದಲೂ ಹೊರಗಿಡಲಾಗಿದ್ದು, 21 ದಿನಗಳ ನಿಷೇಧ ವಿಧಿಸಲಾಗಿದೆ. ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ನಿಷೇಧಿತ ಔಷಧಿ ಸೇವನೆ ಖಚಿತವಾಗಿರುವುದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಸಿಬಿ ಹೇಳಿದೆ.

    ಇಂಗ್ಲೆಂಡ್ ತಂಡದ ಹಿತಾದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ ಎಂದು ಇಸಿಬಿ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದು, ತಂಡದೊಳಗೆ ಉತ್ತಮ ವಾತಾವರಣ ಸೃಷ್ಟಿಸಿ ಅನಗತ್ಯ ಗೊಂದಲ ಆಗದಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉಲ್ಲೇಖಿಸಲಾಗಿದೆ.

    ಇದೇ ವೇಳೆ ಈ ನಿರ್ಧಾರವನ್ನು ಅಲೆಕ್ಸ್ ಅವರ ವೃತ್ತಿ ಜೀವನದ ಕೊನೆ ಎಂದು ಪರಿಗಣಿಸುವಂತಿಲ್ಲ. ಅವರಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹಾಗೂ ಪಿಸಿಎ ಸಹಕಾರ ಮುಂದುವರಿಯಲಿದೆ. ಅಲ್ಲದೇ ದೇಶಿಯ ನಾಟಿಂಗ್‍ಹ್ಯಾಮ್‍ಶೈರ್ ನಲ್ಲಿ ಆಡಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.

    ಇಂಗ್ಲೆಂಡ್ ತಂಡದ ಪರ 70 ಏಕದಿನ ಪಂದ್ಯಗಳನ್ನು ಆಡಿರುವ ಅಲೆಕ್ಸ್ 95.52 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅಲ್ಲದೇ ಅವರನ್ನು ವಿಶ್ವಕಪ್ ತಂಡದಲ್ಲಿ ಆರಂಭಿಕ ಸ್ಥಾನ ನೀಡಿ ಆಯ್ಕೆ ಮಾಡಲಾಗಿತ್ತು. ಆದರೆ ವಿಶ್ವಕಪ್‍ಗೆ 1 ತಿಂಗಳು ಬಾಕಿ ಇರುವ ಸಂದರ್ಭದಲ್ಲಿ ಇಂತಹ ನಿರ್ಧಾರ ಕೈಗೊಂಡಿರುವುದು ಅಲೆಕ್ಸ್ ಹೆಲ್ಸ್ ಅವರ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇಸಿಬಿ ವಿಶ್ವಕಪ್ ಗೆ ಬೇರೆ ಆಟಗಾರನ ಹೆಸರನ್ನು ಇಲ್ಲಿಯವರೆಗೆ ಪ್ರಕಟಿಸಿಲ್ಲ.

  • ವಸತಿ ಶಾಲೆಯ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಡ್ರಗ್ಸ್ ನೀಡಿ ಸಿಬ್ಬಂದಿಯಿಂದ ರೇಪ್!

    ವಸತಿ ಶಾಲೆಯ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಡ್ರಗ್ಸ್ ನೀಡಿ ಸಿಬ್ಬಂದಿಯಿಂದ ರೇಪ್!

    ಮುಂಬೈ: ವಸತಿ ಶಾಲೆಯೊಂದರಲ್ಲಿ ಓದುತ್ತಿದ್ದ ಬುಡಕಟ್ಟು ಸಮುದಾಯದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಶಾಲಾ ಸಿಬ್ಬಂದಿಯೇ ಡ್ರಗ್ಸ್ ನೀಡಿ ಅತ್ಯಾಚಾರ ಮಾಡಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿಗಳನ್ನು ವಸತಿ ನಿಯಲದ ಸೂಪರಿಂಟೆಂಡೆಂಟ್ ಚಬನ್ ಪಾಚೇರ್ ಮತ್ತು ಡೆಪ್ಯೂಟಿ ಸೂಪರಿಂಟೆಂಡೆಂಟ್ ನರೇಂದ್ರ ವಿರುತ್ಕರ್ ಎಂದು ಗುರುತಿಸಲಾಗಿದೆ. ಈ ಸಿಬ್ಬಂದಿಯೇ ವಿದ್ಯಾರ್ಥಿಯರಿಗೆ ಡ್ರಗ್ಸ್ ನೀಡಿ ನಶೆ ಬರುವಂತೆ ಮಾಡಿ, ಅಪ್ರಾಪ್ತೆಯರ ಮೇಲೆ ನಿರಂತರ ಅತ್ಯಾಚಾರ ಮಾಡಿದ್ದಾರೆ. ಚಂದ್ರಾಪುರ ಜಿಲ್ಲೆಯ ರಜುರಾ ತಹಸೀಲ್‍ನಲ್ಲಿರುವ ಈ ವಸತಿ ಶಾಲೆ ಕಾಂಗ್ರೆಸ್‍ನ ಮಾಜಿ ಶಾಸಕರಿಗೆ ಸೇರಿದ್ದು, ಖಾಸಗಿ ಸಂಸ್ಥೆಯಿಂದ ನಡೆಸಲ್ಪಡುತ್ತಿದೆ ಎಂದು ವರದಿಯಾಗಿದೆ.

