Tag: Drone Pratap

  • ಡ್ರೋಣ್ ಪ್ರತಾಪ್ ಮೇಲೆ ಮತ್ತೊಂದು ಗಂಭೀರ ಆರೋಪ

    ಡ್ರೋಣ್ ಪ್ರತಾಪ್ ಮೇಲೆ ಮತ್ತೊಂದು ಗಂಭೀರ ಆರೋಪ

    ಬಿಗ್ ಬಾಸ್ ಮನೆಯಲ್ಲಿ ಗೆಲುವಿಗಾಗಿ ಸೆಣೆಸುತ್ತಿರುವ ಡ್ರೋನ್ ಪ್ರತಾಪ್ (Drone Pratap) ಮೇಲೆ ಒಂದರ ಮೇಲೆ ಒಂದರಂತೆ ದೂರುಗಳು ದಾಖಲಾಗುತ್ತಿವೆ. ಮೊನ್ನೆಯಷ್ಟೇ ಡಾ.ಪ್ರಯಾಗ್ ಎನ್ನುವವರು ಡ್ರೋಣ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಇದೀಗ ಲಕ್ಷ ಲಕ್ಷ ದೋಖಾ ಮಾಡಿರುವ ಆರೋಪ ಕೇಳಿ ಬಂದಿದೆ.

    ಪೂಣಾ ಮೂಲದ ಸಾರಂಗ್ ಮಾನೆ (Sarang Mane) ಎನ್ನುವವರು ಡ್ರೋಣ್ ಪ್ರತಾಪ್ ಗೆ ಬರೋಬ್ಬರಿ 83 ಲಕ್ಷ ರೂಪಾಯಿ ನೀಡಿದ್ದಾರಂತೆ. ಈ ಹಣದಲ್ಲಿ 8 ಡ್ರೋಣ್ ನೀಡುವುದಾಗಿ ಪ್ರತಾಪ್ ಹೇಳಿದ್ದರಂತೆ. ಆದರೆ, ಕೊಟ್ಟ ಮಾತಿನಂತೆ ‍ಪ್ರತಾಪ್ ನಡೆದುಕೊಂಡಿಲ್ಲ ಎನ್ನುವುದು ಮಾನೆ ಆರೋಪ.

    ಪ್ರತಾಪ್ ಈಗಾಗಲೇ 2 ಡ್ರೋಣ್ ಕಳಿಸಿದ್ದಾರೆ. ಆದರೆ, ಅವು ಸರಿಯಾಗಿ ಕಾರ್ಯ ಮಾಡುತ್ತಿಲ್ಲ. ಒಂದು ವರ್ಷವಾಗಿದೆ ಹಣವನ್ನೂ ಕೊಡುತ್ತಿಲ್ಲ ಎಂದು ಸಾರಂಗ್ ಮಾನೆ. ಆರೋಪ ಮಾಡುತ್ತಿದ್ದಾರೆ. ರೈತರ ಬೆಳೆಗಳಿಗೆ ಕ್ರಿಮಿನಾಶಕ ಔಷಧ ಸಿಂಪಡಿಸುವ ಡ್ರೋಣ್ ಗಳ ಎಕ್ಸಿಬಿಷನ್ ವೇಳೆ ಸಾರಂಗ್ ಮಾನೆ ಅವರಿಗೆ  ಡ್ರೋಣ್ ಪ್ರತಾಪ್ ಪರಿಚವಾಗಿದ್ದರಂತೆ. ರೈತರಿಗೆ ಡ್ರೋಣ್ ಕಳಿಸಿಕೊಡುವ ಟೆಂಡರ್ ಪಡೆದಿದ್ದ ಸಾರಂಗ್ ಮಾನೆ ಅವರು ಪ್ರತಾಪ್ ಗೆ ಆ ಜವಾಬ್ದಾರಿ ನೀಡಿದ್ದರು.

  • ಬಿಗ್ ಬಾಸ್ ಮನೆಯಿಂದ ಹೊರ ಬರೋದು ಯಾರು?

    ಬಿಗ್ ಬಾಸ್ ಮನೆಯಿಂದ ಹೊರ ಬರೋದು ಯಾರು?

    ಬಿಗ್ ಬಾಸ್ (Bigg Boss Kannada) ಮನೆ ಈ ವಾರ ಅಕ್ಷರಶಃ ಯುದ್ಧ ಭೂಮಿಯಂತೆ ಕಾಣುತ್ತಿದೆ. ಫಿನಾಲೆಗೆ ಒಂದು ವಾರವಷ್ಟೇ ಬಾಕಿ. ಮನೆಯಲ್ಲಿ ಇರೋದು ಏಳು ಜನ. ಈಗಾಗಲೇ ಸಂಗೀತಾ ಶೃಂಗೇರಿ ಡೈರೆಕ್ಟ್ ಆಗಿ ಫಿನಾಲೆಗೆ ಆಯ್ಕೆಯಾಗಿದ್ದಾರೆ. ತುಕಾಲಿ ಸಂತು ಅವರು ನಾಮಿನೇಷನ್ ತೂಗುಕತ್ತಿಯಿಂದ ತಪ್ಪಿಸಿಕೊಂಡಿದ್ದಾರೆ. ಹಾಗಾಗಿ ವರ್ತೂರು ಸಂತೋಷ, ವಿನಯ್, ಕಾರ್ತಿಕ್, ಡ್ರೋನ್ ಪ್ರತಾಪ್ (Drone Pratap) ಮತ್ತು ನಮ್ರತಾ ಸೆಣೆಸಾಡೋದು ಅನಿವಾರ್ಯವಾಗಿದೆ.

    ಮಿಡ್ ವೀಕ್ ಎಲಿಮಿನೇಷನ್ (Elimination) ಅಂತ ಈಗಾಗಲೇ ತನಿಷಾ ಕುಪ್ಪಂಡ ಅವರನ್ನು ಮನೆಯಿಂದ ಕಳುಹಿಸಲಾಗಿದೆ. ಫಿನಾಲೆ ವೇದಿಕೆಯ ಮೇಲೆ ಐದೇ ಐದು ಜನರು ಇರುವ ಕಾರಣದಿಂದಾಗಿ ಇನ್ನೂ ಇಬ್ಬರನ್ನೂ ಮನೆಯಿಂದ ಹೊರ ಕಳುಹಿಸಬೇಕಿದೆ. ಹಾಗಾಗಿ ಈ ವಾರ ಮತ್ತ್ಯಾರು ಮನೆಯಿಂದ ಹೊರ ಬರುತ್ತಾರೆ ಎನ್ನುವ ಕುತೂಹಲ ಶುರುವಾಗಿದೆ. ಕಳೆದ ಸುದೀಪ್ ಅವರು ವರ್ತೂರು ಸಂತೋಷ್ ಅಥವಾ ತುಕಾಲಿ ಸಂತು ಇಬ್ಬರಲ್ಲಿ ಒಬ್ಬರು ಮನೆಯಿಂದ ಆಚೆ ಹೋಗಲು ರೆಡಿಯಾಗಿ ಎಂದು ಹೇಳುವ ಮೂಲಕ ಶಾಕ್ ನೀಡಿದ್ದರು. ಈ ಬಾರಿ ತುಕಾಲಿ ಬಚಾವ್ ಆಗಿದ್ದಾರೆ.

