ನವದೆಹಲಿ: ಕಳೆದ ವಾರ ಸಂಸತ್ತು ಅಂಗೀಕರಿಸಿದ ಮೂರು ಹೊಸ ಕ್ರಿಮಿನಲ್ ನ್ಯಾಯ ಮಸೂದೆಗಳಿಗೆ (Criminal Laws) ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಸೋಮವಾರ ಅಂಕಿತ ಹಾಕಿದ್ದಾರೆ.
ವಸಾಹತುಶಾಹಿ ಯುಗದ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು 1872 ರ ಭಾರತೀಯ ಸಾಕ್ಷಿ ಕಾಯಿದೆಯನ್ನು ಬದಲಾಯಿಸಿದ್ದು, ಮೂರು ಹೊಸ ಕಾನೂನುಗಳಾಗಿ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯಿದೆ ಅಂಗೀಕರಿಸಲಾಗಿತ್ತು. ಇದನ್ನೂ ಓದಿ: ಲೋಕಸಭೆಯಲ್ಲಿ ಮೂರು ಕ್ರಿಮಿನಲ್ ಮಸೂದೆ ಅಂಗೀಕಾರ
ಸಂಸತ್ತಿನಲ್ಲಿ ಮೂರು ವಿಧೇಯಕಗಳ ಮೇಲಿನ ಚರ್ಚೆಗೆ ಉತ್ತರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಶಿಕ್ಷೆ ನೀಡುವ ಬದಲು ನ್ಯಾಯ ಒದಗಿಸುವತ್ತ ಗಮನ ಹರಿಸಲಾಗಿದೆ ಎಂದು ಹೇಳಿದ್ದರು.
ಭಾರತೀಯ ನ್ಯಾಯ ಸಂಹಿತಾವು ಪ್ರತ್ಯೇಕತೆಯ ಕೃತ್ಯಗಳು, ಸಶಸ್ತ್ರ ದಂಗೆ, ವಿಧ್ವಂಸಕ ಚಟುವಟಿಕೆಗಳು, ಪ್ರತ್ಯೇಕತಾವಾದಿ ಚಟುವಟಿಕೆಗಳು, ಸಾರ್ವಭೌಮತ್ವ ಅಥವಾ ಏಕತೆಗೆ ಅಪಾಯವನ್ನುಂಟುಮಾಡುವಂತಹ ಅಪರಾಧಗಳನ್ನು ಪಟ್ಟಿಮಾಡುತ್ತದೆ.
ಭಾರತೀಯ ನ್ಯಾಯ ಸಂಹಿತೆಯಲ್ಲಿ ಮೊದಲ ಬಾರಿಗೆ ಭಯೋತ್ಪಾದನೆ ಪದವನ್ನು ವ್ಯಾಖ್ಯಾನಿಸಲಾಗಿದೆ. ಐಪಿಸಿಯಲ್ಲಿ ಅದು ಇರಲಿಲ್ಲ. ಹೊಸ ಕಾನೂನುಗಳ ಅಡಿಯಲ್ಲಿ, ದಂಡವನ್ನು ವಿಧಿಸುವ ಮ್ಯಾಜಿಸ್ಟ್ರೇಟ್ ಅಧಿಕಾರವನ್ನು ಹೆಚ್ಚಿಸಲಾಗಿದೆ. ಇದನ್ನೂ ಓದಿ: ಆಕ್ಸಿಡೆಂಟ್ ಆಗಿ ಕಟ್ ಆದ ತಲೆ ಮೂರೂವರೆ ಗಂಟೆ ಶೋಧದ ಬಳಿಕ ಸಿಕ್ತು..!
ನವದೆಹಲಿ: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ (Sudha Murthy) ಅವರು ಇಂದು (ಶುಕ್ರವಾರ) ಹಳೆಯ ಮತ್ತು ಹೊಸ ಸಂಸತ್ ಭವನಗಳಿಗೆ ಭೇಟಿ ನೀಡಿದರು. ನೂತನ ಭವನ ಕಣ್ತುಂಬಿಕೊಂಡು ‘ಸೋ ಬ್ಯೂಟಿಫುಲ್’.. ‘ಕನಸು ನನಸಾಗಿದೆ’ ಎಂದು ಬಣ್ಣಿಸಿದ್ದಾರೆ. ಎರಡೂ ಭವನಗಳನ್ನು ಕಣ್ತುಂಬಿಕೊಂಡು ಖುಷಿಪಟ್ಟಿದ್ದಾರೆ.
Smt Sudha Murthy, former Chairperson of the Infosys Foundation, called on President Droupadi Murmu at Rashtrapati Bhavan.
Smt Murthy, a well-known author and a philanthropist, shared her inspirational life journey with women entrepreneurs, teachers and students. Her… pic.twitter.com/PTRqA7U1P6
ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರನ್ನು ಭೇಟಿಯಾದ ಒಂದು ದಿನದ ನಂತರ ಸುಧಾಮೂರ್ತಿಯವರು ಸಂಸತ್ತಿಗೆ ಭೇಟಿ ನೀಡಿದರು. ಅಲ್ಲಿನ ಮಹಿಳಾ ಉದ್ಯಮಿಗಳು, ಶಿಕ್ಷಣತಜ್ಞರು ಮತ್ತು ವಿದ್ಯಾರ್ಥಿಗಳೊಂದಿಗೆ ತಮ್ಮ ಸ್ಪೂರ್ತಿದಾಯಕ ಜೀವನ ಪಯಣವನ್ನು ಹಂಚಿಕೊಂಡರು.
