Tag: drugs

  • ಗೌರಿ ಲಂಕೇಶ್‍ಗೆ ಪಾಕ್‍ನಿಂದ ಡ್ರಗ್ಸ್ ಸಪ್ಲೈ ಆಗ್ತಿತ್ತು: ಸಿದ್ದಲಿಂಗ ಸ್ವಾಮೀಜಿ ಗಂಭೀರ ಆರೋಪ

    ಗೌರಿ ಲಂಕೇಶ್‍ಗೆ ಪಾಕ್‍ನಿಂದ ಡ್ರಗ್ಸ್ ಸಪ್ಲೈ ಆಗ್ತಿತ್ತು: ಸಿದ್ದಲಿಂಗ ಸ್ವಾಮೀಜಿ ಗಂಭೀರ ಆರೋಪ

    – ಲವ್ ಜಿಹಾದ್ ಮಾದರಿಯಲ್ಲಿ ಪಾಕಿಸ್ತಾನದಿಂದ ಡ್ರಗ್ಸ್ ಜಿಹಾದ್
    – ಡ್ರಗ್ಸ್ ವಿಚಾರದಲ್ಲಿ ಇಂದ್ರಜಿತ್‍ಗೂ ಗೌರಿ ಮನಸ್ತಾಪವಿತ್ತು

    ಯಾದಗಿರಿ: ಪತ್ರಕರ್ತೆ ಗೌರಿ ಲಂಕೇಶ್‍ಗೆ ಪಾಕಿಸ್ತಾನದಿಂದ ಡ್ರಗ್ಸ್ ಸಪ್ಲೈ ಆಗುತ್ತಿತ್ತು. ಬದುಕಿದ್ದಾಗ ಗೌರಿ ಲಂಕೇಶ್ ಡ್ರಗ್ಸ್ ತೆಗೆದುಕೊಳ್ತಿದ್ರು. ಈ ಬಗ್ಗೆ ತನಿಖೆಯಾಗಲಿ ಅಂತ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಆಂದೊಲ ಶ್ರೀ ಸಿದ್ದಲಿಂಗ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.

    ನಗರದಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿರುವ ಅವರು, ಗೌರಿ ಲಂಕೇಶ್ ಡ್ರಗ್ಸ್ ತೆಗೆದುಕೊಳ್ಳುವ ಬಗ್ಗೆ ಪೊಲೀಸರು ಮಾಹಿತಿ ಕೇಳಿದ್ರೆ ನಾವು ನೀಡುತ್ತವೆ. ಈ ಬಗ್ಗೆ ನಾವು ಸಾಕ್ಷಿ ಸಂಗ್ರಹ ಮಾಡುತ್ತಿದ್ದೆವು. ಆದರೆ ಅಷ್ಟೊತ್ತಿಗೆ ಅವರು ಮೃತಪಟ್ಟರು. ಅದಕ್ಕೆ ಸುಮ್ಮನಾದೆವು ಎಂದ್ರು.

    ಡ್ರಗ್ಸ್ ವಿಚಾರದಲ್ಲಿ ಇಂದ್ರಜಿತ್ ಗೂ ಗೌರಿಗೂ ಮನಸ್ತಾಪವಿತ್ತು. ಹೀಗಾಗಿ ಗೌರಿ ಬದುಕಿದ್ದಾಗ ಅವರು ಜೊತೆಗಿರಲಿಲ್ಲ. ಇಂದ್ರಜಿತ್ ಲಂಕೇಶ್‍ಗೆ ಈಗ ಜ್ಞಾನೋದಯವಾಗಿದೆ. ಇಂದ್ರಜಿತ್ ಮೊದಲು ಮನೆ ಸರಿ ಮಾಡಿಕೊಳ್ಳಲಿ. ಆಮೇಲೆ ಸಮಾಜ ಸುಧಾರಣೆ ಮಾಡಲಿ ಎಂದು ಟಾಂಗ್ ನೀಡಿದ್ರು.

    ಪಾಕಿಸ್ತಾನದಿಂದ ಡ್ರಗ್ಸ್ ಜಿಹಾದ್ ನಡೀತಿದೆ. ಮುಸ್ಲಿಂ ರಾಷ್ಟ್ರಗಳಿಂದ ಡ್ರಗ್ಸ್ ಸಪ್ಲೈ ಆಗುತ್ತೆ. ಲವ್ ಜಿಹಾದ್ ಮಾದರಿಯಲ್ಲಿ ಡ್ರಗ್ಸ್ ಜಿಹಾದ್ ಆರಂಭವಾಗಿದೆ. ನಮ್ಮ ಯುವಕರನ್ನ ಹಾಳು ಮಾಡಲು ಈ ಜಿಹಾದ್ ನಡೆದಿದೆ. ಹಣ ಸಂಪಾದನೆ ಮಾಡಿ ಭಾರತದ ವಿರುದ್ಧ ಸಮರ ಸಾರುವ ಹುನ್ನಾರ ನಡೆಯುತ್ತಿದೆ ಎಂದ್ರು.

    ಗಾಂಜಾ ಕುರಿತು ನಟಿ ನಿವೇದಿತಾ ಹೇಳಿಕೆಗೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬುದ್ಧಿ ಜೀವಿಗಳು, ನಟಿ ಮಣಿಗಳಿಂದಲೇ ನಮ್ಮ ಸಾಮ್ರಾಜ್ಯ ಹಾಳಾಗ್ತಿದೆ. ಗಾಂಜಾ, ಸೆಕ್ಸ್, ವೈಶ್ಯಾವಾಟಿಕೆಗೂ ಅನುಮತಿ ಕೊಡಿ ಅಂತಾರೆ. ಓಪನ್ ಕ್ಸಿಸ್ಸಿಂಗ್ ಗೂ ಅನುಮತಿ ಕೊಡಿ ಅಂತಾರೆ. ಇವೆಲ್ಲ ದೇಶಕ್ಕೆ ಮಾರಕ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ರು.

  • ಯುವ ಪೀಳಿಗೆಯನ್ನು ಡ್ರಗ್ಸ್‌ನಿಂದ ರಕ್ಷಿಸಬೇಕು: ಅನಿರುದ್ಧ

    ಯುವ ಪೀಳಿಗೆಯನ್ನು ಡ್ರಗ್ಸ್‌ನಿಂದ ರಕ್ಷಿಸಬೇಕು: ಅನಿರುದ್ಧ

    ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಕೇಸ್ ದಿನೇ ದಿನೇ ಹೊಸ ರೂಪ ಪಡೆದುಕೊಳ್ಳುತ್ತಿದ್ದು, ಈ ಸಂಬಂಧ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ ಪ್ರತಿಕ್ರಿಯಿಸಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಡ್ರಗ್ಸ್ ಮಾಫಿಯಾ, ಡ್ರಗ್ಸ್ ಜಾಲದ ಬಗ್ಗೆ ಅರಿವಿಲ್ಲ. ಈ ವಿಚಾರ ಮನಸ್ಸಿಗೆ ತುಂಬಾ ಬೇಜಾರಾಗುತ್ತಿದೆ. ಇಡೀ ಜಗತ್ತಿನಲ್ಲೇ ಈ ಮಾಫಿಯಾ ಇರಬಾರದು. ಯುವ ಪೀಳಿಗೆಯನ್ನ ಇದರಿಂದ ರಕ್ಷಿಸಬೇಕು ಎಂದು ಇದೇ ವೇಳೆ ಮನವಿ ಮಾಡಿಕೊಂಡರು.

