ಬೆಂಗಳೂರು: ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ(FRRO) ಮತ್ತು ಸಿಸಿಬಿ ಪೊಲೀಸರು ನಗರದ 2 ಪಬ್‌ಗಳ ಮೇಲೆ ಜಂಟಿ ಕಾರ್ಯಾಚರಣೆ ನಡೆಸಿ, ಇಬ್ಬರು ವಿದೇಶಿ ಡ್ರಗ್ ಪೆಡ್ಲರ್‌ಗಳನ್ನು (Drug Peddlers) ಬಂಧಿಸಿದ್ದಾರೆ.
ನಗರದಲ್ಲಿ ಐಷಾರಾಮಿ ಟೆಕ್ನೋ ಪಾರ್ಟಿಗಳಿಗೆ ವಿವಿಧ ರೀತಿಯ ಡ್ರಗ್ ಸರಬರಾಜು ಮಾಡುತ್ತಿರೋ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಇದೇ ವೇಳೆ ವಿದೇಶಿಗರು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಅನ್ನೋ ಮಾಹಿತಿ ಮೇರೆಗೆ ಶನಿವಾರ ರಾತ್ರಿ ನಗರದ ಎಂಜಿ ರೋಡ್ (MG Road) ಮತ್ತು ಕೋರಮಂಗಲದ (Koramangala) 2 ಪಬ್‌ಗಳ ಮೇಲೆ ದಾಳಿ ಮಾಡಿದ್ದರು. ಇದನ್ನೂ ಓದಿ: ಮತಾಂತರಕ್ಕೆ ‘ಮಿಟ್ಟಿ, ಕಾಜಲ್, ದರ್ಶನ್’ ಅಂತ ಕೋಡ್ ವರ್ಡ್ ಬಳಸುತ್ತಿದ್ದ ಛಂಗೂರ್ ಬಾಬಾ
ದಾಳಿ ವೇಳೆ ಪಬ್‌ಗಳಲ್ಲಿ ಡಿಜೆ ಆಪರೇಟರ್‌ಗಳಾಗಿ ಕೆಲಸ ಮಾಡ್ತಿದ್ದ ಇಬ್ಬರು ವಿದೇಶಿಗರು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು ಪಬ್‌ಗಳಿಂದಲೇ ಯುವಕರನ್ನು ಸಂಪರ್ಕ ಮಾಡಿ ಡ್ರಗ್ಸ್ ರವಾನಿಸುತ್ತಿದ್ದರು. ಅಷ್ಟೇ ಅಲ್ಲದೇ ಹೊರಗಿನ ಐಷಾರಾಮಿ ಪಾರ್ಟಿಗಳಿಗೂ ಡ್ರಗ್ಸ್ ಸರಬರಾಜು ಮಾಡ್ತಿರೋದು ಗೊತ್ತಾಗಿದೆ. ಇದನ್ನೂ ಓದಿ: ತ್ರಿಪುರದ ಯುವತಿ ದೆಹಲಿಯಲ್ಲಿ ನಿಗೂಢವಾಗಿ ನಾಪತ್ತೆ – ಪ್ರಕರಣದ ಸುತ್ತ ಹಲವು ಅನುಮಾನಗಳ ಹುತ್ತ!
ವಿಚಾರಣೆ ವೇಳೆ ವಿದ್ಯಾಭ್ಯಾಸ ವೀಸಾದಲ್ಲಿ ಬಂದಿರುವ ಹಲವರು, ವೀಸಾ ಅವಧಿ ಮುಗಿದ ನಂತರವೂ ಇಲ್ಲೇ ಉಳಿದುಕೊಂಡು ಡ್ರಗ್ ಪೆಡ್ಲರ್‌ಗಳಾಗಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.
