Tag: Drugs Case

  • ಡ್ರಗ್ಸ್ ಪ್ರಕರಣ – ಎನ್‍ಡಿಪಿಎಸ್ ಕೋರ್ಟಿಗೆ 2,900 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆ

    ಡ್ರಗ್ಸ್ ಪ್ರಕರಣ – ಎನ್‍ಡಿಪಿಎಸ್ ಕೋರ್ಟಿಗೆ 2,900 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆ

    – ರಾಗಿಣಿ ವಿರುದ್ಧದ ಚಾರ್ಜ್‍ಶೀಟ್‍ನಲ್ಲಿ ಏನಿದೆ..?

    ಬೆಂಗಳೂರು: ಇಡೀ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದ್ದ ಡ್ರಗ್ಸ್ ಪ್ರಕರಣ ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದೆ.

    ಹೌದು. ಸ್ಯಾಂಡಲ್‍ವುಡ್ ಡ್ರಗ್ ಕೇಸ್ ಸಂಬಂಧ ಇದೀಗ ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ. ಸಿಸಿಬಿ ಅಧಿಕಾರಿಗಳು ಎನ್‍ಡಿಪಿಎಸ್ ಕೋರ್ಟಿಗೆ 2,900 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದಾರೆ. ನಟಿ ರಾಗಿಣಿ, ಸಂಜನಾ ಸೇರಿ 25 ಆರೋಪಿಗಳ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ.

    180 ಸಾಕ್ಷಿಗಳ ಹೇಳಿಕೆ ದಾಖಲಿಸಿರುವ ಸಿಸಿಬಿ ಅಧಿಕಾರಿಗಳು, ಕಾಟನ್ ಪೇಟೆ ಪೊಲೀಸರ ಮೂಲಕ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಹೆಸರೂ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖ ಮಾಡಲಾಗಿದೆ.

    ಚಾರ್ಜ್‍ಶೀಟ್‍ನಲ್ಲಿ ಏನಿದೆ..?
    2019ರ ಮೇ 26ರಂದು ನಟಿ ರಾಗಿಣಿ ಹುಟ್ಟುಹಬ್ಬದ ಪಾರ್ಟಿ ಮಾಡಿದ್ದರು. ಇಂಡಿಯನ್ ಎಕ್ಸ್‍ಪ್ರೆಸ್ ಬಳಿಯ ಹೋಟೆಲ್‍ನಲ್ಲಿ ರವಿಶಂಕರ್ ಜೊತೆ ಪಾರ್ಟಿ ಮಾಡಿರುವ ಹಾಗೂ ಎಕ್ಸ್ಪ್ರೆಸ್ಸಿ ಮಾತ್ರೆಗಳ ಸೇವನೆ ಮಾಡುವುದರ ಜೊತೆ ಹಂಚಿಕೆ ಮಾಡಿರುವುದರ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ.

    2020ರ ಜುಲೈ 5ರಂದು ಯಲಹಂಕದ ಲೇರೂಮಾ ಹೋಟೆಲ್‍ನಲ್ಲಿ ಪಾರ್ಟಿ, ಆರೋಪಿಗಳ ಜೊತೆ ಡ್ರಗ್ಸ್ ಸೇವನೆ ಮಾಡಿದ್ದಾರೆ. 2020 ಜನವರಿಯಿಂದ ಆಗಸ್ಟ್‍ವರೆಗೂ ಲೂಮ್ ಪೆಪೆ ಸಾಂಬಾಗೆ ಫೋನ್ ಮಾಡಿ ಡ್ರಗ್ಸ್ ಖರೀದಿ ಮಾಡಿದ್ದಾರೆ. ನೈಜೀರಿಯಾದ ಪ್ರಜೆಯಿಂದ ರಾಗಿಣಿ ಡ್ರಗ್ಸ್ ಪಡೆದಿರುವ ಮಾಹಿತಿ ಇದ್ದು, ಇತರೆ ಆರೋಪಿಗಳಿಗೆ ವಾಟ್ಸಾಪ್ ಮೂಲಕ ಮಾದಕ ವಸ್ತು ಕೇಳಿರುವುದು ಐ ಫೋನ್, 11 ಪ್ರೋ ಮ್ಯಾಕ್ಸ್ ಮೊಬೈಲ್ ರಿಟ್ರೀವ್ ಮಾಡಿದಾಗ ಮಾಹಿತಿ ಬಹಿರಂಗವಾಗಿದೆ ಎಂಬುದನ್ನು ಉಲ್ಲೇಖಿಸಲಾಗಿದೆ.

    ಗೆಳೆಯ ರವಿಶಂಕರ್ ಜೊತೆಯಲ್ಲಿ ರಾಗಿಣಿ ಡ್ರಗ್ಸ್ ಡೀಲ್ ಬಗ್ಗೆ ಮಾತನಾಡಿದ್ದಾರೆ. ಮನೆ ರೇಡ್ ವೇಳೆ ಪತ್ತೆಯಾಗಿದ್ದ ಗಾಂಜಾ ತುಂಬಿದ್ದ ಸಿಗರೇಟ್ ಬಗ್ಗೆಯೂ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆ. ಅಲ್ಲದೆ ಚಾರ್ಜ್ ಶೀಟ್ ನ 70ನೇ ಪುಟದಲ್ಲಿ ರಾಗಿಣಿ ಅವರು ನೈಜೀರಿಯಾ ಪ್ರಜೆ ಜೊತೆ ಡ್ರಗ್ಸ್ ಪಡೆಯುವ ಬಗ್ಗೆ ಚಾಟಿಂಗ್ ಮಾಡಿದ್ದಾರೆ. ಇತ್ತ ಗೆಳೆಯ ರವಿಶಂಕರ್ ಜೊತೆಯಲ್ಲಿ ನಟಿ ರಾಗಿಣಿ ಡ್ರಗ್ಸ್ ಡೀಲ್ ಬಗ್ಗೆ ಏನ್ ಮಾತನಾಡಿದ್ದಾರೆ ಅನ್ನೋದನ್ನು ಕೂಡ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಅಲ್ಲದೆ 69 ನೇ ಪೇಜ್‍ನಲ್ಲಿ 2018ರ ಡಿಸೆಂಬರ್ 8ರಂದು ಡ್ರಗ್ಸ್ ಬಗ್ಗೆ ರವಿಶಂಕರ್ ಪತ್ನಿ, ನಟಿ ರಾಗಿಣಿ ವಿರುದ್ಧ ಮಾಡಿರುವ ಚಾಟಿಂಗ್ ಕೂಡ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ.

