50 ಕೆಜಿ ಗಾಂಜಾ, 30 ಲಕ್ಷ ಮೌಲ್ಯದ ಮಾದಕವಸ್ತು, 13 ಮೊಬೈಲ್, ಡಿಜಿಟಲ್ ಹ್ಯಾಂಗರ್ ತಕ್ಕಡಿ, ಎರಡು ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಒಡಿಶಾ, ಮುಂಬೈ, ಪುಣೆ, ಮಧ್ಯಪ್ರದೇಶದಿಂದ ಡ್ರಗ್ಸ್ ತೆಗೆದುಕೊಂಡು ಬಂದು ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ ಧಾರವಾಡ ಮತ್ತು ಗೋವಾ, ಮಹಾರಾಷ್ಟ್ರದಲ್ಲಿ ಈ ಗ್ಯಾಂಗ್ ವಿತರಣೆ ಮಾಡುತ್ತಿತ್ತು.
ಬೆಳಗಾವಿ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ ಅವರು ಸಿಇಎನ್ ಪೊಲೀಸ್ ತಂಡಕ್ಕೆ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.
– ದೆಹಲಿಯಿಂದ ಮುಂಬೈ, ಬೆಂಗಳೂರಿಗೆ ಪ್ರಯಾಣ – ಬೆಂಗಳೂರಿನಲ್ಲಿ ಮಂಗಳೂರು ಪೊಲೀಸರ ಕಾರ್ಯಾಚರಣೆ
ಮಂಗಳೂರು: ರಾಜ್ಯದ ಅತೀ ದೊಡ್ಡ ಡ್ರಗ್ಸ್ (Drugs) ಜಾಲವನ್ನು ಭೇದಿಸಿ ಇಬ್ಬರು ವಿದೇಶಿ ಮಹಿಳೆಯರನ್ನು ಮಂಗಳೂರು ಪೊಲೀಸರು (Mangaluru Police) ಬಂಧಿಸಿದ್ದಾರೆ. ಬಂಧಿತ ಇಬ್ಬರು ಮಹಿಳೆಯರು ಕಳೆದ ಒಂದು ವರ್ಷದಲ್ಲಿ ದೆಹಲಿ ವಿಮಾನ ನಿಲ್ದಾಣದ (Delhi Aiprport) ಮೂಲಕ ಬೆಂಗಳೂರು ಹಾಗೂ ಮುಂಬೈ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 59 ಬಾರಿ ಡ್ರಗ್ಸ್ ಸಮೇತ ಬಂದಿದ್ದಾರೆ. ಆದರೂ ಮೂರು ವಿಮಾನ ನಿಲ್ದಾಣದಲ್ಲಿ ಇವರು ಸಿಕ್ಕಿಬೀಳಿಲ್ಲ ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆ ಎದ್ದಿದೆ.
ಮಂಗಳೂರು ಸಿಸಿಬಿ ಪೊಲೀಸರು (CCB Police) ರಾಜ್ಯದ ಅತೀ ದೊಡ್ಡ ಡ್ರಗ್ಸ್ ಜಾಲವನ್ನು ಭೇದಿಸಿ ಇಬ್ಬರು ವಿದೇಶಿ ಮಹಿಳೆಯರನ್ನು ಬಂಧಿಸಿ ಅವರಿಂದ ಬರೋಬ್ಬರಿ 75 ಕೋಟಿ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ರಾಜ್ಯಕ್ಕೆ ಬರುತ್ತಿದ್ದ ಡ್ರಗ್ಸ್ ಬುಡವನ್ನೇ ಅಲುಗಾಡಿಸಿದ್ದಾರೆ.
ದೇಶದೆಲ್ಲೆಡೆ ಡ್ರಗ್ಸ್ ಸಾಗಾಟ ಮಾಡುವ ಈ ಇಬ್ಬರು ಮಹಿಳಾ ಡ್ರಗ್ ಪೆಡ್ಲರ್‌ಗಳು ದೆಹಲಿ ವಿಮಾನ ನಿಲ್ದಾಣದಿಂದ ದೇಶದ ಇತರೆಡೆ ವಿಮಾನದಲ್ಲೇ ಡ್ರಗ್ಸ್ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಮಂಗಳೂರು ಸಿಸಿಬಿ ಪೊಲೀಸರು ಮಾರ್ಚ್ 14ರ ಮಧ್ಯರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾದು ಕುಳಿತ್ತಿದ್ದರು.
ರಾತ್ರಿ 12:30ರ ಸುಮಾರಿಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಎರಡು ಟ್ರಾಲಿಗಳ ಮೂಲಕ ಹೊರ ಬಂದ ದಕ್ಷಿಣ ಆಫ್ರಿಕಾ ಪ್ರಜೆಗಳಾದ 31 ವರ್ಷದ ಬಂಬಾ ಫಾಂಟಾ ಹಾಗೂ 30 ವರ್ಷದ ಅಬಿಗಾಲ್ ಅಡೋನಿಸ್ ಪ್ರತ್ಯೇಕ ಎರಡು ಕಾರುಗಳ ಮೂಲಕ ಹೊರಡುತ್ತಾರೆ. ಇಬ್ಬರಲ್ಲೂ ಒಂದೊಂದು ಟ್ರಾಲಿ ಬ್ಯಾಗ್ ಗಳಿದ್ದು ವಿಮಾನ ನಿಲ್ದಾಣಗಳಿಂದ ಎಲೆಕ್ಟ್ರಾನಿಕ್ ಸಿಟಿಯತ್ತ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಮಂಗಳೂರು ಸಿಸಿಬಿ ಪೊಲೀಸರು ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಇಬ್ಬರಲ್ಲಿದ್ದ ಎರಡು ಟ್ರಾಲಿ ಬ್ಯಾಗ್‌ನಲ್ಲಿ ಒಟ್ಟು 75 ಕೋಟಿ ಮೌಲ್ಯದ 37.878 ಕೆಜಿ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದ್ದು ಎಲ್ಲವನ್ನ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: 5 ವರ್ಷದಲ್ಲಿ ರಾಮ ಜನ್ಮಭೂಮಿ ಟ್ರಸ್ಟ್‌ನಿಂದ 400 ಕೋಟಿ ರೂ. ತೆರಿಗೆ ಪಾವತಿ!