    ನಿರಂತರ ಡ್ರಗ್ಸ್ ಸೇವನೆ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಆಗ ಅವರನ್ನು ಚಂದ್ರಾಪುರ ಸರ್ಕಾರಿ ಆಸ್ಪತ್ರೆಗೆ ತೋರಿಸಿದಾಗ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂಬ ವಿಷಯ ಹೊರಬಿದ್ದಿದೆ. ಆಗ ವಸತಿ ನಿಲಯದ ಆಡಳಿತ ಮಂಡಳಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿದಾಗ ವಸತಿ ನಿಲಯದಲ್ಲಿ ಬಾಲಕಿಯರ ಮೇಲೆ ಸಿಬ್ಬಂದಿಯೇ ಅತ್ಯಾಚಾರ ಮಾಡಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ. ಆರೋಪಿಗಳಾದ ಪಾಚೇರ್ ಮತ್ತು ವಿರುತ್ಕರ್ ಹಾಗೂ ಈ ಕೃತ್ಯದಲ್ಲಿ ಇವರಿಗೆ ಸಹಕರಿಸಿದ ಹಾಸ್ಟೆಲ್ ವಾರ್ಡನ್ ಕಲ್ಪನಾ ಠಾಕ್ರೆ ಮತ್ತು ಸಹಾಯಕಿ ಲತಾ ಕನಕೆ ಅವರನ್ನು ಮಂಗಳವಾರದಂದು ಪೊಲೀಸರು ಬಂಧಿಸಿದ್ದಾರೆ.

    ಈ ಸಂಬಂಧ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ತನಿಖೆ ವೇಳೆಯಲ್ಲಿ ವಸತಿ ಶಾಲೆಯ ಸೂಪರಿಂಟೆಂಡೆಂಟ್ ಕಚೇರಿಯಲ್ಲಿ ಹಲವು ಕಾಂಡೋಮ್‍ಗಳು, ವಯಾಗ್ರಾ ಮಾತ್ರೆಗಳು ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಹಣಕಾಸು ಸಚಿವ ಹಾಗೂ ಚಂದ್ರಾಪುರ ಜಿಲ್ಲಾ ಉಸ್ತುವಾರಿ ಸಚಿವ ಸುಧೀರ್ ಮುಂಗಂಟಿವಾರ್ ಈ ಬಗ್ಗೆ ಆಳವಾದ ತನಿಖೆ ನಡೆಸುವಂತೆ ಆದೇಶಿಸಿದ್ದು, ಈ ಶಾಲೆಗೆ ನೀಡಲಾಗಿದ್ದ ಸರ್ಕಾರದ ಮಾನ್ಯತೆಯನ್ನು ರದ್ದುಪಡಿಸುವಂತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಗಾಂಜಾ ಮತ್ತಿನಲ್ಲಿ ಪೊಲೀಸರ ಮೇಲೆ ಹಲ್ಲೆ

    ಗಾಂಜಾ ಮತ್ತಿನಲ್ಲಿ ಪೊಲೀಸರ ಮೇಲೆ ಹಲ್ಲೆ

    ಶಿವಮೊಗ್ಗ: ಗಾಂಜಾ ಮತ್ತಿನಲ್ಲಿ ಪೊಲೀಸರ ಮೇಲೆಯೇ ಯುವಕರು ಹಲ್ಲೆ ನಡೆಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಲಕ್ಷ್ಮಿಚಿತ್ರ ಟಾಕೀಸ್ ಬಳಿ ಗಾಂಜಾ ಹಾಗೂ ಮದ್ಯದ ಅಮಲಿನಲ್ಲಿದ್ದ ಯುವಕರು ರಸ್ತೆಯಲ್ಲಿ ಸಾರ್ವಜನಿಕರಿಗೆ ಕಿರಿಕ್ ಮಾಡಿದ್ದಾರೆ. ಇದರಿಂದಾಗಿ ಈ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಇವರ ವರ್ತನೆ ಬಗ್ಗೆ ಆಕ್ಷೇಪಿಸಿದವರ ಮೇಲೆಯೂ ಹಲ್ಲೆ ಮಾಡಿದ್ದಾರೆ.

    ಇದೇ ಸಮಯಕ್ಕೆ ಸ್ಥಳಕ್ಕೆ ಬಂದ ಮುಫ್ತಿಯಲ್ಲಿದ್ದ ಪೊಲೀಸರ ಮೇಲೂ ಹಲ್ಲೆ ಮಾಡಿದ್ದಾರೆ. ಕೊನೆಗೆ ನಾವು ಪೊಲೀಸರು ಎಂದು ಹೇಳಿದರೂ ಬಿಡದೆ ಅವಾಚ್ಯವಾಗಿ ನಿಂದಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಸ್ಥಳೀಯರ ನೆರವಿನಿಂದ ಮೂವರನ್ನು ಹಿಡಿದು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ನಾಲ್ಕೈದು ಜನರಲ್ಲಿ ಮೂವರು ಮಾತ್ರ ಸಿಕ್ಕಿಬಿದ್ದಿದ್ದಾರೆ.

    ಇವರು ಪ್ರತಿಷ್ಠಿತರ ಮಕ್ಕಳು ಎಂಬ ಕಾರಣಕ್ಕೆ ಠಾಣೆಯಲ್ಲಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತೋಟದ ಮನೆಯಲ್ಲಿ ಗಾಂಜಾ ಗಮ್ಮತ್ತು? ನಶೆಯಲ್ಲಿ ಯುವಕ-ಯುವತಿಯರ ತೇಲಾಟ!

