Tag: drug mafia

  • ಡಬಲ್ ಎಂಜಿನ್ ಸರ್ಕಾರ ಡ್ರಗ್ ಮಾಫಿಯಾಗೆ ಪ್ರೋತ್ಸಾಹ ಕೊಡುತ್ತಿದೆ: ರಾಹುಲ್ ಗಾಂಧಿ ವಾಗ್ದಾಳಿ

    ಡಬಲ್ ಎಂಜಿನ್ ಸರ್ಕಾರ ಡ್ರಗ್ ಮಾಫಿಯಾಗೆ ಪ್ರೋತ್ಸಾಹ ಕೊಡುತ್ತಿದೆ: ರಾಹುಲ್ ಗಾಂಧಿ ವಾಗ್ದಾಳಿ

    ನವದೆಹಲಿ: ಗುಜರಾತ್‌ನಲ್ಲಿ ಡ್ರಗ್, ಲಿಕ್ಕರ್ ಮಾಫಿಯಾಗೆ ಡಬಲ್ ಎಂಜಿನ್ ಸರ್ಕಾರ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಕೇಂದ್ರ ಹಾಗೂ ಗುಜರಾತ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಯುವಕರಿಗೆ ಡ್ರಗ್ಸ್ ಮಾರಾಟ ಮಾಡಲಾಗುತ್ತಿದೆ. ಗುಜರಾತ್‌ನ ಮುಂದ್ರಾ ಬಂದರಿನಲ್ಲಿ 3 ಬಾರಿ ಡ್ರಗ್ಸ್ ಪತ್ತೆಯಾಗಿದೆ. ಪದೇ ಪದೇ ಇದೇ ಬಂದರಿಗೆ ಡ್ರಗ್ಸ್ ಬರುತ್ತಿರುವುದು ಹೇಗೆ? ಮಾಫಿಯಾಗೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿರುವ ಡಬಲ್ ಎಂಜಿನ್ ಸರ್ಕಾರದಲ್ಲಿ ಕುಳಿತವರು ಯಾರು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 36 ರೂ. ಇಳಿಕೆ

    RAHUL

    ಸಪ್ಟೆಂಬರ್ 21 ರಂದು 21 ಸಾವಿರ ಕೋಟಿ ರೂ. ಬೆಲೆ ಬಾಳುವ 3,000 ಕೆ.ಜಿ, ಮೇ 22 ರಂದು 500 ಕೋಟಿ ಬೆಲೆಯ 56 ಕೆಜಿ, ಜುಲೈ 22 ರಂದು 375 ಕೋಟಿ ರೂ. ಮೌಲ್ಯದ 75 ಕೆ.ಜಿ ಡ್ರಗ್ಸ್ ಪತ್ತೆಯಾಗಿದೆ. ಗುಜರಾತ್‌ನಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ? ಮಾಫಿಯಾಗೆ ಕಾನೂನು ಭಯವಿಲ್ಲವೇ? ಅಥವಾ ಇದು ಮಾಫಿಯಾ ಸರ್ಕಾರವೇ ಎಂದು ರಾಹುಲ್ ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆದರಿಕೆ ಪತ್ರಗಳ ಹಿನ್ನೆಲೆ ಶಸ್ತ್ರಾಸ್ತ್ರ ಪರವಾನಗಿ ಪಡೆದ ಸಲ್ಮಾನ್ ಖಾನ್

    ಇದೇ ವಿಚಾರವಾಗಿ ಪ್ರಿಯಾಂಕಾ ಗಾಂಧಿ ಕೂಡಾ ಟ್ವೀಟ್ ಮಾಡಿದ್ದು, ಗುಜರಾತ್‌ನ ಒಂದೇ ಬಂದರಿನಲ್ಲಿ ಸುಮಾರು 22,000 ಕೋಟಿ ರೂ. ಮೌಲ್ಯದ ಡ್ರಗ್ಸ್ 3 ಬಾರಿ ವಶಪಡಿಸಿಕೊಳ್ಳಲಾಗಿದೆ. ಸರ್ಕಾರ ಮಂದಗತಿಯಲ್ಲಿದೆ, ಸರ್ಕಾರದ ಎಲ್ಲಾ ಸಂಸ್ಥೆಗಳು ಮೌನವಾಗಿವೆ. ಬಿಜೆಪಿ ಸರ್ಕಾರದ ಮೂಗಿನ ಕೆಳಗೆ ಮಾಫಿಯಾ ದೇಶಾದ್ಯಂತ ಡ್ರಗ್ಸ್ ಹಂಚುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ಅಸಹಾಯಕವಾಗಿದೆಯೇ ಅಥವಾ ಮಾಫಿಯಾದೊಂದಿಗೆ ಶಾಮೀಲಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡ್ರಗ್ಸ್ ಮಾಫಿಯಾ ಬಗ್ಗು ಬಡಿಯಲು ಸಾರ್ವಜನಿಕರು ಕೈ ಜೋಡಿಸಬೇಕು: ಆರಗ ಜ್ಞಾನೇಂದ್ರ

    ಡ್ರಗ್ಸ್ ಮಾಫಿಯಾ ಬಗ್ಗು ಬಡಿಯಲು ಸಾರ್ವಜನಿಕರು ಕೈ ಜೋಡಿಸಬೇಕು: ಆರಗ ಜ್ಞಾನೇಂದ್ರ

    ಬೆಂಗಳೂರು: ಯುವಜನರನ್ನು ಗುರಿಯಾಗಿಸಿ ಸಮಾಜ ಘಾತುಕ ಕೃತ್ಯ ನಡೆಸುವ ಡ್ರಗ್ಸ್ ಮಾಫಿಯಾವನ್ನು ರಾಜ್ಯದಲ್ಲಿ ಬಗ್ಗು ಬಡಿಯಲು ಸರ್ಕಾರ ಬದ್ಧವಾಗಿದ್ದು, ಸಾರ್ವಜನಿಕರೂ ಈ ನಿಟ್ಟಿನಲ್ಲಿ ಪೊಲೀಸರ ಜೊತೆ ಕೈ ಜೋಡಿಸಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕರೆ ನೀಡಿದ್ದಾರೆ.

    ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ಜೆಡಿಎಸ್ ಸದಸ್ಯ ಅಪ್ಪಾಜಿ ಗೌಡ, ಅವರು ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಪೊಲೀಸರು, ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ ಹಾಕಲು ಕಟಿಬದ್ಧರಾಗಿದ್ದು, ಈಗಾಗಲೇ, ದಾಖಲೆಯ ಪ್ರಮಾಣದಲ್ಲಿ ಅಕ್ರಮ ಡ್ರಗ್ಸ್ ದಾಸ್ತಾನನ್ನು ವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್ ಮಾಫಿಯಾ ಜಾಲವನ್ನು ನಿರ್ಮೂಲನೆ ಮಾಡಲು ಹಾಗೂ ಈ ಅಕ್ರಮ ದಂಧೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಗುರುತಿಸಿ, ಬಂಧಿಸಲು ಅನುಕೂಲವಾಗುವಂತೆ ಸಾರ್ವಜನಿಕರೂ ಸಹಕರಿಸಬೇಕು ಎಂದು ಮನವಿ ಮಾಡಿದ ಸಚಿವರು ಪೊಲೀಸರಿಗೆ ಅಗತ್ಯ ಮಾಹಿತಿ ಒದಗಿಸಿದರೆ ಡ್ರಗ್ಸ್ ಮಾಫಿಯಾವನ್ನು ಬುಡಸಮೇತ ಕಿತ್ತುಹಾಕಬಹುದು ಎಂದರು. ಇದನ್ನೂ ಓದಿ: ಸಿಎಂ ಬೊಮ್ಮಾಯಿ ಹಿಂದೊಮ್ಮೆ ಕಾಂಗ್ರೆಸ್ ಕದ ತಟ್ಟಿದ್ದರು: ವಿನಯ್ ಕುಮಾರ್ ಸೊರಕೆ

    ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಅವರು ಪ್ರಸ್ತಾಪಿಸಿದ ಹೆಣ್ಣು ಶಿಶು ಮಕ್ಕಳ ಮಾರಾಟ ಜಾಲದ ಬಗ್ಗೆ, ಸಚಿವರು, ವಿಜಯಪುರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ವರದಿ ತರಿಸಿಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್‍ನ ಹಲವು ಶಾಸಕರು ಬಿಜೆಪಿಗೆ ಬರ್ತಾರೆ: ಬಿಎಸ್‍ವೈ

