Tag: Drugs Case

  • ಶಾರೂಖ್ ಮಗನ ಅರೆಸ್ಟ್ ಹಿಂದೆ ಬಿಜೆಪಿ ಉಪಾಧ್ಯಕ್ಷ – NCB ಅಧಿಕಾರಿಗಳಿಂದ್ಲೇ ಪಿತೂರಿ ಆರೋಪ

    ಶಾರೂಖ್ ಮಗನ ಅರೆಸ್ಟ್ ಹಿಂದೆ ಬಿಜೆಪಿ ಉಪಾಧ್ಯಕ್ಷ – NCB ಅಧಿಕಾರಿಗಳಿಂದ್ಲೇ ಪಿತೂರಿ ಆರೋಪ

    ಮುಂಬೈ: ಸಿಕ್ಕಾಪಟ್ಟೇ ಪ್ರಚಾರ ಪಡೆದಿರುವ ಡ್ರಗ್ಸ್ ಪ್ರಕರಣದಲ್ಲಿ ನಟ ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಬಂಧನಕ್ಕೆ ಈಗ ಸ್ಫೋಟಕ ತಿರುವು ಸಿಕ್ಕಿದೆ. ಐಷಾರಾಮಿ ಹಡಗಿನ ಮೇಲೆ ದಾಳಿಯಲ್ಲಿ ಬಿಜೆಪಿ ಕೈವಾಡ ಇದೆ ಎಂದು ಆರೋಪಿಸಿರುವ ಆಡಳಿತ ಪಕ್ಷ  NCP(ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ) ಆ ಸಂಬಂಧ ಸ್ಫೋಟಕ ವೀಡಿಯೋ, ಫೋಟೋಗಳನ್ನು ಬಿಡುಗಡೆ ಮಾಡಿದೆ.

    ಹಡಗಿನ ಮೇಲೆ ಎನ್‍ಸಿಬಿ(NCB) ದಾಳಿ ಮಾಡುವುದಕ್ಕೂ ಮೊದಲು ಬಿಜೆಪಿ ಉಪಾಧ್ಯಕ್ಷ ಮನೀಶ್ ಭಾನುಶಾಲಿ ಮತ್ತು ವಂಚನೆ ಕೇಸ್‍ವೊಂದರಲ್ಲಿ ಆರೋಪಿ ಆಗಿದ್ದ ಎಸ್.ಕೆ ಗೋಸಾವಿ ಮುಂಬೈನಲ್ಲಿರುವ ಎನ್‍ಸಿಬಿ ಕಚೇರಿಗೆ ಬಂದಿದ್ದರು. ದಾಳಿ ಬಳಿಕ ಆರ್ಯನ್ ಖಾನ್, ಆತನ ಸ್ನೇಹಿತ ಅರ್ಬಾಜ್ ಮರ್ಚೆಂಟ್‍ನನ್ನು ಇದೇ ಮನೀಶ್ ಮತ್ತು ಗೋಸಾವಿ ಎನ್‍ಸಿಬಿ ಕಚೇರಿಗೆ ಎಳೆದುಕೊಂಡು ಬಂದಿದ್ದರು. ದಾಳಿ ವೇಳೆ ಸಿಕ್ಕಿದೆ ಎಂದು ಎನ್‍ಸಿಬಿ ತೋರಿಸಿರುವ ಮಾದಕ ದ್ರವ್ಯ ಮತ್ತು ಹಣದ ಫೋಟೋ ಹಡಗಿನಲ್ಲಿ ಸಿಕ್ಕಿದ್ದಲ್ಲ, ಬದಲಿಗೆ ಎನ್‍ಸಿಬಿ ನಿರ್ದೇಶಕರ ಕಚೇರಿಯಲ್ಲಿ ತೆಗೆದಿದ್ದು. ಶಾರುಖ್ ಖಾನ್ ಮಗನ ಮೇಲೆ ಎನ್‍ಸಿಬಿ ಡ್ರಗ್ಸ್ ದಾಳಿ ಮಾಡಲಿದೆ ಎಂದು ತಿಂಗಳಿಂದಲೇ ವಾಟ್ಸಪ್‍ಗಳಲ್ಲಿ ಹರಿದಾಡಿತ್ತು ಎಂದು ನವಾಬ್ ಮಲಿಕ್ ಹೇಳಿದ್ದಾರೆ. ಇದನ್ನೂ ಓದಿ: ಶಾರುಖ್ ಖಾನ್ ಪುತ್ರನ ಬಂಧನ- ರಮ್ಯಾಗೆ ಅನುಮಾನ

    ಮನೀಶ್ ಭಾನುಶಾಲಿ ಮತ್ತು ಎಸ್‍ಕೆ ಗೋಸಾವಿ ಇಬ್ಬರು ಮಾಹಿತಿ ನೀಡಿದ್ದರು ಎಂದು ಎನ್‍ಸಿಬಿ ಹೇಳಿದೆಯಾದರೂ ಆರೋಪಿಗಳನ್ನು ವಶಕ್ಕೆ ಪಡೆದ ಬಳಿಕ ಎನ್‍ಸಿಬಿ ಅಧಿಕಾರಿಗಳು ಕರೆತರುವ ಬದಲು ಇವರಿಬ್ಬರು ಕರೆತಂದಿದ್ದು ಯಾಕೆ..?. ಎನ್‍ಸಿಬಿ ವಶದಲ್ಲಿದ್ದಾಗ ಖಾಸಗಿ ವ್ಯಕ್ತಿ ಆಗಿರುವ ಗೋಸಾವಿ ಆರ್ಯನ್ ಖಾನ್ ಜೊತೆಗೆ ಹೇಗೆ ಫೋಟೋ ತೆಗೆಸಿಕೊಂಡ ಎಂಬ ಪ್ರಶ್ನೆ ಎದ್ದಿದೆ. ವಿಚಾರಣೆ ವೇಳೆ ‘ಆರ್ಯನ್ ಖಾನ್ ಬಳಿಕ ಮಾದಕ ದ್ರವ್ಯ ಪತ್ತೆ ಆಗಿಲ್ಲ’ ಎಂದು ಎನ್‍ಸಿಬಿ ಕೋರ್ಟಿಗೆ ಮಾಹಿತಿ ನೀಡಿತ್ತು. ಇದನ್ನೂ ಓದಿ: ಕಿಂಗ್ ಖಾನ್ ಮಗನ ಡ್ರಗ್ಸ್ ಪ್ರಕರಣದಲ್ಲಿ ಕನ್ನಡಿಗನ ವಕಾಲತ್ತು

    ಇತ್ತ ಹಡಗಿನಲ್ಲಿ ಎನ್‍ಸಿಬಿ ಮಾದಕ ದ್ರವ್ಯಗಳನ್ನಿಟ್ಟು ನಮ್ಮ ವಿರುದ್ಧ ಸಂಚು ರೂಪಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿರುವ ಆರ್ಯನ್ ಗೆಳೆಯ ಅರ್ಬಜ್ ಮರ್ಚೆಂಟ್ ಹಡಗಿನ ಸಿಸಿಟಿವಿ ದಶ್ಯ ನೀಡುವಂತೆ ಕೋರಿ ಕೋರ್ಟ್ ಮೊರೆ ಹೋಗಿದ್ದಾನೆ. ಆರ್ಯನ್ ಖಾನ್ ಸೇರಿ ಮೂವರು ಆರೋಪಿಗಳ ಎನ್‍ಸಿಬಿ ಕಸ್ಟಡಿ ಇವತ್ತು ಅಂತ್ಯ ಆಗಲಿದೆ. ಈಗಾಗಲೇ ಜಾಮೀನು ಕೋರಿ ಆರ್ಯನ್ ಖಾನ್ ಅರ್ಜಿ ಸಲ್ಲಿಸಿದ್ದಾನೆ. ಇದನ್ನೂ ಓದಿ: ಎನ್‍ಸಿಬಿ ಅಧಿಕಾರಿಗಳ ಮುಂದೆ ವಿಜ್ಞಾನ ಪುಸ್ತಕಕ್ಕೆ ಬೇಡಿಕೆಯಿಟ್ಟ ಆರ್ಯನ್!

  • ಎನ್‍ಸಿಬಿ ಅಧಿಕಾರಿಗಳ ಮುಂದೆ ವಿಜ್ಞಾನ ಪುಸ್ತಕಕ್ಕೆ ಬೇಡಿಕೆಯಿಟ್ಟ ಆರ್ಯನ್!

