Tag: drugs

  • ಲೆಹೆಂಗಾದಲ್ಲಿ ಡ್ರಗ್ಸ್ ಇಟ್ಟು ಸಾಗಾಟ – ಹೈದರಾಬಾದ್ ಟು ಆಸ್ಟ್ರೇಲಿಯಾಗೆ ಸಪ್ಲೈ

    ಲೆಹೆಂಗಾದಲ್ಲಿ ಡ್ರಗ್ಸ್ ಇಟ್ಟು ಸಾಗಾಟ – ಹೈದರಾಬಾದ್ ಟು ಆಸ್ಟ್ರೇಲಿಯಾಗೆ ಸಪ್ಲೈ

    – ಬೆಂಗಳೂರಿನಲ್ಲೇ ಸಿಕ್ಕಿಬಿತ್ತು ಮಾದಕ..!

    ಬೆಂಗಳೂರು: ಡ್ರಗ್ಸ್ ಪೊಲೀಸರು ಎಷ್ಟೇ ಪ್ರಯತ್ನ ಮಾಡಿದ್ರು ಡ್ರಗ್ಸ್ ಪೆಡ್ಲರ್ ಗಳು ಮಾತ್ರ ಪೊಲೀಸರ ಕಣ್ತಪ್ಪಿಸಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅರಾಮಾಗಿ ಸಪ್ಲೈ ಮಾಡ್ತಾನೆ ಇದ್ದಾರೆ. ಬೆಂಗಳೂರು ಎನ್‍ಸಿಬಿ ಅಧಿಕಾರಿಗಳು ಇಂದು ಮತ್ತೊಂದು ಡ್ರಗ್ಸ್ ಜಾಲವನ್ನು ಪತ್ತೆ ಮಾಡಿದ್ದಾರೆ. ಲೆಹೆಂಗಾದ ಫಾಲ್ಸ್ ಲೈನ್‍ನಲ್ಲಿ ಡ್ರಗ್ಸ್ ಇಟ್ಟು ಆಸ್ಟ್ರೇಲಿಯಾಗೆ ಪಾರ್ಸಲ್ ಮಾಡ್ತಿದ್ದ ಖತರ್ನಾಕ್ ಡ್ರಗ್ ಪೆಡ್ಲರ್‍ನನ್ನ ಬಂಧಿಸಿದ್ದಾರೆ.

    ಬೆಂಗಳೂರಿನಿಂದ ಸ್ವಿಫ್ಟ್ ಕಾರಿನಲ್ಲಿ ಹೈದರಾಬಾದ್‍ಗೆ ಡ್ರಗ್ಸ್ ಸಾಗಿಸಲಾಗ್ತಿತ್ತು. ಹೈದ್ರಾಬಾದ್‍ನಿಂದ ಆಸ್ಟ್ರೇಲಿಯಾಗೆ ಡ್ರಗ್ಸ್ ರೀಚ್ ಆಗ್ಬೇಕಿತ್ತು. ಮಾಲ್ ಸಾಗಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎನ್‍ಸಿಬಿ ಪೊಲೀಸರು ದೇವನಹಳ್ಳಿ ಟೋಲ್ ಬಳಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೂರು ಲೆಹೆಂಗಾಗಳಲ್ಲಿ ಇರಿಸಲಾಗಿದ್ದ ಸ್ಯೂಡೋಫೆಡ್ರಿನ್ ಎಂಬ ಸುಮಾರು 3 ಕೆಜಿ ಬಿಳಿ ಬಣ್ಣದ ಹರಳಿನ ರೂಪದಲ್ಲಿರುವ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ.

    ಇನ್ನು ಚೆನ್ನೈನಿಂದ ಡ್ರಗ್ಸ್ ರವಾನಿಸಲಾಗಿತ್ತು ಎಂಬ ಮಾಹಿತಿ ಸಿಕ್ಕಿದೆ. ಅದೇನೇ ಇರಲಿ ಉದ್ಯಾನನಗರಿ, ಸಿಲಿಕಾನ್ ಸಿಟಿ ಅಂತಾ ಕರೆಸಿಕೊಳ್ಳುವ ನಮ್ಮ ಬೆಂಗಳೂರಿನಿಂದಲೇ ಬೇರೆ ಬೇರೆ ಕಡೆ ಡ್ರಗ್ಸ್ ಸಪ್ಲೈ ಆಗ್ತಿರೋದು ವಿಪರ್ಯಾಸ. ಇದನ್ನೂ ಓದಿ: ಡಿಲೇ ಆಗಿದ್ದಕ್ಕೆ ಯಾವ ಮಾನಮರ್ಯಾದೆ ಹೋಗಲ್ಲ, ಬದನೆಕಾಯಿಯೂ ಆಗಿಲ್ಲ: ಸುದೀಪ್

  • ಧರ್ಮದ ಅಫೀಮು ತಿಂದು ಅಮಲಿನಲ್ಲಿ ತೇಲಾಡುತ್ತಿರೋ ಬಿಜೆಪಿಗರು ನಿಜವಾದ ಡ್ರಗ್ಗಿಸ್ಟ್‌ಗಳು: ಶ್ರೀನಿವಾಸ್ ಬಿ.ವಿ

    ಧರ್ಮದ ಅಫೀಮು ತಿಂದು ಅಮಲಿನಲ್ಲಿ ತೇಲಾಡುತ್ತಿರೋ ಬಿಜೆಪಿಗರು ನಿಜವಾದ ಡ್ರಗ್ಗಿಸ್ಟ್‌ಗಳು: ಶ್ರೀನಿವಾಸ್ ಬಿ.ವಿ

    – ಕಟೀಲಿನಂತಹ ಪವಿತ್ರ ಕ್ಷೇತ್ರದಿಂದ ಬಂದು ಅಪವಿತ್ರ ಮಾತು

    ನವದೆಹಲಿ: ಧರ್ಮದ ಅಫೀಮು ತಿಂದು ಅಮಲಿನಲ್ಲಿ ತೇಲಾಡುತ್ತಿರುವ ಬಿಜೆಪಿಗರು ನಿಜವಾದ ಡ್ರಗ್ಗಿಸ್ಟ್‌ಗಳು ಎಂದು ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ವಾಗ್ದಾಳಿ ನಡೆಸಿದ್ದಾರೆ.

    ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು. ಕಟೀಲಿನಂತಹ ಪವಿತ್ರ ಕ್ಷೇತ್ರದಿಂದ ಬಂದು ನಳಿನ್ ಕುಮಾರ್ ಅಪವಿತ್ರ ಮಾತುಗಳನ್ನಾಡುತ್ತಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿರುವುದು ಖಂಡನೀಯ, ನಿಜವಾದ ಡ್ರಗ್ಗಿಸ್ಟ್ ಗಳು ಬಿಜೆಪಿಯವರು, ಸಂಘ ಪರಿವಾರದವರು. ಇನ್ನೊಮ್ಮೆ ಮಾತನಾಡುವಾಗ ನಳಿನ್ ಕುಮಾರ್ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ನಳಿನ್ ಕುಮಾರ್ ಕಟೀಲ್ ಒಬ್ಬ ಅವಿವೇಕಿ, ಮಾನಸಿಕ ಅಸ್ವಸ್ಥ: ದಿನೇಶ್ ಗುಂಡೂರಾವ್

    ರಾಜ್ಯದಲ್ಲಿ ಬಹಳಷ್ಟು ಸಮಸ್ಯೆಗಳಿದೆ. ನಿರುದ್ಯೋಗ ಹೆಚ್ಚಾಗಿದೆ. ಅತ್ಯಾಚಾರಗಳು ನಡೆಯುತ್ತಿವೆ. ಇದೆಲ್ಲದರ ಬಗ್ಗೆ ಮಾತನಾಡಬೇಕಿರುವ ಬಿಜೆಪಿ ಅಧ್ಯಕ್ಷರು ಜನರ ದಾರಿ ತಪ್ಪಿಸಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಇಡೀ ದೇಶದಲ್ಲಿರುವ ಬಿಜೆಪಿ ಅಧ್ಯಕ್ಷರ ಪೈಕಿ ನಳಿನ್ ಕುಮಾರ್ ಕಟೀಲ್ ವ್ಯರ್ಥ ಅಧ್ಯಕ್ಷ ಎಂದು ಟೀಕಿಸಿದರು. ಇದನ್ನೂ ಓದಿ: ಆರ್‌ಎಸ್‌ಎಸ್‌ ಕಲಿಸಿಕೊಟ್ಟಿರೋದೇ ನೀಲಿಚಿತ್ರ ನೋಡೋದು: ಹೆಚ್‍ಡಿಕೆ

    ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ನಿಜವಾಗಿ ಮಾನ ಮರ್ಯಾದೆ ಇದ್ದರೆ ನಳಿನ್ ಕುಮಾರ್ ಕಟೀಲ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಾವು ನಿಮ್ಹಾನ್ಸ್ ನಲ್ಲಿಟ್ಟು ಅವರ ತಲೆ ಸರಿ ಮಾಡುತ್ತೇವೆ ಎಂದು ಕಿಡಿಕಾರಿದರು. ಅಲ್ಲದೇ ಕಾನೂನು ಹೋರಾಟದ ಎಚ್ಚರಿಕೆಯನ್ನೂ ಶ್ರೀನಿವಾಸ್ ನೀಡಿದ್ದಾರೆ.  ಇದನ್ನು ಓದಿ: ಶೇ.40 ರಷ್ಟು ಮಹಿಳೆಯರಿಗೆ ಟಿಕೆಟ್ – ಯುಪಿಯಲ್ಲಿ ಪ್ರಿಯಾಂಕಾ ಗಾಂಧಿ ಕ್ರಾಂತಿಕಾರಿ ನಿರ್ಧಾರ

  • ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಅರೆಸ್ಟ್

    ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಅರೆಸ್ಟ್

    ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್‍ನನ್ನು ಎನ್‍ಸಿಬಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.

    ಐಷಾರಾಮಿ ಹಡಗಿನಲ್ಲಿ ಡ್ರಕ್ಸ್ ಪಾರ್ಟಿ ಮಾಡುತ್ತಿದ್ದಾಗ ಆರ್ಯನ್ ಖಾನ್ ಸಹಿತ 8 ಜನ ಎನ್‍ಸಿಬಿ ಬಲೆಗೆ ಬಿದ್ದಿದ್ದರು. ಇದೀಗ ಆರ್ಯನ್ ಖಾನ್ ಸಹಿತ 8 ಮಂದಿ ಆರೋಪಿಗಳನ್ನು ಎನ್‍ಸಿಬಿ ಅರೆಸ್ಟ್ ಮಾಡಿದೆ. ಆರ್ಯನ್ ಮಾದಕ ವಸ್ತು ಸೇವೆ ಮಾಡಿರೋದು ದೃಢಪಟ್ಟಿದ್ದು, ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ವಶಕ್ಕೆ ಪಡೆದಿದ್ದೇವೆ: ಎನ್‍ಸಿಬಿ ಮುಖ್ಯಸ್ಥ ಪ್ರಧಾನ್

    ಈ ಕುರಿತು ಮಾಹಿತಿ ನೀಡಿರುವ ಎನ್‍ಸಿಬಿ ಮುಖ್ಯಸ್ಥ ಎಸ್.ಎನ್.ಪ್ರಧಾನ್, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಕೇಸ್- ಪ್ರಯಾಣಿಕರ ಸೋಗಿನಲ್ಲಿ ಟಿಕೆಟ್ ಬುಕ್, ಎನ್‍ಸಿಬಿ ರೋಚಕ ಕಾರ್ಯಾಚರಣೆ

    ಸಮುದ್ರದಲ್ಲಿ ಹಡಗಿನಲ್ಲಿ ತೇಲುತ್ತ ಬಾಲಿವುಡ್ ನಟರು, ಉದ್ಯಮಿಗಳ ಮಕ್ಕಳು ಡ್ರಗ್ಸ್ ಪಾರ್ಟಿ ಮಾಡಿದ್ದರು. ಐಷಾರಾಮಿ ಹಡಗಿನಲ್ಲಿ ಎನ್‍ಸಿಬಿ ಕಾರ್ಯಾಚರಣೆಯೇ ರೋಚಕವಾಗಿತ್ತು. ಎನ್‍ಸಿಬಿ ಸಮೀರ್ ವಾಂಖೆಡೆ ಟೀಮ್ ಮಾರುವೇಷದಲ್ಲಿ ಹಡಗಿನಲ್ಲಿ ಪ್ರಯಾಣಿಸಿ ಆಪರೇಷನ್ ನಡೆಸಿತ್ತು. ಕಾರ್ಯಾಚರಣೆಯಲ್ಲಿ ಯಶಸ್ವಿ ಸಹ ಆಗಿದ್ದು, ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಸೇರಿದಂತೆ ಹಲವು ಪ್ರತಿಷ್ಟಿತರ ಮಕ್ಕಳನ್ನು ವಶಕ್ಕೆ ಪಡೆಯಲಾಗಿತ್ತು.

    ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದ ಐಷಾರಾಮಿ ಹಡಗಿನಲ್ಲಿ ಸಮುದ್ರದ ಮಧ್ಯದಲ್ಲಿ ಡ್ರಗ್ಸ್ ಪಾರ್ಟಿ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಎನ್‍ಸಿಬಿ ಅಧಿಕಾರಿಗಳು ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಕೊಕೇನ್, ಎನ್‍ಡಿಎಂ, ಹಾಶಿಶ್ ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಹೈ ಪ್ರೊಫೈಲ್ ಡ್ರಗ್ಸ್ ಕೇಸ್- ಶಾರುಖ್ ಖಾನ್ ಪುತ್ರನಿಗೆ ಬಂಧನ ಭೀತಿ

  • ಬಾಗಲಕೋಟೆಗೆ ಡ್ರಗ್ಸ್ ನಂಟು- ನಿರಾಣಿ ಕ್ಷೇತ್ರದಲ್ಲಿ ಪಂಜಾಬ್ ಮೂಲದ ಇಬ್ಬರು ಪೊಲೀಸರ ವಶಕ್ಕೆ

    ಬಾಗಲಕೋಟೆಗೆ ಡ್ರಗ್ಸ್ ನಂಟು- ನಿರಾಣಿ ಕ್ಷೇತ್ರದಲ್ಲಿ ಪಂಜಾಬ್ ಮೂಲದ ಇಬ್ಬರು ಪೊಲೀಸರ ವಶಕ್ಕೆ

    – ಕಾಲೇಜು ವಿದ್ಯಾರ್ಥಿಗಳೇ ಇವರ ಟಾರ್ಗೆಟ್

    ಬಾಗಲಕೋಟೆ: ಜಿಲ್ಲೆಗೂ ಡ್ರಗ್ಸ್ ನಂಟು ಇದೆಯಾ ಎನ್ನುವ ಅನುಮಾನ ಇದೀಗ ಕಾಡತೊಡಗಿದೆ. ಸಚಿವ ಮುರುಗೇಶ್ ನಿರಾಣಿ ಕ್ಷೇತ್ರದ ಬೀಳಗಿ ಪಟ್ಟಣಕ್ಕೆ ಪಂಜಾಬಿನಿಂದ ಪೂರೈಕೆಯಾಗುವುದನ್ನು ಅಬಕಾರಿ ಇಲಾಖೆ ಪೊಲೀಸರು ಭೇದಿಸಿದ್ದಾರೆ.

    ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಅಬಕಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಯಿಸಿ ಅಫೀಮು ಪೌಡರ್ ಜಾಲ ಭೇದಿಸಿದ್ದಾರೆ. ಅಫೀಮು ಮಾರಲು ಬಂದಿದ್ದ ಪಂಜಾಬ್ ಮೂಲದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಅಂದಾಜು ನಾಲ್ಕರಿಂದ ಐದು ಲಕ್ಷ ರೂ. ಮೌಲ್ಯದ ಅಫೀಮ್ ಪೌಡರ್ ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಪಟಾಕಿ ಅಂಗಡಿಯಲ್ಲಿ ಸ್ಫೋಟದಿಂದ ಇಬ್ಬರು ಸಾವು- ತಲಾ 2 ಲಕ್ಷ ಪರಿಹಾರ ಘೋಷಿಸಿದ ಜಮೀರ್

    ಬೀಳಗಿ ಅಬಕಾರಿ ಸಿಪಿಐ ಸದಾಶಿವ ಕೊರ್ತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಅಫೀಮು ಪೌಡರ್ ಮಾರಾಟ ಮಾಡುತ್ತಿದ್ದವರು ಪಂಜಾಬ್ ಮೂಲದ ಪಟಿಯಾಲಾದವರಾಗಿದ್ದಾರೆ. ಸುಮಾರು ಐದಾರು ದಿನಗಳಿಂದ 10 ಕೆ.ಜಿ ಅಫೀಮು ಪೌಡರ್ ಇಟ್ಟುಕೊಂಡು ಬೀಳಗಿ ಪಟ್ಟಣದಲ್ಲಿ ತಿರುಗಾಡುತ್ತಿದ್ದರು. ಸದ್ಯ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಯಿಸಿ, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಬೀಳಗಿ ಕ್ರಾಸ್ ನಲ್ಲಿ ಇಬ್ಬರನ್ನು ಬಂಧಿಸಿದ್ದು, ಗೂಡ್ಸ್ ಲಾರಿ ಮಾಲೀಕರು ಹಾಗೂ ಚಾಲಕರು ಗೂಡ್ಸ್ ಜೊತೆಗೆ ಅಪೀಮು ಪೌಡರ್ ತಂದು ಮಾರಾಟ ಮಾಡುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಡಾಬಾಗಳಿಗೆ ಈ ಅಫೀಮು ಪೌಡರ್ ಮಾರಾಟ ಮಾಡುತ್ತಿದ್ದರೆಂಬ ಶಂಕೆ ಕೂಡ ವ್ಯಕ್ತವಾಗಿದೆ. ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿರುವ ಅನುಮಾನವಿದ್ದು, ಅಂದಾಜು ನಾಲ್ಕರಿಂದ ಐದು ಲಕ್ಷ ರೂ. ಮೌಲ್ಯದ ಅಫೀಮು ಪೌಡರ್ ಜಪ್ತಿ ಮಾಡಲಾಗಿದೆ.