  • ನಾವು ಬಹಳ ಕೇರ್ ಫುಲ್ ಆಗಿರ್ಬೇಕು – ಡ್ರಗ್ಸ್ ಮಾಫಿಯಾ ಬಗ್ಗೆ ಹರಿಪ್ರಿಯಾ ಮಾತು

    ನಾವು ಬಹಳ ಕೇರ್ ಫುಲ್ ಆಗಿರ್ಬೇಕು – ಡ್ರಗ್ಸ್ ಮಾಫಿಯಾ ಬಗ್ಗೆ ಹರಿಪ್ರಿಯಾ ಮಾತು

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಬಗ್ಗೆ ನೀರ್ ದೋಸೆ ಬೆಡಗಿ ನಟಿ ಹರಿಪ್ರಿಯಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಇಂದು ಹರಿಪ್ರಿಯ ಮತ್ತು ದಿಗಂತ್ ನಟನೆಯ ತೆಲುಗು ಸಿನಿಮಾದ ರಿಮೇಕ್ ಚಿತ್ರವೊಂದು ಸೆಟ್ಟೇರಿದೆ. ಈ ಸಿನಿಮಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನನಗೆ ಡ್ರಗ್ಸ್ ಬಗ್ಗೆ ಮಾಹಿತಿ ಇಲ್ಲ. ನಿಮ್ಮ ಮಾಧ್ಯಮಗಳಿಂದಾನೇ ಆ ವಿಷಯ ಎಲ್ಲ ಗೊತ್ತಾಯ್ತು ಎಂದಿದ್ದಾರೆ.

    ನಾನು ಯಾವ ಪಾರ್ಟಿನಲ್ಲೂ ಇದುವರೆಗೂ ಭಾಗಿಯಾಗಿಲ್ಲ. ಡ್ರಗ್ಸ್ ವಿಚಾರದಲ್ಲಿ ತಪ್ಪು ಮಾಡಿರೋರ ಹೆಸರೆಲ್ಲ ಹೊರಗೆ ಬರಬೇಕು. ನಾವು ಎಷ್ಟೋ ಜನಕ್ಕೆ ಸ್ಫೂರ್ತಿಯಾಗಿರುತ್ತೇವೆ. ಹಾಗಾಗಿ ನಾವು ಬಹಳ ಕೇರ್ ಫುಲ್ ಆಗಿ ಇರಬೇಕು. ಈ ವಿಚಾರದಲ್ಲಿ ತಾರತಮ್ಯ ಆಗಬಾರದು ಎಂದರು. ಜೊತೆಗೆ ಕೊರೊನಾ ಸಮಯದಲ್ಲಿ ಎಲ್ಲರಿಗೂ ಕಷ್ಟವಾಗಿತ್ತು. ಈಗ ಶೂಟಿಂಗ್ ಆರಂಭವಾಗಿರುವುದು ಖುಷಿಯಾಗಿದೆ ಎಂದು ಹೇಳಿದ್ದಾರೆ.

    ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ ಸದ್ಯ ಸಿಸಿಬಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈಗಾಗಲೇ ಈ ವಿಚಾರದಲ್ಲಿ ನಟಿಮಣಿಯರಾದ ಸಂಜನಾ ಗಲ್ರಾನಿ ಮತ್ತು ತುಪ್ಪದ ಬೆಡಗಿ ರಾಗಿಣಿ ಆರೆಸ್ಟ್ ಆಗಿ ಜೈಲು ಹಕ್ಕಿಗಳಾಗಿದ್ದಾರೆ.

  • ಡ್ರಗ್ಸ್ ಕೇಸ್- ಅನುಶ್ರೀ ಮೊಬೈಲ್‍ನಿಂದ ಮೂವರು ಪ್ರಭಾವಿ ವ್ಯಕ್ತಿಗಳಿಗೆ ಕರೆ

    ಡ್ರಗ್ಸ್ ಕೇಸ್- ಅನುಶ್ರೀ ಮೊಬೈಲ್‍ನಿಂದ ಮೂವರು ಪ್ರಭಾವಿ ವ್ಯಕ್ತಿಗಳಿಗೆ ಕರೆ

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ಸಿಸಿಬಿ ವಿಚಾರಣೆ ಎದುರಿಸಿರುವ ನಿರೂಪಕಿ, ನಟಿ ಅನುಶ್ರೀ, ತನಿಖೆ ಮೇಲೆ ಪ್ರಭಾವ ಬೀರಿದ್ದರಾ ಎಂಬ ಪ್ರಶ್ನೆ ಎದ್ದಿದೆ?

    ಪ್ರಕರಣದ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಅನುಶ್ರೀ ಅವರ ಮೊಬೈಲ್ ಕರೆಗಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ರಾಜ್ಯದ ಪ್ರಭಾವಿ ನಾಯಕರಿಗೆ ಕರೆ ಮಾಡಿರುವ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಅಲ್ಲದೇ ವಿಚಾರಣೆ ಸಂದರ್ಭದಲ್ಲಿ ಸಿಸಿಬಿ ಪೊಲೀಸರು ಮೊಬೈಲ್ ಸಿಮ್ ಕಾರ್ಡ್ ಗಳನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಮಂಡ್ಯದ ನಿಮಿಷಾಂಬ ದೇಗುಲಕ್ಕೆ ಅನುಶ್ರೀ ಭೇಟಿ – ವಿಶೇಷ ಪೂಜೆ ಸಲ್ಲಿಕೆ

    ಅನುಶ್ರೀ ಅವರಿಗೆ ನೋಟಿಸ್ ಬಂದ ದಿನ ಮತ್ತು ಮಾರನೇ ದಿನ ರಾಜ್ಯದ ಮೂವರು ಪ್ರಭಾವಿಗಳಿಗೆ ಕರೆ ಮಾಡಿದ್ದಾರೆ. ಮೂವರು ಪ್ರಭಾವಿಗಳಿಗೆ ಕರೆ ಮಾಡಿ ಹೆಚ್ಚು ಸಮಯ ಮಾತನಾಡಿದ್ದಾರೆ.

    ಪ್ರಭಾವಿಗಳ ಮೊಬೈಲ್ ಸಂಖ್ಯೆ ನೋಡಿ ಪೊಲೀಸರಿಗೆ ಶಾಕ್ ಆಗಿದ್ದಾರೆ. ಅನುಶ್ರೀ ಕರೆ ಮಾಡಿದ್ದ ‘ಆ’ ಮೂವರು ಸಾಮಾನ್ಯರಲ್ಲ, ಮೂರು ದೊಡ್ಡ ಪಕ್ಷಗಳ ನಾಯಕರು ಎನ್ನಲಾಗಿದ್ದು, ಒಬ್ಬರು ರಾಜ್ಯದ ಅತಿ ದೊಡ್ಡ ರಾಜಕಾರಣಿ, ಮತ್ತೊಬ್ಬರು ಕರಾವಳಿಯ ಅತಿ ಪ್ರಭಾವಿ ನಾಯಕರು ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಇದನ್ನೂ ಓದಿ: ಕಣ್ಣೀರಿಟ್ಟ ಅನುಶ್ರೀಗೆ ಧೈರ್ಯ ತುಂಬಿದ ಗೀತಾಭಾರತಿ ಭಟ್

    ಪ್ರಕರಣದ ಕುರಿತು ಇಂದು ಸ್ಪಷ್ಟನೆ ನೀಡಿ ವಿಡಿಯೋ ಮಾಡಿದ್ದ ಅನುಶ್ರೀ, ಈ ವೀಡಿಯೋವನ್ನು ನಾನು ನನ್ನನ್ನು ಸಮರ್ಥಿಸಿಕೊಳ್ಳಲು ಅಥವಾ ಕರುಣೆಗೋಸ್ಕರ ಮಾಡುತ್ತಿಲ್ಲ. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಸುತ್ತಮುತ್ತ ಹೇಳುತ್ತಿದ್ದಾರೆ. ಈ ಅಭಿಪ್ರಾಯಗಳು ನನ್ನ ಬಗ್ಗೆ ಇರುವುದರಿಂದ ಈ ವೀಡಿಯೋ ಮಾಡುತ್ತಿದ್ದೇನೆ ಎಂದು ಹೇಳಿ ಗಳಗಳನೇ ಕಣ್ಣೀರಿಟ್ಟಿದ್ದರು. ಇದನ್ನೂ ಓದಿ: 14 ವರ್ಷದ ಹಿಂದೆ ಬಸ್ ಹತ್ಕೊಂಡು ಬಂದು ಬೆಂಗ್ಳೂರಲ್ಲಿ ನೆಲೆ ಕಂಡಿದ್ದೇನೆ: ಗಳಗಳನೇ ಅತ್ತ ಅನುಶ್ರೀ

