ಡ್ರೋನ್ ಪ್ರತಾಪ್ (Drone Pratap) ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳದೇ ಇದ್ದರೂ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರಿಗೆ ಹೇಳಿ ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸೋದಾಗಿ ಡ್ರೋನ್ ಪ್ರತಾಪ್ ಹಣ ಪಡೆದು ವಂಚಿಸಿದ್ದಾರೆ ಎಂದು ಚಂದನ್ ಕುಮಾರ್ ಗೌಡ ಎನ್ನುವವರು ದೂರು ನೀಡಿದ್ದಾರೆ.
ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಡ್ರೋನ್ ಪ್ರತಾಪ್ ತಮ್ಮಿಂದ ಎರಡು ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರಿಗೆ ಚಂದನ್ ಕುಮಾರ್ ದೂರು ನೀಡಿದ್ದಾರೆ. ಈ ಕುರಿತಂತೆ ಡ್ರೋನ್ ಪ್ರತಾಪ್ ಜೊತೆ ಮಾತನಾಡಿರುವ ಆಡಿಯೋವನ್ನೂ ಅವರು ನೀಡಿದ್ದಾರೆ.
ಚಂದನ್ ಕುಮಾರ್ ಮತ್ತು ಡ್ರೋನ್ ಆಡಿದ ಆಡಿಯೋದಲ್ಲಿ , ನಂದು ಸ್ವಲ್ಪ ಕಾಂಟ್ರವರ್ಸಿ ಅದ್ಮೇಲೆ ಯುತ್ ಕಾಂಗ್ರೆಸ್ ಅಧ್ಯಕ್ಷರಾಗಿ ಮಾಡ್ತೇವೆ ಬಾ ಅಂದ್ರು. ಆಗ ನಾನು ಹೆಚ್ ಡಿಕೆ ಜೊತೆ ಇದ್ದೆ ಎಂದು ಡ್ರೋನ್ ಹೇಳ್ತಾರೆ. ದೂರುದಾರ ಚಂದನ್,’ ತುಂಬಾ ಜನಪ್ರಿಯವಾಗಿದ್ರಿ ಅಂತಾರೆ. ಮತ್ತೆ ಡ್ರೋನ್ ಪ್ರತಾಪ್ , ನನ್ನ ಭಾವಚಿತ್ರ ಎಲ್ಲೂ ಹಾಕಲ್ಲ. ಬಿಡದಿ ತೋಟದ ಮನೆಗೆ ಇಬ್ಬರೂ ಒಮ್ಮೆ ಹೋಗಾಣ ಆಯ್ತಾ? ಕುಮಾರ ಸ್ವಾಮಿ ಒಳ್ಳೆ ವ್ಯಕ್ತಿ ಪಾಪಾ. ಕೆಟ್ಟ ಪದ ಬಳಸ್ತಾರೆ ಹೊರತು ಮೋಸ ಇಲ್ಲ. ಡಿಕೆಶಿ ರೀತಿ ಪೇಪರ್ ಎಸೆಯೋದು ಪೇಪರ್ ಹರಿದು ಹಾಕೋ ಕೆಲಸ ಹೆಚ್ ಡಿಕೆ ಮಾಡಲ್ಲ. ಯಾರೇ ಹೋದರು ದುಡ್ಡು ಕೊಡ್ತಾರೆ’ ಎಂದು ಆಡಿಯೋದಲ್ಲಿದೆ.
ಬಿಗ್ ಬಾಸ್ ಮೊದಲನೇ ರನ್ನರ್ ಅಪ್ ಆದ ಬೆನ್ನಲ್ಲೇ ಕಲರ್ಸ್ ಕನ್ನಡ ವಾಹಿನಿಯು ಡ್ರೋನ್ ಪ್ರತಾಪ್ ಅವರಿಗೆ ಮತ್ತೊಂದು ಬಿಗ್ ಆಫರ್ ನೀಡಿದೆ. ವಾಹಿನಿಯ ಅತ್ಯಂತ ಜನಪ್ರಿಯ ಶೋ ಗಿಚ್ಚಿಗಿಲಿಗಿಲಿ ಕಾರ್ಯಕ್ರಮದಲ್ಲಿ ಡ್ರೋನ್ ಪ್ರತಾಪ್ ಕಂಟೆಸ್ಟೆಂಟ್ ಆಗಿ ಆಯ್ಕೆಯಾಗಿದ್ದಾರೆ. ಇಂದಿನಿಂದ ರಿಯಾಲಿಟಿ ಶೋದ ಚಿತ್ರೀಕರಣ ಕೂಡ ನಡೆಯುತ್ತಿದೆ.
ಡ್ರೋನ್ ಪ್ರತಾಪ್ ಮಾತ್ರವಲ್ಲ, ತುಕಾಲಿ ಸಂತೋಷ್, ಮೈಕಲ್ ಮತ್ತು ಇಶಾನಿ ಕೂಡ ಈ ಬಾರಿ ಗಿಚ್ಚಿಗಿಲಿಗಿಲಿಯಲ್ಲಿ ಪ್ರೇಕ್ಷಕರನ್ನು ನಕ್ಕು ನಗಿಸಲಿದ್ದಾರೆ. ಮೂವರು ಕೂಡ ಇಂದಿನಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಶ್ರುತಿ, ಕೋಮಲ್, ಸಾಧು ಕೋಕಿಲಾ ನಿರ್ಣಾಕರಾಗಿದ್ದಾರೆ.
ಸಂಕಷ್ಟದಲ್ಲಿ ಪ್ರತಾಪ್
ಡ್ರೋನ್ ಪ್ರತಾಪ್ (Drone Pratap) ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಹಲವಾರು ರೀತಿಯಲ್ಲಿ ಅವರ ಮೇಲೆ ಆರೋಪ ಮಾಡಲಾಗಿತ್ತು. ಡಾ.ಪ್ರಯಾಗ್ ಮಾನನಷ್ಟ ದಾವೆ ಹೂಡಿದ್ದರೆ, ಸಾರಂಗ ಎನ್ನುವವರು ಹಣಕಾಸಿನ ವಿಷಯದಲ್ಲಿ ತಮಗೆ ಮೋಸವಾಗಿದೆ ಎಂದು ಆರೋಪ (Allegation) ಮಾಡಿದ್ದರು. ಈಗ ಎಲ್ಲದಕ್ಕೂ ಪ್ರತಾಪ್ ಉತ್ತರ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಪ್ರತಾಪ್, ಕೆಲವು ವಿಷಯಗಳ ಬಗ್ಗೆ ಮಾತನಾಡಬಾರದು. ಸಕಾರಾತ್ಮಕ ವಿಷಯಗಳ ಬಗ್ಗೆ ಮಾತನಾಡೋಣ. ಸಾರಂಗ ಅವರ ಆರೋಪದ ಬಗ್ಗೆ ಶೀಘ್ರದಲ್ಲೇ ನಾವು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದಿದ್ದಾರೆ ಪ್ರತಾಪ್.
ಬಿಗ್ ಬಾಸ್ ಫಿನಾಲೆ ಹಂತಕ್ಕೆ ತಲುಪುತ್ತಿದ್ದಂತೆಯೇ ಡಾ.ಪ್ರಯಾಗ್ ಎನ್ನುವವರು ಡ್ರೋನ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಇದಾದ ಕೆಲವು ದಿನಗಳ ನಂತರ ತಮಗೆ ಡ್ರೋನ್ ಪ್ರತಾಪ್ ಲಕ್ಷ ಲಕ್ಷ ದೋಖಾ ಮಾಡಿದ್ದಾರೆ ಎಂದು ಸಾರಂಗ ಎನ್ನುವವರು ಆರೋಪ ಮಾಡಿದ್ದರು.
ಪೂಣಾ ಮೂಲದ ಸಾರಂಗ್ ಮಾನೆ (Sarang Mane) ಎನ್ನುವವರು ಡ್ರೋಣ್ ಪ್ರತಾಪ್ ಗೆ ಬರೋಬ್ಬರಿ 83 ಲಕ್ಷ ರೂಪಾಯಿ ನೀಡಿದ್ದಾರಂತೆ. ಈ ಹಣದಲ್ಲಿ 8 ಡ್ರೋಣ್ ನೀಡುವುದಾಗಿ ಪ್ರತಾಪ್ ಹೇಳಿದ್ದರಂತೆ. ಆದರೆ, ಕೊಟ್ಟ ಮಾತಿನಂತೆ ಪ್ರತಾಪ್ ನಡೆದುಕೊಂಡಿಲ್ಲ ಎನ್ನುವುದು ಮಾನೆ ಆರೋಪ.