ಮಂಗಳೂರು ಪೊಲೀಸರು ಬೆಂಗಳೂರಿಗೆ ಹೋಗಿ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರ ಬಂದ ಈ ಡ್ರಗ್ ಪೆಡ್ಲರ್‌ಗಳನ್ನು ಹಿಡಿದ್ದಾರೆ. ಆದರೆ ಅವರು ವಿಮಾನ ನಿಲ್ದಾಣದಿಂದ ಡ್ರಗ್ಸ್ ಸಮೇತ ಹೊರ ಬಂದಿದ್ದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆ.
ಈ ಇಬ್ಬರು ಮಹಿಳೆಯರು ಇದೇ ಮೊದಲ ಬಾರಿಗೆ ಈ ರೀತಿ ವಿಮಾನದಲ್ಲಿ ಡ್ರಗ್ಸ್ ಸಾಗಾಟ ಮಾಡಿಲ್ಲ. ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 59 ಬಾರಿ ವಿಮಾನದಲ್ಲೇ ಈ ಡ್ರಗ್ಸ್ ಸಾಗಾಟ ಮಾಡಿದ್ದಾರೆ. ದೆಹಲಿಯಿಂದ 37 ಬಾರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹಾಗೂ ದೆಹಲಿಯಿಂದ 22 ಬಾರಿ ಮುಂಬೈ ವಿಮಾನ ನಿಲ್ದಾಣ ಡ್ರಗ್ಸ್ ಸಾಗಿಸಿದ್ದಾರೆ. ಪ್ರತೀ ಬಾರಿಯೂ ದೆಹಲಿಯಿಂದ ಲೇಟ್ ನೈಟ್ ಫ್ಲೈಟ್ ಗಳನ್ನೇ ಬುಕ್ ಮಾಡಿಕೊಂಡು ಬರುತ್ತಿದ್ದ ಈ ಇಬ್ಬರು ಮಹಿಳೆಯರು ಅದ್ಯಾವ ರೀತಿ ತಪಾಸಣೆಗೆ ಒಳಗಾಗದೇ ಅಲ್ಲಿನ ಭದ್ರತಾ ಸಿಬ್ಬಂದಿಗೆ ಸಿಕ್ಕಿ ಬೀಳದೇ ವಿಮಾನ ನಿಲ್ದಾಣದಿಂದ ಹೊರ ಬಂದಿದ್ದಾರೆ ಎನ್ನುವುದೇ ಅನುಮಾನ ಹುಟ್ಟಿಸಿದೆ.
ವಿಮಾನ ನಿಲ್ದಾಣಗಳಲ್ಲಿ ಸಣ್ಣಪುಟ್ಟ ವಸ್ತುಗಳನ್ನು ತಪಾಸಣೆ ನಡೆಸಿ ಬಳಿಕ ಸ್ಕ್ಯಾನರ್ ಮೂಲಕ ಸ್ಕ್ಯಾನ್ ಮಾಡಿಯೇ ಪ್ರತಿ ಪ್ರಯಾಣಿಕರನ್ನು ಒಳಗೆ ಹಾಗೂ ಹೊರಗೆ ಬಿಡಲಾಗುತ್ತದೆ. ಎಲ್ಲವನ್ನೂ ಬಹಳ ಕಟ್ಟು ನಿಟ್ಟಾಗಿ ತಪಾಸಣೆ ಮಾಡುವ ಭದ್ರತಾ ಸಿಬ್ಬಂದಿಗಳು ಈ ಡ್ರಗ್ ಪೆಡ್ಲರ್ ಗಳನ್ನ ಇಷ್ಟೊಂದು ಬಾರಿ ಸಲೀಸಾಗಿ ಹೇಗೆ ಬಿಟ್ಟು ಕಳಿಸಿದ್ದಾರೆ ಎನ್ನುವುದು ಅನುಮಾನದ ವಿಚಾರ.
ಒಟ್ಟಿನಲ್ಲಿ ಮಂಗಳೂರು ಪೊಲೀಸರ ಈ ಕಾರ್ಯಾಚರಣೆಯಿಂದಾಗಿ ರಾಜ್ಯ ಹಾಗೂ ದೇಶಕ್ಕೆ ಸಾಗಾಟ ಆಗುತ್ತಿದ್ದ ದೊಡ್ಡ ಡ್ರಗ್ಸ್ ಜಾಲ ಪತ್ತೆಯಾಗಿದೆ. ಮಂಗಳೂರು ಪೊಲೀಸರ ಈ ಬೃಹತ್ ಕಾರ್ಯಾಚರಣೆಗೆ ಸಿಎಂ ಸಿದ್ದರಾಮಯ್ಯ ಹಾಗೂ ವಿರೋಧ ಪಕ್ಷದ ಮುಖಂಡರುಗಳು ಸೇರಿ ರಾಜ್ಯಾದ್ಯಂತ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಇಷ್ಟಕ್ಕೇ ಸುಮ್ಮನಾಗದ ಮಂಗಳೂರು ಪೊಲೀಸರು ಈ ಜಾಲದಲ್ಲಿ ಇರೋ ಇನ್ನಷ್ಟು ಪೆಡ್ಲರ್ ಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಮಂಗಳೂರು: ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ಆಫ್ರಿಕಾ ಮೂಲದ ಇಬ್ಬರು ಮಹಿಳೆಯನ್ನು ಬಂಧಿಸಿದ್ದಾರೆ.