  • ಮಂಗಳೂರಿಗೆ ಬಂದ್ರೂ ಸಿಸಿಬಿ ವಿಚಾರಣೆಗೆ ಹಾಜರಾಗದ ಅನುಶ್ರೀ

    ಮಂಗಳೂರಿಗೆ ಬಂದ್ರೂ ಸಿಸಿಬಿ ವಿಚಾರಣೆಗೆ ಹಾಜರಾಗದ ಅನುಶ್ರೀ

    ಮಂಗಳೂರು: ನಿರೂಪಕಿ ಹಾಗೂ ನಟಿ ಅನುಶ್ರೀ ಹೆಗಲಿಗೆ ಅಂಟಿಕೊಂಡ ಡ್ರಗ್ಸ್ ಕೇಸ್ ನ ವಿಚಾರ ಮುಂದುವರಿದಿದೆ. ಆದರೆ ಇಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದ ಅನುಶ್ರೀ ಮಾತ್ರ ವಿಚಾರಣೆಗೆ ಗೈರಾಗಿದ್ದಾರೆ.

    ಡ್ರಗ್ಸ್ ಪೆಡ್ಲರ್ ಗಳ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ನಿರೂಪಕಿ ಅನುಶ್ರೀಗೆ ಸಿಸಿಬಿ ನೋಟಿಸ್ ನೀಡಿದೆ. ನಿನ್ನೆ ಖುದ್ದಾಗಿ ಬೆಂಗಳೂರಿಗೆ ತೆರಳಿ ನೋಟಿಸ್ ನೀಡಿದ್ದ ಮಂಗಳೂರು ಸಿಸಿಬಿ ಪೊಲೀಸರಿಗೆ ಇಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಅನುಶ್ರೀ ಹೇಳಿದ್ದರು. ಆದರೆ ಇಂದು ವಿಚಾರಣೆಗೆ ಹಾಜರಾಗದೇ ಅನುಶ್ರೀ ನಾಟ್ ರೀಚೇಬಲ್ ಆಗಿದ್ದಾರೆ.

    ನಿನ್ನೆ ರಾತ್ರಿ ಸೋಷಿಯಲ್ ಮೀಡಿಯಾ ಫೇಸ್‍ಬುಕ್‍ನಲ್ಲಿ ಪತ್ರಿಕಾ ಪ್ರಕಟಣೆ ಹಾಕಿದ್ದ ಅನುಶ್ರೀ ಇಂದು ಬೆಳಗ್ಗೆ ಮಂಗಳೂರು ಸಿಸಿಬಿ ಪೋಲಿಸರ ಮುಂದೆ ಹಾಜರಾಗುತ್ತೇನೆ ಎಂದು ತಿಳಿಸಿದ್ದರು. ಇಂದು ಮುಂಜಾನೆ 5ಕ್ಕೆ ಬೆಂಗಳೂರಿನಿಂದ ಮಂಗಳೂರಿಗೆ ಹೊರಟ್ಟಿದ್ದರು. ಆದರೆ ಅನುಶ್ರೀ ಮಾತ್ರ ಇಂದು ವಿಚಾರಣೆಗೆ ಹಾಜರಾಗಿಲ್ಲ. ಅನುಶ್ರೀ ವಿಚಾರಣೆಗೆ ಮಂಗಳೂರು ಸಿಸಿಬಿ ಪೊಲೀಸರು ಹಾಗೂ ನಾರ್ಕೋಟಿಕ್ ಕ್ರೈಂ ಠಾಣೆ ಪೊಲೀಸರು ಸಾಕಷ್ಟು ತಯಾರಿ ಮಾಡಿಕೊಂಡಿದ್ದರು.

    15 ಜನ ಅಧಿಕಾರಿಗಳು, ಸಿಬ್ಬಂದಿ ನೇಮಿಸಿ ವಿಚಾರಣೆಗೆ ತಯಾರಿ ಮಾಡಲಾಗಿತ್ತು. ಮೊದಲ ಹಂತದಲ್ಲಿ ಆರೋಪಿಗಳಾದ ಕಿಶೋರ್ ಅಮನ್, ತರುಣ್ ರಾಜ್ ಜೊತೆಗಿನ ಸಂಬಂಧ ಬಗ್ಗೆ ಪ್ರಶ್ನಿಸಿ, ಎರಡನೇ ಹಂತದಲ್ಲಿ ಸಾಕ್ಷ್ಯ ತೋರಿಸಿ ಅನುಶ್ರೀಗೆ ಪ್ರಶ್ನೆ ಮಾಡಬೇಕೆಂದಿದ್ದರು. ಈಗಾಗಲೇ ಬಂಧನವಾಗಿರುವ ಕಿಶೋರ್, ತರುಣ್, ನೌಶೀನ್ ಮಂಗಳೂರಿನ ಪಾಂಡೇಶ್ವರದಲ್ಲಿನ ಇಕೊನಾಮಿಕ್&ನಾರ್ಕೋಟಿಕ್ ಕ್ರೈಂ ಠಾಣೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದು ಇಂದು ಸಾಕಷ್ಟು ಮಾಹಿತಿ ಸಂಗ್ರಹಿಸಿದ ಪೊಲೀಸರು ಸಂಜೆ ವೇಳೆಗೆ ಕಿಶೋರ್ ಹಾಗೂ ನೌಶೀನ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

    ಕೋರ್ಟ್‍ಗೆ ಹಾಜರುಪಡಿಸುವ ಮುನ್ನ ಇಂದು ಕೂಡಾ ಆರೋಪಿಗಳಿಗೆ ಡ್ರಿಲ್ ಮಾಡಲಾಗಿದ್ದು, ಆರೋಪಿ ತರುಣ್ ಅನುಶ್ರೀ ಬಗೆಗಿನ ಮಹತ್ವದ ಸಂಗತಿಗಳನ್ನು ಬಾಯ್ಬಿಟ್ಟಿದ್ದಾನೆ. ನಿನ್ನೆ ಬಂಧನ ಮಾಡಿದ ಬಳಿಕ ತರುಣ್ ಅನುಶ್ರೀ ಕುಡಿತಾ ಇದ್ರು ಅಂತಾ ಮಾತ್ರ ಹೇಳಿದ್ದ. ಆದರೆ ಪೋಲಿಸರು ತನಿಖೆ ಚುರುಕುಗೊಳಿಸಿದ ಬಳಿಕ ಒಂದೊಂದೇ ಮಾಹಿತಿ ಬಾಯ್ಬಿಟ್ಟಿದ್ದಾನೆ. ನಾವು ಡ್ರಗ್ ಪಾರ್ಟಿ ಮಾಡುತ್ತಿದ್ದೇವು. ಆ ಪಾರ್ಟಿಯಲ್ಲಿ ಅನುಶ್ರೀ ಡ್ರಗ್ಸ್‍ನ ಕಿಕ್ಕೇರಿಸಿಕೊಳ್ಳುತ್ತಿದ್ದರು ಎಂದು ಹೇಳಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ತರುಣ್ ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗುತ್ತಿರುವ ಈ ಎಲ್ಲ ಮಾಹಿತಿಗಳು ಅನುಶ್ರೀಗೆ ಕಂಟಕವಾಗುವ ಎಲ್ಲ ಸಾಧ್ಯತೆಗಳಿವೆ. ಸದ್ಯ ಸಿಸಿಬಿ ನೋಟಿಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗುವುದಕ್ಕೆ ಮೂರು ದಿನಗಳ ಕಾಲಾವಕಾಶವಿದೆ. ಹೀಗಾಗಿ ಅನುಶ್ರೀ ನಾಳೆಯ ಒಳಗೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಗಳಿವೆ.

