Tag: Droupadi Murmu

  • ಪಬ್‌ಜೀ ಮೂಲಕವೇ ಭಾರತದ ಹಲವರನ್ನ ಸಂಪರ್ಕಿಸಿದ್ದಾಳೆ ಸೀಮಾ – ಸ್ಫೋಟಕ ರಹಸ್ಯ ಬಯಲು

    ಪಬ್‌ಜೀ ಮೂಲಕವೇ ಭಾರತದ ಹಲವರನ್ನ ಸಂಪರ್ಕಿಸಿದ್ದಾಳೆ ಸೀಮಾ – ಸ್ಫೋಟಕ ರಹಸ್ಯ ಬಯಲು

    ಲಕ್ನೋ: ಸೀಮಾ ಹೈದರ್‌ ಪಬ್‌ಜೀ (PUBG) ಮೂಲಕ ಸಚಿನ್‌ ಜೊತೆಗೆ ಮಾತ್ರವಲ್ಲ ಭಾರತದ ಹಲವರನ್ನ ಸಂಪರ್ಕಿಸಿದ್ದಾಳೆ ಅನ್ನೋ ಸ್ಫೋಟಕ ರಹಸ್ಯ ವಿಚಾರಣೆ ವೇಳೆ ಬಯಲಾಗಿದೆ. ಸೀಮಾ ದೆಹಲಿ ಎನ್‌ಸಿಆರ್‌ (Delhi NCR) ಪ್ರದೇಶದ ಹಲವರನ್ನ ಪಬ್‌ಜೀ ಮೂಲಕ ಸಂಪರ್ಕಿಸಿದ್ದಾಳೆ ಎಂದು ತಿಳಿದುಬಂದಿದೆ. ಇದೀಗ ಎಲ್ಲ ಆಯಾಮಗಳಲ್ಲೂ ವಿಚಾರಣೆ ನಡೆಸುತ್ತಿರುವ ನೋಯ್ಡಾ ಪೊಲೀಸರು ಅಕ್ರಮವಾಗಿ ಭಾರತ ಪ್ರವೇಶಿಸಿದ ಪಾಕಿಸ್ತಾನಿ ಮಹಿಳೆಯ ಎಲ್ಲಾ ದಾಖಲೆಗಳನ್ನ ವಶಪಡಿಸಿಕೊಂಡಿದ್ದು, ದೆಹಲಿಯಲ್ಲಿರುವ ಪಾಕಿಸ್ತಾನ ರಾಜಭಾರಿ ಕಚೇರಿಗೆ ಪರಿಶೀಲನೆಗಾಗಿ ಕಳುಹಿಸಿದ್ದಾರೆ.

    ಮೇ ತಿಂಗಳಲ್ಲಿ ತನ್ನ ಪ್ರೇಮಿ ಸಚಿನ್‌ ಮೀನಾ ಜೊತೆ ನೆಲೆಸಲು ನೇಪಾಳ ಗಡಿ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಸೀಮಾ ಹೈದರ್‌ ಪಾಕಿಸ್ತಾನದ ಗೂಢಚಾರಿ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಭದ್ರತಾ ಏಜೆನ್ಸಿಗಳು ತೀವ್ರ ನಿಗಾ ವಹಿಸಿವೆ. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಭಾರತದಲ್ಲೇ ಇರಲು ಅವಕಾಶ ಕೊಡಿ – ರಾಷ್ಟ್ರಪತಿಗೆ ಸೀಮಾ ಹೈದರ್‌ ಪತ್ರ

    ಸೀಮಾಳ ಪಾಸ್‌ಪೋರ್ಸ್‌, ಪಾಕಿಸ್ತಾನಿ ಗುರುತಿನ ಚೀಟಿ ಹಾಗೂ ಮಕ್ಕಳ ಪಾಸ್‌ಪೋರ್ಟ್‌ ಸೇರಿದಂತೆ ಎಲ್ಲಾ ದಾಖಲೆಗಳನ್ನ ಪೊಲೀಸರು ತನಿಖೆ ಸಮಯದಲ್ಲಿ ವಶಪಡಿಸಿಕೊಂಡಿದ್ದಾರೆ. ಆಕೆಯ ಗುರುತು ಪರಿಶೀಲನೆಗಾಗಿ ಪಾಕಿಸ್ತಾನ ರಾಯಭಾರಿ ಕಚೇರಿಗೆ ಕಳುಹಿಸಿದ್ದಾರೆ. ಅಲ್ಲಿಂದ ವರದಿ ಬರುವವರೆಗೆ ತನಿಖೆ ಮುಂದುವರಿಯಲಿದೆ. ಆರೋಪಗಳು ದೃಢಪಟ್ಟ ನಂತರ ದೋಷಾರೋಪ ಪಟ್ಟಿ ಸಿದ್ಧಪಡಿಸಲಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ಸೀಮಾ ಹೈದರ್‌ ತನ್ನ ಮೊಬೈಲ್‌ ಡೇಟಾವನ್ನು ಡಿಲೀಟ್‌ ಮಾಡಿರುವ ಶಂಕೆ ಹಿನ್ನೆಲೆ ಮೋಬೈಲ್‌ ಅನ್ನು ಗಾಜಿಯಾಬಾದ್‌ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ. ಆದ್ರೆ ಸೀಮಾ ಹೈದರ್‌ ತನ್ನ ಯಾವುದೇ ಡೇಟಾವನ್ನ ಅಳಿಸಿಹಾಕಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸೀಮಾ ಹೈದರ್‌ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ – ಪಾಕ್‌ ಮಹಿಳೆಯಿಂದ ಭಾರತೀಯ ಯೋಧರಿಗೆ ಫ್ರೆಂಡ್‌ ರಿಕ್ವೆಸ್ಟ್‌

    ಸೀಮಾ ಆಧಾರ್‌ ಬದಲಾವಣೆ?
    ಈ ನಡುವೆ ಸಚಿನ್‌ ಮೀನಾ ಮತ್ತು ಸೀಮಾ ಹೈದರ್‌ಗೆ ಸಂಬಂಧಿಸಿದ ದಾಖಲೆಗಳು ಮತ್ತು ಆಧಾರ್‌ ಕಾರ್ಡ್‌ ಬದಲಾವಣೆ ಮಾಡಿದ ಆರೋಪದ ಮೇಲೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಇಬ್ಬರು ಸಹೋದರರನ್ನ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಪುಷ್ಪೇಂದ್ರ ಮೀನಾ ಮತ್ತು ಅವರ ಸಹೋದರ ಪವನ್ ಆರೋಪಿಗಳನ್ನ ಅಹ್ಮದ್‌ಗಢದ ಸಾರ್ವಜನಿಕ ಸೇವಾ ಕೇಂದ್ರದಲ್ಲಿ ಆರೋಪಿಗಳಾಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಭಾರತದಲ್ಲೇ ಇರಲು ಅವಕಾಶ ಕೊಡಿ – ರಾಷ್ಟ್ರಪತಿಗೆ ಸೀಮಾ ಹೈದರ್‌ ಪತ್ರ

    ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಭಾರತದಲ್ಲೇ ಇರಲು ಅವಕಾಶ ಕೊಡಿ – ರಾಷ್ಟ್ರಪತಿಗೆ ಸೀಮಾ ಹೈದರ್‌ ಪತ್ರ

    – ಬಾಲಿವುಡ್‌ ನಟ – ನಟಿಯರನ್ನ ಉದಾಹರಣೆ ನೀಡಿ ರಾಷ್ಟ್ರಪತಿಗಳಿಗೆ ಕ್ಷಮಾಧಾನ ಅರ್ಜಿ

    ಲಕ್ನೋ: ಪಬ್‌ಜಿ (PUBG) ಪ್ರಿಯಕರನಿಗಾಗಿ ಅಕ್ರಮವಾಗಿ ಪ್ರವೇಶಿಸಿರುವ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್‌ (Seema Haider) ಭಾರತದಲ್ಲೇ ಉಳಿಯಲು ಅವಕಾಶ ನೀಡುವಂತೆ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾರೆ.

    ತಾನು ಎಂದೂ ಕಾಣದ ಪ್ರೀತಿಯನ್ನು ನನ್ನ ಪತಿ ಸಚಿನ್‌ ಮೀನಾ ಹಾಗೂ ಅವರ ತಂದೆ-ತಾಯಿಯಿಂದ ಕಂಡಿದ್ದೇನೆ. ತನ್ನ ನಾಲ್ವರು ಮಕ್ಕಳೊಂದಿಗೆ ಭಾರತದಲ್ಲೇ ಉಳಿಯಲು ಅವಕಾಶ ನೀಡಬೇಕು ಎಂದು ರಾಷ್ಟ್ರಪತಿ ಅವರಿಂದ ಮೌಖಿಕ ವಿಚಾರಣೆಗೆ ಒತ್ತಾಯಿಸಿದ್ದಾರೆ. ಸೀಮಾ ಹೈದರ್‌ ಪರ ವಕೀಲ ಎ.ಪಿ ಸಿಂಗ್‌ ಸಲ್ಲಿಸಿದ 38 ಪುಟಗಳ ಅರ್ಜಿಯಲ್ಲಿ ಅನೇಕ ಬಾಲಿವುಡ್‌ ನಟ-ನಟಿಯರನ್ನ ಉದಾಹರಣೆಯಾಗಿ ನೀಡಿದ್ದಾರೆ.