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಹಿಂದೆ ರವಿಶಂಕರ್ ಹೇಳಿಕೆ ಆಧರಿಸಿ ನಟಿ ರಾಗಿಣಿಯನ್ನು ಬಂಧಿಸಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈ ಬೆನ್ನಲ್ಲೇ ರಾಹುಲ್ ಹೇಳಿಕೆ ಆಧರಿಸಿ ನಿನ್ನೆ ನಟಿ ಸಂಜನಾ ಗಲ್ರಾನಿಯನ್ನು ಸಿಸಿಬಿ ಪೊಲೀಸರು ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಇವರನ್ನು ಕೂಡ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

    ಮಹಿಳಾ ಸಾಂತ್ವನ ಕೇಂದ್ರದ ಒಂದೇ ಕೊಠಡಿಯಲ್ಲಿ ನಟಿ ರಾಗಿಣಿ ಮತ್ತು ಸಂಜನಾ ಮಂಗಳವಾರ ರಾತ್ರಿಯನ್ನು ಕಳೆದಿದ್ದಾರೆ. ಐದು ಹಾಸಿಗೆಯುಳ್ಳ ಈ ಕೊಠಡಿಯಲ್ಲಿ ಒಬ್ಬರನೊಬ್ಬರ ಮುಖವನ್ನು ನೋಡಿಕೊಂಡು ಪ್ರತ್ಯೇಕವಾಗಿ ನಟಿಯರು ಕುಳಿತಿದ್ದರು ಎಂಬ ವಿಚಾರ ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ.

    5 ಹಾಸಿಗೆಗಳ ಪೈಕಿ ಮೊದಲ ಮತ್ತು ಕೊನೆಯ ಹಾಸಿಗೆಯನ್ನು ಇಬ್ಬರಿಗೆ ನೀಡಿದ್ದರೆ ಮಧ್ಯದಲ್ಲಿರುವ ಮೂರು ಬೆಡ್‍ಗಳನ್ನು ಭದ್ರತೆಗೆ ನಿಯೋಜನೆಗೊಂಡಿದ್ದ ಮಹಿಳಾ ಪೊಲೀಸರಿಗೆ ನೀಡಲಾಗಿತ್ತು. ರಾಗಿಣಿ ನೋಡಿ ನಟಿ ಸಂಜನಾ ಈಗ ಸಮಾಧಾನ ಆಯ್ತಾ ಕೇಳಿದ್ದಾರೆ. ರಾತ್ರಿ ಊಟ ಬೇಡ ಎಂದು ಹೇಳಿದ್ದ ಸಂಜನಾ ಕಣ್ಣೀರು ಹಾಕುತ್ತಾ ಕುಳಿತಿದ್ದರು. ಕೆಪಿಎಲ್ ವಿಚಾರದಲ್ಲಿ ಇಬ್ಬರು ನಟಿಯ ನಡುವೆ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಮೊದಲೇ ಮಾತುಕತೆ ಕಡಿಮೆ ಇತ್ತು. ಹೀಗಾಗಿ ಮಂಗಳವಾರ ರಾತ್ರಿ ಇಬ್ಬರ ಮಧ್ಯೆ ಯಾವುದೇ ಜಾಸ್ತಿ ಮಾತುಕತೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.

    https://www.youtube.com/watch?v=vAzz6njMaKU

  • ಎಲೆಕ್ಟ್ರಿಕ್ ಮಸಾಜರ್ ಒಳಗಡೆ ಡ್ರಗ್ಸ್ – ಕೋಟಿ ಮೌಲ್ಯದ ಎಂಡಿಎಂಎ ಮಾತ್ರೆ ವಶ

    ಎಲೆಕ್ಟ್ರಿಕ್ ಮಸಾಜರ್ ಒಳಗಡೆ ಡ್ರಗ್ಸ್ – ಕೋಟಿ ಮೌಲ್ಯದ ಎಂಡಿಎಂಎ ಮಾತ್ರೆ ವಶ

    – ಬೆಲ್ಜಿಯಂನಿಂದ ಭಾರತಕ್ಕೆ ಬಂತು ಪಾರ್ಸೆಲ್

    ಬೆಂಗಳೂರು: ಎಲೆಕ್ಟ್ರಿಕ್ ಮಸಾಜರ್ ಒಳಗೆ ಡ್ರಗ್ಸ್ ಪಾರ್ಸೆಲ್ ಬಂದಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

    ಇಡೀ ಭಾರತದಲ್ಲೇ ಡ್ರಗ್ ಮಾಫಿಯಾ ಪ್ರಕರಣ ಹೆಚ್ಚಾಗುತ್ತಿದೆ. ಎನ್‍ಸಿಬಿ ಅಧಿಕಾರಿಗಳು ದಿನಕ್ಕೊಬ್ಬರಂತೆ ಮಾಫಿಯಾದಲ್ಲಿ ತೊಡಗಿರುವವರನ್ನು ಅರೆಸ್ಟ್ ಮಾಡುತ್ತಿದ್ದಾರೆ. ಇದರಲ್ಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಇಂದು ಅದೇ ಅಧಿಕಾರಿಗಳು 1 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಇಂದು ಬೆಲ್ಜಿಯಂನಿಂದ ಬಂದ ವಿಮಾನದಲ್ಲಿ ಎಲೆಕ್ಟ್ರಿಕ್ ಮಸಾಜರ್ ಒಂದು ಪಾರ್ಸೆಲ್ ಬಂದಿತ್ತು. ಇದರ ಒಳಗೆ 1,980 ಗ್ರಾಂ ಪ್ರಮಾಣದ ಎಂಡಿಎಂಎ(ಮೀಥೈಲ್ ಎನೆಡಿಯಾಕ್ಸಿ ಮೆಥಾಂಫೆಟಮೈನ್ ನನ್ನು ಎಕ್‍ಸಸ್ಟಿ ಮಾತ್ರೆ ಎಂದು ಕರೆಯಲಾಗುತ್ತದೆ) ಮಾತ್ರೆಗಳು ಇರುವುದು ಪತ್ತೆಯಾಗಿದೆ. ಬೆಂಗಳೂರು ಅಂತರಾಷ್ಟ್ರೀಯ ಕೋರಿಯರ್ ಕೇಂದ್ರದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಈ ಡ್ರಗ್ ಅನ್ನು ಪತ್ತೆ ಮಾಡಿದ್ದಾರೆ. ಸುಮಾರು 1 ಕೋಟಿಗೂ ಅಧಿಕ ಮೌಲ್ಯದ ಎಂಡಿಎಂಎ ಮಾತ್ರೆ ಇದರಲ್ಲಿ ಸಿಕ್ಕಿದೆ.

