Tag: Drones

  • ಅಮರಾವತಿ ಡ್ರೋನ್ ಸಮ್ಮೇಳನ 2024 | ಆಕಾಶವನ್ನೇ ಬೆಳಗಿದ 5,500 ಡ್ರೋನ್, 5 ಗಿನ್ನಿಸ್ ರೆಕಾರ್ಡ್

    ಅಮರಾವತಿ ಡ್ರೋನ್ ಸಮ್ಮೇಳನ 2024 | ಆಕಾಶವನ್ನೇ ಬೆಳಗಿದ 5,500 ಡ್ರೋನ್, 5 ಗಿನ್ನಿಸ್ ರೆಕಾರ್ಡ್

    ಅಮರಾವತಿ/ಹೈದರಾಬಾದ್: ಅ.22 ರಂದು ನಡೆದ `ಅಮರಾವತಿ ಡ್ರೋನ್ ಸಮ್ಮೇಳನ 2024′ (Amaravati Drone Summit 2024) ರಲ್ಲಿ 5,500 ಡ್ರೋನ್‌ಗಳಿಂದ ಲೈಟಿಂಗ್ಸ್ ಶೋ ನಡೆಸುವ ಮೂಲಕ 5 ಗಿನ್ನಿಸ್ ದಾಖಲೆಗಳನ್ನು (Guinness records) ನಿರ್ಮಿಸಲಾಯಿತು.

    ಆಂಧ್ರಪ್ರದೇಶದ (Andhra Pradesh) ಪೂರ್ಣಿಮಾ ಘಾಟ್‌ನ ಕೃಷ್ಣಾ ನದಿಯ ದಡದಲ್ಲಿ ನಡೆದ `ಅಮರಾವತಿ ಡ್ರೋನ್ ಸಮ್ಮೇಳನ 2024’ರಲ್ಲಿ 5,500 ಡ್ರೋನ್‌ಗಳನ್ನು ಹಾರಿಸಿ, ರಾಷ್ಟ್ರಧ್ವಜ, ಭಗವಾನ್ ಬುದ್ಧ ಹೀಗೆ ಹಲವಾರು ರೀತಿಯ ಆಕೃತ್ತಿಗಳನ್ನು ಆಕಾಶದಲ್ಲಿ ರಚಿಸಲಾಯಿತು. ಡ್ರೋನ್ ಪ್ರದರ್ಶನದಲ್ಲಿ ಅತೀ ದೊಡ್ಡ ಸೌರಮಂಡಲ, ಅತೀ ದೊಡ್ಡ ವೈಮಾನಿಕ ಲಾಂಛನ, ಅತೀ ದೊಡ್ಡ ಧ್ವಜ ಪ್ರದರ್ಶನ, ಅತೀ ದೊಡ್ಡ ವಿಮಾನದ ವಿನ್ಯಾಸ ಹಾಗೂ ಅತೀ ದೊಡ್ಡ ಭಾರತದ ಪ್ರಮುಖ ಮೈಲುಗಲ್ಲುಗಳನ್ನು ಪ್ರದರ್ಶಿಸಲಾಯಿತು. ಈ ಮೂಲಕ 5 ಗಿನ್ನಿಸ್ ದಾಖಲೆಗಳನ್ನು ನಿರ್ಮಿಸಲಾಯಿತು.ಇದನ್ನೂ ಓದಿ: ಚುನಾವಣೆಗೆ ಮುಂಚೆಯೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ: ಆರಗ ಜ್ಞಾನೇಂದ್ರ

    ಡ್ರೋನ್ ಪದರ್ಶನದ ವೇಳೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು (N Chandrababu Naidu) ಸೇರಿದಂತೆ ಸಾವಿರಾರು ಜನರು ಭಾಗಿಯಾಗಿ, ಡ್ರೋನ್ ಪದರ್ಶನವನ್ನು ಕಣ್ತುಂಬಿಕೊಂಡರು.

    ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಎನ್.ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶದಲ್ಲಿ ಇದೊಂದು ಡ್ರೋನ್ ಮುಸ್ಸಂಜೆಯಾಗಿದೆ. ಅದ್ಭುತ ಡ್ರೋನ್ ಪ್ರದರ್ಶನದ ಮೂಲಕ ನಿರ್ಮಾಣಗೊಂಡ 5 ಗಿನ್ನಿಸ್ ವಿಶ್ವ ದಾಖಲೆಗಳನ್ನು ವೀಕ್ಷಿಸಿದ್ದೇನೆ. ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸಿದ್ದಕ್ಕಾಗಿ ನಾನು ಎಲ್ಲಾ ಸಂಘಟಕರು ಮತ್ತು ಭಾಗವಹಿಸುವವರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.

