Tag: Drug Case

  • ಎನ್‍ಡಿಪಿಎಸ್ ಆ್ಯಕ್ಟ್ ಒಂದು ಸೆಕ್ಷನ್‌ನಿಂದ ರಾಗಿಣಿಗೆ ಜಾಮೀನು ಸಿಗೋದು ಅನುಮಾನ

    ಎನ್‍ಡಿಪಿಎಸ್ ಆ್ಯಕ್ಟ್ ಒಂದು ಸೆಕ್ಷನ್‌ನಿಂದ ರಾಗಿಣಿಗೆ ಜಾಮೀನು ಸಿಗೋದು ಅನುಮಾನ

    ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾದ ನಟಿ ರಾಗಿಣಿ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.

    ಮುಂಬೈ ಮೂಲದ ವಕೀಲರ ಮೂಲಕ ನಗರದ 33ನೇ ಸಿಸಿಎಚ್‌ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಆದರೆ ರಾಗಿಣಿಗೆ ಜಾಮೀನು ಸಿಗುವುದು ಕಷ್ಟ ಎನ್ನಲಾಗುತ್ತಿದೆ.

    ರಾಗಿಣಿ ಸೇರಿದಂತೆ 14 ಆರೋಪಿಗಳ ವಿರುದ್ಧ ನಾರ್ಕೊಟಿಕ್‌ ಡ್ರಗ್ಸ್ ಆ್ಯಂಡ್ ಸೈಕೊಟ್ರಾಫಿಕ್ ಸಬ್‌ಸ್ಟೆನ್ಸಸ್ (ಎನ್‍ಡಿಪಿಎಸ್) ಆ್ಯಕ್ಟ್ ಸೆಕ್ಷನ್ 21, 21ಸಿ, 27ಎ, 27ಬಿ, 29, ಐಪಿಸಿ 120ಬಿ ಅಡಿ ಕೇಸ್‌ ದಾಖಲಾಗಿದೆ. ಈ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿರುವ ಕಾರಣ ಜಾಮೀನು ಕಷ್ಟ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

    ರಾಗಿಣಿಗೆ ಜಾಮೀನು ಡೌಟ್ ಯಾಕೆ?
    1. ರಾಗಿಣಿ ಬಂಧನ ಪ್ರಕರಣದಲ್ಲಿ ಹಾಕಿರುವ ಕಠಿಣ ಸೆಕ್ಷನ್‍ಗಳು
    2. ಎನ್‍ಡಿಪಿಎಸ್-21ಸಿ ರಾಗಿಣಿ ಪಾಲಿಗೆ ಬಿಸಿ ತುಪ್ಪ
    3. ಇಂತಹ ಕೇಸ್‍ನಲ್ಲಿ ಸೆಷನ್ಸ್ ಕೋರ್ಟ್ ಬೇಲ್ ನೀಡುವ ಸಾಧ್ಯತೆ ಕಡಿಮೆ
    4. ರಾಗಿಣಿ ವಿರುದ್ಧ ಸಿಸಿಬಿಗೆ ಲಭ್ಯ ಆಗಿರುವ ಪ್ರಮುಖ ಸಾಕ್ಷ್ಯ
    5. ರೇಡ್ ವೇಳೆ ಸಿಕ್ಕಿವೆ ರಾಗಿಣಿ ಲಾಕ್ ಮಾಡುವ `ಸಾಕ್ಷಿ’
    6. ನೋಟಿಸ್‌ಗೆ ಉತ್ತರ ನೀಡದೇ ಸಾಕ್ಷಿ ನಾಶ ಪ್ರಯತ್ನ ಆರೋಪ
    7. ಕಸ್ಟಡಿಯಲ್ಲಿದ್ದರೂ ವಿಚಾರಣೆಗೆ ಸರಿಯಾಗಿ ಸಹಕರಿಸದ ಆರೋಪ

