Tag: drugs

  • 43.2 ಕೋಟಿ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ – ಮಹಿಳೆ ಅರೆಸ್ಟ್

    43.2 ಕೋಟಿ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ – ಮಹಿಳೆ ಅರೆಸ್ಟ್

    ನವದೆಹಲಿ: ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 43.2 ಕೋಟಿ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಡಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

    ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಸೂಟ್‍ಕೇಸ್ ಟ್ರಾಲಿಯಲ್ಲಿ 43.2 ಕೋಟಿ ಮೌಲ್ಯದ ಕೊಕೇನ್(ಡ್ರಗ್ಸ್) ಬೇರೆ ಕಡೆ ಸಾಗಿಸಲು ಪ್ರಯತ್ನಿಸುತ್ತಿದ್ದಳು. ಆದರೆ ಅಧಿಕಾರಿಗಳಿಗೆ ಅನುಮಾನ ಬಂದು ಆಕೆಯ ಸೂಟ್‍ಕೇಸ್ ಪರಿಶೀಲಿಸಿದಾಗ ಬಿಳಿ ಬಣ್ಣದ ಪುಡಿ ಪತ್ತೆಯಾಗಿದೆ. ನಂತರ ಅದನ್ನು ಪರೀಕ್ಷಿಸಿದಾಗ ಅದು ಡ್ರಗ್ಸ್ ಎಂದು ತಿಳಿದುಬಂದಿದೆ. ನಂತರ ಆಕೆಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: 60ಕ್ಕೂ ಹೆಚ್ಚು ಅಡಿಕೆ ಗಿಡ ಕಡಿದ ದುಷ್ಕರ್ಮಿಗಳು – ಕಣ್ಣೀರಿಟ್ಟ ರೈತ ಮಹಿಳೆ

    ಘಟನೆ ವಿವರ: ಮಹಿಳೆಯೂ ಮೊದಲು ಲಾವೋಸ್‍ನಿಂದ ದೋಹಾಗೆ ಮತ್ತು ದೋಹಾದಿಂದ ನವದೆಹಲಿಗೆ ವಿಮಾನದಲ್ಲಿ ಡ್ರಗ್ಸ್ ಸಾಗಿಸುತ್ತಿದ್ದಳು. ಅನುಮಾನದ ಆಧಾರದ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಆಕೆಯನ್ನು ತಡೆದಿದ್ದಾರೆ. ಆಕೆಯ ಲಗೇಜ್ ಅನುಮಾನಾಸ್ಪದವಾಗಿ ಕಂಡುಬಂದಿದ್ದು, ಅದನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಹಿಳೆ ಸೂಟ್‍ಕೇಸ್ ನಲ್ಲಿ ನಮಗೆ ಬಿಳಿ ಪುಡಿ ಸಿಕ್ಕಿದೆ. ನಂತರ ಅದನ್ನು ಪರೀಕ್ಷಿಸಿದಾಗ ಅದು ಡ್ರಗ್ಸ್ ಎಂದು ಪತ್ತೆಯಾಗಿದೆ. ಇದು 2,880 ಗ್ರಾಂ. ತೂಕ ಇದ್ದು, 43.2 ಕೋಟಿ ರೂ. ಬೆಲೆಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

    ಎನ್‍ಡಿಪಿಎಸ್(ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್) ಕಾಯ್ದೆಯ ಸೆಕ್ಷನ್ 21, 23 ಮತ್ತು 29 ರ ಅಡಿಯಲ್ಲಿ ಇದು ಶಿಕ್ಷಾರ್ಹ ಅಪರಾಧವಾಗಿದೆ. ಮಹಿಳೆ ವಿರುದ್ಧ ಕಸ್ಟಮ್ಸ್ ಅಧಿಕಾರಿ ಪ್ರಕರಣ ದಾಖಲಿಸಿಕೊಂಡಿದ್ದು, ಎನ್‍ಡಿಪಿಎಸ್ ಕಾಯ್ದೆಯ ಸೆಕ್ಷನ್ 43(ಬಿ) ಅಡಿಯಲ್ಲಿ ಆಕೆಯನ್ನು ಬಂಧಿಸಲಾಗಿದೆ. ಆಕೆಯ ಸೂಟ್‍ಕೇಸ್ ಟ್ರೋಲಿಯನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಮಹಿಳೆಯನ್ನು ಮೊದಲು ವೈದ್ಯಕೀಯ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಕೆಗೆ ಕೋವಿಡ್ ನೆಗೆಟಿವ್ ಬಂದಿದೆ. ನಂತರ ಮಹಿಳೆಯನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ವೇಳೆ ಕಸ್ಟಮ್ಸ್ ಅಧಿಕಾರಿಗಳು, ಆಕೆಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಅಗತ್ಯವಿಲ್ಲ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಅಧಿಕಾರಿಗಳ ವಾದವನ್ನು ಆಲಿಸಿದ ನ್ಯಾಯಾಲಯ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಅನುಮತಿಸಿತು.  ಇದನ್ನೂ ಓದಿ: ‘ಉಜ್ವಲಾ ಯೋಜನೆ’ಯಡಿ 35 ಫಲಾನುಭವಿಗಳಿಗೆ ಸಿಲಿಂಡರ್ ವಿತರಣೆ

    ಪ್ರಸ್ತುತ ಆಕೆಯನ್ನು ನ್ಯಾಯಾಲಯ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮಹಿಳೆ ಬಗ್ಗೆ ಅಧಿಕಾರಿಗಳು ಯಾವುದೇ ರೀತಿಯ ಹೆಸರನ್ನು ಬಿಟ್ಟುಕೊಟ್ಟಿಲ್ಲ. ಆದರೆ ಆಕೆ ವಿಚ್ಛೇದನ ಪಡೆದುಕೊಂಡಿದ್ದಾಳೆ ಎಂದು ಮಾತ್ರ ಹೇಳಿದ್ದಾರೆ.

