Tag: drugs

  • ಮತ್ತೊಂದು ಡ್ರಗ್ಸ್ ಜಾಲದ ಮೇಲೆ ಸಿಸಿಬಿ ದಾಳಿ – 20 ಲಕ್ಷ ಮೌಲ್ಯದ ಡ್ರಗ್ಸ್ ವಶ

    ಮತ್ತೊಂದು ಡ್ರಗ್ಸ್ ಜಾಲದ ಮೇಲೆ ಸಿಸಿಬಿ ದಾಳಿ – 20 ಲಕ್ಷ ಮೌಲ್ಯದ ಡ್ರಗ್ಸ್ ವಶ

    – ಸರಗಳ್ಳತನ ಪ್ರಕರಣದ ಕಾರ್ಯಾಚರಣೆ
    – ಒಂದು ಮುಕ್ಕಾಲು ಕೆಜಿ ಚಿನ್ನ ವಶ

    ಬೆಂಗಳೂರು: ಸಿಸಿಬಿ ಪೊಲೀಸರು ಎರಡು ಕಾರ್ಯಾಚರಣೆ ನಡೆಸಿದ್ದು, ಮೊತ್ತೊಂದು ಡ್ರಗ್ಸ್ ದಂಧೆ ಜಾಲವನ್ನು ಪತ್ತೆ ಮಾಡಿದ್ದಾರೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.

    ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಮಿಷನರ್ ಕಮಲ್ ಪಂತ್, ಸಿಸಿಬಿ ಪೊಲೀಸರು ಕೆ.ಆರ್.ಪುರಂ ವ್ಯಾಪ್ತಿಯಲ್ಲಿ ಮತ್ತೊಂದು ಡ್ರಗ್ಸ್ ಜಾಲದ ಮೇಲೆ ದಾಳಿ ಮಾಡಿದ್ದಾರೆ. ಕಾರ್ಯಾಚರಣೆ ವೇಳೆ 2 ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ 20 ಲಕ್ಷಕ್ಕೂ ಅಧಿಕ ಬೆಲೆ ಇರಬಹುದು ಎಂದರು.

    ನಮಗೆ ಇರುವ ಮಾಹಿತಿಯ ಪ್ರಕಾರ ಡ್ರಗ್ಸ್ ಕಾಲೇಜುಗಳಲ್ಲೂ ಕಂಡು ಬರುತ್ತಿದೆ. ಇದರಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಲಾಗಿದೆ. ಮೂವರನ್ನು ಕೇಳರ ಮೂಲದವರು ಎಂದು ಗುರುತಿಸಲಾಗಿದೆ. ಲಂಡನ್‍ನಲ್ಲಿ ಓದಿ ಬಂದಿದ್ದ ಯುವಕ ಡ್ರಗ್ಸ್ ದಂಧೆ ಮಾಡುತ್ತಿದ್ದನು. ಮನೆಯೊಂದರ ಮೇಲೆ ದಾಳಿ ನಡೆಸಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಕಮಿಷನರ್ ಹೇಳಿದರು.

    ಕಾಲೇಜು, ಶಾಲೆಗಳಲ್ಲಿ ಡ್ರಗ್ಸ್ ಸೇವನೆ ಮಾಡುತ್ತಿರುವ ಬಗ್ಗೆ ದೂರು ಕೇಳಿ ಬರುತ್ತಿವೆ. ಹೀಗಾಗಿ ಕಾಲೇಜು, ಶಾಲಾ ಆಡಳಿತ ಮಂಡಳಿ ನಮಗೆ ಸಹಕರಿಸಬೇಕು. ಡ್ರಗ್ಸ್ ದಂಧೆಯನ್ನು ಕಡಿವಾಣ ಹಾಕಲು ಪ್ರಯತ್ನ ಮಾಡುತ್ತಿದ್ದೇವೆ. ಆಡಳಿತ ಮಂಡಳಿ ನಮ್ಮ ಜೊತೆ ಕೈ ಜೋಡಿಸಬೇಕು. ಯುವಕರು ಬೇರೆ ದೇಶದಿಂದ ಬಂದು ಡ್ರಗ್ಸ್ ಕೊಡುತ್ತಾರ ಅಥವಾ ಒಳಗಿನವರೇ ಕೊಡುತ್ತಾರ ಎಂಬ ಮಾಹಿತಿ ಗೊತ್ತಾದರೆ ಕೂಡಲೇ ನಮ್ಮ ಬಳಿ ಮಾಹಿತಿಯನ್ನು ಶೇರ್ ಮಾಡಿಕೊಳ್ಳಬೇಕು ಎಂದು ಕಮಲ್ ಪಂತ್ ಮನವಿ ಮಾಡಿಕೊಂಡರು.

    ಸಿಸಿಬಿ ಪೊಲೀಸರು ಮತ್ತೊಂದು ಕಾರ್ಯಾಚರಣೆ ಮಾಡಿದ್ದು, 1 ಕೆಜಿ 700 ಗ್ರಾಂ ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ. 2017-2018ರಲ್ಲಿ ನಡೆದಿದ್ದ 37 ಸರಗಳ್ಳತನ ಕೇಸನ್ನು ಸಿಸಿಬಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಒಂದು ವಾರದೊಳಗೆ ಚಿನ್ನ ಕಳೆದುಕೊಂಡಿದವರಿಗೆ ಅವರ ಬಂಗಾರವನ್ನು ವಾಪಸ್ ಕೊಡಲಾಗುತ್ತದೆ. ಸಿಸಿಬಿ ಪೊಲೀಸರು ಒಳ್ಳೆಯ ಕಾರ್ಯಾಚರಣೆ ಮಾಡಿದ್ದಾರೆ ಎಂದು ಅವರನ್ನು ಕಮಿಷನರ್ ಕಮಲ್ ಪಂತ್ ಅಭಿನಂದಿಸಿದರು.

  • ಇದೇ ಮೊದಲಲ್ಲ, ಕೆಪಿಎಲ್‌ ಟು ಡ್ರಗ್ಸ್‌ ಲಿಂಕ್‌- ರಾಗಿಣಿ ಮೇಲೆ ಇರೋ ಆರೋಪಗಳೇನು?

    ಇದೇ ಮೊದಲಲ್ಲ, ಕೆಪಿಎಲ್‌ ಟು ಡ್ರಗ್ಸ್‌ ಲಿಂಕ್‌- ರಾಗಿಣಿ ಮೇಲೆ ಇರೋ ಆರೋಪಗಳೇನು?

    ಬೆಂಗಳೂರು: ನಟಿ ರಾಗಿಣಿ ವಿರುದ್ಧ ಆರೋಪಗಳು ಕೇಳಿ ಬರುತ್ತಿರುವುದು ಇದೇ ಮೊದಲೇನು ಅಲ್ಲ. ಎರಡು ವರ್ಷದ ಹಿಂದೆ ಗಂಭೀರ ಆರೋಪ ಕೇಳಿ ಬಂದಿತ್ತು.

    2016ರಲ್ಲಿ ರಾಗಿಣಿ ಬಳ್ಳಾರಿ ಟಸ್ಕರ್ಸ್ ತಂಡವನ್ನು ಖರೀದಿಸಿದ್ದರು.  ಕೆಪಿಎಲ್  ಟೂರ್ನಿಯ ವೇಳೆ  ಫಿಕ್ಸಿಂಗ್ ಆರೋಪ ಪ್ರಕರಣದಲ್ಲಿ ನಟಿ ರಾಗಿಣಿ ಹೆಸರು ಬಂದಿತ್ತು. ಆದರೆ ಸೂಕ್ತ ದಾಖಲೆ, ಸಾಕ್ಷ್ಯ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣಕ್ಕೆ ಸು ಮ್ಮನಾಗಿದ್ದರು.