    ಇನ್ನೂ ಡ್ರೋನ್ ಪದರ್ಶನದ ಬಳಿಕ ಮಾತನಾಡಿದ ಅವರು, ಡ್ರೋನ್ ಉದ್ಯಮದ ಬೆಳವಣಿಗೆಗೆ ಅನುಕೂಲವಾಗುವಂತೆ, ಕರ್ನೂಲ್ ಜಿಲ್ಲೆಯ ಓರ್ವಕಲ್ಲುನಲ್ಲಿ 300 ಎಕರೆ ಭೂಮಿಯನ್ನು ಘೋಷಿಸಿದ್ದೇನೆ. ಆ ಪ್ರದೇಶದಲ್ಲಿ 35,000 ಡ್ರೋನ್ ಪೈಲಟ್‌ಗಳಿಗೆ ತರಬೇತಿ ನೀಡುವ ಗುರಿ ಹೊಂದಿದ್ದೇವೆ. 15 ದಿನಗಳಲ್ಲಿ ಆಂಧ್ರ ಪ್ರದೇಶ ಸರ್ಕಾರವು ಡ್ರೋನ್‌ಗಳು ಹಾಗೂ ತಂತ್ರಜ್ಞಾನಗಳಿಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸಿಕೊಡುವಲ್ಲಿ ಮುಂದಾಗಿದೆ ಎಂದು ಭರವಸೆ ನೀಡಿದರು.

    ಇತ್ತೀಚಿಗಷ್ಟೇ ಮುಕ್ತಾಯಗೊಂಡ ಮೈಸೂರು ದಸರಾ ಮಹೋತ್ಸವದಲ್ಲಿಯೂ ಏಕಕಾಲಕ್ಕೆ 3,000 ಡ್ರೋನ್‌ಗಳಿಂದ ಲೈಟಿಂಗ್ಸ್ ಶೋ ನಡೆಸಲಾಗಿತ್ತು.ಇದನ್ನೂ ಓದಿ: ಬೈರೂತ್‌ ಮೇಲೆ ಇಸ್ರೇಲ್‌ ಮತ್ತೊಂದು ದಾಳಿ; ಮೂರೇ ಸೆಕೆಂಡುಗಳಲ್ಲಿ ದೈತ್ಯ ಕಟ್ಟಡಗಳು ಧ್ವಂಸ

  • ದೆಹಲಿ ಏರ್‌ಪೋರ್ಟ್‌ ಸುತ್ತ ಸೆಕ್ಷನ್‌ 144 ಜಾರಿ; ಡ್ರೋನ್‌ ಹಾರಾಟ, ಲೇಸರ್‌ ಲೈಟ್‌ ಚಟುವಟಿಕೆಗೂ ನಿಷೇಧ – ಕಾರಣ ಏನು?

    ದೆಹಲಿ ಏರ್‌ಪೋರ್ಟ್‌ ಸುತ್ತ ಸೆಕ್ಷನ್‌ 144 ಜಾರಿ; ಡ್ರೋನ್‌ ಹಾರಾಟ, ಲೇಸರ್‌ ಲೈಟ್‌ ಚಟುವಟಿಕೆಗೂ ನಿಷೇಧ – ಕಾರಣ ಏನು?

    ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (IGI) ಆವರಣದಲ್ಲಿ ಡ್ರೋನ್‌ ಹಾರಾಟ ಹಾಗೂ ಲೇಸರ್‌ ಕಿರಣಗಳ ಚಟುವಟಿಕೆಗಳನ್ನು ನಡೆಸದಂತೆ ದೆಹಲಿ ಪೊಲೀಸರು (Delhi Police) ಸೆಕ್ಷನ್‌ 144 ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

    ರಾಷ್ಟ್ರ ರಾಜಧಾನಿಯಲ್ಲಿನ ರಾಜಕೀಯ ವಿದ್ಯಮಾನಗಳು ಹಾಗೂ ಮುಂದಿನ ಪ್ರಧಾನ ಮಂತ್ರಿಗಳ (Prime Minister) ಪ್ರಮಾಣ ವಚನ ಸ್ವೀಕಾರ ಸಮಾರಂಭವೂ ಇರುವುದರಿಂದ ಏರ್‌ಪೋರ್ಟ್‌ನಲ್ಲಿ (Delhi Airport) ವಿವಿಐಪಿ ವಿಮಾನಗಳು ಚಲಿಸಲಿವೆ. ಆದ್ದರಿಂದ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಆದೇಶವು ಜುಲೈ 30ರ ವರೆಗೆ ಜಾರಿಯಲ್ಲಿರುತ್ತದೆ. ಇದನ್ನೂ ಓದಿ: ಬಿಜೆಪಿಗೆ ಗೆಲುವು | ಹೂಡಿಕೆದಾರರ ಸಂಪತ್ತು ಒಂದೇ ದಿನ 14 ಲಕ್ಷ ಕೋಟಿ ಹೆಚ್ಚಳ – ದಾಖಲೆ ಬರೆದ ಸೆನ್ಸೆಕ್ಸ್‌, ನಿಫ್ಟಿ

