ಬೆಳಗಾವಿ: ಟ್ರ್ಯಾಕ್ಟರ್‌ಗಳಲ್ಲಿ (Tractor) ಅತಿಯಾದ ಸೌಂಡ್ ಬಳಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಚಾಲಕರಿಗೆ ಬೆಳಗಾವಿ ಪೊಲೀಸರು (Belagavi Police) ಬಿಸಿ ಮುಟ್ಟಿಸಿದ್ದಾರೆ.
ಬೆಳಗಾವಿ ಜಿಲ್ಲೆಯಾದ್ಯಂತ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ (Sugar Factory) ಕಬ್ಬು ನುರಿಸುವ ಪ್ರಕ್ರಿಯೆ ಆರಂಭವಾಗಿದೆ. ಜಮೀನಿನಿಂದ ಕಾರ್ಖಾನೆಗೆ ಕಬ್ಬು ಒಯ್ಯುವ ಟ್ರ್ಯಾಕ್ಟರ್‌ಗಳಲ್ಲಿ ಚಾಲಕರು ವಿಪರೀತ ಸೌಂಡ್ ಬಳಸ್ತಿದ್ದಾರೆ. ಜಾನಪದ ಹಾಡುಗಳನ್ನು ಹಚ್ಚಿ ಅಧಿಕ ಸೌಂಡ್‌ನೊಂದಿಗೆ ಚಾಲಕರು ಕಬ್ಬು ಒಯ್ಯುತ್ತಿದ್ದಾರೆ.
ಮುನವಳ್ಳಿ ಪಟ್ಟಣದಲ್ಲಿ ಟ್ರ್ಯಾಕ್ಟರ್‌ಗಳ ಮೇಲೆ ಸವದತ್ತಿ ಪೊಲೀಸರು ದಾಳಿ ನಡೆಸಿದ್ದಾರೆ. ಟೇಪ್‌ಗಳನ್ನು ಟ್ರ್ಯಾಕ್ಟರ್ ಚಕ್ರಕ್ಕೆ ಇಟ್ಟು ಹಾನಿಗೊಳಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಮಾಡಿದ್ರೆ ಕಠಿಣ ಕ್ರಮದ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ. ಇದನ್ನೂ ಓದಿ: ಒಕ್ಕಲಿಗರ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡಿ ಮುಜುಗರಕ್ಕೀಡಾದ ಜಾರ್ಜ್
– ಸೆಪ್ಟೆಂಬರ್‌ವರೆಗಿನ ವೇತನವನ್ನ ಏಜನ್ಸಿಯವರು ಪಾವತಿಸಿದ್ದಾರೆ ಎಂದ ಸಚಿವ
ಬೆಂಗಳೂರು: 108 ಆರೋಗ್ಯ ಕವಚದ ಅಂಬುಲೆನ್ಸ್ (108 Ambulence) ಚಾಲಕರಿಗೆ ಸರ್ಕಾರದ ಕಡೆಯಿಂದ ಯಾವುದೇ ವೇತನ (Salary) ಬಾಕಿ ಉಳಿಸಿಕೊಂಡಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅಂಬುಲೆನ್ಸ್ ಚಾಲಕರಿಗೆ ನ್ಯಾಯಯುತವಾಗಿ ಸಿಗಬೇಕಾದ ವೇತನವನ್ನ ಕಾಲ ಕಾಲಕ್ಕೆ ಸರಿಯಾಗಿ ಸಂಬಂಧಿಸಿದ ಏಜನ್ಸಿಯವರಿಗೆ ಸರ್ಕಾರ ನೀಡುತ್ತಾ ಬಂದಿದೆ. ಚಾಲಕರ ವೇತನ ಬಾಕಿ ಉಳಿಸಿಕೊಳ್ಳದಂತೆ ಇ.ಎಂ.ಆರ್ ಏಜನ್ಸಿಯವರಿಗೂ ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ. ಆಗಸ್ಟ್, ಸೆಪ್ಟೆಂಬರ್ ತಿಂಗಳ ವೇತನವನ್ನ ಏಜನ್ಸಿಯವರು ಚಾಲಕರಿಗೆ ಪಾವತಿ ಮಾಡಿದ್ದಾರೆ. ಅಕ್ಟೋಬರ್ ತಿಂಗಳ ವೇತನ ಪಾವತಿ ಕೂಡ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಪಾವತಿಸುವಂತೆ ಸೂಚಿಸಲಾಗಿದೆ ಎಂದರು. ಇದನ್ನೂ ಓದಿ: ಪಹಣಿಯಲ್ಲಿ ‘ವಕ್ಫ್’ ಬೋರ್ಡ್ ಹೆಸರು ರದ್ದು- ನಿರಾಳರಾದ ರೈತರು
ಸಾಂದರ್ಭಿಕ ಚಿತ್ರ
