Tag: Drugs Mafia

  • ಪರಪ್ಪನ ಅಗ್ರಹಾರ ಜೈಲಲ್ಲೇ ಸಂಜನಾ ಹುಟ್ಟುಹಬ್ಬ

    ಪರಪ್ಪನ ಅಗ್ರಹಾರ ಜೈಲಲ್ಲೇ ಸಂಜನಾ ಹುಟ್ಟುಹಬ್ಬ

    ಬೆಂಗಳೂರು: ಇಂದು ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾ ಹುಟ್ಟುಹಬ್ಬ. ಆದರೆ ಈ ಬಾರಿ ಸಂಜನಾ ಪರಪ್ಪನ ಅಗ್ರಹಾರ ಜೈಲಿನಲ್ಲೇ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳಬೇಕಾಗಿದೆ. ಇದನ್ನೂ ಓದಿ: ನಟಿ ಸಂಜನಾ ಹೆಸರಲ್ಲಿದೆ ಬರೋಬ್ಬರಿ 11 ಬ್ಯಾಂಕ್ ಅಕೌಂಟ್!

    ‘ಗಂಡ ಹೆಂಡತಿ’ ಬೆಡಗಿಯ ವಿಶೇಷ ದಿನಕ್ಕೆ ಡ್ರಗ್ಸ್ ಮಾಫಿಯಾ ಕಾವು ತಟ್ಟಿದೆ. ಜೈಲಿನಲ್ಲಿರುವ ಸಂಜನಾಗೆ ಈ ಬಾರಿಯ ಹುಟ್ಟುಹಬ್ಬದ ಸಂಭ್ರಮವಿಲ್ಲ. ಇಂದು ಸಂಜನಾ 31ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಸಂಜನಾ ಮನೆಯವರ ಜೊತೆಗಿಲ್ಲ.  ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಲ್ಲಿ ರಾಗಿಣಿ, ಸಂಜನಾಗೆ ರಾಜಾತಿಥ್ಯ

    ಸಾಮಾನ್ಯವಾಗಿ ಸಂಜನಾ ತಮ್ಮ ಹುಟ್ಟುಹಬ್ಬಕ್ಕೂ ಎರಡು ದಿನದ ಮುಂಚೆಯೇ ಬರ್ತ್ ಡೇ ಸೆಲೆಬ್ರೇಷನ್‍ನಲ್ಲಿ ಬ್ಯುಸಿಯಾಗುತ್ತಿದ್ದರು. ಪ್ರತಿವರ್ಷ ಸಂಜನಾ ಹುಟ್ಟುಹಬ್ಬಕ್ಕಾಗಿ ನಟಿಯ ಆಪ್ತ ರಾಹುಲ್ ಅದ್ಧೂರಿಯಾಗಿ ಪಾರ್ಟಿಯನ್ನು ಏರ್ಪಡಿಸುತ್ತಿದ್ದ. ಆದರೆ ಇಂದು ರಾಹುಲ್ ಕೂಡ ಜೈಲಿನಲ್ಲಿದ್ದು, ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಲು ಕೂಡ ಸಾಧ್ಯವಾಗಿಲ್ಲ.

    ಕಳೆದ ವರ್ಷ ಬೆಂಗಳೂರು ಹಾಗೂ ಮುಂಬೈನಲ್ಲಿ ಸಂಜನಾ ಹುಟ್ಟುಹಬ್ಬದ ಪಾರ್ಟಿ ಮಾಡಿದ್ದರು. ಅಲ್ಲದೇ ಕಳೆದ ಬಾರಿಯ ಸಂಜನಾ ಬರ್ತ್ ಡೇ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಆದರೆ ಈ ಬಾರಿ ಪರಪ್ಪನ ಅಗ್ರಹಾರ ಜೈಲಿನಲ್ಲೇ ಸಂಜನಾ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಬೇಕಾಗಿದೆ.

    ಕಳೆದ ಒಂದೂವರೆ ತಿಂಗಳಿಂದ ಜೈಲಿನಲ್ಲಿರುವ ನಟಿಯರಾದ ಸಂಜನಾ ಮತ್ತು ರಾಗಿಣಿಗೆ ಶುಕ್ರವಾರ ಕೂಡ ಜಾಮೀನು ಸಿಗಲಿಲ್ಲ. ಬದಲಿಗೆ ಇಬ್ಬರು ನಟಿಯರ ನ್ಯಾಯಾಂಗ ಬಂಧನದ ಅವಧಿ ಮತ್ತೆ ವಿಸ್ತರಣೆ ಆಗಿದೆ. ಅಕ್ಟೋಬರ್ 23ರವರೆಗೆ ರಾಗಿಣಿ, ಸಂಜನಾ ನ್ಯಾಯಾಂಗ ಬಂಧನ ವಿಸ್ತರಿಸಿ ಎನ್‍ಡಿಪಿಎಸ್ ವಿಶೇಷ ಕೋರ್ಟ್ ಆದೇಶ ನೀಡಿದೆ.

  • ಡ್ರಗ್ ಕೇಸಿನಲ್ಲಿ ಚಿಕ್ಕದೊಂದು ಐಸ್ ಬರ್ಗ್ ಹೊರಬಂದಿದೆಯಷ್ಟೇ: ಭಾಸ್ಕರ್ ರಾವ್

    ಡ್ರಗ್ ಕೇಸಿನಲ್ಲಿ ಚಿಕ್ಕದೊಂದು ಐಸ್ ಬರ್ಗ್ ಹೊರಬಂದಿದೆಯಷ್ಟೇ: ಭಾಸ್ಕರ್ ರಾವ್

    ಧಾರವಾಡ: ಡ್ರಗ್ ಕೇಸ್‍ನಲ್ಲಿ ಈಗ ಹೊರ ಬಂದಿರೋದು ಟಿಪ್ ಆಫ್ ದಿ ಐಸ್ ಬರ್ಗ್ ಅಷ್ಟೇ ಎಂದು ಆಂತರಿಕ ಭದ್ರತಾ ದಳ (ಐಎಸ್‍ಡಿ) ಮುಖ್ಯಸ್ಥ ಭಾಸ್ಕರ್ ರಾವ್ ಹೇಳಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಡ್ರಗ್ ಕೇಸಿನಲ್ಲಿ ಪೆಡ್ಲರ್ ಮತ್ತು ಗ್ರಾಹಕರವರೆಗೆ ಹೋಗಿದ್ದೇವೆ. ಇದು ಎಲ್ಲಿಂದ ಬರುತ್ತಿದೆ ಅದು ಪತ್ತೆ ಮಾಡಬೇಕಿದೆ ಎಂದು ಹೇಳಿದರು. ಕೆಮಿಕಲ್ ಮತ್ತು ಆರ್ಟಿಫಿಷಿಯಲ್ ಡ್ರಗ್ ಹೊರ ದೇಶದಿಂದ ಬರುತ್ತಿದೆ ಎಂದರು.

    ಡ್ರಗ್ಸ್ ಸಮುದ್ರ ಮತ್ತು ವಿಮಾನ ನಿಲ್ದಾಣದಿಂದ ಬರುತ್ತಿದೆಯಾ ನೋಡಿ ಭದ್ರತೆಯನ್ನು ಬಿಗಿ ಮಾಡಬೇಕಾಗಿದೆ. ಜವಾಬ್ದಾರಿ ಸ್ಥಾನದಲ್ಲಿ ಇರುವವರು ಶಾಮೀಲಾಗಿದ್ದಾರಾ? ಅವರ ಪಾತ್ರ ಏನು ಎಂದು ಶೋಧಿಸುವ ಕಾರ್ಯವನ್ನು ಐಎಸ್‍ಡಿ ಮಾಡುತ್ತಿದೆ. ಇದೇ ವೇಳೆ ಕಸ್ಟಮ್ ಅಧಿಕಾರಿಗಳು ಈ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ನನ್ನ ಆರೋಪ ಇದೆ. ಇದರಲ್ಲಿ ಕೊರಿಯರ್ ನವರು ಕೆಲವು ಕಡೆ ಶಾಮಿಲು ಆಗಿದ್ದಾರೆ ಎಂದು ಹೇಳಿದರು.

