Tag: drug mafia

  • ಬೆಳ್ಳಂಬೆಳಗ್ಗೆ ತುಪ್ಪದ ಬೆಡಗಿಗೆ ಶಾಕ್ – ರಾಗಿಣಿ ಮನೆಗೆ ಸಿಸಿಬಿ ದಾಳಿ

    ಬೆಳ್ಳಂಬೆಳಗ್ಗೆ ತುಪ್ಪದ ಬೆಡಗಿಗೆ ಶಾಕ್ – ರಾಗಿಣಿ ಮನೆಗೆ ಸಿಸಿಬಿ ದಾಳಿ

    ಬೆಂಗಳೂರು: ಬೆಳ್ಳಂಬೆಳಗ್ಗೆ ತುಪ್ಪದ ಬೆಡಗಿ ನಟಿ ರಾಗಿಣಿ ಮನೆಯ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

    ಸರ್ಚ್ ವಾರೆಂಟ್ ಪಡೆದು ಯಲಹಂಕದಲ್ಲಿರುವ ನಟಿ ರಾಗಿಣಿ ಮನೆ ಮೇಲೆ ಪೊಲೀಸರು ಮತ್ತು ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐದರಿಂದ ಆರು ಮಂದಿ ಸಿಸಿಬಿ ಅಧಿಕಾರಿಗಳು ಡ್ರಗ್ಸ್ ಕೇಸ್ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದಾರೆ. ರಾಗಿಣಿ ಮನೆಯಲ್ಲಿಯೇ ಇದ್ದು, ಸಿಸಿಬಿ ಕೋರ್ಟಿನಿಂದ ಸರ್ಚ್ ವಾರೆಂಟ್ ಪಡೆದು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ವಿಚಾರಣೆಗೆ ಹಾಜರಾಗದಿರಲು ಪೊಲೀಸರಿಗೆ ರಾಗಿಣಿ ನೀಡಿದ ಕಾರಣ

    ನಟಿ ರಾಗಿಣಿ ಮನೆ ಮೇಲೆ ರೈಡ್ ಮಾಡಿರೋದಾಗಿ ಅಪರಾಧ ವಿಭಾಗದ ಜಂಟಿ ಪೊಲೀಸ್ ಅಧಿಕಾರಿ ಸಂದೀಪ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಗುರುವಾರ ರಾಗಿಣಿ ಆಪ್ತ ರವಿಶಂಕರ್ ನನ್ನ ಸಿಸಿಬಿ ಬಂಧಿಸಿದ್ದರು. ಆತ ನೀಡಿದ ಮಾಹಿತಿ ಆಧಾರದ ಮೇರೆಗೆ ಇಂದು ಬೆಳ್ಳಂಬೆಳಗ್ಗೆ ರಾಗಿಣಿಗೆ ಮನೆಗೆ ಸಿಸಿಬಿ ಅಧಿಕಾರಿಗಳು ಆಗಮಿಸಿದ್ದಾರೆ. ಇದನ್ನೂ ಓದಿ: ಸಿಸಿಬಿ ನೋಟಿಸ್ ನೀಡಿದ್ದು ನಿಜ: ರಾಗಿಣಿ ದ್ವಿವೇದಿ

    ಸಿಸಿಬಿ ಅಧಿಕಾರಿಗಳು ನಟಿ ರಾಗಿಣಿಯ ಇಡೀ ಮನೆಯನ್ನು ತಪಾಸಣೆ ನಡೆಸುತ್ತಿದ್ದಾರೆ. ಇದೇ ವೇಳೆ ರಾಗಿಣಿಗೆ ಸೇರಿದ ಬರೋಬ್ಬರಿ ನಾಲ್ಕು ಮೊಬೈಲ್ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಚಲಾವಣೆ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಮನೆ ತಪಾಸಣೆ ಮಾಡುತ್ತಿದ್ದಾರೆ. ಇದೀಗ ನಟಿ ರಾಗಿಣಿ ಬಂಧನದ ಭೀತಿಯಲ್ಲಿದ್ದಾರೆ.

    ಗುರುವಾರವೇ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿದ್ದರು. ಆದರೆ ಕೊರೊನಾ ರೋಗಿಗಳಿಗೆ ಸಹಾಯ ಮಾಡುತ್ತಿದ್ದು, ಪ್ಲಾಸ್ಮಾ ಥೆರಪಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ. ಈ ಕಾರ್ಯಕ್ರಮ ಮೊದಲೇ ನಿಗದಿಯಾಗಿದ್ದು, ಬಿಟ್ಟು ಬಂದ್ರೆ ತೊಂದರೆ ಆಗಲಿದೆ. ಸೋಮವಾರ ವಿಚಾರಣೆಗೆ ಹಾಜರಾಗುತ್ತೇನೆ ಎಂದು ವಕೀಲರ ಮೂಲಕ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ಸೋಮವಾರ ಬೇಡ, ನಾಳೆಯ ಬನ್ನಿ ಅನ್ನೋ ಸಂದೇಶವನ್ನು ಸಿಸಿಬಿ ಅಧಿಕಾರಿಗಳು ರವಾನಿಸಿದ್ದರು.

  • 40 ವರ್ಷಗಳ ಅನುಭವದಲ್ಲಿ ಡ್ರಗ್ಸ್ ಇರೋದು ನಾನು ಕಂಡಿಲ್ಲ: ಸುಮಲತಾ

    40 ವರ್ಷಗಳ ಅನುಭವದಲ್ಲಿ ಡ್ರಗ್ಸ್ ಇರೋದು ನಾನು ಕಂಡಿಲ್ಲ: ಸುಮಲತಾ

    – ಯುವಜನರು ದುಶ್ಚಟಗಳ ದಾಸರಾಗೋದು ತಪ್ಪು

    ಬೆಂಗಳೂರು: 40 ವರ್ಷಗಳ ಅನುಭವದಲ್ಲಿ ಡ್ರಗ್ಸ್ ಇರೋದು ನಾನು ಕಂಡಿಲ್ಲ ಎಂದು ನಟಿ ಮತ್ತು ಮಂಡ್ಯ ಸಂಸದೆ ಸುಮಲತಾ ಅವರು ಹೇಳಿದ್ದಾರೆ.

    ಇಂದು ಸ್ಯಾಂಡಲ್‍ವುಡ್‍ನಲ್ಲಿ ಖ್ಯಾತ ಗಾಯಕ ಎಸ್‍ಪಿಬಿಯವರು ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥನ ಕಾರ್ಯಕ್ರಮವನ್ನು ಆಯೋಚಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಡ್ರಗ್ ಮಾಫಿಯಾ ಬಗ್ಗೆ ಮಾತನಾಡಿದ ಸುಮಲತಾ ಅವರು, ಯುವಜನರು ದುಶ್ಚಟಗಳ ದಾಸರಾಗುವುದು ತಪ್ಪು ಎಂದು ತಿಳಿಸಿದರು.

