Tag: drug mafia

  • ಡ್ರಗ್‍ನಲ್ಲಿ ಎಲ್ಲರೂ ಪವಿತ್ರರು, ಪತಿವ್ರತೆಯರು ಎಂದು ಹೇಳಕ್ಕಾಗಲ್ಲ: ಬಿ.ಸಿ ಪಾಟೀಲ್

    ಡ್ರಗ್‍ನಲ್ಲಿ ಎಲ್ಲರೂ ಪವಿತ್ರರು, ಪತಿವ್ರತೆಯರು ಎಂದು ಹೇಳಕ್ಕಾಗಲ್ಲ: ಬಿ.ಸಿ ಪಾಟೀಲ್

    – ನಾನು ನಟನೆಯಲ್ಲಿದ್ದ ಕಾಲದಲ್ಲಿ ಇದೆಲ್ಲ ಇರಲಿಲ್ಲ

    ಕೊಪ್ಪಳ: ಡ್ರಗ್‍ಗೆ ಭೂ ಮಾಫಿಯಾ, ಟೆರರಿಸ್ಟ್, ಐಎಸ್‍ಐ ಕೈವಾಡ ಇದೆ ಎನ್ನುವುದು ತನಿಖೆ ವೇಳೆ ಗೊತ್ತಾಗಲಿದೆ. ಡ್ರಗ್ಸ್ ನಲ್ಲಿ ಎಲ್ಲರೂ ಪವಿತ್ರರು, ಪತಿವ್ರತೆಯರು ಎಂದು ಹೇಳಕ್ಕಾಗಲ್ಲ. ಇದೆಲ್ಲ ತನಿಖೆ ವೇಳೆ ಗೊತ್ತಾಗಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಹೇಳಿದರು.

    ಕೊಪ್ಪಳದ ಯಲಬುರ್ಗಾದಲ್ಲಿ ಡ್ರಗ್ಸ್ ಮಾಫಿಯಾದಲ್ಲಿ ಯಾರ ಕೈವಾಡ ಇದೆ ಎನ್ನುವುದು ತನಿಖೆಯಿಂದ ಬಯಲಿಗೆ ಬರಲಿದೆ. ಆದರೆ ಡ್ರಗ್ಸ್ ಮಾಫಿಯಾ ಎಂಬುದು ಕೆಟ್ಟ ಪರಿಣಾಮ ಬೀರುತ್ತದೆ. ಇದರ ನಿರ್ಮೂಲನೆಗೆ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ನಾನೂ ಸಿನಿಮಾ ನಟನಾಗಿ ಕೆಲಸ ಮಾಡಿದ್ದೇನೆ. ನಮ್ಮ ಅವಧಿಯಲ್ಲಿ ಇಂತಹ ಯಾವುದೇ ಡ್ರಗ್ಸ್ ಇರಲಿಲ್ಲ. ಈಗ ಅದು ಬೆಳಕಿಗೆ ಬರುತ್ತಿದೆ ಎಂದರು.

    ಇತ್ತೀಚೆಗೆ ಯುವ ಜನಾಂಗವು ಇದಕ್ಕೆ ಬಲಿಯಾಗುತ್ತಿದೆ. ಚಿತ್ರರಂಗದಲ್ಲಿ ಇದ್ದವರು ಗಾಜಿನ ಮನೆಯಲ್ಲಿ ಇದ್ದಂತೆ ನಮ್ಮನ್ನ ಲಕ್ಷಾಂತರ ಜನ ನೋಡುತ್ತಿರುತ್ತಾರೆ. ಫಾಲೋವರ್ಸ್ ಇರುತ್ತಾರೆ. ನಮ್ಮಂತೆ ಅವರು ಅನುಕರಣೆ ಮಾಡುತ್ತಾರೆ. ಅದು ಒಳ್ಳೆಯದನ್ನು ಅನುಕರಣೆ ಮಾಡಿದರೆ ತೊಂದರೆ ಇಲ್ಲ. ಆದರೆ ಇಂತದ್ದನ್ನು ಅನುಕರಣೆ ಮಾಡಿದರೆ ದೊಡ್ಡ ದುರಂತ ಆಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

    ಸಿನಿಮಾದಲ್ಲಿ ಇರುವವರು ಇನ್ನೊಬ್ಬರಿಗೆ ರೋಲ್ ಮಾಡಲ್ ಆಗಿ ಇರಬೇಕು. ಡ್ರಗ್ಸ್ ವಿಚಾರದಲ್ಲಿ ಜಮೀರ್ ಅಹ್ಮದ್ ಸೇರಿ ಯಾರದ್ದೇ ಹೆಸರು ಕೇಳಿ ಬಂದರೂ ಯಾರನ್ನೂ ಬಿಡಲ್ಲ. ಎಲ್ಲರೂ ಪವಿತ್ರರು, ಪತಿವ್ರತೆಯರು ಎಂದು ಹೇಳಕ್ಕಾಗಲ್ಲ. ಡ್ರಗ್ಸ್ ಮಾಡೋರು ರಾಜಕೀಯದವರು, ಸಿನಿಮಾದವರು ಅಂತಾ ಅಲ್ಲ ಎಲ್ಲದರಲ್ಲೂ ಇರುತ್ತಾರೆ. ಯಾರ ಮಾಡಿದರೂ ತಪ್ಪು ತಪ್ಪೇ ಎಂದು ಹೇಳಿದ್ದಾರೆ.

    ಗಾಂಜಾ ಕಾನೂನು ಬದ್ಧ ಮಾಡೋದು ತಪ್ಪು. ಅದನ್ನು ಮಾಡಬಾರದು. ಇಂದು ತಂಬಾಕು ಮಾರಾಟ ಮಾಡುವುದು ತಪ್ಪೇ? ಒಂದು ಸಿಗರೇಟಿನಲ್ಲಿ ತಂಬಾಕು ಇದ್ದರೂ ಜನ ಅದನ್ನು ಸೇವನೆ ಮಾಡುತ್ತಾರೆ. ಆದರೆ ಡ್ರಗ್ಸ್ ಎಂಬುದು ಅತಿರೇಕಕ್ಕೆ ಹೋಗುವಂತದ್ದು, ಮನುಷ್ಯನ ಜೀವನವನ್ನೇ ಬಲಿ ಪಡೆಯುತ್ತದೆ ಎಂದು ತಿಳಿಸಿದರು.