    ಭಾರತದ ಸಂಸ್ಕೃತಿಯ ಉದ್ದೇಶ ವಸುದೈವ ಕುಟುಂಬಕಂ (ಜಗತ್ತು ಒಂದೇ ಕುಟುಂಬ) ಎಂಬಂತೆ ತನ್ನನ್ನು ಗಂಡನ ಮನೆಯಲ್ಲೇ ಉಳಿಯಲು ಅವಕಾಶ ಮಾಡಿಕೊಡಬೇಕು. ಸೀಮಾ ಮದುವೆಯಾಗುವುದಕ್ಕೂ ಮುನ್ನವೇ ಸ್ವಇಚ್ಛೆಯಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಅರ್ಜಿದಾರರಿಗೆ ಭಾರತಕ್ಕೆ ಬರಲು ವೀಸಾ ಸಿಕ್ಕಿಲ್ಲದಿದ್ದರಿಂದ ನೇಪಾಳ ವೀಸಾ ತೆಗೆದುಕೊಂಡು ಭಾರತಕ್ಕೆ ಬಂದಿದ್ದಾರೆ. ಇಸ್ಲಾಂ ಧರ್ಮವನ್ನ ತೊರೆದಿದ್ದಾರೆ. ಕಠ್ಮಂಡುವಿನ ಪವಿತ್ರ ದೇವಾಲಯ ಭಗವಾನ್ ಪಶುಪತಿ ನಾಥ ಮಂದಿರದಲ್ಲಿ ಹಿಂದೂ ವಿಧಿ ವಿಧಾನಗಳ ಪ್ರಕಾರ ಸಚಿನ್ ಮೀನಾ ಅವರನ್ನ ವಿವಾಹವಾಗಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಮೋದಿ ಜೀ, ಯೋಗಿ ಜೀ ನನ್ನನ್ನ ಪಾಕಿಸ್ತಾನಕ್ಕೆ ವಾಪಸ್‌ ಕಳುಹಿಸಬೇಡಿ – ಸೀಮಾ ಹೈದರ್‌ ಮನವಿ

    ಪ್ರಸಿದ್ಧ ಗಾಯಕ ಅದ್ನಾನ್‌ ಸಾಮಿ (Adnan Sami) ದೇಶದಲ್ಲಿ ದೀರ್ಘಕಾಲ ನೆಲೆಸಿರುವ ಅವರಿಗೆ ಭಾರತದ ಪೌರತ್ವ ನೀಡಲಾಗಿದೆ. ಬಾಲಿವುಡ್‌ ನಟಿ ಆಲಿಯಾ ಭಟ್‌ (Alia Bhatt) ಭಾರತವು ವಿಶ್ವದ ಇತರ ದೇಶಗಳಂತೆ ದ್ವಿಪೌರತ್ವವನ್ನ ನೀಡದ ಕಾರಣ ಭಾರತದಲ್ಲಿ ಮತ ಚಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಬಾಲಿವುಡ್‌ ಸೂಪರ್‌ ಸ್ಟಾರ್‌ ಅಕ್ಷಯ್‌ ಕುಮಾರ್‌ (Akshay Kumar) ಕೆನಡಾ ಪೌರತ್ವವನ್ನ ಪಡೆದು ಭಾರತಲ್ಲಿ ನೆಲೆಸಿದ್ದಾರೆ. ಆದ್ದರಿಂದ ತಮ್ಮನ್ನೂ ಭಾರತಲ್ಲೇ ಉಳಿಯಲು ಅವಕಾಶ ಕೊಡುವಂತೆ ಮನವಿ ಮಾಡಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆಯಷ್ಟೇ ಸೀಮಾ ಹೈದರ್‌ ತನ್ನನ್ನು ಪಾಕಿಸ್ತಾನಕ್ಕೆ ಕಳುಹಿಸದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಅವರಿಗೆ ಮನವಿ ಮಾಡಿದ್ದರು. ಇದನ್ನೂ ಓದಿ: ಬೇಗ ಬಂದುಬಿಡು ಸೀಮಾ, ಹೊಸ ಜೀವನ ಶುರು ಮಾಡೋಣ – ಸೌದಿಯಲ್ಲಿ ಮೊದಲ ಪತಿಯ ಗೋಳಾಟ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೊಮ್ಮನ್-ಬೆಳ್ಳಿ ಜೋಡಿಯನ್ನು ಸನ್ಮಾನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

    ಬೊಮ್ಮನ್-ಬೆಳ್ಳಿ ಜೋಡಿಯನ್ನು ಸನ್ಮಾನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

    ಟಿಟಿ ಮೂಲಕ ‘ದಿ ಎಲಿಫೆಂಟ್ ವಿಸ್ಪರರ್ಸ್’ (The Elephant Whisperers) ಸಿನಿಮಾ ಸಿನಿ ಪ್ರೇಕ್ಷಕರ ಮನಗೆದ್ದಿದೆ. ಈ ಡಾಕ್ಯುಮೆಂಟರಿ ಆಸ್ಕರ್ ಅವಾರ್ಡ್ ಗೆಲ್ಲುವ ಮೂಲಕ ಭಾರತೀಯರು ಹೆಮ್ಮೆಪಡುವಂತೆ ಮಾಡಿದ್ದರು. ಇದರಲ್ಲಿ ಪ್ರಮುಖವಾಗಿ ನಟಿಸಿದ್ದ ಬೊಮ್ಮನ್- ಬೆಳ್ಳಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸನ್ಮಾನ ಮಾಡಿದ್ದಾರೆ. ಈ ಕುರಿತ ಫೋಟೋವನ್ನ ರಾಷ್ಟ್ರಪತಿ ದ್ರೌಪದಿ ಅವರು, ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಭಾವಿ ಪತ್ನಿ ಲಾವಣ್ಯ ಜೊತೆ ವರುಣ್ ತೇಜ್ ಕಾಫಿ ಡೇಟ್

    ಈ ವರ್ಷದ 95ನೇ ಸಾಲಿನ ಅಕಾಡೆಮಿ ಅವಾರ್ಡ್‌ನಲ್ಲಿ ‘ದಿ ಎಲಿಫೆಂಟ್ ವಿಸ್ಪರರ್ಸ್ʼ ಸಾಕ್ಷ್ಯಚಿತ್ರ ಆಸ್ಕರ್ ಪ್ರಶಸ್ತಿ ಗೆದ್ದಿತು. ದೀಪಿಕಾ ಪಡುಕೋಣೆ ಅವರು ಭಾರತವನ್ನು ಪ್ರತಿನಿಧಿಸಿದ ಆಸ್ಕರ್ ಅಂಗಳದಲ್ಲಿ ನಿರೂಪಣೆ ಮಾಡಿದ್ದರು. ಆಸ್ಕತ್ ಪ್ರಶಸ್ತಿಯ ಬಳಿಕ ಬೊಮ್ಮನ್- ಬೆಳ್ಳಿ ಜನಪ್ರಿಯತೆ ಪಡೆದರು.

    ಆಸ್ಕರ್ ಪ್ರಶಸ್ತಿ ಪಡೆದ ‘ದಿ ಎಲಿಫೆಮಂಟ್ ವಿಸ್ಪರರ್ಸ್’ನಲ್ಲಿ ಮುಖ್ಯವಾಗಿ ಕಾಣಿಸಿಕೊಂಡ ಬೊಮ್ಮನ್- ಬೆಳ್ಳಿಯನ್ನು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸನ್ಮಾನಿಸಿದರು. ಆನೆ ಮರಿಗಳನ್ನು ನೋಡಿಕೊಳ್ಳಲು ಜೀವನ ಮುಡಿಪಿಟ್ಟ ಅವರನ್ನು ಶ್ಲಾಘಿಸಲಾಯಿತು ಎಂದು ರಾಷ್ಟ್ರಪತಿ ಟ್ವಿಟ್ಟರ್ ಖಾತೆ ಮೂಲಕ ಟ್ವೀಟ್ ಮಾಡಲಾಗಿದೆ.