    ಸದ್ಯ ನಾಮಿನೇಟ್ ಆಗಿರುವ ಕಂಟೆಸ್ಟೆಂಟ್ ಗಳ ಪೈಕಿ ವಿನಯ್, ಕಾರ್ತಿಕ್ ಹಾಗೂ ಡ್ರೋನ್ ಪ್ರತಾಪ್ ಸ್ಟ್ರಾಂಗ್ ಕಂಟೆಸ್ಟೆಂಟ್ ಗಳು ಅನಿಸಿಕೊಂಡಿದ್ದಾರೆ. ಉಳಿದಿರೋದು ವರ್ತೂರು ಸಂತೋಷ್ ಮತ್ತು ನಮ್ರತಾ. ಇಬ್ಬರಲ್ಲಿ ಒಬ್ಬರು ಈ ವಾರ ಆಚೆ ಬರಬಹುದಾ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಹೊರ ಬಂದರೆ ಈ ಇಬ್ಬರಲ್ಲಿ ಒಬ್ಬರು ಗ್ಯಾರಂಟಿ ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ. ಕಳೆದ ವಾರವೇ ವರ್ತೂರು ಆಚೆ ಬರಲಿದ್ದಾರೆ ಎಂದು ಹೇಳಲಾಗಿತ್ತು. ಈ ವಾರ ಅದೇನಾದರೂ ರಿಪೀಟ್ ಆಗಬಹುದಾ? ಗೊತ್ತಿಲ್ಲ.

    ಮತ್ತೊಂದು ಕಿಚ್ಚನ ಪಂಚಾಯತಿ ಎಂದು ನಡೆಯುತ್ತಿದೆ. ಈ ಪಂಚಾಯತಿಯಲ್ಲಿ ಏನೆಲ್ಲ ಸಂಗತಿಗಳು ನಡೆಯಲಿವೆ ಎನ್ನುವ ಚರ್ಚೆ ಕೂಡ ಆಗುತ್ತಿದೆ. ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯನ್ನು ಕಿಚ್ಚ ಇಂದು ಮಾಡುತ್ತಾರಾ ಅಥವಾ ನಾಳೆ ಮಾಡುತ್ತಾರಾ ಎನ್ನುವುದು ಇಂದು ರಾತ್ರಿಗೆ ಅಂದಾಜು ಸಿಗಲಿದೆ.

  • ಫಿನಾಲೆ ವೇಳೆಯಲ್ಲಿ ಜೈಲು ಸೇರಿದ ಡ್ರೋನ್ ಪ್ರತಾಪ್

    ಫಿನಾಲೆ ವೇಳೆಯಲ್ಲಿ ಜೈಲು ಸೇರಿದ ಡ್ರೋನ್ ಪ್ರತಾಪ್

    ಡ್ರೋನ್ ಪ್ರತಾಪ್ (Drone Pratap) ಅಭಿಮಾನಿಗಳಿಗೆ ಆಘಾತ ಕಾದಿದೆ. ದೊಡ್ಮನೆಯ ಆಟಕ್ಕೆ ಬ್ರೇಕ್ ಬೀಳಲು ಕೆಲವೇ ಕೆಲವು ದಿನಗಳು ಬಾಕಿಯಿದೆ. ಫಿನಾಲೆ ಘಟ್ಟ ತಲುಪುತ್ತಿದ್ದಂತೆ ಸ್ಪರ್ಧಿಗಳ ಅಸಲಿ ಆಟ ಶುರುವಾಗಿದೆ. ಇದೀಗ ಡ್ರೋನ್ ಪ್ರತಾಪ್‌ಗೆ ಕಳಪೆ ಎಂದು ಜೈಲಿಗೆ ಮನೆಮಂದಿ ಅಟ್ಟಿದ್ದಾರೆ.

    ಬಿಗ್ ಮನೆಗೆ (Big Boss Kannada) ಕಾಲಿಟ್ಟ ದಿನದಿಂದ ಕೆಲ ಸ್ಪರ್ಧಿಗಳಿಂದ ಪ್ರತಾಪ್ ಟಾರ್ಗೆಟ್ ಆಗುತ್ತಲೇ ಬಂದಿದ್ದರು. ಅನೇಕರ ಕೆಂಗಣ್ಣಿಗೆ ಪ್ರತಾಪ್ ಗುರುಯಾಗಿದ್ದರು. ಆ ನಂತರ ಪ್ರತಾಪ್ ಪರ ಸುದೀಪ್ ನಿಂತು.. ಡ್ರೋನ್‌ನ ಹೀಯಾಳಿಸಿದವರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಇದರಿಂದ ಪ್ರತಾಪ್‌ಗೆ ಬಲಬಂದAತೆ ಆಗಿತ್ತು. ಬಳಿಕ ಆಟದಲ್ಲಿ ಪ್ರತಾಪ್ ಪಿಕ್ ಅಪ್ ಆದರು.

    ಇತ್ತೀಚಿನ ಪ್ರತಾಪ್ ಆಟ ಡಲ್ ಆಗಿದೆ. ಫಿನಾಲೆ ಟಿಕೆಟ್ ವೇಳೆ, ಸಂಗೀತಾ ಮತ್ತು ನಮ್ರತಾಗೆ ಡ್ರೋನ್ ಠಕ್ಕರ್ ಕೊಟ್ಟಿದ್ದು ಬಿಟ್ಟರೆ, ಇದೀಗ ಮತ್ತೆ ಮಂಕಾಗಿದ್ದಾರೆ. ಹಾಗಾಗಿಯೇ ೧೫ ವಾರಗಳ ಆಟ ನೋಡಿ, ಸಂಗೀತಾಗೆ ಉತ್ತಮ ಸಿಕ್ಕಿದೆ. ಪ್ರತಾಪ್‌ಗೆ ವಿನಯ್, ತುಕಾಲಿ, ಕಾರ್ತಿಕ್ ಸೇರಿದಂತೆ ಅನೇಕರು ಕಳಪೆ ಹಣೆಪಟ್ಟಿ ಕೊಟ್ಟಿದ್ದಾರೆ.

    ಪ್ರತಾಪ್‌ಗೆ ಕಳಪೆ ಸಿಕ್ಕಿದ್ದಕ್ಕೆ ಸಂಗೀತಾ ಭಾವುಕರಾಗಿದ್ದಾರೆ. ನನ್ನ ಪ್ರಕಾರ ಯಾರು ಇಲ್ಲಿ ಕಳಪೆ ಇಲ್ಲ ಎಂದು ಹೇಳಿದ್ದಾರೆ. ಸಂಗೀತಾ ದೀದಿ ಇಷ್ಟು ವಾರಗಳು ನನ್ನ ಪರವಾಗಿ ನಿಂತಿದ್ದರು. ಅದಕ್ಕೆ ಋಣಿಯಾಗಿದ್ದೀನಿ ಎಂದು ಹೇಳುತ್ತಲೇ ಜೈಲಿಗೆ ಪ್ರತಾಪ್ ಕಾಲಿಟ್ಟಿದ್ದಾರೆ. ಆಗ ಸಂಗೀತಾ, ನನ್ನ ಪಕ್ಕ ಯಾರು ನಿಲ್ತಾರೆ ಅವರೆಲ್ಲರೂ ಜೈಲಿಗೆ ಹೋಗುತ್ತಾರೆ ಎಂದು ಸಂಗೀತಾ.. ಸಹಸ್ಪರ್ಧಿಗಳ ಮೇಲೆ ಬೇಸರ ಹೊರಹಾಕಿದ್ದಾರೆ.

  • ಇಶಾನಿ ಮೇಲೆ ಡ್ರೋನ್ ಪ್ರತಾಪ್ ಫ್ಯಾನ್ಸ್ ಗರಂ

    ಇಶಾನಿ ಮೇಲೆ ಡ್ರೋನ್ ಪ್ರತಾಪ್ ಫ್ಯಾನ್ಸ್ ಗರಂ

    ಲಿಮಿನೇಟ್ ಆಗಿ ಬಿಗ್ ಬಾಸ್ (Bigg Boss Kannada) ಮನೆಯಿಂದ ಆಚೆ ಬಂದಿದ್ದ ಇಶಾನಿ (Ishani) ಸೇರಿದಂತೆ ಹಲವು ಕಂಟೆಸ್ಟೆಂಟ್ ಇದೀಗ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿರುವ ಎಂಟು ಜನರ ಜೊತೆ ಪ್ರತಿಯೊಬ್ಬರು ಮಾತನಾಡುತ್ತಿದ್ದಾರೆ. ಯಾರು ಹೇಗೆ? ಹೇಗೆ ಆಟ ಆಡಬೇಕು, ಏನು ಮಾಡ್ತಿದ್ದೀರಿ ಎಂಬಿತ್ಯಾದಿ ಮಾತುಗಳನ್ನು ಆಡುತ್ತಿದ್ದಾರೆ. ಈ ಸಂದರ್ಭದಲ್ಲಿ ಡ್ರೋನ್ ಪ್ರತಾಪ್ (Drone Pratap) ಅವರನ್ನು ಅನುಮಾನಿಸೋ ರೀತಿಯಲ್ಲಿ ಇಶಾನಿ ಆಡಿದ್ದಾರೆ. ಆ ಮಾತೇ ಅವರಿಗೆ ಮುಳುವಾಗಿದೆ.

