Tag: drugs

  • ಡ್ರಗ್ಸ್ ಪ್ರಕರಣದಲ್ಲಿ ಡೊಡ್ಡ ತಿಮಿಂಗಿಲಗಳನ್ನು ಹಿಡಿಯೋದು ಬಾಕಿ ಇದೆ: ಇಂದ್ರಜಿತ್

    ಡ್ರಗ್ಸ್ ಪ್ರಕರಣದಲ್ಲಿ ಡೊಡ್ಡ ತಿಮಿಂಗಿಲಗಳನ್ನು ಹಿಡಿಯೋದು ಬಾಕಿ ಇದೆ: ಇಂದ್ರಜಿತ್

    ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಇನ್ನೂ ದೊಡ್ಡ ತಿಮಿಂಗಿಲಗಳನ್ನು ಹಿಡಿಯುವವರೆಗೂ ನಾನು ಮಾಹಿತಿಯನ್ನು ನೀಡುತ್ತೇನೆ. ಸಣ್ಣ ಮೀನುಗಳ ಬಂಧನ ಮಾತ್ರ ಆಗಿದೆ ಅಷ್ಟೇ. ಇನ್ನೂ ದೊಡ್ಡ ತನಿಖೆ ನಡೆಯಬೇಕಾಗಿದೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

    ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ ವಿಚಾರವಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್‍ಗೆ ಸಿಸಿಬಿ ಅಧಿಕಾರಿಗಳು ಬುಲಾಬ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಮಿಷನರ್ ಕಚೇರಿಗೆ ಹಾಜರಾದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಆರು ತಿಂಗಳಿಂದ ಈ ವಿಚಾರವಾಗಿ ತನಿಖೆಗೆ ಸಹಕಾರ ನೀಡುತ್ತಾ ಬಂದಿದ್ದೇನೆ. ನನ್ನ ಸಹಕಾರ ಹೀಗೆ ಮುಂದುವರಿಯುತ್ತದೆ. ಸಿಸಿಬಿ ಅಧಿಕಾರಿಗಳು ಈಗಾಗಲೇ ಕೋಟ್ಯಂತರ ಮೌಲ್ಯದ ಡ್ರಗ್ಸ್, ಗಾಂಜಾ ವಶಪಡಿಸಿಕೊಂಡಿದ್ದಾರೆ. ಡ್ರಗ್ಸ್ ಪೆಡ್ಲರ್‍ಗಳನ್ನು ಬಂಧಿಸಿದ್ದಾರೆ. ನೈಜೀರಿಯನ್ ಪ್ರಜೆಗಳನ್ನು ಬಂಧಿಸಿದ್ದಾರೆ. ಜಾಲ ಎಷ್ಟು ಡೊಡ್ಡದಾಗಿದೆ ಎಂಬುದು ಅರ್ಥವಾಗುತ್ತದೆ ಎಂದಿದ್ದಾರೆ.

    ಸಣ್ಣ ಸಣ್ಣ ಮೀನುಗಳನ್ನ ಹಿಡಿದಿದ್ದಾರೆ. ಇನ್ನೂ ದೊಡ್ಡ ತಿಮಿಂಗಿಲಗಳಿವೆ. ಸೆಷನ್‍ನಲ್ಲಿ ಈ ವಿಚಾರ ಪ್ರಸ್ತಾಪ ಮಾಡಿ ಅಂತ ಮನವಿ ಮಾಡಿಕೊಳ್ಳುತ್ತೇನೆ. ವಿರೋಧ ಪಕ್ಷದವರಲ್ಲಿಯೂ ಕೇಳಿಕೊಳ್ಳುತ್ತೇನೆ. ಇದೊಂದು ಸಮಾಜಕ್ಕೆ ಮಾರಕ, ಇದರ ಅಂತ್ಯವಾಗಬೇಕು. ಇದರಿಂದ ಸಮಾಜಕ್ಕೆ ತೊಂದರೆಯಾಗಿದೆ. ಯುವಕರಿಗೆ ಆ ಮಾದಕ ವಸ್ತು ಸಿಕ್ಕಿದ್ರೆ ಏನಾಗುತ್ತೆ ಎಂದು ಊಹೆ ಮಾಡೋಕಾಗಲ್ಲ. ನಾನು ಒಬ್ಬ ನಿರ್ದೇಶಕನಾಗಿ ಸಾಮಾನ್ಯ ವ್ಯಕ್ತಿಯಾಗಿ ಬೇಡಿಕೊಳ್ಳುತ್ತೇನೆ. ನಾನು ಪೊಲೀಸ್ ತನಿಖೆಗೆ ಸಹಾಕರ ನೀಡಿದ್ದೇನೆ ಎಂದು ಹೇಳಿದ್ದಾರೆ.

    ಡಿಸಿಪಿ ಬಸವರಾಜ್ ಅವರು ಇಂದು ಸೆಷನ್ ನಲ್ಲಿ ಇರುವ ಕಾರಣದಿಂದಾಗಿ ವಿಚಾರಣೆ ಇಲ್ಲ. ಮತ್ತೊಂದು ದಿನಾಂಕ ತಿಳಿಸೋದಾಗಿ ಹೇಳಿದ್ದಾರೆ. ದಿನಾಂಕ ಸೂಚಿಸಿದ ದಿನ ವಿಚಾರಣೆಗೆ ಬರುತ್ತೇನೆ. ತನಿಖೆಗೆ ಬೇಕಾಗುವ ಸಂಪೂರ್ಣ ಸಹಕಾರವನ್ನು ಕೋಡುತ್ತೇನೆ ಎಂದು ಹೇಳಿದ್ದಾರೆ.

  • ಬೇಲ್‌ ಪಡೆದು ಮೊದಲ ಬಾರಿಗೆ ಕಾಣಿಸಿಕೊಂಡ ಸಂಜನಾ

    ಬೇಲ್‌ ಪಡೆದು ಮೊದಲ ಬಾರಿಗೆ ಕಾಣಿಸಿಕೊಂಡ ಸಂಜನಾ

    ಬೆಂಗಳೂರು: ಡ್ರಗ್ಸ್‌ ಪ್ರಕರಣದಲ್ಲಿ ಜಾಮೀನು ಪಡೆದು ಅಜ್ಞಾತವಾಗಿದ್ದ ಸಂಜನಾ ಇಂದು ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

    ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದ ಸಂಜನಾ ಐದು ದಿನಗಳ ಬಳಿಕ ಕಾಣಿಸಿಕೊಂಡಿದ್ದಾರೆ. ಹೈಕೋರ್ಟ್ ಸೂಚನೆಯಂತೆ ಇಂದು ಎನ್‌ಡಿಪಿಎಸ್‌ ಕೋರ್ಟ್‌ ಸಂಜನಾ ಹಾಜರಾಗಿದ್ದರು.