    ಬೊಮ್ಮನ್-ಬೆಳ್ಳಿ ಅವರು ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಅರಣ್ಯದ ತೆಪ್ಪಕಾಡು ಆನೆ ಶಿಬಿರದಲ್ಲಿ ವಾಸವಾಗಿದ್ದಾರೆ. ಇಲ್ಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 9ರಂದು ಭೇಟಿ ನೀಡಿದ್ದರು. ಬೆಳ್ಳಿ ಮತ್ತು ಬೊಮ್ಮನ್ ದಂಪತಿ ಜೊತೆ ಭೇಟಿಯಾದ ಮೋದಿ ಅವರ ಫೋಟೋ ಸಖತ್ ವೈರಲ್ ಆಗಿತ್ತು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮನೆ ಕಟ್ಟಿಕೊಳ್ಳಲು ನಿವೇಶನ ಕೊಡಿಸಿ ಪ್ಲೀಸ್‌ – ರಾಷ್ಟ್ರಪತಿಗೆ ಪತ್ರ ಬರೆದ ವಿದ್ಯಾರ್ಥಿನಿ

    ಮನೆ ಕಟ್ಟಿಕೊಳ್ಳಲು ನಿವೇಶನ ಕೊಡಿಸಿ ಪ್ಲೀಸ್‌ – ರಾಷ್ಟ್ರಪತಿಗೆ ಪತ್ರ ಬರೆದ ವಿದ್ಯಾರ್ಥಿನಿ

    ತುಮಕೂರು: ಮನೆ ಕಟ್ಟಿಕೊಳ್ಳಲು ನಿವೇಶನ ಕೊಡಿಸುವಂತೆ ರಾಷ್ಟ್ರಪತಿಗೆ (President Of India) ವಿದ್ಯಾರ್ಥಿನಿಯೊಬ್ಬಳು ಪತ್ರ ಬರೆದು ಮನವಿ ಮಾಡಿರುವ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.

    ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ತೂಯಲಹಳ್ಳಿಯಲ್ಲಿ ವಿದ್ಯಾರ್ಥಿನಿ ಲಕ್ಷ್ಮಿ (11) ಮನೆ ಕಟ್ಟಿಕೊಳ್ಳಲು ನಿವೇಶನ ಇಲ್ಲದ ಕಾರಣ ರಾಷ್ಟ್ರಪತಿಗೆ ಪತ್ರ ಬರೆದು ಮನವಿ ಮಾಡಿರುವ ವಿಷಯ ತಿಳಿದು ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇದನ್ನೂ ಓದಿ: ಜೈನ ಧರ್ಮ ಸಂಪ್ರದಾಯದಂತೆ ಜೈನಮುನಿ ಅಂತ್ಯಸಂಸ್ಕಾರ

    ತುಯಲಹಳ್ಳಿ ಗ್ರಾಮದ ನಿವಾಸಿ ನಾಗರಾಜು ಅವರ ಮಗಳು ತೂಯಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾಳೆ. ಜೂನ್‌ 29ರಂದು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ಆ ಪತ್ರ ರಾಜ್ಯ ಸರ್ಕಾರದ ಮೂಲಕ ತುಮಕೂರು ಜಿಲ್ಲಾಧಿಕಾರಿ ಕಚೇರಿ ತಲುಪಿತ್ತು. ಜಿಲ್ಲಾಧಿಕಾರಿ ಕಚೇರಿ ಆದೇಶದಂತೆ ತಹಶೀಲ್ದಾರ್ ತುರ್ತು ಭೇಟಿ ನೀಡಿ ಪರಿಶೀಲಿಸಿದರು.

    ತಹಶೀಲ್ದಾರ್ ಕೂಡಲೇ ಗ್ರಾಮ ಲೆಕ್ಕಿಗರು ಹಾಗೂ ಪಿಡಿಒ ಅವರೊಂದಿಗೆ ಮಾತನಾಡಿ ಬಾಲಕಿಯವರ ಕುಟುಂಬ ಮನೆ ಕಟ್ಟಿಕೊಳ್ಳಲು ನಿವೇಶನ ಮುಂಜೂರು ಮಾಡಿಕೊಡಲು ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಸಿನಿಮಾ ಸ್ಟೈಲಲ್ಲಿ ಪಿಸ್ತೂಲ್ ತೋರಿಸಿ ಉದ್ಯಮಿಗೆ ಬೆದರಿಕೆ – 50 ಲಕ್ಷ ರೂ. ದರೋಡೆ

    ಪತ್ರದಲ್ಲಿ ಏನಿದೆ?
    ನಾನು, ತಂದೆ-ತಾಯಿ ಹಾಗೂ ಇಬ್ಬರು ಸಹೋದರಿಯರೊಂದಿಗೆ ಗುಡಿಸಲಿನಲ್ಲಿ ವಾಸವಿದ್ದೇವೆ. ನಾವು ವಾಸಿಸುತ್ತಿರುವ ಸ್ಥಳದಲ್ಲಿ ಮನೆ ಕಟ್ಟಿಕೊಳ್ಳಲು ನಮ್ಮ ಸಂಬಂಧಿಕರಿಂದಲೇ ತೊಂದರೆ ಇದೆ. ಇದೇ ಗುಡಿಸಲಿನಲ್ಲಿ ವಾಸಿಸದೆ ಬೇರೆ ದಾರಿಯಿಲ್ಲ. ಮಳೆಗಾಲದಲ್ಲಿ ನಮ್ಮ ಕುಟುಂಬದವರ ಕಷ್ಟ ಹೇಳತೀರದು. ಮನೆ ಕಟ್ಟಲು ಗ್ರಾಮ ಪಂಚಾಯಿತಿಯಿಂದ ಅನುದಾನ ಬಿಡುಗಡೆ ಮಾಡಿದರೂ ಮನೆ ಕಟ್ಟುವುದಕ್ಕೆ ಸಾಧ್ಯವಾಗುತ್ತಿಲ್ಲ. ದಯಮಾಡಿ ಮನೆ ಕಟ್ಟಿಕೊಳ್ಳಲು ನೀವು ನಿವೇಶನ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬುಡಕಟ್ಟು ಜನರ ವಿಕಾಸಕ್ಕೆ ದಾರಿ ತೋರಿಸಿ, ಅವರು ಮುನ್ನಡೆಯುತ್ತಾರೆ: ದ್ರೌಪದಿ ಮುರ್ಮ

    ಬುಡಕಟ್ಟು ಜನರ ವಿಕಾಸಕ್ಕೆ ದಾರಿ ತೋರಿಸಿ, ಅವರು ಮುನ್ನಡೆಯುತ್ತಾರೆ: ದ್ರೌಪದಿ ಮುರ್ಮ

    ಬೆಂಗಳೂರು: ನೈಜ ದುರ್ಬಲ ಬುಡಕಟ್ಟು ಜನರ (Tribal People) ಸರ್ವಾಂಗೀಣ ವಿಕಾಸಕ್ಕಾಗಿ ವಸತಿ, ಶಿಕ್ಷಣ, ಆರ್ಥಿಕ ಚಟುವಟಿಕೆಗಳು, ಆರೋಗ್ಯ ಸೌಕರ್ಯಗಳ ಕನಿಷ್ಠ ಮೂಲಸೌಕರ್ಯಗಳನ್ನು ಕಲ್ಪಿಸಿ, ಸುಧಾರಣೆಯ ದಾರಿ ತೋರಿಸಿದರೆ ಸಾಕು ಅವರು ಮುನ್ನಡೆಯಬಲ್ಲರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೈಜ ದುರ್ಬಲ ಬುಡಕಟ್ಟುಗಳ ಕಲ್ಯಾಣಕ್ಕಾಗಿ ಆಂದೋಲನದ ಮಾದರಿಯಲ್ಲಿ ಈ ಕಾರ್ಯನಿರ್ವಹಿಸಬೇಕು ಎಂದು ರಾಷ್ಟಪತಿ ದ್ರೌಪದಿ ಮುರ್ಮು (Droupadi Murmu) ಹೇಳಿದ್ದಾರೆ.