    ಐಜಿಐ ವಿಮಾನ ನಿಲ್ದಾಣದಲ್ಲಿ ಏರ್‌ ಟ್ರಾಫಿಕ್‌ ಕಂಟ್ರೋಲ್‌ ಮತ್ತು ಲೇಸರ್‌ ಕಿರಣಗಳಿಂದ (Laser Beams) ಪೈಲಟ್‌ಗಳ ದೃಷ್ಟಿ ವಿಚಲಿತಗೊಳ್ಳುವ ಘಟನೆಗಳು ಬೆಳಕಿಗೆ ಬಂದಿವೆ. ವಿಮಾನಗಳ ಲ್ಯಾಂಡಿಂಗ್‌ ಸಂದರ್ಭದಲ್ಲಿ ಹೀಗೆ ಪೈಲಟ್‌ಗಳ ದೃಷ್ಟಿಯು ವಿಚಲಿತಗೊಳ್ಳವುದರಿಂದ ಸಿಬ್ಬಂದಿ ಹಾಗೂ ವಿಮಾನದ ಸುರಕ್ಷತೆಗೆ ಅಪಾಯ ಉಂಟುಮಾಡಬಹುದು. ಇದನ್ನೂ ಓದಿ: ಪಾಕ್ ಪರ ಬೇಹುಗಾರಿಕೆ – ಬ್ರಹ್ಮೋಸ್ ಏರೋಸ್ಪೇಸ್‍ನ ಮಾಜಿ ಇಂಜಿನಿಯರ್‌ಗೆ ಜೀವಾವಧಿ ಶಿಕ್ಷೆ

    ಅಲ್ಲದೇ ವಿಮಾನ ನಿಲ್ದಾಣದ ಸುತ್ತಮುತ್ತ ಮನೆಗಳು, ಹೋಟೆಲ್‌ ರೆಸ್ಟೋರೆಂಟ್‌ಗಳು ಇದ್ದು, ಲೇಸರ್‌ ಹಾಗೂ ಲೈಟಿಂಗ್ಸ್‌ ಗಳನ್ನು ಬಳಸಲಾಗುತ್ತದೆ. ಇವು ಪೈಲಟ್‌ಗಳು ವಿಮಾನ ಲ್ಯಾಡಿಂಗ್‌ ಮಾಡುವ ಸಂದರ್ಭದಲ್ಲಿ ದೃಷ್ಟಿ ವಿಚಲನಕ್ಕೆ ಕಾರಣವಾಗುತ್ತದೆ. ಪ್ರಸ್ತುತ ಲೇಸರ್‌ ಕಿರಣಗಳ ಬಳಕೆ ನಿಯಂತ್ರಿಸಲು ಯಾವುದೇ ಪರ್ಯಾಯ ಕ್ರಮಗಳು ಇಲ್ಲದ ಕಾರಣ, ಜೀವಹಾನಿ ಮತ್ತು ವಿಮಾನ ಸುರಕ್ಷತೆಗಳ ಕಾರಣಕ್ಕೆ ಲೇಸರ್‌ ಚಟುವಟಿಕೆಗಳಿಗೆ ನಿಷೇಧಾಜ್ಞೆ (Section 144) ವಿಧಿಸಲಾಗಿದೆ. ಇದನ್ನೂ ಓದಿ: ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹಲ್ಲೆಗೈದು ಡೋರ್ ತೆಗೆಯಲು ಯತ್ನ- ಆರೋಪಿ ಅರೆಸ್ಟ್

    ಡ್ರೋನ್‌ ಹಾರಾಟಕ್ಕೂ ನಿಷೇಧ:
    ವಿವಿಐಪಿಗಳ ಓಡಾಟ ಹೆಚ್ಚಾಗಿರುವ ಸಂದರ್ಭಗಳಲ್ಲಿ ಡ್ರೋನ್‌ಗಳು (Drones), ಪ್ಯಾರಾಗ್ಲೈಡರ್‌ ಹಾಗೂ ಮಾನವ ರಹಿತ ಡ್ರೋನ್‌ಗಳನ್ನು ಬಳಸಿ ಭಯೋತ್ಪಾದಕ ದಾಳಿ ನಡೆಸಲು ಯೋಜಿಸಿದ್ದಾರೆ ಎಂಬ ಮಾಹಿತಿಗಳು ಗುಪ್ತಚರ ಇಲಾಖೆಗೆ ಆಗಾಗ್ಗೆ ಬಂದಿವೆ. ಈ ಕಾರಣಗಳಿಂದ ವಿಮಾನ ನಿಲ್ದಾಣ ಆವರಣದಲ್ಲಿ ಸಾರ್ವಜನಿಕರಿಂದ ಡ್ರೋನ್‌ ಹಾರಾಟಕ್ಕೂ ನಿಷೇಧ ಹೇರಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದ್ರೆ ಐಪಿಸಿ ಸೆಕ್ಷನ್‌ 188 ಪ್ರಕಾರ ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಸಿದ್ದಾರೆ.