  • ಡ್ರಗ್ಸ್ ಪ್ರಕರಣದಲ್ಲಿ ಸುಶಾಂತ್ ಸಿಂಗ್ ನೆರೆಮನೆಯಾತನ ಬಂಧನ

    ಡ್ರಗ್ಸ್ ಪ್ರಕರಣದಲ್ಲಿ ಸುಶಾಂತ್ ಸಿಂಗ್ ನೆರೆಮನೆಯಾತನ ಬಂಧನ

    ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ಡ್ರಗ್ಸ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ನೆರೆ ಮನೆಯಾತನನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

    ಸುಶಾಂತ್ ಸಿಂಗ್ ರಜಪೂತ್ ಅವರ ನೆರೆಯ ಮನೆಯ ಸಾಹಿಲ್ ಶಾ ಅಲಿಯಾಸ್ ಫ್ಲಾಕೊ ಅವರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಎನ್‌ಸಿಬಿ ಮೂಲಗಳ ಪ್ರಕಾರ ಆರೋಪಿ ಸಾಹಿಲ್ ಸ್ವತಃ ಅಧಿಕಾರಿಗಳ ಮುಂದೆ ಶರಣಾಗಿದ್ದಾನೆ. ಇದನ್ನೂ ಓದಿ: ಅಮ್ಮನ ಜನ್ಮದಿನ – ಕ್ವಾರಂಟೈನ್‍ನಲ್ಲಿರುವ ಚಿರು ಭಾವುಕ

    ಸುಶಾಂತ್ ಸಿಂಗ್ ಅವರ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ತನ್ನ ಹೆಸರು ಕೇಳಿ ಬಂದ ಬಳಿಕ 9 ತಿಂಗಳ ಹಿಂದೆ ಫ್ಲಾಕೊ ತಲೆಮರೆಸಿಕೊಂಡಿದ್ದ. ಇದೀಗ ತಾನೇ ಅಧಿಕಾರಿಗಳ ಮುಂದೆ ಶರಣಾಗಿರುವ ಸಾಹಿಲ್‌ನನ್ನು ಎನ್‌ಸಿಬಿ ಬಂಧಿಸಿದೆ. ಇದನ್ನೂ ಓದಿ: ಪೆಗಾಸಸ್ ಖರೀದಿಸಿ ಮೋದಿ ಸರ್ಕಾರ ದೇಶದ್ರೋಹ ಮಾಡಿದೆ: ರಾಹುಲ್ ಗಾಂಧಿ

    ಸುಶಾಂತ್ ಸಾವಿಗೂ ಮೊದಲು ಮುಂಬೈನ ಮಲಾಡ್ ಪ್ರದೇಶದಲ್ಲಿ ವಾಸವಿದ್ದರು. ಆರೋಪಿ ಸಾಹಿಲ್ ಸುಶಾಂತ್‌ನ ನೆರೆಮನೆಯವನಾಗಿದ್ದ. ಫ್ಲಾಕೋ ಹಲವಾರು ಡ್ರಗ್ಸ್ ಫೆಡ್ಲರ್‌ಗಳೊಂದಿಗೆ ಸಂಪರ್ಕ ಹೊಂದಿದ್ದು, ಸುಶಾಂತ್ ಸೇರಿದಂತೆ ಬಾಲಿವುಡ್‌ನ ಪ್ರಸಿದ್ಧ ವ್ಯಕ್ತಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಎಂಬುದಾಗಿ ತಿಳಿದುಬಂದಿದೆ.

  • ಸಾಧು ವೇಷದಲ್ಲಿ ಮಾದಕ ವಸ್ತು ಮಾರುತ್ತಿದ್ದ ವ್ಯಕ್ತಿ ಅರೆಸ್ಟ್

    ಲಕ್ನೋ: 60 ವರ್ಷದ ವ್ಯಕ್ತಿ ಸಾಧು ವೇಷ ತೊಟ್ಟು, ಮಾದಕ ವಸ್ತುವನ್ನು ಮಾರುತ್ತಿದ್ದು, ಆತನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ವ್ಯಕ್ತಿಯ ಬಳಿಯಿದ್ದ 6ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

    ಬಂಧಿತ ಆರೋಪಿ ಘನ್ ಶ್ಯಾಮ್ ಶುಕ್ಲಾ(60) ತನ್ನನ್ನು ಸಾಧು ಎಂದು ಹೇಳಿಕೊಂಡು ಓಡಾಡುತ್ತಿದ್ದ. ನಗರದಲ್ಲಿ ಡ್ರಗ್ಸ್ ಸರಬರಾಜು ಮಾಡುವ ಗ್ಯಾಂಗ್‍ನ ಭಾಗವಾಗಿದ್ದ ಆತನನ್ನು ಕೃಷ್ಣ ನಗರದಲ್ಲಿ ಲಕ್ನೋ ಪೊಲೀಸರು ಬಂಧಿಸಿದ್ದಾರೆ.