    ತೋಟದ ಮನೆಯಲ್ಲಿ ಗಾಂಜಾ ಗಮ್ಮತ್ತು? ನಶೆಯಲ್ಲಿ ಯುವಕ-ಯುವತಿಯರ ತೇಲಾಟ!

    ಚಿಕ್ಕಬಳ್ಳಾಪುರ: ಜಿಲ್ಲೆಯ ಹನುಮಂತಪುರ ಗ್ರಾಮದ ತೋಟದ ಮನೆಯೊಂದರಲ್ಲಿ ಮದ್ಯದ ಪಾರ್ಟಿ ಜೋರಾಗಿ ನಡೆದಿದ್ದು, ಭಾಗಿಯಾಗಿದ್ದವರು ಗಾಂಜಾ ಸೇವನೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

    ಬೆಂಗಳೂರಿನಿಂದ ಬಂದಿರುವ ಯುವಕ-ಯುವತಿಯರು ಮದ್ಯದ ಪಾರ್ಟಿ ಆಯೋಜನೆ ಮಾಡಿದ್ದು, ತೋಟದ ಮನೆಯ ಬಳಿ ಸುತ್ತಲೂ ರಾಶಿ ರಾಶಿ ಮದ್ಯದ ಬಾಟಲಿಗಳು ಬಿದ್ದಿವೆ. ಮದ್ಯದ ಪಾರ್ಟಿಯಲ್ಲಿ ಯುವಕ-ಯುವತಿಯರು ತೇಲಾಡುತ್ತಾ ನೃತ್ಯ ಮಾಡಿರುವ ವಿಡಿಯೋ ಈಗ ಬೆಳಕಿಗೆ ಬಂದಿದೆ. ವಿಡಿಯೋದಲ್ಲಿ ಯುವಕ-ಯುವತಿಯರು ನಶೆಯಲ್ಲಿ ತೇಲಾಡ್ತಾ ನೃತ್ಯ ಮಾಡಿದ್ದು, ಮದ್ಯದ ಜೊತೆ ಗಾಂಜಾ ಕೂಡ ಸೇವಿಸಿರಬಹುದು ಅನ್ನೋ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಮಾಹಿತಿ ತಿಳಿದ ವೃತ್ತ ನಿರೀಕ್ಷಕ ಸುದರ್ಶನ್ ತೋಟದ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಈ ವೇಳೆ ತೋಟದ ಮಾಲೀಕ ಕೃಷ್ಣಪ್ಪ ನವರನ್ನು ವಿಚಾರಣೆ ನಡೆಸಿದ್ದು, ನಮ್ಮ ಅಣ್ಣನ ಮಕ್ಕಳಾದ ಇಬ್ಬರ ಯುವಕರ ಜೊತೆ ಅವರ ಸ್ನೇಹಿತರು ಗಿಡಮೂಲಿಕೆಗಳ ಬಗ್ಗೆ ರಿಸರ್ಚ್ ಮಾಡಲೆಂದು ತೋಟಕ್ಕೆ ಬಂದಿದ್ದರು. ಒಂದು ದಿನ ಮದ್ಯದ ಪಾರ್ಟಿ ಆಯೋಜನೆ ಮಾಡಿದ್ದರು. ಆದರೆ ಗಾಂಜಾ ಸೇವನೆ ಮಾಡಿಲ್ಲ ಅಂತ ಸ್ಪಷ್ಟನೆ ನೀಡಿದರು. ಆದರೆ ಕೆಲ ಸ್ಥಳೀಯರ ಮಾಹಿತಿ ಪ್ರಕಾರ ವಿಕೇಂಡ್‍ಗಳಲ್ಲಿ ತೋಟದ ಮನೆಯಲ್ಲಿ ಮದ್ಯದ ಪಾರ್ಟಿಗಳನ್ನು ಆಯೋಜನೆ ಮಾಡಲಾಗುತ್ತಿದೆ ಅಂತ ಹೇಳುತ್ತಿದ್ದಾರೆ. ಬೆಂಗಳೂರಿನಿಂದ ಬರುವ ಯುವಕ-ಯುವತಿಯರು ಕುಡಿದು ತೂರಾಡಿತ್ತುತ್ತಾರೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೂ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ.

    ಘಟನಾ ಸ್ಥಳದಲ್ಲಿ ರಾಶಿ ರಾಶಿ ಮದ್ಯದ ಬಾಟಲಿಗಳು ಪತ್ತೆಯಾಗಿರುವುದು ಪಾರ್ಟಿ ಆಯೋಜನೆ ಮಾಡಿರುವುದು ಧೃಡವಾಗುತ್ತಿದೆ. ಆದರೆ ಗಾಂಜಾ ಸೇವೆನೆ ಬಗ್ಗೆ ಧೃಡಪಟ್ಟಿಲ್ಲ. ಅಂತಹ ಯಾವುದೇ ಕುರುಹುಗಳು ಸ್ಥಳದಲ್ಲಿ ಪತ್ತೆಯಾಗಿಲ್ಲ. ಮುಂದೆ ಈ ರೀತಿಯ ಮದ್ಯದ ಪಾರ್ಟಿಗಳನ್ನು ಆಯೋಜನೆ ಮಾಡದಂತೆ ಸಿಪಿಐ ಸುದರ್ಶನ್ ತೋಟದ ಮಾಲೀಕ ಕೃಷ್ಣಪ್ಪಗೆ ತಾಕೀತು ಮಾಡಿದ್ದಾರೆ.