    ಪ್ರಬಲವಾದ ಸಾಕ್ಷ್ಯಗಳು ಸಿಗದೇ ಇದ್ದರೂ ರಾಗಿಣಿಯ ಚಟುವಟಿಕೆ ಮೇಲೆ ಒಂದು ಕಣ್ಣು ಇಟ್ಟಿದ್ದರು. ರಾಗಿಣಿ ಮತ್ತು ರವಿಶಂಕರ್ ಚಲನವಲನದ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ಸದ್ದಿಲ್ಲದೇ ಸಂಗ್ರಹಿಸುತ್ತಿದ್ದರು. ಇದನ್ನೂ ಓದಿ: 8 ಗಾಂಜಾ ತುಂಬಿದ್ದ ಸಿಗರೇಟ್‌ ಪತ್ತೆ – ಪೊಲೀಸರ ದಾಳಿ ವೇಳೆ ರಾಗಿಣಿ ಮನೆಯಲ್ಲಿ ಏನೇನು ಸಿಕ್ಕಿದೆ?

    ಡ್ರಗ್ ಪೆಡ್ಲರ್ ಪ್ರತೀಕ್ ಶೆಟ್ಟಿ, ಇಬ್ಬರು ನೈಜಿರಿಯನ್ ಪ್ರಜೆಗಳ ಬಂಧನ ನಂತರ ರವಿಶಂಕರ್, ರಾಗಿಣಿ ಸೇರಿ ಹದಿನೈದು ಜನ ಸೆಲೆಬ್ರಿಟಿಗಳಿಗೆ ಡ್ರಗ್ಸ್ ಪೂರೈಕೆ ಆಗ್ತಿದ್ದ ಮಾಹಿತಿ ಬಯಲಾಗಿತ್ತು ಈ ಸಂಬಂಧ ಮತ್ತಷ್ಟು ಸಾಕ್ಷ್ಯಗಳು ಸಿಕ್ಕ ನಂತರ ಕಾರ್ಯಚರಣೆ ತೀವ್ರಗೊಳಿಸಿದ ಸಿಸಿಬಿ, ಮೊನ್ನೆ ರವಿಶಂಕರ್ ಬಂಧಿಸಿತು ಎಂಬ ಮಾಹಿತಿ ಸಿಸಿಬಿ ಮೂಲಗಳಿಂದ ಸಿಕ್ಕಿದೆ.

    ಎರಡು ವರ್ಷದ ಹಿಂದೆ ರಾಗಿಣಿ ವಿಚಾರವಾಗಿ ಸ್ಟಾರ್ ಹೋಟೆಲ್ ಒಂದರಲ್ಲಿ ರವಿಶಂಕರ್ ಮತ್ತು ಶಿವಪ್ರಕಾಶ್ ಎಂಬುವರ ಮಧ್ಯೆ ತೀವ್ರ ಗಲಾಟೆ ಆಗಿತ್ತು. ಈ ಬಗ್ಗೆಯೂ ಇಂದು ಸಿಸಿಬಿ ಅಧಿಕಾರಿಗಳು ರಾಗಿಣಿಗೆ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.

  • ಸಿಕ್ತು ಪ್ರಬಲವಾದ ಸಾಕ್ಷ್ಯ- ಕೊನೆಗೂ ರಾಗಿಣಿ ಅರೆಸ್ಟ್‌

    ಸಿಕ್ತು ಪ್ರಬಲವಾದ ಸಾಕ್ಷ್ಯ- ಕೊನೆಗೂ ರಾಗಿಣಿ ಅರೆಸ್ಟ್‌

    ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದಲ್ಲಿ ಕೊನೆಗೂ ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಇಂದು ಬೆಳಗ್ಗೆ ಮನೆ ಮೇಲೆ ದಾಳಿ ಮಾಡಿದ ಬಳಿಕ ರಾಗಿಣಿ ಸಿಸಿಬಿ ಪೊಲೀಸರ ವಶದಲ್ಲೇ ಇದ್ದರು. ಮಧ್ಯಾಹ್ನದಿಂದ ಪೊಲೀಸರು ನಿರಂತರ ವಿಚಾರಣೆ ನಡೆಸುತ್ತಿದ್ದರು.

    ಸಂಜೆ ನಗರ ಪೊಲೀಸ್‌ ಆಯುಕ್ತ ಕಮಲ್‌ಪಂತ್‌ ಸುದ್ದಿಗೋಷ್ಠಿ ನಡೆಸಿ ರವಿಶಂಕರ್‌ ಮತ್ತು ರಾಹುಲ್‌ ಇಬ್ಬರನ್ನು ಅರೆಸ್ಟ್‌ ಮಾಡಿದ್ದೇವೆ. ರಾಗಿಣಿಯ ಮೇಲೆ ಎಫ್‌ಐಆರ್‌ ದಾಖಲಾಗಿದೆ ಎಂದು ತಿಳಿಸಿದ್ದರು.  ಇದನ್ನೂ ಓದಿ: ಎಷ್ಟು ವಿಚಾರಣೆ ಮಾಡ್ತೀರಿ? ಬೇಗ ಕಳುಹಿಸಿ – ಅಧಿಕಾರಿಯ ಮೇಲೆ ಪ್ರಭಾವಿ ರಾಜಕಾರಣಿ ಒತ್ತಡ

    ಎಫ್‌ಐಆರ್‌ ದಾಖಲಾದ ಬಳಿಕ ರಾಗಿಣಿ ಬಂಧನ ಯಾಕೆ ನಡೆದಿಲ್ಲ ಎಂಬ ಪ್ರಶ್ನೆ ಎದ್ದಿತ್ತು. ಈ ನಡುವೆ ಪ್ರಭಾವಿ ರಾಜಕಾರಣಿಯೊಬ್ಬರು ರಾಗಿಣಿಯನ್ನು ಬಂಧಿಸದಂತೆ ಒತ್ತಡ ಹೇರುತ್ತಿದ್ದಾರೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ಸಿಕ್ಕಿತ್ತು. ಆದರೆ ಪ್ರಭಾವಿ ರಾಜಕಾರಣಿಯ ಒತ್ತಡಕ್ಕೆ ಬಗ್ಗದ ಪೊಲೀಸರು ಕೊನೆಗೂ ರಾಗಿಣಿಯನ್ನು ಬಂಧಿಸಿದ್ದಾರೆ.

    ಆರೋಪಿಗಳು ಡ್ರಗ್ಸ್‌ ದಂಧೆಯಲ್ಲಿ ರಾಗಿಣಿ ಪಾತ್ರ ಇದೆ ಎಂದು ಹೇಳಿದ್ದರೂ ಸರಿಯಾದ ಸಾಕ್ಷ್ಯಗಳು ಸಿಕ್ಕಿರಲಿಲ್ಲ. ಆದರೆ ಇಂದು ಮನೆಯ ಮೇಲೆ ನಡೆದ ದಾಳಿ ವೇಳೆ ಡ್ರಗ್ಸ್‌ ಪತ್ತೆಯಾಗಿತ್ತು. ಇದು ಪ್ರಬಲವಾದ ಸಾಕ್ಷ್ಯವಾಗಿದ್ದರಿಂದ ಪೊಲೀಸರು ಸಂಜೆ ರಾಗಿಣಿಯನ್ನು ಅರೆಸ್ಟ್‌ ಮಾಡಿದ್ದಾರೆ.

    ಬಂಧನ ಭೀತಿಯಿಂದ ಪಾರಾಗಲು ಆರೋಪಿಯಾಗಿರುವ ನಟಿ ರಾಗಿಣಿ ಇಂದು ಕೋರ್ಟ್‌ ಮೊರೆ ಹೋಗಿದ್ದರು. ಬೆಂಗಳೂರಿನ ಸೆಷನ್ಸ್‌ ಕೋರ್ಟ್‌ಗೆ ರಾಗಿಣಿ ಪರ ವಕೀಲರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡದೇ ಸಿಸಿಬಿ ಪೊಲೀಸರಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ. ಸೆ.7ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಈಗ ಪೊಲೀಸರು ಪ್ರಕರಣದಲ್ಲಿ ಬಂಧನ ಮಾಡಿದ ಕಾರಣ ಜಾಮೀನು ಕೋರಿ ರಾಗಿಣಿ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

    ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಮೇಲೆ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಎಫ್‍ಐಆರ್ ದಾಖಲಾಗಿದೆ. ಸಿಸಿಬಿಯ ನಾರ್ಕೊಟಿಕ್ಸ್ ಎಸಿಪಿ ಗೌತಮ್ ದೂರಿನ ಆಧಾರದ ಮೇಲೆ ಎಫ್‍ಐಆರ್ ದಾಖಲಾಗಿದೆ. ಬಂಧಿತ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದ ಬಗ್ಗೆ ಸಾಕ್ಷಿ ಹಾಗೂ ಪುರಾವೆಗಳು ಸಿಕ್ಕಿರುವ ಹಿನ್ನೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಾಟ್ಸಾಪ್ ಮೆಸೇಜ್‍ಗಳು ಹಾಗೂ ಪೆಡ್ಲರ್ ಗಳ ನೀಡಿರುವ ಮಾಹಿತಿ ಅನ್ವಯ ನಟಿ ರಾಗಿಣಿ ಅವರ ಕೈವಾಡದ ಬಗ್ಗೆ ಸಾಕ್ಷಿ ಲಭ್ಯವಾಗಿದ್ದು, ಡ್ರಗ್ ಡೀಲರ್ ಗಳ ಜೊತೆ ಒಡನಾಟವನ್ನು ಹೊಂದಿದ್ದಾರೆ. ಅನೇಕ ಬಾರಿ ಡ್ರಗ್ ಡೀಲ್ ಮಾಡಿರುವ ಬಗ್ಗೆ ಮಾಹಿತಿ ಖಚಿತವಾದ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

  • ಬಂಧನ ಭೀತಿ – ಕೋರ್ಟ್‌ ಮೊರೆ ಹೋದ ರಾಗಿಣಿ

    ಬಂಧನ ಭೀತಿ – ಕೋರ್ಟ್‌ ಮೊರೆ ಹೋದ ರಾಗಿಣಿ

    ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದಲ್ಲಿ ಬಂಧನ ಭೀತಿಯಿಂದ ಪಾರಾಗಲು ಆರೋಪಿಯಾಗಿರುವ ನಟಿ ರಾಗಿಣಿ ಈಗ ಕೋರ್ಟ್‌ ಮೊರೆ ಹೋಗಿದ್ದಾರೆ.

    ಬೆಂಗಳೂರಿನ ಸೆಷನ್ಸ್‌ ಕೋರ್ಟ್‌ಗೆ ರಾಗಿಣಿ ಪರ ವಕೀಲರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡದೇ ಸಿಸಿಬಿ ಪೊಲೀಸರಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ. ಸೆ.7ಕ್ಕೆ ವಿಚಾರಣೆಯನ್ನು ಮುಂದೂಡಿದೆ.

    ಇಂದು ಬೆಳಗ್ಗೆ ಮನೆ ಮೇಲೆ ದಾಳಿ ಮಾಡಿದ ಬಳಿಕ ರಾಗಿಣಿ ಈಗಲೂ ಸಿಸಿಬಿ ಪೊಲೀಸರ ವಶದಲ್ಲೇ ಇದ್ದಾರೆ. ಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡದ ಕಾರಣ ಪೊಲೀಸರಿಗೆ ಈಗಲೂ ನಟಿಯನ್ನು ಬಂಧಿಸಲು ಅವಕಾಶವಿದೆ. ಇದನ್ನೂ ಓದಿ: ಒಂದೇ ಅಪಾರ್ಟ್‌ಮೆಂಟ್‌ನಲ್ಲಿ 2 ಫ್ಲ್ಯಾಟ್ ಇದ್ರೂ ಗೌಪ್ಯವಾಗಿಟ್ಟಿದ್ದ ನಟಿ

    ಪ್ರಕರಣದಲ್ಲಿ ಬಂಧನ ಮಾಡಿದರೆ ಜಾಮೀನು ಕೋರಿ ರಾಗಿಣಿ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

  • ಪೊಲೀಸರ ಸಹಕಾರ ಇಲ್ಲದೆ ಡ್ರಗ್ಸ್ ದಂಧೆ ನಡೆಯೋದಿಲ್ಲ: ಡಿಸಿ ತಮ್ಮಣ್ಣ ಗಂಭೀರ ಆರೋಪ

    ಪೊಲೀಸರ ಸಹಕಾರ ಇಲ್ಲದೆ ಡ್ರಗ್ಸ್ ದಂಧೆ ನಡೆಯೋದಿಲ್ಲ: ಡಿಸಿ ತಮ್ಮಣ್ಣ ಗಂಭೀರ ಆರೋಪ

    ಮಂಡ್ಯ: ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆಗಳು ನಡೆಯುತ್ತಿದ್ದು, ಈ ಮಧ್ಯೆ ಶಾಸಕ ಡಿಸಿ ತಮ್ಮಣ್ಣ ಪೊಲೀಸರ ಮೇಲೆಯೇ ಗಂಭೀರ ಆರೋಪ ಮಾಡಿದ್ದಾರೆ.

    ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವಾರದಿಂದ ಮಾಧ್ಯಮದಲ್ಲಿ ಡ್ರಗ್ಸ್ ದಂಧೆ ಬಗ್ಗೆ ನೋಡುತ್ತಿದ್ದೇನೆ. ಬರೀ ಸಿನಿಮಾ ತಾರೆಯರು, ರಾಜಕಾರಣಿಗಳು, ರಾಜಕಾರಣಿ ಮಕ್ಕಳ ಬಗ್ಗೆ ಮಾತ್ರ ಬರುತ್ತಿದೆ. ಬೆಂಗಳೂರು, ಮೈಸೂರು, ಬೆಳಗಾಂ, ಇಂತಹ ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ಅಂತ ಹೇಳುತ್ತಾರೆ. ಇವಾಗ ಮದ್ದೂರಿನಲ್ಲಿ ಇಲ್ವಾ ಡ್ರಗ್ಸ್. ಮಂಡ್ಯದಲ್ಲಿ ಇಲ್ವಾ,? ಯಾವ ತಾಲೂಕಿನಲ್ಲಿ ಇಲ್ಲ,? ಹಳ್ಳಿ ಹಳ್ಳಿಯಲ್ಲಿದೆ. ಅದಕ್ಕೆ ಹೇಳಿದ್ದಿನಿ, ಒಂದು ಕಡೆ ಪೊಲೀಸರನ್ನ ಕೊರೊನಾ ಸಮಯದಲ್ಲಿ ವಾರಿಯರ್ಸ್ ಅಂತ ಸನ್ಮಾನ ಮಾಡಿದ್ದೀವಿ. ಜನತೆ ಅವರಿಗೆ ಹೂಮಳೆ ಸುರಿದು ಗೌರವಿಸಿದ್ದಾರೆ. ಅದೇ ನಾಣ್ಯದ ಪೋಲಿಸರ ಇನ್ನೊಂದು ಮುಖ ಗೊತ್ತಿಲ್ಲ ಎಂದು ಆರೋಪಿಸಿದ್ದಾರೆ.

    ಇಡೀ ರಾಜ್ಯದಲ್ಲಿ ಪೊಲೀಸ್ ಇಲಾಖೆ ಬಂದೋಬಸ್ತ್ ಮಾಡಿ. ಒಳ್ಳೆಯ ಕೆಲಸ ಮಾಡಿದವರ ಹೊಗಳ್ತೀವಿ. ಮಾಡಿಲ್ಲಾ ಅಂದ್ರೆ ತೆಗಳಕ್ಕೂ ತೆಗಳಬೇಕು, ಅವರಿಗೆ ಶಿಕ್ಷೆ ಕೊಡಬೇಕು. ಪೊಲೀಸರ ಸಹಕಾರ ಇಲ್ಲದೆ ಡ್ರಗ್ಸ್ ದಂಧೆ ನಡೆಯುವುದಿಲ್ಲ. ಪ್ರತಿ ತಾಲೂಕು, ಜಿಲ್ಲಾಮಟ್ಟದಲ್ಲಿ, ಹಳ್ಳಿ ಹಳ್ಳಿಗೂ ಕೂಡ ಡ್ರಗ್ಸ್ ಸಪ್ಲೈ ಆಗುತ್ತಿದೆ. ಇಂತಹ ಕೊಂಡಿಯನ್ನು ಬೇಧಿಸಿ. ಜನರ ದಾರಿತಪ್ಪಿಸುವ ಸಲುವಾಗಿ ಸಿನಿಮಾ ತಾರೆಯರು, ರಾಜಕಾರಣಿಗಳು, ರಾಜಕಾರಣಿ ಮಕ್ಕಳು ಅಂತ ದಾರಿ ತಪ್ಪಿಸಬೇಡಿ ಎಂದ ಅವರು ಈ ಬಗ್ಗೆ ಸಿಎಂ, ಹೋಂ ಮಿನಿಸ್ಟರ್ ಗೆ ಪತ್ರ ಬರೆಯಲಾಗಿದೆ ಅಂತ ತಿಳಿಸಿದರು.

    ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ರಾಗಿಣಿ ಆಪ್ತ ಸಿಸಿಬಿ ಪೊಲೀಸರ ವಶದಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ಈ ಬೆನ್ನಲ್ಲೇ ರಾಗಿಣಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ನಟಿ ಸೋಮವಾರ ಹಾಜರಾಗುವುದಾಗಿ ತಿಳಿಸಿದ್ದರು. ಆದರೆ ನಾಳೆ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗಬೇಕು ಅಂತ ರಾಗಿಣಿಗೆ ಸಿಸಿಬಿ ಅಧಿಕಾರಿಗಳು ಮತ್ತೆ ಸಮನ್ಸ್ ನೀಡಿದ್ದಾರೆ. ಇತ್ತ ನಟಿ ಸಂಜನಾ ಗಲ್ರಾಣಿ ಆಪ್ತ ಹಾಗೂ ಶರ್ಮಿಳಾ ಮಾಂಡ್ರೆ ಆಪ್ತನನ್ನು ಕೂಡ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    https://www.youtube.com/watch?v=ruRxb30Kzy8

  • ಡ್ರಗ್ಸ್ ಜಾಲ ಬೆಳೆಸಿಕೊಂಡು ಬಂದಿರುವುದು ನಾವೇ: ಎಚ್.ವಿಶ್ವನಾಥ್

    ಡ್ರಗ್ಸ್ ಜಾಲ ಬೆಳೆಸಿಕೊಂಡು ಬಂದಿರುವುದು ನಾವೇ: ಎಚ್.ವಿಶ್ವನಾಥ್

    – ಹ್ಯಾರಿಸ್ ಮಗನ ಮೇಲೆ ವಿಶ್ವನಾಥ್ ಗುಮಾನಿ
    – ಪೊಲೀಸರಿಗೆ ಎಲ್ಲಾ ಗೊತ್ತಿದ್ದರೂ ಹೇಳುವ ಸ್ಥಿತಿಯಲಿಲ್ಲ

    ಮೈಸೂರು: ಡ್ರಗ್ಸ್ ಮಾಫಿಯಾಗೆ ಪೊಲೀಸ್, ಚಿತ್ರರಂಗ, ರಾಜಕಾರಣ ಥಳಕು ಹಾಕಿಕೊಂಡಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ದೊಡ್ಡ ದೊಡ್ಡ ರಾಜಕಾರಣಿಗಳ ಮಕ್ಕಳ ಡ್ರಗ್ಸ್ ನಂಟಿನ ಬಗ್ಗೆ ಮಾಜಿ ಸಚಿವ ಎಚ್ ವಿಶ್ವನಾಥ್ ಮಾತನಾಡಿ, ಶಾಸಕ ಹ್ಯಾರಿಸ್ ಹಾಗೂ ಕಳಕಪ್ಪಬಂಡಿ ಪುತ್ರರ ಹೆಸರನ್ನು ಉದಾಹರಣೆಯಾಗಿ ನೀಡಿದ್ದಾರೆ.

    ಈ ಕುರಿತು ಮೈಸೂರಲ್ಲಿ ಮಾತನಾಡಿದ ಎಚ್.ವಿಶ್ವನಾಥ್, ಡ್ರಗ್ಸ್ ಜಾಲ ಬೆಳೆಸಿಕೊಂಡು ಬಂದಿರುವುದು ನಾವೇ. ರಾಜಕಾರಣಿಗಳ ಶ್ರೀಮಂತಿಕೆ, ಅಧಿಕಾರಿಗಳ ಶ್ರೀಮಂತಿಕೆ, ಚಿತ್ರರಂಗದ ಶ್ರೀಮಂತಿಕೆಯಿಂದ ಇದು ಹೆಚ್ಚಾಗಿದೆ. ಶಾಸಕ ಹ್ಯಾರೀಸ್ ಪುತ್ರ, ಶಾಸಕ ಕಳಕಪ್ಪ ಬಂಡಿ ಪುತ್ರರ ಹೆಸರು ಈ ವಿಚಾರದಲ್ಲಿ ಬಹಿರಂಗಗೊಂಡಿದೆ ಎಂದು ಹೇಳಿದರು.

    ಡ್ರಗ್ಸ್ ದಂಧೆ ಮಾಡುವವರು ಪ್ರಭಾವಿಯಾಗಿಲ್ಲ. ಅದಕ್ಕೆ ರಕ್ಷಣೆ ಕೊಡುವವರು ಪ್ರಭಾವಿಯಾಗಿದ್ದಾರೆ. ಇದು ಸರಿಯಲ್ಲ ಅದು ಯಾರೇ ಆಗಿದ್ದರೂ ದಂಡನೆ ಆಗಲೇಬೇಕು. ನಮ್ಮ ಮನೆಯ ಮಕ್ಕಳಾಗಿದ್ದರೂ ಸರಿಯೇ ಬಹಿರಂಗವಾಗಲೇಬೇಕು ಎಂದು ಆಗ್ರಹಿಸಿದ್ದರು.

    ಡ್ರಗ್ಸ್ ಜಾಲ ವ್ಯವಸ್ಥಿತವಾಗಿ ಬಹಳ ವರ್ಷದಿಂದ ನಡೆದು ಬರುತ್ತಿದೆ. ಯಾವುದೇ ಸರ್ಕಾರವನ್ನು ನಾವು ಬೊಟ್ಟು ಮಾಡಬಾರದು. ಇದು ನಿನ್ನೆ ಮೊನ್ನೆ ಪ್ರಕರಣ ಅಲ್ಲ, ನಮಗೆ ಅರಿವು ಇಲ್ಲದೆ ನಾವೇ ಬೆಳೆಸುಕೊಂಡು ಬಂದಿದ್ದೇವೆ. ಸೆಲೆಬ್ರಿಟಿಗಳ ಒಳಗೆ ಹರಡಿರೋ ದಂಧೆಯನ್ನು ಒಬ್ಬ ಸೆಲೆಬ್ರಿಟಿಯೇ ಬಹಿರಂಗ ಮಾಡಿದ್ದು ವಿಶೇಷ ಹಾಗೂ ಸೋಜಿಗ. ಪೊಲೀಸ್ ಇಲಾಖೆ ಮಾಡಬೇಕಿದ್ದ ಕೆಲಸವನ್ನು ಆ ಸೆಲೆಬ್ರಿಟಿ ಮಾಡಿದ್ದಾನೆ. ಪೊಲೀಸರು ಈಗ ತಲೆಬಾಗಿ ಸಮಾಜದ ಮುಂದೆ ನಿಲ್ಲುವ ಪರಿಸ್ಥಿತಿಗೆ ಬಂದಿದ್ದಾರೆ. ಆದರೆ ಇಂತಹ ಗಂಭೀರ ಸಮಸ್ಯೆಯನ್ನು ನಾವು ಎಂಜಾಯ್ ಮಾಡುತ್ತಿದ್ದೇವೆ. ಇಂತಹ ದಂಧೆಗಳ ಬಗ್ಗೆ ಪೊಲೀಸರಿಗೆ ಗೊತ್ತಿದ್ದರೂ ಸಹ ಅವರು ಹೇಳುವ ಸ್ಥಿತಿಯಲ್ಲಿ ಇಲ್ಲ. ಏಕೆಂದರೆ ಸ್ಥಳದ ರಾಜಕಾರಣ ಆ ರೀತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

    ಇದೇ ವೇಳೆ ಸೆಪ್ಟೆಂಬರ್ 8 ರಂದು ದಸರಾ ಉನ್ನತ ಮಟ್ಟದ ಮೊದಲ ಸಭೆ ನಡೆಯಲಿದೆ. ಬೆಂಗಳೂರಿನಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ಮೈಸೂರಿನ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಯಲಿದ್ದು, ಸಭೆಯಲ್ಲಿ ಈ ಬಾರಿಯ ದಸರಾ ಹೇಗೆ ನಡೆಸಬೇಕು ಹಾಗೂ ಜಂಬೂಸವಾರಿ ನಡೆಸಬೇಕೋ ಬೇಡವೋ ಎಂಬುದರ ಕುರಿತು ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.