    ಜಾಮೀನು ಪ್ರಕ್ರಿಯೆ ಮುಗಿಸಿಲು ಸಿಟಿ ಸಿವಿಲ್ ಕೋರ್ಟ್‌ಗೆ ಸಂಜನಾ ಇಂದು ಆಗಮಿಸಿದ್ದರು. ಕೋರ್ಟ್ ಹಾಲ್‌ಗೆ ಹೋಗುವ ಮುನ್ನ ಸಂಜನಾಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ನೆಗೆಟಿವ್ ರಿಪೋರ್ಟ್ ಬಂದ ನಂತರ  ಎನ್‌ಡಿಪಿಎಸ್‌ ಜಡ್ಜ್‌ ಮುಂದೆ ಸಂಜನಾ ಹಾಜರಾದರು. ಬುರ್ಕಾವನ್ನು ಧರಿಸಿ ಸಂಜನಾ ಕೋರ್ಟ್‌ಗೆ ಹಾಜರಾಗಿದ್ದು ವಿಶೇಷವಾಗಿತ್ತು.  ಇದನ್ನೂ ಓದಿ: ಬಲವಂತದಿಂದ ಇಸ್ಲಾಂಗೆ ಸಂಜನಾ ಮತಾಂತರ 

    ಸ್ಯಾಂಡಲ್ವುಡ್ ಡ್ರಗ್ ದಂಧೆ ಪ್ರಕರಣ ಸಂಬಂಧ ಜೈಲುಪಾಲಾಗಿದ್ದ ನಟಿ ಸಂಜನಾ ಗಲ್ರಾನಿಗೆ ಕರ್ನಾಟಕ ಹೈಕೋರ್ಟ್ ಡಿ.11 ರಂದು ಜಾಮೀನು ಮಂಜೂರು ಮಾಡಿತ್ತು. ಅನಾರೋಗ್ಯದಿಂದ ಬಳಲುತ್ತಿರುವ ಗಲ್ರಾನಿಗೆ ಶಸ್ತ್ರ ಚಿಕಿತ್ಸೆ ಮಾಡುವ ಅಗತ್ಯವಿದೆ ಎಂದು ವಾಣಿ ವಿಲಾಸ ಆಸ್ಪತ್ರೆ ವೈದ್ಯರು ಹೈಕೋರ್ಟ್ ಗೆ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕೋರ್ಟ್‌ ಜಾಮೀನು ನೀಡಿತ್ತು.

    ಸೆಪ್ಟೆಂಬರ್ 8 ರಂದು ಸಂಜನಾ ಗಲ್ರಾನಿ ಮನೆ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಸಂಜನಾ ಗಲ್ರಾನಿಯನ್ನು ವಿಚಾರಣೆಗೆ ಕರೆದು, ನಂತರ ಬಂಧಿಸಿದ್ದರು. ಸಿಸಿಬಿ ವಿಚಾರಣೆಯ ಬಳಿಕ ಸಂಜನಾ ನ್ಯಾಯಾಂಗ ಬಂಧನದಲ್ಲಿದ್ದರು.

  • ಹೊರಗಡೆ ಗಣೇಶನ ಚಿತ್ರ, ಒಳಗಡೆ 16 ಲಕ್ಷದ ಕೆನಡಾ ಡ್ರಗ್ಸ್ – ಬೆಂಗಳೂರಲ್ಲಿ ಆರೋಪಿ ಅರೆಸ್ಟ್

    ಹೊರಗಡೆ ಗಣೇಶನ ಚಿತ್ರ, ಒಳಗಡೆ 16 ಲಕ್ಷದ ಕೆನಡಾ ಡ್ರಗ್ಸ್ – ಬೆಂಗಳೂರಲ್ಲಿ ಆರೋಪಿ ಅರೆಸ್ಟ್

    ಆನೇಕಲ್: ಕೆನಡಾದಿಂದ ಲೈಸರ್ಜಿಕ್ ಡೈಥಲಾಮೈಡ್ (ಎಲ್‍ಎಸ್‍ಡಿ) ಡ್ರಗ್ಸ್ ತರಿಸಿದ್ದ ಖಾಸಗಿ ಆಸ್ಪತ್ರೆ ಸಿಬ್ಬಂದಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿ ಹೆಬ್ಬಗೋಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಆರೋಪಿಯನ್ನು ಅರುಣ್ ಆಂತೋಣಿ(22) ಎಂದು ಗುರುತಿಸಲಾಗಿದೆ. ಈತ ಮೂಲತಃ ಕೇರಳದ ಪೆರಂಬಾಡಿ ಚೇರಾ ಹೌಸ್‍ನ ಕೊಟ್ಟಾಯಂ ನಿವಾಸಿಯಾಗಿದ್ದಾನೆ. ಆನೇಕಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 7ರ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಯಲ್ಲಿನ ಸ್ಪರ್ಶ ಆಸ್ಪತ್ರೆಯ ಎಕ್ಸ್-ರೇ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದನು.

    ಕೆನಡಾದಲ್ಲಿ ಸಿಗುವ ಎಲ್‍ಎಸ್‍ಡಿ ಡ್ರಗ್ಸ್ ಅನ್ನು ಕೇರಳದಿಂದಲೇ ಬೇರೊಬ್ಬರಿಂದ ಬುಕ್ ಮಾಡಿಸಿ ಸ್ಪರ್ಶ ಆಸ್ಪತ್ರೆಯ ತನ್ನ ವಿಭಾಗದ ವಿಳಾಸಕ್ಕೆ 310 ಹಾಳೆಗಳನ್ನು ತರಿಸಿದ್ದನು.