    ಕೃಷಿ ಪದವಿ ರದ್ದತಿ ವಿಚಾರಕ್ಕೆ ಸಂಬಂಧಿಸಿದಂತೆ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೋಡಿಹಳ್ಳಿ ಅವರಿಗೆ ಈ ಬಗ್ಗೆ ಜ್ಞಾನ ಇಲ್ಲ ಅಂತ ನಾನು ಭಾವಿಸುತ್ತೇನೆ. ಪದವಿಯಲ್ಲಿ ಶೇ.40 ರಷ್ಟು ರೈತರ ಮಕ್ಕಳಿಗೆ ಅವಕಾಶ ಇದ್ದೆ ಇರುತ್ತದೆ. ನಾನೂ ರೈತನ ಮಗ ನಾವೂ ಕೃಷಿ ಮಾಡಿದ್ದೇನೆ. ನಮ್ಮ ಮುತ್ತಾತನ ಕಾಲದಿಂದಲೂ ಕೃಷಿಯಲ್ಲಿ ತೊಡಗಿದ್ದೇವೆ. ಕೋಡಿಹಳ್ಳಿ ಅವರು ಪ್ರಚಾರಕ್ಕಾಗಿ ಹೀಗೆ ಹೇಳಿದ್ದಾರೆ ಎಂದು ಟಾಂಗ್ ಕೊಟ್ಟರು.

    ಇನ್ನೂ ಸಿನಿಮಾ ನಟನನ್ನು ಕೃಷಿ ಸಚಿವನನ್ನಾಗಿ ಮಾಡಿದ್ದಾರೆ ಎಂದಿದ್ದಾರೆ. ರೈತ ಪರವಾಗಿ ಹೋರಾಟ ಮಾಡಿ 20 ದಿನಗಳ ಕಾಲ ಹಿಂಡಲಗಾ ಜೈಲಿಗೆ ಹೋಗಿ ಬಂದಿದ್ದೇನೆ. ಆದರೆ ಕೋಡಿಹಳ್ಳಿ ಅವರು ಏಕೆ ಹೀಗೆ ಹೇಳಿದ್ದಾರೋ ಗೊತ್ತಿಲ್ಲ. ನಾವು ಕಳಪೆ ಬೀಜ ಪತ್ತೆ ಮಾಡಿದಾಗ ಯಾರೊಬ್ಬರೂ ನಮ್ಮ ಬಗ್ಗೆ ಮಾತನಾಡಲಿಲ್ಲ. ನಾವು ಒಳ್ಳೆ ಕೆಲಸ ಮಾಡುತ್ತಿದ್ದೇವೆ. ಯಾವ ಕೃಷಿ ಮಂತ್ರಿಯ ಕಾಲದಲ್ಲೂ ಕಳಪೆ ಬೀಜ ಹಿಡಿದಿಲ್ಲ. ನಾವು 12 ಕೋಟಿ ಕಳಪೆ ಬೀಜ ಹಿಡಿದಿದ್ದೇವೆ ಎಂದು ತಿರುಗೇಟು ನೀಡಿದರು.

    ವಿಧಾನ ಸೌಧಕ್ಕೆ ರೈತರ ಮುತ್ತಿಗೆ ವಿಚಾರವಾಗಿ ಮಾತನಾಡಿ, ಕಾಯ್ದೆಗಳ ತಿದ್ದುಪಡಿ ಕುರಿತು ಸರ್ಕಾರವು ಸದನಲ್ಲಿ ಸಮರ್ಪಕ ಉತ್ತರ ಕೊಡಲಿದೆ. ಮೆಕ್ಕೆಜೋಳ ಖರೀದಿ ಮಾಡುವಂತೆ ಉಪ ಸಮಿತಿಯಲ್ಲಿ ಒತ್ತಾಯ ಮಾಡಿದ್ದೀವಿ. ಇದನ್ನು ನಾನು ಗ್ಯಾರಂಟಿ ಕೊಡಲ್ಲ. ಈವರೆಗೂ ಖರೀದಿ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಬಿಸಿ ಪಾಟೀಲ್ ಮಾಹಿತಿ ನೀಡಿದ್ದಾರೆ.

  • ನನ್ನ ವಿರುದ್ಧ ತನಿಖೆ ನಡೆಸಿ – ರಾಜ್ಯ ಸರ್ಕಾರಕ್ಕೆ ಜಮೀರ್ ಸವಾಲ್

    ನನ್ನ ವಿರುದ್ಧ ತನಿಖೆ ನಡೆಸಿ – ರಾಜ್ಯ ಸರ್ಕಾರಕ್ಕೆ ಜಮೀರ್ ಸವಾಲ್

    ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಅವರು ರಾಜ್ಯ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.

    ಇಂದು ಸರಣಿ ಟ್ವೀಟ್ ಮಾಡಿರುವ ಜಮೀರ್, 2019 ಜೂನ್ 08ರಂದು ನಾನು, ಸಂಜನಾ ಅವರ ಜೊತೆ ಶ್ರೀಲಂಕಾಕ್ಕೆ ಹೋಗಿದ್ದೆ ಎಂದು ಆರೋಪಿಸಲಾಗಿದೆ. ಹಾಗಿದ್ದಲ್ಲಿ ವಿಮಾನ ಪ್ರಯಾಣದ ಟಿಕೆಟ್‍ಗಳಿರಬೇಕಲ್ಲಾ? ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದರೆ ಅಲ್ಲಿಯೂ ದಾಖಲೆಗಳು ಇರಬೇಕಲ್ಲಾ? ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ನನ್ನ ಓಡಾಟದ ಚಿತ್ರಗಳೂ ಇರಬೇಕಲ್ವಾ? ಈ ಬಗ್ಗೆಯೂ ತನಿಖೆ ನಡೆಯಲಿ ಎಂದಿದ್ದಾರೆ.

    ನಾನು ರಾಜಕೀಯದಲ್ಲಿರುವ ವ್ಯಕ್ತಿ, ಸುಳ್ಳು ಆರೋಪಗಳು, ಚಾರಿತ್ರ್ಯ ಹರಣದ ಪ್ರಯತ್ನಗಳು ನನಗೆ ಹೊಸತೇನಲ್ಲ. ಅವೆಲ್ಲವನ್ನು ಜನಾಶೀರ್ವಾದದ ಬಲದಿಂದ ಎದುರಿಸುತ್ತಾ ಬಂದಿದ್ದೇನೆ. ನಾನು ಏನೆನ್ನುವುದು ನಾನು ನಂಬಿರುವ ಜನ ಮತ್ತು ನನ್ನ ಆತ್ಮಸಾಕ್ಷಿಗೆ ಗೊತ್ತಿದೆ ಎಂದು ಇನ್ನೊಂದು ಟ್ವೀಟ್ ಮಾಡಿರುವ ಜಮೀರ್ ತಮ್ಮ ಮೇಲೆ ಆರೋಪ ಮಾಡುವವರ ಮೇಲೆ ಕಿಡಿಕಾರಿದ್ದಾರೆ.

    ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ ಸರ್ಕಾರ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ನಾನೇನೋ ಪ್ರಭಾವ ಬೀರುತ್ತಿದ್ದೆ ಎಂದು ಹೇಳಬಹುದಿತ್ತು. ಈಗ ನಟಿ ಸಂಜನಾ ಪೊಲೀಸರ ವಶದಲ್ಲಿದ್ದಾರೆ. ಆದ್ದರಿಂದ ಪೊಲೀಸರು ಆಕೆಯನ್ನು ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಳ್ಳಲಿ. ಅದೇ ರೀತಿ ಶ್ರೀಲಂಕಾ ಪ್ರವಾಸದ ಬಗ್ಗೆಯೂ ತನಿಖೆ ನಡೆಸಲಿ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

    ಪೊಲೀಸರು ನಡೆಸುವ ತನಿಖೆಯಲ್ಲಿ ಸಂಬರಗಿ ಮಾಡಿರುವ ಆರೋಪಗಳು ಸಾಬೀತಾದರೆ ನನ್ನ ಸಂಪೂರ್ಣ ಆಸ್ತಿಯನ್ನು ರಾಜ್ಯ ಸರ್ಕಾರಕ್ಕೆ ಬರೆದುಕೊಡಲು ಸಿದ್ಧನಿದ್ದೇನೆ. ನನ್ನ ಮೇಲಿನ ಆರೋಪಗಳು ಸುಳ್ಳು ಎಂದು ಕಂಡುಬಂದರೆ ಆರೋಪಿಗಳನ್ನು ಈ ನೆಲದ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸಲಿ. ಡ್ರಗ್ಸ್ ನಂಟಿಗೆ ಸಂಬಂಧಿಸಿದಂತೆ ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದುದ್ದು. ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಸಿಎಂ ಯಡಿಯೂರಪ್ಪ ಅವರಿಗೆ ಹಾಗೂ ಗೃಹ ಸಚಿವ ಬೊಮ್ಮಾಯಿಯವರಿಗೆ ಒತ್ತಾಯಿಸುತ್ತೇನೆ ಎಂದು ಜಮೀರ್ ಟ್ವೀಟ್ ಮಾಡಿದ್ದಾರೆ.

  • ಸಂಜನಾ, ಜಮೀರ್ ಸಹಾಯ ಕೇಳಿದ್ದೇಕೆ?- ಡ್ರಗ್ಸ್ ಪ್ರಕರಣದಲ್ಲಿ ರಾಹುಲ್‍ಗೆ ಬಿಜೆಪಿ ಟಾಂಗ್

    ಸಂಜನಾ, ಜಮೀರ್ ಸಹಾಯ ಕೇಳಿದ್ದೇಕೆ?- ಡ್ರಗ್ಸ್ ಪ್ರಕರಣದಲ್ಲಿ ರಾಹುಲ್‍ಗೆ ಬಿಜೆಪಿ ಟಾಂಗ್

    ಬೆಂಗಳೂರು: ದೇಶದಲ್ಲಿ ಡ್ರಗ್ಸ್ ಮಾಫಿಯಾ ಸಾಕಷ್ಟು ಸದ್ದು ಮಾಡುತ್ತಿದೆ. ಇದೇ ವೇಳೆ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಬಂಧನವಾಗಿರುವ ನಟಿ ಸಂಜನಾ ಹಾಗೂ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರಿಗೂ ಇರುವ ಸಂಬಂಧವನ್ನು ಪ್ರಶ್ನಿಸಿರುವ ಕರ್ನಾಟಕ ಬಿಜೆಪಿ, ರಾಹುಲ್ ಗಾಂಧಿ ಅವರಿಗೆ ಟಾಂಗ್ ನೀಡಿದೆ.

    ಡ್ರಗ್ಸ್ ಮಾಫಿಯಾ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ಡ್ರಗ್ಸ್ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ ನಟಿ ಸಂಜನಾ ಕಾಂಗ್ರೆಸ್ ನ ಹಿರಿಯ ನಾಯಕ, ಶಾಸಕ ಜಮೀರ್ ಅಹ್ಮದ್ ಖಾನ್ ಸಹಾಯವನ್ನು ಏಕೆ ಪಡೆದರು? ಸಂಜನಾಳೊಂದಿಗೆ ಅವರ ಸಂಬಂಧ ಏನು? ರಾಹುಲ್ ಗಾಂಧಿ ಈ ವಿಷಯದ ಬಗ್ಗೆ ತನಿಖೆಯನ್ನು ಏಕೆ ಕೇಳ್ತಿಲ್ಲ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಜಮೀರ್‌ನನ್ನು ಯಾಕೆ ಬಂಧಿಸಿಲ್ಲ- ಸರ್ಕಾರಕ್ಕೆ ಪ್ರತಾಪ್ ಸಿಂಹ ಪ್ರಶ್ನೆ

    ಕಾಂಗ್ರೆಸ್ ವಿರುದ್ಧ ಟ್ವೀಟ್ ವಾರ್ ಮುಂದುವರಿಸಿರುವ ಬಿಜೆಪಿ, ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಬೆಳೆಯುತ್ತಿದ್ದಾಗ ಅಂದಿನ ಸಿಎಂ ಸಿದ್ದರಾಮಯ್ಯ ಬೇರೆ ಕಡೆ ಬ್ಯುಸಿಯಾಗಿದ್ದರು. ಭಯೋತ್ಪಾದಕರ ಬೆಂಬಲಿತ ಪಿಎಫ್‍ಐ, ಎಸ್‍ಡಿಪಿಐ ವಿರುದ್ಧದ ಕೇಸ್‍ಗಳನ್ನು ವಾಪಸ್ ಪಡೆಯುವಲ್ಲಿ ಹಾಗೂ ಮೂಲಭೂತವಾದಿಗಳಿಂದ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ನೋಡುತ್ತಿದ್ದರು. ಆ ಮೂಲಕ ಓಲೈಕೆಯ ರಾಜಕಾರಣದಲ್ಲಿ ತೊಡಗಿದ್ದರು ಎಂದು ಬಿಜೆಪಿ ಆರೋಪಿಸಿದೆ. ಇದನ್ನೂ ಓದಿ: ‘ಗಂಡ-ಹೆಂಡತಿ’ ನಟಿ ಮದುವೆ ಸೀಕ್ರೆಟ್- ಮ್ಯಾರೇಜ್ ಆಗಿಲ್ಲ ಅಂತ ಸುಳ್ಳು ಹೇಳಿದ್ರಾ ಸಂಜನಾ?

