Tag: Droupadi Murmu

  • ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ವಾಪಸ್‌ – ಹೊಸ ಸರ್ಕಾರ ರಚನೆಗೆ ಅಸ್ತು

    ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ವಾಪಸ್‌ – ಹೊಸ ಸರ್ಕಾರ ರಚನೆಗೆ ಅಸ್ತು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು (President’s Rule) ಹಿಂಪಡೆಯಲಾಗಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ಹೊಸ ಸರ್ಕಾರ ರಚನೆಗೆ ದಾರಿಮಾಡಿಕೊಟ್ಟಿದೆ. ಕೇಂದ್ರ ಗೃಹ ಸಚಿವಾಲಯ ಈ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸಿದೆ.

    ಜಮ್ಮು ಮತ್ತು ಕಾಶ್ಮೀರ (Jammu and Kashmir) ಮರುಸಂಘಟನೆ ಕಾಯಿದೆ, 2019 (2019 ರ 34) ಸೆಕ್ಷನ್ 73 ರ ಮೂಲಕ ನೀಡಲಾದ ಅಧಿಕಾರಗಳ ಅನುಷ್ಠಾನದಲ್ಲಿ, ಭಾರತದ ಸಂವಿಧಾನದ 239 ಮತ್ತು 239ಎ ವಿಧಿಗಳೊಂದಿಗೆ ಓದಲಾಗಿದೆ. 31ನೇ ಅಕ್ಟೋಬರ್ 2019ರ ಆದೇಶವು ಜಮ್ಮು ಮತ್ತು ಕೇಂದ್ರಾಡಳಿತ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ, 2019ರ ಸೆಕ್ಷನ್ 54 ರ ಅಡಿಯಲ್ಲಿ ಮುಖ್ಯಮಂತ್ರಿ ಅಧಿಕಾರ ಸ್ವೀಕಾರಕ್ಕೂ ಮುನ್ನವೇ ಕಾಶ್ಮೀರದ ಮೇಲೆ ರಾಷ್ಟ್ರಪತಿ ಆಳ್ವಿಕೆ ಅಧಿಕಾರವನ್ನು ಹಿಂಪಡೆಯಲಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಸಹಿ ಮಾಡಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಇತ್ತೀಚೆಗೆ ನಡೆದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟ ಜಯಭೇರಿ ಬಾರಿಸಿದ್ದು, ಸರ್ಕಾರ ರಚನೆಗೆ ಸಜ್ಜಾಗಿದೆ. ಮೈತ್ರಿಕೂಟದ ಮುಖ್ಯಮಂತ್ರಿಯಾಗಿ ಎನ್‌ಸಿ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಆಯ್ಕೆಯಾಗಿದ್ದು, ಅಧಿಕಾರ ಸ್ವೀಕರಿಸಲು ಸಕಲ ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ಪ್ರತಿಷ್ಠೆಯ ಫೈಟ್‌ಗೆ ಅಖಾಡವಾದ ಚನ್ನಪಟ್ಟಣ – ನಾನೇ ಅಭ್ಯರ್ಥಿ ಅಂತಾರೆ ಡಿಕೆ, ಹೆಚ್‌ಡಿಕೆ

    ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂದು ಕೇಂದ್ರಾಡಳಿತ ಪ್ರದೇಶಗಳಾಗಿ ಔಪಚಾರಿಕವಾಗಿ ವಿಭಜಿಸಿದ ನಂತರ 2019ರ ಅ.31ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಯಿತು. ನಂತರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಲಾಯಿತು.

    2019ರ ಅ.31ಕ್ಕೂ ಮುನ್ನ ಬಿಜೆಪಿಯು ಪಿಡಿಪಿ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿತ್ತು. ಬಳಿಕ ಅಂದಿನ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ನಂತರ 2017ರ ರಿಂದ ಕೇಂದ್ರ ಆಡಳಿತವು ಮುಂದುವರಿದಿತ್ತು. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಕೇಸ್‌ | ಆರೋಪಿ ಧರ್ಮರಾಜ್ ಕಶ್ಯಪ್‌ ಅಪ್ರಾಪ್ತನಲ್ಲ – ಮೂಳೆ ಪರೀಕ್ಷೆಯಲ್ಲಿ ಸಾಬೀತು

  • ಕೋರಿಸಿದ್ದೇಶ್ವರ ಮಠಕ್ಕೆ ಮೇಘಾಲಯ ರಾಜ್ಯಪಾಲ ವಿಜಯ್‌ಶಂಕರ್ ಭೇಟಿ

    ಕೋರಿಸಿದ್ದೇಶ್ವರ ಮಠಕ್ಕೆ ಮೇಘಾಲಯ ರಾಜ್ಯಪಾಲ ವಿಜಯ್‌ಶಂಕರ್ ಭೇಟಿ

    ಕಲಬುರಗಿ: ಜಿಲ್ಲೆಯ ಚಿತ್ತಾಪುರ (Chittapura) ತಾಲೂಕಿನ ನಾಲವಾರ ಗ್ರಾಮದಲ್ಲಿರುವ ಶ್ರೀ ಸದ್ಗುರು ಕೋರಿಸಿದ್ದೇಶ್ವರ ಮಠಕ್ಕೆ ಮೇಘಾಲಯ (Meghalaya) ರಾಜ್ಯಪಾಲ ಸಿ.ಹೆಚ್ ವಿಜಯಶಂಕರ್ (C H Vijayashankar) ಅವರು ಶುಕ್ರವಾರ ಭೇಟಿ ನೀಡಿದರು.

    ತೋಟೆಂದ್ರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ಮತ್ತು ಶ್ರೀ ಸಿದ್ಧತೋಟೆಂದ್ರ ಶಿವಾಚಾರ್ಯರ ಜನ್ಮದಿನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಠದ ಆವರಣದಲ್ಲಿ ನಿರ್ಮಾಣವಾಗಿರುವ ಸುವರ್ಣ ಭವನದ ಉದ್ಘಾಟನೆಯನ್ನು ನೆರವೇರಿಸಿದರು. ಇದನ್ನೂ ಓದಿ: ಶಿವಮೊಗ್ಗ ದಸರಾ | ಬೆಳ್ಳಿ ಅಂಬಾರಿ ಜಂಬೂಸವಾರಿಗೆ ಸಕಲ ಸಿದ್ಧತೆ