  • ಕಲಿಯಬಾರದ ಚಟವನ್ನ ಕಲಿತು, ಮಾಡಬಾರದ ಅನಿಷ್ಟಗಳನ್ನ ಮಾಡಿದ್ದೇನೆ: ಯೋಗಿ

    ಕಲಿಯಬಾರದ ಚಟವನ್ನ ಕಲಿತು, ಮಾಡಬಾರದ ಅನಿಷ್ಟಗಳನ್ನ ಮಾಡಿದ್ದೇನೆ: ಯೋಗಿ

    ಬೆಂಗಳೂರು: ನಾನು ಕಲಿಯಬಾರದ ಚಟಗಳನ್ನೆಲ್ಲ ಕಲಿತು, ಆ ಒಂದು ಖಿನ್ನತೆಯಿಂದ ಆಚೆ ಬರಬೇಕು ಅಂತ ಮಾಡಬಾರದ ಅನಿಷ್ಟಗಳೆಲ್ಲವನ್ನೂ ಮಾಡಿದ್ದೇನೆ ಎಂದು ನಟ ಲೂಸ್ ಮಾದ ಯೋಗಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದನ್ನೂ ಓದಿ: ಡ್ರಗ್ಸ್‌ ಕೇಸ್‌- ಐಎಸ್‌ಡಿಯಿಂದ ಲೂಸ್‌ ಮಾದ ಯೋಗಿ, ಅಯ್ಯಪ್ಪ ವಿಚಾರಣೆ

    ಯೋಗಿ 4 ತಿಂಗಳ ಹಿಂದೆ ನೀಡಿದ ಸಂದರ್ಶನದಲ್ಲಿ ತಮ್ಮ ಜೀವನದ ಕಹಿ ಘಟನೆಯನ್ನು ಹಂಚಿಕೊಂಡಿದ್ದರು. ಇದನ್ನೂ ಓದಿ:  ಡ್ರಗ್ಸ್ ದಂಧೆಯಲ್ಲಿ ರಾಗಿಣಿ ಆ್ಯಕ್ಟಿವ್ ಮೆಂಬರ್ – ಸೆ.24ರವರೆಗೂ ರಾಗಿಣಿ, ಸಂಜನಾಗೆ ಜೈಲು ಫಿಕ್ಸ್

    ನಾನು ಕಲಿಯಬಾರದ ಚಟಗಳನ್ನೆಲ್ಲ ಕಲಿತು, ಆ ಒಂದು ಖಿನ್ನತೆಯಿಂದ ಆಚೆ ಬರಬೇಕು ಅಂತ ಮಾಡಬಾರದ ಅನಿಷ್ಟಗಳೆಲ್ಲವನ್ನೂ ಮಾಡಿದ್ದೇನೆ. ಆಗ ನನ್ನ ಆರೋಗ್ಯವೂ ಹಾಳಾಯಿತು. ಕೊನೆಗೆ ಆಸ್ಪತ್ರೆಗೆ ದಾಖಲಾದೆ. ಈ ವೇಳೆ ನನಗೆ ಆಪರೇಷನ್ ಕೂಡ ಆಯಿತು. ಕೊನೆಗೆ ಎಲ್ಲದರಿಂದ ಗೆದ್ದು ನಾನು ಆಚೆ ಬಂದೆ ಎಂದು ನಟ ಯೋಗಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

    ಅಷ್ಟೇ ಅಲ್ಲದೇ ಆಸ್ಪತ್ರೆಯಿಂದ ಬಂದಾಗ ಯಾರೋ ಮೂರನೇಯವ ನಿನ್ನ ಬಗ್ಗೆ ಮಾತನಾಡುತ್ತಿದ್ದಾನಲ್ಲ ಎಂದು ನೀನ್ಯಾಕೆ ತಲೆ ಕೆಡಿಸಿಕೊಳ್ಳುತ್ತೀಯ ಎಂಬುದು ನನ್ನ ಮನಸ್ಸಿಗೆ ಬಂತು. ಆ ಮೇಲೆ ಯಾರ್‍ಯಾರೋ ನಿನ್ನ ಜಾಗಕ್ಕೆ ಬಂದು ನಿನ್ನ ಸ್ಥಾನವನ್ನು ತೆಗೆದುಕೊಳ್ಳುತ್ತಾರೆ. ನಿನ್ನ ಜಾಗವನ್ನು ನೀನು ಬಿಡಬೇಡ ಅಂತ ಮನಸ್ಸಿನಲ್ಲಿ ಬಲವಾಗಿ ಅಂದುಕೊಂಡೆ. ಕೊನೆಗೆ ಸಿನಿಮಾ ಶುರು ಮಾಡಿದೆ ಎಂದು ತಮ್ಮ ಜೀವನದ ಕಹಿ ಘಟನೆಯ ಬಗ್ಗೆ ಹೇಳಿಕೊಂಡಿದ್ದರು.

    ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂತರಿಕ ಭದ್ರತಾ ವಿಭಾಗ (ಐಎಸ್‍ಡಿ) ಖ್ಯಾತ ನಟ ಲೂಸ್ ಮಾದ ಯೋಗಿ ಅವರನ್ನು ವಿಚಾರಣೆಗೆ ಒಳಪಡಿಸಿದೆ.

    ಸದ್ಯಕ್ಕೆ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ರಾಗಿಣಿ ಮತ್ತು ಲೂಸ್ ಮಾದ ಯೋಗಿ ಉತ್ತಮ ಸ್ನೇಹಿತರಾಗಿದ್ದಾರೆ. ರಾಗಿಣಿ ಮತ್ತು ಲೂಸ್ ಮಾದ ಯೋಗಿ ‘ಬಂಗಾರಿ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರ 2013ರಲ್ಲಿ ಬಿಡುಗಡೆಯಾಗಿತ್ತು.

  • ಸರ್ಕಾರದಲ್ಲೇ ಕೆಲಸ ಮಾಡ್ತಿರೋ ನಿರ್ದೇಶಕರ ಮಗನನ್ನ ಯಾಕೆ ಕರೆಸಿಲ್ಲ: ಇಂದ್ರಜಿತ್ ಪ್ರಶ್ನೆ

    ಸರ್ಕಾರದಲ್ಲೇ ಕೆಲಸ ಮಾಡ್ತಿರೋ ನಿರ್ದೇಶಕರ ಮಗನನ್ನ ಯಾಕೆ ಕರೆಸಿಲ್ಲ: ಇಂದ್ರಜಿತ್ ಪ್ರಶ್ನೆ

    – ಪ್ರಭಾವಿ ರಾಜಕಾರಣಿಯ ಕೈವಾಡ ದೊಡ್ಡದಾಗಿದೆ
    – ಸಿಸಿಬಿ ತನಿಖೆ ಅಷ್ಟು ಖುಷಿ ಕೊಟ್ಟಿಲ್ಲ

    ಬೆಂಗಳೂರು: ಡ್ರಗ್ಸ್ ಮಾಫಿಯಾದಲ್ಲಿ ನಟಿಯರಷ್ಟೇ ಅಲ್ಲ ನಟರು, ರಾಜಕಾರಣಿಗಳ ಮಕ್ಕಳು, ಹಿರಿಯ ನಿರ್ದೇಶಕರ ಮಕ್ಕಳಿದ್ದಾರೆ. ಸರ್ಕಾರದಲ್ಲೇ ಕೆಲಸ ಮಾಡುತ್ತಿರುವ ಹಿರಿಯ ನಿರ್ದೇಶಕರ ಮಗನನ್ನ ಯಾಕೆ ಇನ್ನೂ ಕರೆಸಿಲ್ಲ? ಬೇರೇ ಇಲ್ಲದೆ ಇರುವವರನ್ನು ಕರೆದುಕೊಂಡು ಬಂದು ಸುಮ್ಮನೆ ವಿಚಾರಣೆ ಮಾಡುತ್ತಿದ್ದಾರೆ. ಹೀಗಾಗಿ ಇದು ಯಾವುದೇ ರಾಜಕೀಯ ಪ್ರಭಾವ ಇಲ್ಲದೆ ನಡೆಸುತ್ತಿರುವ ವಿಚಾರಣೆ ಎಂದು ನಮಗೆ ಅನ್ನಿಸುತ್ತಿಲ್ಲ ಎಂದು ನಟ, ನಿರ್ದೇಶಕ ಇಂದ್ರಜಿತ್ ಹೇಳಿದ್ದಾರೆ. ಇದನ್ನೂ ಓದಿ:  ಡ್ರಗ್ಸ್ ದಂಧೆಯಲ್ಲಿ ರಾಗಿಣಿ ಆ್ಯಕ್ಟಿವ್ ಮೆಂಬರ್ – ಸೆ.24ರವರೆಗೂ ರಾಗಿಣಿ, ಸಂಜನಾಗೆ ಜೈಲು ಫಿಕ್ಸ್