    ರಾಜಭವನದ (Raj Bhavan) ಬ್ಯಾಂಕ್ವೆಟ್ ಹಾಲ್‍ನಲ್ಲಿ ಸೋಮವಾರ ಸಂಜೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ರಾಜ್ಯದ ವಿವಿಧ ಜಿಲ್ಲೆಗಳ ನೈಜ ಬುಡಕಟ್ಟು ಸಮುದಾಯಗಳ ಸದಸ್ಯರೊಂದಿಗೆ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಕರ್ನಾಟಕದಲ್ಲಿ 2011ರ ಜನಗಣತಿಯ ಪ್ರಕಾರ ಸುಮಾರು 43 ಲಕ್ಷ ಪರಿಶಿಷ್ಟ ವರ್ಗದ ಜನಸಂಖ್ಯೆಯಿದೆ. ಇದರಲ್ಲಿ ನೈಜ ದುರ್ಬಲ ಬುಡಕಟ್ಟುಗಳೆಂದು ಗುರುತಿಸಲಾಗಿರುವ ಜೇನುಕುರುಬರು ಹಾಗೂ ಕೊರಗ ಸಮುದಾಯಗಳ ಜನಸಂಖ್ಯೆ ಸುಮಾರು 50 ಸಾವಿರದಷ್ಟಿದೆ. ರಾಜ್ಯದ ನೈಜ ದುರ್ಬಲ ಬುಡಕಟ್ಟು ಸಮುದಾಯಗಳಲ್ಲಿಯೂ ಡಾಕ್ಟರೇಟ್ ಪದವಿ ಪಡೆದ ಮಹಿಳೆ, ಶುಶ್ರೂಷಕಿ (ಸ್ಟಾಫ್ ನರ್ಸ್), ಅಂಗನವಾಡಿ ಕಾರ್ಯಕರ್ತೆ, ಪಿಹೆಚ್‍ಡಿ ವ್ಯಾಸಂಗ ಮಾಡುತ್ತಿರುವ ಖಾಸಗಿ ಮಹಿಳಾ ನೌಕರರು ಇರುವುದು ಕಂಡು ಬಹಳ ಸಂತಸವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ದ್ರೌಪದಿ ಮುರ್ಮು – ಸಿಎಂ, ರಾಜ್ಯಪಾಲರಿಂದ ಸ್ವಾಗತ

    ಭಾರತ ದೇಶದಲ್ಲಿ ನೈಜ ದುರ್ಬಲ ಬುಡಕಟ್ಟು ಸಮುದಾಯಗಳ ಜನಸಂಖ್ಯೆ ಸುಮಾರು 28 ಲಕ್ಷದಷ್ಟಿದೆ. 75 ವಿವಿಧ ಬುಡಕಟ್ಟುಗಳನ್ನು ನೈಜ ದುರ್ಬಲ ಬುಡಕಟ್ಟುಗಳೆಂದು ಪಟ್ಟಿ ಮಾಡಲಾಗಿದೆ. ಹಿಂದುಳಿದ ಅರಣ್ಯವಾಸಿ ಸಮುದಾಯಗಳನ್ನು ಗುರುತಿಸಿ ವಸತಿ, ಕೃಷಿಭೂಮಿ ಕಲ್ಪಿಸಿ ಮುಖ್ಯವಾಹಿನಿಗೆ ತರುವುದು ಸ್ಥಳೀಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಶಾಲೆ, ರಸ್ತೆ, ಆರೋಗ್ಯದ ಸಮಸ್ಯೆಗಳು ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದೆಲ್ಲೆಡೆ ಸಾಮಾನ್ಯವಾಗಿವೆ. ಅರಣ್ಯವಾಸಿ ಬುಡಕಟ್ಟುಗಳಲ್ಲಿನ ಕ್ಷಯರೋಗ ಹಾಗೂ ಇತರೆ ಆರೋಗ್ಯ ಸಮಸ್ಯೆಗಳನ್ನು ಸಂಪೂರ್ಣವಾಗಿ ಹೋಗಲಾಡಿಸಲು ಮಧ್ಯಪ್ರದೇಶ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಪ್ರಸ್ತಾಪಿಸಿದ ರಾಷ್ಟ್ರಪತಿಯವರು ದುರ್ಬಲ ಬುಡಕಟ್ಟುಗಳ ಜನಸಂಖ್ಯೆ ಋಣಾತ್ಮಕವಾಗುತ್ತಿರುವದನ್ನು ತಡೆಯಲು ಇಂತಹ ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂದು ಹೇಳಿದ್ದಾರೆ.

    ನೈಜ ದುರ್ಬಲ ಬುಡಕಟ್ಟುಗಳ ವಿಕಾಸಕ್ಕಾಗಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಪಿವಿಟಿಜಿ ಅಭಿವೃದ್ಧಿ ಮಿಷನ್ ಅಡಿ 15 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಹಣ ಬಂದಿರುತ್ತದೆ ಮನೆ, ಶಾಲೆ, ರಸ್ತೆ, ವಿದ್ಯುತ್ ದೀಪ, ನೀರು ಮೊದಲಾದ ಸೌಕರ್ಯಗಳನ್ನು ಒದಗಿಸಲು ಸರ್ಕಾರಗಳು ಆಂದೋಲನದ ರೀತಿ ಕಾರ್ಯೋನ್ಮುಖವಾಗಬೇಕು. ಸರ್ಕಾರ ಬುಡಕಟ್ಟು ಜನರಿಗಾಗಿ ಒಂದು ಹೆಜ್ಜೆ ಮುಂದೆ ಇರಿಸಿ ದಾರಿ ತೋರಿದರೆ ಅವರು ನಿಧಾನವಾಗಿ ನಡೆಯಲು ಕಲಿತು ಹಂತ ಹಂತವಾಗಿ ಓಡಲು ಕಲಿಯುತ್ತಾರೆ. ಬುಡಕಟ್ಟು ಜನರು ತಮ್ಮ ಆತ್ಮಗೌರವ ಕಾಪಾಡಿಕೊಳ್ಳಲು ಸಮಸ್ಯೆಗಳನ್ನು ಸಮರ್ಥವಾಗಿ ಅಭಿವ್ಯಕ್ತಿಗೊಳಿಸುವದನ್ನು ರೂಢಿಸಿಕೊಳ್ಳಬೇಕು ಎಂದಿದ್ದಾರೆ.

    ಬುಡಕಟ್ಟು ಜನ ಶಿಕ್ಷಣಕ್ಕೆ ಒತ್ತು ನೀಡಲಿ, ಎಸ್‍ಎಸ್‍ಎಲ್‍ಸಿ ಓದಿದವರನ್ನು ಗುರುತಿಸಿ ಅವರಲ್ಲಿ ಇರುವ ಕರಕುಶಲ ಕಲೆ, ಜೀವನ ಕೌಶಲ್ಯಗಳನ್ನು ಪ್ರೋತ್ಸಾಹಿಸಿ ಅವರ ಉತ್ಪನ್ನಗಳಿಗೆ ಮೌಲ್ಯವರ್ಧನೆ ಕಲ್ಪಿಸಿದರೆ ಅವರು ಸಮಾಜದ ಮುಖ್ಯವಾಹಿನಿಯೊಂದಿಗೆ ಸಾಗಬಲ್ಲರು. ರಾಜ್ಯದಲ್ಲಿ ಕೇವಲ 50 ಸಾವಿರದಷ್ಟು ನೈಜ ದುರ್ಬಲ ಬುಡಕಟ್ಟು ಸಮುದಾಯವಿರುವದರಿಂದ ಸರ್ಕಾರಕ್ಕೆ ಇದು ಕಷ್ಟದ ಕಾರ್ಯವಲ್ಲ ಎಂದು ಹೇಳಿದ್ದಾರೆ.

    ರಾಜ್ಯದ ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಆಶ್ರಮ ಶಾಲೆಗಳಲ್ಲಿ ನೈಜ ದುರ್ಬಲರಿಗಾಗಿ ವಿಶೇಷ ಸ್ಥಾನ, ಗಮನ ನೀಡಿ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು. ತಾವು ಚಿಕ್ಕವರಿದ್ದಾಗ ತಮ್ಮ ತಂದೆಗೆ ಇಂತಹ ಯಾವ ಸೌಕರ್ಯಗಳು ಇಲ್ಲದಿದ್ದರೂ ತಮಗೆ ಶಿಕ್ಷಣ ಕೊಡಿಸಿದ್ದನ್ನು ರಾಷ್ಟ್ರಪತಿಯವರು ಹೆಮ್ಮೆಯಿಂದ ಸ್ಮರಿಸಿದ್ದಾರೆ. ನೈಜ ದುರ್ಬಲ ಬುಡಕಟ್ಟುಗಳ ಜನ ತಮ್ಮೊಳಗಿನ ಸಾಮಥ್ರ್ಯ ಒರೆಗೆ ಹಚ್ಚಿಕೊಳ್ಳಬೇಕು. ನೆರೆಹೊರೆಯವರನ್ನು ನೋಡಿ ಶಿಕ್ಷಿತರಾಗಿ ಮುಂದೆ ಬರಬೇಕು ಎಂದು ಸ್ಫೂರ್ತಿದಾಯಕ ಮಾತುಗಳನ್ನಾಡಿದರು.