    ಈ ಸಂದರ್ಭದಲ್ಲಿ ಮಠದ ವತಿಯಿಂದ ರಾಜ್ಯಪಾಲರಿಗೆ ಗೌರವ ಸತ್ಕಾರ ಮಾಡಲಾಯಿತು. ಮೇಘಾಲಯ ರಾಜ್ಯಪಾಲರಿಗೆ ಸ್ಥಳೀಯ ಬಿಜೆಪಿ ನಾಯಕರು ಸಾಥ್ ನೀಡಿದರು. ನಾಲವಾರ್ ಶ್ರೀಗಳು, ಶ್ರೀಶೈಲಂ ಸಾರಂಗಮಠದ ಪೀಠಾಧಿಪತಿ ಡಾ, ಸಾರಂಗದೇಶಿಕೆಂದ್ರ ಮಹಾಸ್ವಾಮಿಗಳು, ಮಾಜಿ ಸಂಸದ ಡಾ. ಬಸವರಾಜ್ ಪಾಟೀಲ್ ಸೇಡಂ, ಶಾಸಕರಾದ ಬಿ.ಜಿ. ಪಾಟೀಲ್, ಬಸವರಾಜ್ ಮತ್ತಿಮೂಡ್ ಮುಂತಾದವರು ಉಪಸ್ಥಿತರಿದ್ದರು. ಇದನ್ನೂ ಓದಿ: Bagmati Express Train Accident | ಸಾವಿರಕ್ಕೂ ಅಧಿಕ ಪ್ರಯಾಣಿಕರಿಗೆ ರೈಲ್ವೇಯಿಂದ ಕರೆ

    ಈ ಜುಲೈನಲ್ಲಿ ಮೈಸೂರು ಮೂಲದ ವಿಜಯಶಂಕರ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೇಘಾಲಯ ರಾಜ್ಯಪಾಲರಾಗಿ ನೇಮಿಸಿದ್ದರು. ಇದನ್ನೂ ಓದಿ: ಪೊಲೀಸರ ಮೇಲೆ ಹಲ್ಲೆಗೆ ಯತ್ನ – ಇಬ್ಬರು ಆರೋಪಿಗಳಿಗೆ ಗುಂಡೇಟು

  • ಅಪರಾಧಿಗಳು ನಿರ್ಭೀತಿಯಿಂದ ಓಡಾಟ, ಸಂತ್ರಸ್ತರ ಪರದಾಟ: ದ್ರೌಪದಿ ಮುರ್ಮು ಕಳವಳ

    ಅಪರಾಧಿಗಳು ನಿರ್ಭೀತಿಯಿಂದ ಓಡಾಟ, ಸಂತ್ರಸ್ತರ ಪರದಾಟ: ದ್ರೌಪದಿ ಮುರ್ಮು ಕಳವಳ

    ನವದೆಹಲಿ: ಅಪರಾಧಿಗಳು ನಿರ್ಭೀತಿಯಿಂದ ತಿರುಗಾಡುವುದು ಹಾಗೂ ಸಂತ್ರಸ್ತರು ಅಪರಾಧಗಳನ್ನು ಮಾಡಿದಂತೆ ಭಯದಿಂದ ಬದುಕುವುದು ನಮ್ಮ ಸಾಮಾಜಿಕ ಜೀವನದ ದುಃಖದ ಅಂಶವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಕಳವಳ ವ್ಯಕ್ತಪಡಿಸಿದ್ದಾರೆ.

    ಭಾರತ್ ಮಂಟಪದಲ್ಲಿ ನಡೆದ ಸುಪ್ರೀಂ ಕೋರ್ಟ್‌ನ (Supreme Court) 75ನೇ ವಾರ್ಷಿಕೋತ್ಸವದ ನೆನಪಿಗಾಗಿ ಆಯೋಜಿಸಲಾದ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಈ ವೇಳೆ ಕೋಲ್ಕತ್ತಾ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ, ಮಲಯಾಳಂ ಚಿತ್ರರಂಗದ ಪ್ರಸಿದ್ಧ ನಟರ ವಿರುದ್ಧ ದಾಖಲಾದ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ಹತ್ತಾರು ಪ್ರಕರಣಗಳು ಭಾರತ ಮಹಿಳೆಯರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದರ ಕುರಿತು ಕೂಲಂಕಷವಾಗಿ ಮರುಪರಿಶೀಲಿಸುವ ಅಗತ್ಯತೆಯನ್ನು ಹುಟ್ಟುಹಾಕಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೇರಳ ರಾಜಕಾರಣದಲ್ಲೂ ಕಾಸ್ಟಿಂಗ್ ಕೌಚ್ ಕೋಲಾಹಲ; ಪಕ್ಷದ ನಾಯಕರಿಂದ ಕಿರುಕುಳ – ಕಾಂಗ್ರೆಸ್ ನಾಯಕಿ ರೋಸ್‌ಬೆಲ್ ಬಾಂಬ್‌

    ಇತ್ತೀಚಿನ ದಿನಗಳಲ್ಲಿ ಸಮಯೋಚಿತ ಆಡಳಿತ, ಮೂಲಸೌಕರ್ಯ, ಸೌಲಭ್ಯಗಳು, ತರಬೇತಿ ಮತ್ತು ಮಾನವ ಸಂಪನ್ಮೂಲಗಳ ಸುಧಾರಣೆ ಕಂಡುಬಂದಿದೆ ಎಂದು ನನಗೆ ಹೇಳಲಾಗುತ್ತಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕಾಗಿದೆ. ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ಆಯ್ಕೆ ಸಮಿತಿಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿರುವುದನ್ನು ಗಮನಿಸಲು ನನಗೆ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ.

    ಈ ವೇಳೆ ಮಾತಾಡಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಕೇಸ್ ಮ್ಯಾನೇಜ್ಮೆಂಟ್ ಮೂಲಕ ಬಾಕಿ ಪ್ರಕರಣಗಳನ್ನು ಕಡಿಮೆ ಮಾಡಲು ನಾವು ಕ್ರಿಯಾ ಯೋಜನೆಯನ್ನು ರೂಪಿಸಿದ್ದೇವೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಪ್ರೀಂ ಕೋರ್ಟ್‌ನ ಧ್ವಜ ಮತ್ತು ಚಿಹ್ನೆಯನ್ನು ಬಿಡುಗಡೆ ಮಾಡಿದರು. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ – ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಎಫ್‌ಐಆರ್‌

  • ಹೊಸ ಕ್ರಿಮಿನಲ್ ಕಾನೂನುಗಳು ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಿದ ಗೌರವ: ದ್ರೌಪದಿ ಮುರ್ಮು

    ಹೊಸ ಕ್ರಿಮಿನಲ್ ಕಾನೂನುಗಳು ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಿದ ಗೌರವ: ದ್ರೌಪದಿ ಮುರ್ಮು

    ನವದೆಹಲಿ: ದೇಶಾದ್ಯಂತ ಜಾರಿಗೊಳಿಸಲಾದ ಹೊಸ ಕ್ರಿಮಿನಲ್ ಕಾನೂನುಗಳು (New Criminal Laws) ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಿದ ಗೌರವ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಹೇಳಿದ್ದಾರೆ.