    ಹೊರದೇಶದಿಂದ ಯಾವುದೇ ವಸ್ತು ಪಾರ್ಸೆಲ್ ಬಂದರೆ, ಅದು ಕಸ್ಟಮ್ ಅಧಿಕಾರಿಗಳಿಗೆ ಗೊತ್ತಾಗುತ್ತದೆ. ಹೀಗಿರುವಾಗ ಅಷ್ಟೊಂದು ಪ್ರಮಾಣದ ಮಾದಕ ವಸ್ತು ವಿದೇಶದಿಂದ ಹೇಗೆ ಬರುತ್ತಿದೆ. ಇದರಲ್ಲಿ ಕಸ್ಟಮ್ ಅಧಿಕಾರಿಗಳು ಭಾಗಯಾಗಿದ್ದರಾ ಎಂಬ ಅನುಮಾನಗಳು ಮೂಡಿತ್ತು. ಡ್ರಗ್ ಮಾಫಿಯಾ ಒಂದು ದೊಡ್ಡ ನೆಟ್‍ವರ್ಕ್ ಆಗಿದ್ದು, ಇದರಲ್ಲಿ ಸ್ಯಾಂಡಲ್‍ವುಡ್‍ನ ಹಲವಾರು ಮಂದಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. ಸದ್ಯ ನಟಿಯರಾದ ರಾಗಿಣಿ ಮತ್ತು ಸಂಜನಾ ಅರೆಸ್ಟ್ ಆಗಿದ್ದಾರೆ.

  • ನಟಿ ಸಂಜನಾಗೆ ಡ್ರಗ್ ಪೆಡ್ಲರ್, ನಟ ನಿಯಾಸ್ ಅಹಮದ್ ಜೊತೆ ನಂಟು

    ನಟಿ ಸಂಜನಾಗೆ ಡ್ರಗ್ ಪೆಡ್ಲರ್, ನಟ ನಿಯಾಸ್ ಅಹಮದ್ ಜೊತೆ ನಂಟು

    ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿಯ ಬಳಿಕ ಇದೀಗ ಸಿಸಿಬಿ ಅಧಿಕಾರಿಗಳು ನಟಿ ಸಂಜನಾ ಗಲ್ರಾನಿಯನ್ನು ಬಂಧಿಸಿದ್ದಾರೆ.

    ನಟಿ ಸಂಜನಾಗೆ ಡ್ರಗ್ ಪೆಡ್ಲರ್ ಸೋಮವಾರ ಬಂಧನಕ್ಕೆ ಒಳಗಾದ ಮಲೆಯಾಳಿ ನಟ ನಿಯಾಸ್ ಜೊತೆ ನಂಟಿದೆ. ಈ ವಿಚಾರವನ್ನು ಸ್ವತಃ ನಟನೇ ಸಿಸಿಬಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ಕಲ್ಕಿ ಹೆಸರಿನ ಮಲೆಯಾಳಿ ಸಿನಿಮಾದಲ್ಲಿ ಆತ ನಟಿಸಿದ್ದಾನೆ.

    ನಿಯಾಸ್ ನೈಟ್ ಪಾರ್ಟಿಗೆ ಸಂಜನಾ ಸ್ಪೆಷಲ್ ಗೆಸ್ಟ್ ಅಪಿಯರೆನ್ಸ್ ಆಗಿದ್ದರು. ಈ ಸಂಬಂಧದ ಎಕ್ಸ್ ಕ್ಲ್ಯೂಸಿವ್ ಫೋಟೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಸ್ಪ್ರೆಕ್ಟ್ರಾ -360 ಕಾರ್ಪೋರೇಟ್ ಪಾರ್ಟಿಗಳನ್ನು ಗಳನ್ನು ಸ್ಟಾರ್ ಹೋಟೆಲ್ ಗಳಲ್ಲಿ ನಿಯಾಸ್ ಆಯೋಜನೆ ಮಾಡುತ್ತಿದ್ದ. ಈ ಕಾರ್ಯಕ್ರಮಕ್ಕೆ ಸಂಜನಾ ಸ್ಪೆಷಲ್ ಗೆಸ್ಟ್ ಆಗಿ ಭಾಗವಹಿಸಿದ್ದರು.

    ಇತ್ತೀಚೆಗೆ ಮಾಸ್ಕ್ ಕೂಡ ತಯಾರು ಮಾಡುತ್ತಿದ್ದ ನಿಯಾಸ್ ಗೆ ಫೋಟೋಗಳನ್ನು ಹಾಕಿಕೊಂಡು ಭರ್ಜರಿ ಪ್ರಮೋಷನ್ ಅನ್ನು ಕೂಡ ಸಂಜನಾ ಕೊಡುತ್ತಿದ್ದರು. ಇಂದಿರಾನಗರ, ಮಾರತಹಳ್ಳಿ ಸೇರಿದಂತೆ ಬೆಂಗಳೂರಿನ ಹೈ- ಫೈ ಏರಿಯಾದಲ್ಲಿ ನಿಯಾಸ್ ಪಾರ್ಟಿ ಆರ್ಗನೈಸರ್ ಆಗಿದ್ದನು. ಸ್ಟಾರ್ ಅಟ್ರಾಕ್ಷನ್ ಇಟ್ಟುಕೊಂಡು ಪಾರ್ಟಿ ಆಯೋಜನೆ ಮಾಡುತ್ತಿದ್ದ. ಪಾರ್ಟಿಯಲ್ಲಿ ಸಂಜನಾ ಬಹುತೇಕ ಬಾರಿ ಗೆಸ್ಟ್ ಆಗಿ ಹೋಗಿದ್ದರು.

    ನಟಿ ಸಂಜನಾಗೆ ಡ್ರಗ್ಸ್ ಪೆಡ್ಲರ್ ನಿಯಾಸ್ಅಹಮದ್ ರಾಕಿ ಬ್ರದರ್ ಆಗಿದ್ದಾನಂತೆ. ಈ ಮೂಲ ಡ್ರಗ್ಸ್ ಡೀಲರ್ ಜೊತೆ ನಿಮಗೇಕೆ ಬೇಕಿತ್ತು ಸಹೋದರತ್ವ? ಡ್ರಗ್ಸ್ ಪೆಡ್ಲರ್ ಅಂತ ಗೊತ್ತಿದ್ದೂ ನಿಯಾಸ್ ಜೊತೆ ಒಡನಾಟವೇಕೆ? ನಿಯಾಜ್ ಒಡೆತನದ 360 ಡಿಗ್ರಿ ಫೋಟೊಗ್ರಫಿಯಲ್ಲಿ ಪಾಲು ಹೊಂದಿರೋ ಶಂಕೆ ಸಿಸಿಬಿ ಪೊಲೀಸರಿಗೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಿಯಾಸ್ ಡ್ರಗ್ಸ್ ಪಾರ್ಟಿಗಳಲ್ಲಿ ಸಂಜನಾ ಭಾಗವಹಿಸ್ತಿದ್ದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಈ ಹಿನ್ನೆಲೆಯಲ್ಲಿ ಸಂಜನಾ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.