ಸುಧಾಮೂರ್ತಿ ಅವರು ಸಾಮಾಜಿಕ ಕಾರ್ಯ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಗಳಿಗಾಗಿ 2006 ರಲ್ಲಿ ಪದ್ಮಶ್ರೀ ಹಾಗೂ 2023 ರಲ್ಲಿ ಪದ್ಮಭೂಷಣ ನೀಡಿ ಗೌರವಿಸಲಾಗಿದೆ. ಇದನ್ನೂ ಓದಿ: ಲೋಕಸಭೆಯಿಂದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಉಚ್ಚಾಟನೆ
ಭೇಟಿ ಕುರಿತು ರಾಷ್ಟ್ರಗಳ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಲಾಗಿದ್ದು, ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆ ಸುಧಾಮೂರ್ತಿ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು. ಪ್ರಸಿದ್ಧ ಲೇಖಕಿ ಮತ್ತು ಲೋಕೋಪಕಾರಿ ಸುಧಾಮೂರ್ತಿ ಅವರು ಮಹಿಳಾ ಉದ್ಯಮಿಗಳು, ವಿದ್ಯಾರ್ಥಿಗಳು, ಶಿಕ್ಷಕರೊಂದಿಗೆ ತಮ್ಮ ಸ್ಫೂರ್ತಿದಾಯಕ ಜೀವನ ಪ್ರಯಾಣದ ನೆನಪನ್ನು ಹಂಚಿಕೊಂಡಿದ್ದಾರೆ.
ನವದೆಹಲಿ: ಪಂಚರಾಜ್ಯಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ಶಾಸಕರಾಗಿರುವ ಸಂಸದರು ಮತ್ತು ಕೇಂದ್ರ ಸಚಿವರಿಗೆ (Union Ministers) 30 ದಿನದಲ್ಲಿ ಮನೆ ಖಾಲಿ ಮಾಡುವಂತೆ ಲೋಕಸಭೆ ಕಾರ್ಯಲಯ ಹೇಳಿದೆ. ಸಂಸದ (BJP MPs) ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನಲೆ ಮನೆ ಖಾಲಿ ಮಾಡುವಂತೆ ಅದು ಸೂಚಿಸಿದೆ.
ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಪಟೇಲ್, ಮಧ್ಯಪ್ರದೇಶದ ರಾಕೇಶ್ ಸಿಂಗ್, ಉದ್ಯಾ ಪ್ರತಾಪ್ ಸಿಂಗ್ ಮತ್ತು ರಿತಿ ಪಾಠಕ್, ರಾಜಸ್ಥಾನದಿಂದ ದಿಯಾ ಕುಮಾರಿ ಮತ್ತು ರಾಜ್ಯವರ್ಧನ್ ಸಿಂಗ್ ರಾಥೋಡ್ ಮತ್ತು ಛತ್ತೀಸ್‌ಗಢದಿಂದ ಗೋಮತಿ ಸಾಯಿ ಮತ್ತು ಅರುಣ್ ಸಾವ್. ರಾಜ್ಯಸಭಾ ಸಂಸದ ಕಿರೋಡಿ ಲಾಲ್ ಮೀನಾ ಕೂಡ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ (Om Birla) ಅಂಗೀಕರಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರದ ಬರ ಪರಿಹಾರಕ್ಕೆ ಇನ್ನೆರಡು ದಿನಗಳಲ್ಲಿ ಮಾನದಂಡ ಬಿಡುಗಡೆ: ಚೆಲುವರಾಯಸ್ವಾಮಿ
ಕೇಂದ್ರ ಸಚಿವ ಸ್ಥಾನಕ್ಕೆ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ರೇಣುಕಾ ಸಿಂಗ್ ಸರೂತಾ ನೀಡಿದ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅಂಗೀಕರಿಸಿದ್ದಾರೆ. ಖಾಲಿಯಾದ ಸಚಿವ ಸ್ಥಾನಗಳ ಪೈಕಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಉಸ್ತುವಾರಿಯನ್ನು ಅರ್ಜುನ್ ಮುಂಡಾ ಅವರಿಗೆ, ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಜವಬ್ದಾರಿಯನ್ನು ಶೋಭಾ ಕರಂದ್ಲಾಜೆ ಅವರಿಗೆ ವಹಿಸಲಾಗಿದೆ. ಇದನ್ನೂ ಓದಿ: ಮೂರು ರಾಜ್ಯಗಳ ಮುಖ್ಯಮಂತ್ರಿ ಆಯ್ಕೆಗೆ ವೀಕ್ಷಕರ ನೇಮಿಸಿದ ಹೈಕಮಾಂಡ್
ಅಲ್ಲದೇ ಜಲ ಶಕ್ತಿ ಸಚಿವಾಲಯದ ರಾಜ್ಯ ಸಚಿವರ ಉಸ್ತುವಾರಿಯನ್ನು ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ, ಬುಡಕಟ್ಟು ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರ ಉಸ್ತುವಾರಿಯನ್ನು ಡಾ. ಭಾರತಿ ಪ್ರವೀಣ್ ಪವಾರ್ ದ್ರೌಪದಿ ಮುರ್ಮು ವಹಿಸಿದ್ದಾರೆ. ತಮ್ಮ ಖಾತೆಗಳ ಜೊತೆಗೆ ಹೆಚ್ಚುವರಿ ನಿಭಾಯಿಸಲು ನಿರ್ದೇಶಿಸಿದ್ದಾರೆ. ಇದನ್ನೂ ಓದಿ: ಸರ್ಕಾರದಲ್ಲಿ ಪೇ-ಸಿಎಂ, ಪೇ-ಡಿಸಿಎಂ ಹೆಸ್ರಲ್ಲಿ ಕಮಿಷನ್ ಹಗರಣ – ಸದನದಲ್ಲಿ ಯತ್ನಾಳ್ ಬಾಂಬ್
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಸಂವಿಧಾನ ದಿನದ (Constitution Day) ಅಂಗವಾಗಿ ಸುಪ್ರೀಂ ಕೋರ್ಟ್ (Supreme Court) ಆವರಣದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ (Dr B.R.Ambedkar) ಅವರ ಪ್ರತಿಮೆಯನ್ನು ಭಾನುವಾರ ಅನಾವರಣಗೊಳಿಸಿದರು.