    ಆರ್‍ಎಸ್‍ಎಸ್ ಕಚೇರಿಗೆ ಭೇಟಿ: ಇಂದು ಮೊದಲ ಬಾರಿಗೆ ಮೈಸೂರಿನ ಆರ್‍ಎಸ್‍ಎಸ್ ಕಚೇರಿಗೆ ಹಳ್ಳಿಹಕ್ಕಿ ವಿಶ್ವನಾಥ್ ಭೇಟಿ ನೀಡಿ ಕುತೂಹಲ ಮೂಡಿಸಿದರು. ನಗರದ ಬಲ್ಲಾಳ್ ವೃತ್ತದ ಬಳಿ ಇರುವ ಮಾಧವ ಕೃಪ ಕಚೇರಿಯಲ್ಲಿ ಆರ್‍ಎಸ್‍ಎಸ್ ಹಿರಿಯರ ಜೊತೆ ಮಾತುಕತೆ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದರು.

  • ಸ್ಯಾಂಡಲ್‍ವುಡ್ ಡ್ರಗ್ಸ್‌ಗೆ ಕೇರಳ ರಾಜಕೀಯ ನಂಟು

    ಸ್ಯಾಂಡಲ್‍ವುಡ್ ಡ್ರಗ್ಸ್‌ಗೆ ಕೇರಳ ರಾಜಕೀಯ ನಂಟು

    – ಎನ್‍ಸಿಬಿ ಎದುರು ಅನೂಫ್ ಸ್ಫೋಟಕ ಹೇಳಿಕೆ

    ಬೆಂಗಳೂರು: ಭಾರೀ ಚರ್ಚೆಗೆ ಕಾರಣವಾಗಿರುವ ಡ್ರಗ್ಸ್ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಬಂಧಿತ ವಿಚಾರಣೆಯಲ್ಲಿ ಡ್ರಗ್ಸ್ ಮಾಫಿಯಾದಲ್ಲಿ ಕೇರಳ ರಾಜಕೀಯ ನಾಯಕರ ಪುತ್ರನ ಲಿಂಕ್ ಇರುವ ಬಗ್ಗೆ ಸ್ಫೋಟಕ ಮಾಹಿತಿಗಳನ್ನು ಹೊರ ಹಾಕಿದ್ದಾನೆ ಎಂಬ ಮಾಹಿತಿ ಲಭಿಸಿದೆ.

    ಕೇರಳದಲ್ಲಿ ಬೆಂಗಳೂರಿನ ಡ್ರಗ್ ಪ್ರಕರಣ ತಲ್ಲಣವನ್ನು ಉಂಟು ಮಾಡಿದೆ. ಪೊಲೀಸರ ಎದುರು ಡ್ರಗ್ಸ್ ದಂಧೆಯ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿರುವ ಆರೋಪಿ ಅನೂಫ್, ದಂಧೆಯಲ್ಲಿ ಕೇರಳದ ಸಿಪಿಎಂ ಪಕ್ಷದ ಮಗನಿಂದ ಹಣ ಹೂಡಿಕೆ ಮಾಡಲಾಗಿದೆ. ಸಿಪಿಐ(ಎಂ) ಪಕ್ಷದ ಕೊಡಿಯೇರಿ ಬಾಲಕೃಷ್ಣನ್ ಅವರ ಮಗ ಬಿನೀಶ್ ಕೊಡಿಯೇರಿ ಹಣ ಹೂಡಿಕೆ ಮಾಡಿದ್ದ ಎಂದು ತಿಳಿಸಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಬಾಲಕೃಷ್ಣನ್ ಕೇರಳದ ಸಿಪಿಐ(ಎಂ) ಪಕ್ಷದ ಜನರಲ್ ಸೆಕ್ರೆಟರಿ ಆಗಿದ್ದಾರೆ. ಸದ್ಯ ಬಂಧಿತ ಅನೂಫ್ ಕೊರೊನಾ ಲಾಕ್‍ಡೌನ್‍ನಿಂದ ಕೊಚ್ಚಿಯಲ್ಲಿದ್ದ ಪಬ್ ಬಿಸಿನೆಸ್‍ನಲ್ಲಿ ಲಾಸ್ ಮಾಡಿಕೊಂಡು ಹಾಳಾಗಿದ್ದ ಜೀವನ್ನು ಸರಿ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಬೆಂಗಳೂರಿಗೆ ಆಗಮಿಸಿದ್ದ. ಅದಕ್ಕೂ ಮುನ್ನವೇ ಆತ ಬೆಂಗಳೂರಿನಲ್ಲಿ ಹಲವು ಬಿಸಿನೆಸ್ ನಡೆಸಿದ ಅನುಭವ ಹೊಂದಿದ್ದ. ಆದರೆ ಈ ಬಾರಿ ಬೆಂಗಳೂರಿಗೆ ಬಂದಿದ್ದ ಆತ, ಆರೋಪಿ ಅನಿಕಾಳಿಂದ ಡ್ರಗ್ಸ್ ಪಡೆದು ಲಾಕ್‍ಡೌನ್ ಅವಧಿಯಲ್ಲಿ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಿದ್ದ. 550 ರೂಪಾಯಿಗೆ ಒಂದು ಮಾತ್ರೆ ಎಂಬಂತೆ 1 ಲಕ್ಷದ 37 ಸಾವಿರ ರೂಪಾಯಿಗೆ ಡ್ರಗ್ಸ್ ಖರೀದಿ ಮಾಡಿದ್ದೆ ತನಿಖೆಯ ವೇಳೆ ಬಾಯ್ಬಿಟ್ಟಿದ್ದಾನೆ.

    ಅನೂಫ್ ಕೇರಳದ ಸಿಪಿಎಂ ನಾಯಕ ಪುತ್ರನೊಂದಿಗೆ ಸಂಪರ್ಕ ಹೊಂದಿರುವುದನ್ನು ಒಪ್ಪಿಕೊಂಡಿದ್ದು, ಆತನ ಹಣದಿಂದಲೇ ಡ್ರಗ್ಸ್ ಖರೀದಿ ಮಾಡಿದ್ದೆ ಎಂದಿದ್ದಾನೆ. ಬೆಂಗಳೂರಿನಲ್ಲಿ ಪಬ್‍ವೊಂದನ್ನು ನೋಡಿಕೊಳ್ಳುತ್ತಿದ್ದ ಆರೋಪಿ ಅಲ್ಲಿಂದಲೇ ಡ್ರಗ್ ಮಾರಾಟ ಮಾಡುತ್ತಿದ್ದ. ಸದ್ಯ ಆರೋಪಿ ಸ್ಯಾಂಡಲ್‍ವುಡ್‍ನ ಯಾವ ನಟ, ನಟಿಯರು, ಗಣ್ಯರಿಗೆ ಸಪ್ಲೇ ಮಾಡಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬರಬೇಕಿದೆ.

    ಸದ್ಯ ಡ್ರಗ್ಸ್ ದಂಧೆಯ ಆರೋಪದ ಕುರಿತು ಪ್ರತಿಕ್ರಿಯೆ ನೀಡಿರುವ ಬಿನೀಶ್ ಕೊಡಿಯೇರಿ, ತನ್ನ ಸ್ನೇಹಿತ ಅನೂಫ್ ಡ್ರಗ್ಸ್ ವ್ಯವಹಾರದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಆತ ನನಗೆ 6 ರಿಂದ 7 ವರ್ಷಗಳಿಂದ ಪರಿಚಯ. ಬೆಂಗಳೂರಿನಲ್ಲಿ ರೆಸ್ಟೋರೆಂಟ್ ಬಿಸಿನೆಸ್ ಮಾಡುತ್ತಿದ್ದ. ಆದರೆ ಎನ್‍ಸಿಬಿ ಆತನನ್ನು ಬಂಧಿಸಿದ ಸುದ್ದಿ ಕೇಳಿ ಆಘಾತವಾಯಿತು. ಏಕೆಂದರೆ ನನಗೆ ಅಥವಾ ಆತನ ಪೋಷಕರಿಗೆ ಡ್ರಗ್ಸ್ ದಂಧೆಯ ಬಗ್ಗೆ ಯಾವುದೇ ಸುಳಿವು ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ.