    ಬೆಟ್ಟ ಗುಡ್ಡಗಳ ಪಕ್ಕದಲ್ಲೇ ಇರುವ ತೋಟದಲ್ಲಿ ಮದ್ಯದ ಪಾರ್ಟಿಗಳು ಜೋರಾಗಿ ನಡೆದಿದ್ದು, ಈ ಭಾಗದಲ್ಲಿ ಚಿರತೆ ಸಹ ಇದೆಯಂತೆ. ಹೀಗಾಗಿ ಇಂತಹ ಸ್ಥಳಗಳಲ್ಲಿ ಮದ್ಯದ ಪಾರ್ಟಿ ಮಾಡಿ ಅನಾಹುತ ಸಂಭವಿಸಿದರೆ ಯಾರು ಹೊಣೆ ಅನ್ನೋ ಪ್ರಶ್ನೆ ಸಹ ಕಾಡುತ್ತೆ. ಹೀಗಾಗಿ ಪೊಲೀಸರು ಗಾಂಜಾ ಗಮ್ಮತ್ತು ನಡೆದಿದಿಯಾ ಅನ್ನೋ ಸತ್ಯ ಬಯಲಿಗೆ ತರುವುದರ ಜೊತೆಗೆ ಮುಂದೆ ಆಗಬಹುದಾದ ಅನಾಹುತಗಳಿಗೆ ಬ್ರೇಕ್ ಹಾಕಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೋಷಕರೇ ಎಚ್ಚರ ಎಚ್ಚರ – ಕಲಬುರಗಿಯಲ್ಲಿ ಎಗ್ಗಿಲ್ಲದೆ ನಡೀತಿದೆ ಹುಕ್ಕಾ ಮಾರಾಟ

    ಪೋಷಕರೇ ಎಚ್ಚರ ಎಚ್ಚರ – ಕಲಬುರಗಿಯಲ್ಲಿ ಎಗ್ಗಿಲ್ಲದೆ ನಡೀತಿದೆ ಹುಕ್ಕಾ ಮಾರಾಟ

    ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಹಬಾದ್ ಪಟ್ಟಣದ ಖಾಸಗಿ ಶಾಲೆಯಲ್ಲಿ ಹುಕ್ಕಾ ಮಾರಾಟ ದಂಧೆ ಎಗ್ಗಿಲ್ಲದೇ ನಡೀತಿದೆ. ಅಪ್ರಾಪ್ತ ಬಾಲಕರಿಗೆ ಯಾಮಾರಿಸಿ ಶಾಲೆಯ ಆವರಣದಲ್ಲೇ ರಾಜಾರೋಷವಾಗಿ ಹುಕ್ಕಾ ಮಾರಾಟ ಮಾಡ್ತಿದ್ದಾರೆ.

    ಶಹಬಾದ್ ನಿವಾಸಿ ರಿಜ್ವಾನ್ ಎಂಬವನು ಈ ದಂಧೆ ನಡೆಸುತ್ತಿದ್ದು, ಮಕ್ಕಳಿಂದ 1 ಸಾವಿರದಿಂದ 1200 ರೂಪಾಯಿಗೆ ಮಾರಾಟ ಮಾಡ್ತಿದ್ದಾನೆ. ಹುಕ್ಕಾ ಚಟಕ್ಕೆ ಬಿದ್ದಿರುವ ಮಕ್ಕಳು ಅಪ್ಪನ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಮನೆಯಲ್ಲಿನ ದುಡ್ಡು ಕಳ್ಳತನದಿಂದ ಅನುಮಾನಗೊಂಡ ಪೋಷಕರು ಫಾಲೋ ಮಾಡಿದಾಗ ಆರೋಪಿ ರಿಜ್ವಾನ್‍ನ ಅಸಲಿ ಬಣ್ಣ ಬಯಲಾಗಿದೆ.

    ಹುಕ್ಕಾ ಮಾರಾಟ ಮಾಡಲು ಬಾಲಕರನ್ನೇ ಆರೋಪಿ ಟಾರ್ಗೆಟ್ ಮಾಡಿದ್ದನು. ಯಾಕಂದ್ರೆ ಈ ಹಿಂದೆ ಕೆಲ ಹುಡುಗರು ಅಲ್ಲಿ ಹುಕ್ಕಾ ಖರೀದಿ ಮಾಡಿದ್ದರು. ಆ ಬಳಿಕ ಶಾಲಾ ಮಕ್ಕಳಿಗೆ ಅದರ ರುಚಿ ತೋರಿಸಿದ್ದಾನೆ. ಇದರಿಂದ ಪ್ರೇರೇಪಣೆಗೊಂಡ ಶಹಬಾಜ್ ನ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಹುಕ್ಕಾ ಖರೀದಿ ಮಾಡಿ ಸೇವನೆ ಮಾಡಲು ಆರಂಭಿಸಿದ್ರು. ಇತ್ತ ಪ್ರತಿನಿತ್ಯ ಮನೆಯಲ್ಲಿ ಹಣ ಕಳ್ಳತನವಾಗುತ್ತಿರುವುದನ್ನು ಮನಗಂಡ ಪೋಷಕರು ತಮ್ಮ ಮನೆಯ ಬಾಲಕರನ್ನು ಫಾಲೋ ಮಾಡಿದ್ದಾರೆ. ಈ ವೇಳೆ ಮಕ್ಕಳು ಹುಕ್ಕಾ ಖರೀದಿ ಮಾಡಿ ಸೇವನೆ ಮಾಡುವುದು ಬೆಳಕಿಗೆ ಬಂದಿದೆ.

