ಮಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣ ದಿನದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಈಗಾಗಲೇ ನಟಿ ಕಂ ಆ್ಯಂಕರ್ ಅನುಶ್ರೀ ಅವರನ್ನು ಸಿಸಿಬಿ ವಿಚಾರಣೆ ನಡೆಸಿದೆ. ಈ ಬೆನ್ನಲ್ಲೇ ನಿರೂಪಕಿಗೆ ಮತ್ತೊಂದು ಭಯ ಶುರುವಾಗಿದೆ.
ಡ್ರಗ್ಸ್ ಟೆಸ್ಟ್ ಮಾಡಿಸಲು ಸಿದ್ಧತೆ ನಡೆಸಲಾಗಿದೆ ಎಂದು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಹೇಳಿದ್ದಾರೆ. ಇದರಿಂದಾಗಿ ಅನುಶ್ರೀಗೆ ಚಿಂತೆ ಕಾಡಲು ಆರಂಭವಾಗಿದೆ. ಈ ಮಧ್ಯೆ ಡೋಪಿಂಗ್ ಟೆಸ್ಟ್ ಮಾಡಿಸದಂತೆ ಪ್ರಭಾವಿಯೊಬ್ಬರು ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಇದನ್ನೂ ಓದಿ: ತರುಣ್ ರಾಜ್ ನನಗೆ 12 ವರ್ಷಗಳ ಹಿಂದಿನ ಪರಿಚಯ: ವಿಚಾರಣೆ ಬಳಿಕ ಅನುಶ್ರೀ ಸ್ಪಷ್ಟನೆ
ಇತ್ತ ಡ್ರಗ್ಸ್ ಪ್ರಕರಣ ಸಂಬಂಧ ಓರ್ವ ಪ್ರಮುಖ ಡ್ರಗ್ ಪೆಡ್ಲರ್‍ನನ್ನು ಸಿಸಿಬಿ ಬಂಧಿಸಿದೆ. ಮಹಮ್ಮದ್ ಶಾಕೀರ್ ಬಂಧಿತ ಆರೋಪಿಯಾಗಿದ್ದು, ಡ್ಯಾನ್ಸರ್ ಕಿಶೋರ್, ಕೋರಿಯೋಗ್ರಫರ್ ತರುಣ್ ರಾಜ್ ಮಾಹಿತಿ ಮೇರೆಗೆ ಈತನನ್ನು ಬಂಧಿಸಲಾಗಿದೆ. ಈ ಎಲ್ಲರಿಗೂ ಶಾಕೀರ್ ಡ್ರಗ್ಸ್ ಲಿಂಕ್ ಕೊಡಿಸಿದ್ದ ಎಂಬ ಮಾಹಿತಿ ದೊರೆತಿದ್ದು, ಶಾಕೀರ್ ವಿಚಾರಣೆ ವೇಳೆ ಹಲವು ಹೆಸರುಗಳ ಪ್ರಸ್ತಾಪವಾಗುವ ಸಾಧ್ಯತೆಗಳಿವೆ.
ಮುಂಬೈ: ಬಾಲಿವುಡ್ ವುಡ್ ನಲ್ಲಿ ಕೂಡ ಡ್ರಗ್ಸ್ ಪ್ರಕರಣ ದಿನೇ ದಿನೇ ಹೊಸ ರೂಪವನ್ನು ಪಡೆದುಕೊಳ್ಳುತ್ತಿದ್ದು, ಇದೀಗ ನಟಿ ದೀಪಿಕಾ ಪಡುಕೊಣೆ ಅವರು ಎನ್‍ಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ.
ಇಂದು ಬೆಳಗ್ಗೆ 9.45ರ ಸುಮಾರಿಗೆ ದೀಪಿಕಾ ಅವರು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋ(ಎನ್‍ಸಿಬಿ) ಕಚೇರಿ ತಲುಪಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ದೀಪಿಕಾ ಜೊತೆ ಶ್ರದ್ಧಾ ಕಪೂರ್, ಸಾರಾ ಅಲಿಖಾನ್ ಹಾಗೂ ದೀಪಿಕಾ ಮ್ಯಾನೇಜರ್ ಕರೀಷ್ಮಾ ಪ್ರಕಾಶ್ ಕೂಡ ವಿಚಾರಣೆ ಎದುರಿಸಲಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ಮೂವರು ನಟಿಯರಿಗೆ ಎನ್‍ಸಿಬಿ ಬುಧವಾರವೇ ನೋಟಿಸ್ ನೀಡಿತ್ತು. ದೀಪಿಕಾ ಅವರ ಮ್ಯಾನೇಜರ್ ಕರೀಷ್ಮಾ ಪ್ರಕಾಶ್ ನಿನ್ನೆ ಕೂಡ ವಿಚಾರಣೆ ಎದುರಿಸಿದ್ದಾರೆ.
ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವಾಗಲೇ ಡ್ರಗ್ಸ್ ದಂಧೆ ಕುರಿತು ಸ್ಫೋಟಕ ಮಾಹಿತಿ ಲಭ್ಯವಾಗುತ್ತಿದ್ದು, ಸುಶಾಂತ್ ಸಿಂಗ್ ರಜಪೂತ್ ಪ್ರಿಯತಮೆ, ನಟಿ ರಿಯಾ ಚಕ್ರವರ್ತಿ ಹಾಗೂ ಇತರ ಡ್ರಗ್ ಪೆಡ್ಲರ್ ಗಳನ್ನು ವಿಚಾರಣೆ ನಡೆಸುತ್ತಿದ್ದಾಗ ಬಾಲಿವುಡ್‍ನ ಹಲವು ನಟ, ನಟಿಯರು ಹಾಗೂ ನಿರ್ಮಾಪಕರು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ಕುರಿತು ಮಾಹಿತಿ ಲಭ್ಯವಾಗುತ್ತಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಸಿಬಿ ಈಗಾಗಲೇ ಹತ್ತಾರು ನಟಿಯರನ್ನು ವಿಚಾರಣೆ ನಡೆಸಿದೆ.
#WATCH Maharashtra: Actor Deepika Padukone arrived at Narcotics Control Bureau's (NCB) Special Investigation Team (SIT) office in Mumbai, earlier today.