    ಇತ್ತ ನಿನ್ನೆಯೇ ಈ ಕುರಿತು ಹೇಳಿಕೆ ನೀಡಿದ್ದ ಐಯುಎಂಎಲ್ ಮುಖಂಡ ಕೆಎಫ್ ಫಿರೋಜ್, ಅನೂಫ್ ಹಾಗೂ ಬಿನೀಶ್ ಇಬ್ಬರು ಸ್ನೇಹಿತರು ಎಂದು ಮಾಧ್ಯಮಗಳ ಹೇಳಿದ್ದ. ಸದ್ಯದ ಮಾಹಿತಿ ಅನ್ವಯ ಆರೋಪವನ್ನು ಎದುರಿಸುತ್ತಿರುವ ಬಿನೀಶ್, ಹಲವು ವ್ಯವಹಾರ ನಡೆಸುತ್ತಿದ್ದ. ಅಲ್ಲದೇ ಚಿತ್ರರಂದ ಗಣ್ಯರೊಂದಿಗೂ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.

    ಬಿನೀಶ್ ಸಹೋದರ ಬಿನೊಯ್, ಮುಂಬೈ ಮೂಲದ 33 ವರ್ಷದ ಮಹಿಳೆಗೆ ಮದುವೆ ಹೆಸರಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ಹಾಗೂ ವಂಚಿಸಿದ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ. ಈ ಪ್ರಕರಣದ ವಿಚಾರಣೆ ಮುಂಬೈನಲ್ಲಿ ನಡೆಯುತ್ತಿದ್ದು, ಡಿಎನ್‍ಎ ಪರೀಕ್ಷೆಯ ಫಲಿಶಾಂಶಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

  • ಡೋಂಟ್‌ ಕಿಲ್‌ ದಿ ಮೆಸೆಂಜರ್‌ – ಇಂದ್ರಜಿತ್‌ ಲಂಕೇಶ್‌

    ಡೋಂಟ್‌ ಕಿಲ್‌ ದಿ ಮೆಸೆಂಜರ್‌ – ಇಂದ್ರಜಿತ್‌ ಲಂಕೇಶ್‌

    ಬೆಂಗಳೂರು: “ಡೋಂಟ್‌ ಕಿಲ್‌ ದಿ ಮೆಸೆಂಜರ್‌” – ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತನ್ನ ಸದಸ್ಯತ್ವವನ್ನು ಪ್ರಶ್ನಿಸಿದ್ದಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಈ ಪತ್ರಿಕ್ರಿಯೆಯನ್ನು ನೀಡಿದ್ದಾರೆ.

    ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ತಂದೆ 30 ವರ್ಷಗಳಿಂದ ಚಿತ್ರರಂಗದಲ್ಲಿದ್ದರು. ನಾನು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದೇನೆ. ನಿರ್ದೇಶನ ಮಾಡಿದ್ದೇನೆ. ನಾವು ಸಿನಿಮಾದವರೇ, ನಾವು ಚಿತ್ರರಂಗಕ್ಕೆ ಸೇರಿದ್ದೇವೆ. ಚಿತ್ರರಂಗದ ಒಳಿತಿಗಾಗಿ ಈ ವಿಚಾರದಲ್ಲಿ ಬಹಿರಂಗವಾಗಿ ಮಾತನಾಡುತ್ತಿದ್ದೇನೆ ಎಂದು ತಿಳಿಸಿದರು.

    ಈ ವಿಚಾರದಲ್ಲಿ ವಾಣಿಜ್ಯ ಮಂಡಳಿ ಏನಾದರೂ ಕ್ರಮ ತೆಗೆದುಕೊಂಡರೆ ನಾನು ಕಾನೂನಿನ ಮೊರೆ ಹೋಗುತ್ತೇನೆ ಎಂದು ಹೇಳಿದರು.

    ನಾನು ಒಬ್ಬ ಮೆಸೆಂಜರ್ ಅಷ್ಟೇ. ಸಿಸಿಬಿ ವಿಚಾರಣೆ ವಿಚಾರದಲ್ಲಿ ನಾನು ಏನ್ ಹೇಳಿದ್ದೇನೋ ಅದಕ್ಕೆ ನಾನು ಬದ್ಧವಾಗಿದ್ದೇನೆ. ಮಾಧ್ಯಮದಲ್ಲಿ ಏನ್ ಹೇಳಿದ್ದೇನೋ ಅದೆಲ್ಲವೂ ಸತ್ಯ. ಡ್ರಗ್ ಮಾಫಿಯಾ ವಿಚಾರದಲ್ಲಿ ನಾನು ಪೊಲೀಸರಿಗೆ ಪಾರಿವಾಳದಂತೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದರು.

    ನಾನು ಕೊಟ್ಟಿರುವ ಮಾಹಿತಿ ಆಧರಿಸಿ ಪೋಲೀಸರಿಗೆ ಸರಿಯಾಗಿ ತನಿಖೆ ಮಾಡಬೇಕು. ನೀಡಿದ ಮಾಹಿತಿಯನ್ನ ಆಧರಿಸಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನನ್ನ ಪರ ವಿರೋಧದ ಚರ್ಚೆ ಯ ಬಗ್ಗೆ ನಾನು ಮಾತನಾಡುವುದಿಲ್ಲ. ಈ ಒಂದು ಪ್ರಕರಣದಿಂದ ಕಾನೂನಿನ ರೀತಿಯಲ್ಲಿ , ಚಿತ್ರರಂಗಕ್ಕೆ ಒಳ್ಳೆಯದಾದರೆ ಅದೇ ನನಗೆ ದೊಡ್ಡ ಸಂತೋಷ. ಮುಂದಾದರೂ ಆ ಕಳಂಕ ಬಾರದಂತೆ ನೋಡಿಕೊಳ್ಳಿ ಎಂದು ಇಂದ್ರಜಿತ್‌ ಲಂಕೇಶ್‌ ಮನವಿ ಮಾಡಿದರು.

  • ಯಾವ್ಯಾವ ನಾಯಕರಿಗೆ, ಏನೇನೂ ಸೇವೆ ಮಾಡಿ 15 ವರ್ಷದಲ್ಲಿ 2 ಬಾರಿ ಸಿಎಂ ಆದ್ರಿ: ಸುಧಾಕರ್

    ಯಾವ್ಯಾವ ನಾಯಕರಿಗೆ, ಏನೇನೂ ಸೇವೆ ಮಾಡಿ 15 ವರ್ಷದಲ್ಲಿ 2 ಬಾರಿ ಸಿಎಂ ಆದ್ರಿ: ಸುಧಾಕರ್

    – ರಾಜೀನಾಮೆ ನೀಡುವ ಸವಾಲು

    – ಪುರಾವೆ ಒದಗಿಸಲು ಸಚಿವ  ಸುಧಾಕರ್ ಆಗ್ರಹ

    ಬೆಂಗಳೂರು: ಡ್ರಗ್ ಮಾಫಿಯಾ ಹಣ ನಮ್ಮ ಸರ್ಕಾರಕ್ಕೆ ಬಂದಿದೆ ಎಂಬ ಆರೋಪಕ್ಕೆ ಪುರಾವೆ ಒದಗಿಸಿದರೆ ನಾನು ರಾಜೀನಾಮೆ ಕೊಡುತ್ತೇನೆ. ಆದರೆ ನೀವು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವಿರಾ? ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸವಾಲೆಸೆದಿದ್ದಾರೆ.