    ನಿಯಾಸ್ ಅಹಮದ್ ಫ್ಯಾಷನ್ ಇಂಡಿಯನ್ ಲೀಗ್ ಗೆ ಜಡ್ಜ್ ಸಹ ಆಗಿದ್ದ. ಕೊಚ್ಚಿಯಿಂದ ಬೆಂಗಳೂರಿಗೆ ಬಂದು ಪಾರ್ಟಿಗಳಿಗೆ ಡ್ರಗ್ ಸಪ್ಲೈ ಮಾಡುತ್ತಿದ್ದಾನೆ ಎಂಬ ಆರೋಪವಿದೆ. ಈ ಮೂಲಕ ಪಾರ್ಟಿ ಹೆಸರಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿತ್ತು. ಇದೇ ವಿಚಾರವಾಗಿ ನಿಯಾಸ್ ನನ್ನ ಸಿಸಿಬಿ ಬಂಧಿಸಿತ್ತು. ವಿಚಾರಣೆ ವೇಳೆ ಈತ ನಟಿ ಸಂಜನಾ ಹೆಸರನ್ನು ಬಾಯಿಬಿಟ್ಟಿದ್ದಾನೆ.

    360 ಮಾಡೆಲ್ ಮ್ಯಾನೇಜ್ ಮೆಂಟ್ ಮಾಲೀಕ ನಿಯಾಸ್ ಆಗಿದ್ದು, ಪೃಥ್ವಿ ಶೆಟ್ಟಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ಡ್ರಗ್ಸ್ ಕೇಸ್ –  ನಟಿ ರಾಗಿಣಿ ಬೆನ್ನಲ್ಲೇ ಸಂಜನಾ ಅರೆಸ್ಟ್

    ಡ್ರಗ್ಸ್ ಕೇಸ್ – ನಟಿ ರಾಗಿಣಿ ಬೆನ್ನಲ್ಲೇ ಸಂಜನಾ ಅರೆಸ್ಟ್

    ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಬೆನ್ನಲ್ಲೇ ಇದೀಗ ಸಿಸಿಬಿ ಅಧಿಕಾರಿಗಳು ನಟಿ ಸಂಜನಾ ಗಲ್ರಾನಿಯನ್ನು ಬಂಧಿಸಿದ್ದಾರೆ.

    ಸದ್ಯ ಪೊಲೀಸರು ಸಂಜನಾರನ್ನು ಸಿಸಿಬಿ ಕಚೇರಿಯತ್ತ ಕರೆದೊಯ್ಯುತ್ತಿದ್ದಾರೆ. ಆಪ್ತ ರಾಹುಲ್ ಹೇಳಿಕೆ ಆಧರಿಸಿ ಸಿಸಿಬಿ ಅಧಿಕಾರಿಗಳು ನಟಿಯನ್ನು ಬಂಧಿಸಿದ್ದಾರೆ.

    ನಟಿ ಆಪ್ತ ರಾಹುಲ್ ಹೇಳಿಕೆಯಿಂದಾಗಿ ಇಂದು ಬೆಳಗ್ಗೆ ಸಿಸಿಬಿ ಅಧಿಕಾರಿಗಳು ನಟಿ ಸಂಜನಾ ಮನೆ ಮೇಲೆ ದಾಳಿ ಮಾಡಿದ್ದರು. ಸತತ 4 ಗಂಟೆಗಳ ತಲಾಶ್ ಬಳಿಕ ಇದೀಗ ನಟಿಯನ್ನು ಅಧಿಕಾರಿಗಳು ಸಿಸಿಬಿ ಕಚೇರಿಗೆ ಕರೆದುಕೊಂಡು ಹೋಗುತ್ತಿದ್ದಾರೆ.

    ಇಂದು ಬೆಳ್ಳಂಬೆಳಗ್ಗೆ ಇಂದಿರಾನಗರದಲ್ಲಿರುವ ನಟಿ ಸಂಜನಾ ನಿವಾಸದ ಮೇಲೆ ಇನ್ಸ್ ಪೆಕ್ಟರ್ ಪುನೀತ್ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಬಂದ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸಿ, ಸಂಜನಾ ಮೊಬೈಲ್ ಮತ್ತು ಪರ್ಸ್‍ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಸಿಸಿಬಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆಯುತ್ತಿದ್ದಂತೆ ನಟಿ ಸಂಜನಾ ರಂಪಾಟ ಮಾಡಿದ್ದಾರೆ. ದಾಳಿ ಮಾಡಿ ಮೇಡಂ ಸಿಸಿಬಿ ಕಚೇರಿಗೆ ಹೋಗಬೇಕು ಎಂದು ಪೊಲೀಸರು ಹೇಳಿದ್ದಾರೆ. ಆಗ ಸಂಜನಾ, ನಾನ್ಯಾಕೆ ಬರಲಿ, ನೀವು ನನಗೆ ನೋಟಿಸ್ ಕೊಟ್ಟಿಲ್ಲ. ಏಕಾಏಕಿ ದಾಳಿ ಮಾಡಿದ್ದೀರಿ? ನಾನೇನು ಆರೋಪಿನಾ? ನಾನು ಬರುವುದಿಲ್ಲ ಎಂದು ಸಿಸಿಬಿ ಮುಂದೆ ರಂಪಾಟ ಮಾಡಿದ್ದಾರೆ.