ಈ ಹಿಂದೆ ನಟಿ ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಗೆ ನೋಟಿಸ್ ನೀಡಿತ್ತು. ನಂತರ ಸ್ವತಃ ದೀಪಿಕಾ ಪಡುಕೋಣೆಯವರಿಗೇ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು. ಈ ವೇಳೆ ವಾಟ್ಸಪ್ ಕುರಿತು ಮಹತ್ವದ ಮಾಹಿತಿ ಹೊರ ಬಿದ್ದಿದ್ದು, ಡ್ರಗ್ಸ್ ಕುರಿತ ಮೂವರಿದ್ದ ಗ್ರೂಪ್‍ಗೆ ದೀಪಿಕಾ ಪಡುಕೋಣೆಯವರೇ ಅಡ್ಮಿನ್ ಆಗಿದ್ದರು ಎಂದು ತಿಳಿದು ಬಂದಿದೆ. ಈ ವಾಟ್ಸಪ್ ಗ್ರೂಪ್‍ನಲ್ಲಿ ನಟಿಯ ಮ್ಯಾನೇಜರ್ ಕರಿಷ್ಮಾ ಪ್ರಕಾಶ್, ಜಯಾ ಸಾಹ ಅವರೂ ಭಾಗಿಯಾಗಿದ್ದಾರೆ. ಈ ಕುರಿತು ಎನ್‍ಸಿಬಿ ಈಗಾಗಲೇ ಕರಿಷ್ಮಾ ಅವರ ವಿಚಾರಣೆ ನಡೆಸಿದೆ.
ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿಯವರೊಂದಿಗೆ ಡ್ರಗ್ಸ್ ಕುರಿತು ಮಾತನಾಡಿರುವುದಾಗಿ ರಕುಲ್ ಪ್ರೀತ್ ಸಿಂಗ್ ಒಪ್ಪಿಕೊಂಡಿದ್ದಾರೆ. ನನ್ನೊಂದಿಗೆ ಡ್ರಗ್ಸ್ ಇಟ್ಟುಕೊಂಡಿರುತ್ತಿದ್ದೆ, ಆದರೆ ಸೇವಿಸಿಲ್ಲ, ಇದನ್ನು ರಿಯಾಗಾಗಿ ಇಟ್ಟುಕೊಂಡಿರುತ್ತಿದ್ದೆ ಎಂದು ಹೇಳಿದ್ದಾರೆ. ರಕುಲ್ ಅವರನ್ನು ಶುಕ್ರವಾರ ಬೆಳಗ್ಗೆ ವಿಚಾರಣೆಗೆ ಒಳಪಡಿಸಲಾಗಿದೆ.
Mumbai: Actor Deepika Padukone arrives at Narcotics Control Bureau (NCB) SIT office.
ಡ್ರಗ್ಸ್ ಖರೀದಿಗಾಗಿ ಎರಡು ದಿನಗಳ ಹಿಂದೆ ದೀಪಿಕಾ ಮತ್ತು ಶ್ರದ್ಧಾ ಕಪೂರ್ ವಾಟ್ಸಪ್ ಚಾಟ್ ಮಾಹಿತಿಯನ್ನು ಖಾಸಗಿ ವಾಹಿನಿ ಬಿತ್ತರಿಸಿತ್ತು. ಇತ್ತ ರಕುಲ್ ಪ್ರೀತ್ ಸಿಂಗ್ ಮಾಧ್ಯಮಗಳಿಂದ ತಮ್ಮ ತೇಜೋವಧೆ ಆಗುತ್ತಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಮ್ಯಾನೇಜರ್ ಕರಿಷ್ಮಾ ಬಳಿ ಮಾಲ್ ಇದೆಯಾ ಎಂದು ದೀಪಿಕಾ ಕೇಳಿರುವ ವಾಟ್ಸಪ್ ಚಾಟ್‍ನ ಸ್ಕ್ರೀನ್‍ಶಾಟ್ ಇತ್ತೀಚೆಗೆ ರಿವೀಲ್ ಆಗಿತ್ತು. ಹ್ಯಾಶ್ ಕೇಳಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿತ್ತು.
ಮಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಬಂಧಿಸಿದಂತೆ ಬಂಧಿತರಾಗಿರುವ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಹಾಗೂ ಅಕೀಲ್ ನೌಶೀನ್‍ನನ್ನು ಅಕ್ಟೋಬರ್ 9 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಧಿತರನ್ನು ಶುಕ್ರವಾರ ನಾರ್ಕೊಟಿಕ್ ಕ್ರೈಂ ಪೊಲೀಸರು ಮಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಿದ ಪೊಲೀಸರು, ಅ.9 ರವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಕಳೆದ ಆರು ದಿನಗಳಿಂದ ಆರೋಪಿಗಳು ನಾರ್ಕೊಟಿಕ್ ಪೊಲೀಸರ ವಶದಲ್ಲಿದ್ದರು. ಸೆಪ್ಟೆಂಬರ್ 19ರಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಬಂಧಿತರಿಂದ ಎಂಡಿಎಂ ಪೌಡರ್, ಬೈಕ್, 2 ಮೊಬೈಲ್ ಫೋನ್ ಸೇರಿದಂತೆ 1 ಲಕ್ಷ ಮೌಲ್ಯದ ವಸ್ತು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆರೋಪಿಗಳು ಮುಂಬೈಯಿಂದ ವಸ್ತುಗಳನ್ನು ಖರೀದಿಸಿ ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಇಬ್ಬರ ಮೇಲೆ ಸೇವನೆ ಮತ್ತು ಮಾರಾಟ ಎರಡೂ ಪ್ರಕರಣ ದಾಖಲಾಗಿದೆ.
ಆರೋಪಿ ಅಕೀಲ್ ನೌಶೀಲ್ ಈ ಹಿಂದೆ ವಿದೇಶದಲ್ಲಿ ಸೇಫ್ಟಿ ಆಫೀಸರ್ ಆಗಿದ್ದ. ಒಂದು ವರ್ಷದ ಊರಿಗೆ ಬಂದಿದ್ದ ಈತ, ಕಿಶೋರ್ ಅಮನ್ ಜೊತೆ ಡ್ಯಾನ್ಸರ್, ಕೋರಿಯೋಗ್ರಾಫರ್ ಆಗಿ ಕೆಲಸ ಮಾಡಿಕೊಂಡಿದ್ದ. ಅಲ್ಲದೆ ಅಕೀಲ್ ನೌಶೀಲ್ ಜೊತೆ ಸೇರಿ ಮಾದಕ ವಸ್ತು ಖರೀದಿಸಿ ಮಾರಾಟ ಮಾಡುತ್ತಿದ್ದ. ಬೆಂಗಳೂರು, ಮುಂಬೈಯಿಂದ ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳಿದ್ದಾರೆ. ಇವರ ಚೈನ್ ಲಿಂಕ್ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ ಎಂದು ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದರು.
ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿರುವ ಡ್ಯಾನ್ಸರ್ ಕಿಶೋರ್ ಅಮನ್ ಗೆಳತಿಯನ್ನು ಕೂಡ ಮಂಗಳೂರು ಪೊಲೀಸರು ಬಂಧಿಸಿದ್ದರು. ಕಿಶೋರ್ ಗೆಳತಿ ಮಂಗಳೂರಿನ ಸ್ಪಾದಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಮಣಿಪುರ ಮೂಲದ ಆಸ್ಕಾ ಬಂಧಿತ ಯುವತಿ. ಕಿಶೋರ್ ಶೆಟ್ಟಿ ಜೊತೆ ಡ್ರಗ್ಸ್ ಪಾರ್ಟಿಯಲ್ಲಿ ಆಸ್ಕಾ ಭಾಗಿಯಾಗುತ್ತಿದ್ದಳು. ಲಾಕ್‍ಡೌನ್ ಸಂದರ್ಭದಲ್ಲಿಯೂ ನಡೆಯುತ್ತಿದ್ದ ಪಾರ್ಟಿಗಳಿಗೆ ಆಸ್ಕಾ ತನ್ನ ಗೆಳತಿಯರ ಜೊತೆ ಆಗಮಿಸುತ್ತಿದ್ದಳು ಎನ್ನಲಾಗಿತ್ತು.
ಮುಂಬೈ: ಸ್ಯಾಂಡಲ್‍ವುಡ್ ನಂತೆ ಬಾಲಿವುಡ್ ಅಂಗಳದಲ್ಲಿಯೂ ಡ್ರಗ್ಸ್ ಪ್ರಕರಣ ದಿನೇ ದಿನೇ ಹೊಸ ರೂಪಗಳನ್ನು ಪಡೆದುಕೊಳ್ಳುತ್ತಿದೆ. ಇದೀಗ ನಟಿ ದಿಯಾ ಮಿರ್ಜಾ ಅವರು, ನಾನು ಯಾವತ್ತೂ ಡ್ರಗ್ಸ್ ಸೇವಿಸಿಲ್ಲ ಎಂದು ಹೇಳುವ ಮೂಲಕ ತನ್ನ ಮೇಲಿನ ಆರೋಪಗಳನ್ನು ಅಲ್ಲಗೆಳೆದಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ದಿಯಾ, ನನ್ನ ವಿರುದ್ಧ ಕೇಳಿಬರುತ್ತಿರುವ ಆರೋಪಗಳೆಲ್ಲವೂ ಸುಳ್ಳಾಗಿದ್ದು, ಆಧಾರ ರಹಿತವಾಗಿದೆ. ಅಲ್ಲದೆ ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇದೊಂದು ನನ್ನ ವಿರುದ್ಧದ ಪಿತೂರಿಯಾಗಿದೆ ಎಂದಿದ್ದಾರೆ.
1) I would like to strongly refute and categorically deny this news as being false, baseless and with mala fide intentions. – Continued
ಇಂತಹ ಕುಲ್ಲಕ ವರದಿಗಾರಿಕೆ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತದ್ದಾಗಿದೆ. ಹಲವು ವರ್ಷಗಳ ಕಠಿಣ ಪರಿಶ್ರಮದಿಂದ ನನ್ನ ವೃತ್ತಿ ಜೀವನವನ್ನು ಉತ್ತಮವಾಗಿ ರೂಪಿಸಿಕೊಂಡು ಬಂದಿದ್ದೇನೆ ಎಂದು ಕಿಡಿಕಾರಿದ್ದಾರೆ.
ನನ್ನ ಜೀವನದಲ್ಲಿ ಯಾವುದೇ ರೀತಿಯ ಮಾದಕ ವಸ್ತುಗಳನ್ನು ಎಂದಿಗೂ ಸೇವಿಸಿಲ್ಲ. ಓರ್ವ ಭಾರತದ ಪ್ರಜೆಯಾಗಿ ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದೇನೆ. ನನ್ನ ಬೆಂಬಲಕ್ಕೆ ನಿಂತವರಿಗೆಲ್ಲರಿಗೂ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸುವುದಾಗಿ ಟ್ವೀಟ್ ನಲ್ಲಿ ದಿಯಾ ಮಿರ್ಜಾ ತಿಳಿಸಿದ್ದಾರೆ.
2) Such frivolous reporting has a direct impact on my reputation being besmirched and is causing damage to my career which I have painstakingly built with years of hard work. – Continued
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ತನಿಖೆಯ ವೇಳೆ ಡ್ರಗ್ಸ್ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಮಾದಕ ದ್ರವ್ಯ ಸೇವಿಸುತ್ತಾರೆ ಎಂಬ ವಿಚಾರದಡಿಯಲ್ಲಿ ಅನುಜ್ ಕೇಶ್ವಾನಿಯನ್ನು ತನಿಖೆಗೆ ಒಳಪಡಿಸಲಾಗಿತ್ತು. ಈ ವೇಳೆ ದಿಯಾ ಮಿರ್ಜಾ ಹೆಸರು ಕೇಳಿಬಂದಿದ್ದು, ಎನ್‍ಸಿಬಿ ನಟಿಯನ್ನು ತನಿಖೆ ಮಾಡುತ್ತಿದೆ ಎಂದು ಹೇಳಲಾಗಿತ್ತು.
ಡ್ರಗ್ಸ್ ಕೇಸ್ ಗೆ ಸಂಬಂಧಪಟ್ಟಂತೆ ದಿಯಾ ಹಾಗೂ ಅವರ ಮ್ಯಾನೇಜರ್ ನಡುವೆ ನಡೆದ ವಾಟ್ಸಪ್ ಸಂದೇಶಗಳು ಎನ್‍ಸಿಬಿಗೆ ಸಿಕ್ಕಿವೆಯಂತೆ. ಕೇಶ್ವಾನಿ ಗೆಳತಿ ದಿಯಾ ಮ್ಯಾನೇಜರ್ ಎಂಬುದು ಕೂಡ ಬಹಿರಂಗವಾಗಿದ್ದು, 2019ರಲ್ಲಿ ದಿಯಾ ಡ್ರಗ್ಸ್ ಖರೀದಿ ಮಾಡಿರುವ ಬಗ್ಗೆ ಎನ್‍ಸಿಬಿಗೆ ಮಾಹಿತಿ ಸಿಕ್ಕಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿತ್ತು.