37.5 ಕೆಜಿ ತೂಕದ ಎಂಡಿಎಂಎ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಲಾಸ್ಟ್ ಕಸ್ಟಮರ್ ರೇಟ್ ಪ್ರಕಾರ, 74 ಕೋಟಿ ಮೌಲ್ಯದ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ದಕ್ಷಿಣ ಆಫ್ರಿಕಾ ಮೂಲದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಐದು ತಿಂಗಳಿಂದ ಈ ಬೃಹತ್ ಕಾರ್ಯಾಚರಣೆ ನಡೆದಿದೆ.
ಈ ಕುರಿತು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಂಗಳೂರು ಸಿಸಿಬಿ ಪೊಲೀಸರು ದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಇದು ದೊಡ್ಡ ಪ್ರಮಾಣದ ಡ್ರಗ್ಸ್ ವಶಪಡಿಸಿದ್ದೇವೆ. 6 ತಿಂಗಳ ಹಿಂದೆ ಮಂಗಳೂರಿನ ಪಂಪ್ ವೆಲ್ ಬಳಿ ಹೈದರ್ ಎಂಬವನನ್ನು ಬಂದಿಸಿದ್ದೆವು. ಆತನಿಂದ 15 ಗ್ರಾಂ ಡ್ರಗ್ ವಶಪಡಿಸಿದ್ದೆವು. ಆತನಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದವರ ಬಂಧನಕ್ಕೆ ಸಿಸಿಬಿ ಪೊಲೀಸರು ಆರು ತಿಂಗಳಿನಿಂದ ಕಾರ್ಯಾಚರಣೆ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ವಾಸ್ತವ್ಯವಿದ್ದ ನೈಜೀರಿಯಾ ಪ್ರಜೆ ಪೀಟರ್‌ನನ್ನು ಬಂಧಿಸಿದ್ದೆವು. ಆತನಿಂದ 6 ಕೆಜಿ ಎಂಡಿಎಂಎ ವಶಪಡಿಸಿಕೊಂಡಿದ್ದೆವು. ಆತನ ಮಾಹಿತಿಯಂತೆ ಮತ್ತೆ ಕಾರ್ಯಾಚರಣೆ ಮಾಡಿ ಈ ಇಬ್ಬರು ಮಹಿಳೆಯರನ್ನು ಬಂಧಿಸಿದ್ದೇವೆ. ದೆಹಲಿಯಿಂದ ಬೆಂಗಳೂರಿಗೆ ವಿಮಾನ ಮೂಲಕ ಬಂದಿದ್ದರು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಇಬ್ಬರನ್ನು ಬಂಧಿಸಿದ್ದೇವೆ. ದಕ್ಷಿಣ ಆಫ್ರಿಕಾ ಮೂಲದ ಬಂಬಾ ಫಾಂಟಾ(31) ಹಾಗೂ ಅಬಿಗೈಲ್ ಅಡೋನಿಸ್ (30) ಬಂಧನಕ್ಕೆ ಒಳಗಾಗಿದ್ದಾರೆ. ಅವರಲ್ಲಿ 75 ಕೋಟಿ ಮೌಲ್ಯದ 37.878 ಕೆಜಿ ಎಂಡಿಎಂಎ ವಶಪಡಿಸಿದ್ದೇವೆ. 4 ಮೊಬೈಲ್ ಫೋನ್, 2 ಪಾಸ್ ಪೋರ್ಟ್, ಟ್ರಾಲಿ ಬ್ಯಾಗ್, 18,460 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಾಷಿಂಗ್ಟನ್/ ಬೀಜಿಂಗ್: ಜಗತ್ತಿನಲ್ಲಿ ಅಸಲಿ ವಾಣಿಜ್ಯ ಯುದ್ಧ (Trade War) ಈಗ ಆರಂಭವಾಗಿದೆ. ಚೀನಾದ (China) ಮೇಲೆ ವಾಣಿಜ್ಯ ಯುದ್ಧ ಸಾರಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇದೀಗ ಆ ದೇಶದ ಉತ್ಪನ್ನಗಳ ಮೇಲಿನ ಸುಂಕದ ಪ್ರಮಾಣವನ್ನು ದಿಢೀರ್ ಎಂದು ಡಬಲ್ ಮಾಡಿದ್ದಾರೆ.