    ಎನ್‍ಸಿಬಿ ಅಧಿಕಾರಿಗಳ ಮುಂದೆ ವಿಜ್ಞಾನ ಪುಸ್ತಕಕ್ಕೆ ಬೇಡಿಕೆಯಿಟ್ಟ ಆರ್ಯನ್!

    ಮುಂಬೈ: ಮಾದಕ ವಸ್ತು ನಿಯಂತ್ರಣ ಸಂಸ್ಥೆ(ಎನ್‍ಸಿಬಿ) ಬಂಧನದಲ್ಲಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಅಧಿಕಾರಿಗಳ ಮುಂದೆ ವಿಜ್ಞಾನ ಪುಸ್ತಕಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಹೌದು. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್‍ನನ್ನು ಎನ್‍ಸಿಬಿ ಬಂಧಿಸಿದೆ. ಸದ್ಯ ಬಂಧನದಲ್ಲಿರುವ ಆರ್ಯನ್ ತನಗೆ ವಿಜ್ಞಾನ ಪುಸ್ತಕ ನೀಡುವಂತೆ ಅಧಿಕಾರಿಗಳ ಮುಂದೆ ಕೋರಿಕೆ ಇಟ್ಟಿದ್ದಾರೆ. ಅದರಂತೆ ಅಧಿಕಾರಿಗಳು ಆರ್ಯನ್ ಗೆ ವಿಜ್ಞಾನ ಪುಸ್ತಕವನ್ನು ನೀಡಿದ್ದಾರೆ.

    ಡ್ರಗ್ಸ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವು ಮೆಸೇಜ್ ಗಳು ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಆರ್ಯನ್ ಮೊಬೈಲನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದನ್ನೂ ಓದಿ: ಶಾರೂಖ್‌ ಪುತ್ರನ ಲೆನ್ಸ್‌ ಬಾಕ್ಸ್, ಇನ್ನೊಬ್ಬಳು ಯುವತಿಯ ಬ್ಯಾಗಲ್ಲಿದ್ದ ಸ್ಯಾನಿಟರಿ ಪ್ಯಾಡಲ್ಲಿತ್ತು ಮಾದಕ ವಸ್ತು!

    ಶನಿವಾರ ಮಧ್ಯರಾತ್ರಿ ಖಚಿತ ಮಾಹಿತಿ ಆಧರಿಸಿ ಎನ್‍ಸಿಬಿ ಅಧಿಕಾರಿಗಳು ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಶಾರೂಖ್ ಪುತ್ರ ಸೇರಿ 8 ಮಂದಿಯನ್ನು ವಶಕ್ಕೆ ಪಡೆದಿದ್ದ ಎನ್‍ಸಿಬಿ ಹೆಚ್ಚಿನ ವಿಚಾರಣೆ ನಡೆಸಿ ಬಂಧಿಸಿತ್ತು. ಬಳಿಕ ಶಾರೂಖ್ ಪುತ್ರ ಹಾಗೂ ಇನ್ನಿಬ್ಬರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಆರ್ಯನ್‍ನನ್ನು ಹೆಚ್ಚಿನ ವಿಚಾರಣೆಗಾಗಿ ಅಕ್ಟೋಬರ್ 7ರವರೆಗೂ ಎನ್‍ಸಿಬಿ ವಶಕ್ಕೆ ನೀಡಿದೆ. ಇದನ್ನೂ ಓದಿ: ‘ಟೇಕ್ ಕೇರ್ ಕಿಂಗ್’ ಎಂದ ಶಾರೂಖ್ ಅಭಿಮಾನಿಗಳು

    ಶಾರೂಖ್ ಖಾನ್ ಪುತ್ರ ಸೇರಿ 8 ಮಂದಿಯನ್ನು ಎನ್‍ಸಿಬಿ ಬಂಧಿಸುತ್ತಿದ್ದಂತೆಯೇ ಆ ಉಳಿದ 7 ಮಂದಿ ಯಾರು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ ಒಬ್ಬೊಬ್ಬರದೇ ವಿವರ ಬಹಿರಂಗವಾಗುತ್ತಿದೆ. ಶಾರೂಖ್ ಪುತ್ರ ಆರ್ಯನ್ ಖಾನ್ ಜೊತೆ ಬಂಧಿತ ಯುವತಿಯ ಹೆಸರು ಮುನ್‍ಮುನ್ ಧಮೇಚಾ ಎಂದು ಗೊತ್ತಾಗಿದೆ. ಆರ್ಯನ್ ಗೆಳೆಯ ಅರ್ಬಾಜ್ ಸೇಥ್ ಮರ್ಚಂಟ್ ಕೂಡಾ ಇವರ ಜೊತೆಗಿದ್ದ ಎನ್ನಲಾಗಿದೆ. ಇದನ್ನೂ ಓದಿ: ಮುಂಬೈ ಡ್ರಗ್ಸ್ ಪ್ರಕರಣ – ಐಷಾರಾಮಿ ಹಡಗಿನಲ್ಲಿ ತಗ್ಲಾಕ್ಕೊಂಡ ಬೆಂಗಳೂರಿಗರು..!

  • ಶಾರೂಖ್, ಗೌರಿ ಖಾನ್ ಬೆಂಬಲಕ್ಕೆ ನಿಂತ ಹೃತಿಕ್ ಮಾಜಿ ಪತ್ನಿ, ಮಿಕಾ ಸಿಂಗ್!

    ಶಾರೂಖ್, ಗೌರಿ ಖಾನ್ ಬೆಂಬಲಕ್ಕೆ ನಿಂತ ಹೃತಿಕ್ ಮಾಜಿ ಪತ್ನಿ, ಮಿಕಾ ಸಿಂಗ್!

    ಮುಂಬೈ: ಮಾದಕ ದ್ರವ್ಯ ಪ್ರಕರಣದಲ್ಲಿ ಪುತ್ರ ಆರ್ಯನ್ ಖಾನ್ ಬಂಧನಕ್ಕೊಳಗಾದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಶಾರೂಖ್ ಮತ್ತು ಗೌರಿ ಖಾನ್ ಬೆಂಬಲಕ್ಕೆ ಸುಸಾನೆ ಖಾನ್ ಮತ್ತು ಮಿಕಾ ಸಿಂಗ್ ನಿಂತಿದ್ದಾರೆ.

    ಶನಿವಾರ ರಾತ್ರಿ(ಅ.2) ನಡೆದ ಕಾರ್ಡೆಲಿಯಾ ಕ್ರೂಸ್ ಎಕ್ಸ್ ಪ್ರೆಸ್  ಹಡಗಿನಲ್ಲಿ ಮಾದಕದ್ರವ್ಯದ ದಂಧೆಯ ನಂತರ ಅಕ್ಟೋಬರ್ 3 ರಂದು ಆರ್ಯನ್ ನನ್ನು ಬಂಧಿಸಲಾಯಿತು. ನಿನ್ನೆ ಆರ್ಯನ್ ಕಸ್ಟಡಿಯನ್ನು ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಯಿತು. ಈ ಹಿನ್ನೆಲೆ ಬಾಲಿವುಡ್ ಸೆಲೆಬ್ರಿಟಿಗಳಾದ ಸುಸ್ಸಾನೆ ಮತ್ತು ಮಿಕಾ ಅವರು ‘ಸ್ಟಾರ್ ಕಿಡ್’ ನ ಬಂಧನವನ್ನು ಪ್ರಶ್ನಿಸಿದ್ದಾರೆ. ಇದನ್ನೂ ಓದಿ:  ಪಕ್ಷಿಗಳಿಗೆ ಪುನರ್ಜನ್ಮ ನೀಡುತ್ತಿರುವ ರಾಯಚೂರಿನ ಪಕ್ಷಿಪ್ರೇಮಿ ಸಲ್ಲಾವುದ್ದೀನ್

    ಆರ್ಯನ್ ಖಾನ್ ಒಳ್ಳೆಯ ಮಗು!