    ಶುಕ್ಲಾ ಸಾಧು ವೇಷದಲ್ಲಿದ್ದು, ಕ್ಯಾಬ್‍ಗಳಲ್ಲಿ ನಗರವನ್ನು ಸುತ್ತುತ್ತಿದ್ದ. ಭಾರತ-ನೇಪಾಳ ಗಡಿಯಲ್ಲಿರುವ ಡ್ರಗ್ಸ್ ಪೆಡ್ಲರ್‍ಗಳಿಂದ ಗಾಂಜಾವನ್ನು ಸಂಗ್ರಹಿಸಿ, ಸ್ಥಳೀಯವಾಗಿ ಸರಬರಾಜು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 40 ಕತ್ತೆಗಳು ನಾಪತ್ತೆ- ಹುಡುಕಿ ಕೊಡುವಂತೆ ಪೊಲೀಸರ ಮೊರೆ ಹೋದ ಗ್ರಾಮಸ್ಥರು

    ಆರೋಪಿ ಶುಕ್ಲಾ ಜೊತೆಗೂಡಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಅವದೇಶ್ ಮಿಶ್ರಾ ಅಲಿಯಾಸ್ ಸೋನು ತಲೆಮರೆಸಿಕೊಂಡಿದ್ದಾನೆ. ಅವರಿಬ್ಬರು ಒಟ್ಟಿಗೆ ಕ್ಯಾಬ್‍ಗಳನ್ನು ಬಾಡಿಗೆ ತೆಗೆದುಕೊಂಡು, ನಗರವನ್ನು ಸುತ್ತಿ ಮಾದಕ ವಸ್ತುವನ್ನು ರವಾನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಜೈನ್ ಮೇಲಿನ ಐಟಿ ದಾಳಿ ಹಿಂದೆ ಬಿಜೆಪಿ ಕೈವಾಡ ಇದೆ: ಅಖಿಲೇಶ್ ಯಾದವ್

    ಇದೀಗ ಆರೋಪಿ ಘನ್ ಶ್ಯಾಮ್ ಶುಕ್ಲಾನನ್ನು ಬಂಧಿಸಲಾಗಿದ್ದು, ಆತನ ಸಹಚರ ಸೋನು ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಹೊಟ್ಟೆಯಲ್ಲಿ 1 ಕೆ.ಜಿ ಕೊಕೇನ್ ಬಚ್ಚಿಟ್ಟು ಪ್ರಯಾಣ – ವಿದೇಶಿ ಮಹಿಳೆ ಅರೆಸ್ಟ್

    ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಐಜಿಐ)ದಲ್ಲಿ ಉಗಾಂಡಾ ಮೂಲದ ಮಹಿಳೆಯನ್ನು ಬಂಧಿಸಲಾಗಿದೆ. ಆಕೆ ತನ್ನ ಹೊಟ್ಟೆಯಲ್ಲಿ 1ಕೆಜಿ ಕೊಕೇನ್ ತುಂಬಿದ ಮಾತ್ರೆಗಳನ್ನು ಬಚ್ಚಿಟ್ಟು, ಕಳ್ಳಸಾಗಣೆ ಮಾಡುತ್ತಿದ್ದಳು.

    ಉಗಾಂಡಾ ಮೂಲದ ಮಹಿಳೆ ಕೆಲವು ದಿನಗಳ ಹಿಂದೆ ಐಜಿಐ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಆಕೆಯ ಚಲನವಲನಗಳು ಅಸಾಮಾನ್ಯವಾಗಿದ್ದವು. ಆಕೆಯನ್ನು ಗುರುತಿಸಿದ ಕಸ್ಟಮ್ಸ್ ಅಧಿಕಾರಿಗಳು ಮಾತಾಡಿಸಿದಾಗ ಆಕೆ ವಿಚಿತ್ರವಾಗಿ ನಡೆದುಕೊಂಡಿದ್ದಳು. ಆಕೆಯನ್ನು ಪ್ರಶ್ನಿಸಿದಾಗ ಕೊಕೇನ್ ಮಾತ್ರೆಗಳನ್ನು ನುಂಗಿರುವ ವಿಚಾರವನ್ನು ತಿಳಿಸಿದ್ದಾಳೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ನ್ಯೂ ಇಯರ್‌ಗೆ ಹೊಸ ಮಾರ್ಗಸೂಚಿ ಬಿಡುಗಡೆ

    ಮಹಿಳೆ ಹೊಟ್ಟೆಯಲ್ಲಿ ಕೊಕೇನ್ ಬಚ್ಚಿಟ್ಟಿದ್ದ ವಿಚಾರ ತಿಳಿಯುತ್ತಿದ್ದಂತೆ ಆಕೆಯನ್ನು ಆರ್‍ಎಂಎಲ್ ಆಸ್ಪತ್ರೆಗೆ ಕರೆದೊಯ್ದು, 91 ಕೊಕೇನ್ ತುಂಬಿದ ಮಾತ್ರೆಗಳನ್ನು ಆಕೆಯ ದೇಹದಿಂದ ತೆಗೆಯಲಾಯಿತು. ಒಟ್ಟು 996 ಗ್ರಾಂ ಕೊಕೇನ್ ಅನ್ನು ಆಕೆಯ ದೇಹದಿಂದ ತೆಗೆಯಲು 4 ದಿನಗಳು ಬೇಕಾಯಿತು ಎಂದು ಹಿರಿಯ ಕಸ್ಟಮ್ಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

    ಸಾಮಾನ್ಯವಾಗಿ ವ್ಯಕ್ತಿ ತನ್ನ ಹೊಟ್ಟೆಯಲ್ಲಿ 400 ರಿಂದ 500 ಗ್ರಾಂ ವರೆಗಿನ ಬಾಹ್ಯ ವಸ್ತುಗಳನ್ನು ಹೊಟ್ಟೆಯೊಳಗೆ ಬಚ್ಚಿಡಲು ಸಾಧ್ಯವಿರುತ್ತದೆ. ಆದರೆ ಈ ಮಹಿಳೆ 1 ಕೆಜಿ ಕೊಕೇನ್ ತುಂಬಿದ ಮಾತ್ರೆಗಳನ್ನು ಬಚ್ಚಿಟ್ಟಿರುವುದು ಅಪರೂಪ ಹಾಗೂ ಆಘಾತ ಮೂಡಿಸಿರುವ ವಿಷಯ ಎಂದು ಹೇಳಿದರು. ಇದನ್ನೂ ಓದಿ: ಪುನೀತ್ ಪ್ರೇರಣೆ – ಚಾಮರಾಜನಗರದಲ್ಲಿ ಇದುವರೆಗೆ 9,500 ಮಂದಿ ನೇತ್ರದಾನಕ್ಕೆ ನೋಂದಣಿ

