Tag: Drugs Case

  • ಸಂಜನಾ ಗಲ್ರಾನಿಗೆ ‘ಡ್ರಗ್ಸ್‌’ ಸಂಕಷ್ಟ – ಸುಪ್ರೀಂಗೆ ಮೇಲ್ಮನವಿಗೆ ಪೊಲೀಸರ ಸಿದ್ಧತೆ

    ಸಂಜನಾ ಗಲ್ರಾನಿಗೆ ‘ಡ್ರಗ್ಸ್‌’ ಸಂಕಷ್ಟ – ಸುಪ್ರೀಂಗೆ ಮೇಲ್ಮನವಿಗೆ ಪೊಲೀಸರ ಸಿದ್ಧತೆ

    ಟಿ ಸಂಜನಾ ಗಲ್ರಾನಿಗೆ ಡ್ರಗ್ಸ್‌ ಪ್ರಕರಣದಲ್ಲಿ ಮತ್ತೆ ಸಂಕಷ್ಟ ಎದುರಾಗಿದೆ. ಕೇಸ್‌ ಸಂಬಂಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

    ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ಗಲ್ರಾನಿ ಸಿಲುಕಿದ ಬಳಿಕ ಹೈಕೋರ್ಟ್‌ನಲ್ಲಿ ಪ್ರಕರಣ ರದ್ದು ಮಾಡಿಸಿಕೊಂಡಿದ್ದರು. ಆದರೀಗ, ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್‌ಗೆ ಹೋಗಲು ತಯಾರಿ ಮಾಡಿದೆ. ಬಹುತೇಕ ಈ ತಿಂಗಳ ಅಂತ್ಯದ ಒಳಗಾಗಿ ರದ್ದಾಗಿರೋ ಎಫ್‌ಐಆರ್ ಆದೇಶವನ್ನು ಪ್ರಶ್ನೆ ಮಾಡಲಿದ್ದಾರೆ.

    ನಟಿ ವಿರುದ್ಧ ಮೇಲ್ಮನವಿ ಸಲ್ಲಿಕೆಗೆ ನಿರ್ಧರಿಸಲಾಗಿದೆ. ಹೈಕೋರ್ಟ್‌ನಲ್ಲಿ ಪ್ರಕರಣ ವಜಾ ಬಳಿಕ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ತಯಾರಿ ನಡೆದಿದೆ. ಸಿಸಿಬಿ ಪೊಲೀಸರಿಂದ ಸಂಜನಾ ಅವರನ್ನು ಬಂಧಿಸಲಾಗಿತ್ತು. ಜೈಲಿನಲ್ಲಿ ಇದ್ದು ಜಾಮೀನಿನ ಮೇಲೆ ನಟಿ ಹೊರಗೆ ಬಂದಿದ್ದರು. ಹೀಗಾಗಿ, ಸಂಜನಾ ಗಲ್ರಾನಿ ವಿರುದ್ಧ ಮೇಲ್ಮನವಿ ಸಲ್ಲಿಕೆ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ. ಈಗಾಗಲೇ ಸಭೆ ನಡೆಸಿ ಸರ್ಕಾರದ ಮಟ್ಟದಲ್ಲಿ ಅರ್ಜಿ ತಯಾರಿಯಾಗಿದೆ. ಪ್ರಾಸಿಕ್ಯೂಷನ್ ಅನುಮತಿ ಬರುತ್ತಾ ಇದ್ದಂತೆ ಅರ್ಜಿ ಸಲ್ಲಿಕೆ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ.

  • Drugs Case: ನನ್ನ ಮೇಲೆ ಬೇಕಂತಲೇ ಟಾರ್ಗೆಟ್ ಮಾಡಿದರು- ಕಣ್ಣೀರಿಟ್ಟ ಸಂಜನಾ ಗಲ್ರಾನಿ

    Drugs Case: ನನ್ನ ಮೇಲೆ ಬೇಕಂತಲೇ ಟಾರ್ಗೆಟ್ ಮಾಡಿದರು- ಕಣ್ಣೀರಿಟ್ಟ ಸಂಜನಾ ಗಲ್ರಾನಿ

    ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿಗೆ (Sanjjanaa Galrani) ಡ್ರಗ್ಸ್ ಕೇಸ್‌ನಲ್ಲಿ (Drugs Case) ಬಿಗ್ ರಿಲೀಫ್ ಸಿಕ್ಕಿದೆ. ನಟಿಯ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ. ಈ ಡ್ರಗ್ಸ್ ಪ್ರಕರಣದಲ್ಲಿ ನನ್ನದೇನೂ ತಪ್ಪಿರಲಿಲ್ಲ ಎಂದು ನಟಿ ಸಂಜನಾ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮೇಲೆ ಕೆಲವರು ಟಾರ್ಗೆಟ್ ಮಾಡಿದ್ದಾರೆ ಎಂದು ನಟಿ ಕಣ್ಣೀರಿಟ್ಟಿದ್ದಾರೆ.

    ಈಗ ನಿರಾಳ ಅನ್ನಿಸುತ್ತಿದೆ. ಆದರೂ ಬೇಸರ ಆಗ್ತಿದೆ. ಈ ಪ್ರಕರಣದಲ್ಲಿ ನನ್ನದೇನೂ ತಪ್ಪಿರಲಿಲ್ಲ. ಆದರೂ ಯಾರೂ ಒಬ್ಬರು ನನ್ನ ವೈಯಕ್ತಿಕ ದ್ವೇಷದಿಂದ ಸಿಲುಕುವಂತೆ ಮಾಡಿದರು. ನನ್ನದೇನೂ ತಪ್ಪಿಲ್ಲದೆ ಈ ಪ್ರಕರಣದಲ್ಲಿ ವಿಕ್ವಿಮ್ ಆದೆ ಎಂದಿದ್ದಾರೆ. ಕೆಲವರು ನನ್ನ ಹೆಸರು ಬಳಸಿಕೊಂಡು ಮುಂದಕ್ಕೆ ಹೋಗೋಕೆ ನೋಡಿದರು. ನನ್ನ ಮೇಲೆ ಬೇಕಂತಲೇ ಟಾರ್ಗೆಟ್ ಮಾಡಿದರು. ಬರೀ ಮಾತಲ್ಲಿ ಒಬ್ಬ ನನ್ನ ಹೆಸರು ಹೇಳಿದ ಅದಕ್ಕೆ ಅಲ್ವೇ ಇವತ್ತು ಈ ಕೇಸ್ ರದ್ದು ಆಗಿದ್ದು ಎಂದು ಸಂಜನಾ ಗಲ್ರಾನಿ ಮಾತನಾಡಿದ್ದಾರೆ.

