Tag: drugs

  • ಮಾಲ್ ಇದೆಯಾ? ಡ್ರಗ್ಸ್ ಜಾಲದಲ್ಲಿ ಬಿಟೌನ್ ಪದ್ಮಾವತಿ ದೀಪಿಕಾ

    ಮಾಲ್ ಇದೆಯಾ? ಡ್ರಗ್ಸ್ ಜಾಲದಲ್ಲಿ ಬಿಟೌನ್ ಪದ್ಮಾವತಿ ದೀಪಿಕಾ

    -ದೀಪಿಕಾ ವಾಟ್ಸಪ್ ಚಾಟ್ ಔಟ್
    -ಈ ವಾರ ಮಸ್ತಾನಿಗೆ ಎನ್‍ಸಿಬಿ ನೋಟಿಸ್?

    ಮುಂಬೈ: ಡ್ರಗ್ಸ್ ನಶೆಯಲ್ಲಿ ಬಾಲಿವುಡ್ ಬೆಡಗಿ, ದೀಪಿಕಾ ಪಡುಕೋಣೆ ಹೆಸರು ಕೇಳಿ ಬಂದಿದ್ದು, ಈ ವಾರ ಗುಳಿಕೆನ್ನೆ ಚೆಲುವೆಗೆ ಎನ್‍ಸಿಬಿ ಸಮನ್ಸ್ ನೀಡುವ ಸಾಧ್ಯತೆಗಳಿವೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ದೀಪಿಕಾ ಡ್ರಗ್ಸ್ ಖರೀದಿಗಾಗಿ ನಡೆಸಿದ್ದಾರೆ ಎನ್ನಲಾದ ವಾಟ್ಸಪ್ ಸಂಭಾಷಣೆಯ ಸ್ಕ್ರೀನ್‍ಶಾಟ್ ಗಳು ರಿವೀಲ್ ಆಗಿವೆ. ಇದನ್ನೂ ಓದಿ: ಡ್ರಗ್ಸ್‌ ಕೇಸ್‌- ಐಎಸ್‌ಡಿಯಿಂದ ಲೂಸ್‌ ಮಾದ ಯೋಗಿ, ಅಯ್ಯಪ್ಪ ವಿಚಾರಣೆ

    ಜಯ್ ಸಾಹಾ ಮತ್ತು ಖಾಸಗಿ ಕಂಪನಿಯ ಮ್ಯಾನೇಜರ್ ಕರೀಷ್ಮಾ ಎಂಬವರ ಜೊತೆಗಿನ ವಾಟ್ಸಪ್ ಚಾಟ್ ನಶೆಯ ಘಾಟಿನ ಸುಳಿವು ನೀಡಿದೆ. ವಾಟ್ಸಪ್ ಚಾಟ್ ನಲ್ಲಿ ಡಿ ಮತ್ತು ಕೆ ಎಂಬ ಕೋಡ್‍ವರ್ಡ್ ಗಳನ್ನ ಬಳಕೆ ಮಾಡಲಾಗಿದೆ. ಡಿ ಅಂದ್ರೆ ದೀಪಿಕಾ ಪಡುಕೋಣೆ ಮತ್ತು ಕೆ ಅಂದ್ರೆ ಕರೀಷ್ಮಾ ಎಂದು ಖಾಸಗಿ ವಾಹಿನಿ ತಿಳಿಸಿದೆ. ಈ ವಾಟ್ಸಪ್ ಚಾಟ್ ನಲ್ಲಿ ಅಮಿತ್ ಮತ್ತು ಶಾಲ್ ಎಂಬ ಹೆಸರುಗಳು ರಿವೀಲ್ ಆಗಿದ್ದು, ಇಬ್ಬರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ: ಕಲಿಯಬಾರದ ಚಟವನ್ನ ಕಲಿತು, ಮಾಡಬಾರದ ಅನಿಷ್ಟಗಳನ್ನ ಮಾಡಿದ್ದೇನೆ: ಯೋಗಿ

    ವಾಟ್ಸಪ್ ಸಂಭಾಷಣೆ:
    ದೀಪಿಕಾ: ನಿಮ್ಮ ಬಳಿ ಮಾಲ್ ಇದೆಯಾ?
    ಕರೀಷ್ಮಾ: ಇದೆ, ಆದ್ರೆ ಮನೆಯಲ್ಲಿದೆ. ಆದ್ರೆ ನಾನು ಬಾಂದ್ರಾದಲ್ಲಿದ್ದೇನೆ.
    ದೀಪಿಕಾ: ಯೆಸ್, ಪ್ಲೀಸ್
    ಕರೀಷ್ಮಾ: ಅಮಿತ್ ಬಳಿ ಇದೆ. ಅವನು ಅದನ್ನು ತೆಗೆದುಕೊಂಡು ಹೋಗುತ್ತಿದ್ದಾನೆ.
    ದೀಪಿಕಾ: ಹ್ಯಾಶ್ ತಾನೇ? ವೀಡ್ ಅಲ್ಲವಲ್ಲಾ?
    ಕರೀಷ್ಮಾ: ಹ್ಯಾಶ್ ಅಲ್ಲ, ಗಾಂಜಾ ಇದೆ. ಬೇಕಾದ್ರೆ ಅಮಿತ್‍ಗೆ ಹೇಳುತ್ತೇನೆ.

    ಹೀಗೆ ಈ ಸಂಭಾಷಣೆ ಮುಂದುವರಿಯುತ್ತದೆ. ದೀಪಿಕಾ ತಮಗೆ ಮಾಲ್ ತಲುಪಿಸುವ ಸಮಯದ ಬಗ್ಗೆಯೂ ಹೇಳುತ್ತಾರೆ. ಈ ಚಾಟ್ ವೇಳೆ ಶಾಲ್ ಎಂಬಾತನ ಹೆಸರು ಬರುತ್ತದೆ. ಚಾಟ್ ರಿವೀಲ್ ಬಳಿಕ ದೀಪಿಕಾ ಪಡುಕೋಣೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೇ ರೀತಿ ನಟಿಯರಾದ ಶ್ರದ್ಧಾ ಕಪೂರ್ ಮತ್ತು ಸಾರಾ ಅಲಿ ಖಾನ್ ನಡೆಸಿರುವ ವಾಟ್ಸಪ್ ಸಂಭಾಷಣೆಯ ಮಾಹಿತಿ ರಿವೀಲ್ ಆಗಿದೆ. ಇದನ್ನೂ ಓದಿ: ಫ್ಯಾನ್, ಬೆಡ್ ಇಲ್ಲ- ಇಂದ್ರಾಣಿ ಪಕ್ಕದಲ್ಲೇ ರಿಯಾ ಜೈಲುವಾಸ

    ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಿಯಾ ಚಕ್ರವರ್ತಿ ಹೇಳಿಕೆಯನ್ನಾಧರಿಸಿ ಎನ್‍ಸಿಬಿ ಸಮನ್ಸ್ ನೀಡಲಿದೆ ಎನ್ನಲಾಗಿದೆ. ವಿಚಾರಣೆ ವೇಳೆ ರಿಯಾ ಚಕ್ರವರ್ತಿ ನಾಲ್ವರ ಹೆಸರು ಹೇಳಿದ್ದಾರೆ ಎಂದು ಹೇಳಲಾಗಿದೆ. ರಿಯಾ, ಸಾರಾ ಮತ್ತು ರಕುಲ್ ಒಂದೇ ಜಿಮ್ ಗೆ ತೆರಳುತ್ತಿದ್ದರು. ಹೀಗಾಗಿ ಮೂವರ ಮಧ್ಯೆ ಸ್ನೇಹ ಗಾಢವಾಗಿತ್ತು. ತನಿಖೆ ವೇಳೆ ಎನ್‍ಸಿಬಿಗೆ ಮಹತ್ವದ ಸಾಕ್ಷ್ಯ ಲಭ್ಯವಾಗಿದ್ದರಿಂದ ಸಾರಾ, ರಕುಲ್ ಜೊತೆಗೆ ಶ್ರದ್ಧಾ ಕಪೂರ್ ಅವರಿಗೂ ಸಮನ್ಸ್ ಹೋಗುವ ಸಾಧ್ಯತೆಗಳಿವೆ. ಡ್ರಗ್ ಪೆಡ್ಲರ್ ರಾಹಿಲ್ ವಿಶ್ರಾಮ್ ಎಂಬಾತನ ಬಂಧನವಾಗಿದ್ದು, ಈತನಿಂದಲೂ ಸಾಕಷ್ಟು ಮಾಹಿತಿ ಲಭ್ಯವಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಈ ವಾರ ಸಾರಾ, ಶ್ರದ್ಧಾ, ರಕುಲ್‍ಗೆ ಎನ್‍ಸಿಬಿ ಸಮನ್ಸ್?