    ಕೊರೊನಾ ಸಂದರ್ಭದಲ್ಲಿ ನಾನು ಬೆಂಗಳೂರು ಪೊಲೀಸ್ ಆಯುಕ್ತನಾಗಿದ್ದಾಗ, ನನ್ನ ಕೈಯಿಂದ ಆದಷ್ಟು ಸಿಬ್ಬಂದಿಗೆ ಸಹಾಯ ಮಾಡಿದ್ದೇನೆ. ಪ್ರತಿ ಠಾಣೆಯ 55 ವರ್ಷ ಮೇಲ್ಪಟ್ಟ ಪೇದೆಗಳು ಹಾಗೂ ಅಧಿಕಾರಿಗಳಿಗೆ ಮನೆಯಲ್ಲೇ ಇರಲು ಹೇಳಿದ್ದೆ ಎಂದು ಭಾಸ್ಕರ್ ರಾವ್ ಅವರು ಈ ವೇಳೆ ನೆನಪಿಸಿಕೊಂಡರು.

  • ಬಿಜೆಪಿ ಸರ್ಕಾರದಿಂದ ಡ್ರಗ್ಸ್ ಮುಕ್ತ ಕರ್ನಾಟಕ ಮಾಡೇ ಮಾಡ್ತೀವಿ: ಈಶ್ವರಪ್ಪ

    ಬಿಜೆಪಿ ಸರ್ಕಾರದಿಂದ ಡ್ರಗ್ಸ್ ಮುಕ್ತ ಕರ್ನಾಟಕ ಮಾಡೇ ಮಾಡ್ತೀವಿ: ಈಶ್ವರಪ್ಪ

    – ಡ್ರಗ್ಸ್ ವ್ಯವಸ್ಥೆಯಲ್ಲಿ ಅನೇಕ ಪ್ರಭಾವಿ ವ್ಯಕ್ತಿಗಳು ಭಾಗಿ

    ಶಿವಮೊಗ್ಗ: ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಚಿತ್ರ ನಟಿಯರು ಹಾಗೂ ಅವರಿಗೆ ಡ್ರಗ್ಸ್ ಪೂರೈಸಿದವರು ಈಗಾಗಲೇ ಜೈಲಿನಲ್ಲಿದ್ದು, ಈ ಪ್ರಕರಣದಲ್ಲಿ ಇನ್ನೂ ಅನೇಕ ಪ್ರಭಾವಿ ವ್ಯಕ್ತಿಗಳು ಇದ್ದಾರೆ. ಯಾರೇ ಪ್ರಭಾವಿಗಳು ಇದ್ದರೂ ಎಲ್ಲರನ್ನೂ ಜೈಲಿಗೆ ಕಳುಹಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

    ಶಿವಮೊಗ್ಗದ ಶಿವಪ್ಪನಾಯಕ ವೃತ್ತದ ಬಳಿ ಬಿಜೆಪಿ ಯುವ ಮೋರ್ಚಾ ಆಯೋಜಿಸಿದ್ದ ಡ್ರಗ್ಸ್ ಮುಕ್ತ ಕರ್ನಾಟಕ ಸಹಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಡ್ರಗ್ಸ್ ಮುಕ್ತ ಕರ್ನಾಟಕ ಸಹಿ ಅಭಿಯಾನ ಕಾರ್ಯಕ್ರಮವೇ ನಮ್ಮ ಸಂಸ್ಕೃತಿಗೆ ನಾಚಿಕೆಗೇಡು ಎಂದರು.

    ಅನೇಕ ವರ್ಷಗಳಿಂದ ಡ್ರಗ್ಸ್, ಮಾದಕ ವಸ್ತು ಸೇವನೆ ಹಾಗೂ ಲೈಂಗಿಕ ಚಟುವಟಿಕೆ ನಡೆಯುತ್ತಿದೆ. ನಮ್ಮ ರಾಜ್ಯಕ್ಕೆ ಬೇರೆ ಬೇರೆ ರಾಜ್ಯ ಹಾಗೂ ವಿದೇಶದಿಂದ ಡ್ರಗ್ಸ್ ಸರಬರಾಜು ಆಗುತ್ತಿದೆ. ಡ್ರಗ್ಸ್ ವಿರುದ್ಧ ಬಿಜೆಪಿ ಸರ್ಕಾರ ಒಂದು ದಿಟ್ಟ ನಿಲುವು ಕೈಗೊಂಡಿದ್ದು, ರಾಜ್ಯದಲ್ಲಿ ಇನ್ನು ಮುಂದೆ ಡ್ರಗ್ಸ್ ಇರಬಾರದು ಎಂಬ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡಿದೆ ಎಂದು ತಿಳಿಸಿದರು.

    ಡ್ರಗ್ಸ್ ವ್ಯವಸ್ಥೆ ಬಗ್ಗೆ ವಿಧಾನ ಮಂಡಲದ ಒಳಗೆ ಹಾಗೂ ಹೊರಗೆ ಸಾಕಷ್ಟು ಚರ್ಚೆ ಆಯಿತು. ಆದರೆ ಈ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ಆಗಲಿ, ಜೆಡಿಎಸ್ ಆಗಲಿ ಡ್ರಗ್ಸ್ ವಿಚಾರದಲ್ಲಿ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ನಿಲುವಿನ ಬಗ್ಗೆ ಬೆಂಬಲ ಕೊಡಲಿಲ್ಲ ಎಂಬುದು ತುಂಬ ನೋವಿನ ಸಂಗತಿ. ಡ್ರಗ್ಸ್ ವಿಚಾರದಲ್ಲಿ ಪೊಲೀಸರು ಒಳ್ಳೆಯ ಕ್ರಮ ಕೈಗೊಳ್ಳುತ್ತಿದ್ದಾರೆ. ನಾವು ಸಹ ಪೊಲೀಸರ ಬೆಂಬಲಕ್ಕೆ ಇದ್ದೇವೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಡ್ರಗ್ಸ್ ಮುಕ್ತ ಕರ್ನಾಟಕ ಮಾಡಿಯೇ ತೀರುತ್ತೇವೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

  • ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿಗೆ ಜೈಲೇ ಗತಿ – ಜಾಮೀನು ಅರ್ಜಿ ವಜಾ

    ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿಗೆ ಜೈಲೇ ಗತಿ – ಜಾಮೀನು ಅರ್ಜಿ ವಜಾ

    ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧನದಲ್ಲಿರುವ ಮಾದಕ ಚೆಲುವೆಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಜಾಮೀನು ಅರ್ಜಿಯನ್ನು ಎನ್‍ಡಿಪಿಎಸ್ ಕೋರ್ಟ್ ವಜಾಗೊಳಿಸಿದೆ. ಇನ್ನುಳಿದ ಆರೋಪಿಗಳ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

    ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಜಾಮೀನು ಅರ್ಜಿಯ ವಿಚಾರಣೆಯನ್ನ ನ್ಯಾಯಾಲಯ ಸೆಪ್ಟೆಂಬರ್ 21ರಂದು ನಡೆಸಿತ್ತು. ವಿಚಾರಣೆಯ ಬಳಿಕ ಆದೇಶವನ್ನು ನ್ಯಾಯಾಧೀಶರು ಕಾಯ್ದಿರಿಸಿದ್ದರು. ಇತ್ತ ಮತ್ತೋರ್ವ ನಟಿ ಸಂಜನಾ ಗಲ್ರಾನಿ ಜಾಮೀನು ಅರ್ಜಿಯ ವಿಚಾರಣೆ ಸೆಪ್ಟೆಂಬರ್ 24ರಂದು ನ್ಯಾಯಲಯ ಮುಂದೆ ಬಂದಿತ್ತು. ವಾದ- ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರು ಇಂದು ಆದೇಶ ಕಾಯ್ದಿರಿಸಿದ್ದರು. ಇದನ್ನೂ ಓದಿ: ನನಗೆ ಸಿಗರೇಟ್ ಕೊಡಿ- ಜೈಲಿನಲ್ಲಿ ಸಂಜನಾ ಮತ್ತೆ ಕಿರಿಕ್

    ಈ ಎಲ್ಲ ಬೆಳವಣಿಗೆಗಳ ನಡುವೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಹಿನ್ನೆಲೆ ಇಬ್ಬರು ನಟಿಯರನ್ನು ವಿಚಾರಣೆ ನಡೆಸಲು ನ್ಯಾಯಾಲಯದಿಂದ ಐದು ದಿನ ಅನುಮತಿ ಪಡೆದುಕೊಂಡಿತ್ತು. ನ್ಯಾಯಾಲಯದ ಆದೇಶದ ಹಿನ್ನೆಲೆ ರಾಗಿಣಿ ಮತ್ತು ಸಂಜನಾ ಇಬ್ಬರು ಪರಪ್ಪನ ಅಗ್ರಹಾರದಲ್ಲಿಯೇ ಇಡಿ ವಿಚಾರಣೆ ಎದುರಿಸಿದ್ದಾರೆ. ಇದನ್ನೂ ಓದಿ: ಇಬ್ಬರ ಜೊತೆ ಬಂದು ಸಂಜನಾ ಮತಾಂತರ: ಮೌಲ್ವಿ ಮಹಮ್ಮದ್ ಜಲಾಲುದ್ದಿನ್