  • ಪಾಕ್, ಚೀನಾಗೆ ಠಕ್ಕರ್ ಕೊಡಲು ಅತ್ಯಾಧುನಿಕ ಡ್ರೋಣ್ ನಿಯೋಜನೆ

    ಪಾಕ್, ಚೀನಾಗೆ ಠಕ್ಕರ್ ಕೊಡಲು ಅತ್ಯಾಧುನಿಕ ಡ್ರೋಣ್ ನಿಯೋಜನೆ

    ನವದೆಹಲಿ: ಭಾರತೀಯ ವಾಯುಪಡೆಯು (Indian Air Force) ಚೀನಾ (China) ಮತ್ತು ಪಾಕಿಸ್ತಾನ (Pakistan) ಎರಡೂ ಗಡಿಗಳ ಮೇಲೆ ಏಕಕಾಲಕ್ಕೆ ಕಣ್ಗಾವಲಿರಿಸುವ ಸಾಮರ್ಥ್ಯವುಳ್ಳ 4 ಸರ್ವೇಕ್ಷಣಾ ಡ್ರೋನ್‌ಗಳನ್ನ ನಿಯೋಜಿಸಿದೆ. ಹೆರಾನ್ ಮಾರ್ಕ್-2 ಹೆಸರಿನ ಡ್ರೋಣ್ ಏಕಕಾಲದಲ್ಲಿ ಚೀನಾ ಮತ್ತು ಪಾಕಿಸ್ತಾನ ಗಡಿಗಳಲ್ಲಿ ಗಸ್ತು ತಿರುಗುವ ಸಾಮರ್ಥ್ಯ ಹೊಂದಿದೆ.

    ಗಡಿಯಲ್ಲಿ 4 ಹೆರಾನ್ ಮಾರ್ಕ್-2 ಡ್ರೋನ್‌ಗಳನ್ನು (Heron Mark-2 Drones) ನಿಯೋಜಿಸಲಾಗಿದೆ. ದೀರ್ಘ-ಶ್ರೇಣಿಯ ಕ್ಷಿಪಣಿಗಳು ಹಾಗೂ ಶಸ್ತ್ರಾಸ್ತ್ರಗಳ ವ್ಯವಸ್ಥೆ ಹೊಂದಿದೆ. ಜೊತೆಯಲ್ಲೇ ಹತ್ತಾರು ಅತ್ಯಾಧುನಿಕ ಶಸ್ತ್ರಾಸ್ತ್ರಗಳೂ ಈ ಡ್ರೋನ್‌ಗಳಲ್ಲಿ ಇರಲಿವೆ. ಭಾರತದ ಉತ್ತರ ವಲಯದ ಗಡಿಯ ಮುಂಚೂಣಿ ಪ್ರದೇಶಗಳಲ್ಲಿ ಈ ಡ್ರೋನ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಇದನ್ನೂ ಓದಿ: ಪಾಕ್, ಚೀನಾಕ್ಕೆ ಠಕ್ಕರ್ – ಶ್ರೀನಗರದಲ್ಲಿ ಮೇಲ್ದರ್ಜೆಗೆರಿಸಿದ MiG- 29 ಯುದ್ಧ ವಿಮಾನ ನಿಯೋಜನೆ

    ಹೆರಾನ್ ಮಾರ್ಕ್-2 ವಿಶೇಷತೆ ಏನು?
    ಈ ಡ್ರೋನ್‌ಗಳು ಉಪಗ್ರಹಗಳ ಜೊತೆಗೆ ಸಂವಹನ ಸಂಪರ್ಕ ಹೊಂದಿರುತ್ತವೆ. ಭಾರತೀಯ ವಾಯುಪಡೆಯು ಅತ್ಯಂತ ಸುದೀರ್ಘ ಸಮಯದಿಂದ ಈ ರೀತಿಯ ಡ್ರೋನ್‌ಗಳ ಅಗತ್ಯತೆಯನ್ನ ಪ್ರತಿಪಾದಿಸಿತ್ತು. ಈ ಡ್ರೋನ್‌ಗಳು ಅತಿ ದೂರದವರೆಗೆ ಇಂಧನ ಮರುಭರ್ತಿ ಇಲ್ಲದೇ ಸಂಚರಿಸಬಲ್ಲವು. ಒಮ್ಮೆ ಇಂಧನ ಭರ್ತಿಯಾದರೆ 36 ಗಂಟೆ ಕಾಲ ಕಾರ್ಯ ನಿರ್ವಹಿಸಬಲ್ಲವು. ಲೇಸರ್ ತಂತ್ರಜ್ಞಾನದ ಮೂಲಕ ಶತ್ರುಗಳ ನೆಲೆ ಗುರುತಿಸಬಲ್ಲವು. ಅತಿ ದೂರದಿಂದಲೇ ಶತ್ರುಗಳ ನೆಲೆಯನ್ನ ಗುರುತಿಸುವ ಸಾಮರ್ಥ್ಯ ಡ್ರೋನ್‌ಗಳಿಗೆ ಇರುವ ಕಾರಣ, ಇವುಗಳ ನೆರವಿನಿಂದ ವಾಯುಪಡೆಯ ಫೈಟರ್ ಜೆಟ್‌ಗಳು ಶತ್ರುಗಳ ನೆಲೆಗಳನ್ನು ದೂರಗಾಮಿ ಕ್ಷಿಪಣಿಗಳ ಮೂಲಕ ನಾಶಪಡಿಸಬಹುದಾಗಿದೆ ಎಂದು ವಾಯುಪಡೆ ತಿಳಿಸಿದೆ.

