ನವದೆಹಲಿ: ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ (Coffin) ಹೋಲಿಸಿ ಟ್ವೀಟ್ ಮಾಡಿದ ರಾಷ್ಟ್ರೀಯ ಜನತಾ ದಳದ (Rashtriya Janata Dal) ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಲು ಬಿಜೆಪಿ (BJP) ಮುಂದಾಗಿದೆ.
ಶವಪೆಟ್ಟಿಗೆಯ ಆಕಾರಕ್ಕೆ ಹೋಲಿಸಿದ ಟ್ವೀಟ್‍ಗೆ ಬಿಜೆಪಿ, ಆರ್‌ಜೆಡಿ (RJD) ವಿರುದ್ಧ ವಾಗ್ದಾಳಿ ನಡೆಸಿದೆ. ಅಲ್ಲದೆ ಟ್ವಿಟರ್ ಪೋಸ್ಟ್‌ನ ಹಿಂದೆ ಇರುವವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಹೇಳಿಕೊಂಡಿದೆ. ಇದನ್ನೂ ಓದಿ: ನೂತನ ಸಂಸತ್ ಉದ್ಘಾಟನೆಗೂ ಮುನ್ನ ಕಾರ್ಮಿಕರನ್ನು ಸನ್ಮಾನಿಸಿದ ಮೋದಿ
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿಯವರು, ಹೊಸ ಸಂಸತ್ತಿನ ಕಟ್ಟಡವನ್ನು ಸಾರ್ವಜನಿಕ ಹಣದಿಂದ ನಿರ್ಮಿಸಲಾಗಿದೆ. ಅದನ್ನು ಶವ ಪೆಟ್ಟಿಗೆಗೆ ಹೋಲಿಸಿರುವುದು ದುರದೃಷ್ಟಕರ ವಿಷಯವಾಗಿದೆ. ಅಲ್ಲದೆ ಸಂಸತ್ ಉದ್ಘಾಟನೆ ಬಹಿಷ್ಕರಿಸಿರುವವರು ಸಂಸತ್ತಿನ ಕಲಾಪಕ್ಕೆ ಹಾಜರಾಗುತ್ತಾರೆ. ಅವರೇನು ಶಾಶ್ವತವಾಗಿ ಸಂಸತ್ತನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರಾ? ಅವರ ಲೋಕಸಭೆ ಮತ್ತು ರಾಜ್ಯಸಭೆಯ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಾರೆಯೇ? ಎಂದು ಕುಟುಕಿದ್ದಾರೆ.
ಇಂದು ಶವಪೆಟ್ಟಿಗೆಗೆ ಹೋಲಿಸಿದವರನ್ನು, ದೇಶದ ಜನರು 2024 ರಲ್ಲಿ ಅದೇ ಶವಪೆಟ್ಟಿಗೆಯಲ್ಲಿ ಹೂಳುತ್ತಾರೆ. ಜನರು ಪ್ರಜಾಪ್ರಭುತ್ವದ ಹೊಸ ಮಂದಿರವನ್ನು ಪ್ರವೇಶಿಸಲು ನಿಮಗೆ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಕಿಡಿಕಾರಿದ್ದಾರೆ.
ಆರ್‌ಜೆಡಿಯ ಟ್ವೀಟ್ ಸಮರ್ಥಿಸಿಕೊಂಡಿರುವ ಪಕ್ಷದ ಮುಖಂಡ ಶಕ್ತಿ ಸಿಂಗ್ ಯಾದವ್, ನಮ್ಮ ಟ್ವೀಟ್‍ನಲ್ಲಿರುವ ಶವಪೆಟ್ಟಿಗೆಯು ಬಿಜೆಪಿ ಪ್ರಜಾಪ್ರಭುತ್ವವನ್ನು ಸಮಾಧಿ ಮಾಡುತ್ತಿರುವುದನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ.
ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ ಸೇರಿದಂತೆ 20 ರಾಜಕೀಯ ಪಕ್ಷಗಳು ಹೊಸ ಸಂಸತ್ತಿನ ಉದ್ಘಾಟನೆಯನ್ನು ಬಹಿಷ್ಕರಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಹೊಸ ಕಟ್ಟಡವನ್ನು ಏಕೆ ಉದ್ಘಾಟಿಸುತ್ತಿದ್ದಾರೆ ಎಂದು ಪ್ರಶ್ನಿಸಿವೆ. ರಾಷ್ಟ್ರಧ್ಯಕ್ಷೆ ದ್ರೌಪದಿ ಮುರ್ಮು (Droupadi Murmu) ಅವರನ್ನು ಸಂಪೂರ್ಣವಾಗಿ ಬದಿಗೊತ್ತಿ ನೂತನ ಸಂಸತ್ ಭವನವನ್ನು ತಾವೇ ಉದ್ಘಾಟಿಸುವ ಪ್ರಧಾನಿ ಮೋದಿಯವರ ನಿರ್ಧಾರ ಸರಿಯಲ್ಲ. ಅಲ್ಲದೆ ಇದು ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿಯಾಗಿದೆ ಎಂದು ಪ್ರತಿಪಕ್ಷಗಳು ವಾಗ್ದಾಳಿ ನಡೆಸಿವೆ. ಇದನ್ನೂ ಓದಿ: ಭಾರತದ ನೂತನ ಸಂಸತ್ ಭವನಕ್ಕೆ ದೇಶದ ವಿವಿಧತೆಯ ಮೆರುಗು
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜಾತಿ ಬಗ್ಗೆ ಉಲ್ಲೇಖಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ದೂರು ದಾಖಲಿಸಲಾಗಿದೆ.