    ಸಂಜನಾ ಪರ ವಕೀಲರ ವಾದ: ರವಿಶಂಕರ್ ಹೇಳಿಕೆಯನ್ನು ಎಸಿಪಿ ಗೌತಮ್ ರೆಕಾರ್ಡ್ ಮಾಡಿದ್ದಾರೆ. ಅದರಲ್ಲಿ ನಗರದ ವಿವಿಧೆಡೆ ಪಾರ್ಟಿ ನಡೆಸಿರುವುದಾಗಿ ಹೇಳಿದ್ದಾರೆ. ಈ ಸ್ಟೇಟ್ ಮೆಂಟ್ ಬಿಟ್ಟರೆ ಯಾವುದೇ ಮಟಿರಿಯಲ್ ಇಲ್ಲ. ಕೇವಲ ರವಿಶಂಕರ್ ಹೇಳಿಕೆ ಆಧಾರದ ಮೇಲೆ ಎಫ್‍ಐಆರ್ ಮಾಡಲಾಗಿದೆ. ದಾಖಲಾಗಿರುವ ಎಫ್‍ಐಅರ್ ನಲ್ಲಿ ಅನೇಕ ಸೆಕ್ಷನ್ ಗಳನ್ನ ಹಾಕಲಾಗಿದೆ. ಆದ್ರೆ ಆರೋಪಗಳಿಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಶ್ರೀನಿವಾಸ ಮೂರ್ತಿ ವಾದ ಮಂಡಿಸಿದ್ದರು. ಇದನ್ನೂ ಓದಿ: ರಾಗಿಣಿಗಾಗಿ ರಕ್ತ, ಪ್ರಾಣ ಕೊಡಲು ಸಿದ್ಧ – ಅಭಿಮಾನಿ ವಿಡಿಯೋ ವೈರಲ್

    ಎಕ್ಸ್ ಟೆಸಿ ಮಾತ್ರೆ ಸೇವಿಸಿದ್ದಾರೆಂದು ಆರೋಪಿಸಲಾಗಿದ್ದು, ಎಫ್‍ಐಆರ್ ನಲ್ಲಿ ನಿರ್ದಿಷ್ಟ ಆರೋಪಗಳೇ ಇಲ್ಲ. ಎಕ್ಸ್ ಟೆಸಿ ಮಾತ್ರೆಯ ಪ್ರಸ್ತಾಪ ಬಿಟ್ಟರೇ ಬೇರೆ ಯಾವುದೇ ಆರೋಪಗಳಿಲ್ಲ. ಇತರೆ ಆರೋಪಿಗಳ ಹೇಳಿಕೆಯ ಮೇಲೆ ಪ್ರಕರಣ ನಿಂತಿದೆ. ಆದ್ರೆ ಸಂಜನಾ ಗಲ್ರಾನಿ ಅವರನ್ನ ಯಾಕೆ ಬಂಧಿಸಲಾಗಿದೆ ಎಂಬುವುದು ಇದುವರೆಗೂ ಗೊತ್ತಾಗಿಲ್ಲ. ಕಕ್ಷಿದಾರರಿಗೆ ಬಂಧನ ವೇಳೆ ಯಾಕೆ ಅರೆಸ್ಟ್ ಮಾಡಲಾಗ್ತಿದೆ ಅಂತ ಹೇಳಿಲ್ಲ. ಹಾಗಾಗಿ ಸಂಜನಾ ಗಲ್ರಾನಿ ಅವರ ಬಂಧನ ಕಾನೂನೂ ಬಾಹಿರವಾಗಿದ್ದು, ಇಲ್ಲಿಯವರೆಗೂ ಪೊಲೀಸರು ನ್ಯಾಯಾಲಯದ ಮುಂದೆ ಯಾವ ಸಾಕ್ಷ್ಯವನ್ನ ಹಾಜರುಪಡಿಸಿಲ್ಲ. ಇದೇ ವೇಳೆ ವಕೀಲರು ಕೆಲ ಹಳೆ ಪ್ರಕರಣಗಳ ಉದಾಹರಣೆಗಳನ್ನು ನ್ಯಾಯಾಲಯದ ಗಮನಕ್ಕೆ ತಂದು ತಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ:  ನನ್ನ ಮಗಳು ಹೆಣ್ಣು ಸಿಂಹ, ನಾವು ಯಾವುದಕ್ಕೂ ಹೆದರಲ್ಲ: ರಾಗಿಣಿ ತಾಯಿ

    ಜಾಮೀನು ಬೇಡ: ಇತ್ತ ಸಿಸಿಬಿ ಪರ ವಕೀಲರು, ನ್ಯಾಯಾಲಯ ಮುಂದೆ ಮುಚ್ಚಿದ ಲಕೋಟೆಯಲ್ಲಿ ಕೆಲ ಸಿಡಿಗಳನ್ನು ಸಲ್ಲಿಸಿದರು. ಪ್ರಕರಣ ತನಿಖಾ ಹಂತದಲ್ಲಿ ಇರೋದರಿಂದ ಸಿಡಿಯಲ್ಲಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಆರೋಪಿ ರವಿಶಂಕರ್ ಹೇಳಿಕೆಯ ಆಧಾರದ ಮೇಲೆ ಎಫ್‍ಐಆರ್ ದಾಖಲಾಗಿದೆ. ವಿಚಾರಣೆ ವೇಳೆ ಬಯಲಿಗೆ ಬಂದ ಅಂಶಗಳ ಮೇಲೆ ತನಿಖೆ ನಡೆಯುತ್ತಿದೆ. ಡ್ರಗ್ ಸೇವನೆ ಮಾಡಿರುವುದೇ ಒಳ್ಳೆಯ ಎವಿಡೆನ್ಸ್ ಆಗುತ್ತೆ. ತನಿಖೆ ಮುಗಿಯುವ ಮುನ್ನವೇ, ಜಾಮೀನು ನೀಡುವುದು ಸರಿಯಲ್ಲ ಎಂದು ವಾದಿಸಿದ್ದರು. ಇದನ್ನೂ ಓದಿ:  ಕಾಂಗ್ರೆಸ್‌ ಸೇರಲು ಮುಂದಾಗಿದ್ರಾ ರಾಗಿಣಿ? – ಕೆಪಿಸಿಸಿ ಚರ್ಚೆಯ ಇನ್‌ಸೈಡ್‌ ಸ್ಟೋರಿ

    ರಾಗಿಣಿ ಪರ ವಕೀಲರ ವಾದ: ಕಕ್ಷಿದಾರರು ಸಿಸಿಬಿ ಪೊಲೀಸರ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಕಕ್ಷಿದಾರರ ಪರ ಯಾವುದೇ ಆರೋಪಗಳಿಲ್ಲ ಮತ್ತು ಸಾಕ್ಷ್ಯ ಇಲ್ಲ. ಈ ಹಂತದಲ್ಲಿ ಕಕ್ಷಿದಾರರಿಗೆ ಜಾಮೀನು ನೀಡಬಹುದು. ಪೊಲೀಸರು ಆತುರದಲ್ಲಿ ತನಿಖೆಯ ದಿಕ್ಕು ತಲುಪಿಸು ಕೆಲಸ ಮಾಡುತ್ತಿದ್ದಾರೆ. ಪ್ರಕರಣ ಒಂದೇ ದಿಕ್ಕಿನಲ್ಲಿ ಸಾಗದೇ, ಬೇರೆ ಬೇರೆ ಆಯಾಮಗಳಲ್ಲಿ ಸಾಗಿ ನಮ್ಮ ಕಕ್ಷಿದಾರರನ್ನು ಸಿಲುಕಿಸುವ ಹುನ್ನಾರ ಮಾಡಲಾಗುತ್ತಿದೆ. ಪೊಲೀಸರು ರಾಗಿಣಿ ಆರೋಪಿ ಎಂದು ಕಲ್ಪನೆ ಮಾಡಿಕೊಂಡಿದ್ದಾರೆ. ಕಲ್ಪನೆಯಲ್ಲಿ ತನಿಖೆ ಸಾಗುತ್ತಿದೆ ಎಂದು ವಾದಿಸಿದ್ದರು. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಲ್ಲಿ ರಾಗಿಣಿ, ಸಂಜನಾಗೆ ರಾಜಾತಿಥ್ಯ