    ರಂಪಾಟ ಜಾಸ್ತಿಯಾಗುತ್ತಿದ್ದಂತೆ ಸಿಸಿಬಿ ಅಧಿಕಾರಿಗಳು ಗದರಿಸಿದ್ದಾರೆ. ನೀವು ನಮ್ಮ ವಶದಲ್ಲಿ ಇದ್ದೀರಿ. ಹೀಗಾಗಿ ನಾವು ನೀವು ಹೇಳಿದಂತೆ ಕೇಳುವುದಕ್ಕೆ ಆಗುವುದಿಲ್ಲ. ನಾವು ಹೇಳಿದ್ದನ್ನ ನೀವು ಕೇಳಿ, ಸರ್ಚ್ ವಾರೆಂಟ್ ಸಂದರ್ಭದಲ್ಲಿ ವಿರೋಧ ಮಾಡಿದರೆ ನಿಮಗೆ ಕಷ್ಟವಾಗುತ್ತದೆ ಎಂದು ಸಿಸಿಬಿ ಅಧಿಕಾರಿಗಳು ಏರು ಮಾತಿನಲ್ಲಿ ಹೇಳಿದ ಬಳಿಕ ಸಂಜನಾ ತಣ್ಣಗೆ ಆಗಿದ್ದಾರೆ.

    https://www.youtube.com/watch?v=l_YGo8u7ZHI

  • ಪೃಥ್ವಿ ಶೆಟ್ಟಿ ಹೇಳಿಕೆಯ ಆಧಾರದ ಮೇಲೆ ಸಂಜನಾ ನಿವಾಸದ ಮೇಲೆ ದಾಳಿ?

    ಪೃಥ್ವಿ ಶೆಟ್ಟಿ ಹೇಳಿಕೆಯ ಆಧಾರದ ಮೇಲೆ ಸಂಜನಾ ನಿವಾಸದ ಮೇಲೆ ದಾಳಿ?

    ಬೆಂಗಳೂರು: ಇವೆಂಟ್‌ ಮ್ಯಾನೇಜ್ಮೆಂಟ್‌ ಕಂಪನಿ ನಡೆಸುತ್ತಿರುವ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ನೀಡಿದ ಹೇಳಿಕೆಯ ಆಧಾರದ ಮೇಲೆ ನಟಿ ಸಂಜನಾ ನಿವಾಸದ ಮೇಲೆ ಸಿಸಿಬಿ ದಾಳಿ ನಡೆಸಿದೆ ಎನ್ನಲಾಗಿದೆ.

    ಇಂದಿರಾನಗರದಲ್ಲಿರುವ ನಟಿ ಸಂಜನಾ ನಿವಾಸದ ಮೇಲೆ ಇಂದು ಬೆಳ್ಳಬೆಳಗ್ಗೆ ಇನ್ಸ್‌ಪೆಕ್ಟರ್‌ ಪುನೀತ್‌ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಬಂದ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

    ಕಳೆದ ವಾರ ನಟಿ ರಾಗಿಣಿ ಮನೆ ಮೇಲೆ ದಾಳಿ ನಡೆಸಿ ಬಳಿಕ ಸಿಸಿಬಿ ಬಂಧಿಸಿತ್ತು. ಕಳೆದ ವಾರವೇ ಸಂಜನಾ ಹೆಸರು ಕೇಳಿ ಬಂದಿತ್ತು. ಆದರೆ ಸಿಸಿಬಿ ಎಫ್‌ಐಆರ್‌ನಲ್ಲಿ ಸಂಜನಾ ಹೆಸರು ಉಲ್ಲೇಖವಾಗಿರಲಿಲ್ಲ. ಆದರೆ ಈಗ ಆಪ್ತೆ ಪೃಥ್ವಿ ಶೆಟ್ಟಿ ಮತ್ತು ಆಪ್ತ ರಾಹುಲ್‌ ನೀಡಿದ ಹೇಳಿಕೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

    ಆರೋಪ ಏನು?
    ಡ್ರಗ್ಸ್‌ ಪ್ರಕರಣದಲ್ಲಿ ಸಂಜನಾ ವಿರುದ್ಧ ಕಳೆದ ವಾರ ಯಾವುದೇ ಸಾಕ್ಷ್ಯಗಳು ಸಿಕ್ಕಿರಲಿಲ್ಲ. ಹೀಗಾಗಿ ಸೂಕ್ತ ಸಾಕ್ಷ್ಯಕ್ಕಾಗಿ ಕಾಯುತ್ತಿದ್ದರು. ಈ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ಹಲವು ಮಾಹಿತಿಗಳನ್ನು ತಿಳಿಸಿದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.

    ಬೆಂಗಳೂರಿನಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿದ್ದ ಪೃಥ್ವಿ ಶೆಟ್ಟಿ ಕಂಪನಿಯಲ್ಲಿ ಸಂಜನಾ ಸಹ ಪಾಲುದಾರೆ ಎಂಬ ಮಾಹಿತಿ ಸಿಕ್ಕಿದೆ. ಇಬ್ಬರ ನಡುವೆ ಲಕ್ಷಾಂತರ ರೂಪಾಯಿ ವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ದಾಖಲೆಗಳನ್ನು ಕೆದಕಿದಾಗ ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಪಾರ್ಟಿಗಳನ್ನು ಆಯೋಜನೆ ಮಾಡಿದ ಬಗ್ಗೆ ಮಾಹಿತಿ ಸಿಕ್ಕಿದೆ.

    ಇವರಿಬ್ಬರು ಬರೀ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದರೇ ಅಥವಾ ಬೇರೆ ಯಾವೆಲ್ಲಾ ವ್ಯವಹಾರಗಳನ್ನು ನಡೆಸುತ್ತಿದ್ದರು ಎಂಬುದರ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದೆ. ಪಾರ್ಟಿಗಳಲ್ಲಿ ಏನು ಬಳಕೆ ಆಗುತ್ತಿತ್ತು? ಯಾರೆಲ್ಲ ಬರುತ್ತಿದ್ದರು ಎಂಬುದರ ಬಗ್ಗೆ ಪೃಥ್ವಿ ಶೆಟ್ಟಿ ತಿಳಿಸಿದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ.

    ಆಪ್ತನ ಮೇಲೆ ಎಫ್‌ಐಆರ್‌ :
    ಸಿಸಿಬಿಯ ನಾರ್ಕೊಟಿಕ್ಸ್ ಎಸಿಪಿ ಗೌತಮ್ ಸೆ.4 ರಂದು ನೀಡಿದ ಸ್ವಯಂಪ್ರೇರಿತ ದೂರಿನ ಆಧಾರದ ಮೇಲೆ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಬಂಧಿತ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದ ಬಗ್ಗೆ ಸಾಕ್ಷಿ ಹಾಗೂ ಪುರಾವೆಗಳು ಸಿಕ್ಕಿರುವ ಹಿನ್ನೆಯಲ್ಲಿ ಗೌತಮ್‌ ಅವರು ದೂರು ನೀಡಿದ್ದರು. ವಾಟ್ಸಾಪ್ ಮೆಸೇಜ್‍ಗಳು ಹಾಗೂ ಪೆಡ್ಲರ್ ಗಳ ನೀಡಿರುವ ಮಾಹಿತಿ ಅನ್ವಯ ನಟಿ ರಾಗಿಣಿ ಅವರ ಕೈವಾಡದ ಬಗ್ಗೆ ಸಾಕ್ಷಿ ಲಭ್ಯವಾಗಿದ್ದು, ಡ್ರಗ್ ಡೀಲರ್ ಗಳ ಜೊತೆ ಒಡನಾಟವನ್ನು ಹೊಂದಿದ್ದಾರೆ. ಅನೇಕ ಬಾರಿ ಡ್ರಗ್ ಡೀಲ್ ಮಾಡಿರುವ ಬಗ್ಗೆ ಮಾಹಿತಿ ಖಚಿತವಾದ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