ಸುಪ್ರೀಂ ಕೋರ್ಟ್ ವಕೀಲ ವಿನೀತ್ ಜಿಂದಾಲ್ ಅವರು ದೂರು ಸಲ್ಲಿಸಿದ್ದಾರೆ. ಇವರ ಹೇಳಿಕೆಯು ಸಮುದಾಯಗಳು/ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ಅಲ್ಲದೇ ಭಾರತ ಸರ್ಕಾರದ ಬಗ್ಗೆ ಅಪನಂಬಿಕೆ ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ಆಹ್ವಾನ ನೀಡಿಲ್ಲ ಎಂದು ಎಂಬ ಕಾರಣಕ್ಕೆ ರಾಷ್ಟ್ರಪತಿಗಳ ಜಾತಿ ಉಲ್ಲೇಖಿಸಿ ಖರ್ಗೆ ಮತ್ತು ಕೇಜ್ರಿವಾಲ್ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ನಾಯಕರ ಹೇಳಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಮ್ಮ ಗೌರವಾನ್ವಿತ ರಾಷ್ಟ್ರಪತಿಗಳು ಆದಿವಾಸಿ ಮತ್ತು ಎಸ್ಟಿ ಸಮುದಾಯಕ್ಕೆ ಸೇರಿದವರಾಗಿದ್ದು, ಆ ಸಮುದಾಯವನ್ನು ಪ್ರಚೋದಿಸುತ್ತದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ರಾಜಕೀಯ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ಅತ್ಯುನ್ನತ ಸಾಂವಿಧಾನಿಕ ಹುದ್ದೆಗಳನ್ನು ಅವಮಾನಿಸುವ ಮಟ್ಟಕ್ಕೆ ಇಳಿಯಲು ಬಿಡಬಾರದು. ಇದು ಗುರುತಿಸಬಹುದಾದ ಅಪರಾಧಗಳು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಭುವನೇಶ್ವರ್: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಭಾಷಣ ಮಾಡುತ್ತಿದ್ದಾಗ ವಿದ್ಯುತ್ ಕಡಿತಗೊಂಡ (Power Outage) ಘಟನೆ ಓಡಿಶಾದ (Odisha) ಬರಿಪಾದದ ಮಹಾರಾಜ ಶ್ರೀರಾಮಚಂದ್ರ ಭಂಜಾ ದೇವು ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ನಡೆದ 12ನೇ ಘಟಿಕೋತ್ಸವದಲ್ಲಿ ಈ ಘಟನೆ ನಡೆದಿದೆ. ರಾಜ್ಯಪಾಲ ಗಣೇಶಿ ಲಾಲ್ ಸಭಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಇದಾದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡುತ್ತಿದ್ದರು. ಈ ವೇಳೆ ವಿದ್ಯುತ್ ಕಡಿತಗೊಂಡಿದೆ.
ಇದರಿಂದಾಗಿ ವಿದ್ಯುತ್ ಕಡಿತದಿಂದಾಗಿ ರಾಷ್ಟ್ರಪತಿ ಮುರ್ಮು ಮಂದ ಬೆಳಕಿನಲ್ಲೇ ಭಾಷಣವನ್ನು ಮಾಡಬೇಕಾದ ಪರಿಸ್ಥಿತಿ ಉಂಟಾಯಿತು. ಘಟನೆಯಿಂದಾಗಿ ರಾಷ್ಟ್ರಪತಿಯ ಭದ್ರತಾ ಸಿಬ್ಬಂದಿಗೆ ವಿದ್ಯುತ್ ವೈಫಲ್ಯದಿಂದಾಗಿ 9 ನಿಮಿಷಗಳ ಕಾಲ ಭದ್ರತೆ ಒದಗಿಸಲು ಸಮಸ್ಯೆ ಎದುರಾಯಿತು. ಇದರಿಂದಾಗಿ ಓಡಿಶಾ ಸರ್ಕಾರ ಮುಜುಗರಕ್ಕೆ ಒಳಗಾಗಿದೆ. ಇದನ್ನೂ ಓದಿ:ಕರ್ನಾಟಕ ಚುನಾವಣೆ – ಡಿಜಿಟಲ್ ಮೀಡಿಯಾ ಹವಾ ಹೇಗಿದೆ?
ದಿಸ್ಪುರ್: ರಾಷ್ಟ್ರಪತಿ (President) ದ್ರೌಪದಿ ಮುರ್ಮು (Droupadi Murmu) ಅವರು ಶನಿವಾರ ಮೊದಲ ಬಾರಿಗೆ ಯುದ್ಧ ವಿಮಾನ ಸುಖೋಯ್ 30 ಎಂಕೆಐನಲ್ಲಿ (Sukhoi 30 MKI) ಹಾರಾಟ ನಡೆಸಿದ್ದಾರೆ.
ಶನಿವಾರ ಅಸ್ಸಾಂನ (Assam) ತೇಜ್‌ಪುರ ವಾಯುಪಡೆ ನಿಲ್ದಾಣದಲ್ಲಿ ಮುರ್ಮು ಯುದ್ಧ ವಿಮಾನವನ್ನು ಏರಿದ್ದಾರೆ. ಈ ಮೂಲಕ ಮುರ್ಮು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ 2ನೇ ರಾಷ್ಟ್ರಪತಿ ಎನಿಸಿಕೊಂಡಿದ್ದಾರೆ. ಹಾರಾಟದ ಬಳಿಕ ರಾಷ್ಟ್ರಪತಿ ಸುರಕ್ಷಿತವಾಗಿ ನಿಲ್ದಾಣದಲ್ಲಿ ಇಳಿದಿದ್ದಾರೆ.
2009ರಲ್ಲಿ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು.