    ರಾಗಿಣಿ ಡ್ರಗ್ಸ್ ದಂಧೆಯಲ್ಲಿ ಆ್ಯಕ್ಟೀವ್ ಮೆಂಬರ್: ರಾಗಿಣಿ ಐದು ವರ್ಷಗಳಿಂದ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ನಡೆದ ಡ್ರಗ್ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದರು. ಡ್ರಗ್ಸ್ ಪೆಡ್ಲರ್ ಗಳ ಗ್ಯಾಂಗ್ ಜೊತೆಯಲ್ಲಿ ರಾಗಿಣಿ ಮೋಜು ಮಸ್ತಿ ನಡೆಸಿದ್ದಾರೆ. ಪಾರ್ಟಿಗಳಿಗೆ ಬಂದವರಿಗೆ ರಾಗಿಣಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು. ಆಂಧ್ರ ಪ್ರದೇಶ, ಗೋವಾ, ಮುಂಬೈ, ಪಂಜಾಬ್ ಮತ್ತು ವಿದೇಶಗಳಿಂದಲೂ ಡ್ರಗ್ಸ್ ತೆರೆಸಿಕೊಂಡಿದ್ದಾರೆ. ಡ್ರಗ್ಸ್ ದಂಧೆಯಲ್ಲಿ ರಾಗಿಣಿಯ ಆ?ಯಕ್ಟಿವ್ ಮೆಂಬರ್. ಎಂಡಿಎಂಎ, ಎಲ್ ಎಸ್‍ಡಿ, ಕೋಕೆನ್ ಕೊಡುತ್ತಿದ್ದರು. ಆರೋಪಿಗಳ ಜೊತೆ ನಡೆಸಿರುವ ಸಂಭಾಷಣೆಯ ಡಿಜಿಟಲ್ ಸಾಕ್ಷ್ಯವಿದೆ. ಮೂತ್ರ ಪರೀಕ್ಷೆ ವೇಳೆ ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದರು ಎಂಬ ಅಂಶಗಳನ್ನು ಉಲ್ಲೇಖಿಸಿ ಸಿಸಿಬಿ ವಕೀಲರು ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದ್ದರು. ಇದನ್ನೂ ಓದಿ: ರಾಗಿಣಿ, ಸಂಜನಾಗೆ ಜೈಲಿನಲ್ಲಿಯೇ ಇಡಿ ಡ್ರಿಲ್

  • ಗ್ರಾಹಕರ ಸೋಗಿನಲ್ಲಿ ಪೊಲೀಸರ ಕಾರ್ಯಾಚರಣೆ- ಗಾಂಜಾ ಮಾರುತ್ತಿದ್ದ ನಾಲ್ವರ ಬಂಧನ

    ಗ್ರಾಹಕರ ಸೋಗಿನಲ್ಲಿ ಪೊಲೀಸರ ಕಾರ್ಯಾಚರಣೆ- ಗಾಂಜಾ ಮಾರುತ್ತಿದ್ದ ನಾಲ್ವರ ಬಂಧನ

    ಹುಬ್ಬಳ್ಳಿ: ಅವಳಿ ನಗರ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗಾಂಜಾ, ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳ ವಿರುದ್ಧ ಪೊಲೀಸರ ದಿಟ್ಟ ಕ್ರಮ ಮುಂದುವರಿದಿದ್ದು, ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ ಹುಬ್ಬಳಿಯ ಬೆಂಡಿಕೇರಿ ಪೊಲೀಸರು ಗಾಂಜಾ ಮಾರುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಮಾದಕ ದ್ರವ್ಯ ವಿರುದ್ಧ ಪೊಲೀಸರ ಕಾರ್ಯಾಚರಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ದಂಧೆಕೋರರು ಮತ್ತಷ್ಟು ಎಚ್ಚರಿಕೆಯಿಂದ ತಮ್ಮ ಕೃತ್ಯವನ್ನು ಮುಂದುವರಿಸಿದ್ದು, ಪರಿಣಾಮ ಪೊಲೀಸರು ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದಾರೆ.

    ಹಲವು ದಿನಗಳಿಂದ ಪೊಲೀಸ ಕಣ್ಣು ತಪ್ಪಿಸಿ ಗಾಂಜಾ ಮಾರಾಟ ಮಾಡುತ್ತಿದ್ದವರ ಬೆನ್ನು ಬಿದ್ದಿರುವ ಪೊಲೀಸರು ಕಳೆದ ಎರಡು ದಿನಗಳಿಂದಲೂ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಕೊನೆಗೂ ಗ್ರಾಹಕರ ಸೋಗಿನಲ್ಲಿದ್ದ ಪೊಲೀಸರ ಬಲೆಗೆ ನಾಲ್ವರು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.

    ಬೆಂಡಿಗೇರಿ ಠಾಣೆಯ ವ್ಯಾಪ್ತಿಯಲ್ಲೇ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಿಂದ 1 ಕೆಜಿಗೂ ಹೆಚ್ಚು ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು. ನಾಲ್ವರು ಬಂಧಿತರು, ಹುಬ್ಬಳ್ಳಿಯ ವೀರಾಪುರ ಓಣಿ, ಗಣೇಶಪೇಟೆ ಹಾಗೂ ಸೆಟ್ಲಮೆಂಟಿನ ನಿವಾಸಿಗಳೆಂದು ತಿಳಿದು ಬಂದಿದೆ. ಬೆಂಡಿಗೇರಿ ಪೊಲೀಸರ ಈ ಕಾರ್ಯಾಚರಣೆ ಮತ್ತಷ್ಟು ದಂಧೆಕೋರರಿಗೆ ನಡುಕ ಹುಟ್ಟಿಸಿದೆ.

  • ತರುಣ್ ರಾಜ್ ನನಗೆ 12 ವರ್ಷಗಳ ಹಿಂದಿನ ಪರಿಚಯ: ವಿಚಾರಣೆ ಬಳಿಕ ಅನುಶ್ರೀ ಸ್ಪಷ್ಟನೆ

    ತರುಣ್ ರಾಜ್ ನನಗೆ 12 ವರ್ಷಗಳ ಹಿಂದಿನ ಪರಿಚಯ: ವಿಚಾರಣೆ ಬಳಿಕ ಅನುಶ್ರೀ ಸ್ಪಷ್ಟನೆ

    ಮಂಗಳೂರು: ತರುಣ್ ರಾಜ್ ನನಗೆ 12 ವರ್ಷಗಳ ಹಿಂದಿನ ಪರಿಚಯವಿತ್ತು. ತರುಣ್ ರಾಜ್ ನನಗೆ 6 ತಿಂಗಳು ಡ್ಯಾನ್ಸ್ ಕೊರಿಯೋಗ್ರಾಫ್ ಮಾಡಿದ್ದಾರೆ. ಈ ವೇಳೆ ಮಾತ್ರ ಅವರ ಪರಿಚಯವಾಗಿದೆ ಎಂದು ನಿರೂಪಕಿ ಅನುಶ್ರೀ ಹೇಳಿದರು.

    ಡಿಸಿಪಿ ವಿನಯ್ ಗಾಂವ್ಕರ್ ನೇತೃತ್ವದಲ್ಲಿ ಈ ವಿಚಾರಣೆ ನಡೆದಿದ್ದು, ಮೂರೂವರೆ ಗಂಟೆಗಳ ಸತತವಾಗಿ ನಡೆದ ವಿಚಾರಣೆ ಮುಕ್ತಾಯವಾಗಿದೆ. ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅನುಶ್ರೀ, ಮೊನ್ನೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಿದ್ದರು. ಇಂದು ವಿಚಾರಣೆಗೆ ಬಂದು ಪೊಲೀಸರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಮುಂದೆ ವಿಚಾರಣೆಗೆ ಕರೆದರೆ ಮತ್ತೆ ಹಾಜರಾಗುತ್ತೇನೆ.

    ತರುಣ್ ರಾಜ್ ನನಗೆ 12 ವರ್ಷಗಳ ಹಿಂದಿನ ಪರಿಚಯ. ತರುಣ್ ರಾಜ್ ನನಗೆ 6 ತಿಂಗಳು ಡ್ಯಾನ್ಸ್ ಕೊರಿಯೋಗ್ರಾಫ್ ಮಾಡಿದ್ದಾರೆ. ಈ ವೇಳೆ ಮಾತ್ರ ತರುಣ್ ರಾಜ್ ಪರಿಚಯವಾಗಿದೆ. ಡ್ರಗ್ಸ್ ಬಗ್ಗೆ ತರಣ್ ಜೊತೆ ಯಾವುದೇ ಸಂಬಂಧ ಇಲ್ಲ. ಅವರ ಡ್ಯಾನ್ಸ್ ಕ್ಲಾಸ್ ಉದ್ಘಾಟನೆ ಮಾಡಿಕೊಟ್ಟಿದ್ದೆ. ಅದು ಬಿಟ್ಟರೆ ಅವರ ಪರಿಚಯ ನನಗೆ ಅಷ್ಟೇನೂ ಇಲ್ಲ ಎಂದರು.