    ಕಾಗೆ ಕಕ್ಕ ಉದಾಹರಣೆಯನ್ನು ತೆಗೆದುಕೊಂಡು ಡ್ರೋನ್ ಪ್ರತಾಪ್ ಅವರಿಗೆ ಬೈದಿದ್ದಾರೆ. ಪ್ರತಾಪ್ ಅವರನ್ನು ಕಾಗೆಗೆ ಹೋಲಿಸಿದ್ದಾರೆ. ಇಶಾನಿ ಆಡಿದ ಈ ಮಾತುಗಳನ್ನು ಕೇಳಿದ ಡ್ರೋನ್ ಫ್ಯಾನ್ಸ್ ಇಶಾನಿ ಮೇಲೆ ಗರಂ ಆಗಿದ್ದಾರೆ. ಡ್ರೋನ್ ಗೆ ಮಾತನಾಡುವಂತಹ ಯಾವುದೇ ಯೋಗ್ಯತೆ ಇಲ್ಲವೆಂದು ಕಾಮೆಂಟ್ ಮಾಡಿದ್ದಾರೆ.

    ಇಶಾನಿ ಮತ್ತು ಡ್ರೋನ್ ಪ್ರತಾಪ್ ಆಡಿದ ಮಾತುಗಳು ಕೂಡ ನಾನಾ ಅರ್ಥಗಳನ್ನು ಕಲ್ಪಿಸುತ್ತಿವೆ. ಇಶಾನಿ ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಸುಮ್ಮನೆ ಇರದ ಇಶಾನಿ, ಡ್ರೋನ್ ಬಗ್ಗೆ ಮಾತಾಡಿ, ಕೆಟ್ಟವರೆನಿಸಿಕೊಂಡಿದ್ದಾರೆ.

    ಬಿಗ್ ಬಾಸ್ ಇನ್ನೇನು ಫಿನಾಲಿ ಹಂತ ತಲುಪಿದೆ. ಈ ವೇಳೆಯಲ್ಲಿ ಎಲಿಮಿನೇಟ್ ಆಗಿರುವಂತಹ ಅಷ್ಟೂ ಕಂಟೆಸ್ಟೆಂಟ್ ಗಳು ಮತ್ತೆ ಬಿಗ್ ಬಾಸ್ ಮನೆಗೆ ಹೋಗಿ, ಅಲ್ಲಿದ್ದವರ ತಲೆ ಕೆಡಿಸುತ್ತಿದ್ದಾರೆ. ಇದರಿಂದಾಗಿ ಅಲ್ಲಿರುವವರು ತೊಂದರೆ ಅನುಭವಿಸ್ತಾರಾ? ಅಥವಾ ಮುಂದಕ್ಕೆ ಹೋಗಲು ಸಹಾಯ ತಗೋತಾರಾ? ಕಾದು ನೋಡಬೇಕು.

  • ಡ್ರೋನ್ ಜೊತೆಗಿನ ಫ್ರೆಂಡ್ ಶಿಪ್ ಕಟ್ ಎಂದ ಸಂಗೀತಾ

    ಡ್ರೋನ್ ಜೊತೆಗಿನ ಫ್ರೆಂಡ್ ಶಿಪ್ ಕಟ್ ಎಂದ ಸಂಗೀತಾ

    ಬಿಗ್ ಬಾಸ್ (Big Boss Kannada) ಮನೆಯಲ್ಲಿ ಫಿನಾಲೆ ಸಮೀಪಿಸುತ್ತಿದ್ದಂತೆಯೇ ಬಿಗ್‌ಬಾಸ್ ಮನೆಯೊಳಗಿನ ಸಂಬಂಧಗಳ ಬಣ್ಣಗಳೆಲ್ಲ ಮಾಸುತ್ತಿವೆ. ಗೆಲುವಿನ ಗುರಿಯೊಂದೇ ಎಲ್ಲರ ಕಣ್ಣಮುಂದೆ ಹೊಳೆಯುತ್ತಿದೆ. ಹಿಂದಿನ ಎಪಿಸೋಡ್‌ನಲ್ಲಿ ನಮ್ರತಾ ಅವರು ವಿನಯ್ ಅವರನ್ನು ಆಟದಿಂದ ಕೈಬಿಟ್ಟಾಗಲೇ ಇಂಥದೊಂದು ಸೂಚನೆ ಕಾಣಿಸಿಕೊಂಡಿತ್ತು. ಈಗ ಅಂಥದ್ದೇ ಇನ್ನೊಂದು ಘಟನೆ ಬಿಗ್‌ಬಾಸ್ ಮನೆಯೊಳಗೆ ನಡೆದಿದೆ. ಅದರ ಸೂಚನೆ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಾಣಿಸಿಕೊಂಡಿದೆ.

    ಅತಿ ಹೆಚ್ಚು ಅಂಕ ಗಳಿಸಿಕೊಂಡವರಲ್ಲಿ ಸಂಗೀತಾ (Sangeetha) ಮತ್ತು ಪ್ರತಾಪ್ (Drone Pratap) ಮಧ್ಯೆ ಪೈಪೋಟಿ ಇತ್ತು. ನಿನ್ನೆ ಒಂದು ಟಾಸ್ಕ್ ನಲ್ಲಿ ಗೆಲುವು ಕಂಡು ನಮ್ರತಾ ಕೂಡ ರೇಸ್‌ಗೆ ಬಂದಿದ್ದರು. ಮೊದಲ ಕೆಲವು ಟಾಸ್ಕ್‌ಗಳಲ್ಲಿ ಉತ್ತಮವಾಗಿ ಆಡಿದ ವರ್ತೂರು ಸಂತೋಷ್ ಕೂಡ ಇನ್ನೂರರ ಗಡಿ ದಾಟಿದ್ದಾರೆ. ಈ ಹಂತದಲ್ಲಿ ಪ್ರತಾಪ್ ಅವರಿಗೆ ತಮ್ಮ ಎದುರಾಳಿಗಳನ್ನು ಆಯ್ದುಕೊಳ್ಳುವ ಅಧಿಕಾರವನ್ನು ಬಿಗ್‌ಬಾಸ್ ನೀಡಿದ್ದಾರೆ. ಪ್ರತಾಪ್ ಅವರು ಸಂಗೀತಾ ಅವರನ್ನೂ ಆರಿಸಿಕೊಂಡಿದ್ದಾರೆ. ಆದರೆ ಮೊದಲ ಹಂತದಲ್ಲಿ ಯಾರನ್ನಾದರೂ ಹೊರಗಿಡುವ ಸಂದರ್ಭದಲ್ಲಿ ಸಂಗೀತಾ ಅವರನ್ನೇ ಆಟದಿಂದ ಹೊರಗಿಟ್ಟಿದ್ದಾರೆ.