    ಮುಂಬೈ ಕೋರ್ಟ್ ಸೋಮವಾರ ಆರ್ಯನ್ ಖಾನ್ ನ ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್‍ಸಿಬಿ) ಕಸ್ಟಡಿಯನ್ನು ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಯಿತು. ಈ ಹಿನ್ನೆಲೆ ಬಾಲಿವುಡ್ ನಟ ಹೃತಿಕ್ ರೋಷನ್ ಮಾಜಿ ಪತ್ನಿ ಸುಸಾನೆ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ಬಾಲಿವುಡ್ ಮಂದಿ ತಮಗೆ ತೋಚಿದಂತೆ ಹೇಳಿಕೊಳ್ಳುತ್ತಿದ್ದಾರೆ. ಆರ್ಯನ್ ಖಾನ್ ಒಳ್ಳೆಯ ಮಗು, ಆದರೆ ದುರದೃಷ್ಟವಶಾತ್ ಅವರು ಕೆಟ್ಟ ಸಮಯದಲ್ಲಿ, ತಪ್ಪಾದ ಸ್ಥಳದಲ್ಲಿದ್ದರು. ಇದನ್ನು ಬಳಸಿಕೊಂಡು ಅವರನ್ನು ಬಾಲಿವುಡ್‍ನ ಕೆಲವರು ತಮ್ಮದೇ ಶೈಲಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆರ್ಯನ್ ಒಳ್ಳೆಯ ಮಗುವಾಗಿದ್ದರಿಂದ ಇದು ಅನ್ಯಾಯವಾಗಿದೆ. ನಾನು ಗೌರಿ ಮತ್ತು ಶಾರೂಖ್ ಪರವಾಗಿ ನಿಲ್ಲುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.

    ಸುಸಾನೆ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಲೇಖಕಿ ಶೋಭಾ ಡಿ, ಆರ್ಯನ್ ಬಂಧನವು ಅವರ ಪೋಷಕರಿಗೆ ಎಚ್ಚರಿಕೆಯ ಗಂಟೆಯಾಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

    ಆ ಜಾಗಕ್ಕೆ ನಾನು ಹೋಗಬೇಕಿತ್ತು..!

    ಸಿಂಗರ್ ಮಿಕಾ ಸಿಂಗ್ ಕೂಡ ಈ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ್ದು, ಆರ್ಯನ್ ಬಿಟ್ಟರೇ ಬೇರೆ ಯಾರೂ ಆ ಹಡಗಿನಲ್ಲಿ ಇರಲಿಲ್ಲವಾ ಎಂದು ಪ್ರಶ್ನಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ವಾವ್ ಎಂತಹ ಸುಂದರವಾದ ಕಾರ್ಡೆಲಿಯಾ ಕ್ರೂಸ್. ಅಲ್ಲಿಗೆ ನಾನು ಭೇಟಿ ಕೊಡಬೇಕಿತ್ತು. ಅಲ್ಲಿ ಬಹಳಷ್ಟು ಜನರಿದ್ದಾರೆ, ಆದರೆ ಆರ್ಯನ್ ನನಗೆ ಕಾಣಿಸುತ್ತಿಲ್ಲ. ಆದರೆ ಇವರಿಗೆ ಮಾತ್ರ ಈ ದೊಡ್ಡ ಹಡಗಿನಲ್ಲಿ ಆರ್ಯನ್ ಮಾತ್ರ ಕಾಣಿಸುತ್ತಿದ್ದಾನೆ ಎಂದು ವ್ಯಂಗ್ಯವಾಗಿ ಬರೆದು ಶುಭೋದಯ ಅದ್ಭುತ ದಿನ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ಯಾರೂ ನನ್ನನ್ನು ಕೈಹಿಡಿದಿಲ್ಲ: ರಣವೀರ್ ಸಿಂಗ್

    ಈ ಹಿಂದೆ ಬಾಲಿವುಡ್ ಸೆಲೆಬ್ರಿಟಿಗಳಾದ ಸುನೀಲ್ ಶೆಟ್ಟಿ, ಸುಚಿತ್ರಾ ಕೃಷ್ಣಮೂರ್ತಿ, ಹಂಸಲ್ ಮೆಹ್ತಾ ಮತ್ತು ಪೂಜಾ ಭಟ್ ಇತರರು ಶಾರುಖ್ ಖಾನ್ ಪರವಾಗಿ ಮಾತನಾಡಿದರು. ಸಲ್ಮಾನ್ ಖಾನ್ ಅವರು ತಮ್ಮ ಬೆಂಬಲವನ್ನು ಸೂಚಿಸಲು ಎಸ್‌ಆರ್‌ಕೆ  ಅವರ ಮನೆ ಮನ್ನತ್‍ಗೆ ಭೇಟಿ ನೀಡಿದರು.

  • ಬ್ರಹ್ಮ ರಸಾಯಣ, ಅಶ್ವ ಗಂಧಿ ಲೇಹಂ – ದೇವರ ಪ್ರಸಾದದ ಹೆಸರಲ್ಲಿ ಡ್ರಗ್ಸ್ ದಂಧೆ

    ಬ್ರಹ್ಮ ರಸಾಯಣ, ಅಶ್ವ ಗಂಧಿ ಲೇಹಂ – ದೇವರ ಪ್ರಸಾದದ ಹೆಸರಲ್ಲಿ ಡ್ರಗ್ಸ್ ದಂಧೆ

    ಬೆಂಗಳೂರು: ಮಾದಕ ವಸ್ತು ನಿಯಂತ್ರಣ ಘಟಕ (NCB) ಅಧಿಕಾರಿಗಳ ಮತ್ತೊಂದು ಮೆಗಾ ಕಾರ್ಯಾಚರಣೆ ನಡೆದಿದ್ದು, ದೇವರ ಪ್ರಸಾದದ ಹೆಸರಿನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿರುವುದು ಬಯಲಾಗಿದೆ.

    ಡ್ರಗ್ಸ್ ಸಾಗಾಟದಲ್ಲಿ ತೊಡಗಿದ್ದ ಬಹ್ರೇನ್ ಮಾಜಿ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿದೆ. ಈತ ಬ್ರಹ್ಮ ರಸಾಯಣ, ನರಸಿಂಹ ರಸಾಯಣ, ಅಶ್ವ ಗಂಧಿ ಲೇಹಂ, ಚಾಯಾ ವಧನ ಲೇಹ ಹೆಸರಲ್ಲಿ ಕೇರಳದಿಂದ ಬೆಂಗಳೂರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದನು. ಆರೋಪಿಯಿಂದ 3.5 ಕೆ.ಜಿ. ಹಶೀಷ್ ಆಯಿಲ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಇದನ್ನೂ ಓದಿ: ಡ್ರಗ್ಸ್, ಸಿಗರೇಟ್, ಸೆಕ್ಸ್‌ಗೆ ಮಗನಿಗೆ ಓಕೆ ಅಂದಿದ್ದೇನೆ: ಶಾರೂಖ್ ವೀಡಿಯೋ ವೈರಲ್

    ಮತ್ತೊಂದು ಕಾರ್ಯಾಚರಣೆ:
    ಆಸ್ಟ್ರೇಲಿಯಾಗೆ 19 ಕೆಜಿ ಸೆಡೋಪೆಡ್ರಿನ್ ಸಾಗಾಟ ಮಾಡಲು ಯತ್ನಿಸಿದ ಪ್ರಕರಣ ಎನ್ ಸಿಬಿ ಕಾರ್ಯಾಚರಣೆಯ ವೇಳೆ ಬೆಳಕಿಗೆ ಬಂದಿದೆ. ಬೆಂಗಳೂರಿಗೆ ಸಾಗಿಸುತ್ತಿದ್ದ ಆರೋಪಿಯನ್ನು ಎನ್‍ಸಿಬಿ ಅಧಿಕಾರಿಗಳು ಕಾಸರಗೋಡಿನಲ್ಲಿ ಬಂಧಿಸಿದ್ದಾರೆ. ಕರೈಕಾಲ್ ಎಂಬ ಕೊರಿಯರ್ ಕಂಪನಿ ಮೂಲಕ ಸಾಗಾಟ ಮಾಡಲು ಯತ್ನಿಸಲಾಗಿತ್ತು. ಇದನ್ನೂ ಓದಿ: ಬಂಧನದ ಬಳಿಕ ಪುತ್ರನ ಜೊತೆ 2 ನಿಮಿಷ ಮಾತಾಡಿದ ನಟ ಶಾರೂಖ್!