    ಅವರ ಪರಿಚಯ ಇದ್ದ ಕಾರಣ ನನ್ನನ್ನು ವಿಚಾರಣೆಗೆ ಕರೆಸಿದ್ದರು. ಪೊಲೀಸರು ಇವತ್ತು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಇವತ್ತು ಮುಂದಿನ ವಿಚಾರಣೆ ಬಗ್ಗೆ ಪೊಲೀಸರು ಏನೂ ಹೇಳಿಲ್ಲ. ನಾನು ಅವರೊಟ್ಟಿಗೆ ಯಾವುದೇ ಪಾರ್ಟಿಯನ್ನು ಮಾಡಿಲ್ಲ ಎಂದು ಅನುಶ್ರೀ ಸ್ಪಷ್ಟ ಪಡಿಸಿದರು. ಡ್ರಗ್ಸ್ ಮಾಫಿಯಾ ರಾಜ್ಯಕ್ಕೆ ಅಂಟಿರುವ ಭೂತ. ಆ ಭೂತವನ್ನು ಹೋಗಲಾಡಿಸಲು ಪೋಲಿಸರು ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ನಾವು ಸಹಕಾರ ನೀಡಬೇಕು ಎಂದು ಇದೇ ವೇಳೆ ತಿಳಿಸಿದರು.

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಪಣಂಬೂರು ಠಾಣೆಯಲ್ಲಿ ನಿರೂಪಕಿ ಅನುಶ್ರೀ ವಿಚಾರಣೆಗೆ ಇಂದು ಹಾಜರಾಗಿದ್ದರು. ಶುಕ್ರವಾರವೇ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಬೆಂಗಳೂರಿನಿಂದ ಮಂಗಳೂರಿಗೆ ಹೋಗಿದ್ದರು. ಆದರೆ ಮಂಗಳೂರು ತಲುಪುತ್ತಿದ್ದಂತೆ ಅನುಶ್ರೀ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಇಂದು ಬೆಳಗ್ಗೆ ಪಣಂಬೂರು ಠಾಣೆಗೆ ತೆರಳಿ ಸಿಸಿಬಿ ಪೊಲೀಸರು ಹಾಗೂ ನಾರ್ಕೋಟಿಕ್ ಪೊಲೀಸರ ವಿಚಾರಣೆ ಎದುರಿಸಿದರು.

    ಈಗಾಗಲೇ ಬಂಧನವಾಗಿರುವ ಕಿಶೋರ್, ತರುಣ್, ನೌಶೀನ್ ಮಂಗಳೂರಿನ ಪಾಂಡೇಶ್ವರದಲ್ಲಿನ ಇಕನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ಠಾಣೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಸಾಕಷ್ಟು ಮಾಹಿತಿ ಸಂಗ್ರಹಿಸಿದ ಪೊಲೀಸರು ಶುಕ್ರವಾರ ಸಂಜೆ ವೇಳೆಗೆ ಕಿಶೋರ್ ಹಾಗೂ ನೌಶೀನ್‍ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕೋರ್ಟಿಗೆ ಹಾಜರುಪಡಿಸುವ ಮುನ್ನ ಆರೋಪಿಗಳಿಗೆ ಡ್ರಿಲ್ ಮಾಡಲಾಗಿದ್ದು, ಆರೋಪಿ ತರುಣ್ ಅನುಶ್ರೀ ಬಗೆಗಿನ ಮಹತ್ವದ ಸಂಗತಿಗಳನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

  • ನಿನ್ನೆ ಚಕ್ಕರ್, ಇಂದು ನಿರೂಪಕಿ ಅನುಶ್ರೀ ವಿಚಾರಣೆಗೆ ಹಾಜರ್

    ನಿನ್ನೆ ಚಕ್ಕರ್, ಇಂದು ನಿರೂಪಕಿ ಅನುಶ್ರೀ ವಿಚಾರಣೆಗೆ ಹಾಜರ್

    ಮಂಗಳೂರು: ಡ್ರಗ್ಸ್ ಕೇಸ್‍ನಲ್ಲಿ ಸಿಸಿಬಿಯಿಂದ ನೋಟಿಸ್ ಬಂದಿದ್ದ ಹಿನ್ನೆಲೆಯಲ್ಲಿ ಇಂದು ನಿರೂಪಕಿ ಅನುಶ್ರೀ ಕೊನೆಗೂ ವಿಚಾರಣೆಗೆ ಹಾಜರಾಗಿದ್ದಾರೆ. ಇದನ್ನೂ ಓದಿ: ಸಿಸಿಬಿ ನೋಟಿಸ್ – ಮಾಧ್ಯಮಗಳಲ್ಲಿ ಅನುಶ್ರೀ ಮನವಿ

    ಮಂಗಳೂರಿನ ಪಣಂಬೂರು ಠಾಣೆಯಲ್ಲಿ ನಿರೂಪಕಿ ಅನುಶ್ರೀ ವಿಚಾರಣೆಗೆ ಹಾಜರಾಗಿದ್ದಾರೆ. ಶುಕ್ರವಾರವೇ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಬೆಂಗಳೂರಿನಿಂದ ಮಂಗಳೂರಿಗೆ ಹೋಗಿದ್ದರು. ಆದರೆ ಮಂಗಳೂರು ತಲುಪುತ್ತಿದ್ದಂತೆ ಅನುಶ್ರೀ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಇಂದು ಬೆಳಗ್ಗೆ ಪಣಂಬೂರು ಠಾಣೆಗೆ ಆಗಮಿಸಿದ್ದಾರೆ. ಸದ್ಯಕ್ಕೆ ಸಿಸಿಬಿ ಪೊಲೀಸರು ಹಾಗೂ ನಾರ್ಕೋಟಿಕ್ ಪೊಲೀಸರಿಂದ ಅನುಶ್ರೀಯ ವಿಚಾರಣೆ ಆರಂಭಗೊಂಡಿದೆ.

    ಡ್ರಗ್ಸ್ ಪೆಡ್ಲರ್‌ಗಳ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ನಿರೂಪಕಿ ಅನುಶ್ರೀಗೆ ಸಿಸಿಬಿ ನೋಟಿಸ್ ನೀಡಿತ್ತು. ಬೆಂಗಳೂರಿಗೆ ತೆರಳಿ ನೋಟಿಸ್ ನೀಡಿದ್ದ ಮಂಗಳೂರು ಸಿಸಿಬಿ ಪೋಲಿಸರಿಗೆ ಶುಕ್ರವಾರವೇ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಅನುಶ್ರೀ ಹೇಳಿದ್ದರು. ಆದರೆ ನಿನ್ನೆ ಅನುಶ್ರಿ ವಿಚಾರಣೆಗೆ ಹಾಜರಾಗಿರಲಿಲ್ಲ. ಗುರುವಾರ ರಾತ್ರಿ ಸೋಷಿಯಲ್ ಮೀಡಿಯಾ ಫೇಸ್‍ಬುಕ್‍ನಲ್ಲಿ ಪತ್ರಿಕಾ ಪ್ರಕಟಣೆ ಹಾಕಿದ್ದ ಅನುಶ್ರೀ ಶುಕ್ರವಾರ ಬೆಳಗ್ಗೆ ಮಂಗಳೂರು ಸಿಸಿಬಿ ಪೋಲಿಸರ ಮುಂದೆ ಹಾಜರಾಗುತ್ತೇನೆ ಎಂದು ತಿಳಿಸಿದ್ದರು. ಇಂದು ಮುಂಜಾನೆ 5ಗಂಟೆಗೆ ಬೆಂಗಳೂರಿನಿಂದ ಮಂಗಳೂರಿಗೆ ಹೊರಟ್ಟಿದ್ದರು. ಆದರೆ ಅನುಶ್ರೀ ಮಾತ್ರ ವಿಚಾರಣೆಗೆ ಹಾಜರಾಗಿಲ್ಲ.