ವಿಪಕ್ಷ ನಾಯಕರಾದ ಆರ್. ಅಶೋಕ್ ಅರೆಬರೆ ಮಾಹಿತಿ ಪಡೆದು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಒಬ್ಬ ವಿಪಕ್ಷ ನಾಯಕರಾಗಿ ವಾಸ್ತವಾಂಶಗಳನ್ನ ಅರಿತು ಮಾತನಾಡಬೇಕು. 108 ಸಮಸ್ಯೆ ಆರಂಭವಾಗಿದ್ದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಏಜನ್ಸಿ ಹಾಗೂ ಚಾಲಕರ ನಡುವಿನ ಸಮಸ್ಯೆಯನ್ನು ಇಲಾಖೆ ಮಧ್ಯಸ್ಥಿಕೆ ವಹಿಸಿ ಸರಿಪಡಿಸುತ್ತಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 108 ವ್ಯವಸ್ಥೆಯಲ್ಲಿ ಒಂದಿಷ್ಟು ಲೋಪದೋಷಗಳು ಆಗಿರುವುದು ನಿಜ. 108 ಸಿಬ್ಬಂದಿಗಳಿಗೆ ಕನಿಷ್ಠ ವೇತನ ಜಾರಿಗೊಳಿಸಿದ್ದಲ್ಲದೇ ಸರ್ಕಾರದ ಅನುಮತಿ ಇಲ್ಲದೇ ನಿಯಮಬಾಹಿರವಾಗಿ 45% ರಷ್ಟು ವೇತನ ಹೆಚ್ಚಳ ಮಾಡಲಾಗಿತ್ತು ಎಂದು ಹೇಳಿದರು. ಇದನ್ನೂ ಓದಿ: ಆನೇಕಲ್| ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು – ಚಾಲಕ ಪಾರು
ಇದೀಗ 108 ಸಿಬ್ಬಂದಿ 45% ರಷ್ಟು ವೇತನ ಹೆಚ್ಚಳ ಮಾಡಿರುವುದನ್ನು ಕಡಿತಗೊಳಿಸದಂತೆ ಬೇಡಿಕೆ ಇಡುತ್ತಿದ್ದಾರೆ. ನಮ್ಮ ಸರ್ಕಾರ ನಿಯಮಾನುಸಾರ ಕನಿಷ್ಠ ವೇತನ ನೀಡಲು ಬದ್ಧವಾಗಿದ್ದು, ಅದರಂತೆ ಅನುದಾನವನ್ನ ನೀಡುತ್ತಾ ಬಂದಿದೆ. ಪ್ರತಿಯೊಬ್ಬ ಅಂಬುಲೆನ್ಸ್ ಚಾಲಕರಿಗೆ 35 ಸಾವಿರಕ್ಕೂ ಹೆಚ್ವು ವೇತನ ದೊರೆಯುತ್ತಿದೆ. ಇದರ ಮೇಲೂ ಮೂಲ ವೇತನದಲ್ಲಿ 45% ರಷ್ಟು ಹೆಚ್ಚಳ ಮಾಡುವ ಬಗ್ಗೆ ಸಿಬ್ಬಂದಿ ಬೇಡಿಕೆ ಇಟ್ಟಿದ್ದು, ನಿಯಮಬಾಹಿರವಾಗಿ ಈ ಕ್ರಮ ಕೈಗೊಳ್ಳಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ ಎಂದು ನುಡಿದರು. ಇದನ್ನೂ ಓದಿ: ಬಿಡಿಎ ಭರ್ಜರಿ ಬೇಟೆ – ನಾಗರಬಾವಿ ಬಡಾವಣೆಯಲ್ಲಿ 60 ಕೋಟಿ ಮೌಲ್ಯದ ಆಸ್ತಿ ಜಪ್ತಿ
ಸರ್ಕಾರದಲ್ಲಿ ಯಾವುದೇ ಹಣಕಾಸಿನ ತೊಂದರೆ ಇಲ್ಲ. 2024-25ನೇ ಸಾಲಿನಲ್ಲಿ 108 ಆರೋಗ್ಯ ಕವಚ ಯೋಜನೆಗೆ ಆರ್ಥಿಕ ಇಲಾಖೆಯಿಂದ ಆರೋಗ್ಯ ಇಲಾಖೆಗೆ 260.33 ಕೋಟಿ ರೂ. ಅನುದಾನವನ್ನು ಆಯವ್ಯಯದಲ್ಲಿ ಅನುಮೋದನೆಯಾಗಿದ್ದು, ಸೇವಾದಾರರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ವಯ ವಾರ್ಷಿಕ 162.40 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಲಾಗುತ್ತಿದೆ. ಆರೋಗ್ಯ ಇಲಾಖೆ ಹಾಗೂ ಇ.ಎಂ.ಆರ್.ಐ ಗ್ರೀನ್ ಹೆಲ್ತ್ ಸಂಸ್ಥೆಯವರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ವಯ ಪ್ರತಿ ತ್ರೈಮಾಸಿಕಕ್ಕೆ 40.60 ಕೋಟಿಗಳಂತೆ ವಾರ್ಷಿಕ 162.40 ಕೋಟಿ ರೂ. ಅನುದಾನವನ್ನು ಕಾಲ ಕಾಲಕ್ಕೆ ಬಿಡುಗಡೆಗೊಳಿಸಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹಾವೇರಿ | ಯತ್ನಳ್ಳಿ ಬಳಿ 10 ಬ್ಯಾಲೇಟ್ ಬಾಕ್ಸ್ ಪತ್ತೆ!
