Tag: Droupadi Murmu

  • ರಾಷ್ಟ್ರಪತಿಗೆ ತುಚ್ಛವಾಗಿ ಸಂಬೋಧಿಸಿದ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ವಜಾ ಮಾಡಿ: ಹೆಚ್‍ಡಿಕೆ ಆಗ್ರಹ

    ರಾಷ್ಟ್ರಪತಿಗೆ ತುಚ್ಛವಾಗಿ ಸಂಬೋಧಿಸಿದ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ವಜಾ ಮಾಡಿ: ಹೆಚ್‍ಡಿಕೆ ಆಗ್ರಹ

    ಬೆಂಗಳೂರು: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರನ್ನು ಏಕವಚನದಲ್ಲಿ (ಆ ಪದವನ್ನು ಬರೆಯಲಾರೆ) ತುಚ್ಛವಾಗಿ ಸಂಬೋಧಿಸಿದ ಕೀಳು, ವಿಕೃತ, ಹೀನ ನಾಲಗೆಯ ಸಿದ್ದರಾಮಯ್ಯ (Siddaramaiah) ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ರಾಜ್ಯಪಾಲರು ಕೂಡಲೇ ವಜಾ ಮಾಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಆಗ್ರಹಿಸಿದ್ದಾರೆ.

    ಎಕ್ಸ್‌ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ಶನಿವಾರ ಚಾಮರಾಜನಗರದಲ್ಲಿ ಇದೇ ಸಿದ್ದರಾಮಯ್ಯನವರ ಸುಪುತ್ರ ಯತೀಂದ್ರ ಭಾಷಣ ಮಾಡುತ್ತಿದ್ದಾಗ ಯಾರೋ ಒಬ್ಬರು ಏಕವಚನದಲ್ಲಿ ಪ್ರಶ್ನಿಸಿದರೆಂಬ ಕಾರಣಕ್ಕೆ ಪೊಲೀಸರು ಆತನನ್ನು ಅಟ್ಟಾಡಿಸಿಕೊಂಡು ಹೋಗಿ ಬಂಧಿಸಿದ್ದಾರೆ. ಅಲ್ಲದೇ ದರದರನೇ ಎಳೆದುಕೊಂಡು ಹೋದರು. ಹಾಗಿದ್ದರೆ, ರಾಷ್ಟ್ರಪತಿಗಳನ್ನೇ ಏಕವಚನದಲ್ಲಿ ಸಂಬೋಧಿಸಿದ ಈ ಮುಖ್ಯಮಂತ್ರಿಗೇನು ಶಿಕ್ಷೆ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಹೆಚ್‍ಡಿಕೆ ಸಹವಾಸ ಮಾಡಿದವರು ಉದ್ಧಾರ ಆದ ಇತಿಹಾಸವಿಲ್ಲ: ವೀರಪ್ಪ ಮೊಯ್ಲಿ

    ಈ ಡೋಂಗಿ ಪ್ರಜಾಪ್ರಭುತ್ವವಾದಿಯ ಅಸಲಿ ಮುಖ ಕಳಚಿಬಿದ್ದಿದೆ. ಒಂದು ಕ್ಷಣವೂ ಮುಖ್ಯಮಂತ್ರಿ ಪದವಿಯಲ್ಲಿ ಇರಲು ಅವರು ಅರ್ಹರಲ್ಲ. ಕೂಡಲೇ ತಾವೆಸಗಿರುವ ಅಪಚಾರಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಅಥವಾ ಮಾನ್ಯ ರಾಜ್ಯಪಾಲರೇ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕಿತ್ತೆಸೆಯಬೇಕು. ಇದು ನನ್ನ ಆಗ್ರಹ ಎಂದು ಅವರು ಬರೆದುಕೊಂಡಿದ್ದಾರೆ.

    ಆಚಾರವಿಲ್ಲದ ನಾಲಿಗೆ, ನಿನ್ನ ನೀಚಬುದ್ಧಿಯ ಬಿಡು ನಾಲಿಗೆ ಎಂದು ದಾಸರು ಹೇಳಿದ್ದಾರೆ. ಸಿದ್ದರಾಮಯ್ಯಗೆ ಆಚಾರ ಹತ್ತಿರಕ್ಕೂ ಸುಳಿಯದ ವಿಚಾರ. ಶೋಷಿತ ಬುಡಕಟ್ಟು ಸಮುದಾಯದಿಂದ ಬಂದ ದೇಶದ ಮೊದಲ ರಾಷ್ಟ್ರಪತಿಗಳು, ಅದರಲ್ಲಿಯೂ ಮಹಿಳೆ, ಶೋಷಿತರ ಜಾಗೃತಿ ಸಮಾವೇಶದಲ್ಲೇ ಅವರಿಗೆ ಮುಖ್ಯಮಂತ್ರಿ ಅಪಮಾನ ಎಸಗಿದ್ದಾರೆ.

    ವಕೀಲರಂತೆ, ಸ್ವಯಂಘೋಷಿತ ಸಂವಿಧಾನ ತಜ್ಞರಂತೆ, ನಾಚಿಕೆಯಾಗಬೇಕು ಇವರಿಗೆ. ಸಾರ್ವಜನಿಕ ವೇದಿಕೆಯಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳನ್ನು ಮುಖ್ಯಮಂತ್ರಿಯೊಬ್ಬರು ಸಂಬೋಧಿಸುವ ರೀತಿಯೇ ಇದು. ಸಿದ್ದರಾಮಯ್ಯನವರ ನಡವಳಿಕೆ ಕರ್ನಾಟಕಕ್ಕೆ ಅಂಟಿದ ಅಳಿಸಲಾಗದ ಕಳಂಕ. ಅವರ ಈ ಕೀಳುಮಾತು ದೇಶಕ್ಕೆ, ಸಂವಿಧಾನಕ್ಕೆ ಆಗಿರುವ ಘೋರ ಅಪಚಾರ ಎಂದಿದ್ದಾರೆ.

    ಮಾತೆತ್ತಿದರೆ ಸಂವಿಧಾನ, ಪ್ರಜಾಪ್ರಭುತ್ವ, ವಕೀಲಿಕೆ ನಮ್ಮಪ್ಪನ ಮನೆ ಆಸ್ತಿ ಎಂದು ಜಾಗಟೆ ಹೊಡೆಯುವ ಸಿದ್ದರಾಮಯ್ಯನವರು ಮಾನ, ಮರ್ಯಾದೆ, ಮಹಿಳೆಯರ ಮೇಲೆ ಗೌರವ ಏನಾದರೂ ಇಟ್ಟುಕೊಂಡಿದ್ದರೆ, ಈ ಕ್ಷಣದಲ್ಲಿಯೇ ಸಿಎಂ ಕುರ್ಚಿಯನ್ನು ಖಾಲಿ ಮಾಡಬೇಕು ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರದ ಅಮಲಿನಲ್ಲಿ ಹೀಗೆಲ್ಲ ಆಡ್ತಿದೆ: ಹನುಮಧ್ವಜ ತೆರವು ವಿಚಾರಕ್ಕೆ ಬಿವೈವಿ ಕಿಡಿ

  • ಕರ್ತವ್ಯ ಪಥದಲ್ಲಿ ಮಿಂಚಿದ ʻರಾಕೆಟ್‌ ಗರ್ಲ್‌ʼ – ಚಂದ್ರಯಾನ-3 ಸಕ್ಸಸ್‌ನಲ್ಲಿ ಮಹಿಳಾ ವಿಜ್ಞಾನಿಗಳ ಕೊಡುಗೆ ನೆನಪಿಸಿದ ಟ್ಯಾಬ್ಲೊ

    ಕರ್ತವ್ಯ ಪಥದಲ್ಲಿ ಮಿಂಚಿದ ʻರಾಕೆಟ್‌ ಗರ್ಲ್‌ʼ – ಚಂದ್ರಯಾನ-3 ಸಕ್ಸಸ್‌ನಲ್ಲಿ ಮಹಿಳಾ ವಿಜ್ಞಾನಿಗಳ ಕೊಡುಗೆ ನೆನಪಿಸಿದ ಟ್ಯಾಬ್ಲೊ

    ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಚಂದ್ರಯಾನ-3 ಕಳೆದ ವರ್ಷ ಸಕ್ಸಸ್‌ ಕಂಡಿತು. ಇಸ್ರೋ ವಿಜ್ಞಾನಿಗಳ ಪರಿಶ್ರಮ, ಭಾರತೀಯರ ಪ್ರಾರ್ಥನೆ ಫಲವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ (Moon SouthPole) ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ಚಂದ್ರಯಾನ-3 (Chandrayaan-3) ವಿಕ್ರಮ್‌ ಲ್ಯಾಂಡರ್‌ (Vikram Lander) ಯಶಸ್ವಿಯಾಗಿ ಕಾಲಿಟ್ಟಿತು.