    ಈ ಕುರಿತಂತೆ ಬೆಂಗಳೂರು ನಗರ ಮಾದಕ ದ್ರವ್ಯ ನಿಗ್ರಹ ದಳದ ಸಿಸಿಬಿ ಇನ್‍ಸ್ಪೆಕ್ಟರ್ ಲಕ್ಷ್ಮಿಕಾಂತಯ್ಯರಿಗೆ ಖಚಿತ ಮಾಹಿತಿ ದೊರಕಿದ್ದು, ಹೆಬ್ಬಗೋಡಿ ಸಿಐ ಗೌತಮ್ ಮತ್ತು ಸಿಬ್ಬಂದಿಯ ನೆರವಿನಿಂದ ಆಸ್ಪತ್ರೆಯಲ್ಲಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ. ಮುಂದಿನ ತನಿಖೆ ಕೈಗೊಂಡಿದ್ದಾರೆ.


    ಡ್ರಗ್ಸ್ ಹಾಳೆಯ ಮೇಲೆ ಹಳೆಯ ಛಾಪಾ ಕಾಗದದ ಮಾದರಿಯಲ್ಲಿ ಗಣೇಶನ ಚಿತ್ರ, ಮತ್ತಿತರೆ ಧಾರ್ಮಿಕ ಚಿತ್ರಗಳನ್ನು ಇರಿಸಲಾಗಿತ್ತು. ಯಾರಿಗೂ ಅನುಮಾನ ಬಾರದಂತೆ ಕಾಗದ ಒಳಗಡೆ ಡ್ರಗ್ಸ್ ಇರಿಸಲಾಗಿತ್ತು.

    ಒಟ್ಟು ಪಾರ್ಸೆಲ್ ಬಂದಿರುವ ಎಸ್‍ಎಲ್‍ಡಿ ಡ್ರಗ್ಸ್ ಮೌಲ್ಯ 16 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. 10×6ರ ಆಕಾರದಲ್ಲಿರುವ ಕಾಗದದಲ್ಲಿ ಮೊಬೈಲ್ ಸಿಮ್ ಸೈಜ್ ಹಾಳೆಯ ಚೂರನ್ನು ರಾಗಿ ಕಾಳಿನಷ್ಟು ಚಪ್ಪರಿಸಿದರೆ ಸಾಕು ಅರ್ಧ ಗಂಟೆಯಲ್ಲಿ ಮತ್ತೇರುತ್ತದೆ. ಈ ಡ್ರಗ್ಸ್ ಹತ್ತು ಗಂಟೆಗಳವರೆಗೂ ನಶೆಯಲ್ಲಿ ಇರಿಸುತ್ತದೆ ಎಂದು ತಿಳಿದು ಬಂದಿದೆ.

  • ಡ್ರಗ್ಸ್ ಪ್ರಕರಣ- ಹಾಸ್ಯ ಕಲಾವಿದೆ ಭಾರತಿ ಸಿಂಗ್, ಪತಿ ಹರ್ಷ್ ಬಂಧನ

    ಡ್ರಗ್ಸ್ ಪ್ರಕರಣ- ಹಾಸ್ಯ ಕಲಾವಿದೆ ಭಾರತಿ ಸಿಂಗ್, ಪತಿ ಹರ್ಷ್ ಬಂಧನ

    ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಯ ಕಲಾವಿದೆ ಭಾರತಿ ಸಿಂಗ್ ಹಾಗೂ ಪತಿ ಹರ್ಷ್ ಲಿಂಬಚಿಯಾ ಅವರನ್ನು ಬೆಳಗಿನಿಂದ ಎನ್‍ಸಿಬಿ ವಿಚಾರಣೆ ನಡೆಸಿದ್ದು, ಇದೀಗ ಇಬ್ಬರನ್ನೂ ಬಂಧಿಸಿದೆ.

    ಭಾರತಿ ಸಿಂಗ್ ಹಾಗೂ ಪತಿ ಹರ್ಷ್ ಇಬ್ಬರೂ ಡ್ರಗ್ಸ್ ಸೇವನೆ ಮಾಡುತ್ತಿದ್ದ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆ ಇಂದು ಬೆಳಗ್ಗೆ ಅಂಧೇರಿಯ ಭಾರತಿ ಸಿಂಗ್ ನಿವಾಸದ ಮೇಲೆ ಎನ್‍ಸಿಬಿ ದಾಳಿ ನಡೆಸಿತ್ತು. ಇದೀಗ ಭಾರತಿ ಹಾಗೂ ಹರ್ಷ್ ಅವರನ್ನು ಬಂಧಿಸಲಾಗಿದೆ. ದಾಳಿ ವೇಳೆ ಅವರ ಮನೆಯಲ್ಲಿ ಅಲ್ಪ ಪ್ರಮಾಣದ ಗಾಂಜಾ ಕೂಡ ವಶಪಡಿಸಿಕೊಳ್ಳಲಾಗಿದೆ.

    ಎನ್‍ಸಿಬಿ ವಿಭಾಗೀಯ ನಿರ್ದೇಶಕ ಸಮೀರ್ ವಾಂಖೇಡೆ ನೇತೃತ್ವದ ತಂಡ ದಾಳಿ ನಡೆಸಿದ್ದು, ಭಾರತಿ ಸಿಂಗ್ ಅವರ ಮನೆ ಮೇಲೆ ದಾಳಿ ನಡೆಸಿ ಹುಡುಕಾಟ ನಡೆಸಿತ್ತು. ಈ ವೇಳೆ ಮನೆಯಲ್ಲಿ ಅಲ್ಪ ಪ್ರಮಾಣದ ಗಾಂಜಾವನ್ನು ಸಹ ವಶಪಡಿಸಿಕೊಳ್ಳಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಭಾರತಿ ಸಿಂಗ್ ಮನೆ ಮಾತ್ರವಲ್ಲದೆ ಇನ್ನೂ ಎರಡು ಕಡೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣ ದಾಖಲಿಸಿಕೊಂಡಿದ್ದ ಎನ್‍ಸಿಬಿ ತನ್ನ ಬೇಟೆಯನ್ನು ಮುಂದುವರಿಸಿದೆ. ಈಗಾಗಲೇ ನಟಿ ರಿಯಾ ಚಕ್ರವರ್ತಿ ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ ಸಹ ಎನ್‍ಸಿಬಿ ವಿಚಾರಣೆಯನ್ನ ಎದುರಿಸಿದ್ದಾರೆ.