    ಹೆರಾನ್ ಮಾರ್ಕ್-2 ಡ್ರೋನ್ ದೃಷ್ಟಿಯ ವ್ಯಾಪ್ತಿಯ ಆಚೆಗಿನ ಸರ್ವೇಕ್ಷಣೆಗೂ ನೆರವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಇವುಗಳ ನೆರವಿನಿಂದ ಇಡೀ ದೇಶವನ್ನ ಒಂದೇ ಸ್ಥಳದಿಂದ ಸರ್ವೇಕ್ಷಣೆ ಮಾಡಲು ಸಾಧ್ಯ ಎಂದು ಡ್ರೋನ್ ಸ್ವಾಡರ್ನ್‌ನ ವಿಂಗ್ ಕಮಾಂಡರ್ ಪಂಕಜ್ ರಾಣಾ ತಿಳಿಸಿದ್ದಾರೆ. ಇದನ್ನೂ ಓದಿ: ಉಡುಪಿ ಮಾದರಿ ಮತ್ತೊಂದು ಕೇಸ್‌; ಹಾಸ್ಟೆಲ್‌ ಹುಡ್ಗೀರ ಬೆತ್ತಲೆ ವೀಡಿಯೋ ಸೆರೆ ಹಿಡಿದು ಸೀನಿಯರ್‌ಗೆ ಕಳಿಸ್ತಿದ್ದ ವಿದ್ಯಾರ್ಥಿನಿ

    ದಿನದ 24 ಗಂಟೆಯೂ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯ ಹೊಂದಿರುವ ಈ ಡ್ರೋನ್‌ಗಳು ಯಾವುದೇ ಹವಾಮಾನದಲ್ಲೂ ಕೆಲಸ ಮಾಡುತ್ತವೆ. ಅದಕ್ಕಾಗಿ ಇವುಗಳ ಎಂಜಿನ್ ಸಾಮರ್ಥ್ಯವನ್ನೂ ಹೆಚ್ಚಿಸಲಾಗಿದೆ. ಒಂದೇ ಕಾರ್ಯಾಚರಣೆಗಳಲ್ಲಿ ಈ ಡ್ರೋನ್‌ಗಳು ಹಲವು ವಲಯಗಳ ಕಾರ್ಯಗಳನ್ನು ಸುದೀರ್ಘ ಕಾಲ ನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ಬೇಹುಗಾರಿಕೆ, ಸರ್ವೇಕ್ಷಣೆ ಹಾಗೂ ಭಾರತೀಯ ವಾಯುಪಡೆಗೆ ಮಾಹಿತಿ ರವಾನಿಸುವ ಕಾರ್ಯಗಳನ್ನು ಈ ಡ್ರೋನ್ ಮಾಡುತ್ತದೆ ಎಂದು ರಾಣಾ ವಿವರಿಸಿದ್ದಾರೆ.

    ಎರಡು ದಿನಗಳ ಹಿಂದೆಯಷ್ಟೇ ಭಾರತೀಯ ವಾಯುಪಡೆ ಹಾರುವ ಶವಪೆಟ್ಟಿಗೆ ಎಂದೇ ಕುಖ್ಯಾತಿ ಪಡೆದಿದ್ದ ಮಿಗ್-21 ವಿಮಾನಗಳ ಬದಲಿಗೆ ಮೇಲ್ದರ್ಜೆಗೇರಿಸಿದ ಮಿಗ್-29 ಫೈಟರ್ ಜೆಟ್‌ಗಳನ್ನ ಗಸ್ತಿಗೆ ನಿಯೋಜನೆ ಮಾಡಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಕ್ ಡ್ರೋನ್ ಮೂಲಕ ಡ್ರಗ್ಸ್ ದಂಧೆ- ಮೂವರ ಬಂಧನ

    ಪಾಕ್ ಡ್ರೋನ್ ಮೂಲಕ ಡ್ರಗ್ಸ್ ದಂಧೆ- ಮೂವರ ಬಂಧನ

    ನವದೆಹಲಿ: ಪಾಕಿಸ್ತಾನದಿಂದ (Pakistan) ಡ್ರೋನ್ ಮೂಲಕ ಡ್ರಗ್ಸ್ ತರಿಸಿ ಮಾರಾಟ ದಂಧೆಯಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ದೆಹಲಿ ವಿಶೇಷ ಗುಪ್ತಚರ ದಳ (Delhi Intelligence Unit) ಶುಕ್ರವಾರ ಬಂಧಿಸಿದೆ.

    ಆರೋಪಿಗಳನ್ನು ಪಂಜಾಬ್ (Punjab) ಮೂಲದ ಮಲ್ಕಿತ್ ಸಿಂಗ್, ಧಮೇರ್ಂದ್ರ ಸಿಂಗ್ ಮತ್ತು ಹರ್ಪಾಲ್ ಸಿಂಗ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಪಾಕಿಸ್ತಾನದ ಡ್ರಗ್ಸ್ ದಂಧೆಕೋರರಿಗೆ ಹವಾಲಾ ಜಾಲದ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದರು. ಪ್ರತಿಯಾಗಿ ಡ್ರೋನ್‍ಗಳ ಮೂಲಕ ಡ್ರಗ್ಸ್ ಪಡೆಯುತ್ತಿದ್ದರು. ನಂತರ ಪಂಜಾಬ್ ಮತ್ತು ಇತರ ರಾಜ್ಯಗಳಿಗೆ ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಉಗ್ರರ ದಾಳಿ – ಓರ್ವ ಪೊಲೀಸ್ ಹುತಾತ್ಮ, ನಾಲ್ವರು ಗಂಭೀರ