  • ಬೆಳ್ಳಂಬೆಳಗ್ಗೆ ಬಿಗ್‍ಬಾಸ್ ಖ್ಯಾತಿಯ ಮಸ್ತಾನ್ ಚಂದ್ರ ಮನೆ ಮೇಲೆ ಪೊಲೀಸ್ ದಾಳಿ

    ಬೆಳ್ಳಂಬೆಳಗ್ಗೆ ಬಿಗ್‍ಬಾಸ್ ಖ್ಯಾತಿಯ ಮಸ್ತಾನ್ ಚಂದ್ರ ಮನೆ ಮೇಲೆ ಪೊಲೀಸ್ ದಾಳಿ

    ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಮಸ್ತಾನ್ ಚಂದ್ರಗೆ ಇಂದು ಬೆಳ್ಳಂಬೆಳಗ್ಗೆ ಪೊಲೀಸರು ಶಾಕ್ ನೀಡಿದ್ದಾರೆ. ಸ್ಯಾಂಡಲ್ ವುಡ್ ಡ್ರಗ್ ಡೀಲಿಂಗ್ ಪ್ರಕರಣ ಸಂಬಂಧ ಗೋವಿಂದಪುರ ಪೊಲೀಸರು ಇಂದು ಸಂಜಯ್ ನಗರದಲ್ಲಿರುವ ಮಸ್ತಾನ್ ಮನೆ ಮೇಲೆ ದಾಳಿ ಮಾಡಿದ್ದಾರೆ.

    ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಇಬ್ಬರು ಉದ್ಯಮಿಗಳು ಅಪಾರ್ಟ್‍ಮೆಂಟ್ ವೊಂದರಲ್ಲಿ ಸಿಕ್ಕಿಬಿದ್ದಿದ್ರು. ಈ ಸಂಬಂಧ ಪೊಲೀಸರು ತನಿಖೆ ನಡೆಸಿದ್ದರು. ಇದೀಗ ಮುಂದುವರಿದ ಭಾಗವಾಗಿ ಕೋರ್ಟಿನಿಂದ ಸರ್ಚ್ ವಾರೆಂಟ್ ಪಡೆದು ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದಾರೆ.

    ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿರುವ ನೈಜಿರಿಯನ್ ಡ್ರಗ್ಸ್ ಪೆಡ್ಲರ್ ಮಾಹಿತಿ ಆಧಾರದ ಮೇಲೆ ಪೊಲೀಸರು ಈ ದಾಳಿ ನಡೆಸಿದ್ದಾರೆ. ವಿದೇಶಿ ಡ್ರಗ್ಸ್ ಪೆಡ್ಲರ್ ಗಳಿಂದ ಮಸ್ತಾನ್ ನಿರಂತರವಾಗಿ ವಿವಿಧ ರೀತಿಯ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ ಎನ್ನಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಅಧರಿಸಿ ಪೊಲೀಸರು ದಾಳಿ ಮಾಡಿದ್ದಾರೆ.

    ಗೋವಿಂದಪುರ ಪೊಲೀಸರು ಇತ್ತೀಚೆಗಷ್ಟೆ ಪ್ರಮುಖ ವಿದೇಶಿ ಡ್ರಗ್ಸ್ ಪೆಡ್ಲರ್ ನನ್ನು ಬಂಧಿಸಿದ್ದರು. ಮಸ್ತಾನ್ ಸ್ನೇಹಿತ ಕೇಶವ್ ಅನ್ನೋರ ಮನೆ ಮೇಲೂ ದಾಳಿ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

  • ಏನೇ ಆದ್ರೂ ನಂಬಿಕೆ ಕಳ್ಕೋಬೇಡಿ – ಗಳಗಳನೇ ಕಣ್ಣೀರಿಟ್ಟ ರಾಗಿಣಿ

    ಏನೇ ಆದ್ರೂ ನಂಬಿಕೆ ಕಳ್ಕೋಬೇಡಿ – ಗಳಗಳನೇ ಕಣ್ಣೀರಿಟ್ಟ ರಾಗಿಣಿ

    – ನಮ್ಮ ಮೌನವೇ ಎಲ್ಲದಕ್ಕೂ ಉತ್ತರ ನೀಡುತ್ತೆ
    – ಪಾಸಿಟಿವ್ ಆಗಿ ಯೋಚಿಸಿ

    ಬೆಂಗಳೂರು: ಜೈಲಿನಿಂದ ಹೊರ ಬಂದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿರುವ ರಾಗಿಣಿ ಅಭಿಮಾನಿಗಳೊಂದಿಗೆ ಹೆಚ್ಚು ಬೆರೆಯುತ್ತಿದ್ದಾರೆ. ಇದೀಗ ಲೈವ್ ವಿಡಿಯೋ ಮೂಲಕ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದು, ಗಳಗಳನೆ ಅತ್ತಿದ್ದಾರೆ.