    40 ವರ್ಷಗಳ ಅನುಭವದಲ್ಲಿ ಡ್ರಗ್ಸ್ ಇರೋದು ನಾನು ಕಂಡಿಲ್ಲ. ಹಾಗಂತ ಇಲ್ವೇ ಇಲ್ಲ ಅಂತಲ್ಲ, ಆದರೆ ನನ್ನ ಗಮನಕ್ಕೆ ಇಂತಹ ವಿಚಾರಗಳು ಬಂದಿಲ್ಲ. ನಮಗೆ ಗೊತ್ತಿಲ್ಲದ ವಿಷಯಗಳನ್ನು ಮಾತಾಡೋದು ತಪ್ಪಾಗುತ್ತೆ. ಡ್ರಗ್ಸ್ ನ ಕಂಟ್ರೋಲ್ ಮಾಡೋಕೆ ಅಂತಾಲೇ ಏಜೆನ್ಸಿ ಇದೆ. ಖಂಡಿತ ಯಾರೂ ಇದರಲ್ಲಿ ಪಾಲ್ಗೊಂಡಿದ್ದಾರೋ ಅವರನ್ನು ತನಿಖೆ ಮಾಡಲಬೇಕು ಎಂದು ಅಗ್ರಹಿಸಿದರು.

    ನಾನು ಒಬ್ಬ ಸೆಲೆಬ್ರಿಟಿ ಆಗಿ ಅಲ್ಲ. ಒಬ್ಬ ತಾಯಿಯಾಗಿ ಹೇಳುತ್ತಿದ್ದೇನೆ, ಯುವಜನರು ದುಶ್ಚಟಗಳ ದಾಸರಾಗುವುದು ತಪ್ಪು ಎಂದರು. ಚಿತ್ರರಂಗ ಅಂತಲ್ಲಾ ಎಲ್ಲಾ ಕಡೆ ಈ ಡ್ರಗ್ಸ್ ಮಾಫಿಯಾ ಇದೆ ಎಂದು ಸುಮಲತಾ ಅವರು ಹೇಳಿದ್ದಾರೆ.

  • ಶ್ರೀಲಂಕಾದಲ್ಲಿ ಕ್ಯಾಸಿನೋ ಹೊಂದಿರುವ ರಾಹುಲ್ ಸಂಜನಾಗೆ ಪರಿಚಯವಾಗಿದ್ದು ಹೇಗೆ?

    ಶ್ರೀಲಂಕಾದಲ್ಲಿ ಕ್ಯಾಸಿನೋ ಹೊಂದಿರುವ ರಾಹುಲ್ ಸಂಜನಾಗೆ ಪರಿಚಯವಾಗಿದ್ದು ಹೇಗೆ?

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ದಿನಕ್ಕೆ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ. ರಾಗಿಣಿ ಆಪ್ತ ರವಿಶಂಕರ್ ನನ್ನು ಬಂಧಿಸಿದ್ದರೆ, ಸಂಜನಾ ಆಪ್ತ ರಾಹುಲ್ ಮತ್ತು ಶರ್ಮಿಳಾ ಮಾಂಡ್ರೆಯ ಗೆಳೆಯ ಕಾರ್ತಿಕ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯ ವೇಳೆ ಒಂದೊಂದೆ ಸ್ಫೋಟಕ ವಿಚಾರಗಳು ಪ್ರಕಟವಾಗುತ್ತಿದೆ.

    ಬೆಂಗಳೂರಿನಲ್ಲಿ ಹೈಟೆಕ್ ಡ್ರಗ್ ದಂಧೆ ಮಾಡುತ್ತಿದ್ದ ಮೂವರು ಡ್ರಗ್ ಡೀಲರ್ ಗಳನ್ನು ಎನ್‍ಸಿಬಿ ಪೊಲೀಸರ ಬಂಧಿಸಿದ್ದರು. ಇವರ ಕೊಟ್ಟ ಮಾಹಿತಿ ಮೇರೆಗೆ ಈಗ ನಟಿ ಸಂಜನಾಗೆ ಅಪ್ತನಾಗಿದ್ದ ರಾಹುಲ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಓರ್ವ ಡ್ರಗ್ ಡೀಲರ್ ಎಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.

    ರಾಹುಲ್ ಬೆಂಗಳೂರಿನ ಬನಶಂಕರಿ ನಗರದ ನಿವಾಸಿಯಾಗಿದ್ದಾನೆ. ಈತ ಶ್ರೀಲಂಕಾದಲ್ಲಿ ಕ್ಯಾಸಿನೋ ನಡೆಸುತ್ತಿದ್ದು, ಈ ಕ್ಯಾಸಿನೋಗೆ ಗ್ರಾಹಕರನ್ನು ಪ್ಯಾಕೇಜ್‍ನಲ್ಲಿ ಕಳಿಸಿಕೊಡುತ್ತಿದ್ದ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಜೊತೆಗೆ ಈತ ಪಾರ್ಟಿಗಳನ್ನು ಆಯೋಜನೆ ಮಾಡೋದರಲ್ಲಿ ಪಂಟರ್ ಆಗಿದ್ದ, ಹೀಗೆ ಒಂದು ಪಾರ್ಟಿಯಲ್ಲೇ ಸಂಜನಾಗೆ ಪರಿಚಯವಾಗಿದ್ದ. ಅಂದಿನಿಂದ ಯಾವುದೇ ಪಾರ್ಟಿಯಿದ್ದರೂ ಸಂಜನಾಗೆ ಆಹ್ವಾನ ಕೊಡುತ್ತಿದ್ದ ಎಂದು ತಿಳಿದು ಬಂದಿದೆ.

    ಶ್ರೀಲಂಕಾದಲ್ಲಿ ನಡೆದಿದ್ದ ಕ್ಯಾಸಿನೋ ಪಾರ್ಟಿಗೆ ಸಂಜನಾ ಸೇರಿದಂತೆ ಬೇರೆ ಬೇರೆ ಚಿತ್ರರಂಗದ ನಟಿಯರನ್ನು ರಾಹುಲ್ ಕರೆಸಿದ್ದ. ಸದ್ಯ ರಾಹುಲ್ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂಬ ಮಾಹಿತಿ ಲಭಿಸಿದ್ದು, ಸಂಜನಾಗೂ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಸಮನ್ಸ್ ನೀಡುವ ಸಾಧ್ಯತೆಯಿದೆ.

    ಈತನ ಬಗ್ಗೆ ಇಂದು ಬೆಳಗ್ಗೆ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ್ದ ಸಂಜನಾ, ಆತ ನನ್ನನ್ನು ಅಕ್ಕ ಎಂದು ಕರೆಯುತ್ತಾನೆ. ತುಂಬ ಒಳ್ಳೆಯವನು ಮತ್ತು ಜ್ಯಾಲಿ ಮನುಷ್ಯ. ರಾಹುಲ್ ಆ ತರದ ಹುಡುಗ ಅಲ್ಲ. ನನಗೆ ಸಹೋದರಿಲ್ಲ, ಪ್ರತಿ ವರ್ಷ ನಾನು ಆತನಿಗೆ ರಾಖಿ ಕಟ್ಟುತ್ತೇನೆ. ಆತನನ್ನು ಪೊಲೀಸರು ಏಕೆ ಕರೆದುಕೊಂಡು ಹೋಗಿದ್ದಾರೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದರು.