3) I have never procured or consumed any narcotic or contraband substances of any form in my life. I intend to pursue the full extent of legal remedies available to me as a law abiding citizen of India. Thanks to my supporters for standing by me.
ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಕಿರುತೆರೆ ನಟಿ ರಜನಿ ಸೇರಿ ನಾಲ್ವರಿಗೆ ಆಂತರಿಕ ಭದ್ರತಾ ದಳ (ಐಎಸ್‍ಡಿ) ನೋಟಿಸ್ ನೀಡಿದೆ.
ಡ್ರಗ್ಸ್ ಕೇಸ್ ಪೆಡ್ಲರ್ ಗಳ ಜೊತೆ ಸಂಬಂಧ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಐಎಸ್ ಡಿ ಅಧಿಕಾರಿಗಳು ನೋಟಿಸ್ ನಲ್ಲಿ ತಿಳಿಸಿದ್ದಾರೆ.
ಇತ್ತ ಪೊಲೀಸರು ರಾಜಕಾರಣಿಯ ಮಗ, ಹಾಲಿ ರಾಜಕಾರಣಿಯ ಮೊಮ್ಮಗನನ್ನು ಕೂಡ ವಿಚಾರಣೆ ಕರೆತಂದು ರಕ್ತದ ಪರೀಕ್ಷೆಯನ್ನು ನಡೆಸಿದ್ದಾರೆ. ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ರಾಜಕಾರಣಿಯ ಮಗ ಡ್ರಗ್ಸ್ ತೆಗೆದುಕೊಂಡಿರುವ ಅನುಮಾನ ಹಿನ್ನೆಲೆಯಲ್ಲಿ ವಿಚಾರಣೆಗೆ ಕರೆದಿದ್ದರು. ಅಲ್ಲದೇ ನ್ಯಾಯಾಲಯದ ಅನುಮತಿ ಪಡೆದು ವೈದ್ಯಕೀಯ ಪರೀಕ್ಷೆಯನ್ನು ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ವೈದ್ಯಕೀಯ ಪರೀಕ್ಷೆಯ ವರದಿಯಲ್ಲಿ ಇಬ್ಬರ ಪೈಕಿ ಒಬ್ಬರ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಆತ ಪ್ರಕರಣದಿಂದ ಬಚಾವ್ ಆಗಿದ್ದಾನೆ. ಮತ್ತೊಬ್ಬನ ವರದಿಯ ನಿರೀಕ್ಷೆಯಲ್ಲಿದ್ದಾರೆ. ಸದ್ಯ ರಾಜಕಾರಣಿಯ ಮಗನ ವರದ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತನ ಹೆಸರನ್ನು ಗೌಪ್ಯವಾಗಿ ಇಟ್ಟಿದ್ದಾರೆ ಎನ್ನಲಾಗಿದೆ.
ಡ್ರಗ್ಸ್ ಕೇಸಿಗೆ ಸಂಬಂಧಿಸಿದಂತೆ ನಿನ್ನೆಯಷ್ಟೇ ನಟ ಲೂಸ್ ಮಾದ ಯೋಗಿ, ಕಿರುತೆರೆ ನಟಿಯರಾದ ಗೀತಾಭಾರತಿ ಭಟ್, ರಶ್ಮಿತಾ ಚೆಂಗಪ್ಪ ಹಾಗೂ ಕಿರುತೆರೆ ನಟ ಅಭಿಷೇಕ್ ದಾಸ್ ಅವರನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.
ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆಯಾಟ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲೇ ಪೊಲೀಸರು ರಾಜಕಾರಣಿಯ ಮಗ, ಹಾಲಿ ರಾಜಕಾರಣಿಯ ಮೊಮ್ಮಗನನ್ನು ವಿಚಾರಣೆ ಕರೆತಂದು ಮಾದಕ ದ್ರವ್ಯ ಪರೀಕ್ಷೆಯನ್ನು ನಡೆಸಿದ್ದಾರೆ.
ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ರಾಜಕಾರಣಿಯ ಮಗ ಡ್ರಗ್ಸ್ ತೆಗೆದುಕೊಂಡಿರುವ ಅನುಮಾನದ ಹಿನ್ನೆಲೆಯಲ್ಲಿ ವಿಚಾರಣೆಗೆ ಕರೆದಿದ್ದರು. ಅಲ್ಲದೇ ನ್ಯಾಯಾಲಯದ ಅನುಮತಿ ಪಡೆದು ವೈದ್ಯಕೀಯ ಪರೀಕ್ಷೆಯನ್ನು ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಸದ್ಯ ಪ್ರಕರಣದಲ್ಲಿ ಇದುವರೆಗೂ ವಿಚಾರಣೆ ಕರೆದು ಆ ಬಳಿಕ ಬಂಧಿಸಿ ಪರೀಕ್ಷೆಗೆ ಮುಂದಾಗುತ್ತಿದ್ದ ಪೊಲೀಸರು, ಸದ್ಯ ಒಂದು ಹೆಜ್ಜೆ ಮುಂದೆ ಹೋಗಿ ರಾಜಕಾರಣಿ ಮೊಮ್ಮಗ, ಹಾಲಿ ರಾಜಕಾರಣಿ ಮಗನ ಮಾದಕ ದ್ರವ್ಯ ಪರೀಕ್ಷೆ ನಡೆಸಿದ್ದಾರೆ.