– 461 ಸ್ಥಳಗಳಲ್ಲಿ ರೇಡ್; 2.09 ಕೆಜಿ ಹೆರಾಯಿನ್, 1.8 ಲಕ್ಷ ರೂ ನಗದು ಸೀಜ್
ಚಂಡೀಗಢ: ಪಂಜಾಬ್ ಪೊಲೀಸರು (Punjab Police) ಭಾನುವಾರ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಒಂದೇ ದಿನ 113 ಮಂದಿ ಡ್ರಗ್ ಪೆಡ್ಲರ್‌ಗಳನ್ನು (Drug Peddlers) ಬಂಧಿಸಿದ್ದಾರೆ. ಬಂಧಿತರಿಂದ 2.09 ಕೆಜಿ ಹೆರಾಯಿನ್, 530 ಗ್ರಾಂ ಅಫೀಮು, 32,679 ಮಾದಕವಸ್ತು ಮಾತ್ರೆಗಳು ಮತ್ತು ಮಾದಕವಸ್ತುಗಳ ಮಾರಾಟದಿಂದ ಬಂದ 1.8 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ.
ಪಂಜಾಬ್ ಸರ್ಕಾರದ `ಯುದ್ಧ ನಾಶಿಯಾನ್ ವಿರುಧ್’ (ಮಾದಕವಸ್ತು ವಿರೋಧಿ ಯುದ್ಧ) ಅಭಿಯಾನವು ಭಾನುವಾರ 92ನೇ ದಿನಕ್ಕೆ ಕಾಲಿಟ್ಟಿದೆ. ಅಭಿಯಾನ ಪ್ರಾರಂಭವಾಗಿ 92 ದಿನಗಳಲ್ಲೇ 14,944 ಮಂದಿ ಡ್ರಗ್ ಪೆಡ್ಲರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಡಿಜಿಪಿ ಗೌರವ್ ಯಾದವ್ ಅವರ ನಿರ್ದೇಶನದ ಮೇರೆ ಪಂಜಾಬ್‌ನ ಎಲ್ಲಾ 28 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಇದನ್ನೂ ಓದಿ: ಫೈನಲ್‌ನಲ್ಲಿ ಸೆಣೆಸಲಿರುವ ಆರ್‌ಸಿಬಿಗೆ ಗಣ್ಯರಿಂದ ಶುಭಾಶಯಗಳ ಮಹಾಪೂರ!
86 ಗೆಜೆಟೆಡ್ ಅಧಿಕಾರಿಗಳ ನೇತೃತ್ವದಲ್ಲಿ 1,400ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ 200ಕ್ಕೂ ಹೆಚ್ಚು ಪೊಲೀಸ್ ತಂಡಗಳು 461 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಿವೆ. ಈ ಪ್ರಕರಣ ಸಂಬಂಧ 83 ಎಫ್‌ಐಆರ್ ದಾಖಲಾಗಿದೆ. ಈಗಾಗಲೇ 113 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಲಾಗಿದ್ದು, 382 ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿದೆ ಕಾನೂನು ಮತ್ತು ಸುವ್ಯವಸ್ಥೆಯ ವಿಶೇಷ ಡಿಜಿಪಿ ಅರ್ಪಿತ್ ಶುಕ್ಲಾ ತಿಳಿಸಿದ್ದಾರೆ. ಇದನ್ನೂ ಓದಿ: ಟೆಸ್ಲಾಗೆ 2 ಶೋ ರೂಂ ತೆರೆಯುವ ಆಸಕ್ತಿ ಇದೆ, ಆದ್ರೆ ಭಾರತದಲ್ಲೇ ಕಾರು ಉತ್ಪಾದಿಸುವ ಆಸಕ್ತಿ ಇಲ್ಲ: ಹೆಚ್‌ಡಿಕೆ