    ಅಸಲಿಗೆ ಸ್ಟಾರ್ ನಟ ನಟಿಯರಲ್ಲದೆ ರಾಜಕಾರಣಿಗಳ ಮಕ್ಕಳೂ ಕೂಡ ರಾಹುಲ್‌ಗೆ ಆಪ್ತರು. ರಾಹುಲ್ ಗೆ ಶ್ರೀಲಂಕದಾ ಕ್ಯಾಸಿನೋ ಗಳ ಹಿಡಿತವಿದೆ. ಹೀಗಾಗಿಯೇ ರಾಜಕಾರಣಿಗಳ ಮಕ್ಕಳನ್ನು ಕ್ಯಾಸಿನೋಗೆ ಕಳುಹಿಸುತ್ತಿದ್ದ. ಕ್ಯಾಸಿನೋಗೆ ಕಳುಹಿಸಿಕೊಡುವ ಮೂಲಕ ರಾಜಕಾರಣಿಗಳ ಮಕ್ಕಳ ಸ್ನೇಹವನ್ನು ಸಂಪಾದಿಸುತ್ತಿದ್ದ. ಕ್ಯಾಸಿನೋಗಳಲ್ಲಿ ಪಾರ್ಟಿ ಆಯೋಜನೆ ಮಾಡಿ ಎಲ್ಲವನ್ನು ರಾಹುಲ್ ಒದಗಿಸಿಕೊಡುತ್ತಿದ್ದ.

  • ಪ್ರಚಾರಕ್ಕಾಗಿ ಈ ರೀತಿ ಮಾಡ್ತಿದ್ದಾರೆ – ಸಂಬರಗಿ ವಿರುದ್ಧ ಸಾರಾ ಗೋವಿಂದು ಆಕ್ರೋಶ

    ಪ್ರಚಾರಕ್ಕಾಗಿ ಈ ರೀತಿ ಮಾಡ್ತಿದ್ದಾರೆ – ಸಂಬರಗಿ ವಿರುದ್ಧ ಸಾರಾ ಗೋವಿಂದು ಆಕ್ರೋಶ

    ಬೆಂಗಳೂರು: ಪ್ರಚಾರಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಸಾರಾ ಗೋವಿಂದ್ ಅವರು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾದ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಈ ವಿಚಾರದ ಬಗ್ಗೆ ಮಾತನಾಡಿದ್ದ ಪ್ರಶಾಂತ್ ಸಂಬರಗಿಯವರು, ಕೆಲ ನಟ-ನಟಿಯರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ಆರೋಪ ಮಾಡಿದ್ದರು. ಇದಕ್ಕೆ ಸಾರಾ ಗೋವಿಂದ್ ಅವರು ಸಂಬರಗಿ ನಮ್ಮ ಚಿತ್ರರಂಗದವರೇ ಅಲ್ಲ ಎಂದು ದೂರಿದ್ದರು. ಈಗ ಇದೇ ವಿಚಾರವಾಗಿ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ.

    ಇಂದು ಈ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಾರಾ ಗೋವಿಂದು, ಹಾದಿ ಬಿದಿಯಲ್ಲಿ ಮಾತಾಡೋರಿಗೆಲ್ಲಾ ಉತ್ತರ ಕೊಡೋಕಾಗಲ್ಲ. ಪ್ರಶಾಂತ್ ಸಂಬರಗಿ ಯಾರು? ನಮ್ಮ ಮೆಂಬರ್ ಅಲ್ಲ, ಸದಸ್ಯ ಅಲ್ಲ. ಕನ್ನಡ ಚಿತ್ರ ರಂಗಕ್ಕೂ ಪ್ರಶಾಂತ್ ಸಂಬರಗಿಗೂ ಏನ್ ಸಂಬಂಧ, ಚಿತ್ರರಂಗಕ್ಕೆ ಇವರ ಕೊಡುಗೆ ಏನು? ನಮ್ಮ ಬಗ್ಗೆ ಮಾತಾಡೋಕೆ, ಪ್ರಶ್ನೆ ಮಾಡೋಕೆ ಇವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

    ವಾಣಿಜ್ಯ ಮಂಡಳಿಗೆ ಒಂದು ಘನತೆ, ಗೌರವ ಇದೆ. ಎಲ್ಲೋ ಕುಳಿತುಕೊಂಡು ಮಾತಾಡೋದಲ್ಲ. ಮೊದಲು ಕನ್ನಡ ಬೆಳೆಸಿ, ಕನ್ನಡತನ ಉಳಿಸಿ ಆಮೇಲೆ ಚಿತ್ರರಂಗದ ಬಗ್ಗೆ ಮಾತಾಡಿ. ನಮ್ಮ ಚಿತ್ರರಂಗ ಬೆಳೆಸೋದಕ್ಕೆ, ಉಳಿಸೋದಕ್ಕೆ ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ನಿಮ್ಮಿಂದ ನಾವು ಕಲಿಯಬೇಕಿಲ್ಲ, ಚಿತ್ರರಂಗದ ಬಗ್ಗೆ ಮಾತಾಡುವಾಗ ಹಗುರವಾಗಿ ಮಾತಾಡಬೇಡಿ. ಮಂಡಳಿ ರಚನೆ ಆಗಿ 75 ವರ್ಷ ಆಗಿದೆ. ವಾಣಿಜ್ಯ ಮಂಡಳಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಅವರ ಮಾತಿಗೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಸಾರಾ ಗೋವಿಂದು ಅವರು ಕಿಡಿಕಾರಿದ್ದಾರೆ.

  • ಸಿಸಿಬಿ ಪೊಲೀಸರಿಗೆ ನನಗಿಂತ ಹೆಚ್ಚಿನ ಮಾಹಿತಿ ಗೊತ್ತಿದೆ: ಇಂದ್ರಜಿತ್

    ಸಿಸಿಬಿ ಪೊಲೀಸರಿಗೆ ನನಗಿಂತ ಹೆಚ್ಚಿನ ಮಾಹಿತಿ ಗೊತ್ತಿದೆ: ಇಂದ್ರಜಿತ್

    – ನಾನೊಬ್ಬ ಮೆಸೆಂಜರ್ ಆಗಿದ್ದು ಮೆಸೆಂಜರನ್ನು ಕೊಲ್ಲಬೇಡಿ

    ಬೆಂಗಳೂರು: ಸಿಬಿಐಗೆ ನನಗಿಂತ ಹೆಚ್ಚಿನ ಮಾಹಿತಿ ಗೊತ್ತಿದೆ ಎಂದು ನಟಿ-ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಹೇಳಿದ್ದಾರೆ.