#WATCH | President Droupadi Murmu lands at Tezpur Air Force Station, Assam after taking a sortie in the Sukhoi 30 MKI fighter aircraft pic.twitter.com/LqaNkdQYcl
ರಾಷ್ಟ್ರಪತಿ ದ್ರೌಪದಿ ಮುರ್ಮು ಏಪ್ರಿಲ್ 6ರಂದು ಅಸ್ಸಾಂಗೆ ತೆರಳಿದ್ದು, 3 ದಿನಗಳ ಪ್ರವಾಸದಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಹಲವು ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಇದನ್ನೂ ಓದಿ: ರಾಜಕೀಯ ಭವಿಷ್ಯವೇ ಬದಲಿಸಿದ ಒಂದೇ ಒಂದು ಮತ!
ನವದೆಹಲಿ: ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ (Sudha Murty) ಹಾಗೂ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ (SL Bhyrappa) ಅವರಿಗೆ ಪದ್ಮ ಭೂಷಣ (Padma Bhushan) ಪ್ರಶಸ್ತಿ ಲಭಿಸಿದೆ.
President Droupadi Murmu presents Padma Bhushan to Smt Sudha Murty for Social Work. A philanthropist, renowned author and Chairperson of Murty Foundation, she has initiated many projects in the fields of healthcare, education, art & culture, animal welfare and women’s empowerment pic.twitter.com/qQJeEjnKfY
— President of India (@rashtrapatibhvn) April 5, 2023
ಸಮಾಜ ಸೇವೆ, ಮಹಿಳಾ ಸಬಲೀಕರಣ, ಶಿಕ್ಷಣ, ಕಲೆ ಮತ್ತು ಸಂಸ್ಕೃತಿ, ವನ್ಯಜೀವಿ ಅಭಿವೃದ್ಧಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರಿಗೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಹಿರಿಯ ಸಾಹಿತಿ ಡಾ.ಎಸ್.ಎಲ್ ಭೈರಪ್ಪ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದನ್ನೂ ಓದಿ: ಸರ್ಕಾರವನ್ನು ಟೀಕಿಸಿದ ಮಾತ್ರಕ್ಕೆ ಮಾಧ್ಯಮ ನಿಯಂತ್ರಿಸಲು ಸಾಧ್ಯವಿಲ್ಲ: ಕೇಂದ್ರಕ್ಕೆ ಸುಪ್ರೀಂ ತರಾಟೆ
President Droupadi Murmu presents Padma Bhushan to Dr S.L. Bhyrappa for Literature & Education. A retired Professor of Philosophy, Dr Bhyrappa is a widely acclaimed Kannada author whose works have been translated in many languages. pic.twitter.com/62sszyVoSi
— President of India (@rashtrapatibhvn) April 5, 2023
ಇದೇ ವೇಳೆ ಕೆಜಿಎಫ್-2 ನಟಿ ರವೀನಾ ಟಂಡನ್‌ಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರು (Chief Election Commissioners) ಹಾಗೂ ಚುನಾವಣಾ ಆಯುಕ್ತರ ನೇಮಕಕ್ಕೆ ಸುಪ್ರೀಂ ಕೋರ್ಟ್ (Supreme Court) ತಾತ್ಕಾಲಿಕ ಸಮಿತಿ ರಚನೆ ಮಾಡಿದ್ದು, ಕೇಂದ್ರ ಸರ್ಕಾರದ (Government Of India) ಬಳಿ ಇದ್ದ ಅಧಿಕಾರವನ್ನು ಸಾಂವಿಧಾನಿಕ ಪೀಠ ಕಿತ್ತುಕೊಂಡು ಐತಿಹಾಸಿಕ ತೀರ್ಪು ನೀಡಿದೆ.
ನಿರ್ದಿಷ್ಟ ಕಾನೂನು ರಚನೆಯಾಗುವವರೆಗೆ ಚುನಾವಣಾ ಆಯಕ್ತರ ನೇಮಕದಲ್ಲಿ ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ (ಅತಿದೊಡ್ಡ ಏಕೈಕ ಪಕ್ಷ) ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಅವರನ್ನೊಳಗೊಂಡ ಸಮಿತಿಯ ಸಲಹೆ ಪಡೆಯುವಂತೆ ಕೋರ್ಟ್ ಆದೇಶ ನೀಡಿದೆ. ಸಮಿತಿಯ ಶಿಫಾರಸು ಆಧರಿಸಿ ರಾಷ್ಟ್ರಪತಿಗಳು (President Of India) ಆಯುಕ್ತರನ್ನು ನೇಮಕ ಮಾಡಲಿದ್ದಾರೆ ಎಂದೂ ಒತ್ತಿ ಹೇಳಿದೆ.
ಪ್ರಕರಣ ಸುಧೀರ್ಘ ವಿಚಾರಣೆ ನಡೆಸಿದ್ದ ನ್ಯಾ. ಕೆ.ಎಂ ಜೋಸೆಫ್, ನ್ಯಾ. ಅಜಯ್ ರಸ್ತೋಗಿ, ನ್ಯಾ. ಅನಿರುದ್ಧ ಬೋಸ್, ನ್ಯಾ. ಹೃಷಿಕೇಶ್ ರಾಯ್ ಮತ್ತು ನ್ಯಾ. ಸಿ.ಟಿ ರವಿ ಕುಮಾರ್ ಅವರನ್ನೊಳಗೊಂಡ ಸಂವಿಧಾನ ಪೀಠವು ಈ ಮಹತ್ವದ ಆದೇಶ ನೀಡಿದೆ. ಇದನ್ನೂ ಓದಿ: WPL 2023ː ಮಹಿಳೆಯರು, ಹುಡ್ಗೀರಿಗೆ ಪ್ರವೇಶ ಉಚಿತ, ಯಾರೂ ಬೇಕಾದ್ರೂ ಹೋಗ್ಬೋದು
ಕೋರ್ಟ್ ಹೇಳಿದ್ದೇನು?: ಭಾರತದ ಸಂವಿಧಾನದ 324 (2)ನೇ ವಿಧಿಯನ್ನು ಉಲ್ಲಂಘಿಸಿ ನೇಮಕಾತಿ ಮಾಡುವ ಅಧಿಕಾರವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈವರೆಗೂ ಕೇಂದ್ರ ಸರ್ಕಾರವೇ ಚುನಾವಣಾ ಆಯೋಗದ ಆಯುಕ್ತರನ್ನು ನೇಮಕ ಮಾಡುತ್ತಿತ್ತು.