    ಸ್ವಾತಂತ್ರ್ಯ ದಿನಾಚರಣೆಯ (Independence Day) ಮುನ್ನಾದಿನ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವು ಈಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ವಿಶ್ವದ ಮೂರು ದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಲು ಸಿದ್ಧವಾಗಿದೆ ಎನ್ನುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಈ ಯಶಸ್ಸು ರೈತರು ಮತ್ತು ಕಾರ್ಮಿಕರ ಕಠಿಣ ಪರಿಶ್ರಮ, ಉದ್ಯಮಿಗಳ ದೂರದೃಷ್ಟಿ ಮತ್ತು ದೇಶದ ದೂರದೃಷ್ಟಿಯ ನಾಯಕತ್ವದ ಫಲಿತಾಂಶವಾಗಿದೆ ಎಂದು ಬಣ್ಣಿಸಿದರು.

     

    ಭಾರತವು 2021 ಮತ್ತು 2024 ರ ನಡುವೆ ಸರಾಸರಿ 8% ವಾರ್ಷಿಕ ಬೆಳವಣಿಗೆಯೊಂದಿಗೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಜನರ ಕೈಗೆ ಹೆಚ್ಚಿನ ಹಣವನ್ನು ನೀಡಿದ್ದು ಮಾತ್ರವಲ್ಲ ಬಡವರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ ಎಂದು ಮೋದಿ ಸರ್ಕಾರದ ಸಾಧನೆಯನ್ನು ಹೊಗಳಿದರು.

    ಈ ಬಾರಿ ಬಜೆಟ್‌ನಲ್ಲಿ (Budget) ಪ್ರಕಟಿಸಿದ ಇಂಟರ್ನ್‌ಶಿಪ್ ಯೋಜನೆಯನ್ನು ಶ್ಲಾಘಿಸಿದ ರಾಷ್ಟ್ರಪತಿಗಳು, ಇದು ದೇಶಾದ್ಯಂತ 1 ಕೋಟಿಗೂ ಹೆಚ್ಚು ಯುವಕರಿಗೆ ಕೆಲಸದ ಅನುಭವ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

    ಲೋಕಸಭೆ ಚುನಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಕಾರಣಿಕರ್ತರಾದ ಚುನಾವಣಾ ಆಯೋಗ, ಅಧಿಕಾರಿಗಳು, ಭದ್ರತಾ ಸಿಬ್ಬಂದಿಯನ್ನು ಶ್ಲಾಘಿಸಿದರು.

  • ಮೋದಿ ಅತ್ಯುತ್ತಮ ಕೆಲಸ ಮಾಡಲಿದ್ದಾರೆ- ಲೋಕಸಭಾ ಎಲೆಕ್ಷನ್ ನಂತ್ರದ ಮೊದಲ ಭಾಷಣದಲ್ಲಿ ಮುರ್ಮು ಹೇಳಿದ್ದೇನು?

    ಮೋದಿ ಅತ್ಯುತ್ತಮ ಕೆಲಸ ಮಾಡಲಿದ್ದಾರೆ- ಲೋಕಸಭಾ ಎಲೆಕ್ಷನ್ ನಂತ್ರದ ಮೊದಲ ಭಾಷಣದಲ್ಲಿ ಮುರ್ಮು ಹೇಳಿದ್ದೇನು?

    – ಸಾಮಾಜಿಕ, ಆರ್ಥಿಕ ಬದಲಾವಣೆಯತ್ತ ಹೆಜ್ಜೆ ಇಡುತ್ತಿದ್ದೇವೆ

    ನವದೆಹಲಿ: ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿಯವರು ಅತ್ಯುತ್ತಮ ಕೆಲಸಗಳನ್ನು ಮಾಡಲಿದ್ದಾರೆ ಎಂದು ಭಾವಿಸಿದ್ದೇನೆ ಅಂತಾ ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

    18ನೇ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಸಂಸತ್ತಿನಲ್ಲಿ ಇಂದು ಮಾತನಾಡಿದ ಅವರು, ನೂತನ ಸಂಸದರಿಗೆ ಅಭಿನಂದನೆ ಸಲ್ಲಿಸಿ ಬಳಿಕ ಮಾತನಾಡಿದ ಮುರ್ಮು ಅವರು ಮೊದಲಿಗೆ ಓಂ ಬಿರ್ಲಾ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಬಳಿಕ ಓಂ ಬಿರ್ಲಾ ಅವರು ಅತ್ಯುತ್ತಮವಾಗಿ ಕೆಲಸ ಮಾಡಲಿದ್ದಾರೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.

    ಅಪಪ್ರಚಾರಕ್ಕೆ ಚುನಾವಣೆ ಮೂಲಕ ಉತ್ತರ: ಇದೇ ವೇಳೆ ಚುನಾವಣಾ ಆಯೋಗಕ್ಕೂ ಅಭಿನಂದನೆಗಳನ್ನು ಸಲ್ಲಿಸಿದ ಅವರು, ವಿಶ್ವದ ಅತಿದೊಡ್ಡ ಚುನಾವಣೆ, ಜನರು ಉತ್ಸಾಹದಿಂದ ಮತದಾನ ಮಾಡಿದ್ದಾರೆ. ಮಹಿಳೆಯರು ಹೆಚ್ಚು ಮತದಾನ ಮಾಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ದಾಖಲೆಯ ಮತದಾನವಾಗಿದೆ. ಕಾಶ್ಮೀರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿತ್ತು. ಆದರೆ ಈ ಚುನಾವಣೆ ಮೂಲಕ ಉತ್ತರ ನೀಡಲಾಗಿದೆ ಎಂದು ಹೇಳಿದರು.

    ಈ ಅವಧಿಯ ಮೊದಲ ಬಜೆಟ್ ಮಂಡಿಸಲಿದೆ. ದೊಡ್ಡ ಆರ್ಥಿಕ, ಸಾಮಾಜಿಕ ಬದಲಾವಣೆಯತ್ತ ಹೆಜ್ಜೆ ಇಡುವ ಬಜೆಟ್ ಇದಾಗಲಿದೆ. ರಾಜ್ಯದ ವಿಕಾಸವೇ ದೇಶದ ವಿಕಾಸ್ ಎನ್ನುವ ಭಾವನೆಯಿಂದ ನಮ್ಮ ಸರ್ಕಾರ ಮುಂದುವರಿಯಲಿದೆ. 12 ರಿಂದ 5 ನೇ ಬಲಿಷ್ಠ ಆರ್ಥಿಕತೆಯಾಗಿ ದೇಶ ಬದಲಾಗಿದೆ. ಕೊರೊನಾ ಮತ್ತು ಯುದ್ಧದ ಪರಿಸ್ಥಿತಿಯಲ್ಲೂ ಭಾರತ ಅಭಿವೃದ್ಧಿ ಸಾಧಿಸಿದೆ. ಸರ್ವಿಸ್ ಸೆಕ್ಟರ್ ಬಲಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