ವೈದ್ಯಕೀಯ ಪರೀಕ್ಷೆಯ ವರದಿಯಲ್ಲಿ ಇಬ್ಬರ ಪೈಕಿ ಒಬ್ಬರ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಆತ ಪ್ರಕರಣದಿಂದ ಬಚಾವ್ ಆಗಿದ್ದಾನೆ ಎನ್ನಲಾಗಿದೆ. ಮತ್ತೊಬ್ಬನ ವರದಿಯ ನಿರೀಕ್ಷೆಯಲ್ಲಿದ್ದಾರೆ. ಸದ್ಯ ರಾಜಕಾರಣಿಯ ಮಗನ ವರದಿ ನೆಗೆಟಿವ್ ಬಂದ ಹಿನ್ನೆಯಲ್ಲಿ ಆತನನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತನ ಹೆಸರನ್ನು ಗೌಪ್ಯವಾಗಿ ಇಟ್ಟಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸ್‍ನಲ್ಲಿ ಪ್ರಮುಖ ದಂಧೆಕೋರನಿಗಾಗಿ ಬೆಂಗಳೂರಿನ ಕ್ರೈಂ ಬ್ರ್ಯಾಂಚ್ ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ. ಆ ದಂಧೆಕೋರ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಆಗ ದೊಡ್ಡ ದೊಡ್ಡ ರಾಜಕಾರಣಿಗಳು, ಅವರ ಮಕ್ಕಳು, ದೊಡ್ಡ ದೊಡ್ಡ ಸಿನಿಮಾ ಸ್ಟಾರ್ ಗಳಿಗೆ ಮಾರಿಹಬ್ಬ ಕಾದಿದೆ ಎಂದು ಮೂಲಗಳು ತಿಳಿಸಿವೆ.
ಡ್ರಗ್ಸ್ ಕೇಸ್‍ನ ತನಿಖೆ ಆರಂಭ ಆಗ್ತಿದ್ದಂತೆ ಸುಳಿವು ಪಡೆದಿದ್ದ ಆ ಪ್ರಮುಖ ಡ್ರಗ್ಸ್ ಡೀಲರ್ ಮೊಬೈಲ್ ಸ್ವಿಚ್‍ಆಫ್ ಮಾಡ್ಕೊಂಡಿದ್ದು, ಪೊಲೀಸರೊಂದಿಗೆ ಕಣ್ಣಾಮುಚ್ಚಾಲೆ ಆಡ್ತಿದ್ದಾನೆ. ಈತನ ಹೆಸರನ್ನು ಪೊಲೀಸರು ಇದೂವರೆಗೆ ಎಫ್‍ಐಆರ್ ನಲ್ಲಿ ಸೇರಿಸಿಲ್ಲ. ಆದರೆ ಈತನ ಬಂಧನವಾದ್ರೆ ಇಡೀ ಡ್ರಗ್ಸ್ ಕೇಸ್‍ಗೆ ಊಹಿಸಲಾಗದ ಹೊಸ ತಿರುವೇ ಸಿಗಲಿದೆ. ಡ್ರಗ್ಸ್ ಪಾರ್ಟಿ, ಕ್ಯಾಸಿನೋ ಅಂತೆಲ್ಲ ವಿದೇಶಕ್ಕೆ ಹೋಗ್ತಿದ್ದವರಿಗೆ ಶಾಕ್ ಕಾದಿದೆ. ಈ ಕೇಸ್‍ನಲ್ಲಿ ಬಿಜೆಪಿ ಸಂಸದನ ಮಗನನ್ನೂ ವಿಚಾರಣೆಗೆ ಕರೆಯುವ ನಿರೀಕ್ಷೆ ಇದೆ. ಅಲ್ಲದೇ ಜೆಡಿಎಸ್‍ನ ಮಾಜಿ ಸಂಸದ ಶಿವರಾಮೇಗೌಡ ಪುತ್ರನಿಗೂ ನೋಟಿಸ್ ಜಾರಿ ಆಗಿದೆ.
ಒಟ್ಟಿನಲ್ಲಿ ಈಗ ಸ್ಟಾರ್ ನಟ-ನಟಯರಿಗೆ ನಡುಕ ಶುರು ಆಗಿದೆ. ಇದೂವರೆಗೆ ನಡೆಸಿರೋ ತನಿಖೆ ವೇಳೆ ಡ್ರಗ್ಸ್ ದಂಧೆಕೋರರು ನೀಡಿರುವ ಹೇಳಿಕೆ ಆಧರಿಸಿ ಇನ್ನಷ್ಟು ಸ್ಟಾರ್ ನಟ-ನಟಿಯರಿಗೆ ಬೆಂಗಳೂರಿನ ಕ್ರೈಂಬ್ರ್ಯಾಂಚ್ ಪೊಲೀಸರು ನೋಟಿಸ್ ನೀಡುವ ನಿರೀಕ್ಷೆ ಇದೆ. ಪ್ರಸಿದ್ಧ ಹೀರೋ-ಹೀರೋಯಿನ್‍ಗಳ ವಿರುದ್ಧ ಕಾಲ್ ರೆಕಾರ್ಡ್ಸ್ ಸೇರಿದಂತೆ ಡಿಜಿಟಿಲ್ ಎವಿಡೆನ್ಸ್ ನ್ನು ಸಿಸಿಬಿ ಕಲೆ ಹಾಕುತ್ತಿದೆ. ಈ ಡಿಜಿಟಲ್ ಎವಿಡೆನ್ಸ್ ಕೈ ಸೇರಿದ ಕೂಡಲೇ ಆ ನಟ-ನಟಿಯರಿಗೆ ಸಮನ್ಸ್ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಇತ್ತ ಡ್ರಗ್ ಕೇಸ್ ತನಿಖೆ ಮಾಡ್ತಿರೋ ಪೊಲೀಸರಿಗೆ ಈ ಬಗ್ಗೆ ಸ್ಫೋಟಕ ಸುಳಿವು ಸಿಕ್ಕಿದೆ. ರಾಜಧಾನಿಯ ಹೊರವಲಯದಲ್ಲಿರುವ ಇರುವ ಫಾರ್ಮ್‍ಹೌಸ್‍ಗಳಲ್ಲಿ ಸ್ಮೈಲ್ ಪಾರ್ಟಿ ಹೆಸರಲ್ಲಿ ಡ್ರಗ್ಸ್ ಪಾರ್ಟಿ ಇರ್ತಿತ್ತು. ಸಿನಿಮಾ, ಸೀರಿಯಲ್, ಉದ್ಯಮಿಗಳು, ರಾಜಕಾರಣಿಗಳು, ಅವರ ಮಕ್ಕಳು ಕೂಡ ಆ ಪಾರ್ಟಿಗೆ ಬರ್ತಿದ್ರು. ತಡರಾತ್ರಿ 11 ಗಂಟೆ ಸುಮಾರಿಗೆ ಶುರವಾಗ್ತಿದ್ದ ಪಾರ್ಟಿ ಬೆಳಗ್ಗೆ 4ರಿಂದ 5 ಗಂಟೆವರೆಗೂ ನಡೀತಿತ್ತು. ಇವೆಲ್ಲದರ ಬಗ್ಗೆ ಸದ್ಯಕ್ಕೆ ಸಿಸಿಬಿ ಅರೆಸ್ಟ್ ಮಾಡಿರೋ ಆರೋಪಿಯೊಬ್ಬನ ಮೊಬೈಲ್‍ನಲ್ಲಿ ಸಾಕ್ಷ್ಯ ಸಿಕ್ಕಿದೆ. ಈ ವೀಡಿಯೋ ಒಳಗೊಂಡು ಇತರೆ ಸಾಕ್ಷ್ಯಗಳನ್ನ ಆಧರಿಸಿ ಪಾರ್ಟಿಗಳ ಆಯೋಜಕರು, ಫಾರ್ಮ್‍ಹೌಸ್‍ಗಳ ಮಾಲೀಕರು, ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರಿಗೆ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ಮಾಡ್ಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಡ್ರಗ್ಸ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಗಟ್ಟಿಮೇಳ ಧಾರವಾಹಿಯ ವಿಕ್ರಾಂತ್ ಖ್ಯಾತಿಯ ಅಭಿಷೇಕ್ ದಾಸ್ ಮತ್ತು ಬ್ರಹ್ಮಗಂಟು ಧಾರಾವಾಹಿಯ ಗೀತಾಭಾರತಿ ಭಟ್‍ಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಈ ಬೆನ್ನಲ್ಲೇ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದ ಗೀತಾಭಾರತಿ, ಡ್ರಗ್ ಕೇಸ್ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಬಂದಿರುವುದು ನಿಜ. ನಾನು ಈ ವಿಚಾರವಾಗಿ ಪ್ಯಾನಿಕ್ ಆಗಿದ್ದೇನೆ. ವಿಚಾರಣೆಗೆ ಕರೆದಿದ್ದಾರೆ ಎಂದರೆ ನಾವು ತಪ್ಪು ಮಾಡಿದ್ದೇವೆ ಎಂದಲ್ಲ. ನಮಗೆ ಆಗದವರು ನನ್ನ ಹೆಸರು ಹೇಳಿರಬಹುದು. ವಿಚಾರಣೆಗೆ ಹಾಜರಾಗೋದಾಗಿ ಹೇಳಿದ್ದಾರೆ. ಇದನ್ನೂ ಓದಿ: ಇಬ್ಬರು ಡ್ರಗ್ ಪೆಡ್ಲರ್‌ಗಳು ಅರೆಸ್ಟ್ – ಅಯ್ಯಪ್ಪ, ಲೂಸ್ ಮಾದ ಯೋಗಿ ವಿಚಾರಣೆ
ಅಭಿಷೇಕ್ ದಾಸ್ ಮತ್ತು ಗೀತಾಭಾರತಿ ಭಟ್ ಇಂದು ಆಂತರಿಕ ಭದ್ರತಾ ದಳದ ಎದುರು ಹಾಜರಾಗಬೇಕಿದೆ. ಸೆಪ್ಟಂಬರ್ 19ರಂದು ಮಾಜಿ ಕ್ರಿಕೆಟರ್ ಅಯ್ಯಪ್ಪ, ಸೀರಿಯಲ್ ನಟಿ ರಶ್ಮಿ ಚಂಗಪ್ಪ ವಿಚಾರಣೆಯೂ ನಡೆದಿದೆ. ಸೆಪ್ಟೆಂಬರ್ 12ರಂದು ಪೀಣ್ಯ ಪೊಲೀಸರ ಕೈಗೆ ಕೇರಳ ಮೂಲದ ಇಬ್ಬರು ಪೆಡ್ಲರ್‍ಗಳು ತಗ್ಲಾಕೊಂಡಿದ್ದರು. ಅವರ ಬಳಿ ಗಾಂಜಾ, ಎಲ್‍ಎಸ್‍ಡಿ ಮಾತ್ರೆಗಳು ಪತ್ತೆಯಾಗಿದ್ದವು. ವಿಚಾರಣೆ ವೇಳೆ ಸಿನಿಮಾ ಮತ್ತು ಸೀರಿಯಲ್ ನಟ-ನಟಿಯರಿಗೆ ಡ್ರಗ್ಸ್ ಸಪ್ಲೈ ಮಾಡ್ತಿರೋದರ ಬಗ್ಗೆ ಬಾಯ್ಬಿಟ್ಟಿದ್ರು.
ಬೆಂಗಳೂರು: ಕನ್ನಡ ಚಿತ್ರರಂಗ ದಿನ ದಿನಕ್ಕೆ ಒಂದೊಂದೇ ಹೆಸರುಗಳನ್ನು ಕೇಳಿ ಬೆಚ್ಚುತ್ತಿದೆ. ಈಗಾಗಲೇ ಖಾಕಿ ಪಡೆ ಸ್ಯಾಂಡಲ್‍ವುಡ್ ಕೆಲವು ನಟ-ನಟಿಯರನ್ನು ಡ್ರಗ್ಸ್ ಜಾಲದ ವಿಷಯದಲ್ಲಿ ಕರೆದು ವಿಚಾರಣೆ ನಡೆಸಿದ್ದು, ಈಗಲೂ ನಡೆಸುತ್ತಿದೆ. ರಾಗಿಣಿ ಮತ್ತು ಸಂಜನಾ ಜೈಲು ಪಾಲಾಗಿದ್ದಾರೆ. ಇದರ ಬೆನ್ನಿಗೇ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೊಸ ಬಾಂಬ್ ಸಿಡಿಸಿದ್ದಾರೆ. ಕನ್ನಡದ ಎ ವನ್ ಸ್ಟಾರ್‌ಗಳೂ ಇದರಲ್ಲಿದ್ದಾರೆ ಎಂದು ಗುಡುಗಿದ್ದಾರೆ.