    ಬುಡಕಟ್ಟು ಜನರ ಬಳಿಯೇ ಬಂದು ಆಪ್ತವಾಗಿ ಬೆರೆತ ರಾಷ್ಟ್ರಪತಿಗಳು
    ಸಂವಾದದ ಪ್ರಾರಂಭದಲ್ಲಿ ಸಭಾಂಗಣದಲ್ಲಿ ನೆರೆದಿದ್ದ ನೈಜ ದುರ್ಬಲ ಬುಡಕಟ್ಟು ಜನರ ಜೀವನ ಮಟ್ಟ ಅರಿಯಲು ಪ್ರಯತ್ನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಬುಡಕಟ್ಟು ಜನ ಮುಕ್ತವಾಗಿ ಮಾತನಾಡಲು ಹಿಂಜರಿದಾಗ ರಾಷ್ಟ್ರಪತಿಗಳು ಖುದ್ದು ತಾವೇ ಜನರ ಆಸನಗಳ ಬಳಿ ತೆರಳಿ ಒಬ್ಬೊಬರನ್ನು ಪ್ರತ್ಯೇಕವಾಗಿ ಆಪ್ತವಾಗಿ ಮಾತನಾಡಿಸಿದರು. ಅವರಿಗೆ ಮನೆ ಇದೆಯೇ, ಸರ್ಕಾರ ಮನೆ ಕಟ್ಟಿಸಿಕೊಟ್ಟಿದೆಯೇ, ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆಯೇ, ಅರಣ್ಯಭೂಮಿಯಲ್ಲಿ ವಾಸವಾಗಿರುವವರು ಯಾರಿದ್ದೀರಿ ಎಂಬ ಪ್ರಶ್ನೆಗಳನ್ನು ಹಾಕಿ ಕೊರಗ ಮತ್ತು ಜೇನುಕುರುಬ ಬುಡಕಟ್ಟು ಜನರಿಂದ ನೇರ ಉತ್ತರ ಪಡೆದರು.

    ಸ್ಥಳೀಯ ಭಾಷೆಯಲ್ಲಿಯೇ ಮಾತನಾಡಲು ಪ್ರೋತ್ಸಾಹ
    ಜೇನುಕುರುಬ ಸಮುದಾಯದ ಪರವಾಗಿ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಯಡವನಾಡು ಹಾಡಿಯ ಚಂದ್ರು ಹಿಂದಿಯಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದ ವೇಳೆಯಲ್ಲಿ ಮಧ್ಯೆ ಪ್ರವೇಶಿಸಿದ ರಾಷ್ಟ್ರಪತಿಯವರು, ಸ್ಥಳೀಯವಾಗಿ ನಿಮ್ಮ ಭಾಷೆಯಲ್ಲಿಯೇ ಮಾತನಾಡಿ ಎಂದರು.

    ಕೊರಗ ಸಮುದಾಯದ ಮೊಟ್ಟಮೊದಲ ಡಾಕ್ಟರೇಟ್ ಪದವೀಧರೆ, ಪ್ರಾಧ್ಯಾಪಕಿ ಉಡುಪಿ ಜಿಲ್ಲೆ ಸಾಲಿಗ್ರಾಮದ ಡಾ.ಸವಿತಾ ಮಾತನಾಡಿ, ಕೊರಗ ಸಮುದಾಯ ಅಪೌಷ್ಟಿಕತೆ, ಆರೋಗ್ಯ ಸಮಸ್ಯೆಗಳಿಂದ ಜನಸಂಖ್ಯೆ ಕ್ಷೀಣಿಸುತ್ತಿದೆ. ಈ ಸಂಶೋಧನೆ ಮತ್ತು ಪರಿಹಾರ ಕಾರ್ಯಗಳು ನಡೆಯಬೇಕು ಎಂದರು.

    ಇದೇ ವೇಳೆ, ಬುಡಕಟ್ಟು ಸಮುದಾಯಗಳ ಚಂದ್ರು, ರತ್ನಾ, ಸುಂದರ, ಬಾಬು ಮತ್ತು ಅಯ್ಯಪ್ಪ ಅವರು ರಾಷ್ಟ್ರಪತಿ ಹಾಗೂ ರಾಜ್ಯಪಾಲರನ್ನು ಸನ್ಮಾನಿಸಿ, ನೆನಪಿನ ಕಾಣಿಕೆಗಳನ್ನು ನೀಡಿದರು.

    ರಾಷ್ಟ್ರಪತಿ ಭವನದಿಂದ ಬುಡಕಟ್ಟು ಜನರಿಗೆ ಉಡುಗೊರೆ
    ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೊರಗ ಹಾಗೂ ಜೇನುಕುರುಬ ಬುಡಕಟ್ಟುಗಳ ಜನರಿಗೆ ರಾಷ್ಟ್ರಪತಿ ಭವನದಿಂದ ತಂದಿದ್ದ ಉಡುಗೊರೆಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ವಿತರಿಸಿದರು. ಅಲ್ಲದೇ ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಯುವಸಬಲೀಕರಣ ಸಚಿವರಾದ ಬಿ.ನಾಗೇಂದ್ರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ ನೈಜ ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ವಿವರಿಸಿದರು.

    ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರ ಸಮ್ಮುಖದಲ್ಲಿ ನಡೆದ ಬುಡಕಟ್ಟು ಸಮುದಾಯಗಳೊಂದಿಗಿನ ಸಂವಾದದಲ್ಲಿ ಗುಂಡ್ಲುಪೇಟೆಯ ದೇಶಿಪುರ ಕಾಲೊನಿಯ ಸಿದ್ದಮ್ಮ, ಪುಟ್ಟಮ್ಮ, ಮದ್ದೂರು ಕಾಲೊನಿಯ ಗೋವಿಂದ, ಎಚ್.ಡಿ.ಕೋಟೆಯ ಬಸಮ್ಮ, ರಾಜೇಶ್, ಅಯ್ಯಪ್ಪ, ಭೈರಾ, ಸಿ. ಭಾಸ್ಕರ, ಪುಟ್ಟಬಸವಯ್ಯ, ಹುಣಸೂರಿನ ಜೆ.ಪಿ. ಪಾರ್ವತಿ, ಸುಮಾ, ರಾಜಪ್ಪ, ಸಚಿನ್, ಪಿರಿಯಾಪಟ್ಟಣದ ಜಯಮ್ಮ, ಗೌರಿ, ಲಕ್ಷ್ಮೀ, ಜಾನಕಮ್ಮ, ಬಸವಣ್ಣ, ಬಸಪ್ಪ, ಸರಗೂರಿನ ವಿಜಯ್, ಸೋಮವಾರಪೇಟೆಯ ಜೆ.ಕೆ. ಮುತ್ತಮ್ಮ, ಬಿ.ಕೆ. ಧರ್ಮಪ್ಪ, ಉಡುಪಿ ಜಿಲ್ಲೆಯ ನಳಿನಿ, ಡಾ. ಸಬಿತಾ, ಸುಶೀಲಾ, ಪ್ರಕೃತಿ, ಶಕೀಲಾ, ಸುನಂದಾ, ಕುಡ್ವಾ, ಬಾಬು, ರಮೇಶ್, ಕೊಗ್ಗ, ಅಕ್ಷಯ್, ಕುಮಾರ್, ಸಂಜೀವ ಕೊರಗ, ಕೆ.ಪುತ್ರಯ, ದಕ್ಷಿಣ ಕನ್ನಡ ಜಿಲ್ಲೆಯ ರತ್ನ, ಚಂದ್ರವತಿ, ಶಶಿಕಲಾ, ರಾಧಾ, ಎಂ.ಸುಂದರ್, ಬಾಬು, ಮಥಾಡಿ, ಶ್ಯಾಮ್ ಸೇರಿದಂತೆ ಮೈಸೂರು, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಆಗಮಿಸಿದ್ದ ಜೇನುಕುರುಬ ಹಾಗೂ ಕೊರಗ ಬುಡಕಟ್ಟು ಸಮುದಾಯಗಳ 50 ಜನ ಭಾಗವಹಿಸಿ ತಮ್ಮ ಸಾಂಸ್ಕøತಿಕ, ಸಾಮಾಜಿಕ ಅಸ್ಮಿತೆಯ ವಿಶಿಷ್ಟತೆಗಳನ್ನು ಸಾರಿದರು.

    ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್,ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಪಿ.ಎಸ್.ಕಾಂತರಾಜು ಮತ್ತಿತರ ಗಣ್ಯರು ಇದ್ದರು. ಇದನ್ನೂ ಓದಿ: ಘಟಿಕೋತ್ಸವ ಸಮಾರಂಭ ಗುರು ಶಿಷ್ಯರ ಶ್ರೇಷ್ಠ ಸಂಪ್ರದಾಯದ ಪ್ರತಿಬಿಂಬ – ಥಾವರ್ ಚಂದ್ ಗೆಹ್ಲೋಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಘಟಿಕೋತ್ಸವ ಸಮಾರಂಭ ಗುರು ಶಿಷ್ಯರ ಶ್ರೇಷ್ಠ ಸಂಪ್ರದಾಯದ ಪ್ರತಿಬಿಂಬ – ಥಾವರ್ ಚಂದ್ ಗೆಹ್ಲೋಟ್

    ಘಟಿಕೋತ್ಸವ ಸಮಾರಂಭ ಗುರು ಶಿಷ್ಯರ ಶ್ರೇಷ್ಠ ಸಂಪ್ರದಾಯದ ಪ್ರತಿಬಿಂಬ – ಥಾವರ್ ಚಂದ್ ಗೆಹ್ಲೋಟ್

    ಚಿಕ್ಕಬಳ್ಳಾಪುರ: ಘಟಿಕೋತ್ಸವ ಸಮಾರಂಭವು ಗುರು ಶಿಷ್ಯರ ಶ್ರೇಷ್ಠ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ. ದೇಶದ ಗೌರವಾನ್ವಿತ ರಾಷ್ಟ್ರಪತಿಗಳು ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಿರುವುದರಿಂದ ಈ ಸಮಾರಂಭದ ಘನತೆ ಮತ್ತಷ್ಟು ಹೆಚ್ಚಿದೆ. ಈ ಘಟಿಕೋತ್ಸವದಲ್ಲಿ ಭಾಗವಹಿಸಿದ್ದಕ್ಕಾಗಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಹೇಳಿದ್ದಾರೆ.

    ಅವರು ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಯುನಿವರ್ಸಿಟಿ ಆಫ್ ಹ್ಯೂಮನ್ ಎಕ್ಸಲೆನ್ಸ್‌ನ (Sathya Sai University) 2ನೇ ಘಟಿಕೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ಗುರುವೇ ಬ್ರಹ್ಮ, ಗುರುವೇ ವಿಷ್ಣು, ಗುರುವೇ ದೇವರು ಮತ್ತು ಗುರು ಮಹೇಶ್ವರನಾಗಿದ್ದಾನೆ. ಶಿಕ್ಷಕನು ನೇರವಾಗಿ ಪರಮ ಬ್ರಹ್ಮನಾಗಿದ್ದು, ಎಲ್ಲರಿಗೂ ಗುರು ಪೂರ್ಣಿಮೆಯ ಶುಭಾಶಯಗಳನ್ನ ಕೋರಿದರು. ಇದನ್ನೂ ಓದಿ: ಪಿಎಸ್‍ಐ ಹಗರಣ – ಎಡಿಜಿಪಿ ಅಮೃತ್ ಪೌಲ್‌ಗೆ ಮತ್ತೊಂದು ಸಂಕಷ್ಟ

    ಕ್ಯಾಂಪಸ್, ವಿಶ್ವವಿದ್ಯಾನಿಲಯದ ಚಟುವಟಿಕೆಗಳನ್ನು ಹತ್ತಿರದಿಂದ ನೋಡುವ ಮತ್ತು ಅರ್ಥಮಾಡಿಕೊಳ್ಳುವ ಅವಕಾಶ ದೊರೆತಿದೆ. ಭಾರತದ ಈ ದಕ್ಷಿಣ ರಾಜ್ಯವಾದ ಕರ್ನಾಟಕದಲ್ಲಿ ಸುಂದರವಾದ ಪರಿಸರದಲ್ಲಿ ಸಾಂಸ್ಕøತಿಕ ಸೌಂದರ್ಯದೊಂದಿಗೆ ಶಿಕ್ಷಣದ ಈ ಹೊಸ ಸ್ಥಳವೂ ಎಲ್ಲರಿಗೂ ಸ್ಫೂರ್ತಿಯಾಗಿದೆ. ಉಚಿತ ಶಿಕ್ಷಣ, ಉಚಿತ ಪೋಷಣೆ ಮತ್ತು ಉಚಿತ ವೈದ್ಯಕೀಯ ಸೇವೆಯಂತಹ ಮಾನವ ಸೇವೆಯ ಅನೇಕ ವಿಶಿಷ್ಟ ಪ್ರಯೋಗಗಳು ಈ ಕ್ಯಾಂಪಸ್‍ನಲ್ಲಿ ನಡೆಯುತ್ತಿವೆ. ಈ ವಿಶ್ವವಿದ್ಯಾಲಯವು, ಶ್ರೀ ಸತ್ಯಸಾಯಿ ಬಾಬಾರವರ ಸ್ಪೂರ್ತಿದಾಯಕ ಸಂದೇಶವಾದ “ಎಲ್ಲರನ್ನು ಪ್ರೀತಿಸಿ” ಮತ್ತು “ಎವರ್-ಹರ್ಟ್ ನೆವರ್”, ಧ್ಯೇಯವಾಕ್ಯ “ಯೋಗ: ಕರ್ಮಸು ಕೌಶಲ” ಅಂದರೆ ಯೋಗ ಕ್ರಿಯೆಯಲ್ಲಿನ ಕೌಶಲ್ಯದ ಹೆಸರು. ಯೋಗದಿಂದ ದೈವತ್ವ ಕಾರ್ಯರೂಪಕ್ಕೆ ಬರುತ್ತದೆ. ಈ ಮೂಲಕ ದಕ್ಷತೆ ಬರುತ್ತದೆ ಎಂಬ ಚಿಂತನೆಯೊಂದಿಗೆ ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.

    ವಿಶ್ವವಿದ್ಯಾಲಯವು ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೆಲಸ ಮಾಡಿದ ಮಹಾನ್ ವ್ಯಕ್ತಿಗಳಿಗೆ ಗೌರವ ಪದವಿಯನ್ನು ನೀಡಿದೆ. ಈ ಮಹಾನ್ ವ್ಯಕ್ತಿಗಳನ್ನು ಅವರ ಅತ್ಯುತ್ತಮ ಸಾಧನೆಗಳಿಗಾಗಿ ಮತ್ತು ಮಾನವ ಸಮಾಜದ ಪ್ರಗತಿಗೆ ಮಹತ್ವದ ಕೊಡುಗೆಗಾಗಿ ಅಭಿನಂದಿಸುತ್ತೇನೆ. ಸಾಧಕರು ಸಾರ್ವಜನಿಕ ಹಿತಾಸಕ್ತಿ ಮತ್ತು ದೇಶದ ಹಿತಾಸಕ್ತಿಗಾಗಿ ಕೆಲಸ ಮಾಡುವುದನ್ನು ಮುಂದುವರೆಸಬೇಕು ಎಂದು ಆಶಿಸುತ್ತೇನೆ ಎಂದಿದ್ದಾರೆ.

    ಅನೇಕ ವಿದ್ಯಾರ್ಥಿಗಳಿಗೆ ಪದವಿಯನ್ನು ನೀಡಲಾಗಿದೆ. ಆ ಎಲ್ಲಾ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ಅಭಿನಂದಿಸುತ್ತೇನೆ. ಇಲ್ಲಿ ಪಡೆದ ಶಿಕ್ಷಣವನ್ನು ದೇಶದ ಹಿತಾಸಕ್ತಿ, ಸಾರ್ವಜನಿಕ ಹಿತಾಸಕ್ತಿ ಮತ್ತು ಸಮಾಜ ಸೇವೆಗಾಗಿ ಬಳಸಬೇಕೆಂದು ಮನವಿ ಮಾಡಿದರು.

    ನಮ್ಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯವು ಬಹಳ ಪುರಾತನವಾಗಿದೆ ಮತ್ತು ಅನಾದಿ ಕಾಲದಿಂದಲೂ ನಾವು “ಸರ್ವೇ ಭವಂತು ಸುಖಿನೋ, ಸರ್ವೇ ಸಂತು ನಿರಾಮಯ” ಎಂಬ ಮನೋಭಾವದಿಂದ ಪ್ರೇರಿತರಾಗಿದ್ದೇವೆ. “ವಸುಧೈವ ಕುಟುಂಬಕಂ” ತತ್ವಶಾಸ್ತ್ರ ಮತ್ತು ಧ್ಯಾನ, ಸಾರ್ವತ್ರಿಕ ಸಹೋದರತ್ವ ಮತ್ತು ವಿಶ್ವ ಶಾಂತಿ ಮತ್ತು ಸಮಾನತೆ ಮತ್ತು ಸಾಮರಸ್ಯವನ್ನು ಕಲಿಸುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಕಾರಾತ್ಮಕ ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂದಿದ್ದಾರೆ.

    ಭವ್ಯವಾದ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಮುಂದಿನ 25 ವರ್ಷಗಳು ಅಮೃತ ಕಾಲ, ನಮ್ಮ ದೇಶವನ್ನು ವಿಶ್ವದ ಅತ್ಯುತ್ತಮ ದೇಶಗಳ ವರ್ಗಕ್ಕೆ ತರುವ ಕರ್ತವ್ಯದ ಅವಧಿಯಾಗಿದೆ. ಈ ಕರ್ತವ್ಯದ ಅವಧಿಯನ್ನು ಅವಕಾಶವನ್ನಾಗಿ ಪರಿವರ್ತಿಸುವಲ್ಲಿ ನಾವು ಪಾಲುದಾರರಾಗಿರಬೇಕು.