ಕಾನೂನಿನ ನಿಯಮವನ್ನು ಖಾತರಿಪಡಿಸದ ಚುನಾವಣಾ ಆಯೋಗವು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಅದರ ವ್ಯಾಪಕವಾದ ಅಧಿಕಾರಗಳಲ್ಲಿ ಕಾನೂನುಬಾಹಿರವಾಗಿ ಅಥವಾ ಅಸಾಂವಿಧಾನಿಕವಾಗಿ ನಡೆದುಕೊಂಡರೆ ಅದು ರಾಜಕೀಯ ಪಕ್ಷಗಳ ಫಲಿತಾಂಶಗಳ ಮೇಲೆ ಪರಿಣಾಮ ಬೀರಲಿದೆ. ಇದನ್ನೂ ಓದಿ: ಬೊಮ್ಮಾಯಿಯಿಂದ ಶಿವಾಜಿ ಪುತ್ಥಳಿ ಲೋಕಾರ್ಪಣೆ – ಲಕ್ಷ್ಮಿ ಹೆಬ್ಬಾಳ್ಕರ್ ಗೈರು
ಚುನಾವಣಾ ಆಯೋಗವು ಸ್ವತಂತ್ರವಾಗಿರಬೇಕು, ರಾಜ್ಯಕ್ಕೆ ಬಾಧ್ಯತೆಯ ಸ್ಥಿತಿಯಲ್ಲಿರುವ ವ್ಯಕ್ತಿಯು ಸ್ವತಂತ್ರ ಮನಸ್ಥಿತಿಯನ್ನು ಹೊಂದಲು ಸಾಧ್ಯವಿಲ್ಲ. ಸ್ವತಂತ್ರ ವ್ಯಕ್ತಿ ಅಧಿಕಾರದಲ್ಲಿರುವವರಿಗೆ ಅಕ್ರಮ ನಡೆಯುವುದಿಲ್ಲ. ಹಲವಾರು ದಶಕಗಳು ಕಳೆದಿವೆ. ಆದರೂ ರಾಜಕೀಯ ಪಕ್ಷಗಳು ಇಸಿಐಗೆ ನೇಮಕಾತಿಗಳನ್ನು ನಿಯಂತ್ರಿಸಲು ಪ್ರತ್ಯೇಕ ಕಾನೂನನ್ನು ಪರಿಚಯಿಸಿಲ್ಲ ಎಂದು ಆದೇಶದಲ್ಲಿ ಸುಪ್ರೀಂ ತೀರ್ಪಿನಲ್ಲಿ ಉಲ್ಲೇಖಿಸಿದೆ.
ನವದೆಹಲಿ: ವಿವಿಧ ರಾಜ್ಯಗಳಿಗೆ 12 ರಾಜ್ಯಪಾಲರನ್ನು (Governor) ಹಾಗೂ ಕೇಂದ್ರಾಡಳಿತ ಪ್ರದೇಶ ಲಡಾಖ್‍ನಲ್ಲಿ ಒಬ್ಬರು ಲೆಫ್ಟಿನೆಂಟ್ ಗವರ್ನರ್ ನೇಮಿಸಿ ರಾಷ್ಟ್ರಪತಿ ಭವನ ಆದೇಶ ಹೊರಡಿಸಿದೆ.
ಮಹಾರಾಷ್ಟ್ರದ (Maharashtra) ರಾಜ್ಯಪಾಲರಾದ ಭಗತ್ ಸಿಂಗ್ ಕೊಶ್ಯಾರಿ ಹಾಗೂ ಲಡಾಖ್‍ನ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ರಾಧಾ ಕೃಷ್ಣನ್ ಮಾಥುರ್ ಅವರು ನೀಡಿರುವ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅಂಗೀಕರಿಸಿರುವುದಾಗಿ ತಿಳಿಸಲಾಗಿದೆ.
ಜಾರ್ಖಂಡ್‍ನ ರಾಜ್ಯಪಾಲ ರಮೇಶ್ ಬೈಸ್ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ಅರುಣಾಚಲಪ್ರದೇಶದ ಗವರ್ನರ್ ಡಾ. ಬಿ.ಡಿ. ಮಿಶ್ರಾ ಅವರನ್ನು ಲಡಾಖ್ ಲೆಫ್ಟಿನೆಂಟ್ ಆಗಿ ನೇಮಿಸಲಾಗಿದೆ.
– ಗಮನ ಸೆಳೆದ ಸಿಆರ್‌ಪಿಎಫ್ ಮಹಿಳಾ ತುಕಡಿ, ಅಗ್ನಿವೀರರು – ಈಜಿಪ್ಟ್ ಸೇನಾ ತುಕಡಿ ಭಾಗಿ – ಆಕಾಶದಲ್ಲಿ ಚಮತ್ಕಾರ ಮಾಡಿ ಯುದ್ಧ ವಿಮಾನ, ಹೆಲಿಕಾಪ್ಟರ್‌ಗಳು
ನವದೆಹಲಿ: ದೇಶಾದ್ಯಂತ 74ನೇ ಗಣರಾಜ್ಯೋತ್ಸವ (74th Republic Day) ಆಚರಣೆ ಮಾಡಲಾಗುತ್ತಿದೆ. ದೆಹಲಿಯ (New Delhi) ಬ್ರಿಟಿಷರ ಕಾಲದ ರಾಜಪಥ್ ಹೆಸರು ಕರ್ತವ್ಯ ಪಥ್ (Kartavya Path) ಎಂದು ಬದಲಾದ ನಂತರ ಈ ಬಾರಿ ಗಣರಾಜ್ಯೋತ್ಸವ ಹೊಸತನ ಹಾಗೂ ಹಲವು ಪ್ರಥಮಗಳಿಗೆ ಸಾಕ್ಷಿಯಾಯಿತು. ದೆಹಲಿಯ ಕರ್ತವ್ಯ ಪಥದಲ್ಲಿ ಹಲವು ವಿಶೇಷತೆಗಳೊಂದಿಗೆ ಅದ್ದೂರಿ ಪರೇಡ್ ನಡೆಯಿತು. ಕಣ್ಮಮನ ಸೆಳೆಯುವ ಟ್ಯಾಬ್ಲೊಗಳು, ಅತ್ಯಾಕರ್ಷಕ ಪಥ ಸಂಚಲನ ಎಲ್ಲರ ಗಮನ ಸೆಳೆಯಿತು.