    ಸಿಸಿಬಿ ವಕೀಲರ ವಾದವೇನು?
    ರಾಗಿಣಿ ತನಿಖೆಗೆ ಸರಿಯಾಗಿ ಸಹಕರಿಸಿಲ್ಲ. ಅಷ್ಟೇ ಅಲ್ಲದೇ ಮೆಡಿಕಲ್ ವರದಿ ಬರಬೇಕಿದೆ. ಜಾಮೀನಿನ ಮೇಲೆ ಹೊರಗಡೆ ಹೋದ್ರೆ ಸಾಕ್ಷ್ಯಾನಾಶ ಆಗುವ ಸಾಧ್ಯತೆಯಿದೆ. ಇನ್ನೂ ಸಾಕಷ್ಟು ಆರೋಪಿಗಳ ಬಂಧನ ಬಾಕಿ ಇದೆ. ರಾಗಿಣಿ ಮೊಬೈಲ್ ಇನ್ನೂ ರಿಟ್ರೀವ್ ಆಗಿಲ್ಲ ಇದನ್ನೂ ಓದಿ: ಸಂಜನಾ ಜೊತೆ ಕೊಲಂಬೋಗೆ ಹೋಗಿದ್ದು ಸಾಬೀತಾದ್ರೆ ನನ್ನ ಆಸ್ತಿಯೆಲ್ಲ ಸರ್ಕಾರಕ್ಕೆ ಬರೆದುಕೊಡ್ತೀನಿ: ಜಮೀರ್

    ರಾಗಿಣಿ ಪರ ವಕೀಲರ ವಾದವೇನು?
    ತನಿಖೆಗೆ ನನ್ನ ಕಕ್ಷಿದಾರರು ಸಹಕಾರ ನೀಡುತ್ತಿದ್ದು, ಸಾಕ್ಷಿ ನಾಶ ಮಾಡಲ್ಲ ಊರು ಬಿಟ್ಟು ಹೋಗುವುದಿಲ್ಲ. ಈಗಾಗಲೇ ಪೊಲೀಸರ ಕಸ್ಟಡಿಯಲ್ಲಿ 8 ದಿನ ಕಳೆದಿದ್ದಾರೆ. ತನಿಖೆಗೆ ಇನ್ನೂ ಹೆಚ್ಚು ಕಾಲಾವಕಾಶ ಆಗತ್ಯ ಇಲ್ಲ. ಹೀಗಾಗಿ ಮಧ್ಯಂತರ ಜಾಮೀನು ಮಂಜೂರು ಮಾಡಬಹುದು.

    ಯಾವ ಸೆಕ್ಷನ್‌ ಏನು ಹೇಳುತ್ತದೆ?
    ಎನ್‍ಡಿಪಿಎಸ್ 21 – ಮಾದಕ ವಸ್ತುಗಳನ್ನು ಅಕ್ರಮವಾಗಿ ತಯಾರು ಮಾಡುವುದು, ಮಾರಾಟ ಮಾಡುವುದು, ಸಾಗಾಟ ಮಾಡುವುದು ಅಪರಾಧ.

    ಎನ್‍ಡಿಪಿಎಸ್ 21ಸಿ – ವಾಣಿಜ್ಯ ಉದ್ದೇಶಕ್ಕಾಗಿ ಮಾದಕವಸ್ತುಗಳ ಸಂಗ್ರಹಣೆ ಮತ್ತು ಮಾರಾಟ ಮಾಡುವುದು ನಿಷಿದ್ಧ. ಆರೋಪ ಸಾಬೀತಾದರೆ 10 ವರ್ಷಕ್ಕೆ ಮೇಲ್ಪಟ್ಟು ಶಿಕ್ಷೆ

    ಎನ್‍ಡಿಪಿಎಸ್ 27 ಎ – ಮಾದಕ ವಸ್ತುಗಳಿಗೆ ಸಂಬಂಧಿಸಿ ಹಣಕಾಸು ನೆರವು. ನೇರವಾಗಿ ಅಥವಾ ಪರೋಕ್ಷವಾಗಿ ಅಥವಾ ಮಾದಕ ವಸ್ತು ಸಾಗಣಿಕೆಗೆ ನೆರವಾಗುವುದು ಅಪರಾಧ.