    ವಿದ್ಯಾರ್ಥಿಗಳು ಸಾರ್ವಜನಿಕ ಜೀವನದಲ್ಲಿ ಸಕ್ರಿಯ ಪಾತ್ರವನ್ನು ನಿರ್ವಹಿಸುವುದನ್ನು ಮುಂದುವರೆಸ ಬೇಕು. ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಲು ಇತರರನ್ನು ಪ್ರೇರೇಪಿಸಬೇಕು. ಏಕ್ ಭಾರತ್, ಶ್ರೇಷ್ಠ ಭಾರತ್ ಮತ್ತು ಆತ್ಮನಿರ್ಭರ್ ಭಾರತ್ ಮಾಡುವಲ್ಲಿ ಕೆಲಸ ಮಾಡುತ್ತೀರೆಂಬ ನಂಬಿಕೆ ಇದೆ ಎಂದು ಭರವಸೆ ವ್ಯಕ್ತ ಪಡಸಿದರು.

    ಶ್ರೀ ಸತ್ಯಸಾಯಿ ಮಾನವ ಶ್ರೇಷ್ಠತೆಯ ವಿಶ್ವವಿದ್ಯಾನಿಲಯವು ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕಾಂಶ ಕ್ಷೇತ್ರದಲ್ಲಿ ಮಾಡುತ್ತಿರುವ ಕಾರ್ಯ ಉತ್ತಮ ಕೆಲಸ. ಅಲ್ಲದೇ ಆಧುನಿಕ ಶಿಕ್ಷಣ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ಸಂಯೋಜಿಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.

    ವಿಶ್ವವಿದ್ಯಾನಿಲಯದ ಸಂಸ್ಥಾಪಕರಾದ ಗೌರವಾನ್ವಿತ ಸದ್ಗುರು ಸ್ವಾಮಿ ಮಧುಸೂದನ್ ಸಾಯಿ, ಕುಲಪತಿ ಗೌರವಾನ್ವಿತ ಶ್ರೀ ಬಿ. ಎನ್. ನರಸಿಂಹ ಮೂರ್ತಿ, ಉಪಕುಲಪತಿ ಪ್ರೊ. ಶ್ರೀಕಾಂತ್ ಮೂರ್ತಿ, ಶ್ರೀ ಸತ್ಯಸಾಯಿ ಆರೋಗ್ಯ ಮತ್ತು ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಡಾ. ಶ್ರೀನಿವಾಸ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ದ್ರೌಪದಿ ಮುರ್ಮು – ಸಿಎಂ, ರಾಜ್ಯಪಾಲರಿಂದ ಸ್ವಾಗತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರಿಗೆ ಆಗಮಿಸಿದ ದ್ರೌಪದಿ ಮುರ್ಮು – ಸಿಎಂ, ರಾಜ್ಯಪಾಲರಿಂದ ಸ್ವಾಗತ

    ಬೆಂಗಳೂರಿಗೆ ಆಗಮಿಸಿದ ದ್ರೌಪದಿ ಮುರ್ಮು – ಸಿಎಂ, ರಾಜ್ಯಪಾಲರಿಂದ ಸ್ವಾಗತ

    ಬೆಂಗಳೂರು: ಶ್ರೀ ಸತ್ಯಸಾಯಿ ವಿಶ್ವವಿದ್ಯಾಲಯದ 2ನೇ ಘಟಿಕೋತ್ಸವ ಹಾಗೂ ಬೆಂಗಳೂರಿನ ರಾಜಭವನದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿರುವ ಬುಡಕಟ್ಟು ಸಮುದಾಯದ ಜನರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಸೋಮವಾರ ಮಧ್ಯಾಹ್ನ ಬೆಂಗಳೂರಿಗೆ (Bengaluru) ಆಗಮಿಸಿದ್ದಾರೆ.

    ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ (Thawarchand Gehlot) ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ರಾಷ್ಟ್ರಪತಿಯವರನ್ನು ಹೆಚ್‍ಎಎಲ್‍ನಲ್ಲಿ ಬರಮಾಡಿಕೊಂಡರು. ಬಳಿಕ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗವಹಿಸಲು ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಪ್ರಯಾಣಿಸಿದರು. ಇದನ್ನೂ ಓದಿ: ಕುಮಾರಸ್ವಾಮಿ ಇಷ್ಟು ಬೇಗ ಮೈ ಪರಚಿಕೊಳ್ಳುವ ಅಗತ್ಯವಿಲ್ಲ : ಗುಂಡೂರಾವ್

    ಈ ಸಮಯದಲ್ಲಿ ಸಚಿವರಾದ ಕೆ.ಜೆ. ಜಾರ್ಜ್, ಬೈರತಿ ಸುರೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಬೆಂಗಳೂರು ಪ್ರಾದೇಶಿಕ ಆಯುಕ್ತರಾದ ಆಮ್ಲನ್ ಆದಿತ್ಯ ಬಿಸ್ವಾಸ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ. ಮಣಿವಣ್ಣನ್, ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್, ಬೆಂಗಳೂರು ಜಿಲ್ಲಾಧಿಕಾರಿ ಕೆ.ಎ ದಯಾನಂದ್, ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ವಿಪಕ್ಷ ನಾಯಕನಿಲ್ಲದೆ ಕಲಾಪ ನಡೆದಿದ್ದು ದುರ್ದೈವ: ಹೆಚ್.ಕೆ ಪಾಟೀಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಪಕ್ಷಗಳ ವಿರುದ್ಧ ಸುಳ್ಳು ಪ್ರಚಾರಕ್ಕೆ ಮೋದಿ ಸರ್ಕಾರದ ಆಡಳಿತ ಯಂತ್ರ ಬಳಸಿಕೊಳ್ತಿದ್ದಾರೆ: ರಾಷ್ಟ್ರಪತಿಗೆ ದಿನೇಶ್ ಗುಂಡೂರಾವ್ ಪತ್ರ

    ವಿಪಕ್ಷಗಳ ವಿರುದ್ಧ ಸುಳ್ಳು ಪ್ರಚಾರಕ್ಕೆ ಮೋದಿ ಸರ್ಕಾರದ ಆಡಳಿತ ಯಂತ್ರ ಬಳಸಿಕೊಳ್ತಿದ್ದಾರೆ: ರಾಷ್ಟ್ರಪತಿಗೆ ದಿನೇಶ್ ಗುಂಡೂರಾವ್ ಪತ್ರ

    ಬೆಂಗಳೂರು: ಚುನಾವಣಾ ಮೂಡ್‌ನಲ್ಲಿರುವ ಪ್ರಧಾನಿ ಮೋದಿ (Narendra Modi) ಅವರು ಸರ್ಕಾರದ ಅಧಿಕೃತ ಕಾರ್ಯಕ್ರಮಗಳನ್ನು ವಿಪಕ್ಷಗಳನ್ನು ಹಳಿಯೋಕೆ ಬಳಸುತ್ತಿರುವುದು ಎಷ್ಟು ಸರಿ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಪ್ರಶ್ನಿಸಿದ್ದಾರೆ. ಈ ಕುರಿತಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಗುಂಡೂರಾವ್ ಪತ್ರ ಬರೆದಿದ್ದಾರೆ.

    ಪತ್ರದಲ್ಲೆನಿದೆ?
    ಸಿಕಲ್ ಸೆಲ್ ರಕ್ತಹೀನ ನಿವಾರಣೆ ಮಿಷನ್‌ಗೆ ಚಾಲನೆ ನೀಡುವ ಸರ್ಕಾರಿ ಕಾರ್ಯಕ್ರಮವನ್ನು ಪ್ರಧಾನಿ ಮೋದಿಯವರು ವಿಪಕ್ಷಗಳನ್ನು ಹಳಿಯಲು ಬಳಸಿಕೊಂಡರು ಎಂದು ಗುಂಡೂರಾವ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವರ್ಚುವಲ್ ಮೂಲಕ ಕಾರ್ಯಕ್ರಮಕ್ಕೆ ಪ್ರಧಾನಿ ಅವರು ಚಾಲನೆ ನೀಡಿಲಿದ್ದು, ರಾಜ್ಯದ ಆರೋಗ್ಯ ಸಚಿವರ ಜೊತೆ ವೀಡಿಯೋ ಕಾನ್ಫರೆನ್ಸ್ನಲ್ಲಿ ಚರ್ಚಿಸಲಿದ್ದಾರೆ ಎಂದು ಕೇಂದ್ರ ಸರ್ಕಾರ ನಮಗೆ ಆಹ್ವಾನಿಸಿತ್ತು. ರಾಜ್ಯದ ಆರೋಗ್ಯ ಸಚಿವನಾಗಿ ನಾನು ವಿಕಾಸ ಸೌಧದಿಂದ ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ್ದೆ. ಆದರೆ ಮೋದಿಯವರು ಯಾರೊಂದಿಗೂ ಚರ್ಚಿಸದೇ ವಿಪಕ್ಷಗಳನ್ನು ದೂಷಿಸುವ ಭಾಷಣ ಮಾಡಿದರು.