    ಕಾಂಗ್ರೆಸ್ ನಾಯಕರು ಹಾಗೂ ಡ್ರಗ್ಸ್ ಮಾಫಿಯಾ ನಡುವಿನ ಸಂಬಂಧವೇನು? ಸಿದ್ದರಾಮ್ಯಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಡ್ರಗ್ಸ್ ಮಾಫಿಯಾ ವಿರುದ್ಧ ಏಕೆ ಕ್ರಮಕೈಗೊಳ್ಳಲಿಲ್ಲ? ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಇಂತಹ ಪ್ರಮುಖ ವಿಚಾರದಲ್ಲಿ ಮೌನವಹಿಸಿರುವುದು ಏಕೆ? ಕಾಂಗ್ರೆಸ್ ನಾಯಕರು ಡ್ರಗ್ಸ್ ಪ್ರಕರಣದ ಆರೋಪಿಗಳಿಗೆ ಸಹಾಯ ಮಾಡುತ್ತಿರುವುದು ಏಕೆ? ನಿಮಗೆ ಎಲ್ಲದರ ಬಗ್ಗೆಯೂ ಅರಿವಿದ್ದರೂ ಇದನ್ನು ಮಾಡಲು ಏಕೆ ಅನುಮತಿ ನೀಡಿದ್ದೀರಿ ಎಂದು ರಾಹುಲ್ ಗಾಂಧಿಗೆ ಬಿಜೆಪಿ ಪ್ರಶ್ನಿಸಿದೆ. ಇದನ್ನೂ ಓದಿ: ಮೆಸೇಜ್, ಫೋಟೋಸ್ ಡಿಲೀಟ್ – ಸಂಜನಾಳ ಖತರ್ನಾಕ್ ಐಡಿಯಾಗೆ ಪೊಲೀಸ್ರು ಸುಸ್ತು

  • ನಾವು ರಾಗಿಣಿ ಅಂತ ತೆಗೊಂಡಿದ್ವಿ, ಡ್ರಗ್ ಹುಡುಗಿಯಂತಲ್ಲ: ರಮೇಶ್ ಜಾರಕಿಹೊಳಿ

    ನಾವು ರಾಗಿಣಿ ಅಂತ ತೆಗೊಂಡಿದ್ವಿ, ಡ್ರಗ್ ಹುಡುಗಿಯಂತಲ್ಲ: ರಮೇಶ್ ಜಾರಕಿಹೊಳಿ

    ಬೆಂಗಳೂರು: ರಾಗಿಣಿಯಂತ ಪ್ರಚಾರಕ್ಕೆ ತಗೊಂಡಿದ್ವಿ, ಡ್ರಗ್ ಹುಡುಗಿಯಂತಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ಇಂದು ವಿಧಾನಸೌಧದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿ ಪರ ಡ್ರಗ್ಸ್ ಪ್ರಕರಣದ ಆರೋಪಿ ನಟಿ ರಾಗಿಣಿ ಪ್ರಚಾರ ಮಾಡಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು. ಅದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ, ತನಿಖೆ ನಡೆಯುತ್ತಿದೆ. ಎಷ್ಟೇ ಪ್ರಭಾವಿಗಳಿದ್ದರೂ ಕ್ರಮ ಆಗಲಿದೆ ಎಂದು ತಿಳಿಸಿದರು.

    ರಾಗಿಣಿ ಎಂದು ಭಾವಿಸಿ ನಾವು ಪ್ರಚಾರಕ್ಕೆ ಕರೆ ತಂದಿದ್ವಿ. ಅದನ್ನು ಬಿಟ್ಟು ಡ್ರಗ್ಸ್ ಹುಡುಗಿ ಅಂತ ಕರೆದಿರಲಿಲ್ಲ. ಆಕೆಯ ಫೋಟೋ ಎಲ್ಲರ ಜೊತೆ ಇರಬಹುದು. ಡಿಕೆ ಶಿವಕುಮಾರ್ ಜೊತೆಯೂ ಫೋಟೋ ಇರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ನನ್ನ ಜೊತೆಯೂ ಇರಬಹುದು. ಕುಮಾರಸ್ವಾಮಿ ಜೊತೆಯೂ ಇರಬಹುದು. ಅದರ ಬಗ್ಗೆ ನಾನು ಮಾತಾಡಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ಇದೇ ವೇಳೆ ರಾಜ್ಯದ ನೆರೆ ವಿಚಾರವಾಗಿ ಮಾತನಾಡಿದ ಅವರು, ನೆರೆ ಬಗ್ಗೆ ಕೇಂದ್ರ ತಂಡ ಬಂದು ಅಧ್ಯಯನ ಮಾಡಿಕೊಂಡು ಹೋಗಿದೆ. ನಮ್ಮ ಕಂದಾಯ ಇಲಾಖೆ ಅದನ್ನು ಫಾಲೋ ಮಾಡುತ್ತಿದೆ. ಬೆಳಗಾವಿ ಸೇರಿದಂತೆ ಅನೇಕ ಜಿಲ್ಲೆಗಳಿಗೆ ನೆರೆ ಎಫೆಕ್ಟ್ ಆಗಿದೆ. ಕೇಂದ್ರ ತಂಡ ಬಂದು ಅಧ್ಯಯನ ಮಾಡಿದೆ. ಈ ಬಾರಿ ಹೆಚ್ಚು ಪರಿಹಾರ ಸಿಗುವ ನಿರೀಕ್ಷೆ ಇದೆ ಎಂದು ರಮೇಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

    ಎಂಟಿಬಿ, ಶಂಕರ್, ವಿಶ್ವನಾಥ್‍ಗೆ ಸಚಿವ ಸ್ಥಾನ ನೀಡುವ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ನಾನು ಏನು ಹೇಳುವುದಿಲ್ಲ. ಸಿಎಂ, ಪಕ್ಷದ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ಅಲ್ಲಿಯವರೆಗೆ ಎಲ್ಲರೂ ಕಾಯಬೇಕು. ನಾವು ಕೂಡಾ 14 ತಿಂಗಳು ಕಾದಿದ್ದೇವೆ. ಕೋರ್ಟು ಕಚೇರಿ ಅಲೆದಾಡಿದ್ದೇವೆ. ಅವರು ಕೂಡಾ ಕಾಯಬೇಕು. ಸಿಎಂ ಮತ್ತು ಪಕ್ಷದ ವರಿಷ್ಠರು ಈ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದರು.

  • ಡ್ರಗ್ ಮಾಫಿಯಾ: ಚಿತ್ರರಂಗ ಸೇರಿದಂತೆ ಇನ್ಯಾವ ರಂಗದಲ್ಲಿದ್ರೂ ಕಠಿಣ ಕ್ರಮ: ವಿಜಯೇಂದ್ರ

    ಡ್ರಗ್ ಮಾಫಿಯಾ: ಚಿತ್ರರಂಗ ಸೇರಿದಂತೆ ಇನ್ಯಾವ ರಂಗದಲ್ಲಿದ್ರೂ ಕಠಿಣ ಕ್ರಮ: ವಿಜಯೇಂದ್ರ

    ಚಾಮರಾಜನಗರ: ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಬಳಿಕ ಸಿಎಂ ಪುತ್ರ ವಿಜಯೇಂದ್ರ ಮೊದಲ ಬಾರಿಗೆ ಚಾಮರಾಜನಗರಕ್ಕೆ ಭೇಟಿ ನೀಡಿದರು. ಈ ವೇಳೆ ಗ್ರಾ.ಪಂ.ಚುನಾವಣೆ ಹಿನ್ನೆಲೆಯಲ್ಲಿ ನಗರದ ನಂದಿ ಭವನದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮುಂದಿನ ದಿನಗಳಲ್ಲಿ ಚುನಾವಣೆಗೆ ಸಜ್ಜುಗೊಳ್ಳುವಂತೆ ಕರೆ ನೀಡಿದರು.