ರಾಷ್ಟ್ರಪತಿ ಮುರ್ಮು ಮತ್ತು ಸಿಜೆಐ ಚಂದ್ರಚೂಡ್ ಅವರು ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಸಮಾರಂಭದಲ್ಲಿ ಉನ್ನತ ನ್ಯಾಯಾಲಯದ ಹಲವು ನ್ಯಾಯಾಧೀಶರು ಭಾಗವಹಿಸಿದ್ದರು. ಇದನ್ನೂ ಓದಿ: ಅಮೆರಿಕ ಮಷಿನ್ ಕೈಕೊಟ್ಟ ನಂತರ 41 ಕಾರ್ಮಿಕರ ರಕ್ಷಣೆಗೆ ಧಾವಿಸಿದ ವಾಯುಸೇನೆ
1949ರಲ್ಲಿ ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ನವೆಂಬರ್ 26 ಅನ್ನು ಸಂವಿಧಾನ ದಿನವಾಗಿ ಆಚರಿಸಲಾಗುತ್ತದೆ. ಮೊದಲು ಈ ದಿನವನ್ನು ಕಾನೂನು ದಿನವಾಗಿ ಆಚರಿಸಲಾಗುತ್ತಿತ್ತು. ಇದನ್ನೂ ಓದಿ: ವಿದೇಶಗಳಲ್ಲಿ ಮದುವೆ ಆಗಬೇಡಿ: ಭಾರತೀಯರಿಗೆ ಪ್ರಧಾನಿ ಮೋದಿ ಸಲಹೆ
ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸುದೀರ್ಘ ಚರ್ಚೆಯ ಬಳಿಕ ಅನುಮೋದನೆಗೊಂಡಿದ್ದ ಮಹಿಳಾ ಮೀಸಲಾತಿ ಮಸೂದೆಗೆ (Women Reservation Bill) ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅಂಕಿತ ಹಾಕಿದ್ದು, ಕೇಂದ್ರ ಸರ್ಕಾರ ಶುಕ್ರವಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ.
ಸೆಪ್ಟೆಂಬರ್ 20 ರಂದು ಮಸೂದೆಯನ್ನು ಅಂಗೀಕರಿಸಲಾಯಿತು. 454 ಸದಸ್ಯರು ಮಸೂದೆ ಪರವಾಗಿ ಮತ ಚಲಾಯಿಸಿದರು. ಮಸೂದೆ ವಿರುದ್ಧ ಇಬ್ಬರು ಮತ ಚಲಾಯಿಸಿದ್ದರು. ಸೆಪ್ಟೆಂಬರ್ 21 ರಂದು, ನಾರಿ ಶಕ್ತಿ ವಂದನ್ ಅಧಿನಿಯಮವನ್ನು ರಾಜ್ಯಸಭೆಯಲ್ಲಿ ಅವಿರೋಧವಾಗಿ ಅಂಗೀಕರಿಸಲಾಯಿತು.
ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ (Narendra Modi) ಈ ಮಸೂದೆಯನ್ನು ವಿಶೇಷ ಅಧಿವೇಶನ ಕರೆದು ಮಂಡಿಸಿತ್ತು. ಹೊಸ ಸಂಸತ್ ಭವನದಲ್ಲಿ ಮಂಡನೆಯಾದ ಈ ಮೊದಲ ಮಸೂದೆಗೆ ಬಹುತೇಕ ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆ ಯಾವುದೇ ತಕರಾರು ಇಲ್ಲದೇ ಇದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಮೋದನೆಗೊಂಡಿತ್ತು.
ಮಸೂದೆಯ ಚರ್ಚೆಯ ಸಮಯದಲ್ಲಿ ಜಾತಿ ಗಣತಿ, ಕ್ಷೇತ್ರ ಪುನರ್ ವಿಂಗಡಣೆ ವರೆಗೂ ಕಾಯದೇ ಶೀಘ್ರವಾಗಿ ಅನುಷ್ಠಾನಗೊಳಿಸಲು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಎಲ್ಲ ವಿಪಕ್ಷಗಳು ಮನವಿ ಮಾಡಿದ್ದವು. ಆದರೆ ಇದಕ್ಕೆ ಉತ್ತರಿಸಿದ್ದ ಸರ್ಕಾರ ಆರ್ಟಿಕಲ್ 334 ಎ ಪ್ರಕಾರ ಜನಗಣತಿ ಬಳಿಕ ಕ್ಷೇತ್ರ ಪುನರ್ ವಿಂಗಡನೆಯಾಗಲಿದ್ದು, ಬಳಿಕವೇ ಕಾನೂನು ಜಾರಿಗೆ ಅವಕಾಶವಿದೆ ಎಂದು ಸ್ಪಷ್ಟನೆ ನೀಡಿತ್ತು.