    ಪ್ರತಿ ಕ್ಷೇತ್ರದಲ್ಲಿ ಭಾರತ ಲೀಡರ್‌: ನಮ್ಮ ಸರ್ಕಾರ ಮೂರನೇ ಬಲಿಷ್ಠ ಆರ್ಥಿಕತೆಯಾಗಲು ಹೊರಟಿದೆ. ಪ್ರತಿ ಕ್ಷೇತ್ರದಲ್ಲಿ ಭಾರತ ಲೀಡರ್ ಆಗುತ್ತಿದೆ. ಉದ್ಯೋಗ ಸೃಷ್ಟಿಯಾಗುತ್ತಿವೆ. ಕೃಷಿ ಆಧಾರಿತ ಉದ್ಯಮ ವಿಸ್ತರಣೆ ಮಾಡಲಾಗುತ್ತಿದೆ. ರೈತರಿಗಾಗಿ ಸರ್ಕಾರಿ ಸಂಸ್ಥೆಗಳ ನೆಟ್ವರ್ಕ್ ಮಾಡುತ್ತಿದೆ. ಸಹಕಾರಿ ವಲಯದಲ್ಲಿ ದೊಡ್ಡ ಬದಲಾವಣೆ ಮಾಡುತ್ತಿದೆ. ಸಣ್ಣ ಖರ್ಚು ನಿಭಾಯಿಸಲು ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೂಲಕ ರೈತರಿಗೆ ಸಹಾಯ ಮಾಡಲಾಗುತ್ತಿದೆ. ಎಂಎಸ್‍ಪಿಯಲ್ಲಿ ದಾಖಲೆಯ ಸಾಧನೆ ಮಾಡಿದೆ. ವರ್ತಮಾನ ಅಗತ್ಯ ಆಧರಿಸಿ ಕೃಷಿ ವಲಯದಲ್ಲಿ ಬದಲಾವಣೆ ಮಾಡುತ್ತಿದೆ ಎಂದು ತಿಳಿಸಿದರು.

    ವಿಶ್ವದ ಹಲವು ದೇಶಗಳನ್ನು ಭಾರತ ಪ್ರೇರೆಪಿಸುತ್ತಿದೆ. ಭಾರತಕ್ಕೆ ಬೆಂಬಲ ನೀಡುತ್ತಿವೆ. ಗ್ರೀನ್ ಎನರ್ಜಿಗೆ ಭವಿಷ್ಯವಿದೆ. ಈ ಹಿನ್ನೆಲೆ ನಮ್ಮ ಸರ್ಕಾರ ಇದಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಮಹಿಳೆಯರ ಆರ್ಥಿಕ ಸ್ಥಿತಿ ಹೆಚ್ಚಿಸಿದೆ. ಪಿಎಂ ಆವಾಸ್ ಯೋಜನೆಯಡಿ ಮಹಿಳೆಯರಿಗೆ ಹೆಚ್ಚು ಮನೆ ನೀಡಿದೆ. ಮುಂದಿನ ಅವಧಿಯಲ್ಲಿ ಮೂರು ಕೋಟಿ ಮನೆ ನಿರ್ಮಿಸಿ ಹೆಚ್ಚು ಮಹಿಳೆಯರಿಗೆ ನೀಡಲಾಗುವುದು. ಸ್ವಂಸಹಾಯ ಗುಂಪುಗಳಿಗೆ ಆದ್ಯತೆ ನೀಡಲಾಗುತ್ತಿದೆ. ನಮೋ ಡ್ರೋನ್ ಮೂಲಕ, ಲಕ್ ಪತಿ ದೀದಿ ಮೂಲಕ ಮಹಿಳೆಯರನ್ನು ಸ್ವಾವಲಂಬಿ ಮಾಡಲಾಗುತ್ತಿದೆ ಎಂದರು.

    ಮೂಲಭೂತ ಸೌಕರ್ಯಗಳ ಹೆಚ್ಚಳ: ಎರಡು, ಮೂರನೇ ಹಂತದ ನಗರಗಳಲ್ಲಿ ರಸ್ತೆ ಅಭಿವೃದ್ಧಿಯಾಗುತ್ತಿದೆ. ಮಹಾನಗರಗಳಲ್ಲಿ ಮೆಟ್ರೋ ವಿಸ್ತರಣೆಯಾಗುತ್ತಿದೆ. ವಂದೇ ಭಾರತ್ ರೈಲು ಯೋಜನೆ ಆರಂಭವಾಗಲಿದೆ. ನಗರಗಳ ಮೂಲ ಸೌಕರ್ಯ ಹೆಚ್ಚಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಎರಡು ಪಟ್ಟು ಹೆಚ್ಚಿಸಿದೆ. ಹೈಸ್ಪೀಡ್ ರೈಲ್ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಬಾಕಿ ಕಡೆ ಬುಲೆಟ್ ಟ್ರೈನ್ ಸಾಧ್ಯತೆ ಪರಿಶೀಲಿಸಲಾಗುತ್ತಿದೆ. ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ. ಅಸ್ಸಾಂನಲ್ಲಿ ಸೆಮಿ ಕಂಡಕ್ಟರ್ ಉತ್ಪಾದನೆ ಮಾಡಲಾಗುವುದು. ಹತ್ತು ವರ್ಷಗಳಲ್ಲಿ ಅನೇಕ ಸಮಸ್ಯೆ ಬಗೆಹರಿಸಿದೆ. ದೇಶದ ಹಲವು ಕ್ಷೇತ್ರಗಳು ಅಭಿವೃದ್ಧಿ ಕಂಡಿದೆ. ಈಶಾನ್ಯ ರಾಜ್ಯಗಳ ವಿಷಯ ಬರುತ್ತಿದ್ದಂತೆಯೇ ಮಣಿಪುರ ವಿಚಾರ ಪ್ರಸ್ತಾಪಿಸಿ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದವು.

    ಮಹಿಳೆಯರಿಗೆ ಬ್ಯಾಂಕ್ ನಲ್ಲಿ ಹೆಚ್ಚು ಬಡ್ಡಿ ನೀಡಲಾಗುತ್ತಿದೆ. ಉಚಿತ ರೇಷನ್, ಕಡಿಮೆ ದರದಲ್ಲಿ ಗ್ಯಾಸ್ ನೀಡಿದ್ದು, ಮಹಿಳೆಯರ ಉಳಿತಾಯ ಹೆಚ್ಚಿದೆ. ವಿದ್ಯುತ್ ಉಚಿತ ಮಾಡಲು ಸೋಲಾರ್ ಹಾಕಿ ಕೊಡಲಾಗುತ್ತಿದೆ. ಎಸ್‍ಸಿ, ಎಸ್ಟಿ ಓಬಿಸಿಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಅವರ ಜೀವನ ಬದಲಿಸುವ ಕೆಲಸ ಮಾಡಿದೆ. ಜೀವನ ಭೀಮಾ ಯೋಜನೆ ಮೂಲಕ ಸುರಕ್ಷೆ ನೀಡಲಾಗುತ್ತಿದೆ. ಸರ್ಕಾರ ಬಡವರ ಸೇವೆ ಮಾಡುತ್ತಿದೆ ಎಂದು ಜನರ ಭಾವನೆಗೆ ಬಂದಿದೆ. ಸ್ವಚ್ಛ ಭಾರತ್ ಯೋಜನೆಯನ್ನು ರಾಷ್ಟ್ರೀಯ ವಿಷಯ ಮಾಡಿದೆ. ಕೋಟ್ಯಂತರ ಶೌಚಾಲಯ ನಿರ್ಮಾಣ ಮಾಡಿದೆ. 55 ಕೋಟಿ ಆಯುಷ್ಮಾನ್ ಭಾರತ್ ಯೋಜನೆ ಲಾಭ ಪಡೆದಿದ್ದಾರೆ. ಜನೋಷಧಿ ಮೂಲಕ ಕಡಿಮೆ ದರದಲ್ಲಿ ಔಷಧಿ ನೀಎಲಾಗುತ್ತಿದೆ. ಈ ಬಾರಿ ಆಯುಷ್ಮಾನ್ ಯೋಜನೆ ವಿಸ್ತರಿಸಿದೆ, ವೃದ್ಧರಿಗೆ ಈಗ ಲಾಭ ಸಿಗಲಿದೆ ಎಂದರು.