    ಸಂಗೀತಾ ದೀದಿ ಎಂದು ಯಾವಾಗಲೂ ಜೊತೆಗಿರುತ್ತಿದ್ದ ಪ್ರತಾಪ್ ಅವರೇ ಅವರನ್ನು ಹೊರಗಿಟ್ಟಿದ್ದು ಸಂಗೀತಾ ಅವರನ್ನು ದಿಗ್ಭ್ರಮೆಗೊಳಿಸಿದೆ. ‘ಇನ್ನೂ ಅವನನ್ನು ಬೆಂಬಲಿಸುತ್ತ ಬಂದೆನಲ್ಲ, ನಾನೆಂಥ ದಡ್ಡಿ’ ಎಂದು ಅವರು ತಮ್ಮನ್ನು ತಾವೇ ಹಳಿದುಕೊಂಡಿದ್ದಾರೆ. ಪ್ರತಾಪ್ ಹೀಗೆ ಮಾಡಬಾರದಿತ್ತು ಎಂದು ಶಪಿಸಿದ್ದಾರೆ. ಡ್ರೋನ್ ಹೀಗೆ ಮಾಡ್ತಾನೆ ಅಂತ ಕಂಡಿತಾ ಅಂದುಕೊಂಡಿರಲಿಲ್ಲ ಎಂದು ಕೋಪಿಸಿಕೊಂಡಿದ್ದಾರೆ.

     

    ಹೌದು, ಬಿಗ್ ಬಾಸ್ ಮನೆ ಫಿನಾಲೆಗೆ ಸಮೀಪಿಸುತ್ತಿದ್ದಂತೆಯೇ ಸಂಬಂಧಗಳು ಹಳಸ ತೊಡಗಿವೆ. ಗೆಲುವು ಒಂದೇ ಕಣ್ಮುಂದೆ ಕುಣಿಯುತ್ತಿದೆ. ಹಾಗಾಗಿ ಕೇವಲ ಸಂಗೀತ ಮತ್ತು ಡ್ರೋನ್ ಪ್ರತಾಪ್ ಬಾಂಧವ್ಯ ಮಾತ್ರವಲ್ಲ, ಕುಚಿಕು ಗೆಳೆಯರಂತಿದ್ದ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತು ನಡುವೆಯೂ ಬಿರುಕು ಕಾಣಿಸಿಕೊಂಡಿದೆ. ಇಬ್ಬರ ಫ‍್ರೆಂಡ್ ಶಿಪ್ ಕಟ್ ಆಗಿದೆ. ಇದೆಲ್ಲ ಮುಂದಿನ ದಿನಗಳಲ್ಲಿ ಇನ್ನ್ಯಾವ ಹಂತಕ್ಕೆ ಹೋಗುತ್ತೋ ಕಾದು ನೋಡಬೇಕು.

  • Bigg Boss Kannada: ಡ್ರೋನ್ ಪ್ರತಾಪ್ ಎದುರು ನಿಂತು ಕ್ಷಮೆ ಕೇಳಿದ ವಿನಯ್

    Bigg Boss Kannada: ಡ್ರೋನ್ ಪ್ರತಾಪ್ ಎದುರು ನಿಂತು ಕ್ಷಮೆ ಕೇಳಿದ ವಿನಯ್

    ಬಿಗ್ ಬಾಸ್ (Bigg Boss Kannada) ಮನೆ ಅಚ್ಚರಿಗೆ ಕಾರಣವಾಗಿದೆ. ಫಿನಾಲೆಗೆ ಹೋಗೋಕೆ ಯಾರು ಅರ್ಹರು ಎನ್ನುವ ಟಾಸ್ಕ್ ವಿಚಾರವಾಗಿ ಡ್ರೋನ್ ಪ್ರತಾಪ್ (Drone Pratap) ಮತ್ತು ವಿನಯ್ (Vinay) ನಡುವೆ ಕೋಲಾಹಲವೇ ನಡೆದಿತ್ತು. ಬಿಗ್ ಬಾಸ್ ಮನೆಯಲ್ಲಿ ಜಗಳ ಕಾಮನ್ ಆಗಿದ್ದರೂ, ಈ ಬಾರಿಯ ಜಗಳ ನೋಡುಗರಿಗೂ ಅಸಹ್ಯ ಮೂಡಿಸಿತ್ತು. ಡ್ರೋನ್ ಪ್ರತಾಪ್ ಅವರಿಗೆ ವಿನಯ್ ಕೊಳಕು ಭಾಷೆಯಲ್ಲಿ ಬೈದಿದ್ದರು. ಆಡಬಾರದ ಮಾತುಗಳನ್ನು ಆಡಿದ್ದರು. ಹಾಗಾಗಿ ಮನೆಮಂದಿಯಲ್ಲ ವಿನಯ್ ಮೇಲೆ ಬೇಸರಿಸಿಕೊಂಡಿದ್ದರು.

    ಈವರೆಗೂ ಎಲಿಮಿನೇಟ್ ಆದವರಲ್ಲಿ ವಿನಯ್ ಗುಂಪಿನವರೇ ಹೆಚ್ಚಿದ್ದಾರೆ. ಇದನ್ನು ನೋಟಿಸ್ ಮಾಡಿದ್ದ ಪ್ರತಾಪ್, ‘ವಿನಯ್ ಅವರು ತಮ್ಮ ಸ್ನೇಹಿತರ ತಪ್ಪನ್ನು ತಿದ್ದಲು ಹೋಗಲಿಲ್ಲ. ಈ ಕಾರಣದಿಂದಾಗಿಯೇ ಅವರು ಮನೆಯಿಂದ ಆಚೆ ಹೋಗಬೇಕಾಯಿತು’ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಈ ಮಾತು ವಿನಯ್ ಅವರಿಗೆ ಸಾಕಷ್ಟು ಕೋಪ ತರಿಸಿತ್ತು. ಆ ಕೋಪ ಹೇಗಿತ್ತು ಅಂದರೆ, ತಮ್ಮ ಮುಂದೆ ಮೂವರು ಹುಡುಗಿಯರು ಇದ್ದಾರೆ, ಈ ಶೋ ಅನ್ನು ಕೋಟ್ಯಂತರ ಜನರು ವೀಕ್ಷಿಸ್ತಾರೆ ಎನ್ನೋದನ್ನು ಮರೆತು ಸೊಂಟದ ಕೆಳಗಿನ ಪದಗಳನ್ನು ಬಳಸಿದ್ದರು.

    ಹೌದು, ವಿನಯ್ ಅವರಿಗೆ ಕೋಪ ಬಂದರೆ, ನಾಲಿಗೆಯ ಮೇಲೆ ಹಿಡಿತವಿರುವುದಿಲ್ಲ. ಹಾಗಾಗಿ ಬಿಗ್ ಬಾಸ್ ಮನೆಯ ಬಹುತೇಕ ಸದಸ್ಯರನ್ನು ಅವರು ನಿಂದಿಸಿದ್ದಾರೆ. ಕೂಗಾಡಿ ಮನೆಯ ವಾತಾವರಣವನ್ನೇ ಹಾಳು ಮಾಡಿದ್ದಾರೆ. ಇವತ್ತು ದೋಸ್ತ್ ಅಂತ ಯಾರ ಹೆಗಲ ಮೇಲೆ ಕೈ ಹಾಕಿದ್ದರೋ, ಅವರನ್ನು ದುಸ್ಮನ್ ಅಂತಾನೂ ಕರೆದಿದ್ದಾರೆ. ತಪ್ಪಿನ ಅರಿವಾದ ನಂತರ ಮತ್ತೆ ಸ್ಸಾರಿ ಕೇಳಿದ್ದಾರೆ. ಡ್ರೋನ್ ಪ್ರತಾಪ್ ವಿಷಯದಲ್ಲೂ ಅದೇ ಆಗಿದೆ. ತಾನು ಮಾತನಾಡಿದ್ದು ತಪ್ಪು ಅಂತ ಅನಿಸಿ, ಡ್ರೋನ್ ಬಳಿ ಬಂದು ಕ್ಷಮೆ ಕೇಳಿದ್ದಾರೆ.

    ನೀನು ಫಿನಾಲೆ ವೇದಿಕೆಯ ಮೇಲೆ ಇರಬೇಕು ಅಂತ ನನಗೂ ಆಸೆ. ಅವತ್ತು ಕೋಪದಲ್ಲಿ ಬೈದೆ. ನನಗೆ ಕೋಪ ಬಂದರೆ ಏನು ಮಾಡ್ತೀನಿ ಅಂತ ಗೊತ್ತೇ ಇರಲ್ಲ. ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಇರಲಿ ಎಂದು ವಿನಯ್ ಮಾತನಾಡಿದ್ದಾರೆ. ಅಷ್ಟೇ ಪ್ರೀತಿಯಿಂದ ಡ್ರೋನ್ ಕೂಡ ಕ್ಷಮೆಯನ್ನು ಒಪ್ಪಿದ್ದಾರೆ. ಒಳ್ಳೆಯದಾಗಲಿ, ಬಿಗ್ ಬಾಸ್ ಗೆಲ್ಲಲಿ ಎಂದು ಹಾರೈಸಿದ್ದಾರೆ.

  • ನಾಮಿನೇಟ್ ಮಾಡೋಕೆ ಪ್ಲ್ಯಾನ್ ಮಾಡಿದ ಬಿಗ್ ಬಾಸ್

    ನಾಮಿನೇಟ್ ಮಾಡೋಕೆ ಪ್ಲ್ಯಾನ್ ಮಾಡಿದ ಬಿಗ್ ಬಾಸ್

    ಬಿಗ್‌ಬಾಸ್ (Bigg Boss Kannada) ಕನ್ನಡ ಹತ್ತನೇ ಸೀಸನ್‌ ಫೈನಲ್‌ ಹಂತಕ್ಕೆ ಇನ್ನು ಎರಡೇ ಹೆಜ್ಜೆ ಬಾಕಿ ಇದೆ. ಈ ಹಂತದಲ್ಲಿ ಮನೆಯೊಳಗೆ ಪೈಪೋಟಿ ಜೋರಾಗಿಯೇ ನಡೆಯುತ್ತಿದೆ. ಅದರ ಒಂದು ಭಾಗವಾಗಿ ನಾಮಿನೇಷನ್‌ ಚಟುವಟಿಕೆ ನಡೆದಿದೆ. ಅದರ ಝಲಕ್ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಾಣಿಸಿಕೊಂಡಿದೆ. ಎಲ್ಲ ಸ್ಪರ್ಧಿಗಳ ಎದೆಯ ಮೇಲೆ ಹೃದಯಾಕಾರದ ಬೋರ್ಡ್‌ ಅನ್ನು ನೇತುಹಾಕಲಾಗಿದೆ. ಸಂಗೀತಾ ಹೊರತುಪಡಿಸಿ ಎಲ್ಲ ಸ್ಪರ್ಧಿಗಳೂ ತಾವು ನಾಮಿನೇಷನ್ ಮಾಡಲು ಇಚ್ಛಿಸುವ ಇಬ್ಬರು ಸ್ಪರ್ಧಿಗಳ ಹೆಸರು ಹೇಳಿ ಅವರ ಕತ್ತಿನಲ್ಲಿ ತೂಗು ಹಾಕಿದ್ದ ಬೋರ್ಡ್‌ಗೆ ಚೂರಿ ಹಾಕಬೇಕು.

    ಈ ಚಟುವಟಿಕೆಯಲ್ಲಿ ಕಾರ್ತಿಕ್‌ ಅವರು ವರ್ತೂರು ಸಂತೋಷ್ ಮತ್ತು ತನಿಷಾ ಅವರ  ಹೆಸರನ್ನು ಸೂಚಿಸಿ ಚೂರಿ ಹಾಕಿದ್ದಾರೆ. ಪ್ರೇಕ್ಷಕರಲ್ಲಿ ನಿಜಕ್ಕೂ ಇದು ಸಖತ್ ಬೇಸರ ತರಿಸಿದೆ. ವರ್ತೂರು (Varthur) ಮತ್ತು ತನಿಷಾ (Tanisha) ಅವರನ್ನು ಲವ್ ಬರ್ಡ್ಸ್ ಎಂದು ಕರೆಯಲಾಗಿತ್ತು. ಅದೆಷ್ಟೋ ಬಾರಿ ತಮ್ಮ ತೊಡೆಯ ಮೇಲೆ ತನಿಷಾರನ್ನು ಮಲಗಿಸಿಕೊಂಡು ಪ್ರೀತಿ ತೋರಿದ್ದಾರೆ ವರ್ತೂರು. ತನಿಷಾ ಕೂಡ ವರ್ತೂರು ಮೇಲೆ ಅಷ್ಟೇ ಇಷ್ಟ ಪಟ್ಟಿದ್ದಾರೆ. ಆದರೆ, ನಾಮಿನೇಷನ್ ಟಾಸ್ಕ್ ನಲ್ಲಿ ಮಾತ್ರ ಇಬ್ಬರೂ ದುಷ್ಮನ್ ರೀತಿಯಲ್ಲಿ ಕಂಡಿದ್ದಾರೆ.

    ಮತ್ತೊಂದು ಕಡೆ ತನಿಷಾ ಅವರು ತಮ್ಮ ಸರದಿ ಬಂದಾಗ, ವರ್ತೂರು ಸಂತೋಷ್ ಅವರ ಹೆಸರನ್ನು ತೆಗೆದುಕೊಳ್ಳುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ, ವರ್ತೂರು ಮೇಲಿನ ಪ್ರೀತಿಯನ್ನು ಹಾಗೆಯೇ ಉಳಿಸಿಕೊಂಡು ನಮ್ರತಾ ಅವರ ಹೆಸರು ಹೇಳಿದ್ದಾರೆ. ವಿನಯ್‌ ಮತ್ತು ಪ್ರತಾಪ್ ಫೈಟ್‌ನ ಪರಿಣಾಮ ಈ ಚಟುವಟಿಕೆಯಲ್ಲಿಯೂ ಕಾಣಿಸಿಕೊಂಡಿದೆ. ಅವರಿಬ್ಬರೂ ಪರಸ್ಪರ ಚೂರಿ ಹಾಕಿಕೊಂಡಿದ್ದಾರೆ. ಈ ಮೂಲಕ ನಾವಿಬ್ಬರೂ ಬದ್ಧ ವೈರಿಗಳು ಎನ್ನುವುದನ್ನು ಮತ್ತೆ ಸಾರಿದ್ದಾರೆ.

     

    ಒಟ್ಟಾರೆ ಈ ವಾರ ನಾಮಿನೇಟ್ ಆಗುವ ಸ್ಪರ್ಧಿಗಳು ಯಾರು ಯಾರು? ಅವರಲ್ಲಿ ಯಾರು ಸೇವ್ ಆಗಲಿದ್ದಾರೆ? ಯಾರು ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ವಾರಾಂತ್ಯದವರೆಗೂ ಕಾಯಲೇಬೇಕು. ಆದರೆ, ಟಾಸ್ಕ್ ನಲ್ಲಿ ಮಾತ್ರ ಬೆಂಕಿ, ಬಿರುಗಾಳಿ ಎರಡೂ ಕಾಣಿಸಿಕೊಂಡಿವೆ. ಬೆಳ್ಳಂ ಬೆಳಗ್ಗೆ ಬಿಗ್ ಬಾಸ್ ಮನೆ ಬಿಸಿಯಾಗಿದೆ. ಇದರಲ್ಲಿ ಯಾರೆಲ್ಲ ಬೆಂದು ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.

  • ಈ ವಾರ ‘ಬಿಗ್ ಬಾಸ್’ ಮನೆಯಿಂದ ಹೊರ ಬರೋದು ಯಾರು?

    ಈ ವಾರ ‘ಬಿಗ್ ಬಾಸ್’ ಮನೆಯಿಂದ ಹೊರ ಬರೋದು ಯಾರು?

    ಬಿಗ್ ಬಾಸ್ (Bigg Boss Kannada) ಮನೆ ಮತ್ತೊಂದು ವಾರಕ್ಕೆ ಸಾಕ್ಷಿಯಾಗಿದೆ. ಅದರಲ್ಲೂ ಬಿಗ್ ಬಾಸ್ ಮನೆಯಲ್ಲಿ ಈ ವಾರ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಎಂದಿನಂತೆ ನಾಮಿನೇಟ್ ಪ್ರಕ್ರಿಯೆ ಕೂಡ ಆಗಿ ಹೋಗಿದೆ. ಅಚ್ಚರಿಯ ಸಂಗತಿ ಅಂದರೆ, ಈ ವಾರ ನಾಮಿನೇಟ್ ಆದವರಲ್ಲಿ ಅಷ್ಟೂ ಜನರು ಹುಡುಗರೇ ಇದ್ದಾರೆ. ಸಂಗೀತಾ, ನಮ್ರತಾ, ತನಿಷಾ ಈ ವಾರ ಸೇಫ್ ಆಗಿದ್ದಾರೆ. ಸಹಜವಾಗಿಯೇ ವರ್ತೂರು ಸಂತೋಷ್, ಮೈಕಲ್ (Michael), ಕಾರ್ತಿಕ್, ಡ್ರೋನ್ ಪ್ರತಾಪ್ (Drone Pratap) ಮತ್ತು ತುಕಾಲಿ ಸಂತು (Tukali Santu) ನಾಮಿನೇಟ್ ಆಗಿದ್ದಾರೆ. ಸೇಫ್ ಆದವರಲ್ಲಿ ವಿನಯ್ ಪ್ರಮುಖರು.

    ಪ್ರತಿ ಸಲವೂ ನಡೆಯುವ ನಾಮಿನೇಷನ್ ಪ್ರಕ್ರಿಯೆಯಲ್ಲಿ ಈ ಐವರ ಹೆಸರು ಇದ್ದೇ ಇರುತ್ತದೆ. ಅದರಲ್ಲೂ ಕೊನೆ ಗಳಿಗೆಯಲ್ಲಿ ಹೇಗೋ ಮೈಕಲ್ ಉಳಿದುಕೊಂಡು ಬಿಡುತ್ತಾರೆ. ಆದರೆ, ಈ ವಾರ ಮೈಕಲ್ ಉಳಿದುಕೊಳ್ಳೋದು ಕಷ್ಟವೆಂದೇ ಹೇಳಲಾಗುತ್ತಿದೆ. ವರ್ತೂರು ಸಂತೋಷ್ ಈ ಬಾರಿ ಭರ್ಜರಿ ಮನರಂಜನೆ ನೀಡಿದ್ದಾರೆ. ಹಾಗಾಗಿ ಸೇಫ್ ಆಗಬಹುದು. ಡ್ರೋನ್ ಪ್ರತಾಪ್ ಮೇಲೆ ಸಾಕಷ್ಟು ಅನುಕಂಪ ಮೂಡಿದೆ. ಅವರಿಗೆ ಹೆಚ್ಚು ವೋಟು ಬರುವ ಮೂಲಕ ಸೇಫ್ ಆಗಬಹುದು. ಕಾರ್ತಿಕ್ ಸ್ಟ್ರಾಂಗ್ ಕಂಟೆಸ್ಟೆಂಟ್ ಅವರಿಗೆ ಯಾವುದೇ ತೊಂದರೆ ಆಗದು. ಉಳಿದುಕೊಳ್ಳೋದು ತುಕಾಲಿ ಸಂತು. ಮೈಕಲ್ ಗೆ ಹೋಲಿಸಿದರೆ ತುಕಾಲಿ ಬೆಟರ್. ಹಾಗಾಗಿ ಅವರು ಉಳಿದುಕೊಳ್ಳಬಹುದು.

    ಸದ್ಯ ಎಲಿಮಿನೇಷನ್ (Eliminate) ತೂಗು ಕತ್ತಿ ತೂಗ್ತಾ ಇರೋದು ಮೈಕಲ್ ಮೇಲೆ. ಈ ವಾರ ಮೈಕಲ್ ಉಳಿದುಕೊಂಡರು ನಿಜಕ್ಕೂ ಅಚ್ಚರಿ. ಈಗಾಗಲೇ ಎರಡು ಬಾರಿ ಅವರು ಎಲಿಮಿನೇಷನ್ ಕತ್ತಿಯಿಂದ ಬಚಾವ್ ಆಗಿದ್ದಾರೆ. ಈ ಬಾರಿ ಮರುಜೀವ ಸಿಗೋದು ಬಹುತೇಕ ಅನುಮಾನ ಎನ್ನುವ ಮಾತು ಹರಿದಾಡುತ್ತಿದೆ. ಹಾಗಂತ ಮೈಕಲ್ ಕಳಪೆ ಏನೂ ಅಲ್ಲ. ಅದ್ಭುತ ಆಟಗಳನ್ನೇ ಆಡುತ್ತಾ ಬಂದಿದ್ದಾರೆ. ಆದರೆ, ಮನೆಯಲ್ಲಿ ಉಳಿದುಕೊಳ್ಳಲು ಬೇಕಾದ ತಂತ್ರಗಳನ್ನು ಅವರು ಅರಿತುಕೊಂಡಿಲ್ಲ.

    ಎಂದಿನಂತೆ ಈ ವಾರ ಒಬ್ಬರು ಮನೆಯಿಂದ ಆಚೆ ಬರುತ್ತಾರೆ. ಮತ್ತೊಬ್ಬರು ಬಿಗ್ ಬಾಸ್ ಮನೆಯಲ್ಲಿ ಮೈನಸ್ ಆಗ್ತಾರೆ. ಸಹಜವಾಗಿಯೇ ಕಂಟೆಸ್ಟೆಂಟ್ ಗಳ ಎದೆಯಲ್ಲಿ ನಡುಕ ಶುರುವಾಗತ್ತೆ. ಮತ್ತಷ್ಟು ಧೈರ್ಯ ತಂದುಕೊಂಡು ಆಡಲೇಬೇಕಾದ ಅನಿವಾರ್ಯತೆ ಇರತ್ತೆ. ಮತ್ತೆ ಜಗಳ, ಮತ್ತೊಂದು ವೀಕೆಂಡ್. ಮುಂದಿನ ವಾರ ಯಾರು ಎಲಿಮಿನೇಟ್ ಆಗ್ತಾರೆ ಅಂತ ನೋಡೋಣ.

  • ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡ ಡ್ರೋನ್: ನಿಟ್ಟುಸಿರಿಟ್ಟ ಫ್ಯಾನ್

    ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡ ಡ್ರೋನ್: ನಿಟ್ಟುಸಿರಿಟ್ಟ ಫ್ಯಾನ್

    ಳೆದ ಎರಡು ದಿನಗಳ ಹಿಂದೆ ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆ ಪಾಲಾಗಿದ್ದ ಡ್ರೋನ್ ಪ್ರತಾಪ್ ಮತ್ತೆ ಬಿಗ್ ಬಾಸ್ (Bigg Boss Kannada) ಮನೆಗೆ ವಾಪಸ್ಸಾಗಿದ್ದಾರೆ. ಆಸ್ಪತ್ರೆಯಿಂದ ಹೋದ ನಂತರ ಅವರು ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಸಹಜವಾಗಿಯೇ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಪ್ರತಾಪ್  (Drone Pratap) ಅವರಿಗೆ ಏನಾಗಿದೆ? ಸರಿಯಾದ ಮಾಹಿತಿ ಕೊಡಿ, ಅವರನ್ನು ಬಿಗ್ ಬಾಸ್ ಮನೆಯಲ್ಲಿ ತೋರಿಸಿ ಎಂದೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಮಾಡಲಾಗಿತ್ತು. ಕೊನೆಗೂ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿರುವ ವಿಡಿಯೋವನ್ನು ವಾಹಿನಿ ರಿಲೀಸ್ ಮಾಡಿದೆ.

    ಡ್ರೋನ್ ಪ್ರತಾಪ್ ಆಸ್ಪತ್ರೆ ಸೇರಿದ್ದಾರೆ ಎನ್ನುವ ವಿಚಾರ ಸಾಕಷ್ಟು ಸಂಚಲವನ್ನುಂಟು ಮಾಡಿತ್ತು. ಪ್ರತಾಪ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದೆಲ್ಲ ಸುದ್ದಿಯಾಗಿತ್ತು. ಸಹಜವಾಗಿಯೇ ಅವರ ಕುಟುಂಬ ಮತ್ತು ಆಪ್ತರು ಆತಂಕಕ್ಕೆ ಒಳಗಾಗಿದ್ದಾರೆ. ಸುದ್ದಿ ವಾಹಿನಿಗಳಲ್ಲಿ ಈ ನ್ಯೂಸ್ ಬರ್ತಿದ್ದಂತೆ ಆಸ್ಪತ್ರೆಯತ್ತ ಪೊಲೀಸರು ಕೂಡ ಧಾವಿಸಿದ್ದರು. ಪೊಲೀಸರು ಆಸ್ಪತ್ರೆಗೆ ಹೋಗುವಷ್ಟರಲ್ಲಿ, ಡ್ರೋನ್ ಪ್ರತಾಪ್ ಅವರನ್ನು ಆಸ್ಪತ್ರೆಯಿಂದ ಕರೆದೊಯ್ಯಲಾಗಿತ್ತು. ಹಾಗಾಗಿ ಸಹಜವಾಗಿಯೇ ಅನುಮಾನ ವ್ಯಕ್ತವಾಗಿತ್ತು.

    ಡ್ರೋನ್ ಪ್ರತಾಪ್ ಆಸ್ಪತ್ರೆಯಲ್ಲಿ ಇಲ್ಲ ಎಂದು ಪೊಲೀಸರಿಗೆ ಮಾಹಿತಿ ಸಿಗುತ್ತಿದ್ದಂತೆಯೇ, ಪೊಲೀಸ್ ಜೀಪ್ ಬಿಗ್ ಬಾಸ್ ಮನೆಗೆ ನುಗ್ಗಿತ್ತು. ಡ್ರೋನ್ ಪ್ರತಾಪ್ ಅವರಿಗೆ ಏನಾಗಿದೆ ಎನ್ನುವ ಪ್ರಶ್ನೆ ಕೇಳಿತ್ತು. ವೈದ್ಯರಿಂದ ಮಾಹಿತಿಯನ್ನೂ ಪಡೆದಿತ್ತು. ಅವರಿಗೆ ಆಹಾರದಲ್ಲಿ ವ್ಯತ್ಯಾಸವಾದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಿಸಾಗಿದೆ ಎನ್ನುವ ಮಾಹಿತಿಯನ್ನೂ ಪಡೆದಿತ್ತು. ಆದರೆ, ಡ್ರೋನ್ ಅಭಿಮಾನಿಗಳು ಮಾತ್ರ ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಅವರನ್ನು ನೋಡಬೇಕು ಎಂದು ಆಗ್ರಹಿಸಿದ್ದರು.

    ಆಸ್ಪತ್ರೆಯಿಂದ ಡ್ರೋನ್ ಡಿಸ್ಚಾರ್ಜ್ ಆದ ಮೇಲೆ ಬಿಗ್ ಬಾಸ್ ಮನೆಯಲ್ಲೇ ಅವರಿಗೆ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿತ್ತು. ಇದೀಗ ವಿಶ್ರಾಂತಿ ಪಡೆದುಕೊಂಡು ಡ್ರೋನ್, ಬಿಗ್ ಬಾಸ್ ಮನೆಯ ಪ್ರವೇಶ ಮಾಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುತ್ತಿದ್ದಂತೆಯೇ ಡ್ರೋನ್ ನನ್ನು ತಬ್ಬಿಕೊಂಡು ನಮ್ರತಾ (Namrata) ಸ್ವಾಗತಿಸಿದ್ದಾರೆ. ನಿನ್ನನ್ನು ತುಂಬಾ ಮಿಸ್ ಮಾಡಿಕೊಂಡೆ ಎಂದು ಸಂಗೀತಾ ಭಾವುಕರಾಗಿದ್ದಾರೆ. ಡ್ರೋನ್ ಆರೋಗ್ಯವಾಗಿರಲಿ ಎಂದು ದೊಡ್ಮನೆಯಲ್ಲಿ ಪೂಜೆ ಕೂಡ ಮಾಡಲಾಗಿದೆ. ಇಂದು ಕಿಚ್ಚನ ಪಂಚಾಯತಿಯಲ್ಲಿ ಡ್ರೋನ್ ಗೆ ಸುದೀಪ್ ಏನ್ ಹೇಳ್ತಾರೆ ಎಂದು ಕಾದು ನೋಡಬೇಕಿದೆ.

  • ಪ್ರತಾಪ್ ಆಸ್ಪತ್ರೆ ದಾಖಲಾದ ಬೆನ್ನಲ್ಲೇ ದೊಡ್ಮನೆಗೆ ಪೊಲೀಸ್ ಎಂಟ್ರಿ

    ಪ್ರತಾಪ್ ಆಸ್ಪತ್ರೆ ದಾಖಲಾದ ಬೆನ್ನಲ್ಲೇ ದೊಡ್ಮನೆಗೆ ಪೊಲೀಸ್ ಎಂಟ್ರಿ

    ಡ್ರೋನ್ ಪ್ರತಾಪ್ (Drone Pratap) ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಪೊಲೀಸರು ಕೂಡ ವಿಚಾರಣೆಗೆ ಮುಂದಾಗಿದ್ದಾರೆ. ಆಹಾರದಲ್ಲಿ ವ್ಯತ್ಯಾಸವಾದ ಪರಿಣಾಮ ಪ್ರದೀಪ್ ಸಂಜೀವಿನಿ ಆಸ್ಪತ್ರೆಗೆ (Police) ದಾಖಲಾಗಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಕುಂಬಳಗೋಡು ಪೊಲೀಸ್ ಠಾಣಾ ಅಧಿಕಾರಿ ಶಿವಾರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಪ್ರತಾಪ್ ಗೆ ಚಿಕಿತ್ಸೆ ಕೊಟ್ಟ ವೈದ್ಯರ ಜೊತೆ ಚರ್ಚೆ ಮಾಡಿ, ಆರೋಗ್ಯದ ಬಗ್ಗೆ ಮಾಹಿತಿ ತಗೆದುಕೊಂಡಿದ್ದಾರೆ.

    ಆಸ್ಪತ್ರೆಗೆ ಭೇಟಿ ನೀಡಿದ ನಂತರ ಸೀದಾ ಬಿಗ್ ಬಾಸ್ ಮನೆಯತ್ತ ತೆರಳಿರುವ ಪೊಲೀಸ್ ಅಧಿಕಾರಿಗಳು ಅಲ್ಲಿಯೂ ಡ್ರೋನ್ ಪ್ರತಾಪ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರಂತೆ. ಪೊಲೀಸರು ಈ ಪ್ರಕರಣದಲ್ಲಿ ಪ್ರವೇಶ ಮಾಡಿರುವುದು ನಾನಾ ರೀತಿಯ ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ. ಆದರೆ, ಪ್ರತಾಪ್ ಅವರ ಆರೋಗ್ಯ ಸುಧಾರಿಸಿದ್ದು, ಮತ್ತೆ ಅವರು ಬಿಗ್ ಬಾಸ್ ಮನೆಯೊಳಗೆ ಮರು ಪ್ರವೇಶ ಮಾಡಿದ್ದಾರೆ ಎನ್ನುವ ಮಾಹಿತಿಯೂ ಇದೆ.

    ಆತಂಕದಲ್ಲಿ ಫ್ಯಾನ್ಸ್

    ಬಿಗ್ ಬಾಸ್ (Bigg Boss Kannada) ಮನೆಯ ಸ್ಟ್ರಾಂಗ್ ಕಂಟೆಸ್ಟೆಂಟ್ ಡ್ರೋನ್ ಪ್ರತಾಪ್ ಮತ್ತೊಂದು ಸಾರಿ ಆಸ್ಪತ್ರೆ ಪಾಲಾಗಿದ್ದಾರೆ. ಕಳೆದ ಬಾರಿ ಕೆಮಿಕಲ್ ಮಿಶ್ರಿತ ನೀರು ಕಣ್ಣಿಗೆ ಬಿದ್ದ ಕಾರಣಕ್ಕೆ ಆಸ್ಪತ್ರೆ ಸೇರಿದ್ದರು. ಈ ಬಾರಿ ಡ್ರೋನ್ ಖಿನ್ನತೆಗೆ ಜಾರಿದ್ದಾರೆ ಎಂದು ಹೇಳಲಾಗುತ್ತಿದೆ. ಖಿನ್ನತೆಯ ಕಾರಣದಿಂದಾಗಿ ಎರಡು ದಿನದಿಂದ ಡ್ರೋನ್ ಸರಿಯಾಗಿ ಊಟ ಮಾಡಿರಲಿಲ್ಲ ಎನ್ನುವ ಮಾಹಿತಿ ಸಿಗುತ್ತಿದೆ. ಅದಕ್ಕಾಗಿ ಅವರಿಗೆ ವಿಟ್ಯಾಮಿನ್ ಮಾತ್ರೆ ನೀಡಲಾಗುತ್ತು ಎನ್ನುವ ಸುದ್ದಿಯೂ ಹರಿದಾಡುತ್ತಿದೆ.

    ಬಿಗ್ ಬಾಸ್ ಮನೆಗೆ ಡ್ರೋನ್ ಅವರ ತಂದೆ ತಾಯಿ ಬಂದಾಗ ಸಖತ್ ಸಂಭ್ರಮಿಸಿದ್ದರು ಪ್ರತಾಪ್. ಅಪ್ಪ ಅಮ್ಮನ ಅಪ್ಪುಗೆಯಲ್ಲಿ ಕಳೆದು ಹೋಗಿದ್ದರು. ಹಲವು ವರ್ಷಗಳ ಮುನಿಸು ಮಾಯವಾಗಿತ್ತು. ಇಡೀ ದಿನ ತನ್ನ ತಂದೆ ತಾಯಿಯ ಜೊತೆ ಹಲವಾರು ವಿಚಾರಗಳನ್ನು ಹಂಚಿಕೊಂಡು ಮತ್ತೆ ಎಲ್ಲರೂ ಒಟ್ಟಿಗೆ ಬದುಕುವ ಭರವಸೆ ನೀಡಿದ್ದರು. ಆದರೆ, ಕೆಲವು ದಿನಗಳಿಂದ ಡ್ರೋನ್ ಖಿನ್ನತೆಗೆ ಜಾರಿದ್ದರು ಎಂದು ಹೇಳಲಾಗುತ್ತಿದೆ. ಮತ್ತೆ ಕುಟುಂಬದೊಂದಿಗೆ ನೀನು ಬದುಕಿದರೆ, ದೋಷವಿದೆ ಎಂದು ಜ್ಯೋತಿಷ್ಯರು ಹೇಳಿದ ಕಾರಣಕ್ಕಾಗಿ ಅವರು ನೊಂದುಕೊಂಡಿದ್ದರು ಎನ್ನಲಾಗುತ್ತಿದೆ.  ಅವತ್ತಿನಿಂದ ಡ್ರೋನ್ ಸರಿಯಾಗಿ ಊಟ, ತಿಂಡಿ  ಮಾಡದೇ ಅದೇ ಗುಂಗಿನಲ್ಲಿ ಇದ್ದರು ಎನ್ನುವುದು ಹರಿದಾಡುತ್ತಿರುವ ವರ್ತಮಾನ.

    ಖಿನ್ನತೆ ಕಾರಣವು ಒಂದು ಕಡೆಯಾದರೆ, ಮತ್ತೊಂದು ಕಡೆ ಅವರಿಗೆ ಊಟದಲ್ಲಿ ವ್ಯತ್ಯಾಸವಾಗಿ ಆಸ್ಪತ್ರೆ ಸೇರಿದ್ದಾರೆ ಎನ್ನುವ ಮಾತೂ ಕೇಳಿ ಬಂದಿದೆ. ಇನ್ನೂ ಕೆಲವರು ಬಿಗ್ ಬಾಸ್ ಮನೆಗೆ ವಾಪಸ್ಸು ಆಗದೇ ಇರುವಂತಹ ಘಟನೆ ನಡೆದಿದೆ ಎಂದೂ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಫುಡ್ ಪಾಯಿಸನ್ ಆಗಿದೆ ಎಂದು ಕೆಲವು ಮೂಲಗಳು ಮಾಹಿತಿ ನೀಡಿದರೆ, ಇನ್ನೂ ಕೆಲವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೋವಿಡ್ ಸೋಂಕು ಏನಾದರೂ ತಗಲಿರಬಹುದಾ ಎನ್ನುವ ಪ್ರಶ್ನೆಯನ್ನೂ ಮಾಡಿದ್ದಾರೆ. ಹಾಗಾಗಿ ಸಹಜವಾಗಿಯೇ ಡ್ರೋನ್ ಪ್ರತಾಪ್ ಅವರ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಪ್ರತಾಪ್ ಅವರಿಗೆ ಏನಾಗಿದೆ ಎಂದು ತಿಳಿಸಿ ಎಂದು ವಾಹಿನಿಗೆ ಸೋಷಿಯಲ್ ಮೀಡಿಯಾ ಮೂಲಕ ಕೇಳುತ್ತಿದ್ದಾರೆ.

    ಡ್ರೋನ್ ಪ್ರತಾಪ್ ಅವರ ಟೀಮ್ ಹ್ಯಾಂಡಲ್ ಮಾಡುವಂತಹ ಸೋಷಿಯಲ್ ಮೀಡಿಯಾದಲ್ಲಿ ಊಟದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಿ ಹುಷಾರು ತಪ್ಪಿದ್ದಾರೆ. ಇನ್ನ ಸ್ವಲ್ಪ ಸಮಯದ ಒಳಗೆ ಬಿಗ್ ಬಾಸ್ ಮನೆಗೆ ನಿಮ್ಮ ಡ್ರೋನ್ ಪ್ರತಾಪ್ ಅವರು ತೆರಳಿದ್ದಾರೆ. ಅವರಿಗೆ ವೋಟ್ ಮಾಡಿ’ ಎಂದು ಪೋಸ್ಟ್ ಮಾಡಿದ್ದಾರೆ. ಬಿಗ್ ಬಾಸ್ ಮನೆಯ ಅಪ್ ಡೇಟ್ ನೀಡುವಂತಹ ಮತ್ತು ಅದರಲ್ಲಿ ಬಹುತೇಕ ವಿಷಯಗಳು ನಿಜವೂ ಆಗಿರುವಂತಹ ಬಿಬಿಕೆ ಅಪ್ ಡೇಟ್ ಸೋಷಿಯಲ್ ಮೀಡಿಯಾ ಬರೆದುಕೊಂಡಂತೆ ಮತ್ತೆ ಬಿಗ್ ಬಾಸ್ ಮನೆಗೆ ಪ್ರತಾಪ್ ಬರೋದು ಅನುಮಾನ ಎಂದು ಪೋಸ್ಟ್ ಮಾಡಲಾಗಿದೆ. ಹಾಗಾಗಿ ಡ್ರೋನ್ ಅವರಿಗೆ ಏನಾಗಿದೆ ಎನ್ನುವ ಆತಂಕ ಎಲ್ಲರದ್ದು.