  • ನಟಿ ಸೋನಿಯಾ ಮನೆ ಮೇಲೆ ದಾಳಿ – ರಾಜಕಾರಣಿಗಳ ಮಕ್ಕಳಿಗೆ ಶಾಕ್

    ನಟಿ ಸೋನಿಯಾ ಮನೆ ಮೇಲೆ ದಾಳಿ – ರಾಜಕಾರಣಿಗಳ ಮಕ್ಕಳಿಗೆ ಶಾಕ್

    ಬೆಂಗಳೂರು:  ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ, ಸೆಲೆಬ್ರಿಟಿ ಮಾಡೆಲ್ ಸೋನಿಯಾ ಅಗರ್ವಾಲ್ ಮನೆಯ ಮೇಲೆ ದಾಳಿ ನಡೆಸಿದ ಪೂರ್ವ ವಲಯದ ಪೊಲೀಸರು 40 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

    ಡಿಜೆ ಹಳ್ಳಿ ಇನ್ಸ್‍ಪೆಕ್ಟರ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ದಾಳಿಯ ಸಮಯದಲ್ಲಿ ಸೋನಿಯಾ ಅಗರ್ವಾಲ್ ಮನೆಯಲ್ಲಿ ಇರಲಿಲ್ಲ. ಭಾನವಾರ ರಾತ್ರಿ ಪಾರ್ಟಿಗೆ ಹೋಗಿದ್ದ ಆಕೆ ಮನೆಗೆ ಬಂದಿರಲಿಲ್ಲ.

    ದಾಳಿ ನಡೆದ ಹಿನ್ನೆಲೆಯಲ್ಲಿ ಪೊಲೀಸರು ಆಕೆಗೆ ಕರೆ ಮಾಡಿದ್ದಾರೆ. ಈ ವೇಳೆ ಆಕೆ ಕರೆಯನ್ನು ಸ್ವೀಕರಿಸಲಿಲ್ಲ. ಆ ಬಳಿಕ ಆಕೆಯ ತಂದೆಯಿಂದ ಫೋನ್ ಕರೆ ಮಾಡಿಸಿದ್ದಾರೆ. ಈ ವೇಳೆ ಆಕೆ ಮಧ್ಯಾಹ್ನ 12 ಗಂಟೆಗೆ ಬರುವುದಾಗಿ ಹೇಳಿದ್ದಾಳೆ. ಅಗರ್ವಾಲ್ ಮನೆಗೆ ಬಾರದ ಹಿನ್ನೆಲೆಯಲ್ಲಿ ಆಕೆಯ ತಂದೆಯಿಂದ ಕೀ ತೆಗೆಸಿ ಮನೆಯನ್ನು ಜಾಲಾಡಿದ್ದಾರೆ. ಈ ವೇಳೆ 40 ಗ್ರಾಂ ಗಾಂಜಾ ಪತ್ತೆಯಾಗಿದೆ.

    ಆರ್ಗ್ಯಾನಿಕ್ ಕಾಸ್ಮೆಟಿಕ್ ಕಂಪನಿ ನಡೆಸುತ್ತಿದ್ದ ಸೋನಿಯಾ ಜೊತೆ ಡಜನ್‍ಗಟ್ಟಲೇ ಸೆಲೆಬ್ರಿಟಿಗಳ ಲಿಂಕ್ ಇರುವುದು ಗೊತ್ತಾಗಿದೆ. ಎಲ್ಲಾ ಪಾರ್ಟಿಗಳಲ್ಲಿ ಸೋನಿಯಾ ಅಗರ್ವಾಲ್ ಮುಖಾಂತರ ಸೆಲೆಬ್ರಿಟಿಗಳು ಎಂಟ್ರಿ ಕೊಡುತ್ತಿದ್ದರು. ಇದನ್ನೂ ಓದಿ : ಸುರುಳಿ ಸುತ್ತಿದ್ದ 100 ರೂ. ನೋಟಿನ ಮೂಲಕ ರಾಗಿಣಿ ಡ್ರಗ್ಸ್ ಸೇವನೆ

    ಥಾಮಸ್ ನಿಂದ ಡ್ರಗ್ಸ್ ಪಡೆದುಕೊಳ್ಳುತ್ತಿದ್ದ ಸೋನಿಯಾ ಆ ಬಳಿಕ ಬೇಕಾದ ಸೆಲೆಬ್ರಿಟಿಗಳಿಗೆ ಪೂರೈಸುತ್ತಿದ್ದ ಬಗ್ಗೆ ಪೊಲೀಸರಿಗೆ ಬಲವಾದ ಸಂಶಯ ಮೂಡಿದೆ. ಕೆಲ ರಾಜಕಾರಣಿಗಳ ಮಕ್ಕಳು ಮತ್ತು ಸ್ಯಾಂಡಲ್‍ವುಡ್‍ನವರ ಜೊತೆ ಸೋನಿಯಾಗೂ ಉತ್ತಮ ಸಂಬಂಧ ಇತ್ತು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ದಾಳಿ ಯಾಕೆ?
    ಡಿಜೆ ವಚನ್ ಚಿನ್ನಪ್ಪ, ಉದ್ಯಮಿ ಭರತ್, ಸೆಲೆಬ್ರಿಟಿ ಮಾಡೆಲ್ ಸೋನಿಯಾ  ಅಗರ್ವಾಲ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ರಾಜಾಜಿನಗರ, ಪದ್ಮನಾಭನಗರದ, ಬೆನ್ಸೆನ್ ಟೌನ್ ನಲ್ಲಿರುವ ಮನೆಗಳ ಮೇಲೆ ದಾಳಿ ನಡೆಸಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ : ಬೆಲ್ಜಿಯಂ ಟು ಬೆಂಗಳೂರು – ಸ್ಯಾಂಡಲ್‌ವುಡ್‌ ಡ್ರಗ್ಸ್‌ ಕಹಾನಿ.. ಒಂದು ಮಾತ್ರೆ 1500 ರೂ.ಗೆ ಮಾರಾಟ

    15 ದಿನ ಹಿಂದೆ ಡ್ರಗ್ ಪೆಡ್ಲರ್ ಆರೋಪಿ ಥಾಮಸ್‍ನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದರು. ಆರೋಪಿ ಥಾಮಸ್ ಜೊತೆ ಈ ವ್ಯಕ್ತಿಗಳು ನಿರಂತರ ಸಂಪರ್ಕದಲ್ಲಿದ್ದ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