    ಡ್ರಗ್ ಮಾಫಿಯಾದಿಂದ ತಮ್ಮ ಸರ್ಕಾರ ಬುಡಮೇಲಾಯಿತು ಎಂಬ ಎಚ್‍ಡಿಕೆ ಅವರ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ನಾನು ಯಾವ ಮುಂಬೈಗೂ ಹೋಗಿಲ್ಲ. ಮಾಜಿ ಮುಖ್ಯಮಂತ್ರಿಗಳಾಗಿ ಇಂತಹ ಗಂಭೀರ ಆರೋಪ ಮಾಡಬಾರದು. ಆರೋಪ ಮಾಡಿದರೆ ಅದಕ್ಕೆ ಪುರಾವೆಯನ್ನೂ ನೀಡಬೇಕು. ಬಿಜೆಪಿ ಅಂತಹ ಅನೈತಿಕ ಕೆಲಸವನ್ನೂ ಎಂದೂ ಮಾಡಿಲ್ಲ. ನನ್ನ ಅರ್ಹತೆ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರು ನಿರ್ಣಯಿಸುತ್ತಾರೆ. ತಾವು ತಲೆ ಕೆಡಿಸಿಕೊಳ್ಳುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ.

    ಮಾಜಿ ಸಿಎಂ ಎಚ್‍ಡಿಕೆ ಅವರಿಗೆ ಟ್ವೀಟ್ ಮೂಲಕವೇ ಸಚಿವರು ನೀಡಿರುವ ಸುಧಾಕರ್, ಯಾವ್ಯಾವ ನಾಯಕರಿಗೆ, ಏನೇನೂ ಸೇವೆ ಮಾಡಿ 15 ವರ್ಷದಲ್ಲಿ 2 ಬಾರಿ ಮುಖ್ಯಮಂತ್ರಿಗಳಾದಿರಿ ಎಂದು ಮರುಪ್ರಶ್ನಿಸಿದ್ದಾರೆ. ಅಲ್ಲದೇ ನಾನು ಕೇಳಿದ್ದು ಡ್ರಗ್ ಮಾಫಿಯಾ ಆರೋಪದ ಹಿನ್ನಲೆಗಳ ಬಗ್ಗೆ, ಮಾಜಿ ಮುಖ್ಯಮಂತ್ರಿಗಳಾಗಿ, ಡ್ರಗ್ ಮಾಫಿಯಾ ಹಣದಿಂದ ಸರ್ಕಾರ ಬಂದಿದೆ ಎಂದು ಚುನಾಯಿತ ಸರ್ಕಾರದ ಮೇಲಿನ ಬೇಜಾವಾಬ್ದಾರಿ ಹೇಳಿಕೆಯ ಹಿನ್ನಲೆ ಬಗ್ಗೆ! ಬಿಜೆಪಿ ಅನೈತಿಕ ಕೆಲಸವನ್ನು ಎಂದೂ ಮಾಡಿಲ್ಲ, ಮಾಡುವುದಿಲ್ಲ. ಅದಕ್ಕೆ 2 ಸ್ಥಾನದಿಂದ 303 ಸ್ಥಾನಗಳನ್ನು ಜನ ಆಶೀರ್ವದಿಸಿದ್ದಾರೆ.

    ಬಿಜೆಪಿ ಕಾರ್ಯಕರ್ತರ ಪರವಾಗಿ ಮಾತನಾಡಲು ನಮಲ್ಲಿ ಅರ್ಹ ವಕ್ತಾರರು ಇದ್ದಾರೆ. ಪಕ್ಷದ ಸಿದ್ದಾಂತದ ಬಗ್ಗೆ, ಅಥವಾ ನನ್ನ ಅರ್ಹತೆ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರು ನಿರ್ಣಯಿಸುತ್ತಾರೆ ಬಿಡಿ! ತಾವು ತಲೆಕೆಡಿಸಿಕೊಳ್ಳುವ ಅಗತ್ಯವೇನಿದೆ? ನಾನು ಯಾವ ಮುಂಬೈಗೂ ಹೋಗಿಲ್ಲ. ಡ್ರಗ್ ಮಾಫಿಯಾ ಹಣದಿಂದ ಈ ಸರ್ಕಾರ ಬಂದಿದ್ದರೆ, ಅದು ಖಂಡಿತ ಇರಬಾರದು. ಮಾಜಿ ಮುಖ್ಯಮಂತ್ರಿಗಳಾಗಿ ಇಂಥ ಗಂಭೀರ ಆರೋಪಗಳಿಗೆ ಪುರಾವೆಯನ್ನೂ ನೀಡಲೇಬೇಕಾಗುತ್ತದೆ. ಇದನ್ನು ತಾವು ಸಾಬೀತು ಮಾಡಿದರೆ ನಾನು ರಾಜೀನಾಮೆ ಕೊಡ್ತೇನಿ ಆಗದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವಿರಾ? ಎಂದಿದ್ದಾರೆ.

    ತಮ್ಮ ಆರೋಪಗಳ ಹಿನ್ನಲೆ ಆಧಾರಗಳ ಬಗ್ಗೆ ಕೇಳಿದ್ದೇನೆ. ನಾನು ಮಾಜಿ ಮುಖ್ಯಮಂತ್ರಿ ಮಾಜಿ ಪ್ರಧಾನಮಂತ್ರಿಯ ಮಗನಲ್ಲ, ಒಬ್ಬ ಸಾಮಾನ್ಯ ಶಾಲಾ ಶಿಕ್ಷಕನ ಮಗನಾಗಿ ಸ್ವಸಾಮಥ್ರ್ಯದಿಂದ, ಜನರ ಆಶೀರ್ವಾದದಿಂದ ರಾಜಕೀಯದಲ್ಲಿ ಸಕ್ರಿಯನಾಗಿದ್ದೇನೆ. ನಾನೆಂದೂ ಯಾರ ಹೆಸರಿನಲ್ಲೂ ರಾಜಕೀಯ ಮಾಡಿಲ್ಲ. ಎಲ್ಲರ ಹಿನ್ನಲೆಗಳನ್ನೂ ರಾಜ್ಯದ ಜನರು ಗ್ರಹಿಸಿದ್ದಾರೆ.

    ಯಾವ್ಯಾವ ನಾಯಕರಿಗೆ, ಏನೇನೂ ಸೇವೆ ಮಾಡಿ 15 ವರ್ಷದಲ್ಲಿ 2 ಬಾರಿ ಮುಖ್ಯಮಂತ್ರಿಗಳಾದಿರಿ ಎಂಬ ಬಗ್ಗೆಯೂ ಒಮ್ಮೆ ತಮ್ಮನ್ನು ಕೇಳಬಹುದೇ? ಪಕ್ಕದಲ್ಲಿ ಧರಮ್ ಸಿಂಗ್ ಅವರನ್ನು ಇಟ್ಟುಕೊಂಡು, ಕೆಲವು ಸ್ನೇಹಿತರೊಂದಿಗೆ ರಾತ್ರೋರಾತ್ರಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದ ಹಿನ್ನಲೆ ಬಗ್ಗೆ ಜನರೇ ಮಾತನಾಡುತ್ತಿದ್ದಾರೆ. ಒಮ್ಮೆ ಕೇಳಿಸಿಕೊಳ್ಳಿ! ಸರ್ಕಾರದ ವಿರುದ್ಧ ತಮ್ಮ ಆರೋಪಗಳಿಗೆ ಪುರಾವೆ ನೀಡಿ. ಸರ್ಕಾರದಲ್ಲಿ ಸಚಿವನಾಗಿ ಸರ್ಕಾರದ ವಿರುದ್ಧ ಆಧಾರರಹಿತ ಆರೋಪ ಮಾಡಿದರೆ ಅದಕ್ಕೆ ಪುರಾವೆ ಕೇಳುವುದು ಹೆಗಲು ಮುಟ್ಟಿಕೊಳ್ಳುವ ಪ್ರಮೇಯ ಹೇಗಾದೀತು? ಎಂದಿದ್ದಾರೆ.

    ವಚನದ ಮೂಲಕವೇ ಟಾಂಗ್ ನೀಡಿರುವ ಸುಧಾಕರ್ ಅವರು, ತನಗೆ ಮುನಿದವರಿಗೆ ತಾ ಮುನಿಯಲೇಕಯ್ಯಾ. ತನಗಾದ ಆಗೇನು ಅವರಿಗಾದ ಚೇಗೆಯೇನು. ತನುವಿನ ಕೋಪ ತನ್ನ ಹಿರಿಯತನದ ಕೇಡು. ಮನದ ಕೋಪ ತನ್ನರಿವಿನ ಕೇಡು. ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೇ. ನೆರೆಮನೆಯ ಸುಡದೋ ಕೂಡಲಸಂಗಮದೇವ ಎಂದು ಬರೆದುಕೊಂಡಿದ್ದಾರೆ.