    ಇತ್ತ ಚೆನ್ನೈ, ಎರ್ನಾಕುಲಂ ಏರ್ ಪೋರ್ಟ್ ನಲ್ಲಿಯೂ ಡ್ರಗ್ಸ್ ಸೀಜ್ ಮಾಡಲಾಗಿದೆ. ಹೀಗೆ ಒಂದೇ ವಾರದಲ್ಲಿ ಮೂರು ಕಡೆ ಎನ್‍ಸಿಬಿ ಭರ್ಜರಿ ಕಾರ್ಯಾಚರಣೆಯ ಮೂಲಕ ಡ್ರಗ್ಸ್ ಸೀಜ್ ಮಾಡಿದೆ. ಇದನ್ನೂ ಓದಿ: ಶಾರೂಖ್‌ ಪುತ್ರನ ಲೆನ್ಸ್‌ ಬಾಕ್ಸ್, ಇನ್ನೊಬ್ಬಳು ಯುವತಿಯ ಬ್ಯಾಗಲ್ಲಿದ್ದ ಸ್ಯಾನಿಟರಿ ಪ್ಯಾಡಲ್ಲಿತ್ತು ಮಾದಕ ವಸ್ತು!

  • ಬಂಧನದ ಬಳಿಕ ಪುತ್ರನ ಜೊತೆ 2 ನಿಮಿಷ ಮಾತಾಡಿದ ನಟ ಶಾರೂಖ್!

    ಬಂಧನದ ಬಳಿಕ ಪುತ್ರನ ಜೊತೆ 2 ನಿಮಿಷ ಮಾತಾಡಿದ ನಟ ಶಾರೂಖ್!

    – 2 ನಿಮಿಷದಲ್ಲಿ ಪುತ್ರನಿಗೆ ತಂದೆ ಹೇಳಿದ್ದೇನು..?

    ಮುಂಬೈ: ಹಡಗಿನಲ್ಲಿ ಡ್ರಗ್ಸ್ ಪಾರ್ಟಿ(Drugs Party) ಪ್ರಕರಣ ಸಂಬಂಧ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಕಾನ್ ಪುತ್ರ ಆರ್ಯನ್ ನನ್ನು ಈಗಾಗಗಲೇ ಎನ್‍ಸಿಬಿ(NCB) ಬಂಧಿಸಿದೆ. ಅಧಿಕಾರಿಗಳು ಆರ್ಯನ್ ನನ್ನು ಬಂಧಿಸಿದ ಬಳಿಕ ನಟ ತಮ್ಮ ಪುತ್ರನ ಜೊತೆ 2 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದು, ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

    ಹೌದು. ಪುತ್ರ ಆರ್ಯನ್ (Aryan Khan) ಬಂಧನದ ಬಳಿಕ ಶಾರೂಖ್ ಖಾನ್ (Shahrukh Khan)  ಅವರು ಫೋನ್ ಮೂಲಕ 2 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಏನು ಮಾತನಾಡಿದ್ದಾರೆ ಎಂಬುದು ತಿಳಿದುಬಂದಿಲ್ಲ. ಆದರೆ ಪ್ರಕರಣ ಸಂಬಂಧ ಪುತ್ರನಿಗೆ ಧೈರ್ಯ ತುಂಬಿರಬಹುದು ಎಂದು ಹೇಳಲಾಗುತ್ತಿದೆ. ಇತ್ತ ನಿನ್ನೆ ರಾತ್ರಿ ಶಾರೂಖ್ ಮನೆಗೆ ಸಲ್ಮಾನ್ ಖಾನ್ ಭೇಟಿ ನೀಡಿ ಮಾತುಕತಡ ನಡೆಸಿದ್ದರು. ಇದನ್ನೂ ಓದಿ: ಶಾರೂಖ್‌ ಪುತ್ರನ ಲೆನ್ಸ್‌ ಬಾಕ್ಸ್, ಇನ್ನೊಬ್ಬಳು ಯುವತಿಯ ಬ್ಯಾಗಲ್ಲಿದ್ದ ಸ್ಯಾನಿಟರಿ ಪ್ಯಾಡಲ್ಲಿತ್ತು ಮಾದಕ ವಸ್ತು!

    ಆರ್ಯನ್ ಖಾನ್ ಬಂಧನದ ಬಳಿಕ ಕಾನೂನು ಪ್ರಕ್ರಿಯೆಯ ಭಾಗವಾಗಿ ಎನ್‍ಸಿಬಿ ಅಧಿಕಾರಿಗಳು ಶಾರೂಖ್ ಜೊತೆ ದೂರವಾಣಿಯಲ್ಲಿ ಮಾತನಾಡಲು ಆರ್ಯನ್ ಗೆ ಅವಕಾಶ ನೀಡಲಾಗಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಇಬ್ಬರು 2 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಡ್ರಗ್ಸ್ ಕೇಸ್- ಪ್ರಯಾಣಿಕರ ಸೋಗಿನಲ್ಲಿ ಟಿಕೆಟ್ ಬುಕ್, ಎನ್‍ಸಿಬಿ ರೋಚಕ ಕಾರ್ಯಾಚರಣೆ

    ಇತ್ತ ಪ್ರಕರಣ ಸಂಬಂಧ ಬಂಧಿಸಿ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಆರ್ಯನ್ ಅಧಿಕಾರಿಗಳ ಮುಂದೆ ಅತ್ತಿದ್ದಾನೆ. ಕಳೆದ 4 ವರ್ಷಗಳಿಂದ ಆರ್ಯನ್ ಡ್ರಗ್ಸ್ ಸೇವನೆ ಮಾಡುತ್ತಾ ಬಂದಿದ್ದಾನೆ ಎಂದು ವಿಚಾರಣೆಯ ವೇಳೆ ಆರ್ಯನ್ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿರುವುದಾಗಿ ಎನ್‍ಸಿಬಿ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ:ಶಾರುಖ್ ಪುತ್ರ ಆರ್ಯನ್ ಇನ್ನೂ ಮಗು, ಉಸಿರಾಡಲು ಬಿಡಿ: ನಟ ಸುನೀಲ್ ಶೆಟ್ಟಿ

    ಶನಿವಾರ ಮಧ್ಯರಾತ್ರಿ ಖಚಿತ ಮಾಹಿತಿ ಆಧರಿಸಿ ಎನ್‍ಸಿಬಿ ಅಧಿಕಾರಿಗಳು ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಶಾರೂಖ್ ಪುತ್ರ ಸೇರಿ 8 ಮಂದಿಯನ್ನು ವಶಕ್ಕೆ ಪಡೆದಿದ್ದ ಎನ್‍ಸಿಬಿ ಹೆಚ್ಚಿನ ವಿಚಾರಣೆ ನಡೆಸಿ ಬಂಧಿಸಿತ್ತು. ಬಳಿಕ ಶಾರೂಖ್ ಪುತ್ರ ಹಾಗೂ ಇನ್ನಿಬ್ಬರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಈ ಮೂವರನ್ನು ಒಂದು ದಿನಕ್ಕೆ ಎನ್‍ಸಿಬಿ ವಶಕ್ಕೆ ನೀಡಿತ್ತು. ಇಂದು ಆರ್ಯನ್ ಖಾನ್ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಲಿದ್ದಾರೆ.  ಇದನ್ನೂ ಓದಿ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ವಶಕ್ಕೆ ಪಡೆದಿದ್ದೇವೆ: ಎನ್‍ಸಿಬಿ ಮುಖ್ಯಸ್ಥ ಪ್ರಧಾನ್

  • ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ವಶಕ್ಕೆ ಪಡೆದಿದ್ದೇವೆ: ಎನ್‍ಸಿಬಿ ಮುಖ್ಯಸ್ಥ ಪ್ರಧಾನ್

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ವಶಕ್ಕೆ ಪಡೆದಿದ್ದೇವೆ: ಎನ್‍ಸಿಬಿ ಮುಖ್ಯಸ್ಥ ಪ್ರಧಾನ್

    ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ 8 ಜನರನ್ನು ವಶಕ್ಕೆ ಪಡೆದಿದ್ದೇವೆ ಎಂದು ಎನ್‍ಸಿಬಿ ಮುಖ್ಯಸ್ಥ ಎಸ್.ಎನ್.ಪ್ರಧಾನ್ ಸ್ಪಷ್ಟಪಡಿಸಿದ್ದಾರೆ.