    ಲೈವ್ ವೀಡಿಯೋದಲ್ಲಿ ಮಾತನಾಡಿರುವ ರಾಗಿಣಿ, ಅಭಿಮಾನಿಗಳ ಜೊತೆ ಮಾತನಾಡುತ್ತಲೇ ಕಣ್ಣೀರು ಹಾಕಿದ್ದಾರೆ. ಈ ಸಂದರ್ಭದಲ್ಲಿ ಹಲವರು ಹಲವು ರೀತಿಯ ಕಮೆಂಟ್ ಮಾಡುವ ಮೂಲಕ ಪ್ರಶ್ನೆಗಳನ್ನು ಕೇಳಿದ್ದಾರೆ. ಅನೇಕರು ಕೆಟ್ಟ ಕಮೆಂಟ್‍ಗಳನ್ನು ಸಹ ಮಾಡಿದ್ದು, ಅವುಗಳನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿ ಸಮಾಧಾನದಿಂದಲೇ ಉತ್ತರಿಸಿದ್ದಾರೆ.

    ಆ ದಿನಗಳು ತುಂಬಾ ಕಷ್ಟದ್ದಾಗಿತ್ತು, ಕುಟುಂಬದ ಬೆಂಬಲದಿಂದಲೇ ನಾನು ಸ್ಟ್ರಾಂಗ್ ಆಗಿದ್ದೇನೆ. ನಾನು ತುಂಬಾ ಮೌನ ವಹಿಸಿದ್ದೇನೆ. ಆದರೆ ದುರ್ಬಲಗೊಂಡಿಲ್ಲ. ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇದ್ದರೆ, ನಿಮ್ಮಲ್ಲಿ ಛಲವಿದ್ದರೆ ಯಾರಿಗೂ ಯಾವುದಕ್ಕೂ ಉತ್ತರಿಸಬೇಕಿಲ್ಲ. ಈ ಶಕ್ತಿಯಿಂದಲೇ ನಾನೀಗ ನಿಮ್ಮ ಮುಂದೆ ಬಂದು ಮಾತನಾಡುತ್ತಿದ್ದೇನೆ. 12 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದೇನೆ ಎಲ್ಲ ರೀತಿಯ ಏಳು ಬೀಳುಗಳನ್ನು ಕಂಡಿದ್ದೇನೆ. ಕಷ್ಟದ ಸಂದರ್ಭಗಳನ್ನು ನಿಭಾಯಿಸುವ ಬಗ್ಗೆ ನಮ್ಮ ತಂದೆ, ತಾಯಿ ನಮಗೆ ಚೆನ್ನಾಗಿ ಹೇಳಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ಒಂದು ಸೂಪರ್ ಹಿಟ್ ಫಿಲ್ಮ್ ಬರುತ್ತೆ, ಬಳಿಕ ಥಟ್ ಅಂತ ಮತ್ತೊಂದು ಫಿಲ್ಮ್ ಫ್ಲಾಪ್ ಆಗುತ್ತೆ. ಶೂಟಿಂಗ್ ಮಾಡುವಾಗ ಸಹ ಕೆಲವು ಬಾರಿ ಸೀನ್‍ಗಳು ತುಂಬಾ ಚೆನ್ನಾಗಿ ಬರುತ್ತವೆ. ಇನ್ನೂ ಕೆಲವು ಬಾರಿ ಕೆಟ್ಟದಾಗಿ ಮಾತನಾಡುತ್ತೇವೆ. ಹೀಗಾಗಿ ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕು. ಪ್ರತಿ ದಿನ ಇನ್‍ಸ್ಪಿರೇಶನ್ ಪಡೆಯಬೇಕು. ನಾನು ಇಷ್ಟು ಗಟ್ಟಿಯಾಗಿ ಇರಬೇಕಾದರೆ ನನ್ನ ತಂದೆ, ತಾಯಿಯೇ ಕಾರಣ ಎಂದಿದ್ದಾರೆ.

    ಕೆಟ್ಟದಾಗಿ ಕಮೆಂಟ್ ಮಾಡಿದರ ಬಗ್ಗೆ ಸಹ ರಾಗಿಣಿ ಮಾತನಾಡಿದ್ದು, ಹೆಣ್ಣು ಮಕ್ಕಳಿಗೆ ಹೆಸರು ಇಡೋದು, ಅವರ ಕುಟುಂಬದ ಬಗ್ಗೆ ಮಾತನಾಡಿದರೆ ನಿಮಗೆ ಯಾವ ರೀತಿಯ ಖುಷಿ ಬರುತ್ತೋ ಗೊತ್ತಿಲ್ಲ. ಆದರೆ ಆ ರೀತಿಯಾದರೂ ನೀವು ಖುಷಿ ಪಟ್ಟಿದ್ದೀರಲ್ಲ ಎಂಬ ಸಂತಸ ನನಗೂ ಇದೇ ಎಂದು ಹೇಳುವ ಮೂಲಕ ಕೆಟ್ಟದಾಗಿ ಕಮೆಂಟ್ ಮಾಡುವವರಿಗೆ ಟಾಂಗ್ ನೀಡಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ಈ ವೀಡಿಯೋ ಮಾಡುವುತ್ತಿರುವುದು ನಾನು ಮಾನಸಿಕವಾಗಿ ನೊಂದಿರುವವರಿಗಾಗಿ, ಮೆಂಟಲ್ ಹೆಲ್ತ್ ತುಂಬಾ ಮುಖ್ಯ. ಯಾವುದೇ ರೀತಿಯ ಕಷ್ಟ ಬಂದರೂ ಕುಗ್ಗಬೇಡಿ. ನನಗೂ ಸಹ ಆ ಸಂದರ್ಭದಲ್ಲಿ ತುಂಬಾ ಕಷ್ಟವಿತ್ತು, ನೋವಿತ್ತು. ಪಾಸಿಟಿವಿಟಿ ಜೊತೆಗೆ ಕೆಲವು ಬಾರಿ ನನಗೂ ನಿದ್ದೆ ಬರುತ್ತಿರಲಿಲ್ಲ. ಬಳಿಕ ಮತ್ತೆ ಸ್ಟ್ರಾಂಗ್ ಆಗುತ್ತಿದ್ದೆ. ಮೌನದಿಂದಲೇ ಸ್ಟ್ರಾಂಗ್ ಆಗುತ್ತಿದ್ದೆ. ನೀವು ಯಾವುದೇ ವಿಚಾರದ ಕುರಿತು ಸಫರ್ ಆಗಿದ್ದರೆ, ತಲೆ ಕೆಡಿಸಿಕೊಳ್ಳಬೇಡಿ, ನಿಮಗಾಗಿ, ನಿಮ್ಮವರಿಗಾಗಿ ನೀವು ಸ್ಟ್ರಾಂಗ್ ಆಗಿ ನಿಲ್ಲಬೇಕು ಎಂದು ಅವರು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಮುಂದೆ ಒಳ್ಳೆ ಸಿನಿಮಾ ಕೊಡುತ್ತೇನೆ ಸ್ವಲ್ಪ ಸಮಯ ಕೊಡಿ, ನಾನು ನಿಮ್ಮನ್ನು ಎಂಟರ್ಟೈನ್ ಮಾಡುತ್ತೇನೆ ಎಂದು ಹೇಳಿದ್ದಾರೆ.