    ಕೆಲ ದಿನಗಳ ಹಿಂದೆ ನಟ ಅರ್ಜುನ್ ರಾಂಪಾಲ್ ಸಹ ಎನ್‍ಸಿಬಿ ಮುಂದೆ ಹಾಜರಾಗಿದ್ದರು. ನವೆಂಬರ್ 11 ಮತ್ತು 12ರಂದು ಎನ್‍ಸಿಬಿ ಅಧಿಕಾರಿಗಳ ಮುಂದೆ ರಾಂಪಾಲ್ ಗೆಳತಿ ಗ್ಯಾಬ್ರಿಯೆಲಾ ಸಹ ಹಾಜರಾಗಿದ್ದರು.

  • ವಿದೇಶದಿಂದ ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದ ಟೆಕ್ಕಿ ಬಂಧನ!

    ವಿದೇಶದಿಂದ ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದ ಟೆಕ್ಕಿ ಬಂಧನ!

    ಬೆಂಗಳೂರು: ವಿದೇಶದಿಂದ ಮಾದಕ ವಸ್ತುಗಳನ್ನು ತರಿಸಿ ಮಾರಾಟ ಮಾಡುತ್ತಿದ್ದ ಟೆಕ್ಕಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಸಾರ್ಥಕ್ ಆರ್ಯ ಬಂಧಿತ ಟೆಕ್ಕಿಯಾಗಿದ್ದು, ಫಾರಿನರ್ಸ್ ಪೋಸ್ಟ್ ಮೂಲಕ ನಗರಕ್ಕೆ ಡ್ರಗ್ಸ್ ತರಿಸುತ್ತಿದ್ದ ಎಂಬ ಮಾಹಿತಿ ಲಭಿಸಿದೆ. ಇತ್ತೀಚಿಗೆ ಬೆಲ್ಜಿಯಂನಿಂದ ನಗರಕ್ಕೆ ಬಂದ ಕೊರಿಯರ್ ಮೂಲಕ ಆರೋಪಿ ಡ್ರಗ್ಸ್ ತರಿಸಿದ್ದ. ಅನುಮಾನದಿಂದ ಪೊಲೀಸರು ಈ ಕೊರಿಯರ್ ಯನ್ನು ಟ್ರ್ಯಾಕ್ ಮಾಡಿ ನಗರದ ಚಾಮರಾಜಪೇಟೆ ಪೋಸ್ಟ್ ಅಫೀಸಿನಲ್ಲಿ ಪರಿಶೀಲನೆ ನಡೆಸಿದ್ದರು.

    ಚಾಮರಾಜಪೇಟೆ ಫಾರಿನರ್ಸ್ ಪೋಸ್ಟ್ ಆಫೀಸ್ ನಲ್ಲಿ ಸಿಸಿಬಿ ಪರಿಶೀಲನೆ ನಡೆಸಿದ ಬಳಿಕ ಟ್ರ್ಯಾಕ್ ರೆಕಾರ್ಡ್ ಮೂಲಕ ಹೆಚ್‍ಎಸ್‍ಆರ್ ಲೇಔಟ್‍ನ ಟೆಕ್ಕಿ ಮನೆಯಲ್ಲಿಪೊಲೀಸರು ಶೋಧ ನಡೆಸಿದ್ದರು. ಸಿಸಿಬಿ ವಿಶೇಷ ವಿಚಾರಣಾ ದಳದಿಂದ ಟೆಕ್ಕಿ ಮನೆಯಲ್ಲಿ ಶೋಧ ನಡೆಸಲಾಗಿತ್ತು. ಈ ವೇಳೆ ಟೆಕ್ಕಿ ಮನೆಯಲ್ಲಿ ವಿದೇಶಿ ಮೂಲದ ಮಾದಕವಸ್ತು ಪತ್ತೆಯಾಗಿದೆ ಎಂಬ ಮಾಹಿತಿ ಲಭಿಸಿದೆ.

    ಸಿಸಿಬಿ ಪೊಲೀಸರ ದಾಳಿಯ ಸಂದರ್ಭದಲ್ಲಿ 4.99 ಗ್ರಾಂ ಎಲ್‍ಎಸ್‍ಡಿ, ಎಂಎಚ್ ಸೀರಿಸ್ ಪಾಕೆಟ್ ಸ್ಕೇಲ್, ಬ್ರೌನ್ ಸ್ಮೋಕ್ ಪೇಪರ್ ಪಾಕೆಟ್, ಒಸಿಬಿ ಸ್ಲಿಮ್ ಸ್ಮೋಕ್ ಪೇಪರ್ ಪಾಕೆಟ್, ರಾ ಟಿಪ್ಸ್ ಸ್ಮೋಕ್ ಪೇಪರ್ ಪಾಕೆಟ್, 100ಎಂಎಲ್ ಕೆಮಿಕಲ್ ಆಯಿಲ್ ಜಪ್ತಿ ಮಾಡಲಾಗಿದೆ. ಈ ಬಗ್ಗೆ ಹೆಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಆರೋಪಿ ಸಾರ್ಥಕ್ ಆರ್ಯ ನಗರದ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

  • ಹನಿಮೂನ್‍ಗೆ ತೆರಳಿ ಜೈಲು ಸೇರಿದ ದಂಪತಿ

    ಹನಿಮೂನ್‍ಗೆ ತೆರಳಿ ಜೈಲು ಸೇರಿದ ದಂಪತಿ

    -ಸಂಬಂಧಿಕರಿಂದ ಗಿಫ್ಟ್ ಪಡೆದಿದ್ದೇ ಮುಳುವಾಯ್ತು

    ಮುಂಬೈ: ಹನಿಮೂನ್‍ಗೆ ತೆರಳಿದ್ದ ದಂಪತಿ ಕತಾರ್ ನಲ್ಲಿ ಜೈಲು ಸೇರಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಮುಂಬೈ ಮೂಲದ ಪ್ರವೀಣ್ ಕೌಸರ್ ಒಂದು ವರ್ಷದ ಹಿಂದೆ ತನ್ನ ಮಗಳ ಒನಿಬಾಗಳಿಗೆ ಶರೀಕ್‍ರೊಂದಿಗೆ ವಿವಾಹ ಮಾಡಿದ್ದರು. ಮದುವೆ ಬಳಿಕ ಮುಂಬೈನಲ್ಲೇ ನೆಲೆಸಿದ್ದ ದಂಪತಿ ಸುಖ ಸಂಸಾರ ನಡೆಸುತ್ತಿದ್ದರು. ಇತ್ತ ಒನಿಬಾ ಮದುವೆಯಾದ ಬಳಿಕ ಗರ್ಭಿಣಿಯಾಗಿದ್ದಳು, ಈ ವೇಳೆ ಅವರ ಸಂಬಂಧಿಕರು ತಡವಾಗಿ ಮದುವೆಯ ಉಡುಗೊರೆಯಾಗಿ ಕತಾರ್ ಗೆ ಹನಿಮೂನ್ ಟಿಕೆಟ್ ನೀಡಿದ್ದರು.