    ನಾನಂತೂ ಈ ಪ್ರಕರಣ ಆದ್ಮೇಲೆ ಸಾಕಷ್ಟು ನೋವು ಅನುಭವಿಸಿದೆ. ಅದು ಯಾವತ್ತೂ ಹೋಗಲ್ಲ. ದೇವರ ದಯೆ ಒಳ್ಳೆಯ ಕುಟುಂಬ ಕೊಟ್ಟಿದ್ದಾರೆ. ಕೃಷ್ಣನಂತ ಮಗನ ಕೊಟ್ಟ ಈ ಪ್ರಕರಣ ಆದ್ಮೇಲೆ ನನಗೆ ಸಿನಿಮಾ ಅವಕಾಶವೂ ಇರಲಿಲ್ಲ. ಸಂಭಾವನೆ ವಿಚಾರ ಮಾತನಾಡಿದ್ರೆ ಡ್ರಗ್ಸ್ ಕೇಸ್‌ನಲ್ಲಿ ಇದ್ರಿ ನೋವು ಅಂತ ಮಾತನಾಡ್ತಾರೆ ಎಂದು ಸಂಜನಾ ಭಾವುಕರಾದರು. ಇದನ್ನೂ ಓದಿ:‘ಇಂಡಿಯನ್ 2’ ಬಜೆಟ್ ಮೀರಲು ಕಾರಣ ತಿಳಿಸಿದ ಕಮಲ್ ಹಾಸನ್

    ನನ್ನನ್ನು ಬರೀ ಟ್ರೋಲ್ ಮಾಡ್ತಿದ್ರು. ಕೆಟ್ಟದಾಗಿ ನಿಂದಿಸುತ್ತಿದ್ದರು. ಈಗ ಡ್ರಗ್ಸ್ ಪ್ರಕರಣದ ಬಗ್ಗೆ ಸತ್ಯ ಗೊತ್ತಾಗಿದೆ. ನನಗೆ ಈ ಬಗ್ಗೆ ನೆನಪು ಮಾಡ್ಕೊಂಡು ಮಾತಾಡೋಕೆ ಇಷ್ಟ ಇಲ್ಲ. ತಾಳ್ಮೆಯಿಂದ ಕಾದಿದ್ದಕ್ಕೆ ನ್ಯಾಯ ಸಿಕ್ಕಿದೆ. ನನ್ನನ್ನು ಟ್ರೋಲ್ ಮಾಡಬೇಡಿ. ಒಂದು ಮೆಸೇಜ್, ಟ್ರೋಲ್‌ನಿಂದ ಏನಾಗುತ್ತೆ ಅನ್ನೋದಕ್ಕೆ ರೇಣುಕಾಸ್ವಾಮಿ ಕೊಲೆ ಪ್ರಕರಣವೇ ಸಾಕ್ಷಿ ಎಂದು ಸಂಜನಾ ಮಾತನಾಡಿದ್ದಾರೆ.

    ನನ್ನ ಕಷ್ಟದ ಸಮಯದಲ್ಲಿ ಯಾರೂ ಬರಲಿಲ್ಲ. ಈಗ ನೆನಪಿಸಿಕೊಂಡರೂ ನೋವಾಗುತ್ತೆ. ಅಂದು ನಮ್ಮ ಮನೆಯಲ್ಲಿ ಒಂದು ಬಿಯರ್ ಬಾಟಲ್ ಕೂಡ ಸಿಕ್ಕಿರಲಿಲ್ಲ. ಸಿಗರೇಟು ಸಿಕ್ಕಿರಲಿಲ್ಲ. ಆದರೆ ಅದರಲ್ಲಿ ನನ್ನ ವಿಕ್ಟಿಮ್ ಮಾಡಲಾಯ್ತು ಎಂದು ಕಣ್ಣೀರು ಸುರಿಸಿದ ಸಂಜನಾ. ನನ್ನನ್ನು ಜನ ಎಷ್ಟು ಟ್ರೋಲ್ ಮಾಡಿದ್ರು ಅಂದರೆ ಮುಸ್ಲಿಂನ ಮದುವೆ ಆಗಿದ್ದಕ್ಕೂ ಟ್ರೋಲ್ ಮಾಡಿದರು ಎಂದು ಸಂಜನಾ ಖಡಕ್ ಆಗಿ ಮಾತನಾಡಿದ್ದಾರೆ.

    ಅಂದಹಾಗೆ, `ಗಂಡ ಹೆಂಡತಿ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಬಹುಭಾಷಾ ನಟಿಯಾಗಿ 50ಕ್ಕೂ ಸಿನಿಮಾದಲ್ಲಿ ಸಂಜನಾ ನಟಿಸಿದ್ದಾರೆ.

  • ಡ್ರಗ್ಸ್ ಪ್ರಕರಣ ನಟಿ ಹೇಮಾಗೆ 2ನೇ ನೋಟಿಸ್ : ಜೂ.1ಕ್ಕೆ ಹಾಜರಾಗಲು ಸೂಚನೆ

    ಡ್ರಗ್ಸ್ ಪ್ರಕರಣ ನಟಿ ಹೇಮಾಗೆ 2ನೇ ನೋಟಿಸ್ : ಜೂ.1ಕ್ಕೆ ಹಾಜರಾಗಲು ಸೂಚನೆ

    ಚಿತ್ರರಂಗದಲ್ಲಿ ರೇವ್ ಪಾರ್ಟಿ (Rave Party) ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಬಳಿಯ ಫಾರ್ಮ್ ಹೌಸ್‌ನಲ್ಲಿ ರೇವ್ ಪಾರ್ಟಿಯಲ್ಲಿ ಸೇರಿದ್ದ ಅನೇಕರನ್ನು ಸಿಸಿಬಿ ವಶಕ್ಕೆ ಪಡೆದುಕೊಂಡಿತ್ತು. ರೇವ್ ಪಾರ್ಟಿಯಲ್ಲಿ ಹೇಮಾ (Actress Hema) ಕೂಡ ಇದ್ದರು ಎಂದು ಪೊಲೀಸ್ ಕಮಿಷನರ್ ಕೂಡ ಸ್ಪಷ್ಟನೆ ನೀಡಿದ್ದರು. ತನಿಖೆ ಕೂಡ ಬಿರುಸಿನಿಂದ ನಡೆಯುತ್ತಿದೆ. ಈಗಾಗಲೇ ಅವರಿಗೆ 2ನೇ ನೋಟಿಸ್ ನೀಡಲಾಗಿದೆ. ಜೂನ್ 1ಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

    ಈ ನಡುವೆ ನಟಿ ಹೇಮಾ ಪರವಾಗಿ ತೆಲುಗು ಕಲಾವಿದರ ಸಂಘದ ಅಧ್ಯಕ್ಷ ವಿಷ್ಣು ಮಂಚು (Vishnu Manchu) ನಿಂತಿದ್ದಾರೆ. ಹೇಮಾರನ್ನು ಬೆಂಬಲಿಸಿ ಎಕ್ಸ್‌ನಲ್ಲಿ ವಿಷ್ಣು ಮಂಚು ಪೋಸ್ಟ್‌ವೊಂದು ಶೇರ್ ಮಾಡಿದ್ದಾರೆ. ಇತ್ತೀಚೆಗೆ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆಯಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಮಾಧ್ಯಮಗಳು ನಟಿ ಹೇಮಾ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿವೆ. ಯಾರೂ ಸಹ ಈಗಲೇ ನಿರ್ಧಾರಕ್ಕೆ ಬಂದು ಸತ್ಯವಲ್ಲದ ವರದಿಗಳನ್ನು ಇತರರಿಗೆ ಹಂಚಿಕೊಳ್ಳುವುದು ಬೇಡ ಎಂದು ಮನವಿ ಮಾಡಿದ್ದಾರೆ.