    ಈ ಕೊಕೇನ್ ಗುಳಿಗೆಯನ್ನು ಹೊಟ್ಟೆಯಲ್ಲಿ ಬಚ್ಚಿಡಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಿದ್ದಾರೆ. ಒಂದುವೇಳೆ ಗುಳಿಗೆಗಳು ಹೊಟ್ಟೆಯ ಒಳಗೆ ಸಿಡಿದಿದ್ದರೆ ಮಹಿಳೆಯ ಜೀವಕ್ಕೆ ಅಪಾಯವಿತ್ತು ಎಂದು ತಿಳಿಸಿದರು.

  • 2.5 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ – ಇಬ್ಬರ ಬಂಧನ

    2.5 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ – ಇಬ್ಬರ ಬಂಧನ

    ತಿರುವನಂತಪುರಂ: ಕೇರಳದ ಆಲುವಾ ರೈಲು ನಿಲ್ದಾಣದಲ್ಲಿ 2.5ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಪೊಲೀಸರು ಪತ್ತೆ ಮಾಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಭಾನುವಾರ ಬೆಳಗ್ಗೆ ಬೆಂಗಳೂರಿನಿಂದ ಆಲುವಾ ರೈಲ್ವೇ ನಿಲ್ದಾಣಕ್ಕೆ ಬಂದಿದ್ದ ಇಬ್ಬರು, ಸುಮಾರು 2.5 ಕೋಟಿ ರೂ. ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದರು. ಎಕ್ಸ್‍ಟಸಿ ಅಥವಾ ಎಂಡಿಎಂಎ ಎನ್ನಲಾಗುವ 3ಕೆಜಿ ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ನಾಪತ್ತೆಯಾಗಿ 7 ವರ್ಷಗಳ ಬಳಿಕ ಪತಿಯನ್ನು ಸೇರಿದ ಪತ್ನಿ!

    POLICE JEEP

    ರಾಹುಲ್ ಸುಭಾಷ್(28) ಹಾಗೂ ಸೈನುಲ್(19) ಬಂಧಿತ ಆರೋಪಿಗಳು. ಇವರು ಹೊಸ ವರ್ಷಾಚರಣೆಗೆ ಮಾದಕ ದ್ರವ್ಯವನ್ನು ಸಾಗಿಸುತ್ತಿರುವುದಾಗಿ ಹೇಳುವ ಮೂಲಕ ಪೊಲೀಸರ ಬಳಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

    ಪಾನಿಪುರಿ ಹಾಗೂ ಜ್ಯೂಸ್ ಪ್ಯಾಕೆಟ್ ಗಳಲ್ಲಿ ಮಾದಕ ವಸ್ತುಗಳನ್ನು ಬಚ್ಚಿಟ್ಟಿದ್ದನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಆರೋಪಿಗಳು ದೆಹಲಿಯಿಂದ ಕೇರಳಕ್ಕೆ ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ದಂಧೆಯಿಂದ ಮಗಳನ್ನು ರಕ್ಷಿಸುವಂತೆ ವಿಎಚ್‌ಪಿಗೆ ತಾಯಿ ಪತ್ರ – ಆರೋಪಿ ಅರೆಸ್ಟ್

    ಕಳೆದ ಕೆಲವು ತಿಂಗಳುಗಳಿಂದ ಇಬ್ಬರು ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದು, ಅವರ ಮೇಲೆ ಪೊಲೀಸರು ಮೊದಲೇ ನಿಗಾ ಇಟ್ಟಿದ್ದರು. ಖಚಿತ ಮಾಹಿತಿಯ ಬಳಿಕ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ.

  • ಡ್ರಗ್ಸ್ ದಂಧೆಯಿಂದ ಮಗಳನ್ನು ರಕ್ಷಿಸುವಂತೆ ವಿಎಚ್‌ಪಿಗೆ ತಾಯಿ ಪತ್ರ – ಆರೋಪಿ ಅರೆಸ್ಟ್

    ಡ್ರಗ್ಸ್ ದಂಧೆಯಿಂದ ಮಗಳನ್ನು ರಕ್ಷಿಸುವಂತೆ ವಿಎಚ್‌ಪಿಗೆ ತಾಯಿ ಪತ್ರ – ಆರೋಪಿ ಅರೆಸ್ಟ್

    ಮಂಗಳೂರು: ಡ್ರಗ್ಸ್ ದಂಧೆಗೆ ಯುವತಿಯನ್ನು ದೂಡಿದ ಆರೋಪದ ಅಡಿ ಮಂಗಳೂರಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಕೃಷ್ಣಾಪುರದ ನಿವಾಸಿ ಮಹಮ್ಮದ್ ಶರೀಫ್ ಸಿದ್ದಿಕ್ ಬಂಧಿತ ಆರೋಪಿ. ಬಿಜೈ ಬಳಿಯ ಗ್ರೇಸಿ ಪಿಂಟೋ ಎಂಬವರು ಮಗಳಿಗೆ ಆಗುತ್ತಿರುವ ಸಮಸ್ಯೆಯನ್ನು ವಿಶ್ವ ಹಿಂದೂ ಪರಿಷತ್‌ಗೆ ಪತ್ರದ ಮೂಲಕ ತಿಳಿಸಿದ್ದರು. ಈ ಸಂಬಂಧ ವಿಎಚ್‌ಪಿ ಮುಖಂಡರು ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಆರೋಪಿಯನ್ನು ಬಂಧಿಸಿಲಾಗಿದೆ.