ಐತಿಹಾಸಿಕ ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರವಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಿ.ಟಿ. ಉಷಾ ಸೇರಿದಂತೆ ಸಂಸತ್ತಿನ ಉಭಯ ಸದನಗಳ ಮಹಿಳಾ ಸದಸ್ಯರು ಮತ್ತು ಕೇಂದ್ರ ಸಚಿವರಾದ ಮೀನಕಾಶಿ ಲೇಖಿ, ಸ್ಮೃತಿ ಇರಾನಿ ಹೂಗುಚ್ಛ ನೀಡಿ ಸಂತಸ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ರಾಜ್ಯಸಭೆಯಲ್ಲಿ ಐತಿಹಾಸಿಕ ನಿರ್ಣಯ – ಸರ್ವಾನುಮತದಿಂದ ಮಹಿಳಾ ಮೀಸಲಾತಿ ಬಿಲ್ ಪಾಸ್
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ 2010 ರಲ್ಲಿ ರಾಜ್ಯಸಭೆಯು ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿತ್ತು. ಆದರೆ ಅದು ಲೋಕಸಭೆಯಲ್ಲಿ ಅಂಗೀಕಾರವಾಗಿರಲಿಲ್ಲ.
ನವದೆಹಲಿ: ಇತ್ತಿಚಿಗೆ ಸಂಸತ್‌ನಲ್ಲಿ ಅನುಮೋದನೆಗೊಂಡು, ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅಂಕಿತ ಹಾಕಿದ್ದ ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾನೂನು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕೇಂದ್ರ ಗೃಹ ಇಲಾಖೆಯಿಂದ ಹೊರಡಿಸಿದ ಪ್ರಕಟಣೆಯಲ್ಲಿ ರಿಜಿಸ್ಟ್ರಾರ್ ಮತ್ತು ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಈ ಮಾಹಿತಿ ನೀಡಿದ್ದಾರೆ.
ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾನೂನು ಶಿಕ್ಷಣ ಸಂಸ್ಥೆಗೆ ಪ್ರವೇಶ, ಡ್ರೈವಿಂಗ್ ಲೈಸೆನ್ಸ್ ನೀಡಿಕೆ, ಮತದಾರರ ಪಟ್ಟಿ ಸಿದ್ಧಪಡಿಸುವುದು, ಆಧಾರ್ ಸಂಖ್ಯೆ, ಮದುವೆ ನೋಂದಣಿ ಅಥವಾ ಸರ್ಕಾರಿ ಉದ್ಯೋಗಕ್ಕೆ ನೇಮಕಾತಿ ಮುಂತಾದ ಹಲವಾರು ಉದ್ದೇಶಗಳಿಗಾಗಿ ಜನನ ಪ್ರಮಾಣಪತ್ರವನ್ನು (Birth Certificate) ಒಂದೇ ದಾಖಲೆಯಾಗಿ ಬಳಸಲು ಈ ಕಾನೂನು ಅನುಮತಿಸುತ್ತದೆ. ಇದನ್ನೂ ಓದಿ: INDIA ಒಕ್ಕೂಟವು ಸನಾತನ ಧರ್ಮವನ್ನು ನಾಶ ಮಾಡಲು ಬಯಸಿದೆ: ಮೋದಿ ವಾಗ್ದಾಳಿ
ಮತದಾರ ಪಟ್ಟಿಯೊಂದಿಗೆ ಜನನ/ಮರಣ ಮಾಹಿತಿ ಜೋಡಣೆಯಿಂದ ವೋಟರ್ ಲಿಸ್ಟ್ ಪರಿಷ್ಕರಣೆ ಸ್ವಯಂಚಾಲಿತವಾಗಲಿದೆ. ಯಾವುದೇ ವ್ಯಕ್ತಿಗೆ 18 ವರ್ಷ ವಯಸ್ಸು ತುಂಬುತ್ತಲೇ ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಮಾಡಿಸಿಕೊಳ್ಳುವಂತೆ ಚುನಾವಣಾ ಆಯೋಗದ ಕಡೆಯಿಂದ ಸೂಚನೆ ಬರಲಿದೆ. ಅದೇ ರೀತಿ ಯಾವುದೇ ವ್ಯಕ್ತಿ ಮೃತಪಟ್ಟಲ್ಲಿ, ಚುನಾವಣಾ ಆಯೋಗವು ತಾನೇ ಆ ವ್ಯಕ್ತಿಯ ಹೆಸರನ್ನು ಮತದಾರ ಪಟ್ಟಿಯಿಂದ ಡಿಲೀಟ್ ಮಾಡಲಿದೆ. ಆದರೆ ಇದಕ್ಕೂ ಮುನ್ನ ಆ ವ್ಯಕ್ತಿಯ ಕುಟುಂಬದ ಸದಸ್ಯರಿಗೆ 15 ದಿನದೊಳಗೆ ಮರಣದ ವಿಷಯವನ್ನು ದೃಢಪಡಿಸಬೇಕಾಗುತ್ತದೆ. ಇದನ್ನೂ ಓದಿ: ಕೇರಳದಲ್ಲಿ ನಿಫಾ ವೈರಸ್ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ – ಸಂಪರ್ಕ ಪಟ್ಟಿಯಲ್ಲಿ 706 ಜನ
ನವದೆಹಲಿ: ಪ್ರತಿಯೊಬ್ಬ ಭಾರತೀಯನು ಸಮಾನ ಪ್ರಜೆ. ಪ್ರತಿ ಪ್ರಜೆಗೆ ಈ ಭೂಮಿಯಲ್ಲಿ ಸಮಾನ ಅವಕಾಶ, ಹಕ್ಕುಗಳು ಮತ್ತು ಕರ್ತವ್ಯಗಳಿವೆ. ಭಾರತೀಯ ಪ್ರಜೆಗಳಾಗಿ ಅವರ ಗುರುತುಗಳು ಜಾತಿ, ಧರ್ಮ ಮತ್ತು ಭಾಷೆಯ ಎಲ್ಲಾ ಗುರುತುಗಳನ್ನು ಮೀರಿಸುತ್ತವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಹೇಳಿದ್ದಾರೆ.
