Tag: DronePratap

  • ಡ್ರೋನ್ ಪ್ರತಾಪ್ ವಿರುದ್ಧ ದಾಖಲಾಗಿರುವ ದೂರು ಎಫ್‌ಐಆರ್, ಹೇಳಿಕೆ ದಾಖಲಿಸಿಲ್ಲ

    ಡ್ರೋನ್ ಪ್ರತಾಪ್ ವಿರುದ್ಧ ದಾಖಲಾಗಿರುವ ದೂರು ಎಫ್‌ಐಆರ್, ಹೇಳಿಕೆ ದಾಖಲಿಸಿಲ್ಲ

    ಬೆಂಗಳೂರು: ಡ್ರೋನ್ ಪ್ರತಾಪ್ (Drone Pratap) ವಿರುದ್ಧ ದಾಖಲಾಗಿರುವ ದೂರಿನ ಸಂಬಂಧ ಯಾವುದೇ ಎಫ್‌ಐಆರ್ (FIR) ಮತ್ತು ಹೇಳಿಕೆಯನ್ನು ಪೊಲೀಸರು  (Police) ದಾಖಲಿಸಿಲ್ಲ ಎಂಬುದು ಬೆಳಕಿಗೆ ಬಂದಿದೆ.

    ಕನ್ನಡ ಬಿಗ್‌ಬಾಸ್ ಸೀಸನ್ 10ರ ಸ್ಪರ್ಧಿ ಡ್ರೋನ್ ಪ್ರತಾಪ್ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ಸಾಲು ಸಾಲು ದೂರುಗಳು ದಾಖಲಾಗುತ್ತಿದೆ. ದಾಖಲಾಗಿರುವ ದೂರುಗಳ ಪ್ರಕರಣದಲ್ಲಿ ಪ್ರತಾಪ್ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಪ್ರಕರಣ ಸಂಬಂಧ ಯಾವುದೇ ನೋಟಿಸ್ ಸಹ ಕೊಟ್ಟಿಲ್ಲ ಮತ್ತೆ ಒಮ್ಮೆ ಕೂಡ ಪ್ರತಾಪ್ ಹೇಳಿಕೆಯನ್ನು ದಾಖಲಿಸಿಲ್ಲ. ಈ ವಿಚಾರದಲ್ಲಿ ಆಗುತ್ತಿರುವ ಬೆಳವಣಿಗಳು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದನ್ನೂ ಓದಿ:ಹಾಸನ, ಮಂಡ್ಯ ಲೋಕಸಭಾ ಟಿಕೆಟ್ ಬಿಜೆಪಿಗೆ ಸಿಗಲಿದೆ: ಪ್ರೀತಮ್ ಗೌಡ

    ಮೊದಲು ಡಾ.ಪ್ರಯಾಗ್ ಎಂಬವರು ರೈತರಿಂದ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಪರಮೇಶ್ ಎಂಬವರು ಡ್ರೋನ್ ಕ್ಯಾಮೆರಾ ಕೊಡುವುದಾಗಿ ಹೇಳಿ ವಂಚಿಸಿದ್ದಾರೆಂದು ದೂರು ನೀಡಿದ್ದು, ಮಂಡ್ಯ ಮೂಲದ ಚಂದನ್ ಕುಮಾರ್ ಗೌಡ ಜೆಡಿಎಸ್‌ಯಿಂದ ಜಿಲ್ಲಾ ಪಂಚಾಯತ್ ಟಿಕೆಟ್ ಕೊಡಿಸುವುದಾಗಿ 2 ಲಕ್ಷ ರೂ. ಹಣ ಪಡೆದಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡದ್ದರು. ಇದನ್ನೂ ಓದಿ: ನಿಗೂಢ ಕೆಲಸಕ್ಕೆ 42 ಅಕ್ರಮ ಸಿಮ್‌ಗಳೊಂದಿಗೆ ಬೆಂಗಳೂರಿಗೆ ಹೊರಟಿದ್ದ ಯುವಕರು ಅರೆಸ್ಟ್‌