    ಸಿಕಲ್ ಸೆಲ್ ರಕ್ತಹೀನ ಕಾಯಿಲೆ ನಿವಾರಣೆ ಕುರಿತು ಪ್ರಧಾನಿ ಮೋದಿಯವರು ಈಗ ಮಾತಾಡುತ್ತಿದ್ದಾರೆ. ಆದರೆ ಸಿಕಲ್ ಸೆಲ್ ನಿವಾರಣೆ ಕುರಿತು ದೇಶದಲ್ಲೇ ಮೊದಲು ಜಾಗೃತಗೊಂಡಿದ್ದ ರಾಜ್ಯ ಕರ್ನಾಟಕ. 2016 ರಿಂದಲೇ ಕರ್ನಾಟಕ ಸರ್ಕಾರ ಸಿಕಲ್ ಸೆಲ್ ಕಾಯಿಲೆ ವಿರುದ್ಧ ಕಾರ್ಯಕ್ರಮಗಳನ್ನು ಹಾಕಿಕೊಂಡು ಬಂದಿದೆ. 2016 ರಲ್ಲಿ ರಾಜ್ಯದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೈಸೂರು ಭಾಗದ ಬುಡಕಟ್ಟು ಜನರ ತಪಾಸಣೆ ನಡೆಸಿ ಪಾಸಿಟಿವ್ ಬಂದವರಿಗೆ ಉಚಿತ ಆರೋಗ್ಯ ಚಿಕಿತ್ಸೆ ನೀಡುತ್ತಿದೆ. ಇದನ್ನೂ ಓದಿ: ಇಂದು ಬಾಂಬ್ ಹಾಕಿದವರ ದೇಶಕ್ಕೆ ನುಗ್ಗಿ ಹೊಡೆಯೋ ಸಾಮರ್ಥ್ಯ ನಮ್ಮಲ್ಲಿದೆ: ಜೋಶಿ

    ಸಿಕಲ್ ಸೆಲ್ ಕಾಯಿಲೆಯನ್ನು ಕರ್ನಾಟಕ ರಾಜ್ಯ ತಡೆಗಟ್ಟುತ್ತಿರುವ ಕ್ರಮಗಳ ಬಗ್ಗೆ ಪ್ರಧಾನಿ ಮೋದಿಯವರು ರಾಜ್ಯ ಸರ್ಕಾರದ ಅಭಿಪ್ರಾಯ ಕೇಳುತ್ತಾರೆ ಎಂಬ ನಿರೀಕ್ಷೆಯಲ್ಲಿ ರಾಜ್ಯದ ಆರೋಗ್ಯ ಸಚಿವನಾಗಿ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಆದರೆ ಪ್ರಧಾನಿ ಅವರು ತಮ್ಮ ಪಕ್ಷದ ಚುನಾವಣಾ ಭಾಷಣಕ್ಕೆ ನಮ್ಮ ಸಮಯ ವ್ಯರ್ಥಮಾಡಿದರು. ಮೋದಿಯವರು ಎಲ್ಲರಿಗೂ ನಿರಾಶೆ ಉಂಟುಮಾಡಿದರು ಎಂದು ಪತ್ರದಲ್ಲಿ ಗುಂಡೂರಾವ್ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜಾತಿಗಣತಿ ವರದಿಯನ್ನು ಸ್ವೀಕರಿಸುತ್ತೇವೆ, ಎಷ್ಟೇ ಕಷ್ಟ ಬಂದರೂ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇನೆ: ಸಿಎಂ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂದು ನಂದಿಗಿರಿಧಾಮ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧ ತೆರವು; ನಾಳೆ ಬಂದ್ – ಜಿಲ್ಲಾಡಳಿತ ಮರು ಆದೇಶ

    ಇಂದು ನಂದಿಗಿರಿಧಾಮ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧ ತೆರವು; ನಾಳೆ ಬಂದ್ – ಜಿಲ್ಲಾಡಳಿತ ಮರು ಆದೇಶ

    ಚಿಕ್ಕಬಳ್ಳಾಪುರ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಭೇಟಿ ಹಿನ್ನೆಲೆಯಲ್ಲಿ ಭಾನುವಾರ (ಇಂದು) ವಿಶ್ವವಿಖ್ಯಾತ ನಂದಿಗಿರಿಧಾಮ (Nandi Hills) ಹಾಗೂ ಸ್ಕಂದಗಿರಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದ ಜಿಲ್ಲಾಡಳಿತದ ಆದೇಶದಲ್ಲಿ ಬದಲಾವಣೆ ಮಾಡಲಾಗಿದೆ.

    ಭಾನುವಾರ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸೋಮವಾರ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲಾಧಿಕಾರಿ ರವೀಂದ್ರ ಹಾಗೂ ಎಸ್ಪಿ ನಾಗೇಶ್ ‘ಪಬ್ಲಿಕ್ ಟಿವಿ’ಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಭಾನುವಾರ, ಸೋಮವಾರ ನಂದಿಬೆಟ್ಟ ಸಂಪೂರ್ಣ ಬಂದ್

    ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮಕ್ಕೆ ರಾಷ್ಟ್ರಪತಿಗಳು ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತಾ ಹಿತದೃಷ್ಟಿಯಿಂದ 2 ದಿನ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದರೆ ಈಗ ಸಾರ್ವಜನಿಕರು ಹಾಗೂ ಪ್ರವಾಸಿಗರ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ಪ್ರವಾಸಿಗರಿಗೆ ಅವಕಾಶ ಕಲ್ಪಿಸಿದೆ. ಅಲ್ಲದೇ ಸೋಮವಾರ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಸಾಲ ಕೊಡಿಸುವುದಾಗಿ ನಂಬಿಸಿ ಜನರಿಂದ ಹಣ ಪಡೆದು ವಂಚನೆ – ಗ್ಯಾಂಗ್ ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾನುವಾರ, ಸೋಮವಾರ ನಂದಿಬೆಟ್ಟ ಸಂಪೂರ್ಣ ಬಂದ್

    ಭಾನುವಾರ, ಸೋಮವಾರ ನಂದಿಬೆಟ್ಟ ಸಂಪೂರ್ಣ ಬಂದ್

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಬೆಟ್ಟ (Nandihills) ಹಾಗೂ ಸ್ಕಂದಗಿರಿ ಬೆಟ್ಟಗಳನ್ನು ಭಾನುವಾರ ಹಾಗೂ ಸೋಮವಾರ ಎರಡು ದಿನಗಳ ಕಾಲ ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿದ್ದು, ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗುತ್ತಿದೆ.

    ಜುಲೈ 2 ರ ಬೆಳಗ್ಗೆ 6 ಗಂಟೆಯಿಂದ ಜುಲೈ 3 ಸಂಜೆ 6 ಗಂಟೆವರೆಗೂ ಬಂದ್ ಮಾಡಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಆದೇಶ ಮಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ, ಅದರ ಬುದ್ಧಿ ಎರಡೂ ಹ್ಯಾಕ್: ಪ್ರಲ್ಹಾದ್ ಜೋಶಿ

    ಜುಲೈ 3 ಸೋಮವಾರದಂದು ರಾಷ್ಟ್ರಪತಿ ದ್ರೌಪತಿ ಮುರ್ಮು (Droupadi Murmu) ಅವರು ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಗ್ರಾಮದ ಬಳಿ ಇರುವ ಶ್ರೀ ಸತ್ಯಸಾಯಿ ಲೋಕಸೇವಾ ಆಶ್ರಮಕ್ಕೆ ಆಗಮಿಸಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಭದ್ರತೆಯ ಹಿತದೃಷ್ಟಿಯಿಂದ ನಂದಿಗಿರಿಧಾಮ ಹಾಗೂ ಸ್ಕಂದಗಿರಿ ಬೆಟ್ಟಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧ ಮಾಡಿರುವುದಾಗಿ ಚಿಕ್ಕಬಳ್ಳಾಫುರ ಎಸ್ಪಿ ಡಿ.ಎಲ್.ನಾಗೇಶ್ ಹಾಗೂ ಡಿ ಸಿ ರವಿಂದ್ರ ತಿಳಿಸಿದ್ದಾರೆ.

    ವೀಕೆಂಡ್ ಅಂತ ಪ್ರವಾಸಿಗರು ನಂದಿಬೆಟ್ಟದತ್ತ ಬರಬಾರದು. ಮಂಗಳವಾರದಿಂದ ಎಂದಿನಂತೆ ಪ್ರವಾಸಿಗರು ಆಗಮಿಸಬಹುದು ಅಂತ ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]