ಆಗಸ್ಟ್ 15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆ (Independence Day) ಹಿನ್ನೆಲೆ ದೇಶದ ಜನರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದ ಅವರು, ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ಗಾಂಧಿ ಜೊತೆ ಮಹಿಳೆಯರು ಹೆಜ್ಜೆ ಹಾಕಿದ್ದಾರೆ. ಇಂದು ಕೂಡಾ ಮಹಿಳೆಯರು ಪ್ರಮುಖ ಘಟ್ಟದಲ್ಲಿದ್ದಾರೆ. ಮಹಿಳಾ ಸಶಕ್ತಿಕರಣ ಅಗತ್ಯವಾಗಿದೆ ಎಂದರು. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ವಾರಣಾಸಿಯಲ್ಲಿ ಸ್ಪರ್ಧಿಸಿದರೆ ಪ್ರಧಾನಿ ಮೋದಿ ಸೋಲ್ತಾರೆ: ಸಂಜಯ್ ರಾವತ್
ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಂಡಿದೆ. ಜಿ20 ಸಭೆಯ ಅಧ್ಯಕ್ಷ ಸ್ಥಾನವನ್ನು ಭಾರತ ನಿಭಾಯಿಸುತ್ತಿದೆ. ಈ ಸಭೆ ಭಾರತದ ಪ್ರಗತಿಗೆ ಮತ್ತೊಂದು ರಸ್ತೆಯಾಗಿದೆ. ಭಾರತ ರಾಜತಾಂತ್ರಿಕತೆಯನ್ನು ನೆಲದೊಂದಿಗೆ ಜೊಡಿಸುವ ಪ್ರಯತ್ನ ಮಾಡಿದೆ. ಸಾಮಾನ್ಯ ಜನರನ್ನು ಸಭೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನದಲ್ಲಿ ಪಾಲ್ಗೊಂಡ ಹಿಜ್ಬುಲ್ ಭಯೋತ್ಪಾದಕನ ಸಹೋದರ
ಆರ್ಥಿಕ ಸಂಕಷ್ಟದಿಂದ ಬಹಳಷ್ಟು ರಾಷ್ಟ್ರಗಳು ಪರದಾಡುತ್ತಿದೆ. ಭಾರತ ಸರ್ಕಾರ ಈ ಎಲ್ಲಾ ಸಮಸ್ಯೆಗಳನ್ನು ಸರಿಯಾಗಿ ನಿಭಾಯಿಸುತ್ತಿದೆ. ಜಿಡಿಪಿ ಹೆಚ್ಚುತ್ತಿದೆ. ಮುದ್ರಾ ಯೋಜನೆ ಮೂಲಕ ಜನರಿಗೆ ಸರ್ಕಾರ ನೆರವಾಗುತ್ತಿದೆ. ಭಾರತ ವಿಶ್ವದ ಐದನೇ ಬಲಿಷ್ಠ ಆರ್ಥಿಕತೆಯಾಗಿದೆ. ಮೂರನೇ ಸ್ಥಾನ ತಲುಪುವ ಪ್ರಯತ್ನ ನಡೆಯುತ್ತಿದೆ. ಕೃಷಿ ಕ್ಷೇತ್ರದಲ್ಲಿ ಪ್ರಗತಿ, ಉದ್ಯೋಗ ಸೃಷ್ಟಿ ಮೂಲಕ ಆರ್ಥಿಕತೆ ಹೆಚ್ಚಿಸುವ ಕೆಲಸ ಆಗುತ್ತಿದೆ. ಬಡತನದ ಮಟ್ಟವನ್ನು ಕಡಿಮೆ ಮಾಡಲಾಗುತ್ತಿದೆ. ಆದಿವಾಸಿಗಳ ಅಭಿವೃದ್ಧಿಗೂ ಸರ್ಕಾರ ಕೆಲಸ ಮಾಡುತ್ತಿದೆ. ಆದಿವಾಸಿ ಜನರು ತಮ್ಮ ಸಂಸ್ಕೃತಿ ಜೊತೆಗೆ ಆಧುನಿಕತೆಯನ್ನು ಒಳಗೂಡಿಸಿಕೊಳ್ಳಬೇಕು ಎಂದರು. ಇದನ್ನೂ ಓದಿ: ಅಹಮದಾಬಾದ್‌ನಲ್ಲಿ ‘ತಿರಂಗಾ ಯಾತ್ರೆಗೆ’ ಚಾಲನೆ ನೀಡಿದ ಅಮಿತ್ ಶಾ
ಭಾರತ ಚಂದ್ರಯಾನ 3 ಅನ್ನು ಆರಂಭಿಸಿದೆ. ಕೆಲವೇ ದಿನಗಳಲ್ಲಿ ಚಂದ್ರನ ಮೇಲೆ ಇದು ಇಳಿಯಲಿದೆ. ಈ ಕ್ಷಣವನ್ನು ನೋಡಲು ನಾನು ಕಾಯುತ್ತಿದ್ದೇನೆ. ಜಾಗತಿಕ ತಾಪಮಾನ ನಿಯಂತ್ರಣದ ಕುರಿತಾಗಿಯೂ ಭಾರತ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಪ್ರೊಫೈಲ್ ಫೋಟೋದಲ್ಲಿ ತಿರಂಗಾ ರಾರಾಜಿಸಲಿ – ಭಾರತೀಯರಿಗೆ ಪ್ರಧಾನಿ ಮೋದಿ ಕರೆ
ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದ ದೆಹಲಿ ಸೇವಾ ಮಸೂದೆ, ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ, ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಮಸೂದೆ ಮತ್ತು ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅನುಮೋದನೆ ನೀಡಿದ್ದು ಹೊಸ ಕಾನೂನುಗಳಾಗಿ ಮಾರ್ಪಟ್ಟಿವೆ.