10% ಇದ್ದ ಸುಂಕವನ್ನು 20% ಏರಿಸಿದ್ದಾರೆ. ಫೆಂಟನಿಲ್ ಡ್ರಗ್ಸ್ (Drugs) ಅಕ್ರಮ ಸಾಗಣೆ ತಡೆಯುವಲ್ಲಿ ಚೀನಾ ವಿಫಲವಾಗಿದೆ ಎಂಬ ಕಾರಣ ನೀಡಿ ಟ್ರಂಪ್ ಈ ನಿರ್ಣಯ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್‌ಗೆ ಮಿಲಿಟರಿ ನೆರವು ನಿಲ್ಲಿಸಿದ ಟ್ರಂಪ್
ಅಮೆರಿಕ (USA) ಸುಂಕ ಏರಿಸಿದ ಬೆನ್ನಲ್ಲೇ ಚೀನಾ ಸಹ ಅಮೆರಿಕದ ಉತ್ಪನ್ನಗಳ ಮೇಲೆ 10% ರಿಂದ 15% ರಷ್ಟು ಸುಂಕ ವಿಧಿಸುವುದಾಗಿ ಪ್ರಕಟಿಸಿದೆ. ಇದೇ ವೇಳೆ, ಐರೋಪ್ಯ ಒಕ್ಕೂಟದ ಜೊತೆಗಿನ ಬಂಧವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಚೀನಾ ಮುಂದಾಗಿದೆ. ಅಮೆರಿಕದ ಏಕಪಕ್ಷೀಯ ತೀರ್ಮಾನಗಳ ವಿರುದ್ಧ ಇಯು ಜೊತೆ ಕೆಲಸ ಮಾಡಲು ಸಿದ್ಧ ಇದ್ದೇವೆ ಎಂದು ಚೀನಾ ಘೋಷಿಸಿದೆ.
ಕೆನಡಾ, ಮೆಕ್ಸಿಕೋ ಉತ್ಪನ್ನಗಳ ಮೇಲೆ ಟ್ರಂಪ್ ವಿಧಿಸಿದ್ದ 25% ಸುಂಕ ನೀತಿ ಇಂದಿನಿಂದ ಜಾರಿಯಾಗಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ಮದ್ಯ, ಹಣ್ಣು ಸೇರಿ 107 ಬಿಲಿಯನ್ ಡಾಲರ್ ಉತ್ಪನ್ನಗಳ ಮೇಲೆ ಕೆನಡಾ ಸಹ 25% ಸುಂಕ ವಿಧಿಸಿದ್ದು, ಇಂದು ಸಂಜೆಯಿಂದ ಜಾರಿಗೆ ತಂದಿದೆ.
ಸುಂಕದ ಯುದ್ಧದ ಪರಿಣಾಮ ವಿಶ್ವ ಮಾರುಕಟ್ಟೆ ಮೇಲಾಗಿದ್ದು ಷೇರು ಮಾರುಕಟ್ಟೆ ಪತನಗೊಂಡಿದೆ. ಸುಂಕದ ಹೆಸರಿನಲ್ಲಿ ಟ್ರಂಪ್ ಚೆಲ್ಲಾಟ ಆಡುತ್ತಿದ್ದಾರೆ ಎಂದು ದಿಗ್ಗಜ ಹೂಡಿಕೆದಾರ ವಾರೆನ್ ಬಫೆಟ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಕಲಬುರಗಿ: ಅಕ್ರಮವಾಗಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿಯ ಮೇಲೆ ಬೆಳ್ಳಂಬೆಳಗ್ಗೆ ಪೋಲಿಸರು ಫೈರಿಂಗ್ ಮಾಡಿರುವ ಘಟನೆ ನಗರದ ಹೊರವಲಯದ ತಾವರಗೇರಾ (Tavaragera ) ಬಳಿ ನಡೆದಿದೆ.
ಆರೋಪಿಯನ್ನು ಸುಪ್ರೀತ್ ನವಲೆ (32 ) ಎಂದು ಗುರುತಿಸಲಾಗಿದೆ. ಆರೋಪಿ ಅಕ್ರಮವಾಗಿ ಕಾರಿನಲ್ಲಿ ಡ್ರಗ್ಸ್‌ನ್ನು ಮಾರಾಟ ಮಾಡುತ್ತಿದ್ದ ಎಂಬ ಖಚಿತ ಮಾಹಿತಿ ಮೇರೆಗೆ ಖಾಕಿ ಪಡೆ ದಾಳಿ ಮಾಡಿದ್ದು, ಕಾರು ನಿಲ್ಲಿಸಿ ತಪಾಸಣೆ ಮಾಡುವಾಗ ಪೋಲಿಸರ ಮೇಲೆ ಚಾಕುವಿನಿಂದ ಆರೋಪಿ ದಾಳಿ ಮಾಡಿದ್ದಾನೆ. ಹೆಡ್ ಕಾನ್‌ಸ್ಟೇಬಲ್ ಗುರುಮೂರ್ತಿಯ ಮೇಲೆ ಆರೋಪಿ ಚಾಕುವಿನಿಂದ ಹಲ್ಲೆ ಮಾಡಿದ್ದು, ಈ ವೇಳೆ ಚೌಕ್ ಪೋಲಿಸ್ ಠಾಣೆಯ ಪಿಐ ರಾಘವೇಂದ್ರ ಅವರು ಆರೋಪಿ ಮೇಲೆ ಫೈರಿಂಗ್ ನಡೆಸಿದ್ದಾರೆ.ಇದನ್ನೂ ಓದಿ: ಮದ್ವೆಯಾಗುವಂತೆ ಒತ್ತಡ – ಲಿವ್ ಇನ್ ಗೆಳತಿ ಕೊಂದು ಶವವನ್ನ 8 ತಿಂಗಳು ಫ್ರಿಡ್ಜ್‌ನಲ್ಲಿಟ್ಟಿದ್ದ ಸೈಕೋ