    ಬಂಧಿತ ವಿದೇಶಿ ಪ್ರಜೆ ಥಾಮಸ್ ಜೊತೆ ದಾಳಿಗೆ ಒಳಗಾದ ವ್ಯಕ್ತಿಗಳಿಗೆ ನೇರವಾದ ಸಂಪರ್ಕ ಇತ್ತು. ಹಲವು ಪಾರ್ಟಿಗಳಿಗೆ ಎಂಡಿಎಂಎ(ಮೀಥೈಲ್ ಎನೆಡಿಯಾಕ್ಸಿ ಮೆಥಾಂಫೆಟಮೈನ್ ನನ್ನು ಎಕ್‍ಸಸ್ಟಿ ಮಾತ್ರೆ ಎಂದು ಕರೆಯಲಾಗುತ್ತದೆ) ಮಾತ್ರೆಗಳು ಮತ್ತು ಎಲ್‍ಎಸ್‍ಡಿ(ಲೈಸರ್ಜಿಕ್ ಆಸಿಡ್ ಡೈಥೈಲಾಮೈಡ್) ಮಾತ್ರೆಗಳನ್ನು ಈತ ವಿತರಿಸಿದ್ದ. ವಿಚಾರಣೆ ವೇಳೆ ಥಾಮಸ್ ಸೆಲೆಬ್ರಿಟಿಗಳ ಒಂದಷ್ಟು ಹೆಸರುಗಳನ್ನ ಪ್ರಸ್ತಾಪಿಸಿದ್ದ.

  • ಡ್ರಗ್ಸ್ ಕೇಸ್ – ಉದ್ಯಮಿ, ಸೆಲೆಬ್ರಿಟಿ, ಡಿಜೆ ಮನೆಗಳ ಮೇಲೆ ದಾಳಿ

    ಡ್ರಗ್ಸ್ ಕೇಸ್ – ಉದ್ಯಮಿ, ಸೆಲೆಬ್ರಿಟಿ, ಡಿಜೆ ಮನೆಗಳ ಮೇಲೆ ದಾಳಿ

    ಬೆಂಗಳೂರು: ಡ್ರಗ್ಸ್ ಕೇಸ್ ಪ್ರಕರಕ್ಕೆ ಸಂಬಂಧಿಸಿದಂತೆ ಸೆಲೆಬ್ರಿಟಿ ಮನೆಗಳ ಮೇಲೆ ಬೆಳ್ಳಂಬೆಳಿಗ್ಗೆ ಪೂರ್ವ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ.

    ಡಿಜೆ ವಚನ್ ಚಿನ್ನಪ್ಪ, ಉದ್ಯಮಿ ಭರತ್, ಸೆಲೆಬ್ರಿಟಿ ಮಾಡೆಲ್ ಸೋನಿಯಾ ಅಗರ್‍ವಾಲ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ರಾಜಾಜಿನಗರ, ಪದ್ಮನಾಭನಗರದ, ಬೆನ್ಸೆನ್ ಟೌನ್ ನಲ್ಲಿರುವ ಮನೆಗಳ ಮೇಲೆ ದಾಳಿ ನಡೆಸಿ ಹುಡುಕಾಟ ನಡೆಸುತ್ತಿದ್ದಾರೆ.  ಇದನ್ನೂ ಓದಿ : ಅರ್ಧ ಗಂಟೆ ಥರ್ಮಾಕೋಲ್ ಸಹಾಯದಿಂದ ಈಜು – ಬದುಕುಳಿದ ಮೀನುಗಾರ 

    15 ದಿನ ಹಿಂದೆ ಡ್ರಗ್ ಪೆಡ್ಲರ್ ಆರೋಪಿ ಥಾಮಸ್‍ನನ್ನು ಪೊಲೀಸರು ಬಂಧಿಸಿದ್ದರು. ಆರೋಪಿ ಥಾಮಸ್ ಜೊತೆ ಈ ವ್ಯಕ್ತಿಗಳು ನಿರಂತರ ಸಂಪರ್ಕದಲ್ಲಿದ್ದ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ : ಸುರುಳಿ ಸುತ್ತಿದ್ದ 100 ರೂ. ನೋಟಿನ ಮೂಲಕ ರಾಗಿಣಿ ಡ್ರಗ್ಸ್ ಸೇವನೆ

    ಈ ಬಗ್ಗೆ ಪೂರ್ಣ ಮಾಹಿತಿ ಕಲೆ ಹಾಕಿದ್ದ ಪೊಲೀಸರು ಇಂದು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಡ್ರಗ್ಸ್ ಪತ್ತೆಯಾದ ವಿಚಾರ ಮೂಲಗಳಿಂದ ತಿಳಿದು ಬಂದಿದೆ.ಇದನ್ನೂ ಓದಿ: ಸಣ್ಣ ಮೀನು ಹಿಡಿದಿದ್ದಾರೆ, ತಿಮಿಂಗಿಲಗಳಿವೆ: ಇಂದ್ರಜಿತ್ ಲಂಕೇಶ್

  • ಸಣ್ಣ ಮೀನು ಹಿಡಿದಿದ್ದಾರೆ, ತಿಮಿಂಗಿಲಗಳಿವೆ: ಇಂದ್ರಜಿತ್ ಲಂಕೇಶ್

    ಸಣ್ಣ ಮೀನು ಹಿಡಿದಿದ್ದಾರೆ, ತಿಮಿಂಗಿಲಗಳಿವೆ: ಇಂದ್ರಜಿತ್ ಲಂಕೇಶ್

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸ್ ವಿಚಾರವಾಗಿ ಸಣ್ಣ ಮೀನು ಹಿಡಿದಿದ್ದಾರೆ ಇನ್ನೂ ತಿಮಿಂಗಿಲಗಳಿವೆ ತನಿಖೆಯಾಗಬೇಕು ಎಂದು ನಿರ್ದೇಶಕ, ನಿರ್ಮಾಪಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತನಿಖೆಯಾಗಿ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ. ಈ ಪ್ರಕರಣವನ್ನು ತನಿಖೆ ಮಾಡಿದ ಸಿಸಿಬಿ ತಂಡ ರಿಪೋರ್ಟ್ ಸಲ್ಲಿಸಿದ್ದಾರೆ. ಜೊತೆಗೆ ಕೋಟ್ಯಾಂತರ ರೂಪಾಯಿ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ತಂಡದ ತನಿಖೆಗೆ ಬೆನ್ನು ತಟ್ಟಲೇ ಬೇಕು ಎಂದಿದ್ದಾರೆ. ಇದನ್ನೂ ಓದಿ: ನಟಿ ರಾಗಿಣಿ ವಿರುದ್ಧ ಅಕುಲ್ ಬಾಲಾಜಿ ಸಾಕ್ಷ್ಯ!