    ‘ಹೇಮಾ ಮೇಲಿನ ಆರೋಪಗಳು ಸಾಬೀತಾಗುವವರೆಗೂ ಅವರು ನಿರಪರಾಧಿ. ಆಕೆ ಒಬ್ಬ ತಾಯಿ, ಹೆಂಡತಿ ಹಾಗೂ ಮಹಿಳೆ ಅದರ ಬಗ್ಗೆಯೂ ನಾವು ಯೋಚಿಸಬೇಕಿದೆ. ಆಕೆಯ ವ್ಯಕ್ತಿತ್ವದ ಬಗ್ಗೆ ಕೆಲ ಹೇಳಿಕೆಗಳನ್ನು ಪಾಸ್ ಮಾಡುವುದು ಸೂಕ್ತವಲ್ಲ. ಮೂವಿ ಆರ್ಟಿಸ್ಟ್ ಅಸೋಸಿಯೇಷನ್ ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳನ್ನು ವಿರೋಧಿಸುತ್ತದೆ. ಹೇಮಾ ಅವರ ವಿರುದ್ಧ ಪೊಲೀಸರು ಘನವಾದ ಸಾಕ್ಷಿಯನ್ನು ಸಾಭೀತುಪಡಿಸಿದರೆ ಕಲಾವಿದರ ಸಂಘವು ಹೇಮಾ ವಿರುದ್ಧ ಶಿಸ್ತು ಕ್ರಮವನ್ನು ಜರುಗಿಸಲಿದೆ. ಆದರೆ ಅಲ್ಲಿಯವರೆಗೆ ದಯವಿಟ್ಟು ಈ ವಿಷಯದ ಬಗ್ಗೆ ಚರ್ಚೆ ಬೇಡ ಎಂದಿದ್ದಾರೆ. ಈ ಮೂಲಕ ನಟಿ ಹೇಮಾ ಪರವಾಗಿ ವಿಷ್ಣು ಮಂಚು ಬೆಂಬಲಕ್ಕೆ ನಿಂತಿದ್ದಾರೆ.

     

    ಅಂದಹಾಗೆ, ಹೇಮಾ ಸುಮಾರು 250 ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಟಾರ್ ನಟರ ಚಿತ್ರಗಳಲ್ಲಿ ಖಾಯಂ ಪೋಷಕ ನಟಿಯಾಗಿ ಹೇಮಾ ಕೆಲಸ ಮಾಡಿದ್ದಾರೆ. ಕನ್ನಡದಲ್ಲೂ ಆಕ್ಟ್ ಮಾಡಿದ್ದ ಹೇಮಾ 2014ರಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ ‘ಪವರ್’ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ವಿನಯ ವಿಧೇಯ ರಾಮ, ಸನ್ ಆಫ್ ಸತ್ಯಮೂರ್ತಿ, ಡಿಕ್ಟೇಟರ್, ಅತ್ತಾರಿಂಟಿಕಿ ದಾರೇದಿ, ಮಿರ್ಚಿ, ರಭಸ, ಬೃಂದಾವನಂ, ರೆಬೆಲ್, ಜುಲಾಯ್, ಮಗಧೀರ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

  • ಬಲವಂತವಾಗಿ ನಟ ನವದೀಪ್ ಅವರನ್ನು ಬಂಧಿಸುವಂತಿಲ್ಲ : ಹೈಕೋರ್ಟ್

    ಬಲವಂತವಾಗಿ ನಟ ನವದೀಪ್ ಅವರನ್ನು ಬಂಧಿಸುವಂತಿಲ್ಲ : ಹೈಕೋರ್ಟ್

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗಿನ ಖ್ಯಾತ ನಟ ನವದೀಪ್ ಅವರನ್ನು ಬಂಧಿಸಲು ತೆಲಂಗಾಣ ಪೊಲೀಸರು ಸಿದ್ಧತೆ ನಡೆಸಿದ್ದರು. ಮಾದಾಪುರ (Madapur) ಡ್ರಗ್ಸ್ ಕೇಸ್ ನ 37ನೇ ಆರೋಪಿ ಆಗಿದ್ದ ಇವರ ಬಂಧನಕ್ಕೆ (Arrest) ಅಧಿಕಾರಿಗಳು ಬಲೆ ಬೀಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆಯೇ ಈಗಾಗಲೇ ವಿಚಾರಣೆಗೂ ಒಳಗಾಗಿರುವ ನವದೀಪ್‍ ತಲೆಮರೆಸಿಕೊಂಡಿದ್ದರು. ಜೊತೆಗೆ ತೆಲಂಗಾಣ ಹೈಕೋರ್ಟಿಗೆ (High Court) ನಿರೀಕ್ಷಣಾ ಜಾಮೀನಿಗೆ ಅರ್ಜಿ ಕೂಡ ಸಲ್ಲಿದ್ದರು.

    ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ಮಾನ್ಯ ತೆಲಂಗಾಣ ಉಚ್ಛ ನ್ಯಾಯಾಲಯವು ಬಲವಂತವಾಗಿ ನವದೀಪ್ ಅವರನ್ನು ಬಂಧಿಸುವಂತಿಲ್ಲ ಎಂದು ಆದೇಶ ನೀಡಿದೆ. ಜೊತೆಗೆ ಅವರನ್ನು ವಿಚಾರಣೆಗೆ ಕರೆಯಬಹುದು ಮತ್ತು ಪರೀಕ್ಷೆಗೂ ಒಳಪಡಿಸಬಹುದು. ಆದರೆ, ಈ ನೆಪದಲ್ಲಿ ಅವರನ್ನು ಬಂಧಿಸುವಂತಿಲ್ಲ ಎಂದು ಹೇಳಿದೆ. ಇದನ್ನೂ ಓದಿ:ಆ ನೋವು ಎಂದಿಗೂ ಕಮ್ಮಿಯಾಗಲ್ಲ- ವೈಯಕ್ತಿಕ ವಿಚಾರದ ಬಗ್ಗೆ ಭಾವನಾ ಭಾವುಕ

    ಮೊನ್ನೆಯಷ್ಟೇ ನವದೀಪ್ (Navdeep) ಮನೆಯ ಮೇಲೆ ಡ್ರಗ್ಸ್ (Drugs) ನಿಗ್ರಹ ದಳದ ಅಧಿಕಾರಿಗಳು ದಾಳಿ ಮಾಡಿದ್ದರು. ಈ ಹಿಂದೆ ಹೋಟೆಲ್ ವೊಂದರ ಮೇಲೆ ದಾಳಿ ಮಾಡಿದ್ದ ಅಧಿಕಾರಿಗಳು ನಿರ್ಮಾಪಕನೂ ಸೇರಿದಂತೆ ಹಲವರನ್ನು ಬಂಧಿಸಿದ್ದರು. ಈ ವೇಳೆ ನವದೀಪ್ ಕೂಡ ಇದ್ದಾರೆ ಎಂದು ಹೇಳಲಾಗಿತ್ತು.