    ಈಕೆಗೆ ನಾಲ್ಕು ವರ್ಷದ ಹಿಂದೆ ಫೇಸ್‌ಬುಕ್ ಮೂಲಕ ಸಿದ್ದಿಕ್‌ನ ಪರಿಚಯವಾಗಿದೆ. ಬಳಿಕ ಆತನ ಜೊತೆ ಯುವತಿ ಸಲುಗೆಯಿಂದ ಇದ್ದಳು.

    ಪತ್ರದಲ್ಲಿ ಏನಿದೆ?
    ಕಳೆದ ಮೂರು ವರ್ಷದಿಂದ ಕೃಷ್ಣಾಪುರದ ನಿವಾಸಿ ಮಹಮ್ಮದ್ ಶರೀಫ್ ಸಿದ್ದಿಕ್ ಎಂಬವನು ನಿರಂತರವಾಗಿ ಅವಳಿಗೆ ದೌರ್ಜನ್ಯ, ಲೈಂಗಿಕ ಕಿರುಕುಳ, ಮಾದಕ ವಸ್ತುಗಳನ್ನು ನಿರಂತರವಾಗಿ ಕೊಡುತ್ತಿದ್ದಾನೆ. ಇದರಿಂದಾಗಿ ಅವಳು ಡ್ರಗ್ಸ್ ಚಟಕ್ಕೆ ಬಿದ್ದು ಅವಳ ಆರೋಗ್ಯ ಹದಗೆಟ್ಟಿದೆ ಮತ್ತು ಮಾನಸಿಕವಾಗಿ ಅಸ್ವಸ್ಥಳಾಗಿದ್ದಾಳೆ.

    ನಿರಂತರ ಅವಳನ್ನು ಮನೆಯಿಂದ ಕರೆದುಕೊಂಡು ಹೋಗಿ ಅವನು ಮತ್ತೆ ಅವನ ಸ್ನೇಹಿತರು ಬಹಳ ದಿನಗಳವರೆಗೆ ಇರಿಸಿಕೊಳ್ಳುತ್ತಿದ್ದ. ಇದರಿಂದಾಗಿ ನನ್ನ ಭವಿಷ್ಯ ಹಾಳಾಗಿದೆ. ಈಗಾಗಲೇ ನಾನು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೇನೆ ಮತ್ತು ನಮ್ಮ ಸಮುದಾಯದ ಗುರುಗಳಿಗೂ ದೂರು ಕೊಟ್ಟಿದ್ದೇನೆ. ಆದರೂ ನನ್ನ ಮಗಳಿಗೆ ನ್ಯಾಯ ಸಿಗಲಿಲ್ಲ. ಈಗಾಗಲೇ ಸಿದ್ದಿಕ್‌ಗೆ ಮೂರು, ನಾಲ್ಕು ಮದುವೆ ಆಗಿದೆ ಎಂದು ಮಾಹಿತಿ ಸಿಕ್ಕಿದೆ. ಇದೀಗ ನನ್ನ ಮಗಳ ಜೀವನ ಕೂಡ ಹಾಳು ಮಾಡಿದ್ದಾನೆ. ಆದುದರಿಂದ ನನ್ನ ಮಗಳನ್ನು ರಕ್ಷಿಸಿ ನನಗೆ ಮತ್ತು ನನ್ನ ಮಗಳಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ನಿಮ್ಮಲ್ಲಿ ವಿನಮ್ರತೆಯಿಂದ ವಿನಂತಿಸಿಕೊಳ್ಳುತ್ತೇನೆ. ಇದನ್ನೂ ಓದಿ: ಪ್ರಾಂಶುಪಾಲೆಯ ಕಿರುಕುಳಕ್ಕೆ 5ನೇ ಮಹಡಿಯಿಂದ ಬಿದ್ದು ಪ್ರಾಣ ಬಿಟ್ಟ 13 ವರ್ಷದ ಬಾಲಕಿ

    ಪೊಲೀಸರು ಹೇಳಿದ್ದೇನು?
    ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಪ್ರತಿಕ್ರಿಯಿಸಿ, ಮಹಿಳೆ ಕೊಟ್ಟಿರುವಂತಹ ದೂರಿನ ಮೇರೆಗೆ ಆರೋಪಿಯ ಮೇಲೆ ಸೆಕ್ಷನ್ 354   ಮತ್ತು 506 ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಮಹಮ್ಮದ್ ಶರೀಫ್ ಸಿದ್ದಿಕಿಯನ್ನು ಬಂಧಿಸಲಾಗಿದೆ. ಆರೋಪಿಯು ಈಗಾಗಲೇ ಮೂರು ಮದುವೆಯಾಗಿದ್ದಾನೆ. ಇದರ ಜೊತೆ ಜೊತೆಗೆ ಗ್ರೇಸಿ ಪಿಂಟೋ ಮಗಳ ಜೊತೆಯೂ ಸುಮಾರು ವರ್ಷಗಳ ಹಿಂದೆಯಿಂದಲೇ  ಸಂಬಂಧವಿರುವುದು ತಿಳಿದು ಬಂದಿದೆ.