    ಇಸ್ರೋದ ಈ ಸಾಧನೆಯನ್ನು ಇಡೀ ದೇಶವೇ ಕೊಂಡಾಡಿತು. ವಿಶ್ವದ ಘಟಾನುಘಟಿ ದೇಶಗಳು ಭಾರತದ ತಾಂತ್ರಿಕತೆಗೆ ಹಾಗೂ ವಿಜ್ಞಾನಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದವು. ಇದೀಗ 2024ರ ಗಣರಾಜ್ಯೋತ್ಸವದಲ್ಲಿಯೂ ಇಸ್ರೋ ಸಾಧನೆಯನ್ನು ನೆನಪಿಸುವ ಕೆಲಸ ಮಾಡಲಾಯಿತು. ವಿಶೇಷವೆಂದರೆ ಈ ಬಾರಿ ʻನಾರಿ ಶಕ್ತಿʼಯನ್ನೇ ಕೇಂದ್ರೀಕರಿಸಿದ್ದರಿಂದ, ಚಂದ್ರಯಾನ-3 ಯಶಸ್ಸಿಗೆ ಕಾರಣರಾದ ಮಹಿಳಾ ವಿಜ್ಞಾನಿಗಳ ಸಾಧನೆಯನ್ನು ನೆನಪಿಸಿರುವುದು ವಿಶೇಷವಾಗಿತ್ತು. ಇದನ್ನೂ ಓದಿ: ಕರ್ತವ್ಯ ಪಥದಲ್ಲಿ ಆಕರ್ಷಕ ಪಥಸಂಚಲನ – ಮೇಳೈಸಿದ ಸಾಂಸ್ಕೃತಿಕ ವೈಭವ, ಸೇನಾ ಶಕ್ತಿಪ್ರದರ್ಶನವೇ ರೋಚಕ!

    ʻರಾಕೆಟ್‌ ಗರ್ಲ್‌ʼಎಂಬ ಪರಿಕಲ್ಪನೆಯೊಂದಿಗೆ ಇಸ್ರೋ ಸಂಸ್ಥೆ ನಿರ್ಮಿಸಲಾಗಿದ್ದ‌ ಸ್ತಬ್ಧಚಿತ್ರದಲ್ಲಿ ಚಂದ್ರಯಾನ-3ರ ಸಂಪೂರ್ಣ ಚಿತ್ರಣ ನಿರ್ಮಿಸಲಾಗಿತ್ತು. ಪ್ರಧಾನಿ ಅವರಿಂದ ನಾಮಾಂಕಿತವಾದ ʻಶಿವ ಶಕ್ತಿʼಕೇಂದ್ರಬಿಂದುವಿನ (ವಿಕ್ರಮ್‌ ಲ್ಯಾಂಡರ್‌ ಲ್ಯಾಂಡ್‌ ಆಗಿದ್ದ ಚಂದ್ರನ ಮೇಲ್ಮೈ ಸ್ಥಳ) ಮೇಲೆ ವಿಕ್ರಮ್‌ ಲ್ಯಾಂಡರ್‌, ಪ್ರಗ್ಯಾನ್‌ ರೋವರ್‌ ಕಾಲಿಟ್ಟ ಆ ಕ್ಷಣವನ್ನು ಮರುಸೃಷ್ಟಿಸಲಾಗಿತ್ತು. ಈ ಮೂಲಕ ಚಂದ್ರಯಾನ-3 ಸಕ್ಸಸ್‌ನಲ್ಲಿ ಮಹಿಳೆಯರ ಪಾತ್ರವೂ ಅಪಾರವಾಗಿದೆ ಎಂಬುದನ್ನು ಸಾಬೀತುಪಡಿಸಲಾಯಿತು.

    ಆದಿತ್ಯ ಎಲ್‌-1 ಸಾಧನೆ ಸ್ಮರಣೆ:
    110 ದಿನಗಳ ಸುದೀರ್ಘ ಪ್ರಯಾಣದ ಬಳಿಕ ಇಸ್ರೋ ಆದಿತ್ಯ ಎಲ್1 ನೌಕೆಯು ಭೂಮಿಯಿಂದ 15 ಲಕ್ಷ ಕಿಮೀ ಕ್ರಮಿಸಿ ಇದೇ ತಿಂಗಳಲ್ಲಿ ಅಂತಿಮ ಕಕ್ಷೆ ತಲುಪಿತು. ಇದರೊಂದಿಗೆ ಸೂರ್ಯನ ಅಧ್ಯಯನಕ್ಕೆ ಮುಂದಾಗಿರುವ ಇಸ್ರೋದ ಮತ್ತೊಂದು ಸಾಧನೆಯನ್ನು ಸ್ತಬ್ಧಚಿತ್ರದಲ್ಲಿ ನೆನಪಿಸಲಾಯಿತು. ಇದನ್ನೂ ಓದಿ: Republic Day: ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ಗೌರವ

    ಮಿಂಚಿದ ಬಾಲಕರಾಮ, ವಂದೇ ಭಾರತ್‌:
    ವಿಶ್ವದ ಗಮನ ಸೆಳೆದಿದ್ದ ಅಯೋಧ್ಯೆ ಬಾಲಕರಾಮ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ನಡೆದ ಸ್ತಬ್ಧಚಿತ್ರಗಳ ಮೆರವಣಿಗೆ ವೇಳೆಯೂ ಮಿಂಚಿದ್ದಾನೆ. ಗಣರಾಜ್ಯೋತ್ಸವದ ಸ್ತಬ್ಧಚಿತ್ರ ಪ್ರದರ್ಶನದ ವೇಳೆ ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರ ಕಲ್ಪನೆಯಲ್ಲಿ ಚಿತ್ರಿಸಿದ ಸ್ತಬ್ಧಚಿತ್ರ ಮೆರವಣಿಗೆಯು ಗಮನ ಸೆಳೆಯಿತು. ಹಾಗೆಯೇ, ತಮಿಳುನಾಡು, ಆಂಧ್ರಪ್ರದೇಶ ಸೇರಿ ದೇಶದ ಹಲವು ರಾಜ್ಯಗಳ ಸ್ತಬ್ಧಚಿತ್ರಗಳು ದೇಶದ ವೈವಿಧ್ಯತೆಯನ್ನು, ನಾರಿಶಕ್ತಿ, ದೇಶದ ರಕ್ಷಣಾ ಬಲ, ಕಲೆ, ಸಂಸ್ಕೃತಿಯನ್ನು ಸಾರಿದವು. ಇದನ್ನೂ ಓದಿ: 75ನೇ ಗಣರಾಜ್ಯೋತ್ಸವದ ಸಂಭ್ರಮ – ಕರ್ತವ್ಯ ಪಥದಲ್ಲಿ ಗಮನ ಸೆಳೆಯಲಿದೆ ʻನಾರಿ ಶಕ್ತಿʼ 

  • ಕರ್ತವ್ಯ ಪಥದ ಪರೇಡ್‍ನಲ್ಲಿ ಮಿಂಚಿದ ಬಾಲಕರಾಮ!

    ಕರ್ತವ್ಯ ಪಥದ ಪರೇಡ್‍ನಲ್ಲಿ ಮಿಂಚಿದ ಬಾಲಕರಾಮ!

    ನವದೆಹಲಿ: ಇತ್ತೀಚೆಗಷ್ಟೇ ವಿಶ್ವದ ಗಮನ ಸೆಳೆದಿದ್ದ ಬಾಲಕ ರಾಮ, ದೆಹಲಿಯ ಕರ್ತವ್ಯ ಪಥದ (Kartavya Path) ಗಣರಾಜ್ಯೋತ್ಸವ (Republic Day) ಪರೇಡ್‍ನಲ್ಲೂ ದೇಶದ ಗಮನ ಸೆಳೆದಿದ್ದಾರೆ.