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂದ್ರಜಿತ್, ನನಗೆ ಗೊತ್ತಿರುವ ವಿಚಾರವನ್ನು ಸಿಸಿಬಿ ಮುಂದೆ ಹೇಳಿದ್ದೇನೆ. ಈ ಮೂಲಕ ಇಡೀ ಕರ್ನಾಟಕಕ್ಕೆ, ವಿದ್ಯಾರ್ಥಿಗಳಿಗೆ, ಯುವಕರಿಗೆ ಡ್ರಗ್ಸ್ ಸೇವನೆ ಮಾಡುವುದು ತಪ್ಪು ಎಂಬ ಸಂದೇಶ ಹೋಗಿದೆ. ಆದರೆ ನಾನು ಸಿಸಿಬಿಗೆ ಮಾಹಿತಿ ಕೊಟ್ಟ ನಂತರ ಆದ ಬೆಳವಣಿಗೆ ಅಷ್ಟು ಖುಷಿ, ಸಂತೋಷ ಕೊಟ್ಟಿಲ್ಲ. ಏನು ಆಗಬೇಕಿತ್ತೋ ಅದು ಇನ್ನೂ ಹೆಚ್ಚಾಗಿ ಆಗಬೇಕಿತ್ತು. ನಮ್ಮ ಪೊಲೀಸರು ಕೆಲಸ ಮಾಡುತ್ತಿದ್ದರೂ ಎಲ್ಲೋ ಒಂದುಕಡೆ ಕೈ ಕಟ್ಟಿ ಹಾಕಿರುವಾಗಿದೆ ಎಂದು ಅಭಿಪ್ರಾಯಪಟ್ಟರು.

    ಡ್ರಗ್ಸ್ ಮಾಫಿಯಾದಲ್ಲಿ ನಟಿಯಷ್ಟೇ ಅಲ್ಲ ನಟರು, ರಾಜಕಾರಣಿಗಳ ಮಕ್ಕಳು, ಹಿರಿಯ ನಿರ್ದೇಶಕರ ಮಕ್ಕಳಿದ್ದಾರೆ. ಈವೆಂಟ್ ಮ್ಯಾನೇಜರ್‌ಗಳು, ಹಲವಾರು ರಾಜಕಾರಣಿಗಳು ಇದ್ದಾರೆ. ಆದರೆ ಇಲ್ಲಿ ಇಬ್ಬರೂ ನಟಿಯನ್ನು ಮಾತ್ರ ಅರೆಸ್ಟ್ ಮಾಡಿ, ಇಲ್ಲಿ ಎಲ್ಲೂ ಬೇರೇ ಇಲ್ಲದೆ ಇರುವವರನ್ನು ಕರೆದುಕೊಂಡು ಬಂದು ನಾಮಕಾವಸ್ಥೆಗೆ ಮಾಡಿದಂತೆ ಇದೆ. ಯಾವುದೇ ರಾಜಕೀಯ ವ್ಯಕ್ತಿಗಳ ಒತ್ತಡವಿಲ್ಲದೆ, ಯಾರ‍್ಯಾರು ದೊಡ್ಡ ವ್ಯಕ್ತಿಗಳಿದ್ದಾರೆ, ನಟರ ಮಕ್ಕಳು, ರಾಜಕಾರಣಿಗಳ ಮಕ್ಕಳು, ಹಿರಿಯ ನಿರ್ದೇಶಕರ ಮಕ್ಕಳನ್ನು ಕರೆಸಿ ಕೂಲಂಕುಶವಾಗಿ ವಿಚಾರಣೆ ಮಾಡಬೇಕು. ಆಗ ನಿಮ್ಮ ಬಗ್ಗೆ ನಮಗೆ ಗೌರವ ಹೆಚ್ಚಾಗುತ್ತದೆ. ಆಗ ಇಡೀ ಕರ್ನಾಟಕಕ್ಕೆ ಒಂದು ಸಂದೇಶ ಕೊಟ್ಟದಂತಾಗುತ್ತದೆ ಎಂದು ಸಿಸಿಬಿ ತನಿಖೆ ಬಗ್ಗೆ ಮಾತನಾಡಿದರು.

    ಸರ್ಕಾರದಲ್ಲೇ ಕೆಲಸ ಮಾಡುತ್ತಿರುವ ಹಿರಿಯ ನಿರ್ದೇಶಕರ ಮಗನನ್ನ ಯಾಕೆ ಇನ್ನೂ ಕರೆಸಿಲ್ಲ? ಎಂದು ಪ್ರಶ್ನೆ ಮಾಡಿದರು. ಇಲ್ಲಿ ಬೇರೇ ಇಲ್ಲದೆ ಇರುವವರನ್ನು ಕರೆದುಕೊಂಡು ಬಂದು ಸುಮ್ಮನೆ ವಿಚಾರಣೆ ಮಾಡುತ್ತಿದ್ದಾರೆ. ಹೀಗಾಗಿ ಇದು ಯಾವುದೇ ರಾಜಕೀಯ ಪ್ರಭಾವ ಇಲ್ಲದೆ ನಡೆಸುತ್ತಿರುವ ವಿಚಾರಣೆ ಎಂದು ನಮಗೆ ಅನ್ನಿಸುತ್ತಿಲ್ಲ. ಇದು ಯಾವುದೇ ಲವ್ ಜಿಹಾದ್ ಅಲ್ಲ. ಡ್ರಗ್ ವಿಚಾರವನ್ನ ಡೈವರ್ಟ್ ಮಾಡಲು ಹೋಗಬೇಡಿ. ಒಬ್ಬ ನಟಿಗೆ ಲವ್ ಜಿಹಾದ್ ಮಾಡಲಿಕೆ ಸಾಧ್ಯವೇ ಎಂದು ಪ್ರಶ್ನಿಸಿದರು.

    ಒಬ್ಬ ನಟಿ ಒಂದು ಬಾರಿ ಹಂದಿ, ನಾಯಿ ಅಂತ ಹೇಳಿರುವುದು. ಆದರೆ ಅದನ್ನು ಹೇಳಿಸಿಕೊಂಡಿರುವುದು ಹತ್ತತ್ತು ಸಾರಿ ಹೇಳುವ ಮೂಲಕ ಹಾಸ್ಯಾಸ್ಪದ ಮಾಡುತ್ತಿದ್ದಾರೆ ಎಂದು ಪ್ರಶಾಂತ್ ಸಂಬರಗಿಗೆ ಇಂದ್ರಜಿತ್ ಟಾಂಗ್ ನೀಡಿದರು. ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಯ ಕೈವಾಡ ದೊಡ್ಡದಾಗಿದೆ. ಕರ್ನಾಟಕದಲ್ಲಿ ಸರಿಯಿಲ್ಲ ಅನ್ನಿಸುತ್ತದೆ. ಬಿಜೆಪಿ ಸರ್ಕಾರ ಇದೆ. ಆದರೆ ಕೇಂದ್ರ ಸರ್ಕಾರಕ್ಕೆ ಸರಿಯಾದ ವಿಷಯ ರವಾನೆ ಆಗುತ್ತಿರಲಿಲ್ಲ ಎಂದರು.