ಫೈರಿಂಗ್ ಮಾಡಿದ ಪರಿಣಾಮ ಆರೋಪಿ ಗಾಯಗೊಂಡಿದ್ದು, ಜಿಮ್ಸ್ ಆಸ್ಪತ್ರೆಯ ಟ್ರಾಮಾ ಕೆರ್ ಸೆಂಟರ್‌ಗೆ ದಾಖಲು ಮಾಡಲಾಗಿದೆ. ಇನ್ನೂ ಪ್ರಕರಣ ಸಂಬಂಧ ಅಸ್ಪತ್ರೆಗೆ ಪೊಲೀಸ್ ಆಯುಕ್ತ ಡಾ.ಶರಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2016 ರಿಂದ ಆರೋಪಿ ಅಕ್ರಮ ಡ್ರಗ್ ಸಪ್ಲೈ ಮಾಡುತ್ತಿದ್ದು, ಒಟ್ಟು 3 ಪ್ರಕರಣಗಳು ನಮ್ಮ ಜಿಲ್ಲೆಯಲ್ಲಿ ದಾಖಲಾಗಿವೆ. ಅಲ್ಲದೆ ನೆರೆಯ ಹೈದ್ರಾಬಾದ್‌ನಲ್ಲಿ ಸಹ ಅಕ್ರಮ ಡ್ರಗ್ಸ್ ಮಾರಾಟ ಸಂಬಂಧ ಆರೋಪಿ ಮೇಲೆ ಪ್ರಕರಣ ದಾಖಲಾಗಿರುವುದ್ದಾಗಿ ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಅಭಿನೇತ್ರಿಯ ಕಾಲು ಹಿಡಿದು ಕ್ಷಮೆ ಕೇಳಬೇಕು – ಸಿ.ಟಿ ರವಿಗೆ ಅನಾಧೇಮಯ ಬೆದರಿಕೆ ಪತ್ರ
ತಿರುವನಂತಪುರಂ: ಮನೆಯಲ್ಲಿ ನಿಷೇಧಿತ ಮಾದಕ ವಸ್ತು ಪತ್ತೆಯಾದ ಹಿನ್ನೆಲೆ ಮಲಯಾಳಿ ಕಿರುತೆರೆ ಧಾರಾವಾಹಿ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ.
34 ವರ್ಷದ ಕಿರುತೆರೆ ಧಾರಾವಾಹಿ ನಟಿ ಶ್ಯಾಮನಾಥ್ (Shamnath) ಅವರನ್ನು ಕೇರಳದ ಓಝಿವುಪರದಲ್ಲಿರುವ ಅವರ ನಿವಾಸದಿಂದ ಪರವೂರು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರಿಗೆ ಆಕೆಯ ಮನೆಯಲ್ಲಿ ಸರಿಸುಮಾರು ಎರಡು ಮಿಲಿಗ್ರಾಂಗಳಷ್ಟು ಮೆಥಿಲೆನೆಡಿಯೋಕ್ಸಿಫೆನೆಥೈಲಮೈನ್ (MDMA) ಪತ್ತೆಯಾಗಿದೆ. ಇದನ್ನೂ ಓದಿ: ಮಂಗಳೂರಿನ ಕೊರಗಜ್ಜ ಕ್ಷೇತ್ರಕ್ಕೆ ನಟ ದುನಿಯಾ ವಿಜಯ್ ಭೇಟಿ
ಪೊಲೀಸ್ ಅಧಿಕಾರಿಗಳ ಪ್ರಕಾರ, ಶ್ಯಾಮನಾಥ್ ಅವರು ಕೆಲವು ದಿನಗಳಿಂದ ನಿಷೇಧಿತ ವಸ್ತುವನ್ನು ಬಳಸುತ್ತಿದ್ದರು ಎಂದು ಶಂಕಿಸಲಾಗಿದೆ. ಆಕೆಗೆ ಡ್ರಗ್ಸ್ ಪೂರೈಸಿದವರ ಪತ್ತೆಗೆ ಸದ್ಯ ತನಿಖೆ ನಡೆಯುತ್ತಿದೆ.
ನಟಿಯ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್‌ನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಂತಹ ಘಟನೆಗಳು ಮನರಂಜನಾ ಉದ್ಯಮದಲ್ಲಿ ಮಾದಕ ವ್ಯಸನದ ಬಗ್ಗೆ ಕಳವಳ ಉಂಟು ಮಾಡಿದೆ. ಇದನ್ನೂ ಓದಿ: ದರ್ಶನ್‌ಗೆ ಬಳ್ಳಾರಿ ಜೈಲಿನಲ್ಲಿ ಫಿಸಿಯೋಥೆರಪಿ ಚಿಕಿತ್ಸೆ
ಸೆಲೆಬ್ರಿಟಿಯೊಬ್ಬರು ಮಾದಕ ವಸ್ತು ಹೊಂದಿದ್ದಕ್ಕಾಗಿ ಕಾನೂನು ಕ್ರಮ ಎದುರಿಸುತ್ತಿರುವ ಮೊದಲ ನಿದರ್ಶನವಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ 2022 ರಲ್ಲಿ ಮಾದಕ ವಸ್ತು ದಂಧೆ ಪ್ರಕರಣದಲ್ಲಿ ಬಂಧಿತರಾಗಿದ್ದರು. ಆದರೆ ಪ್ರಕರಣದಲ್ಲಿ ಆರ್ಯನ್‌ಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಕ್ಲೀನ್‌ಚಿಟ್ ನೀಡಿದೆ. 24 ವರ್ಷದ ಯುವಕ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ 22 ದಿನಗಳನ್ನು ಕಳೆದಿದ್ದ.