    ಪಂಜಾಬ್‍ನಿಂದ ತಲೆ ಮರೆಸಿಕೊಂಡಿದ್ದ ಆರೋಪಿಗಳು ಅಮೆರಿಕ ಮತ್ತು ಫಿಲಿಪೈನ್ಸ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ. ಆರೋಪಿಯಿಂದ ವಶಪಡಿಸಿಕೊಂಡ ಮೊಬೈಲ್‌ಗಳಲ್ಲಿ ಫಿಲಿಪೈನ್ಸ್ ಮತ್ತು ಯುಎಸ್‍ನ ಫೋನ್ ನಂಬರ್‌ಗಳು ಪತ್ತೆಯಾಗಿವೆ. ಅಲ್ಲದೆ ಡ್ರೋನ್‍ಗಳ ಮೂಲಕ ಸಾಗಾಣಿಕೆ ಮಾಡಿದ ಡ್ರಗ್ಸ್‍ಗಳನ್ನು ಎಲ್ಲಿ ಸಂಗ್ರಹಿಸಬೇಕೆಂದು ಈ ನಂಬರ್‌ಗಳ ಮೂಲಕ ಸೂಚನೆಗಳು ಬರುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಳು ಪಂಜಾಬ್ ಮತ್ತು ದೇಶದ ಇತರ ಭಾಗಗಳಲ್ಲಿ ಹೆರಾಯಿನ್ ಸರಬರಾಜು ದಂಧೆಯಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲೇ ಇದ್ದ ಮಗುವಿಗಾಗಿ ಪೊಲೀಸರ ಜೊತೆ ಊರೆಲ್ಲಾ ಹುಡುಕಿದ್ರು ಪೋಷಕರು!

  • ಚೀನಾ ಮೇಲೆ ಕಣ್ಣಿಡಲು ಬಂತು ಇಸ್ರೇಲ್ ಡ್ರೋನ್

    ಚೀನಾ ಮೇಲೆ ಕಣ್ಣಿಡಲು ಬಂತು ಇಸ್ರೇಲ್ ಡ್ರೋನ್

    -52 ಗಂಟೆ, 3500 ಅಡಿ ಎತ್ತರದಲ್ಲಿ ಸಂಚರಿಸುವ ಸಾಮರ್ಥ್ಯ

    ನವದೆಹಲಿ: ಗಡಿಯಲ್ಲಿ ತಂಟೆ ಮಾಡುವ ಚೀನಾದ ಮೇಲೆ ಕಣ್ಣಿಡಲು ಭಾರತೀಯ ಸೇನೆಗೆ ಇದೀಗ ಇಸ್ರೇಲ್‍ನ ಅತ್ಯಾಧುನಿಕ ಡ್ರೋನ್‍ಗಳ ಬಲ ಬಂದಿದೆ. ಕೇಂದ್ರ ಸರ್ಕಾರ ನೀಡಿದ ತುರ್ತು ಖರೀದಿ ಅಧಿಕಾರ ಬಳಸಿಕೊಂಡು ಸೇನಾಪಡೆಯು ಇಸ್ರೇಲ್‍ನಿಂದ ಹೆರಾನ್ ಡ್ರೋನ್‍ಗಳನ್ನು ಖರೀದಿಸಿದೆ.

    ಶೀಘ್ರದಲ್ಲೇ ಈ ಡ್ರೋನ್‍ಗಳು ಪೂರ್ವ ಲಡಾಖ್ ಸೆಕ್ಟರ್‌ನಲ್ಲಿ ನಿಯೋಜನೆಯಾಗಲಿದ್ದು, ಚೀನಾದ ಚಟುವಟಿಕೆಗಳ ಮೇಲೆ ಕಣ್ಣಿಡಲಿವೆ ಎಂದು ಮೂಲಗಳು ಹೇಳಿವೆ. ಈಗಾಗಲೇ ಈ ಡ್ರೋನ್‍ಗಳು ಕಾರ್ಯಸನ್ನದ್ಧ ಸ್ಥಿತಿಯಲ್ಲಿವೆ. ಹಿಂದಿನಿಂದಲೂ ಭಾರತೀಯ ಸೇನೆಯಲ್ಲಿರುವ  ಡ್ರೋನ್‍ಗಳಿಗಿಂತ ಇವು ಹೆಚ್ಚು ಆಧುನಿಕವಾಗಿದ್ದು, ಇವುಗಳ ಆ್ಯಂಟಿ-ಜಾಮಿಂಗ್ ಸಾಮರ್ಥ್ಯ ಗರಿಷ್ಠ ಮಟ್ಟದ್ದಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಓಮಿಕ್ರಾನ್ ಹಾಗೂ ಡೆಲ್ಟಾ ವೈರಸ್ ನಡುವಿನ ವ್ಯತ್ಯಾಸವೇನು?