    ನನಗೆ ಸಿಕ್ಕಿರುವ ಮಾಹಿತಿಯನ್ನು ನಾನು ಹಂಚಿಕೊಂಡಿದ್ದೇನೆ. ಆ ಆಧಾರವಾಗಿ ತನಿಖೆ ಮಾಡಿ ಕೋರ್ಟ್‍ಗೆ ಒಂದು ರಿಪೋರ್ಟ್ ಕೊಟ್ಟಿದ್ದಾರೆ. ಈ ಪ್ರಕರಣ ಸಾಬೀತಾಗಿರುವುದು ಇದೀಗ ತಿಳಿದುಕೊಂಡೆ ಸಮಾಧಾನ ಆಗಿದ್ದರು. ಈ ಪ್ರಕರಣದಲ್ಲಿ ನನ್ನ ತೇಜೋವಧೆಯನ್ನು ಮಾಡಲು ಹಲವರು ಪ್ರಯತ್ನಿಸಿದರು. ಪವಿತ್ರವಾದ ಸ್ಥಳ ಗಲೀಜು ಆದ್ರೆ ಸ್ವಚ್ಛ ಮಾಡಬೇಕು. ಆ ಕೆಲಸವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಮೂಗಿನಲ್ಲಿ ಕೊಕೇನ್ ಸೇವಿಸುತ್ತಿದ್ದ ನಟಿ ರಾಗಿಣಿ!

    ಸಾಮಾಜಿಕ ದೃಷ್ಟಿಯಿಂದ ಈ ಡ್ರಗ್ಸ್ ಜಾಲ ಕುರಿತಾಗಿ ಇನ್ನಷ್ಟು ತನಿಖೆ ಮಾಡಬೇಕು. ಸಣ್ಣ ಮೀನು ಹಿಡಿದಿದ್ದಾರೆ, ತಿಮಿಂಗಿಲಗಳಿವೆ ಬೆಂಗಳೂರು, ಕರ್ನಾಟಕದಲ್ಲಿ ದೊಡ್ಡ ಮಾಫಿಯವಾಗಿದೆ ಈ ಕುರಿತಾಗಿ ತನಿಖೆ ನಡೆಸಬೇಕು. ಇಂದ್ರಜಿತ್ ಅವರ ಮಾಹಿತಿ ಟುಸ್ ಆಗಿದೆ, ಇಂದ್ರಜಿತ್ ಅವರ ಕೂದಲು ಇತ್ತುಕೊಳ್ಳಲು ಆಗಲ್ಲ, ಗಾಳಿಯಲ್ಲಿ ಗುದ್ದಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಆದರೆ ನಾನು ವೈಯಕ್ತಿಕವಾಗಿ ನಾನು ಈ ಪ್ರಕರಣದಲ್ಲಿ ಬಂದಿಲ್ಲ. ನಾನು ಸಾಮಾಜಿಕ ಹಿತದೃಷ್ಟಿಯಿಂದ ನಾನು ಮುಂದೆ ಬಂದಿದ್ದು ಎಂದಿದ್ದಾರೆ.

    ನನಗೆ ಈ ವಿಚಾರವಾಗಿ ಸಂತೋಷವಾಗಿದೆ, ನಾನು ಗೆದ್ದಿದ್ದೇನೆ, ನನ್ನ ಹೇಳಿಕೆ ನಿಜವಾಯಿತು ಎಂದು ಹೇಳಲು ನಾನು ಬಂದಿಲ್ಲ. ಈ ಕುರಿತಾಗಿ ಒಂದು ದೊಡ್ಡ ಮಾಫಿಯಾ ಇದೆ ತನಿಖೆಯಾಗಬೇಕಿದೆ. ಸಮಾಜ ಸ್ವಚ್ಛವಾಗಬೇಕು ಎಂದರು.

    ಕೋಟ್ಯಾಂತರ ರೂಪಾಯಿ ಮೌಲ್ಯದ ಡ್ರಗ್‍ಅನ್ನು ವಶಪಡಿಸಿಕೊಂಡಿದ್ದಾರೆ. ಸಮಾಜ ಸ್ವಚ್ಚವಾಗಬೇಕು. ಸ್ಯಾಂಡಲ್‍ವುಡ್‍ನಲ್ಲಿ ನಡಿತಾ ಇರುವುದು ಸಾಬೀತಾಗಿದೆ. ಇಷ್ಟಕ್ಕೆ ಮುಗಿದಿಲ್ಲ ಇದರ ಹಿಂದೆ ದೊಡ್ಡ ಮಾಫಿಯಾ ಇದೆ ಇದರ ಹಿಂದೆ ಯಾರ್ಯಾರು ಇದ್ದಾರೆ ಎನ್ನುವುದು ತನಿಖೆ ನಡೆಯಬೇಕು. ಈ ಕುರಿತಾಗಿ ತನಿಖೆ ನಡೆಸುತ್ತಿರುವ ಸಿಸಿಬಿ ತಂಡಕ್ಕೆ ಧನ್ಯವಾದ ಹೇಳಿದರು.

  • ತಟ್ಟೆಯಲ್ಲಿ ಪೌಡರ್ ಹಾಕಿ ಎಟಿಎಂ ಕಾರ್ಡ್‍ನಿಂದ ಉಜ್ಜಿ ಕೊಕೇನ್ ಸೇವಿಸಿದ್ದ ರಾಗಿಣಿ

    ತಟ್ಟೆಯಲ್ಲಿ ಪೌಡರ್ ಹಾಕಿ ಎಟಿಎಂ ಕಾರ್ಡ್‍ನಿಂದ ಉಜ್ಜಿ ಕೊಕೇನ್ ಸೇವಿಸಿದ್ದ ರಾಗಿಣಿ

    ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾಣಿ ಡ್ರಗ್ಸ್ ಸೇವನೆ ಮಾಡುತ್ತಿರುವುದು ದೃಢಪಟ್ಟಿದ್ದು, ಇದೀಗ ಇಬ್ಬರಿಗೂ ಮತ್ತೆ ಸಂಕಷ್ಟ ಎದುರಾಗಿದೆ.