ರಾಷ್ಟ್ರಪತಿ ದ್ರೌಪದಿ ಮುರ್ಮು, ಈಜಿಪ್ಟ್‌ನಿಂದ ಬಂದಿದ್ದ ಅತಿಥಿ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಪ್ರಧಾನಿ, ನರೇಂದ್ರ ಮೋದಿ ಸಮ್ಮುಖದಲ್ಲಿ ರಾಷ್ಟ್ರ ಧ್ವಜ ಹಾರಿಸುವ ಮೂಲಕ ಪರೇಡ್‌ಗೆ ಚಾಲನೆ ನೀಡಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪರೇಡ್ ವೀಕ್ಷಿಸಿದರು.
#RepublicDay2023 | The detachment of the Main Battle tank Arjun of 75 Armoured Regiment marches down the Kartavya Path. This is being led by Captain Amanjeet Singh. pic.twitter.com/m0nSLoSexR
ಹಲವು ಪ್ರಥಮಗಳ ವಿಶೇಷತೆ
ಪರೇಡ್ ಹಲವು ಹೊಸತನಕ ಸಾಕ್ಷಿಯಾಗಿತ್ತು. ಅಗ್ನಿವೀರರು ಪಥ್ ಸಂಕಲನದಲ್ಲಿ ಭಾಗಿಯಾಗದರೆ, ಇದೇ ಮೊದಲ ಬಾರಿಗೆ ಈಜಿಪ್ಟ್ ಸೇನಾ ತುಕಡಿ ಕೂಡಾ ಭಾಗಿಯಾಗಿತ್ತು. ಗುಲಾಮಿ ಮಾನಸಿಕತೆಯಿಂದ ಹೊರ ಬರುವ ಭಾಗವಾಗಿ 25 ಪೌಂಡರ್ ಗನ್‌ಗಳ ಬದಲು ಭಾರತದಲ್ಲಿ ನಿರ್ಮಿತವಾದ 105 ಎಂಎಂ ಇಂಡಿಯನ್ ಫಿಲ್ಡ್ ಗನ್‌ಗಳಿಂದ 21 ಗನ್ ಸೆಲ್ಯೂಟ್ ನೀಡಲಾಯಿತು. ಒಟ್ನಲ್ಲಿ ಈ ಬಾರಿಯ ಪರೇಡ್ ಭಾರತದ ನಾರಿ ಶಕ್ತಿ ಮತ್ತು ಆತ್ಮ ನಿರ್ಭರ್ ಭಾರತ್ ಶಕ್ತಿ ಸಂದೇಶ ಸಾರಿದರೆ, ವಿವಿಧತೆಯಲ್ಲಿ ಏಕತೆಗೊಂಡಿರುವ ಭಾರತದ ಸಂಸ್ಕೃತಿಯನ್ನು ಅನಾವರಣಗೊಳಿಸಿತು.
Delhi | Gujarat's tableau shows the renewable sources of energy on the theme 'Clean-Green energy Efficient Gujarat', at Republic Day 2023 pic.twitter.com/r7EFa7OivD
ಪರೇಡ್ ಗೆ ಚಾಲನೆ ನೀಡುತ್ತಿದ್ದಂತೆ ಪರೇಡ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ನೇತೃತ್ವದಲ್ಲಿ ಭವ್ಯ ಪರೇಡ್ ಆರಂಭವಾಯಿತು. 75 ಶಸ್ತ್ರಸಜ್ಜಿತ ರೆಜಿಮೆಂಟ್‌ನ ಮುಖ್ಯ ಯುದ್ಧ ಟ್ಯಾಂಕ್ ಅರ್ಜುನ್‌ನ ತುಕಡಿಯು ಪರೇಡ್ ಹಾದಿಯಲ್ಲಿ ಸಾಗಿ ಬಂತು. ಇದಾದ ಬಳಿಕ 61 ಅಶ್ವಸೈನ್ಯದ ಸಮವಸ್ತ್ರದಲ್ಲಿ ಮೊದಲ ತಂಡವನ್ನು ಕ್ಯಾಪ್ಟನ್ ರೈಜಾದಾ ಶೌರ್ಯ ಬಾಲಿ ಮುನ್ನಡೆಸಿದರು.