  • ರಾತ್ರೋರಾತ್ರಿ ವಿಮಾನ ಬದಲಿಸಿ ಓಡಾಡಿ ಬಂದವರು ನನ್ನ ಬಗ್ಗೆ ಮಾತನಾಡ್ತಿದ್ದಾರೆ- ಸುಧಾಕರ್‌ಗೆ ಎಚ್‍ಡಿಕೆ ಟಾಂಗ್

    ರಾತ್ರೋರಾತ್ರಿ ವಿಮಾನ ಬದಲಿಸಿ ಓಡಾಡಿ ಬಂದವರು ನನ್ನ ಬಗ್ಗೆ ಮಾತನಾಡ್ತಿದ್ದಾರೆ- ಸುಧಾಕರ್‌ಗೆ ಎಚ್‍ಡಿಕೆ ಟಾಂಗ್

    -ಯಾವ್ಯಾವ ನಾಯಕರಿಗೆ ಎಂತೆಂಥ ಸೇವೆಗಳನ್ನು ಮಾಡಿದ್ದಾರೆ

    ಬೆಂಗಳೂರು: ರಾಜಕೀಯವಾಗಿ ಈಗಾಗಲೇ ಎಷ್ಟು ನೆಲೆಗಳನ್ನು ಬದಲಾಯಿಸಿ ರಾತ್ರೋರಾತ್ರಿ ವಿಮಾನ ಬದಲಿಸಿ ಓಡಾಡಿ ಬಂದವರು ನನ್ನ ಹಿನ್ನೆಲೆ ಬಗ್ಗೆ ಮಾತನಾಡಿದರೆ ರಾಜ್ಯದ ಜನತೆ ನಗುತ್ತಾರೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ಸಚಿವ ಡಾ.ಕೆ ಸುಧಾಕರ್ ಅವರಿಗೆ ಟಾಂಗ್ ನೀಡಿದ್ದಾರೆ.

    ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಸದ್ಯ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವಿನ ವಾಕ್ ಸಮರಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಎಚ್‍ಡಿಕೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ನನ್ನ ಹಿನ್ನೆಲೆ ಬಗೆಗೆ ಮಾತನಾಡಿದ್ದಾರೆ. ಬಹುಶಃ ಸುಧಾಕರ್ ಅವರಿಗೆ ಸ್ಮರಣಶಕ್ತಿ ಕಡಿಮೆ ಇದ್ದಂತಿದೆ. ರಾಜಕೀಯವಾಗಿ ಈಗಾಗಲೇ ಎಷ್ಟು ನೆಲೆಗಳನ್ನು ಬದಲಾಯಿಸಿ ರಾತ್ರೋರಾತ್ರಿ ವಿಮಾನ ಬದಲಿಸಿ ಓಡಾಡಿ ಬಂದವರು ನನ್ನ ಹಿನ್ನೆಲೆ ಬಗೆಗೆ ಮಾತನಾಡಿದರೆ ರಾಜ್ಯದ ಜನತೆ ನಗುತ್ತಾರೆ ಎಂದು ಬರೆದುಕೊಂಡಿದ್ದಾರೆ.

    ಬಿಜೆಪಿ ಸಿದ್ಧಾಂತದ ಬಗ್ಗೆ ಮಾತನಾಡುವಷ್ಟು ಅರ್ಹತೆ ಸುಧಾಕರ್ ಅವರಿಗೆ ಬಂದಿದೆಯೇ ಎಂಬುದನ್ನು ಅವರ ಪಕ್ಷದ ಕಾರ್ಯಕರ್ತರು ಕೂಡ ಒಪ್ಪುವುದಿಲ್ಲ. ಡ್ರಗ್ಸ್ ಮಾಫಿಯಾ, ಬೆಟ್ಟಿಂಗ್ ದಂಧೆ ಮಾಡುವವರಿಂದ ವಸೂಲಿ ಮಾಡಿದ ಹಣದಿಂದಲೇ ನನ್ನ ಸರ್ಕಾರವನ್ನು ಬುಡಮೇಲು ಮಾಡಲಾಯಿತು ಎಂಬುದು ಸೂರ್ಯ-ಚಂದ್ರರಷ್ಟೇ ಸ್ಪಷ್ಟ. ಇದನ್ನು ಮುಂಬೈವೀರರು ಚೆನ್ನಾಗಿಯೇ ಬಲ್ಲರು. ಅದಕ್ಕೆ ಸಚಿವ ಸುಧಾಕರ್ ಹೊರತಲ್ಲ ಎಂದಿದ್ದಾರೆ.

    ಅಲ್ಲದೇ ಸಚಿವ ಸ್ಥಾನ ಸಿಕ್ಕಿದೆ ಎಂಬ ಉತ್ಸಾಹದಲ್ಲಿ ನನ್ನ ಹಿನ್ನೆಲೆ-ಮುನ್ನೆಲೆ ಬಗೆಗೆ ಮಾತನಾಡುವುದು ಸುಧಾಕರ್ ಅವರ ನೈಜ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಅಧಿಕಾರ ಶಾಶ್ವತ ಮತ್ತು ತಮ್ಮ ಸ್ವಂತ ಶಕ್ತಿ ಎಂಬ ಭ್ರಮೆಯಲ್ಲಿ ಇರುವವರು ಮಾತ್ರ ಹೀಗೆ ಮಾತನಾಡುತ್ತಾರೆ ಎಂಬುದು ನನ್ನ ಗ್ರಹಿಕೆ.

    ಕಳೆದ ಎರಡು ದಶಕಗಳಿಂದ ಸುಧಾಕರ್ ಅವರು ಯಾವ್ಯಾವ ನಾಯಕರಿಗೆ ಎಂತೆಂಥ ಸೇವೆಗಳನ್ನು ಮಾಡಿದ್ದಾರೆ ಎಂಬ ಹಿನ್ನೆಲೆ ಬಗೆಗೆ ನಾನು ಮಾತನಾಡಲಾರೆ. ಜನಸೇವೆಯಲ್ಲಿ ವಿಶ್ವಾಸವಿಟ್ಟು ರಚನೆಗೊಂಡ ಸರ್ಕಾರವೊಂದು ಮಾಫಿಯಾದ ಹಣದಿಂದ ಹೇಗೆ ಬುಡಮೇಲಾಯಿತು ಎಂಬುದಷ್ಟನ್ನೇ ಜನತೆಯ ಮುಂದೆ ಹೇಳಿದ್ದೇನೆ. ಆದರೆ ಸಚಿವ ಸುಧಾಕರ್ ಹೆಗಲು ಮುಟ್ಟಿಕೊಳ್ಳುವ ಪ್ರಮೇಯ ಉದ್ಭವಿಸಿದ್ದು ಏಕೆಂದು ಅರ್ಥವಾಗಲಿಲ್ಲ ಎಂದು ಹೇಳಿದ್ದಾರೆ.

    ಎಚ್‍ಡಿಕೆ ನೇತೃತ್ವದ ಮೈತ್ರಿ ಸರ್ಕಾರ ಪತನಕ್ಕೆ ಡ್ರಗ್ ಮಾಫಿಯಾ ಹಣ ಬಳಸಲಾಗಿದೆ ಎಂದು ಎಚ್‍ಡಿಕೆ ಆರೋಪ ಮಾಡಿದ್ದರು. ಈ ಆರೋಪಕ್ಕೆ ತಿರುಗೇಟು ನೀಡಿದ್ದ ಸುಧಾಖರ್, ಬಿಜೆಪಿ ಎಂದಿಗೂ ನೀಚ ಕೆಲಸಕ್ಕೆ ಕೈಹಾಕುವುದಿಲ್ಲ. ಕುಮಾರಸ್ವಾಮಿ ತಮ್ಮ ಮಾತಿನ ಮೇಲೆ ನಿಗಾಯಿಟ್ಟು ಮಾತನಾಡಬೇಕು ಎಂದಿದ್ದರು.