Tag: Drone Strike

  • ಇರಾನ್‌ ಮೇಲೆ ಯಾವುದೇ ಕ್ಷಣದಲ್ಲೂ ದಾಳಿ – ದೊಡ್ಡ ಎಚ್ಚರಿಕೆ ಕೊಟ್ಟ ಇಸ್ರೇಲ್‌

    ಇರಾನ್‌ ಮೇಲೆ ಯಾವುದೇ ಕ್ಷಣದಲ್ಲೂ ದಾಳಿ – ದೊಡ್ಡ ಎಚ್ಚರಿಕೆ ಕೊಟ್ಟ ಇಸ್ರೇಲ್‌

    – ಇಸ್ರೇಲ್‌ ನೆರವಿಗೆ ಬರದಂತೆ ಅಮೆರಿಕ, ಇಂಗ್ಲೆಂಡ್‌, ಫ್ರಾನ್ಸ್‌ಗೆ ಇರಾನ್‌ ವಾರ್ನಿಂಗ್‌
    – ಇಸ್ರೇಲ್‌ನ ʻಐರನ್ ಡೋಮ್ʼ ಭೇದಿಸಿದ ಇರಾನ್ ಮಿಸೈಲ್ಸ್

    ಟೆಲ್‌ ಅವಿವ್: ಇರಾನ್-ಇಸ್ರೇಲ್‌ ನಡುವೆ ಯುದ್ಧದ (Iran – Israel War) ಕಾರ್ಮೋಡ ಕವಿದಿದೆ. ಉಭಯ ರಾಷ್ಟ್ರಗಳ ನಡುವಿನ ದಾಳಿ-ಪ್ರತಿದಾಳಿ ಯುದ್ಧದ ಸನ್ನಿವೇಶ ತಂದೊಡ್ಡಿದೆ. ಒಂದು ದಿನದ ಹಿಂದೆಯಷ್ಟೇ ಇಸ್ರೇಲ್‌ ಸೇನೆಯು ಇರಾನ್‌ನ ಅಣ್ವಸ್ತ್ರ (Nuclear Sites) ಹಾಗೂ ಮಿಲಿಟರಿ ನೆಲೆಗಳನ್ನ ಗುರಿಯಾಗಿಸಿ ದಾಳಿ ನಡೆಸಿತ್ತು. ಇದಕ್ಕೆ ಪ್ರತೀಕಾರವಾಗಿ ಇರಾನ್ ಕೂಡ ಮಿಸೈಲ್‌ ಮಳೆ ಸುರಿಸಿತು. ಇದರಿಂದ ಕೆರಳಿದ ಇಸ್ರೇಲ್‌, ಇರಾನಿನ ಮೇಲೆ ಭೀಕರ ದಾಳಿ ಮಾಡುವ ದೊಡ್ಡ ಸುಳಿವು ನೀಡಿದೆ.

    ಈಗಾಗಲೇ ಇರಾನ್‌ನ ದಕ್ಷಿಣದಲ್ಲಿರುವ ಪರ್ಶಿಯನ್‌ ಅನಿಲ ಸಂಸ್ಕರಣಾ ಘಟಕಗಳ (Pars gas field) ಮೇಲೆ ಇಸ್ರೇಲ್‌ ಡ್ರೋನ್‌ ದಾಳಿ ನಡೆಸಿದೆ ಎಂದು ಕೆಲ ಅರೆ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಒಂದು ವೇಳೆ ಇದು ಅಧಿಕೃತ ಎಂದಾದ್ರೆ ಇರಾನ್‌ನ ತೈಲ ಮತ್ತು ನೈಸರ್ಗಿಕ ಅನಿಲ ಉದ್ಯಮದ ಮೇಲಿನ ಮೊದಲ ದಾಳಿಯಾಗಲಿದೆ. ಸದ್ಯಕ್ಕೆ ಇರಾನ್‌ ತಮ್ಮ ವಾಯು ರಕ್ಷಣಾ ವ್ಯವಸ್ಥೆಗಳು ಸುರಕ್ಷಿತವಾಗಿವೆ ಎಂದು ಹೇಳಿಕೊಂಡಿದೆ. ಇದನ್ನೂ ಓದಿ: ಅಮೆರಿಕದ ರಾಜಕಾರಣಿಗಳ ಮನೆಯೊಳಗೇ ಗುಂಡಿನ ದಾಳಿ – ಶಾಸಕಿ ಮೆಲಿಸ್ಸಾ, ಪತಿ ಹತ್ಯೆ; ಓರ್ವ ಸಂಸದನಿಗೆ ಗಾಯ