    ಆದಿತ್ಯ ಆಳ್ವಾನ ಇನ್ನೂ ಬಂದಿಸಿಲ್ಲ. ಎ1 ಆರೋಪಿಯನ್ನ ಬಂಧಿಸಿಲ್ಲ. 12 ದಿನಗಳ ಬಳಿಕ ಒಂದಿಬ್ಬರನ್ನ ಬಂಧಿಸಿದ್ದಾರೆ. ಆದರೆ ನಟರ ಮಕ್ಕಳು, ರಾಜಕಾರಣಿ ಮಕ್ಕಳನ್ನ ಇನ್ನೂ ಯಾಕೆ ವಿಚಾರಣೆಗೆ ಕರೆಸಿಲ್ಲ. ಸುಶಾಂತ್ ಕೇಸ್ ಕೂಡ ಸೂಸೈಡ್ ಅಂತ ಹೇಳಿದರು. ಆದರೆ ಸಿಸಿಬಿಗೆ ಕೇಸ್ ಒಪ್ಪಿಸಲಾಗಿದೆ. ಇಲ್ಲೂ ಪ್ರಭಾವಿ ನಾಯಕರು ಫೋನ್ ಮಾಡಿ ಬಿಟ್ಟು ಬಿಡಿ ಅಂತಿದ್ದಾರೆ. ಇಂದು ವಿರೋಧ ಪಕ್ಷ ಕೇಳಬೇಕಾದ ಪ್ರಶ್ನೆಯನ್ನು ಮಾಧ್ಯಮ ಕೇಳುತ್ತಿದೆ. ಪ್ರಭಾವಿ ನಾಯಕರು ಫೋನ್ ಮಾಡಿ ಬಿಟ್ಟು ಬಿಡಿ ಅಂತಿದ್ದಾರೆ ಎಂದು ಇಂದ್ರಜಿತ್ ಹೇಳಿದರು.

    ಡ್ರಗ್ ಮಾಫಿಯಾ ಸಣ್ಣ ವಿಷಯ ಅಲ್ಲ. ರಾಜಕಾರಣಿ ಪುತ್ರ ಎಂದು ಆಳ್ವಾನನ್ನು ಅರೆಸ್ಟ್ ಮಾಡಿಲ್ಲ. ಸರ್ಕಾರದಲ್ಲಿ ಕೆಲಸ ಮಾಡುತ್ತಿರುವ ನಿರ್ದೇಶಕನ ಪುತ್ರ ಇದ್ದಾನೆ. ಅವನು ಪೆಡ್ಲರ್, ಅವನನ್ನ ಯಾಕೆ ಕರೆದು ವಿಚಾರಣೆ ಮಾಡುತ್ತಿಲ್ಲ. ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ತ್ಯಾಪೆ ಕೆಲಸ ಮಾಡಬೇಡಿ. ವಿಚಾರಣೆಯನ್ನ ಕೇವಲ ನೆಪವಾಗಿ ಮಾಡಬೇಡಿ. ರಾಜಕೀಯ ಪಕ್ಷದ ಮಕ್ಕಳನ್ನ ಕರೆಸಬೇಕು. ಹಳೆಯ ಡ್ರಗ್ ಪ್ರಕರಣಗಳನ್ನ ಕೆದಕಿದರೆ ಇನ್ನೂ ಸಾಕಷ್ಟು ಪ್ರಕರಣ ಬಯಲಿಗೆ ಬರುತ್ತೆ. ಆದರೆ ಈಗ ಪ್ರಕರಣದ ತನಿಖೆ ಬೇರೆ ಸ್ವರೂಪವನ್ನು ಪಡೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಯಾರಿಗೆ ರಾಜಕೀಯ ಪ್ರಭಾವ ಇಲ್ಲ ಅಂತವರನ್ನ ಕರೆದು ವಿಚಾರಣೆ ಮಾಡುತ್ತಿದ್ದಾರೆ. ಯಾರು ಸರ್ಕಾರದಿಂದ ಈ ಪ್ರಕರಣ ಮುಚ್ಚು ಹಾಕಲು ಒತ್ತಡ ಹಾಕ್ತಿರೋರು? ಆ ವಿಚಾರ ಯಾರು ಮಾತನಾಡುತ್ತಿಲ್ಲ. ಅವರಿಗೂ ಡ್ರಗ್ ಮಾಫಿಯಾಗೂ ಏನ್ ಕನೆಕ್ಷನ್ ಇದೆ? ಅನ್ನೋದರ ಬಗ್ಗೆ ತನಿಖೆ ಆಗಬೇಕು. ಡ್ರಗ್ ಮಾಫಿಯಾ ಚಿಕ್ಕ ವಿಷಯ ಅಲ್ಲ. ಚಿಕ್ಕ ಮಕ್ಕಳಿಗೆ ಚಾಕ್ಲೇಟ್ ರೀತಿ ಸಿಗುತ್ತಿದೆ. ತನಿಖೆ ಸರಿಯಾಗಿ ಆದರೆ ಪೆಟ್ಟಿಗೆಯಲ್ಲಿರುವ ಶವಗಳು ಆಚೆ ಬರುತ್ತದೆ ಎಂದು ಇಂದ್ರಜಿತ್ ಹೇಳಿದರು.

  • ಡ್ರಗ್ಸ್ ಕೇಸ್ – ನಟ ಸಂತೋಷ್, ಐಂದ್ರಿತಾ ಕಾಲೆಳೆದ ಪ್ರಶಾಂತ್ ಸಂಬರಗಿ

    ಡ್ರಗ್ಸ್ ಕೇಸ್ – ನಟ ಸಂತೋಷ್, ಐಂದ್ರಿತಾ ಕಾಲೆಳೆದ ಪ್ರಶಾಂತ್ ಸಂಬರಗಿ

    ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿಯವರು ಫೇಸ್‍ಬುಕ್ ಪೋಸ್ಟ್ ಹಾಕುವ ಮೂಲಕ ಡ್ರಗ್ಸ್ ಜಾಲಕ್ಕೆ ಸಂಬಂಧಿಸದಂತೆ ಸಿಸಿಬಿ ವಿಚಾರಣೆ ಎದುರಿಸುತ್ತಿರುವ ನಟಿ ಐಂದ್ರಿತಾ ರೈ ಮತ್ತು ನಟ ಸಂತೋಷ್ ಕುಮಾರ್ ಅವರ ಕಾಲೆಳೆದಿದ್ದಾರೆ.

    ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ವಿಚಾರದಲ್ಲಿ ಕನ್ನಡದ ಸ್ಟಾರ್ ನಟ-ನಟಿಯರು ಸಿಲುಕಿ ಹಾಕಿಕೊಂಡಿದ್ದಾರೆ. ಇಂದು ನಿರೂಪಕ ಅಕುಲ್ ಬಾಲಾಜಿ ಮತ್ತು ನಟ ಸಂತೋಷ್ ಕುಮಾರ್ ಅವರನ್ನು ಸಿಸಿಬಿ ವಿಚಾರಣೆ ಮಾಡಿದೆ. ಈಗಾಗಲೇ ಈ ಪ್ರಕರಣದಲ್ಲಿ ನಟಿ ರಾಗಿಣಿ ಮತ್ತು ಸಂಜನಾ ಜೈಲು ಪಾಲಾಗಿದ್ದಾರೆ.

    https://www.facebook.com/VS.Prashanth.Sambargi/posts/10159025108850712

    ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಸಂಬರಗಿಯವರು ಒಂದು ಫೇಸ್‍ಬುಕ್ ಪೋಸ್ಟ್ ಹಾಕಿದ್ದು, ನೂರೂ ಜನ್ಮಕು ಚಿತ್ರದ ನಾಯಕ ಹಾಗೂ ನಾಯಕಿ, ಇಬ್ಬರೂ ಡ್ರಗ್ಸ್ ಜಾಲದಲ್ಲಿ ಆರೋಪ ಎದುರಿಸುತ್ತಿರುವುದು ಏಳೇಳು ಜನುಮದ ವಿಪರ್ಯಾಸ. ಮಾನವ ಜನ್ಮ ದೊಡ್ಡದು, ಇದನ್ನು ಹಾನಿ ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ, ಕಣ್ಣು ಕೈ ಕಾಲ್, ಕಿವಿ, ನಾಲಿಗೆ ಇರಲಿಕ್ಕೆ ಮಣ್ಣು ಮುಕ್ಕಿ ಹುಚ್ಚರಾಗುವಿರಾ ಎಂದು ವ್ಯಂಗ್ಯವಾಡಿದ್ದಾರೆ.