    ಸ್ಯಾಂಡಲ್‍ವುಡ್ ಮೂರನೇ ಪೀಳಿಗೆಯ ಯುವ ನಟ-ನಟಿಯರು ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಆರೋಪ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಗೆ ಮಾಹಿತಿ ಕೂಡ ನೀಡಿದ್ದರು. ಇಂದು ಮತ್ತೆ ಎರಡನೇ ಬಾರಿ ಇಂದ್ರಜಿತ್ ಅವರು ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು.

    ವಿಚಾರಣೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ನಾನು ನೀಡಿದ ಮಾಹಿತಿ ಬಗ್ಗೆ ಸ್ಪಷ್ಟನೆ ನೀಡಬೇಕಿತ್ತು. ಅದಕ್ಕೆ ನನ್ನನ್ನು ಕರೆಸಿದ್ದಾರೆ. ಬಂದು ಸ್ಪಷ್ಟನೆ ನೀಡಿದ್ದೇನೆ. ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಸಿಸಿಬಿ ಪೊಲೀಸರ ಮೇಲೆ ನನಗೆ ಭರವಸೆ ಇದೆ. ಅವರು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಅವರಿಗೆ ಕೆಲಸ ಮಾಡಲು ಸ್ವಾತಂತ್ರ್ಯ ಸಿಕ್ಕಿದೆ. ಇದೆಲ್ಲವೂ ಕ್ಲೀನ್ ಆಗುತ್ತದೆ ಎಂದು ಹೇಳಿದರು.

    ನಾನು ಒಬ್ಬ ಮೆಸೆಂಜರ್. ಯಾರೇ ಆಗಲಿ ಮೆಸೆಂಜರ್ ಅನ್ನು ಕೊಲ್ಲಬೇಡಿ. ನಾನು ಪರಿವಾಳದ ರೀತಿ, ಮಾಹಿತಿ ಕೊಟ್ಟು ಅಧಿಕಾರಿಗಳ ತನಿಖೆಗೆ ಸಹಾಯವಾಗುವ ರೀತಿಯಲ್ಲಿ ಮಾಡುತ್ತಿದ್ದೇನೆ. ನನಗೆ ಏನೂ ತಿಳಿದೆ ಅದನ್ನು ಹೇಳಿದ್ದೇನೆ. ಅವರು ತನಿಖೆ ಮಾಡಲಿದ್ದಾರೆ. ಇದರಿಂದ ಸಮಾಜಕ್ಕೆ ಅರಿವಾಗಿದೆ, ಭಯ ಬಂದಿದೆ. ಚಿತ್ರರಂಗದ ನಟ-ನಟಿಯರಿಗೂ ಅರಿವಾಗಿದೆ. ಕಾಲೇಜು ವಿದ್ಯಾರ್ಥಿಗಳು ಈ ಮೆಸೇಜ್ ಹೋಗಬೇಕಿತ್ತು, ಹೋಗಿದೆ ಎಂದು ಇಂದ್ರಜಿತ್ ತಿಳಿಸಿದ್ದಾರೆ.

    ಸಿಸಿಬಿ ಪೊಲೀಸರಿಗೆ ನನಗಿಂತ ಹೆಚ್ಚಿನ ಮಾಹಿತಿ ಇದೆ. ಅವರು ತನಿಖೆ ಮಾಡುತ್ತಿದ್ದಾರೆ. ನಾನು ಈಗ ಏನೇ ಹೇಳಿದರು ಅದ ತನಿಖೆಗೆ ಧಕ್ಕೆ ಆಗಲಿದೆ. ನನಗೆ ಯಾರದ್ದೋ ಸರ್ಟಿಫಿಕೆಟ್ ಬೇಕಿಲ್ಲ. ನಾನೂ ಕನ್ನಡದಲ್ಲಿ 9 ಸಿನಿಮಾ ಮಾಡಿದ್ದೇನೆ. ಬೇರೆ ಭಾಷೆಯಲ್ಲಿ ಸಿನಿಮಾ ಮಾಡಿದ್ದೇನೆ. ನನಗೆ ಜನರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ನನಗೆ ಚಿತ್ರರಂಗ ಒಳ್ಳೆಯ ದಾರಿಯಲ್ಲಿ ಹೋಗಬೇಕು. ಇಂದು ಯಾವುದೇ ಹೊಸ ಹೆಸರನ್ನು ಕೊಟ್ಟಿಲ್ಲ ಎಂದು ಇಂದ್ರಜಿತ್ ಹೇಳಿದ್ದಾರೆ.

  • ಗಾಂಜಾ ಡ್ರಗ್ ಅಲ್ಲ ಅದು ಮೆಡಿಸಿನ್, ಅದನ್ನು ಕಾನೂನು ಬದ್ಧ ಮಾಡಿ: ಯುವ ನಟ ರಾಕೇಶ್

    ಗಾಂಜಾ ಡ್ರಗ್ ಅಲ್ಲ ಅದು ಮೆಡಿಸಿನ್, ಅದನ್ನು ಕಾನೂನು ಬದ್ಧ ಮಾಡಿ: ಯುವ ನಟ ರಾಕೇಶ್

    – ನಾನು ಗಾಂಜಾ ತೆಗೆದುಕೊಳ್ಳುತ್ತೇನೆ

    ಬೆಂಗಳೂರು: ಗಾಂಜಾ ಡ್ರಗ್ ಅಲ್ಲ ಅದೊಂದು ಮೆಡಿಸಿನ್ ಎಂದು ಯುವನಟ ರಾಕೇಶ್ ಅಡಿಗ ಹೇಳಿದ್ದಾರೆ.

    ಚಂದನವದಲ್ಲಿ ಡ್ರಗ್ಸ್ ಮಾಫಿಯಾದ ಬಗ್ಗೆ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ರಾಕೇಶ್, ಗಾಂಜಾದ ಬಗ್ಗೆ ಎಲ್ಲರಿಗೂ ತಪ್ಪು ಕಲ್ಪನೆ ಇದೆ. ಅದನ್ನು ತೆಗೆದು ಹಾಕಬೇಕು. ಗಂಜಾ ಡ್ರಗ್ ಅಲ್ಲ. ಅದು ಮೆಡಿಸಿನ್ ಆಗಿದ್ದು ಅದನ್ನು ಕಾನೂನು ಬದ್ಧಮಾಡಿ ಎಂದು ತಿಳಿಸಿದ್ದಾರೆ.