    ಇತ್ತ ಅನುಶ್ರೀ ವಿಚಾರಣೆಗೆ ಮಂಗಳೂರು ಸಿಸಿಬಿ ಪೊಲೀಸರು ಹಾಗೂ ನಾರ್ಕೋಟಿಕ್ ಕ್ರೈಂ ಠಾಣೆ ಪೊಲೀಸರು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದರು. 15 ಜನ ಅಧಿಕಾರಿಗಳು, ಸಿಬ್ಬಂದಿಯಿಂದ ವಿಚಾರಣೆಗೆ ತಯಾರಿ ಮಾಡಲಾಗಿತ್ತು. ಮೊದಲ ಹಂತದಲ್ಲಿ ಆರೋಪಿಗಳಾದ ಕಿಶೋರ್ ಅಮನ್, ತರುಣ್ ರಾಜ್ ಜೊತೆಗಿನ ಸಂಬಂಧ ಬಗ್ಗೆ ಪ್ರಶ್ನಿಸಿ, ಎರಡನೇ ಹಂತದಲ್ಲಿ ಸಾಕ್ಷ್ಯ ತೋರಿಸಿ ಅನುಶ್ರೀಗೆ ಪ್ರಶ್ನೆ ಮಾಡಲು ತಯಾರಿ ನಡೆಸಿದ್ದರು. ಆದರೆ ಅನುಶ್ರೀ ನಿನ್ನೆ ವಿಚಾರಣೆಗೆ ಹಾಜರಾಗಿಲ್ಲ.

    ಈಗಾಗಲೇ ಬಂಧನವಾಗಿರುವ ಕಿಶೋರ್, ತರುಣ್, ನೌಶೀನ್ ಮಂಗಳೂರಿನ ಪಾಂಡೇಶ್ವರದಲ್ಲಿನ ಇಕನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ಠಾಣೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಸಾಕಷ್ಟು ಮಾಹಿತಿ ಸಂಗ್ರಹಿಸಿದ ಪೊಲೀಸರು ಶುಕ್ರವಾರ ಸಂಜೆ ವೇಳೆಗೆ ಕಿಶೋರ್ ಹಾಗೂ ನೌಶೀನ್‍ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕೋರ್ಟಿಗೆ ಹಾಜರುಪಡಿಸುವ ಮುನ್ನ ಆರೋಪಿಗಳಿಗೆ ಡ್ರಿಲ್ ಮಾಡಲಾಗಿದ್ದು, ಆರೋಪಿ ತರುಣ್ ಅನುಶ್ರೀ ಬಗೆಗಿನ ಮಹತ್ವದ ಸಂಗತಿಗಳನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

    ಬಂಧನ ಮಾಡಿದ ಬಳಿಕ ತರುಣ್, ಅನುಶ್ರೀ ಕುಡಿತ್ತಿದ್ದಳು ಅಂತ ಮಾತ್ರ ಹೇಳಿದ್ದ. ಆದರೆ ಪೊಲೀಸರು ತನಿಖೆ ಚುರುಕುಗೊಳಿಸಿದ ಬಳಿಕ ಒಂದೊಂದೇ ಮಾಹಿತಿ ಬಾಯ್ಬಿಟ್ಟಿದ್ದಾನೆ. ನಾವು ಡ್ರಗ್ ಪಾರ್ಟಿ ಮಾಡುತ್ತಿದ್ವಿ, ಪಾರ್ಟಿಯಲ್ಲಿ ಅನುಶ್ರೀ ಡ್ರಗ್ಸ್ ತೆಗೆದುಕೊಳ್ಳತ್ತಿದ್ದಳು ಎಂದು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಹೀಗಾಗಿ ತರುಣ್ ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗುತ್ತಿರುವ ಈ ಎಲ್ಲಾ ಮಾಹಿತಿಗಳು ಅನುಶ್ರೀಗೆ ಕಂಟಕವಾಗುವ ಸಾಧ್ಯತೆಗಳಿವೆ.

  • ಡ್ರಗ್ಸ್ ಮಾಫಿಯಾ ಪ್ರಕರಣ- ಫ್ಯಾಷನ್ ಡಿಸೈನರ್ ರಮೇಶ್ ಡೆಂಬ್ಲಗೆ ನೋಟಿಸ್

    ಡ್ರಗ್ಸ್ ಮಾಫಿಯಾ ಪ್ರಕರಣ- ಫ್ಯಾಷನ್ ಡಿಸೈನರ್ ರಮೇಶ್ ಡೆಂಬ್ಲಗೆ ನೋಟಿಸ್

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿದಂತೆ ತನಿಖೆಯನ್ನು ಮುಂದುವರಿಸಿರುವ ಸಿಸಿಬಿ, ಖ್ಯಾತ ಫ್ಯಾಷನ್ ಡಿಸೈನರ್ ರಮೇಶ್ ಡೆಂಬ್ಲ ಅವರಿಗೆ ನೋಟಿಸ್ ನೀಡಿದೆ.

    ಸದ್ಯ ಪ್ರಕರಣದಲ್ಲಿ ಬಂಧಿನವಾಗಿರುವ ಆರೋಪಿಗಳೊಂದಿಗೆ ಪೇಜ್-3 ಪಾರ್ಟಿಗಳಲ್ಲಿ ಭಾಗಿಯಾಗಿರುವ ಆರೋಪ ಹಿನ್ನೆಯಲ್ಲಿ ನೋಟಿಸ್ ನೀಡಲಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳಿಂದ ನೋಟಿಸ್ ಜಾರಿಯಾಗಿದೆ.

    ಸ್ಯಾಂಡಲ್‍ವುಡ್ ನಟಿ ರಾಗಿಣಿ, ಸಂಜನಾ ಸೇರಿದಂತೆ ಆದಿತ್ಯ ಆಳ್ವಾ, ನಿಯಾಜ್ ಜೊತೆಗೆ ಲಿಂಕ್ ಹೊಂದಿದ್ದಾರೆ ಎನ್ನಲಾಗಿದೆ. ಅಲ್ಲದೇ ಪೇಜ್-3 ಪಾರ್ಟಿಗಳಲ್ಲಿ ಭಾಗಿ ಆಗಿರುವ ಕುರಿತು ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಇಂದು ಬೆಳಗ್ಗೆ 11 ಗಂಟೆಗೆ ರಮೇಶ್ ಸಿಸಿಬು ವಿಚಾರಣೆಗೆ ಆಗಮಿಸುವ ಸಾಧ್ಯತೆ ಇದೆ.

    ಫ್ಯಾಷನ್ ಡಿಸೈನಿಂಗ್ ಕ್ಷೇತ್ರದಲ್ಲಿ ತಮ್ಮದೇ ಸಂಸ್ಥೆಯನ್ನು ಹೊಂದಿರುವ ರಮೇಶ್ ಅವರು ಸಾಕಷ್ಟು ಹೆಸರು ಮಾಡಿದ್ದಾರೆ. ಸಿನಿಮಾ ರಂಗದ ಸ್ಟಾರ್ ನಟ, ನಟಿಯರು ಸೇರಿದಂತೆ ಹಲವು ರೂಪದರ್ಶಿಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದಾರೆ.

  • ಸಿಸಿಬಿ ನೋಟಿಸ್ – ಮಾಧ್ಯಮಗಳಲ್ಲಿ ಅನುಶ್ರೀ ಮನವಿ

    ಸಿಸಿಬಿ ನೋಟಿಸ್ – ಮಾಧ್ಯಮಗಳಲ್ಲಿ ಅನುಶ್ರೀ ಮನವಿ

    – ನನ್ನ ಕುಟುಂಬ ವರ್ಗಕ್ಕೆ ನೋವು ತಂದಿದೆ

    ಬೆಂಗಳೂರು: ಖ್ಯಾತ ನಿರೂಪಕಿ, ನಟಿ ಅನುಶ್ರೀಗೆ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಸಿಸಿಬಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಈ ಕುರಿತು ಅನುಶ್ರೀ ಕೂಡ ಸ್ಪಷ್ಟನೆ ಕೊಟ್ಟಿದ್ದಾರೆ. ಇದೀಗ ಮಾಧ್ಯಮಗಳಲ್ಲಿ ಅನುಶ್ರೀ ಮನವಿವೊಂದನ್ನು ಮಾಡಿಕೊಂಡಿದ್ದಾರೆ.