     

    ಕೇವಲ ತೆಲುಗು ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಮಲಯಾಳಂ ಚಿತ್ರರಂಗದಲ್ಲೂ ಈ ವಿಷಗಾಳಿ ಬೀಸಿದೆ. ಸ್ವತಃ ಕೇರಳದ ಕಮಿಷ್ನರ್ ಪತ್ರಿಕಾಗೋಷ್ಠಿ ನಡೆಸಿ, ಶೂಟಿಂಗ್ ನಡೆಯುವ ಸ್ಥಳದಲ್ಲೇ ಪರಿಶೀಲನೆ ಮಾಡಲಾಗುವುದು ಎಂದು ಎಚ್ಚರಿಸಿದ್ದರು. ಕೆಲ ನಟರು ಶೂಟಿಂಗ್ ಸ್ಥಳದಲ್ಲೇ ಡ್ರಗ್ಸ್ ಸೇವಿಸಿದ್ದರ ಬಗ್ಗೆ ದೊಡ್ಡ ಮಟ್ಟದಲ್ಲೂ ಚರ್ಚೆ ನಡೆದಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗ್ಳೂರಿನ ಬಾಡಿಗೆ ಮನೆಯಲ್ಲಿದ್ದುಕೊಂಡೇ ಡ್ರಗ್ಸ್ ಸಪ್ಲೈ ಮಾಡ್ತಿದ್ದ ನೈಜೀರಿಯನ್ ಪ್ರಜೆ ಅರೆಸ್ಟ್!

    ಬೆಂಗ್ಳೂರಿನ ಬಾಡಿಗೆ ಮನೆಯಲ್ಲಿದ್ದುಕೊಂಡೇ ಡ್ರಗ್ಸ್ ಸಪ್ಲೈ ಮಾಡ್ತಿದ್ದ ನೈಜೀರಿಯನ್ ಪ್ರಜೆ ಅರೆಸ್ಟ್!

    ಬೆಂಗಳೂರು: ನಗರದಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡೇ (Rented House) ಅಕ್ರಮವಾಗಿ ಡ್ರಗ್ಸ್ ಸಪ್ಲೈ ಮಾಡ್ತಿದ್ದ ನೈಜೀರಿಯನ್ (Nigerian) ಪ್ರಜೆಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ಸ್ (Drugs) ಸಪ್ಲೈ ಮಾಡುತ್ತಾ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಈತ ಕೊನೆಗೂ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ.

    ಮೋಸ್ಟ್ ವಾಂಟೆಡ್ ನೈಜೀರಿಯನ್ ಪ್ರಜೆ ಜಾನ್ ಬಂಧಿತ ಆರೋಪಿ. ಮನೆಯಲ್ಲಿದ್ದ ಸಿಲಿಂಡರ್ ತಳದಲ್ಲೇ ಡ್ರಗ್ಸ್ ಸ್ಟೋರೇಜ್ ಮಾಡಿದ್ದ ಕಿಲಾಡಿ, ಕಚ್ಚಾ ವಸ್ತುವಿನಿಂದ ಕ್ಲಾಸಿ ಡ್ರಗ್ಸ್ ತಯಾರಿಸಿ ಮಾರಾಟ ಮಾಡುತ್ತಿದ್ದ. ಕೊನೆಗೂ ಚಾಲಾಕಿಯನ್ನ ಬಂಧಿಸುವಲ್ಲಿ ವಿವಿ ಪುರಂ ಪೊಲೀಸರು ಯಶಸ್ವಿಯಾಗಿದ್ದಾರೆ. ಭರ್ಜರಿ ಬೇಟೆಯಾಡಿರುವ ಪೊಲೀಸರು 2 ಕೋಟಿ ಮೌಲ್ಯದ 1 ಕೆಜಿ ಎಂಡಿಎಂಎ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

    ಆರ್.ಟಿ ನಗರ ಠಾಣಾ ವ್ಯಾಪ್ತಿಯಲ್ಲಿ ಬಾಡಿಗೆಮನೆ ಪಡೆದಿದ್ದ ಜಾನ್ ಖುದ್ದು ತಾನೇ ಡ್ರಗ್ಸ್ ತಯಾರಿಸುತ್ತಿದ್ದ. ಶುದ್ಧ ಕಚ್ಛಾವಸ್ತುಗಳನ್ನ ಬಳಸಿ ಎಂಡಿಎಂಎ ಪೌಡರ್ ತಯಾರಿಸಿ ಮಾರಾಟ ಮಾಡ್ತಿದ್ದ. ಅದನ್ನ ಮನೆಯಲ್ಲೇ ಸಿಲಿಂಡರ್ ಕೆಳಗೆ ಸ್ಟೋರೆಜ್ ಮಾಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ವಿವಿ ಪುರಂ ಪೊಲೀಸರು (VV Puram Police) ಏಕಾಏಕಿ ದಾಳಿ ನಡೆಸಿದ್ದಾರೆ.

    ಪೊಲೀಸರು ದಾಳಿ ಮಾಡುತ್ತಿದ್ದಂತೆ ಆರೋಪಿ ಡ್ರಗ್ಸ್ ಪ್ಯಾಕೆಟ್‌ಗಳನ್ನ ಬಾತ್‌ರೂಮಿನಲ್ಲಿ ಹಾಕಿ ಫ್ಲೆಷ್ ಮಾಡಿ ಎಸ್ಕೇಪ್ ಆಗೋದಕ್ಕೆ ಪ್ರಯತ್ನಿಸಿದ್ದಾನೆ. ಕಿಟಕಿ ಮೂಲಕ ಜಂಪ್ ಮಾಡಿ ಪೈಪ್ ಮೂಲಕ ಮಹಡಿಯಿಂದ ಇಳಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಚಾಣಾಕ್ಷತೆ ಮೆರೆದ ಪೊಲೀಸರು ಆರೋಪಿಯ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧನದ ಬಳಿಕ ಜಾನ್, ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿ ಡ್ರಗ್ಸ್ ತಯಾರು ಮಾಡುತ್ತಿರೋದು ಬೆಳಕಿಗೆ ಬಂದಿದೆ. ಎಂಡಿಎಂಎ ತಯಾರು ಮಾಡಿ ಹೋಲ್‌ಸೇಲ್ ದರದಲ್ಲಿ ಮಾರಾಟ ಮಾಡ್ತಿದ್ದ. ಗೋವಾ ಹಾಗೂ ಮಹಾರಾಷ್ಟ್ರೀಯ ಕಡೆಯಿಂದ ಶುದ್ಧ ಕಚ್ಛಾ ವಸ್ತುಗಳನ್ನ ತರಿಸಿಕೊಂಡು ಎಂಡಿಎಂಎ ತಯಾರು ಮಾಡ್ತಿದ್ದ ಅನ್ನೋದು ಗೊತ್ತಾಗಿದೆ. ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಲು ಯುವಕರ ಹುಚ್ಚಾಟ – ಪೊಲೀಸರಿಂದ ತಕ್ಕ ಪಾಠ

    ಈ ಸಂಬಂಧ ಕೇಸ್ ದಾಖಲಿಸಿಕೊಂಡಿರುವ ವಿವಿ ಪುರಂ ಪೊಲೀಸರು ಆರೋಪಿಗೆ ಸೆಲಬ್ರಿಟೀಸ್ ಅಥವಾ ಪಾರ್ಟಿಗಳ ಸಂಪರ್ಕ ಇದೆಯಾ ಎಂಬುದರ ಬಗ್ಗೆ ತನಿಖೆ ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಬ್ಯಾನರ್‌ ಕಟ್ಟುತ್ತಿದ್ದಾಗ ವಿದ್ಯುತ್‌ ಶಾಕ್‌ – ನಟ ಸೂರ್ಯನ ಅಭಿಮಾನಿಗಳು ಸಾವು!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡ್ರಗ್ಸ್ ಪ್ರಕರಣದ ಸಂಕಷ್ಟ: ನಟಿ ಅಶು ರೆಡ್ಡಿ ಫೋನ್ ನಂಬರ್ ಲೀಕ್