    ಆರೋಪಿ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಈ ಹಿಂದೆಯೇ ಎಂಡಿಎಂಎ ಡ್ರಗ್ಸ್ ಪೆಡ್ಲಿಂಗ್ ಮಾಡಿರುವ ಎರಡು ಪ್ರಕರಣಗಳು ಇದೆ. ಸದ್ಯ ಯುವತಿಗೆ ಕೌನ್ಸಿಲಿಂಗ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆ ಬಳಿಕ ಈ ವಿಚಾರವಾಗಿ ಯುವತಿಯ ಹೇಳಿಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತೇವೆ. ತಾಯಿಯ ಮೇಲೆ ಬೆದರಿಕೆ ಹಾಕಿದ ಹಿನ್ನೆಲೆಯ ಒಳಗೆ ಈ ಕೇಸನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಪೊಲೀಸ್ ಕಮೀಷನರ್ ಹೇಳಿದ್ದಾರೆ. ಇದನ್ನೂ ಓದಿ: ಧಾರವಾಡದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ – 6 ಅಪ್ರಾಪ್ತರು ಪೊಲೀಸರ ವಶಕ್ಕೆ

  • ಮಕ್ಕಳ ಡೈಪರ್‌ನಲ್ಲಿ ಡ್ರಗ್ಸ್ ಸಾಗಾಟ – ಗಗನಸಖಿ ಅರೆಸ್ಟ್

    ಇಂದೋರ್: ಮಕ್ಕಳ ಡೈಪರ್‌ನಲ್ಲಿ 10 ಲಕ್ಷ ರೂ. ಮೌಲ್ಯದ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಆರೋಪದ ಅಡಿ ಗಗನಸಖಿಯನ್ನು ಇಂದೋರ್ ಪೊಲೀಸರು ಬಂಧಿಸಿದ್ದಾರೆ.

    DRUGS

    ಮಾನಸಿ ಬಂಧನಕ್ಕೆ ಒಳಗಾದ ಗಗನಸಖಿ. ಈಕೆಯ ಪತಿ ಪುಣೆಯಲ್ಲಿರುವದಾಗಿ ಹೇಳಿಕೊಂಡಿದ್ದಾಳೆ. ಅವಳು ಕನಿಷ್ಟ 10 ವರ್ಷದಿಂದ ಈ ಡ್ರಗ್ಸ್ ಜಾಲದಲ್ಲಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆ ತಂದೇ ತರುತ್ತೇವೆ: ಬಿಎಸ್‌ವೈ

    ಬ್ಯಾಗ್ ತಪಾಸಣೆ ನಡೆಸಿದಾಗ ಮಗುವಿನ ಡೈಪರ್ ನಡುವೆ ಸುಮಾರು 10 ಲಕ್ಷ ಮೌಲ್ಯದ 100 ಗ್ರಾಂ ಎಂಡಿ ಡ್ರಗ್ಸ್ ಜಪ್ತಿ ಮಾಡಲಾಗಿದೆ.

    ಈ ಪ್ರಕರಣ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಇಂದೋರ್ ಕಮಿಷನರ್ ಹರಿನಾರಾಯಣಚಾರಿ ಮಿಶ್ರಾ, ಕಳೆದ ಕೆಲವು ದಿನಗಳ ಹಿಂದೆ ನಾರ್ಕೋ ಸಹಾಯವಾಣಿ ಸಂಖ್ಯೆಗೆ 20ಕ್ಕೂ ಹೆಚ್ಚು ದೂರುಗಳು ಬಂದಿದ್ದವು. ಇದರಲ್ಲಿ ಹೆಚ್ಚಿನ ದೂರುಗಳು ಡ್ರಗ್ಸ್‍ಗೆ ಸಂಬಂಧಿಸಿತ್ತು. ನಮ್ಮ ಪ್ರಕಾರ ಹೊಸ ವರ್ಷದ ಮುನ್ನ ದಿನದ ಪಾರ್ಟಿಗಳಿಗಾಗಿ ಜನರಿಗೆ ಸರಬರಾಜು ಮಾಡಲು ಅವಳು ಇಂದೋರ್‍ಗೆ ಡ್ರಗ್ಸ್ ತಂದಿದ್ದಾಳೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಭಾವನಾತ್ಮಕ ಹೇಳಿಕೆ ಹೃದಯ ಇದ್ದವರಿಗೆ ಮಾತ್ರ ಅರ್ಥವಾಗುತ್ತದೆ: ಎಚ್‍ಡಿಕೆ

  • ಬೆಂಗಳೂರಿನಲ್ಲಿ ಶುರುವಾಗಿದೆ ಹೈಟೆಕ್ ಡ್ರಗ್ಸ್ ಪೆಡ್ಲಿಂಗ್

    ಬೆಂಗಳೂರಿನಲ್ಲಿ ಶುರುವಾಗಿದೆ ಹೈಟೆಕ್ ಡ್ರಗ್ಸ್ ಪೆಡ್ಲಿಂಗ್

    ಬೆಂಗಳೂರು: ವಾಟ್ಸಪ್ ಲೊಕೇಷನ್ ಹಾಗೂ ಫೋಟೋದಿಂದ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಐವರು ಪೆಡ್ಲರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಕೇರಳ ಮೂಲದ ಮೊಹಮ್ಮದ್ ಸಕಾರಿಯ, ಶಾಮಿಲ್, ಪ್ರಣವ್, ಅನುಭವ್ ರವೀಂದ್ರನ್, ಶ್ಯಾಮ್ ದಾಸ್ ಬಂಧಿತ ಆರೋಪಿಗಳು. ನಿಗದಿತ ಸ್ಥಳದಲ್ಲಿ ಡ್ರಗ್ಸ್ ಇಟ್ಟು, ಖರೀದಿ ಮಾಡುವವರಿಗೆ ಆ ಸ್ಥಳದ ಫೋಟೋ ಮತ್ತು ಲೊಕೇಷನ್‌ನನ್ನು ವಾಟ್ಸಪ್ ಮಾಡುತ್ತಿದ್ದರು.