    ಸದ್ಯ ಆರೋಪಿ ರಿಜ್ವಾನ್‍ನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಶಹಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆ ಕೂಡ ಮತ್ತೊಂದು ಖಾಸಗಿ ಶಾಲೆಯಲ್ಲಿ ಮೂರು ಹುಕ್ಕಾಗಳು ಪತ್ತೆಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಡು ರಸ್ತೆಯಲ್ಲೇ ಮಹಿಳೆಯ ಬಟ್ಟೆ ಬಿಚ್ಚಲು ಯತ್ನಿಸಿದ ಕಾಮುಕ

    ನಡು ರಸ್ತೆಯಲ್ಲೇ ಮಹಿಳೆಯ ಬಟ್ಟೆ ಬಿಚ್ಚಲು ಯತ್ನಿಸಿದ ಕಾಮುಕ

    ಬೆಂಗಳೂರು: ಗಾಂಜಾ ಗುಂಗಿನಲ್ಲಿದ್ದ ಕಾಮುಕನೊಬ್ಬ ಹಾಡಹಗಲೇ ನಡು ರಸ್ತೆಯಲ್ಲಿ ಮಹಿಳೆಯ ಬಟ್ಟೆ ಬಿಚ್ಚಲು ಯತ್ನಿಸಿದ ಘಟನೆ ಬೆಂಗಳೂರಿನ ಕಲ್ಯಾಣನಗರ ಸಮೀಪ ಚಲ್ಲಕೆರೆ ಬಳಿ ನಡೆದಿದೆ.

    ಇದೇ ತಿಂಗಳ 8 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮನೆಯಿಂದ ಅಂಗಡಿಗೆ ತೆರಳುತ್ತಿದ್ದ ಮಹಿಳೆಯನ್ನು ಹಿಂಬದಿಯಿಂದ ಬಂದು ಕೈ ಹಿಡಿದ ಕಾಮುಕ ಆಕೆಯ ಬಟ್ಟೆ ಬಿಚ್ಚಲು ಯತ್ನಿಸಿದ್ದಾನೆ. ಈ ವೇಳೆ ಬೀದಿ ಕಾಮುಕನಿಂದ ಬಿಡಿಸಿಕೊಳ್ಳಲು ರಸ್ತೆಯಲ್ಲಿ ಮಹಿಳೆ ಕಿರುಚಾಡಿದ್ದಾಳೆ. ಆಗ ಮಹಿಳೆಯ ಕಿರುಚಾಟ ಕೇಳಿ ಸ್ಥಳಕ್ಕೆ ಆಗಮಿಸಿದ ಸುತ್ತಮುತ್ತಲ ನಿವಾಸಿಗಳು ಕಾಮುಕನನ್ನು ಹಿಡಿದು ಸರಿಯಾಗಿ ಥಳಿಸಿದ್ದಾರೆ.

    ಡ್ರಗ್ಸ್ ಹಾಗೂ ಗಾಂಜಾ ಸೇವಿಸಿ ಬೀದಿಯಲ್ಲಿ ಓಡಾಡ್ತಿದ್ದ ಅಸಾಮಿ ಅಮಲಿನಲ್ಲಿ ಮಹಿಳೆಯನ್ನು ಎಳೆದಾಡಿದ್ದಾನೆ. ಘಟನೆ ಬಳಿಕ ಕಾಮುಕನನ್ನು ಹೆಣ್ಣೂರು ಪೊಲೀಸರಿಗೆ ಸಾರ್ವಜನಿಕರು ಒಪ್ಪಿಸಿದ್ದಾರೆ. ಪೊಲೀಸರು ವಿಚಾರಣೆ ಮಾಡುವ ವೇಳೆ ಆರೋಪಿಯು ಯಲಹಂಕ ಮೂಲದ ಅಲುಮೀನ್ ಎಂಬುದು ಪತ್ತೆಯಾಗಿದೆ. ಗಾಂಜಾ ಸೇವನೆಗಾಗಿ ಹೆಣ್ಣೂರು ಕಡೆ ಬಂದಿದ್ದ ಆರೋಪಿ ಹೆಣ್ಣೂರು ಬಳಿಯ ವಿದೇಶಿ ಪ್ರಜೆಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.