    ಡ್ರಗ್ಸ್ ಪ್ರಕರಣದ ಸಂಕಷ್ಟ: ನಟಿ ಅಶು ರೆಡ್ಡಿ ಫೋನ್ ನಂಬರ್ ಲೀಕ್

    ಕಾಲಿವುಡ್ (Kollywood) ನಟಿ ಅಶು ರೆಡ್ಡಿ ( ಹೆಸರು ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಕೇಳಿ ಬಂದಿತ್ತು. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆಗಿರುವ ಕಬಾಲಿ (Kabali) ಸಿನಿಮಾ ಖ್ಯಾತಿಯ ನಿರ್ಮಾಪಕ ಕೆ.ಪಿ ಚೌಧರಿ ಜೊತೆ ಅಶು ರೆಡ್ಡಿ ಸೇರಿದಂತೆ ಹಲವರು ನಿರಂತರ ಸಂಪರ್ಕದಲ್ಲಿದ್ದರು ಎನ್ನುವ ಮಾಹಿತಿಯನ್ನು ಪೊಲೀಸರು ಹೊರ ಹಾಕಿದ್ದರು. ಚೌಧರಿ ಜೊತೆ ಸಂಪರ್ಕದಲ್ಲಿರುವ ಫೋನ್ ನಂಬರ್ ಅನ್ನು ಪೊಲೀಸರು ವರದಿಯಲ್ಲಿ ಉಲ್ಲೇಖಿಸಿ ಬಿಡುಗಡೆ ಮಾಡಿದ್ದರು. ಈ ವರದಿಯೇ ಅಶುಗೆ ಮುಳುವಾಗಿದೆ.

    ಅಶು ರೆಡ್ಡಿ (Ashu Reddy)) ಫೋನ್ ನಂಬರ್ ಇರುವ ವರದಿಯನ್ನು ಬಿಡುಗಡೆ ಮಾಡಿದ್ದರಿಂದ ಅಶು ರೆಡ್ಡಿ ನಂಬರ್ ಎಲ್ಲ ಕಡೆ ಸಿಗುತ್ತಿದೆ. ಕೆಲವರು ಆ ವರದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರಿಂದ ಅಶು ರೆಡ್ಡಿ ನಂಬರ್ ಬಹುತೇಕರಿಗೆ ಸಿಕ್ಕಿದೆ. ದಿನಕ್ಕೆ ಸಾವಿರಾರು ಕರೆಗಳನ್ನು ಅಶು ಸ್ವೀಕರಿಸುವಂತಾಗಿದೆ. ಇದನ್ನೂ ಓದಿ: ಹೃದಯ ಕಿತ್ತು ಎದೆಗೆ ಹಚ್ಚಿಕೊಂಡು ಪಾರ್ಟಿಗೆ ಬಂದ ಉರ್ಫಿ ಜಾವೇದ್

    ಈ ಕುರಿತು ವಿಡಿಯೋ ಮಾಡಿರುವ ಅಶು ರೆಡ್ಡಿ, ಈ ಕೇಸಿಗೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಹೆಸರು ಮತ್ತು ಫೋನ್ ನಂಬರ್ ಅನ್ನು ರಿಲೀಸ್ (Number Leak) ಮಾಡಿದ್ದರಿಂದ ನನಗೆ ಸಾವಿರಾರು ಕರೆಗಳು ಬರುತ್ತಿವೆ. ಆತಂಕವಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ತಾವು ವಿದೇಶದಲ್ಲಿ ಇರುವುದಾಗಿಯೂ ತಿಳಿಸಿರುವ ಅವರು, ಬೇಕಾಬಿಟ್ಟಿ ತಮ್ಮ ಬಗ್ಗೆ ಸುದ್ದಿ ಮಾಡುತ್ತಿರುವವರ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿಯೂ ಅವರು ತಿಳಿಸಿದ್ದಾರೆ.

    ಅಶು ರೆಡ್ಡಿ ಇಷ್ಟು ದಿನ ಗ್ಲ್ಯಾಮರಸ್ ಫೋಟೋ ಮೂಲಕ ಗಮನ ಸೆಳೆಯುತ್ತಿದ್ದ ಅವರು ಈಗ ಡ್ರಗ್ ಕೇಸ್ ಮೂಲಕ ಸುದ್ದಿ ಆಗಿದ್ದಾರೆ. ರಜನಿಕಾಂತ್ ನಟನೆಯ ‘ಕಬಾಲಿ’ ಚಿತ್ರದ ನಿರ್ಮಾಪಕ ಕೆಪಿ ಚೌಧರಿ (KP Chaudhary) ಅವರು ಡ್ರಗ್ (Drugs) ಕೇಸ್‌ನಲ್ಲಿ ಅಂದರ್ ಆಗಿದ್ದಾರೆ. ಅಶು ರೆಡ್ಡಿ ಜೊತೆ ಅವರು ನೂರಾರು ಬಾರಿ ಫೋನ್ ಮೂಲಕ ಮಾತನಾಡಿದ್ದರು ಎನ್ನುವ ವಿಚಾರ ರಿವೀಲ್ ಆಗಿದೆ. ಡ್ರಗ್ ಮಾರಾಟ ಮಾಡುವ ವ್ಯಕ್ತಿಯ ಜೊತೆ ಇಷ್ಟೊಂದು ದೂರವಾಣಿ ಕರೆ ಏಕೆ ಎನ್ನುವ ಪ್ರಶ್ನೆ ಪೊಲೀಸರಲ್ಲಿ ಮೂಡಿದೆ.

     

    ಅಶು ರೆಡ್ಡಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ತೆಲುಗಿನ ಬಿಗ್ ಬಾಸ್‌ನಲ್ಲಿ (Bigg Boss Telagu) ಗಮನ ಸೆಳೆದ ಅಶು ರೆಡ್ಡಿಗೆ ಟಿವಿ ಶೋ ಮೂಲಕ ಜನಪ್ರಿಯತೆ ಪಡೆದರು. ಈಗ ಅವರ ಹೆಸರು ಡ್ರಗ್ಸ್ ಕೇಸ್‌ನಲ್ಲಿ ಅವರ ಹೆಸರು ಕೇಳಿ ಬಂದಿದೆ. ಕಬಾಲಿ ನಿರ್ಮಾಪಕ ಅವರು ನೇರವಾಗಿ ಅಶು ರೆಡ್ಡಿ ಬಗ್ಗೆ ಆರೋಪ ಮಾಡಿಲ್ಲ. ಇವರ ಮಧ್ಯೆ ಲಿಂಕ್ ಇರೋದು ವಿಚಾರಣೆ ವೇಳೆ ಗೊತ್ತಾಗಿದೆ. ಅವರ ಬಳಿ ಇದ್ದ ಮೂರು ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೆಪಿ ಚೌಧರಿ ಅವರ ಒಂದು ಮೊಬೈಲ್‌ನಿಂದ ಅಶು ರೆಡ್ಡಿಗೆ ನೂರಾರು ಬಾರಿ ಫೋನ್ ಕಾಲ್ ಹೋಗಿದೆ. ಇದು ಏಕೆ ಎಂಬ ಪ್ರಶ್ನೆ ಮೂಡಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಡ್ರಗ್ಸ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ದ ನಟಿ ಕ್ರಿಸನ್ ಪಿರೇರಾ ರಿಲೀಸ್