    ಉತ್ತರ ಪ್ರದೇಶದದಿಂದ ಬಾಲಕ ರಾಮನ (Balak Ram) ಮೂರ್ತಿಯ ಸ್ತಬ್ಧಚಿತ್ರ ಕರ್ತವ್ಯ ಪಥದಲ್ಲಿ ಸೇರಿದ್ದ ಜನರ ಗಮನ ಸೆಳೆದಿದೆ. ಕೈಯಲ್ಲಿ ಬಿಲ್ಲು ಬಾಣ ಹಿಡಿದ ಬಾಲಕ ರಾಮ, ಸ್ತಬ್ಧಚಿತ್ರ ನೋಡಲು ಸೇರಿದ್ದ ಜನರನ್ನು ಮಂತ್ರಮುಗ್ಧಗೊಳಿಸಿದ್ದ. ಈ ಮೂಲಕ ಜನ ರಾಮನ ಮೇಲಿರಿಸಿದ ಭಕ್ತಿ ಕರ್ತವ್ಯ ಪಥದಲ್ಲೂ ಅನಾವರಣಗೊಂಡಿದೆ. ಇದನ್ನೂ ಓದಿ: 75th Republic Day: ಗಮನಸೆಳೆದ ಪ್ರಧಾನಿ ಮೋದಿ ಪೇಟ

    ಬಾಲಕ ರಾಮನೊಂದಿಗೆ ಉತ್ತರ ಪ್ರದೇಶದ ಮೆಟ್ರೋ ಕಾಮಗಾರಿ ಕುರಿತಾಗಿಯೂ ಅದೇ ಸ್ತಬ್ಧಚಿತ್ರದಲ್ಲಿ ತೋರಿಸಲಾಗಿದೆ. ಅಲ್ಲದೇ ಸೇನೆಯ ವಿಮಾನವನ್ನೂ ಸಹ ಇರಿಸಲಾಗಿದೆ. ಸ್ತಬ್ಧಚಿತ್ರದ ಸುತ್ತ ಕಲಾವಿದರ ಆಕರ್ಷಕ ನೃತ್ಯ ಪ್ರದರ್ಶನ ಸಹ ಮನಮೋಹಕವಾಗಿತ್ತು.

    ಇನ್ನೂ ಪರೇಡ್‍ನಲ್ಲಿ ಡಿಆರ್‍ಡಿಓ ಸ್ತಬ್ಧಚಿತ್ರ ಸೇರಿದಂತೆ ಚಂದ್ರಯಾನ-3, ಲಡಾಕ್‍ನಲ್ಲಿ ಭಾರತೀಯ ಸೇನೆ, ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಬಾಲ್ಯದ ಸ್ತಬ್ಧಚಿತ್ರ, ರಾಜಸ್ಥಾನದ ಮಹಿಳೆಯ ಕಲಾತ್ಮಕ ನೃತ್ಯ, ಛತ್ತೀಸ್‍ಗಢದ ಬಸ್ತಾರ್ ಮುರಿಯಾ ದರ್ಬಾರ್, ಒಡಿಶಾದ ವಿಕಾಸ್ ಭಾರತದ ಅಡಿ ಮಹಿಳಾ ಸಬಲೀಕರಣದ ಸ್ತಬ್ಧಚಿತ್ರ, ಹರಿಯಾಣದ ಬಾಲಕಿಯರ ಶಿಕ್ಷಣಕ್ಕೆ ಬೆಂಬಲ ಸೂಚಿಸುವ ಸ್ತಬ್ಧಚಿತ್ರ, ಸೇರಿದಂತೆ ಆಕರ್ಷಕ ಪಥಸಂಚಲನದಲ್ಲಿ ಭಾರತೀಯ ಸೇನಾಪಡೆಯ ಮೂರು ದಳಗಳ ಶಕ್ತಿ ಸಾಮಥ್ರ್ಯ ಪ್ರದರ್ಶಿಸುವ ಕೆಲಸ ನಡೆಯಿತು.

    ಪಥ ಸಂಚಲನದಲ್ಲಿ ಪಿನಾಕಾ ರಾಕೆಟ್ ಲಾಂಚರ್, ಶಸ್ತ್ರಾಸ್ತ್ರ ಪತ್ತೆಹಚ್ಚುವ ರಾಡರ್ ಸಿಸ್ಟಮ್, ಸರ್ವತ್ರ ಮೊಬೈಲ್ ಬ್ರಿಡ್ಜಿಂಗ್ ಸಿಸ್ಟಮ್, ಡ್ರೋನ್ ಜಾಮರ್ ಸಿಸ್ಟಮ್, ಪ್ರಚಂಡ, ರುದ್ರ ಹೆಲಿಕಾಪ್ಟರ್, ಸ್ವದೇಶಿ ನಿರ್ಮಿತ ಸೇನಾ ಶಸ್ತ್ರಾಸ್ತ್ರಗಳ ಪ್ರದರ್ಶನ, ಸಿಆರ್‍ಪಿಎಫ್ ಬ್ಯಾಂಡ್ ಪಥಸಂಚಲನ, ಬಿಎಸ್‍ಎಫ್ ಒಂಟೆ ರೆಜಿಮೆಂಟ್ ಪರೇಡ್ ನಡೆಸಿಕೊಡಲಾಯಿತು. ಜೊತೆಗೆ ಭಾರತೀಯ ವಾಯುಪಡೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಕೇಂದ್ರ ಸಶಸ್ತ್ರ ಪೆÇಲೀಸ್ ಪಡೆ ಸೇರಿದಂತೆ ವಿವಿಧ ಭದ್ರತಾ ಪಡೆಗಳು ಪರೇಡ್‍ನಲ್ಲಿ ಸೇನಾ ಸಾಮಥ್ರ್ಯ ಪ್ರದರ್ಶಿಸಿ ಗಮನ ಸೆಳೆದವು. ಇದನ್ನೂ ಓದಿ: ಕರ್ತವ್ಯ ಪಥದಲ್ಲಿ ಆಕರ್ಷಕ ಪಥಸಂಚಲನ – ಮೇಳೈಸಿದ ಸಾಂಸ್ಕೃತಿಕ ವೈಭವ, ಸೇನಾ ಶಕ್ತಿಪ್ರದರ್ಶನವೇ ರೋಚಕ!

  • ಕರ್ತವ್ಯ ಪಥದಲ್ಲಿ ಆಕರ್ಷಕ ಪಥಸಂಚಲನ – ಮೇಳೈಸಿದ ಸಾಂಸ್ಕೃತಿಕ ವೈಭವ, ಸೇನಾ ಶಕ್ತಿಪ್ರದರ್ಶನವೇ ರೋಚಕ!

    ಕರ್ತವ್ಯ ಪಥದಲ್ಲಿ ಆಕರ್ಷಕ ಪಥಸಂಚಲನ – ಮೇಳೈಸಿದ ಸಾಂಸ್ಕೃತಿಕ ವೈಭವ, ಸೇನಾ ಶಕ್ತಿಪ್ರದರ್ಶನವೇ ರೋಚಕ!

    ನವದೆಹಲಿ: ಭಾರತದಲ್ಲಿ 75ನೇ ವರ್ಷದ ಗಣರಾಜ್ಯೋತ್ಸವವನ್ನು (Republic Day) ಆಚರಿಸಲಾಗುತ್ತಿದೆ. ಭಾರತದಲ್ಲಿ ಸಂವಿಧಾನ ಅಳವಡಿಸಿಕೊಂಡ ದಿನವನ್ನು ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತದೆ. 75ನೇ ವರ್ಷದ ಆಚರಣೆಯನ್ನು ಮಹಿಳಾ ಕೇಂದ್ರಿತವಾಗಿ ರೂಪಿಸಲಾಗಿದ್ದು, ಈ ಬಾರಿಯ ಆಚರಣೆಯೂ ಹಲವು ವಿಶೇಷತೆಗಳಿಂದ ಕೂಡಿದೆ.

    ನಾರಿ ಶಕ್ತಿಯೇ (Nari Shakti) ಮೇಲುಗೈ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಪೊಲೀಸರು ಕರ್ತವ್ಯ ಪಥದಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದರು. ʻಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣʼ ವಸ್ತು ವಿಷಯ ಅಡಿಯಲ್ಲಿ 194 ಮಹಿಳಾ ಪೊಲೀಸರು ಪರೇಡ್ ನಡೆಸಿಕೊಟ್ಟರು. ಐಪಿಎಸ್ ಅಧಿಕಾರಿ ಶ್ವೇತಾ ಕೆ. ಸುಗತನ್ ಅವರು ಈ ಪಡೆಯನ್ನು ಮುನ್ನಡೆಸಿದರು. ಇದರೊಂದಿಗೆ 148 NCC ಬಾಲಕಿಯರು, 100 ಮಹಿಳಾ ಕಲಾವಿದರು ಭಾರತೀಯ ಸಂಗೀತ ವಾದ್ಯಗಳನ್ನು ನುಡಿಸಿ ದೇಶದ ಸಾಂಸ್ಕೃತಿಕತೆಯನ್ನು ಕಣ್ಣಿಗೆ ಕಟ್ಟಿಕೊಡುವಂತೆ ಮಾಡಿದರು. ಇನ್ನೂ ಆತ್ಮನಿರ್ಭರ್‌ ಪರಿಕಲ್ಪನೆಯಲ್ಲಿ ಮೂಡಿಬಂದ ಸ್ತಬ್ಧಚಿತ್ರ ʻನಾರಿ ಶಕ್ತಿʼಗೆ ಹೆಸರುವಾಸಿಯಾಗಿತ್ತು. ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ ಹಾಗೂ ಅಂತರಿಕ್ಷದಲ್ಲಿ ಮಹಿಳೆಯರ ಸಾಧನೆಗಳನ್ನು ತೋರಿಸಲಾಯಿತು. ಜೊತೆಗೆ ʻವಂದೇ ಭಾರತ್‌ʼ ನಾರಿಶಕ್ತಿ ತಂಡದ 1,500 ಮಹಿಳೆಯರು ಏಕಕಾಲಕ್ಕೆ ನೃತ್ಯಪ್ರದರ್ಶಿಸಿದರು.