    ತಲೆ ಕೂದಲು ಮಾದರಿ ಪರೀಕ್ಷೆಯಲ್ಲಿ ಡ್ರಗ್ಸ್ ಸೇವನೆ ಮಾಡುತ್ತಿದ್ದಿದ್ದು ದೃಢಪಟ್ಟಿದೆ. ಬರೋಬ್ಬರಿ 10 ತಿಂಗಳ ಬಳಿಕ ಎಫ್‍ಎಸ್‍ಎಲ್ ವರದಿ ಸಿಸಿಬಿ ಕೈ ಸೇರಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಜೈಲುವಾಸ ಅನುಭವಿಸಿರುವ ನಟಿಯರು ಮತ್ತೆ ಲಾಕ್ ಆಗುವ ಸಾಧ್ಯತೆಗಳು ದಟ್ಟವಾಗಿವೆ.

    ಬೆಂಗಳೂರಿನ 33ನೇ ಸಿಸಿಹೆಚ್ ಕೋರ್ಟ್‍ಗೆ ಸಿಸಿಬಿ ಪೊಲೀಸರು 145 ಪುಟಗಳ ಆರೋಪಪಟ್ಟಿಯನ್ನು ಈಗಾಗಲೇ ಸಲ್ಲಿಕೆ ಮಾಡಿದ್ದಾರೆ. ರಾಗಿಣಿ ಮೂಗಿನಲ್ಲಿ ಕೋಕೇನ್ ಸೇವಿಸುತ್ತಿದ್ದರು. ಇಂತಹ ಮಾದಕ ಪಾರ್ಟಿಗಳು ಫ್ಯಾಷನ್ ಶೋನಲ್ಲೂ ನಡೆಯುತ್ತಿತ್ತು. ರಾಗಿಣಿ ಎಟಿಎಂ ಕಾರ್ಡ್, ನೋಟ್ ಮೂಲಕ ನಶೆ ಏರಿಸಿಕೊಳ್ಳುತ್ತಿದ್ದರು ಎಂಬುದು ಆರೋಪಪಟ್ಟಿಯಲ್ಲಿ ಅನಾವರಣವಾಗಿದೆ.

    ರಾಗಿಣಿಯವರು ತಟ್ಟೆಯಲ್ಲಿ ಕೊಕೇನ್ ಪೌಡರ್ ಹಾಕಿ ಎಟಿಎಂ ಕಾರ್ಡ್‍ನಿಂದ ಉಜ್ಜುತ್ತಿದ್ದರು. ಬಳಿಕ ಆ ಕೊಕೇನ್ ಪೌಡರ್ ಅನ್ನು 2 ಲೇನ್ ಆಗಿ ಮಾಡಿ ನಂತರ ಸುರುಳಿ ಸುತ್ತಿದ್ದ 100 ರೂ. ನೋಟಿನ ಮೂಲಕ ಡ್ರಗ್ಸ್ ಸೇವನೆ ಮಾಡುತ್ತಿದ್ದರು. ನೋಟಿನ ಮೂಲಕ ಮೂಗಿಗೆ ಕೊಕೇನ್ ಪೌಡರ್ ಇಳಿಸಿಕೊಳ್ಳುತ್ತಿದ್ದರು ಎಂಬುದಾಗಿ ಕೋರ್ಟ್‍ಗೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಸಿಸಿಬಿ ದೋಷಾರೋಪಣೆ ಮಾಡಿದೆ. ಇದನ್ನೂ ಓದಿ: ರಾಜೀನಾಮೆ ಸಂದೇಶ ರವಾನಿಸಿದ ಸಚಿವ ಆನಂದ್ ಸಿಂಗ್?

    ಹೈದರಾಬಾದ್ ಎಫ್‍ಎಸ್‍ಎಲ್ ಲ್ಯಾಬ್ ನೀಡಿರುವ ವರದಿಯನ್ನು ಸಿಸಿಬಿ ತರಿಸಿಕೊಂಡಿದೆ. ಈ ಹಿಂದೆ ಇಬ್ಬರು ನಟಿಯರನ್ನು ಬಂಧಿಸಿದ್ದಾಗ ತಲೆ ಕೂದಲು ಸಂಗ್ರಹಿಸಿ ಡ್ರಗ್ಸ್ ಸೇವನೆ ಪತ್ತೆ ಮಾಡಲು ಕಳುಹಿಸಲಾಗಿತ್ತು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ತಲೆ ಕೂದಲಿನ ಮಾದರಿ ಸಂಗ್ರಹ ಮಾಡಲಾಗಿತ್ತು. ಒಮ್ಮೆ ಸರಿಯಾದ ಕ್ರಮದಲ್ಲಿ ಮಾದರಿ ಸಂಗ್ರಹ ಆಗದೇ ರಿಜೆಕ್ಟ್ ಆಗಿತ್ತು. ಬಳಿಕ ಮತ್ತೊಮ್ಮೆ ಮಾದರಿ ಸಂಗ್ರಹ ಮಾಡಿ ಕಳುಹಿಸಲಾಗಿತ್ತು. ಈಗ ವರದಿ ದೃಢ ಎಂದು ಪ್ರಯೋಗಾಲಯದಿಂದ ವರದಿ ನೀಡಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ನಿಮ್ಮನ್ನು ಮದುವೆಯಾಗುತ್ತೇನೆ ಎಂದ ಅಭಿಮಾನಿಗೆ ಖುಷ್ಬೂ ಉತ್ತರ

  • ಆಲ್ಫಾ ಜೋಲಮ್ ಡ್ರಗ್ಸ್ ತಯಾರಿಸುತ್ತಿದ್ದ ಲ್ಯಾಬ್ ಮೇಲೆ ದಾಳಿ – ಐವರ ಬಂಧನ

    ಆಲ್ಫಾ ಜೋಲಮ್ ಡ್ರಗ್ಸ್ ತಯಾರಿಸುತ್ತಿದ್ದ ಲ್ಯಾಬ್ ಮೇಲೆ ದಾಳಿ – ಐವರ ಬಂಧನ

    ಬೆಂಗಳೂರು: ನಾರ್ಕೊಟೊಕ್ಸ್ ಕಂಟ್ರೋಲ್ ಬ್ಯೂರೊ ಅಧಿಕಾರಿಗಳ ಬೃಹತ್ ಕಾರ್ಯಾಚರಣೆಯಲ್ಲಿ ಆಲ್ಫಾ ಜೋಲಮ್ (alfa zolam) ಡ್ರಗ್ಸ್ ದಂಧೆಕೋರರು ಬಲೆಗೆ ಬಿದ್ದಿದ್ದಾರೆ.