ಈ ಬಗ್ಗೆ 108 ಸಿಬ್ಬಂದಿಯನ್ನ ಕರೆದು ಚರ್ಚಿಸಿ ಮನವರಿಕೆ ಮಾಡಿಕೊಡಲಾಗಿದೆ. ನ್ಯಾಯಯುತ ಕನಿಷ್ಠ ವೇತನ ಸರ್ಕಾರ ನೀಡುತ್ತಿದ್ದು, ಸರ್ಕಾರದಲ್ಲಿ ಯಾವುದೇ ಹಣಕಾಸಿನ ಕೊರತೆಯಿಲ್ಲ. ಹಿಂದಿನ ಸರ್ಕಾರವಿದ್ದ ವೇಳೆ ವ್ಯವಸ್ಥೆಯಲ್ಲಾದ ಲೋಪವನ್ನು ನಮ್ಮ ಸರ್ಕಾರ ಸರಿಪಡಿಸುತ್ತಿದೆ. ಟೆಂಡರ್‌ಗಳನ್ನ ಕರೆಯದೇ ಜಿವಿಕೆ ಇಎಂಆರ್ ಸಂಸ್ಥೆಯೊಂದಿಗೆ ಒಡಂಬಡಿಕೆಯ ಮೂಲಕವೇ 108 ವ್ಯವಸ್ಥೆಯನ್ನ ಮುಂದುವರಿಸಿಕೊಂಡು ಬರಲಾಗಿದೆ. ನಮ್ಮ ಸರ್ಕಾರ ಬಂದ ಬಳಿಕ ನಿಯಮಾನುಸಾರ ಟೆಂಡರ್ ಕರೆಯಲು ಕ್ರಮ ಕೈಗೊಳ್ಳುತ್ತಿದೆ. ವ್ಯವಸ್ಥೆಯಲ್ಲಾದ ಲೋಪಗಳನ್ನ ಸರಿಪಡಿಸುತ್ತಿರುವಾಗ ಸಿಬ್ಬಂದಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮುಖಂಡರು, ಕಾರ್ಯಕರ್ತರು ನಿದ್ದೆಗೆಟ್ಟು ಕೆಲಸ ಮಾಡಿದ್ದಾರೆ, ನಿಮ್ಮ ಜೊತೆ ಶಾಶ್ವತವಾಗಿ ಇರ್ತೇನೆ: ನಿಖಿಲ್ ಭರವಸೆ
ಲಕ್ನೋ: ಉತ್ತರ ಪ್ರದೇಶದಿಂದ (Uttar Pradesh) ಜೈಪುರಕ್ಕೆ (Jaipur) ಬರುತ್ತಿದ್ದ ಬಸ್ಸಿನಲ್ಲಿ 20 ವರ್ಷದ ದಲಿತ ಯುವತಿ (Dalit Girl) ಮೇಲೆ ಇಬ್ಬರು ಚಾಲಕರು ಸಾಮೂಹಿಕ ಅತ್ಯಾಚಾರ (Gang Rape) ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 9ರ ಮಧ್ಯರಾತ್ರಿ ಖಾಸಗಿ ಬಸ್ ಉತ್ತರ ಪ್ರದೇಶದಿಂದ ಜೈಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, ಕಾನ್ಪುರದಿಂದ ಜೈಪುರಕ್ಕೆ ಪ್ರಯಾಣಿಸುತ್ತಿದ್ದ ಸಂತ್ರಸ್ತೆ ಕ್ಯಾಬಿನ್‌ನಲ್ಲಿ ಕುಳಿತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾಬಿನ್‌ನೊಳಗೆ ಆರಿಫ್ ಮತ್ತು ಲಲಿತ್ ಎಂದು ಗುರುತಿಸಲಾದ ಚಾಲಕರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೋರ್ಟ್ ಆವರಣದಲ್ಲೇ ಭೀಕರ ಗುಂಡಿನ ದಾಳಿ – ವಿಚಾರಣಾಧೀನ ಕೈದಿಯ ಹತ್ಯೆ, ಇಬ್ಬರು ಅರೆಸ್ಟ್
ಆರೋಪಿಗಳ ಪೈಕಿ ಆರಿಫ್‌ನನ್ನು ಬಂಧಿಸಲಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಕನೋಟಾ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ಭಗವಾನ್ ಸಹಾಯ್ ಮೀನಾ ತಿಳಿಸಿದ್ದಾರೆ. ಘಟನೆಯ ಬಳಿಕ ಇನ್ನೋರ್ವ ಆರೋಪಿ ಲಲಿತ್ ತಲೆಮರೆಸಿಕೊಂಡಿದ್ದು, ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಂಸತ್ ಮೇಲಿನ ದಾಳಿಯ ಪ್ರಮುಖ ರೂವಾರಿ ಲಲಿತ್ ಝಾ 7 ದಿನ ಪೊಲೀಸ್ ಕಸ್ಟಡಿಗೆ
ಸಂತ್ರಸ್ತೆ ಕ್ಯಾಬಿನ್‌ನಲ್ಲಿದ್ದಾಗ ಬಸ್‌ನೊಳಗೆ ಕೆಲವು ಪ್ರಯಾಣಿಕರಿದ್ದರು. ಆದರೆ ಕ್ಯಾಬಿನ್ ಅನ್ನು ಒಳಗಡೆಯಿಂದ ಲಾಕ್ ಮಾಡಲಾಗಿತ್ತು. ಈ ಘಟನೆ ಸಂಭವಿಸಿದ ಸಂದರ್ಭ ಯುವತಿ ಎಮರ್ಜೆನ್ಸಿ ಅಲಾರಾಂ ಒತ್ತಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಪ್ರಯಾಣಿಕರು ಬಸ್ ನಿಲ್ಲಿಸಿ ಆರಿಫ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಲಲಿತ್ ತಪ್ಪಿಸಿಕೊಂಡು ಹೋಗಿದ್ದಾನೆ ಎಂದು ಎಸ್‌ಹೆಚ್‌ಒ ಹೇಳಿದ್ದಾರೆ. ಇದನ್ನೂ ಓದಿ: ಸೆಕ್ಸ್‌ಗೆ ನಿರಾಕರಿಸಿದ ಲಿವ್-ಇನ್-ಪಾರ್ಟ್ನರ್‌ನ ಕುತ್ತಿಗೆಗೆ ಕತ್ತರಿಯಿಂದ ಇರಿದ!