Uttar Pradesh's tableau at the Republic Day parade showcases the three-day Deepotsava celebrated in Ayodhya pic.twitter.com/I0JOKacvG6
ಬಳಿಕ 17 ಯಾಂತ್ರೀಕೃತ ಪದಾತಿ ದಳದ NAG ಕ್ಷಿಪಣಿ ವ್ಯವಸ್ಥೆಯನ್ನು ಮುನ್ನಡೆಸಿದ ಲೆಫ್ಟಿನೆಂಟ್ ಸಿದ್ಧಾರ್ಥ ತ್ಯಾಗಿ ಅವರಿಂದ ರಾಷ್ಟ್ರಪತಿ ಮುರ್ಮು ಗೌರವ ವಂದನೆ ಸ್ವೀಕರಿಸಿದರು. ಇದಾದ ಬಳಿಕ ಹಂತ ಹಂತವಾಗಿ ಬೇರೆ ಬೇರೆ ಸೇನಾ ತುಕಡಿಗಳು ಪಥ ಸಂಚಲನ ಮಾಡಿದವು. ಲಡಾಖ್ ಸ್ಕೌಟ್ಸ್ ರೆಜಿಮೆಂಟ್‌ನ ಕ್ಯಾಪ್ಟನ್ ನವೀನ್ ಧತ್ತೇರ್ವಾಲ್ ನೇತೃತ್ವದಲ್ಲಿ ಕ್ವಿಕ್ ರಿಯಾಕ್ಷನ್ ಫೈಟಿಂಗ್ ವೆಹಿಕಲ್‌ನ ತುಕಡಿ, ಲೆಫ್ಟಿನೆಂಟ್ ಪ್ರಜ್ವಲ್ ಕಲಾ ನೇತೃತ್ವದ 861 ಮಿಸೈಲ್ ರೆಜಿಮೆಂಟ್‌ನ ಬ್ರಹ್ಮೋಸ್‌ನ ತುಕಡಿ, 27 ಏರ್ ಡಿಫೆನ್ಸ್ ಮಿಸೈಲ್ ರೆಜಿಮೆಂಟ್‌ನ ಆಕಾಶ್ ವೆಪನ್ ಸಿಸ್ಟಮ್, ಕ್ಯಾಪ್ಟನ್ ಸುನಿಲ್ ದಶರಥೆ ನೇತೃತ್ವದ ‘ಅಮೃತಸರ ಏರ್‌ಫೀಲ್ಡ್’ ಮತ್ತು 512 ಲೈಟ್ ಎಡಿ ಮಿಸೈಲ್ ರೆಜಿಮೆಂಟ್, ಭಾರತೀಯ ನೌಕಾಪಡೆಯ 80 ಸಂಗೀತಗಾರರನ್ನು ಒಳಗೊಂಡಿರುವ ಭಾರತೀಯ ನೌಕಾಪಡೆಯ ಬ್ರಾಸ್ ಬ್ಯಾಂಡ್ ಕರ್ತವ್ಯ ಪಥ್ ನಲ್ಲಿ ಪರೇಡ್ ನಡೆಸಿದವು.
'Nari Shakti' depicted in Central Armed Police Force's tableau at the 74th Republic Day parade pic.twitter.com/z7dgu46ChO
ಕಣ್ಮಮನ ಸೆಳೆದ ಟ್ಯಾಬ್ಲೊಗಳು
ಈ ಬಾರಿಯ ಪರೇಡ್‌ನಲ್ಲಿ 17 ರಾಜ್ಯದ ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆ ಮತ್ತು ಸಚಿವಾಲಯದ ಆರು ಟ್ಯಾಬ್ಲೊಗಳು ಸೇರಿ ಒಟ್ಟು 23 ಟ್ಯಾಬ್ಲೊಗಳು ಭಾಗಿಯಾಗಿದ್ದವು. ಜಾರ್ಖಂಡ್‌ನ ಟ್ಯಾಬ್ಲೊ ದಿಯೋಘರ್‌ನಲ್ಲಿರುವ ಪ್ರಸಿದ್ಧ ಬೈದ್ಯನಾಥ ದೇವಾಲಯ, ಗುಜರಾತ್ ʼಸ್ವಚ್ಛ-ಹಸಿರು ಶಕ್ತಿ ಸಮರ್ಥ’ ಎಂಬ ಸಂದೇಶ ಮೇಲೆ ನವೀಕರಿಸಬಹುದಾದ ಇಂಧನದ ಬಗ್ಗೆ, ಕೇರಳವು ‘ನಾರಿ ಶಕ್ತಿ’ ಮತ್ತು ಮಹಿಳಾ ಸಬಲೀಕರಣದ ಜಾನಪದ ಸಂಪ್ರದಾಯಗಳ ಟ್ಯಾಬ್ಲೊವನ್ನು ಪ್ರದರ್ಶಿಸಿದವು.
Daring motorcycle display by Corps of Signals Dare Devils team at Kartavya Path on Republic Day pic.twitter.com/PMRgoorLku
ಪಶ್ಚಿಮ ಬಂಗಾಳದ ದುರ್ಗಾ ಪೂಜಾ, ಮಹಾರಾಷ್ಟ್ರದ ಶಕ್ತಿ ಪೀಠಗಳ ಮತ್ತು ತಮಿಳುನಾಡಿನ ಟ್ಯಾಬ್ಲೋ ಜನ ಮೆಚ್ಚುಗೆ ಪಾತ್ರವಾದರೆ, ಅಯೋಧ್ಯೆಯಲ್ಲಿ ಆಚರಿಸಲಾದ ಮೂರು ದಿನಗಳ ದೀಪೋತ್ಸವವನ್ನು ಉತ್ತರ ಪ್ರದೇಶ ಸರ್ಕಾರ ಈ ಬಾರಿ ಪ್ರದರ್ಶಿಸಿತು.
