Tag: drugs party

  • ಬೆಂಗಳೂರಲ್ಲಿ ನಡೀತಾ ಹದಿಹರೆಯದವರ ಡ್ರಗ್ ಪಾರ್ಟಿ?

    ಬೆಂಗಳೂರಲ್ಲಿ ನಡೀತಾ ಹದಿಹರೆಯದವರ ಡ್ರಗ್ ಪಾರ್ಟಿ?

    – ಪ್ರತಿಷ್ಠಿತ ಕಾಲೇಜು ಯುವಕ-ಯುವತಿಯರೇ ಭಾಗಿ?

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹದಿಹರಯದವರ ಡ್ರಗ್ಸ್ ಪಾರ್ಟಿ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಡ್ರಗ್ಸ್ ಪಾರ್ಟಿಯಲ್ಲಿ ಪ್ರತಿಷ್ಠಿತ ಕಾಲೇಜು ಯುವಕ-ಯುವತಿಯರು ಪಾಲ್ಗೊಂಡಿದ್ದರು ಎನ್ನಲಾಗಿದೆ.

    ಈ ಬಗ್ಗೆ ಪೀಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಾದರೂ ಎಫ್‌ಐಆರ್ ಮಾಡಿಲ್ಲ ಎಂದು ಆರೋಪಿಸಲಾಗಿದೆ. ಪೀಣ್ಯಾ ಠಾಣಾ ವ್ಯಾಪ್ತಿಯ ಅಮರಾವತಿ ಬಡವಾಣೆಯ ಫ್ಲ್ಯಾಟ್‌ನಲ್ಲಿ ಪಾರ್ಟಿ ನಡೆದಿದೆ.

    ಯುವಕ-ಯುವತಿಯರಿಂದ ಲೇಟ್ ನೈಟ್ ಪಾರ್ಟಿ ನಡೆದಿದೆ. ಕಳೆದ ಕ್ರಿಸ್ಮಸ್ ಹಾಗೂ ಹೊಸ ವರ್ಷದ ದಿನ ನಡೆದ ಪಾರ್ಟಿ ವೀಡಿಯೋ ವೈರಲ್ ಆಗಿದೆ.

    ಜನವರಿ ೧೨ ರಂದು ಈ ಕುರಿತು ಪೀಣ್ಯಾ ಠಾಣೆಯಲ್ಲಿ ದೂರು ದಾಖಲಾಗಿದೆ. ಮೋಜು-ಮಸ್ತಿಯ ವೀಡಿಯೊಗಳಿದ್ದು, ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.

  • ಸ್ಫೋಟಕ ಟ್ವಿಸ್ಟ್‌ – ಡ್ರಗ್ಸ್‌ ಪಾರ್ಟಿಯಲ್ಲಿದ್ದ ಯುವತಿಯರಿಗೆ ಪರಿಚಯವೇ ಇರಲಿಲ್ಲ!

    ಸ್ಫೋಟಕ ಟ್ವಿಸ್ಟ್‌ – ಡ್ರಗ್ಸ್‌ ಪಾರ್ಟಿಯಲ್ಲಿದ್ದ ಯುವತಿಯರಿಗೆ ಪರಿಚಯವೇ ಇರಲಿಲ್ಲ!

    – ಹಲವು ಡ್ರಗ್ಸ್‌ ಪಾರ್ಟಿಯಲ್ಲಿ ಹೇಮಾ ಭಾಗಿ

    ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ (Electronic City) ಬಳಿ ನಡೆದ ಡ್ರಗ್ಸ್ ಪಾರ್ಟಿ (Drugs Party) ಪ್ರಕರಣಕ್ಕೆ ಸ್ಫೋಟಕ ತಿರುವು ಸಿಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ತೆಲುಗು ಚಿತ್ರ ನಟಿ ಹೇಮಾರನ್ನು ಮತ್ತೆ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

    ಡ್ರಗ್ಸ್ ಪಾರ್ಟಿಯಲ್ಲಿ ಭಾಗವಹಿಸಿದ್ದ ನೂರಕ್ಕೂ ಹೆಚ್ಚು ಜನರ ರಕ್ತ ಪರೀಕ್ಷೆ ವೇಳೆ 86 ಮಂದಿ ಡ್ರಗ್ಸ್ ಸೇವಿಸಿರುವುದು ಪತ್ತೆಯಾಗಿತ್ತು. ಈ ಸಂಬಂಧ ಈಗಾಗಲೇ ಐವರನ್ನು ಬಂಧಿಸಿದ್ದು, ಪಾರ್ಟಿಯಲ್ಲಿದ್ದ ಪ್ರಮುಖರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿದೆ.