ಹೌದು. ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಡ್ರಗ್ಸ್ ಸುಂಟರಗಾಳಿ ಇನ್ನೂ ನಿಂತಿಲ್ಲ. ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕೂಡ ಕಾಣುತ್ತಿಲ್ಲ. ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸ್ ತನಿಖೆ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ತಿದೆ. ಬಂಧಿತ ಆರೋಪಿಗಳಿಂದ ಮಹತ್ವದ ಮಾಹಿತಿ ಕಲೆ ಹಾಕಿರುವ ಸಿಸಿಬಿ ಇನ್ನೂ ಒಂದೆರಡು ದಿನಗಳಲ್ಲೇ ಆಪರೇಷನ್ ಪಾರ್ಟ್-2 ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ತಿದೆ. ಸಿಸಿಬಿ ಮೂಲಗಳ ಪ್ರಕಾರ, ಕೇವಲ ನಟಿ ಸಂಜನಾ, ರಾಗಿಣಿ, ದಿಗಂತ್, ಐಂದ್ರಿತಾ, ಅಕುಲ್ ಬಾಲಾಜಿ, ಸಂತೋಷ್ ಆರ್ಯನ್ ಮಾತ್ರವಲ್ಲ, ಬಣ್ಣದ ಲೋಕದ ಇನ್ನಷ್ಟು ದೊಡ್ಡ ಮಂದಿ ಈ ವಿಷಜಾಲದಲ್ಲಿ ಸಿಲುಕಿರುವ ಶಂಕೆಯಿದೆ.
ಸದ್ಯ ಸಿಸಿಬಿ ತಯಾರಿಸಿರುವ ಪಟ್ಟಿಯಲ್ಲಿ ಸೆವೆನ್ ಸ್ಟಾರ್‌ಗಳ ಇದ್ದಾರೆ. ಕನ್ನಡ ಚಿತ್ರರಂಗದ ನಾಲ್ವರು ಹೀರೋಗಳು, ಮೂವರು ಹೀರೋಯಿನ್‍ಗಳಿಗೆ ನೊಟೀಸ್ ಜಾರಿ ಮಾಡಲು ಸಿಸಿಬಿ ಸಿದ್ಧತೆ ನಡೆಸಿದೆ. ಅಗತ್ಯಬಿದ್ರೆ ಸಂಜನಾ, ರಾಗಿಣಿ ಮಾದರಿಯಲ್ಲಿ ಸ್ಟಾರ್ ನಟರ ಮನೆಗಳ ಮೇಲೆ ದಿಢೀರ್ ರೇಡ್ ನಡೆಸಿ, ಬಂಧಿಸಲು ಕೂಡ ಸಿಸಿಬಿ ಸಿದ್ಧತೆ ನಡೆಸಿದೆ. ಈ ಬೆಳವಣಿಗೆ ಚಂದನವನವನ್ನು ತಲ್ಲಣಗೊಳಿಸಿದೆ.
ನಾಲ್ವರು ನಟರು ಯಾರು?
ಸೂಪರ್ ಹಿಟ್ ಚಿತ್ರದಲ್ಲಿ ನಟನೆ ಮಾಡಿರುವ 30 ವರ್ಷದ, ಕೆಲವೊಂದು ಜನಪ್ರಿಯ ಸಿನಿಮಾಗಳಲ್ಲಿ ಅಭಿನಯ ಮಾಡಿರುವ 40 ವರ್ಷದ, 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹಿರಿಯ ನಟರೊಬ್ಬರ ಪುತ್ರ, ಹಾಗೂ ಸ್ಟಾರ್ ನಟರ ಜೊತೆ ಕಾಮನ್ ಪಾರ್ಟಿ ಮಾಡುತ್ತಿರುವ ಹಿರಿಯ ನಟರೊಬ್ಬರ ಇನ್ನೊಬ್ಬ ಮಗ ಎಂಬ ಮಾಹಿತಿ ಲಭಿಸಿದೆ. ಈ ನಾಲ್ವರು ಹೀರೋಗಳ ಜೊತೆ ಮೂವರು ನಟಿಯರಿಗೂ ನೋಟಿಸ್ ಕೊಡಲು ಸಿದ್ಧತೆ ನಡೆದಿದೆ.
ಮೂವರು ‘ಸ್ಟಾರ್’ ನಟಿಯರು ಯಾರು?
ಸುಮಾರು 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿದ್ದು, ಈಗಲೂ ಜನಪ್ರಿಯವಾಗಿರುವ ಬೆಂಗಳೂರು ಮೂಲದ ನಟಿಯಾದರೆ, ಇನ್ನೊಬ್ಬರು ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟನೆ ಮಾಡಿದ್ದು, ಈಕೆ ಬೆಂಗಳೂರಿನಲ್ಲೇ ಬೆಳೆದಿದ್ದು ಹಾಗೂ ಓದಿದ್ದಾರೆ. ಮತ್ತೊಬ್ಬರು ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಉತ್ತರ ಭಾರತ ಮೂಲದ ಕನ್ನಡ ನಟಿಯಾಗಿದ್ದಾರೆ ಎಂಬ ಮಾಹಿರಿ ಲಭಿಸಿದೆ.
ಇಷ್ಟು ಮಾತ್ರವಲ್ಲದೇ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಕೂಡ ಇಬ್ಬರು ಸ್ಟಾರ್ ನಟರ ಹೆಸರನ್ನು ಸೋಮವಾರ ಬಹಿರಂಗ ಮಾಡೋದಾಗಿ ಹೇಳಿದ್ದಾರೆ. ಇದು ಊಹಾಪೋಹದ ಕತೆಯಲ್ಲ, ದಾಖಲೆ ಸಹಿತ ಹೇಳ್ತೇನೆ. ಇದು ವಿಧಾನಸೌಧದಲ್ಲೂ ಸದ್ದು ಮಾಡುತ್ತೆ ಅಂತ ಸಂಬರಗಿ ಬಾಂಬ್ ಸಿಡಿಸಿದ್ದಾರೆ.
ಒಟ್ಟಿನಲ್ಲಿ ಗಾಂಧಿನಗರ ಗಲ್ಲಿಯಲ್ಲಿ ಸೋಮವಾರ ಮಹಾಸ್ಫೋಟವೇ ಕಾದಿರುವಂತಿದೆ. ಇದನ್ನೆಲ್ಲಾ ತೆರೆ ಮರೆಯಲ್ಲಿ ನೋಡ್ತಾ ಕುಳಿತಿರುವ ನಶೆಕೋರರಿಗೆ ಢವಢವ ಶುರುವಾಗಿದೆ. ಎಲ್ಲಿ ನನ್ನ ಹೆಸರು ಬಹಿರಂಗವಾಗುತ್ತೊ..? ಎಲ್ಲಿ ನಮ್ಮ ಮನೆ ಮೇಲೆ ರೇಡ್ ಆಗುತ್ತೋ ಅನ್ನೋ ಆತಂಕದಲ್ಲಿದ್ದಾರೆ.