The grand finale of the 74th Republic Day parade comprises 45 IAF aircraft, one from Indian Navy and four helicopters from Indian Army pic.twitter.com/2KwLqOYrZb
ಕರ್ತವ್ಯ ಪಥ್‌ನಲ್ಲಿ ಕರ್ನಾಟಕದ ನಾರಿಶಕ್ತಿ
ಟ್ಯಾಬ್ಲೊಗಳ ಸರಣಿಯಲ್ಲಿ ಕರ್ನಾಟಕವೂ ಈ ಬಾರಿ ತನ್ನ ಟ್ಯಾಬ್ಲೊವನ್ನು ಪ್ರದರ್ಶಿಸಿತು. ಈ ಬಾರಿ ಕರ್ನಾಟಕ ನಾರಿ ಶಕ್ತಿ ಪರಿಕಲ್ಪನೆಯಲ್ಲಿ ಟ್ಯಾಬ್ಲೊ ಪ್ರದರ್ಶಿಸಿದ್ದು, ಟ್ಯಾಬ್ಲೊದಲ್ಲಿ 2,000 ಅಧಿಕ ಹೆರಿಗೆ ಮಾಡಿಸಿದ್ದ ಸೂಲಗಿತ್ತಿ ನರಸಮ್ಮ, 30,000ಕ್ಕೂ ಅಧಿಕ ಸಸಿಗಳನ್ನು ನೆಟ್ಟ ಹಾಲಕ್ಕಿ ತುಳಸಿ ಗೌಡ ಮತ್ತು 8,000 ಮರಗಳನ್ನು ಪೋಷಿಸಿದ ಸಾಲುಮರದ ತಿಮ್ಮಕ್ಕ ಅವರ ಸಾಧನೆಯನ್ನು ಒಳಗೊಂಡಿತ್ತು. ರಾಜ್ಯದ ಟ್ಯಾಬ್ಲೊ ಜೊತೆಗೆ ಉತ್ತರ ಕನ್ನಡದ ಹಾಲಕ್ಕಿ ಸುಗ್ಗಿ ಕುಣಿತ ಕಲಾವಿದರು ಹೆಜ್ಜೆ ಹಾಕಿದರು.
ಟ್ಯಾಬ್ಲೊಗಳ ಪ್ರದರ್ಶನದ ಬಳಿಕ ಆಕಾಶದಲ್ಲಿ ಯುದ್ದ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಭಾರತದ ಶಕ್ತಿಯನ್ನು ವಿಶ್ವಕ್ಕೆ ತೋರಿದವು. ರಫೇಲ್ ಕಸರತ್ತು ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಮೇಡ್ ಇನ್ ಇಂಡಿಯಾದ ಲಘು ಯುದ್ದ ವಿಮಾನ ಮತ್ತು ಹೆಲಿಕಾಪ್ಟರ್‌ಗಳು ಪ್ರದರ್ಶನ ನೀಡಿದವು.
Live Tv
[brid partner=56869869 player=32851 video=960834 autoplay=true]
ಕೋಲ್ಕತ್ತಾ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರ ಕುರಿತು ಟಿಎಂಸಿ (TMC) ಸಚಿವರು ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ರಾಷ್ಟ್ರಪತಿಯವರಲ್ಲಿ (President Of India) ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ವೈಯಕ್ತಿಕವಾಗಿ ಟೀಕಿಸುವುದು ಪಕ್ಷದ ಸಂಸ್ಕೃತಿಯಲ್ಲ ಎಂದಿದ್ದು, ಸಚಿವರಿಗೂ ಎಚ್ಚರಿಕೆ ನೀಡಿದ್ದಾರೆ.
ನಾವು ರಾಷ್ಟ್ರಪತಿಗಳನ್ನು ತುಂಬಾ ಗೌರವಿಸುತ್ತೇವೆ. ಅವರು ತುಂಬಾ ಒಳ್ಳೆಯವರು ಅಂಥವರನ್ನು ಟೀಕಿಸಿದ್ದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಸೌಂದರ್ಯವು ನಾವು ಬಾಹ್ಯವಾಗಿ ಹೇಗೆ ಕಾಣುತ್ತೇವೆ ಎಂಬುದಲ್ಲ, ಆಂತರಿಕವಾಗಿ ಹೇಗಿದ್ದೀವಿ ಎಂಬುದರ ಮೇಲೆ ಇದೆ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ದೆಹಲಿಯ ಭಯಾನಕ ಕೃತ್ಯಕ್ಕೆ ಅಮೆರಿಕದ ಥ್ರಿಲ್ಲರ್ `ಡೆಕ್ಸ್ಟರ್’ ಸ್ಫೂರ್ತಿ – ರೋಚಕ ಸತ್ಯ ಬಯಲು
ಟಿಎಂಸಿ (TMC) ಸಚಿವ ಅಖಿಲ್ ಗಿರಿ, ನಂದಿಗ್ರಾಮ್‌ನ ಹಳ್ಳಿಯೊಂದರಲ್ಲಿ ನಡೆದ ರ‍್ಯಾಲಿಯಲ್ಲಿ ರಾಷ್ಟ್ರಪತಿಗಳ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಅವರು ಮಾತನಾಡಿದ ಅವರ 17 ಸೆಕೆಂಡ್‌ಗಳ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿತ್ತು. ಈ ವೀಡಿಯೋನಲ್ಲಿ `ನಾವು ಯಾರನ್ನು ನೋಟದಿಂದ ನಿರ್ಣಯಿಸುವುದಿಲ್ಲ. ಆದರೆ ನಮ್ಮ ರಾಷ್ಟ್ರಪತಿಗಳು ನೋಡಲು ಹೇಗೆ ಕಾಣುತ್ತಾರೆ? ಅವರು ಸುಂದರವಾಗಿಲ್ಲ’ ಎಂದು ಹೇಳಿದ್ದರು. ಇದನ್ನೂ ಓದಿ: ಕಾಮೋತ್ತೇಜಕ ಮಾತ್ರೆ ಸೇವಿಸಿ ರೇಪ್ – ವಿಪರೀತ ರಕ್ತಸ್ರಾವದಿಂದ ಗೆಳತಿ ಸಾವು
ಟಿಎಂಸಿ ಸಚಿವರ ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ಶಾಸಕರು ರಾಜಭವನಕ್ಕೆ ಮೆರವಣಿಗೆ ನಡೆಸಿದ್ದರು. ಸಚಿವ ಅಖಿಲ್ ಗಿರಿ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿದ್ದರು.