    ನೇರವಾಗಿ ಡ್ರಗ್ಸ್ ಪೆಡ್ಲಿಂಗ್ ಮಾಡುವವರ ಮೇಲೆ ಪೊಲೀಸರು ನಿಗಾವಹಿಸುತ್ತಿರುವ ಹಿನ್ನೆಲೆಯಲ್ಲಿ ಮರದ ಬುಡ, ಸಾರ್ವಜನಿಕರು ಓಡಾಡುವ ಜಾಗ, ವಾಕಿಂಗ್, ಜಾಗಿಂಗ್ ಮಾಡುವ ಜಾಗಗಳಲ್ಲಿ ಪೆಡ್ಲರ್‌ಗಳು ಡ್ರಗ್ಸ್ ಇಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಮಡಿವಾಳ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ಹೆಚ್ಚಿನ ತನಿಖೆಯಲ್ಲಿ ಹೈಟೆಕ್ ಡ್ರಗ್ಸ್ ಪೆಡ್ಲಿಂಗ್ ನಡೆಯುತ್ತಿರುವ ಮಾಹಿತಿ ದೊರಕಿದ್ದು, ಐವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮೊದಲನೇ ಬಾರಿಗೆ ನನ್ನ ಅಣ್ಣನಿಗೆ ವೋಟು ಹಾಕುತ್ತಿರೊದ್ರಿಂದ ಒಳ್ಳೆಯ ನಂಬರ್‌ನಲ್ಲಿ ವೋಟು ಹಾಕ್ದೆ ಅಷ್ಟೇ: ಪ್ರಜ್ವಲ್ ರೇವಣ್ಣ

  • 500 ಕೋಟಿ ಮೌಲ್ಯದ ಡ್ರಗ್ಸ್ ಪೊಲೀಸರ ವಶಕ್ಕೆ

    500 ಕೋಟಿ ಮೌಲ್ಯದ ಡ್ರಗ್ಸ್ ಪೊಲೀಸರ ವಶಕ್ಕೆ

    ಇಂಫಾಲ್: ಬರೋಬ್ಬರಿ 500 ಕೋಟಿ ಮೌಲ್ಯದ ಡ್ರಗ್ಸ್‌ನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಮಣಿಪುರದ ಭಾರತ- ಮ್ಯಾನ್ಮಾರ್ ಗಡಿ ಸಮೀಪವಿರುವ ಮೊರೆ ಪಟ್ಟಣದಲ್ಲಿ ನಡೆದಿದೆ.

    POLICE JEEP

    500 ಕೋಟಿ ಮೌಲ್ಯದ ಡ್ರಗ್ಸ್‌ನ್ನು ಅಸ್ಸಾಂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಜ್ಯ ಪೊಲೀಸರು ಮತ್ತು ಅಸ್ಸಾಂ ರೈಫಲ್ಸ್ ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೋದಾಮಿನ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಸರಿಸುಮಾರು 54 ಕೆಜಿಯ ಬ್ರೌನ್ ಶುಗರ್ ಮತ್ತು 154 ಕೆಜಿ ತೂಕದ 152 ಪ್ಯಾಕೆಟ್ ಕ್ರಿಸ್ಟಲ್ ಮೆಥಾಂಫೆಟಮೈನ್ ಪತ್ತೆಯಾಗಿದೆ. ಸದ್ಯ ಈ 2 ಮಾದಕ ವಸ್ತುವಿನ ಬೆಲೆ ಅಂದಾಜು 500 ಕೋಟಿ ರೂಪಾಯಿ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರಕ್ಕೆ ರೆಡ್ ಅಲರ್ಟ್: ಅಖಿಲೇಶ್ ಯಾದವ್

    ಗುಪ್ತಚರ ಮಾಹಿತಿ ಆಧಾರದ ಮೇಲೆ ಅಸ್ಸಾಂ ಪೊಲೀಸರು ಮನೆಯೊಂದರ ಮೇಲೆ ದಾಳಿಮಾಡಿದ್ದಾರೆ. ಈ ವೇಳೆ 500 ಕೋಟಿ ಬೆಲೆ ಬಾಳುವ ಮಾದಕ ವಸ್ತು ಪತ್ತೆಯಾಗಿದೆ. ದಾಳಿ ವೇಳೆ 19 ವರ್ಷದ ಮೊಂಖೈನನ್ನು ಬಂಧಿಸಲಾಗಿದೆ ಎಂದು ಎಸ್‍ಪಿ ವಿಕ್ರಜಿತ್ ಸಿಂಗ್ ಹೇಳಿದ್ದಾರೆ.  ಇದನ್ನೂ ಓದಿ:  ಖ್ಯಾತ ಫೋಟೋಗ್ರಾಫರ್ ತೆಗೆದಿರುವ ಸೂರ್ಯನ ಒಂದು ಫೋಟೋಗೆ 3766ರೂ.!

  • ಅಪಘಾತ ಪ್ರಕರಣಕ್ಕೆ ಸ್ಫೋಟಕ ತಿರುವು – ಕೇರಳ ಮಾಡೆಲ್‍ಗಳಿಗಿತ್ತಾ ಡ್ರಗ್ ಪೆಡ್ಲರ್‌ಗಳ ನಂಟು?