ನವದೆಹಲಿ: ದೆಹಲಿಯಲ್ಲಿ (Delhi) 2 ಸಾವಿರ ಕೋಟಿ ರೂ. ಮೌಲ್ಯದ ಕೊಕೇನ್ (Cocaine)ವಶಕ್ಕೆ ಪಡೆಯಲಾಗಿದ್ದು, ಒಂದೇ ವಾರದಲ್ಲಿ ಎರಡನೇ ಭರ್ಜರಿ ಬೇಟೆ ಇದಾಗಿದೆ.
ಗುರುವಾರ ದೆಹಲಿ ಪೊಲೀಸರು 2 ಸಾವಿರ ಕೋಟಿ ರೂ. ಮೌಲ್ಯದ 200 ಕೆ.ಜಿ ಕೊಕೇನ್‌ನ್ನು ವಶಕ್ಕೆ ಪಡೆಯುವ ಮೂಲಕ ಬೃಹತ್ ಜಾಲವನ್ನು ಭೇದಿಸಿದ್ದಾರೆ.
ದೆಹಲಿ ಪೊಲೀಸರ (Delhi Police) ವಿಶೇಷ ತಂಡವು ಡ್ರಗ್ಸ್ ಪೂರೈಕೆದಾರನನ್ನು ಜಿಪಿಎಸ್ ಮೂಲಕ ರಮೇಶ ನಗರದಲ್ಲಿ ಪತ್ತೆ ಹಚ್ಚಿದ್ದಾರೆ. ಆದರೆ ಆರೋಪಿಗಳು ಲಂಡನ್‌ಗೆ ಪರಾರಿಯಾಗಿದ್ದು, ಇದು ಅದೇ ಸಿಂಡಿಕೇಟ್‌ನ ಭಾಗವಾಗಿದೆ. ಪೊಲೀಸರು ಪೂರೈಕೆದಾರನನ್ನು ಪತ್ತೆಹಚ್ಚುವಲ್ಲಿ ಯಶ್ವಸಿಯಾಗಿದ್ದು, 5,600 ಕೋಟಿ ರೂ. ಕೊಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಒಂದು ವಾರದಲ್ಲೇ 7,500 ಕೋಟಿ ರೂ. ಮೌಲ್ಯದ 762 ಕೆ.ಜಿ ಡ್ರಗ್ಸ್ ವಶಪಡಿಸಿಕೊಂಡಿದ್ದು, ಇದು ದೇಶದಲ್ಲಿಯೇ ಸಾಗಾಟವಾದ ಅತಿ ಹೆಚ್ಚು ಡ್ರಗ್ಸ್ ಆಗಿದೆ.ಇದನ್ನೂ ಓದಿ: ಬಿಜೆಪಿಗೆ ಚನ್ನಪಟ್ಟಣ ಕ್ಷೇತ್ರ ಬಿಟ್ಟುಕೊಡುವ ಒಪ್ಪಂದ ಆಗಿಲ್ಲ: ಹೆಚ್‌ಡಿಕೆ
ದೆಹಲಿ ಪೊಲೀಸರ ಮಾಹಿತಿಯ ಪ್ರಕಾರ, ಜಸ್ಸಿ ಎಂದು ಕರೆಯಲ್ಪಡುವ ಜಿತೇಂದ್ರ ಪಾಲ್ ಸಿಂಗ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಪಂಜಾಬ್ ಅಮೃತಸರದ ವಿಮಾನ ನಿಲ್ದಾಣದ ಬಳಿ ಯುಕೆಗೆ ಪ್ರಯಾಣಿಸಲು ಮುಂದಾಗಿದ್ದಾಗ ಆತನನ್ನು ಬಂಧಿಸಿದ್ದಾರೆ. ಇದು ಪ್ಯಾನ್ ಇಂಡಿಯಾ ನೆಟ್‌ವರ್ಕ್ನ್ನು ಹೊಂದಿದ್ದು, ದೇಶದಲ್ಲಿ ಸಂಘಟಿತ ಅಪರಾಧವಾಗಿದೆ.
ಕಳೆದ 17 ವರ್ಷಗಳಿಂದ ಯುಕೆಯಲ್ಲಿ ವಾಸಿಸುತ್ತಿದ್ದು, ಜಸ್ಸಿ ಪರಾರಿಯಾಗುವ ಪ್ರಯತ್ನದ ಕುರಿತು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ಬೃಹತ್ ಕೊಕೇನ್ ರವಾನೆಯ ಹಿಂದೆ ಅಂತಾರಾಷ್ಟ್ರೀಯ ಡ್ರಗ್ಸ್ ಸ್ಮಗ್ಲಿಂಗ್ ಸಿಂಡಿಕೇಟ್ ಭಾಗಿಯಾಗಿದೆ ಎಂದು ತಿಳಿಸಿದ್ದಾರೆ.
ಈ ಜಾಲವು ದೆಹಲಿ, ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದುಬೈಗೆ ಸಂಪರ್ಕವನ್ನು ಹೊಂದಿದೆ. ಸದ್ಯ ದೆಹಲಿ ಪೊಲೀಸರು ಶಂಕಿತರನ್ನು ವಿಚಾರಣೆಗೆ ಒಳಪಡಿಸಿದಾಗ ಪಶ್ಚಿಮ ಏಷ್ಯಾದಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಜೆ ವೀರೇಂದ್ರ ಬಸೋಯಾ ಎಂಬಾತನ ಹೆಸರು ಹೊರಬಿದ್ದಿದೆ.