    ಡ್ರಗ್ಸ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ದ ನಟಿ ಕ್ರಿಸನ್ ಪಿರೇರಾ ರಿಲೀಸ್

    ಳೆದ ವಾರವಷ್ಟೇ ಡ್ರಗ್ಸ್ ಕೇಸ್ ನಲ್ಲಿ ಬಂಧಿತರಾಗಿದ್ದ ಬಾಲಿವುಡ್ ನಟಿ ಕ್ರಿಸನ್ ಪಿರೇರಾ (chrisann pereira) ಬಿಡುಗಡೆ ಆಗಿದ್ದಾರೆ. ಡ್ರಗ್ಸ್ ಕೇಸ್ (Drugs Case) ಗೆ ಸಂಬಂಧಿಸಿದಂತೆ ಈ ನಟಿಯನ್ನು ಯುಎಇ ಪೊಲೀಸರು ಬಂಧಿಸಿ ಶಾರ್ಜಾ ಸೆಂಟ್ರಲ್ ಜೈಲಿಗೆ ಕಳುಹಿಸಿದ್ದರು. ಏಪ್ರಿಲ್ 1 ರಂದೇ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿತ್ತು. ಟ್ರೋಫಿ ಒಳಗೆ ಡ್ರಗ್ಸ್ ಸಾಗಿಸುತ್ತಿದ್ದರು ಎನ್ನುವ ಕಾರಣದಿಂದಾಗಿ ಪೊಲೀಸರು ಅವರನ್ನು ಬಂಧಿಸಿದ್ದರು.

    ಈ ಡ್ರಗ್ಸ್ ಕೇಸ್ ಕುರಿತಂತೆ ಮುಂಬೈನಲ್ಲೂ ತನಿಖೆ ನಡೆಸಿದ್ದ ಮುಂಬೈ ಪೊಲೀಸರು ಅಚ್ಚರಿಯ ಮಾಹಿತಿಯನ್ನು ಹೊರ ಹಾಕಿದ್ದರು. ಇದೊಂದು ಷಡ್ಯಂತರ, ಆ ನಟಿಯ ನೆರೆಮನೆಯಾತನ ಕುತಂತ್ರದಿಂದಾಗಿ ಅವರು ಜೈಲು ಸೇರಿದ್ದಾರೆ ಎಂದು ತಿಳಿಸಿದ್ದರು. ಈ ಸಂಬಂಧ ಪಿರೇರಾ ನೆರೆಮನೆಯಾತ ಹಾಗೂ ಬೇಕರಿ ಮಾಲೀಕನೂ ಆಗಿರುವ ಆಂಟೋನಿ ಪಾಲ್ (Antony Paul) ಮತ್ತು ಬ್ಯಾಂಕ್ ವೊಂದರ ಅಸಿಸ್ಟೆಂಟ್ ಮ್ಯಾನೇಜರ್ ರಾಜೇಶ್ ಬೋಭಟೆ (Rajesh Bobate) ಎನ್ನುವವರನ್ನು ಪೊಲೀಸರು ಬಂಧಿಸಿದ್ದರು.

    ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯ ಪ್ರಕಾರ ಕ್ರಿಸನ್ ಮತ್ತು ಬಂಧಿತ ಆಂಟೋನಿ ಮುಂಬೈನ ಒಂದೇ ಕಟ್ಟಡದ ನಿವಾಸಿಗಳು. ನಾಯಿ ವಿಚಾರಕ್ಕಾಗಿ ಎರಡು ಕುಟುಂಬಗಳ ನಡುವೆ ಕಿತ್ತಾಟ ನಡೆದಿದೆ. ಅಪಮಾನಗೊಂಡ ಆಂಟೋನಿ ಬುದ್ದಿ ಕಲಿಸಲೆಂದೇ ಕ್ರಿಸನ್ ಶಾರ್ಜಾ ಟಿಕೆಟ್ ಮಾಡಿಸಿ, ಟ್ರೋಫಿಯಲ್ಲಿ ಡ್ರಗ್ಸ್ ಇಟ್ಟು, ಅವರೇ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಹೇಳಲಾಗಿತ್ತು. ಅಲ್ಲದೇ ವಾಪಸ್ಸು ಕ್ರಿಸನ್ ಭಾರತಕ್ಕೆ ಬರಲು ನಕಲಿ ಟಿಕೆಟ್ ಕೂಡ ಮಾಡಿಸಿದ್ದ ಎಂದು ಮಾಹಿತಿ ಲಭ್ಯವಾಗಿತ್ತು. ಅದೆಲ್ಲವೂ ನಿಜವಾದ ಹಿನ್ನೆಲೆಯಲ್ಲಿ ನಟಿಯನ್ನು ಶಾರ್ಜಾ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ:ನಾನು ಮಾತಾಡಿದರೆ ಸಮಂತಾ ಕಥೆ ಅಷ್ಟೆ: ಮತ್ತೆ ಗುಡುಗಿದ ಚಿಟ್ಟಿ ಬಾಬು

    ಕ್ರಿಸನ್ ಪಿರೇರಾ ಸಿನಿಮಾ ಹಾಗೂ ವೆಬ್ ಸಿರೀಸ್ ನ ನಟಿ. ಹಾಗಾಗಿ ಶಾರ್ಜಾದಲ್ಲಿ ವೆಬ್ ಸಿರೀಸ್ ಆಡಿಷನ್ ಇದೆ ಎಂದು ಬಂಧಿತರು ಸುಳ್ಳು ಹೇಳಿದ್ದರು. ಅಲ್ಲಿಗೆ ಟ್ರೋಫಿ ತಗೆದುಕೊಂಡು ಹೋಗಲು ತಿಳಿಸಿದ್ದರು. ಆ ಟ್ರೋಫಿಯಲ್ಲಿ ಡ್ರಗ್ಸ್ ಇಟ್ಟಿದ್ದ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಶಾರ್ಜಾ ವಿಮಾನ ನಿಲ್ದಾಣಕ್ಕೆ ಕ್ರಿಸನ್ ಬರುತ್ತಿದ್ದಂತೆಯೇ ಪೊಲೀಸರು ನಟಿಯನ್ನು ಬಂಧಿಸಿದ್ದರು. ಈಗ ಪ್ರಕರಣ ಸುಖಾಂತ್ಯಗೊಂಡಿದೆ.

  • ಜೈಲು ಪಾಲಾದ ಬಾಲಿವುಡ್ ನಟಿ ಕ್ರಿಸನ್ : ಡ್ರಗ್ಸ್ ಕೇಸ್ ಹಿಂದಿದೆ ಸೇಡಿನ ಪ್ರತೀಕಾರ?

    ಜೈಲು ಪಾಲಾದ ಬಾಲಿವುಡ್ ನಟಿ ಕ್ರಿಸನ್ : ಡ್ರಗ್ಸ್ ಕೇಸ್ ಹಿಂದಿದೆ ಸೇಡಿನ ಪ್ರತೀಕಾರ?