    ನಂತರ 262 ಫೀಲ್ಡ್ ರೆಜಿಮೆಂಟ್‌ನ ಲೆಫ್ಟಿನೆಂಟ್ ಪ್ರಿಯಾಂಕಾ ಸೆವ್ದಾ ನೇತೃತ್ವದಲ್ಲಿ 1890 ರಾಕೆಟ್ ರೆಜಿಮೆಂಟ್‌ನಿಂದ ಫಿರಂಗಿ ರೆಜಿಮೆಂಟ್‌ನ ಪಿನಾಕಾ ತುಕಡಿ ಹಾಗೂ ಜೊತೆಗೆ 42 ಶಸ್ತ್ರಸಜ್ಜಿತ ರೆಜಿಮೆಂಟ್‌ನ ಲೆಫ್ಟಿನೆಂಟ್ ಫಯಾಜ್ ಸಿಂಗ್ ಧಿಲ್ಲೋನ್ ನೇತೃತ್ವದ ಟ್ಯಾಂಕ್ T-90 ಭೀಷ್ಮಾದ ತುಕಡಿ ಆಕರ್ಷಕ ಪಥಸಂಚಲನ ನಡೆಸಿಕೊಟ್ಟಿತು. ಇದನ್ನೂ ಓದಿ: 2030ರ ವೇಳೆಗೆ 30,000 ಭಾರತೀಯ ವಿದ್ಯಾರ್ಥಿಗಳನ್ನು ಫ್ರಾನ್ಸ್ ಸ್ವಾಗತಿಸಲಿದೆ: ಮ್ಯಾಕ್ರನ್

    ವಿಶೇಷತೆಗಳೇನು?
    ಆಕರ್ಷಕ ಪಥಸಂಚಲನದಲ್ಲಿ ಭಾರತೀಯ ಸೇನಾಪಡೆಯ ಮೂರು ದಳಗಳ ಶಕ್ತಿ ಸಾಮರ್ಥ್ಯ ಪ್ರದರ್ಶಿಸುವ ಕೆಲಸ ನಡೆಯಿತು. ಪಥ ಸಂಚಲನದಲ್ಲಿ ಪಿನಾಕಾ ರಾಕೆಟ್‌ ಲಾಂಚರ್‌, ಸ್ವಾತಿ – ಶಸ್ತ್ರಾಸ್ತ್ರ ಪತ್ತೆಹಚ್ಚುವ ರಾಡರ್‌ ಸಿಸ್ಟಮ್‌, ಸರ್ವತ್ರ ಮೊಬೈಲ್‌ ಬ್ರಿಡ್ಜಿಂಗ್‌ ಸಿಸ್ಟಮ್‌, ಡ್ರೋನ್‌ ಜಾಮರ್‌ ಸಿಸ್ಟಮ್‌, ಪ್ರಚಂಡ, ರುದ್ರ‌ ಹೆಲಿಕಾಪ್ಟರ್‌, ಸ್ವದೇಶಿ ನಿರ್ಮಿತ ಸೇನಾ ಶಸ್ತ್ರಾಸ್ತ್ರಗಳ ಪ್ರದರ್ಶನ, ಸಿಆರ್‌ಪಿಎಫ್‌ ಬ್ಯಾಂಡ್‌ ಪಥಸಂಚಲನ, ಬಿಎಸ್‌ಎಫ್‌ ಒಂಟೆ ರೆಜಿಮೆಂಟ್‌ ಪರೇಡ್‌ ನಡೆಸಿಕೊಡಲಾಯಿತು. ಜೊತೆಗೆ ಭಾರತೀಯ ವಾಯುಪಡೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸೇರಿದಂತೆ ವಿವಿಧ ಭದ್ರತಾ ಪಡೆಗಳು ಪರೇಡ್‌ನಲ್ಲಿ ಸೇನಾ ಸಾಮರ್ಥ್ಯ ಪ್ರದರ್ಶಿಸಿ ಗಮನ ಸೆಳೆದವು.

    ಸ್ತಬ್ಧ ಚಿತ್ರಗಳ ಪ್ರದರ್ಶನ:
    16 ರಾಜ್ಯಗಳು ಮತ್ತು ವಿವಿಧ ಸಚಿವಾಲಯಗಳು ಮತ್ತು ಸಂಸ್ಥೆಗಳು ತಯಾರಿಸಿರುವ ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಿತು. ಇದರೊಂದಿಗೆ ವಿವಿಧ ರಾಜ್ಯಗಳ ಜಾನಪದ ಕಲಾತಂಡಗಳು ಜಾನಪದ ನೃತ್ಯವನ್ನು ಪ್ರದರ್ಶನ ನಡೆಸಿಕೊಟ್ಟವು. ಇದನ್ನೂ ಓದಿ: Republic Day: ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ಗೌರವ

  • 75ನೇ ಗಣರಾಜ್ಯೋತ್ಸವದ ಸಂಭ್ರಮ – ಕರ್ತವ್ಯ ಪಥದಲ್ಲಿ ಗಮನ ಸೆಳೆಯಲಿದೆ ʻನಾರಿ ಶಕ್ತಿʼ

    75ನೇ ಗಣರಾಜ್ಯೋತ್ಸವದ ಸಂಭ್ರಮ – ಕರ್ತವ್ಯ ಪಥದಲ್ಲಿ ಗಮನ ಸೆಳೆಯಲಿದೆ ʻನಾರಿ ಶಕ್ತಿʼ

    ನವದೆಹಲಿ: 75ನೇ ಗಣರಾಜ್ಯೋತ್ಸವದ (Republic Day) ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ದೆಹಲಿಯಲ್ಲಿ ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರಗೀತೆಯೋಂದಿಗೆ ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ 21 ಸುತ್ತು ಕುಶಾಲ ತೋಪು ಸಿಡಿಸಿ ಗೌರವ ಸೂಚಿಸಲಾಯಿತು.

    ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ಅವರ ಸಮ್ಮುಖದಲ್ಲಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದ್ದಾರೆ. ಇದಾದ ಬಳಿಕ ಬೆಳಗ್ಗೆ 10.30ರಿಂದ ವಿಜಯ್‌ ಚೌಕ್‌ನಿಂದ ಕರ್ತವ್ಯ ಪಥದವರೆಗೆ ಪರೇಡ್‌ ನಡೆಯಲಿದೆ. ದೇಶದ ಹಲವು ರಾಜ್ಯಗಳಿಂದ ಆಗಮಿಸಿದ ಸ್ತಬ್ಧಚಿತ್ರಗಳ ಮೆರವಣಿಗೆ ಕೂಡ ನಡೆಯಲಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಹ ಪರೇಡ್‌ ಮೈದಾನಕ್ಕೆ ಆಗಮಿಸಿದ್ದು, ಕೆಲವೇ ಕ್ಷಣಗಳಲ್ಲಿ ಪರೇಡ್‌ ಆರಂಭವಾಗಲಿದೆ.

    ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಪರೇಡ್‌ ವೀಕ್ಷಣೆಗೆ 77 ಸಾವಿರ ಜನರಿಗೆ ಅವಕಾಶ ನೀಡಲಾಗಿದೆ. ಪರೇಡ್‌ ವೀಕ್ಷಿಸುವ 70 ಸಾವಿರಕ್ಕೂ ಹೆಚ್ಚು ಜನರಲ್ಲಿ 13, ಸಾವಿರ ಅತಿಥಿಗಳೂ ಇದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ವೈಮಾನಿಕ ಪ್ರದರ್ಶನಗಳನ್ನು ಹಮ್ಮಿಕೊಂಡಿದ್ದು, ಹವಾಮಾನ ಅಡೆತಡೆಯಾಗಬಾರದು ಎಂಬ ಕಾರಣಕ್ಕೆ 10:30ರ ವೇಳೆಗೆ ಪರೇಡ್‌ ಹಮ್ಮಿಕೊಳ್ಳಲಾಗಿದೆ. ಶಿಸ್ತು, ಸಮಯ, ಪರಿಪಾಲನೆಯೊಂದಿಗೆ ನಡೆಯುವ ಈ ಪರೇಡ್‌ ಸರಿಸುಮಾರು 90 ನಿಮಿಷಗಳ ವರೆಗೆ ನಡೆಯಲಿದೆ. ಇದನ್ನೂ ಓದಿ: Republic Day: ನುಡಿದಂತೆ ನಡೆದಿರುವ ಸರ್ಕಾರ 5 ಗ್ಯಾರಂಟಿ ಯಶಸ್ವಿಯಾಗಿ ಜಾರಿ ಮಾಡಿದೆ: ಗೆಹ್ಲೋಟ್

    ನಾರಿ ಶಕ್ತಿಯೇ ವಿಶೇಷ:
    ಈ ಬಾರಿ ವಿಶೇಷವಾಗಿ ಕಂಡುಬರುತ್ತಿರುವುದು ʻನಾರಿ ಶಕ್ತಿ ಪ್ರದರ್ಶನʼ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಪೊಲೀಸರು ಕರ್ತವ್ಯ ಪಥದಲ್ಲಿ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ. ʻಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣʼ ವಸ್ತು ವಿಷಯ ಅಡಿಯಲ್ಲಿ 194 ಮಹಿಳಾ ಪೊಲೀಸರು ಪರೇಡ್‌ ನಡೆಸಿಕೊಡಲಿದ್ದಾರೆ. ಐಪಿಎಸ್‌ ಅಧಿಕಾರಿ ಶ್ವೇತಾ ಕೆ. ಸುಗತನ್‌ ಅವರು ಈ ಪಡೆಯನ್ನು ಮುನ್ನಡೆಸಲಿದ್ದಾರೆ.

    ಜೊತೆಗೆ 100 ಮಹಿಳಾ ಕಲಾವಿದರು ಭಾರತೀಯ ಸಂಗೀತ ವಾದ್ಯಗಳನ್ನು ನುಡಿಸುವ ಮೆರೆವಣಿಗೆಯನ್ನು ನಡೆಸಿಕೊಡಲಿದ್ದಾರೆ. ಸಂಖ್, ನಾದಸ್ವರ, ನಗದ ಇತ್ಯಾದಿ ಸಂಗೀತದೊಂದಿಗೆ ಮೆರವಣಿಗೆ ಆರಂಭವಾಗಲಿದೆ. ಇದರೊಂದಿಗೆ ಭಾರತೀಯ ವಾಯುಪಡೆಯು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸೇರಿದಂತೆ ವಿವಿಧ ಭದ್ರತಾ ಪಡೆಗಳು ಪರೇಡ್‌ನಲ್ಲಿ ಗಮನ ಸೆಳೆಯಲಿವೆ. ಇದನ್ನೂ ಓದಿ: ದೇಶಾದ್ಯಂತ 75ನೇ ಗಣರಾಜ್ಯೋತ್ಸವ ಸಂಭ್ರಮ – ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಮೋದಿ ಅಭಿನಂದನೆ

  • ದೇಶಾದ್ಯಂತ 75ನೇ ಗಣರಾಜ್ಯೋತ್ಸವ ಸಂಭ್ರಮ – ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಮೋದಿ ಅಭಿನಂದನೆ

    ದೇಶಾದ್ಯಂತ 75ನೇ ಗಣರಾಜ್ಯೋತ್ಸವ ಸಂಭ್ರಮ – ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಮೋದಿ ಅಭಿನಂದನೆ

    ನವದೆಹಲಿ: ದೇಶಾದ್ಯಂತ 75ನೇ ಗಣರಾಜ್ಯೋತ್ಸವದ (75th Republic Day) ಸಂಭ್ರಮ ಮನೆ ಮಾಡಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಧ್ವಜಾರೋಹಣ (Flag hoisting) ನೆರವೇರಿದ್ದು, ಪರೇಡ್‌ಗಳಲ್ಲಿ ವಿಶೇಷ ಪ್ರದರ್ಶನಗಳು ಕಂಡುಬಂದಿವೆ.

    ಈ ಸಂದರ್ಭದಲ್ಲಿ 2024ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ (Padma Awards 2024) ಆಯ್ಕೆಯಾಗಿರುವ 132 ಸಾಧಕರಿಗೂ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನೂ ತಿಳಿಸಿದ್ದಾರೆ. ಕರ್ನಾಟಕದ 9 ಮಂದಿ ಸೇರಿ ಒಟ್ಟು 132 ಮಂದಿಗೆ ಪ್ರಶಸ್ತಿ ಲಭಿಸಿದ್ದು, ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: 75th Republic Day: ದೆಹಲಿಯಲ್ಲಿ ನಡೆಯುವ ಪಥಸಂಚಲನಕ್ಕೆ ಬೆಳಗಾವಿ ಮೂಲದ ಯೋಧ ಆಯ್ಕೆ

    ಈ ವ್ಯಕ್ತಿಗಳು ಅದ್ಭುತ ಉದಾಹರಣೆಗಳನ್ನ ಸೃಷ್ಟಿಸಿದ್ದಾರೆ. ಮಾತ್ರವಲ್ಲದೇ ತಮ್ಮ ಸೇವೆಯಿಂದ ರಾಷ್ಟ್ರದ ಘನತೆಯನ್ನ ಹೆಚ್ಚಿದ್ದಾರೆ. ವಿವಿಧ ಕ್ಷೇತ್ರಗಳಿಗೆ ವಿಶಿಷ್ಟ ಕೊಡುಗೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ಬದಲಾವಣೆ ತರುತ್ತಿರುವ ಸಾಧಕರಿಗೆ ನಾನು ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಡ್ರೋಣ್ ಔಟ್: ಬಚಾವ್ ಮಾಡಿದ ಸುದೀಪ್

    ‘ಪದ್ಮ’ ಪ್ರಶಸ್ತಿ ಭಾಜನರಾದ 9 ಕನ್ನಡಿಗರು
    ಪದ್ಮಭೂಷಣ ಪ್ರಶಸ್ತಿಗೆ ಕನ್ನಡಿಗರಾದ ಸೀತಾರಾಮ್‌ ಜಿಂದಾಲ್‌ (ವ್ಯಾಪಾರ ಮತ್ತು ಕೈಗಾರಿಕೆ) ಭಾಜನರಾಗಿದ್ದಾರೆ. ಪದ್ಮಶ್ರೀ ಪ್ರಶಸ್ತಿಗೆ ರೋಹನ್‌ ಮಾಚಂಡ ಬೋಪಣ್ಣ (ಕ್ರೀಡೆ), ಪ್ರೇಮಾ ಧನರಾಜ್‌ (ವೈದ್ಯಕೀಯ), ಅನುಪಮಾ ಹೊಸಕೆರೆ (ಕಲೆ), ಶ್ರೀಧರ್‌ ಮಕಮ್‌ ಕೃಷ್ಣಮೂರ್ತಿ (ಸಾಹಿತ್ಯ ಮತ್ತು ಶಿಕ್ಷಣ), ಕೆ.ಎಸ್‌.ರಾಜಣ್ಣ (ಸಾಮಾಜಿಕ ಕಾರ್ಯ), ಚಂದ್ರಶೇಖರ್‌ ಚನ್ನಪಟ್ಟಣ ರಾಜಣ್ಣಾಚಾರ್‌ (ವೈದ್ಯಕೀಯ), ಸೋಮಣ್ಣ (ಸಾಮಾಜಿಕ ಕಾರ್ಯ), ಶಶಿ ಸೋನಿ (ವ್ಯಾಪಾರ ಮತ್ತು ಕೈಗಾರಿಕೆ).

    ಪದ್ಮ ವಿಭೂಷಣ ಪುರಸ್ಕೃತರು

    ಪದ್ಮಭೂಷಣ ಪುರಸ್ಕೃತರು

    ಪದ್ಮಶ್ರೀ ಪುರಸ್ಕೃತರು

  • Republic Day 2024: ಈ ಬಾರಿಯ ವಿಶೇಷತೆ ಏನು ಗೊತ್ತಾ?

    Republic Day 2024: ಈ ಬಾರಿಯ ವಿಶೇಷತೆ ಏನು ಗೊತ್ತಾ?