    ಇದಕ್ಕೂ ಮುನ್ನ ಮಾತನಾಡಿದ್ದ ಸಂಬರಗಿ, ಸೋಮವಾರ ಮತ್ತಿಬ್ಬರ ಸ್ಟಾರ್ ನಟರ ಹೆಸರು ಬಹಿರಂಗ ಮಾಡುತ್ತೇನೆ. ಸದ್ಯ ಆ ಬಗ್ಗೆ ಯಾವೂದೇ ಕ್ಲೂ ಕೊಡಲ್ಲ. 48 ಗಂಟೆ ಕಾದರೇ ಎಲ್ಲ ಮಾಧ್ಯಮಗಳ ಮುಂದೆ ಬಹಿರಂಗ ಪಡಿಸುತ್ತೇನೆ. ಇದು ಊಹಾಪೋಹಾದ ಕತೆಯಲ್ಲ ದಾಖಲೆ ಸಮೇತ ಹೆಸರು ಹೇಳುತ್ತೇನೆ. ನಾನು ಹೇಳುವ ಹೆಸರು ವಿಧಾನಸೌಧದ ಪಡಸಾಲೆಯಲ್ಲಿ ಸದ್ದು ಮಾಡುತ್ತೆ. ಈ ಹೋರಾಟಕ್ಕೆ ಹಲವರು ನನ್ನ ಬೆನ್ನುತಟ್ಟಿದ್ದಾರೆ. ಈ ಹೋರಾಟದಲ್ಲಿ ನನಗೆ ಯಾವುದೇ ಭಯ ಇಲ್ಲ ಎಂದು ಹೇಳಿದ್ದರು.

  • ವೈಭವ್ ಬಗ್ಗೆ ಮೊದಲೇ ಗೊತ್ತಿದ್ರೆ ನಾನೇ ಆತನ ಕಪಾಳಕ್ಕೆ ಹೊಡಿತ್ತಿದ್ದೆ: ಸಂತೋಷ್

    ವೈಭವ್ ಬಗ್ಗೆ ಮೊದಲೇ ಗೊತ್ತಿದ್ರೆ ನಾನೇ ಆತನ ಕಪಾಳಕ್ಕೆ ಹೊಡಿತ್ತಿದ್ದೆ: ಸಂತೋಷ್

    – ವಿಚಾರಣೆಗೆ ಹಾಜರಾದ ಅಕುಲ್, ಸಂತೋಷ್

    ಬೆಂಗಳೂರು: ವೈಭವ್ ಡ್ರಗ್ಸ್ ಪೆಡ್ಲರ್ ಆಗಿದ್ದಾನೆ ಅಂತ ಈಗ ಗೊತ್ತಾಗಿದೆ. ಮೊದಲೇ ಗೊತ್ತಾಗಿದ್ದರೆ ದೇವರ ಮೇಲಾಣೆ ನಾನೇ ಅವನ ಕಪಾಳಕ್ಕೆ ಹೊಡೆಯುತ್ತಿದ್ದೆ. ಯಾಕೆಂದರೆ ಎರಡು ಮಕ್ಕಳ ತಂದೆ, ಜೀವನದಲ್ಲಿ ಮುಂದೆ ಬರಬೇಕು ಅಂದಕೊಂಡಿದ್ದ ಎಂದು ನಟ ಸಂತೋಷ ಹೇಳಿದರು. ಇದನ್ನೂ ಓದಿ: ಆಫ್ಟರ್ ಪಾರ್ಟಿಗೆ ಪ್ರತ್ಯೇಕ ಆಹ್ವಾನ ಇರುತ್ತೆ, ಭಾರೀ ಹಣ ಖರ್ಚು ಮಾಡ್ತಾರೆ- ನಟ ಸಂತೋಷ್ ಕುಮಾರ್

    ಸಿಸಿಬಿ ವಿಚಾರಣೆಗೆ ಹಾಜರಾಗುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಸಂತೋಷ್, ವಾಟ್ಸಪ್ ಮೂಲಕ ಸಿಸಿಬಿ ಅವರು ನನಗೆ ನೋಟಿಸ್ ಕಳುಹಿಸಿದ್ದಾರೆ. ನನಗೂ ಈ ಡ್ರಗ್ಸ್ ವಿಚಾರದಲ್ಲಿ ಏನೂ ಸಂಬಂಧ ಎಂದು ಹುಡುಕುತ್ತಿದ್ದಾಗ ನಾಲ್ಕು ವರ್ಷದ ಹಿಂದೆ ಒಂದು ವಿಲ್ಲಾದಲ್ಲಿ ಉಳಿದುಕೊಂಡಿದ್ದೆ. ಆಗ ಆರೋಪಿ ಆಗಿರುವ ವೈಭವ್ ಜೈನ್ ಪರಿಚಯವಾಗಿತ್ತು. ವೈಭವ್ ವಯಕಾಲಿಕನಲ್ಲಿ ಒಂದು ಜ್ಯುವೆಲರಿ ಶಾಪ್ ಇಟ್ಟುಕೊಂಡಿದ್ದನು. ಆತನಿಗೆ ಎರಡು ಮಕ್ಕಳಿವೆ, ಕುಟುಂಬಸ್ಥರ ಜೊತೆ ಶಬರಿಮಲೆ, ತಿರುಪತಿಗೆ ಬರುತ್ತಿದ್ದರು ಎಂದು ಹೇಳಿದರು. ಇದನ್ನೂ ಓದಿ: ಜನ್ರಿಂದ ಸೈ ಎನಿಸಿಕೊಳ್ಳೋದಕ್ಕಿಂತ ಬೆಸ್ಟ್ ಡ್ರಗ್ ಇಲ್ಲ: ಅಕುಲ್

    ನನಗೆ ದೂರವಾಗುತ್ತದೆ ಎಂದು ವಿಲ್ಲಾಯಿಂದ ಸಿಟಿಗೆ ಶಿಫ್ಟ್ ಆದೆ. ಕೆಲವು ಕಡೆ ಪಾರ್ಟಿ ಮಾಡಲು ವಿಲ್ಲಾ ಕೊಡುತ್ತಾರೆ. ಅದೇ ರೀತಿ ನನ್ನ ಮನೆಯನ್ನು ಮಾರ್ಕೆಟಿಂಗ್ ಮಾಡಲು ವೈಭವ್‍ಗೆ ವಿಲ್ಲಾ ಕೊಟ್ಟಿದ್ದೆ. ಆದರೆ 10ಕ್ಕಿಂತ ಹೆಚ್ಚು ಜನರನ್ನು ಸೇರಿಸಬಾರದೆಂದು ತಿಳಿಸಿದ್ದೆ. ಆದರೂ ಹೆಚ್ಚಿನ ಜನರನ್ನು ಕರೆಸುತ್ತಿದ್ದನು. ಇದೇ ವಿಚಾರಕ್ಕೆ ನನಗೂ ವೈಭವ್ ಜೈನ್‍ಗೂ ವ್ಯವಹಾರದ ವಿಚಾರದಲ್ಲಿ ಎರಡು ಬಾರಿ ಜಗಳವಾಗಿತ್ತು. ಯಾಕೆ ಜಗಳ ಆಗಿತ್ತು? ಆ ಎಲ್ಲಾ ಬಗೆಗಿನ ಡಾಕ್ಯುಮೆಂಟ್‍ಗಳನ್ನ ತೆಗೆದುಕೊಂಡು ಹೋಗುತ್ತಿದ್ದೇನೆ. ಸಿಸಿಬಿ ವಿಚಾರಣೆಗೆ ಸಂಪೂರ್ಣವಾಗಿ ಸಹಕಾರ ನೀಡುತ್ತೇನೆ ಎಂದರು.

    ನಾಲ್ಕು ಬಾರಿ ಜಗಳ ಮಾಡಿದ ನಂತರ ಅವನ ಹತ್ತಿರ ನನ್ನ ವ್ಯವಹಾರವನ್ನು ಕ್ಯಾನ್ಸಲ್ ಮಾಡಿದೆ. ಆದರೆ ವೈಭವ್ ಡ್ರಗ್ಸ್ ಪೆಡ್ಲರ್ ಆಗಿದ್ದಾನೆ ಅಂತ ಈಗ ಗೊತ್ತಾಗಿದೆ. ಮೊದಲೆ ಗೊತ್ತಾಗಿದ್ದರೆ ದೇವರ ಮೇಲಾಣೆ ನಾನೇ ಅವನ ಕಪಾಳಕ್ಕೆ ಹೊಡೆಯುತ್ತಿದ್ದೆ. ಯಾಕೆಂದರೆ ಎರಡು ಮಕ್ಕಳ ತಂದೆ, ಜೀವನದಲ್ಲಿ ಮುಂದೆ ಬರಬೇಕು ಅಂದಕೊಂಡಿದ್ದ. ಆದರೆ ಈಗ ಸಿಸಿಬಿ, ಮಾಧ್ಯಮಗಳಿಂದ ಅವನ ಬಗ್ಗೆ ಗೊತ್ತಾಗುತ್ತಿದೆ ಎಂದು ಸಂತೋಷ್ ಹೇಳಿದರು.