    ಘಟನೆ ಕುರಿತು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಷ್ಟಗಿ ಸುತ್ತಮುತ್ತ ಮತ್ತು ಭರಿಸುವ ಔಷಧಿ, ಸಿರಿಂಜ್ ಪತ್ತೆ- ಸಾರ್ವಜನಿಕರಲ್ಲಿ ಆತಂಕ

    ಕುಷ್ಟಗಿ ಸುತ್ತಮುತ್ತ ಮತ್ತು ಭರಿಸುವ ಔಷಧಿ, ಸಿರಿಂಜ್ ಪತ್ತೆ- ಸಾರ್ವಜನಿಕರಲ್ಲಿ ಆತಂಕ

    ಕೊಪ್ಪಳ: ಜಿಲ್ಲೆಯ ಕುಷ್ಟಗಿ ಹೊರವಲಯದ ಸುತ್ತಮುತ್ತ ಮತ್ತು ಭರಿಸುವ ಔಷಧಿಗಳು ಹಾಗೂ ಸಿರಿಂಜ್ ಗಳು ಪತ್ತೆಯಾಗಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

    ಕುಷ್ಟಗಿಯಿಂದ ಶಾಖಾಪುರ್ ಮತ್ತು ಗಜೇಂದ್ರಗಡಕ್ಕೆ ಹೋಗುವ ರಸ್ತೆಯ ಪಕ್ಕದ ಹೊಲಗಳಲ್ಲಿ ಈ ರೀತಿಯ ಮತ್ತು ಭರಿಸುವ ಕೊಮೊಡಾಲ್ 100, ಟ್ರೋಮೊಫಾರ್ ಎಂಬ ಹೆಸರಿನ ಔಷಧಿಗಳು ಸಿಕ್ಕಿವೆ. ಇದನ್ನು ಉಪಯೋಗಿಸಿದವರು ಇಲ್ಲೇ ಬಿಸಾಡಿ ಹೋಗಿದ್ದಾರೆ.

    ಇಲ್ಲಿ ದೊರೆತಿರುವ ಔಷಧಿಗಳು ಆಪರೇಷನ್ ಸಮಯದಲ್ಲಿ ಮತ್ತು ಕ್ಯಾನ್ಸರ್ ನೋವು ನಿವಾರಕವಾಗಿ ನೀಡಲಾಗುತ್ತೆ. ವೈದ್ಯರು ಪ್ರಿಸ್ಕ್ರಿಪ್ಷನ್ ಇಲ್ಲದೆ ಮೆಡಿಕಲ್ ಶಾಪ್ ಗಳಲ್ಲಿ ಕೊಡುವಂತಿಲ್ಲ. ಆದರೆ ಇವೆಲ್ಲ ಬಿದ್ದಿರುವುದು ನೋಡಿದರೆ ಮೆಡಿಕಲ್ ಗಳಲ್ಲಿ ಇವುಗಳನ್ನು ಯಾರು ಕೇಳಿದ್ರೂ ಕೊಡುವಂತೆ ಕಾಣುತ್ತದೆ.

    ಇವುಗಳು ಉಪಯೋಗಿಸುವುದರಿಂದ ಬಹು ಅಂಗಾಂಗ ವೈಫಲ್ಯ ಹೊಂದಿ ಸಾವನ್ನಪ್ಪುತ್ತಾರೆ ಎನ್ನುವುದು ಆತಂಕಕಾರಿ ವಿಷಯವಾಗಿದೆ. ಈ ವಿಷಯ ಪಾಲಕರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ. ನಮ್ಮ ಮಕ್ಕಳು ಎಲ್ಲಿ ಗೊತ್ತಿಲ್ಲದೆ ಇದಕ್ಕೆ ಬಲಿಯಾಗ್ತಾರೋ ಎನ್ನುವ ಆಂತಕ ಮನೆ ಮಾಡಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ತೀವ್ರ ತನಿಖೆ ನಡೆಸಿ ಯಾವ ಮೆಡಿಕಲ್ ಶಾಪ್ ಗಳಲ್ಲಿ ಇಂತಹ ಔಷಧಿಗಳನ್ನು ಪ್ರಿಸ್ಕ್ರಿಪ್ಷನ್ ಇಲ್ಲದೆ ಕೊಡಲಾಗುತ್ತಿದೆ ಅಂತಹ ಮೆಡಿಕಲ್ ಶಾಪ್ ಗಳ ಪರವಾನಿಗೆ ರದ್ದತಿಗೆ ಮುಂದಾಗಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮದ್ಯಸೇವಿಸಿ ತೂರಾಡಿ ಚರಂಡಿಗೆ ಬಿದ್ದು ಒದ್ದಾಡಿದ ವಿದೇಶಿಗ!

    ಮದ್ಯಸೇವಿಸಿ ತೂರಾಡಿ ಚರಂಡಿಗೆ ಬಿದ್ದು ಒದ್ದಾಡಿದ ವಿದೇಶಿಗ!

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಪವಿತ್ರ ಸ್ಥಳವಾಗಿದ್ದು, ಇಲ್ಲಿಗೆ ಅನೇಕ ಭಕ್ತರು ಭೇಟಿ ನೀಡುತ್ತಾರೆ. ಆದರೆ ವಿದೇಶಿಗರಿಗೆ ಮಾತ್ರ ಈ ಸ್ಥಳ ಮೋಜು ಮಸ್ತಿಯ ತಾಣವಾಗಿ ಪರಿಣಮಿಸಿದೆ. ಬೀಚ್‍ನಲ್ಲಿ ಮದ್ಯ ಸೇವಿಸಿ, ನಗರದಲ್ಲಿ ಮನಬಂದಂತೆ ವರ್ತಿಸುತ್ತಿದ್ದಾರೆ.