    ಈ ಡ್ರೋನ್‍ಗಳು ಸತತ 52 ಗಂಟೆ ಹಾರಾಡುವ, ಗರಿಷ್ಠ 3500 ಅಡಿ ಎತ್ತರದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಇಂಥ 4 ಡ್ರೋನ್‍ಗಳನ್ನು ಖರೀದಿಸಲು ಭಾರತ 1500 ಕೋಟಿ ರೂಪಾಯಿ ಮೊತ್ತದ ಒಪ್ಪಂದ ಮಾಡಿಕೊಂಡಿತ್ತು. ಲಡಾಖ್ ಗಡಿಗೆ ರಷ್ಯಾ ನಿರ್ಮಿತ ಟ್ರಯಂಫ್ ಕ್ಷಿಪಣಿ ವ್ಯವಸ್ಥೆ ಅಣಿಗೊಳಿಸಲು ಭಾರತ ಸಜ್ಜಾಗಿರುವ ಹೊತ್ತಿನಲ್ಲೇ ಈ ಹೊಸ ಅಸ್ತ್ರವೂ ಲಭ್ಯವಾಗಿದೆ. ಇದನ್ನೂ ಓದಿ: ಕೋವಿಡ್‌ ವಾರಿಯರ್ಸ್‌ಗೆ ಬೂಸ್ಟರ್‌ ಡೋಸ್‌ ನೀಡುವ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚೆ: ಸಿಎಂ

    ಪ್ರಧಾನಿ ನರೇಂದ್ರ ಮೋದಿ ಅವರು ಸೇನಾಪಡೆಗಳಿಗೆ 500 ಕೋಟಿ ರೂಪಾಯಿವರಿಗಿನ ಶಸ್ತ್ರಾಸ್ತ್ರಗಳನ್ನು ಖರೀದಿಸಲು ನೀಡಿದ್ದ ವಿಶೇಷ ಆರ್ಥಿಕ ಅಧಿಕಾರ ಬಳಸಿಕೊಂಡು ಭೂಸೇನಾಪಡೆ ಈ ಡ್ರೋನ್‍ಗಳನ್ನು ಖರೀದಿಸಿದೆ. ಜೊತೆಗೆ ಇದಕ್ಕಿಂತ ಸಣ್ಣ ಇನ್ನಷ್ಟು ಡ್ರೋನ್‍ಗಳನ್ನು ಭಾರತೀಯ ಕಂಪನಿಗಳಿಂದಲೇ ಖರೀದಿಸುತ್ತಿದೆ. ಚೀನಾದಿಂದ ಯುದ್ಧದ ಆತಂಕವಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸೇನಾಪಡೆಗಳಿಗೆ ತುರ್ತಾಗಿ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಖರೀದಿಸಲು ವಿಶೇಷ ಆರ್ಥಿಕ ಅಧಿಕಾರ ನೀಡಿದ್ದರು, ಅದರಂತೆ ವಾಯುಪಡೆ ಹಾಗೂ ನೌಕಾಪಡೆಗಳು ಈಗಾಗಲೇ ಕೆಲ ಶಸ್ತ್ರಾಸ್ತ್ರಗಳನ್ನು ಖರೀದಿಸಿವೆ. 2019ರಲ್ಲಿ ಪಾಕಿಸ್ತಾನದ ಬಾಲಾಕೋಟ್ ಮೇಲಿನ ಸರ್ಜಿಕಲ್ ಸ್ಟ್ರೈಕ್ ನಂತರವೂ ಇದೇ ರೀತಿ ಸೇನಾಪಡೆಗಳಿಗೆ ತುರ್ತು ಖರೀದಿಯ ಅಧಿಕಾರ ನೀಡಲಾಗಿತ್ತು.

  • ಮಾಡೆಲ್‍ಗಳಿಗೆ ಸೆಡ್ಡು- ಬ್ಯಾಗ್ ಹಿಡಿದು ರ‍್ಯಾಂಪ್ ಮೇಲೆ ಹಾರಿದ ಡ್ರೋನ್‍ಗಳು!

    ಮಾಡೆಲ್‍ಗಳಿಗೆ ಸೆಡ್ಡು- ಬ್ಯಾಗ್ ಹಿಡಿದು ರ‍್ಯಾಂಪ್ ಮೇಲೆ ಹಾರಿದ ಡ್ರೋನ್‍ಗಳು!

    ಮಿಲಾನ್: ಭವಿಷ್ಯದಲ್ಲಿ ಫ್ಯಾಶನ್ ಶೋಗಳು ಹೀಗಿರಲಿವೆಯಾ? ಈ ಫ್ಯಾಶನ್ ಶೋ ನೋಡಿದ ಮೇಲೆ ನಿಮಗೆ ಈ ರೀತಿಯ ಪ್ರಶ್ನೆ ಕಾಡದೆ ಇರದು.

    ಭಾನುವಾರದಂದು ಮಿಲಾನ್‍ನಲ್ಲಿ ನಡೆದ ಡಾಲ್ಚೆ&ಗಬ್ಬಾನಾ ಫ್ಯಾಶನ್ ಶೋ ನಲ್ಲಿ ರೂಪದರ್ಶಿಯರು ವೇದಿಕೆ ಮೇಲೆ ಹೆಜ್ಜೆ ಹಾಕಲಿಲ್ಲ. ಬದಲಿಗೆ ಡ್ರೋನ್‍ಗಳು ಮಾಡೆಲ್‍ಗಳು ರೀತಿಯಲ್ಲಿ ಬ್ಯಾಗ್‍ಗಳನ್ನ ಹಿಡಿದು ಹಾರಿದ್ವು.

     

    ಡಾಲ್ಚೆ&ಗಬ್ಬಾನಾದ ಹೊಸ ವಿನ್ಯಾಸದ ಬ್ಯಾಗ್‍ಗಳನ್ನ ಡ್ರೋನ್‍ಗಳು ಪ್ರದರ್ಶಿಸಿದ್ದನ್ನು ಕಂಡು ನೋಡುಗರು ಆಶ್ಚರ್ಯಪಟ್ಟರು. 2018-19ರ ಚಳಿಗಾಲದ ಕೆಲಕ್ಷನ್ ಪ್ರದರ್ಶನದ ವಿಡಿಯೋವನ್ನ ಡಾಲ್ಚೆ&ಗಬ್ಬಾನಾದ ಯೂಟ್ಯೂಬ್ ಚಾನೆಲ್‍ನಲ್ಲಿ ಹಂಚಿಕೊಳ್ಳಲಾಗಿದೆ.

    ವೇದಿಕೆ ಮೇಲೆ ವಿನ್ಯಾಸಗೊಳಿಸಲಾಗಿದ್ದ ಚರ್ಚ್‍ನ ಬಾಗಿಲುಗಳು ತೆರೆದುಕೊಂಡು ಸಂಗೀತ ಶುರುವಾಗುತ್ತದೆ. ನಂತರ ಒಂದು ಸಣ್ಣ ಡ್ರೋನ್ ಕೆಂಪು ಬಣ್ಣದ ಬ್ಯಾಗ್ ಹಿಡಿದುಕೊಂಡು ಹಾರಿ ಬರುತ್ತದೆ. ಅನಂತರ ಒಂದರ ನಂತರ ಒಂದು ಹಲವಾರು ಡ್ರೋನ್‍ಗಳು ವಿವಿಧ ಬಣ್ಣದ ಬ್ಯಾಗ್‍ಗಳನ್ನ ಹಿಡಿದು ಹಿಂಬಾಲಿಸುತ್ತವೆ.

    ವರದಿಯ ಪ್ರಾಕಾರ ಫ್ಯಾಶನ್ ಶೋ ವೇಳೆ, ಡ್ರೋನ್ ಸಿಗ್ನಲ್‍ಗೆ ಅಡ್ಡಿಯಾಗಬಾರದೆಂದು ಅತಿಥಿಗಳ ಮೊಬೈಲ್ ವೈಫೈ ಸ್ವಿಚ್ ಆಫ್ ಮಾಡುವಂತೆ ಹೇಳಲಾಗಿತ್ತು. ಇದರಿಂದ ಸುಮಾರು 45 ನಿಮಿಷ ಗೊಂದಲ ಉಂಟಾಗಿ, ಲೌಡ್‍ಸ್ಪೀಕರ್ ಮೂಲಕ ಇನ್ನೂ ವೈಫೈ ಸ್ವಿಚ್ ಆಫ್ ಮಾಡದವರ ಯೂಸರ್ ನೇಮ್ ಕರೆದು, ನಿಮ್ಮ ಹಾಟ್‍ಸ್ಪಾಟ್ ಸ್ವಿಚ್ ಆಫ್ ಮಾಡಿ ಶೋ ಪ್ರಾರಂಭಿಸಲು ಅನುವು ಮಾಡಿಕೊಡಿ ಎಂದು ಹೇಳಲಾಗಿತ್ತು.

    ಶೋ ಆರಂಭವಾಗುತ್ತಿದ್ದಂತೆ ಅಲ್ಲಿ ನೆರೆದಿದ್ದ ಅತಿಥಿಗಳು ಕಣ್ ಕಣ್ ಬಿಟ್ಟು ನೋಡುವಂತಾಗಿತ್ತು. ರೂಪದರ್ಶಿಗಳ ಬದಲು ಡ್ರೋನ್‍ಗಳು ರ‍್ಯಾಂಪ್ ವಾಕ್ ಮಾಡಿದ್ದು ನೋಡಿ ಎಲ್ಲರೂ ಹುಬ್ಬೇರಿಸಿದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡ್ತಿದೆ.

    ಆದರೂ ಡ್ರೋನ್‍ಗಳು ವೇದಿಕೆ ಹಿಂಭಾಗಕ್ಕೆ ಹೋದ ಬಳಿಕ ರೂಪದರ್ಶಿಯರು ಕೂಡ ಹೆಜ್ಜೆ ಹಾಕಿ ಬ್ಯಾಗ್‍ಗಳನ್ನ ಪ್ರದರ್ಶಿಸಿದ್ದಾರೆ.

    https://twitter.com/MEENAVOGUEE/status/967773394665197571?ref_src=twsrc%5Etfw&ref_url=https%3A%2F%2Fwww.ndtv.com%2Foffbeat%2Fwatch-drones-fly-down-the-runway-carrying-dolce-gabbana-handbags-1817390