    ನವದೆಹಲಿ: ಭಾರತದಲ್ಲಿ ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯ ಸ್ಥಾಪನೆಗೋಸ್ಕರ ಅವಿರತವಾಗಿ ಶ್ರಮಿಸಬೇಕೆಂದು ಅಂದಿನ ರಾಷ್ಟ್ರೀಯ ಕಾಂಗ್ರೆಸ್ 1929ರ ಜನವರಿ 26ರಂದು ಪ್ರತಿಜ್ಞೆ ಮಾಡಿತ್ತು. 1950ರ ಜನವರಿ 26ರಂದು ಈ ಕನಸು ನನಸಾಯಿತು. ಈ ದಿನ ಭಾರತವು ಗಣರಾಜ್ಯವಾಗಿ ತನ್ನ ಆಡಳಿತಾತ್ಮಕ ವ್ಯವಸ್ಥೆಯನ್ನು ರೂಪಿಸಿಕೊಂಡಿತು.

    ಸಂವಿಧಾನದ ರಚನೆಗೆ 2 ವರ್ಷ, 11 ತಿಂಗಳು, 17 ದಿನಗಳು ಬೇಕಾಯಿತು. ಭಾರತದ ಸಂವಿಧಾನ ಸಂಪೂರ್ಣ ಲಿಖಿತವಾಗಿದ್ದು, ಅದರಲ್ಲಿ 22 ಅಧ್ಯಾಯಗಳು ಮತ್ತು 395 ಅನುಚ್ಛೇದಗಳಿವೆ. ಭಾರತದ ಆಡಳಿತ ವ್ಯವಸ್ಥೆಯಲ್ಲಿ ಸಂವಿಧಾನ ಪರಮೋಚ್ಛವಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂತೆಯೇ ಜನವರಿ 26ರ ದಿನವನ್ನು ಗಣರಾಜ್ಯ ದಿನವನ್ನಾಗಿ ದೇಶಾದ್ಯಂತ ಆಚರಿಸಲಾಗುತ್ತದೆ. ಭಾರತವು ತನ್ನ 75ನೇ ಗಣರಾಜ್ಯೋತ್ಸವವನ್ನು ಇಂದು ಆಚರಿಸಿಕೊಳ್ಳುತ್ತಿದೆ. ಗಣರಾಜ್ಯೋತ್ಸವ ಒಟ್ಟು ಮೂರು ದಿನಗಳ ಕಾಲ ನಡೆಯಲಿದ್ದು, ಜನವರಿ 29ರಂದು ಬೀಟಿಂಗ್ ರಿಟ್ರೀಟ್ ಸಮಾರಂಭದೊಂದಿಗೆ ಕೊನೆಗೊಳ್ಳುತ್ತದೆ.

    ಜ.26 ಅನ್ನು ಗಣರಾಜ್ಯ ದಿನ ಎಂದು ಏಕೆ ಗುರುತಿಸಲಾಗಿದೆ?
    ಭಾರತವು ಆಗಸ್ಟ್ 15, 1947 ರಂದು ಸ್ವಾತಂತ್ರ‍್ಯ ಗಳಿಸಿತು. ಸಂವಿಧಾನವನ್ನು ನವೆಂಬರ್ 26, 1949 ರಂದು ಸಂವಿಧಾನ ಸಭೆಯು ಅಂಗೀಕರಿಸಿತು ಮತ್ತು ಜನವರಿ 26, 1950 ರಂದು ಜಾರಿಗೆ ಬಂದಿತು. ಭಾರತದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಈ ದಿನದಂದು ರಾಷ್ಟ್ರಧ್ವಜವನ್ನು ಹಾರಿಸಿದರು. ಭಾರತದ ಗಣರಾಜ್ಯೋತ್ಸವ ಎಂದು ಗುರುತಿಸಲ್ಪಟ್ಟ ನಂತರ ಈ ದಿನವನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಲಾಯಿತು.

    ಗಣರಾಜ್ಯೋತ್ಸವ ಪರೇಡ್‌ನಲ್ಲಿ ಏನಾಗುತ್ತದೆ?
    ಪ್ರತಿ ವರ್ಷ, ದಿನವನ್ನು ಗುರುತಿಸುವ ಆಚರಣೆಗಳು ಅದ್ಭುತವಾದ ಮಿಲಿಟರಿ ಮತ್ತು ಸಾಂಸ್ಕೃತಿಕ ಪ್ರದರ್ಶನವನ್ನು ಒಳಗೊಂಡಿರುತ್ತವೆ. ನಮ್ಮ ಶ್ರೀಮಂತ ಸಾಂಸ್ಕೃತಿಕ ಮತ್ತು ಮಿಲಿಟರಿ ಪರಂಪರೆಯನ್ನು ಪ್ರದರ್ಶಿಸುವ ಭವ್ಯ ಮೆರವಣಿಗೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ಪ್ರದರ್ಶಿಸಲಾಗುತ್ತದೆ. ಇದರಲ್ಲಿ ಇತರ ದೇಶಗಳ ಗೌರವಾನ್ವಿತ ಗಣ್ಯರು, ಭಾರತೀಯ ರಾಜಕಾರಣಿಗಳು ಮತ್ತು ಸಾರ್ವಜನಿಕರು ಭಾಗವಹಿಸುತ್ತಾರೆ. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವರ್ಣರಂಜಿತ ಕೋಷ್ಟಕಗಳ ಮೂಲಕ ಇತರ ವಿಷಯಗಳ ಜೊತೆಗೆ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸುತ್ತವೆ. ಅಲ್ಲದೇ ವಿವಿಧ ರಾಜ್ಯಗಳ ಟ್ಯಾಬ್ಲೋ ಪ್ರದರ್ಶನ ನಡೆಯುತ್ತದೆ. ಕರ್ತವ್ಯ ಪಥದಲ್ಲಿ ಪಥ ಸಂಚಲನ ನಡೆಯಲಿದೆ.

    ಗಣರಾಜ್ಯೋತ್ಸವ 2024ರ ಮುಖ್ಯ ಅತಿಥಿ ಯಾರು?
    ಭಾರತದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಆಹ್ವಾನಿಸಲಾಗಿದ್ದು, ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಮ್ಯಾಕ್ರನ್ ಆಗಮಿಸಿದ್ದಾರೆ. ಕಳೆದ ವರ್ಷ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಮುಖ್ಯ ಅತಿಥಿಯಾಗಿದ್ದರು.

    ಈ ವರ್ಷದ ಮೆರವಣಿಗೆಯ ವಿಶೇಷತೆ ಏನು?
    ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಕ್ಷಣಾ ಪಡೆಗಳ ಮಹಿಳಾ ತುಕಡಿಗಳು ಪಥಸಂಚಲನ ನಡೆಸಿಕೊಡಲಿದ್ದಾರೆ.

    ಗಣರಾಜ್ಯೋತ್ಸವ 2024ರ ಥೀಮ್ ಏನು?
    2024ರ ಗಣರಾಜ್ಯೋತ್ಸವದ ಥೀಮ್ ‘ಭಾರತ – ಪ್ರಜಾಪ್ರಭುತ್ವದ ತಾಯಿ’ ಮತ್ತು “ವಿಕಸಿತ ಭಾರತ” (ಅಭಿವೃದ್ಧಿ ಹೊಂದಿದ ಭಾರತ) ಆಗಿದೆ.

    ಮೊದಲ ಗಣರಾಜ್ಯೋತ್ಸವದಲ್ಲಿ ಅತಿಥಿಯಾಗಿದ್ದವರು ಯಾರು?
    ಜನವರಿ 26, 1950 ರಂದು ನಡೆದ ಭಾರತದ ಮೊದಲ ಗಣರಾಜ್ಯೋತ್ಸವದ ಪರೇಡ್‌ನ ಮೊದಲ ಮುಖ್ಯ ಅತಿಥಿ ಇಂಡೋನೇಷಿಯಾದ ಅಧ್ಯಕ್ಷ ಸುಕರ್ನೊ ಆಗಿದ್ದರು.