    ಇಂದು ಜಯ್ ಸಾಹಾ, ಕರೀಷ್ಮಾ ಮತ್ತು ಸುಶಾಂತ್ ಮ್ಯಾನೇಜರ್ ಶೃತಿ ಮೋದಿಯನ್ನ ಎನ್‍ಸಿಬಿ ವಿಚಾರಣೆ ನಡೆಸಲಿದೆ. ಈ ಮೂವರ ವಿಚಾರಣೆಯಲ್ಲಿ ಮತ್ತಷ್ಟು ಹೆಸರುಗಳು ಹೊರ ಬರುವ ಸಾಧ್ಯತೆಗಳಿವೆ. ಇನ್ನು ಬಂಧನದಲ್ಲಿರುವ ರಿಯಾ ಚಕ್ರವರ್ತಿ ವಿಚಾರಣೆ ವೇಳೆ ಡ್ರಗ್ಸ್ ಸೇವನೆ ಮಾಡುವ 25 ಸೆಲೆಬ್ರಿಟಿಗಳ ಹೆಸರು ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮಾಧ್ಯಮಗಳಿಂದ ತೇಜೋವಧೆ – ದೆಹಲಿ ಹೈಕೋರ್ಟ್‌ ಮೊರೆ ಹೋದ ರಾಕುಲ್‌

    ರಾಷ್ಟ್ರೀಯ ಪ್ರಶಸ್ತಿ ವಿಜೇತ ಮಧು ಮಾಂಟೇನಾ ವರ್ಮಾ ಹೆಸರು ಡ್ರಗ್ಸ್ ನಶೆಯಲ್ಲಿ ಕೇಳಿ ಬಂದಿದೆ. ಇನ್ನು ಕರೀಷ್ಮಾ ಕೆಲಸ ಮಾಡುತ್ತಿದ್ದ ಕಂಪನಿಯ ನಿರ್ದೇಶಕ ಧೃವ ಎಂಬವರಿಗೆ ಎನ್‍ಸಿಬಿ ಸಮನ್ಸ್ ನೀಡಿದೆ. ಇದನ್ನೂ ಓದಿಸಾರಾ, ರಾಕುಲ್ ಡ್ರಗ್ ಸೇವಿಸ್ತಿದ್ದಾರೆ – ಬಾಲಿವುಡ್‍ನಲ್ಲಿ ಬಿರುಗಾಳಿ ಎಬ್ಬಿಸಿದ ರಿಯಾ

  • ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ನಟನ ಬಂಧನ

    ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ನಟನ ಬಂಧನ

    – ಮಂಗಳೂರು ಸಿಸಿಬಿ ಪೊಲೀಸರ ಬಲೆಗೆ ನಟ

    ಮಂಗಳೂರು: ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ನಟ ಕಿಶೋರ್ ಶೆಟ್ಟಿ ಮಂಗಳೂರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

    ಕಿಶೋರ್ ಶೆಟ್ಟಿ ಓರ್ವ ಡ್ಯಾನ್ಸರ್ ಆಗಿದ್ದು, ಖಾಸಗಿ ವಾಹಿನಿಯ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದರು. ಬಾಲಿವುಡ್ ಎಬಿಸಿಡಿ ಸಿನಿಮಾದಲ್ಲಿ ಕಿಶೋರ್ ಶೆಟ್ಟಿ ಅಭಿನಯಿಸಿದ್ದಾರೆ. ಬಂಧನದ ಬಗ್ಗೆ ಮಂಗಳೂರು ಪೊಲೀಸ್ ಕಮೀಷನರ್ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆಗಳಿವೆ. ಸುದ್ದಿಗೋಷ್ಠಿಯಲ್ಲಿ ನಟನ ಬಂಧನದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವ ಸಾಧ್ಯತೆ ಇದೆ.

    ಡ್ರಗ್ಸ್ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿ ಸೇರಿದಂತೆ 20ಕ್ಕೂ ಹೆಚ್ಚು ಆರೋಪಿಗಳು ಜೈಲೂಟ ಸವಿಯುತ್ತಿದ್ದಾರೆ. ಇತ್ತ ಚಂದನವನದಲ್ಲಿ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇತ್ತ ಡ್ರಗ್ಸ್ ಮಾಫಿಯಾ ಬಗ್ಗೆ ಚಂದನವನದ ಸ್ಟಾರ್ ದಂಪತಿ ದಿಗಂತ್ ಮತ್ತು ಐಂದ್ರಿತಾರನ್ನ ಸಿಸಿಬಿ ವಿಚಾರಣೆ ನಡೆಸಿದೆ. ಇಬ್ಬರ ಮೊಬೈಲ್ ಗಳನ್ನು ವಶಕ್ಕೆ ಪಡೆದಿರುವ ಸಿಸಿಬಿ, ರಿಟ್ರೀವ್ ಮಾಹಿತಿ ಬಂದ ಬಳಿಕ ಜೋಡಿಯನ್ನ ಮತ್ತೊಮ್ಮೆ ವಿಚಾರಣೆ ನಡೆಸುವ ಸಾಧ್ಯತೆಗಳಿವೆ.

    ಇಂದು ಖ್ಯಾತ ನಿರೂಪಕರಾದ ಅಕುಲ್ ಬಾಲಾಜಿ, ಸಂತೋಷ್ ಮತ್ತು ಮಾಜಿ ಶಾಸಕರ ಪುತ್ರ ಯುವರಾಜ್ ಸಿಸಿಬಿ ವಿಚಾರಣೆಗೆ ಹಾಜರಾಗಲಿದ್ದಾರೆ. ನಿನ್ನೆ ಸಿಸಿಬಿ ಮೂವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಇಂದು ಮೂವರು ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸುತ್ತೇವೆ ಎಂದು ಹೇಳಿದ್ದಾರೆ.

    ಈ ಎಲ್ಲ ಬೆಳವಣಿಗೆಗಳ ನಡುವೆ ಸ್ಟಾರ್ ನಟನ ಪುತ್ರನಿಗೆ ನೋಟಿಸ್ ನೀಡಲು ಸಿಸಿಬಿ ಮುಂದಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಬೆಂಗಳೂರಿನ ಶಾಸಕರೊಬ್ಬರ ಮಗನ ಹೆಸರು ಸಹ ಕೇಳಿಬರುತ್ತಿದೆ.