  • ಪರಪ್ಪನ ಅಗ್ರಹಾರದ ಪಂಜರದಿಂದ ಹೊರ ಬಂದ ರಾಗಿಣಿ

    ಪರಪ್ಪನ ಅಗ್ರಹಾರದ ಪಂಜರದಿಂದ ಹೊರ ಬಂದ ರಾಗಿಣಿ

    ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದ ನಟಿ ರಾಗಿಣಿ 144 ದಿನಗಳ ಬಳಿಕ ಪರಪ್ಪನ ಅಗ್ರಹಾರದ ಜೈಲಿನಿಂದ ಹೊರ ಬಂದಿದ್ದಾರೆ. ಜಾಮೀನು ಸಿಕ್ಕು ನಾಲ್ಕು ದಿನಗಳ ಬಳಿಕ ಇಂದು ರಿಲೀಸ್ ಆಗಿದ್ದಾರೆ.

    ಗುರುವಾರ ಸುಪ್ರೀಂಕೋರ್ಟ್ ನ ನ್ಯಾ.ರೊಹಿಂಟನ್ ನಾರಿಮನ್ ತ್ರೀ ಸದಸ್ಯ ಪೀಠ ಜಾಮೀನು ನೀಡಿ ಆದೇಶಿಸಿತ್ತು. ಆದ್ರೆ ಜಾಮೀನು ಪ್ರಕ್ರಿಯೆ ತಡವಾದ ಹಿನ್ನೆಲೆ ಮತ್ತೆ ನಾಲ್ಕು ದಿನ ರಾಗಿಣಿ ಕಳೆಯುವಂತಾಗಿತ್ತು. ಜಾಮೀನು ಸಿಕ್ಕ ದಿನ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ರಾಗಿಣಿ ತಾಯಿ, ವಿಷಯ ಕೇಳಿ ಸಂತಸವಾಯ್ತು. ಇವತ್ತು ನಮಗೆ ಲಕ್ಕಿ ಡೇ ಎಂದು ಸಂತೋಷ ಹಂಚಿಕೊಂಡಿದ್ದರು.

    ನನ್ನ ಮಗಳು 145 ದಿನಗಳ ನಂತರ ಬರುತ್ತಿರೋದು ಸಾಕಷ್ಟು ಖುಷಿಯ ವಿಚಾರ. ವಕೀಲರು ಮತ್ತು ಜಡ್ಜ್ ಗಳಿಗೆ ಧನ್ಯವಾದಗಳು. ರಾಗಿಣಿ ಆರೋಗ್ಯದ ಬಗ್ಗೆ ವೈದ್ಯರ ಬಳಿ ಮಾತನಾಡಿದ್ದೇವೆ. ಉಸಿರಾಟದ ತೊಂದರೆ ಇದೆ. ನಾನು ರಾಗಿಣಿ ಜೊತೆ ಮಾತನಾಡಿದ್ದೆ. ಮಗಳು ಖುಷಿಯಾಗಿ ಧೈರ್ಯವಾಗಿದ್ದಾಳೆ. ಮಗಳ ಜೊತೆ ಮಾತನಾಡಿ ತುಂಬಾ ದಿನವಾಯ್ತು ಇಂದು ನಾಳೆ ಮಗಳ ಜೊತೆ ಮಾತನಾಡಿ ಅಮೇಲೆ ಕಾರ್ಯಕ್ರಮಗಳ ಬಗ್ಗೆ ಪ್ಲಾನ್ ಮಾಡಲಾಗುತ್ತೆ ಎಂದು ರಾಗಿಣಿ ತಾಯಿ ಹೇಳಿದ್ದಾರೆ.

    ಪ್ರಕರಣದ ಹಿನ್ನೆಲೆ:
    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಸೆಪ್ಟೆಂಬರ್ 4 ರಂದು ರಾಗಿಣಿ ದ್ವಿವೇದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ನಟಿ ಸಂಜನಾ ಗಲ್ರಾನಿ ಜಾಮೀನಿನ ಮೇಲೆ ಹೊರ ಬಂದಿದ್ದರು. ಆದರೆ ರಾಗಿಣಿಗೆ ಇದೀಗ ಬರೋಬ್ಬರಿ 140 ದಿನಗಳ ಬಳಿಕ ರಾಗಿಣಿಗೂ ಜಾಮೀನು ಸಿಕ್ಕಿದೆ. ಸುದೀರ್ಘ ವಿಚಾರಣೆ ನಡೆಸಿದ ನ್ಯಾ.ರೊಹಿಂಗ್ಟನ್‌ ನಾರಿಮನ್ ತ್ರೀ ಸದಸ್ಯ ಪೀಠ ಜಾಮೀನು ನೀಡಿ ಆದೇಶಿಸಿತ್ತು.