    ಸಂಬಂಧಿಕರಿಂದ ಟಿಕೆಟ್ ಪಡೆದು 2019ರ ಜುಲೈನಲ್ಲಿ 6 ರಂದು ಒನಿಬಾ, ಶರೀಕ್ ದಂಪತಿ ಕತಾರ್ ಗೆ ಹನಿಮೂನ್‍ಗೆ ತೆರಳಿದ್ದರು. ಆದರೆ ಅಲ್ಲಿನ ಹಮದ್ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಬಂದಿಳಿದ ವೇಳೆ ದಂಪತಿಯ ಲಗೇಜ್ ಪರಿಶೀಲಿಸಿದ ಕಸ್ಟಮ್ಸ್ ಅಧಿಕಾರಿಗಳಿಗೆ 4 ಕೆಜಿ ಮಾದಕ ವಸ್ತು ಪತ್ತೆಯಾಗಿತ್ತು.

    ಮಾದಕ ವಸ್ತು ಸಗಾಣೆ ಪ್ರಕರಣದಲ್ಲಿ ದಂಪತಿಯನ್ನು ಬಂಧಿಸಿದ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಪ್ರಕರಣದಲ್ಲಿ ನ್ಯಾಯಾಲಯ ದಂಪತಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 1 ಕೋಟಿ ರೂ. ದಂಡ ವಿಧಿಸಿದ್ದರು. ಆದರೆ ದಂಪತಿಗೆ ಅವರ ಸಂಬಂಧಿ ತಬಸ್ಸುಮ್ ಲಗೇಜ್ ನೀಡಿದ್ದರು. ಈ ವೇಳೆ ಬ್ಯಾಗ್‍ನಲ್ಲಿ ತಂಬಾಕು ಇದೆ. ಕತಾರ್ ನಲ್ಲಿರುವ ಸಂಬಂಧಿಕರಿಗೆ ನೀಡಲು ತಿಳಿಸಿದ್ದರು. ಇದನ್ನೇ ನಂಬಿದ್ದ ದಂಪತಿ ಮೋಸ ಹೋಗಿ ಜೈಲು ಸೇರಿದ್ದರು.

    ಪ್ರಕರಣ ಸಂಬಂಧ ಕಳೆದ ಒಂದು ವರ್ಷದಿಂದ ವಿಚಾರಣೆ ನಡೆಸಿದ ಮುಂಬೈ ಪೊಲೀಸರು ಹಾಗೂ ಎನ್‍ಸಿಬಿ ಸದ್ಯ ಬಂಧಿತ ದಂಪತಿಗಳಿಗೆ ಅವರ ಸಂಬಂಧಿ ತಬಸ್ಸುಮ್ ಮೋಸ ಮಾಡಿರುವುದನ್ನು ಖಚಿತ ಪಡಿಸಿದ್ದಾರೆ. ಎನ್‍ಸಿಬಿ ಅಧಿಕಾರಿಗಳು ನೀಡಿದ ಮಾಹಿತಿ ಅನ್ವಯ, ಪ್ರಕರಣದಲ್ಲಿ ಮುಂಬೈ ಪೊಲೀಸರು ತಬಸ್ಸುಮ್ ಹಾಗೂ ಆಕೆಯ ಆಪ್ತ ನಿಜಾಮ್ ಕಾರಾ ಎಂಬಾತನನ್ನು ಸೆಪ್ಟೆಂಬರಿನಲ್ಲಿ ಬಂಧಿಸಿದ್ದು, ಬಂಧಿತರಿಂದ 13 ಗ್ರಾಂ ಕೊಕೇನ್‍ನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಮಧ್ಯ ಪ್ರಾಚ್ಯ ರಾಷ್ಟ್ರಗಳ ಡ್ರಗ್ ಪೆಡ್ಲರ್ ಗಳೊಂದಿಗೆ ಬಂಧಿತರು ಲಿಂಕ್ ಹೊಂದಿರುವುದು ಬಹಿರಂಗವಾಗಿದೆ ಎಂದು ತಿಳಿಸಿದ್ದಾರೆ.

    ಸದ್ಯ ಎನ್‍ಸಿಬಿ ಅಧಿಕಾರಿಗಳು ಕತಾರ್ ನ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಬಂಧಿತ ದಂಪತಿಯ ಬಿಡುಗಡೆ ಮಾಡಿಸುವ ಪ್ರಯತ್ನದಲ್ಲಿದ್ದಾರೆ. ತಮ್ಮ ಮಕ್ಕಳನ್ನು ಜೈಲಿನಿಂದ ಬಿಡುಗಡೆಗೊಳಿಸಲು ಹೋರಾಟ ಮಾಡಿರುವ ಕುಟುಂಬಸ್ಥರು ಸದ್ಯ ನ್ಯಾಯ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

    ಈ ನಡುವೆ ಮಾರ್ಚ್‍ನಲ್ಲಿ ಒನಿಬಾ ಜೈಲಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಜೈಲಿನ ಅಧಿಕಾರಿಗಳು ಕುಟುಂಬಸ್ಥರಿಗೆ ತಮ್ಮ ಪುತ್ರಿಯೊಂದಿಗೆ ಮಾತನಾಡಲು ಅವಕಾಶ ನೀಡಿದ್ದು, 2 ಬಾರಿ ಮಾತುಕತೆ ನಡೆಸಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರವೀಣ್ ಕೌಸರ್, ಸದ್ಯ ನಮ್ಮ ಜೀವನದಲ್ಲಿ ಮೂಡಿದ್ದ ಕಪ್ಪು ಮೋಡಗಳು ದೂರವಾಗುತ್ತಿದ್ದು, ಕತಾರ್ ನ ಅಧಿಕಾರಿಗಳು ನಮ್ಮ ಮಕ್ಕಳನ್ನು ತವರಿಗೆ ವಾಪಸ್ ಕಳುಹಿಸುವ ಭರವಸೆ ಇದೆ ಎಂದು ತಿಳಿಸಿದ್ದಾರೆ.