    ಎನ್‍ಡಿಪಿಎಸ್ 27 ಬಿ – ಮಾದಕವಸ್ತು ಸೇವನೆ ಕೂಡ ಅಪರಾಧ. ಆರು ತಿಂಗಳ ಶಿಕ್ಷೆ ಅಥವಾ 10 ಸಾವಿರ ದಂಡ.

    ಎನ್‍ಡಿಪಿಎಸ್ 29 – ಅಪರಾಧಿಕ ಒಳ ಸಂಚಿಗೆ ಸಹಾಯ ಮಾಡುವುದು. ಅಂತೆಯೇ ಒಳ ಸಂಚು ಮಾಡಲು ವೇದಿಕೆ ಕಲ್ಪಿಸುವುದು ಪಾರ್ಟಿ ಆಯೋಜನೆ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧ.

    ಐಪಿಸಿ 120 ಬಿ – ಅಪರಾಧಿಕ ಒಳಸಂಚು.

  • ಪೃಥ್ವಿ ಶೆಟ್ಟಿ ಹೇಳಿಕೆಯ ಆಧಾರದ ಮೇಲೆ ಸಂಜನಾ ನಿವಾಸದ ಮೇಲೆ ದಾಳಿ?

    ಪೃಥ್ವಿ ಶೆಟ್ಟಿ ಹೇಳಿಕೆಯ ಆಧಾರದ ಮೇಲೆ ಸಂಜನಾ ನಿವಾಸದ ಮೇಲೆ ದಾಳಿ?

    ಬೆಂಗಳೂರು: ಇವೆಂಟ್‌ ಮ್ಯಾನೇಜ್ಮೆಂಟ್‌ ಕಂಪನಿ ನಡೆಸುತ್ತಿರುವ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ನೀಡಿದ ಹೇಳಿಕೆಯ ಆಧಾರದ ಮೇಲೆ ನಟಿ ಸಂಜನಾ ನಿವಾಸದ ಮೇಲೆ ಸಿಸಿಬಿ ದಾಳಿ ನಡೆಸಿದೆ ಎನ್ನಲಾಗಿದೆ.

    ಇಂದಿರಾನಗರದಲ್ಲಿರುವ ನಟಿ ಸಂಜನಾ ನಿವಾಸದ ಮೇಲೆ ಇಂದು ಬೆಳ್ಳಬೆಳಗ್ಗೆ ಇನ್ಸ್‌ಪೆಕ್ಟರ್‌ ಪುನೀತ್‌ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಬಂದ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

    ಕಳೆದ ವಾರ ನಟಿ ರಾಗಿಣಿ ಮನೆ ಮೇಲೆ ದಾಳಿ ನಡೆಸಿ ಬಳಿಕ ಸಿಸಿಬಿ ಬಂಧಿಸಿತ್ತು. ಕಳೆದ ವಾರವೇ ಸಂಜನಾ ಹೆಸರು ಕೇಳಿ ಬಂದಿತ್ತು. ಆದರೆ ಸಿಸಿಬಿ ಎಫ್‌ಐಆರ್‌ನಲ್ಲಿ ಸಂಜನಾ ಹೆಸರು ಉಲ್ಲೇಖವಾಗಿರಲಿಲ್ಲ. ಆದರೆ ಈಗ ಆಪ್ತೆ ಪೃಥ್ವಿ ಶೆಟ್ಟಿ ಮತ್ತು ಆಪ್ತ ರಾಹುಲ್‌ ನೀಡಿದ ಹೇಳಿಕೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

    ಆರೋಪ ಏನು?
    ಡ್ರಗ್ಸ್‌ ಪ್ರಕರಣದಲ್ಲಿ ಸಂಜನಾ ವಿರುದ್ಧ ಕಳೆದ ವಾರ ಯಾವುದೇ ಸಾಕ್ಷ್ಯಗಳು ಸಿಕ್ಕಿರಲಿಲ್ಲ. ಹೀಗಾಗಿ ಸೂಕ್ತ ಸಾಕ್ಷ್ಯಕ್ಕಾಗಿ ಕಾಯುತ್ತಿದ್ದರು. ಈ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ಹಲವು ಮಾಹಿತಿಗಳನ್ನು ತಿಳಿಸಿದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.

    ಬೆಂಗಳೂರಿನಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿದ್ದ ಪೃಥ್ವಿ ಶೆಟ್ಟಿ ಕಂಪನಿಯಲ್ಲಿ ಸಂಜನಾ ಸಹ ಪಾಲುದಾರೆ ಎಂಬ ಮಾಹಿತಿ ಸಿಕ್ಕಿದೆ. ಇಬ್ಬರ ನಡುವೆ ಲಕ್ಷಾಂತರ ರೂಪಾಯಿ ವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ದಾಖಲೆಗಳನ್ನು ಕೆದಕಿದಾಗ ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಪಾರ್ಟಿಗಳನ್ನು ಆಯೋಜನೆ ಮಾಡಿದ ಬಗ್ಗೆ ಮಾಹಿತಿ ಸಿಕ್ಕಿದೆ.

    ಇವರಿಬ್ಬರು ಬರೀ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದರೇ ಅಥವಾ ಬೇರೆ ಯಾವೆಲ್ಲಾ ವ್ಯವಹಾರಗಳನ್ನು ನಡೆಸುತ್ತಿದ್ದರು ಎಂಬುದರ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದೆ. ಪಾರ್ಟಿಗಳಲ್ಲಿ ಏನು ಬಳಕೆ ಆಗುತ್ತಿತ್ತು? ಯಾರೆಲ್ಲ ಬರುತ್ತಿದ್ದರು ಎಂಬುದರ ಬಗ್ಗೆ ಪೃಥ್ವಿ ಶೆಟ್ಟಿ ತಿಳಿಸಿದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ.

    ಆಪ್ತನ ಮೇಲೆ ಎಫ್‌ಐಆರ್‌ :
    ಸಿಸಿಬಿಯ ನಾರ್ಕೊಟಿಕ್ಸ್ ಎಸಿಪಿ ಗೌತಮ್ ಸೆ.4 ರಂದು ನೀಡಿದ ಸ್ವಯಂಪ್ರೇರಿತ ದೂರಿನ ಆಧಾರದ ಮೇಲೆ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಬಂಧಿತ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದ ಬಗ್ಗೆ ಸಾಕ್ಷಿ ಹಾಗೂ ಪುರಾವೆಗಳು ಸಿಕ್ಕಿರುವ ಹಿನ್ನೆಯಲ್ಲಿ ಗೌತಮ್‌ ಅವರು ದೂರು ನೀಡಿದ್ದರು. ವಾಟ್ಸಾಪ್ ಮೆಸೇಜ್‍ಗಳು ಹಾಗೂ ಪೆಡ್ಲರ್ ಗಳ ನೀಡಿರುವ ಮಾಹಿತಿ ಅನ್ವಯ ನಟಿ ರಾಗಿಣಿ ಅವರ ಕೈವಾಡದ ಬಗ್ಗೆ ಸಾಕ್ಷಿ ಲಭ್ಯವಾಗಿದ್ದು, ಡ್ರಗ್ ಡೀಲರ್ ಗಳ ಜೊತೆ ಒಡನಾಟವನ್ನು ಹೊಂದಿದ್ದಾರೆ. ಅನೇಕ ಬಾರಿ ಡ್ರಗ್ ಡೀಲ್ ಮಾಡಿರುವ ಬಗ್ಗೆ ಮಾಹಿತಿ ಖಚಿತವಾದ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