    ಮೊದಲ ದಿನವೇ ನಾನು ಘಟನೆ ನಡೆದ ಸ್ಥಳದಲ್ಲಿ ಇರಲಿಲ್ಲ ಎಂದು ಸುಳ್ಳು ಹೇಳಿದ್ದ ಹೇಮಾ (Hema) ನಂತರ ಪೊಲೀಸರಿಗೆ ಹೆಸರು, ವಿಳಾಸ ತಪ್ಪು ವಿವರ ನೀಡಿ ತನಿಖೆ ದಾರಿ ತಪ್ಪಿಸಲು ನೋಡಿದ್ದರು. ವಿಚಾರಣೆಗೆ ಕರೆದಾಗಲೂ ಕೂಡ ಅನಾರೋಗ್ಯ ಸಮಸ್ಯೆ ನೆಪದಲ್ಲಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು. ಕೊನೆಗೆ ಎರಡು ದಿನಗಳ ಹಿಂದೆ ವಿಚಾರಣೆಗೆ ಬಂದ ವೇಳೆ ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ಅಣ್ಣಾಮಲೈ ಫೋಟೋ ಹಾಕಿ ನಡು ರಸ್ತೆಯಲ್ಲಿ ಮೇಕೆ ತಲೆ ಕತ್ತರಿಸಿ ಸಂಭ್ರಮಿಸಿದ ಡಿಎಂಕೆ ಕಾರ್ಯಕರ್ತ

     

    ಪೊಲೀಸ್‌ ವಿಚಾರಣೆ ಸಂದರ್ಭದಲ್ಲಿ ಹೇಮಾ ಹಲವು ಡ್ರಗ್ಸ್ ಪಾರ್ಟಿಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೇ ಕೆಲ ಪೆಡ್ಲರ್‌ಗಳ ಜೊತೆಗೂ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಫಾರ್ಮ್‌ ಹೌಸ್‌ನಲ್ಲಿ ಬರೇ ಡ್ರಗ್ಸ್ ಪಾರ್ಟಿ ಮಾತ್ರ ಅಲ್ಲದೇ ಕೆಲವೊಂದು ಅಕ್ರಮ ಚಟುವಟಿಕೆಗಳು ಕೂಡ ನಡೆದಿರುವ ಬಗ್ಗೆ ಸಿಸಿಬಿಗೆ ಮಾಹಿತಿ ಲಭ್ಯವಾಗಿದೆ.

    ಆಗಮಿಸಿದ ಯುವತಿಯರಿಗೆ ಅಲ್ಲಿ ಪರಿಚಯವೇ ಇರಲಿಲ್ಲ. ಅಷ್ಟೇ ಅಲ್ಲದೇ ಲಕ್ಷಾಂತರ ರೂ. ಪತ್ತೆಯಾಗಿರುವುದು ಹಲವು ಅನುಮಾಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಆನೇಕಲ್ ಜಿಲ್ಲಾ ಕೋರ್ಟ್ ಮುಂದೆ ಹೇಮಾ ಅವರನ್ನು ಹಾಜರುಪಡಿಸಿದ್ದ ಸಿಸಿಬಿ ಪೊಲೀಸರು ಈ ಸಂಬಂಧ ಕೆಲ ದಾಖಲೆಗಳು, ವಿಚಾರಣೆಯಲ್ಲಿ ಸಿಕ್ಕ ಮಾಹಿತಿಯನ್ನು ಕೋರ್ಟ್ ಮುಂದಿಟ್ಟು ಇನ್ನೂ ಎರಡು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ಇದನ್ನೂ ಓದಿ: ಬಿಜೆಪಿ ಮುಖಂಡ, ಬಿಎಸ್‌ವೈ ಆಪ್ತ ಕಾಪು ಸಿದ್ದಲಿಂಗಸ್ವಾಮಿ ನಿಧನ

    ಸದ್ಯದ ಮಾಹಿತಿ ಪ್ರಕಾರ ನಟಿಗೆ ಪೆಡ್ಲರ್‌ಗಳ ಜೊತೆಗೆ ನಂಟಿದ್ದು ಇದು ಸಾಬೀತಾದರೆ ಹೇಮಾಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

  • ಬೆಂಗಳೂರಿನಲ್ಲಿ ಭರ್ಜರಿ ಡ್ರಗ್ಸ್ ಪಾರ್ಟಿ – ಬಾಲಿವುಡ್ ನಟನ ಪುತ್ರ ಸೇರಿ 50ಕ್ಕೂ ಹೆಚ್ಚು ಮಂದಿ ವಶ

    ಬೆಂಗಳೂರಿನಲ್ಲಿ ಭರ್ಜರಿ ಡ್ರಗ್ಸ್ ಪಾರ್ಟಿ – ಬಾಲಿವುಡ್ ನಟನ ಪುತ್ರ ಸೇರಿ 50ಕ್ಕೂ ಹೆಚ್ಚು ಮಂದಿ ವಶ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವೀಕೆಂಡ್ ಡ್ರಗ್ಸ್ ಪಾರ್ಟಿಗಳಿಗೆ ಎಷ್ಟೇ ಬಿಸಿ ಮುಟ್ಟಿಸಿದರೂ ನಿಂತಿಲ್ಲ. ಹಲಸೂರಿನ ಜಿಟಿ ಮಾಲ್ ಬಳಿ ಇರುವ ದಿ ಪಾರ್ಕ್ ಹೋಟೆಲ್‍ನಲ್ಲಿ ತಡರಾತ್ರಿ ಡ್ರಗ್ಸ್ ಪಾರ್ಟಿ ನಡೆಯುತ್ತಿತ್ತು ಎಂಬ ಅನುಮಾನದ ಮೇರೆಗೆ ಹಲಸೂರು ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆಸಿದ್ದರು.