ಬೆಂಗಳೂರು: ಖ್ಯಾತ ನಿರೂಪಕ, ಅಕುಲ್ ಬಾಲಾಜಿ ಹಾಗೂ ನಟ ಸಂತೋಷ್ ಕುಮಾರ್ ಅವರ ಸಿಸಿಬಿ ವಿಚಾರಣೆ ಅಂತ್ಯವಾಗಿದೆ. ವಿಚಾರಣೆಯ ಬಳಿಕ ಮಾಜಿ ಶಾಸಕ ಆರ್ ವಿ ದೇವರಾಜ್ ಪುತ್ರ ಮಾಜಿ ಕಾರ್ಪೋರೇಟರ್ ಯುವರಾಜ್ ಅವರನ್ನು ಬೆಂಬಲಿಗರು ಬಿಗಿ ಭದ್ರತೆಯಲ್ಲಿ ಕರೆದೊಯ್ದ ಪ್ರಸಂಗ ನಡೆದಿದೆ.
ಸಿಸಿಬಿ ವಿಚಾರಣೆ ಎದುರಿಸಿದ ಬಳಿಕ ನಟ ಸಂತೋಷ್ ಹಾಗೂ ಅಕುಲ್ ಬಾಲಾಜಿ ಮಾಧ್ಯಮಗಳ ಜೊತೆ ಮಾತನಾಡಿ, ವಿಚಾರಣೆಗೆ ಕರೆದರೆ ಮತ್ತೆ ಬರುವುದಾಗಿ ಹೇಳಿದ್ದಾರೆ. ಆದರೆ ಯುವರಾಜ್ ಅವರನ್ನು ಮಾತ್ರ ಅವರ ಬೆಂಬಲಿಗರು ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ಬಂದು ಕರೆದೊಯ್ದಿದ್ದಾರೆ. ಮಾಧ್ಯಮಗಳ ಕ್ಯಾಮೆರಾ ಮ್ಯಾನ್ ಗಳನ್ನು ತಳ್ಳಿ ಯುವರಾಜ್ ನನ್ನು ಬೆಂಬಲಿಗರು ಕರೆದುಕೊಂಡು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಯಾವುದೇ ಮಾಹಿತಿಯನ್ನು ಯುವರಾಜ್ ನೀಡಿಲ್ಲ.
ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆಯಷ್ಟೇ ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಈ ಮೂವರಿಗೆ ನೋಟಿಸ್ ನೀಡಿದ್ದರು. ಅದರಂತೆ ಈ ಮೂವರು ಕೂಡ ಇಂದು ಹಾಜರಾಗಿದ್ದು, ಸತತ 7 ಗಂಟೆಗಳ ವಿಚಾರಣೆ ಎದುರಿಸಿ, ಕೆಲವೊಂದಿಷ್ಟು ಮಾಹಿತಿಗಳನ್ನು ಸಿಸಿಬಿಗೆ ನೀಡಿದ್ದಾರೆ. ಇದನ್ನೂ ಓದಿ: ‘ಆ’ ಫೋಟೋ ಹಾಕಿ ಹೊಗಳಿದ್ದ ಸಂಜನಾ!
ಈ ಮಧ್ಯೆ ಇಂದು ಮಂಗಳೂರಿನಲ್ಲಿ ಮಾದಕ ವಸ್ತುಗಳ ಸಮೇತ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಮಂಗಳೂರು ಸುರತ್ಕಲ್ ಕಾನ ನಿವಾಸಿ ಅಕೀಲ್ ನೌಶೀಲ್ (28) ಹಾಗೂ ಕುಳಾಯಿ ನಿವಾಸಿ ಕಿಶೋರ್ ಅಮನ್ ಶೆಟ್ಟಿ(30) ಎಂದು ಗುರುತಿಸಲಾಗಿದೆ. ಆರೋಪಿಗಳ ಬಳಿಯಿಂದ ಎಂಡಿಎಂ ಪೌಡರ್, ಬೈಕ್, 2 ಮೊಬೈಲ್ ಫೋನ್ ಸೇರಿದಂತೆ 1 ಲಕ್ಷ ಮೌಲ್ಯದ ವಸ್ತು ವಶಕ್ಕೆ ಒಡೆದುಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳಿದ್ದಾರೆ. ಇವರ ಚೈನ್ ಲಿಂಕ್ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲಿಸ್ ಆಯುಕ್ತ ವಿಕಾಸ್ ಕುಮಾರ್ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಇಬ್ಬರ ಜೊತೆ ಬಂದು ಸಂಜನಾ ಮತಾಂತರ: ಮೌಲ್ವಿ ಮಹಮ್ಮದ್ ಜಲಾಲುದ್ದಿನ್
ಖ್ಯಾತ ಡ್ಯಾನ್ಸರ್ ಆಗಿರುವ ಕಿಶೋರ್ ಶೆಟ್ಟಿ, ಹಿಂದಿಯ ಎಬಿಸಿಡಿ ಸಿನಿಮಾದಲ್ಲಿ ನಟಿಸಿದ್ದ. ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ನಲ್ಲೂ ಸ್ಪರ್ಧಿಯಾಗಿದ್ದ ಕಿಶೋರ್ ಶೆಟ್ಟಿ, ಇದೀಗ ಮಂಗಳೂರು ಸಿಸಿಬಿ ಪೊಲೀಸರ ಬಲೆಯಲ್ಲಿದ್ದಾನೆ. ಈತಹ ಬಹಳಷ್ಟು ಮಂದಿ ಹುಡುಗಿಯರಿಗೆ ಡ್ರಗ್ಸ್ ಕೊಟ್ಟು ಪಾರ್ಟಿ ಮಾಡ್ತಾ ಇದ್ದ. ಇತ್ತೀಚೆಗಷ್ಟೆ ಮಂಗಳೂರಿನಲ್ಲಿ ಒಂದು ಡ್ರಗ್ ಪಾರ್ಟಿ ಕೂಡ ಆಯೋಜಿಸಿದ್ದು, ಈ ಪಾರ್ಟಿಯಲ್ಲಿ ಬೆಂಗಳೂರಿನ ಪ್ರಖ್ಯಾತ ಆಂಕರ್ ಕಂ ನಟಿ ಭಾಗವಹಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಡ್ರಗ್ಸ್ ಕೇಸ್ – ನಟ ಸಂತೋಷ್, ಐಂದ್ರಿತಾ ಕಾಲೆಳೆದ ಪ್ರಶಾಂತ್ ಸಂಬರಗಿ