    2024ರ ಗಣರಾಜ್ಯ ಪರೇಡ್ ಅನ್ನು ಆನ್‌ಲೈನ್ ಮತ್ತು ಟಿವಿಯಲ್ಲಿ ನೋಡುವುದು ಹೇಗೆ?
    ದೂರದರ್ಶನದ ಎಲ್ಲಾ ಚಾನೆಲ್‌ಗಳಲ್ಲಿ ಗಣರಾಜ್ಯೋತ್ಸವ ಪರೇಡ್ ಕಾಮೆಂಟರಿಯೊಂದಿಗೆ ಪ್ರಸಾರವಾಗಲಿದೆ. ನಿಮ್ಮ ಮೊಬೈಲ್, ಪಿಸಿ ಅಥವಾ ಸ್ಮಾರ್ಟ್ ಟಿವಿಯಲ್ಲಿ ಈವೆಂಟ್ ಅನ್ನು ಲೈವ್‌ಸ್ಟ್ರೀಮ್ ಮಾಡಲು ನೀವು ದೂರದರ್ಶನದ ಅಧಿಕೃತ ಯೂಟ್ಯೂಬ್ ಚಾನೆಲ್ ಅಥವಾ ಪ್ರೆಸ್ ಬ್ಯೂರೋ ಆಫ್ ಇಂಡಿಯಾವನ್ನು ಸಹ ಪರಿಶೀಲಿಸಬಹುದು.

  • ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯು ದೇಶಕ್ಕೆ ಐತಿಹಾಸಿಕ ಕ್ಷಣ: ದ್ರೌಪದಿ ಮುರ್ಮು

    ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯು ದೇಶಕ್ಕೆ ಐತಿಹಾಸಿಕ ಕ್ಷಣ: ದ್ರೌಪದಿ ಮುರ್ಮು

    – 75ನೇ ಗಣರಾಜ್ಯೋತ್ಸವಕ್ಕೂ ಮುನ್ನ ದಿನ ದೇಶವನ್ನುದ್ದೇಶಿಸಿ ರಾಷ್ಟ್ರಪತಿ ಮಾತು

    ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 75 ನೇ ಗಣರಾಜ್ಯೋತ್ಸವದ ಮುನ್ನಾದಿನದಂದು (ಬುಧವಾರ) ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇದು ಯುಗ ಬದಲಾವಣೆಯ ಅವಧಿಯಾಗಿದೆ ಆಶಯ ವ್ಯಕ್ತಪಡಿಸಿದ್ದಾರೆ.

    ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ರಾಷ್ಟ್ರಪತಿ ಸ್ಮರಿಸಿದ್ದಾರೆ. ಅಲ್ಲದೇ ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯು ದೇಶಕ್ಕೆ ಐತಿಹಾಸಿಕ ಮತ್ತು ಮಹತ್ವದ ಕ್ಷಣವಾಗಿದೆ ಎಂದು ಬಣ್ಣಿಸಿದ್ದಾರೆ.

    ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ಭವಿಷ್ಯದ ಇತಿಹಾಸಕಾರರು ಭಾರತದ ನಾಗರಿಕತೆಯ ಪರಂಪರೆಯ ಮರು ಅನ್ವೇಷಣೆಯಲ್ಲಿ ಹೆಗ್ಗುರುತಾಗಿ ನೋಡುತ್ತಾರೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರ ದೇವಾಲಯದ ನಿರ್ಮಾಣವು ಪ್ರಾರಂಭವಾಯಿತು. ಈಗ ಅದು ಭವ್ಯ ಸೌಧವಾಗಿ ನಿಂತಿದೆ. ಇದು ಜನರ ನಂಬಿಕೆಗೆ ಸೂಕ್ತವಾದ ಅಭಿವ್ಯಕ್ತಿಯನ್ನು ನೀಡುತ್ತದೆ. ಜೊತೆಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಜನರ ಅಗಾಧ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಕರ್ಪೂರಿ ಜೀ ಅವರ ಕೊಡುಗೆಯಿಂದ ಸಾರ್ವಜನಿಕ ಜೀವನವನ್ನು ಶ್ರೀಮಂತಗೊಳಿಸಿದ್ದಕ್ಕಾಗಿ ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ. ಅವರು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದು, ಅವರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಎಂದು ದ್ರೌಪದಿ ಮುರ್ಮು ತಿಳಿಸಿದ್ದಾರೆ.

    1988 ರಲ್ಲಿ ನಿಧನರಾದ ಎರಡು ಅವಧಿಗೆ ಬಿಹಾರ ಮುಖ್ಯಮಂತ್ರಿಯಾಗಿದ್ದ ಕರ್ಪೂರಿ ಠಾಕೂರ್ ಅವರು ಬಡವರು ಮತ್ತು ಹಿಂದುಳಿದ ವರ್ಗಗಳ ಉನ್ನತಿಗೆ ನೀಡಿದ ಕೊಡುಗೆಗಾಗಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನಕ್ಕೆ ಭಾಜನರಾಗಿದ್ದಾರೆ. ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಿಸಲಾಗಿದೆ.

    ಜ.22 ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪನೆ ನೆರವೇರಿತು.

  • 2023ರ ಅರ್ಜುನ ಪ್ರಶಸ್ತಿ ಪಡೆದ ಕೈಗಳಿಲ್ಲದ ಬಿಲ್ಲುಗಾರ್ತಿ ಶೀತಲ್ ದೇವಿ – ಸಾಧನೆಗಳೇನು?

    2023ರ ಅರ್ಜುನ ಪ್ರಶಸ್ತಿ ಪಡೆದ ಕೈಗಳಿಲ್ಲದ ಬಿಲ್ಲುಗಾರ್ತಿ ಶೀತಲ್ ದೇವಿ – ಸಾಧನೆಗಳೇನು?

    ನವದೆಹಲಿ: ಧೈರ್ಯವೊಂದಿದ್ದರೆ ಎಂತಹ ಕಠಿಣ ಗುರಿಗಳನ್ನು ಸಹ ಸುಲಭವಾಗಿ ತಲುಪಬಹುದು ಎಂಬ ಮಾತಿದೆ. ಇದನ್ನು 2023ರ ಅರ್ಜನ ಪ್ರಶಸ್ತಿ ಪಡೆದ ಶೀತಲ್ ದೇವಿ (Sheetal Devi) ಸಾಬೀತುಪಡಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ (Jammu And Kashmir) ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದಿರುವ ಶೀತಲ್ ಕೈಗಳಿಲ್ಲದಿದ್ದರೂ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ (Para Asian Games) ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ. ತನ್ನ ಪಾದಗಳಿಂದ ಬಿಲ್ಲುಗಾರಿಕೆ ಮಾಡಿ ಕಳೆದ ವರ್ಷ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರ ಈ ಅದ್ಭುತ ಸಾಧನೆಯನ್ನು ಗುರುತಿಸಿ ಶೀತಲ್ ದೇವಿ ಅವರಿಗೆ 2023ರ ಅರ್ಜುನ ಪ್ರಶಸ್ತಿಯನ್ನು (Arjuna Award) ನೀಡಿ ಗೌರವಿಸಲಾಗಿದೆ.

    ಶೀತಲ್ ದೇವಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಕ್ರೀಡಾ ಗೌರವವನ್ನು ಸ್ವೀಕರಿಸಿದ ನಂತರ ಶೀತಲ್ ದೇವಿ ಅವರು ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿರುವ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, ಈ ದಿನ ವಿಶೇಷವಾಗಿದೆ. ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಪ್ರೀತಿ, ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ವಿಡಿಯೋದ ಜೊತೆಗೆ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ – ಜ.22ರಂದು ಉತ್ತರ ಪ್ರದೇಶದಲ್ಲಿ ಶಾಲಾ ಕಾಲೇಜುಗಳಿಗೆ ರಜೆ

    ಶೀತಲ್ ದೇವಿ ಯಾರು?
    ಶೀತಲ್ ಅವರು 2007ರಲ್ಲಿ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನ ಲೋಯಿಧಾರ್ ಗ್ರಾಮದಲ್ಲಿ ಫೋಕೊಮೆಲಿಯಾ ಎಂಬ ಅಪರೂಪದ ಕಾಯಿಲೆಯೊಂದಿಗೆ ಜನಿಸಿದರು. ಈ ಕಾಯಿಲೆಯಿಂದಾಗಿ ಅವರ ತೋಳುಗಳು ಸಂಪೂರ್ಣವಾಗಿ ರೂಪುಗೊಂಡಿರಲಿಲ್ಲ. ಈ ಅಂಗವೈಕಲ್ಯದ ನಡುವೆಯೂ 2023ರಲ್ಲಿ ಶೀತಲ್ ಅಂತಾರಾಷ್ಟ್ರೀಯ ಹಂತದಲ್ಲಿ ಅನೇಕ ಪದಕಗಳನ್ನು ಗೆಲ್ಲುವ ಮೂಲಕ ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದಾರೆ. ಆದರೆ ಅವರ ಅಂಗವೈಫಲ್ಯ ಕ್ರೀಡೆಯನ್ನು ವೃತ್ತಿಜೀವನವನ್ನಾಗಿಸಲು ಬಿಡಲಿಲ್ಲ. ಇದನ್ನೂ ಓದಿ: ಅರ್ಜುನ ಪ್ರಶಸ್ತಿ ಪಡೆದ ಬೆಂಕಿ ಬೌಲರ್‌ ಮೊಹಮ್ಮದ್‌ ಶಮಿ – ಇನ್ಯಾರಿಗೆಲ್ಲಾ ಸಿಕ್ತು ಪ್ರಶಸ್ತಿ?