ಮುಂಬೈ: ಭಾರತದಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆ ನಾಗರಿಕ ಅಧಿಕಾರಿಗಳು ರಸ್ತೆ ಸುರಕ್ಷತೆ ಕ್ರಮಗಳು ಮತ್ತು ನಿಯಮಗಳನ್ನು ಹೆಚ್ಚಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಎಲ್ಲಾ ಮುಂಬೈ (Mumbai) ಪೊಲೀಸರು, ಚಾಲಕರು ಮತ್ತು ಕಾರಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಅನ್ನು ಕಡ್ಡಾಯಗೊಳಿಸುವುದಾಗಿ ತಿಳಿಸಿದ್ದಾರೆ. 2022ರ ನವೆಂಬರ್ 1ರಿಂದ ಹಿಂಭಾಗ ಕುಳಿತುಕೊಳ್ಳುವವರು ಸಹ ಸೀಟ್ ಬೆಲ್ಟ್ ಅನ್ನು ಕಡ್ಡಾಯವಾಗಿ ಧರಿಸಬೇಕಾಗುತ್ತದೆ. ಇದನ್ನೂ ಓದಿ: ಪತ್ನಿಯನ್ನು ಚುಡಾಯಿಸಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ನೆರೆಮನೆಯವನಿಂದ ಪತಿ ಹತ್ಯೆ
ನ.1 ರಿಂದ ಮುಂಬೈನಲ್ಲಿ ಜಾರಿಗೆ ಬರಲಿರುವ ಸೀಟ್ ಬೆಲ್ಟ್ ನಿಯಮಗಳು * ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. * ಕಾರಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸಹ ಸೀಟ್ ಬೆಲ್ಟ್ ಧರಿಸಬೇಕು ಅಥವಾ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ * ಸುರಕ್ಷತಾ ಬೆಲ್ಟ್ ಸೌಲಭ್ಯವಿಲ್ಲದ ವಾಹನಗಳಲ್ಲಿ ಸೀಟ್ ಬೆಲ್ಟ್ ಸ್ಥಾಪಿಸಲು 2022ರ ನವೆಂಬರ್ 1ರವರೆಗೆ ಸಮಯ ನೀಡಲಾಗುತ್ತದೆ. * 2022ರ ನವೆಂಬರ್ 1ರಿಂದ ಮುಂಬೈನಲ್ಲಿ ಪ್ರಯಾಣಿಸುವಾಗ ಎಲ್ಲಾ ಚಾಲಕರು ಮತ್ತು ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಬೇಕು. ಇದನ್ನೂ ಓದಿ: ಗುಜರಾತ್‍ನ ತೂಗು ಸೇತುವೆ ಕುಸಿತ ವಿಚಾರದಲ್ಲಿ ರಾಜಕೀಯ ಮಾಡಲ್ಲ: ಮಲ್ಲಿಕಾರ್ಜುನ ಖರ್ಗೆ
ಒಟ್ಟಾರೆ ಕಾರಿನಲ್ಲಿ ಪ್ರಯಾಣಿಸುವ ಚಾಲಕ ಮತ್ತು ಪ್ರಯಾಣಿಕರು ಮುಂಬೈನಲ್ಲಿ ಸೀಟ್ ಬೆಲ್ಟ್ ಅನ್ನು ನವೆಂಬರ್ 1ರಿಂದ ಧರಿಸಬೇಕು. ಒಂದು ವೇಳೆ ಸೀಟ್ ಬೆಲ್ಟ್ ಧರಿಸದೇ ಇದ್ದರೆ ಅವರ ವಿರುದ್ಧ ಮೋಟಾರು ವಾಹನಗಳ (ತಿದ್ದುಪಡಿ) ಕಾಯಿದೆ, 2019 ರ ಸೆಕ್ಷನ್ 194 (ಬಿ) (1) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Live Tv
[brid partner=56869869 player=32851 video=960834 autoplay=true]
ಕಲಬುರಗಿ: ಗೂಡ್ಸ್ ವಾಹನ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಎರಡು ವಾಹನಗಳ ಚಾಲಕರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಆಳಂದ ತಾಲೂಕಿನ ಚಿತಲಿ ಗ್ರಾಮದ ಬಳಿ ನಡೆದಿದೆ.
ಆಳಂದ ಪಟ್ಟಣದ ಬಾಳೇನಗಲ್ಲಿ ನಿವಾಸಿ, ಗೂಡ್ಸ್ ಚಾಲಕ ಜಾಫರ್ ಖಾಸೀಂ (27), ಗುಜರಾತ್ ಮೂಲದ ಉದ್ಯಮಿ ಕಾರು ಚಾಲಕ ಜೋಧಾರಾಮ ಜಸ್ವಂತ್ (40) ಮೃತ ದುರ್ದೈವಿಗಳು. ಕಾರಿನಲ್ಲಿದ್ದ ಇನ್ನೋರ್ವ ಹೀರಾರಾಮ ಎಂಬಾತ ಗಂಭೀರ ಗಾಯಗೊಂಡಿದ್ದು, ಹೈದರಾಬಾದ್‍ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ನನಗೆ ಸಿಎಂ ಆಗೋ ಎಲ್ಲಾ ಅರ್ಹತೆಯಿದೆ: ಉಮೇಶ್ ಕತ್ತಿ
ಜಾಫರ್ ಆಳಂದನಿಂದ ಮಹಾರಾಷ್ಟ್ರದ ಉಮರ್ಗಾಕ್ಕೆ ಗೂಡ್ಸ್ ವಾಹನದಲ್ಲಿ ಸಾಗುತ್ತಿದ್ದ. ಗುಜರಾತ್ ಮೂಲದ ವ್ಯಾಪಾರಿಗಳಾದ ಜೋಧಾರಾಮ, ಹೀರಾರಾಮ ಉಮರ್ಗಾದಿಂದ ಕಾರಿನಲ್ಲಿ ಆಳಂದಕ್ಕೆ ಬರುತ್ತಿರುವಾಗ ಘಟನೆ ಸಂಭವಿಸಿದೆ. ಸ್ಥಳಕ್ಕೆ ಸಿಪಿಐ ಬಾಸು ಚವ್ಹಾಣ್, ಪಿಎಸ್‍ಐ ತಿರುಮಲೇಶ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸೆಪ್ಟೆಂಬರ್‌ವರೆಗೂ ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸಿದ ದೆಹಲಿ ಸರ್ಕಾರ
ಧಾರವಾಡ: ಖಾಸಗಿ ಸಂಸ್ಥೆಯ ಲಾರಿ ಹಾಗೂ ಅಶೋಕ್ ಲೇಲ್ಯಾಂಡ್ ಮಿನಿ ಲಾರಿಯ ನಡುವೆ ಭೀಕರ ಅಪಘಾತ ಸಂಭವಿಸಿ ಚಾಲಕರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯ ಹಾರೋಬೆಳವಡಿ ಗ್ರಾಮದ ಬಳಿ ನಡೆದಿದೆ.