    ಇಸ್ರೇಲ್‌ನ ʻಐರನ್ ಡೋಮ್ʼ ಭೇದಿಸಿದ ಇರಾನ್ ಮಿಸೈಲ್ಸ್
    ಇಸ್ರೇಲ್ ಮೇಲೆ ಇರಾನ್ ಶುಕ್ರವಾರ (13 ಜೂನ್) ಭಾರೀ ಪ್ರತೀಕಾರದ ದಾಳಿ ನಡೆಸಿದೆ. ಟೆಲ್ ಅವಿವ್‌ನಲ್ಲಿರುವ ಇಸ್ರೇಲ್‌ನ ರಕ್ಷಣಾ ಪಡೆಗಳ (IDF) ಪ್ರಧಾನ ಕಚೇರಿಯನ್ನು ಗುರಿಯಾಗಿಸಿ ಕ್ಷಿಪಣಿಗಳನ್ನು ಉಡಾಯಿಸಿದೆ. ಇಸ್ರೇಲ್‌ ಈ ದಾಳಿ ಎದುರಿಸಲು ಸಜ್ಜಾಗಿತ್ತು, ಆದ್ರೆ ಊಹೆಗೂ ಮೀರಿದ ಸನ್ನಿವೇಶವೊಂದು ನಡೆದೇ ಹೋಯಿತು. ಇರಾನ್ ದಾಳಿಯನ್ನು ಇಸ್ರೇಲ್‌ನ ಕ್ಷಿಪಣಿ ನಿಗ್ರಹ ವ್ಯವಸ್ಥೆಯಾದ ಐರನ್ ಡೋಮ್ ಕೂಡ ಮೆಟ್ಟಿ ನಿಲ್ಲಲಾಗಿಲ್ಲ. ಇರಾನ್ ನಿಂದ ಹಾರಿಸಲ್ಪಟ್ಟ ಕೆಲವು ಕ್ಷಿಪಣಿಗಳು ಐರನ್ ಡೋಂನಿಂದಲೂ ಬಚಾವಾಗಿ ಬಂದು ಇಸ್ರೇಲ್‌ನ ಕೆಲವು ಕಟ್ಟಡಗಳಿಗೆ ಅಪ್ಪಳಿಸಿದವು. ಈ ವೇಳೆ ಇಸ್ರೇಲ್ ರಕ್ಷಣಾ ಪಡೆಗಳ ಕೇಂದ್ರ ಕಚೇರಿಯೇ ಧ್ವಂಸವಾಯಿತು.

    ಇಸ್ರೇಲ್‌ನಲ್ಲಿ ಮೊಳಗಿದ ಸೈರನ್‌
    ಇಸ್ರೇಲ್‌ನ ಜೆರುಸಲೇಮ್, ಟೆಲ್ ಅವಿವ್ ನಗರವನ್ನು ಗುರಿಯಾಗಿಸಿ 100ಕ್ಕೂ ಹೆಚ್ಚು ಡ್ರೋನ್‌ಗಳು, 100 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಇರಾನ್‌ ಪ್ರಯೋಗಿಸಿತು. ಇದರಿಂದ ಇಸ್ರೇಲ್‌ನಲ್ಲಿ ನಾಲ್ವರು ಸಾವನ್ನಪ್ಪಿದ್ದು, 59 ಮಂದಿ ಗಾಯಗೊಂಡಿದ್ದಾರೆ. ಇಸ್ರೇಲ್‌ನ ಎರಡು ಎಫ್-35 ಜೆಟ್‌ಗಳೂ ನಾಶವಾಗಿವೆ. ಇಸ್ರೇಲ್‌ನಲ್ಲಿ ಸೈರನ್ ಮೊಳಗುತ್ತಿದ್ದಂತೆ ಜನ ಸುರಕ್ಷಿತ ಸ್ಥಳಕ್ಕೆ ಓಡಿ ಹೋಗುವ ದೃಶ್ಯ ವೈರಲ್ ಆಗಿದೆ. ಇದನ್ನೂ ಓದಿ: ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ – 4,000 ಜನರ ಸ್ಥಳಾಂತರ

    ಈ ಬೆನ್ನಲ್ಲೇ ಇರಾನ್ ವಿರುದ್ಧ ಪ್ರತೀಕಾರದ ಕ್ರಮ ಕೈಗೊಳ್ಳೋ ಬಗ್ಗೆ ಇಸ್ರೇಲ್ ಎಚ್ಚರಿಕೆ ಕೊಟ್ಟಿದೆ. ಇರಾನ್‌ನ ಟೆಹ್ರಾನ್ ನಗರ ಹೊತ್ತಿ ಉರಿಯುತ್ತೆ… ಸರ್ವನಾಶ ಮಾಡುತ್ತೇವೆ ಎಂದು ಇಸ್ರೇಲ್‌ನ ರಕ್ಷಣಾ ಸಚಿವ ಕಾಟ್ಜ್ ಎಚ್ಚರಿಕೆ ಕೊಟ್ಟಿದ್ದಾರೆ. ಈ ಬೆನ್ನಲ್ಲೇ ಇಸ್ರೇಲ್ ಸಹಾಯಕ್ಕೆ ಬಂದರೆ ನಿಮ್ಮ ನೌಕಾನೆಲೆಗಳನ್ನು ಧ್ವಂಸಗೊಳಿಸ್ತೇವೆ ಅಂತ ಅಮೆರಿಕ, ಇಂಗ್ಲೆಂಡ್ ಹಾಗೂ ಫ್ರಾನ್ಸ್‌ಗೆ ಇರಾನ್ ವಾರ್ನಿಂಗ್ ಕೊಟ್ಟಿದೆ. ಇದನ್ನೂ ಓದಿ: 11A ಸೀಟ್ ಮಿಸ್ಟರಿ – 2 ವಿಮಾನ ಪತನ, ಒಂದೇ ಕಡೆ ಕುಳಿತಿದ್ದ ಇಬ್ಬರು ಮೃತ್ಯುಂಜಯರು!

    ಇಸ್ರೇಲ್‌ನಿಂದ ಘೋರ ದಾಳಿಯ ಸುಳಿವು
    ತನ್ನ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳುತ್ತಿರುವ ಇಸ್ರೇಲ್‌, ಇರಾನ್‌ ಮೇಲೆ ಭೀಕರ ದಾಳಿ ನಡೆಸುವ ಎಚ್ಚರಿಕೆ ಕೊಟ್ಟಿದೆ. ನಾವು ಇರಾನ್‌ನ ಅಣ್ವಸ್ತ್ರ ತಾಣಗಳಿಂದ ಹಿಡಿದು, ವಾಯು ರಕ್ಷಣಾ ವ್ಯವಸ್ಥೆಗಳ ವರೆಗೆ ಕೆಲವು ಅಪಾಯಕಾರಿ ಮಿಲಿಟರಿ ಸಂಪತ್ತುಗಳನ್ನು ನಾಶಪಡಿಸಿದ್ದೇವೆ. ಆದರೆ ಇರಾನ್‌ ನಮ್ಮಲ್ಲಿನ ಶಾಲೆಗಳು, ನಾಗರಿಕರ ಮನೆಗಳು ಹಾಗೂ ನಾಗರಿಕರನ್ನ ಗುರಿಯಾಗಿಸಿ ದಾಳಿ ನಡೆಸುತ್ತಾ ಬಂದಿದ್ದೆ. ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದೆ. ಹೀಗಾಗಿ ಇರಾನ್‌ ಮೇಲೆ ಯಾವುದೇ ಕ್ಷಣದಲ್ಲೂ ದಾಳಿ ನಡೆಯುವ ಸಾಧ್ಯತೆಗಳಿವೆ.

  • ಸೇನಾ ನೆಲೆಯ ಮೇಲೆ ಹಿಜ್ಬುಲ್ಲಾ ಡ್ರೋನ್ ಅಟ್ಯಾಕ್‌ – 4 ಇಸ್ರೇಲ್‌ ಸೈನಿಕರು ಬಲಿ

    ಸೇನಾ ನೆಲೆಯ ಮೇಲೆ ಹಿಜ್ಬುಲ್ಲಾ ಡ್ರೋನ್ ಅಟ್ಯಾಕ್‌ – 4 ಇಸ್ರೇಲ್‌ ಸೈನಿಕರು ಬಲಿ

    ಬೈರೂತ್‌: ಒಂದು ವರ್ಷ ಕಳೆದರೂ ಇಸ್ರೇಲ್‌-ಹಮಾಸ್‌-ಹಿಜ್ಬುಲ್ಲಾ ನಡುವಿನ ದಾಳಿಯ ತೀವ್ರತೆ ಹೆಚ್ಚುತ್ತಲೇ ಇದೆ. ಅ.7ಕ್ಕಿಂತ ಭೀಕರವಾಗಿ ದಾಳಿ ನಡೆಸಲು ಹಮಾಸ್‌ ಪ್ಲಾನ್‌ ಮಾಡಿದೆ ಎಂಬ ವದಂತಿ ಹಬ್ಬಿದ ಬೆನ್ನಲ್ಲೇ ಇಸ್ರೇಲ್‌ ಮೇಲೆ ಭೀಕರ ದಾಳಿ ನಡೆದಿದೆ. ಲೆಬನಾನ್‌ನ ಗಡಿಯುದ್ಧಕ್ಕೂ ಬಾಂಬ್‌ ದಾಳಿಗಳನ್ನು ವಿಸ್ತರಿಸಿದೆ. ಉತ್ತರದ ನೆಲೆಗಳಲ್ಲಿ ಹಿಜ್ಬುಲ್ಲಾ ಡ್ರೋನ್‌ಗಳು (Hezbollah Drone Strike) ತನ್ನ ನಾಲ್ವರು ಸೈನಿಕರನ್ನು (Israeli Soldiers) ಹೊಡೆದುರುಳಿಸಿದೆ ಎಂದು ಇಸ್ರೇಲ್‌ ಮಿಲಿಟರಿ ಹೇಳಿಕೊಂಡಿದೆ.

    ಹೈಫಾ ಬಳಿಯ ಬಿನ್ಯಾಮಿನಾದಲ್ಲಿನ ಮಿಲಿಟರಿ ತರಬೇತಿ ಶಿಬಿರದ ಮೇಲಿನ ದಾಳಿಯು ಸೆಪ್ಟೆಂಬರ್ 23 ನಂತರ ಇಸ್ರೇಲ್ ನೆಲೆಯ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಾಗಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್, ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಮೇಲೆ ದಾಳಿ ನಡೆಸಿದ್ದು, ತುರ್ತು ಸೇವೆಗಳಲ್ಲಿ ವ್ಯತ್ಯಯವಾಗಿದ, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಇಸ್ರೇಲ್‌ ಭೀಕರ ವಾಯುದಾಳಿಗೆ 22 ಮಂದಿ ಬಲಿ – 117 ಮಂದಿಗೆ ಗಾಯ, ಹಿಜ್ಬುಲ್ಲಾ ಟಾಪ್‌ ಲೀಡರ್‌ ಸೇಫ್‌

    ಈ ನಡುವೆ ಸ್ಥಳಾಂತರಗೊಂಡ ಜನರಿಗೆ ಆಶ್ರಯ ತಾಣವಾಗಿ ಬಳಸಲಾಗುತ್ತಿದ್ದ ಶಾಲೆಯ ಮೇಲೆ ಇಸ್ರೇಲಿ ನಡೆಸಿದ ದಾಳಿಯಿಂದ ಒಂದೇ ಕುಟುಂಬದ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ಗಾಜಾದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಹರಾ ಮರುಭೂಮಿಯಲ್ಲಿ ಭಾರೀ ಮಳೆ – 50 ವರ್ಷದ ನಂತರ ಕೆರೆಗಳು ಭರ್ತಿ

    ಇತ್ತೀಚೆಗಷ್ಟೇ ಇಸ್ರೇಲ್‌ ಸೇನೆಯು ಸೆಂಟ್ರಲ್‌ ಬೈರೂತ್‌ನ ವಿಶ್ವಸಂಸ್ಥೆ ಶಾಂತಿಪಾಲನಾ ಪ್ರಧಾನ ಕಚೇರಿ ಮೇಲೆ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ (Israeli Strikes) 22 ಮಂದಿ ಹತ್ಯೆಯಾಗಿ, ಸುಮಾರು 117 ಮಂದಿ ಗಾಯಗೊಂಡಿದ್ದರು. ಅದೃಷ್ಟವಶಾತ್‌ ಈ ದಾಳಿಯಲ್ಲಿ ಹಿಜ್ಬುಲ್ಲಾದ (Hezbollah) ಉನ್ನತ ಅಧಿಕಾರಿಯೊಬ್ಬರು ಬದುಕುಳಿದಿದ್ದರು. ಈ ಬೆನ್ನಲ್ಲೇ ಇಸ್ರೇಲ್‌ ವಿರುದ್ಧ ಅಕ್ಟೋಬರ್‌ 7ಕ್ಕಿಂತಲೂ ಭೀಕರ ದಾಳಿ ನಡೆಸುವುದಾಗಿ ಒಂದು ದಿನದ ಹಿಂದೆಯಷ್ಟೇ ಎಚ್ಚರಿಕೆ ನೀಡಿದರು. ಅದರಂತೆ ಲೆಬನಾನ್‌ನ ಉತ್ತರ ಗಡಿ ಭಾಗಗಳಲ್ಲಿ ಇಸ್ರೇಲ್‌ ಸೇನೆ ವಿರುದ್ಧ ದಾಳಿ ನಡೆಸಿದ್ದು ನಾಲ್ವರು ಸೈನಿಕರನ್ನು ಹತ್ಯೆಗೈದಿದೆ.

    2.20 ಲಕ್ಷ ಮಂದಿ ಲೆಬನಾನ್‌ನಿಂದ ಸಿರಿಯಾಕ್ಕೆ ಪಲಾಯನ
    ಇತ್ತೀಚಿನ ದಿನಗಳಲ್ಲಿ ಇಸ್ರೇಲ್‌ನ ಯುದ್ಧ ವಿಮಾನಗಳು (Israeli Fighter Jets) ಲೆಬನಾನ್‌ನ ಬೆಕಾ ಪ್ರದೇಶ ಮತ್ತು ಬೈರೂತ್‌ನಲ್ಲಿ ವ್ಯಾಪಕವಾದ ವೈಮಾನಿಕ ದಾಳಿಗಳನ್ನು ನಡೆಸಿದೆ. ಮೂಲಸೌಕರ್ಯ ತಾಣಗಳು, ಲಾಂಚರ್‌ಗಳು, ಕಮಾಂಡ್ & ಕಂಟ್ರೋಲ್ ಸೆಂಟರ್‌ಗಳು ಹಾಗೂ ಶಸ್ತ್ರಾಸ್ತ್ರಗಳ ಸಂಗ್ರಹಣಾ ಸೌಲಭ್ಯ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ. ಸದ್ಯಕ್ಕೆ ಕದನ ವಿರಾಮ ಘೋಷಣೆಯಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಇದರಿಂದ ಭಯಭೀತರಾಗಿರುವ 2.20 ಲಕ್ಷ ಮಂದಿ ಸಿರಿಯಾಕ್ಕೆ ಪಲಾಯನ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.