    ನಗರದ ಇಂಟರ್ ನ್ಯಾಷನಲ್ ಬಾರ್ ಆಂಡ್ ರೆಸ್ಟೋರೆಂಟ್‍ನಲ್ಲಿ ಇಂದು ವಿದೇಶಿಗನೊಬ್ಬ ನಾಲ್ಕು ಬಾಟಲ್ ಮದ್ಯ ಸೇವಿಸಿದ್ದಾನೆ. ಬಳಿಕ ಕುಡಿದ ಅಮಲಿನಲ್ಲಿಯೇ ಅಲ್ಲಿಂದ ಹೊರ ಬಂದು ತೂರಾಡಿ, ಬಾರ್ ಮುಂಭಾಗದ ಚರಂಡಿಗೆ ಬಿದ್ದು ಒದ್ದಾಡಿದ್ದಾನೆ. ಇದನ್ನು ನೋಡಿದ ಪೊಲೀಸರು ಹಾಗೂ ಸ್ಥಳೀಯರು ಆತನನ್ನು ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

    ಈ ಹಿಂದೆ ವಿದೇಶಿ ಪ್ರಜೆಯೊಬ್ಬ ಮದ್ಯದ ಮತ್ತಿನಲ್ಲಿ ಡ್ರಗ್ಸ್ ಸೇವಿಸಿ, ಗೋಕರ್ಣದ ಬೀದಿ ಬೀದಿಗಳಲ್ಲಿ ಬೆತ್ತಲಾಗಿ ನಡೆದಾಡಿ ಭಾರೀ ಆವಾಂತರ ಸೃಷ್ಟಿಸಿದ್ದ. ಗೋಕರ್ಣದ ಓಂ ಬೀಜ್‍ಗೆ ಬರುವ ಬಹುತೇಕ ವಿದೇಶಿಗರು ತಿಂಗಳುಗಟ್ಟಲೇ ಇಲ್ಲಿಯೇ ನೆಲೆಸಿ, ಮೋಜು ಮಸ್ತಿ ಮಾಡುತ್ತಿರುತ್ತಾರೆ. ಕಂಠಪೂರ್ತಿ ಮದ್ಯ ಸೇವಿಸಿ, ಡ್ರಗ್ಸ್ ಅಥವಾ ಅಕ್ರಮವಾಗಿ ದೊರಕುವ ಗಾಂಜಾ ಸೇವಿಸಿ ಮನ ಬಂದಂತೆ ವರ್ತಿಸುತ್ತಿರುತ್ತಾರೆ. ವಿದೇಶಿಗರ ಈ ವರ್ತನೆಯಿಂದಾಗಿ ಸ್ಥಳೀಯರ ಬೇಸರ ವ್ಯಕ್ತಪಡಿಸಿದ್ದು, ಇದಕ್ಕೆ ಸೂಕ್ತ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಾಂಜಾ ಮತ್ತಿನಲ್ಲಿ ಆಟೋಗಳನ್ನು ಜಖಂಗೊಳಿಸಿದ ಕಿಡಿಗೇಡಿಗಳು!

    ಗಾಂಜಾ ಮತ್ತಿನಲ್ಲಿ ಆಟೋಗಳನ್ನು ಜಖಂಗೊಳಿಸಿದ ಕಿಡಿಗೇಡಿಗಳು!

    ಬೆಂಗಳೂರು: ಗಾಂಜಾ ಮತ್ತಿನಲ್ಲಿ ಕಿಡಿಗೇಡಿಗಳ ಗುಂಪೊಂದು ಆಟೋಗಳನ್ನು ಜಖಂಗೊಳಿಸುವ ಘಟನೆ ಬೆಂಗಳೂರಿನ ರಾಮಮೂರ್ತಿನಗರ ವಾರ್ಡ್‍ನ ಕಲ್ಕೆರೆ ಚೆನ್ನಸಂದ್ರ ಗ್ರಾಮದಲ್ಲಿ ನಡೆದಿದೆ.

    ಈ ಪ್ರದೇಶ ಬಿಬಿಎಂಪಿ ವ್ಯಾಪ್ತಿಗೆ ಸೇರಿದರೂ ಗ್ರಾಮಾಂತರ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮವಾಗಿದ್ದು, ಅಲ್ಲಿ ಕಳೆದ ಆರು ತಿಂಗಳಿನಿಂದ ಬೆಂಗಳೂರಿನ ಪುಂಡ ಪೋಕರಿಗಳ ಗುಂಪೊಂದು ಗಾಂಜಾ ಸೇವಿಸಿಕೊಂಡು ತಿರುಗಾಡುತ್ತಿದೆ. ಕಳೆದ ರಾತ್ರಿ ಪುಂಡರ ಗಾಂಜಾ ಹೆಚ್ಚಾಗಿ ಏರಿಯಾದಲ್ಲಿನ 7 ಆಟೋಗಳ ಗಾಜುಗಳನ್ನು ಪುಡಿ ಪುಡಿ ಮಾಡಿದಲ್ಲದೆ, ಮೂರು ಮನೆಗಳ ಕಿಟಕಿ ಗಾಜುಗಳನ್ನು ಬ್ಯಾಟ್ ಹಾಗೂ ದೊಣ್ಣೆಗಳಿಂದ ಒಡೆದು ಸ್ಥಳೀಯರಿಗೆ ಬೆದರಿಕೆ ಹಾಕಿ ದರ್ಪ ತೋರಿಸಿದ್ದಾರೆ.