ಧಾರವಾಡ-ಸವದತ್ತಿ ರಾಜ್ಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಸವದತ್ತಿ ಕಡೆಗೆ ಹೋಗುತ್ತಿದ್ದ ಲಾರಿಗೆ ಎದುರಿಂದ ಬರುತ್ತಿದ್ದ ಮತ್ತೊಂದು ಮಿನಿ ಲಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಇಬ್ಬರೂ ಚಾಲಕರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಎರಡೂ ಲಾರಿಗಳ ಮುಂದಿನ ಭಾಗ ಸಂಪೂರ್ಣ ಜಖಂಗೊಂಡಿದೆ. ಇದನ್ನೂ ಓದಿ: ಬೇರೆಯವರೊಂದಿಗೆ ಮದುವೆ ಆಗಿದ್ದಕ್ಕೆ ವಧುವನ್ನೇ ಕೊಂದ ಪ್ರೇಮಿ
ಮೃತಪಟ್ಟವರನ್ನು ಸಿದ್ದಪ್ಪ ತುರಾಯಿ (27) ಹಾಗೂ ಗಗನ್ (26) ಎಂದು ಗುರುತಿಸಲಾಗಿದೆ. ಲಾರಿಯಲ್ಲಿದ್ದ ಮತ್ತೋರ್ವ ಗಂಭೀರ ಗಾಯಗೊಂಡಿದ್ದು, ಗಾಯಾಳುವನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ರವಾನೆ ಮಾಡಲಾಗಿದೆ. ಘಟನೆಯಿಂದ ಕೆಲಕಾಲ ಧಾರವಾಡ ಸವದತ್ತಿ ರಸ್ತೆ ಸಂಪೂರ್ಣವಾಗಿ ಬಂದ್ ಆಗಿತ್ತು. ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಗರ್ಭಿಣಿ ಪತ್ನಿಗೆ ಟಾಯ್ಲೆಟ್ ಕ್ಲೀನರ್ ಆ್ಯಸಿಡ್ ಕುಡಿಸಿ ಕೊಂದ ಪಾಪಿ ಪತಿ
ಬೆಂಗಳೂರು: ರಾಜ್ಯದಲ್ಲಿ ಹಿಂದೂ ಮುಸ್ಲಿಂ ನಡುವಿನ ಧರ್ಮದ ವಾರ್ ಒಂದಿಲ್ಲೊಂದು ರೂಪ ಪಡೆದುಕೊಳ್ಳುತ್ತಿದೆ. ಹಿಜಬ್‍ನಿಂದ ಶುರುವಾದ ಈ ಧರ್ಮದ ದಂಗಲ್ ಈಗ ವ್ಯಾಪಾರ ವಹಿವಾಟಗಳ ಮೇಲೆ ಪ್ರಭಾವ ಬೀರುವುದಕ್ಕೆ ಶುರು ಮಾಡಿದೆ. ಹಿಂದೂ ಸಂಘಟನೆಗಳು ಒಂದೊಂದೇ ಅಭಿಯಾನಕ್ಕೆ ಕೈಹಾಕುತ್ತಿವೆ. ಈಗ ಖಾಸಗಿ ಬಸ್ ಪ್ರಯಾಣದ ಮೇಲೆ ಅಭಿಯಾನ ಶುರುವಾಗಿದೆ.