    ಮಧ್ಯರಾತ್ರಿ 12 ಗಂಟೆ ಸುಮಾರಿಗೆ ದಾಳಿ ನಡೆಸಿದ ಪೊಲೀಸರು, ಬಾಲಿವುಡ್ ನಟ ಮಗ ಸೇರಿದಂತೆ, 50ಕ್ಕೂ ಹೆಚ್ಚು ಯುವಕ, ಯುವತಿಯರನ್ನು ವಶಕ್ಕೆ ಪಡೆದು ಮೆಡಿಕಲ್ ಟೆಸ್ಟ್‌ಗೆ ಒಳಪಡಿಸಿದ್ದಾರೆ. ಅವರಲ್ಲಿ ಐವರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದ್ದು, ಅರೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಬಡವರಿಗೆ ಸೂರು ಕಲ್ಪಿಸಲು 5 ಸಾವಿರ ಎಕರೆ ಸರ್ಕಾರಿ ಜಮೀನು ಮೀಸಲು: ಸಿಎಂ

    ಮುಂಬೈ ಮೂಲದ ಡಿಜೆಯಿಂದ ಡ್ರಗ್ಸ್ ಸಪ್ಲೈ ಶಂಕೆ ವ್ಯಕ್ತವಾಗಿದೆ. ಈ ಡ್ರಗ್ಸ್ ಪಾರ್ಟಿಯಲ್ಲಿ ರಾಜ್ಯದ ಪ್ರಭಾವಿಗಳ ಮಕ್ಕಳು ಭಾಗಿಯಾಗಿದ್ದು, ಪೊಲೀಸ್ ರೇಡ್‍ಗೆ ಮುನ್ನವೇ ಅವರೆಲ್ಲಾ ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೆ ಲಾಲೂ ಪ್ರಸಾದ್ ಯಾದವ್ ಸ್ಪರ್ಧೆ

  • ಆರ್ಯನ್ ಖಾನ್ ಕಿಡ್ನಾಪ್ ಮಾಡಲಾಗಿತ್ತು: ನವಾಬ್ ಮಲಿಕ್

    ಆರ್ಯನ್ ಖಾನ್ ಕಿಡ್ನಾಪ್ ಮಾಡಲಾಗಿತ್ತು: ನವಾಬ್ ಮಲಿಕ್

    ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ಕಿಡ್ನಾಪ್ ಮಾಡಿ, ಹಣ ಕೇಳಲಾಗಿತ್ತು ಎಂದು ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಗಂಭೀರ ಆರೋಪ ಮಾಡಿದ್ದಾರೆ.

    ಡ್ರಗ್ಸ್ ಕೇಸ್ ಪ್ರಕರಣ ಅಂತಿಮವಾಗಿಲ್ಲದೇ, ಈ ನಡುವೆಯೇ ಆರ್ಯನ್ ಖಾನ್ ಜಾಮೀನು ಪಡೆದುಕೊಂಡು ಇತ್ತೀಚೆಗೆ ಹೊರಬಂದಿದ್ದಾರೆ. ಅದು ಅಲ್ಲದೇ ಆರ್ಯನ್ ಕೇಸ್ ನೋಡಿಕೊಳ್ಳುತ್ತಿದ್ದ ಎನ್‍ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರ ವಿರುದ್ಧ ಭ್ರಷ್ಟಚಾರದ ಆರೋಪಗಳು ಸಹ ಕೇಳಿಬರುತ್ತಿದೆ. ಈ ಹಿನ್ನೆಲೆ ಸಮೀರ್ ಆರ್ಯನ್ ಅವರನ್ನು ಅಪಹರಿಸಿಬೇಕೆಂದು ಈ ಆರೋಪ ಅವರ ಮೇಲೆ ಹಾಕುತ್ತಿದ್ದಾರೆ ಎಂದು ಗಂಭೀರ ಆರೋಪವನ್ನು ನವಾಬ್ ಮಾಡಿದ್ದಾರೆ. ಇದನ್ನೂ ಓದಿ: ಸೋನಂ, ರಿಯಾ ಫೋಟೋ ಹಾಕಿ ಮಿಸ್ ಮಾಡ್ಕೊಳ್ತಿದ್ದೀನಿ ಅಂದ್ರು ಅನಿಲ್ ಕಪೂರ್

    ಈ ಕುರಿತು ಮಾತನಾಡಿದ ಅವರು, ಎನ್‍ಸಿಬಿ ನಾಯಕರ ವಿರುದ್ಧ ಹಲವು ಆರೋಪಗಳು ಕೇಳಿ ಬರುತ್ತಿದೆ. ಈ ಹಿಂದೆ ಸಮೀರ್ ನೇತೃತ್ವದಲ್ಲಿ ಹಡಗಿನ ಮೇಲೆ ದಾಳಿ ನಡೆಸಿದ ನಂತರ 23 ವರ್ಷದ ಯುವಕನನ್ನು ಕಳೆದ ತಿಂಗಳು ಬಂಧಿಸಲಾಯಿತು. ಈ ವೇಳೆ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ನಂತರ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ಸಹ ನೀಡಿತ್ತು. ಆದರೆ ಬೇಕೆಂದು ಆರ್ಯನ್ ಅವರನ್ನು ಇದರಲ್ಲಿ ಸೇರಿಸಿ ಶಾರೂಖ್ ಅವರಿಗೆ ಸಮೀರ್ ಮತ್ತು ಬಿಜೆಪಿ ಮುಖಂಡ ಮೋಹಿತ್ ಅವರು ಹಣಕ್ಕಾಗಿ ಬೇಡಿಕೆಯನ್ನು ಇಟ್ಟಿದ್ದರು ಎಂದು ಆರೋಪ ಮಾಡಿದ್ದಾರೆ.