ಕಳೆದ ವಾರ, ರಾಷ್ಟ್ರ ರಾಜಧಾನಿಯಲ್ಲಿ ನಡೆದ ಅತಿ ದೊಡ್ಡ ಮಾದಕ ದ್ರವ್ಯ ದಂಧೆಯಲ್ಲಿ 500 ಕೆ.ಜಿ.ಗೂ ಹೆಚ್ಚು ಕೊಕೇನ್ ವಶಪಡಿಸಿಕೊಳ್ಳಲಾಗಿತ್ತು. ದಕ್ಷಿಣ ದೆಹಲಿಯಲ್ಲಿ ದಾಳಿ ನಡೆಸಿದ ನಂತರ ಮಾದಕ ದ್ರವ್ಯ ದಂಧೆಗೆ ಸಂಬAಧಿಸಿದAತೆ ನಾಲ್ವರನ್ನು ಬಂಧಿಸಲಾಗಿದೆ. ಇದಕ್ಕೂ ಮುನ್ನ ದೆಹಲಿಯ ತಿಲಕ್ ನಗರದಲ್ಲಿ 400 ಗ್ರಾಂ ಹೆರಾಯಿನ್ ಮತ್ತು 160 ಗ್ರಾಂ ಕೊಕೇನ್ ವಶಪಡಿಸಿಕೊಂಡ ಇಬ್ಬರು ಅಫ್ಘಾನಿಸ್ತಾನ ಪ್ರಜೆಗಳನ್ನು ಬಂಧಿಸಲಾಗಿತ್ತು.ಇದನ್ನೂ ಓದಿ: ಶಿವಮೊಗ್ಗ–ಚೆನ್ನೈ ನಡುವೆ ವಿಮಾನಯಾನ ಶುರು
ಉಡುಪಿ: ಕಾರ್ಕಳ ಯುವತಿ ಅತ್ಯಾಚಾರ ಪ್ರಕರಣಕ್ಕೆ (Karkala Rape) ಸಂಬಂಧಿಸಿದಂತೆ ಪೊಲೀಸರ ತನಿಖೆ ಮುಂದುವರೆದಿದೆ. ಕೇಸ್ ಸಂಬಂಧ ಈಗಾಗಲೇ ಆರು ಮಂದಿ ಆರೋಪಿಗಳು ಜೈಲು ಕಂಬಿ ಎಣಿಸುತ್ತಿದ್ದು, ತನಿಖಾಧಿಕಾರಿಗಳು ಮಾದಕ ಜಾಲದ ಬೆನ್ನು ಬಿದ್ದಿದ್ದಾರೆ. ಡ್ರಗ್ಸ್ (Drugs) ಜಾಲದ ಸರಪಳಿ ಕಾರ್ಕಳದಿಂದ ಬೆಂಗಳೂರು, ಬೆಂಗಳೂರಿಂದ ಆಂಧ್ರಪ್ರದೇಶಕ್ಕೆ ಲಿಂಕ್ ಆಗಿರುವುದು ಬಯಲಾಗಿದೆ. ಹಾಗಾಗಿ ಹಣ ವರ್ಗಾವಣೆ ಆಗಿರುವ ಬ್ಯಾಂಕ್ ಖಾತೆಗಳ ಮೇಲೆ ಪೊಲೀಸರು ನಿಗಾ ಇಟ್ಟು ತನಿಖೆ ಮುಂದುವರಿಸಿದ್ದಾರೆ.
ಆರೋಪಿ ಅಲ್ತಾಫ್‌ನ ಬೆನ್ನತ್ತಿದ್ದ ಪೊಲೀಸರಿಗೆ ಡ್ರಗ್ಸ್ ಜಾಲದ ನಿಜ ದರ್ಶನವಾಗಿದೆ. ಪ್ರಕರಣದ ಆಳ ಬಗೆದಷ್ಟು ಹೊಸ ಹೊಸ ಹೆಸರುಗಳು, ಅಮಲು ಪದಾರ್ಥಗಳು ಪತ್ತೆಯಾಗುತ್ತಿವೆ. ಆರೋಪಿಗೆ ಡ್ರಗ್ಸ್ ಎಲ್ಲಿಂದ ಬಂತು? ಅಮಲು ಪದಾರ್ಥಗಳನ್ನು ಕೊಟ್ಟವರು ಯಾರು? ಎಂಬ ಪ್ರಶ್ನೆಗಳನ್ನಿಟ್ಟುಕೊಂಡೇ ಪೊಲೀಸರು ತನಿಖೆ ಆರಂಭಿಸಿದ್ದರು. ಇದೀಗ ಪೊಲೀಸರು ಬೆಂಗಳೂರಿಗೆ ಎಂಟ್ರಿಯಾಗಿದ್ದು, ಮತ್ತೋರ್ವ ಆರೋಪಿ ಮೂಲದ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಇದನ್ನೂ ಓದಿ: Apple iPhone 16 series launched – ಭಾರತದಲ್ಲಿ ಎಷ್ಟು ದರ? ಬೇರೆ ದೇಶಗಳಲ್ಲಿ ಎಷ್ಟು ದರ?