Live Tv
[brid partner=56869869 player=32851 video=960834 autoplay=true]
ಕೋಲ್ಕತ್ತಾ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರ ಬಾಹ್ಯ ನೋಟದ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಪಶ್ಚಿಮ ಬಂಗಾಳದ ಸಚಿವ ಅಖಿಲ್ ಗಿರಿ (Akhil Giri) ಕ್ಷಮೆಯಾಚಿಸಿದರು.
ರಾಷ್ಟ್ರಪತಿ ಅವರ ಬಾಹ್ಯ ನೋಟದ ಬಗ್ಗೆ ನೀಡಿದ್ದ ಹೇಳಿಕೆ ವಿವಾದವಾಗುತ್ತಿದ್ದಂತೆ ವಾಹಿನಿಯೊಂದಕ್ಕೆ ಸ್ಪಷ್ಟನೆ ನೀಡಿರುವ ಸಚಿವರು, ಗೌರವಾನ್ವಿತ ರಾಷ್ಟ್ರಪತಿಗಳಿಗೆ ಅಗೌರವ ತೋರುವ ಉದ್ದೇಶ ನನಗಿರಲಿಲ್ಲ. ದಿನವೂ ಬಿಜೆಪಿ ಅವರು ನನ್ನ ಬಾಹ್ಯ ನೋಟದ ಬಗ್ಗೆ ಟೀಕಿಸುತ್ತಿದ್ದರು. ಇದರಿಂದಾಗಿ ಆಗಿ ಬಿಜೆಪಿ ನಾಯಕರು ನನ್ನ ಮೇಲೆ ವಾಗ್ದಾಳಿ ನಡೆಸಿದ್ದಕ್ಕೆ ಉತ್ತರಿಸಿದ್ದೇನೆ. ರಾಷ್ಟ್ರಪತಿಗೆ ನಾನು ಅಗೌರವ ತೋರಿದ್ದೇನೆ ಎಂದು ಯಾರಾದರೂ ಭಾವಿಸಿದರೆ ಅದು ತಪ್ಪು. ಇಂತಹ ಹೇಳಿಕೆ ನೀಡಿದ್ದಕ್ಕೆ ಕ್ಷಮೆ ಯಾಚಿಸುತ್ತೇನೆ. ನನಗೆ ರಾಷ್ಟ್ರಪತಿ ಬಗ್ಗೆ ಅಪಾರ ಗೌರವವಿದೆ ಎಂದು ತಿಳಿಸಿದ್ದಾರೆ.
Statement:
This is an irresponsible comment & does NOT represent the views of @AITCofficial.
We are extremely proud of the President of India & hold her & her office in the highest regard. https://t.co/v571435Snv
ಏನಿದು ವಿವಾದ?:
ನಂದಿಗ್ರಾಮದ ಹಳ್ಳಿಯೊಂದರಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ್ದ ಸಚಿವ ಅಖಿಲ್ ಗಿರಿ, ನಾನು ನೋಡಲು ಚೆನ್ನಾಗಿಲ್ಲ ಎಂದು ಬಿಜೆಪಿ ಅವರು ಹೇಳುತ್ತಾರೆ. ನಾವು ಯಾರನ್ನೂ ನೋಟದಿಂದ ಗೌರವಿಸುವುದಿಲ್ಲ. ನಾವು ರಾಷ್ಟ್ರಪತಿ ಹುದ್ದೆಯನ್ನು ಗೌರವಿಸುತ್ತೇವೆ. ಆದರೆ ಅವರು ನೋಡಲು ಹೇಗೆ ಕಾಣುತ್ತಾರೆ? ಎಂದು ಸಚಿವರು ಹೇಳಿದ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಸ್ವಪಕ್ಷದಿಂದಲೇ ವಿರೋಧ: ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ವಿವಾದಕ್ಕೀಡಾಗಿತ್ತು. ಅನೇಕ ಪಕ್ಷಗಳು ರಾಷ್ಟ್ರಪತಿ ವಿರುದ್ಧ ಈ ರೀತಿ ಮಾತನಾಡಿದ್ದಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದರು, ಅಷ್ಟೇ ಅಲ್ಲದೇ ಸಚಿವರ ಸ್ವಪಕ್ಷವಾಗಿರುವ ಟಿಎಂಸಿಯು (Trinamool Congress) ಈ ಹೇಳಿಕೆಯನ್ನು ವಿರೋಧಿಸಿತ್ತು.
#WATCH | “We don’t judge anyone by their appearance, we respect the office of the President (of India). But how does our President look?,” says West Bengal Minister and TMC leader Akhil Giri in Nandigram (11.11.2022) pic.twitter.com/UcGKbGqc7p
ಈ ಬಗ್ಗೆ ತೃಣಮೂಲ ಕಾಂಗ್ರೆಸ್‍ನ ಅಧಿಕೃತ ಖಾತೆಯು ಟ್ವೀಟ್ ಮಾಡಿ, ಸಚಿವರು ಹೇಳಿರುವ ಈ ಹೇಳಿಕೆಯನ್ನು ನಮ್ಮ ಪಕ್ಷವು ಬಲವಾಗಿ ಖಂಡಿಸುತ್ತದೆ. ನಾವು ಇಂತಹ ಹೇಳಿಕೆಯನ್ನು ಕ್ಷಮಿಸುವುದಿಲ್ಲ. ಮಹಿಳಾ ಸಬಲೀಕರಣದ ಯುಗದಲ್ಲಿ ಇಂತಹ ಸ್ತ್ರೀ ದ್ವೇಷ ಸ್ವೀಕಾರಾರ್ಹವಲ್ಲ ಎಂದು ತಿಳಿಸಿತ್ತು.
Live Tv
[brid partner=56869869 player=32851 video=960834 autoplay=true]