ಪ್ರತಾಪ್ ಈಗಾಗಲೇ 2 ಡ್ರೋಣ್ ಕಳಿಸಿದ್ದಾರೆ. ಆದರೆ, ಅವು ಸರಿಯಾಗಿ ಕಾರ್ಯ ಮಾಡುತ್ತಿಲ್ಲ. ಒಂದು ವರ್ಷವಾಗಿದೆ ಹಣವನ್ನೂ ಕೊಡುತ್ತಿಲ್ಲ ಎಂದು ಸಾರಂಗ್ ಮಾನೆ. ಆರೋಪ ಮಾಡುತ್ತಿದ್ದಾರೆ. ರೈತರ ಬೆಳೆಗಳಿಗೆ ಕ್ರಿಮಿನಾಶಕ ಔಷಧ ಸಿಂಪಡಿಸುವ ಡ್ರೋಣ್ ಗಳ ಎಕ್ಸಿಬಿಷನ್ ವೇಳೆ ಸಾರಂಗ್ ಮಾನೆ ಅವರಿಗೆ ಡ್ರೋಣ್ ಪ್ರತಾಪ್ ಪರಿಚವಾಗಿದ್ದರಂತೆ. ರೈತರಿಗೆ ಡ್ರೋಣ್ ಕಳಿಸಿಕೊಡುವ ಟೆಂಡರ್ ಪಡೆದಿದ್ದ ಸಾರಂಗ್ ಮಾನೆ ಅವರು ಪ್ರತಾಪ್ ಗೆ ಆ ಜವಾಬ್ದಾರಿ ನೀಡಿದ್ದರು.
ಡ್ರೋನ್ ಪ್ರತಾಪ್ (Drone Pratap) ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಹಲವಾರು ರೀತಿಯಲ್ಲಿ ಅವರ ಮೇಲೆ ಆರೋಪ ಮಾಡಲಾಗಿತ್ತು. ಡಾ.ಪ್ರಯಾಗ್ ಮಾನನಷ್ಟ ದಾವೆ ಹೂಡಿದ್ದರೆ, ಸಾರಂಗ ಎನ್ನುವವರು ಹಣಕಾಸಿನ ವಿಷಯದಲ್ಲಿ ತಮಗೆ ಮೋಸವಾಗಿದೆ ಎಂದು ಆರೋಪ (Allegation) ಮಾಡಿದ್ದರು. ಈಗ ಎಲ್ಲದಕ್ಕೂ ಪ್ರತಾಪ್ ಉತ್ತರ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿರುವ ಪ್ರತಾಪ್, ಕೆಲವು ವಿಷಯಗಳ ಬಗ್ಗೆ ಮಾತನಾಡಬಾರದು. ಸಕಾರಾತ್ಮಕ ವಿಷಯಗಳ ಬಗ್ಗೆ ಮಾತನಾಡೋಣ. ಸಾರಂಗ ಅವರ ಆರೋಪದ ಬಗ್ಗೆ ಶೀಘ್ರದಲ್ಲೇ ನಾವು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದಿದ್ದಾರೆ ಪ್ರಾತಪ್.
ಏನದು ಆರೋಪ?
ಬಿಗ್ ಬಾಸ್ ಫಿನಾಲೆ ಹಂತಕ್ಕೆ ತಲುಪುತ್ತಿದ್ದಂತೆಯೇ ಡಾ.ಪ್ರಯಾಗ್ ಎನ್ನುವವರು ಡ್ರೋನ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಇದಾದ ಕೆಲವು ದಿನಗಳ ನಂತರ ತಮಗೆ ಡ್ರೋನ್ ಪ್ರತಾಪ್ ಲಕ್ಷ ಲಕ್ಷ ದೋಖಾ ಮಾಡಿದ್ದಾರೆ ಎಂದು ಸಾರಂಗ ಎನ್ನುವವರು ಆರೋಪ ಮಾಡಿದ್ದರು.
ಪೂಣಾ ಮೂಲದ ಸಾರಂಗ್ ಮಾನೆ (Sarang Mane) ಎನ್ನುವವರು ಡ್ರೋಣ್ ಪ್ರತಾಪ್ ಗೆ ಬರೋಬ್ಬರಿ 83 ಲಕ್ಷ ರೂಪಾಯಿ ನೀಡಿದ್ದಾರಂತೆ. ಈ ಹಣದಲ್ಲಿ 8 ಡ್ರೋಣ್ ನೀಡುವುದಾಗಿ ಪ್ರತಾಪ್ ಹೇಳಿದ್ದರಂತೆ. ಆದರೆ, ಕೊಟ್ಟ ಮಾತಿನಂತೆ ಪ್ರತಾಪ್ ನಡೆದುಕೊಂಡಿಲ್ಲ ಎನ್ನುವುದು ಮಾನೆ ಆರೋಪ.
ಪ್ರತಾಪ್ ಈಗಾಗಲೇ 2 ಡ್ರೋಣ್ ಕಳಿಸಿದ್ದಾರೆ. ಆದರೆ, ಅವು ಸರಿಯಾಗಿ ಕಾರ್ಯ ಮಾಡುತ್ತಿಲ್ಲ. ಒಂದು ವರ್ಷವಾಗಿದೆ ಹಣವನ್ನೂ ಕೊಡುತ್ತಿಲ್ಲ ಎಂದು ಸಾರಂಗ್ ಮಾನೆ. ಆರೋಪ ಮಾಡುತ್ತಿದ್ದಾರೆ. ರೈತರ ಬೆಳೆಗಳಿಗೆ ಕ್ರಿಮಿನಾಶಕ ಔಷಧ ಸಿಂಪಡಿಸುವ ಡ್ರೋಣ್ ಗಳ ಎಕ್ಸಿಬಿಷನ್ ವೇಳೆ ಸಾರಂಗ್ ಮಾನೆ ಅವರಿಗೆ ಡ್ರೋಣ್ ಪ್ರತಾಪ್ ಪರಿಚವಾಗಿದ್ದರಂತೆ. ರೈತರಿಗೆ ಡ್ರೋಣ್ ಕಳಿಸಿಕೊಡುವ ಟೆಂಡರ್ ಪಡೆದಿದ್ದ ಸಾರಂಗ್ ಮಾನೆ ಅವರು ಪ್ರತಾಪ್ ಗೆ ಆ ಜವಾಬ್ದಾರಿ ನೀಡಿದ್ದರು.
ಮಂಗಳೂರು: ಬಿಗ್ ಬಾಸ್ ಸೀಸನ್ 10 (Big Boss) ರಲ್ಲಿ ಡ್ರೋಣ್ ಪ್ರತಾಪ್ (Drone Pratap) ಸೋತಿದ್ದಕ್ಕೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಡಬದ ಯುವಕನೋರ್ವ (Youth) ಅರ್ಧ ಗಡ್ಡ, ಮೀಸೆ ತೆಗೆದು ತನ್ನ ಚಾಲೆಂಜ್ ಪೂರೈಸಿದ್ದಾನೆ.
ಝೈನುಲ್ ಈ ಬಾರಿ ಬಿಗ್‌ಬಾಸ್ ಸೀಸನ್‌ನಲ್ಲಿ ಡ್ರೋಣ್ ಪ್ರತಾಪ್ ವಿನ್ನರ್ ಆಗಿ ಹೊರಬರುತ್ತಾರೆ ಎಂದು ಹೇಳಿದ್ದರು. ಒಂದು ವೇಳೆ ಪ್ರತಾಪ್ ಸೋತರೆ ತನ್ನ ಅರ್ಧ ಗಡ್ಡ, ಮೀಸೆ ತೆಗೆಯುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚಾಲೆಂಜ್ ಹಾಕಿ ಪೋಸ್ಟ್ ಮಾಡಿದ್ದನು. ಜೊತೆಗೆ ಹಸಿ ಮೆಣಸಿನಕಾಯಿ ತಿನ್ನುವುದಾಗಿ ಮತ್ತೊಂದು ವೀಡಿಯೋವನ್ನು ಸಹ ಹರಿಬಿಟ್ಟಿದ್ದನು. ಇದನ್ನೂ ಓದಿ: ED ಕೈಗೆ ಸಿಗದ ಜಾರ್ಖಂಡ್ ಸಿಎಂ – ಹೇಮಂತ್ ಸೊರೆನ್ BMW ಕಾರು ವಶಕ್ಕೆ
ಇದೀಗ ಕಾರ್ತಿಕ್ ವಿನ್ನರ್ ಆಗಿ ಹೊರಬಂದಿದ್ದು, ಪ್ರತಾಪ್ ರನ್ನರ್ ಅಪ್ ಆಗಿರೋದು ಝೈನುಲ್‌ಗೆ ಅಸಮಾಧಾನ ತಂದು ಕೊಟ್ಟಿದೆ. ಫಲಿತಾಂಶ ಹೊರ ಬರುತ್ತಿದ್ದಂತೆ ಸವಾಲಿನಂತೆ ಆಬಿದ್ ಅರ್ಧ ಗಡ್ಡ ಮತ್ತು ಮೀಸೆಯನ್ನ ಬೋಳಿಸಿಕೊಂಡಿದ್ದಾನೆ. ಜೊತೆಗೆ ಹಸಿ ಮೆಣಸಿನಕಾಯಿಯನ್ನು ಸಹ ತಿಂದು ವೀಡಿಯೋ ಮಾಡಿ ಅಪ್ಲೋಡ್ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ. ಇದೀಗ ಝೈನುಲ್ ಹಾಕಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದನ್ನೂ ಓದಿ: ಖರ್ಗೆ ವಿರುದ್ಧ ಅವಹೇಳನ; ಚಕ್ರವರ್ತಿ ಸೂಲಿಬೆಲೆ ವಿರುದ್ಧದ ಪ್ರಕರಣಕ್ಕೆ ಕೋರ್ಟ್ ಮಧ್ಯಂತರ ತಡೆ
ಬಿಗ್ ಬಾಸ್ (Bigg Boss Kannada)ಮನೆಯಲ್ಲಿ ಸದಾ ಒಬ್ಬಂಟಿಯಾಗಿ, ಯಾವುದರಲ್ಲಿಯೂ ಅಷ್ಟಾಗಿ ಪಾಲ್ಗೊಳ್ಳದ ಕಾರ್ತಿಕ್ ಅವರೊಳಗಿದ್ದ ತಂತ್ರಗಾರ ನಿಚ್ಛಳವಾಗಿ ಕಾಣಿಸಿಕೊಂಡಿದ್ದು ನಾಲ್ಕನೇ ವಾರದಲ್ಲಿ. ಆ ವಾರ ನಾಮಿನೇಷನ್ ಪಾಸ್‌ಗಳನ್ನು ಬಲೂನ್‌ನಲ್ಲಿ ತುಂಬಿ ಮನೆಯಿಡೀ ಬಲೂನ್‌ಗಳನ್ನು ಇಡಲಾಗಿತ್ತು. ಸದಸ್ಯರು ಬಲೂನ್‌ಗಳನ್ನು ಒಡೆದು ಅದರೊಳಗಿನ ಪಾಸ್‌ಗಳನ್ನು ಹುಡುಕಿ ತೆಗೆದುಕೊಳ್ಳಬೇಕಿತ್ತು. ಈ ಟಾಸ್ಕ್‌ನಲ್ಲಿ ಅತ್ಯಂತ ತಾಳ್ಮೆಯಿಂದಲೇ ಆಡಿದ ಪ್ರತಾಪ್ (Drone Pratap) ಅವರಿಗೆ ಒಟ್ಟು ಐದು ಪಾಸ್‌ಗಳು ಸಿಕ್ಕಿದ್ದವು. ಒಬ್ಬರ ಕೈಯಿಂದ ಇನ್ನೊಬ್ಬರು ಪಾಸ್ ಅನ್ನು ಕಸಿದುಕೊಳ್ಳಬಹುದು ಎಂಬ ಕಾರಣಕ್ಕೆ ಪ್ರತಾಪ್ ಒಂದೇ ಒಂದು ಪಾಸ್ ಅನ್ನು ಕಿಸೆಯಲ್ಲಿಟ್ಟುಕೊಂಡು ಉಳಿದವನ್ನು ಮೈಕ್ ಕವರ್ ಒಳಗೆ ಇಟ್ಟಿದ್ದರು.
ಪ್ರತಾಪ್ ಬಳಿ ಇದ್ದ ಒಂದು ಪಾಸ್ ಅನ್ನು ಕಾರ್ತಿಕ್, ಸ್ನೇಹಿತ್ ಮತ್ತು ಮೈಕಲ್ ಸೇರಿಕೊಂಡು ಬಲವಂತವಾಗಿ ಕಿತ್ತುಕೊಂಡರು. ಹಾಗಾಗಿ ಪ್ರತಾಪ್ ಬಳಿ ಪಾಸ್‌ಗಳು ಇಲ್ಲ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಪಾಸ್ ಗಳಿಸುವ ಅವಧಿ ಮುಗಿದಾಗ ಪ್ರತಾಪ್ ತಮ್ಮ ಬಳಿ ಇದ್ದ ಇನ್ನೂ ನಾಲ್ಕು ಪಾಸ್‌ಗಳನ್ನು ತೆರೆದು ತೋರಿಸಿದರು.ಅದನ್ನು ಕಂಡು ಮನೆಮಂದಿಯೆಲ್ಲರೂ ಬೆಕ್ಕಸ ಬೆರಗಾಗಿದ್ದಂತೂ ನಿಜ. ತಾವು ಒಡೆದ ಬಲೂನ್‌ಗಳ ಒಳಗೇ ಇದ್ದ ನಾಮಿನೇಷನ್ ಪಾಸ್‌ಗಳನ್ನೇ ಮನೆಯ ಉಳಿದ ಸದಸ್ಯರು ಗುರ್ತಿಸದೆ ನಿರ್ಲಕ್ಷಿಸಿದ್ದರು. ಅದನ್ನೂ ಪ್ರತಾಪ್ ಎತ್ತಿಕೊಂಡಿದ್ದರು. ಇದಲ್ಲದೆ ಅವತ್ತು ಅವರು ನಾಮಿನೇಷನ್ ಪಾಸ್‌ಗಳನ್ನು ಬಳಸಿಕೊಂಡು ಸೇವ್ ಮಾಡಿದ ನಾಲ್ಕು ಜನರೂ ಮಹಿಳಾ ಸ್ಪರ್ಧಿಗಳು ಎಂಬುದನ್ನೂ ಗಮನಿಸಬೇಕು. ಇದೂ ಕೂಡ ಪ್ರತಾಪ್ ತಂತ್ರಗಾರಿಕೆಯ ಭಾಗವೇ ಎಂಬುದು ಮುಂದಿನ ದಿನಗಳಲ್ಲಿ ಅವರೆಲ್ಲರೂ ಬೇರೆ ಬೇರೆ ರೀತಿಯಲ್ಲಿ ಪ್ರತಾಪ್ ಬೆಂಬಲಕ್ಕೆ ನಿಂತಿದ್ದೇ ಸಾಕ್ಷಿ.
ಇದಲ್ಲದೆ ಐದನೇ ವಾರವೂ ಅವರು ತಮ್ಮ ತಂತ್ರನಿಪುಣತೆಯನ್ನು ತೋರಿಸಿ ಮನೆಯ ಕ್ಯಾಪ್ಟನ್ ಆಗಿದ್ದರು. ಪಾಯಿಂಟ್ಸ್ ಖರೀದಿಸುವ ವಾರದಲ್ಲಿಯೂ ಪ್ರತಾಪ್ ಅವರ ಸ್ಟ್ರಾಟಜಿಯಿಂದಲೇ ಸಂಗೀತಾ ತಂಡ ಗೆಲುವು ಕಂಡಿದ್ದಲ್ಲದೇ, ಅವರ ತಂಡದಲ್ಲಿದ್ದ ನಮ್ರತಾ, ಪ್ರತಾಪ್ ಅವರ ಬೆಂಬಲದೊಂದಿಗೆ ಕ್ಯಾಪ್ಟನ್ ಕೂಡ ಆದರು. ಇಂಥ ಹತ್ತು ಹಲವು ನಿದರ್ಶನಗಳನ್ನು ಪ್ರತಾಪ್ ಜರ್ನಿಯಲ್ಲಿ ನೋಡಬಹುದು. ‘ಯಾವಾಗಲೂ ದಿದಿಯರ ಮಡಿಲಿನಲ್ಲಿಯೇ ಇರುತ್ತಾನೆ’, ‘ದಿದಿಯರ ಬೆಂಬಲ ಇಲ್ದಿದ್ರೆ ಅವ್ನತ್ರ ಏನೂ ಮಾಡಕ್ಕಾಗಲ್ಲ’, ‘ದಿದಿ ದಿದಿ ಅಂತ ಯಾವಾಗ್ಲೂ ಅದೇ ಆಯ್ತು’ ಹೀಗೆ ಹತ್ತು ಹಲವು ಟೀಕೆಗಳನ್ನು ಪ್ರತಾಪ್ ಆಗಾಗ ಕೇಳಿಸಿಕೊಂಡಿದ್ದಿದೆ. ಆದರೆ ಅವರು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮನೆಯೊಳಗೆ ದಿದಿಯರ ನೆಚ್ಚಿನ ತಮ್ಮನಾಗಿದ್ದದ್ದು ಅವರ ಜರ್ನಿಯನ್ನು ಎಷ್ಟೋ ಸಹನೀಯಗೊಳಿಸಿದ್ದಂತೂ ನಿಜ.
ಎಲಿಮಿನೇಷನ್ ಪಾಸ್ ನಲ್ಲಿ ಸೇವ್ ಮಾಡುವಾಗ ಪ್ರತಾಪ್ ಮನೆಯ ಹೆಣ್ಣುಮಕ್ಕಳನ್ನೇ ಸೇವ್ ಮಾಡಿದ್ದು, ಅವರಲ್ಲಿ ಪ್ರತಾಪ್ ಬಗ್ಗೆ ಒಂದು ರೀತಿಯ ಕೃತಜ್ಞತಾಭಾವವನ್ನು ಹುಟ್ಟಿಸಿತ್ತು. ಅಲ್ಲದೆ, ಪ್ರತಾಪ್ ಕುಗ್ಗಿದ್ದಾಗ ಅವನ ಬೆಂಬಲಕ್ಕೆ ನಿಂತವರೂ ಈ ದೀದಿಯರೇ. ನಮ್ರತಾ, ಕಲಿಸಿಕೊಟ್ಟ ಡಾನ್ಸ್ ಅನ್ನು ಕಿಚ್ಚನ ಮುಂದೆ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದರು. ಬಾತ್‌ರೂಮಿನಲ್ಲಿ ಹೋಗಿ ಅಳುವಾಗ,ಒಬ್ಬಂಟಿಯಾಗಿ ಮಂಕಾಗಿ ಕೂತಾಗ ಅವರ ಜೊತೆಗೆ ನಿಂತಿದ್ದು ಸಂಗೀತಾ, ನಮ್ರತಾ, ಭಾಗ್ಯಶ್ರೀ ಹೀಗೆ ಬಹುತೇಕ ಹೆಣ್ಣುಮಕ್ಕಳೇ. ಸದಸ್ಯರ ಕುಟುಂಬದವರು ಮನೆಯೊಳಗೆ ಬರುವ ವಾರದಲ್ಲಿ ಪ್ರತಾಪ್ ಅವರ ಅಪ್ಪ, ಅಮ್ಮ ಮನೆಯ ಹೆಣ್ಣುಮಕ್ಕಳಿಗೆಲ್ಲ ಸೀರೆ ತಂದುಕೊಟ್ಟಿದ್ದೂ ಪ್ರತಾಪ್ ಜೊತೆಗೆ ದಿದಿಯರ ಆಪ್ತಬಾಂಧವ್ಯ ಹೆಚ್ಚಿಸಲು ಕಾರಣವಾಯ್ತು. ಕೊನೆಯ ವಾರದವರೆಗೂ ಸಂಗೀತಾ, ಪ್ರತಾಪ್ ಅವರ ಬೆನ್ನಿಗೆ ನಿಂತಿದ್ದು, ಮನೆಯಿಂದ ಹೊರಬಂದ ಮೇಲೂ, ‘ಅವನು ಯಾವಾಗಲೂ ನನ್ನ ಚಿಕ್ಕ ತಮ್ಮನಾಗೇ ಇರ್ತಾನೆ’ ಎಂದು ನಮ್ರತಾ ಭಾವುಕರಾಗಿ ಹೇಳಿದ್ದು ಇವೆಲ್ಲವೂ ಪ್ರತಾಪ್ ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ.
ರಕ್ಕಸರು ಗಂಧರ್ವರ ಟಾಸ್ಕ್‌ನ ವಾರದಲ್ಲಿ ಕುರ್ಚಿಯಲ್ಲಿ ಕೂಡಿಸಿ ನೀರನ್ನು ಸೋಕಿದಾಗ ಪ್ರತಾಪ್ ಮತ್ತು ಸಂಗೀತಾ ಕಣ್ಣುಗಳಿಗೆ ಗಾಯವಾಗಿತ್ತು. ಅದರಿಂದಾಗಿ ಅವರು ಕೆಲಕಲ ಆಸ್ಪತ್ರೆಯನ್ನೂ ಸೇರುವಂತಾಗಿತ್ತು. ತಿರುಗಿ ಬಂದಮೇಲೂ ಹಲವು ದಿನಗಳ ಕಾಲ ಕಣ್ಣಿಗೆ ಕಪ್ಪು ಕನ್ನಡಕ ಇಟ್ಟುಕೊಂಡೇ ಇರುವಂತಾಗಿತ್ತು. ಈ ಹಂತದಲ್ಲಿ ಸಂಗೀತಾ ಜೊತೆಗೆ ಅವರ ಬಾಂಧವ್ಯ ಇನ್ನಷ್ಟು ಗಟ್ಟಿಗೊಂಡಿತು. ಮನೆಯೊಳಗೆ ತಿರುಗಿ ಬಂದಾಗ ಅವರಿಬ್ಬರೂ ಮೊದಲಿಗಿಂತ ಹೆಚ್ಚು ಸ್ಟ್ರಾಂಗ್ ಆಗಿದ್ದಿದ್ದು ಎದ್ದು ಕಾಣಿಸುವಂತಿತ್ತು. ಸ್ವಾಮೀಜಿ ಅವರು ಭವಿಷ್ಯ ನುಡಿಯುತ್ತ, ನೀನು ಕುಟುಂಬದಿಂದ ದೂರವಿರುವುದು ಒಳಿತು ಎಂದು ಹೇಳಿದ್ದು ಪ್ರತಾಪ್ ಅವರನ್ನು ಕುಗ್ಗಿಸಿತ್ತು. ಅದೇ ನೋವಿನಲ್ಲಿ ಅವರು ಸರಿಯಾಗಿ ಊಟ ಮಾಡದೆ, ಕೊನೆಗೆ ಇನ್‌ಫೆಕ್ಷನ್ ಸಮಸ್ಯೆಯಿಂದ ಮತ್ತೆ ಆಸ್ಪತ್ರೆಗೆ ದಾಖಲಾಗುವಂತಾಗಿತ್ತು. ಹೀಗೆ ಈ ಸೀಸನ್‌ನಲ್ಲಿ ಪ್ರತಾಪ್ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿ ತಿರುಗಿ ಬಂದರು.
ನಾನು ನನ್ನ ಕುಟುಂಬದಿಂದ ಮೂರು ವರ್ಷಗಳಿಂದ ದೂರ ಇದ್ದೇನೆ. ಅವರನ್ನು ಮಾತಾಡಿಸಬೇಕು ಎಂದು ಪ್ರತಾಪ್ ಯಾವಾಗಲೂ ಹೇಳುತ್ತಲೇ ಇದ್ದರು. ಆರನೇ ವಾರಾಂತ್ಯದ ಕಿಚ್ಚಿನ ಎಪಿಸೋಡ್‌ನಲ್ಲಿ ಅವರ ಕನಸು ನನಸಾಯಿತು. ಪೋನ್‌ನಲ್ಲಿ ಪ್ರತಾಪ್ ತಂದೆಯ ಧ್ವನಿ ಮೊಳಗುತ್ತಿದ್ದಂತೆಯೇ ಪ್ರತಾಪ್, ‘ಅಪ್ಪಾ’ ಎಂದು ಕರೆಯುತ್ತ ಬಿಕ್ಕಿ ಬಿಕ್ಕಿ ಅತ್ತರು. ಹಲವು ವರ್ಷಗಳ ನಂತರ ಅವರು ತಂದೆಯ ಜೊತೆಗೆ ಮಾತಾಡಿದ್ದು ಎಂಥವರ ಹೃದಯವನ್ನೂ ಕರಗಿಸುವಂತತ್ತು. ಮತ್ತೊಂದು ವಾರದಲ್ಲಿ ಎಲ್ಲ ಸದಸ್ಯರ ಕುಟುಂಬದವರೂ ಮನೆಯೊಳಗೆ ಬಂದರು. ಪ್ರತಾಪ್‌ಗೆ ನಮ್ಮ ಕುಟುಂಬದವರು ಬರುತ್ತಾರೋ ಇಲ್ಲವೋ ಎಂಬ ಅನುಮಾನ ಇದ್ದೇ ಇತ್ತು. ಅದಕ್ಕಾಗಿ ಊಟವನ್ನೂ ಮಾಡದೆ ಕಾದಿದ್ದರು. ಕೊನೆಗೂ ಪ್ರತಾಪ್ ತಂದೆ ತಾಯಿ ಮನೆಯೊಳಗೆ ಬಂದಾಗ ಚಿಕ್ಕ ಮಗುವಿನಂತೆ ಖುಷಿಯಿಂದ ಕುಣಿದಾಡಿದರು. ತಂದೆಯ ಕೈಯಾರೆ ಬಾಳೆಹಣ್ಣು ತಿನ್ನಿಸಿಕೊಂಡರು. ಕುಟುಂಬದ ಪರಿಸ್ಥಿತಿ ವಿಚಾರಿಸಿಕೊಂಡು, ಇಲ್ಲಿಂದ ಬಂದ ಕೂಡಲೇ ಮನೆಗೆ ಬರುತ್ತೇನೆ. ತಂಗಿಯ ಮದುವೆ ನಾನೇ ನಿಂತು ಮಾಡಿಸುತ್ತೇನೆ ಎಂದು ಮಾತುಕೊಟ್ಟರು. ಅವರ ಪುನರ್‍ಮಿಲನ ನೋಡಿ ಎಲ್ಲರೂ ಭಾವುಕಗೊಂಡಿದ್ದರು.
ಪ್ರತಾಪ್ ಎಂಥ ಸಂದರ್ಭದಲ್ಲಿಯೂ ತಾಳ್ಮೆ ಕಳೆದುಕೊಂಡಿದ್ದು ವಿರಳ. ವಿನಯ್, ಕಾರ್ತಿಕ್, ಸಂಗೀತಾ ಅಥವಾ ಇನ್ಯಾವುದೇ ಮನೆಯ ಸದಸ್ಯರು ಆಕ್ರೋಶದಲ್ಲಿ ಅವರ ಮೇಲೆ ಮುಗಿಬಿದ್ದಾಗಲೂ ಅವರು ಮಾತ್ರ ತಾಳ್ಮೆ ಕಳೆದುಕೊಳ್ಳದೆ ತಣ್ಣಗಿನ ಧ್ವನಿಯಲ್ಲಿ, ಸ್ಪಷ್ಟವಾದ ಮಾತುಗಳಲ್ಲಿ ವಿವರಣೆ ಕೊಡುತ್ತಿದ್ದರು. ಈ ತಾಳ್ಮೆ ಅವರ ಈ ಜರ್ನಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ. ಊಹಿಸಲೂ ಸಾಧ್ಯವಿಲ್ಲದಷ್ಟು ಏರಿಳಿತಗಳ ಪ್ರಯಾಣವನ್ನು ದಾಟಿ ಪ್ರತಾಪ್ ಫಿನಾಲೆ ವೀಕ್‌ಗೆ ಅಡಿಯಿಟ್ಟಿದ್ದರು. ‘ಟಿಕೆಟ್ ಟು ಫಿನಾಲೆ’ ವಾರದಲ್ಲಿ ಎಲ್ಲರಿಗಿಂತ ಹಚ್ಚು ಅಂಕಗಳನ್ನು ಪಡೆದುಕೊಂಡಿದ್ದರು. ತಾನು ಫಿನಾಲೆ ವಾರಕ್ಕೆ ಕಾಲಿಟ್ಟಿದ್ದೇನೆ ಎಂದೇ ಅಂದುಕೊಂಡಿದ್ದ ಅವರಿಗೆ ಬಿಗ್‌ಬಾಸ್ ಶಾಕ್ ಕೊಟ್ಟಿದ್ದರು. ಅತಿ ಹೆಚ್ಚು ಅಂಕ ಪಡೆದ ಮೂರು ಸದಸ್ಯರಲ್ಲಿ ಯಾರು ಫಿನಾಲೆ ವಾರಕ್ಕೆ ಹೋಗಬೇಕು ಎಂಬುದನ್ನು ಮನೆಯ ಸದಸ್ಯರು ಬಹುಮತಗೊಂದಿಗೆ ನಿರ್ಧರಿಸಬೇಕು ಎಂದು ಹೇಳಿದ್ದರು. ಆ ಹಂತದಲ್ಲಿ ಪ್ರತಾಪ್‌ಗೆ ವೋಟ್ ಹಾಕಿದ್ದು ವರ್ತೂರು ಸಂತೋಷ್ ಒಬ್ಬರೇ. ಸಂಗೀತಾ ಅತಿಹೆಚ್ಚು ಮತಗಳನ್ನು ಪಡೆದು ಫಿನಾಲೆ ವೀಕ್‌ಗೆ ಹೋಗಿದ್ದರು. ಆದರೆ ಜನರ ಮತಗಳ ಸಹಾಯದಿಂದ ಪ್ರತಾಪ್ ಕೂಡ ಫಿನಾಲೆ ವೀಕ್‌ಗೆ ಪ್ರವೇಶಿಸಿದರು.
ಹೀಗೆ ಅತಿ ಹೆಚ್ಚು ಭಾವುಕ, ನೋವಿನ, ಹೆಮ್ಮೆಯ ಗಳಿಗೆಗಳನ್ನು ಹಾದುಬಂದ ಸ್ಪರ್ಧಿ ಪ್ರತಾಪ್. ಬಿಗ್‌ಬಾಸ್ ವೇದಿಕೆ ಅವರ ಇಮೇಜ್ ಅನ್ನು ಬದಲಿಸಿದ್ದಂತೂ ನಿಜ. ‘ತಾವು ಹಿಂದೆ ಕೆಲವು ಸಂದರ್ಭದಲ್ಲಿ ತಪ್ಪು ಮಾಡಿದ್ದೇನೆ. ತಪ್ಪು ಮಾತಾಡಿದ್ದೇನೆ. ಅದಕ್ಕಾಗಿ ಕ್ಷಮೆ ಕೇಳುತ್ತೇನೆ. ಆದರೆ ಇನ್ನು ಸುಧಾರಿಸಿಕೊಂಡು ನಡೆಯುತ್ತೇನೆ’ ಎಂದು ಅವರು ಹೇಳಿದ್ದೇ ಅವರೊಳಗಿನ ಪರಿವರ್ತನೆಗೆ ಸಾಕ್ಷಿ.
ಬಿಗ್‌ಬಾಸ್ (Bigg Boss Kannada) ಕನ್ನಡ 10ನೇ ಸೀಸನ್‌ನಲ್ಲಿ ಡ್ರೋಣ್ ಪ್ರತಾಪ್ (Drone Pratap) ಅವರು ರನ್ನರ್ ಅಪ್ (Runner Up) ಆಗಿ ಹೊರಹೊಮ್ಮಿದ್ದಾರೆ. ಅವರೇ ಹೇಳಿಕೊಂಡಂತೆ ಅವರು ಇದನ್ನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ವರ್ತೂರು ಸಂತೋಷ್ ಮತ್ತು ವಿನಯ್ ಗೌಡ ಅವರು ಕ್ರಮವಾಗಿ ಮನೆಯಿಂದ ಹೊರಹೋಗುತ್ತಿದ್ದಂತೆಯೇ ಮನೆಯಲ್ಲಿ ಉಳಿದಿದ್ದವರು ಕಾರ್ತಿಕ್, ಸಂಗೀತಾ ಮತ್ತು ಪ್ರತಾಪ್. ಸ್ವತಃ ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ, ಕಾಫಿ ಕುಡಿದು ಹರಟಿ ನಂತರ ಬಿಗ್‌ಬಾಸ್ ಮನೆಯಿಂದ ಬೀಳ್ಕೊಟ್ಟು ಮೂವರೂ ಸ್ಪರ್ಧಿಗಳನ್ನು ಮುಖ್ಯವೇದಿಕೆಗೆ ಕರೆತಂದರು.
ಮುಖ್ಯವೇದಿಕೆಯಲ್ಲಿ ಸಂಗೀತಾ ಶೃಂಗೇರಿ ಎರಡನೇ ರನ್ನರ್ ಅಪ್ ಆಗಿದ್ದಾರೆ ಎಂದು ಕಿಚ್ಚ ಘೋಷಿಸಿದರು. ನಂತರ ವೇದಿಕೆಯ ಮೇಲೆ ಉಳಿದಿದ್ದು ಕಾರ್ತಿಕ್ ಮತ್ತು ಡ್ರೋಣ್ ಪ್ರತಾಪ್. ಕಿಚ್ಚನ ಒಂದು ಕೈಯಲ್ಲಿ ಕಾರ್ತಿಕ್ ಕೈ ಮತ್ತೊಂದು ಕೈಯಲ್ಲಿ ಪ್ರತಾಪ್ ಕೈ ಇತ್ತು. ಆ ಟೆನ್ಷನ್ ಅನ್ನು ಮಾತುಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಇಡೀ ಕರ್ನಾಟಕವೇ ಉಸಿರು ಬಿಗಿಹಿಡಿದು ಕಾಯುತ್ತಿದ್ದ ಗಳಿಗೆ ಅದು.
ಅದರಲ್ಲಿ ಸುದೀಪ್ ಅವರು ಕಾರ್ತಿಕ್ ಅವರ ಕೈಯನ್ನು ಎತ್ತಿ ಹಿಡಿದರು. ಅಂದರೆ ಡ್ರೋಣ್ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಅವರಿಗೆ ಹತ್ತು ಲಕ್ಷ ರೂಪಾಯಿಗಳ ಬಹುಮಾನ ಪಡೆದುಕೊಂಡಿದ್ದಾರೆ.
ಈ ಸೀಸನ್‌ನ ಬಿಗ್‌ಬಾಸ್ ಮನೆಯಲ್ಲಿ ಅತೀ ಹೆಚ್ಚು ನೋವು ಮತ್ತು ಅಷ್ಟೇ ನಲಿವನ್ನು ಕಂಡ ಸದಸ್ಯ ಎಂದರೆ ಅದು ಡ್ರೋಣ್ ಪ್ರತಾಪ್ ಎಂದು ನಿಸ್ಸಂಶಯವಾಗಿ ಹೇಳಬಹುದು. ಅಸಮರ್ಥನಾಗಿ ಮನೆಯೊಳಗೆ ಪ್ರವೇಶಿಸಿದ ಪ್ರತಾಪ್, ಹೆಜ್ಜೆ ಹೆಜ್ಜೆಗೂ ಅವಮಾನ ಅನುಭವಿಸಿದರು. ಅವ ಸುಳ್ಳುಗಾರ, ಮೋಸಗಾರ ಎಂಬ ಮಾತುಗಳನ್ನು ಕೇಳಿಸಿಕೊಂಡರು. ತಮ್ಮೆದುರೇ ತಮ್ಮನ್ನು ಆಡಿಕೊಳ್ಳುವ, ತಮಾಷೆ ಮಾಡಿ ನಗುವ ಸದಸದಸ್ಯರ ಮಾತಿಗೆ ಕಿವಿಯಾದರು. ಆದರೆ ಅವರು ಹಲವು ವರ್ಷಗಳ ನಂತರ ತಮ್ಮ ತಂದೆಯ ಜೊತೆ ಮಾತಾಡಿದ್ದು, ಎಷ್ಟೋ ವರ್ಷಗಳ ನಂತರ ಅಮ್ಮನನ್ನು ನೋಡಿದ್ದು ಕೂಡ ಇದೇ ಮನೆಯಲ್ಲಿ! ಈ ಎರಡೂ ಅಂಚಿನ ರೋಲರ್‍ಕೋಸ್ಟರ್ ಜರ್ನಿಗೆ ಸಾಕ್ಷಿಯಾಗಿದ್ದು ಬಿಗ್‌ಬಾಸ್ ವೇದಿಕೆ ಮತ್ತು ಅದರ ವೀಕ್ಷಕರು. ಡ್ರೋಣ್ ಪ್ರತಾಪ್ ಅವರು ಬಿಗ್‌ಬಾಸ್ ಮನೆಯೊಳಗೆ ಸವೆಸಿದ ದಾರಿಯ ಒಂದು ಕಿರುನೋಟ ಇಲ್ಲಿದೆ.
ಮೊದಲ ವಾರವೇ ಪ್ರತಾಪ್, ಅವರನ್ನು ಮನೆಯ ಸದಸ್ಯರ ಮಾತುಗಳು ಕುಗ್ಗಿಸಿದ್ದವು. ಅಲ್ಲಿ ಆದ ಅವಮಾನದಿಂದ ಬೇಸತ್ತ ಪ್ರತಾಪ್ ಬಾತ್‌ರೂಮಿಗೆ ಹೋಗಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ವಿಶೇಷವಾಗಿ ತುಕಾಲಿ ಸಂತೋಷ್ ಅವರು ಪ್ರತಾಪ್ ಮೇಲೆ ಮಾಡಿದ ಜೋಕ್‌ಗಳು ಅವರನ್ನು ಸಾಕಷ್ಟು ನೋವನ್ನುಂಟು ಮಾಡಿದ್ದವು. ವಾರಾಂತ್ಯದಷ್ಟರಲ್ಲಿ ಸಾಕಷ್ಟು ನಿತ್ರಾಣಗೊಂಡಿದ್ದ ಪ್ರತಾಪ್ ಅವರ ಬೆಂಬಲಕ್ಕೆ ನಿಂತಿದ್ದು ಕಿಚ್ಚ ಸುದೀಪ್.
‘ಇನ್ನೊಬ್ಬರನ್ನು ನೋಯಿಸಿ ಜೋಕ್ ಮಾಡುವುದು ಒಳ್ಳೆಯ ಹಾಸ್ಯದ ಲಕ್ಷಣವಲ್ಲ’ ಎಂದು ತುಕಾಲಿ ಅವರನ್ನು ಎಚ್ಚರಿಸಿದ ಅವರು, ‘ಕೈ ಮುಗಿದರೆ ದೇವರೇ ಕ್ಷಮಿಸ್ತಾನಂತೆ. ನಾವ್ಯಾರು ಇನ್ನೊಬ್ಬರಿಗೆ ಶಿಕ್ಷೆ ಕೊಡೋಕೆ’ ಎಂದು ಪ್ರತಾಪ್ ವಿರುದ್ಧ ಮುಗಿಬಿದ್ದವರಿಗೆ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಇದು ಪ್ರತಾಪ್ ಅವರಿಗೆ ಸಾಕಷ್ಟು ಆತ್ಮವಿಶ್ವಾಸ ತುಂಬಿತ್ತು. ಮನೆಯಲ್ಲಿ ಹೊಸ ಉತ್ಸಾಹದೊಂದಿಗೆ ಆಟಕ್ಕೆ ನಿಲ್ಲುವಂತೆ ಮಾಡಿತ್ತು.
ಬಿಗ್‌ಬಾಸ್ (Bigg Boss Kannada) ಕನ್ನಡ ಹತ್ತನೇ ಸೀಸನ್ ಫಿನಾಲೆ ಹಬ್ಬ ಶುರುವಾಗಿಆಗಿದೆ. ಸಖತ್ ಅದ್ದೂರಿ ವೇದಿಕೆಯಲ್ಲಿ ಸುದೀಪ್ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಫೈನಲಿಸ್ಟ್ ಆಗಿರುವ ಆರು ಜನ ಸ್ಪರ್ಧಿಗಳನ್ನು, ಅವರ ಮನೆಯವರನ್ನು ಮಾತಾಡಿಸಿದ್ದಾರೆ. ಈ ಕಲರ್ ಫುಲ್ ವೇದಿಕೆಯ ತುಣುಕನ್ನು ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಬಿಡುಗಡೆ ಮಾಡಲಾಗಿದೆ.
‘ಈ ಹತ್ತು ಸೀಸನ್‌ನಲ್ಲಿ ಇಷ್ಟು ಸುದ್ದಿ ಮಾಡಿದ ಸೀಸನ್ ಬೇರೆ ಇಲ್ಲ’ ಎಂದು ಸ್ವತಃ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ವರ್ತೂರು ಸಂತೋಷ್ ಅವರು ಜೈಲಿಗೆ ಹೋಗಿದ್ದ ಸಂಗತಿಯನ್ನು ಸುದೀಪ್ ರಿವೀಲ್ ಮಾಡುತ್ತಿದ್ದ ಹಾಗೆಯೇ ಮನೆಯೊಳಗಿನ ಉಳಿದ ಸ್ಪರ್ಧಿಗಳ ಮುಖದಲ್ಲಿ ಅಚ್ಚರಿ ಮೂಡಿದರೆ, ವರ್ತೂರು ಅವರ ಕಣ್ಣುಗಳಲ್ಲಿ ನೀರು ತುಂಬಿತ್ತು.
ಹೊರಗೆ ಕೂತಿದ್ದ ವರ್ತೂರು ಸಂತೋಷ್ ಅಮ್ಮನೂ ಸೆರಗಿನಲ್ಲಿ ಕಣ್ಣೀರು ಒರೆಸಿಕೊಂಡರು. ಡ್ರೋಣ್ ಪ್ರತಾಪ್ (Drone Pratap) ತಾಯಿ, ‘ನಮ್ಮ ಮಗನನ್ನು ನಮಗೆ ಕೊಟ್ಟಿದ್ದೀರಾ. ಈ ವೇದಿಕೆಗೆ ಚಿರಋಣಿ’ ಎಂದು ಭಾವುಕರಾಗಿದ್ದಾರೆ. ಎಲ್ಲರ ಮುಖದಲ್ಲಿಯೂ ಬಿಗ್‌ಬಾಸ್ ವೇದಿಕೆಯ ಕುರಿತು ಕೃತಜ್ಞತೆಯ ಭಾವ ತುಂಬಿದೆ.
ಇನ್ನಷ್ಟು ಪರ್ಫಾರ್ಮೆನ್ಸ್, ಕಲರ್‍ಫುಲ್ ಡಾನ್ಸ್, ಕಚಗುಳಿಯ ಮಾತುಕತೆ ಎಲ್ಲವೂ ತಂಬಿರುವ ಬಿಗ್‌ಬಾಸ್ ಕನ್ನಡ ಸೀಸನ್ 10 ಫಿನಾಲೆ ಸಂಜೆ 7.30ಯಿಂದ ಪ್ರಸಾರವಾಗಲಿದೆ.
ಬಿಗ್ ಬಾಸ್ ಮನೆಯಲ್ಲಿರುವ ಡ್ರೋನ್ ಪ್ರತಾಪ್ ಅವರು ತಮಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ ಎಂದು ಎರಡು ದಿನಗಳ ಹಿಂದೆಯಷ್ಟೇ ಸಾರಂಗ್ ಮಾನೆ ಎನ್ನುವವರು ಆರೋಪ ಮಾಡಿದ್ದರು. ಈ ಕುರಿತಂತೆ ಕಾನೂನು ಕ್ರಮಕ್ಕೂ ಮುಂದಾಗುವುದಾಗಿ ಅವರು ತಿಳಿಸಿದ್ದರು. ಇದೀಗ ಪ್ರತಾಪ್ ಅವರಿಗೆ ಸಮಯ ನೀಡುವುದಾಗಿ ತಿಳಿಸಿದ್ದಾರೆ.
ಪ್ರತಾಪ್ ನ ಕಂಪೆನಿ ಡ್ರೋನಾರ್ಕ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಜೊತೆ ಬ್ಯುಸಿನೆಸ್ ಪಾರ್ಟನರ್ ಆಗಿದ್ದ ಸಾರಂಗ್ ಮಾನೆ, ನಮ್ಮ ಜೊತೆ ಪ್ರತಾಪ್ ಬ್ಯುಸಿನೆಸ್ ಮಾಡಿ ಡ್ರೋನ್ ಗಳನ್ನು ಕೊಟ್ಟಿಲ್ಲ, ಅವುಗಳಿಗಾಗಿ ಕೊಟ್ಟಿದ್ದ ಹಣವನ್ನ ಕೂಡ ನೀಡದೆ ವಂಚನೆ ಮಾಡ್ತಿರುವುದಾಗಿ ಆರೋಪ ಮಾಡಿದ್ದಾರೆ ಸಾರಂಗ್ ಮಾನೆ.
ಪ್ರತಾಪ್ ಕಳೆದ ಎಂಟು ತಿಂಗಳ ಹಿಂದೆ ಮಹಾರಾಷ್ಟ್ರದ ದುಲೇನಲ್ಲಿ ಭೇಟಿ ಮಾಡಿದ್ರಂತೆ. ಅವಾಗ ಬ್ಯುಸಿನೆಸ್ ಪಾರ್ಟ್ ನರ್ ಆಗಿ ಮಾಡಿಕೊಂಡು 9 ಡ್ರೋನ್ ಗಳನ್ನ ನೀಡುವುದಾಗಿ ಹೇಳಿ 35 ಲಕ್ಷ ತೆಗೆದುಕೊಂಡಿದ್ರಂತೆ ಪ್ರತಾಪ್. ಆದರೆ ಡ್ರೋನ್ ಗಳನ್ನ ನೀಡಲು ಸತಾಯಿಸಿದ್ದಾರೆ. ಎರಡುವರೆ ತಿಂಗಳು ಸಮಯ ತೆಗೆದುಕೊಂಡಿದ್ದ ಹಾಗೂ ಎರಡು ಡ್ರೋನ್ ಗಳನ್ನ ನೀಡಿದ್ದ ಪ್ರತಾಪ್ ಅದಾದ ನಂತರ ಮತ್ತೆ ಡಿಲೇ ಮಾಡಿ ಮತ್ತೆರಡು ಡ್ರೋನ್ ಕಳುಹಿಸಿದ್ದರಂತೆ.
ಆದರೆ ಕೊಟ್ಟಿರುವ ನಾಲ್ಕು ಡ್ರೋನ್ ಗಳು ಈಗ ಕೆಲಸ ಮಾಡುತ್ತಿಲ್ಲ. ಬ್ಯಾಟರಿಗಳ ಕ್ವಾಲಿಟಿ ಸರಿಯಿಲ್ಲದೆ ಮತ್ತೊಂದು ಹಾರಬೇಕಾದರೆ ಕೆಳಗಡೆ ಬಿದ್ದು ಹೋಗಿ ಮೂಲೆ ಸೇರಿವೆ ಎಂದಿದ್ದಾರೆ ಸಾರಂಗ್. ಇತ್ತ ಡ್ರೋನ್ ಕೊಡುವುದಾಗಿ ಹೇಳಿ ರೈತರಿಂದ ಹಣ ಪಡೆದಿದ್ದ ಸಾರಂಗ್, ಇದೀಗ ಹಣನೂ ಹಿಂದಿರುಗಿಸಲೇ ಆಗದೆ ಕಂಪೆನಿ ಕೂಡ ಲಾಸ್ ನಲ್ಲಿ ನಡೆಯುತ್ತಿದ್ದು ಕಷ್ಟ ಪಡುತ್ತಿರುವುದಾಗಿ ಹೇಳಿದ್ದಾರೆ. ಡ್ರೋನ್ ಪ್ರತಾಪ್ ಸದ್ಯ ಬಿಗ್ ಬಾಸ್ ಮನೆಯಲ್ಲಿದ್ದಾರೆ 30 ನೇ ತಾರೀಖಿನವರೆಗೂ ಸಮಯ ಕೊಟ್ಟು, ಆನಂತರ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ.
ಬಿಗ್ ಬಾಸ್ (Bigg Boss) ಮನೆಯಲ್ಲಿ ನಿನ್ನ ಹೈಡ್ರಾಮಾ ನಡೆದಿದೆ. ಫಿನಾಲೆಗೆ ಇನ್ನೆರಡೇ ದಿನಗಳು ಬಾಕಿ ಇರುವಾಗ ನಿನ್ನೆ ಮಿಡ್ ನೈಟ್ ಎಲಿಮಿನೇಷನ್(Elimination) ನಡೆಯಿತು. ಫಿನಾಲೆಗೆ ಐದೇ ಐದು ಜನರು ಹೋಗಬೇಕಾಗಿದ್ದರಿಂದ ಒಬ್ಬರನ್ನು ಮನೆಯಿಂದ ಕಳುಹಿಸೋದು ಅನಿವಾರ್ಯವಾಗಿತ್ತು. ಹಾಗಾಗಿ ನಿನ್ನೆ ಬಿಗ್ ಬಾಸ್ ಎಲಿಮಿನೇಷನ್ ಘೋಷಣೆ ಮಾಡಿದರು.
ಮಿಡ್ ನೈಟ್ ಎಲಿಮಿನೇಷನ್ ನಡೆಯಲಿದ್ದು, ಒಬ್ಬರು ಮನೆಯಿಂದ ಹೊರ ಹೋಗಲು ಸಿದ್ಧರಾಗಿ ಎಂದು ಬಿಗ್ ಬಾಸ್ ಶಾಕ್ ನೀಡಿದರು. ನಂತರ ಡ್ರೋಣ್ ಪ್ರತಾಪ್ (Drone Pratap) ಅವರು ಎಲಿಮಿನೇಷನ್ ಆಗಿದ್ದಾರೆ ಎಂದು ಘೋಷಿಸಿದರು. ಎಲ್ಲರ ಕಣ್ಣಲ್ಲೂ ನೀರು. ಅಭಿಮಾನಿಗಳಿಗೂ ಶಾಕ್. ಸಂಗೀತಾ ಶೃಂಗೇರಿ ಸೇರಿದಂತೆ ಪ್ರತಿಯೊಬ್ಬರೂ ಕಣ್ಣೀರಿಟ್ಟರು. ಆನಂತರ ನಡೆದದ್ದೇ ಬೇರೆ.
ಇನ್ನೇನು ಡ್ರೋಣ್ ಪ್ರತಾಪ್ ಮನೆಯಿಂದ ಹೊರಡಲು ಸಿದ್ಧರಾದಾಗ ಬಿಗ್ ಬಾಸ್ ಮತ್ತೊಂದು ಸೂಚನೆ ನೀಡಿದರು. ಮನೆಗೆ ಬಂದಿದ್ದ ಲೆಟರ್ ಅನ್ನು ಓದಲು ಹೇಳಲಾಯಿತು. ಅದು ನಟ ಸುದೀಪ್ ಬರೆದಿದ್ದ ಪತ್ರವಾಗಿತ್ತು. ಎಲಿಮಿನೇಟ್ ಆದ ಪ್ರತಾಪ್ ಅವರಿಗೆ ವರ ಎನ್ನುವಂತೆ ಆ ಲೆಟರ್ ನಲ್ಲಿ ಒಂದು ವಾಕ್ಯವಿತ್ತು.
ಸುದೀಪ್ (Sudeep) ಕಳುಹಿಸಿದ್ದ ಪತ್ರದಲ್ಲಿ ಈ ವಾರ ಯಾವುದೇ ಎಲಿಮಿನೇಷನ್ ಇಲ್ಲ. ಎಲ್ಲರೂ ಫಿನಾಲೆಗೆ ತಲುಪಲಿದ್ದೀರಿ ಎಂದು ಬರೆಯಲಾಗಿತ್ತು. ಹಾಗಾಗಿ ಡ್ರೋಣ್ ಪ್ರತಾಪ್ ಬಚಾವ್ ಆದರು. ಎಲ್ಲರ ಮುಖದಲ್ಲೂ ಮತ್ತೆ ಸಂಭ್ರಮ ಕಾಣಿಸಿಕೊಂಡಿದೆ. ಆರು ಜನ ಫಿನಾಲೆಗೆ ತಲುಪಿದ್ದಾರೆ ನಿಜ. ಆದರೆ, ಸುದೀಪ್ ಅವರ ಎಡಬಲದಲ್ಲಿ ನಿಂತುಕೊಳ್ಳೋದು ಇಬ್ಬರೇ. ಆಗಾಗಿ ಹೊರ ಬರುವ ಮೂವರು ಯಾರು ಎನ್ನೋದೇ ಕುತೂಹಲ.
ತನಗೆ ಡ್ರೋಣ್ ಪ್ರತಾಪ್ (Drone Pratap) ಅವರು 83 ಲಕ್ಷ ರೂಪಾಯಿ ಮೋಸ ಮಾಡಿದ್ದಾರೆ ಎಂದು ಇಂದು ಬೆಳಗ್ಗೆಯಷ್ಟೇ ಸಾರಂಗ್ ಮಾನೆ (Sarang Mane) ಎನ್ನುವವರು ಆರೋಪ ಮಾಡಿದ್ದರು. ಡ್ರೋಣ್ ಗಳನ್ನು ರೆಡಿ ಮಾಡಿಕೊಡುವುದಾಗಿ ದುಡ್ಡು ಪಡೆದು, ಕೆಲವೇ ಡ್ರೋಣ್ ನೀಡಿದ್ದಾರೆ. ಅವೂ ಕೂಡ ಕೆಲಸ ಮಾಡುತ್ತಿಲ್ಲವೆಂದು ಹೇಳಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಂಗ್ ಮಾನೆ, ಈ ಹಿಂದೆ ಡ್ರೋಣ್ ಮೇಲೆ ಮಾನನಷ್ಟ ಹೂಡಿದ್ದ ಡಾ.ಪ್ರಯಾಗ್ ರಾಜ್ (Prayag Raj) ಅವರನ್ನು ಸಂಪರ್ಕಿಸಿದ್ದಾರೆ.
ಈ ಕುರಿತಂತೆ ಸ್ವತಃ ಪ್ರಯಾಗ್ ಅವರೇ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ನಾನು ಡ್ರೋಣ್ ಪ್ರತಾಪ್ ಮೇಲೆ ಮಾನನಷ್ಟ ಪ್ರಕರಣ ದಾಖಲು ಮಾಡಿದ್ದೆ. ಹೀಗಾಗಿ ಡ್ರೋಣ್ ಪ್ರತಾಪ್ ಜೊತೆ ಇದ್ದ ಮಾಜಿ ಪಾರ್ಟನರ್ ಸಾರಂಗ್ ಮಾನೆ ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಸಂಪರ್ಕಿಸಿದ್ರು. 83 ಲಕ್ಷ ಪ್ರತಾಪ್ ಮೋಸ ಮಾಡಿದ್ರು ಅಂತಾ ಒಂದಿಷ್ಟು ಡಾಕ್ಯುಮೆಂಟ್ ಕಳಿಸಿದ್ರು. ನಂಗೆ ಸಪೋರ್ಟ್ ಕೊಡಿ ನಾನು ಪೊಲೀಸ್ ಗೆ ದೂರು ಕೊಡಬೇಕು ಅಂತಾ ಸಾರಂಗ್ ಕೇಳಿಕೊಂಡಿದ್ದಾರೆ. ದೂರು ಕೊಡೋಕೆ ಕೂಡ ರೆಡಿಯಾಗಿದ್ದಾರೆ. ಆದರೆ, ಈಗ ಡ್ರೋಣ್ ಕಡೆಯವರು ಸಾರಂಗ್ ಗೆ ಬೆದರಿಕೆ ಹಾಕುತ್ತಿದ್ದಾರೆ’ ಆರೋಪ ಮಾಡಿದ್ದಾರೆ.
ಪ್ರತಾಪ್ ಈಗಾಗಲೇ 2 ಡ್ರೋಣ್ ಕಳಿಸಿದ್ದಾರೆ. ಆದರೆ, ಅವು ಸರಿಯಾಗಿ ಕಾರ್ಯ ಮಾಡುತ್ತಿಲ್ಲ. ಒಂದು ವರ್ಷವಾಗಿದೆ ಹಣವನ್ನೂ ಕೊಡುತ್ತಿಲ್ಲ ಎಂದು ಸಾರಂಗ್ ಮಾನೆ ಆರೋಪ ಮಾಡುತ್ತಿದ್ದಾರೆ. ರೈತರ ಬೆಳೆಗಳಿಗೆ ಕ್ರಿಮಿನಾಶಕ ಔಷಧ ಸಿಂಪಡಿಸುವ ಡ್ರೋಣ್ ಗಳ ಎಕ್ಸಿಬಿಷನ್ ವೇಳೆ ಸಾರಂಗ್ ಮಾನೆ ಅವರಿಗೆ ಡ್ರೋಣ್ ಪ್ರತಾಪ್ ಪರಿಚವಾಗಿದ್ದರಂತೆ. ರೈತರಿಗೆ ಡ್ರೋಣ್ ಕಳಿಸಿಕೊಡುವ ಟೆಂಡರ್ ಪಡೆದಿದ್ದ ಸಾರಂಗ್ ಮಾನೆ ಅವರು ಪ್ರತಾಪ್ ಗೆ ಆ ಜವಾಬ್ದಾರಿ ನೀಡಿದ್ದರು. ಆದರೆ, ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿಲ್ಲ ಎನ್ನುವುದು ಮಾನೆ ಆರೋಪಕ್ಕೆ.
ಇದರ ಸತ್ಯಾಸತ್ಯೆ ಏನು ಎನ್ನುವುದನ್ನು ಡ್ರೋಣ್ ಪ್ರತಾಪ್ ಅವರೇ ಬಹಿರಂಗ ಪಡಿಸಬೇಕು. ಇನ್ನೇನು ಎರಡ್ಮೂರು ದಿನದೊಳಗೆ ಬಿಗ್ ಬಾಸ್ ಮನೆಯಿಂದ ಡ್ರೋಣ್ ಆಚೆ ಬರ್ತಾರೆ. ಅವಾಗ ಸ್ಪಷ್ಟ ಉತ್ತರ ಸಿಗಬಹುದು.