    ಈ ಎಫ್‌ಐಆರ್‌ನಲ್ಲಿ ಸಂಜನಾ ಆಪ್ತ ರಾಹುಲ್‌ ಹೆಸರು ಸಹ ಉಲ್ಲೇಖವಾಗಿತ್ತು. ಒಟ್ಟು 12 ಮಂದಿ ಆರೋಪಿಗಳ ಪೈಕಿ ರಾಹುಲ್‌ 11ನೇ ಆರೋಪಿಯಾಗಿದ್ದಾನೆ. ವಿಚಾರಣೆಯ ವೇಳೆ ಈತ ಸಂಜನಾ ಪಾಲ್ಗೊಳ್ಳುತ್ತಿದ್ದ ಹೈ ಎಂಡ್‌ ಪಾರ್ಟಿ ಬಗ್ಗೆ ಮಾಹಿತಿ ನೀಡಿದ್ದಾನೆ. ಮಹತ್ವದ ಸ್ಯಾಕ್ಷ್ಯಗಳು ಲಭ್ಯವಾದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಸಂಜನಾ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.

  • ಡ್ರಗ್ಸ್‌ ಕೇಸ್‌ – ನಟಿ ಸಂಜನಾ ಮನೆ ಮೇಲೆ ಸಿಸಿಬಿ ದಾಳಿ

    ಡ್ರಗ್ಸ್‌ ಕೇಸ್‌ – ನಟಿ ಸಂಜನಾ ಮನೆ ಮೇಲೆ ಸಿಸಿಬಿ ದಾಳಿ

    ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಮನೆ ಮೇಲೆ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ದಾಳಿ ಮಾಡಿದ್ದಾರೆ.

    ಇಂದಿರಾನಗರದಲ್ಲಿರುವ ನಟಿ ಸಂಜನಾ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಇನ್ಸ್‌ಪೆಕ್ಟರ್‌ ಪುನೀತ್‌ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಬಂದ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

    ಕಳೆದ ವಾರ ನಟಿ ರಾಗಿಣಿ ಮನೆ ಮೇಲೆ ದಾಳಿ ನಡೆಸಿ ಬಳಿಕ ಸಿಸಿಬಿ ಬಂಧಿಸಿತ್ತು. ಕಳೆದ ವಾರವೇ ಸಂಜನಾ ಹೆಸರು ಕೇಳಿ ಬಂದಿತ್ತು. ಆದರೆ ಸಿಸಿಬಿ ಎಫ್‌ಐಆರ್‌ನಲ್ಲಿ ಸಂಜನಾ ಹೆಸರು ಉಲ್ಲೇಖವಾಗಿರಲಿಲ್ಲ. ಆದರೆ ಈಗ ಆಪ್ತೆ ಪೃಥ್ವಿ ಶೆಟ್ಟಿ ನೀಡಿದ ಹೇಳಿಕೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

    ಸಿನಿ ವಿತರಕ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಅವರು ಡ್ರಗ್ಸ್‌ ಪ್ರಕರಣದ ಲ್ಲಿ ಸಂಜನಾ ಸಹ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು. ಈ ವಿಚಾರದ ಬಗ್ಗೆ ಸಂಜನಾ ಮತ್ತ ಸಂಬರಗಿ ನಡುವೆ ಆರೋಪ ಪ್ರತ್ಯಾರೋಪ ನಡೆಯುತ್ತಿತ್ತು.

  • ಮಾಜಿ ಸಚಿವ ಜೀವರಾಜ್‌ ಆಳ್ವಾ ಪುತ್ರ ಸೇರಿದಂತೆ 12 ಮಂದಿ ವಿರುದ್ಧ ಕೇಸ್‌ – ಯಾವೆಲ್ಲ ಸೆಕ್ಷನ್‌? ಶಿಕ್ಷೆ ಏನು?

    ಮಾಜಿ ಸಚಿವ ಜೀವರಾಜ್‌ ಆಳ್ವಾ ಪುತ್ರ ಸೇರಿದಂತೆ 12 ಮಂದಿ ವಿರುದ್ಧ ಕೇಸ್‌ – ಯಾವೆಲ್ಲ ಸೆಕ್ಷನ್‌? ಶಿಕ್ಷೆ ಏನು?

    ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ರಾಗಿಣಿ ಜೊತೆ ಮಾಜಿ ಸಚಿವ, ದಿ. ಜೀವರಾಜ್‌ ಪುತ್ರ ಆದಿತ್ಯ ಆಳ್ವಾ ಸೇರಿದಂತೆ 12 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

    ಸಿಸಿಬಿಯ ನಾರ್ಕೊಟಿಕ್ಸ್ ಎಸಿಪಿ ಗೌತಮ್ ನೀಡಿದ ಸ್ವಯಂಪ್ರೇರಿತ ದೂರಿನ ಆಧಾರದ ಮೇಲೆ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಎಫ್‌ಐಆರ್‌ ದಾಖಲಾಗಿತ್ತು. ಬಂಧಿತ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದ ಬಗ್ಗೆ ಸಾಕ್ಷಿ ಹಾಗೂ ಪುರಾವೆಗಳು ಸಿಕ್ಕಿರುವ ಹಿನ್ನೆಯಲ್ಲಿ ಗೌತಮ್‌ ಅವರು ದೂರು ನೀಡಿದ್ದರು. ವಾಟ್ಸಾಪ್ ಮೆಸೇಜ್‍ಗಳು ಹಾಗೂ ಪೆಡ್ಲರ್ ಗಳ ನೀಡಿರುವ ಮಾಹಿತಿ ಅನ್ವಯ ನಟಿ ರಾಗಿಣಿ ಅವರ ಕೈವಾಡದ ಬಗ್ಗೆ ಸಾಕ್ಷಿ ಲಭ್ಯವಾಗಿದ್ದು, ಡ್ರಗ್ ಡೀಲರ್ ಗಳ ಜೊತೆ ಒಡನಾಟವನ್ನು ಹೊಂದಿದ್ದಾರೆ. ಅನೇಕ ಬಾರಿ ಡ್ರಗ್ ಡೀಲ್ ಮಾಡಿರುವ ಬಗ್ಗೆ ಮಾಹಿತಿ ಖಚಿತವಾದ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಇದನ್ನೂ ಓದಿ: ಮೇಘನಾ ರಾಜ್ ಬಳಿ ಕ್ಷಮೆ ಕೋರಿದ ಇಂದ್ರಜಿತ್ ಲಂಕೇಶ್

    12 ಮಂದಿ ಆರೋಪಿಗಳು ಯಾರು?
    ಶಿವಪ್ರಕಾಶ್ ಮೊದಲ ಆರೋಪಿ ಆಗಿದ್ದರೆ ರಾಗಿಣಿ ಎರಡನೇ ಆರೋಪಿಯಾಗಿದ್ದಾರೆ. ಪಾರ್ಟಿ ಆಯೋಜಿಸುತ್ತಿದ್ದ ವಿರೇನ್ ಖನ್ನಾ ಎ3, ಪ್ರಶಾಂತ್ ರಂಕಾ ಎ4, ವೈಭವ್ ಜೈನ್ ಎ5, ಆದಿತ್ಯ ಆಳ್ವಾ ಎ6, ಲೂಮ್ ಪೆಪ್ಪರ್ ಎ7, ಪ್ರಶಾಂತ್ ರಿಜು ಎ8, ಅಶ್ವಿನ್ ಎ9, ಅಭಿ ಸ್ವಾಮಿ ಎ10, ರಾಹುಲ್ ಎ11, ವಿನಯ್ ಎ12 ಆರೋಪಿಗಳಾಗಿದ್ದಾರೆ.