  • ಡ್ರಗ್ಸ್ ಪ್ರಕರಣ – ಅಕುಲ್ ಬಾಲಾಜಿಗೆ ಸಿಸಿಬಿ ನೋಟಿಸ್

    ಡ್ರಗ್ಸ್ ಪ್ರಕರಣ – ಅಕುಲ್ ಬಾಲಾಜಿಗೆ ಸಿಸಿಬಿ ನೋಟಿಸ್

    – ಮಾಜಿ ಶಾಸಕರ ಮಗನಿಗೂ ನೋಟಿಸ್

    ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೆ ಮೂವರಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

    ಹೌದು. ನಟ, ಖ್ಯಾತ ನಿರೂಪಕ ಅಕುಲ್ ಬಾಲಾಜಿ, ಯುವರಾಜ್ ಆರ್.ವಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಸಂತೋಷ್ ಕುಮಾರ್‍ಗೆ ನಾಳೆ ಬೆಳಗ್ಗೆ 10 ಗಂಟೆಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿದೆ. ಸದ್ಯ ಹೈದರಾಬಾದ್ ನಲ್ಲಿರುವ ಅಕುಲ್ ಬಾಲಾಜಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಸಿಸಿಬಿ ನೊಟೀಸ್ ತಲುಪಿದೆ ನಾಳೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ. ಹೀಗಾಗಿ ನಾಳೆ ಬೆಳಗ್ಗೆ ವಿಚಾರಣೆಗೆ ಬರುತ್ತೇನೆ ಎಂದು ಹೇಳಿದ್ದಾರೆ.

    ದೊಡ್ಡ ಬಳ್ಳಾಪುರ ತಾಲೂಕಿನ ಲಗುಮೇನಹಳ್ಳಿ ಗ್ರಾಮದಲ್ಲಿ ಅಕುಲ್ ಬಾಲಾಜಿ ಒಡೆತನದ ಸನ್ ಶೈನ್ ಎಂಬ ರೆಸಾರ್ಟ್ ಇದೆ. ಲಾಕ್ ಡೌನ್ ಅವಧಿಯಲ್ಲಿ ಈ ರೆಸಾರ್ಟ್ ನಲ್ಲಿ ಕಾನೂನು ಉಲ್ಲಂಘನೆ ನಡೆಸಿ ಕಾರ್ಯಕ್ರಮ ನಡೆಸಿದ್ದಕ್ಕೆ ಎಫ್‍ಐಆರ್ ಕೂಡ ದಾಖಲಾಗಿತ್ತು. ಬೆಂಗಳೂರಿನ ಥಣಿಸಂದ್ರ ನಿವಾಸಿಗಳ ಮದುವೆ ಕಾರ್ಯಕ್ರಮಕ್ಕೆ ಈ ರೆಸಾರ್ಟ್ ಬಾಡಿಗೆ ಕೊಡಲಾಗಿದೆಯಂತೆ. ಮಧ್ಯರಾತ್ರಿ 20ಕ್ಕೂ ಅಧಿಕ ಮಂದಿ ಈ ರೆಸಾರ್ಟ್‍ಗೆ ಬಂದಿಳಿದಿದ್ರು. ಈ ಅಪರಿಚಿತ ಜನರನ್ನು ಕಂಡು ಗ್ರಾಮದ ಜನರು ದೊಡ್ಡಬಳ್ಳಾಪುರ ಠಾಣೆಯಲ್ಲಿ ದೂರು ಕೂಡ ಕೊಟ್ಟಿದ್ದರು. ಅಲ್ಲದೆ ವಿರೇನ್ ಖನ್ನಾಗೆ ಅಕುಲ್ 3 ಬಾರಿ ಈ ರೆಸಾರ್ಟ್ ಬಾಡಿಗೆಗೆ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

    ಮಾಜಿ ಶಾಸಕ ಆರ್.ವಿ ದೇವರಾಜ್ ಮಗನಾಗಿರುವ ಯುವರಾಜ್ ಆರ್. ವಿ ಸುದಾಮನಗರದ ಮಾಜಿ ಕಾರ್ಪೋರೇಟರ್. ಈ ಹಿಂದೆ ಹ್ಯಾರಿಸ್ ಪುತ್ರ ನಲಪಾಡ್ ಪ್ರಕರಣದಲ್ಲಿಯೂ ಯುವರಾಜ್ ಹೆಸರು ಕೇಳಿ ಬಂದಿತ್ತು. ಹೀಗಾಗಿ ಅಂದು ಸಿಸಿಬಿ ಪೊಲೀಸರು ಯುವರಾಜ್ ಬಳಿ ಹೇಳಿಕೆ ಪಡೆದು ವಾಪಸ್ ಕಳುಹಿಸಿದ್ದರು.

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾನಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಸಂಜನಾ ನ್ಯಾಯಾಂಗ ಬಂಧನ ಇಂದು ಮುಕ್ತಾಯವಾಗುತ್ತಿದ್ದು, ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆಯಾಗಿದೆ. ನಾಳೆ ರಾಗಿಣಿಯ ಜಾಮೀನು ಅರ್ಜಿ ವಿಚಾರಣೆಯೂ ಇದೆ.

    ಇತ್ತ ನಟಿ ದಿಗಂತ್ ಹಾಗೂ ನಟಿ ಐಂದ್ರಿತಾ ಅವರನ್ನು ಕೂಡ ಸಿಸಿಬಿ ವಿಚಾರಣೆ ನಡೆಸಿ ವಾಪಸ್ ಕಳುಹಿಸಿತ್ತು. ಅಲ್ಲದೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಈ ಟೆನ್ಶನ್ ನಡುವೆಯೂ ಶೂಟಿಂಗ್ ಗೆ ಹೋಗುವುದಾಗಿ ಗಂಡ-ಹೆಂಡತಿ ನಿನ್ನೆ ಹೇಳಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಬ್ರೇಕ್ ಪಡೆದು ಪೋಸ್ಟ್ ಪೋನ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಮಾರಿಗೋಲ್ಡ್ ಸಿನಿಮಾದ ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ಇಂದು ನಡೆಯಬೇಕಿತ್ತು. ಈ ಮಧ್ಯೆ ಇನ್ನು ಕೂಡ ಸಿಸಿಬಿ ವಿಚಾರಣೆಗೆ ಹಾಜರಾಗಬೇಕಾದ ಹಿನ್ನೆಲೆ ದಿಗಂತ್ ವಿಶ್ರಾಂತಿಯಲ್ಲಿದ್ದಾರೆ. ಮೊನ್ನೆಯಿಂದಲೂ ಆರ್ ಆರ್ ನಗರದ ನಿವಾಸದಲ್ಲಿ ಐಂದ್ರಿತಾ-ದಿಗಂತ್ ಇದ್ದು, ಕೇವಲ ಆಪ್ತರು ವಕೀಲರ ಜೊತೆ ಮಾತ್ರ ಮಾತುಕತೆ ನಡೆಸುತ್ತಿದ್ದಾರೆ.

  • ವೈದ್ಯರಿಗೆ ಶೀಘ್ರವೇ ಸಿಹಿ ಸುದ್ದಿ ಕೊಡ್ತೇವೆ: ಶ್ರೀರಾಮುಲು

    ವೈದ್ಯರಿಗೆ ಶೀಘ್ರವೇ ಸಿಹಿ ಸುದ್ದಿ ಕೊಡ್ತೇವೆ: ಶ್ರೀರಾಮುಲು

    ಕಲಬುರಗಿ: ಕೆಲ ಬೇಡಿಕೆಗಳನ್ನ ಈಡೇರಿಸುವ ಮೂಲಕ ವೈದ್ಯರಿಗೆ ಶೀಘ್ರವೇ ಸಿಹಿ ಸುದ್ದಿಯನ್ನು ಕೊಡುತ್ತೇವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯರು ಮುಷ್ಕರಕ್ಕೆ ಮುಂದಾಗಲ್ಲ ಅನ್ನೋ ಭರವಸೆಯಿದೆ ಎಂದರು. ಸಿಎಂ ಪುತ್ರ ವಿಜಯೇಂದ್ರ ಆರೋಗ್ಯ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ವೈದ್ಯರು ವಿಜಯೇಂದ್ರ ಬಳಿ ಹೋಗಿ ಚರ್ಚೆ ಮಾಡಿದ್ದಾರೆ. ಆ ವಿಷಯಗಳನ್ನು ಸಿಎಂ ಜೊತೆ ಚರ್ಚಿಸಿ ಇತ್ಯರ್ಥ ಮಾಡಬಹುದು. ಬೇರೆ ಯಾವ ಇಲಾಖೆಯಲ್ಲಿಯೂ ವಿಜಯೇಂದ್ರ ಹಸ್ತಕ್ಷೇಪ ಮಾಡ್ತಿಲ್ಲ. ಸಿಎಂ ಪುತ್ರ ಅನ್ನೋ ಕಾರಣಕ್ಕಾಗಿ ಆ್ಯಕ್ಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದರು.

    ಅಧಿವೇಷನಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಡೌಟು. ಅತಿವೃಷ್ಟಿ ಮತ್ತು ವಿವಿಧ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಿಎಂ ದೆಹಲಿಗೆ ಹೋಗಿದ್ದಾರೆ. ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ದೆಹಲಿಗೆ ಹೋಗ್ತಿಲ್ಲ ಎಂದು ತಿಳಿಸಿದರು. ಇದೇ ವೇಳೆ ಕೊರೊನಾ ಸೋಂಕಿತರ ಬಳಿ ಅಧಿಕ ಹಣ ವಸೂಲಿ ಆರೋಪಕ್ಕೆ ಪ್ರತಿಕ್ರಿಯಿಸಿ, ಅಧಿಕ ಹಣ ವಸೂಲಿ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುತ್ತೇವೆ. ಖಾಸಗಿ ಆಸ್ಪತ್ರೆ ಮಾನ್ಯತೆ ರದ್ದುಗೊಳಿಸ್ತೇವೆ ಎಂದು ಎಚ್ಚರಿಕೆ ನೀಡಿದರು.

    ಡ್ರಗ್ಸ್ ಜಾಲದಲ್ಲಿ ಸಿನಿಮಾ ನಟರ ಭಾಗಿ ವಿಚಾರ ಸಂಬಂಧ ಮಾತನಾಡಿ, ಸಿನಿಮಾ ನಟರು, ರಾಜಕಾರಣಿಗಳು ಭಾಗಿಯಾಗಿದಾರೆ ಅನ್ನೋ ಆರೋಪವಿದೆ. ಡ್ರಗ್ಸ್ ಗೆ ಯುವ ಸಮುದಾಯ ಬಲಿಯಾಗ್ತಿದೆ. ರಾಜ್ಯ ಸರ್ಕಾರ ಗಂಭೀರವಾಗಿ ತನಿಖೆ ನಡೆಸ್ತಿದೆ. ಯಾರೇ ತಪ್ಪಿಸ್ಥರಿದ್ದರೂ ಕ್ರಮ ಖಚಿತ. ಸಿನೆಮಾ ನಟರಿರಲ್ಲಿ, ರಾಜಕಾರಣಿಗಳಿರಲ್ಲಿ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

  • ಇಂದು ರಾಗಿಣಿಗೆ ಜಾಮೀನು ಭಾಗ್ಯವಿಲ್ಲ – ಸೆ.16ಕ್ಕೆ ಮುಂದೂಡಿಕೆ

    ಇಂದು ರಾಗಿಣಿಗೆ ಜಾಮೀನು ಭಾಗ್ಯವಿಲ್ಲ – ಸೆ.16ಕ್ಕೆ ಮುಂದೂಡಿಕೆ

    ಬೆಂಗಳೂರು: ನಟಿ ರಾಗಿಣಿಗೆ ಇಂದು ಜಾಮೀನು ಭಾಗ್ಯವಿಲ್ಲ. ಜಾಮೀನು ಅರ್ಜಿಯ ವಿಚಾರಣೆ ಸೆ.16ಕ್ಕೆ ಮುಂದೂಡಲಾಗಿದೆ.

    ಸರ್ಕಾರಿ ವಕೀಲರು ಜಾಮೀನು ಅರ್ಜಿಯ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ವಿಶೇಷ ಕೋರ್ಟ್‌ ಬುಧವಾರಕ್ಕೆ ಜಾಮೀನು ಅರ್ಜಿಯನ್ನು ಮುಂದೂಡಿದೆ. ಇದನ್ನೂ ಓದಿ: ರಾಗಿಣಿ ಡ್ರಗ್ಸ್ ಸೇವಿಸಿರೋದಕ್ಕೆ ‘ಬಿಗ್’ ಸಾಕ್ಷ್ಯ – ಆರೋಪಿ ರವಿಶಂಕರ್ ತಪ್ಪೊಪ್ಪಿಗೆ

    ರಾಜ್ಯ ಸರ್ಕಾರ ಕಳೆದ ವಾರ ಅಭಿಯೋಜಕರನ್ನು ನೇಮಕ ಮಾಡಿದೆ. ಅವರು ಬಂದು ಆಕ್ಷೇಪಣೆ ಸಲ್ಲಿಸಬೇಕಾಗುತ್ತದೆ. ಈಗಾಗಲೇ ಪ್ರಕರಣ ತನಿಖಾ ಹಂತದಲ್ಲಿದೆ. ತನಿಖಾ ಹಂತದಲ್ಲಿ ಇರುವ ಕಾರಣ ಸಿಸಿಬಿ ಪರ ವಕೀಲರು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕೇಳಿದರು. ಸಿಸಿಬಿ ಪರ ವಕೀಲರ ವಾದವನ್ನು ಪುರಸ್ಕರಿಸಿದ ಕೋರ್ಟ್‌ ಜಾಮೀನು ಅರ್ಜಿಯನ್ನು ಸೆ.16ಕ್ಕೆ ಮುಂದೂಡಿತು.

    ರಾಗಿಣಿ ಸೇರಿದಂತೆ 14 ಆರೋಪಿಗಳ ವಿರುದ್ಧ ನಾರ್ಕೊಟಿಕ್‌ ಡ್ರಗ್ಸ್ ಆ್ಯಂಡ್ ಸೈಕೊಟ್ರಾಫಿಕ್ ಸಬ್‌ಸ್ಟೆನ್ಸಸ್ (ಎನ್‍ಡಿಪಿಎಸ್) ಆ್ಯಕ್ಟ್ ಸೆಕ್ಷನ್ 21, 21ಸಿ, 27ಎ, 27ಬಿ, 29, ಐಪಿಸಿ 120ಬಿ ಅಡಿ ಕೇಸ್‌ ದಾಖಲಾಗಿದೆ. ಈ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿರುವ ಕಾರಣ ಜಾಮೀನು ಕಷ್ಟ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

    ಯಾವ ಸೆಕ್ಷನ್‌ ಏನು ಹೇಳುತ್ತದೆ?
    ಎನ್‍ಡಿಪಿಎಸ್ 21 – ಮಾದಕ ವಸ್ತುಗಳನ್ನು ಅಕ್ರಮವಾಗಿ ತಯಾರು ಮಾಡುವುದು, ಮಾರಾಟ ಮಾಡುವುದು, ಸಾಗಾಟ ಮಾಡುವುದು ಅಪರಾಧ.

    ಎನ್‍ಡಿಪಿಎಸ್ 21ಸಿ – ವಾಣಿಜ್ಯ ಉದ್ದೇಶಕ್ಕಾಗಿ ಮಾದಕವಸ್ತುಗಳ ಸಂಗ್ರಹಣೆ ಮತ್ತು ಮಾರಾಟ ಮಾಡುವುದು ನಿಷಿದ್ಧ. ಆರೋಪ ಸಾಬೀತಾದರೆ 10 ವರ್ಷಕ್ಕೆ ಮೇಲ್ಪಟ್ಟು ಶಿಕ್ಷೆ

    ಎನ್‍ಡಿಪಿಎಸ್ 27 ಎ – ಮಾದಕ ವಸ್ತುಗಳಿಗೆ ಸಂಬಂಧಿಸಿ ಹಣಕಾಸು ನೆರವು. ನೇರವಾಗಿ ಅಥವಾ ಪರೋಕ್ಷವಾಗಿ ಅಥವಾ ಮಾದಕ ವಸ್ತು ಸಾಗಣಿಕೆಗೆ ನೆರವಾಗುವುದು ಅಪರಾಧ.