  • ಪ್ರತಿಯೊಬ್ಬ ಮನುಷ್ಯನಿಗೂ ಡ್ರಗ್ಸ್ ಅವಶ್ಯಕತೆ ಇದೆ: ಅಮರೇಗೌಡ

    ಪ್ರತಿಯೊಬ್ಬ ಮನುಷ್ಯನಿಗೂ ಡ್ರಗ್ಸ್ ಅವಶ್ಯಕತೆ ಇದೆ: ಅಮರೇಗೌಡ

    ಕೊಪ್ಪಳ: ಪ್ರತಿಯೊಬ್ಬ ಮನುಷ್ಯನಿಗೂ ಡ್ರಗ್ಸ್ ಅವಶ್ಯಕತೆ ಇದೆ. ಡ್ರಗ್ಸ್ ಏನು ಮನುಷ್ಯನನ್ನ ಬಿಟ್ಟು ಇಲ್ಲ ಎಂದು ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಹಿಂದೆ ರಾಜಮಹಾರಾಜರ ಕಾಲದಿಂದಲೂ ನಶೆ ಮಾಡುವ ಪದ್ಧತಿ ಬಂದಿದೆ. ಡ್ರಗ್ಸ್ ಕೂಡ ಒಂದು ನಶೆ ಮಾಡುವ ವಸ್ತು, ಈಗ ಬೇರೆ ಬೇರೆ ವೆರೈಟಿ ನಶೆ ಮಾಡುವ ವಸ್ತುಗಳು ಕಂಡು ಹಿಡಿದಿದ್ದಾರೆ. ಡ್ರಗ್ಸ್ ವಸ್ತುವನ್ನ ಸಿನಿಮಾ ನಟ-ನಟಿಯರು ಹೆಚ್ಚು ಉಪಯೋಗ ಮಾಡುತ್ತಿರುವುದು ತಪ್ಪು ಎಂದರು.

    ಸಮಾಜದಲ್ಲಿ ಒಳ್ಳೆಯ ಸಂದೇಶ ಕೊಡುವ ಸಿನಿಮಾ ಮಾಡಿ ಈಗ ಅದೇ ನಟಿಯರು ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದು ತಪ್ಪು. ಯಾವುದೇ ಮಾಧ್ಯಮದವರು ಇದನ್ನು ಪ್ರಸಾರ ಮಾಡಬಾರದು. ಅವರಿಗೆ ಅಂಜಿಕೆ ಆಗಬೇಕು. ಗೌಪ್ಯವಾಗಿ ಶಿಕ್ಷೆ ನೀಡಬೇಕು ಎಂದು ಹೇಳಿದರು.

    ರಾಜಕಾರಣಿಗಳು ವೈಯಕ್ತಿಕವಾಗಿ ಡ್ರಗ್ಸ್ ತೆಗೆದುಕೊಳ್ಳುವವರು ಇದ್ದೇ ಇರುತ್ತಾರೆ. ಎಲ್ಲೋ ಒಬ್ಬ ಮಹಾತ್ಮಗಾಂಧಿ ತರಹ ಇರುತ್ತಾರೆ. ಅದಕ್ಕೆ ನಾವೇನು ಮಾಡಕ್ಕಾಗಲ್ಲ. ಡ್ರಗ್ಸ್ ವಿಚಾರದಲ್ಲಿ ಈಗ ಜಾಗೃತಿ ಬಂದಿದೆ. ಇದನ್ನ ಇಲ್ಲೆ ಬಿಟ್ಟು ಬೇರೆ ವಿಷಯವನ್ನ ಸೃಷ್ಟಿ ಮಾಡಬೇಕೆಂದರು.

    ಮನುಷ್ಯರಂದ್ರೆ ನಶೆಗೆ ದಾಸನಾಗೋದು ಸಹಜ. ತಿಳುವಳಿಕೆ ಇದ್ದೋರು ಕಡಿಮೆ ಮಾಡ್ತಾರೆ, ತಿಳುವಳಿಕೆ ಇಲ್ಲದೋರು ಹೆಚ್ಚು ಮಾಡುತ್ತಾರೆ. ನಾನಂತು ಅಫೀಮು, ಸಿಗರೇಟು ಸೇದುವವನಲ್ಲ. ಯಾವ ಕ್ಲಬ್ ಗೂ ಹೋಗುವವನಲ್ಲ, ನನ್ನದೇನಾದರೂ ಇದ್ದರೆ ಹೊರಹಾಕಿ ಎಂದು ಸವಾಲೆಸೆದರು.

  • ವಾಟ್ಸಪ್ ಡ್ರಗ್ಸ್ ಗ್ರೂಪ್‍ಗೆ ದೀಪಿಕಾ ಅಡ್ಮಿನ್ – ಎನ್‍ಸಿಬಿ ಮಾಹಿತಿ ರಿವೀಲ್

    ವಾಟ್ಸಪ್ ಡ್ರಗ್ಸ್ ಗ್ರೂಪ್‍ಗೆ ದೀಪಿಕಾ ಅಡ್ಮಿನ್ – ಎನ್‍ಸಿಬಿ ಮಾಹಿತಿ ರಿವೀಲ್

    – ರಿಯಾಗೆ ಡ್ರಗ್ಸ್ ನೀಡುತ್ತಿದ್ದುದಾಗಿ ಒಪ್ಪಿಕೊಂಡ ರಕುಲ್

    ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಸಿಬಿ ತನಿಖೆಯನ್ನು ಚುರುಕುಗೊಳಿಸಿದ್ದು, ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ರಕುಲ್‍ಪ್ರೀತ್ ಸಿಂಗ್ ಹಾಗೂ ಸಾರಾ ಅಲಿ ಖಾನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದ್ದು, ಡ್ರಗ್ಸ್ ಕುರಿತು ಚಾಟ್ ಮಾಡುತ್ತಿದ್ದ ವಾಟ್ಸಪ್ ಗ್ರೂಪ್‍ಗೆ ದೀಪಾಕಾ ಪಡುಕೋಣೆ ಅಡ್ಮಿನ್ ಆಗಿದ್ದರು ಎಂದು ಸ್ವತಃ ಎನ್‍ಸಿಬಿ ಮೂಲಗಳು ತಿಳಿಸಿವೆ.

    ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವಾಗಲೇ ಡ್ರಗ್ಸ್ ದಂಧೆ ಕುರಿತು ಸ್ಫೋಟಕ ಮಾಹಿತಿ ಲಭ್ಯವಾಗುತ್ತಿದ್ದು, ಸುಶಾಂತ್ ಸಿಂಗ್ ರಜಪೂತ್ ಪ್ರಿಯತಮೆ, ನಟಿ ರಿಯಾ ಚಕ್ರವರ್ತಿ ಹಾಗೂ ಇತರ ಡ್ರಗ್ ಪೆಡ್ಲರ್‍ಗಳನ್ನು ವಿಚಾರಣೆ ನಡೆಸುತ್ತಿದ್ದಾಗ ಬಾಲಿವುಡ್‍ನ ಹಲವು ನಟ, ನಟಿಯರು ಹಾಗೂ ನಿರ್ಮಾಪಕರು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ಕುರಿತು ಮಾಹಿತಿ ಲಭ್ಯವಾಗುತ್ತಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಸಿಬಿ ಈಗಾಗಲೇ ಹತ್ತಾರು ನಟಿಯರನ್ನು ವಿಚಾರಣೆ ನಡೆಸಿದೆ.

    ಈ ಹಿಂದೆ ನಟಿ ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್‍ ಗೆ ನೋಟಿಸ್ ನೀಡಿತ್ತು. ನಂತರ ಸ್ವತಃ ದೀಪಿಕಾ ಪಡುಕೋಣೆಯವರಿಗೇ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ. ಈ ವೇಳೆ ವಾಟ್ಸಪ್ ಕುರಿತು ಮಹತ್ವದ ಮಾಹಿತಿ ಹೊರ ಬಿದ್ದಿದ್ದು, ಡ್ರಗ್ಸ್ ಕುರಿತ ಮೂವರಿದ್ದ ಗ್ರೂಪ್‍ಗೆ ದೀಪಿಕಾ ಪಡುಕೋಣೆಯವರೇ ಅಡ್ಮಿನ್ ಆಗಿದ್ದರು ಎಂದು ತಿಳಿದು ಬಂದಿದೆ. ಈ ವಾಟ್ಸಪ್ ಗ್ರೂಪ್‍ನಲ್ಲಿ ನಟಿಯ ಮ್ಯಾನೇಜರ್ ಕರಿಷ್ಮಾ ಪ್ರಕಾಶ್, ಜಯಾ ಸಾಹ ಅವರೂ ಭಾಗಿಯಾಗಿದ್ದಾರೆ. ಈ ಕುರಿತು ಎನ್‍ಸಿಬಿ ಈಗಾಗಲೇ ಕರಿಷ್ಮಾ ಅವರ ವಿಚಾರಣೆ ನಡೆಸಿದೆ. ದೀಪಿಕಾ ಅವರು ಶನಿವಾರ ವಿಚಾರಣೆಗೆ ಹಾಜರಾಗಲಿದ್ದಾರೆ.

    ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿಯವರೊಂದಿಗೆ ಡ್ರಗ್ಸ್ ಕುರಿತು ಮಾತನಾಡಿರುವುದಾಗಿ ರಕುಲ್ ಪ್ರೀತ್ ಸಿಂಗ್ ಒಪ್ಪಿಕೊಂಡಿದ್ದಾರೆ. ನನ್ನೊಂದಿಗೆ ಡ್ರಗ್ಸ್ ಇಟ್ಟುಕೊಂಡಿರುತ್ತಿದ್ದೆ ಆದರೆ ಸೇವಿಸಿಲ್ಲ, ಇದನ್ನು ರಿಯಾಗಾಗಿ ಇಟ್ಟುಕೊಂಡಿರುತ್ತಿದ್ದೆ ಎಂದು ಹೇಳಿದ್ದಾರೆ. ರಕುಲ್ ಅವರನ್ನು ಶುಕ್ರವಾರ ಬೆಳಗ್ಗೆ ವಿಚಾರಣೆಗೆ ಒಳಪಡಿಸಲಾಗಿದೆ.

    ಡ್ರಗ್ಸ್ ಪ್ರಕರಣದಲ್ಲಿ ಬಂಧಿತಳಾಗಿರುವ ರಿಯಾ ಚಕ್ರವರ್ತಿ ಹೇಳಿಕೆಯನ್ನಾಧರಿಸಿ ಎನ್‍ಸಿಬಿ ಸಮನ್ಸ್ ನೀಡಿದೆ ಎನ್ನಲಾಗಿದೆ. ರಿಯಾ ವಿಚಾರಣೆ ವೇಳೆ ಡ್ರಗ್ಸ್ ಸೇವನೆ ಮಾಡುತ್ತಿದ್ದ ಸುಮಾರು 25 ತಾರೆಯರ ಹೆಸರು ಹೇಳಿದ್ದಾರೆ ಎಂದು ವರದಿಯಾಗಿದೆ. ಡ್ರಗ್ಸ್ ಖರೀದಿಗಾಗಿ ಎರಡು ದಿನಗಳ ಹಿಂದೆ ದೀಪಿಕಾ ಮತ್ತು ಶ್ರದ್ಧಾ ಕಪೂರ್ ವಾಟ್ಸಪ್ ಚಾಟ್ ಮಾಹಿತಿಯನ್ನು ಖಾಸಗಿ ವಾಹಿನಿ ಬಿತ್ತರಿಸಿತ್ತು. ಇತ್ತ ರಕುಲ್ ಪ್ರೀತ್ ಸಿಂಗ್ ಮಾಧ್ಯಮಗಳಿಂದ ತಮ್ಮ ತೇಜೋವಧೆ ಆಗುತ್ತಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.