ದೆಹಲಿ ಸೇವಾ ಕಾಯ್ದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ಬಳಿಕ ಆಪ್‌ಗೆ ಅತಿದೊಡ್ಡ ಹಿನ್ನಡೆಯಾಗಿದೆ. ಲೋಕಸಭೆಯಲ್ಲಿ (Parliament) ಬೆಂಬಲ ಇಲ್ಲದ ಹಿನ್ನೆಲೆ ರಾಜ್ಯಸಭೆಯಲ್ಲಿ ಇದನ್ನ ತಡೆಯಲು ಆಪ್ ಸರ್ಕಾರ ಬಹಳಷ್ಟು ಪ್ರಯತ್ನಿಸಿತ್ತು, ವಿರೋಧ ಪಕ್ಷಗಳ ವಿಶ್ವಾಸ ಗಳಿಸುವ ಪ್ರಯತ್ನ ಮಾಡಿತ್ತು. ಆದಾಗ್ಯೂ ಮಸೂದೆಯ ಪರ 131 ಸದಸ್ಯರು ಬೆಂಬಲ ನೀಡಿದರು, ವಿರುದ್ಧವಾಗಿ 102 ಸಂಸದರು ಮತ ಚಲಾಯಿಸಿದ್ದರು. ಇದನ್ನೂ ಓದಿ: ನನಗೆ ಸದ್ಯ ಮುಸ್ಲಿಂ ಮತಗಳು ಬೇಡ: 15 ವರ್ಷದ ನಂತ್ರ ಬೇಕು ಎಂದು ಅಸ್ಸಾಂ ಸಿಎಂ ಹೇಳಿದ್ದೇಕೆ?
ರಾಷ್ಟ್ರ ರಾಜಧಾನಿಯ ಅಧಿಕಾರಿಗಳ ಅಮಾನತು ಮತ್ತು ವಿಚಾರಣೆಗಳಂತಹ ಕ್ರಮಗಳು ಕೇಂದ್ರದ ನಿಯಂತ್ರಣದಲ್ಲಿರುತ್ತವೆ ಎಂದು ಈ ಕಾನೂನು ಪ್ರಸ್ತಾಪಿಸುತ್ತದೆ. ದೆಹಲಿಯಲ್ಲಿ ಆಡಳಿತ ಅಧಿಕಾರಗಳ ಮೇಲೆ ನಿಯಂತ್ರಣ ಹೊಂದಲು ಪ್ರಯತ್ನಿಸಿದ್ದ ಆಪ್ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿತ್ತು. ಪ್ರಕರಣದ ಸುಧೀರ್ಘ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಚುನಾಯಿತ ಸರ್ಕಾರಕ್ಕೆ ಆಡಳಿತ ಮೇಲೆ ಅಧಿಕಾರ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದ ಕೋರ್ಟ್, ಕಾನೂನು ಸುವ್ಯವಸ್ಥೆ ಮತ್ತು ಭೂಮಿಯನ್ನ ಹೊರತುಪಡಿಸಿ ಎಲ್ಲ ಆಡಳಿತದ ಮೇಲೆ ನಿಯಂತ್ರಣ ಸಾಧಿಸಲು ಅಧಿಕಾರ ನೀಡಿತ್ತು. ಇದನ್ನೂ ಓದಿ: ಅಪ್ರಾಪ್ತೆಯರ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ, ಗ್ಯಾಂಗ್ ರೇಪ್‌ಗೆ 20 ವರ್ಷ ಜೈಲು – ಲೋಕಸಭೆಯಲ್ಲಿ 3 ಮಸೂದೆ ಮಂಡಿಸಿದ ಅಮಿತ್ ಶಾ
ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಮೋದಿ (Narendra Modi) ಸರ್ಕಾರ ಸುಗ್ರಿವಾಜ್ಞೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಮಸೂದೆಯನ್ನ ಸಂಸತ್ ನಲ್ಲಿ ಇಡಲಾಗಿತ್ತು. ಮಣಿಪುರ ಸಂಘರ್ಷ ಮೇಲೆ ವಿಪಕ್ಷಗಳ ಗದ್ದಲದ ನಡುವೆ ಈ ಬಿಲ್ ಅನ್ನು ಪಾಸ್ ಮಾಡಿಕೊಳ್ಳುವಲ್ಲಿಯೂ ಕೇಂದ್ರ ಸರ್ಕಾರ ಯಶಸ್ವಿಯಾಗಿದ್ದು, ಮತ್ತೆ ದೆಹಲಿ ಆಡಳಿತದ ಮೇಲೆ ನಿಯಂತ್ರಣ ಸಾಧಿಸಿದೆ. ಇದನ್ನೂ ಓದಿ: ಪಾಕ್, ಚೀನಾಕ್ಕೆ ಠಕ್ಕರ್ – ಶ್ರೀನಗರದಲ್ಲಿ ಮೇಲ್ದರ್ಜೆಗೆರಿಸಿದ MiG- 29 ಯುದ್ಧ ವಿಮಾನ ನಿಯೋಜನೆ
ನಿಯಮ ಉಲ್ಲಂಘಿಸಿದ್ರೆ 250 ಕೋಟಿ ದಂಡ:
ವೈಯಕ್ತಿಕ ಡೇಟಾ ಸಂರಕ್ಷಣಾ ಕಾನೂನು ನಾಗರಿಕರ ಡಿಜಿಟಲ್ ಗೌಪ್ಯತೆ ಕಾಪಾಡುವ ದೇಶದ ಮೊದಲ ಕಾನೂನು ಇದಾಗಿದೆ. ಖಾಸಗಿ ಸಂಸ್ಥೆಗಳು ಮತ್ತು ಸರ್ಕಾರವು ನಾಗರಿಕರ ಡೇಟಾ ಬಳಕೆಗೆ ಮಾರ್ಗಸೂಚಿಗಳನ್ನ ಹೊಂದಿಸುವ ಗುರಿಯನ್ನ ಹೊಂದಿದೆ. ವೈಯಕ್ತಿಕ ದತ್ತಾಂಶಗಳ ರಕ್ಷಣೆಯ ನಿಯಮಗಳನ್ನು ಉಲ್ಲಂಘಿಸಿದರೆ ಅಥವಾ ಮಾಹಿತಿ ಕಾಪಾಡುವಲ್ಲಿ ವಿಫಲರಾದರೆ ಕಂಪನಿಗಳು ದಂಡ ತೆರಬೇಕಾಗುತ್ತದೆ. ವಿವಿಧ ಲೋಪಗಳಿಗೆ 50 ಕೋಟಿಯಿಂದ 250 ಕೋಟಿ ರೂ.ವರೆಗೂ ದಂಡ ವಿಧಿಸಬಹುದು. ಡೇಟಾ ಉಲ್ಲಂಘನೆಗಾಗಿ ಎರಡಕ್ಕಿಂತ ಹೆಚ್ಚು ದಂಡದ ಪ್ರಕರಣಗಳ ನಂತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನ ನಿರ್ಬಂಧಿಸುವ ಅಧಿಕಾರವನ್ನೂ ಸರ್ಕಾರಕ್ಕೆ ನೀಡಲಿದೆ.
ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಹೊಸ ಕಾನೂನು, ಶಾಲಾ–ಕಾಲೇಜು ಪ್ರವೇಶಕ್ಕೆ, ಚಾಲನಾ ಪರವಾನಗಿ ಪಡೆಯಲು, ಸರ್ಕಾರಿ ನೌಕರಿಯ ನೇಮಕಾತಿಗೆ, ಮತದಾರರ ಪಟ್ಟಿ ಸಿದ್ಧಪಡಿಸಲು, ಆಧಾರ್ ಸಂಖ್ಯೆ ನೀಡಲು ಹಾಗೂ ವಿವಾಹ ನೋಂದಣಿ ಸಂದರ್ಭದಲ್ಲಿ ಜನನ ಪ್ರಮಾಣ ಪತ್ರವನ್ನ ಏಕೈಕ ದಾಖಲೆಯಾಗಿ ಬಳಸಲು ಈ ತಿದ್ದುಪಡಿ ಅವಕಾಶ ಮಾಡಿಕೊಡಲಿದೆ. ಕಾಯ್ದೆ ಪರಿಣಾಮವಾಗಿ ಜನನ ಮತ್ತು ಮರಣಗಳ ಕುರಿತು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ದತ್ತಾಂಶ ಸಂಗ್ರಹವಾಗಲಿದೆ. ಇದರ ಆಧಾರದಲ್ಲಿ ನಾಗರಿಕ ಸೇವೆ, ಸಾಮಾಜಿಕ ಸವಲತ್ತು, ಡಿಜಿಟಲ್ ನೋಂದಣಿಯ ಸಮರ್ಪಕ, ಪಾರದರ್ಶಕ ಜಾರಿ ಸಾಧ್ಯವಾಗಲಿದೆ.
ಜನ್ ವಿಶ್ವಾಸ್ ಕಾನೂನು ದಂಡಗಳನ್ನು ಪೆನಾಲ್ಟಿಗಳಾಗಿ ಪರಿವರ್ತಿಸುತ್ತದೆ. ಅಂದ್ರೆ ಶಿಕ್ಷೆಗಳನ್ನ ನಿರ್ವಹಿಸಲು ನ್ಯಾಯಾಲಯದ ಪ್ರಾಸಿಕ್ಯೂಷನ್ ಅಗತ್ಯವಿಲ್ಲ. ಇದು ಅನೇಕ ಅಪರಾಧಗಳಿಗೆ ಜೈಲು ಶಿಕ್ಷೆಯನ್ನು ತೆಗೆದುಹಾಕಿದೆ. ಅಲ್ಲದೇ ಪೋಸ್ಟ್ ಆಫೀಸ್ ಆಕ್ಟ್-1898ರ ಅಡಿಯಲ್ಲಿ ಎಲ್ಲಾ ಅಪರಾಧಗಳನ್ನ ತೆಗೆದುಹಾಕಲಾಗುತ್ತಿದೆ. ಯಾವುದೇ ಔಷಧಿ ಖರೀದಿಸಿದಾಗ, ಅದು ಕೆಲಸ ಮಾಡುತ್ತದೆ ಮತ್ತು ನಮಗೆ ಹಾನಿ ಮಾಡುವುದಿಲ್ಲ ಎಂದು ಸರ್ಕಾರವು ಪರಿಶೀಲಿಸಿದೆ ಎಂದು ನಾವು ಭಾವಿಸುತ್ತೇವೆ. ಆದರೆ ಪ್ರಾಸ್ತಾವಿಕ ತಿದ್ದುಪಡಿಗಳು ಗುಣಮಟ್ಟವಿಲ್ಲದ ಔಷಧಿಗಳಿಗೆ ಅವಕಾಶ ನೀಡುವುದರ ಜೊತೆಗೆ ಅಡ್ಡಪರಿಣಾಮಗಳಿಗೆ ಶಿಕ್ಷೆ ಕಡಿಮೆ ಮಾಡುತ್ತದೆ. ಇದು ದೊಡ್ಡ ಉದ್ಯಮಿಗಳಿಗೆ ಪ್ರಯೋಜನ ನೀಡುತ್ತದೆ ಆದರೆ ನಮ್ಮೆಲ್ಲರಿಗೂ ಹಾನಿ ಮಾಡುತ್ತದೆ. ಇದು ಅತಿ ಅಪಾಯಕಾರಿ ಕಾನೂನು ಎಂದು ಹಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು.