    ಈ ಕುರಿತು ಮಾಹಿತಿ ನೀಡಿರುವ ಅವರು, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದರಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಅರ್ಯನ್ ಖಾನ್ ಸಹ ಒಬ್ಬ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಇದನ್ನೂ ಓದಿ: ಡ್ರಗ್ಸ್ ಕೇಸ್- ಪ್ರಯಾಣಿಕರ ಸೋಗಿನಲ್ಲಿ ಟಿಕೆಟ್ ಬುಕ್, ಎನ್‍ಸಿಬಿ ರೋಚಕ ಕಾರ್ಯಾಚರಣೆ

    ಸಮುದ್ರದಲ್ಲಿ ಹಡಗಿನಲ್ಲಿ ತೇಲುತ್ತ ಬಾಲಿವುಡ್ ನಟರು, ಉದ್ಯಮಿಗಳ ಮಕ್ಕಳು ಡ್ರಗ್ಸ್ ಪಾರ್ಟಿ ಮಾಡಿದ್ದರು. ಐಷಾರಾಮಿ ಹಡಗಿನಲ್ಲಿ ಎನ್‍ಸಿಬಿ ಕಾರ್ಯಾಚರಣೆಯೇ ರೋಚಕವಾಗಿತ್ತು. ಎನ್‍ಸಿಬಿ ಸಮೀರ್ ವಾಂಖೆಡೆ ಟೀಮ್ ಮಾರುವೇಷದಲ್ಲಿ ಹಡಗಿನಲ್ಲಿ ಪ್ರಯಾಣಿಸಿ ಆಪರೇಷನ್ ನಡೆಸಿತ್ತು. ಕಾರ್ಯಾಚರಣೆಯಲ್ಲಿ ಯಶಸ್ವಿ ಸಹ ಆಗಿದ್ದು, ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಸೇರಿದಂತೆ ಹಲವು ಪ್ರತಿಷ್ಟಿತರ ಮಕ್ಕಳನ್ನು ವಶಕ್ಕೆ ಪಡೆದಿತ್ತು. ಇದನ್ನೂ ಓದಿ: ಹೈ ಪ್ರೊಫೈಲ್ ಡ್ರಗ್ಸ್ ಕೇಸ್- ಶಾರುಖ್ ಖಾನ್ ಪುತ್ರನಿಗೆ ಬಂಧನ ಭೀತಿ

    ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದ ಐಷಾರಾಮಿ ಹಡಗಿನಲ್ಲಿ ಸಮುದ್ರದ ಮಧ್ಯದಲ್ಲಿ ಡ್ರಗ್ಸ್ ಪಾರ್ಟಿ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಎನ್‍ಸಿಬಿ ಅಧಿಕಾರಿಗಳು ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಕೊಕೇನ್, ಎನ್‍ಡಿಎಂ, ಹಾಶಿಶ್ ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆಯಲಾಗಿದೆ.

  • ಡ್ರಗ್ಸ್ ಕೇಸ್- ಪ್ರಯಾಣಿಕರ ಸೋಗಿನಲ್ಲಿ ಟಿಕೆಟ್ ಬುಕ್, ಎನ್‍ಸಿಬಿ ರೋಚಕ ಕಾರ್ಯಾಚರಣೆ

    ಡ್ರಗ್ಸ್ ಕೇಸ್- ಪ್ರಯಾಣಿಕರ ಸೋಗಿನಲ್ಲಿ ಟಿಕೆಟ್ ಬುಕ್, ಎನ್‍ಸಿಬಿ ರೋಚಕ ಕಾರ್ಯಾಚರಣೆ

    – ಸತತ 7 ಗಂಟೆಗಳ ಕಾಲ ಮಿಂಚಿನ ಕಾರ್ಯಾಚರಣೆ

    ಮುಂಬೈ: ಹೈ ಪ್ರೊಫೈಲ್ ಡ್ರಗ್ಸ್ ಪ್ರಕರಣ ಬೇಧಿಸಿರುವ ಎನ್‍ಸಿಬಿ ಕಾರ್ಯಾಚರಣೆ ರಣರೋಚಕವಾಗಿದ್ದು, ಪ್ರಯಾಣಿಕರ ಸೋಗಿನಲ್ಲಿ ಟಿಕೆಟ್ ಬುಕ್ ಮಾಡಿ ಅದೇ ಹಡಗಿನಲ್ಲಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.

    ಸಮುದ್ರದಲ್ಲಿ ತೇಲುತ್ತ ಬಾಲಿವುಡ್ ನಟರು, ಉದ್ಯಮಿಗಳ ಮಕ್ಕಳು ಡ್ರಗ್ಸ್ ಪಾರ್ಟಿ ಮಾಡಿದ್ದರೆ. ಈ ವರೆಗೆ ಎನ್‍ಸಿಬಿ ಪೊಲೀಸರು 13 ಜನರನ್ನು ವಶಕ್ಕೆ ಪಡೆದಿದ್ದಾರೆ. ಐಷಾರಾಮಿ ಹಡಗಿನಲ್ಲಿ ಎನ್‍ಸಿಬಿ ಕಾರ್ಯಾಚರಣೆಯೇ ರೋಚಕವಾಗಿತ್ತು. ಎನ್‍ಸಿಬಿ ಸಮೀರ್ ವಾಂಖೆಡೆ ಟೀಮ್ ಮಾರುವೇಷದಲ್ಲಿ ಹಡಗಿನಲ್ಲಿ ಪ್ರಯಾಣಿಸಿ ಆಪರೇಷನ್ ನಡೆಸಿದೆ. ಕಾರ್ಯಾಚರಣೆಯಲ್ಲಿ ಯಶಸ್ವಿ ಸಹ ಆಗಿದ್ದು, ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಸೇರಿದಂತೆ ಹಲವು ಪ್ರತಿಷ್ಟಿತರ ಮಕ್ಕಳನ್ನು ವಶಕ್ಕೆ ಪಡೆದಿದೆ. ಇದನ್ನೂ ಓದಿ: ಹೈ ಪ್ರೊಫೈಲ್ ಡ್ರಗ್ಸ್ ಕೇಸ್- ಶಾರುಖ್ ಖಾನ್ ಪುತ್ರನಿಗೆ ಬಂಧನ ಭೀತಿ

    ಹೇಗಿತ್ತು ರಣರೋಚಕ ಕಾರ್ಯಾಚಣೆ?
    ಪ್ರತಿಷ್ಟಿತರ ಮಕ್ಕಳು ರೇವ್ ಪಾರ್ಟಿ ನಡೆಸುವ ಬಗ್ಗೆ 2 ವಾರದ ಹಿಂದೆಯೇ ಎನ್‍ಸಿಬಿಗೆ ಸುಳಿವು ಸಿಕ್ಕಿತ್ತು. ಆದರೆ ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ ನಡೆಯಲಿದೆ ಎಂದಷ್ಟೇ ಮಾಹಿತಿ ಲಭ್ಯವಾಗಿತ್ತು. ಶನಿವಾರ ಸಂಜೆ ಹಡಗು ಮುಂಬೈನಿಂದ ಗೋವಾಗೆ ಹೊರಡುವ ಬಗ್ಗೆ ತಿಳಿದಿತ್ತು. ರೇವ್ ಪಾರ್ಟಿ ಜಾಡು ಹಿಡಿದು ಹೊರಟಿದ್ದ ಎನ್‍ಸಿಬಿ, ಪ್ರಯಾಣಿಕರ ಸೋಗಿನಲ್ಲಿ ಟಿಕೆಟ್ ಬುಕ್ ಮಾಡಿ, ಅದೇ ಹಡಗಿನಲ್ಲಿ ಅಧಿಕಾರಿಗಳು ಪ್ರಯಾಣಿಸಿದ್ದರು.