ನಿನ್ನೆಯಿಂದ ಹಿಂದೂ ಸಂಘಟನೆಗಳು ಹೊಸ ಆಂದೋಲನ ಶುರು ಮಾಡಿವೆ. ಹಿಂದೂಗಳು ತಾವೂ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಮಾಡುವಾಗ ಮುಸ್ಲಿಂ ಚಾಲಕರ ಮತ್ತು ಮುಸ್ಲಿಂ ಮಾಲೀಕರ ವಾಹನಗಳನ್ನ ಬಳಸಬೇಡಿ ಅಂತಾ ಅಭಿಯಾನ ಶುರು ಮಾಡಿದ್ದಾರೆ. ಅನ್ಯಧರ್ಮೀಯರು ನಮ್ಮ ಧರ್ಮವನ್ನ ನಂಬುವುದಿಲ್ಲ. ಅವರ ಜೊತೆಗೆ ಪ್ರಯಾಣ ಮಾಡುವ ಬದಲು ಹಿಂದೂ ಚಾಲಕರ ಮತ್ತು ಹಿಂದೂ ಮಾಲೀಕರ ವಾಹನಗಳನ್ನೇ ಬಳಸಿ ಅಂತಾ ಹೊಸ ವಾದವನ್ನು ಸೃಷ್ಟಿ ಮಾಡಿದ್ದಾರೆ. ಇದನ್ನೂ ಓದಿ:ಲವ್ ಜಿಹಾದ್‍ಗೆ ಮುಂದಾದವರ ಮನೆ ಹೊಕ್ಕು ಹೊಡೆಯಬೇಕು: EX MLC ನಾರಾಯಣಸಾ ಭಾಂಡಗೆ
ಇದಕ್ಕೆ ಚಾಲಕರ ವರ್ಗದಲ್ಲಿ ಭಾರೀ ವಿರೋಧ ಶುರುವಾಗಿದೆ. ನಮಗೆ ಪ್ರಯಾಣಿಕರೇ ದೇವರು, ಅವರ ಜಾತಿ, ಧರ್ಮ ಯಾವುದಾದರೇ ನಮಗೇನು. ನಮ್ಮ ಬಸ್ ಹತ್ತುವ ಪ್ರಯಾಣಿಕರನ್ನು ಅವರ ಸ್ಥಳಕ್ಕೆ ಬಿಡುವ ಕಾರ್ಯ ಮಾಡುವವರು ನಾವು. ನಮ್ಮಲ್ಲಿ ಎಲ್ಲ ಜಾತಿಯ ಎಲ್ಲ ಧರ್ಮದವರು ಇದ್ದಾರೆ. ನಾವೂ ಕೆಲಸ ಮಾಡುವ ಜಾಗದಲ್ಲಿ ಧರ್ಮವನ್ನು ತರುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮುಕ್ತ ಭಾರತ ಮಾಡೋಕೆ ಯಾರಪ್ಪನ ಕೈಯಲ್ಲೂ ಆಗಲ್ಲ: ನಲಪಾಡ್
ಇದು ಕೆಲಸಕ್ಕೆ ಬಾರದವರು ಮಾಡುತ್ತಿರುವ ಕುತಂತ್ರ. ರಾಜ್ಯದಲ್ಲಿ ಏನ್ ಆಗುತ್ತಿದೆ. ಎಲ್ಲ ಬೆಲೆಗಳು ಗಗನಕ್ಕೆ ಏರಿಕೆಯಾಗುತ್ತಿವೆ. ಜನ ಜೀವನ ಮಾಡುವುದೇ ಕಷ್ಟಕರವಾಗಿದೆ. ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆಯಾಗುತ್ತಿದೆ. ಇತಂಹ ಸಮಯದಲ್ಲಿ ಬೇಡದ ವಿಚಾರವನ್ನು ತಂದು ಜನರ ದಿಕ್ಕು ತಪ್ಪಿಸೋ ಕೆಲಸ ಆಗುತ್ತಿದೆ. ನಾವೆಲ್ಲ ಒಂದೇ ಭಾವನೆಯಿಂದ ಕೆಲಸ ಮಾಡುವ ಜನ. ನಮಗೆ ಕಷ್ಟ ಬಂದಾಗ ಹಿಂದೂಗಳು ಬರ್ತಾರೆ. ನಾವೂ ಅವ್ರ ಕಷ್ಟಕ್ಕೆ ಹೋಗ್ತೀವಿ. ಇಲ್ಲಿ ಧರ್ಮದ ಹೆಸರಿನಲ್ಲಿ ನಮ್ಮ ನಡುವೆ ಬಿರುಕು ತರುವ ಕೆಲಸ ನಡೆಯುತ್ತಿದೆ ಎಂದು ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ರಾಜ್ಯದ ಶಾಂತಿಯನ್ನು ಕೆಡಿಸುವ ಕೆಲಸಕ್ಕೆ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಹಿಂದೂ, ಮುಸ್ಲಿಂ ಅನ್ನುವ ವಿಷ ಬೀಜ ಭಿತ್ತನೆ ಮಾಡಿ ಅದರ ಲಾಭ ಮಾಡಿಕೊಳ್ಳಲು ಒಂದಿಲ್ಲೊಂದು ತಂತ್ರಗಳನ್ನು ಕೆಲವರು ಮಾಡುತ್ತಿದ್ದಾರೆ. ಜನ ಮಾತ್ರ ಇದೆಲ್ಲ ಬೇಕಾ ಅಂತ ತಮ್ಮ ಪಾಡಿಗೆ ತಾವು ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದಾರೆ. ಇನ್ನಾದರೂ ಈ ಅಭಿಯಾನಗಳು ಕೊನೆಯಾಗಿ ಜನ ನೆಮ್ಮದಿಯಿಂದ ಸಹಬಾಳ್ವೆ ಮಾಡುವಂತೆ ಆಗಲಿ.
ಬೆಂಗಳೂರು: ಆಟೋ ಕನಿಷ್ಠ ದರವನ್ನು 30 ರೂ.ಗೆ ಏರಿಕೆ ಮಾಡುವಂತೆ ಆಟೋ ಚಾಲಕರ ಸಂಘಟನೆಗಳಿಂದ ಸರ್ಕಾರಕ್ಕೆ ಮನವಿ ಮಾಡಿದೆ.
ದಿನೇ ದಿನೇ ಆಟೋ ಗ್ಯಾಸ್ ದರ ಏರಿಕೆಯಾಗುತ್ತಿರುವ ಹಿನ್ನೆಲೆ ಆಟೋ ಚಾಲಕರು ಆಕ್ರೋಶಗೊಂಡಿದ್ದಾರೆ. ಕೊರೊನಾದಿಂದ ಜೀವನ ನಡೆಸಲು ಕಷ್ಟಕರವಾಗಿರುವ ಸಮಯದಲ್ಲಿ ಆಟೋ ಗ್ಯಾಸ್ ದರ ಏರಿಕೆಯಾಗುತ್ತಿರುವುದರಿಂದ ಆಟೋ ಚಾಲಕರಿಗೆ ನಷ್ಟವಾಗಿದೆ ಎಂದು ಆಟೋ ಚಾಲಕರ ಸಂಘಟನೆಗಳು ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿ ಲೀಟರ್ ಆಟೋ ಗ್ಯಾಸ್ ದರ 56 ರೂಪಾಯಿಗೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 5.50 ರೂಪಾಯಿ ಏರಿಕೆಯಾಗಿದೆ. ಆಟೋ ಪ್ರಯಾಣದ ಕನಿಷ್ಠ ದರವನ್ನು ಏರಿಕೆ ಮಾಡುವಂತೆ ಆಟೋ ಚಾಲಕರ ಸಂಘಟನೆ ಸರ್ಕಾರಕ್ಕೆ ಮನವಿ ಮಾಡಿದೆ.
ಆಟೋ ಕನಿಷ್ಠ ದರ 25 ರೂಪಾಯಿಯಿಂದ 30 ರೂಪಾಯಿಗೆ ಏರಿಕೆ ಮಾಡುವಂತೆ ಆಟೋ ಸಂಘಟನೆಗಳು ಬೇಡಿಕೆ ಮಾಡಿಕೊಂಡಿದೆ. ಕಳೆದ ಒಂಬತ್ತು ವರ್ಷಗಳ ಹಿಂದೆ ಆಟೋ ಕನಿಷ್ಠ ಮೀಟರ್ ದರ ಏರಿಕೆಯಾಗಿತ್ತು. ಪ್ರತಿ ಮೂರು ವರ್ಷಕ್ಕೊಮ್ಮೆ ಆಟೋ ಮಿನಿಮಮ್ ದರ ಏರಿಕೆ ಮಾಡುವ ಅವಕಾಶವಿದ್ದು, ಸಾರಿಗೆ ಇಲಾಖೆ ಏರಿಕೆಗೆ ಅವಕಾಶ ನೀಡಿಲ್ಲವೆಂದು ಆದರ್ಶ ಆಟೋ ಚಾಲಕರ ಸಂಘಟನೆಯ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.
ಎಲ್‍ಪಿಜಿ ದರ ಏರಿಕೆ ಆದಾ ಹಿನ್ನೆಲೆಯಲ್ಲಿ ಆಟೋ ಮಿನಿಮಲ್ ದರವನ್ನು 30 ರೂಪಾಯಿಗೆ ಏರಿಕೆ ಮಾಡಲು ಅವಕಾಶ ನೀಡುವಂತೆ ಜೊತೆಗೆ ಪ್ರತಿ ಕಿಲೋಮೀಟರ್ ಗೆ 16 ರೂಪಾಯಿ ದರ ನಿಗದಿ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಆಗಸ್ಟ್ 10 ರಂದು ದೇಶಾದ್ಯಂತ ವಿದ್ಯುತ್ ನೌಕರರ ಮುಷ್ಕರ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆಯಿಂದಾಗಿ ಜುಲೈ 24ರಂದು ಯಲ್ಲಾಪುರ-ಹುಬ್ಬಳ್ಳಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಅರೆಬೈಲ್ ಘಟ್ಟ ಪ್ರದೇಶದಲ್ಲಿ ಭೂ ಕುಸಿತವಾದ್ದರಿಂದ ಭಾರೀ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿತ್ತು. ಇದರಿಂದಾಗಿ ವಿವಿಧ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದ ಲಾರಿಗಳು ಅಂಕೋಲ ಭಾಗದ ಬಾಳೆಗುಳಿ ಕ್ರಾಸ್ ನಲ್ಲಿ ಸಿಲುಕಿಕೊಂಡಿದ್ದವು. ಆದರೆ ಊಟಕ್ಕೆ ಹಣವಿಲ್ಲದೆ ಕಂಗಾಲಾಗಿರುವ ಚಾಲಕರು ಇಂದು ದಿಢೀರ್ ಪ್ರತಿಭಟನೆ ನಡೆಸಿದರು.
ಅಂಕೋಲ ಸೇರಿದಂತೆ ಹಲವು ಭಾಗದಲ್ಲಿ ನೂರಾರು ಟ್ರಕ್ ಗಳು 14 ದಿನದಿಂದ ನಿಂತಿದ್ದು, ಇದೀಗ ಲಾರಿ ಚಾಲಕರಿಗೆ ಊಟಕ್ಕೂ ಹಣವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಇಂದು ಅಂಕೋಲದ ಬಾಳೆಗುಳಿ ಕ್ರಾಸ್ ನಲ್ಲಿ ಲಾರಿ ಚಾಲಕರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಲಾರಿ ಚಾಲಕರಿಗೆ ಇರುವ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟ ನಂತರ ಕಾರವಾರ-ಮಂಗಳೂರು ಹೆದ್ದಾರಿಯಲ್ಲಿ ವಾಹನಗಳು ತೆರಳಲು ಅವಕಾಶ ಕಲ್ಪಿಸಿಕೊಟ್ಟರು.
ಸದ್ಯ ರಾಷ್ಟ್ರೀಯ ಹೆದ್ದಾರಿ 63ರ ಅರೆಬೈಲು ಘಟ್ಟದಲ್ಲಿ ಇದೀಗ ಭಾರೀ ಗಾತ್ರದ ವಾಹನ ಹೊರತುಪಡಿಸಿ ಉಳಿದ ವಾಹನಗಳು ತೆರಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ಹೊನ್ನಾವರ ಭಾಗದಲ್ಲೂ ರಸ್ತೆಯನ್ನು ಸರಿಪಡಿಸಲಾಗುತಿದ್ದು, ನಾಳೆಯಿಂದ ಭಾರೀ ಗಾತ್ರದ ವಾಹನಗಳು ತೆರಳಲು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.
ಕಳೆದ ತಿಂಗಳು ಸುಮಾರು 500ಕ್ಕೂ ಹೆಚ್ಚು ಟ್ರಕ್ ಗಳು ಅಂಕೋಲದ ಬಾಳೆಗುಳಿ ಕ್ರಾಸ್ ನಲ್ಲಿಯೇ ಇರುವಂತೆ ಜಿಲ್ಲಾಡಳಿತ ಆದೇಶಿಸಿತ್ತು. ಇದಾದ ನಂತರ ಕೆಲವು ಟ್ರಕ್ ಗಳು ಅಂಕೋಲದಿಂದ ಹೊನ್ನಾವರ ಭಾಗ ಹಾಗೂ ಶಿರಸಿ ಭಾಗದ ಹೆದ್ದಾರಿ ಮೂಲಕ ಸಂಚಾರ ಪ್ರಾರಂಭ ಮಾಡಿದವು. ಆದರೆ ಹೊನ್ನಾವರ ಭಾಗದಲ್ಲಿ ಭಾರೀ ವಾಹನಗಳ ಸಂಚಾರದಿಂದ ಕೆಲವು ಕಡೆ ರಸ್ತೆಗಳು ಕುಸಿಯತೊಡಗಿದವು ಇದಲ್ಲದೇ ಶಿರಸಿ ಭಾಗಕ್ಕೆ ತೆರಳುವ ಘಟ್ಟ ಪ್ರದೇಶದಲ್ಲೂ ಟ್ರಕ್ ಗಳು ಜಾಮ್ ಆಗತೊಡಗಿದ್ದು, ಬೇರೆ ಭಾಗದಿಂದ ಕರಾವಳಿ ಭಾಗಕ್ಕೆ ಬರಬೇಕಾದ ಅಗತ್ಯ ವಸ್ತುಗಳು ಬಾರದೇ ಜನರು ಸಮಸ್ಯೆ ಅನುಭವಿಸುವಂತಾಗಿತ್ತು. ಈ ಕಾರಣದಿಂದ ಭಾರೀ ಗಾತ್ರದ ಟ್ರಕ್ ಗಳನ್ನು ಪೊಲೀಸ್ ಇಲಾಖೆ 14 ದಿನದಿಂದ ತಡೆದು ನಿಲ್ಲಿಸಿದೆ.
ಮುಂಬೈ: ರೈಲ್ವೆ ಹಳಿ ದಾಟುವ ವೇಳೆ ರೈಲಿಗೆ ಸಿಲುಕಿಕೊಳ್ಳುತ್ತಿದ್ದ ವೃದ್ಧನನ್ನು, ಚಾಲಕರು ಸಡನ್ ಬ್ರೇಕ್ ಹಾಕಿ ರಕ್ಷಿಸಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮುಂಬೈನ ಕಲ್ಯಾಣ ಪ್ರದೇಶದಲ್ಲಿರುವ ರೈಲ್ವೆ ನಿಲ್ದಾಣದ ಫ್ಲಾಟ್‍ಫಾರ್ಮ್ ನಂ.4ರಲ್ಲಿ ಮಧ್ಯಾಹ್ನ 12.45ಕ್ಕೆ ಈ ಘಟನೆ ನಡೆದಿದ್ದು, ಹರಿ ಶಂಕರ್(70) ಎಂಬವರು ರೈಲ್ವೆ ಹಳಿ ದಾಟುವ ವೇಳೆ ರೈಲಿಗೆ ಸಿಲುಕಿದ್ದಾರೆ. ಈ ವೇಳೆ ಚೀಫ್ ಪರ್ಮನೆಂಟ್ ವೇ ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್, ಲೊಕೊ ಪೈಲಟ್ ಎಸ್.ಕೆ ಪ್ರಧಾನ್ ಮತ್ತು ಸಹಾಯಕ ಲೊಕೊ ಪೈಲಟ್ ರವಿಶಂಕರ್‌ಗೆ ಕೂಗಿ ಹೇಳುವ ಮೂಲಕ ಎಚ್ಚರಿಸಿದ್ದಾರೆ. ಆಗ ಇಬ್ಬರು ಪೈಲಟ್‍ಗಳು ತಕ್ಷಣ ಬ್ರೇಕ್ ಹಾಕಿ ರೈಲಿನ ಕೆಳಗೆ ಸಿಲುಕಿಕೊಂಡಿದ್ದ ವೃದ್ಧನನ್ನು ಹೊರ ಎಳೆದಿದ್ದಾರೆ.
#WATCH | A senior citizen narrowly escaped death after a locomotive train in Mumbai’s Kalyan area applied emergency brakes to save the man as he was crossing the tracks. pic.twitter.com/RwXksT3TCM
ನಂತರ ರೈಲು ಬರುತ್ತಿರುವ ವೇಳೆ ರೈಲ್ವೆ ಹಳಿಯನ್ನು ದಾಟಬಾರದು ಎಂದು ವೃದ್ಧನಿಗೆ ಎಚ್ಚರಿಕೆ ನೀಡಿದ್ದಾರೆ. ವೃದ್ಧನ ಜೀವವನ್ನು ರಕ್ಷಿಸಿದ ಕಾರ್ಯವನ್ನು ಮೆಚ್ಚಿ ಕೇಂದ್ರ ರೈಲ್ವೆಯ ಜನರಲ್ ಮ್ಯಾನೇಜರ್ ಅಲೋಕ್ ಕನ್ಸಾಲ್ ಇಬ್ಬರು ಲೊಕೊ ಪೈಲಟ್‍ಗಳಿಗೆ ಹಾಗೂ ಸಿಪಿಡಬ್ಲೂಐಗೆ ತಲಾ 2,000ರೂ ನಗದನ್ನು ಬಹುಮಾನವಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಪತಿ ಕೊಂದ ಪತ್ನಿಯ ಬಂಧನ