    ನಾರ್ಕೊಟಿಕ್‌ ಡ್ರಗ್ಸ್ ಆ್ಯಂಡ್ ಸೈಕೊಟ್ರಾಫಿಕ್ ಸಬ್‌ಸ್ಟೆನ್ಸಸ್ (ಎನ್‍ಡಿಪಿಎಸ್) ಆ್ಯಕ್ಟ್ ಸೆಕ್ಷನ್ 21, 21ಸಿ, 27ಎ, 27ಬಿ, 29, ಐಪಿಸಿ 120ಬಿ ಅಡಿ 12 ಮಂದಿ ವಿರುದ್ಧ ಕೇಸ್‌ ದಾಖಲಾಗಿದೆ. ಈಗ ರಾಗಿಣಿ, ವಿರೇನ್‌ ಖನ್ನಾ, ಶಿವಪ್ರಕಾಶ್‌ನನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳು ಪರಾರಿಯಾಗಿದ್ದು ಅವರನ್ನು ಹುಡುಕುವ ಕಾರ್ಯ ನಡೆಯುತ್ತಿದೆ.

    ಯಾವ ಸೆಕ್ಷನ್‌ ಏನು ಹೇಳುತ್ತದೆ?
    ಎನ್‍ಡಿಪಿಎಸ್ 21 – ಮಾದಕ ವಸ್ತುಗಳನ್ನು ಅಕ್ರಮವಾಗಿ ತಯಾರು ಮಾಡುವುದು, ಮಾರಾಟ ಮಾಡುವುದು, ಸಾಗಾಟ ಮಾಡುವುದು ಅಪರಾಧ.

    ಎನ್‍ಡಿಪಿಎಸ್ 21ಸಿ – ವಾಣಿಜ್ಯ ಉದ್ದೇಶಕ್ಕಾಗಿ ಮಾದಕವಸ್ತುಗಳ ಸಂಗ್ರಹಣೆ ಮತ್ತು ಮಾರಾಟ ಮಾಡುವುದು ನಿಷಿದ್ಧ. ಆರೋಪ ಸಾಬೀತಾದರೆ 10 ವರ್ಷಕ್ಕೆ ಮೇಲ್ಪಟ್ಟು ಶಿಕ್ಷೆ.

    ಎನ್‍ಡಿಪಿಎಸ್ 27 ಎ – ಮಾದಕ ವಸ್ತುಗಳಿಗೆ ಸಂಬಂಧಿಸಿ ಹಣಕಾಸು ನೆರವು. ನೇರವಾಗಿ ಅಥವಾ ಪರೋಕ್ಷವಾಗಿ ಅಥವಾ ಮಾದಕ ವಸ್ತು ಸಾಗಣಿಕೆಗೆ ನೆರವಾಗುವುದು ಅಪರಾಧ.

    ಎನ್‍ಡಿಪಿಎಸ್ 27 ಬಿ – ಮಾದಕವಸ್ತು ಸೇವನೆ ಕೂಡ ಅಪರಾಧ. ಆರು ತಿಂಗಳ ಶಿಕ್ಷೆ ಅಥವಾ 10 ಸಾವಿರ ದಂಡ.

    ಎನ್‍ಡಿಪಿಎಸ್ 29 – ಅಪರಾಧಿಕ ಒಳ ಸಂಚಿಗೆ ಸಹಾಯ ಮಾಡುವುದು. ಅಂತೆಯೇ ಒಳ ಸಂಚು ಮಾಡಲು ವೇದಿಕೆ ಕಲ್ಪಿಸುವುದು ಪಾರ್ಟಿ ಆಯೋಜನೆ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧ.

    ಐಪಿಸಿ 120 ಬಿ – ಅಪರಾಧಿಕ ಒಳಸಂಚು.