    ಸತತ 7 ಗಂಟೆಗಳ ಕಾಲ ಎನ್‍ಸಿಬಿ ರೋಚಕ ಕಾರ್ಯಾಚರಣೆ ನಡೆಸಿದ್ದು, ದಾಳಿಯ ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ. ಹಡಗು ಸಮುದ್ರದ ಮಧ್ಯಕ್ಕೆ ಹೋಗುತ್ತಿದ್ದಂತೆ ಡ್ರಗ್ಸ್ ಪಾರ್ಟಿ ಶುರುವಾಗಿದೆ. ಡ್ರಗ್ಸ್ ಪಾರ್ಟಿ ಶುರುವಾಗುತ್ತಿದ್ದಂತೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಹಾಗೂ ಉದ್ಯಮಿಗಳ ಮಕ್ಕಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಒಟ್ಟು 13 ಆರೋಪಿಗಳನ್ನು ಮಾದಕ ವಸ್ತು ನಿಗ್ರಹ ದಳ ವಶಕ್ಕೆ ಪಡೆದಿದೆ. ಇದನ್ನೂ ಓದಿ: ಸಮುದ್ರದ ಮಧ್ಯೆ ಡ್ರಗ್ಸ್ ಪಾರ್ಟಿ- ಸ್ಟಾರ್ ನಟನ ಮಗ ಸೇರಿ ಹತ್ತು ಮಂದಿ ವಶಕ್ಕೆ

    ಹಡಗಿನಲ್ಲಿದ್ದ ಕೊಕೇನ್ ಸೇರಿ ವಿವಿಧ ಮಾದರಿಯ ಡ್ರಗ್ಸ್ ವಶಕ್ಕೆ ಪಡೆದಿದೆ. ಹಡಗು ಮುಂಬೈನತ್ತ ಹೊರಡುವಂತೆ ಕ್ಯಾಪ್ಟನ್‍ಗೆ ಸೂಚನೆ ನೀಡಿದ್ದಾರೆ. ಬಳಿಕ ಗೋವಾ ತಲುಪಬೇಕಿದ್ದ ಹಡಗು ದಕ್ಷಿಣ ಮುಂಬೈನ ಬಲಾರ್ಡ್ ಪೀರ್‍ನತ್ತ ಹಿಂದಿರುಗಿದೆ. ಬಳಿಕ ಮಾದಕ ವಸ್ತು ಸಮೇತ ಆರೋಪಿಗಳನ್ನು ಎನ್‍ಸಿಬಿ ವಶಕ್ಕೆ ಪಡೆದಿದೆ.

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಗಳ ಮೂವರು ಪುತ್ರಿಯರು ಸೇರಿ ಈ ವರೆಗೆ 13 ಜನರನ್ನು ಎನ್‍ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಡ್ರಗ್ಸ್ ಕೇಸ್‍ನಲ್ಲಿ 6 ಮಂದಿಗೆ ಸಮನ್ಸ್ ನೀಡಲಾಗಿದೆ. ಕೆಲವೇ ಕ್ಷಣಗಳಲ್ಲಿ 6 ಮಂದಿ ವಿಚಾರಣೆಗೆ ಹಾಜರಾಗಬೇಕಿದೆ. ಮುಂಬೈನ ಎನ್‍ಸಿಬಿ ಕಚೇರಿಯಲ್ಲೇ 6 ಮಂದಿ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ಬಾಲಿವುಡ್ ಡ್ರಗ್ಸ್ ವ್ಯೂಹದಲ್ಲಿ ಶಾರೂಖ್ ಪುತ್ರ? – ಆರ್ಯನ್ ಫೋನ್ ಎನ್‍ಸಿಬಿ ವಶಕ್ಕೆ

  • ಹೈ ಪ್ರೊಫೈಲ್ ಡ್ರಗ್ಸ್ ಕೇಸ್- ಶಾರುಖ್ ಖಾನ್ ಪುತ್ರನಿಗೆ ಬಂಧನ ಭೀತಿ

    ಹೈ ಪ್ರೊಫೈಲ್ ಡ್ರಗ್ಸ್ ಕೇಸ್- ಶಾರುಖ್ ಖಾನ್ ಪುತ್ರನಿಗೆ ಬಂಧನ ಭೀತಿ

    ಮುಂಬೈ: ಹೈ ಪ್ರೊಫೈಲ್ ಡ್ರಗ್ಸ್ ಕೇಸ್‍ಗೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‍ಗೆ ಬಂಧನ ಭೀತಿ ಎದುರಾಗಿದೆ.

    ಆರ್ಯನ್ ಖಾನ್ ಐಷಾರಾಮಿ ಹಡಗಿನ ಡ್ರಗ್ಸ್ ಪಾರ್ಟಿಗೆ ಗೆಸ್ಟ್ ಆಗಿದ್ದ. ಹೀಗಾಗಿ ಆರ್ಯನ್ ಖಾನ್ ವಶಕ್ಕೆ ಪಡೆದಿರುವ ಎನ್‍ಸಿಬಿ ಅಧಿಕಾರಿಗಳು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇದೇ ವೇಳೆ ಮೊಬೈಲ್‍ನ್ನು ಸಹ ವಶಪಡಿಸಿಕೊಂಡಿದ್ದು, ಆರ್ಯನ್ ಖಾನ್ ಮೊಬೈಲ್ ಚಾಟಿಂಗ್ ಪರಿಶೀಲಿಸಿದ್ದಾರೆ. ಇನ್ನೊಂದೆಡೆ ಡ್ರಗ್ಸ್ ಸೇವನೆ ಬಗ್ಗೆ ಆರ್ಯನ್ ಖಾನ್ ರಕ್ತ ಪರೀಕ್ಷೆ ನಡೆಸಲು ಸಿದ್ಧತೆ ಸಹ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಡ್ರಗ್ಸ್ ಕೇಸ್‍ನಲ್ಲಿ ಶಾರೂಖ್ ಖಾನ್ ಪುತ್ರನಿಗೆ ಬಂಧನ ಭೀತಿ ಎದುರಾಗಿದೆ. ಇದನ್ನೂ ಓದಿ: ಬಾಲಿವುಡ್ ಡ್ರಗ್ಸ್ ವ್ಯೂಹದಲ್ಲಿ ಶಾರೂಖ್ ಪುತ್ರ? – ಆರ್ಯನ್ ಫೋನ್ ಎನ್‍ಸಿಬಿ ವಶಕ್ಕೆ

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಗಳ ಮೂವರು ಪುತ್ರಿಯರು ಸೇರಿ ಈ ವರೆಗೆ 13 ಜನರನ್ನು ಎನ್‍ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಡ್ರಗ್ಸ್ ಕೇಸ್‍ನಲ್ಲಿ 6 ಮಂದಿಗೆ ಸಮನ್ಸ್ ನೀಡಲಾಗಿದೆ. ಕೆಲವೇ ಕ್ಷಣಗಳಲ್ಲಿ 6 ಮಂದಿ ವಿಚಾರಣೆಗೆ ಹಾಜರಾಗಬೇಕಿದೆ. ಮುಂಬೈನ ಎನ್‍ಸಿಬಿ ಕಚೇರಿಯಲ್ಲೇ 6 ಮಂದಿ ವಿಚಾರಣೆ ನಡೆಯಲಿದೆ.

    ಹಡಗಿನಲ್ಲಿ ಡ್ರಗ್ಸ್ ಪತ್ತೆ
    ಐಷಾರಾಮಿ ಹಡಗಿನಲ್ಲಿ ಸ್ಟಾರ್ ನಟರ ಮಕ್ಕಳ ಡ್ರಗ್ಸ್ ಪಾರ್ಟಿ ಮಾಡಿದ್ದು, ಹಡಗಿನ ಪ್ರಯಾಣಿಕರ ಲಗೇಜ್‍ನಲ್ಲಿ ಡ್ರಗ್ಸ್ ಸಿಕ್ಕಿದೆ ಎಂದು ಹಡಗಿನ ಆಡಳಿತ ಮಂಡಳಿಯಿಂದ ಹೇಳಿಕೆ ಬಿಡುಗಡೆ ಮಾಡಿದೆ. ಹಡಗಿನಲ್ಲಿ ಎಂಡಿಎಂಎ, ಹಶೀಸ್, ಕೊಕೇನ್ ಸಿಕ್ಕಿದೆ ಎಂದು ಹಡಗಿನ ಆಡಳಿತ ಮಂಡಳಿ ತಿಳಿಸಿದೆ. ಇದನ್ನೂ ಓದಿ: ಸಮುದ್ರದ ಮಧ್ಯೆ ಡ್ರಗ್ಸ್ ಪಾರ್ಟಿ- ಸ್ಟಾರ್ ನಟನ ಮಗ ಸೇರಿ ಹತ್ತು ಮಂದಿ ವಶಕ್ಕೆ

    ಫ್ಯಾಷನ್ ಟಿವಿ ಎಂಡಿಯಿಂದ ಪಾರ್ಟಿ

    ಖಾಸಗಿ ಫ್ಯಾಷನ್ ಟಿವಿ ಎಂಡಿ ಡ್ರಗ್ಸ್ ಪಾರ್ಟಿ ಆಯೋಜಿಸಿದ್ದು, ಈ ಪಾರ್ಟಿಯಲ್ಲಿ ಉದ್ಯಮಿಗಳ ಮಕ್ಕಳು ಸೇರಿ ಒಟ್ಟು 13 ಜನ ಭಾಗಿಯಾಗಿದ್ದರು. ಹೀಗಾಗಿ ಖಾಸಗಿ ಫ್ಯಾಷನ್ ಟಿವಿ ಎಂಡಿಗೂ ಎನ್‍ಸಿಬಿ ಡ್ರಿಲ್ ಮಾಡಿದೆ.