    ಡ್ರಗ್ ಎಂಬುದು ಇಡೀ ಪ್ರಪಂಚದಲ್ಲೇ ಇದೆ. ಈಗ ಸ್ಯಾಂಡಲ್‍ವುಡ್‍ನಲ್ಲಿ ಕೆಲವರನ್ನು ಗುರುತಿಸಿ ಅವರನ್ನು ಅಪರಾಧಿಗಳನ್ನಾಗಿ ಮಾಡಬೇಡಿ. ಅವರನ್ನು ಹೊರಗೆ ಇಡುವುದು ಬೇಡ. ಯಾರು ಅದನ್ನು ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದಕ್ಕಿಂತ ಯಾರು ತಂದು ಮಾರುತ್ತಿದ್ದಾರೆ ಅವರನ್ನು ಹಿಡಿದುಕೊಳ್ಳಬೇಕು. ನಾನು ಒಬ್ಬ ಸಾಮಾನ್ಯ ಪ್ರಜೆಯಾಗಿ ಹೇಳುತ್ತಿದ್ದೇನೆ ಗಾಂಜಾವನ್ನು ಡ್ರಗ್‍ನಿಂದ ದೂರ ಇಡಬೇಕು. ಗಾಂಜಾ ಒಂದು ಗಿಡ, ಅದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ ಎಂದು ರಾಕೇಶ್ ಹೇಳಿದರು.

    ಗಾಂಜಾ ತೆಗೆದುಕೊಂಡರೆ ಮಾತ್ರ ನಶೆಯಾಗುತ್ತದೆಯೇ, ಡ್ರಿಂಕ್ಸ್ ಮಾಡಿದರೆ ನಶೆ ಆಗುವುದಿಲ್ಲವೇ? ಗಾಂಜಾ ಬಗ್ಗೆ ಮೋದಿಯವರಿಗೂ ಬಹಿರಂಗ ಪತ್ರ ಬರೆಯಲಾಗಿದೆ. ಅಯಷ್ಮಾನ್ ಇಲಾಖೆಯವರು ಇದರ ಬಗ್ಗೆ ಸಂಶೋಧನೆ ಮಾಡುತ್ತಿದ್ದಾರೆ. ಈ ಹಿಂದೆ ಗಾಂಜಾ ಭಾರತೀಯ ಸಂಸ್ಕೃತಿಗೆ ಬೆರೆತು ಹೋಗಿತ್ತು. 1985ರಲ್ಲಿ ಇದು ಬ್ಯಾನ್ ಆಯ್ತು, ಹಾಗಾದರೆ 1985ರವರೆಗೆ ಭಾರತದಲ್ಲಿ ಎಲ್ಲರೂ ಡ್ರಗ್ ಅಡಿಕ್ಟ್ ಆಗಿದ್ರಾ ಎಂದು ರಾಕೇಶ್ ಪ್ರಶ್ನೆ ಮಾಡಿದ್ದಾರೆ.

    ಮಿಡೀಯಾದಲ್ಲಿ ಡ್ರಿಂಕ್ಸ್ ಮಾಡಿ ಅಪರಾಧ ಮಾಡಿದರೆ, ಗಾಂಜಾ ಮತ್ತಿನಲ್ಲಿ ಮಾಡಿದ್ದಾರೆ ಎಂದು ತೋರಿಸುತ್ತಾರೆ. ಇದರ ಬಗ್ಗೆ ವಿಜ್ಞಾನಿಗಳು ಕೇಳಿ ಗಾಂಜಾದ ಉಪಯೋಗಗಳ ಬಗ್ಗೆ ಹೇಳುತ್ತಾರೆ. ನಾವು ಎಲ್ಲ ವಿಚಾರದಲ್ಲೂ ಅಮೆರಿಕವನ್ನು ಫಾಲೋ ಮಾಡುತ್ತೇವೆ. ಅವರು ಅಲ್ಲಿ ಇದನ್ನು ಕಾನೂನು ಬದ್ಧ ಮಾಡಿದ್ದಾರೆ. ಅವರಿಗೆ ಹೆಚ್ಚು ಆದಾಯ ಬರುತ್ತದೆ. ಗಾಂಜಾದಿಂದ ನಮ್ಮ ಆರ್ಥಿಕತೆ ಮತ್ತು ಮೆಡಿಸಿನ್ ವಿಭಾಗಕ್ಕೆ ಲಾಭವಿದೆ. ಮದ್ಯಕ್ಕಿಂತ ಗಾಂಜಾ ಒಳ್ಳೆಯದು ಎಂದು ರಾಕೇಶ್ ಅಭಿಪ್ರಾಯಪಟ್ಟರು.

    ಜೊತೆಗೆ ನಾನೂ ಗಾಂಜಾವನ್ನು ತೆಗೆದುಕೊಳ್ಳುತ್ತಿದ್ದೆ. ಈಗಲೂ ಅದರಿಂದ ಮಾಡಿದ ಕೇಕ್, ಕುಕಿಗಳನ್ನು ಯಾರದರೂ ಮಾಡಿಕೊಟ್ಟರೆ ತಿನ್ನುತ್ತೇನೆ ಎಂದು ರಾಕೇಶ್ ಬಹಿರಂಗವಾಗಿ ಹೇಳಿಕೆ ನೀಡಿದರು.

  • ದೇಶ ಹಾಳು ಮಾಡಬೇಕಾದ್ರೆ ಬಾಂಬ್ ಹಾಕಬೇಕಿಲ್ಲ, ಯುವಕರನ್ನ ಮಾದಕ ವ್ಯಸನಿ ಮಾಡಿದ್ರೆ ಸಾಕು: ಪ್ರತಾಪ್ ಸಿಂಹ

    ದೇಶ ಹಾಳು ಮಾಡಬೇಕಾದ್ರೆ ಬಾಂಬ್ ಹಾಕಬೇಕಿಲ್ಲ, ಯುವಕರನ್ನ ಮಾದಕ ವ್ಯಸನಿ ಮಾಡಿದ್ರೆ ಸಾಕು: ಪ್ರತಾಪ್ ಸಿಂಹ

    ಮೈಸೂರು: ಒಂದು ದೇಶವನ್ನ ಹಾಳು ಮಾಡಬೇಕಾದರೆ ಬಾಂಬ್ ಹಾಕಬೇಕಿಲ್ಲ. ಆ ದೇಶದ ಯುವಕರನ್ನ ಮಾದಕ ವ್ಯಸನಿಗಳನ್ನಾಗಿ ಮಾಡಿದರೆ ಸಾಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಡ್ರಗ್ಸ್ ದಂಧೆ ಭಯೋತ್ಪಾದನೆಯ ಒಂದು ಭಾಗವಾಗಿದೆ. ಒಂದು ದೇಶವನ್ನ ಹಾಳು ಮಾಡಬೇಕಾದರೆ ಬಾಂಬ್ ಹಾಕಬೇಕಿಲ್ಲ. ಆ ದೇಶದ ಯುವಕರನ್ನ ಮಾದಕ ವ್ಯಸನಿಗಳನ್ನಾಗಿ ಮಾಡಿದರೆ ಸಾಕು. ಅವರ ಮುಂದಿನ ಪೀಳಿಗೆ ಸೇರಿ ಇಡೀ ಕುಟುಂಬವನ್ನ ಸರ್ವನಾಶವಾಗಿಸಿ ಬಿಡುತ್ತದೆ. ಈ ದಂಧೆ ಕೇವಲ ಸ್ಯಾಂಡಲ್‍ವುಡ್ ಬಾಲಿವುಡ್ ಅಷ್ಟೇ ಸೀಮಿತವಾಗಿಲ್ಲ. ಎಲ್ಲ ಕಡೆ ಡ್ರಗ್ಸ್ ಹಾಗೂ ಗಾಂಜಾ ಸಿಗುತ್ತಿದೆ. ಇದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದರು.