    ನಟಿ ಅನುಶ್ರೀ ಒಂದು ಪತ್ರವನ್ನು ಬರೆದು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸಿಸಿಬಿ ನೋಟಿಸ್ ಸ್ವೀಕರಿಸಿದ ಅನುಶ್ರೀ- ಶನಿವಾರ ವಿಚಾರಣೆಗೆ ಹಾಜರು

    ಪತ್ರದಲ್ಲಿ ಏನಿದೆ?
    ಗುರುವಾರ ಸಂಜೆ ನನಗೆ ಮಂಗಳೂರಿನಲ್ಲಿ ಸಿಸಿಬಿ ಕಚೇರಿಯಿಂದ ವಿಚಾರಣೆಗೆ ಹಾಜರಾಗಲು ಒಂದು ನೋಟಿಸ್ ಜಾರಿ ಮಾಡಿದ್ದಾರೆ. ಹೀಗಾಗಿ ಇಂದು ಬೆಳಗ್ಗೆ 11 ಗಂಟೆಗೆ ನಾನು ಸ್ವತಃ ಮಂಗಳೂರಿಗೆ ತೆರಳಿ ಆ ವಿಚಾರಣೆಗೆ ಖುದ್ದಾಗಿ ಹಾಜರಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.

    ಇದು ಬರೀ ವಿಚಾರಣೆಯ ಸೂಚನೆಯಾಗಿದ್ದು, ಮಾಧ್ಯಮಗಳಲ್ಲಿ ನಾನು ನಟಿಸಿದ ಚಿತ್ರವೊಂದನ್ನು ಬಳಸಿ ನನ್ನನ್ನು ಅಪರಾಧಿ ಎಂಬಂತೆ ತೋರಿಸುವ ಪ್ರಯತ್ನಗಳು ನಡೆಯುತ್ತಿವೆ. ಮಾಧ್ಯಮ ಮಿತ್ರರಲ್ಲಿ ನನ್ನ ಕೋರಿಕೆ ಇಷ್ಟೆ, ಪ್ರಸ್ತುತ ಚರ್ಚೆಯಾಗುತ್ತಿರುವ ಪ್ರಕರಣದಲ್ಲಿ ನನ್ನ ಪಾತ್ರವೇನೂ ಇಲ್ಲ. ವಿಚಾರಣೆಗೆ ಕರೆದ ಕೂಡಲೇ ನಾನು ಅಪರಾಧಿ ಎಂದಲ್ಲ ಎಂದು ನಮಗೆ ತಿಳಿದಿದೆ ಎಂದರು.

    ಪೊಲೀಸರಿಗೆ ನನಗೆ ತಿಳಿದಿರುವ ಮಾಹಿತಿ ನೀಡಿ ಸಂಪೂರ್ಣ ಸಹಕಾರ ನೀಡುತ್ತೇನೆ. ಮಾಧ್ಯಮಗಳು ಈ ವಿಚಾರವನ್ನು ಕುರಿತಂತೆ ಯಾವುದೇ ನಿಲುವನ್ನು ಕೊಳ್ಳದಿರಿ ಎನ್ನುವುದು ನನ್ನ ಕಳಕಳಿಯ ಮನವಿ. ಈ ವಿಚಾರ ನನ್ನ ಕುಟುಂಬ ವರ್ಗಕ್ಕೆ ಈಗಾಗಲೇ ನೋವು ತಂದಿದೆ. ಮಾಧ್ಯಮಗಳಲ್ಲಿ ಅತಿಯಾದ ಪ್ರಚಾರವು ಸತ್ಯವನ್ನು ದಾರಿ ತಪ್ಪಿಸುವುದಾಗಬಾರದು ಎನ್ನವುದು ನನ್ನ ಕಾಳಜಿ. ಆದ್ದರಿಂದ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಎಲ್ಲರೂ ಅಪರಾಧಿಗಳಲ್ಲ ಎನ್ನುವುದು ತಮಗೂ ತಿಳಿದಿದೆ. ಆದ್ದರಿಂದ ಈ ವಿಚಾರ ಕುರಿತಂತೆ ಸಮತೋಲನದ ವರದಿಗಳನ್ನು ನೀಡುವಂತೆ ಕೋರುತ್ತೇನೆ ಎಂದು ಮಾಧ್ಯಮ ಮಿತ್ರರಲ್ಲಿ ಕೇಳಿಕೊಂಡಿದ್ದಾರೆ.

    ಪೊಲೀಸರ ವಿಚಾರಣೆ ಆದ ನಂತರ ಮಾಧ್ಯಮಗಳಿಗೆ ನೀಡಬಹುದಾದ ಮಾಹಿತಿಯನ್ನು ನಾನು ನೀಡುತ್ತೇನೆ. ಈ ವಿಚಾರದಲ್ಲಿ ಪೊಲೀಸರಿಗೆ ಸಹಕರಿಸುತ್ತೇನೆ. ಮಾಧ್ಯಮ ಮಿತ್ರರು ಕೂಡ ಸತ್ಯಾಸತ್ಯತೆಗಳು ಹೊರಬರುವವರೆಗೆ ತಾಳ್ಮೆಯಿಂದ ಸಹಕರಿಸಬೇಕಾಗಿ ಎಂದು ನಿರೂಪಕಿ ಅನುಶ್ರೀ ಮನವಿ ಮಾಡಿಕೊಂಡಿದ್ದಾರೆ.

    https://www.facebook.com/AnchorAnushree/photos/a.625365900832803/3261962123839821

    ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿರುವ ಡ್ಯಾನ್ಸರ್ ಕಿಶೋರ್ ಶೆಟ್ಟಿ ಪಾರ್ಟಿಗಳಲ್ಲಿ ಖ್ಯಾತ ನಿರೂಪಕಿ ಭಾಗಿಯಾಗುತ್ತಾರೆ ಎಂದು ಹೇಳಿಕೆ ನೀಡಿದ್ದ. ಅಲ್ಲದೇ ಕಿಶೋರ್ ಆಪ್ತ ತರುಣ್ ವಿಚಾರಣೆ ವೇಳೆ ಅನುಶ್ರೀಯವರ ಹೆಸರು ಹೇಳಿದ್ದಾನೆ ಎನ್ನಲಾಗಿದೆ. ಈ ಇಬ್ಬರ ಹೇಳಿಕೆಯನ್ನಾಧರಿಸಿ ಅನುಶ್ರೀ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

  • ಸಿಸಿಬಿ ನೋಟಿಸ್- ನಿರೂಪಕಿ ಅನುಶ್ರೀ ಮೊದಲ ಪ್ರತಿಕ್ರಿಯೆ

    ಸಿಸಿಬಿ ನೋಟಿಸ್- ನಿರೂಪಕಿ ಅನುಶ್ರೀ ಮೊದಲ ಪ್ರತಿಕ್ರಿಯೆ

    ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಹಿನ್ನೆಲೆ ನಿರೂಪಕಿ ಅನುಶ್ರೀ ಪಬ್ಲಿಕ್ ಟಿವಿಗೆ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

    ನನಗೆ ಯಾವುದೇ ನೋಟಿಸ್ ಬಂದಿಲ್ಲ. ಯಾವ ನೋಟಿಸ್ ಎಂಬುವುದು ನನಗೆ ಗೊತ್ತಾಗುತ್ತಿಲ್ಲ. ನೀವು ಹೇಳುತ್ತಿರುವ ರೀತಿಯಲ್ಲಿ ಯಾವುದೇ ನೋಟಿಸ್ ತಲುಪಿಲ್ಲ. ನನ್ನ ಮೊಬೈಲಿಗೆ ಸಮನ್ಸ್ ಸಹ ಬಂದಿಲ್ಲ. ಮಂಗಳೂರಿನ ಮನೆಯಲ್ಲಿಯೂ ನಾವು ಯಾರು ಇಲ್ಲ. ಸುದ್ದಿ ಬಿತ್ತರವಾಗುತ್ತಿದ್ದಂತೆ ನಾನು ಮಂಗಳೂರಿನ ಮನೆಯ ಬಳಿ ಕೆಲವರನ್ನ ಕಳಿಸಿ ವಿಚಾರಿಸಿದೆ. ನಾನು, ಅಮ್ಮ ಮತ್ತು ತಮ್ಮ ಬೆಂಗಳೂರಿನಲ್ಲಿಯೇ ಇದ್ದೇನೆ ಎಂದು ಅನುಶ್ರೀ ಹೇಳಿದ್ದಾರೆ.