    ಎರಡು ವರ್ಷದ ಹಿಂದೆ ಬ್ಯಾಂಕಿಂಗ್ ವಲಯ ಮುಳುಗಡೆ ತಡೆಯಲು ಪುನಶ್ಚೇತನ ಮಾಡಲಾಯಿತು. ಈಗ ಬ್ಯಾಂಕುಗಳು ಸಾಕಷ್ಟು ಅಭಿವೃದ್ಧಿಯಾಗಿವೆ. ಆರ್ಥಿಕ ಬೆಳವಣಿಗಗಳಿಗೆ ಸಹಕಾರಿಯಾಗಿವೆ. ಸರ್ಕಾರಿ ಬ್ಯಾಂಕ್ ಗಳ ಎನ್‍ಪಿಎ ಕಡಿಮೆಯಾಗಿದೆ. ದೇಶದ ರಕ್ಷಣಾ ವಲಯದಲ್ಲಿ ಹೆಚ್.ಎ.ಎಲ್ ಶಕ್ತಿ ನೀಡುತ್ತಿದೆ. ಡಿಜಿಟಲ್ ಇಂಡಿಯಾಗೆ ಇಡೀ ವಿಶ್ವ ಆಕರ್ಷಣೆಯಾಗಿದೆ. ಎರಡು ಕೋಟಿಗೂ ಅಧಿಕ ವಹಿವಾಟು ನಡೆಸಿ ದಾಖಲೆ ಸಾಧಿಸಿದೆ. ರಕ್ಷಣಾ ವಲಯ ಆತ್ಮ ನಿರ್ಭರ್ ಮಾಡಲು ಸಾಕಷ್ಟು ಕ್ರಮ ತೆಗೆದುಕೊಂಡಿದೆ. ಒಂದು ಲಕ್ಷ ಕೋಟಿಗೂ ಅಧಿಕ ರಕ್ಷಣಾ ವಲಯದಲ್ಲಿ ಭಾರತ ಉತ್ಪಾದನೆ ಮಾಡುತ್ತಿದೆ. ಬ್ರಹ್ಮಾಸ್ ಅನ್ನು ರಫ್ತು ಮಾಡಲಾಗುತ್ತಿದೆ. ಸೈನಿಕರ ಹಿತ ಕಾಯುತ್ತಿದೆ. ಒನ್ ಯಾರ್ಂಕ್ ಒನ್ ಪೆನ್ಷನ್ ಯೋಜನೆ ಜಾರಿ ಮಾಡಿದೆ. ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಿಸಿದೆ ಎಂದರು.

    ಕೇಂದ್ರ ಸರ್ಕಾರದ ಗ್ರೂಪ್ ಸಿ ಡಿ ಯಲ್ಲಿ ಸಂದರ್ಶನ ರದ್ದು ಮಾಡಿದೆ. ಯುವಕರಿಗೆ ಹೆಚ್ಚು ಉದ್ಯೋಗ ನೀಡಲಾಗುತ್ತಿದೆ. ಹೊಸ ಶಿಕ್ಷಣ ನೀತಿ ಜಾರಿ ಮಾಡಿದೆ. ಭಾರತೀಯ ಭಾಷೆಯಲ್ಲಿ ಎಂಜಿನಿಯರಿಂಗ್ ಮಾಡಬಹುದು. 7 IIT, 16IIIT, 6 IIM, 315 ಮೆಡಿಕಲ್ ಕಾಲೇಜು, 390 ವಿವಿ ನಿರ್ಮಾಣ ಮಾಡಲಿದೆ. ಪೇಪರ್ ಲೀಕ್ ತಡೆಯಲು ಕಾನೂನು ಕ್ರಮ ತೆಗೆದುಕೊಳ್ಳಲು ನನ್ನ ಸರ್ಕಾರ ಬದ್ಧವಾಗಿದೆ. ಅಕ್ರಮ ತಡೆಯಲು ಕಾನೂನು ಜಾರಿ ಮಾಡಿದೆ. ಪರೀಕ್ಷಾ ಸುಧಾರಣೆಗೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

    ನಳಂದಾ ಕ್ಯಾಂಪಸ್ ಅಭಿವೃದ್ಧಿಪಡಿಸಿದೆ. ಅದೊಂದು ವಿವಿ ಮಾತ್ರವಲ್ಲ, ಅದು ವಿಶ್ವದ ಜ್ಞಾನಕೇಂದ್ರ. ಇದು ಮುಂದಿನ ದಿನಗಳ ವಿಶ್ವದ ಗಮನ ಸೆಳೆದಿದೆ. ತೀರ್ಥ ಕ್ಷೇತ್ರ, ಆಧ್ಯಾತ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿದೆ. ಚಂದ್ರಯಾನ ಯಶಸ್ವಿಗೆ ನಾವು ಗರ್ವಪಡಬೇಕು. ದೇಶದ ಬಲಿಷ್ಠ ಆರ್ಥಿಕತೆಯಾಗುತ್ತಿದೆ. ಅತ್ಯುತ್ತಮ ಚುನಾವಣಾ ವ್ಯವಸ್ಥೆಗೆ ಪ್ರಜಾಪ್ರಭುತ್ವದ ತಾಯಿಯಾಗಿರಲು ನಾವು ಗರ್ವ ಪಡಬೇಕು ಎಂದರು.