    ದೂರಿನಲ್ಲಿ ಏನಿದೆ?
    ಎಸಿಪಿ ಗೌತಮ್ ನೀಡಿದ ದೂರಿನಲ್ಲಿ ಪ್ರಕರಣ ಸಂಬಂಧ ರವಿಶಂಕರ್ ಕರೆಯಿಸಿ ವಿಚಾರಣೆ ನಡೆಸಿದ್ದೇವೆ. ಪ್ರಕರಣದ ಆರೋಪಿಗಳು ಎಲ್ಲಾ ಒಂದು ಸಿಂಡಿಕೇಟ್ ಮಾಡಿಕೊಂಡಿದ್ದಾರೆ. ಮೊದಲ ಆರೋಪಿಯಿಂದ ಹಿಡಿದು 12ನೇ ಆರೋಪಿಯಾಗಿರುವ ವ್ಯಕ್ತಿಗಳು ನಗರದ ಪ್ರತಿಷ್ಠಿತ ಹೋಟೆಲಿನಲ್ಲಿ ಸೇರುತ್ತಿದ್ದರು. ಮಾದಕ ವಸ್ತುಗಳನ್ನು ತರಿಸಿಕೊಂಡು ಮಾರಾಟ ಮಾಡುತ್ತಿದ್ದರು. ಪ್ರತಿಷ್ಠಿತ ಸಿನಿಮಾ ತಾರೆಯರು, ಉದ್ಯಮಿಗಳ ಮಕ್ಕಳು, ರಾಜಕಾರಣಿಗಳ ಪುತ್ರರಿಗೆ ಡ್ರಗ್ಸ್‌ಗಳನ್ನು ಮಾರಾಟ ಮಾಡುತ್ತಿದ್ದರು. ಕೆಲವೊಮ್ಮೆ ಒಟ್ಟಿಗೆ ಸೇರಿ ಡ್ರಗ್ ಪಾರ್ಟಿ ಮಾಡಿದ್ದಾರೆ. ಜೊತೆಗೆ ಇವರು ಖುದ್ದು ಸೇವನೆ ಸಹ ಮಾಡಿದ್ದಾರೆ. ಒಳಸಂಚು ಮಾಡಿಕೊಂಡು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ.  ಇದನ್ನೂ ಓದಿ: ಗಾಂಜಾ ತುಂಬಿದ್ದ 8 ಸಿಗರೇಟ್‌ ಪತ್ತೆ – ಪೊಲೀಸರ ದಾಳಿ ವೇಳೆ ರಾಗಿಣಿ ಮನೆಯಲ್ಲಿ ಏನೇನು ಸಿಕ್ಕಿದೆ?

    ಶಿಕ್ಷೆ ಏನು ?
    ಮಾದಕ ವಸ್ತುಗಳನ್ನ ಮೂರು ವಿಧವಾಗಿ ವಿಂಗಡನೆ ಮಾಡಲಾಗುತ್ತದೆ. ಸ್ಮಾಲ್ ಕ್ವಾಲಿಟಿ, ಮಿಡಲ್ ಕ್ವಾಲಿಟಿ, ಕಮರ್ಷಿಯಲ್ ಕ್ವಾಲಿಟಿ ಎಂದು ವಿಂಗಡಿಸಲಾಗುತ್ತದೆ. ಪೆಡ್ಲರ್ ಮತ್ತು ಗ್ರಾಹಕರ ವಿರುದ್ಧ ಎನ್‍ಡಿಪಿಎಸ್ ಕಾಯ್ದೆಯ ಅಡಿ ದಾಖಲಾದ ಪ್ರಕರಣ ಸಾಬೀತಾದರೆ ಪೆಡ್ಲರ್‌ಗಳಿಗೆ ಕನಿಷ್ಟ 10 ವರ್ಷದಿಂದ ಗರಿಷ್ಠ 20 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಗ್ರಾಹಕರಿಗೆ ಕನಿಷ್ಟ 3 ವರ್ಷದಿಂದ ಗರಿಷ್ಟ 10 ವರ್ಷ ಸೆರೆವಾಸ ವಿಧಿಸಬಹುದು. ಸ್ಮಾಲ್ ಕ್ವಾಂಟಿಟಿ ಯ ಅಡಿ ದಾಖಲಾಗುವ ಕೇಸ್ ನಲ್ಲಿ ಮಾತ್ರ ಕನಿಷ್ಠ ಒಂದು ವರ್ಷ ಜೈಲು 10 ಸಾವಿರ ದಂಡ ವಿಧಿಸಬಹುದು.