– ತಮಿಳುನಾಡಲ್ಲಿ ಆಸ್ಕರ್ ವಿಜೇತ ಬೊಮ್ಮ, ಬೆಳ್ಳಿ ದಂಪತಿ ಭೇಟಿ
ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಇಂದು (ಶನಿವಾರ) ಮೈಸೂರಿಗೆ (Mysuru) ಭೇಟಿ ನೀಡಲಿದ್ದು, ವಿಶೇಷ ವಿಮಾನದ ಮೂಲಕ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
ಬಳಿಕ ಮೈಸೂರಿನಿಂದ ಹೆಲಿಕಾಪ್ಟರ್ ಮೂಲಕ ತಮಿಳುನಾಡಿನ (Tamil Nadu) ಮಧು ಮಲೈ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಲಿದ್ದು, ಆಸ್ಕರ್ ಪ್ರಶಸ್ತಿ ವಿಜೇತ ಕಾವಾಡಿಗ ದಂಪತಿ ಬೊಮ್ಮ, ಬೆಳ್ಳಿ ಜೊತೆ ಕಾವಾಡಿಗರು, ಮಾವುತರ ಜೊತೆ ಸಂವಾದ ನಡೆಸಲಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು ದೇವೀರಮ್ಮ ದೇವಾಲಯಕ್ಕೆ ಸ್ಕರ್ಟ್, ಮಿಡಿ, ಪ್ಯಾಂಟ್ ಹಾಕ್ಕೊಂಡು ಬರುವಂತಿಲ್ಲ
ನವದೆಹಲಿ: ಸಂಘರ್ಷ ಪೀಡಿತ ಮಣಿಪುರ (Manipur) ರಾಜ್ಯವನ್ನು ಸಹಜ ಸ್ಥಿತಿಗೆ ತರಲು ಮಧ್ಯಸ್ಥಿಕೆ ವಹಿಸುವಂತೆ ವಿಪಕ್ಷಗಳ ಬಣ INDIA ಒಕ್ಕೂಟದ ನಾಯಕರು ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಮಣಿಪುರದ ಪರಿಸ್ಥಿತಿಯು ಕಳೆದ ಕೆಲವು ವಾರಗಳಲ್ಲಿ ನಿರ್ಣಾಯಕ ಹಂತವನ್ನು ತಲುಪಿದೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ಆಘಾತಕಾರಿ ವೈರಲ್ ವೀಡಿಯೋ ರಾಷ್ಟ್ರವನ್ನು ಆಘಾತಕ್ಕೆ ತಳ್ಳಿದೆ. ರಾಜ್ಯ ಆಡಳಿತ ಮತ್ತು ಪೊಲೀಸರು ಈ ವಿಷಯವನ್ನು ತ್ವರಿತವಾಗಿ ಪರಿಹರಿಸಲು ವಿಫಲರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆರೋಪಿಯನ್ನು ವಿಚಾರಣೆಗೊಳಪಡಿಸಿ ಬಂಧಿಸಲು ಎರಡು ತಿಂಗಳ ಕಾಲ ವಿಳಂಬ ಮಾಡಿರುವುದು ಸಮಸ್ಯೆಯ ತೀವ್ರತೆ ಎಷ್ಟಿದೆ ಎಂಬುದನ್ನು ತೋರಿಸುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಯಾವುದೇ ವಿಳಂಬವಿಲ್ಲದೆ ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆ ಸ್ಥಾಪಿಸಲು ನೀವು ತುರ್ತಾಗಿ ಮಧ್ಯಸ್ಥಿಕೆ ವಹಿಸಬೇಕೆಂದು ವಿನಂತಿಸುತ್ತೇವೆ. ಕಳೆದ 92 ದಿನಗಳ ವಿನಾಶಕ್ಕೆ ಉತ್ತರದಾಯಿತ್ವ ಇರಬೇಕು. ಸಂತ್ರಸ್ತ ಸಮುದಾಯಗಳಿಗೆ ನ್ಯಾಯ ಒದಗಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡೂ ಬದ್ಧರಾಗಬೇಕು. ಮಣಿಪುರದ ಚಾಲ್ತಿಯಲ್ಲಿರುವ ಪರಿಸ್ಥಿತಿಯ ಬಗ್ಗೆ ಸಂಸತ್ತಿನಲ್ಲಿ ತುರ್ತಾಗಿ ಪ್ರಸ್ತಾಪಿಸಲು ಪ್ರಧಾನ ಮಂತ್ರಿಯ ಮೇಲೆ ಒತ್ತಡ ಹೇರಲು ನಾವು ನಿಮ್ಮನ್ನು ಕೋರುತ್ತೇವೆ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಕೇಸ್ – ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ?
ವಿಪಕ್ಷಗಳ ಒಕ್ಕೂಟದ ಸಂಸದರ ನಿಯೋಗವು ಮಣಿಪುರಕ್ಕೆ ಎರಡು ದಿನಗಳ ಭೇಟಿ ಕೈಗೊಂಡಿದ್ದರು. ಬಿಷ್ಣುಪುರ ಜಿಲ್ಲೆಯ ಇಂಫಾಲ್, ಮೊಯಿರಾಂಗ್, ಚುರಾಚಂದ್‌ಪುರ ಸೇರಿ ಹಲವಾರು ಶಿಬಿರಗಳಿಗೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದ್ದರು. ಜನಾಂಗೀಯ ಘರ್ಷಣೆಯಿಂದ ಸ್ಥಳಾಂತರಗೊಂಡ ಸ್ಥಳೀಯರ ಜೊತೆ ಸಂವಾದ ಕೂಡ ನಡೆಸಿದ್ದರು.