  • Parliament Session: ಸಂಸದರಾಗಿ ಮೋದಿ, ಹಂಗಾಮಿ ಸ್ಪೀಕರ್ ಆಗಿ ಭರ್ತೃಹರಿ ಮಹತಾಬ್ ಪ್ರಮಾಣ ವಚನ ಸ್ವೀಕಾರ

    Parliament Session: ಸಂಸದರಾಗಿ ಮೋದಿ, ಹಂಗಾಮಿ ಸ್ಪೀಕರ್ ಆಗಿ ಭರ್ತೃಹರಿ ಮಹತಾಬ್ ಪ್ರಮಾಣ ವಚನ ಸ್ವೀಕಾರ

    – ನೂತನ ಸಂಸದರಿಗೆ ಹೃದಯಪೂರ್ವಕ ಸ್ವಾಗತ ಕೋರಿದ ಮೋದಿ

    ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನ (Parliament Session) ಸೋಮವಾರ (ಜೂ.24) ಆರಂಭಗೊಂಡಿದ್ದು, ಹಂಗಾಮಿ ಸ್ಪೀಕರ್ ಆಗಿ ಬಿಜೆಪಿ ಸಂಸದ ಭರ್ತೃಹರಿ ಮಹತಾಬ್ (Bhartruhari Mahtab) ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಪ್ರಮಾಣ ವಚನ ಬೋಧಿಸಿದರು. ನಂತರ ಸಂಸತ್‌ ಭವನದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ವಾರಣಾಸಿ ಕ್ಷೇತ್ರದ ಸಂಸರಾಗಿ ಪ್ರಮಾಣ ವಚನ ಸ್ವೀಕರಿಸಿದರು.

    ಅಧಿವೇಶನದ ಮೊದಲ ದಿನವಾದ ಸೋಮವಾರ 280 ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದು, ಮಂಗಳವಾರ 264 ಹೊಸದಾಗಿ ಚುನಾಯಿತರಾದ ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೂನ್ 26 ರಂದು ಲೋಕಸಭಾ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯಲಿದೆ.

    ಜೂನ್ 27 ರಂದು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿಗಳು ಭಾಷಣ ಮಾಡಲಿದ್ದಾರೆ. ರಾಷ್ಟ್ರಪತಿಗಳ ಭಾಷಣಕ್ಕೆ ಕೃತಜ್ಞತಾ ನಿರ್ಣಯದ ಮೇಲಿನ ಚರ್ಚೆ ಜೂನ್ 28 ರಂದು ಪ್ರಾರಂಭವಾಗುತ್ತದೆ. ಜುಲೈ 2 ಅಥವಾ 3 ರಂದು ಪ್ರಧಾನಿ ಮೋದಿ ಚರ್ಚೆಗೆ ಪ್ರತಿಕ್ರಿಯಿಸುವ ನಿರೀಕ್ಷೆಯಿದೆ. ಬಳಿಕ ಎರಡೂ ಸದನಗಳು ಮುಂದೂಡಿಕೆಯಾಗಲಿದ್ದು ಕೇಂದ್ರ ಬಜೆಟ್ ಮಂಡನೆಗಾಗಿ ಜುಲೈ 22 ರಂದು ಮತ್ತೆ ಸೇರಲಿವೆ.

    ಮೋದಿ ಪ್ರತಿಕ್ರಿಯೆ:
    ಸಂಸತ್‌ ಪ್ರವೇಶಿಸುವ ಮುನ್ನ 18ನೇ ಲೋಕಸಭೆ ಅಧಿವೇಶನ ಮೊದಲ ದಿನದ ಹಿನ್ನೆಲೆ ಕಲಾಪಕ್ಕೂ ಮುನ್ನ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ, ಇದು ಅದ್ಭುತವಾದ ದಿನವಾಗಿದೆ. ಸ್ವಾತಂತ್ರ‍್ಯದ ನಂತರ ಮೊದಲ ಬಾರಿಗೆ, ನಮ್ಮದೇ ಹೊಸ ಸಂಸತ್ತಿನ ಕಟ್ಟಡದಲ್ಲಿ ಪ್ರಮಾಣ ವಚನ ಸಮಾರಂಭ ನಡೆಯುತ್ತಿದೆ. ಇದು ಹಳೆಯ ಸಂಸತ್ತಿನ ಕಟ್ಟಡದಲ್ಲಿ ನಡೆಯುತ್ತಿತ್ತು. ಈ ಮಹತ್ವದ ದಿನದಂದು, ಹೊಸದಾಗಿ ಚುನಾಯಿತರಾದ ಎಲ್ಲಾ ಸಂಸದರಿಗೆ ನಾನು ಹೃತ್ಪೂರ್ವಕ ಸ್ವಾಗತ ಕೋರುತ್ತೇನೆ ಎಂದು ಹೇಳಿದರು.

    ಮುಂದುವರಿದು 18ನೇ ಲೋಕಸಭೆ ಕಲಾಪ ಆರಂಭವಾಗುತ್ತಿದ್ದು, ವಿಶ್ವದ ಅತಿದೊಡ್ಡ ಚುನಾವಣೆಯನ್ನು ಅತ್ಯಂತ ಅದ್ಧೂರಿ ಮತ್ತು ವೈಭವಯುತವಾಗಿ ನಡೆಸಲಾಯಿತು. ಈ ಚುನಾವನೆಯು ಬಹಳ ಮಹತ್ವದ್ದಾಗಿತ್ತು. ದೇಶದ ಜನರು ಸತತ 3ನೇ ಬಾರಿಗೆ ಸೇವೆ ಸಲ್ಲಿಸಲು ಸರ್ಕಾರಕ್ಕೆ ಅವಕಾಶ ನೀಡಿದ್ದಾರೆ ಎಂದು ಶ್ಲಾಘಿಸಿದರು.

  • ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೋದಿ

    ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೋದಿ

    ನವದೆಹಲಿ: ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿಯವರು (Narendra Modi) ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ (Oath Taking) ಸ್ವೀಕರಿಸಿದ್ದಾರೆ.

    72 ಸಚಿವರೊಂದಿಗೆ ಇಂದು ಮೋದಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಈ ಮೂಲಕ ಜವಾಹರಲಾಲ್ ನೆಹರೂ ಬಳಿಕ ಮೂರನೇ ಬಾರಿಗೆ ಮೋದಿ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದಾರೆ. 72 ಸಚಿವರ ಪೈಕಿ 32 ಕ್ಯಾಬಿನೆಟ್ ಸಚಿವರು, 5 ಸ್ವತಂತ್ರ ಮತ್ತು 36 ರಾಜ್ಯ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದನ್ನೂ ಓದಿ: ಮೋದಿ ಸಂಪುಟಕ್ಕೆ ಜೆಪಿ ನಡ್ಡಾ?

    73ರ ಹರೆಯದ ಮೋದಿ ಅವರು ಎನ್‌ಡಿಎ ಮೈತ್ರಿಕೂಟದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಧಾನಿ ಮೋದಿಗೆ ಪ್ರಮಾಣ ವಚನ ಬೋಧಿಸಿದರು. ಪ್ರಧಾನಿ ಮೋದಿ ನಂತರ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಪ್ರಮಾಣ ವಚನ ಸ್ವೀಕರಿಸಿದರು. ಇದನ್ನೂ ಓದಿ: ನವೀನ್‌ ಪಟ್ನಾಯಕ್‌ ಆಪ್ತ ವಿ.ಕೆ.ಪಾಂಡಿಯನ್‌ ಸಕ್ರಿಯ ರಾಜಕಾರಣಕ್ಕೆ ವಿದಾಯ

    ಇವರ ಬಳಿಕ ನಿತಿನ್ ಗಡ್ಕರಿ, ಜೆಪಿ ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್ ಮತ್ತು ನಿರ್ಮಲಾ ಸೀತಾರಾಮನ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದನ್ನೂ ಓದಿ: ಮತ್ತೆ ಪ್ರಧಾನಿಯಾಗಿ ಮೋದಿ ಪದಗ್ರಹಣ – ಪುರಿ ಬೀಚ್‌ನಲ್ಲಿ ಮರಳು ಕಲಾಕೃತಿ ರಚಿಸಿ ಶುಭಕೋರಿದ ಕಲಾವಿದ

  • ಜೂ.9ರ ಸಂಜೆ 7:15 ಕ್ಕೆ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿಯಾಗಿ ಮೋದಿ ಪ್ರಮಾಣವಚನ

    ಜೂ.9ರ ಸಂಜೆ 7:15 ಕ್ಕೆ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿಯಾಗಿ ಮೋದಿ ಪ್ರಮಾಣವಚನ

    ನವದೆಹಲಿ: ಇದೇ ಜೂ.9 ರಂದು ಸಂಜೆ 7:15 ಕ್ಕೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ (Narendra Modi) ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ರಾಷ್ಟ್ರಪತಿ ಭವನ ಪ್ರಕಟಣೆ ಮೂಲಕ ತಿಳಿಸಿದೆ.

    ಪ್ರಮಾಣ ವಚನ ಸ್ವೀಕಾರ ಸಮಾರಂಭ ಕುರಿತು ರಾಷ್ಟ್ರಪತಿ ಭವನ (Rashtrapati Bhavan) ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ರಾಷ್ಟ್ರಪತಿ ಭವನದಲ್ಲಿ ಸಮಾರಂಭ ನಡೆಯಲಿದೆ. ಇದನ್ನೂ ಓದಿ: ಮೋದಿ ಪ್ರಮಾಣ ವಚನಕ್ಕೆ ಸಕಲ ಸಿದ್ಧತೆ – ರಾಷ್ಟ್ರಪತಿ ಭವನಕ್ಕೆ ಭಾರೀ ಭದ್ರತೆ

    ಪ್ರಧಾನ ಮಂತ್ರಿ ಹಾಗೂ ಮಂತ್ರಿ ಮಂಡಲದ ಇತರ ಸದಸ್ಯರಿಗೆ ಜೂ.9 ರಂದು ಸಂಜೆ 7:15ಕ್ಕೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳು ಪ್ರಮಾಣವಚನ ಹಾಗೂ ಗೋಪ್ಯತಾ ವಿಧಿ ಬೋಧಿಸಲಿದ್ದಾರೆ ಎಂದು ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

    ನರೇಂದ್ರ ಮೋದಿ ಅವರು ಇಂದು ರಾಷ್ಟ್ರಪತಿ ಭವನದಲ್ಲಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಎನ್‌ಡಿಎ ನಾಯಕನಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಈ ವೇಳೆ ಎನ್‌ಡಿಎ ಮಿತ್ರಪಕ್ಷಗಳ ನಾಯಕರು ಸಹ ಮೋದಿಗೆ ಸಾಥ್‌ ನೀಡಿದ್ದರು. ಇದನ್ನೂ ಓದಿ: ರಾಷ್ಟ್ರಪತಿ ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಮೋದಿ

  • ರಾಷ್ಟ್ರಪತಿ ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಮೋದಿ

    ರಾಷ್ಟ್ರಪತಿ ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಮೋದಿ

    ನವದೆಹಲಿ: ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನದಲ್ಲಿ ದ್ರೌಪದಿ ಮುರ್ಮು (Droupadi Murmu) ಅವರನ್ನು ಭೇಟಿಯಾಗಿ ಎನ್‌ಡಿಎ (NDA) ನಾಯಕನಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.

    ದೆಹಲಿಯಲ್ಲಿ (New Delhi) ಇಂದು ನಡೆದ ಮೈತ್ರಿಕೂಟದ ಘಟಕಗಳ ಸಭೆಯಲ್ಲಿ ಮೋದಿ (Narendra Modi) ಅವರನ್ನು ಎನ್‌ಡಿಎ ಸಂಸದೀಯ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಅದಾದ ಬಳಿಕ ರಾಷ್ಟ್ರಪತಿಗಳನ್ನು ಭೇಟಿಯಾಗಿ ಮೋದಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಈ ವೇಳೆ ಮಿತ್ರಪಕ್ಷಗಳ ಹಲವು ನಾಯಕರು ಸಾಥ್‌ ನೀಡಿದರು. ಇದನ್ನೂ ಓದಿ: ಭಾರತದ ಇತಿಹಾಸದಲ್ಲಿ ಯಾವುದೇ ಚುನಾವಣಾ ಪೂರ್ವ ಮೈತ್ರಿ ಸಫಲವಾಗಿಲ್ಲ, ನಾವು ಸಾಧನೆ ಮಾಡಿದ್ದೇವೆ: ಎನ್‌ಡಿಎ ಕೊಂಡಾಡಿದ ಮೋದಿ

    ಬಳಿಕ ಮಾತನಾಡಿದ ಮೋದಿ, ರಾಷ್ಟ್ರಪತಿಯವರು ನನಗೆ ಕರೆ ಮಾಡಿ ನಿಯೋಜಿತ ಪ್ರಧಾನಿಯಾಗಿ ಕೆಲಸ ಮಾಡುವಂತೆ ಕೇಳಿಕೊಂಡರು. ಜೊತೆಗೆ ಪ್ರಮಾಣ ವಚನ ಸಮಾರಂಭದ ಬಗ್ಗೆ ಮಾಹಿತಿ ನೀಡಿದ್ದಾರೆ. ಜೂನ್ 9ರ ಸಂಜೆ ಆರಾಮವಾಗಿರುತ್ತೇವೆ ಎಂದು ರಾಷ್ಟ್ರಪತಿಗಳಿಗೆ ಹೇಳಿದ್ದೇನೆ. ಈಗ ರಾಷ್ಟ್ರಪತಿ ಭವನವು ಉಳಿದ ವಿವರಗಳನ್ನು ರೂಪಿಸುತ್ತದೆ. ಅಷ್ಟರೊಳಗೆ ನಾವು ಮಂತ್ರಿ ಮಂಡಳಿಯ ಪಟ್ಟಿಯನ್ನು ರಾಷ್ಟ್ರಪತಿಗಳಿಗೆ ಹಸ್ತಾಂತರಿಸುತ್ತೇವೆ. ಬಳಿಕ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

    ಆಜಾದಿ ಕಾ ಅಮೃತ್ ಮಹೋತ್ಸವದ ನಂತರ ಇದು ಮೊದಲ ಚುನಾವಣೆ. ಮೂರನೇ ಬಾರಿಗೆ ಎನ್‌ಡಿಎ ಸರ್ಕಾರಕ್ಕೆ ದೇಶಕ್ಕಾಗಿ ಸೇವೆ ಸಲ್ಲಿಸಲು ಜನರು ಅವಕಾಶ ನೀಡಿದ್ದಾರೆ. ಕಳೆದ ಎರಡು ಅವಧಿಗಳಲ್ಲಿ ನಾನು ದೇಶದ ಜನರಿಗೆ ಭರವಸೆ ನೀಡುತ್ತೇನೆ. ದೇಶವು ಮುನ್ನಡೆದ ವೇಗ, ಪ್ರತಿಯೊಂದು ಕ್ಷೇತ್ರದಲ್ಲೂ ಬದಲಾವಣೆ ಗೋಚರಿಸುತ್ತಿದೆ. 25 ಕೋಟಿ ಜನರು ಬಡತನದಿಂದ ಹೊರಬರಲು ಪ್ರತಿ ಭಾರತೀಯರಿಗೂ ಹೆಮ್ಮೆಯ ಕ್ಷಣವಾಗಿದೆ ಎಂದು ಮೋದಿ ಹೇಳಿದ್ದಾರೆ. ಇದನ್ನೂ ಓದಿ: ಉತ್ತಮ ಸಮಯ ಕಳೆದುಕೊಂಡ್ರೆ ಮತ್ತೆ ಸಿಗಲ್ಲ- ಮೋದಿ ಹೆಸರು ಅನುಮೋದಿಸಿದ ನಿತೀಶ್

    10 ವರ್ಷಗಳ ಈ ಅವಧಿಯಲ್ಲಿ ಭಾರತ ವಿಶ್ವಬಂಧುವಾಗಿ ಹೊರಹೊಮ್ಮಿದೆ. ಇದರ ಗರಿಷ್ಠ ಪ್ರಯೋಜನವು ಈಗ ಪ್ರಾರಂಭವಾಗಿದೆ. ಮುಂದಿನ 5 ವರ್ಷಗಳು ಜಾಗತಿಕ ಪರಿಸರದಲ್ಲಿ ಭಾರತಕ್ಕೆ ತುಂಬಾ ಉಪಯುಕ್ತವಾಗುತ್ತವೆ ಎಂದು ನನಗೆ ಖಾತ್ರಿಯಿದೆ. ಜಗತ್ತು ಅನೇಕ ಬಿಕ್ಕಟ್ಟುಗಳು, ಹಲವು ಉದ್ವಿಗ್ನತೆಗಳು, ವಿಪತ್ತುಗಳ ಮೂಲಕ ಸಾಗುತ್ತಿದೆ. ಇಷ್ಟು ದೊಡ್ಡ ಬಿಕ್ಕಟ್ಟುಗಳ ನಡುವೆಯೂ ಇಂದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಹೆಸರಾಗಿರುವುದು ಭಾರತೀಯರಾದ ನಾವು ಅದೃಷ್ಟವಂತರು. ಬೆಳವಣಿಗೆಗಾಗಿ ನಾವು ಜಗತ್ತಿನಲ್ಲಿಯೂ ಪ್ರಶಂಸೆ ಪಡೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಇದಕ್ಕೂ ಮುನ್ನ ಸಂವಿಧಾನ ಸದನದಲ್ಲಿ ನಡೆದ ಎನ್‌ಡಿಎ ಮಿತ್ರಪಕ್ಷಗಳ ಸಭೆಯಲ್ಲಿ ‘ಮೋದಿ ಮೋದಿ’ ಘೋಷಣೆಗಳೊಂದಿಗೆ ಪ್ರಧಾನಿಯನ್ನು ಸ್ವಾಗತಿಸಲಾಯಿತು. ಸಭೆ ಸೇರಲು ಆಗಮಿಸಿದ ಪ್ರಧಾನಿಯವರು ಗೌರವಪೂರ್ವಕವಾಗಿ ಸಂವಿಧಾನ ಪ್ರತಿಗೆ ನಮಸ್ಕರಿಸಿ ಗೌರವ ಸಲ್ಲಿಸಿದರು. ಇದನ್ನೂ ಓದಿ: ಪ್ರಧಾನಿ ಸ್ಥಾನಕ್ಕೆ ಘಟಾನುಘಟಿ ನಾಯಕರಿಂದ ಮೋದಿ ಹೆಸರು ಅನುಮೋದನೆ

    ಸಭೆ ಬಳಿಕ ಪ್ರಧಾನಿ ಮೋದಿ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದ್ದರು. ಅವರು ಬಿಜೆಪಿಯ ಹಿರಿಯ ನಾಯಕರಾದ ಭಾರತರತ್ನ ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು.

  • ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿ ರಾಜೀನಾಮೆ

    ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿ ರಾಜೀನಾಮೆ

    ನವದೆಹಲಿ: ನರೇಂದ್ರ ಮೋದಿಯವರು (Narendra Modi) ಇಂದು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಇಂದು ರಾಷ್ಟ್ರಪತಿ ಭವನಕ್ಕೆ ತೆರಳಿದ ನರೇಂದ್ರ ಮೋದಿಯವರು ದ್ರೌಪದಿ ಮುರ್ಮು (Droupadi Murmu) ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರವನ್ನು ನೀಡಿದ್ದಾರೆ. ರಾಷ್ಟ್ರಪತಿಗಳು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಅಲ್ಲದೇ ಹೊಸ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಅಧಿಕಾರದಲ್ಲಿ ಮುಂದುವರಿಯುವಂತೆ ನರೇಂದ್ರ ಮೋದಿ ಮತ್ತು ಮಂತ್ರಿ ಮಂಡಳಿಗೆ ಮನವಿ ಮಾಡಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ 292 ಸ್ಥಾನಗಳನ್ನು ಗೆದ್ದಿದ್ದು, ನರೇಂದ್ರ ಮೋದಿ ಮೂರನೇ ಅವಧಿಗೆ ಅಧಿಕಾರ ನಡೆಸುವುದು ಖಚಿತವಾಗಿದೆ. ಆದರೆ ಬಿಜೆಪಿ ಗೆದ್ದರೂ ಮಿತ್ರ ಪಕ್ಷಗಳ ಬೆಂಬಲದಿಂದ ಬಹುಮತ ಸಾಬೀತು ಪಡಿಸಬೇಕಿದೆ. ಈ ಮೂಲಕ 10 ವರ್ಷಗಳ ನಂತರ ದೇಶದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸಂಚಲನ ಮೂಡಿಸಿದ ಒಂದು ಕ್ಷೇತ್ರದ ಸೋಲು – ಮತ್ತೆ ಎನ್‌ಡಿಎಗೆ ಸೇರ್ತಾರಾ ಉದ್ಧವ್‌?