    ಮೊದಲಿಗೆ ರಾಮಸಮುದ್ರದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮಾಜಿ ಶಾಸಕ, ಕೊರೊನಾದಿಂದ ಮೃತಪಟ್ಟ ಸಿ ಗುರುಸ್ವಾಮಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಂತ್ವಾನ ಹೇಳಿದರು. ಈ ನಡುವೆ ಮಾಧ್ಯಮದ ಜೊತೆಗೆ ಮಾತನಾಡಿ ಡ್ರಗ್ ವಿಚಾರದಲ್ಲಿ ಯಾರನ್ನೂ ಕೂಡ ಉಳಿಸುವ ಪ್ರಶ್ನೆಯೇ ಇಲ್ಲ. ಚಿತ್ರರಂಗ ಸೇರಿದಂತೆ ಇನ್ಯಾವುದೇ ರಂಗದಲ್ಲಿದ್ರೂ ಕೂಡ ಅವರ ಮೇಲೆ ಸಾಫ್ಟ್ ಕಾರ್ನರ್ ವಹಿಸಲ್ಲ ಎಂದರು.

    ಹತ್ತಾರು ವರ್ಷಗಳಿಂದ ಡ್ರಗ್ ದಂಧೆ ನಡೆಯುತ್ತಿದ್ದರೂ ಕೂಡ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇದೀಗ ಬಿಜೆಪಿ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಈ ಡ್ರಗ್ ಮಾಫಿಯಾವನ್ನು ರಾಜ್ಯದಿಂದ ಕಿತ್ತು ಬಿಸಾಕಿ, ತಾರ್ಕಿಕ ಅಂತ್ಯ ಕಾಣಬೇಕಾಗಿದೆ. ಡ್ರಗ್ ಮಾಫಿಯಾದಿಂದ ಯುವಕರು ದಾರಿ ತಪ್ಪುತ್ತಿದ್ದಾರೆಂದು ವಿಜಯೇಂದ್ರ ಅಭಿಪ್ರಾಯಪಟ್ಟರು. ಸಂಜನಾ ಜೊತೆಗೆ ಜಮೀರ್ ಅಹ್ಮದ್ ಅವರ ನಂಟು ವಿಚಾರದ ಕುರಿತಂತೆ, ಇದು ವಿಚಾರಣೆ ನಡೆದಿದೆ. ಈ ಬಗ್ಗೆ ನಾನು ಈಗಲೇ ಮಾತನಾಡಲ್ಲ ಎಂದು ಪ್ರತಿಕ್ರಿಯೆ ನೀಡಿದರು.

  • ಡ್ರಗ್ಸ್ ಪ್ರಕಣರಣದ ಬಗ್ಗೆ ಈಗ ನಾವು ಮಾತನಾಡೋದು ಸರಿಯಲ್ಲ: ಶಿವಣ್ಣ

    ಡ್ರಗ್ಸ್ ಪ್ರಕಣರಣದ ಬಗ್ಗೆ ಈಗ ನಾವು ಮಾತನಾಡೋದು ಸರಿಯಲ್ಲ: ಶಿವಣ್ಣ

    ಬೆಂಗಳೂರು: ಡ್ರಗ್ಸ್ ಪ್ರಕರಣದ ಬಗ್ಗೆ ಈಗ ನಾವು ಮಾತನಾಡುವುದು ಸರಿಯಲ್ಲ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ಹೇಳಿದ್ದಾರೆ.

    ಕರ್ನಾಟಕ ಚಲನಚಿತ್ರ ವಾಣಿಕ್ಯ ಮಂಡಳಿ ಮತ್ತು ಕಲಾವಿದರು ಸೇರಿ ಇಂದು ಸಿಎಂ ಅವರನ್ನು ಭೇಟಿ ಮಾಡಿ ಚಿತ್ರರಂಗದ ಸಮಸ್ಯೆ ಬಗ್ಗೆ ಮಾತನಾಡಿದರು. ಈ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಶಿವಣ್ಣ, ಡ್ರಗ್ ವಿಚಾರದಲ್ಲಿ ಈಗಲೇ ಮಾತನಾಡುವುದು ಬಹುಬೇಗ ಎನಿಸುತ್ತದೆ ಎಂದು ಹೇಳಿದರು.

    ಈಗ ಆ ವಿಚಾರ ನಮ್ಮ ಬಳಿ ಇಲ್ಲ. ಸಂಬಂಧಪಟ್ಟ ಇಲಾಖೆ ಅದನ್ನು ವಿಚಾರಣೆ ಮಾಡುತ್ತಿದೆ. ಕೇಂದ್ರ ಮತ್ತು ಸ್ಥಳೀಯ ಇಲಾಖೆಗಳು ವಿಚಾರಣೆ ಮಾಡುತ್ತಿವೆ. ಈ ಸಮಯದಲ್ಲಿ ಅದರ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ. ಅದು ಒಂದು ವ್ಯವಸ್ಥಿತವಾಗಿ ನಡೆದುಕೊಂಡು ಹೋಗುತ್ತಿದೆ. ಈ ಸಮಯದಲ್ಲಿ ನಾನು ಏನನ್ನೂ ಹೇಳುವುದಿಲ್ಲ. ದೇವರೊಬ್ಬ ಇದ್ದಾನೆ ಅವನು ನೋಡುತ್ತಿರುತ್ತಾನೆ ಅಲ್ಲವೇ ಎಂದು ಶಿವಣ್ಣ ತಿಳಿಸಿದ್ದಾರೆ.

    ಲಾಕ್‍ಡೌನ್‍ನಿಂದ ಸಿನಿಮಾ ಕ್ಷೇತ್ರಕ್ಕೆ ನಷ್ಟ ಅಂತು ವಿಪರೀತ ಆಗಿದೆ. ಆದರೆ ಎಷ್ಟು ನಷ್ಟ ಆಗಿದೆ ಎಂದು ಅಂದಾಜು ಮಾಡಲು ನಾನೇನು ಬ್ಯುಸಿನೆಸ್‍ಮೆನ್ ಅಲ್ಲ. ನಾನೊಬ್ಬ ನಟ ಅಷ್ಟೆ. ಸಿನಿಮಾ ಥಿಯೇಟರ್ ಬಗ್ಗೆ ಚರ್ಚೆ ಮಾಡಿದ್ದೇವೆ. ಸಮಸ್ಯೆಗೆ ಬಗ್ಗೆ ಸಿಎಂ ಸ್ಪಂದಿಸಿದ್ದಾರೆ. ಥೀಯೇಟರ್ ಓಪನ್ ಬಗ್ಗೆ ಕೇಂದ್ರದ ಮಾರ್ಗಸೂಚಿಯಂತೆ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಶಿವಣ್ಣ ಹೇಳಿದ್ದಾರೆ.