    ರಾಗಿಣಿ ಕಳೆದ 140 ದಿನಗಳಿಂದ ಜೈಲಿನಲ್ಲಿದ್ದಾರೆ. ಪ್ರಕರಣದಲ್ಲಿ ಯಾವುದೇ ಬೆಳವಣಿಗೆಗಳಿಲ್ಲ. ರಾಗಿಣಿ ಮನೆಯಲ್ಲಿ ಯಾವುದೇ ಡ್ರಗ್ ವಶಪಡಿಸಿಕೊಂಡಿಲ್ಲ ಮತ್ತು ಸೇವಿಸಿಲ್ಲ. ಕೇವಲ ಆರೋಪಿ ರವಿಶಂಕರ್ ಹೇಳಿಕೆಯನ್ನಾಧರಿಸಿ ರಾಗಿಣಿಯನ್ನು ಬಂಧಿಸಲಾಗಿತ್ತು. ಈಗಾಗಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರಿಗೆ ಜಾಮೀನು ಸಿಕ್ಕಿದೆ. ಹಾಗಾಗಿ ಜಾಮೀನು ನೀಡಬೇಕೆಂದು ರಾಗಿಣಿ ಪರ ವಕೀಲ ಸಿದಾರ್ಥ ಲೂಥ್ರಾ ವಾದ ಮಂಡಿಸಿದ್ದರು.

    ಡ್ರಗ್ ಪತ್ತೆಹಚ್ಚಲು ಲ್ಯಾಬ್ ಫಲಿತಾಂಶಗಳನ್ನು ಹಾಳುಮಾಡುವ ಪ್ರಯತ್ನದಲ್ಲಿ ದ್ವಿವೇದಿ ನೀರನ್ನು ಮೂತ್ರದ ಮಾದರಿಯೊಂದಿಗೆ ಬದಲಾಯಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ರೀತಿಯ ಯಾವುದೇ ಬೆಳವಣಿಗೆ ಆಗಿಲ್ಲ. ಪ್ರಕರಣ ಇತರೆ ಆರೋಪಿಗಳಿಗೆ ಜಾಮೀನು ಸಿಕ್ಕಿದೆ ಎಂಬ ಅಂಶಗಳು ಲೂಥ್ರಾ ನ್ಯಾಯಾಲಯದ ಗಮನಕ್ಕೆ ತಂದಿದ್ದರು.

  • ಇಂದು ನಮಗೆ ಲಕ್ಕಿ ದಿನವಾಗಿದೆ: ರಾಗಿಣಿ ತಾಯಿ ಸಂತಸ

    ಇಂದು ನಮಗೆ ಲಕ್ಕಿ ದಿನವಾಗಿದೆ: ರಾಗಿಣಿ ತಾಯಿ ಸಂತಸ

    ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ನಟಿ ರಾಗಿಣಿ ದ್ವಿವೇದಿಗೆ ಇಮದು ಜಾಮೀನು ಮಂಜೂರಾಗಿದೆ. ಇವತ್ತಿನ ದಿನ ನಮಗೆ ತುಂಬಾ ಲಕ್ಕಿಯಾಗಿದೆ ಎಂದು ನಟಿ ತಾಯಿ ರೋಹಿಣಿ ದ್ವಿವೇದಿ ಸಂತಸ ಹಂಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮಗಳಿಗೆ ಇಂದು ಜಾಮೀನು ಸಿಕ್ಕಿದ್ದು, ನಮಗೆಲ್ಲ ತುಂಬಾ ಖುಷಿಯಾಗಿದೆ. ಆಕೆ ಮನೆಗೆ ಬರುತ್ತಿರುವುದು ಖುಷಿ ತಂದಿದೆ ಎಂದು ಹೇಳಿದ್ದಾರೆ.

    ಇದೂವರೆಗೂ ಯಾವುದೇ ಸಾಕ್ಷ್ಯ ಇಲ್ಲದೆ ಅವರು ಆಕೆಯನ್ನು ಜೈಲಿನಲ್ಲಿ ಇಟ್ಟುಕೊಂಡಿದ್ದರು ಎಂದು ಆರೋಪಿಸಿದರು. ಜಾಮೀನು ಮಂಜೂರಾಗಿದೆ ಅಂತ ಈಗಷ್ಟೇ ದೆಹಲಿಯಿಂದ ಫೋನ್ ಕರೆ ಬಂತು. ಹೀಗಾಗಿ ಆಕೆಯನ್ನು ಕರೆದುಕೊಂಡು ಬರಲು ನಾವು ಹೋಗಬೇಕು ಎಂದು ತಿಳಿಸಿದರು.

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಸೆಪ್ಟೆಂಬರ್ 4 ರಂದು ರಾಗಿಣಿ ದ್ವಿವೇದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ನಟಿ ಸಂಜನಾ ಗಲ್ರಾನಿ ಜಾಮೀನಿನ ಮೇಲೆ ಹೊರ ಬಂದಿದ್ದರು. ಇದೀಗ ಬರೋಬ್ಬರಿ 140 ದಿನಗಳ ಬಳಿಕ ರಾಗಿಣಿಗೂ ಜಾಮೀನು ಸಿಕ್ಕಿದೆ. ಸುದೀರ್ಘ ವಿಚಾರಣೆ ನಡೆಸಿದ ನ್ಯಾ.ರೊಹಿಂಟನ್ ನಾರಿಮನ್ ತ್ರೀ ಸದಸ್ಯ ಪೀಠ ಜಾಮೀನು ನೀಡಿ ಆದೇಶಿಸಿದೆ.