    ಶೀತಲ್ ದೇವಿಯವರ ಸಾಧನೆಗಳು:
    2023ರಲ್ಲಿ ಶೀತಲ್ ದೇವಿ ಪ್ಯಾರಾ-ಆರ್ಚರ್‌ಗೆ (Para Archer) ಸೇರಿದರು. ಜೆಕ್ ರಿಪಬ್ಲಿಕ್‌ನಲ್ಲಿ ನಡೆದ ವರ್ಲ್ಡ್ ಆರ್ಚರಿ ಪ್ಯಾರಾ ಚಾಂಪಿಯನ್‌ಶಿಪ್ 2023ರಲ್ಲಿ ಓಪನ್ ಮಹಿಳಾ ಕಾಂಪೌಂಡ್ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಶೀತಲ್ ಬೆಳ್ಳಿ ಪದಕವನ್ನು ಪಡೆದರು. ಮೊದಲು ಪ್ಯಾರಾ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ತೋಳಿಲ್ಲದ ಬಿಲ್ಲುಗಾರ್ತಿ ಇವರಾಗಿದ್ದಾರೆ. ಇದನ್ನೂ ಓದಿ: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ಗೆ ಕೊರೊನಾ ದೃಢ

    ಏಷ್ಯನ್ ಪ್ಯಾರಾ ಗೇಮ್ಸ್ 2023ರಲ್ಲಿ, ಶೀತಲ್ ವೈಯಕ್ತಿಕ ಮತ್ತು ಮಿಶ್ರ ತಂಡ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಇಷ್ಟು ಮಾತ್ರವಲ್ಲದೇ ಮಹಿಳೆಯರ ಡಬಲ್ಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಸಹ ಪಡೆದಿದ್ದಾರೆ. ಇದನ್ನೂ ಓದಿ: ದುಡ್ಡು ಇದ್ದವರು ದೇವಸ್ಥಾನ ಕಟ್ಟುತ್ತಾರೆ, ಇಲ್ಲದವರು ಇರುವಲ್ಲೇ ಪೂಜಿಸಿ: ಸಿದ್ದರಾಮಯ್ಯ

  • ಅರ್ಜುನ ಪ್ರಶಸ್ತಿ ಪಡೆದ ಬೆಂಕಿ ಬೌಲರ್‌ ಮೊಹಮ್ಮದ್‌ ಶಮಿ – ಇನ್ಯಾರಿಗೆಲ್ಲಾ ಸಿಕ್ತು ಪ್ರಶಸ್ತಿ?

    ಅರ್ಜುನ ಪ್ರಶಸ್ತಿ ಪಡೆದ ಬೆಂಕಿ ಬೌಲರ್‌ ಮೊಹಮ್ಮದ್‌ ಶಮಿ – ಇನ್ಯಾರಿಗೆಲ್ಲಾ ಸಿಕ್ತು ಪ್ರಶಸ್ತಿ?

    ನವದೆಹಲಿ: ಟೀಂ ಇಂಡಿಯಾದ ವೇಗಿ ಮೊಹಮ್ಮದ್‌ ಶಮಿ (Mohammed Shami) ದೇಶದ 2ನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ (Arjuna Award) ಸ್ವೀಕರಿಸಿದ್ದಾರೆ.

    ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಂದ ಶಮಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದರು. ಇದರೊಂದಿಗೆ ಅನೇಕ ಕ್ರೀಡಾತಾರೆಗಳು ಅರ್ಜುನ ಪ್ರಶಸ್ತಿ ಪಡೆದು ಸಂತಸಪಟ್ಟರು. ಇದನ್ನೂ ಓದಿ: ಶಮಿ ಹೊಸ ದಾಖಲೆ – ODI ವಿಶ್ವಕಪ್‌ ಇತಿಹಾಸದಲ್ಲೇ 2 ಬಾರಿ ಐದು ವಿಕೆಟ್‌ ಕಬಳಿಸಿದ ಮೊದಲ ಭಾರತೀಯ

    ಶಮಿ ಸೇರಿದಂತೆ ಇತರ ಕ್ರೀಡಾಪಟುಗಳು ತೋರಿದ್ದ ಅದ್ಭುತ ಪ್ರದರ್ಶನಕ್ಕಾಗಿ 2023ರಲ್ಲಿ ಕೇಂದ್ರ ಸರ್ಕಾರ ಪ್ರಶಸ್ತಿ ಘೋಷಣೆ ಮಾಡಿತ್ತು. ಹಿಂದಿನ 4 ವರ್ಷಗಳ ಅವಧಿಯಲ್ಲಿ ತೋರಿದ ಪ್ರದರ್ಶನ, ನಾಯಕತ್ವದ ಬೆಳವಣಿಗೆ, ಕ್ರೀಡಾ ಮನೋಭಾವ, ಶಿಸ್ತಿನ ಪ್ರಜ್ಞೆ ಈ ಮಾನದಂಡಗಳ ಆಧಾರದದಲ್ಲಿ ಪ್ರಶಸ್ತಿಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿತ್ತು.

    ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ (World Cup 2023) ಟೂರ್ನಿಯಲ್ಲಿ ಶಮಿ ಅದ್ಭುತ ಸಾಧನೆ ಮಾಡಿದ್ದರು. 7 ಪಂದ್ಯಗಳನ್ನಾಡಿದರೂ 24 ವಿಕೆಟ್‌ಗಳನ್ನು ಪಡೆಯುವ ಮೂಲಕ 2023ರ ಆವೃತ್ತಿಯಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಿದರು. ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ 50 ವಿಕೆಟ್‌ ಪಡೆದ ಭಾರತದ ಮೊದಲ ಬೌಲರ್‌ ಮೈಲುಗಲ್ಲನ್ನೂ ಸ್ಥಾಪಿಸಿದರು.

    ಅರ್ಜುನ್ ಪ್ರಶಸ್ತಿ ಪುರಸ್ಕೃತರ ಪಟ್ಟಿ: ಅಜಯ್ ರೆಡ್ಡಿ (ಅಂಧರ ಕ್ರಿಕೆಟ್), ಓಜಸ್ ಪ್ರವೀಣ್ ಡಿಯೋಟಾಲೆ (ಆರ್ಚರಿ), ಅದಿತಿ ಗೋಪಿಚಂದ್ ಸ್ವಾಮಿ (ಆರ್ಚರಿ), ಶೀತಲ್ ದೇವಿ (ಪ್ಯಾರಾ ಆರ್ಚರಿ), ಪಾರುಲ್ ಚೌಧರಿ ಮತ್ತು ಮುರಳಿ ಶ್ರೀಶಂಕರ್ (ಅಥ್ಲೆಟಿಕ್ಸ್), ಮೊಹಮ್ಮದ್ ಹುಸಾಮುದ್ದೀನ್ (ಬಾಕ್ಸಿಂಗ್), ಆರ್. ವೈಶಾಲಿ (ಚೆಸ್), ದಿವ್ಯಾಕೃತಿ ಸಿಂಗ್ ಮತ್ತು ಅನುಷ್ ಅಗರ್ವಾಲಾ (ಈಕ್ವೆಸ್ಟ್ರಿಯನ್), ದೀಕ್ಷಾ ದಾಗರ್ (ಗಾಲ್ಫ್), ಕ್ರಿಶನ್ ಬಹದ್ದೂರ್ ಪಾಠಕ್ (ಹಾಕಿ), ಸುಶೀಲಾ ಚಾನು (ಹಾಕಿ), ಪಿಂಕಿ (ಲಾನ್ ಬಾಲ್), ಐಶ್ವರಿ ಪ್ರತಾಪ್ ಸಿಂಗ್ ತೋಮರ್ (ಶೂಟಿಂಗ್), ಅಂತಿಮ್ ಪಂಘಲ್ (ಕುಸ್ತಿ), ಐಹಿಕಾ ಮುಖರ್ಜಿ (ಟೇಬಲ್ ಟೆನಿಸ್). ಇದನ್ನೂ ಓದಿ: World Cup Semifinal: 48 ವರ್ಷಗಳ ವಿಶ್ವಕಪ್‌ ಇತಿಹಾಸದಲ್ಲಿ ಹೊಸ ಮೈಲುಗಲ್ಲು‌ ಸ್ಥಾಪಿಸಿದ ಶಮಿ.!