ಅಲ್ತಾಫ್‌ಗೆ ಡ್ರಗ್ಸ್ ನೀಡಿದ್ದ ವ್ಯಕ್ತಿ ಅಭಯ್. ಈತನ ಜೊತೆ ಡ್ರಗ್ಸ್ ದಂಧೆಯಲ್ಲಿದ್ದವರು ಗಿರಿರಾಜ್, ಜಾನ್ ಶಂಕರಪುರ ಹಾಗೂ ಕಾರ್ಕಳದ ಶಾಹಿದ್. ಈಗಾಗಲೇ ಪೊಲೀಸರು ಐವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದರ ನಡುವೆ ಕೃತ್ಯಕ್ಕೆ ಬಳಸಿದ್ದ ಕಾರಿನಲ್ಲಿ ಹಾಗೂ ಆರೋಪಿಗಳನ್ನು ಸೆರೆ ಹಿಡಿಯುವಾಗ ಸಿಕ್ಕ ಮಾದಕ ವಸ್ತುಗಳು ನಿಷೇಧಿತ ಎಂಡಿಎಂಎ ಎಂಬುದು ದೃಢಪಟ್ಟಿದೆ. ಬೆಂಗಳೂರಿನ ಆ ವ್ಯಕ್ತಿಯಿಂದಲೇ ಆರೋಪಿಗಳು ಡ್ರಗ್ಸ್ ಖರೀದಿಸಿದರು ಎಂಬುದು ತನಿಖೆ ವೇಳೆ ಬಯಲಾಗಿದೆ. ಜೊತೆಗೆ ಎಂಡಿಎಂಎ ಮಾದಕ ದ್ರವ್ಯಕ್ಕೆ ಕರಾವಳಿಯಲ್ಲಿ ಭಾರೀ ಬೇಡಿಕೆ ಇರುವುದೂ ಬಹಿರಂಗವಾಗಿದೆ. ಹೀಗಾಗಿ ಬೆಂಗಳೂರು ಮೂಲದ ಡ್ರಗ್ ಪೆಡ್ಲರ್ ಬೆನ್ನು ಹತ್ತಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ದರ್ಶನ್ ಜೊತೆಗೆ ಸಂಪರ್ಕ ಬೆಳೆದಿದ್ದು ಹೇಗೆ? – ಎಳೆಎಳೆಯಾಗಿ ಬಿಚ್ಚಿಟ್ಟ ಪವಿತ್ರಾಗೌಡ
ಬೆಂಗಳೂರಿನ ಡ್ರಗ್ ಪೆಡ್ಲರ್‌ನನ್ನು ವಶಕ್ಕೆ ಪಡೆದ ಬೆನ್ನಲ್ಲೇ ಮಾದಕ ಜಾಲದ ಮೂಲಕ್ಕೆ ಪೊಲೀಸರು ಕೈ ಹಾಕಿದ್ದಾರೆ. ಆರು ಮಂದಿ ಆರೋಪಿಗಳ ಬಂಧನ ಆಗುತ್ತಿದ್ದಂತೆ ಅವರ ಲಿಂಕ್‌ನಲ್ಲಿರುವ ಮತ್ತಷ್ಟು ಪೆಡ್ಲರ್‌ಗಳು, ಗ್ರಾಹಕರ ಫೋನ್‌ಗಳು ಸ್ವಿಚ್ ಆಫ್ ಆಗಿವೆ. ಪೊಲೀಸರ ತನಿಖೆಗೆ ಈ ಬೆಳವಣಿಗೆ ಕೊಂಚ ಹಿನ್ನಡೆಯಾಗಿದ್ದು, ಕೇಸ್ ಸಂಬಂಧ ಕೆಲವು ವರದಿಗಳಿಗಾಗಿ ಪೊಲೀಸರು ಕಾದು ಕುಳಿತಿದ್ದಾರೆ.
ಈ ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾವಣೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 1.70 ಕೋಟಿ ರೂ., 7700 ಯುಎಸ್ ಡಾಲರ್ (6.46 ಲಕ್ಷ ರೂ.) ವಶಪಡಿಸಿಕೊಳ್ಳಲಾಗಿದೆ. ದುಬೈನಲ್ಲಿ ವಂಚನೆ ಮಾಡಲು ಆರೋಪಿಗಳು ಭಾರತೀಯ ಬ್ಯಾಂಕ್ ಅಕೌಂಟ್ ಬಳಸಿದ್ದಾರೆ. ಈ ಕುರಿತಂತೆ ಸಿಐಡಿ ಅಧಿಕಾರಿಗಳು ತನಿಖೆ ನಡಸುತ್ತಿದ್ದಾರೆ. ಇದನ್ನೂ ಓದಿ: ಖಾಸಗಿ ಸಂಸ್ಥೆ ಮೂಲಕ ಗ್ಯಾರಂಟಿಗಳ ಸರ್ವೆಗೆ ಮುಂದಾದ ರಾಜ್ಯ ಸರ್ಕಾರ
ಮಂಗಳೂರು: ಇಲ್ಲಿನ (Mangaluru Jail) ಕೋಡಿಯಾಲ್‌ಬೈಲ್‌ನಲ್ಲಿರುವ ಕಾರಾಗೃಹದ ಮೇಲೆ ಪೊಲೀಸರು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಗಾಂಜಾ, ಡ್ರಗ್ಸ್, ಮೊಬೈಲ್ ಸೇರಿ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
25 ಮೊಬೈಲ್ ಫೋನ್‌ಗಳು, ಐದು ಚಾರ್ಜರ್, ಐದು ಇಯರ್ ಫೋನ್, ಒಂದು ಬ್ಲೂಟೂತ್ ಡಿವೈಸ್, ಒಂದು ಪೆನ್‌ಡ್ರೈವ್, ಒಂದು ಕತ್ತರಿ ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗಿವೆ. ಎಲ್ಲವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡ್ರಗ್, ಗಾಂಜಾ ಪತ್ತೆ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ ವಾಲ್ ತನಿಖೆಗೆ ಆದೇಶ ನೀಡಿದ್ದಾರೆ.