    ರಾಗಿಣಿ ಕಳೆದ 140 ದಿನಗಳಿಂದ ಜೈಲಿನಲ್ಲಿದ್ದಾರೆ. ಪ್ರಕರಣದಲ್ಲಿ ಯಾವುದೇ ಬೆಳವಣಿಗೆಗಳಿಲ್ಲ. ರಾಗಿಣಿ ಮನೆಯಲ್ಲಿ ಯಾವುದೇ ಡ್ರಗ್ ವಶಪಡಿಸಿಕೊಂಡಿಲ್ಲ ಮತ್ತು ಸೇವಿಸಿಲ್ಲ. ಕೇವಲ ಆರೋಪಿ ರವಿಶಂಕರ್ ಹೇಳಿಕೆಯನ್ನಾಧರಿಸಿ ರಾಗಿಣಿಯವರನ್ನ ಬಂಧಿಸಲಾಗಿದೆ. ಈಗಾಗಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರಿಗೆ ಜಾಮೀನು ಸಿಕ್ಕಿದೆ. ಹಾಗಾಗಿ ಜಾಮೀನು ನೀಡಬೇಕೆಂದು ರಾಗಿಣಿ ಪರ ವಕೀಲ ಸಿದಾರ್ಥ ಲೂಥ್ರಾ ವಾದ ಮಂಡಿಸಿದ್ದರು.

    ಡ್ರಗ್ ಪತ್ತೆಹಚ್ಚಲು ಲ್ಯಾಬ್ ಫಲಿತಾಂಶಗಳನ್ನು ಹಾಳುಮಾಡುವ ಪ್ರಯತ್ನದಲ್ಲಿ ದ್ವಿವೇದಿ ನೀರನ್ನು ಮೂತ್ರದ ಮಾದರಿಯೊಂದಿಗೆ ಬದಲಾಯಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ರೀತಿಯ ಯಾವುದೇ ಬೆಳವಣಿಗೆ ಆಗಿಲ್ಲ. ಪ್ರಕರಣ ಇತರೆ ಆರೋಪಿಗಳಿಗೆ ಜಾಮೀನು ಸಿಕ್ಕಿದೆ ಎಂಬ ಅಂಶಗಳು ಲೂಥ್ರಾ ನ್ಯಾಯಾಲಯದ ಗಮನಕ್ಕೆ ತಂದಿದ್ದರು.

  • 140 ದಿನಗಳ ಬಳಿಕ ನಟಿ ರಾಗಿಣಿ ದ್ವಿವೇದಿಗೆ ಜಾಮೀನು

    140 ದಿನಗಳ ಬಳಿಕ ನಟಿ ರಾಗಿಣಿ ದ್ವಿವೇದಿಗೆ ಜಾಮೀನು

    ನವದೆಹಲಿ: ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದ ನಟಿ ರಾಗಿಣಿ ದ್ವಿವೇದಿಗೆ 140 ದಿನಗಳ ಬಳಿಕ ಜಾಮೀನು ಸಿಕ್ಕಿದೆ. ಸುದೀರ್ಘ ವಿಚಾರಣೆ ನಡೆಸಿದ ನ್ಯಾ.ರೋಹಿಂಗ್ಟನ್‌ ನಾರಿಮನ್ ತ್ರೀ ಸದಸ್ಯ ಪೀಠ ಜಾಮೀನು ನೀಡಿ ಆದೇಶಿಸಿದೆ.

    ರಾಗಿಣಿ ಕಳೆದ 140 ದಿನಗಳಿಂದ ಜೈಲಿನಲ್ಲಿದ್ದಾರೆ. ಪ್ರಕರಣದಲ್ಲಿ ಯಾವುದೇ ಬೆಳವಣಿಗೆಗಳಿಲ್ಲ. ರಾಗಿಣಿ ಮನೆಯಲ್ಲಿ ಯಾವುದೇ ಡ್ರಗ್ ವಶಪಡಿಸಿಕೊಂಡಿಲ್ಲ ಮತ್ತು ಸೇವಿಸಿಲ್ಲ. ಕೇವಲ ಆರೋಪಿ ರವಿಶಂಕರ್ ಹೇಳಿಕೆಯನ್ನಾಧರಿಸಿ ರಾಗಿಣಿಯವರನ್ನ ಬಂಧಿಸಲಾಗಿದೆ. ಈಗಾಗಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರಿಗೆ ಜಾಮೀನು ಸಿಕ್ಕಿದೆ. ಹಾಗಾಗಿ ಜಾಮೀನು ನೀಡಬೇಕೆಂದು ರಾಗಿಣಿ ಪರ ವಕೀಲ ಸಿದಾರ್ಥ ಲೂಥ್ರಾ ವಾದ ಮಂಡಿಸಿದ್ದರು.

    ಡ್ರಗ್ ಪತ್ತೆಹಚ್ಚಲು ಲ್ಯಾಬ್ ಫಲಿತಾಂಶಗಳನ್ನು ಹಾಳುಮಾಡುವ ಪ್ರಯತ್ನದಲ್ಲಿ ದ್ವಿವೇದಿ ನೀರನ್ನು ಮೂತ್ರದ ಮಾದರಿಯೊಂದಿಗೆ ಬದಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ರೀತಿಯ ಯಾವುದೇ ಬೆಳವಣಿಗೆ ಆಗಿಲ್ಲ. ಪ್ರಕರಣ ಇತರೆ ಆರೋಪಿಗಳಿಗೆ ಜಾಮೀನು ಸಿಕ್ಕಿದೆ ಎಂಬ ಅಂಶಗಳು ಲೂಥ್ರಾ ನ್ಯಾಯಲಯದ ಗಮನಕ್ಕೆ ತಂದಿದ್ದರು.