    ಬೆಂಗಳೂರಿನ ವಿವಿಧ ಪ್ರದೇಶಗಳಿಂದ ಬರುವ ಗಾಂಜಾ ವ್ಯಸನಿಗಳು ಕಳೆದ ಐದಾರು ತಿಂಗಳಿಂದ ಇಲ್ಲಿನ ಮುನೇಶ್ವರ ಸ್ವಾಮಿ ದೇವಾಲಯವನ್ನು ಗಾಂಜಾ ಸೇವನೆಯ ಅಡ್ಡೆಯಾಗಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ರಾಮಮೂರ್ತಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸದ ಕಾರಣ ಈ ಪ್ರದೇಶದಲ್ಲಿ ಗಾಂಜಾ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಸಂಸಾರಸ್ಥರು ಬೀದಿಯಲ್ಲಿ ಒಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಕಳೆದ ರಾತ್ರಿ 10 ರಿಂದ 15 ಯುವಕರ ತಂಡ ಇಲ್ಲಿನ ಅಟೋಗಳನ್ನು ಜಖಂ ಗೊಳಿಸಿ ಮನೆಗಳ ಮೇಲೆ ದಾಳಿ ಮಾಡಿ ಮನೆ ಮಾಲೀಕರಿಗೆ ಧಮ್ಕಿ ಹಾಕಿದ್ದು, ಆದಷ್ಟು ಬೇಗ ಪೊಲೀಸರು ಇದಕ್ಕೆಲ್ಲ ಕಡಿವಾಣ ಹಾಕಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರೈತನನ್ನ ಮನಬಂದಂತೆ ಥಳಿಸಿದ ಪೊಲೀಸರು!

    ರೈತನನ್ನ ಮನಬಂದಂತೆ ಥಳಿಸಿದ ಪೊಲೀಸರು!

    ಶಿವಮೊಗ್ಗ: ಗಾಂಜಾ ಬೆಳೆದಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಿದ್ದ ರೈತನ ಮೇಲೆ ಪೊಲೀಸರು ಕ್ರೌರ್ಯ ತೋರಿಸಿರುವ ಘಟನೆ ಶಿವಮೊಗ್ಗ ತಾಲೂಕಿನ ಕುಂಸಿ ಠಾಣೆಯಲ್ಲಿ ನಡೆದಿದೆ.

    ಕುಂಸಿ ಪೊಲೀಸ್ ಠಾಣೆಯ ಅಧಿಕಾರಿ ಜಗದೀಶ್, ಪೇದೆಗಳಾದ ಪರಮೇಶ್ವರ್ ನಾಯ್ಕ್ ಹಾಗೂ ಪ್ರಶಾಂತ್ ಎಂಬವರು ಈ ಹಲ್ಲೆ ನಡೆಸಿದ್ದು, ನ್ಯಾಯಾಧೀಶರ ಸಮ್ಮುಖದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಕುಂಸಿ ಸಮೀಪದ ನಾರಾಯಣಪುರದ ಕೃಷ್ಣ ನಾಯ್ಕ್ ಎಂಬ ರೈತನನ್ನು ಗಾಂಜಾ ಬೆಳೆದ ಆರೋಪದಲ್ಲಿ ಠಾಣೆಗೆ ಕರೆದೊಯ್ದಿದ್ದರು. ಅಲ್ಲದೇ 5,000 ರೂ. ಕೊಟ್ಟರೆ ಕೇಸ್ ದಾಖಲಿಸದೆ ಬಿಡುಗಡೆ ಮಾಡುತ್ತೇವೆ ಎಂದಿದ್ದರಂತೆ. ಆದರೆ ಕೃಷ್ಣ ಹಣ ಕೊಡದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಪೊಲೀಸರು ಅಮನವೀಯವಾಗಿ ಥಳಿಸಿದ್ದಾರೆ.

    ಪೊಲೀಸರ ಥಳಿತದಿಂದ ಕೂರಲೂ ಆಗದೆ, ಮಲಗಲೂ ಆಗದೇ ಕೃಷ್ಣ ನರಕಯಾತನೆ ಅನುಭವಿಸುತ್ತಿದ್ದಾರೆ. ಕೃಷ್ಣ ನಾಯ್ಕ ರನ್ನು ಎನ್‍ಡಿಪಿಎಸ್ ಕಾಯ್ದೆಯಡಿ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ ಪೊಲೀಸರು ಥಳಿಸಿರುವ ವಿಷಯ ಬೆಳಕಿಗೆ ಬಂದಿದೆ.

    ಪೊಲೀಸರ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಧೀಶರು ಕೃಷ್ಣ ನಾಯ್ಕನಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಮತ್ತೊಮ್ಮೆ ವೈದ್ಯಕೀಯ ತಪಾಸಣೆ ನಡೆಸಿ, ಚಿಕಿತ್ಸೆ ಕೊಡಿಸಲು ಆದೇಶ ಮಾಡಿದ್ದಾರೆ. ಗಾಂಜಾ ಬೆಳೆದಿದ್ದರೆ ಬಂಧಿಸಿ ಕಾನೂನು ಕ್ರಮಕೈಗೊಳ್ಳಲಿ. ಆದರೆ ಅಮಾನವೀಯವಾಗಿ ಥಳಿಸುವ ಅಧಿಕಾರ ಪೊಲೀಸರಿಗೆ ಕೊಟ್ಟವರು ಯಾರು ಎಂದು ಅವರ ಸಂಬಂಧಿಗಳು ಪ್ರಶ್ನಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv