Tag: Driving License

  • ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆದ ಅಲ್ಲು ಅರ್ಜುನ್

    ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆದ ಅಲ್ಲು ಅರ್ಜುನ್

    ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ (Allu Arjun) ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ (Driving License) ಪಡೆದಿದ್ದಾರೆ. ಈ ಲೈಸೆನ್ಸ್ ಪಡೆಯೋಕೆ ಕಾರಣ ಪುಷ್ಪ 2 ಸಿನಿಮಾದ ಶೂಟಿಂಗ್ ಎಂದು ಹೇಳಲಾಗುತ್ತಿದೆ. ಸದ್ಯ ಭಾರತದಲ್ಲೇ ಚಿತ್ರೀಕರಣ ಮಾಡುತ್ತಿರುವ ಚಿತ್ರತಂಡ ಮುಂದಿನ ದಿನಗಳಲ್ಲಿ ಚೀನಾಗೆ ಹಾರಲಿದೆ ಅಂತೆ. ಅಲ್ಲಿ ಈ ಲೈಸೆನ್ಸ್ ಉಪಯೋಗಕ್ಕೆ ಬರಲಿದೆಯಂತೆ. ಈ ಕಾರಣದಿಂದಾಗಿಯೇ ಅವರು ಆರ್.ಟಿ.ಓ ಆಫೀಸಿಗೆ ತೆರಳಿ, ಪರವಾಣಿಗೆ ಪತ್ರ ಪಡೆದುಕೊಂಡಿದ್ದಾರೆ.

    ಈ ನಡುವೆ ಪುಷ್ಪ 2 ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ‘ಪುಷ್ಪ 2’ (Pushpa 2) ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪುಷ್ಪರಾಜ್‌ಗೆ ಜೋಡಿಯಾಗಿರುವ ಶ್ರೀವಲ್ಲಿ ಲುಕ್ ಹೇಗಿದೆ ಎಂಬುದು ಈಗ ರಿವೀಲ್ ಆಗಿದೆ. ಪುಷ್ಪ 2 ಚಿತ್ರೀಕರಣದ ಫೋಟೋ ಲೀಕ್ ಆಗಿದೆ. ರಶ್ಮಿಕಾ ಮಂದಣ್ಣ ನಟಿಸುತ್ತಿರೋ ಶ್ರೀವಲ್ಲಿ ಲುಕ್ ಔಟ್ ಆಗಿದೆ.

    ಆಗಿ ಕೋಟಿ ಕೋಟಿ ಲೂಟಿ ಮಾಡಿದೆ. ಹಾಗಾಗಿ ‘ಪುಷ್ಪ 2’ (Pushpa 2) ಚಿತ್ರದ ಮೇಲೆ ಭಾರೀ ನಿರೀಕ್ಷೆ ಇದೆ. ‘ಪುಷ್ಪ’ ಪಾರ್ಟ್ 2 ಹೇಗೆ ಮೂಡಿ ಬರಲಿದೆ ಎಂದು ಕೌತುಕ ಸೃಷ್ಟಿಸಿರುವಾಗಲೇ ಚಿತ್ರದಲ್ಲಿನ ಶ್ರೀವಲ್ಲಿ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ನಟಿ ರಶ್ಮಿಕಾ ಮಂದಣ್ಣ ಕೆಂಪು ಬಣ್ಣದ ಸೀರೆ, ಆಭರಣ ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣದ ಸೆಟ್‌ನಲ್ಲಿ ನಟಿಯನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಈ ವಿಡಿಯೋ ಇದೀಗ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ.

     

    ಇನ್ನೂ ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೇ ಆಗಸ್ಟ್ 15ಕ್ಕೆ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಅಲ್ಲು ಅರ್ಜುನ್ ನ್ಯೂ ಗೆಟಪ್ ನೋಡೋಕೆ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

  • ಈಗ ಮನೆಯಲ್ಲೇ ಕುಳಿತು ಡಿಎಲ್‌ ನವೀಕರಣ ಮಾಡಿ

    ಈಗ ಮನೆಯಲ್ಲೇ ಕುಳಿತು ಡಿಎಲ್‌ ನವೀಕರಣ ಮಾಡಿ

    ಬೆಂಗಳೂರು: ಚಾಲನಾ ಪರವಾನಗಿ(ಡಿಎಲ್‌), ಕಲಿಕಾ ಪರವಾನಗಿ(ಎಲ್‌ಎಲ್‌) ನವೀಕರಣಕ್ಕೆ ಇನ್ನು ಮುಂದೆ ಆರ್‌ಟಿಒ ಕಚೇರಿಗೆ ಹೋಗುವ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ನವೀಕರಣ ಮಾಡಬಹುದು.

    ಪ್ರಾದೇಶಿ ಸಾರಿಗೆ ಇಲಾಖೆ(ಆರ್‌ಟಿಒ) ಕಚೇರಿಯಲ್ಲಿನ ಭ್ರಷ್ಟಾಚಾರ ತಡೆಯಲು ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.  ಇದನ್ನೂ ಓದಿ: UP Election: ಓವೈಸಿ ಪಕ್ಷದಿಂದ ನಾಲ್ವರು ಹಿಂದೂಗಳಿಗೆ ಟಿಕೆಟ್

    ಸಾರಥಿ ವೆಬ್ ಸೈಟ್ ಮೂಲಕ ವಿಳಾಸ ಬದಲಾವಣೆ, ಹೆಸರು ಬದಲಾವಣೆಯಂತಹ ಸೇವೆಗಳನ್ನು ಮನೆಯಲ್ಲೇ ಶುಲ್ಕ ಪಾವತಿಸಿ ಅನ್‌ಲೈನ್‌ನಲ್ಲೇ ಮಾಡಬಹುದು ಎಂದು ಆರ್‌ಇಟಿಒ ತಿಳಿಸಿದೆ. ಇದನ್ನೂ ಓದಿ: ಹೆದ್ದಾರಿಯನ್ನು ಅಡವಿಟ್ಟು ಸಾಲ ಪಡೆದ ಪಾಕಿಸ್ತಾನ

    ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್, ಫಿಸಿಕಲ್ ಟೆಸ್ಟ್, ಫಿಟ್ನೆಸ್ ಟೆಸ್ಟ್ ರಿನಿವಲ್ ಮಾಡಿಸಲು ಮಾತ್ರ ಆರ್‌ಟಿಒ ಕಚೇರಿಗೆ ಹೋಗಬೇಕು. ಉಳಿದಂತೆ ಯಾವುದೇ ಕೆಲಸಗಳಿಗೆ ಆರ್‌ಟಿಒ ಕಚೇರಿಗೆ ಹೋಗಬೇಕಿಲ್ಲ.

  • DL, RC, ವಾಹನ ಪರ್ಮಿಟ್‍ಗಳ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ

    DL, RC, ವಾಹನ ಪರ್ಮಿಟ್‍ಗಳ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ

    ನವದೆಹಲಿ: ಕೊರೊನಾ ಹಿನ್ನೆಲೆ ಡ್ರೈವಿಂಗ್ ಲೈಸೆನ್ಸ್, ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ಹಾಗೂ ವಾಹನ ಪರ್ಮಿಟ್‍ಗಳ ಅವಧಿಯನ್ನು ಜೂನ್ 30ರ ವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

    ರಾಜ್ಯ ಸರ್ಕಾರಗಳಿಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ನಿರ್ದೇಶನ ನೀಡಿದ್ದು, ವಾಹನಗಳ ಫಿಟ್ನೆಸ್, ಪರ್ಮಿಟ್, ಡ್ರೈವಿಂಗ್ ಲೈಸೆನ್ಸ್, ರಿಜಿಸ್ಟ್ರೇಶನ್ ಹಾಗೂ ಇತರೆ ದಾಖಲೆಗಳ ಅವಧಿಯನ್ನು ಕೊರೊನಾ ಕಾರಣದಿಂದಾಗಿ ವಿಸ್ತರಿಸಲಾಗಿದೆ. ಫೆಬ್ರವರಿ 1, 2020 ರಿಂದ ಮಾರ್ಚ್ 21, 2021ರೊಳಗೆ ಅವಧಿ ಮುಗಿಯುವ ದಾಖಲೆಗಳಿಗೆ ಇದು ಅನ್ವಯವಾಗಲಿದೆ.

    ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ ಅರ್ಜಿ ಸಲ್ಲಿಸಿದವರಿಗೆ ಕೊರೊನಾ ಕಾರಣದಿಂದಾಗಿ ದಾಖಲೆಗಳನ್ನು ನವೀಕರಿಸುವಲ್ಲಿ ವಿಳಂಬವಾಗಿದ್ದು, ಇವುಗಳಿಗೂ ಫೆಬ್ರವರಿ 1ಕ್ಕೆ ಮುಕ್ತಾಯಗೊಳ್ಳುವ ದಾಖಲೆಗಳ ಅವಧಿಯನ್ನು ಜೂನ್ 30ರ ವರೆಗೆ ಮಾನ್ಯವೆಂದು ಪರಿಗಣಿಸಬಹದು ಎಂದು ತಿಳಿಸಲಾಗಿದೆ.

    ಕೊರೊನಾ ಸಂಕಷ್ಟದ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗರಿಕರು, ವಾಹನ ಸವಾರರು, ಇತರ ಸಂಸ್ಥೆಗಳಿಗೆ ದಾಖಲೆಗಳ ಕುರಿತು ಕಿರುಕುಳ, ತೊಂದರೆ ನಿಡದೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ಸಲಹಾ ಪತ್ರವನ್ನು ಜಾರಿಗೆ ತರಬೇಕೆಂದು ಸಚಿವಾಲಯ ಮನವಿ ಮಾಡಿದೆ.

  • ಕಾಲೇಜಿಗೆ ಬೈಕ್ ನಲ್ಲಿ ತೆರೆಳುವ ವಿದ್ಯಾರ್ಥಿಗಳಿಗೆ ಬ್ರೇಕ್ ಕೊಟ್ಟ ಬೆಂಗಳೂರು ಪೊಲೀಸ್!

    ಕಾಲೇಜಿಗೆ ಬೈಕ್ ನಲ್ಲಿ ತೆರೆಳುವ ವಿದ್ಯಾರ್ಥಿಗಳಿಗೆ ಬ್ರೇಕ್ ಕೊಟ್ಟ ಬೆಂಗಳೂರು ಪೊಲೀಸ್!

    ಬೆಂಗಳೂರು: ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಬೈಕ್ ಮತ್ತು ಕಾರಲ್ಲಿ ಮೋಜು ಮಸ್ತಿ ಮಾಡುತ್ತಾರೆ. ವಿದ್ಯಾರ್ಥಿಗಳು ಮೋಜು ಮಸ್ತಿ ಮಾಡಲು ತೆರಳಿದ ವೇಳೆಯಲ್ಲಿ ಸಾಕಷ್ಟು ಅಪಘಾತ ಪ್ರಕರಣಗಳು ಕೂಡ ನಡೆದಿರುವ ಉದಾಹರಣೆಯಿದ್ದು, ಹಾಗಾಗಿ ಪೊಲೀಸರು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ.

    ಇದೀಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಬೆಂಗಳೂರು ಪೊಲೀಸರು, ಶಾಲಾ-ಕಾಲೇಜುಗಳಿಗೆ ಒಂದು ಸೂಚನೆ ಕೊಟ್ಟಿದ್ದು, ಯಾವ ವಿದ್ಯಾರ್ಥಿ ಬಳಿ ಡ್ರೈವಿಂಗ್ ಲೈಸೆನ್ಸ್ ಇರುವುದಿಲ್ಲವೋ ಆ ವಿದ್ಯಾರ್ಥಿಗೆ ವಾಹನ ನಿಲ್ಲಿಸಲು ಶಾಲಾ-ಕಾಲೇಜು ಆವರಣದಲ್ಲಿ ಅವಕಾಶ ನೀಡಬಾರದು ಎಂದು ಹೇಳಿದೆ.

    ಶಿಕ್ಷಣ ಇಲಾಖೆಗೆ 2016 ಜುಲೈ 30ರಂದೇ ಈ ಸುತ್ತೋಲೆ ಹೊರಡಿಸಲಾಗಿದ್ದು, ಇದೀಗ ಕಟ್ಟುನಿಟ್ಟಾಗಿ ಜಾರಿಯಾಗುವ ಮುನ್ಸೂಚನೆ ಕಂಡು ಬರುತ್ತಿದೆ. ಎಲ್ಲಾ ಶಾಲಾ-ಕಾಲೇಜುಗಳು ಸ್ವಂತ ವಾಹನದಲ್ಲಿ ಬರುವ ವಿದ್ಯಾರ್ಥಿಗಳ ಚಾಲನ ಪರವಾನಗಿ ಬಗ್ಗೆ ಪರಿಶೀಲನೆ ನಡೆಸುತ್ತಿವೆ. ನಿಯಮದ ಪ್ರಕಾರ 18 ವರ್ಷ ಪೂರ್ಣಗೊಳ್ಳದ ವಿದ್ಯಾರ್ಥಿಗಳಿಗೆ ಡಿಎಲ್ ಸಿಗಲ್ಲ.