    ಸಿನಿಮಾ ಥೀಯೇಟರ್ ಓಪನ್ ಮಾಡುವುದು ದೊಡ್ಡದಲ್ಲ. ಆದರೆ ನಮ್ಮಲ್ಲಿ ಎಷ್ಟು ಜನ ನಿರ್ಮಾಪಕರು ರೆಡಿಯಾಗಿದ್ದಾರೆ ಎಂಬುದು ಮುಖ್ಯ. ಮೊದಲು ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಈಗಾಗಾಲೇ ಸುದೀಪ್, ಯಶ್, ವಿಜಯ್ ಸೇರಿದಂತೆ ಎಲ್ಲರೂ ಸಿನಿಮಾ ಚಿತ್ರೀಕರಣ ಆರಂಭಿಸಿದ್ದಾರೆ. ನಮ್ಮ ಸಮಸ್ಯೆ ಬಗ್ಗೆ ಸಿಎಂ ಬಳಿ ಕೇಳಿಕೊಂಡಿದ್ದೇವೆ. ಆ ಸಮಸ್ಯೆಗೆ ಪರಿಹಾರ ಒದಗಿಸುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ. ಡಿಸಿಎಂ ಅಶ್ವಥ್ ನಾರಾಯಣ್ ಅವರು ಕೂಡ ನಮ್ಮ ಸಮಸ್ಯೆಯನ್ನು ಆಲಿಸಿದ್ದಾರೆ ಎಂದು ತಿಳಿಸಿದ್ದಾರೆ.

  • ಏಕಾಏಕಿ ದಾಳಿ ಮಾಡಿದ್ದೀರಿ, ನಾನು ಬರೋದಿಲ್ಲ – ಸಿಸಿಬಿ ಮುಂದೆ ಸಂಜನಾ ರಂಪಾಟ

    ಏಕಾಏಕಿ ದಾಳಿ ಮಾಡಿದ್ದೀರಿ, ನಾನು ಬರೋದಿಲ್ಲ – ಸಿಸಿಬಿ ಮುಂದೆ ಸಂಜನಾ ರಂಪಾಟ

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಮನೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಆದರೆ ಈ ವೇಳೆ ನಟಿ ಸಂಜನಾ ರಂಪಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪೃಥ್ವಿ ಶೆಟ್ಟಿ ಹೇಳಿಕೆಯ ಆಧಾರದ ಮೇಲೆ ಸಂಜನಾ ನಿವಾಸದ ಮೇಲೆ ದಾಳಿ?

    ಸಿಸಿಬಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆಯುತ್ತಿದ್ದಂತೆ ನಟಿ ಸಂಜನಾ ರಂಪಾಟ ಮಾಡಿದ್ದಾರೆ. ರೆಡಿ ಆಗಿ ಮೇಡಂ ಸಿಸಿಬಿ ಕಚೇರಿಗೆ ಹೋಗಬೇಕು ಎಂದು ಪೊಲೀಸರು ಹೇಳಿದ್ದಾರೆ. ಆಗ ಸಂಜನಾ, ನಾನ್ಯಾಕೆ ಬರಲಿ, ನೀವು ನನಗೆ ನೋಟಿಸ್ ಕೊಟ್ಟಿಲ್ಲ. ಏಕಾಏಕಿ ದಾಳಿ ಮಾಡಿದ್ದೀರಿ? ನಾನೇನು ಆರೋಪಿನಾ? ನಾನು ಬರುವುದಿಲ್ಲ ಎಂದು ಸಿಸಿಬಿ ಮುಂದೆ ರಂಪಾಟ ಮಾಡಿದ್ದಾರೆ.

    ರಂಪಾಟ ಜಾಸ್ತಿಯಾಗುತ್ತಿದ್ದಂತೆ ಸಿಸಿಬಿ ಅಧಿಕಾರಿಗಳು ಗದರಿಸಿದ್ದಾರೆ. ನೀವು ನಮ್ಮ ವಶದಲ್ಲಿ ಇದ್ದೀರಿ. ಹೀಗಾಗಿ ನಾವು ನೀವು ಹೇಳಿದಂತೆ ಕೇಳುವುದಕ್ಕೆ ಆಗುವುದಿಲ್ಲ. ನಾವು ಹೇಳಿದ್ದನ್ನ ನೀವು ಕೇಳಿ, ಸರ್ಚ್ ವಾರೆಂಟ್ ಸಂದರ್ಭದಲ್ಲಿ ವಿರೋಧ ಮಾಡಿದರೆ ನಿಮಗೆ ಕಷ್ಟವಾಗುತ್ತದೆ ಎಂದು ಸಿಸಿಬಿ ಅಧಿಕಾರಿಗಳು ಏರು ಮಾತಿನಲ್ಲಿ ಹೇಳಿದ ಬಳಿಕ ಸಂಜನಾ ತಣ್ಣಗೆ ಆಗಿದ್ದಾರೆ.

    ಇಂದು ಬೆಳ್ಳಂಬೆಳಗ್ಗೆ ಇಂದಿರಾನಗರದಲ್ಲಿರುವ ನಟಿ ಸಂಜನಾ ನಿವಾಸದ ಮೇಲೆ ಇನ್ಸ್ ಪೆಕ್ಟರ್ ಪುನೀತ್ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಬಂದ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈಗಾಗಲೇ ಸಂಜನಾ ಮೊಬೈಲ್ ಮತ್ತು ಪರ್ಸ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • 8 ಕಾರಣಗಳಿಂದ ರಾಗಿಣಿಗೆ ಜಾಮೀನು ಸಿಗುವುದು ಅನುಮಾನ

    8 ಕಾರಣಗಳಿಂದ ರಾಗಿಣಿಗೆ ಜಾಮೀನು ಸಿಗುವುದು ಅನುಮಾನ

    ಬೆಂಗಳೂರು: ಡ್ರಗ್ಸ್ ಮಾಫಿಯಾ ವಿಚಾರದಲ್ಲಿ ಸಿಸಿಬಿ ಕಸ್ಟಡಿಯಲ್ಲಿರುವ ನಟಿ ರಾಗಿಣಿ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಸೋಮವಾರ ನಡೆಯಲಿದೆ.

    ಕಳೆದ ಶುಕ್ರವಾರ ರಾಗಿಣಿಯವರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದರು. ನಂತರ ಅವರನ್ನು ಸೋಮವಾರದ ವರೆಗೆ ಕಸ್ಟಡಿಗೆ ತೆಗೆದುಕೊಂಡಿದ್ದರು. ಇಂದು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಿ ತನಿಖೆ ಮಾಡುತ್ತಿದ್ದಾರೆ. ಈ ನಡುವೆ ನಾಳೆ ರಾಗಿಣಿಗೆ ಬೇಲ್ ಸಿಗಲ್ಲ ಎಂದು ಹೇಳಲಾಗುತ್ತಿವೆ.