    ಈ ಎಫ್‌ಐಆರ್‌ನಲ್ಲಿ ಸಂಜನಾ ಆಪ್ತ ರಾಹುಲ್‌ ಹೆಸರು ಸಹ ಉಲ್ಲೇಖವಾಗಿತ್ತು. ಒಟ್ಟು 12 ಮಂದಿ ಆರೋಪಿಗಳ ಪೈಕಿ ರಾಹುಲ್‌ 11ನೇ ಆರೋಪಿಯಾಗಿದ್ದಾನೆ. ವಿಚಾರಣೆಯ ವೇಳೆ ಈತ ಸಂಜನಾ ಪಾಲ್ಗೊಳ್ಳುತ್ತಿದ್ದ ಹೈ ಎಂಡ್‌ ಪಾರ್ಟಿ ಬಗ್ಗೆ ಮಾಹಿತಿ ನೀಡಿದ್ದಾನೆ. ಮಹತ್ವದ ಸ್ಯಾಕ್ಷ್ಯಗಳು ಲಭ್ಯವಾದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಸಂಜನಾ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.

  • ಡ್ರಗ್ಸ್‌ ಕೇಸ್‌ – ನಟಿ ಸಂಜನಾ ಮನೆ ಮೇಲೆ ಸಿಸಿಬಿ ದಾಳಿ

    ಡ್ರಗ್ಸ್‌ ಕೇಸ್‌ – ನಟಿ ಸಂಜನಾ ಮನೆ ಮೇಲೆ ಸಿಸಿಬಿ ದಾಳಿ

    ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಮನೆ ಮೇಲೆ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ದಾಳಿ ಮಾಡಿದ್ದಾರೆ.

    ಇಂದಿರಾನಗರದಲ್ಲಿರುವ ನಟಿ ಸಂಜನಾ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಇನ್ಸ್‌ಪೆಕ್ಟರ್‌ ಪುನೀತ್‌ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಬಂದ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

    ಕಳೆದ ವಾರ ನಟಿ ರಾಗಿಣಿ ಮನೆ ಮೇಲೆ ದಾಳಿ ನಡೆಸಿ ಬಳಿಕ ಸಿಸಿಬಿ ಬಂಧಿಸಿತ್ತು. ಕಳೆದ ವಾರವೇ ಸಂಜನಾ ಹೆಸರು ಕೇಳಿ ಬಂದಿತ್ತು. ಆದರೆ ಸಿಸಿಬಿ ಎಫ್‌ಐಆರ್‌ನಲ್ಲಿ ಸಂಜನಾ ಹೆಸರು ಉಲ್ಲೇಖವಾಗಿರಲಿಲ್ಲ. ಆದರೆ ಈಗ ಆಪ್ತೆ ಪೃಥ್ವಿ ಶೆಟ್ಟಿ ನೀಡಿದ ಹೇಳಿಕೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

    ಸಿನಿ ವಿತರಕ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಅವರು ಡ್ರಗ್ಸ್‌ ಪ್ರಕರಣದ ಲ್ಲಿ ಸಂಜನಾ ಸಹ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು. ಈ ವಿಚಾರದ ಬಗ್ಗೆ ಸಂಜನಾ ಮತ್ತ ಸಂಬರಗಿ ನಡುವೆ ಆರೋಪ ಪ್ರತ್ಯಾರೋಪ ನಡೆಯುತ್ತಿತ್ತು.

  • ಪಾಶ್‌ ಶಾಲೆಗಳಲ್ಲಿ ಐಸ್‌ಕ್ರೀಂ, ಹಣ್ಣುಗಳಲ್ಲಿ ಡ್ರಗ್ಸ್  – ಸುರೇಶ್‌ ಕುಮಾರ್‌

    ಪಾಶ್‌ ಶಾಲೆಗಳಲ್ಲಿ ಐಸ್‌ಕ್ರೀಂ, ಹಣ್ಣುಗಳಲ್ಲಿ ಡ್ರಗ್ಸ್ – ಸುರೇಶ್‌ ಕುಮಾರ್‌

    ಚಾಮರಾಜನಗರ: ಸ್ಯಾಂಡಲ್‌ವುಡ್‌ ಡ್ರಗ್ಸ್‌ ತನಿಖೆಯ ನಡೆಸುತ್ತಿರುವ ಹೊತ್ತಿನಲ್ಲಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಪಾಶ್‌ ಶಾಲೆಗಳಲ್ಲಿ ವಿದ್ಯಾರ್ಥಿಗಳು ಡ್ರಗ್ಸ್‌ ಸೇವಿಸುತ್ತಿದ್ದಾರೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಸುರೇಶ್‌ ಕುಮಾರ್‌ ಇಂದು ಮಾಧ್ಯಮಗಳ ಜೊತೆ ಮಾತನಾಡಿ, ಶ್ರೀಮಂತ ಮಕ್ಕಳು ಓದುವ ಪಾಶ್‌ ಶಾಲೆಗಳಲ್ಲಿ ತಿನ್ನುವ ಐಸ್‍ಕ್ರೀಮ್‍, ಹಣ್ಣುಗಳಿಗೆ ಡ್ರಗ್ಸ್ ಸವರಿ ಕೊಡುವ ದೊಡ್ಡ ಬಗ್ಗೆ ದೊಡ್ಡ ಗುಮಾನಿ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

     

    ಯುವ ಜನತೆಯನ್ನ ಹಾಳು ಮಾಡುವ ಇಂತಹವರನ್ನ ನಾವು ಹಿಡಿದು ಜೈಲಿಗೆ ಕಳುಹಿಸುತ್ತೇವೆ. ಡ್ರಗ್ಸ್ ವಿಚಾರವಾಗಿ ರಾಜ್ಯ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ. ಈ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

    ಡ್ರಗ್ಸ್‌ ಮೂಲಕ ಯುವ ಜನಾಂಗವನ್ನ ದುರ್ಬಲ ಮಾಡುವ ಪ್ರಯತ್ನ ನಡೆಯುತ್ತಿದೆ. ಇದನ್ನ ಬೇರು ಸಮೇತವಾಗಿ ಕಿತ್ತು ಹಾಕಬೇಕು. ಯುವ ಜನತೆ ಡ್ರಗ್ಸ್ ಬಲಿಯಾಗುವುದನ್ನ ಸಮಾಜ ಸಹಿಸುವುದಿಲ್ಲ. ಮೂರು ವರ್ಷದ ಹಿಂದೆಯೇ ಈ ಬಗ್ಗೆ ಬಿಜೆಪಿ ವಿಧಾನಸಭೆಯಲ್ಲಿ ಧ್ವನಿ ಎತ್ತಿದೆ ಎಂದು ಹೇಳಿದರು.