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಸೆಪ್ಟೆಂಬರ್ 4ರಂದು ರಾಗಿಣಿ ದ್ವಿವೇದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ನಟಿ ಸಂಜನಾ ಗಲ್ರಾನಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

  • ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸ್ – ತಲೆಮರೆಸಿಕೊಂಡಿದ್ದ ಆದಿತ್ಯ ಆಳ್ವಾ ಅರೆಸ್ಟ್

    ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸ್ – ತಲೆಮರೆಸಿಕೊಂಡಿದ್ದ ಆದಿತ್ಯ ಆಳ್ವಾ ಅರೆಸ್ಟ್

    – 4 ತಿಂಗಳ ಬಳಿಕ ಪೊಲೀಸರ ಬಲೆಗೆ

    ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಲ್ಲಿ ಓರ್ವನಾಗಿದ್ದ ಆದಿತ್ಯ ಆಳ್ವಾನನ್ನ ಚೆನ್ನೈನಲ್ಲಿ ಪೊಲೀಸರು ಬಂಧಿಸಿದ್ದು, ಬೆಂಗಳೂರಿಗೆ ಕರೆ ತರಲಾಗಿದೆ.

    ಕಳೆದ ನಾಲ್ಕು ತಿಂಗಳಿನಿಂದ ಆದಿತ್ಯ ಆಳ್ವಾ ನಾಪತ್ತೆಯಾಗಿದ್ದು, ಈತನ ರೆಸಾರ್ಟ್ ನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿದ್ದು ಎನ್ನಲಾಗಿದೆ. ನಟಿ ರಾಗಿಣಿ ದ್ವಿವೇದಿ, ವೈಭವ್ ಜೈನ್ ಸೇರಿದಂತೆ ಹಲವರ ಜೊತೆ ಆದಿತ್ಯ ಆಳ್ವಾ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ದಿವಂಗತ ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರನಾಗಿರುವ ಆದಿತ್ಯನ ಹುಡುಕಾಟಕ್ಕಾಗಿ ಮುಂಬೈನಲ್ಲಿರು ಬಾವ ನಟ ವಿವೇಕ್ ಓಬೇರಾಯ್ ಮನೆ ಮೇಲೆಯೂ ದಾಳಿ ನಡೆಸಿದ್ದರು.

    ಸದ್ಯ ಚೆನ್ನೈನಲ್ಲಿ ಬಂಧಿಸಲಾಗಿರುವ ಬಗ್ಗೆ ಮಾಹಿತಿಗಳು ತಿಳಿದು ಬಂದಿದ್ದು, ಇಷ್ಟು ದಿನ ಎಲ್ಲಿದ್ದ ಎಂಬುದರ ಕುರಿತು ತಿಳಿದು ಬರಬೇಕಿದೆ. ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದಲ್ಲಿ ಆದಿತ್ಯ ಆಳ್ವಾ ಆರನೇ ಆರೋಪಿಯಾಗಿದ್ದಾರೆ.

  • ಅರ್ಜುನ್ ರಾಂಪಾಲ್‍ಗೆ ಮತ್ತೆ ಡ್ರಗ್ಸ್ ಕಂಟಕ – ಎನ್‍ಸಿಬಿಯಿಂದ ನೋಟಿಸ್

    ಅರ್ಜುನ್ ರಾಂಪಾಲ್‍ಗೆ ಮತ್ತೆ ಡ್ರಗ್ಸ್ ಕಂಟಕ – ಎನ್‍ಸಿಬಿಯಿಂದ ನೋಟಿಸ್

    ಮುಂಬೈ: ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಮನೆಯಂಗಳವನ್ನ ಎನ್‍ಸಿಬಿ ನೋಟಿಸ್ ತಲುಪಿದ್ದು, ನಾಳೆ (ಡಿಸೆಂಬರ್ 16)ರಂದು ಬೆಳಗ್ಗೆ 11 ಗಂಟೆಗೆ ಮುಂಬೈನಲ್ಲಿರುವ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

    ಇದಕ್ಕೂ ಮೊದಲು ನವೆಂಬರ್ 13ರಂದು ಅರ್ಜುನ್ ರಾಂಪಾಲ್ ಅವರನ್ನ ಎನ್‍ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ನವೆಂಬರ್ 13ರಂದು ಏಳು ಗಂಟೆಗಳ ಕಾಲ ಅರ್ಜುನ್ ವಿಚಾರಣೆ ನಡೆದಿತ್ತು. ಕೆಲ ದಿನಗಳ ಹಿಂದೆ ಅರೆಸ್ಟ್ ಆಗಿರೋ ಡ್ರಗ್ಸ್ ಪೆಡ್ಲರ್ ಗಳು ಅರ್ಜುನ್ ಹೆಸರು ಹೇಳಿದ ಹಿನ್ನೆಲೆ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ.

    ನವೆಂಬರ್ 9ರಂದು ಅರ್ಜುನ್ ರಾಂಪಾಲ್ ನಿವಾಸದ ಮೇಲೆ ದಾಳಿ ನಡೆಸಿದ್ದ ಎನ್‍ಸಿಬಿ ಅಧಿಕಾರಿಗಳಿಗೆ ಕೆಲ ನಿಷೇಧಿತ ಮಾತ್ರೆಗಳು ಸಿಕ್ಕಿದ್ದವು ಎನ್ನಲಾಗಿದೆ. ದಾಳಿ ಬಳಿಕ ನವೆಂಬರ್ 11 ಮತ್ತು 12 ಎರಡೂ ದಿನ ಅರ್ಜುನ್ ಗೆಳತಿ ಗ್ಯಾಬ್ರಿಯೆಲಾರನ್ನ ವಿಚಾರಣೆ ನಡೆಸಿತ್ತು. ನವೆಂಬರ್ 13ರಂದು ಎನ್‍ಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದ ರಾಂಪಾಲ್ ತನಿಖೆಗೆ ಸಂಪೂರ್ಣ ಸಹಕರಿಸಿದ್ದಾರೆ ಎಂದು ಹೇಳಲಾಗಿತ್ತು.

    ದಾಳಿ ವೇಳೆ ಅರ್ಜುನ್ ರಾಂಪಾಲ್ ಮತ್ತು ಗ್ಯಾಬ್ರಿಯಾಲರ ಮೊಬೈಲ್ ಫೋನ್, ಲ್ಯಾಪ್‍ಟಾಪ್ ವಶಕ್ಕೆ ಪಡೆದುಕೊಂಡಿದ್ದರು. ದಾಳಿ ದಿನವೇ ಅರ್ಜುನ್ ರಾಂಪಾಲ್ ಚಾಲಕನನ್ನ ಹಲವು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು.