    ಎನ್‍ಡಿಪಿಎಸ್ 27 ಬಿ – ಮಾದಕವಸ್ತು ಸೇವನೆ ಕೂಡ ಅಪರಾಧ. ಆರು ತಿಂಗಳ ಶಿಕ್ಷೆ ಅಥವಾ 10 ಸಾವಿರ ದಂಡ.

    ಎನ್‍ಡಿಪಿಎಸ್ 29 – ಅಪರಾಧಿಕ ಒಳ ಸಂಚಿಗೆ ಸಹಾಯ ಮಾಡುವುದು. ಅಂತೆಯೇ ಒಳ ಸಂಚು ಮಾಡಲು ವೇದಿಕೆ ಕಲ್ಪಿಸುವುದು ಪಾರ್ಟಿ ಆಯೋಜನೆ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧ.

    ಐಪಿಸಿ 120 ಬಿ – ಅಪರಾಧಿಕ ಒಳಸಂಚು.

  • ಮತ್ತೆ ಪೊಲೀಸ್ ಕಸ್ಟಡಿಗೆ ಕೇಳ್ಬೇಡಿ- ಅಧಿಕಾರಿಗಳ ಮುಂದೆ ರಾಗಿಣಿ, ಸಂಜನಾ ಗೋಳು

    ಮತ್ತೆ ಪೊಲೀಸ್ ಕಸ್ಟಡಿಗೆ ಕೇಳ್ಬೇಡಿ- ಅಧಿಕಾರಿಗಳ ಮುಂದೆ ರಾಗಿಣಿ, ಸಂಜನಾ ಗೋಳು

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆಯಿಂದ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ರೋಸಿ ಹೋಗಿದ್ದಾರೆ. ಹೀಗಾಗಿ ಮತ್ತೆ ಪೊಲೀಸ್ ಕಸ್ಟಡಿಗೆ ಕೇಳಬೇಡಿ ಎಂದು ಪೊಲೀಸರ ಬಳಿ ನಟಿಯರು ಗೋಳಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಪೊಲೀಸ್ ಕಸ್ಟಡಿ ಸಾಕಪ್ಪಾ ಸಾಕು. ಬೇಕಾದರೆ ಕಸ್ಟಡಿಯಿಂದ ನಮ್ಮನ್ನ ಜೈಲಿಗೆ ಕಳಿಸಿ ಎಂದು ನಟಿಮಣಿಯರು ಕೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಪೊಲೀಸರ ತನಿಖೆಯಿಂದ ರೋಸಿ ಹೋಗಿರುವ ನಟಿಯರಿಗೆ ಕಸ್ಟಡಿಯಲ್ಲಿ ಇದ್ದಷ್ಟು ದಿನ ಬೇಲ್ ಸಿಗೋದಿಲ್ಲ ಅನ್ನೋದು ಗೊತ್ತಾಗಿದೆ. ಹೀಗಾಗಿ ಪೊಲೀಸ್ ಕಸ್ಟಡಿಗೆ ಮತ್ತೆ ತೆಗೆದುಕೊಳ್ಳಬೇಡಿ ಅಂತ ತನಿಖಾಧಿಕಾರಿ ಮುಂದೆ ರಾಗಿಣಿ ಮತ್ತು ಸಂಜನಾ ತಮ್ಮ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

    ಮೆಡಿಕಲ್ ಅಲ್ಲಿ, ಇಲ್ಲಿ ಕರೆದೊಯ್ಯುತ್ತಿರುತ್ತೀರಿ. ಮಾಧ್ಯಮದವರು ಕೂಡ ನಮ್ಮನ್ನು ಫಾಲೋ ಮಾಡಿಕೊಂಡು ಬರುತ್ತಿದ್ದಾರೆ. ಜನ ನಮ್ಮನ್ನ ನೋಡ್ತಿರೋದ್ರಿಂದ ಮುಜುಗರವಾಗ್ತಿದೆ. ದಯಮಾಡಿ ಕಸ್ಟಡಿ ಅಂತ್ಯ ಮಾಡಿಕೊಡಿ ಅಂತ ಹೇಳುತ್ತಿದ್ದು, ನಟಿಮಣಿಯರು ನ್ಯಾಯಾಂಗ ಬಂಧನಕ್ಕೆ ಹೋದ್ರೆ ಬೇಲ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: ವೈಭವ್ ಜೈನ್ ವೈಭವಕ್ಕೆ ತುಪ್ಪದ ಹುಡ್ಗಿ ಫುಲ್ ಸೈಲೆಂಟ್

    ನಾಳೆ ತುಪ್ಪದ ಬೆಡಗಿಯ ಪೊಲೀಸ್ ಕಸ್ಟಡಿ ಅಂತ್ಯವಾಗಲಿದೆ. ಹೀಗಾಗಿ ಎನ್‍ಡಿಪಿಎಸ್ ಕೋರ್ಟಿನಲ್ಲಿ ರಾಗಿಣಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಈ ಜಾಮೀನು ಅರ್ಜಿಯ ವಿಚಾರಣೆ ನಾಳೆ ನಡೆಯಲಿದೆ.

    ಇತ್ತ ನಾಳೆ ಎನ್‍ಡಿಪಿಎಸ್ ಕೋರ್ಟಿಗೆ ನಟಿ ಸಂಜನಾ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ಇದೇ ವೇಳೆ 1ನೇ ಎಸಿಎಂಎಂ ಕೋರ್ಟಿನಲ್ಲಿ ವಿಚಾರಣೆ ನಡೆಯಲಿದೆ. ನಾಳೆಯೇ ರಾಗಿಣಿ, ಸಂಜನಾ ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಮತ್ತಷ್ಟು ದಿನ ಇಬ್ಬರೂ ನಟಿಯರನ್ನ ಕಸ್ಟಡಿಗೆ ನೀಡುವಂತೆ ಪೊಲೀಸರು ಕೇಳುವ ಸಾಧ್ಯತೆಗಳು ಹೆಚ್ಚಾಗಿವೆ.

  • ಕನ್ನಡ ಚಿತ್ರರಂಗಕ್ಕೆ ಮಸಿ ಬಳಿಯೋ ಕೆಲಸ ಬಿಜೆಪಿ ಮಾಡ್ತಿದೆ: ಡಿ.ಕೆ ಸುರೇಶ್

    ಕನ್ನಡ ಚಿತ್ರರಂಗಕ್ಕೆ ಮಸಿ ಬಳಿಯೋ ಕೆಲಸ ಬಿಜೆಪಿ ಮಾಡ್ತಿದೆ: ಡಿ.ಕೆ ಸುರೇಶ್

    – ಜಮೀರ್‍ನನ್ನು ಬಂಧಿಸಲು ಹೇಳೋರನ್ನು ಮೊದ್ಲು ಬಂಧಿಸ್ಬೇಕು

    ರಾಮನಗರ: ಕನ್ನಡ ಚಿತ್ರರಂಗಕ್ಕೆ ಮಸಿ ಬಳಿಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಸಂಸದ ಡಿ.ಕೆ ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.

    ನಗರದಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಅಹಮದ್ ಅವರನ್ನ ಬಂಧಿಸಬೇಕು ಅಂತ ಹೇಳಿರುವವರನ್ನ ಮೊದಲು ಬಂಧಿಸಬೇಕು. ರಾಜಕಾರಣಕ್ಕೋಸ್ಕರ ಆರೋಪ ಮಾಡಬಾರದು. ಜಮೀರ್ ಅಹಮದ್ ವಿರುದ್ಧ ಮಾತನಾಡಿದ್ರೆ ನಾನು ಲೀಡರ್ ಆಗುತ್ತೇನೆ. ನಾನು ಮುಸ್ಲಿಂ ವಿರೋಧಿ ಅಂತ ತೋರಿಸಿಕೊಳ್ಳುವುದನ್ನ ಬಿಡಬೇಕು. ಇದು ಕೆಟ್ಟ ಅಭ್ಯಾಸ ಇದನ್ನ ಮೊದಲು ಬಿಡಬೇಕು ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೆಸರೆಳದೆ ಟಾಂಗ್ ಕೊಟ್ಟರು.

    ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್‍ಗೆ ಟಾಂಗ್ ನೀಡಿದ ಸುರೇಶ್, ಅವರ ಪಕ್ಷದಲ್ಲಿ ನಡೆಯುತ್ತಿರುವ ಅಕ್ರಮ ವ್ಯವಹಾರಗಳನ್ನ ತಡೆಯಲಿ. ನಳೀನ್ ಕುಮಾರ್ ಕಟೀಲ್ ಅವರು ಅವರ ಪಕ್ಷದಲ್ಲಿ ನಡೆಯುತ್ತಿರುವ ಬೇರೆ ಬೇರೆ ದಂಧೆಗಳನ್ನ ಮಾಡುತ್ತಿರುವುದನ್ನ ಪತ್ತೆ ಹಚ್ಚಲಿ. ಕಿಸ್ ಕೊಟ್ಟಿರುವುದು, ಬ್ಲೂ ಪ್ಲಿಂ ನೋಡಿರೋದು. ಯಾರು ಇದರ ಇತಿಹಾಸ, ಯಾರದು ಅಂದ್ರೆ ಅದು ಬಿಜೆಪಿಯವರದ್ದು. ಬಿಜೆಪಿ ಕಲಿಸಿ ಕೊಡತ್ತಿರುವುದು ಬೇರೆ, ಜನಕ್ಕೆ ಹೇಳುತ್ತಿರುವುದೇ ಬೇರೆ, ಅವರ ವ್ಯವಹಾರವೇ ಬೇರೆ. ಈ ಡ್ರಗ್ಸ್ ದಂಧೆ ವ್ಯವಹಾರದ ಬೆನ್ನತ್ತಿರುವ ಪೊಲೀಸ್ ಇಲಾಖೆಗೂ ಯಾರು ದಂಧೆ ಮಾಡುತ್ತಿದ್ದಾರೆ ಅನ್ನುವ ವಿಚಾರ ಗೊತ್ತು. ಕೇವಲ ಇಬ್ಬರು ನಟಿಯರನ್ನ ಮುಂದೆ ಇಟ್ಟುಕೊಂಡು ಕನ್ನಡ ಚಿತ್ರರಂಗಕ್ಕೆ ಮಸಿ ಬಳಿಯುವ ಕೆಲಸವನ್ನ ಬಿಜೆಪಿ ಮಾಡುತ್ತಿದೆ ಎಂದು ಕಿಡಿಕಾರಿದರು.

    ಇದೇ ವೇಳೆ ಕೊರೊನಾ ಹೆಸರಿನಲ್ಲಿ ನಡೆದಿರುವ ಹಗರಣವನ್ನ ಮುಚ್ಚಿ ಹಾಕಲು ಬಿಜೆಪಿ ಯತ್ನ ಮಾಡುತ್ತಿದೆ ಎಂದ ಅವರು, ಡ್ರಗ್ಸ್ ವಿಚಾರವನ್ನ ಬಿಜೆಪಿ ದೊಡ್ಡದು ಮಾಡುತ್ತಿದೆ. ಈ ಮೂಲಕ ಕೊರೊನಾ ಹಗರಣವನ್ನ ಮುಚ್ಚಿ ಹಾಕುವ ಯತ್ನ ನಡೆದಿದೆ. ಬಿಜೆಪಿ ಮೊದಲು ಹುಡುಗರನ್ನ ಬಳಸಿಕೊಂಡು ನಡೆಸುತ್ತಿರುವ ಡ್ರಗ್ಸ್ ದಂಧೆಯನ್ನು ತನಿಖೆ ಮಾಡಲಿ. ಇದಕ್ಕಾಗಿ ಒಂದು ಸಮಿತಿ ರಚನೆ ಮಾಡಿ ತನಿಖೆ ಮಾಡಲಿ ಎಂದು ಒತ್ತಾಯಿಸಿದರು.

    ಕೊರೊನಾ ವಿಚಾರವನ್ನ ರಾಜ್ಯ ಸರ್ಕಾರ ಮರೆತಿದೆ. ಈ ವಿಚಾರವನ್ನ ಬೇರೆಕಡೆ ಡೈವರ್ಟ್ ಮಾಡಲು ಯಾರೋ ಇಬ್ಬರು ನಟಿಯರ ವಿಚಾರವನ್ನ ದೊಡ್ಡದು ಮಾಡುತ್ತಿದ್ದಾರೆ. ಡ್ರಗ್ಸ್ ದಂಧೆ ವಿಚಾರ ಈ ಸರ್ಕಾರಕ್ಕೆ ಮೊದಲೇ ಗೊತ್ತಿತ್ತು. ಇಲ್ಲಾ ಅಂದ್ರೆ ಏಕಾ ಏಕಿ ಟನ್ ಗಟ್ಟಲೆ ಡ್ರಗ್ಸ್ ಸಿಕ್ಕುತ್ತಿರಲಿಲ್ಲ. ಯಾರೇ ತಪ್ಪು ಮಾಡಿದ್ರೂ ಶಿಕ್ಷೆ ಕೊಡಲಿ. ಗ್ಲಾಮರ್ ಹಾಗೂ ಕನ್ನಡ ಚಿತ್ರರಂಗವನ್ನ ಬಳಸಿಕೊಂಡು ಇಡೀ ರಾಜ್ಯದ ಜನರ ದಿಕ್ಕನ್ನ ತಪ್ಪಿಸುವ ವ್ಯವಸ್ಥಿತ ಪಿತೂರಿಯನ್ನ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಗರಂ ಆದರು.

  • ಮೈಸೂರಿನ ಪ್ರತಿಷ್ಠಿತ ಶಾಲಾ, ಕಾಲೇಜುಗಳಲ್ಲಿ ಡ್ರಗ್ಸ್ ಸಿಗುತ್ತೆ: ಮುತಾಲಿಕ್ ಗಂಭೀರ ಆರೋಪ

    ಮೈಸೂರಿನ ಪ್ರತಿಷ್ಠಿತ ಶಾಲಾ, ಕಾಲೇಜುಗಳಲ್ಲಿ ಡ್ರಗ್ಸ್ ಸಿಗುತ್ತೆ: ಮುತಾಲಿಕ್ ಗಂಭೀರ ಆರೋಪ

    ಮೈಸೂರು: ಜಿಲ್ಲೆಯ ಪ್ರತಿಷ್ಠಿತ ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್ ಸಿಗುತ್ತದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆ-ಕಾಲೇಜುಗಳ ಆವರಣದಲ್ಲಿ ಡ್ರಗ್ಸ್ ಸಿಗುತ್ತದೆ. ಮೈಸೂರಿನ ಪ್ರತಿಷ್ಠಿತ ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್ ಸಿಗುತ್ತೆ. ಇದು ಪೋಷಕರು, ಪಾಲಕರು, ಶಿಕ್ಷಕರಿಗೆ ಗೊತ್ತಿದೆ. ಆದ್ರೆ ಯಾರೊಬ್ಬರೂ ಮಾತನಾಡುತ್ತಿಲ್ಲ ಎಂದು ಹೇಳಿದರು.