    ಮ್ಯಾನೇಜರ್ ಕರಿಷ್ಮಾ ಬಳಿ ಮಾಲ್ ಇದೆಯಾ ಎಂದು ದೀಪಿಕಾ ಕೇಳಿರುವ ವಾಟ್ಸಪ್ ಚಾಟ್‍ನ ಸ್ಕ್ರೀನ್‍ಶಾಟ್ ಇತ್ತೀಚೆಗೆ ರಿವೀಲ್ ಆಗಿತ್ತು. ಹ್ಯಾಶ್ ಕೇಳಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿತ್ತು.

  • ಡ್ರಗ್ಸ್‌ ಕೇಸ್‌ – ನಿರೂಪಕಿ ಅನುಶ್ರೀಗೆ ನೋಟಿಸ್‌ ಜಾರಿ

    ಡ್ರಗ್ಸ್‌ ಕೇಸ್‌ – ನಿರೂಪಕಿ ಅನುಶ್ರೀಗೆ ನೋಟಿಸ್‌ ಜಾರಿ

    ಬೆಂಗಳೂರು: ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಿರೂಪಕಿ, ನಟಿ ಅನುಶ್ರೀ ಅವರಿಗೆ ಮಂಗಳೂರಿನ ಸಿಸಿಬಿ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ.

    ಡ್ಯಾನ್ಸರ್‌ ಕಿಶೋರ್ ಶೆಟ್ಟಿ ಬಂಧಿಸಿರುವ ಮಂಗಳೂರಿನ ಸಿಸಿಬಿ ಪೊಲೀಸರು ಈ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಅನುಶ್ರೀ ಅವರಿಗೆ ವಾಟ್ಸಪ್‌ನಲ್ಲಿ ನೋಟಿಸ್‌ ಕಳುಹಿಸಿದ್ದಾರೆ.

    ಕಿಶೋರ್ ಅಮನ್ ಶೆಟ್ಟಿ ಆಪ್ತ ಸ್ನೇಹಿತ ತರುಣ್ ಅನುಶ್ರೀಯ ಜೊತೆ ಪಾರ್ಟಿ ಮಾಡಿದ್ದ. ವಿಚಾರಣೆಯ ಸಂದರ್ಭದಲ್ಲಿ ಈ ವಿಚಾರ ತಿಳಿಸಿದ್ದಕ್ಕೆ ಸಿಸಿಬಿಯಿಂದ ಅನುಶ್ರೀಗೆ ನೋಟಿಸ್‌ ಜಾರಿ ಮಾಡಲಾಗಿದೆ.

    ಅನುಶ್ರೀಗೆ ಖುದ್ದು ನೋಟಿಸ್ ನೀಡಲು ಬೆಂಗಳೂರಿಗೆ ಸಿಸಿಬಿ ತಂಡ ಈಗ ಹೊರಟಿದೆ.

  • ಡ್ಯಾನ್ಸರ್ ಕಿಶೋರ್ ಶೆಟ್ಟಿ ಗೆಳತಿ ಅರೆಸ್ಟ್

    ಡ್ಯಾನ್ಸರ್ ಕಿಶೋರ್ ಶೆಟ್ಟಿ ಗೆಳತಿ ಅರೆಸ್ಟ್

    ಮಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿರುವ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಯ ಗೆಳತಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಕಿಶೋರ್ ಗೆಳತಿ ಮಂಗಳೂರಿನ ಸ್ಪಾದಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

    ಮಣಿಪುರ ಮೂಲದ ಆಸ್ಕಾ ಬಂಧಿತ ಯುವತಿ. ಕಿಶೋರ್ ಶೆಟ್ಟಿ ಜೊತೆ ಡ್ರಗ್ಸ್ ಪಾರ್ಟಿಯಲ್ಲಿ ಆಸ್ಕಾ ಭಾಗಿಯಾಗುತ್ತಿದ್ದಳು. ಲಾಕ್‍ಡೌನ್ ಸಂದರ್ಭದಲ್ಲಿಯೂ ನಡೆಯುತ್ತಿದ್ದ ಪಾರ್ಟಿಗಳಿಗೆ ಆಸ್ಕಾ ತನ್ನ ಗೆಳತಿಯರ ಜೊತೆ ಆಗಮಿಸುತ್ತಿದ್ದಳು. ಈ ಸಂಬಂಧ ಆಸ್ಕಾಳ ಸ್ನೇಹಿತರಿಗೆ ನೋಟಿಸ್ ನೀಡಲು ತಯಾರಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

    ಸೆಪ್ಟೆಂಬರ್ 19ರಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಬಂಧಿತರಿಂದ ಎಂಡಿಎಂ ಪೌಡರ್, ಬೈಕ್, 2 ಮೊಬೈಲ್ ಫೋನ್ ಸೇರಿದಂತೆ 1 ಲಕ್ಷ ಮೌಲ್ಯದ ವಸ್ತು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆರೋಪಿಗಳು ಮುಂಬೈಯಿಂದ ವಸ್ತುಗಳನ್ನು ಖರೀದಿಸಿ ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಇಬ್ಬರ ಮೇಲೆ ಸೇವನೆ ಮತ್ತು ಮಾರಾಟ ಎರಡೂ ಪ್ರಕರಣ ದಾಖಲಾಗಿದೆ.

    ಆರೋಪಿ ಅಕೀಲ್ ನೌಶೀಲ್ ಈ ಹಿಂದೆ ವಿದೇಶದಲ್ಲಿ ಸೇಫ್ಟಿ ಆಫೀಸರ್ ಆಗಿದ್ದ. ಒಂದು ವರ್ಷದ ಊರಿಗೆ ಬಂದಿದ್ದ ಈತ, ಕಿಶೋರ್ ಅಮನ್ ಶೆಟ್ಟಿ ಜೊತೆ ಡ್ಯಾನ್ಸರ್, ಕೋರಿಯೋಗ್ರಾಫರ್ ಆಗಿ ಕೆಲಸ ಮಾಡಿಕೊಂಡಿದ್ದ. ಅಲ್ಲದೆ ಅಕೀಲ್ ನೌಶೀಲ್ ಜೊತೆ ಸೇರಿ ಮಾದಕ ವಸ್ತು ಖರೀದಿಸಿ ಮಾರಾಟ ಮಾಡುತ್ತಿದ್ದ. ಬೆಂಗಳೂರು, ಮುಂಬೈಯಿಂದ ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳಿದ್ದಾರೆ. ಇವರ ಚೈನ್ ಲಿಂಕ್ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ ಎಂದು ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದರು.