Tag: Droupadi Murmu

  • ದೇಶದ ಚರಿತ್ರೆಯಲ್ಲಿ ಬುಡಕಟ್ಟು ಮಹಿಳೆಗೆ ರಾಷ್ಟ್ರಪತಿ ಪಟ್ಟ – ಇಂದು ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕಾರ

    ದೇಶದ ಚರಿತ್ರೆಯಲ್ಲಿ ಬುಡಕಟ್ಟು ಮಹಿಳೆಗೆ ರಾಷ್ಟ್ರಪತಿ ಪಟ್ಟ – ಇಂದು ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕಾರ

    ನವದೆಹಲಿ: ದೇಶದ 15ನೇ ರಾಷ್ಟ್ರಪತಿ, ಪ್ರಥಮ ಪ್ರಜೆಯಾಗಿ ಇಂದು ಬೆಳಗ್ಗೆ 10.15ಕ್ಕೆ ದ್ರೌಪದಿ ಮುರ್ಮು ಅಧಿಕಾರ ಸ್ವೀಕರಿಸಲಿದ್ದಾರೆ.

    ಸಾಮಾನ್ಯ ಶಿಕ್ಷಕಿಯಾಗಿದ್ದ ಬುಡಕಟ್ಟು ಸಮುದಾಯದ ಮುರ್ಮು ಅವರು ಸಂಸತ್‍ನ ಸೆಂಟ್ರಲ್ ಹಾಲ್‍ನಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಎನ್.ವಿ ರಮಣ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ. ಇದನ್ನೂ ಓದಿ: ಉಗ್ರರ ಸುರಕ್ಷಿತ ಅಡಗುದಾಣವಾಗ್ತಿದ್ಯಾ ಬೆಂಗಳೂರು? – ಶಂಕಿತ ಲಷ್ಕರ್ ಉಗ್ರನ ವಶ

    ಪ್ರಧಾನಿ ಮೋದಿ ಆದಿಯಾಗಿ ಸಚಿವರು, ಬಿಜೆಪಿಯ ಎಲ್ಲ ಸಂಸದರು ಈ ವೇಳೆ ಉಪಸ್ಥಿತರಿರುತ್ತಾರೆ. ದ್ರೌಪದಿ ಮುರ್ಮು ಒಡಿಶಾದ ಮಯೂರ್ ಭಂಜ್ ಜಿಲ್ಲೆಯ ಬೈದಪೋಸಿ ಗ್ರಾಮದವರಾಗಿದ್ದಾರೆ. 20 ಜೂನ್ 1958 ಜನಿಸಿದ ಅವರು ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ಮುರ್ಮು ದೇಶದ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿಯಾಗಿದ್ದು, ಸ್ವಾತಂತ್ರ್ಯೊತ್ತರ ಜನಿಸಿದ ವ್ಯಕ್ತಿಯೊಬ್ಬರು ರಾಷ್ಟ್ರಪತಿಯಾಗಿತ್ತಿರುವುದು ಇದೇ ಮೊದಲು. ಇನ್ನು, ದ್ರೌಪದಿ ಮುರ್ಮು ಪದಗ್ರಹಣ ಹಿನ್ನೆಲೆಯಲ್ಲಿ ಸ್ವಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ. ಇದನ್ನೂ ಓದಿ: ಮೇಕೆದಾಟು ಡ್ಯಾಂಗೆ ತಮಿಳುನಾಡು ವಿರೋಧ – ಸುಪ್ರೀಂಕೋರ್ಟ್‍ನಲ್ಲಿ ಇಂದು ವಿಚಾರಣೆ

    Live Tv
    [brid partner=56869869 player=32851 video=960834 autoplay=true]

  • ದ್ರೌಪದಿ ಮುರ್ಮುಗೆ ಗೆಲುವು – ಯಾರಿಗೆ ಎಷ್ಟು ಮತ?

    ದ್ರೌಪದಿ ಮುರ್ಮುಗೆ ಗೆಲುವು – ಯಾರಿಗೆ ಎಷ್ಟು ಮತ?

    ನವದೆಹಲಿ: ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ ಅಧಿಕೃತವಾಗಿದೆ. ಈ ಮೂಲಕ ಭಾರತದ ಬುಡಕಟ್ಟು ಜನಾಂಗದ ಮೊದಲ ರಾಷ್ಟ್ರಪತಿಯಾಗಿದ್ದಾರೆ. ದೇಶದ ದ್ವಿತೀಯ ಮಹಿಳಾ ರಾಷ್ಟ್ರಪತಿ ಎಂಬ ಖ್ಯಾತಿಗೂ ಒಳಗಾಗಿದ್ದಾರೆ.

    ರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿ ಗೆಲ್ಲಲು 5,43,000 ಮತಗಳ ಅಗತ್ಯವಿತ್ತು. ಆದರೆ ಮುರ್ಮು ಪರವಾಗಿ 6,76,803 ಮತ ಅಂದರೆ ಶೇ.64ರಷ್ಟು ಮತಗಳು ಚಲಾವಣೆಯಾಗಿದ್ದರೆ ಯಶವಂತ್‌ ಸಿನ್ಹಾ ಪರವಾಗಿ 3,80,177 ಮತಗಳು ಅಂದರೆ ಶೇ.35.97 ರಷ್ಟು ಮತಗಳು ಚಲಾವಣೆಯಾಗಿದೆ.

    ಗೆಲುವು ಖಚಿತ ಪಡೆಸಿಕೊಂಡ ಮುರ್ಮು, ಭಾರತ ಸ್ವತಂತ್ರ್ಯ ನಂತರ ಜನಿಸಿ ರಾಷ್ಟ್ರಪತಿ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಇದೇ ಜುಲೈ 25ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದನ್ನೂ ಓದಿ: ಯಾರಿಗೂ ಭಯಪಡದೆ ಸಂವಿಧಾನದ ಪಾಲಕರಾಗಬೇಕು: ದ್ರೌಪದಿ ಮುರ್ಮುಗೆ ಅಭಿನಂದಿಸಿದ ಯಶವಂತ್ ಸಿನ್ಹಾ

    ದ್ರೌಪದಿ ಮುರ್ಮ ಗೆಲುವಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ಕೇಂದ್ರ ಸಚಿವರು ಅಭಿನಂದನೆ ತಿಳಿಸಿದ್ದಾರೆ. ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗುತ್ತಿದ್ದಂತೆ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು.

    64 ವರ್ಷದ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಗೆಲ್ಲುವುದು ಮೊದಲೇ ಖಚಿತವಾಗಿದ್ದ ಕಾರಣ ಅವರ ಹುಟ್ಟೂರು ಒಡಿಶಾದ ಉಪರ್ಪೇಡ ಗ್ರಾಮದಲ್ಲಿ ಗುರುವಾರ ಬೆಳಗ್ಗೆಯಿಂದಲೇ ಸಂಭ್ರಮ ಮನೆ ಮಾಡಿತ್ತು. ಸಂತಾಲ್ ಸಮುದಾಯದ ಸಾಂಪ್ರದಾಯಿಕ ನೃತ್ಯ ಕೋಯಾ ಶೈಲಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಪಟಾಕಿ ಹಚ್ಚಿ ಸಂಭ್ರಮಿಸಿದ್ದಾರೆ. ಮುರ್ಮು ಅವರು ವಾಸವಿರುವ ರಾಯ್‍ರಂಗಪುರದಲ್ಲಿಯೂ ಸಂಭ್ರಮ ಮನೆ ಮಾಡಿದೆ.

    ದ್ರೌಪದಿ ಮುರ್ಮು ಯಾರು?
    1958ರ ಜೂನ್‌ 20 ರಂದು ಒಡಿಶಾದ ಉಪರ್ಪೆಡದಲ್ಲಿ ಜನಿಸಿದ ದ್ರೌಪದಿ ಮುರ್ಮು ಆರಂಭದಲ್ಲಿ ಶಾಲಾ ಶಿಕ್ಷಕಿ ಮತ್ತು ನೀರಾವರಿ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರು. ಬಿಜೆಪಿ ಮೂಲಕ ರಾಜಕೀಯ ಪ್ರವೇಶ ಮಾಡಿದ ಇವರು 1997ರಲ್ಲಿ ರಾಯ್‍ರಂಗಪುರ ಪುರಸಭೆ ಸದಸ್ಯೆಯಾದರು. ಬಳಿಕ ಬಿಜೆಪಿ ಬುಡಕಟ್ಟು ಮೋರ್ಚಾ ಉಪಾಧ್ಯಕ್ಷೆಯಾಗಿದ್ದ ಮುರ್ಮು ಒಡಿಶಾದ ಬಿಜೆಪಿ-ಬಿಜೆಡಿ ಮೈತ್ರಿ ಸರ್ಕಾರದಲ್ಲಿ ಸಚಿವೆಯಾಗಿದ್ದರು. 6 ವರ್ಷ ಜಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಪತಿ ಶ್ಯಾಂ ಚರಣ್ ಮುರ್ಮು ಮತ್ತು ಇಬ್ಬರು ಗಂಡು ಮಕ್ಕಳು ವಿಧಿವಶರಾಗಿದ್ದು ಪುತ್ರಿ ಇತಿಶ್ರೀ ಮುರ್ಮು ಇದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ – ದೇಶದ ಪ್ರಥಮ ಪ್ರಜೆಯಾದ ಬುಡಕಟ್ಟು ಮಹಿಳೆ

    15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ – ದೇಶದ ಪ್ರಥಮ ಪ್ರಜೆಯಾದ ಬುಡಕಟ್ಟು ಮಹಿಳೆ

    ನವದೆಹಲಿ: ದೇಶದ ಪ್ರಥಮ ಪ್ರಜೆಯಾಗಿ ಇದೇ ಮೊದಲ ಬಾರಿಗೆ ಬುಡಕಟ್ಟು ಮಹಿಳೆಯೊಬ್ಬರು ಆಯ್ಕೆಯಾಗಿದ್ದಾರೆ. ಎನ್‍ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ನಿರೀಕ್ಷೆಗಿಂತ ಹೆಚ್ಚು ಮತ ಪಡೆದು 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.

    ಪ್ರತಿಸ್ಪರ್ಧಿ, ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ನಿರೀಕ್ಷೆಯಂತೆ ಸೋಲು ಕಂಡಿದ್ದಾರೆ. ದ್ರೌಪದಿ ಮುರ್ಮು ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ, ವಿಪಕ್ಷ ನಾಯಕರು ಸೇರಿ ಹಲವರು ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಗುಜರಾತ್‍ನಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ವಿದ್ಯುತ್ ಉಚಿತ ಪೂರೈಕೆ ಭರವಸೆ ನೀಡಿದ ಕೇಜ್ರಿವಾಲ್

    ಜುಲೈ 24ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧಿಕಾರಾವಧಿ ಅಂತ್ಯಗೊಳ್ಳಲಿದ್ದು, ಜುಲೈ 25 ರಂದು ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಿ ರೈಸಿನಾ ಹಿಲ್ ಪ್ರದೇಶದಲ್ಲಿರುವ ರಾಷ್ಟ್ರಪತಿ ಭವನವನ್ನು ಪ್ರವೇಶ ಮಾಡಲಿದ್ದಾರೆ. ಈ ಮೂಲಕ ದೇಶದ ಚರಿತ್ರೆಯಲ್ಲಿಯೇ ರಾಷ್ಟ್ರಪತಿಯಾದ ಎರಡನೇ ಮಹಿಳೆ ಎಂಬ ಗರಿಮೆಗೆ ದ್ರೌಪದಿ ಮುರ್ಮು ಅವರು ಭಾಜನರಾಗಿದ್ದಾರೆ. ಫಲಿತಾಂಶಕ್ಕೆ ಮೊದಲೇ ಮುರ್ಮು ಗೆಲುವು ಖಚಿತವಾಗಿತ್ತು. 44 ಪಕ್ಷಗಳು ಮುರ್ಮುರನ್ನು ಬೆಂಬಲಿಸಿದ್ದವು. ವಿಪಕ್ಷಗಳ ಹಲವು ಶಾಸಕರು, ಸಂಸದರು ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿದ್ದರು. ಗೆಲುವಿಗೆ ಶೇ.50ಕ್ಕಿಂತ ಹೆಚ್ಚಿನ ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದಾರೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಇದನ್ನೂ ಓದಿ: ಗುಜರಾತ್‍ನಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ವಿದ್ಯುತ್ ಉಚಿತ ಪೂರೈಕೆ ಭರವಸೆ ನೀಡಿದ ಕೇಜ್ರಿವಾಲ್

    ದ್ರೌಪದಿ ಮುರ್ಮು ಪಡೆದ ಮತ:
    ಮೊದಲ ಸುತ್ತು (ಸಂಸದರ ಮತಮೌಲ್ಯ 700) ಚಲಾವಣೆಯಾದ ಸಂಸದರ ಮತ – 763 – ಮತ ಮೌಲ್ಯ – 5,34,100
    ದ್ರೌಪದಿ ಮುರ್ಮು – 540 – ಮತ ಮೌಲ್ಯ – 3,78,000
    ಯಶವಂತ್‌ ಸಿನ್ಹಾ – 208 – ಮತ ಮೌಲ್ಯ – 1,45,600
    ಅನರ್ಹ ಮತ – 15 – ಮತ ಮೌಲ್ಯ – 10,500

    2ನೇ ಸುತ್ತು (ಶಾಸಕರ ಮತ ಮೌಲ್ಯ 130.56) ಚಲಾವಣೆಯಾದ ಶಾಸಕರ ಮತ – 1,138 – ಮತ ಮೌಲ್ಯ – 1,49,575
    ದ್ರೌಪದಿ ಮುರ್ಮು – 809 – ಮತ ಮೌಲ್ಯ – 1,05,299
    ಯಶವಂತ್ ಸಿನ್ಹಾ – 329 – ಮತ ಮೌಲ್ಯ – 44,276
    ಅನರ್ಹ ಮತ – 00 – ಮತ ಮೌಲ್ಯ – 00

    Live Tv
    [brid partner=56869869 player=32851 video=960834 autoplay=true]

  • ರಾಷ್ಟ್ರಪತಿ ಚುನಾವಣೆ ಇಂದು ಫಲಿತಾಂಶ ಪ್ರಕಟ – ದ್ರೌಪದಿ ಮುರ್ಮು ಗ್ರಾಮದಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ

    ರಾಷ್ಟ್ರಪತಿ ಚುನಾವಣೆ ಇಂದು ಫಲಿತಾಂಶ ಪ್ರಕಟ – ದ್ರೌಪದಿ ಮುರ್ಮು ಗ್ರಾಮದಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ

    ನವದೆಹಲಿ: ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಇಂದು ಮಧ್ಯಾಹ್ನದ ಹೊತ್ತಿಗೆ ಪ್ರಕಟಗೊಳ್ಳಲಿದೆ. ಜುಲೈ 18ರಂದು ಮತದಾನ ನಡೆದಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಮತದಾನ ಎಣಿಕೆ ಕಾರ್ಯ ಆರಂಭವಾಗಲಿದೆ.

    ರಾಷ್ಟ್ರಪತಿ ಹುದ್ದೆಗೆ ಎನ್‍ಡಿಎಯಿಂದ ದ್ರೌಪದಿ ಮುರ್ಮು, ವಿಪಕ್ಷಗಳಿಂದ ಯಶವಂತ್‌ ಸಿನ್ಹಾ ಅವರನ್ನ ಕಣಕ್ಕಿಳಿಸಲಾಗಿತ್ತು. ಲೆಕ್ಕಾಚಾರದ ಪ್ರಕಾರ ಎನ್‍ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಬಹುತೇಕ ವಿಜಯಶಾಲಿ ಆಗಲಿದ್ದಾರೆ.

    ಮುರ್ಮು ಅವರಿಗೆ ಎನ್‍ಡಿಎ ಪಕ್ಷಗಳಲ್ಲದೇ, ಬಿಜೆಡಿ, ಟಿಡಿಪಿ, ವೈಎಸ್‍ಆರ್‌ಪಿ, ಜೆಡಿಎಸ್, ಬಿಎಸ್‍ಪಿ, ಅಕಾಲಿದಳ, ಶಿವಸೇನೆ, ಜೆಎಂಎಂ ಬೆಂಬಲ ನೀಡಿವೆ. ಅಲ್ಲದೇ, ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳ ಕೆಲ ಸದಸ್ಯರಿಂದ ಅಡ್ಡಮತದಾನ ಕೂಡ ಆಗಿದೆ ಎನ್ನಲಾಗಿದೆ. ಅಲ್ಲದೆ ಬುಡಕಟ್ಟು ಜನಾಂಗದ ಮಹಿಳೆಯೊರ್ವರನ್ನ ಎನ್‍ಡಿಎ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿಯನ್ನಾಗಿಸಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ನ್ಯಾಷನಲ್‌ ಹೆರಾಲ್ಡ್‌ ಕೇಸ್‌- ಇಂದು ಇಡಿ ಮುಂದೆ ಹಾಜರಾಗಲಿದ್ದಾರೆ ಸೋನಿಯಾ

    ಒಡಿಶಾದ ಮಯೂರ್‍ಭಂಜ್ ಜಿಲ್ಲೆಯ ಉಪರ್‍ಬೇಡಾ ಗ್ರಾಮದಲ್ಲಿ ಸಮುದಾಯದವರು ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇಡೀ ಗ್ರಾಮವನ್ನು ಸ್ವಚ್ಛಗೊಳಿಸಿ, ಮನೆ ಮನೆಗಳನ್ನು ತಳಿರು-ತೋರಣಗಳಿಂದ ಸಿಂಗಾರ ಮಾಡಲಾಗಿದೆ. ಫಲಿತಾಂಶ ಬಳಿಕ ಸಾಂಪ್ರದಾಯಿಕ ನೃತ್ಯವೂ ನಡೆಯಲಿದೆ.

    ಬುಡಕಟ್ಟು ಸಮುದಾಯದ ಮೊದಲ, ಅತಿಕಿರಿಯ ವಯಸ್ಸಿನ ಹಾಗೂ ಸ್ವಾತಂತ್ರ್ಯಾ ನಂತರ ಜನಿಸಿದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ದ್ರೌಪದಿ ಮುರ್ಮು ಪಾತ್ರರಾಗಲಿದ್ದಾರೆ. ಇದೇ 24ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧಿಕಾರವಧಿ ಕೊನೆಯಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ರಾಷ್ಟ್ರಪತಿ ಚುನಾವಣೆ- ವ್ಹೀಲ್ ಚೇರ್‌ನಲ್ಲಿ ಬಂದು ಮತ ಹಾಕಿದ ಮನಮೋಹನ್ ಸಿಂಗ್

    ರಾಷ್ಟ್ರಪತಿ ಚುನಾವಣೆ- ವ್ಹೀಲ್ ಚೇರ್‌ನಲ್ಲಿ ಬಂದು ಮತ ಹಾಕಿದ ಮನಮೋಹನ್ ಸಿಂಗ್

    ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವ್ಹೀಲ್ ಚೇರ್‌ನಲ್ಲಿ ಆಗಮಿಸಿ ಮತ ಚಲಾಯಿಸಿದರು.

    ಭಾರತದ ನೂತನ ರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಇಂದು ದೇಶಾದ್ಯಂತ ಸಂಸತ್ತಿನಲ್ಲಿ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ರಹಸ್ಯ ಮತದಾನದ ಮೂಲಕ ಮತದಾನ ನಡೆಯಿತು. ಈ ಸಂದರ್ಭದಲ್ಲಿ 89 ವರ್ಷದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಂಸತ್ ಭವನಕ್ಕೆ ವ್ಹೀಲ್ ಚೇರ್ ಮೂಲಕ ಬಂದು ಮತವನ್ನು ಹಾಕಿದರು. ಅವರಿಗೆ ಮತ ಚಲಾಯಿಸಲು ನಾಲ್ವರು ಅಧಿಕಾರಿಗಳು ಸಹಾಯ ಮಾಡಿದರು.

    ಈ ವೀಡಿಯೋವನ್ನು ಕಾಂಗ್ರೆಸ್‍ನ ಅನೇಕ ನಾಯಕರು ಹಂಚಿಕೊಂಡಿದ್ದು, ಮನಮೋಹನ್ ಸಿಂಗ್ ಅವರು ಆದಷ್ಟು ಬೇಗ ಉತ್ತಮ ಆರೋಗ್ಯವನ್ನು ಮರಳಿ ಪಡೆಯಲಿ. ಅವರನ್ನು ಈ ರೀತಿ ನೋಡಲು ಬೇಸರವಾಗಿದೆ ಎಂದಿದ್ದಾರೆ.

    ಆರೋಗ್ಯ ಹದಗೆಟ್ಟಿದ್ದರೂ ಪ್ರಜಾಸತ್ತಾತ್ಮಕ ಜವಾಬ್ದಾರಿಯನ್ನು ಪೂರೈಸಲು ಸಂಸತ್ತನ್ನು ತಲುಪಿದ ಮನಮೋಹನ್ ಸಿಂಗ್ ಅವರು ನಮಗೆಲ್ಲ ಸ್ಫೂರ್ತಿಯಾಗಿದ್ದಾರೆ. ದೇವರು ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ನೀಡಲಿ ಎಂದು ಯುವ ಕಾಂಗ್ರೆಸ್ ಮುಖ್ಯಸ್ಥ ಬಿ.ವಿ.ಶ್ರೀನಿವಾಸ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ದ್ರೌಪದಿ ಮುರ್ಮು, ಸಿನ್ಹಾ ಇಬ್ಬರಿಗೂ ವೋಟು ಹಾಕಲ್ಲ: ರಾಷ್ಟ್ರಪತಿ ಚುನಾವಣೆ ಬಹಿಷ್ಕರಿಸಿದ ಅಕಾಲಿ ದಳ ಶಾಸಕ

    ರಾಷ್ಟ್ರಪತಿ ಆಯ್ಕೆಯಲ್ಲಿ ಎನ್‍ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು, ವಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ ಸಿನ್ಹಾ ಕಣದಲ್ಲಿದ್ದಾರೆ. ಎನ್‍ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಶೇ.60ರಷ್ಟು ಮತಗಳೊಂದಿಗೆ ಗೆಲ್ಲುವುದು ಬಹುತೇಕ ಖಚಿತವಾಗಿದೆ. ದ್ರೌಪದಿ ಮುರ್ಮು ಅವರ ಅಭ್ಯರ್ಥಿಗೆ ಹಲವಾರು ಪ್ರಾದೇಶಿಕ ಪಕ್ಷಗಳು ತಮ್ಮ ಬೆಂಬಲವನ್ನು ಘೋಷಿಸಿರುವುದರಿಂದ ಒಟ್ಟು ಮತಗಳಲ್ಲಿ ಸುಮಾರು 62 ಪ್ರತಿಶತದಷ್ಟು ಮತಗಳನ್ನು ಗಳಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ- ಮತ ಚಲಾಯಿಸಿದ ಪ್ರಧಾನಿ ಮೋದಿ

    Live Tv
    [brid partner=56869869 player=32851 video=960834 autoplay=true]

  • ಇಂದು ರಾಷ್ಟ್ರಪತಿ ಚುನಾವಣೆ – ಜು.25ಕ್ಕೆ ಪ್ರಮಾಣವಚನ

    ಇಂದು ರಾಷ್ಟ್ರಪತಿ ಚುನಾವಣೆ – ಜು.25ಕ್ಕೆ ಪ್ರಮಾಣವಚನ

    ನವದೆಹಲಿ/ಬೆಂಗಳೂರು: ಭಾರತದ 15ನೇ ರಾಷ್ಟ್ರಪತಿ ಆಯ್ಕೆಗೆ ಇಂದು ಚುನಾವಣೆ ನಡೆಯಲಿದೆ. 4,800 ಚುನಾಯಿತ ಸಂಸದರು ಮತ್ತು ಶಾಸಕರು ಮತದಾನ ಮಾಡಲಿದ್ದಾರೆ.

    ಸಂಸತ್ ಭವನ ಮತ್ತು ರಾಜ್ಯ ವಿಧಾನಸೌಧಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಜುಲೈ 21ಕ್ಕೆ ಫಲಿತಾಂಶ ಪ್ರಕಟವಾಗಲಿದ್ದು, ಜುಲೈ 25ಕ್ಕೆ ಹೊಸ ರಾಷ್ಟ್ರಪತಿ ಪ್ರಮಾಣ ಸ್ವೀಕರಿಸಲಿದ್ದಾರೆ.

    ಎನ್‍ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು, ವಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ ಸಿನ್ಹಾ ಕಣದಲ್ಲಿದ್ದಾರೆ. ಎನ್‍ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಶೇ.60ರಷ್ಟು ಮತಗಳೊಂದಿಗೆ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಇದನ್ನೂ ಓದಿ: ಬುಡಕಟ್ಟು ವಿರೋಧಿ ಎಂದು ಬ್ಯಾನರ್ಜಿ ವಿರುದ್ಧ 50,000 ಪೋಸ್ಟರ್‌ ಹಾಕಿದ ಬಿಜೆಪಿ

    ಎನ್‍ಡಿಎ ಜೊತೆಗೆ ಬುಡಕಟ್ಟು ಮಹಿಳೆ ಎನ್ನುವ ಕಾರಣಕ್ಕೆ ಪ್ರಾದೇಶಿಕ ಪಕ್ಷಗಳಾದ ಬಿಜೆಡಿ, ವೈಎಸ್‍ಆರ್‌ಪಿಸಿ, ಬಿಎಸ್‍ಪಿ, ಎಐಎಡಿಎಂಕೆ, ಟಿಡಿಪಿ, ಜೆಡಿಎಸ್, ಶಿರೋಮಣಿ ಅಕಾಲಿದಳ, ಶಿವಸೇನೆ ಬೆಂಬಲ ನೀಡಿವೆ. ಒಟ್ಟು 10,86,431 ಮತಗಳ ಪೈಕಿ ವಿವಿಧ ಪ್ರಾದೇಶಿಕ ಪಕ್ಷಗಳ ಬೆಂಬಲದ ನಂತರ ಎನ್‍ಡಿಎ ಅಭ್ಯರ್ಥಿ ಪರ 6.67 ಲಕ್ಷಕ್ಕೂ ಹೆಚ್ಚು ಮತಗಳಿವೆ.

    ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ರಾಜ್ಯದ 224 ಜನ ಶಾಸಕರು ಹಾಗೂ 28 ಜನ ಲೋಕಸಭಾ ಸದಸ್ಯರು ಮತದಾನ ಮಾಡಲಿದ್ದಾರೆ. ಬಿಜೆಪಿ ಶಾಸಕರು ಒಟ್ಟಾಗಿ ನೇರವಾಗಿ ವಿಧಾನಸೌಧಕ್ಕೆ ಬಂದು ಮತದಾನ ಮಾಡಲಿದ್ದಾರೆ.

    ಕಾಂಗ್ರೆಸ್ ಶಾಸಕರಿಗೆ ನಿಗದಿತ ಸಮಯದೊಳಗೆ ಬಂದು ಮತದಾನ ಮಾಡುವಂತೆ ಸೂಚನೆ ನೀಡಲಾಗಿದೆ. ಈ ಮಧ್ಯೆ, ಆಗಸ್ಟ್ 6ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ವಿಪಕ್ಷಗಳ ಅಭ್ಯರ್ಥಿಯಾಗಿ ಕರ್ನಾಟಕ ಮೂಲದ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವಾರನ್ನು ಆಯ್ಕೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸೋಮವಾರ ದೇಶದ 15ನೇ ರಾಷ್ಟ್ರಪತಿ ಚುನಾವಣೆ – ಜುಲೈ 21ಕ್ಕೆ ಮತ ಎಣಿಕೆ

    ಸೋಮವಾರ ದೇಶದ 15ನೇ ರಾಷ್ಟ್ರಪತಿ ಚುನಾವಣೆ – ಜುಲೈ 21ಕ್ಕೆ ಮತ ಎಣಿಕೆ

    ನವದೆಹಲಿ: ದೇಶದ ಪ್ರಥಮ ಪ್ರಜೆ ಆಯ್ಕೆ ರಾಷ್ಟ್ರಪತಿ ಚುನಾವಣೆ ನಾಳೆ ನಡೆಯಲಿದೆ. ನಾಳೆ 15ನೇ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಆಯೋಗ ಎಲ್ಲಾ ತಯಾರಿ ನಡೆಸಿದೆ.

    ರಾಷ್ಟ್ರಪತಿ ಚುನಾವಣೆ ಘೋಷಣೆ ಆಗುವುದಕ್ಕಿಂತ ಮೊದಲು ಎನ್‍ಡಿಎ ಮತ್ತು ವಿಪಕ್ಷಗಳ ಮಧ್ಯೆ ಬಿಗ್ ಫೈಟ್ ನಡೆಯಬಹುದು ಎಂದು ಅಂದಾಜಿಸಲಾಗಿತ್ತು. ಆದ್ರೆ ಆದಿವಾಸಿ ಮಹಿಳೆ ದ್ರೌಪದಿ ಮುರ್ಮುರನ್ನು ಎನ್‍ಡಿಎ ಅಭ್ಯರ್ಥಿ ಆದ ಮೇಲೆ ಪರಿಸ್ಥಿತಿ ಸಂಪೂರ್ಣ ಬದಲಾಗಿ ಹೋಯ್ತು. ಬಿಜೆಪಿ ಮಾತ್ರವಲ್ಲ ಪ್ರಾದೇಶಿಕ ಪಕ್ಷಗಳಲ್ಲಿ ಬಹುತೇಕ ಪಕ್ಷಗಳು ಮುರ್ಮು ಅವರಿಗೆ ಜೈ ಎಂದಿರುವ ಕಾರಣ, ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಕಣದಲ್ಲಿದ್ದರೂ ಚುನಾವಣೆ ಏಕಪಕ್ಷೀಯ ಆಗಲಿದೆ ಎಂಬ ಮಾತು ಕೇಳಿಬಂದಿವೆ. ಇದನ್ನೂ ಓದಿ: ಉಪರಾಷ್ಟ್ರಪತಿ ಹುದ್ದೆಗೆ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಮಂಗಳೂರು ಮೂಲದ ಮಾರ್ಗರೇಟ್ ಆಳ್ವ ಆಯ್ಕೆ

    ದ್ರೌಪದಿ ಮುರ್ಮು ಜೊತೆ 44 ಪಕ್ಷಗಳಿದ್ರೆ, ಸಿನ್ಹಾ ಜೊತೆ 34 ಪಕ್ಷಗಳು ನಿಂತಿವೆ. ಎನ್‍ಡಿಎ ಕೂಟದಲ್ಲಿಲ್ಲದ ಬಿಜೆಡಿ, ವೈಎಸ್‍ಆರ್ ಕಾಂಗ್ರೆಸ್, ಶಿವಸೇನೆ, ಜೆಎಂಎಂ, ಟಿಡಿಪಿ, ಬಿಎಸ್‍ಪಿಯಂತಹ ಪಕ್ಷಗಳು ಕೂಡ ಮುರ್ಮುಗೆ ಬೆಂಬಲ ಪ್ರಕಟಿಸಿವೆ. ಇದರೊಂದಿಗೆ ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬುಡಕಟ್ಟು ಮಹಿಳೆ ರಾಷ್ಟ್ರಪತಿ ಆಗುವುದು ಖಚಿತವಾಗಿದೆ. ಮುರ್ಮು ದೇಶದ ಎರಡನೇ ಮಹಿಳಾ ರಾಷ್ಟ್ರಪತಿ ಎನಿಸಿಕೊಳ್ಳುವುದು ಅಧಿಕೃತವಾಗಿ ತಿಳಿಸುವುದೊಂದು ಬಾಕಿ ಇದೆ. ಇದನ್ನೂ ಓದಿ: ಬುಡಕಟ್ಟು ವಿರೋಧಿ ಎಂದು ಬ್ಯಾನರ್ಜಿ ವಿರುದ್ಧ 50,000 ಪೋಸ್ಟರ್‌ ಹಾಕಿದ ಬಿಜೆಪಿ

    ನಾಳೆ ಮತದಾನ ನಡೆಯಲಿದ್ದು, ಲೋಕಸಭೆ ಸದಸ್ಯರು, ರಾಜ್ಯಸಭೆ ಸದಸ್ಯರು, ಶಾಸಕರು ಸೇರಿ ಒಟ್ಟು 4,896 ಜನಪ್ರತಿನಿಧಿಗಳು ಈ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಎಲೆಕ್ಟರೋಲ್ ಕಾಲೇಜಿನ ಒಟ್ಟು ಮೌಲ್ಯ 10,86,431 ಇದ್ದು, ಅದ್ರಲ್ಲಿ ಅರ್ಧಕ್ಕಿಂತ ಹೆಚ್ಚು ಮತಗಳನ್ನು ಪಡೆದವರು ವಿಜೇತರಾಗಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಮುರ್ಮು ಆರೂವರೆ ಲಕ್ಷಕ್ಕೂ ಹೆಚ್ಚು ಮತ, ಯಶವಂತ ಸಿನ್ಹಾಗೆ ಮೂರೂವರೆ ಲಕ್ಷ ಮತಗಳು ಸಿಗುವ ನಿರೀಕ್ಷೆ ಇದೆ. ಜೂನ್ 21ಕ್ಕೆ ಮತ ಎಣಿಕೆ ನಡೆಯಲಿದೆ. ಪ್ರಸ್ತುತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧಿಕಾರಾವಧಿ ಜುಲೈ 24ಕ್ಕೆ ಮುಗಿಯಲಿದೆ. ಜುಲೈ 25ಕ್ಕೆ ನೂತನ ರಾಷ್ಟ್ರಪತಿಗಳು ಅಧಿಕಾರ ಸ್ವೀಕರಿಸಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮುಗೆ ನಮ್ಮ ಬೆಂಬಲ: ಉದ್ಧವ್‌ ಠಾಕ್ರೆ

    ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮುಗೆ ನಮ್ಮ ಬೆಂಬಲ: ಉದ್ಧವ್‌ ಠಾಕ್ರೆ

    ಮುಂಬೈ: ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಶಿವಸೇನಾ ಬೆಂಬಲ ನೀಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಘೋಷಿಸಿದ್ದಾರೆ.

    ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಹೀಗಾಗಿ ಅವರಿಗೆ ಬೆಂಬಲ ನೀಡಬೇಕು ಎಂದು ಶಿವಸೇನಾದ 22 ಸಂಸದ ಪೈಕಿ 16 ಸಂಸದರಿಂದ ಕೇಳಿಬಂದ ಒತ್ತಾಯದ ಮೇರೆಗೆ ಠಾಕ್ರೆ ಈ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ – ಸಂಸದರ ಬೇಡಿಕೆಗೆ ಮಣಿದ್ರಾ ಉದ್ಧವ್?

    ಈ ಕುರಿತು ಪ್ರತಿಕ್ರಿಯಿಸಿದ ಉದ್ಧವ್‌ ಠಾಕ್ರೆ, ನನ್ನ ಪಕ್ಷದ ಬುಡಕಟ್ಟು ನಾಯಕರು ಇದೇ ಮೊದಲ ಬಾರಿಗೆ ಬುಡಕಟ್ಟು ಮಹಿಳೆಗೆ ಅಧ್ಯಕ್ಷರಾಗಲು ಅವಕಾಶವಿದೆ ಎಂದು ನನಗೆ ಹೇಳಿದರು. ಬೆಂಬಲ ನೀಡುವ ವಿಚಾರವಾಗಿ ಸೇನಾ ಸಂಸದರ ಸಭೆಯಲ್ಲಿ ಯಾರೂ ನನ್ನ ಮೇಲೆ ಒತ್ತಡ ಹೇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ವಾಸ್ತವವಾಗಿ ಈಗಿನ ರಾಜಕೀಯ ವಾತಾವರಣದ ಪ್ರಕಾರ, ನಾನು ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಬಾರದು. ಆದರೆ ನಾವು ಸಂಕುಚಿತ ಮನೋಭಾವದವರಲ್ಲ ಎಂದು ಪರೋಕ್ಷವಾಗಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: “ಗಾಂಧಿಯಿಂದ ಗೋಡ್ಸೆಯವರೆಗೆ”..ರಾಷ್ಟ್ರ ಲಾಂಛನಕ್ಕೆ ಅವಮಾನ – ಮೋದಿ ವಿರುದ್ಧ ಕಿಡಿ

    ಇದಕ್ಕೂ ಮುಂಚೆ ಮಾತನಾಡಿದ್ದ ಮಾತನಾಡಿದ್ದ ಉದ್ಧವ್‌ ಠಾಕ್ರೆ ಬಣದ ಸಂಜಯ್‌ ರಾವುತ್‌, ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಿದ ಮಾತ್ರಕ್ಕೆ ಬಿಜೆಪಿ ಬೆಂಬಲಿಸಿದ್ದೇವೆ ಎಂದರ್ಥವಲ್ಲ ಎಂದು ತಿಳಿಸಿದ್ದರು.

    ಕಾಂಗ್ರೆಸ್‌, ಎನ್‌ಸಿಪಿ ಸೇರಿದಂತೆ ವಿಪಕ್ಷಗಳು ರಾಷ್ಟ್ರಪತಿ ಚುನಾವಣೆಗೆ ಯಶವಂತ್‌ ಸಿನ್ಹಾ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿವೆ. ಈ ನಡುವೆ ಕಾಂಗ್ರೆಸ್‌ ಮತ್ತು ಎನ್‌ಸಿಪಿಯೊಂದಿಗೆ ಮಹಾಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿ, ಶಿವಸೇನಾದ ಏಕನಾಥ್‌ ಸಿಂಧೆ ಬಣ ಮತ್ತು ಬಿಜೆಪಿ ಮೈತ್ರಿಯಿಂದ ಅಧಿಕಾರದಿಂದ ಕೆಳಗಿಳಿದ ಉದ್ಧವ್‌ ಠಾಕ್ರೆ ಅವರು ದ್ರೌಪದಿ ಮುರ್ಮು ಅವರಿಗೆ ಬೆಂಬಲ ಘೋಷಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಷ್ಟ್ರಪತಿ ಚುನಾವಣೆ: 107 ನಾಮಪತ್ರ ತಿರಸ್ಕೃತ, ದ್ರೌಪದಿ ಮುರ್ಮು, ಸಿನ್ಹಾ ಇಬ್ಬರಲ್ಲಿ ಪೈಪೋಟಿ

    ರಾಷ್ಟ್ರಪತಿ ಚುನಾವಣೆ: 107 ನಾಮಪತ್ರ ತಿರಸ್ಕೃತ, ದ್ರೌಪದಿ ಮುರ್ಮು, ಸಿನ್ಹಾ ಇಬ್ಬರಲ್ಲಿ ಪೈಪೋಟಿ

    ನವದೆಹಲಿ: ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಸಲ್ಲಿಕೆಯಾಗಿರುವ ನಾಮಪತ್ರಗಳನ್ನು ಪರಿಶೀಲಿಸಲಾಗಿದೆ. 94 ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿದ್ದ 115 ನಾಮಪತ್ರಗಳಲ್ಲಿ 107 ನಾಮಪತ್ರಗಳು ತಿರಸ್ಕೃತವಾಗಿವೆ.

    ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ಪ್ರತಿ ಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಅವರ ನಾಮಪತ್ರಗಳು ಕ್ರಮಬದ್ಧವಾಗಿದ್ದು, ಅಂತಿಮವಾಗಿ ಇವರಿಬ್ಬರು ಕಣದಲ್ಲಿ ಉಳಿಯಲಿದ್ದಾರೆ ಎಂದು ರಾಜ್ಯಸಭೆ ಪ್ರಧಾನ ಕಾರ್ಯದರ್ಶಿ ಪಿ.ಸಿ.ಮೋದಿ ತಿಳಿಸಿದ್ದಾರೆ. ಇದನ್ನೂ ಓದಿ: ಏಕನಾಥ್‌ ಶಿಂಧೆ ಸಿಎಂ – ನಾನು ಸರ್ಕಾರದಲ್ಲಿ ಇರಲ್ಲ ಎಂದ ಫಡ್ನವೀಸ್‌

    94 ಅಭ್ಯರ್ಥಿಗಳಿಂದ 115 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ ಅಗತ್ಯ ದಾಖಲೆಗಳಿರದ ಕಾರಣ 107 ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ. ಆರ್‌ಜೆಡಿ ಸಂಸ್ಥಾಪಕ ಲಾಲು ಪ್ರಸಾದ್ ಯಾದವ್ ಅವರ ಹೆಸರಿನ ವ್ಯಕ್ತಿಯೊಬ್ಬರು, ದೆಹಲಿಯ ಪ್ರೊಫೆಸರ್, ತಮಿಳುನಾಡಿನ ಸಾಮಾಜಿಕ ಹೋರಾಟಗಾರರೊಬ್ಬರು ಹಾಗೂ ಮುಂಬೈ ಕೊಳೆಗೇರಿಯ ನಿವಾಸಿಯೊಬ್ಬರು ನಾಮಪತ್ರ ಸಲ್ಲಿಸಿದ್ದರು. ಆರ್‌ಬಿಐ ಮತ್ತು ಸರ್ಕಾರದ ಖಜಾನೆಗೆ 15 ಸಾವಿರ ರೂ. ಠೇವಣಿ ಇಡದ ಕಾರಣಕ್ಕೆ ಬಹುತೇಕ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾಗಿವೆ.

    ಮುರ್ಮು ಮತ್ತು ಸಿನ್ಹಾ ಅವರು ತಲಾ 4 ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದ್ದು, ಕ್ರಮಬದ್ಧವಾಗಿರುವುದರಿಂದ ಈ ಇಬ್ಬರ ನಾಮಪತ್ರಗಳನ್ನು ಸ್ವೀಕರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮೋದಿ, ಅಮಿತ್‌ ಶಾ, ಯೋಗಿಗೆ ಜೀವ ಬೆದರಿಕೆ – ಆರೋಪಿಯನ್ನು ಬಂಧಿಸಿ ಬಿಟ್ಟು ಕಳುಹಿಸಿದ ಪೊಲೀಸರು

    ನಾಮಪತ್ರ ಹಿಂಪಡೆಯಲು ಜುಲೈ 2 ಅಂತಿಮ ದಿನವಾಗಿದ್ದು, ಅಂದು ಮಧ್ಯಾಹ್ನ 3 ಗಂಟೆಗೆ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಗೆಜೆಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.

    ಆಗಸ್ಟ್ 6ರಂದು ಉಪರಾಷ್ಟ್ರಪತಿ ಚುನಾವಣೆ: ಜುಲೈ 18ರಂದು ರಾಷ್ಟ್ರಪತಿ ಚುಮಾವಣೆ ಮುಕ್ತಾಯಗೊಳ್ಳಲಿದ್ದು, ಆಗಸ್ಟ್ 6ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ಜುಲೈ 13ರಿಂದಲೇ ನಾಮಪತ್ರ ಸಲ್ಲಿಕೆಯಾಗಲಿದೆ. ಹಾಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರ ಅಧಿಕಾರ ಅವಧಿಯು ಆಗಸ್ಟ್ 10 ರಂದು ಮುಕ್ತಾಯಗೊಳ್ಳಲಿದ್ದು, ಆಗಸ್ಟ್ 6 ರಂದು ಚುನಾವಣೆ ನಡೆಯಲಿದೆ. ಅಂದೇ ಫಲಿತಾಂಶವೂ ಪ್ರಕಟವಾಗಲಿದೆ.

    Live Tv

  • ರಾಷ್ಟ್ರಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ರೈತ

    ರಾಷ್ಟ್ರಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ರೈತ

    ನವದೆಹಲಿ: ಬಿಜೆಪಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಆದರೂ ವಿಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹ ಅವರು ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ. ಪ್ರಬಲ ಅಭ್ಯರ್ಥಿಗಳ ನಡುವೆ ಪೈಟೋಟಿ ಏರ್ಪಟ್ಟಿರುವ ಹೊತ್ತಿನಲ್ಲಿ ರೈತರೊಬ್ಬರು ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ.

    ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ರೈತ ವಿನೋದ್ ಕುಮಾರ್ ಯಾದವ್ ತನಗೆ ಹಲವು ಸಂಸದರು, ಶಾಸಕರು ಹಾಗೂ ಸಚಿವರ ಬೆಂಬಲ ಇರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.

    10ನೇ ತರಗತಿ ವರೆಗೆ ಓದಿಕೊಂಡಿರುವ ವಿನೋದ್ ಕುಮಾರ್ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಇದರೊಂದಿಗೆ ರಾಜಕೀಯ ಚಟುವಟಿಕೆಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದ ವಿನೋದ್ ಇದೀಗ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಇದನ್ನೂ ಓದಿ: ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನದಿಂದ ಕೆಳಗಿಳಿದ ಮುಖೇಶ್ ಅಂಬಾನಿ – ಮಗ ಆಕಾಶ್‌ಗೆ ಪಟ್ಟ

    ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿರುವ ಅವರು, 2005-06 ರಿಂದ ನಾನು ಸಕ್ರೀಯ ರಾಜಕಾರಣದಲ್ಲಿದ್ದೇನೆ. ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲೂ ಸ್ಪರ್ಧಿಸಿದ್ದೇನೆ. ಅಷ್ಟೇ ಅಲ್ಲದೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮೀಪದ ಗ್ರಾಮದವನೇ ಆಗಿದ್ದೇನೆ. ಹೀಗಾಗಿ ತನ್ನ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ತಾನು 10 ರಾಜ್ಯಗಳ ನಾಯಕರು ಹಾಗೂ ಪಕ್ಷಗಳ ಜೊತೆ ಮಾತುಕತೆ ನಡೆಸಿದ್ದೇನೆ. ಎಲ್ಲರೂ ಬೆಂಬಲ ಸೂಚಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ನನ್ನ ಗೆಲುವು ಖಚಿತ. ಅಷ್ಟೇ ಅಲ್ಲ ತಾನು ಗೆದ್ದ ಬಳಿತ ತನ್ನ ಕಲಾನಿ ಗ್ರಾಮವನ್ನು ವಿಶ್ವವಿಖ್ಯಾತ ಮಾಡುತ್ತೇನೆ ಬೀಗಿದ್ದಾರೆ. ಇದನ್ನೂ ಓದಿ: ನೂಪುರ್‌ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಮುಸ್ಲಿಂ ಯುವಕರಿಂದ ಟೈಲರ್‌ ಶಿರಚ್ಛೇದ

    ನಾಮಪತ್ರ ಸಲ್ಲಿಕೆ ನಾಳೆಗೆ ಕೊನೆ: ಈವರೆಗೆ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು, ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹ ಸೇರಿದಂತೆ 56 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಜೂನ್ 29ಕ್ಕೆ ನಾಮಪತ್ರ ಸಲ್ಲಿಕೆ ಅಂತಿಮವಾಗಲಿದ್ದು, ಜುಲೈ 2ರ ಒಳಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಜುಲೈ 21ಕ್ಕೆ ಎತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟಗೊಳ್ಳಲಿದೆ.

    2017ರಲ್ಲಿ ರಾಷ್ಟ್ರಪತಿ ಚುನಾವಣೆಗೆ 106 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.

    Live Tv