ಪಂಜಾಬ್ ಸರ್ಕಾರವು ಮಾದಕ ದ್ರವ್ಯಗಳನ್ನು ನಿರ್ಮೂಲನೆ ಮಾಡಲು ಉದ್ದೇಶದಿಂದ ಜಾರಿ, ಮಾದಕ ದ್ರವ್ಯಗಳ ನಿಷೇಧ ಮತ್ತು ತಡೆಗಟ್ಟುವಿಕೆ ಎಂಬ ಮೂರು ಹಂತದ ಕಾರ್ಯಾಚರಣೆಯನ್ನು ಜಾರಿಗೊಳಿಸುತ್ತಿದೆ. ವ್ಯಸನ ಮುಕ್ತಿ ಅಭಿಯಾನದ ಭಾಗವಾಗಿ ಸೋಮವಾರ ಪೊಲೀಸರು, 92 ಮಂದಿಯನ್ನು ವ್ಯಸನ ಮುಕ್ತಿ ಮತ್ತು ಪುನರ್ವಸತಿ ಚಿಕಿತ್ಸೆಗೆ ಒಳಪಡಿಸಲು ಮನವೊಲಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಸಚಿವ ಜಾರ್ಜ್ ಪುತ್ರ ರಾಣಾಗೆ ರಿಲೀಫ್ – ನುಗು ಅಭಯಾರಣ್ಯ ರಸ್ತೆಯಲ್ಲಿ ರಾತ್ರಿ ಸಂಚಾರಕ್ಕೆ ಹೈಕೋರ್ಟ್ ಅಸ್ತು
ಪಂಜಾಬ್ ಪೊಲೀಸರು ತಂಡಗಳಾಗಿ ಫಜಿಲ್ಕಾ, ಫಿರೋಜ್‌ಪುರ, ಶ್ರೀ ಮುಕ್ತ್ಸರ್ ಸಾಹಿಬ್, ಫರೀದ್‌ಕೋಟ್ ಮತ್ತು ಮೋಗಾ ಜಿಲ್ಲೆಗಳ 106 ಔಷಧೀಯ ಕೇಂದ್ರಗಳನ್ನು ತಪಾಸಣೆ ನಡೆಸಿದ್ದಾರೆ. ಮಾದಕ ದ್ರವ್ಯ ಹಾಗೂ ಯಾವುದೇ ವ್ಯಸನಕಾರಿ ಔಷಧಿಗಳನ್ನು ಮಾರಾಟ ಮಾಡುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ.
Based on actionable intelligence, @karimganjpolice intercepted a vehicle coming from a neighbouring State and recovered 1,00,000 YABA tablets from hidden chambers of the vehicle.
ಖತರ್ನಾಕ್‌ಗಳು ಸಿಕ್ಕಿಬಿದ್ದಿದ್ದೇ ರೋಚಕ:
ಮಿಜೋರಂ ಕಡೆಯಿಂದ ಯಾಬಾ ಮಾತ್ರೆಗಳನ್ನು ಸಾಗಿಸುತ್ತಿರುವುದಾಗಿ ಮಾಹಿತಿ ಬಂದಿತ್ತು. ತಕ್ಷಣ ರಟಾಬರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಕಾಬಂಧಿ ರಚಿಸಿ ತಪಾಸಣೆ ಶುರು ಮಾಡಿದ್ದೆವು. ಮೊದಲು ಇಡೀ ವಾಹನ ಜಾಲಾಡಿದರೂ ಏನೂ ಸಿಕ್ಕಿರಲಿಲ್ಲ. ಕೊನೆಗೆ ಡೀಸೆಲ್ ಟ್ಯಾಂಕ್ (Diesel Tank) ಪರಿಶೀಲಿಸಿದಾಗ ಯಾಬಾ ಮಾತ್ರೆಗಳುಳ್ಳ 10 ಪ್ಯಾಕೆಟ್ ಪತ್ತೆಯಾಯಿತು. ಬಳಿಕ ಮಾತ್ರೆಗಳನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಲಾಯಿತು. ಮಾದಕ ವಸ್ತುಗಳ ಮಾರುಕಟ್ಟೆಯಲ್ಲಿ ಈ ಮಾತ್ರೆಗಳ ಮೌಲ್ಯ ಸುಮಾರು 30 ಕೋಟಿ ರೂ. ಇದೆ ಎಂದು ಪೊಲೀಸರು ತಿಳಿಸಿದ್ದಾರೆ.