    ಹೊರ ದೇಶದ ವಿದ್ಯಾರ್ಥಿಗಳು ಲಕ್ಷಾಂತರ ರೂ. ಖರ್ಚು ಮಾಡಿಕೊಂಡು ಕಾಲೇಜು ಸೇರುತ್ತಾರೆ. ಈಗಲೂ ಹಾಸ್ಟೆಲ್‍ಗಳ ಮೇಲೆ ದಾಳಿ ಮಾಡಿ. ಹಾಸ್ಟೆಲ್‍ಗಳನ್ನು ಚೆಕ್ ಮಾಡಿದರೆ ಡ್ರಗ್ಸ್, ಹೆರಾಯಿನ್ ಎಲ್ಲವೂ ಸಿಗುತ್ತವೆ ಎಂದು ಸವಾಲೆಸೆದರು.

    ಲವ್ ಜಿಹಾದ್ ಮಾದರಿಯಲ್ಲಿಯೇ ಡ್ರಗ್ಸ್ ಜಿಹಾದ್ ನಡೆಯುತ್ತಿದೆ. ಇದು ದೇಶಾದ್ಯಂತ ವ್ಯಾಪಿಸಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇದರ ಮೂಲ ರೂವಾರಿ. ಪಂಜಾಬ್, ಗುಜರಾತ್, ಗೋವಾ ಮೂಲಕ ಡ್ರಗ್ಸ್ ದೇಶಕ್ಕೆ ಪ್ರವೇಶಿಸುತ್ತಿದೆ. ಇದರಲ್ಲಿ ರಾಜಕಾರಣಿಗಳು ಭಾಗಿಯಾಗಿದ್ದಾರೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷದವರು ಡ್ರಗ್ಸ್ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂದರು.

    ಹೊಂದಾಣಿಕೆ ರಾಜಕಾರಣದ ಮೂಲಕ ಎಲ್ಲವನ್ನೂ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ಈ ಬಗ್ಗೆ ಗಮನ ಸೆಳೆದಿದ್ದ ನನ್ನನ್ನೇ ಟಾರ್ಗೆಟ್ ಮಾಡಿದರು. ಆಗಲೇ ಇದನ್ನು ಮಟ್ಟ ಹಾಕಿದ್ದರೆ ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ದೆಹಲಿ ಪೊಲೀಸರು ಬಂದು ದಾಳಿ ಮಾಡುವವರೆಗೂ ರಾಜ್ಯ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು. ಗುಪ್ತಚರ ಇಲಾಖೆಯವರು ಕತ್ತೆ ಕಾಯುತ್ತಿದ್ರಾ ಎಂದು ಪ್ರಶ್ನಿಸುವ ಮೂಲಕ ಮುತಾಲಿಕ್ ಆಕ್ರೋಶ ಹೊರಹಾಕಿದ್ದಾರೆ.

  • ಆರಂಭದಲ್ಲಿ ‘ಐ ದೋಂತ್ ನೋ ಇಂಗ್ಲಿಷ್ʼ ಎಂದಿದ್ದ ಸಾಂಬಾ ಬಾಯ್ಬಿಟ್ಟಿದ್ದಾನೆ ಸ್ಫೋಟಕ ರಹಸ್ಯ

    ಆರಂಭದಲ್ಲಿ ‘ಐ ದೋಂತ್ ನೋ ಇಂಗ್ಲಿಷ್ʼ ಎಂದಿದ್ದ ಸಾಂಬಾ ಬಾಯ್ಬಿಟ್ಟಿದ್ದಾನೆ ಸ್ಫೋಟಕ ರಹಸ್ಯ

    ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದ 7ನೇ ಆರೋಪಿಯಾಗಿರುವ ಸೆನೆಗಲ್‌ ದೇಶದ ಪ್ರಜೆ ಡ್ರಗ್‌ ಪೆಡ್ಲರ್‌ ಲೂಮ್‌ ಪೆಪ್ಪರ್‌ ಸಾಂಬಾ ಎಲ್ಲ ಆರೋಪಿಗಳಿಗೆ ಚೈನ್‌ ಲಿಂಕ್‌ ಆಗಿರುವ ವಿಚಾರ ಸಿಸಿಪಿ ವಿಚಾರಣೆ ವೇಳೆ ಗೊತ್ತಾಗಿದೆ.

    ಹೌದು. ಸೆರೆ ಸಿಕ್ಕ ಆರಂಭದಲ್ಲಿ “ಐ ದೋಂತ್ ನೋ ಇಂಗ್ಲಿಷ್” ನನಗೆ ಆಫ್ರಿಕನ್‌ ಭಾಷೆ ಬಿಟ್ಟರೆ ಬೇರೆ ಯಾವುದೇ ಭಾಷೆ ಬರುವುದಿಲ್ಲ ಎಂದು ಸಾಂಬಾ ಹೇಳಿದ್ದ. ಪ್ರಕರಣದಲ್ಲಿ ಈತನ ಪಾತ್ರ ದೊಡ್ಡದಿದೆ ಎಂದು ತಿಳಿದಿದ್ದ ಪೊಲೀಸರಿಗೆ ಈತನ ಬಾಯಿ ಬಿಡಿಸುವುದು ಹೇಗೆ ಎನ್ನುವುದು ದೊಡ್ಡ ಚಿಂತೆಯಾಗಿತ್ತು.

    ಮೊದಲ ಎರಡು ದಿನ ನನಗೆ ಇಂಗ್ಲಿಷ್‌ ಬರುವುದಿಲ್ಲ ಎಂದು ಹೈಡ್ರಾಮಾ ಮಾಡಿದ್ದ. ಈ ವೇಳೆ ಉಳಿದ ಆರೋಪಿಗಳ ಮೊಬೈಲ್‌ನಲ್ಲಿ ಈತ ಮಾಡಿರುವ ವಾಟ್ಸಪ್‌ ಚಾಟ್‌ ಮುಂದಿಟ್ಟು ಈ ಇಂಗ್ಲಿಷ್‌ ಮಸೇಜ್‌ ಮಾಡಿದವರು ಯಾರು ಎಂದು ಪ್ರಶ್ನಿಸಿದಾಗ ತನ್ನ ವರಸೆ ಬದಲಾಯಿಸಿ ಡ್ರಗ್ಸ್‌ ವಿಚಾರಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ನೀಡುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.

    ಈ ಲೂಮ್‌ ಪೆಪ್ಪರ್‌ ಎಲ್ಲರಿಗೂ ಚೈನ್ ಲಿಂಕ್ ಆಗಿದ್ದಾನೆ. ಡ್ರಗ್ಸ್ ಕೇಸ್ ನಲ್ಲಿ ಆರೋಪಿಗಳ ಜೊತೆಗೆ ಲೂಮ್ ಪೆಪ್ಪರ್ ನೇರ ಸಂಪರ್ಕದಲ್ಲಿದ್ದ. ಬೇರೆ ಬೇರೆ ದೇಶಗಳಿಂದ ವಿವಿಧ ರೀತಿಯ ಡ್ರಗ್ಸ್ ಅನ್ನು ಈತ ಸರಬರಾಜು ಮಾಡುತ್ತಿದ್ದ. ಈತನ ಬಂಧನದ ಬಳಿಕ ಈ ಪ್ರಕರಣದ ಪ್ರಮುಖ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಇದನ್ನೂ ಓದಿ: ವಯಸ್ಸಿಗೂ ಡ್ರಗ್ಸ್‌ಗೂ ಕನೆಕ್ಟ್ ಮಾಡಬೇಡಿ: ನಟಿ ರಾಗಿಣಿ