    ಈ ಘಟನೆಯನ್ನ ಎಚ್ಚರಿಕೆ ಪಾಠವಾಗಿ ಭಾವಿಸಿ ಡ್ರಗ್ಸ್ ನಿರ್ನಾಮ ಮಾಡಬೇಕು. ಇದರಲ್ಲಿ ಯಾರು ಭಾಗಿಯಾಗಿದ್ದಾರೆ. ಯಾವ ದೇಶದ ಯಾವ ಪೆಡ್ಲರ್‌ಗಳು ಇದ್ದಾರೆ ಅವರೆಲ್ಲರನ್ನ ಬಂಧಿಸಬೇಕು. ಡ್ರಗ್ಸ್ ಬಗ್ಗೆ ಮಾಹಿತಿ ಇರುವವರು ಮಾಹಿತಿ ಕೊಡಿ. ಎಲ್ಲ ಕಡೆ ರೇಡ್ ಆಗಲಿ, ಡ್ರಗ್ಸ್ ವಿರುದ್ಧ ನಾವೆಲ್ಲರೂ ಹೋರಾಟ ಮಾಡಬೇಕು. ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಗೃಹಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದರು.

    ಆಧಾರ ರಹಿತ ಆರೋಪಗಳಿಗೆ ನಾನು ಉತ್ತರ ಕೊಡುವುದಿಲ್ಲ. ಯಾರಾದರೂ ಒಂದು ವಿಷಯದ ಬಗ್ಗೆ ಮಾತನಾಡಬೇಕು ಎಂದರೆ ಅದಕ್ಕೆ ಸಾಕ್ಷಿ, ಆಧಾರ ಇರಬೇಕು ಎಂದು ಹೆಚ್‍ಡಿಕೆ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದರು.

    ಡ್ರಗ್ಸ್, ಗಾಂಜಾ ಸಾಮಾನ್ಯವಾಗಿ ಬಳಕೆಯಲ್ಲಿರುವ ಪದಗಳಾಗಿವೆ. ಯಾಕೆಂದರೆ ಡ್ರಗ್ಸ್‌ನಿಂದ ವಾಸನೆ ಬರಲ್ಲ, ಹೀಗಾಗಿ ಯಾರು ಸೇವನೆ ಮಾಡಿದ್ದಾರೆ ಎಂಬುದು ಗೊತ್ತಾಗಲ್ಲ. ಮದ್ಯ ಸೇವನೆ ಮಾಡಿದರು ತೂರಾಡುತ್ತಾರೆ. ಅದರಿಂದ ಅವರನ್ನು ನೋಡಿದರೆ ಕುಡಿದಿರುವುದು ಗೊತ್ತಾಗುತ್ತೆ ಅಥವಾ ವಾಸನೆಯಿಂದ ಗೊತ್ತಾಗುತ್ತದೆ. ಆದರೆ ಡ್ರಗ್ಸ್‌ ಯಾರು ಸೇವಿಸಿದ್ದಾರೆ ಎಂಬುದು ಗೊತ್ತಾಗುವುದಿಲ್ಲ.ಇದೊಂದು ಸಮಾಜಕ್ಕೆ ಪಿಡುಗಾಗಿರುವುದರಿಂದ ನಮ್ಮೆಲ್ಲರ ಜವಾಬ್ದಾರಿ ಇದೆ. ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ಪ್ರತಾಪ್ ಸಿಂಹ ಹೇಳಿದರು.

  • ಇಂದ್ರಜಿತ್ ಅಕ್ಕ ಗೌರಿ ಲಂಕೇಶ್ ಕೂಡ ಡ್ರಗ್ ಅಡಿಕ್ಟ್; ಪ್ರಮೋದ್ ಮುತಾಲಿಕ್

    ಇಂದ್ರಜಿತ್ ಅಕ್ಕ ಗೌರಿ ಲಂಕೇಶ್ ಕೂಡ ಡ್ರಗ್ ಅಡಿಕ್ಟ್; ಪ್ರಮೋದ್ ಮುತಾಲಿಕ್

    – ಡ್ರಗ್ ಮಾಫಿಯಾದಲ್ಲಿ ಪೊಲೀಸರು, ರಾಜಕಾರಣಿಗಳೂ ಇದ್ದಾರೆ

    ಹಾವೇರಿ: ಇವತ್ತು ಇಂದ್ರಜಿತ್ ಲಂಕೇಶ್ ದೊಡ್ಡ ಪ್ರಮಾಣದ ಹೀರೋ ಆಗಲು ಹೊರಟಿದ್ದಾರೆ. ನಿಮ್ಮ ಅಕ್ಕ ಗೌರಿ ಲಂಕೇಶ್ ಡ್ರಗ್ ಅಡಿಕ್ಟ್ ಆಗಿದ್ದರು. ಆಗ ನೀವೆಲ್ಲಿ ಹೋಗಿದ್ರಿ? ಆಗ ಯಾಕೆ ಮಾತನಾಡಲಿಲ್ಲ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

    ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಫಿಲ್ಮ್ ಲ್ಯಾಂಡ್ ಬಗ್ಗೆ ಮಾತನಾಡುವ ಇಂದ್ರಜಿತ್ ಲಂಕೇಶ್ ಆಗ ಯಾಕೆ ಮಾತನಾಡಲಿಲ್ಲ. ಸರ್ಜಾ ಕುಟುಂಬದವರು ಶುದ್ಧವಾಗಿದ್ದಾರೆ. ಅವರನ್ನು ಯಾಕೆ ಇದಕ್ಕೆ ಎಳೆದು ತರುತ್ತೀರಾ ಎಂದು ಇಂದ್ರಜಿತ್ ಲಂಕೇಶ್ ಅವರಿಗೆ ಪ್ರಶ್ನೆ ಮಾಡಿದ್ದಾರೆ.

    ಡ್ರಗ್ ಮಾಫಿಯಾದಲ್ಲಿ ಪೊಲೀಸರು ಮತ್ತು ರಾಜಕಾರಣಿಗಳು ಇದ್ದಾರೆ. ಪೊಲೀಸರು ಮತ್ತು ರಾಜಕಾರಣಿಗಳು ಇಲ್ಲದೆ ಡ್ರಗ್ ಮಾಫಿಯಾ ಸಾಧ್ಯವೇ ಇಲ್ಲ. ಪೊಲೀಸರಿಗೆ ಇದರ ಬಗ್ಗೆ ಎಲ್ಲವೂ ಗೊತ್ತಿರುತ್ತೆ. ದುಡ್ಡು, ಭ್ರಷ್ಟಾಚಾರ, ರಾಜಕೀಯ ಒತ್ತಡದಿಂದ ಬಾಯಿ ಬಂದ್ ಮಾಡಿಕೊಂಡಿರುತ್ತಾರೆ. ಬೇರು ಸಹಿತ ಕಿತ್ತು ಹಾಕುತ್ತೇವೆ ಎಂದು ಈಗ ಹಾರಾಡುತ್ತಾರೆ. ಆದರೆ ರಾಜಕಾರಣಿಗಳೇ ಇದರಲ್ಲಿ ಇದ್ದಾರೆ ಎಂದು ಮುತಾಲಿಕ್ ಹೇಳಿದ್ದಾರೆ.

    ಹ್ಯಾರಿಸ್ ಪುತ್ರ ಇದರಲ್ಲಿದ್ದಾರೆ. ಪೊಲೀಸರು ನಮ್ಮ ಕಡೆಯಿಂದ ಹುಡುಕಲು ಆಗಲ್ಲ ಅಂತಾ ಕೈ ಎತ್ತಲಿ, ನಾನು ತೋರಿಸುತ್ತೇನೆ ಎಂದು ಮುತಾಲಿಕ್ ಪೊಲೀಸ್ ಇಲಾಖೆಗೆ ಸವಾಲು ಹಾಕಿದರು. ಗೃಹ ಸಚಿವರು ಮತ್ತು ಸಿಟಿ ರವಿ ಬೇರು ಸಮೇತ ಕಿತ್ತು ಹಾಕುತ್ತೇವೆ ಎಂದು ಹೇಳುತ್ತಾರೆ. ಈಗ ಎಲ್ಲ ನಾಟಕ ಮಾಡುತ್ತಾರೆ. ಸ್ವಲ್ಪ ದಿನದಲ್ಲಿ ಎಲ್ಲ ಮರೆತು ಬಿಡುತ್ತಾರೆ ಎಂದು ವ್ಯಂಗ್ಯವಾಡಿದರು.

    ಈ ಹಿಂದೆ 2009ರಲ್ಲಿ ಪಬ್ ದಾಳಿ ಆದಾಗಲೆ ಡ್ರಗ್ ಮಾಫಿಯಾ ಬಗ್ಗೆ ಹೇಳಿದ್ದವು. ಅಲ್ಲಿದ್ದವರು ಡ್ರಗ್ ಸೇವನೆ ಮಾಡಿದ್ದರು. ಅವತ್ತು ಸರ್ಕಾರ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆಗ ನನ್ನನ್ನೇ ಟಾರ್ಗೆಟ್ ಮಾಡಿದರು ಎಂದು ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

  • ಡ್ರಗ್ ಮಾಫಿಯಾ- ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸುದ್ದಿಗೋಷ್ಠಿ

    ಡ್ರಗ್ ಮಾಫಿಯಾ- ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸುದ್ದಿಗೋಷ್ಠಿ

    -ತೆವಲಿಗೆ ಬಂದ ಕಲಾವಿದರು ಡ್ರಗ್ ಮಾಫಿಯಾದಲ್ಲಿ ಇರಬಹುದು

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆಯ ಕುರಿತು ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸುದ್ದಿಗೋಷ್ಠಿ ನಡೆಸಲಾಗಿತ್ತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಮಾಧ್ಯಮಗಳಲ್ಲಿ ಕಳೆದ ಕೆಲ ದಿನಗಳಿಂದ ಸ್ಯಾಂಡಲ್‍ವುಡ್ ನಲ್ಲಿ ಡ್ರಗ್ ಮಾಫಿಯಾ ಸುದ್ದಿ ನೋಡಿ ಮನಸ್ಸಿಗೆ ನೋವಾಗಿದೆ. ಇನ್ನು ನಿರ್ಮಾಪಕ ಇಂದ್ರಜಿತ್ ಲಂಕೇಶ್ ಆರೋಪಗಳ ಬಗ್ಗೆ ನಮಗೆ ಮಾಹಿತಿ ಇಲ್ಲ ಅಂದ್ರು.

    ಮಾಧ್ಯಮಗಳಲ್ಲಿ ಬರ್ತಿರುವ ಡ್ರಗ್ಸ್ ದಂಧೆಯ ಬಗ್ಗೆ ಚರ್ಚೆ ಮಾಡಲಾಗುವುದು. ಮಾಧ್ಯಮಗಳಿಂದ ಒಂದಿಷ್ಟು ಮಾಹಿತಿ ಕೂಡ ಪಡೆಯಬೇಕಿದೆ. ಕೆಲವು ಅಂಶಗಳ ಬಗ್ಗೆ ಈಗಾಗಲೇ ಮಾಹಿತಿ ಪಡೆಯಲಾಗಿದೆ. ಸುಮಾರು 6 ತಿಂಗಳಿಂದ ಉಸಿರು ಗಟ್ಟಿಸುವ ವಾತಾವರಣದಲ್ಲಿ ಚಿತ್ರರಂಗ ಇದೆ. ಇದರ ಜೊತೆಗೆ ಈಗ ಡ್ರಗ್ಸ್ ಚರ್ಚೆ ಶುರುವಾಗಿರುವುದು ತುಂಬಾ ಬೇಸರವಾಗಿದೆ. ಯಾವುದೇ ಕಂಪ್ಲೇಟ್ ಬಂದಾಗ ಅದರ ಬಗ್ಗೆ ಮಾಹಿತಿ ಪಡೆದು ಕೆಲಸ ಮಾಡುತ್ತೇವೆ ಎಂದು ಜೈರಾಜ್ ಹೇಳಿದ್ರು.

    ಇದೇ ವೇಳೆ ಮಾತನಾಡಿದ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ, ಯಾವುದೇ ಕಂಪ್ಲೇಟ್ ಬಂದಾಗ ಅದರ ಬಗ್ಗೆ ಮಾಹಿತಿ ಪಡೆದು ಕೆಲಸ ಮಾಡಲಾಗುತ್ತದೆ. ತೆವಲಿಗೆ ಬಂದಂತ ಕೆಲವು ಕಲಾವಿದರು ಈ ಡ್ರಗ್ಸ್ ಮಾಫಿಯಾದಲ್ಲಿ ಇರಬಹುದು. ನಾನು 40 ವರ್ಷದಿಂದ ನಾನು ಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿದ್ದೇನೆ. ಇಂದ್ರಜಿತ್ ಲಂಕೇಶ್ ಹೇಳಿಕೆ ಕೇಳಿ ನಮಗೆ ಶಾಕ್ ಆಯ್ತು. ಇಂದ್ರಜಿತ್ ಲಂಕೇಶ್ ಆರೋಪ ಸಾಬೀತು ಮಾಡದಿದ್ರೆ ಅವರು ಆರೋಪಿಯ ಸ್ಥಾನದಲ್ಲಿ ನಿಲ್ಲುತ್ತಾರೆ. ಇಲ್ಲದೇ ಇದ್ರೆ ಕೋರ್ಟ್ ಇಂದ್ರಜಿತ್ ಅವರಿಗೂ ಛೀಮಾರಿ ಹಾಕಬಹುದು ಎಂದು ಟಾಂಗ್ ನೀಡಿದರು.