  • ಅಭಿನಂದನೆಗಳು ಭಾರತ, ನನ್ನ ಮಗನನ್ನ ಬಂಧಿಸಿದ್ದೀರಿ – ರಿಯಾ ತಂದೆಯ ನೋವಿನ ಮಾತು

    ಅಭಿನಂದನೆಗಳು ಭಾರತ, ನನ್ನ ಮಗನನ್ನ ಬಂಧಿಸಿದ್ದೀರಿ – ರಿಯಾ ತಂದೆಯ ನೋವಿನ ಮಾತು

    – ಮುಂದೆ ನನ್ನ ಮಗಳನ್ನ ಬಂಧಿಸುತ್ತೀರಿ

    ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ಸಹೋದರನ್ನು ಎನ್‍ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಇದೀಗ ರಿಯಾ ತಂದೆ ಇಂದ್ರಜಿತ್ ಚಕ್ರವರ್ತಿ, ಅಭಿನಂದನೆಗಳು ಭಾರತ, ನೀವು ನನ್ನ ಮಗನನ್ನು ಬಂಧಿಸಿದ್ದೀರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಅಕ್ಕ ರಿಯಾಗಾಗಿ ಡ್ರಗ್ಸ್ ಖರೀದಿಸುತ್ತಿದ್ದೆ: ಎನ್‍ಸಿಬಿ ಮುಂದೆ ಶೌವಿಕ್ ಹೇಳಿಕೆ

    “ಅಭಿನಂದನೆಗಳು ಭಾರತ, ನೀವು ನನ್ನ ಮಗನನ್ನು ಬಂಧಿಸಿದ್ದೀರಿ, ಮುಂದೆ ನನ್ನ ಮಗಳನ್ನು ಬಂಧಿಸುತ್ತೀರಿ ಎಂಬುದು ನನಗೆ ಖಾತ್ರಿಯಿದೆ. ಅದರ ನಂತರ ಯಾರು ಎಂದು ನನಗೆ ತಿಳಿದಿಲ್ಲ. ನೀವು ಮಧ್ಯಮ ವರ್ಗದ ಕುಟುಂಬವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿದ್ದೀರಿ. ಆದರೆ ನ್ಯಾಯಕ್ಕಾಗಿ ಎಲ್ಲವೂ ಸಮರ್ಥನೆಯಾಗಿದೆ. ಜೈ ಹಿಂದ್” ಎಂದು ಹೇಳುವ ಮೂಲಕ ಮಗನ ಬಂಧನವನ್ನು ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಆಗಿರುವ ರಿಯಾ ತಂದೆ ಟೀಕಿಸಿದ್ದಾರೆ. ಇದನ್ನೂ ಓದಿ: ಸುಶಾಂತ್ ಕೇಸ್- ರಿಯಾ ಸಹೋದರ ಶೋವಿಕ್ ಚಕ್ರವರ್ತಿ ಅರೆಸ್ಟ್

    ರಿಯಾ ಸಹೋದರ ಶೋವಿಕ್ ಚಕ್ರವರ್ತಿಯನ್ನು ಎನ್‍ಸಿಬಿ ಶುಕ್ರವಾರ ಬಂಧಿಸಿದೆ. ಶೋವಿಕ್ ಜೊತೆಗೆ ಸುಶಾಂತ್ ಸಿಂಗ್ ಅವರ ಹೌಸ್ ಮ್ಯಾನೇಜರ್ ಸಾಮ್ಯುಯೆಲ್ ಮಿರಾಂಡಾನನ್ನು ಬಂಧಿಸಲಾಗಿದೆ. ಇಬ್ಬರ ವಿರುದ್ಧ ಮಾದಕ ವಸ್ತು ವಿರೋಧಿ ಕಾನೂನಿನ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಬ್ಬರನ್ನೂ ಬುಧವಾರದವರೆಗೆ ಎನ್‍ಸಿಬಿ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ತೆಗೆದುಕೊಂಡಿದೆ.

    ಶೋವಿಕ್ ಚಕ್ರವರ್ತಿ ಬಳಿ ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ. ಎನ್‍ಸಿಬಿ ಅಬ್ಬಾಸ್ ಲಖಾನಿ ಮತ್ತು ಕರಣ್ ಅರೋರಾ ಎಂಬವರಿಂದ 59 ಗ್ರಾಂ ಗಾಂಜಾವನ್ನು ಪತ್ತೆಹಚ್ಚಿದೆ. ಅಲ್ಲದೇ ಸುಶಾಂತ್ ಸಿಂಗ್‍ಗೆ ಹತ್ತಿರ ಇರುವವರೊಂದಿಗೆ ಅವರು ಹೊಂದಿದ್ದ ಸಂಪರ್ಕದ ಬಗ್ಗೆ ತಿಳಿದುಬಂದಿದೆ. ಹೀಗಾಗಿ ಎನ್‍ಸಿಬಿ ತಮ್ಮ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡುತ್ತಿದೆ.

  • ಫಿಲ್ಮ್‌ ಚೇಂಬರ್‌ ಗಬ್ಬೆದ್ದು ನಾರುತ್ತಿದೆ ಎಂದಿದ್ದ ಸಂಬರಗಿ ವಿರುದ್ಧ ದೂರು ದಾಖಲು

    ಫಿಲ್ಮ್‌ ಚೇಂಬರ್‌ ಗಬ್ಬೆದ್ದು ನಾರುತ್ತಿದೆ ಎಂದಿದ್ದ ಸಂಬರಗಿ ವಿರುದ್ಧ ದೂರು ದಾಖಲು

    – ನಮ್ಮ ವಿರುದ್ಧ ಆಧಾರ ರಹಿತ ಆರೋಪ
    – ನಾವು ಯಾವುದೇ ಅಕ್ರಮ ಹಣಕಾಸು ವ್ಯವಹಾರ ನಡೆಸಿಲ್ಲ

    ಬೆಂಗಳೂರು: ಸಾಮಾಜಿಕ ಕಾರ್ಯಕರ್ತ, ಚಿತ್ರ ವಿತರಕ ಪ್ರಶಾಂತ್‌ ಸಂಬರಗಿ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ದೂರು ನೀಡಿದೆ.