    ಅದು ಅಲ್ಲದೇ ಡ್ರಗ್ಸ್ ಪಾರ್ಟಿ ನಡೆದಿತ್ತು ಎನ್ನಲಾದ ಐಷಾರಾಮಿ ಹಡಗಿನಲ್ಲಿ ಆರ್ಯನ್ ಟಿಕೆಟ್ ಅನ್ನು ಪಡೆದಿರಲಿಲ್ಲ. ಅವರನ್ನು ಪ್ರತೀಕ್ ಗಾಬಾ ಮತ್ತು ಆಮಿರ್ ಫರ್ನೀಚರ್‍ವಾಲ್ ಅವರು ಕರೆದುಕೊಂಡು ಹೋಗಿದ್ದರು. ಇದು ಕಿಡ್ನಾಪ್ ಮತ್ತು ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣವಾಗಿದೆ. ಇದರ ಹಿಂದೆ ಮೋಹಿತ್ ಅವರ ಮಾಸ್ಟರ್ ಮೈಂಡ್ ಇದೆ ಎಂದಿದ್ದಾರೆ.

    ಸಮೀರ್ ಅವರು ಆರ್ಯನ್ ಅರೆಸ್ಟ್ ಆದ ಬಳಿಕ ಭಯಗೊಂಡಿದ್ದರು. ಅದಕ್ಕೆ ಅ.7ರಂದು ಓಶಿವಾರಾ ಸ್ಮಶಾನದ ಬಳಿ ಮೋಹಿತ್ ಮತ್ತು ಸಮೀರ್ ಭೇಟಿ ಆಗಿದ್ದರು. ಅವರ ಅದೃಷ್ಟಕ್ಕೆ ಅಲ್ಲಿಂದ ಸಿಸಿಟಿವಿ ಹಾಳಾಗಿತ್ತು. ಆದ್ದರಿಂದ ನಮಗೆ ಸರಿಯಾಗಿ ಈ ಕುರಿತು ಮಾಹಿತಿ ಮತ್ತು ಸಾಕ್ಷಿಗಳು ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಜಾಗೃತಿ ಅಭಿಯಾನಕ್ಕೆ ಕೇಳಿದ ತಕ್ಷಣ ಹಿಂದೆ ಮುಂದೆ ನೋಡದೆ ಬಂದಿದ್ದ ಅಪ್ಪು

    ನವಾಬ್ ಅವರು ಅನೇಕ ಆರೋಪಗಳನ್ನು ಹೊರಿಸುತ್ತಿದ್ದು, ಇವರ ವಿರುದ್ಧ ಸಮೀರ್ ಅವರ ತಂದೆ ಧ್ಯಾನದೇವ್ ಕಚ್ರುಜಿ ವಾಂಖೆಡೆ 1.25 ಕೊಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಅದು ಅಲ್ಲದೇ ನವಾಬ್ ಅವರು ಸಮೀರ್ ಅವರ ಕುಟುಂಬವನ್ನು ವಂಚಕ ಕುಟುಂಬ ಎಂದು ಕರೆದಿದ್ದು, ಅವರ ಧಾರ್ಮಿಕ ನಂಬಿಕೆಯನ್ನು ಪ್ರಶ್ನಿಸಿದ್ದಾರೆ. ಅವರನ್ನು ಹಿಂದೂಗಳ ಕುಟುಂಬವಲ್ಲ ಎಂದು ಟೀಕಿಸಿದ್ದರು. ಅದು ಅಲ್ಲದೇ ಅವರ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು.

  • ಮುಂಬೈ ಡ್ರಗ್ಸ್ ಪ್ರಕರಣ – ಐಷಾರಾಮಿ ಹಡಗಿನಲ್ಲಿ ತಗ್ಲಾಕ್ಕೊಂಡ ಬೆಂಗಳೂರಿಗರು..!

    ಮುಂಬೈ ಡ್ರಗ್ಸ್ ಪ್ರಕರಣ – ಐಷಾರಾಮಿ ಹಡಗಿನಲ್ಲಿ ತಗ್ಲಾಕ್ಕೊಂಡ ಬೆಂಗಳೂರಿಗರು..!

    ಮುಂಬೈ: ಹಡಗಿನಲ್ಲಿ ಡ್ರಗ್ಸ್ ಪಾರ್ಟಿ(Drugs Party) ಪ್ರಕರಣ ಸಂಬಂಧ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಪುತ್ರ ಆರ್ಯನ್ ನನ್ನು ಈಗಾಗಗಲೇ ಎನ್‍ಸಿಬಿ( NCB) ಬಂಧಿಸಿದೆ. ಇದೀಗ ಈ ಹಡಗಿನಲ್ಲಿ ಬೆಂಗಳೂರು ಮೂಲದವರು ಇದ್ದರು ಎನ್ನುವುದು ಬೆಳಕಿಗೆ ಬಂದಿದೆ.

    ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದ ಆರೋಪದಡಿ ರಾಷ್ಟ್ರೀಯ ಮಾದಕ ದ್ರವ್ಯ ತಡೆ ದಳ (ಎನ್‍ಸಿಬಿ) ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಒಳಗೊಂಡು 8 ಮಂದಿಯನ್ನು ಬಂಧಿಸಿದೆ. ಆದರೆ ಇದರಲ್ಲಿ ಬೆಂಗಳೂರಿಗರು ಇದ್ದು, ಇವರನ್ನು ಮುಂಬೈ ಎನ್‍ಸಿಬಿ ವಶಕ್ಕೆ ಪಡೆದಿದೆ ಎನ್ನಲಾಗಿದೆ. ಈ ವಿಚಾರವಾಗಿ ಬೆಂಗಳೂರಿನ ಎನ್‍ಸಿಬಿ ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದೆ. ಮಾಹಿತಿ ಸಿಗುತ್ತಿದ್ದಂತೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ಇದನ್ನೂ ಓದಿ: ಶಾರೂಖ್‌ ಪುತ್ರನ ಲೆನ್ಸ್‌ ಬಾಕ್ಸ್, ಇನ್ನೊಬ್ಬಳು ಯುವತಿಯ ಬ್ಯಾಗಲ್ಲಿದ್ದ ಸ್ಯಾನಿಟರಿ ಪ್ಯಾಡಲ್ಲಿತ್ತು ಮಾದಕ ವಸ್ತು!

    aryan khan ncb publictv

    ಶನಿವಾರ ಮಧ್ಯರಾತ್ರಿ ಖಚಿತ ಮಾಹಿತಿ ಆಧರಿಸಿ ಎನ್‍ಸಿಬಿ ಅಧಿಕಾರಿಗಳು ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಶಾರೂಖ್ ಪುತ್ರ ಸೇರಿ 8 ಮಂದಿಯನ್ನು ವಶಕ್ಕೆ ಪಡೆದಿದ್ದ ಎನ್‍ಸಿಬಿ ಹೆಚ್ಚಿನ ವಿಚಾರಣೆ ನಡೆಸಿ ಬಂಧಿಸಿತ್ತು. ಬಳಿಕ ಶಾರೂಖ್ ಪುತ್ರ ಹಾಗೂ ಇನ್ನಿಬ್ಬರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಈ ಮೂವರನ್ನು ಒಂದು ದಿನಕ್ಕೆ ಎನ್‍ಸಿಬಿ ವಶಕ್ಕೆ ನೀಡಿತ್ತು. ಇಂದು ಆರ್ಯನ್ ಖಾನ್ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಲಿದ್ದರು.

    ಇದನ್ನೂ ಓದಿ: ಡ್ರಗ್ಸ್ ಕೇಸ್- ಪ್ರಯಾಣಿಕರ ಸೋಗಿನಲ್ಲಿ ಟಿಕೆಟ್ ಬುಕ್, ಎನ್‍ಸಿಬಿ ರೋಚಕ ಕಾರ್ಯಾಚರಣೆ

    ನಿನ್ನೆ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಎನ್‍ಸಿಬಿ ವಾದಕ್ಕೆ ಮಣೆ ಹಾಕಿದೆ. ಆರ್ಯನ್‍ನನ್ನು ಹೆಚ್ಚಿನ ವಿಚಾರಣೆಗಾಗಿ ಅಕ್ಟೋಬರ್ 7ರವರೆಗೂ ಎನ್‍ಸಿಬಿ ವಶಕ್ಕೆ ನೀಡಿದೆ. ಹೈಪ್ರೊಫೈಲ್ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಅಗತ್ಯ ಇದೆ. ಅದಲ್ಲದೆ 4 ವರ್ಷದಿಂದ ಡ್ರಗ್ಸ್ ಸೇವನೆ ಮಾಡ್ತಿರುವ ಬಗ್ಗೆ ಆರ್ಯನ್  ತಪ್ಪೊಪ್ಪಿಕೊಂಡಿದ್ದಾರೆ. ಕೊಕೇನ್ ಸೇರಿದಂತೆ ಹಲವು ಮಾದಕ ವಸ್ತುಗಳ ಸೇವನೆ ಮಾಡಿದ್ದಾರೆ. ಆರ್ಯನ್‍ಗೆ ಡ್ರಗ್ ಪೆಡ್ಲರ್ ಗಳ ಜೊತೆಗೆ ನಂಟಿರುವ ಮೊಬೈಲ್ ಸಾಕ್ಷ್ಯ ಸಿಕ್ಕಿದೆ. ಮೊಬೈಲ್ ವಾಟ್ಸಪ್‍ನಲ್ಲಿ ಕೋಡ್ ವರ್ಡ್ ಬಳಸಿ ಡ್ರಗ್ ಖರೀದಿಸಿದ್ದಾರೆ. ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಗಳ ಜೊತೆಗೂ ನಂಟಿರಬಹುದು. ವಾಣಿಜ್ಯ ಉದ್ದೇಶಕ್ಕಾಗಿಯೂ ಡ್ರಗ್ಸ್ ಖರೀದಿ ಮಾಡಿರುವ ಸಾಕ್ಷ್ಯ ಸಿಕ್ಕಿದೆ. ಎನ್‍ಡಿಪಿಎಸ್ ಕಾಯ್ದೆಯಡಿ ತಕ್ಷಣಕ್ಕೆ ಜಾಮೀನು ಕೊಡಲು ಬರಲ್ಲ (ರಿಯಾ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ತೀರ್ಪು ಉಲ್ಲೇಖ) ಖ್ಯಾತನಾಮರ ಡ್ರಗ್ಸ್ ಸೇವನೆಯಿಂದ ವಿದ್ಯಾರ್ಥಿಗಳು ಪ್ರಭಾವಿತರಾಗಬಹುದು. ಆರ್ಯನ್‍ಗೆ ಜಾಮೀನು ನೀಡಬಾರದು, ಸಾಕ್ಷ್ಯ ನಾಶದ ಸಂಭವ ಇದೆ ಹಾಗಾಗಿ ಅಕ್ಟೋಬರ್ 11ರವರೆಗೂ ಆರೋಪಿಗಳನ್ನು ಎನ್‍ಸಿಬಿ ವಶಕ್ಕೆ ನೀಡಬೇಕು ಎಂದು ಪ್ರಬಲ ವಾದ ಮಂಡಿಸಿತು. ಇದನ್ನೂ ಓದಿ:ಶಾರುಖ್ ಪುತ್ರ ಆರ್ಯನ್ ಇನ್ನೂ ಮಗು, ಉಸಿರಾಡಲು ಬಿಡಿ: ನಟ ಸುನೀಲ್ ಶೆಟ್ಟಿ