    ಈಗ ಸೆರೆಯಾದವರು ಮಾತ್ರವಲ್ಲದೇ ಇನ್ನು ಹಲವು ವ್ಯಕ್ತಿಗಳ ಬಗ್ಗೆ ಲೂಮ್‌ ಪೆಪ್ಪರ್‌ ಬಾಯಿಬಿಟ್ಟಿದ್ದಾನೆ. ಈಗ ಆ ವ್ಯಕ್ತಿಗಳ ಪಾತ್ರದ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಸಂಪರ್ಕ ಆಗಿದ್ದು ಹೇಗೆ?
    ವಿದೇಶದಿಂದ ಕಳ್ಳ ಸಾಗಾಣೆಯ ಮೂಲಕ ಬರುತ್ತಿದ್ದ ಡ್ರಗ್ಸ್‌ ಅನ್ನು ಸಾಂಬಾ ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳಿಗೂ ವಿತರಿಸುತ್ತಿದ್ದ. ಆರಂಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಐಟಿ-ಬಿಟಿಯವರಿಗೆ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ. ಈ ವೇಳೆ ಪಬ್‌ವೊಂದರಲ್ಲಿ ಪಾರ್ಟಿ ವೇಳೆ ಪರಿಚಯವಾಗಿದ್ದ ವ್ಯಕ್ತಿಯಿಂದ ದೊಡ್ಡ ಮಟ್ಟದ ಗ್ರಾಹಕರ ಸಂಪರ್ಕ ಬೆಳೆದಿದೆ. ಬಳಿಕ ಪಾರ್ಟಿಗಳಿಗೆ ನೇರವಾಗಿ ಹೋಗಿ ಡ್ರಗ್ಸ್‌ ಕೊಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

  • ಡ್ರಗ್ಸ್ ವಿಚಾರ ಇಟ್ಟುಕೊಂಡು ಸರ್ಕಾರ ಜನರನ್ನ ಡೈವರ್ಟ್ ಮಾಡ್ತಿದೆ: ಡಿ.ಕೆ ಸುರೇಶ್

    ಡ್ರಗ್ಸ್ ವಿಚಾರ ಇಟ್ಟುಕೊಂಡು ಸರ್ಕಾರ ಜನರನ್ನ ಡೈವರ್ಟ್ ಮಾಡ್ತಿದೆ: ಡಿ.ಕೆ ಸುರೇಶ್

    ಹಾಸನ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚಾರಕ್ಕಾಗಿ ನಟ, ನಟಿಯರನ್ನು ಬಂಧಿಸುತ್ತಿದ್ದು, ಡ್ರಗ್ಸ್ ವಿಚಾರ ಎತ್ತಿಕೊಂಡು ರಾಜ್ಯದ ಜನರನ್ನು ಸರ್ಕಾರ ಡೈವರ್ಟ್ ಮಾಡುತ್ತಿದೆ ಎಂದು ಸಂಸದ ಡಿ.ಕೆ ಸುರೇಶ್ ಕಿಡಿಕಾರಿದ್ದಾರೆ.

    ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿರ್ವಹಣೆ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರ ಗಡಿ ವಿಚಾರ, ರಾಮ ಮಂದಿರ ವಿಚಾರದಲ್ಲಿ ಜನರ ಸೆಳೆಯುತ್ತಿದೆ. ಇತ್ತ ಕರ್ನಾಟಕದಲ್ಲಿ ಕೋವಿಡ್‍ನಿಂದ ಜನ ಸಾಯುತ್ತಿದ್ದಾರೆ. ಆದರೆ ಗಮನ ಬೇರೆಡೆ ಸೆಳೆಯಲು ನಟ, ನಟಿಯರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಅಂತ ವಿಷಯಾಂತರ ಮಾಡ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

    ನಟ-ನಟಿಯರು ಡ್ರಗ್ಸ್ ತಗೊಂಡ್ರೆ ಕ್ರಮ ತೆಗೆದುಕೊಳ್ಳಲು ಪೊಲೀಸರು ಇದ್ದಾರೆ. ಯಾರು ಸಪ್ಲೈ ಮಾಡುತ್ತಿದ್ದಾರೆ ಅವರನ್ನು ಹಿಡಿಯುತ್ತಿಲ್ಲ. ಸಿನಿಮಾ ನಟ-ನಟಿಯರನ್ನು ಹಿಡಿಯುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು ತರಲು ಈ ರೀತಿ ಮಾಡುತ್ತಿದ್ದಾರೆ. ಯಾರದ್ದೋ ಹೇಳಿಕೆ ಇಟ್ಟುಕೊಂಡು ಹಣ ವಸೂಲಿ ಮಾಡುವ ಕೆಲಸ ಬಿಜೆಪಿ ಮಾಡ್ತಿದೆ ಎಂದು ಆರೋಪಿಸಿದರು.

    ಇಷ್ಟು ದಿನ ಡ್ರಗ್ಸ್ ಮಾಫಿಯಾ ಬಗ್ಗೆ ಕಣ್ಮುಚ್ಚಿ ಕುಳಿತಿದ್ರಾ. ಡ್ರಗ್ಸ್ ವಿಚಾರದಲ್ಲಿ ಪೊಲೀಸ್ ಮತ್ತು ಸರ್ಕಾರ ನೇರ ಹೊಣೆ. ಈ ಹಿಂದೆ ಕುಮಾರಸ್ವಾಮಿ ಇಸ್ಪೀಟ್ ದಂಧೆ ನಡೆಸುತ್ತಿದ್ದವರ ಕ್ಲಬ್ ಕ್ಲೋಸ್ ಮಾಡಿಸಿದಾಗ ಅವರು ಶ್ರೀಲಂಕಾಗೆ ಹೋದರು. ಅವರು ಬೇಲ್ ಸಿಗುವವರೆಗೂ ಇದ್ದು ನಂತರ ಬಂದರು. ಅವರ ಹಣವೇ ಸಮ್ಮಿಶ್ರ ಸರ್ಕಾರ ತೆಗೆಯುವಾಗ ಇದ್ದದ್ದು. ಪ್ರಚಾರಕ್ಕಾಗಿ ನಟ, ನಟಿಯರನ್ನು ಬಂಧಿಸುತ್ತಿದ್ದಾರೆ. ವಿಷಯ ಡೈವರ್ಟ್ ಮಾಡಲು ಮೂಲ ಇಲ್ಲದೆ ಬಳಕೆ ಮಾಡುತ್ತಿರುವವರನ್ನು ಹಿಡಿಯುತ್ತಿದ್ದಾರೆ. ಇದು ಸಾರ್ವಜನಿಕರಿಗೆ ಅರ್ಥ ಆಗಬೇಕು ಎಂದರು.

    ಡ್ರಗ್ಸ್ ವಿಚಾರದಲ್ಲಿ ಹಿರಿಯ ರಾಜಕಾರಣಿಗಳು, ಬ್ಯುಸಿನೆಸ್‍ದಾರರ ಮಕ್ಕಳ ರಕ್ಷಣೆ ನಡೆಯುತ್ತಿದೆ ಎಂಬ ವಿಚಾರ ಬಗ್ಗೆ ಮಾತನಾಡುತ್ತಾ, ಇದು ಸತ್ಯವೂ ಇರಬಹುದು. ಹೀಗಾಗಿ ನಟ-ನಟಿಯರನ್ನು ಹಿಡಿದು ತಂತ್ರಗಾರಿಕೆ ನಡೆಯುತ್ತಿದೆ. ಪೊಲೀಸ್ ಇಲಾಖೆ ನಿನ್ನ ಹೆಸರು ಇದೆ ಎಂದು ಎಲ್ಲ ಪಕ್ಷದ ರಾಜಕಾರಣಿಗಳು, ಬ್ಯುಸಿನೆಸ್‍ದಾರರ ಮಕ್ಕಳ ಹೆಸರು ಹೇಳಿಕೊಂಡು ದಂಧೆ ನಡೆಸುತ್ತಿದೆ. ಆದರೆ ಅವರನ್ನು ಹಿಡಿಯಲು ಹೋಗುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.