    ದೂರು ನೀಡಿದ ನಂತರ ಮಾತನಾಡಿದ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ನಮ್ಮ ವಿರುದ್ಧ ಸಂಬರಗಿ ಸುಳ್ಳು ಆರೋಪ ಮಾಡಿದ್ದಾರೆ. ಡ್ರಗ್ ಕಿಂಗ್ ಪಿನ್ ರಾಹುಲ್ ಹಾಗೂ ಯಾವುದೋ ಹುಡುಗಿ ಜೊತೆ ಸಂಬರಗಿ ಇರುವ ಫೋಟೋ ಪ್ರಕಟವಾಗಿದೆ. ಹಾಗಾದ್ರೆ ಸಂಬರಗಿ ಯಾರು? ರಾಹುಲ್‌ಗೂ ಇವರಿಗೂ ಏನೂ ಸಂಬಂಧ ಇದರ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿ ದೂರು ನೀಡಿದ್ದೇವೆ ಎಂದು ತಿಳಿಸಿದರು.

     

    ದೂರಿನಲ್ಲಿ ಏನಿದೆ?
    ವಾಣಿಜ್ಯ ಮಂಡಳಿ ಆರಂಭಗೊಂಡು ಇಂದಿನವರೆಗೆ ಯಾವುದೇ ರೀತಿಯ ಅಕ್ರಮ ಹಣಕಾಸು ವ್ಯವಹಾರ ನಡೆಸಿಲ್ಲ. ಆದರೆ ಪ್ರಶಾಂತ್‌ ಸಂಬರಗಿ ವಾಣಿಜ್ಯ ಮಂಡಳಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

    ವಾಣಿಜ್ಯ ಮಂಡಳಿ ಸದಸ್ಯರಲ್ಲ ಪ್ರಶಾಂತ್‌ ಸಂಬರಗಿ ಅವರು ಸೆ.3ರಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ನಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯ ವಿಡಿಯೋವನ್ನು ಸರಿ ಸುಮಾರು 1 ಕೋಟಿಗೂ ಅಧಿಕ ವೀಕ್ಷಕರು ವೀಕ್ಷಿಸಿದ್ದು, ಹೇಳಿಕೆಯಿಂದ ವಾಣಿಜ್ಯ ಮಂಡಳಿಗೆ ಧಕ್ಕೆ ತಂದಿದ್ದಾರೆ. ಈ ಹೇಳಿಕೆ ಕಾನೂನುಬಾಹಿರವಾಗಿದ್ದು ಆಧಾರವಿಲ್ಲದ ಆರೋಪ ಮಾಡಿ ಸಂಸ್ಥೆಗೆ ಕಪ್ಪು ಚುಕ್ಕೆಯನ್ನು ತರಲು ಯತ್ನಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಂಡಳಿ ಮನವಿ ಮಾಡಿಕೊಂಡಿದೆ.

    ಸಂಬರಗಿ ಹೇಳಿದ್ದು ಏನು?
    ಬಾಹುಬಲಿ ಚಿತ್ರಕ್ಕೆ ಸಾ.ರಾಗೋವಿಂದು ರೋಲ್ ಕಾಲ್ ಪಡೆದಿದ್ದಾರೆ. ಹೀಗಾಗಿ ಬಾಹುಬಲಿ ಭಾಗ-1 ಮತ್ತು ಬಾಹುಬಲಿ ಭಾಗ 2 ಚಿತ್ರದಲ್ಲಿ ಗೋವಿಂದು ಅವರು ವಿಭಿನ್ನ ನಿಲುವು ಹೊಂದಿದ್ದರು. ರೋಲ್‌ಕಾಲ್ ಪಡೆದ ಬಗ್ಗೆ ಪ್ರಸ್ತಾಪ ಮಾಡಿದ್ದರಿಂದ ಸಾ.ರಾ ಗೋವಿಂದ್ ಮತ್ತು ಅವರ ಪಡೆದ ತಮ್ಮ ವಿರುದ್ದ ತಿರುಗಿ ಬಿದ್ದಿದೆ. ಈ ಬಗ್ಗೆ ಅವರು ಉತ್ತರ ನೀಡಲಿ. ವಾಣಿಜ್ಯ ಮಂಡಳಿ ಹಾಗೂ ಚಿತ್ರರಂಗ ಗಬ್ಬೆದ್ದು ನಾರುತ್ತಿದೆ ಮೊದಲು ಅದನ್ನು ಸರಿಪಡಿಸಬೇಕು. ಇದರ ಬಗ್ಗೆ ನಾನು ಪ್ರಶ್ನೆ ಮಾಡಿದರೆ ನನ್ನನ್ನೇ ಯಾರು ಎಂದು ಕೇಳುತ್ತಾರೆ ಎಂದಿದ್ದರು.

    ಇಂಡಸ್ಟ್ರಿಯಲ್ಲಿ ವಾಸನೆ ಬರುತ್ತಿದೆ. ಇಂತಹ ಸಂದರ್ಭದಲ್ಲಿ ನಾಯಕತ್ವ ವಹಿಸಿಕೊಳ್ಳದಿದ್ದಲ್ಲಿ ಮಂಡಳಿ ಇದ್ದು ಪ್ರಯೋಜನವೇನು? ವಾಣಿಜ್ಯ ಮಂಡಳಿ ಕಚೇರಿಯಲ್ಲಿ 15 ಲಕ್ಷ ರೂ. ಬೆಲೆಯ ಶೌಚಾಲಯ ಕಟ್ಟಿಸಿದ್ದು, ಅದರ ಆಡಿಟ್ ಆಗಿಲ್ಲ. ಇಂತಹ ಹಲವು ಭ್ರಷ್ಟಾಚಾರಗಳು ಬಯಲಿಗೆ ಬರಬೇಕು. ವಾಣಿಜ್ಯ ಮಂಡಳಿಯಲ್ಲಿ ಉನ್ನತ ಸ್ಥಾನಗಳಲ್ಲಿ ಬೇರೆಯವರಿಗೆ ಅವಕಾಶ ಕೊಡದೇ 10 ವರ್ಷದ ಚುನಾವಣೆಯಲ್ಲಿ ಪದೇ ಪದೆ ಅವರವರೇ ನೇಮಕಗೊಳ್ಳುತ್ತಿದ್ದಾರೆ. ಈ ಕುರಿತು ಸ್ವತಃ ಮಂಡಳಿಯ ಸದಸ್ಯ ಕೃಷ್ಣೇ ಗೌಡ ಧ್ವನಿಯೆತ್ತಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಸರ್ಕಾರ ಚಲನಚಿತ್ರ ಕಾರ್ಮಿಕರಿಗೆ ನೀಡಿದ ಕಿಟ್‌ ಫಂಡ್‌ ಅನ್ನು ವಾಣಿಜ್ಯ ಮಂಡಳಿ ತಿಂದು ತೇಗಿದೆ. ನಾನು ಸದಸ್ಯನಾಗದ ಕಾರಣ ಇಲ್ಲಿನ ಹುಳುಕುಗಳ ಧ್ವನಿ ಎತ್ತಲು ಸಾಧ್ಯವಿಲ್ಲ. ಫುಡ್‌ ಕಿಟ್‌ ಫಂಡ್‌ ಅನ್ನು ಪದಾಧಿಕಾರಿಗಳೇ ಹಂಚಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.