  • ಬೆಂಗಳೂರಿನಲ್ಲಿ ವಿದೇಶಿಗನ ಡ್ರಗ್ಸ್ ಕಾರ್ಖಾನೆ- ಶೂ ಅಡಿಭಾಗದಲ್ಲಿ ಮಾದಕ ವಸ್ತು ಇಟ್ಟು ಸಪ್ಲೈ

    ಬೆಂಗಳೂರಿನಲ್ಲಿ ವಿದೇಶಿಗನ ಡ್ರಗ್ಸ್ ಕಾರ್ಖಾನೆ- ಶೂ ಅಡಿಭಾಗದಲ್ಲಿ ಮಾದಕ ವಸ್ತು ಇಟ್ಟು ಸಪ್ಲೈ

    – ಕೋಟ್ಯಂತರ ಮೌಲ್ಯದ ಡ್ರಗ್ಸ್ ವಶಕ್ಕೆ

    ಬೆಂಗಳೂರು: ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಮೊದಲ ಪ್ರಕರಣ ಇದಾಗಿದೆ. ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ನೈಜೀರಿಯಾ ಪ್ರಜೆಗಳು ಅಟ್ಟಹಾಸ ಮೆರೆದಿದ್ದರು. ಪೊಲೀಸರು ಅವರನ್ನು ಅಟ್ಟಾಡಿಸಿ ಹೊಡೆದಿದ್ರು. ಇಷ್ಟೆಲ್ಲಾ ಆದರೂ ಅವರ ಆಟಾಟೋಪ ನಿಂತಿಲ್ಲ. ಬೆಂಗಳೂರಿನಲ್ಲಿ ಡ್ರಗ್ಸ್ ಸಪ್ಲೈನ್ನು ಬಿಂದಾಸ್ ಆಗಿ ಮಾಡ್ತಿದ್ದಾರೆ. ಆದರೆ ಇದು ಅದಕ್ಕಿಂತಲೂ ಶಾಕಿಂಗ್ ನ್ಯೂಸ್.

    ಹೌದು. ಇಷ್ಟು ದಿನ ಬೇರೆ ರಾಜ್ಯ ಬೇರೆ ದೇಶಗಳಿಂದ ಬೆಂಗಳೂರಿಗೆ ಡ್ರಗ್ಸ್ ಸರಬರಾಜು ಆಗುತ್ತಿರೋ ಬಗ್ಗೆ ಕೇಳಿದ್ರಿ. ಆದರೆ ಈಗ ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲೇ ಡ್ರಗ್ಸ್ ತಯಾರಾಗ್ತಿರೋದನ್ನು ಬೆಂಗಳೂರು ಸಿಸಿಬಿ ಪೊಲೀಸರು ರೆಡ್‍ಹ್ಯಾಂಡ್ ಆಗಿ ಹಿಡಿದಿದ್ದಾರೆ.

    ನೈಜೀರಿಯಾ ಪ್ರಜೆ ಜಾನ್ ಎಂಬಾತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಬೆಟ್ಟದಾಸನಪುರದಲ್ಲಿ ಅಕ್ರಮ ಚಟುವಟಿಕೆ ಮಾಡ್ತಿದ್ದ. ಅಕ್ಕಪಕ್ಕದಲ್ಲಿ ಒಳ್ಳೆ ಪರಿಸರ, ಅಲ್ಲೊಂದು ಇಲ್ಲೊಂದು ಮನೆಗಳು ಯಾರಿಗೆ ಯಾರು ಪರಿಚಯವಿಲ್ಲ. ಯಾರೋ ಬಾಡಿಗೆ ಮನೆಯಲ್ಲಿ ವಾಸ ಮಾಡ್ತಾ ಇದ್ದಾರೆ. ಆ ಮನೆಯಲ್ಲಿ ಏನೋ ಕೆಮಿಕಲ್ ತಯಾರು ಮಾಡ್ತಿದ್ದಾರೆ ಅಂತಾ ಸ್ಥಳೀಯರು ಸುಮ್ಮನಾಗಿದ್ದರು. ಇಂತಹದ್ದೇ ಜಾಗ ಹುಡುಕಿದ್ದ ಜಾನ್ ಡ್ರಗ್ಸ್ ರೆಡಿ ಮಾಡ್ತಿದ್ದ.

    ಕೆಲ ದಿನಗಳ ಹಿಂದೆ ಬೆಂಗಳೂರು ಸಿಸಿಬಿ ಪೊಲೀಸರ ಕೈಗೆ ಡ್ರಗ್ಸ್ ಪೆಡ್ಲರ್ ಒಬ್ಬ ಸಿಕ್ಕಿಬಿದ್ದಿದ್ದ. ಈತನನ್ನು ವಿಚಾರಣೆ ನಡೆಸ್ತಾ ಇರೋವಾಗ ಈ ಜಾನ್ ಬಗ್ಗೆ ಬಾಯ್ಬಿಟ್ಟಿದ್ದ. ಆತ ನೀಡಿದ ಮಾಹಿತಿ ಮೇರಗೆ ಎಲೆಕ್ಟ್ರಾನಿಕ್ ಸಿಟಿಯ ಬೆಟ್ಟದಾಸನಪುರಕ್ಕೆ ತೆರಳಿದಾಗ ಬಯಲಾಗಿದೆ. ನಿರ್ಜನ ಏರಿಯಾದ ಒಂಟಿ ಮನೆಯ ಬಾಗಿಲು ತೆಗೆಯುತ್ತಿದ್ದಂತೆ ಪೊಲೀಸರೇ ದಂಗಾಗಿದ್ರು. ಯಾಕಂದ್ರೆ ನೈಜೀರಿಯಾ ಪ್ರಜೆ ಜಾನ್ ಕೆಮಿಕಲ್‍ಗಳನ್ನು ತಂದು ಮನೆಯನ್ನೇ ಲ್ಯಾಬ್ ಮಾಡ್ಕೊಂಡು ಬಹಳ ವ್ಯವಸ್ಥಿತವಾಗಿ ಎಂಡಿಎಂಎ ಮಾತ್ರೆಗಳನ್ನು ತಯಾರು ಮಾಡ್ತಿದ್ದ.

    ಶೂನಲ್ಲಿ ಡ್ರಗ್ಸ್ ಇಟ್ಟು ವಿದೇಶಗಳಿಗೆ ಸರಬರಾಜು!
    ಜಾನ್ ಮಾತ್ರ ದೊಡ್ಡಮಟ್ಟದಲ್ಲಿ ಡ್ರಗ್ಸ್ ತಯಾರು ಮಾಡಿ ಹೈಫೈ ಕಂಪನಿ ಶೂ ಅಡಿಯಲ್ಲಿಟ್ಟು ದೆಹಲಿ ಮತ್ತು ಬೇರೆ ಬೇರೆ ದೇಶಗಳಿಗೆ ಸರಬರಾಜು ಮಾಡ್ತಿದ್ದ. ದಾಳಿ ವೇಳೆ ಸಿಸಿಬಿ ಪೊಲೀಸರು ಬರೋಬ್ಬರಿ 5 ಕೋಟಿಯಷ್ಟು ಮೌಲ್ಯದ ಡ್ರಗ್ಸ್ ನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ತನ್ನನ್ನು ಪೋಷಣೆ ಮಾಡುತ್ತಿಲ್ಲವೆಂದು ಮಗನ ಮನೆ ಮುಂದೆ ತಂದೆ ಪ್ರತಿಭಟನೆ