    ಪ್ರಶಾಂತ್ ಸಂಬರ್ಗಿಯವರು ಚಿತ್ರದೋಮ್ಯದವರ ಅಲ್ಲ. ಯಾವುದೇ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿಲ್ಲ. ಸಾಮಾಜಿಕ ಕಳಕಳಿಯಿಂದಾಗಿ ಡ್ರಗ್ಸ್ ಮಾಫಿಯಾ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಚಿತ್ರರಂಗಕ್ಕೂಪ್ರಶಾಂತ್ ಸಂಬರ್ಗಿಯವರಿಗೆ ಯಾವುದೇ ಸಂಬಂಧವಿಲ್ಲ. ಇಂದ್ರಜಿಯ್ ಲಂಕೇಶ್ ನಮ್ಮ ಬಳಿ ಬರದೇ ನೇರವಾಗಿ ಮಾಧ್ಯಮಗಳ ಮುಂದೆ ಹೋಗಿದ್ದಾರೆ. ಹಾಗಾಗಿ ಇಂದ್ರಜಿತ್ ಅವರನ್ನ ಫಿಲಂ ಚೇಂಬರ್ ಗೆ ಕರೆಸಲ್ಲ. ಪ್ರಕರಣ ತನಿಖಾ ಹಂತದಲ್ಲಿ ಇರೋದರಿಂದ ಯಾವುದೇ ಕ್ರಮಕೈಗೊಳ್ಳಲ್ಲ ಎಂದು ಸಾ.ರಾ.ಗೋವಿಂದ ಹೇಳಿದರು.

  • ಕಾಂಗ್ರೆಸ್ ಮೈತ್ರಿ ಸರ್ಕಾರವನ್ನ ಬೀಳಿಸಿತ್ತೋ, ಡ್ರಗ್ ಮಾಫಿಯಾ ಬೀಳಿಸಿತೋ- ಸಿಟಿ ರವಿ ವ್ಯಂಗ್ಯ

    ಕಾಂಗ್ರೆಸ್ ಮೈತ್ರಿ ಸರ್ಕಾರವನ್ನ ಬೀಳಿಸಿತ್ತೋ, ಡ್ರಗ್ ಮಾಫಿಯಾ ಬೀಳಿಸಿತೋ- ಸಿಟಿ ರವಿ ವ್ಯಂಗ್ಯ

    – ಎಚ್‍ಡಿಕೆ ವಿರುದ್ಧ ಸಚಿವ ಸಿಟಿ ರವಿ ಟ್ವೀಟ್ ವಾಗ್ದಾಳಿ

    ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ರೂಢ ಸರ್ಕಾರದ ಸಚಿವರು ಹಾಗೂ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರ ನಡುವಿನ ಕೆಸರೆರಚಾಟ ಮುಂದುವರಿದಿದೆ.

    ಕುಮಾರಸ್ವಾಮಿ ಅವರೊಂದಿಗೆ ಟ್ವೀಟ್ ಸಚಿವ ಸುಧಾಕರ್ ನಿನ್ನೆ ಟ್ವೀಟ್ ವಾರ್ ನಡೆಸಿದರೆ, ಇಂದು ಸಚಿವ ಸಿ.ಟಿ. ರವಿ ಮಾಜಿ ಸಿಎಂ ವಿರುದ್ಧ ಟ್ವೀಟ್ ವಾಗ್ದಾಳಿ ಮಾಡಿದ್ದಾರೆ. ಡ್ರಗ್ ಮಾಫಿಯಾ ಮೈತ್ರಿ ಸರ್ಕಾರವನ್ನು ಉರುಳಿಸಿತ್ತು ಎಂಬ ಎಚ್‍ಡಿಕೆ ಅವರ ಹೇಳಿಕೆಗೆ ಸಚಿವ ಸಿಟಿ ರವಿ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಯಾವ್ಯಾವ ನಾಯಕರಿಗೆ, ಏನೇನೂ ಸೇವೆ ಮಾಡಿ 15 ವರ್ಷದಲ್ಲಿ 2 ಬಾರಿ ಸಿಎಂ ಆದ್ರಿ: ಸುಧಾಕರ್

    ಟ್ವೀಟ್ ಮಾಡಿ ತಿರುಗೇಟು ನೀಡಿರುವ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು, Odd day ಕಾಂಗ್ರೇಸ್ ನನ್ನ ಸರಕಾರವನ್ನು ಬೀಳಿಸಿತು. ಅನ್ನುವ ತಾವು EvenDay ಡ್ರಗ್ ಮಾಫಿಯಾ ನನ್ನ ಸರಕಾರವನ್ನು ಬೀಳಿಸಿತು ಅನ್ನುತ್ತೀರಿ. ಯಾವುದು ಸತ್ಯ- ಯಾವುದು ಮಿಥ್ಯ? ಭಗವಂತನೇ ಬಲ್ಲ ಈ ನಾಲಿಗೆಯ ಪರಿಯ! ಎಂದು ಹೇಳುವ ಮೂಲಕ ಎಚ್‍ಡಿಕೆ ಕಾಲೆಳೆದಿದ್ದಾರೆ. ಇದನ್ನೂ ಓದಿ: ಸಚಿವ ಸಿಟಿ ರವಿ ಅಧಿಕಾರದ ಮದದ ಮತ್ತಿನಲ್ಲಿ ತೇಲುತ್ತಿದ್ದಾರೆ: ಎಚ್‍ಡಿಕೆ

    ಅಲ್ಲದೇ, ನೀವೇ ಮುಖ್ಯಮಂತ್ರಿಯ ಸ್ಥಾನದಲ್ಲಿ ಕುಳಿತಿದ್ದಾಗ ಡ್ರಗ್ ಮಾಫಿಯಾ ನಿಮ್ಮ ಸರ್ಕಾರವನ್ನು ಬೀಳಿಸುವಷ್ಟು ಪ್ರಬಲವಾಗಿತ್ತೆ ಕುಮಾರಸ್ವಾಮಿಯವರೇ? ಒಂದು ಮಾಫಿಯಾವನ್ನು ಬಗ್ಗುಬಡಿಯದಷ್ಟು ದುರ್ಬಲವಾಗಿತ್ತೆ ತಮ್ಮ ಸರ್ಕಾರ ಮಾಜಿ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾತ್ರೋರಾತ್ರಿ ವಿಮಾನ ಬದಲಿಸಿ ಓಡಾಡಿ ಬಂದವರು ನನ್ನ ಬಗ್ಗೆ ಮಾತನಾಡ್ತಿದ್ದಾರೆ- ಸುಧಾಕರ್‌ಗೆ ಎಚ್‍ಡಿಕೆ ಟಾಂಗ್