    ಬೆಂಗಳೂರು ವಲಯ ಹಾಗೂ ಹೈದರಾಬಾದ್ ಉಪವಲಯದ ಎನ್‍ಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಆಲ್ಫಾ ಜೋಲಮ್ ತಯಾರಿಸುತ್ತಿದ್ದ ಲ್ಯಾಬ್ ಮೇಲಿನ ದಾಳಿ ವೇಳೆ ಡ್ರಗ್ಸ್ ದಂಧೆ ಬಯಲಿಗೆ ಬಂದಿದೆ. ಸುಧಾಕರ್, ನರೇಶ್, ಕೆ.ಪಿ.ಕುಮಾರ್, ಶ್ರೀಕಾಂತ್ ಹಾಗೂ ಪಾಮಾರ್ಥಿ ಬಂಧಿತ ಆರೋಪಿಗಳು.

    ಆರೋಪಿ ಸುಧಾಕರ್ ಆಲ್ಫಾ ಜೋಲಮ್ ತಯಾರಿಕೆ ಹಾಗೂ ಮಾರಾಟದ ಕೆಲಸ ಮಾಡುತ್ತಿದ್ದ. ಹೈದರಾಬಾದ್ ರಸ್ತೆಯಲ್ಲಿ ಆಲ್ಫಾ ಜೋಲಮ್ ಮಾರಾಟ ಮಾಡುತ್ತಿದ್ದಾಗ ಎನ್‍ಸಿಬಿ ಬಲೆಗೆ ಬಿದ್ದಿದ್ದಾನೆ. ಆರೋಪಿಗಳಿಂದ 3.25 ಕೆ.ಜಿ ಅಲ್ಫಾ ಜೋಲಮ್, 2 ಕಾರುಗಳು, 12.75 ಲಕ್ಷ ಹಣ ವಶಕ್ಕೆ. ಪಡೆಯಲಾಗಿದೆ. ಇದನ್ನೂ ಓದಿ: ಮಂಗಳಮುಖಿಯರ ವಿಶಿಷ್ಟ ಸ್ವಾತಂತ್ರ್ಯ ದಿನಾಚರಣೆ

    ಹೈದರಾಬಾದಿನ ಬಾಲಾನಗರದಲ್ಲಿ ಲ್ಯಾಬ್ ಮೇಲೆ ದಾಳಿ ನಡೆಸಿದ್ದ ಎನ್‍ಸಿಬಿ, ಲ್ಯಾಬ್ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಪಾಮಾರ್ಥಿಯ ಎಂಬಾತನ ಬಂಧನ ಮಾಡಲಾಗಿದೆ. ಜೊತೆಗೆ ಡ್ರಗ್ಸ್ ಅಲ್ಫಾ ಜೋಲಮ್ ತಯಾರಿಕೆಗೆ ಬಳಸುತ್ತಿದ್ದ ಕಚ್ಚಾ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ.

  • 10 ಲಕ್ಷ ಮೌಲ್ಯದ MDMA ಡ್ರಗ್ಸ್ ವಶ-ಮೂವರ ಬಂಧನ

    10 ಲಕ್ಷ ಮೌಲ್ಯದ MDMA ಡ್ರಗ್ಸ್ ವಶ-ಮೂವರ ಬಂಧನ

    ಮಂಗಳೂರು: ನಿಷೇಧಿತ ಮಾದಕವಸ್ತು ಎಂ.ಡಿ.ಎಂ.ಎಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

    ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಉಪ್ಪಳ ಗೇಟ್ ನಿವಾಸಿಗಳಾದ ಮಹಮ್ಮದ್ ಮುನಾಫ್, ಮಹಮ್ಮದ್ ಮುಝಾಂಬಿಲ್, ಅಹಮ್ಮದ್ ಮಸೂಕ್ ಬಂಧಿತ ಆರೋಪಿಗಳಾಗಿದ್ದಾರೆ. ಮಂಗಳೂರು ಮೂಲಕ ಕೇರಳ ರಾಜ್ಯಕ್ಕೆ ಸಾಗಾಟ ಮಾಡುವ ಸಂದರ್ಭ ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಕೋಣಾಜೆ ಪೊಲೀಸರು ಕೊಣಾಜೆ ಬಳಿಯ ಗಣೇಶ್ ಮಹಲ್ ಎಂಬಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಫೇಸ್‍ಬುಕ್ ಖಾತೆ 2 ವರ್ಷ ಬ್ಯಾನ್

    ಕಾರಿನಲ್ಲಿ ಡ್ರಗ್ಸ್ ಸಾಗಾಟ ಮಾಡುತ್ತಿರೋದು ಪತ್ತೆಯಾಗಿದೆ. ಆರೋಪಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು 10 ಲಕ್ಷದ 20 ಸಾವಿರ ಮೌಲ್ಯದ 170 ಗ್ರಾಂ ಎಂ.ಡಿ.ಎಂ.ಎ ಸಿಂಥೆಟಿಕ್ ಡ್ರಗ್, ಸಾಗಾಟಕ್ಕೆ ಉಪಯೋಗಿಸಿದ ಕಾರು, ನಾಲ್ಕು ಮೊಬೈಲ್ ಸೇರಿದಂತೆ ಒಟ್ಟು 17 ಲಕ್ಷ, 37 ಸಾವಿರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಬೆಂಗಳೂರಿಗರಿಗೆ ಸಿಹಿಸುದ್ದಿ ಶೇ.4ಕ್ಕೆ ಇಳಿದ ಪಾಸಿಟಿವಿಟಿ ರೇಟ್

    ಮಂಗಳೂರು ನಗರದಲ್ಲಿ ಇದೇ ಪ್ರಥಮ ಬಾರಿಗೆ ದೊಡ್ಡ ಮೊತ್ತದ ಎಂ.ಡಿ.ಎಂ.ಎ ವಶಪಡಿಸಿಕೊಳ್ಳಲಾಗಿದ್ದು, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.