    ರಾಗಿಣಿ ಮಾಡಿರುವ ಕೆಲ ತಪ್ಪುಗಳಿಂದ ಕೋರ್ಟ್ ಜಾಮೀನು ಮಂಜೂರು ಮಾಡುವ ಸಾಧ್ಯತೆ ಕಡಿಮೆಯಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ಸಾಕ್ಷಿ ನಾಶ, ಸರಿಯಾಗಿ ತನಿಖೆಗೆ ಸ್ಪಂದಿಸದಿರುವುದು ತುಪ್ಪದ ಹುಡುಗಿಗೆ ತೊಂದರೆಯಾಗುವ ಸಾಧ್ಯತೆಯಿದೆ.

    ಕಷ್ಟ ಯಾಕೆ?
    1. ರಾಗಿಣಿ ಬಂಧನ ಪ್ರಕರಣದಲ್ಲಿ ಹಾಕಿರುವ ಸೆಕ್ಷನ್‍ಗಳು
    2. ಅದರಲ್ಲೂ 21ಸಿ ರಾಗಿಣಿ ಪಾಲಿಗೆ ಆಗಲಿದೆ ಬಿಸಿ ತುಪ್ಪ
    3. ಈ ರೀತಿಯ ಕೇಸಿನಲ್ಲಿ ಸೆಷನ್ಸ್ ಕೋರ್ಟ್ ಬೇಲ್ ನೀಡೋದು ಕಡಿಮೆ
    4. ಸಿಸಿಬಿ ಬಳಿ ಇದೆ ಪ್ರಮುಖ ಸಾಕ್ಷಿಗಳು


    5. ರೇಡ್ ವೇಳೆಯಲ್ಲಿ ಸಿಕ್ಕಿವೆ ರಾಗಿಣಿ ಲಾಕ್ ಮಾಡುವ ಸಾಕ್ಷಿ
    6. ನೋಟಿಸ್‍ಗೆ ಉತ್ತರ ನೀಡದೇ ಸಾಕ್ಷಿ ನಾಶ ಪ್ರಯತ್ನ ಆರೋಪ ಮಳುವಾಗಲಿದೆ
    7. ಪೊಲೀಸ್ ಕಸ್ಟಡಿ ಮುಗಿಯದೇ ಪೊಲೀಸರು ಆಕ್ಷೇಪಣೆ ಸಲ್ಲಿಸಲ್ಲ
    8. ಕಸ್ಟಡಿಯಲ್ಲಿದ್ದೂ ವಿಚಾರಣೆಗೆ ಸಹಕರಿಸದ ಆರೋಪ

  • ನಾನೇ 13ನೇ ಆರೋಪಿ, ರಾಗಿಣಿ ಜೊತೆ ಇದ್ದವನು-ಸಿಸಿಬಿ ಕಚೇರಿಗೆ ಓಡೋಡಿ ಬಂದ ವ್ಯಕ್ತಿ

    ನಾನೇ 13ನೇ ಆರೋಪಿ, ರಾಗಿಣಿ ಜೊತೆ ಇದ್ದವನು-ಸಿಸಿಬಿ ಕಚೇರಿಗೆ ಓಡೋಡಿ ಬಂದ ವ್ಯಕ್ತಿ

    – ಕೈಯಲ್ಲಿ ಪ್ಲಾಸ್ಕ್ ಹಿಡಿದು ಡ್ರಗ್ಸ್ ನಶೆಯಲ್ಲಿ ಬಂದ?

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ ಡೀಲ್ ಪ್ರಕರಣದಲ್ಲಿ ನಾನೇ 13ನೇ ಆರೋಪಿ ಎಂದು ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ಬಂದು ಹೈಡ್ರಾಮಾ ಮಾಡಿದ್ದಾನೆ. ಇದನ್ನೂ ಓದಿ: ಮಾಜಿ ಸಚಿವ ಜೀವರಾಜ್‌ ಆಳ್ವಾ ಪುತ್ರ ಸೇರಿದಂತೆ 12 ಮಂದಿ ವಿರುದ್ಧ ಕೇಸ್‌ – ಯಾವೆಲ್ಲ ಸೆಕ್ಷನ್‌? ಶಿಕ್ಷೆ ಏನು?

    ಅನಿರುದ್ಧ್ ಎಂಬಾತ ಸಿಸಿಬಿ ಕಚೇರಿಗೆ ಏಕಾಏಕಿ ಬಂದು ಸಿಸಿಬಿ ಮುಂದೆ ಹೈಡ್ರಾಮಾ ಮಾಡಿದ್ದಾನೆ. ಡ್ರಗ್ ಡೀಲ್ ಪ್ರಕರಣದಲ್ಲಿ ನಾನೇ 13 ನೇ ಆರೋಪಿ. ಅಲ್ಲದೇ ರಾಗಿಣಿ ಜೊತೆ ನಾನೇ ಇದ್ದದ್ದು ಎಂದು ಸಿಸಿಬಿ ಕಚೇರಿಗೆ ಓಡೋಡಿ ಬಂದು ಅನಿರುದ್ಧ ಸರೆಂಡರ್ ಆಗಿದ್ದಾನೆ.

    ಅನಿರುದ್ಧ್ ಹೇಳಿಕೆಯಿಂದ ಅನುಮಾನಗೊಂಡ ಪೊಲೀಸರು ತಕ್ಷಣ ಅವನನ್ನು ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯಕ್ಕೆ ಡ್ರಗ್ಸ್ ಪ್ರಕರಣದಲ್ಲಿ 12 ಜನರ ವಿರುದ್ಧ ಮಾತ್ರ ಎಫ್‍ಐಆರ್ ದಾಖಲಾಗಿದೆ. ಆದರೆ ನಾನೇ 13ನೇ ಆರೋಪಿ ಎಂದು ಅನಿರುದ್ಧ್ ಬಂದಿದ್ದಾನೆ. ಅನಿರುದ್ಧ ಕೆಎ 02 ಕೆಫ್ 0641 ನಂಬರಿನ ಮೊಪೆಡ್‍ನಲ್ಲಿ ಬಂದಿದ್ದಾನೆ. ಜೊತೆಯಲ್ಲಿ ಟೀ ಮಾರುವ ಫ್ಲಾಸ್ಕ್ ಕೂಡ ತಂದಿದ್ದಾನೆ. ಹೀಗಾಗಿ ವ್ಯಕ್ತಿಯ ನಡೆಯಿಂದ ಅನುಮಾನ ಮೂಡಿದೆ.