    ಬಾಲಿವುಡ್ ನಟಿ ಕ್ರಿಸನ್ ಪಿರೇರಾ (chrisann pereira) ಇದೀಗ ಜೈಲು ಕಂಬಿ ಎಣಿಸುತ್ತಿದ್ದಾರೆ. ಡ್ರಗ್ಸ್ ಕೇಸ್ (Drugs Case) ಗೆ ಸಂಬಂಧಿಸಿದಂತೆ ಈ ನಟಿಯನ್ನು ಯುಎಇ ಪೊಲೀಸರು ಬಂಧಿಸಿ ಶಾರ್ಜಾ ಸೆಂಟ್ರಲ್ ಜೈಲಿಗೆ ಕಳುಹಿಸಿದ್ದಾರೆ. ಏಪ್ರಿಲ್ 1 ರಂದೇ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಟ್ರೋಫಿ ಒಳಗೆ ಡ್ರಗ್ಸ್ ಸಾಗಿಸುತ್ತಿದ್ದರು ಎನ್ನುವ ಕಾರಣದಿಂದಾಗಿ ಪೊಲೀಸರು ಬಂಧಿಸಿದ್ದಾರೆ.

    ಡ್ರಗ್ಸ್ ಕೇಸ್ ಕುರಿತಂತೆ ಮುಂಬೈನಲ್ಲೂ ತನಿಖೆ ನಡೆಸಿದ್ದ ಮುಂಬೈ ಪೊಲೀಸರು ಅಚ್ಚರಿಯ ಮಾಹಿತಿಯನ್ನು ಹೊರ ಹಾಕಿದ್ದಾರೆ. ಇದೊಂದು ಷಡ್ಯಂತ್ರ, ಆ ನಟಿಯ ನೆರೆಮನೆಯಾತನ ಕುತಂತ್ರದಿಂದಾಗಿ ಅವರು ಜೈಲು ಸೇರಿದ್ದಾರೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಪಿರೇರಾ ನೆರೆಮನೆಯಾತ ಹಾಗೂ ಬೇಕರಿ ಮಾಲೀಕನೂ ಆಗಿರುವ ಆಂಟೋನಿ ಪಾಲ್ (Antony Paul) ಮತ್ತು ಬ್ಯಾಂಕ್ ವೊಂದರ ಅಸಿಸ್ಟೆಂಟ್ ಮ್ಯಾನೇಜರ್ ರಾಜೇಶ್ ಬೋಭಟೆ (Rajesh Bobate) ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ.

    ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯ ಪ್ರಕಾರ ಕ್ರಿಸನ್ ಮತ್ತು ಬಂಧಿತ ಆಂಟೋನಿ ಮುಂಬೈನ ಒಂದೇ ಕಟ್ಟಡದ ನಿವಾಸಿಗಳು. ನಾಯಿ ವಿಚಾರಕ್ಕಾಗಿ ಎರಡು ಕುಟುಂಬಗಳ ನಡುವೆ ಕಿತ್ತಾಟ ನಡೆದಿದೆ. ಅಪಮಾನಗೊಂಡ ಆಂಟೋನಿ ಬುದ್ದಿ ಕಲಿಸಲೆಂದೇ ಕ್ರಿಸನ್ ಶಾರ್ಜಾ ಟಿಕೆಟ್ ಮಾಡಿಸಿ, ಟ್ರೋಫಿಯಲ್ಲಿ ಡ್ರಗ್ಸ್ ಇಟ್ಟು, ಅವರೇ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲದೇ ವಾಪಸ್ಸು ಕ್ರಿಸನ್ ಭಾರತಕ್ಕೆ ಬರಲು ನಕಲಿ ಟಿಕೆಟ್ ಕೂಡ ಮಾಡಿಸಿದ್ದ ಎಂದು ಮಾಹಿತಿ ಲಭ್ಯವಾಗಿದೆ.

    ಕ್ರಿಸನ್ ಪಿರೇರಾ ಸಿನಿಮಾ ಹಾಗೂ ವೆಬ್ ಸಿರೀಸ್ ನ ನಟಿ. ಹಾಗಾಗಿ ಶಾರ್ಜಾದಲ್ಲಿ ವೆಬ್ ಸಿರೀಸ್ ಆಡಿಷನ್ ಇದೆ ಎಂದು ಸುಳ್ಳು ಹೇಳಿದ್ದಾನೆ. ಅಲ್ಲಿಗೆ ಟ್ರೋಫಿ ತಗೆದುಕೊಂಡು ಹೋಗಲು ತಿಳಿಸಿದ್ದಾನೆ. ಆ ಟ್ರೋಫಿಯಲ್ಲಿ ಡ್ರಗ್ಸ್ ಇಟ್ಟಿದ್ದ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಶಾರ್ಜಾ ವಿಮಾನ ನಿಲ್ದಾಣಕ್ಕೆ ಕ್ರಿಸನ್ ಬರುತ್ತಿದ್ದಂತೆಯೇ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

  • ಡ್ರಗ್ಸ್ ದಂಧೆ ಕೇಸ್ – ಮಣಿಪಾಲ ವಿವಿಯ 42 ವಿದ್ಯಾರ್ಥಿಗಳು ಅಮಾನತು

    ಡ್ರಗ್ಸ್ ದಂಧೆ ಕೇಸ್ – ಮಣಿಪಾಲ ವಿವಿಯ 42 ವಿದ್ಯಾರ್ಥಿಗಳು ಅಮಾನತು

    ಉಡುಪಿ: ಮಾದಕ ವ್ಯಸನ ಪ್ರಕರಣದಲ್ಲಿ ಭಾಗಿಯಾಗಿದ್ದ 42 ವಿದ್ಯಾರ್ಥಿಗಳನ್ನು ಮಣಿಪಾಲ ವಿಶ್ವವಿದ್ಯಾನಿಲಯವು (Manipal Academy of Higher Education (MAHE) ಅಮಾನತುಗೊಳಿಸಿದೆ.

    ವಿಶ್ವವಿದ್ಯಾಲಯ ಹಾಗೂ ಪೊಲೀಸರು (Manipal Police) ನಡೆಸಿದ ಆಂತರಿಕ ತನಿಖೆಯಲ್ಲಿ ದೃಢಪಟ್ಟನಂತರ 42 ವಿದ್ಯಾರ್ಥಿಗಳನ್ನು ಒಂದು ತಿಂಗಳ ಮಟ್ಟಿಗೆ ಅಮಾನತುಗೊಳಿಸಿ ವಿವಿ ಆದೇಶಿಸಿದೆ. ಭವಿಷ್ಯದ ದೃಷ್ಟಿಯಿಂದ ಈ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು, ಆರೋಗ್ಯಕರ ವಾತಾವರಣ ಸೃಷ್ಟಿಸಲು ಬದ್ಧರಾಗಿರುವುದಾಗಿ ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಸಸಿ ನೆಟ್ಟು ಹುಟ್ಟುಹಬ್ಬ ಆಚರಿಸಿದ ‘ರಾಮ ರಾಮ ರೇ’ ಖ್ಯಾತಿಯ ನಟರಾಜ್

    ಈ ಹಿಂದೆ ಮಂಗಳೂರಿನಲ್ಲಿ (Mangaluru) ವೈದ್ಯರ ಡ್ರಗ್ಸ್ ಪ್ರಕರಣ ಭಾರೀ ಸುದ್ದಿಯಾಗಿತ್ತು. ಎಡಿಜಿಪಿ ಅಲೋಕ್ ಕುಮಾರ್ (Alok Kumar) ಡ್ರಗ್ಸ್ ದಂಧೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಇದೀಗ ಮಣಿಪಾಲ ವಿವಿ ಕಟ್ಟುನಿಟ್ಟಿನ ನಿರ್ಧಾರ ಕೈಗೊಂಡಿದ್ದು, ಒಂದು ತಿಂಗಳ ಕಾಲ ವಿದ್ಯಾರ್ಥಿಗಳನ್ನ ಅಮಾನತುಗೊಳಿಸಿದೆ. ಇದನ್ನೂ ಓದಿ: 1,000 ರೂ.ಗಾಗಿ ವೃದ್ಧನ ಕರುಳು ಹೊರಗೆ ಬರುವಂತೆ ಚಾಕುವಿನಿಂದ ಇರಿದ್ರು!

    ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಮಚ್ಚೀಂದ್ರ ಮಾತನಾಡಿದ್ದು, ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ನಾವು ಹಲವಾರು ಡ್ರಗ್ಸ್ ಪ್ರಕರಣಗಳನ್ನು ಪತ್ತೆ ಮಾಡಿದ್ದೇವೆ. ಈ ಕಾರ್ಯಾಚರಣೆಯಲ್ಲಿ ಅನೇಕ ಮಂದಿ ಪೆಡ್ಲರ್ ಗಳನ್ನ ವಶಕ್ಕೆ ತೆಗೆದುಕೊಂಡಿದ್ದೇವೆ. ಪೆಡ್ಲರ್‌ಗಳ ಮೂಲಕ ಗ್ರಾಹಕರು ಯಾರೂ ಅನ್ನೋದು ಪತ್ತೆಯಾಗಿದೆ. ಮಣಿಪಾಲ ವಿವಿಯ ಕೆಲ ವಿದ್ಯಾರ್ಥಿಗಳು ಕೂಡಾ ಪೆಡ್ಲರ್‌ಗಳಾಗಿದ್ದಾರೆ ಎಂಬುದೂ ತನಿಖೆಯಲ್ಲಿ ತಿಳಿದುಬಂದಿದೆ. ಹೆಚ್ಚಿನ ಪ್ರಮಾಣದ ಮಾದಕ ದ್ರವ್ಯಗಳು ಪತ್ತೆಯಾಗಿದೆ ಎಂದು ಹೇಳಿದ್ದಾರೆ.

    ಈ ಬಗ್ಗೆ ನಾವು ವಿಶ್ವವಿದ್ಯಾಲಯಕ್ಕೆ ಮಾಹಿತಿ ನೀಡಿದ್ದೆವು. ಕಾಲೇಜು ಮತ್ತು ಹಾಸ್ಟೆಲ್ ಆವರಣದಲ್ಲಿ ಡ್ರಗ್ಸ್ ವ್ಯವಹಾರ ನಡೆದ ಬಗ್ಗೆ ವಿದ್ಯಾರ್ಥಿಗಳನ್ನು ಗುರುತಿಸಿ ಪಟ್ಟಿ ನೀಡಿದ್ದೆವು. ಇದಕ್ಕೆ ಮಣಿಪಾಲ ವಿವಿ ಸಕಾರಾತ್ಮಕವಾಗಿ ಸ್ಪಂದಿಸಿ ಕ್ರಮ ಕೈಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡ್ರಗ್ಸ್ ಕೇಸ್: ನಟಿ ರಾಕುಲ್ ಪ್ರೀತ್ ಸಿಂಗ್‌ಗೆ ಮತ್ತೆ ಸಂಕಷ್ಟ

    ಡ್ರಗ್ಸ್ ಕೇಸ್: ನಟಿ ರಾಕುಲ್ ಪ್ರೀತ್ ಸಿಂಗ್‌ಗೆ ಮತ್ತೆ ಸಂಕಷ್ಟ

    ಟಿ ರಾಕುಲ್ ಪ್ರೀತ್  ಸಿಂಗ್‌ (Rakul Preet Singh) ಅವರು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಡ್ರಗ್ಸ್ (Drugs) ವಿಚಾರವಾಗಿ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ (Money Laundering) ವಿಚಾರಣೆಗೆ ಹಾಜರಾಗುವಂತೆ ನಟಿ ರಾಕುಲ್‌ಗೆ ನೋಟಿಸ್ ನೀಡಲಾಗಿದೆ. ಈ ಮೂಲಕ ಮತ್ತೆ ನಟಿಗೆ ಸಂಕಷ್ಟ ಎದುರಾಗಿದೆ.

    ಟಾಲಿವುಡ್ (Tollywood) ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (Enforcement Directorate) ರಾಕುಲ್ ಪ್ರೀತ್ ಸಿಂಗ್ ಶಾಕ್ ನೀಡಿದೆ. ಈ ಹಿಂದೆ ಸೆ. 3, 2021ರಂದು ನಟಿ ರಾಕುಲ್ ಪ್ರೀತ್ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿತ್ತು.

    ಅವರ ಜೊತೆಗೆ ಭಾರತ್ ರಾಷ್ಟ್ರ ಸಮಿತಿ ಪಕ್ಷದ ಶಾಸಕ ಪೈಲಟ್ ರೋಹಿತ್ ರೆಡ್ಡಿ (Pilot Rohith Reddy) ಅವರನ್ನೂ ಪ್ರತ್ಯೇಕ ಪ್ರಕರಣದಲ್ಲಿ ವಿಚಾರಣೆಗೆ ಕರೆಯಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಇಡಿ ಮಾದಕವಸ್ತು ಕಳ್ಳಸಾಗಣೆ ಮತ್ತು ಸೇವನೆಯ ಪ್ರಕರಣವನ್ನು ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಹಲವಾರು ತೆಲುಗು ಕಲಾವಿದರನ್ನು ಪ್ರಶ್ನಿಸಲಾಗಿದೆ. ಇದೀಗ ಮತ್ತೆ ರಾಕುಲ್ ಪ್ರೀತ್ ಸಿಂಗ್ ಅವರಿಗೆ ಸಮನ್ಸ್ (Notice) ನೀಡಲಾಗಿದೆ.‌ ಇದನ್ನೂ ಓದಿ: ದೀಪಿಕಾ ಕೇಸರಿ ಬಿಕಿನಿ ವಿವಾದ: `ಪಠಾಣ್’ ನಟಿಯ ಪರ ನಿಂತ ನಟಿ ರಮ್ಯಾ

    2017ರಲ್ಲಿ ಡ್ರಗ್ಸ್ ಪ್ರಕರಣ ಇಡೀ ಟಾಲಿವುಡ್ ಅನ್ನೇ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣ ತನಿಖೆ ಇನ್ನೂ ಕೂಡ ನಡೆಯುತ್ತಿದೆ. ತೆಲುಗಿನ ಸ್ಟಾರ್ಸ್ ರವಿತೇಜ (Ravi Teja), ಚಾರ್ಮಿ ಕೌರ್, ನವದೀಪ್, ಮುಮೈತ್ ಖಾನ್, ತನಿಶ್, ನಂದು, ತರುಣ್ ಮತ್ತು ಬಾಹುಬಲಿ ನಟ ರಾಣಾ ದಗ್ಗುಬಾಟಿ (Rana Daggubati) ಸೇರಿದಂತೆ ಇನ್ನೂ ಅನೇಕರಿಗೆ ಈ ಹಿಂದೆಯೇ ಇಡಿ ಸಮನ್ಸ್ ನೀಡಿತ್ತು.

    Live Tv
    [brid partner=56869869 player=32851 video=960834 autoplay=true]