    2016ರಲ್ಲಿ ಬೆಂಗಳೂರಿಗೆ ಬಂದಿದ್ದ ಜಾನ್ ಕಳೆದ ಒಂದೂವರೆ ತಿಂಗಳ ಹಿಂದೆ ಬೆಟ್ಟದಾಸನಪುರದಲ್ಲಿ ವೃದ್ದ ದಂಪತಿಯೊಬ್ಬರಿಗೆ ಸೇರಿದ ಬಾಡಿಗೆ ಮನೆಯನ್ನು ಪಡೆದಿದ್ದ. ಹೆಚ್ಚಾಗಿ ಹೊರಗಡೆ ಓಡಾಡದ ಜಾನ್, ಅಕ್ಕಪಕ್ಕದವರಿಗೆ ಅನುಮಾನ ಬಾರದ ರೀತಿಯಲ್ಲಿ ರಾತ್ರಿ ಹೊತ್ತಲ್ಲೇ ಡ್ರಗ್ಸ್ ತಯಾರಿ ಕೆಲಸ ಮಾಡ್ತಿದ್ದ. ಒಂದೆರಡು ಬಾರಿ ವೃದ್ಧ ದಂಪತಿ ಮನೆಗೆ ಹೋಗಿದ್ರಾದ್ರು, ಏನೋ ಕೆಮಿಕಲ್ ತಯಾರು ಮಾಡ್ತಿದ್ದಾರೆ ಮಾಡಲಿ ಅಂತಾ ಸುಮ್ಮನಾಗಿದ್ರು. ಪೊಲೀಸರು ದಾಳಿ ಮಾಡಿದಾಗ ವೃದ್ಧ ದಂಪತಿಯೇ ಶಾಕ್ ಆಗಿದ್ದಾರೆ.

    ಬೆಂಗಳೂರಿನಲ್ಲೇ ಈ ರೀತಿ ವ್ಯವಸ್ಥಿತವಾಗಿ ವಿದೇಶಿ ಪ್ರಜೆಯೊಬ್ಬ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಡ್ರಗ್ಸ್ ತಯಾರು ಮಾಡ್ತಿದ್ದಾನೆ ಅನ್ನೋದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಶಾಕ್ ನೀಡಿದೆ. ಜಾನ್ ಕೇವಲ ಡ್ರಗ್ಸ್ ತಯಾರಕ ಮಾತ್ರ ಆಗಿದ್ದಾನೆ. ಅದನ್ನು ಮಾರಾಟ ಮಾಡ್ತಿದ್ದು ಯಾರು..? ಯಾರಿಂದ ಯಾರಿಗೆ ಹೋಗ್ತಿತ್ತು. ಬೆಂಗಳೂರಿನಲ್ಲಿ ಡೀಲ್ ಮಾಡ್ತಿದ್ದು ಯಾರು ಅನ್ನೋ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಚಿಕ್ಕಪ್ಪನ ಜೊತೆಗೆ ಅನೈತಿಕ ಸಂಬಂಧ- ಬರ್ತ್ ಡೇ ಪಾರ್ಟಿಗೆ ತೆರಳ್ತಿದ್ದವಳು ಬರ್ಬರವಾಗಿ ಹೆಣವಾದ್ಳು!

  • ಅವನು ಎಷ್ಟೇ ದೊಡ್ಡವನಾದರೂ ಬಿಡಲ್ಲ: ಅನುಶ್ರೀ

    ಅವನು ಎಷ್ಟೇ ದೊಡ್ಡವನಾದರೂ ಬಿಡಲ್ಲ: ಅನುಶ್ರೀ

    ಬೆಂಗಳೂರು: ನನ್ನ ತಾಯಿ 60 ವರ್ಷ ಮೇಲ್ಪಟ್ಟವರು. ಅವರ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ ಅದು ಯಾವನೇ ಆಗಲಿ, ಎಂತಹವನೇ ಆಗಲಿ, ಎಷ್ಟು ದೊಡ್ಡವನೇ ಆಗಿರಲಿ ಯಾರನ್ನೂ ಬಿಡುವುದಿಲ್ಲ ಎಂದು ನಟಿ, ನಿರೂಪಕಿ ಅನುಶ್ರೀ ಗುಡುಗಿದ್ದಾರೆ.

    ಡ್ರಗ್ಸ್ ಪ್ರಕರಣದ ಕುರಿತು ಮಹಾಲಕ್ಷ್ಮಿ ಲೇಔಟ್ ನಲ್ಲಿರೋ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂಪಲ್ ಲೈಫ್‍ನಲ್ಲಿ ನನ್ನನ್ನು ಯಾರೋ ಟಾರ್ಗೆಟ್ ಮಾಡುತ್ತಿದ್ದಾರೆ. ಯಾಕೆ, ಏನು? ಯಾವುದೂ ನನಗೆ ಗೊತ್ತಿಲ್ಲ. ಆದರೆ ನಾನು ಸತ್ಯವಾಗಿದ್ದೇನೆ, ನಾನು ಹೇಳಿದ್ದೆಲ್ಲ ಸತ್ಯ. ಇದೆಲ್ಲವನ್ನೂ ಮೀರಿ ಟಿವಿಗಳಲ್ಲಿ ಬರುತ್ತಿರುವುದನ್ನು ನಾನು ತುಂಬಾ ಸ್ಟ್ರಾಂಗ್ ಆಗಿ ಹ್ಯಾಂಡಲ್ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಡ್ರಗ್ಸ್ ತೆಗೆದುಕೊಂಡಿಲ್ಲ, 12 ಕೋಟಿ ಮನೆ ಇಲ್ಲ, ಈಗಲೂ ವಿಚಾರಣೆಗೆ ಸಿದ್ಧ: ಅನುಶ್ರೀ

    ಇದೆಲ್ಲವನ್ನೂ ಮೀರಿ ಒಂದು ವಿನಂತಿ. ನನ್ನ ತಾಯಿ 60 ವರ್ಷಕ್ಕೂ ಮೇಲ್ಪಟ್ಟವರು. ಅವರ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ, ನನ್ನ ತಾಯಿಯ ಆರೋಗ್ಯಕ್ಕೆ ಏನಾದರೂ ತೊಂದರೆ ಆದರೆ ಅದು ಯಾವನೇ ಆಗಲಿ, ಅವನು ಎಂತಹವನೇ ಆಗಲಿ, ಎಷ್ಟು ದೊಡ್ಡವನೇ ಆಗಲಿ ನಾನು ಯಾರನ್ನೂ ಬಿಡುವುದಿಲ್ಲ ಎಂದು ವಾರ್ನ್ ಮಾಡಿದ್ದಾರೆ. ಇದನ್ನೂ ಓದಿ: ಮುಂಬೈನಿಂದಲೇ ವಕೀಲರಿಗೆ ಕರೆ ಮಾಡಿ ಅನುಶ್ರೀ ಮಾತುಕತೆ!

    ನಾನು ತುಂಬಾ ಸಿಂಪಲ್ ವ್ಯಕ್ತಿ, ಕೆಲಸಕ್ಕೆ ಹೋಗುತ್ತೇನೆ, ಮರಳಿ ನೇರವಾಗಿ ಮನೆಗೆ ಬರುತ್ತೇನೆ. ಯಾವುದೇ ರೀತಿಯ ಪಾರ್ಟಿ, ಪಬ್‍ಗಳಿಗೆ ಎಲ್ಲೂ ಹೋಗುವುದಿಲ್ಲ. ನಾನಾಯಿತು, ನನ್ನ ಕೆಲಸ ಆಯ್ತು ಎಂದುಕೊಂಡು ಕೆಲಸ ಮುಗಿಸಿ ನೇರವಾಗಿ ಮನೆಗೆ ಬರುತ್ತೇನೆ. ಬೆಳಗ್ಗೆ ರನ್ನಿಂಗ್, ಜಿಮ್ ಗೆ ಹೋಗುತ್ತೇನೆ ಇಷ್ಟೇ ನನ್ನ ಸಿಂಪಲ್ ಲೈಫ್. ಈ ಸಿಂಪಲ್ ಲೈಫ್‍ನಲ್ಲಿ ನನ್ನನ್ನು ಯಾರೋ ಟಾರ್ಗೆಟ್ ಮಾಡುತ್ತಿದ್ದಾರೆ. ಯಾಕೆ, ಏನು? ಯಾವುದೂ ನನಗೆ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.