    aryan khan ncb publictv

    ಶಾರೂಖ್ ಪುತ್ರನ ಪರವಾಗಿ ಖ್ಯಾತ ಕ್ರಿಮಿನಲ್ ವಕೀಲ ಸತೀಶ್ ಮಾನ್ ಶಿಂಧೆ ಸುದೀರ್ಘವಾದ ಮಂಡಿಸಿದ್ರೂ ಪ್ರಯೋಜನ ಆಗಲಿಲ್ಲ. ಪುತ್ರನಿಗೆ ಬಂದೊದಗಿದ ಸ್ಥಿತಿ ಕಂಡು ಶಾರೂಖ್, ಗೌರಿ ಖಾನ್ ಕಣ್ಣೀರು ಇಟ್ಟಿದ್ದಾರೆ. ವಿಚಾರಣೆ ವೇಳೆ ಕಾನೂನು ಪ್ರಕಾರವೇ, ಶಾರೂಖ್ ಜೊತೆ ಫೋನ್‍ನಲ್ಲಿ ಮಾತನಾಡಲು ಆರ್ಯನ್‍ಗೆ ಎನ್‍ಸಿಬಿ ಎರಡು ನಿಮಿಷ ಅವಕಾಶ ನೀಡಿತ್ತು. ಈ ವೇಳೆ ಇಬ್ಬರು ಕಣ್ಣೀರಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಶಾರೂಖ್ ಪುತ್ರನ ಜೊತೆಗೆ ಇನ್ನಿಬ್ಬರನ್ನು ಕೂಡ ಎನ್‍ಸಿಬಿ ಕಸ್ಟಡಿಗೆ ಪಡೆದುಕೊಂಡಿದೆ. ಇದಕ್ಕೂ ಮುನ್ನ, ಆರ್ಯನ್ ಸೇರಿ ಇತರೆ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯ್ತು. ಈ ಮಧ್ಯೆ ವೀ ಸ್ಟ್ಯಾಂಡ್ ವಿತ್ ಶಾರೂಖ್ ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದೆ. ಮುಂಬೈನ ಕಿಲಾ ಕೋರ್ಟ್‍ನಲ್ಲಿ ನಡೆದ ಎನ್‍ಸಿಬಿ ಮತ್ತು ಆರ್ಯನ್ ಪರ ವಕೀಲರ ವಾದ ಅಂತ್ಯಕ್ಕೆ ಕೋರ್ಟ್ ಆರ್ಯನ್‍ಗೆ ಜಾಮೀನು ನಿರಾಕರಿಸಿ, ಹೆಚ್ಚಿನ ವಿಚಾರಣೆಗಾಗಿ ಅಕ್ಟೋಬರ್ 7ವರೆಗೂ ಎನ್‍ಸಿಬಿ ವಶಕ್ಕೆ ನೀಡಿದೆ. ಆದರೆ ಈ ಪ್ರಕರಣದಲ್ಲಿ ಬೆಂಗಳೂರು ಮೂಲದವರು ಇರುವುದು ಇದೀಗ ತಿಳಿದು ಬಂದಿದ್ದು, ಆತಂಕ ಎದುರಾಗಿದೆ.

  • ಬೆಲ್ಜಿಯಂ ಟು ಬೆಂಗಳೂರು – ಸ್ಯಾಂಡಲ್‌ವುಡ್‌ ಡ್ರಗ್ಸ್‌ ಕಹಾನಿ

    ಬೆಲ್ಜಿಯಂ ಟು ಬೆಂಗಳೂರು – ಸ್ಯಾಂಡಲ್‌ವುಡ್‌ ಡ್ರಗ್ಸ್‌ ಕಹಾನಿ

    – ಡ್ರಗ್ಸ್‌ ಮಾರಾಟದ ಕಿಂಗ್‌ಪಿನ್‌ ಅನಿಕಾ ಅರೆಸ್ಟ್‌
    – ಒಂದು ಮಾತ್ರೆ 1500 ರೂ.ಗೆ ಮಾರಾಟ
    – ಗ್ರಾಹಕರಾಗಿದ್ದಾರೆ ಸ್ಟಾರ್‌ ನಟ, ನಟಿಯರು

    ಬೆಂಗಳೂರು: ಸ್ಯಾಂಡಲ್‌ವುಡ್‌ ಸ್ಟಾರ್‌ ನಟ, ನಟಿಯರು, ಸಂಗೀತಗಾರರು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್‌ ವಿತರಿಸುತ್ತಿರುವ ಬೃಹತ್‌ ಜಾಲ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

    ಇದೇ 21 ರಂದು ಕಲ್ಯಾಣನಗರದ ರಾಯಲ್ ಸೂಟ್ಸ್ ಅಪಾರ್ಟ್ ಮೆಂಟ್ ಮೇಲೆ ಸಿಸಿಬಿಯ ನಾರ್ಕೋಟಿಕ್ಸ್ ಬ್ಯೂರೋ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರಾಗಿರುವ ಅನಿಕಾ, ಅನೂಪ್‌, ರವೀಂದ್ರನ್‌ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಸ್ಯಾಂಡಲ್‌ವುಡ್‌ ತಾರೆಯರು ಇವರ ನಿತ್ಯದ ಗ್ರಾಹಕರಾಗಿದ್ದ ವಿಚಾರ ತಿಳಿದು ಬಂದಿದೆ.