    ಸಂಜನಾ, ಐಂದ್ರಿತಾ ಎಲ್ಲರೂ ನನ್ನ ಗೆಳೆಯರು. ಐದು ವರ್ಷದ ಹಿಂದೆ ಸಂಜನಾ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದೆ. ಈ ವೇಳೆ ರಾಹುಲ್ ಸಿಕ್ಕಿದ್ದ. ಆತ ಸೆಲೆಬ್ರಿಟಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಫೇಸ್‍ಬುಕ್‍ಗೆ ಹಾಕುತ್ತಿದ್ದನು. ಮತ್ತೆ ಯುಬಿ ಸಿಟಿಯಲ್ಲಿ ರಾಹುಲ್ ಬರ್ತ್ ಡೇ ಪಾರ್ಟಿಗೆ ಹೋಗಿದ್ದೆ. ಎರಡು ಪಾರ್ಟಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದೆ. ಈಗ ಅದೇ ಫೋಟೋ ಸಿಕ್ಕಿರುವುದು ಎಂದರು.

    ಇನ್ನೂ ವಿಚಾರಣೆಗೆ ಬಂದು ಅಕುಲ್, ಸಿಸಿಬಿ ವಿಚಾರಣೆಗೆ ಕರೆದಿದ್ದಾರೆ. ಹೀಗಾಗಿ ಹೇಳಿದ್ದ ಸಮಯಕ್ಕೆ ಬಂದಿದ್ದೇನೆ. ನನ್ನ ಕಡೆಯಿಂದ ಸಹಕಾರ ಇರುತ್ತೆ. ನಾನು ವೈಭವ್ ಜೈನ್ ಹಾಯ್ ಬಾಯ್ ಫ್ರೆಂಡ್ಸ್ ಅಷ್ಟೇ. ದೊಡ್ಡಬಳ್ಳಾಪುರದಲ್ಲಿ ರೆಸಾರ್ಟ್ ಕೊಟ್ಟಿರುವ ಬಗ್ಗೆ ನಾನು ದಾಖಲೆಗಳೊಂದಿಗೆ ಬಂದಿದ್ದೇನೆ. ಇದೊಂದು ಒಳ್ಳೆಯ ಕಾರ್ಯ, ಸಿಸಿಬಿಗೆ ನನ್ನ ಸಾಥ್ ಇದೆ. ವಿಚಾರಣೆಗೆ ನಾನು ಸ್ಪಂದಿಸಲಿದ್ದೇನೆ ಎಂದರು. ಪ್ರತೀಕ್ ಶೆಟ್ಟಿ ಪರಿಚಯವೇ ಎಂಬ ಪ್ರಶ್ನೆಗೆ ಸ್ಪಷ್ಟನೆ, ಆತ ಯಾರೆಂಬುದು ನನಗೆ ಗೊತ್ತಿಲ್ಲ ಎಂದು ಅಕುಲ್ ಸ್ಪಷ್ಟಪಡಿಸಿದರು.

    ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿದಂತೆ ವಿಚಾರಣೆಗೆ ಹಾಜರಾಗುವಂತೆ ನಿರೂಪಕ ಅಕುಲ್ ಬಾಲಾಜಿ ಮತ್ತು ನಟ ಸಂತೋಷ್ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ಕೊಟ್ಟಿದ್ದರು. ಇಂದು ಇಬ್ಬರೂ ಸಿಸಿಬಿ ಕಚೇರಿಗೆ ಹಾಜರಾಗಿದ್ದು, ಸಿಸಿಬಿ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

  • ನಾನು ಟುಮಾರೋಲ್ಯಾಂಡ್ ಪಾರ್ಟಿಗೆ ಹೋಗಿದ್ದೇನೆ: ಭುವನ್

    ನಾನು ಟುಮಾರೋಲ್ಯಾಂಡ್ ಪಾರ್ಟಿಗೆ ಹೋಗಿದ್ದೇನೆ: ಭುವನ್

    – ಎಲ್ಲ ಪಾರ್ಟಿಗಳೂ ಒಂದೇ ರೀತಿ ಇರೋದಿಲ್ಲ

    ಬೆಂಗಳೂರು: ನಾನು ಟುಮಾರೋಲ್ಯಾಂಡ್ ಪಾರ್ಟಿಗೆ ಹೋಗಿದ್ದೇನೆ ಎಂದು ನಟ ಭುವನ್ ಪೊನ್ನಣ್ಣ ಹೇಳಿದ್ದಾರೆ.

    ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಭುವನ್, ಎಲ್ಲಾ ಪಾರ್ಟಿಗಳೂ ಒಂದೇ ರೀತಿ ಇರೋದಿಲ್ಲ. ಮೊದಲು ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ ಮಾಫಿಯಾ ವಿಷಯ ಕೇಳಿ ತುಂಬಾನೆ ಶಾಕ್ ಆಯ್ತು. ಕೆಲವು ಕಡೆ ಡ್ರಗ್ಸ್ ಇರಬಹುದು ಎಂದು ತಿಳಿಸಿದ್ದಾರೆ. ಇದನ್ನು ಓದಿ: ಆಫ್ಟರ್ ಪಾರ್ಟಿಗೆ ಪ್ರತ್ಯೇಕ ಆಹ್ವಾನ ಇರುತ್ತೆ, ಭಾರೀ ಹಣ ಖರ್ಚು ಮಾಡ್ತಾರೆ- ನಟ ಸಂತೋಷ್ ಕುಮಾರ್

    ಪಾರ್ಟಿ ಅಂದರೆ ಬರ್ತ್ ಡೇ ಸೇರಿ ಬೇರೆ ಬೇರೆ ರೀತಿ ಇರುತ್ತೆ. ನಾನು ಟುಮಾರೋಲ್ಯಾಂಡ್ ಪಾರ್ಟಿ ಅಟೆಂಡ್ ಮಾಡಿದ್ದೇನೆ. ಆ ಪಾರ್ಟಿ ಬಗ್ಗೆ ಜನರಿಗೆ ತಪ್ಪು ತಿಳುವಳಿಕೆ ಇದೆ. ಅದೊಂದು ಮ್ಯೂಸಿಕ್ ಪಾರ್ಟಿ. ಏಳು ಬೇರೆ, ಬೇರೆ ಸ್ಟೇಜ್ ಇರುತ್ತೆ. ನಾವು ನಮ್ಮ ದೇಶವನ್ನು ಪ್ರತಿನಿಧಿಸಿದ್ದೆ, ಫ್ಲ್ಯಾಗ್ ಹಿಡಿದು ಮ್ಯೂಸಿಕ್‍ಗೆ ಡ್ಯಾನ್ಸ್ ಮಾಡಿದ್ದು ಅಷ್ಟೇ. ಇತ್ತೀಚೆಗೆ ನಡೆಯುತ್ತಿರುವ ಘಟನೆಗಳಿಂದ ನನಗೆ ಬೇಸರವಾಗಿದೆ ಎಂದು ಭುವನ್ ಹೇಳಿದ್ದಾರೆ. ಇದನ್ನು ಓದಿ: ಜನ್ರಿಂದ ಸೈ ಎನಿಸಿಕೊಳ್ಳೋದಕ್ಕಿಂತ ಬೆಸ್ಟ್ ಡ್ರಗ್ ಇಲ್ಲ: ಅಕುಲ್

    ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ ವಿಚಾರ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ ನಟಿಯರಾದ ರಾಗಿಣಿ ಮತ್ತು ಸಂಜನಾ ಜೈಲು ಪಾಲಗಿದ್ದಾರೆ. ದಿನೇ ದಿನೇ ಹೊಸ ಹೆಸರುಗಳು ಈ ಪ್ರಕರಣದಲ್ಲಿ ಕೇಳಿ ಬರುತ್ತಿದ್ದು, ಚಿತ್ರರಂಗದ ಕೆಲವರಿಗೆ ನೋಟಿಸ್ ನೀಡಲಾಗಿದೆ. ಶುಕ್ರವಾರ ನಿರೂಪಕ ಅಕುಲ್ ಬಾಲಾಜಿ ಮತ್ತು ನಟ ಸಂತೋಷ್‍ಗೆ ಸಿಸಿಬಿ ನೋಟಿಸ್ ನೀಡಿದೆ.