    ಸಿಸಿಬಿ ಕಚೇರಿಗೆ ಓಡೋಡಿ ಬಂದ ಅನಿರುದ್ಧ್ ಜಯನಗರ ಆರ್‌ಟಿಒ ಕಚೇರಿಯ ಎಸ್‍ಡಿಎ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ. ರಾಗಿಣಿ ಆಪ್ತ ರವಿಶಂಕರ್ ಗೆಳೆಯನೇ ಅನಿರುದ್ಧ ಆಗಿದ್ದು, ಇದೇ ಆರ್‌ಟಿಒ ಕಚೇರಿಯಲ್ಲಿ ರವಿಶಂಕರ್ ಎಸ್‍ಡಿಎ ಆಗಿದ್ದನು. ಪೊಲೀಸ್ ಕಚೇರಿಗೆ ಬಂದಿದ್ದ ಅನಿರುದ್ಧ್ ಡ್ರಗ್ಸ್ ನಶೆಯಲ್ಲಿದ್ದ ಎನ್ನಲಾಗಿದೆ.

  • ಡ್ರಗ್ಸ್ ಪ್ರಕರಣ: ಶಿವಪ್ರಕಾಶ್ ಎ1, ರಾಗಿಣಿ ಎ2 ಆಗಿದ್ದು ಯಾಕೆ?

    ಡ್ರಗ್ಸ್ ಪ್ರಕರಣ: ಶಿವಪ್ರಕಾಶ್ ಎ1, ರಾಗಿಣಿ ಎ2 ಆಗಿದ್ದು ಯಾಕೆ?

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಡ್ರಗ್ಸ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಸಿಸಿಬಿ ವಿಚಾರಣೆಯ ವೇಳೆ ಹೊಸ ಹೊಸ ವಿಷಯಗಳು ಹೊರ ಬರುತ್ತಿವೆ. ಸದ್ಯ ಈ ಡ್ರಗ್ಸ್ ಕೇಸ್‍ನಲ್ಲಿ ಆರೋಪಿ ನಂಬರ್ 2 ಆಗಿರುವ ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ಜೀವರಾಜ್‌ ಆಳ್ವಾ ಪುತ್ರ ಸೇರಿದಂತೆ 12 ಮಂದಿ ವಿರುದ್ಧ ಕೇಸ್‌ – ಯಾವೆಲ್ಲ ಸೆಕ್ಷನ್‌? ಶಿಕ್ಷೆ ಏನು?

    ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ ನಟಿ ರಾಗಿಣಿ ಆಪ್ತ ರವಿಶಂಕರ್ ಅರೆಸ್ಟ್ ಆದ ಬಳಿಕ ಒಬ್ಬೊಬ್ಬರಾಗಿ ಅರೆಸ್ಟ್ ಆಗುತ್ತಿದ್ದಾರೆ. ರವಿಶಂಕರ್ ಬಾಯಿಬಿಡುತ್ತಿದ್ದಂತೆ ನಟಿ ರಾಗಿಣಿ ಸಹ ಸಿಸಿಬಿ ಬಂಧನದಲ್ಲಿದ್ದಾರೆ. ನಂತರ ಶಿವಪ್ರಕಾಶ್ ಪಾತ್ರ ಗೊತ್ತಾಗಿದ್ದು, ಅಲ್ಲದೇ ವಿಚಾರಣೆ ವೇಳೆ ರವಿಶಂಕರ್ ಡೀಲರ್ ಅನ್ನೋದು ಬೆಳಕಿಗೆ ಬಂದಿದೆ.

    ಅಷ್ಟೇ ಅಲ್ಲದೇ ಶಿವಪ್ರಕಾಶ್ ಕೂಡ ಡ್ರಗ್ ಡೀಲ್ ಮಾಡುತ್ತಿದ್ದು, ಪಾರ್ಟಿಗಳಿಗೆ ಡ್ರಗ್ಸ್ ಕೊಡುತ್ತಿದ್ದನು. ರಾಗಿಣಿ ಸೇರಿ ಹಲವು ಮಾಡೆಲ್‍ಗಳಿಗೂ ಪಾರ್ಟಿಗಳಲ್ಲಿ ಡ್ರಗ್ಸ್ ಕೊಡುತ್ತಿದ್ದನು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಈ ಡ್ರಗ್ಸ್ ಕೇಸ್‍ನಲ್ಲಿ ಶಿವಪ್ರಕಾಶ್ ಆರೋಪಿ ನಂಬರ್ 1 ಆಗಿದ್ದು, ನಟಿ ರಾಗಿಣಿ ಆರೋಪಿ ನಂಬರ್ 2 ಆಗಿದ್ದಾರೆ.

    ಪ್ರಕರಣದಲ್ಲಿ ಎ1 ಶಿವಪ್ರಕಾಶ್, ರಾಗಿಣಿಯನ್ನ ಎ2 ಏಕೆ ಮಾಡಲಾಯಿತು:
    ರವಿಶಂಕರ್ ಅರೆಸ್ಟ್ ಆದ ನಂತರವೇ ಶಿವಪ್ರಕಾಶ್ ರೋಲ್ ಗೊತ್ತಾಗಿದ್ದು, ವಿಚಾರಣೆ ವೇಳೆ ತಾನೂ ಡೀಲರ್ ಅನ್ನೋದನ್ನ ರವಿಶಂಕರ್ ಹೇಳಿದ್ದನು. ಸಾಕಷ್ಟು ಬಾರಿ ಶಿವಪ್ರಕಾಶ್ ಡೀಲ್ ಮಾಡಿ ರಾಗಿಣಿ ಸೇರಿದಂತೆ ಪಾರ್ಟಿಗಳಲ್ಲಿ ಡ್ರಗ್ಸ್ ಕೊಡುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿತ್ತು. ಅಲ್ಲದೇ ಶಿವಪ್ರಕಾಶ್ ಡ್ರಗ್ ಪೆಡ್ಲರ್‌ಗಳ ಜೊತೆ ವ್ಯವಹಾರ ಮಾಡಿರುವ ಸಾಕ್ಷಿ ಸಿಕ್ಕ ಹಿನ್ನೆಲೆ ಆತನನ್ನು ಆರೋಪಿ ನಂಬರ್ 1 ಮಾಡಲಾಗಿದೆ.

    ಇತ್ತ ಪ್ರಕರಣದಲ್ಲಿ ರಾಗಿಣಿ ಎಲ್ಲೂ ನೇರವಾಗಿ ಭಾಗಿಯಾಗಿರಲಿಲ್ಲ. ಶಿವಪ್ರಕಾಶ್ ಅಥವಾ ರವಿಶಂಕರ್ ಕೊಟ್ಟ ಡ್ರಗ್ಸ್ ಪಡೆದು ಪಾರ್ಟಿಯಲ್ಲಿ ನಟಿ ರಾಗಿಣಿ ಹಂಚಿಕೆ ಮಾಡಿದ್ದರು. ಅಲ್ಲದೇ ಎಲ್ಲೂ ಕೂಡ ರಾಗಿಣಿ ಹಣಕ್ಕಾಗಿ ಡ್ರಗ್ಸ್ ಮಾರಿಲ್ಲ ಅನ್ನೋದು ಗೊತ್ತಾಗಿದೆ. ಹೀಗಾಗಿ ಶಿವಪ್ರಕಾಶ್ ಎ1, ರಾಗಿಣಿ ಎ2 ಆಗಿದ್ದಾರೆ.