    ಸಿನಿಮಾ ಇಂಡಸ್ಟ್ರಿಗೆ ಬಂದು 14 ವರ್ಷ ಆಗಿದೆ. 12 ವರ್ಷದ ಹಿಂದೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ನಮಗೆ ಕಿಶೋರ್ ಶೆಟ್ಟಿ ಮತ್ತು ತರುಣ್ ಕೊರಿಯೋಗ್ರಾಫರ್ ಆಗಿದ್ದರು. ಅದಾದ ಬಳಿಕ ಇಬ್ಬರ ಜೊತೆಗೆ ಸಂಪರ್ಕ ಬಂದಿಲ್ಲ. ಮೂರು ವರ್ಷದ ಹಿಂದೆ ಬಂಧಿತರ ಡ್ಯಾನ್ಸ್ ಸ್ಕೂಲ್ ಉದ್ಘಾಟನೆ ಮಾಡಿಕೊಟ್ಟಿದ್ದೇನೆ. ಲಾಕ್‍ಡೌನ್ ವೇಳೆ ಇಪ್ಪತ್ತೈದು ದಿನ ಮಂಗಳೂರಿನಲ್ಲಿ ಲಾಕ್ ಆಗಿದ್ದೆ. ನಂತರ ಅನುಮತಿ ಪಡೆದು ಕಾರ್ ಡ್ರೈವ ಮಾಡಿಕೊಂಡು ಬಂದಿದ್ದೇನೆ. ಮಂಗಳೂರಿಗೆ ಹೋದ್ರು ಮನೆ ಮತ್ತು ದೇವಸ್ಥಾನಕ್ಕೆ ಮಾತ್ರ ಹೋಗುತ್ತೇನೆ. ಲಾಕ್‍ಡೌನ್ ನಲ್ಲಿಯೂ ನಾನು ಮನೆಯಲ್ಲಿದ್ದೇನೆ. ಈ ಬಗ್ಗೆ ನೀವು ಯಾರನ್ನಾದರೂ ಕೇಳಿ ಎಂದು ಹೇಳಿದರು.

    ಒಂದು ವೇಳೆ ವಿಚಾರಣೆಗೆ ಹಾಜರಾಗಬೇಕೆಂದು ಅಂದಾಗ ಖಂಡಿತ ಹೋಗುತ್ತೇನೆ. ಪೊಲೀಸರ ತನಿಖೆಗೆ ಸಹಕರಿಸೋದು ನನ್ನ ಕರ್ತವ್ಯ ಆಗಿರುತ್ತದೆ. ತಾಯಿ ಮತ್ತು ತಮ್ಮ ಮನೆಯಲ್ಲಿ ಟಿವಿ ನೋಡುತ್ತಿದ್ದಾರೆ. ಮಗಳ ಮೇಲೆ ಅವರಿಗೆ ನಂಬಿಕೆ ಇಲ್ಲ ಅಂತ ಅಲ್ಲ. ಜನ ಹೇಗೆ ನೋಡುತ್ತಾರೆ ಅನ್ನೋ ಚಿಂತೆ ಅವರ ಮುಖದಲ್ಲಿ ಕಾಣಿಸುತ್ತಿದೆ. ಕಾರ್ಯಕ್ರಮಗಳಿಗೆ ಹೋಗುವುದು ನನ್ನ ಕೆಲಸ. ಆದ್ರೆ ಎಷ್ಟೋ ಜನರನ್ನು ಭೇಟಿ ಆಗುತ್ತಿರುತ್ತೇವೆ. ಅಲ್ಲಿ ಬಂದರೋರು ನಮಗೆ ಪರಿಚಯ ಇರಬೇಕು ಅಂತೇನಿಲ್ಲ ಎಂದು ತಿಳಿಸಿದರು.

    ಮಂಗಳೂರು ಸಿಸಿಬಿ ಪೊಲೀಸರ ಬಂಧನದಲ್ಲಿರುವ ಡ್ಯಾನ್ಸರ್ ಕಿಶೋರ್ ಶೆಟ್ಟಿ ಮತ್ತು ಆತನ ಆಪ್ತ ತರುಣ್ ಹೇಳಿಕೆಯನ್ನಾಧರಿಸಿ ಅನುಶ್ರೀ ಅವರಿಗೆ ವಾಟ್ಸಪ್ ಮೂಲಕ ನೋಟಿಸ್ ನೀಡಿದೆ ಎಂದು ತಿಳಿದು ಬಂದಿದೆ.

    ಸಿಸಿಬಿ ಬಂಧನದಲ್ಲಿರುವ ಕಿಶೋರ್ ಶೆಟ್ಟಿ, ತರುಣ್ ವಿಚಾರಣೆ ವೇಳೆ ಮಹತ್ವದ ವಿಷಯಗಳು ಬಯಲಿಗೆ ಬಂದಿವೆ. ಇಂದು ಬಂಧನವಾಗಿರುವ ತರುಣ್ ಜೊತೆ ಅನುಶ್ರೀ ನಿರಂತರ ಸಂಪರ್ಕದಲ್ಲಿದ್ದರು. ಅನುಶ್ರೀ ಡ್ರಗ್ಸ್ ಪೆಡ್ಲರ್ ಗಳ ಜೊತೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಅನ್‍ಲಾಕ್ ಬಳಿಕ ಮಂಗಳೂರಿಗೆ ತೆರಳಿದ್ದ ಅನುಶ್ರೀ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿರುವ ಬಗ್ಗೆ ಮಹತ್ವದ ಸಾಕ್ಷ್ಯ ಲಭ್ಯವಾಗಿದೆ ಎನ್ನಲಾಗಿದೆ.

    ಮಂಗಳೂರಿನ ಸಿಸಿಬಿ ಪೊಲೀಸರ ಒಂದು ತಂಡ ಇಂದು ಸಂಜೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದೆ. ಬೆಂಗಳೂರು ಮತ್ತು ಮಂಗಳೂರು ಪೊಲೀಸರ ನೇತೃತ್ವದಲ್ಲಿ ಅನುಶ್ರೀ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ. ಎರಡು ದಿನಗಳ ಹಿಂದೆ ಕಿಶೋರ್ ಶೆಟ್ಟಿಯ ಮಣಿಪುರ ಮೂಲದ ಗೆಳತಿಯನ್ನ ಸಹ ಪೊಲೀಸರು ಬಂಧಿಸಿದ್ದಾರೆ. ಕಿಶೋರ್ ಶೆಟ್ಟಿ ಗೆಳತಿ ಮಂಗಳೂರಿನ ಸ್ಪಾನಲ್ಲಿ ಕೆಲಸ ಮಾಡಿಕೊಂಡಿದ್ದಳು. ಕಿಶೋರ್ ಶೆಟ್ಟಿ ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ತನ್ನ ಗೆಳೆಯ, ಗೆಳತಿಯರನ್ನ ಕರೆ ತರುತ್ತಿದ್ದಳು.

    ಸೆಪ್ಟೆಂಬರ್ 19ರಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಬಂಧಿತರಿಂದ ಎಂಡಿಎಂ ಪೌಡರ್, ಬೈಕ್, 2 ಮೊಬೈಲ್ ಫೋನ್ ಸೇರಿದಂತೆ 1 ಲಕ್ಷ ಮೌಲ್ಯದ ವಸ್ತು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆರೋಪಿಗಳು ಮುಂಬೈಯಿಂದ ವಸ್ತುಗಳನ್ನು ಖರೀದಿಸಿ ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಇಬ್ಬರ ಮೇಲೆ ಸೇವನೆ ಮತ್ತು ಮಾರಾಟ ಎರಡೂ ಪ್ರಕರಣ ದಾಖಲಾಗಿದೆ.

    ಆರೋಪಿ ಅಕೀಲ್ ನೌಶೀಲ್ ಈ ಹಿಂದೆ ವಿದೇಶದಲ್ಲಿ ಸೇಫ್ಟಿ ಆಫೀಸರ್ ಆಗಿದ್ದ. ಒಂದು ವರ್ಷದ ಊರಿಗೆ ಬಂದಿದ್ದ ಈತ, ಕಿಶೋರ್ ಅಮನ್ ಶೆಟ್ಟಿ ಜೊತೆ ಡ್ಯಾನ್ಸರ್, ಕೋರಿಯೋಗ್ರಾಫರ್ ಆಗಿ ಕೆಲಸ ಮಾಡಿಕೊಂಡಿದ್ದ. ಅಲ್ಲದೆ ಅಕೀಲ್ ನೌಶೀಲ್ ಜೊತೆ ಸೇರಿ ಮಾದಕ ವಸ್ತು ಖರೀದಿಸಿ ಮಾರಾಟ ಮಾಡುತ್ತಿದ್ದ. ಬೆಂಗಳೂರು, ಮುಂಬೈಯಿಂದ ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳಿದ್ದಾರೆ. ಇವರ ಚೈನ್ ಲಿಂಕ್ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ ಎಂದು ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದರು.