ತುಮಕೂರು: ಕೃಷಿ ಹೊಂಡದಲ್ಲಿ ಸೋಡಿಯಂ ಬಾಂಬ್ ಸ್ಫೋಟಿಸಿ ಜೈಲು ಸೇರಿರುವ ಡ್ರೋನ್ ಪ್ರತಾಪ್‌ಗೆ (Drone Pratap) ಜಾಮೀನು ಮಂಜೂರಾಗಿದೆ.
ಮಧುಗಿರಿ ಜೆಎಮ್‌ಎಫ್‌ಸಿ ಕೋರ್ಟ್ (Court) ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಜಾಮೀನು ಪ್ರಕ್ರಿಯೆ ಮುಗಿಯಲು ಇನ್ನೂ ಎರಡು ದಿನಗಳ ಕಾಲ ಸಮಯ ಬೇಕಾಗಿದ್ದರಿಂದ ಗುರುವಾರ ಪ್ರತಾಪ್ ಬಿಡುಗಡೆ ಆಗುವ ಸಾಧ್ಯತೆ ಇದೆ. ಸದ್ಯ ಡ್ರೋನ್ ಪ್ರತಾಪ್ ಮಧುಗಿರಿಯ ಉಪ ಕಾರಾಗೃಹದಲ್ಲಿ ಇದ್ದಾನೆ.
ಮಧುಗಿರಿಯ ಜನಕಲೋಟಿ ಗ್ರಾಮದ ಕೃಷಿ ಹೊಂಡದಲ್ಲಿ ಸೋಡಿಯಂ ಬಾಂಬ್ ಸ್ಫೋಟಿಸಿ ಡ್ರೋನ್ ಪ್ರತಾಪ್ ಎಡವಟ್ಟು ಮಾಡಿಕೊಂಡಿದ್ದ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಆತನನ್ನು ಬಂಧಿಸಲಾಗಿತ್ತು. ಬಳಿಕ 10 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಏನಿದು ಪ್ರಕರಣ?
ನೀರಿಗೆ ಕೆಮಿಕಲ್ ಹಾಕಿ ಡ್ರೋನ್ ಪ್ರತಾಪ್ ನೀರಿನಾಳದಲ್ಲಿ ಬ್ಲಾಸ್ಟ್ ಮಾಡಿದ್ದಾನೆ. ಕೆಮಿಕಲ್ ಎಸೆದಿದ್ದೇ ತಡ ದೊಡ್ಡ ಮಟ್ಟದಲ್ಲಿ ಬ್ಲಾಸ್ಟ್ ಆಗಿದೆ. ಬೆಂಕಿ ಸಹ ಚಿಮ್ಮಿದೆ. ಅಷ್ಟೇ ಅಲ್ಲದೇ ಬಾಂಬ್ ಬ್ಲಾಸ್ಟ್ ರೀತಿ ದೃಶ್ಯ ಕಂಡುಬಂದಿದೆ. ಈ ವೀಡಿಯೋ ನೋಡಿ ಪ್ರತಾಪ್ ಬಿಲ್ಡಪ್ ಬೇರೆ ಕೊಟ್ಟಿದ್ದ. ಜೊತೆಗೆ ನಗು-ನಗುತ್ತಲೇ ನೋಡಿ.. ನೋಡಿ ದೊಡ್ಡ ಬ್ಲಾಸ್ಟ್ ಇದು ಎಂದು ಪ್ರತಾಪ್ ಕೂಗಿದ್ದ.
ಈ ರೀತಿ ವಿಡಿಯೋ ಮಾಡೋದು ಕಾನೂನು ಬಾಹಿರ. ಹೀಗಾಗಿ ಪ್ರತಾಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದೆ. ಯಾವೆಲ್ಲ ಕೆಮಿಕಲ್ ಹಾಕಿದ್ರೇ ಬ್ಲಾಸ್ಟ್ ಆಗುತ್ತೆ ಅಂತಾನೂ ಲೈವ್‌ನಲ್ಲಿ ಹೇಳಿದ್ದ. ಇದನ್ನು ಕಿಡಿಗೇಡಿಗಳು ಕುಕೃತ್ಯಕ್ಕೆ ಬಳಸುವ ಸಾಧ್ಯತೆ ಇದೆ ಎಂದು ಪರಿಸತವಾದಿ ವಿಜಯ್ ನಿಶಾಂತ್ ಕಿಡಿಕಾರಿದ್ದರು.
ಈ ರೀತಿಯ ಪ್ರಯೋಗ ಅಪಾಯಕಾರಿ ಮತ್ತು ಕಾನೂನು ಬಾಹಿರವಾದದ್ದು. ಈ ಬ್ಲಾಸ್ಟ್ ವಿಡಿಯೋ ಮಾಡುವ ಮುನ್ನ ಕನಿಷ್ಟ ಪಕ್ಷ ಡ್ರೋನ್ ಪ್ರತಾಪ್ ಯೋಚನೆ ಮಾಡಬೇಕಾಗಿತ್ತು ಇದ್ಯಾವ ಸೀಮೆ ವಿಜ್ಞಾನದ ಬಗ್ಗೆ ಮಾಹಿತಿ ಕೊಡ್ತಾ ಇರೋದು ಎಂದು ಜನರು ಆಕ್ರೋಶ ಹೊರಹಾಕಿದ್ದರು.
ತಮ್ಮ ಹುಟ್ಟು ಹಬ್ಬದ ನೆಪದಲ್ಲಿ ಬಡವರಿಗೆ ಕಣ್ಣು ಆಪರೇಷನ್ ಮಾಡಿಸೋದಾಗಿ ಡ್ರೋನ್ ಪ್ರತಾಪ್ ಹೇಳಿದ್ದರು. ಈಗ ತಾವು ಹೇಳಿದಂತೆ ನಡೆದುಕೊಂಡಿದ್ದಾರೆ. ಅಜ್ಜಿಗೆ ಕಣ್ಣು ಆಪರೇಷನ್ (Eye operation) ಮಾಡಿಸಿರೋ ಪ್ರತಾಪ್, ನಂತರ ಆ ಅಜ್ಜಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಆ ವಿಡಿಯೋವನ್ನು ಶೇರ್ ಕೂಡ ಮಾಡಿದ್ದಾರೆ.
ಡ್ರೋನ್ ಪ್ರತಾಪ್ ಈವರೆಗೂ ಏನೆಲ್ಲ ಮಾತು ಕೊಟ್ಟಿದ್ದರೋ, ಅದೆಲ್ಲವನ್ನೂ ಪಾಲಿಸ್ತಾ ಬಂದಿದ್ದಾರೆ. ಹಾಗಾಗಿ ಪ್ರತಾಪ್ ಮೇಲೆ ಮೆಚ್ಚುಗೆಯ ಮಹಾಪುರವೇ ಹರಿದು ಬರ್ತಿದೆ. ಬಿಗ್ ಬಾಸ್ (Big Boss) ಸ್ಪರ್ಧೆಯಲ್ಲಿ ತಮಗೆ ಬಹುಮಾನವಾಗಿ ಬಂದಿದ್ದ ಎಲೆಕ್ಟ್ರಿಕ್ ಬೈಕ್ ಅನ್ನು ದಾನ ಮಾಡುವುದಾಗಿ ವೇದಿಕೆಯ ಮೇಲೆಯೇ ಘೋಷಿಸಿದ್ದರು ಡ್ರೋನ್ ಪ್ರತಾಪ್ (Drone Pratap). ಅಗತ್ಯವಿದ್ದವರಿಗೆ ಈ ಬೈಕ್ ಅನ್ನು ನೀಡುವುದಾಗಿ ತಿಳಿಸಿದ್ದರು. ಹೇಳಿದ ಹಾಗೆ ಪ್ರತಾಪ್ ನಡೆದುಕೊಂಡಿದ್ದರು.
ಬಿಗ್ ಬಾಸ್ ಸ್ಪರ್ಧೆಯಲ್ಲಿ ಡ್ರೋನ್ ಪ್ರತಾಪ್ ಗೆ ಹತ್ತು ಲಕ್ಷ ರೂಪಾಯಿ ಹಣ ಮತ್ತು ಒಂದು ಎಲೆಕ್ಟ್ರಿಕ್ ಬೈಕ್ (Bike) ಬಹುಮಾನವಾಗಿ ಬಂದಿತ್ತು. ತಮಗೆ ಬಹುಮಾನವಾಗಿ ಬಂದ ಅಷ್ಟೂ ಹಣವನ್ನೂ ದಾನ ಮಾಡುವುದಾಗಿ ಹೇಳಿಕೊಂಡಿದ್ದರು. ಅದರ ಮೊದಲ ಭಾಗವಾಗಿ ಈಗ ಬೈಕ್ ಅನ್ನು ನೀಡಿದ್ದರು.
ಬೆಂಗಳೂರಿನ ರಾಜು (Raju) ಎನ್ನುವವರು ತಮ್ಮ ಗೆಳೆಯನ ಹೆಸರಿನಲ್ಲಿ ಬೈಕ್ ತೆಗೆದುಕೊಂಡು ತಿಂಗಳ ಕಂತು ಕಟ್ಟುತ್ತಾ ಫುಡ್ ಡಿಲೆವರಿ ಮಾಡುತ್ತಿದ್ದರು. ಗೆಳೆಯ ಮೋಸ ಮಾಡಿದ್ದಕ್ಕೆ ಬೈಕ್ ಅನ್ನು ಬ್ಯಾಂಕ್ ನವರು ಸೀಸ್ ಮಾಡಿದ್ದರು. ಅಂತಹ ರಾಜುವಿಗೆ ತಮಗೆ ಬಹುಮಾನವಾಗಿ ಬಂದಿದ್ದ ಬೈಕ್ ಅನ್ನು ಡ್ರೋನ್ ನೀಡಿದ್ದರು. ಬೈಕ್ ನೀಡುವುದಷ್ಟೇ ಅಲ್ಲ, ರಾಜು ಅವರ ಮನೆಗೂ ಡ್ರೋನ್ ಭೇಟಿ ಮಾಡಿ ಧೈರ್ಯ ತುಂಬಿದ್ದರು. ಮತ್ತಷ್ಟು ನೆರವಿನ ಅಗತ್ಯವಿದ್ದರೆ ಮಾಡುವುದಾಗಿಯೂ ಅವರು ಹೇಳಿದ್ದರು.
ಬಿಗ್ ಬಾಸ್ ಮನೆಯಿಂದ ಡ್ರೋನ್ ಪ್ರತಾಪ್ (Drone Pratap) ಬರುತ್ತಿದ್ದಂತೆಯೇ ಅದೇ ವಾಹಿನಿಯ ಜನಪ್ರಿಯ ಹಾಸ್ಯ ಕಾರ್ಯಕ್ರಮ ಗಿಚ್ಚಿಗಿಲಿಗಿಲಿಯಲ್ಲಿ (Gitchchigiligili) ಕಾಣಿಸಿಕೊಂಡರು. ಪ್ರೋಮೋ ಮತ್ತು ಕೆಲವು ಎಪಿಸೋಡ್ ನಲ್ಲೂ ಡ್ರೋನ್ ಸಖತ್ತಾಗಿಯೇ ಮಿಂಚಿತ್ತು. ತಡವರಿಸಿಕೊಂಡೇ ಸ್ಕಿಟ್ ಮಾಡಿದರೂ, ಅದು ಫನ್ನಿ ಫನ್ನಿಯಾಗಿಯೇ ಇತ್ತು. ಆದರೆ, ನಂತರದ ದಿನಗಳಲ್ಲಿ ಪ್ರತಾಪ್ ನಾಪತ್ತೆಯಾದರು.
ಹೌದು, ಹಲವು ದಿನಗಳಿಂದ ಪ್ರತಾಪ್ ಶೋನಲ್ಲಿ ಕಾಣಿಸಿಕೊಂಡಿಲ್ಲ. ಜೊತೆಗೇ ವೇದಿಕೆ ಏರಿದ್ದ ಇಶಾನಿ ಕೆಲವು ಕಂತುಗಳಲ್ಲಿ ಕಾಣಿಸಿಕೊಳ್ಳದೇ ಇದ್ದರೂ, ಮತ್ತೆ ಅವರ ಆಗಮನ ಆಗಿದೆ. ಆದರೆ, ಡ್ರೋನ್ ಪ್ರತಾಪ್ ಮಾತ್ರ ಮಿಸ್ ಆಗಿದ್ದಾರೆ. ಅದಕ್ಕೆ ಕಾರಣವನ್ನು ಅವರು ಆಪ್ತರು ಬೇರೆಯದ್ದೇ ರೀತಿಯಲ್ಲಿ ನೀಡಿದ್ದಾರೆ.
ಡ್ರೋನ್ ಪ್ರತಾಪ್ ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ, ಅವರು ನೂರಕ್ಕೆ ನೂರರಷ್ಟು ತೊಡಗಿಕೊಳ್ಳುತ್ತಾರೆ. ಆದರೆ, ಅವರ ಒತ್ತಡದ ಕೆಲಸದಿಂದಾಗಿ ತಾಲೀಮಿನಲ್ಲಿ ಭಾಗಿಯಾಗಲು ಆಗುತ್ತಿಲ್ಲ. ಜೊತೆಗೆ ದುಬೈನಲ್ಲಿ ಅವರು ಸದ್ಯ ಇದ್ದಾರೆ. ಹಾಗಾಗಿ ಗಿಚ್ಚಿಗಿಲಿಗಿಲಿಗೆ ಅವರು ಗೈರಾಗಿದ್ದಾರೆ ಎಂದು ಹೇಳಿದ್ದಾರೆ.
ಬಿಗ್ ಬಾಸ್ (Big Boss) ಸ್ಪರ್ಧೆಯಲ್ಲಿ ತಮಗೆ ಬಹುಮಾನವಾಗಿ ಬಂದಿದ್ದ ಎಲೆಕ್ಟ್ರಿಕ್ ಬೈಕ್ ಅನ್ನು ದಾನ ಮಾಡುವುದಾಗಿ ವೇದಿಕೆಯ ಮೇಲೆಯೇ ಘೋಷಿಸಿದ್ದರು ಡ್ರೋನ್ ಪ್ರತಾಪ್ (Drone Pratap). ಅಗತ್ಯವಿದ್ದವರಿಗೆ ಈ ಬೈಕ್ ಅನ್ನು ನೀಡುವುದಾಗಿ ತಿಳಿಸಿದ್ದರು. ಹೇಳಿದ ಹಾಗೆ ಪ್ರತಾಪ್ ನಡೆದುಕೊಂಡಿದ್ದಾರೆ.
ಬಿಗ್ ಬಾಸ್ ಸ್ಪರ್ಧೆಯಲ್ಲಿ ಡ್ರೋನ್ ಪ್ರತಾಪ್ ಗೆ ಹತ್ತು ಲಕ್ಷ ರೂಪಾಯಿ ಹಣ ಮತ್ತು ಒಂದು ಎಲೆಕ್ಟ್ರಿಕ್ ಬೈಕ್ (Bike) ಬಹುಮಾನವಾಗಿ ಬಂದಿತ್ತು. ತಮಗೆ ಬಹುಮಾನವಾಗಿ ಬಂದ ಅಷ್ಟೂ ಹಣವನ್ನೂ ದಾನ ಮಾಡುವುದಾಗಿ ಹೇಳಿಕೊಂಡಿದ್ದರು. ಅದರ ಮೊದಲ ಭಾಗವಾಗಿ ಈಗ ಬೈಕ್ ಅನ್ನು ನೀಡಿದ್ದಾರೆ.
ಬೆಂಗಳೂರಿನ ರಾಜು (Raju) ಎನ್ನುವವರು ತಮ್ಮ ಗೆಳೆಯನ ಹೆಸರಿನಲ್ಲಿ ಬೈಕ್ ತೆಗೆದುಕೊಂಡು ತಿಂಗಳ ಕಂತು ಕಟ್ಟುತ್ತಾ ಫುಡ್ ಡಿಲೆವರಿ ಮಾಡುತ್ತಿದ್ದರು. ಗೆಳೆಯ ಮೋಸ ಮಾಡಿದ್ದಕ್ಕೆ ಬೈಕ್ ಅನ್ನು ಬ್ಯಾಂಕ್ ನವರು ಸೀಸ್ ಮಾಡಿದ್ದರು. ಅಂತಹ ರಾಜುವಿಗೆ ತಮಗೆ ಬಹುಮಾನವಾಗಿ ಬಂದಿದ್ದ ಬೈಕ್ ಅನ್ನು ಡ್ರೋನ್ ನೀಡಿದ್ದಾರೆ.
ಬೈಕ್ ನೀಡುವುದಷ್ಟೇ ಅಲ್ಲ, ರಾಜು ಅವರ ಮನೆಗೂ ಡ್ರೋನ್ ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಮತ್ತಷ್ಟು ನೆರವಿನ ಅಗತ್ಯವಿದ್ದರೆ ಮಾಡುವುದಾಗಿಯೂ ಅವರು ಹೇಳಿದ್ದಾರೆ. ಈ ಮೂಲಕ ಡ್ರೋನ್ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.
ಯಾರು ಯಾವುದನ್ನು ಮಾಡಬೇಕು ಅದನ್ನು ಮಾಡಿದರೇ ಚಂದ ಎನ್ನುವ ಮಾತಿದೆ. ಆಗದೇ ಇರೋದನ್ನು ನೋಡಿಯೇ ಬಿಡೋಣ ಎಂದರೆ ಅಲ್ಲೊಂದು ಎಡವಟ್ಟು ಕಾದಿರುತ್ತದೆ. ಅಂತಹ ಎಡವಟ್ಟಿಗೆ ಸಾಕ್ಷಿಯಾಗಿದ್ಧಾರೆ ಡ್ರೋನ್ ಪ್ರತಾಪ್.
ಬಿಗ್ ಬಾಸ್‌ನಿಂದ ಬಂದ್ಮೇಲೆ ಡ್ರೋನ್ ಪ್ರತಾಪ್ (Drone Pratap) ಹವಾ ಜೋರಾಗಿದೆ. `ಗಿಚ್ಚಿ ಗಿಲಿಗಿಲಿ 3′ (Gichchi Giligili) ಶೋಗೆ ಎಂಟ್ರಿ ಕೊಟ್ಟು ಕಾಮಿಡಿ ಮಾಡಲು ಪ್ರತಾಪ್ ಶುರು ಮಾಡಿದ್ದಾರೆ. ಇದೀಗ ವೇದಿಕೆಯಲ್ಲಿ ಡೈಲಾಗ್ ಹೇಳಲು ಪ್ರತಾಪ್ ತಿಣುಕಾಡಿದ್ದಾರೆ.
ಬಿಗ್ ಬಾಸ್ ಮನೆಗೆ ಕಾಲಿಡುವ ಮುನ್ನ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು ಪ್ರತಾಪ್. ದೊಡ್ಮನೆಗೆ ಕಾಲಿಟ್ಟ ಮೇಲೆ ಸ್ಪರ್ಧಿಗಳಿಂದಲೂ ಭಾರೀ ಟಾರ್ಗೆಟ್ ಆಗಿದ್ದರು. ಬಳಿ ಎದುರಾಳಿಗಳಿಗೆ ಠಕ್ಕರ್ ಕೊಟ್ಟು ಬಿಗ್ ಬಾಸ್ ಫಿನಾಲೆಯಲ್ಲಿ ಪ್ರತಾಪ್ ಮೊದಲ ರನ್ನರ್ ಅಪ್ ಆಗಿ ಸ್ಥಾನ ಗಿಟ್ಟಿಸಿಕೊಂಡರು.
ಡ್ರೋನ್ ಪ್ರತಾಪ್ ಡ್ಯಾನ್ಸ್ನಲ್ಲಿ ಸೈ.. ಆದರೆ ಕಾಮಿಡಿ ಅಂತ ಬಂದಾಗ ಪ್ರತಾಪ್ ಕೊಂಚ ಹಿಂದೆ. ಇದೀಗ ಅಭಿನಯದ ಕಾಗುಣಿತ ಗೊತ್ತಿಲ್ಲದ ಪ್ರತಾಪ್ ಗಿಚ್ಚಿಗಿಲಿ ಗಿಲಿಗೆ ಎಂಟ್ರಿ ಕೊಟ್ಟು ಆ್ಯಕ್ಟಿಂಗ್ ಕಲಿಯುತ್ತಿದ್ದಾರೆ. ಅದಷ್ಟೇ ಅಲ್ಲ.. ಎಲ್ಲರನ್ನೂ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದಾರೆ.
ಪ್ರತಾಪ್ ಈ ಬಾರಿ ಮಂತ್ರವಾದಿಯ ಗೆಟಪ್‌ನಲ್ಲಿ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ಆಗ ಆತ್ಮವನ್ನು ಬದಲಿಸುವ ಸೀನ್‌ನಲ್ಲಿ ಆತ್ಮ ಆವಾಹಯಾಮಿ ಎಂದು ಡೈಲಾಗ್ ಹೇಳಬೇಕಿತ್ತು. ಆಗ ಪ್ರತಾಪ್.. ಡೈಲಾಗ್ ಹೇಳಲು ಆಗದೇ ತಿಣುಕಾಡಿದ್ದಾರೆ. ಹಾವಾಹಯಾಮಿ ಎಂದು ತಪ್ಪಾಗಿ ಡೈಲಾಗ್ ಹೇಳಿದ್ದಾರೆ. ಪ್ರತಾಪ್ ಮಾತಿಗೆ ಜಡ್ಜ್ಗಳಾದ ನಟಿ ಶ್ರುತಿ, ಕೋಮಲ್, ಸಾಧುಕೋಕಿಲ ಬಿದ್ದು ಬಿದ್ದು ನಕ್ಕಿದ್ದಾರೆ. ಒಟ್ನಲ್ಲಿ ನಟನೆಯ ಗಂಧ ಗಾಳಿ ಗೊತ್ತಿಲ್ಲದ ಪ್ರತಾಪ್‌ನ ಹೊಸ ಜರ್ನಿಗೆ ಅಭಿಮಾನಿಗಳು ಸ್ವೀಟ್ ಆಗಿ ವಿಶ್ ಮಾಡ್ತಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ಡ್ರೋಣ್ ಪ್ರತಾಪ್ (Drone Pratap)ಗೆ ಈಗ ಅಸಲಿ ಸಂಕಷ್ಟ ಎದುರಾಗಿದೆ. ದಿನವೊಂದಕ್ಕೆ ಹೊಸ ಹೊಸ ಪ್ರಕರಣಗಳು ಪ್ರತಾಪ್ ಮೇಲೆ ದಾಖಲಾಗ್ತಾ ಇತ್ತು. ಆದ್ರೆ, ಈಗ ಪ್ರಕರಣ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಡಿಜಿಸಿಎ (DGCA) ಹೆಸರಲ್ಲಿ ಮೋಸ ಮಾಡಿ ಡ್ರೋಣ್ ಮಾರಾಟ ಮಾಡ್ತಾ ಇದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಡ್ರೋಣ್ ತಯಾರಿ ಮಾಡಲಿಕ್ಕೆ ಆಗಲಿ ಡ್ರೋಣ್ ಮಾರಾಟ ಮಾಡೋದಕ್ಕೆ ಆಗಲಿ ಡಿಜಿಸಿಎ ಅನುಮತಿ ಪರವಾನಿಗೆ ಪಡೆಯಬೇಕು. ಆದರೆ, ಪ್ರತಾಪ್ ಆ ಪರವಾಣಿಗೆ ಪಡೆದಿಲ್ಲ ಅಂತ ಪರಮೇಶ್ ಎಂಬುವವರು ದೂರು ನೀಡಿದ್ದರು. ಈಗ ದೂರಿನ ಅಂಶವಾಗಿ ರಾಜರಾಜೇಶ್ವರಿ ನಗರ ಪೊಲೀಸರು ದೂರಿನ (Complaint) ಮಾಹಿತಿಯನ್ನು ಡಿಜಿಸಿಎ ಗೆ ಕಳುಹಿಸಿಕೊಟ್ಟಿದ್ದಾರೆ.
ಈ ಮಾಹಿತಿ ಮೇರೆಗೆ ಡಿಜಿಸಿಎ ಯಾವ ಕ್ರಮಕೈಗೊಳ್ಳುತ್ತೆ, ನೋಟೀಸ್ ನೀಡಿ ವಿಚಾರಣೆಗೆ ಕರೆಯುತ್ತಾ ಕಾದುನೋಡ್ಬೇಕಿದೆ. ಜೊತೆಗೆ ಡ್ರೋನ್ ಪ್ರತಾಪ್ ಮೇಲೆ ಈಗಾಗಲೇ ಮೂರು ದೂರುಗಳು ದಾಖಲಾಗಿದೆ. ಆದರೆ, ಒಂದಕ್ಕೂ ಎಫ್.ಐ.ಆರ್ ಆಗಿಲ್ಲ ಎನ್ನುವ ಮಾತು ಕೂಡ ಕೇಳಿ ಬಂದಿದೆ.
ಏನೇ ದೂರುಗಳು ದಾಖಲಾದರು ಪ್ರತಾಪ್ ಮಾತ್ರ ಯಾವುದಕ್ಕೂ ತಲೆ ಕಡೆಸಿಕೊಳ್ಳದೇ ತನ್ನ ಪಾಡಿಗೆ ತಾನು ಹೊಸ ಶೋನಲ್ಲಿ ಪಾಲ್ಗೊಂಡಿದ್ದಾರೆ. ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಕಾಮಿಡಿ ಪಾತ್ರ ಮಾಡುತ್ತಾ ಹಾಯಾಗಿದ್ದಾರೆ.
ಬಿಗ್ ಬಾಸ್ ಮನೆಯಿಂದ ಬಂದ ನಂತರ ಡ್ರೋನ್ ಪ್ರತಾಪ್ (Drone Pratap) ಬಿಡುವಿಲ್ಲದ ದಿನಗಳನ್ನು ಕಳೆಯುತ್ತಿದ್ದಾರೆ. ಮನೆಯಿಂದ ಹೊರ ಬರುತ್ತಿದ್ದಂತೆಯೇ ಮತ್ತೊಂದು ರಿಯಾಲಿಟಿ ಶೋ ನಲ್ಲಿ ಭಾಗಿಯಾದರು. ಇದೀಗ ಕೊಂಚ ಬಿಡುವು ಮಾಡಿಕೊಂಡು ಹುಟ್ಟೂರಿಗೆ ಹೋಗಿದ್ದಾರೆ. ಜೊತೆಗೆ ದೇವಸ್ಥಾನಗಳಿಗೂ ಭೇಟಿ ನೀಡುತ್ತಿದ್ದಾರೆ.
ಮೂರ್ನಾಲ್ಕು ವರ್ಷಗಳಿಂದ ಹುಟ್ಟೂರಿಗೆ ಹೋಗಿಲ್ಲ ಎಂದು ಅವರು ಈ ಹಿಂದೆ ಹೇಳಿಕೊಂಡಿದ್ದರು. ತಂದೆ ತಾಯಿ ಮುಖವನ್ನೂ ನೋಡಿಲ್ಲ ಎಂದರು. ಅದಕ್ಕೆ ಕಾರಣ ಅಪಮಾನ. ಬಿಗ್ ಬಾಸ್ ಮನೆ ಎಲ್ಲ ಅಪಮಾನವನ್ನೂ ತೊಳೆದು ಹಾಕಿದೆ. ಹೀಗಾಗಿಯೇ ಅವರು ಹುಟ್ಟೂರಿಗೆ ಹೋಗಿದ್ದಾರೆ. ತಂದೆ ಮಾಡಿಕೊಟ್ಟ ಮುದ್ದೆಯನ್ನು ಸವಿದಿದ್ದಾರೆ.
ನಿನ್ನೆಯಷ್ಟೇ ಮಲೆ ಮಹಾದೇಶ್ವರ (Male Mahadeshwar) ಬೆಟ್ಟಕ್ಕೂ ಡ್ರೋನ್ ಪ್ರತಾಪ್ ಭೇಟಿ ನೀಡಿದ್ದು, ಮಾದಪ್ಪನ ದರ್ಶನ (Darshana) ಪಡೆದಿದ್ದಾರೆ. ಡ್ರೋನ್ ನೋಡಲೆಂದೇ ಸಾಕಷ್ಟು ಅಭಿಮಾನಿಗಳು ಅಲ್ಲಿಗೆ ಬಂದಿದ್ದರು. ಪ್ರತಾಪ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿ ಬಿದ್ದಿದ್ದಾರೆ. ಶಾಂತವಾಗಿಯೇ ಎಲ್ಲರೊಂದಿಗೂ ಪ್ರತಾಪ್ ಫೋಟೋ ತೆಗೆಸಿಕೊಂಡಿದ್ದಾರೆ.
ಡ್ರೋನ್ ಬದುಕು ಒಂದು ರೀತಿಯಲ್ಲಿ ಕತ್ತಲಲ್ಲಿತ್ತು. ಇದೀಗ ಬೆಳಕಿಗೆ ಬಂದಿದೆ. ಅಸಂಖ್ಯಾತ ಜನರು ಅವರನ್ನು ಪ್ರೀತಿಸುತ್ತಿದ್ದಾರೆ. ಪ್ರತಾಪ್ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದಾರೆ. ಡ್ರೋನ್ ಪ್ರತಾಪ್ ಈ ಕಾರಣದಿಂದಾಗಿಯೇ ಎಲ್ಲರ ಮೆಚ್ಚಿಗೆಗೂ ಪಾತ್ರವಾಗಿದ್ದಾರೆ.
ಬಿಗ್ ಬಾಸ್ (Bigg Boss) ಮನೆಯಿಂದ ಡ್ರೋನ್ ಪ್ರತಾಪ್ (Drone Pratap) ಆಚೆ ಬಂದ ತಕ್ಷಣವೇ ಅವರು ಸಾಕಷ್ಟು ತೊಂದರೆಗಳನ್ನು ಫೇಸ್ ಮಾಡಲಿದ್ದಾರೆ ಎಂದು ನಂಬಲಾಗಿತ್ತು. ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಅವರ ಮೇಲೆ ಎರಡು ದೂರುಗಳು ದಾಖಲಾಗಿದ್ದವು. ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಮತ್ತೊಂದು ದೂರು ದಾಖಲಾಗಿದೆ. ಅದರಲ್ಲಿ ವಂಚನೆ ಪ್ರಕರಣ ಮತ್ತು ಮಾನನಷ್ಟ ಮೊಕದ್ದಮೆಗಳೂ ಸೇರಿವೆ. ಇಷ್ಟಿದ್ದರೂ, ಡ್ರೋನ್ ಆರಾಮಾಗಿ ಮತ್ತೊಂದು ಶೋ ಒಪ್ಪಿಕೊಂಡಿದ್ದಾರೆ. ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.
ಹೌದು, ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕಾಮಿಡಿ ಶೋ ಗಿಚ್ಚಿ ಗಿಲಿಗಿಲಿಯಲ್ಲಿ ಪ್ರತಾಪ್ ಕೂಡ ಕಂಟೆಸ್ಟೆಂಟ್. ಅದೊಂದು ಪಕ್ಕಾ ಕಾಮಿಡಿ ಶೋವಾಗಿದ್ದರೂ, ಡ್ರೋನ್ ಪ್ರತಾಪ್ ಆಯ್ಕೆ ನಿಜಕ್ಕೂ ಅಚ್ಚರಿ ಮೂಡಿಸಿದೆ. ಡ್ರೋನ್ ಪ್ರತಾಪ್ ಒಳಗೆ ಒಬ್ಬ ಕಾಮಿಡಿಯನ್ ಇದ್ದಾನಾ? ಇನ್ನಷ್ಟೇ ತಿಳಿಬೇಕಿದೆ. ಈ ನಡುವೆಯೂ ಧೈರ್ಯವಾಗಿ ಪ್ರತಾಪ್ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ನಗಿಸೋಕೆ ನಾನೂ ಸೈ ಎನ್ನುವ ಸಂದೇಶವನ್ನೂ ಅಭಿಮಾನಿಗಳಿಗೆ ರವಾನಿಸಿದ್ದಾರೆ.
ಈಗಾಗಲೇ ವಾಹಿನಿಯು ಡ್ರೋನ್ ಪ್ರತಾಪ್ ಅವರ ಪ್ರೊಮೋ ರಿಲೀಸ್ ಮಾಡಿದ್ದು, ಬಿಗ್ ಬಾಸ್ ತನ್ನಲ್ಲಿ ತಂದ ಬದಲಾವಣೆಯನ್ನು ಪ್ರತಾಪ್ ಹೇಳಿಕೊಂಡಿದ್ದಾರೆ. ತಂದೆ ತಾಯಿಯ ನಂತರದ ಸ್ಥಾನವನ್ನು ಬಿಗ್ ಬಾಸ್ ಗೆ ಕೊಡುವುದಾಗಿ ಹೇಳಿಕೊಂಡಿದ್ದಾರೆ. ಜನರ ಪ್ರೀತಿಗೆ ಯಾವತ್ತಿಗೂ ಋಣಿ ಅಂತಾನೂ ಹೇಳಿಕೊಂಡಿದ್ಧಾರೆ. ಈ ನಡುವೆ ಸುದೀಪ್ (Sudeep) ಬಗ್ಗೆಯೂ ಹಲವಾರು ಮಾತುಗಳನ್ನು ಪ್ರತಾಪ್ ಆಡಿದ್ದಾರೆ. ಈ ಮೂಲಕ ತನ್ನ ಬದುಕಿಗೆ ಸುದೀಪ್ ಎಷ್ಟು ಮಹತ್ವದವರು ಎಂದೂ ತಿಳಿಸಿದ್ದಾರೆ.
ಬಿಗ್ ಬಾಸ್ ಮನೆಯಿಂದ ಆಚೆ ಬರುತ್ತಿದ್ದಂತೆಯೇ ಡ್ರೋನ್ ಮಾಡಿದ ಮೊದಲ ಕೆಲಸವೆಂದರೆ, ಕಿಚ್ಚನನ್ನು ಇನ್ಸ್ಟಾ ಪೇಜ್ ನಲ್ಲಿ ಫಾಲೋ ಮಾಡಿದ್ದಾರಂತೆ. ಅದಕ್ಕೆ ಕಾರಣ, ಸುದೀಪ್ ಅವರ ಮೇಲಿನ ಗೌರವ ಎಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮತ್ತು ಬಿಗ್ ಬಾಸ್ ಮನೆಯಿಂದ ಆಚೆ ಬಂದ ಕೆಲವರು ಸುದೀಪ್ ಅವರಿಗೆ ಅಗೌರವ ತೋರಿಸಿದ್ದಾರೆ. ಆದರೂ, ಸುದೀಪ್ ಅವರು ಎಲ್ಲರನ್ನೂ ಗೌರವದಿಂದಲೇ ಮಾತನಾಡಿಸಿದ್ದಾರೆ. ಹಾಗಾಗಿ ನಾನು ಅವರನ್ನು ಫಾಲೋ ಮಾಡುತ್ತಿದ್ದೇನೆ ಎಂದಿದ್ದಾರೆ ಡ್ರೋನ್. ಸದಾ ಮೌನಿಯಾಗಿದ್ದ ಪ್ರತಾಪ್, ಬಿಗ್ ಬಾಸ್ ಕೊನೆಯಲ್ಲಿ ರೆಬಲ್ ಆಗಿದ್ದಿದೆ. ಗಿಚ್ಚಿಗಿಲಿಗಿಲಿ ಕಾರ್ಯಕ್ರಮದಲ್ಲಿ ಡ್ರೋನ್ ಇನ್ನೇನು ಮೋಡಿ ಮಾಡುತ್ತಾರೋ ಕಾದು ನೋಡಬೇಕು.
ಜೆಡಿಎಸ್ (JDS) ನಿಂದ ಜೆಡ್ಪಿ ಟಿಕೆಟ್ ಕೊಡಿಸೋದಾಗಿ ಹಣ ಪಡೆದು ವಂಚನೆ ಆರೋಪ ಎದುರಿಸುತ್ತಿರೋ ಡ್ರೋನ್ ಪ್ರತಾಪ್ (Drone Pratap) ವಿರುದ್ಧ ದೂರು ನೀಡಲು ಜೆಡಿಎಸ್ ಮುಂದಾಗಿದೆ. 2 ಲಕ್ಷ ಹಣ ಪಡೆದು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಜೆಡಿಎಸ್ ಟಿಕೆಟ್ ಕೊಡಿಸೋದಾಗಿ ವಂಚನೆ ಮಾಡಿರೋ ಬಗ್ಗೆ ಚಂದನ್ ಎಂಬುವರಿಂದ ಕಮೀಷನರ್ ಗೆ ದೂರು (Complainant) ನೀಡಲಾಗಿತ್ತು.
ದೂರಿನ ಜೊತೆಗೆ ಚಂದನ್ ಗೆ ಡ್ರೋನ್ ಪ್ರತಾಪ್ ಟಿಕೆಟ್ ಕೊಡಿಸುವ ಬಗ್ಗೆ ಮಾತನಾಡಿರೋ ಆಡಿಯೋ ಬಿಡುಗಡೆ ಮಾಡಿದ್ದಾರೆ. ಆಡಿಯೋದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ (H.D. Kumaraswamy) ಹಾಗೂ ಡಿಕೆಶಿ, ಅನ್ನದಾನಿಯ ಹೆಸರು ಪ್ರಸ್ತಾಪ ಮಾಡಿ ಡ್ರೋನ್ ಮಾತನಾಡಿದ್ದಾರೆ ಹಾಗಾಗಿ ಹೆಚ್ ಡಿಕೆ ಹೆಸರು ಹೇಳಿಕೊಂಡು ವಂಚನೆ ಮಾಡಿರೋ ಆರೋಪದ ಮೇಲೆ ಡ್ರೋನ್ ಪ್ರತಾಪ್ ವಿರುದ್ಧ ದೂರು ಕೊಡಲು ಜೆಡಿಎಸ್ ಮುಂದಾಗಿದೆ.
ಈ ಹಿಂದೆಯು ಡ್ರೋನ್ ಪ್ರತಾಪ್ (Drone Pratap) ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಹಲವಾರು ರೀತಿಯಲ್ಲಿ ಅವರ ಮೇಲೆ ಆರೋಪ ಮಾಡಲಾಗಿತ್ತು. ಡಾ.ಪ್ರಯಾಗ್ ಮಾನನಷ್ಟ ದಾವೆ ಹೂಡಿದ್ದರೆ, ಸಾರಂಗ ಎನ್ನುವವರು ಹಣಕಾಸಿನ ವಿಷಯದಲ್ಲಿ ತಮಗೆ ಮೋಸವಾಗಿದೆ ಎಂದು ಆರೋಪ (Allegation) ಮಾಡಿದ್ದರು. ಈಗ ಎಲ್ಲದಕ್ಕೂ ಪ್ರತಾಪ್ ಉತ್ತರ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿರುವ ಪ್ರತಾಪ್, ಕೆಲವು ವಿಷಯಗಳ ಬಗ್ಗೆ ಮಾತನಾಡಬಾರದು. ಸಕಾರಾತ್ಮಕ ವಿಷಯಗಳ ಬಗ್ಗೆ ಮಾತನಾಡೋಣ. ಸಾರಂಗ ಅವರ ಆರೋಪದ ಬಗ್ಗೆ ಶೀಘ್ರದಲ್ಲೇ ನಾವು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದಿದ್ದಾರೆ ಪ್ರಾತಪ್.
ಬಿಗ್‌ಬಾಸ್ (Bigg Boss) ಸೀಸನ್ ಹತ್ತರ ಅಭೂತಪೂರ್ವ ಯಶಸ್ಸಿನ ನಂತರ ಕಲರ್ಸ್ ಕನ್ನಡ ಇದೀಗ ವಾರಾಂತ್ಯದ ಮನರಂಜನೆಯನ್ನು ಇನ್ನೊಂದು ಹಂತಕ್ಕೆ ಏರಿಸಲು ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ರಾಜ್ಯದ ಎಲ್ಲೆಡೆ ಮನೆಮಾತಾಗಿರುವ, ಹಾಸ್ಯಗಾರರು ಮತ್ತು ಹಾಸ್ಯಗಾರರಲ್ಲದವರು ಜೋಡಿಯಾಗಿ ವೀಕ್ಷಕರನ್ನು ರಂಜಿಸುವ ವಿನೂತನ ಆಲೋಚನೆಯ ಟಿ ವಿ ಶೋ “ಗಿಚ್ಚಿಗಿಲಿಗಿಲಿ” (Gichichi Giligili) ಯ ಎರಡು ಸೂಪರ್ ಹಿಟ್ ಸೀಸನ್‌ಗಳ ನಂತರ ಭರ್ಜರಿ ಮೂರನೇ ಸೀಸನ್ ಫೆಬ್ರವರಿ 3 ರಿಂದ ಆರಂಭವಾಗಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ ಒಂಭತ್ತು ಗಂಟೆಗೆ ಈ ಕಾಯಕ್ರಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ನಟಿ ಶ್ರುತಿ ಹಾಗೂ ಹಾಸ್ಯನಟ ಸಾಧು ಕೋಕಿಲ ಈವರೆಗೆ ಈ ಶೋನ ತೀರ್ಪುಗಾರರಾಗಿದ್ದರು. ಈಗ ಇವರಿಬ್ಬರ ಜೊತೆಗೆ ಮೂರನೇ ತೀರ್ಪುಗಾರರಾಗಿ ಜನಪ್ರಿಯ ಕಾಮಿಡಿ ನಟ ಕೋಮಲ್ ಜತೆಗೂಡಿರುವುದು ಮೂರನೇ ಸೀಸನ್ನಿನ ವಿಶೇಷ ಆಕರ್ಷಣೆ.
ಹೊಸ ಸೀಸನ್ನಿನಲ್ಲಿ ಹತ್ತು ಹೊಸ ಜೋಡಿಗಳು ಭಾಗವಹಿಸಲಿದ್ದು ಗಿಚ್ಚಿಗಿಲಿಗಿಲಿಗೆ ಹೊಸ ರಂಗು ತುಂಬಲಿವೆ. “ಬಿಗ್‌ಬಾಸ್ ಗ್ರಾಂಡ್ ಫಿನಾಲೆಯಲ್ಲಿ ಬಿಗ್‌ಬಾಸ್ ಅಣಕು ಪ್ರಹಸನ ಮಾಡಿ ರಂಜಿಸಿದ್ಧ ಗಿಚ್ಚಿ ಗಿಲಿಗಿಲಿ ತಂಡದ ಶೋ ಇದೀಗ ಬಿಗ್‌ಬಾಸ್ ಪ್ರಸಾರ ಆಗುತ್ತಿದ್ದ ಸಮಯದಲ್ಲಿ ಪ್ರಸಾರವಾಗಲಿದೆ. ಕಲರ್ಸ್ ಕನ್ನಡದ ಅದ್ಭುತ ಕಾಮಿಡಿಯನ್‌ಗಳ ಜೊತೆಗೆ ಬಿಗ್‌ಬಾಸ್‌ನ ಈ ಸೀಸನ್ ಸೇರಿದಂತೆ ವಿವಿಧ ಸೀಸನ್‌ಗಳಲ್ಲಿ ಭಾಗವಹಿಸಿದ್ದ ಹಲವು ಸ್ಪರ್ಧಿಗಳು ಈ ಬಾರಿಯ ಗಿಚ್ಚಿ ಗಿಲಿಗಿಲಿಯಲ್ಲಿ ಭಾಗವಹಿಸಿರುವುದು ಈ ಬಾರಿಯ ವಿಶೇಷಗಳಲ್ಲಿ ಒಂದು” ಎನ್ನುತ್ತಾರೆ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್.
ಈ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತೀರ್ಪುಗಾರರಾದ ಶೃತಿ, ಸಾಧುಕೋಕಿಲ, ಕೋಮಲ್ ಕುಮಾರ್, ಶೋ ನ ನಿರ್ದೇಶಕ ಪ್ರಕಾಶ್, ನಿರ್ಮಾಪಕರಾದ ಶಿವಧ್ವಜ್, ಪ್ರಶಾಂತ್ ರೈ ಹಾಗೂ ನಿರೂಪಕ ನಿರಂಜನ್ ದೇಶಪಾಂಡೆ ಉಪಸ್ಥಿತರಿದ್ದರು. ನಾನು ಹಾಸ್ಯ ಕಲಾವಿದನಾಗಿ, ನಿರ್ದೇಶಕನಾಗಿ ಎಲ್ಲರಿಗೂ ಪರಿಚಯನಾಗಿದ್ದೆ. ಆದರೆ “ಕನ್ನಡ ಕೋಗಿಲೆ” ಶೋ ಮೂಲಕ ಎಲ್ಲರಿಗೂ ನಾನು ಸಂಗೀತ ನಿರ್ದೇಶಕ ಎಂದು ಗೊತ್ತಾಯಿತು. ಈಗ ಜನರು ಕಿರುತೆರೆಯನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದಾರೆ. “ಗಿಚ್ಚಿ ಗಿಲಿಗಿಲಿ” ಈಗಾಗಲೇ ಎರಡು ಸೀಸನ್ ಯಶಸ್ವಿಯಾಗಿದೆ. ಮೂರನೇ ಸೀಸನ್ ಕೂಡ ಯಶಸ್ವಿಯಾಗುತ್ತದೆ ಎಂಬ ನಂಬಿಕೆಯಿದೆ ಎಂದರು ಸಾಧುಕೋಕಿಲ.
“ಗಿಚ್ಚಿ ಗಿಲಿಗಿಲಿ” ಶೋ ನ ಮೂಲಕ ಸಾಕಷ್ಟು ಪ್ರತಿಭೆಗಳು ಚಿತ್ರರಂಗಕ್ಕೆ ಸಿಕ್ಕಿದ್ದಾರೆ. ಇಂತಹ ಶೋ ಆಯೋಜಿಸಿರುವ ಕಲರ್ಸ್ ಕನ್ನಡ ವಾಹಿನಿಗೆ ನನ್ನ ಧನ್ಯವಾದ. ಎರಡು ಸೀಸನ್ ಗಳಿಗೆ ನಾನು ಹಾಗೂ ಸಾಧುಕೋಕಿಲ ಅವರು ತೀರ್ಪುಗಾರರಾಗಿದ್ದೆವು. ಈಗ ನಮ್ಮೊಂದಿಗೆ ಕೋಮಲ್ ಕುಮಾರ್ ಸೇರ್ಪಡೆಯಾಗಿದ್ದಾರೆ ಎಂದು ನಟಿ ಶ್ರುತಿ ತಿಳಿಸಿದರು. ನಾನು ಈ ಹಿಂದೆ ಒಂದು ಕಾಮಿಡಿ ಶೋ ನ ನಿರ್ಮಾಣ ಮಾಡಿದ್ದೆ ಎಂದು ಮಾತನಾಡಿದ ನಟ ಕೋಮಲ್ ಕುಮಾರ್, ಕಲರ್ಸ್ ವಾಹಿನಿಯ ಅನುಬಂಧ ಅವರ್ಡ್ಸ್ ನಲ್ಲಿ ಸಿಕ್ಕ ಈ ಕಾರ್ಯಕ್ರಮದ ನಿರ್ಮಾಪಕರು “ಗಿಚ್ಚಿ ಗಿಲಿಗಿಲಿ” ಶೋ ಬಗ್ಗೆ ಹೇಳಿದರು. ನಾನು ಕೂಡ ಈ ಶೋ ನೋಡಿದ್ದೇನೆ. ಈಗ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಖುಷಿಯಾಗಿದೆ ಎಂದರು.