    ಏನು ಸಿಕ್ಕಿದೆ?
    ಆಗಸ್ಟ್ 21ರಂದು ಬೆಂಗಳೂರಿನ ಕಲ್ಯಾಣ್ ನಗರ ರಾಯಲ್ ಸೂಟ್ಸ್ ಹೋಟೆಲ್ ಅಪಾರ್ಟ್‍ಮೆಂಟ್‍ನಿಂದ 145 ಎಂಡಿಎಂಎ(ಮೀಥೈಲ್ ಎನೆಡಿಯಾಕ್ಸಿ ಮೆಥಾಂಫೆಟಮೈನ್ ನನ್ನು ಎಕ್‍ಸಸ್ಟಿ ಮಾತ್ರೆ ಎಂದು ಕರೆಯಲಾಗುತ್ತದೆ) ಮಾತ್ರೆಗಳು ಮತ್ತು 2.20 ಲಕ್ಷಕ್ಕೂ ಹೆಚ್ಚಿನ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರಿನ ನಿಕೊ ಹೌಸ್‍ನಲ್ಲಿ 96 ಎಂಡಿಎಂಎ ಮಾತ್ರೆಗಳು ಮತ್ತು 180 ಎಲ್‍ಎಸ್‌ಡಿ(ಲೈಸರ್ಜಿಕ್ ಆಸಿಡ್‌ ಡೈಥೈಲಾಮೈಡ್) ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಕಿರುತರೆಯ ನಂಟು ಹೇಗೆ?
    ಡ್ರಗ್ಸ್ ದಂಧೆಯ ಕಿಂಗ್ ಪಿನ್ ಅನಿಕಾ ಆಗಿದ್ದು ಆಕೆಗೆ ಕಿರುತೆರೆಯ ನಂಟು ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ವಿಚಾರಣೆಯ ಸಂದರ್ಭದಲ್ಲಿ ಅನಿಕಾ ಕಿರುತೆರೆಯ ನಟರೊಂದಿಗೂ ಸಂಪರ್ಕ ಬೆಳೆಸಿದ್ದ ವಿಚಾರ ತಿಳಿದು ಬಂದಿದೆ. ಆಕೆ ಕೆಲ ಧಾರಾವಹಿಯಲ್ಲೂ ನಟಿಸಿದ್ದು ಹಲವು ನಟ, ನಟಿಯರಿಗೆ ಡ್ರಗ್ಸ್‌ ಮಾರಾಟ ಮಾಡುತ್ತಿದ್ದಳು.

    ರಾಜೇಶ್‌ ಮತ್ತು ಅನೂಪ್‌ ಮೊಬೈಲ್‌ ಪರಿಶೀಲಿಸಿದ ವೇಳೆ ಒಂದು ತಿಂಗಳಿಗೆ 2 ಸಾವಿರ ಗ್ರಾಹಕರನ್ನು ಸಂಪರ್ಕಿಸಿರುವ ಸ್ಫೋಟಕ ಮಾಹಿತಿ ಸಿಕ್ಕಿದೆ. ಅನಿಕಾ ಜರ್ಮನಿ ಮತ್ತು ಬೆಲ್ಜಿಯಂನಿಂದ ಅರ್ಡರ್ ಮಾಡಿ ಡ್ರಗ್ಸ್‌ ತರಿಸುತ್ತಿದ್ದಳು. ಡಾರ್ಕ್ ವೆಬ್ ನ ಮೂಲಕ ಅನಿಕಾ ಡೀಲ್ ಮಾಡುತ್ತಿದ್ದಳು.

    ಕೋವಿಡ್‌ 19 ಲಾಕ್ ಡೌನ್ ಸಮಯದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಈ ಸಮಯದಲ್ಲಿ ಡ್ರಗ್ಸ್‌ಗೆ ಬೇಡಿಕೆ ಹೆಚ್ಚಾಗಿತ್ತು. ಈ ತಂಡ ಭಾರೀ ವ್ಯವಹಾರ ನಡೆಸಿದ್ದು ಇಲ್ಲಿಯವರೆಗೆ ಒಟ್ಟು 3 ಕೋಟಿಗೂ ಹೆಚ್ಚು ವ್ಯವಹಾರ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅನಿಕಾ ಹೇಳಿಕೆ ಆಧಾರಿಸಿ ನಟ, ನಟಿಯರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆಯಿದೆ.

    ಪಾರ್ಟಿಯಲ್ಲಿ ಬಳಕೆ:
    ಎಂಡಿಎಂಎ ಮಾದಕ ವಸ್ತಗಳನ್ನು ನಟ, ನಟಿಯರ ಪಾರ್ಟಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಜೊತೆಗೆ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳ ಟಾರ್ಗೆಟ್ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಪ್ರತಿ ಎಂಡಿಎಂ ಮಾತ್ರೆಗಳನ್ನು ಆರೋಪಿಗಳನ್ನು ೧,೫೦೦ ರಿಂದ ೨,೫೦೦ ರೂ.ಗೆ ಮಾರಾಟ ಮಾಡುತ್ತಿದ್ದರು.