    ಅಪಘಾತ ಪ್ರಕರಣಕ್ಕೆ ಸ್ಫೋಟಕ ತಿರುವು – ಕೇರಳ ಮಾಡೆಲ್‍ಗಳಿಗಿತ್ತಾ ಡ್ರಗ್ ಪೆಡ್ಲರ್‌ಗಳ ನಂಟು?

    ತಿರುವನಂತಪುರ: ಕೊಚ್ಚಿಯಲ್ಲಿ ನವೆಂಬರ್ 1 ರಂದು ಅಪಘಾತದಲ್ಲಿ ಮೃತಪಟ್ಟ ಮಾಡೆಲ್‍ಗಳಿಗೆ ಡ್ರಗ್ ಪೆಡ್ಲರ್‌ಗಳ ನಂಟು ಇತ್ತಾ ಎಂಬ ಪ್ರಶ್ನೆ ಎದ್ದಿದೆ.

    ಮೃತಪಟ್ಟ ಮಾಡೆಲ್‍ಗಳ ಪ್ರಕರಣ ಕುರಿತಂತೆ ತನಿಖೆ ಚುರುಕಾಗಿದ್ದು, ಇದೀಗ ಪಾರ್ಟಿಯಲ್ಲಿ ಭಾಗವಹಿಸಿದ್ದ ಅತಿಥಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಈ ವೇಳೆ ಡ್ರಗ್ಸ್ ಲಿಂಕ್ ಬಗ್ಗೆ ಅನುಮಾನ ಬಂದಿದೆ.

    Kerala Model

    ನವೆಂಬರ್ 1 ರಂದು ಫೋರ್ಟ್ ಕೊಚ್ಚಿಯ ನಂ.18 ಎಂಬ ಐಷಾರಾಮಿ ಹೋಟೆಲ್‍ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಮಿಸ್ ಕೇರಳ 2019 ವಿಜೇತೆ ಆನ್ಸಿ ಕಬೀರ್, ರನ್ನರ್ ಅಪ್ ಅಂಜನಾ ಶಾಜನ್ ಭಾಗಿಯಾಗಿದ್ದರು. ಪಾರ್ಟಿ ಬಳಿಕ ಇಬ್ಬರು ರಸ್ತೆ ಅಪಘತಾದಲ್ಲಿ ಸಾವನ್ನಪ್ಪಿದ್ದರು. ಇದನ್ನೂ ಓದಿ:  ರಾಜ್ಯದಲ್ಲಿ ಅಕಾಲಿಕ ಮಳೆಗೆ ಜನಜೀವನ ಅಸ್ತವ್ಯಸ್ತ – ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಕಟ್ಟೆಚ್ಚರ

    Kerala Model

    ಪ್ರಕರಣಕ್ಕೆ ಸಂಬಂಧಿಸಿ ನಂ.18 ಹೋಟೆಲ್‍ನ ಮಾಲೀಕ ರಾಯ್ ವಯಲಾತ್ ಹಾಗೂ ಹೋಟೆಲ್‍ನ ಐವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಮಾಡೆಲ್‍ಗಳು ಹೋಗುತ್ತಿದ್ದ ಕಾರನ್ನು ಆಡಿ ಕಾರೊಂದು ಹಿಂಬಾಲಿಸುತ್ತಿದ್ದ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ದೊರೆತ್ತಿತ್ತು. ಕಾರನ್ನು ಚಲಾಯಿಸುತ್ತಿದ್ದ ಸೈಜು ತಂಕಚನ್‍ಗೆ ಕೊಚ್ಚಿಯಲ್ಲಿ ಡ್ರಗ್ ಪೆಡ್ಲರ್ ಸಂಪರ್ಕವಿದೆ. ಈತ ಬೆಂಗಳೂರಿನಿಂದ ಕೊಚ್ಚಿಗೆ ಡ್ರಗ್ಸ್ ಮಾರಾಟ ಮಾಡುವ ಗುಂಪಿನಲ್ಲಿ ಕೆಲಸ ಮಾಡುತ್ತಿದ್ದ ಎಂಬ ಆರೋಪ ಬಂದಿದೆ.

     

    View this post on Instagram

     

    A post shared by Ansi Kabeer (@ansi_kabeer)

    ಪಾರ್ಟಿ ನಂತರ ಭೇಟಿಯಾಗುವಂತೆ ಸೈಜು ತಿಳಿಸಿದ್ದ. ಆದರೆ ಆತನ ಆಹ್ವಾನವನ್ನು ಮಾಡೆಲ್‍ಗಳು ನಿರಾಕರಿಸಿದ್ದರು. ಆದಾದ ಬಳಿಕ ಈ ಅಪಘಾತ ನಡೆದಿದೆ. 2021 ಮೇನಲ್ಲಿ ಸೈಜು ಹೋಟೆಲ್ ಪಾರ್ಟಿಯಲ್ಲಿ ಮಾದಕ ದ್ರವ್ಯ ಸೇವೆಸಿದ್ದ ಫೋಟೋ ಲಭ್ಯವಾಗಿದೆ. ಆದರೆ ಹೋಟೆಲ್ ಮಾಲೀಕ ರಾಯ್ ವಯಲಾತ್ ಪೊಲೀಸರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರಿಂದ ತನಿಖೆಗೆ ಅಡ್ಡಿಯಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ:  1.5 ಕೋಟಿ ರೂ. ಮೌಲ್ಯದ ಹಾವಿನ ವಿಷ ಮಾರಾಟ – ಇಬ್ಬರು ಅರೆಸ್ಟ್

    ಘಟನೆಯಾಗಿ ಮೂರು ವಾರ ಕಳೆದರೂ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದ ಕಾರಣ ಇದೀಗ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಬಿಜಿ ಜಾರ್ಜ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.