ನಾವು ಈ ಹಿಂದೆ “ಮಜಾಭಾರತ” ಎಂಬ ಶೋ ಮಾಡಿದ್ದೆವು. ಈಗ ಎರಡು ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿರುವ “ಗಿಚ್ಚಿ ಗಿಲಿಗಿಲಿ” ಯನ್ನು ನಮ್ಮ ಸಂಸ್ಥೆಯ ಮೂಲಕ ನಿರ್ಮಿಸುತ್ತಿದ್ದೇವೆ. ಸಹಕಾರ ನೀಡುತ್ತಿರುವ ವಾಹಿನಿಯವರಿಗೆ, ತೀರ್ಪುಗಾರರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ ತಿಳಿಸಿದರು ನಿರ್ಮಾಪಕರಾದ ಶಿವಧ್ವಜ್ ಹಾಗೂ ಪ್ರಶಾಂತ್ ರೈ. “ಬಿಗ್ ಬಾಸ್” ಸೀಸನ್ ಹತ್ತು ಯಶಸ್ವಿಯಾಗಿ ಮುಕ್ತಾಯವಾಗಿದೆ. ಈಗ ಶನಿವಾರ, ಭಾನುವಾ ಅದೇ ಸಮಯಕ್ಕೆ “ಗಿಚ್ಚಿ ಗಿಲಿಗಿಲಿ” ಪ್ರಸಾರವಾಗಲಿದೆ. ನಮ್ಮ ಕಾರ್ಯಕ್ರಮಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಪ್ರಕಾಶ್. ಗಿಚ್ಚಿ ಗಿಲಿಗಿಲಿಯ ಕಾಮಿಡಿಯನ್‌ಗಳು ಈಗಾಗಲೇ ರಾಜ್ಯದ ಎಲ್ಲೆಡೆ ಜನಪ್ರಿಯರು. ಇವರೊಂದಿಗೆ ಹೊಸ ಹತ್ತು ಸ್ಪರ್ಧಿಗಳೂ ಸೇರಿದ್ದು ಈ ಸೀಸನ್‌ನಲ್ಲಿ ಕಾಮಿಡಿಯ ಮಹಾಪೂರವೇ ಹರಿದುಬರಲಿದೆ.
ಈ ಬಾರಿಯ ಬಿಗ್‌ಬಾಸ್‌ನ ಹೈಲೈಟ್‌ಗಳಲ್ಲಿ ಒಬ್ಬರಾಗಿದ್ದ ಕಾಮಿಡಿಯನ್ ತುಕಾಲಿ ಸಂತೋಷ್ ತಮ್ಮ ಪತ್ನಿ ಮಾನಸ ಅವರೊಂದಿಗೆ ಸೇರಿ ಗಿಚ್ಚಿ ಗಿಲಿಗಿಲಿಯಲ್ಲಿ ಕಾಮಿಡಿ ಮಾಡಲಿದ್ದಾರೆ. ಇವರ ಜೊತೆಗೆ ಬಿಗ್‌ಬಾಸ್ ಸೀಸನ್ ಎಂಟರ ವಿಜೇತ, ಮಜಾಭಾರತ, ಕಾಮಿಡಿ ಟಾಕೀಸ್ ಮುಂತಾದ ಕಾಯಕ್ರಮಗಳ ಮೂಲಕ ಮಿಂಚಿರುವ ಮಂಜು ಪಾವಗಡ ಒಂದೆರಡು ವರ್ಷಗಳ ಬ್ರೇಕ್‌ನ ನಂತರ ಗಿಚ್ಚಿಗಿಲಿಗಿಲಿಗೆ ಮರಳಿದ್ದಾರೆ. ಬಿಗ್‌ಬಾಸ್ ಸೀಸನ್ ಒಂಬತ್ತರಲ್ಲಿ ರಂಜಿಸಿದ್ದ ಇನ್ನೊಬ್ಬ ಹೆಸರಾಂತ ಮಜಾಭಾರತ ಮತ್ತು ಗಿಚ್ಚಿಗಿಲಿ ಕಲಾವಿದ ವಿನೋದ್ ಗೊಬ್ಬರಗಾಲ ಇದ್ದೇ ಇರುತ್ತಾರೆ. ಇವರ ಜೊತೆಗೆ ಈ ಬಾರಿ ಬಿಗ್‌ಬಾಸ್‌ನಲ್ಲಿದ್ದ ದ್ರೋಣ್ ಪ್ರತಾಪ್ (Drone Pratap) ಮತ್ತು ಇಶಾನಿ ಕೂಡಾ ಕಾಮಿಡಿಯಲ್ಲಿ ಒಂದು ಕೈ ನೋಡೇ ಬಿಡೋಣ ಎನ್ನುವ ಹುಮ್ಮಸ್ಸಿನಲ್ಲಿದ್ದಾರೆ. ಬಿಗ್‌ಬಾಸ್ ಸೀಸನ್ ನಾಲ್ಕರಲ್ಲೇ ಜನಮನ ಗೆದ್ದಿದ್ದ ಸಂಜನಾ ಚಿದಾನಂದ್ ಕೂಡಾ ಹಾಸ್ಯದಲ್ಲಿ ತಾನೇನೂ ಕಮ್ಮಿಯಿಲ್ಲ ಎಂಬಂತೆ ಸ್ಫರ್ಧಿಸಲಿದ್ದಾರೆ.
ಉಳಿದಂತೆ ಕಲರ್ಸ್ ಕನ್ನಡದ ಜನಪ್ರಿಯ ಕಾಮಿಡಿಯನ್‌ಗಳಾದ ಹುಲಿ ಕಾರ್ತಿಕ್, ಶಿವು, ಚಿಲ್ಲರ್ ಮಂಜು, ಚಂದ್ರಪ್ರಭಾ, ಮಾನಸ, ಪ್ರಶಾಂತ್, ನಂದೀಶ್ ಮಡಿವಾಳ ಎಂದಿನಂತೆ ವೀಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ. “ಕನ್ನಡ ಕೋಗಿಲೆ” ಸಂಗೀತ ಕಾಯಕ್ರಮದಲ್ಲಿ ಜನಪ್ರಿಯರಾಗಿದ್ದ ಹಾಡುಗಾರ ಕರಿಬಸವ, “ನನ್ನಮ್ಮ ಸೂಪರ್‌ಸ್ಟಾರ್” ನ ಪುನೀತಾ, “ಮಜಾ ಟಾಕೀಸ್”ನ ಮೋಹನ್, ದೀಕ್ಷಾ, ಖುಷಿ, ಮಧುಮತಿ- ಹೀಗೆ ಮಜರಂಜನೆಯ ರಸದೌತಣ ನೀಡುವಂಥಾ ತಂಡವೇ ರೆಡಿಯಾಗಿದೆ.