    ಕಸ್ಟಮ್ ಅಧಿಕಾರಿಗಳು ಭಾಗಿ
    ಎಲ್‌ಎಸ್‌ಡಿ(ಲೈಸರ್ಜಿಕ್ ಆಸಿಡ್‌ ಡೈಥೈಲಾಮೈಡ್) ಡೆನ್ಮಾರ್ಕ್‌, ಬೆಲ್ಜಿಯಂ, ಜರ್ಮನಿಯಲ್ಲಿ ಈ ವ್ಯವಹಾರ ಹಚ್ಚು.ಈ ಎಲ್‌ಎಸ್‌ಡಿಯನ್ನು ಡಾರ್ಕ್‌ ವೆಬ್‌ ಮೂಲಕ ಬುಕ್‌ ಮಾಡಲಾಗುತ್ತಿತ್ತು. ಬೆಲ್ಜಿಯಂ, ಡೆನ್ಮಾರ್ಕ್‌ ಮೂಲಕ ಕೊರಿಯರ್‌ ಬರುತ್ತಿತ್ತು. ದೇಶಕ್ಕೆ ವಿಮಾನದಲ್ಲಿ ಬರುವ ಕೊರಿಯರ್‌ಗಳನ್ನು ಕಸ್ಟಮ್ಸ್‌ ಅಧಿಕಾರಿಗಳು ಪರಿಶೀಲಿಸಬೇಕಾಗುತ್ತದೆ. ಆದರೆ ಸರಿಯಾಗಿ ಪರಿಶೀಲನೆ ನಡೆಸದೇ ಒಳಗಡೆ ಬಿಡುತ್ತಿರುವ ಹಿನ್ನೆಲೆಯಲ್ಲಿ ಕಸ್ಟಮ್ಸ್‌ ಅಧಿಕಾರಿಗಳ ಮೇಲೆಯೇ ಈಗ ಶಂಕೆ ವ್ಯಕ್ತವಾಗಿದೆ.

    ಅಂಚೆ ಇಲಾಖೆಯಲ್ಲೂ ಚೋರರು:
    ಡೆನ್ಮಾರ್ಕ್, ಬೆಲ್ಜಿಯಂನಿಂದ ಬಂದ ಬಾಕ್ಸ್‌ಗಳು ಅಂಚೆ ಇಲಾಖೆಯಿಂದಲೂ ವಿಲೇವಾರಿಯಾಗುತ್ತದೆ. ಯಾರಿಗೆ ಸೇರಬೇಕೋ ಅವರಿಗೆ ಅಂಚೆ ಇಲಾಖೆಯಿಂದ ಫೋನ್‌ ಹೋಗುತ್ತದೆ. ಫೋನ್ ಮಾಡಿ ಬಾಕ್ಸ್ ಸಂಗ್ರಹಿಸಲು ಗ್ರಾಹಕರನ್ನು ಕರೆಯುತ್ತಾರೆ. ಬಾಕ್ಸ್‌ನಲ್ಲಿ ಬಂದ ವಸ್ತುಗಳನ್ನು ಸ್ಕ್ಯಾನ್‌ ಮಾಡಬೇಕಾಗುತ್ತದೆ. ಆದರೆ ಸ್ಕ್ಯಾನ್‌ ಮಾಡದೇ ಅಂಚೆ ಇಲಾಖೆಯ ಅಧಿಕಾರಿಗಳು ಗ್ರಾಹಕರಿಗೆ ನೀಡುತ್ತಿರುವ ಹಿನ್ನೆಲೆಯಲ್ಲಿ ಈಗ ಅವರ ಮೇಲೂ ಅನುಮಾನ ಕಾಣಿಸಿದೆ.

    ಏನಿದು ಎಲ್ಎಸ್‌ಡಿ?
    ಲೈಸರ್ಜಿಕ್ ಆಸಿಡ್‌ ಡೈಥೈಲಾಮೈಡ್( ಎಲ್ಎಸ್‌ಡಿ) ಮತ್ತು ಬರುವ ಮಾದಕ ವಸ್ತು ಆಗಿದ್ದು, ಒಮ್ಮೆ ಇದನ್ನು ಸೇವಿಸಿದರೆ ರಕ್ತದ ಒತ್ತಡ ಹೆಚ್ಚಾಗುತ್ತದೆ. ದೇಹದ ಉಷ್ಣಾಂಶ ಏರುತ್ತದೆ. ಅರ್ಧ ಗಂಟೆಯಲ್ಲಿ ಕಿಕ್ ಕೊಡಲು ಆರಂಭಿಸುತ್ತದೆ. ಈ ಮಾದಕ ವಸ್ತು 12 ಗಂಟೆಗಳ ಮನುಷ್ಯ ದೇಹದಲ್ಲಿರುತ್ತದೆ. ನಾಲಿಗೆ ಮೂಲಕ ಎಲ್‌ಎಸ್‌ಡಿಯನ್ನು ಸೇವಿಸಬಹುದು. ಹಲವು ದೇಶಗಳಲ್ಲಿ ಎಲ್‌ಎಸ್ ಡಿ ಮಾದಕ ದ್ರವ್ಯವನ್ನು ನಿಷೇಧ ಮಾಡಲಾಗಿದೆ.