    ಅಕ್ಟೋಬರ್ 19ರಂದು ಗೆಬ್ರಿಯೆಲಾ ಸೋದರ ಅಗಿಸಿಲಾಓಸ್ ನನ್ನು ಪುಣೆಯ ಲೋನಾವಾಲಾ ಬಳಿ ಬಂಧಿಸಿದ್ದರು. ಬಂಧಿತ ಅಗಿಸಿಲಾಓಸ್ ಬಾಲಿವುಡ್ ಅಂಗಳದ ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗ್ತಿದೆ. ಅಗಿಸಿಲಾಓಸ್ ಪೆಡ್ಲರ್ ಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿರುವ ಆರೋಪ ಸಹ ಕೇಳಿ ಬಂದಿದೆ. ಮೃತ ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿ ಮತ್ತು ಶೌವಿಕ್ ಜೊತೆ ಅಗಿಸಿಲಾಓಸ್ ನಿರಂತರ ಸಂಪರ್ಕದಲ್ಲಿದ್ದನು.

  • ಪರಪ್ಪನ ಅಗ್ರಹಾರದಿಂದ ಹೊರಬಂದ ಸಂಜನಾ ಗಲ್ರಾನಿ

    ಪರಪ್ಪನ ಅಗ್ರಹಾರದಿಂದ ಹೊರಬಂದ ಸಂಜನಾ ಗಲ್ರಾನಿ

    ಬೆಂಗಳೂರು: ನಶೆ ನಂಟು ಕೇಸ್‍ನಲ್ಲಿ ಜೈಲು ಪಾಲಾಗಿದ್ದ ನಟಿ ಸಂಜನಾಗೆ ಕೊನೆಗೂ ಜಾಮೀನು ಸಿಕ್ಕಿದ್ದು, ಇಂದು ಸಂಜೆ ಜೈಲಿನಿಂದ ಹೊರ ಬಂದಿದ್ದಾರೆ.

    ವಾಣಿವಿಲಾಸ ಆಸ್ಪತ್ರೆಯ ವೈದ್ಯರ ವರದಿ ಆಧಾರದ ಮೇಲೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 3 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ, ತಿಂಗಳಲ್ಲಿ 2 ಬಾರಿ ಸಮೀಪದ ಠಾಣೆಗೆ ಹಾಜರಾತಿ ಹಾಕಬೇಕು. ತನಿಖೆಗೆ ಸಹಕರಿಸಬೇಕು ಮತ್ತು ಸಾಕ್ಷ್ಯ ನಾಶ ಮಾಡದಂತೆ ಷರತ್ತು ವಿಧಿಸಲಾಗಿದೆ.

    ಇಂದು ಸಂಜೆ ಸಂಜನಾ ಜೈಲಿಂದ ರಿಲೀಸ್ ಆಗಿದ್ದಾರೆ. ಸೆಪ್ಟೆಂಬರ್ 8ರಂದು ಸಂಜನಾರ ನಿವಾಸದ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ಬಳಿಕ 4 ಗಂಟೆಗಳ ತಲಾಶ್ ಬಳಿಕ ಸಿಸಿಬಿ ಸಂಜನಾರನ್ನು ಅರೆಸ್ಟ್ ಮಾಡಿತ್ತು.

  • ನಟಿ ಸಂಜನಾ ಗಲ್ರಾನಿಗೆ ಜಾಮೀನು

    ನಟಿ ಸಂಜನಾ ಗಲ್ರಾನಿಗೆ ಜಾಮೀನು

    ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ನಟಿ ಸಂಜನಾ ಗಲ್ರಾನಿಗೆ ಹೈಕೋರ್ಟ್ ಏಕ ಸದಸ್ಯ ಪೀಠ ಷರತ್ತುಬದ್ಧ ಜಾಮೀನು ನೀಡಿದೆ,

    ಅನಾರೋಗ್ಯ ಹಿನ್ನೆಲೆ ತಮಗೆ ಜಾಮೀನು ನೀಡಬೇಕೆಂದು ನಟಿ ಸಂಜನಾ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ, ವೈದ್ಯಕೀಯ ತಪಾಸಣೆಗೆ ನಡೆಸಿ, ಡಿಸೆಂಬರ್ 10ರೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿತ್ತು. ಇದೀಗ ವೈದ್ಯಕೀಯ ವರದಿ ಆಧರಿಸಿ ಸಂಜನಾಗೆ ನ್ಯಾಯಾಲಯ ಜಾಮೀನು ಸಿಕ್ಕಿದೆ. ದನ್ನೂ ಓದಿ: ಮೆಸೇಜ್, ಫೋಟೋಸ್ ಡಿಲೀಟ್ – ಸಂಜನಾಳ ಖತರ್ನಾಕ್ ಐಡಿಯಾಗೆ ಪೊಲೀಸ್ರು ಸುಸ್ತು

    ಸೆಪ್ಟೆಂಬರ್ 8ರಂದು ಸಂಜನಾ ಗಲ್ರಾನಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಇತ್ತ ನಟಿ ರಾಗಿಣಿ ದ್ವಿವೇದಿ ಜಾಮೀನು ಕೋರಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಜಾಮೀನು ಅರ್ಜಿ ವಿಚಾರಣೆಯನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್ ವಿಚಾರಣೆಯನ್ನ ಜನವರಿ ಮೊದಲ ವಾರಕ್ಕೆ ಮುಂದೂಡಿದೆ. ಇದನ್ನೂ ಓದಿ: ನಟಿ ಸಂಜನಾ ಹೆಸರಲ್ಲಿದೆ ಬರೋಬ್ಬರಿ 11 ಬ್ಯಾಂಕ್ ಅಕೌಂಟ್!