Tag: Driverless Metro

  • ಡ್ರೈವರ್‌ಲೆಸ್ ಮೆಟ್ರೋದ ಫಸ್ಟ್ ಫೋಟೋ ರಿವೀಲ್

    ಡ್ರೈವರ್‌ಲೆಸ್ ಮೆಟ್ರೋದ ಫಸ್ಟ್ ಫೋಟೋ ರಿವೀಲ್

    ಬೆಂಗಳೂರು: ನಮ್ಮ ಮೆಟ್ರೋ ಯೆಲ್ಲೋ ಮಾರ್ಗದ (Namma Metro Yellow Line) ಮೊದಲ ಡ್ರೈವರ್ ಲೆಸ್ ಮೆಟ್ರೋದ ಮೊದಲ ಫೋಟೋ ರಿವೀಲ್‌ ಆಗಿದೆ.

    ಹೆಬ್ಬಗೋಡಿ ಡಿಪೋದಲ್ಲಿರುವ ಮೆಟ್ರೋದ ಮೊದಲ ಫೋಟೋವನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ದ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.

    ಚೀನಾ ತಯಾರಿಸಿರುವ ಈ ಮೆಟ್ರೋದ ಬೋಗಿಗಳನ್ನು ಫೆಬ್ರವರಿ 6 ರಂದು ಸಮುದ್ರ ಮಾರ್ಗವಾಗಿ ಚೆನ್ನೈಗೆ ಬಂದರು ಮೂಲಕ ಲಾರಿಗಳಲ್ಲಿ ಬೆಂಗಳೂರಿಗೆ ತರಲಾಗಿತ್ತು. ಸದ್ಯ ರಾಜ್ಯದ ಮೊದಲ ಡ್ರೈವರ್ ಲೆಸ್‌ ಮೆಟ್ರೋ ರೈಲು ಸಂಚಾರಕ್ಕೆ ಸಜ್ಜಾಗಿದೆ. ಇದನ್ನೂ ಓದಿ: ಕಿಮ್‌ ಜಾಂಗ್‌ ಉನ್‌ಗೆ ವಿಶೇಷ ಕಾರು ಗಿಫ್ಟ್‌ ಕೊಟ್ಟ ರಷ್ಯಾ ಅಧ್ಯಕ್ಷ!

    ಆರ್ ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಈ ಚಾಲಕ ರಹಿತ ಮೆಟ್ರೋ ಓಡಾಡಲಿದ್ದು, ಚೀನಾದಿಂದ ಕೋಚ್ ತರಿಸಲಾಗಿದೆ. ಇನ್ನು ಮೂರು- ನಾಲ್ಕು ತಿಂಗಳ ಕಾಲ ಟೆಸ್ಟಿಂಗ್ ಪ್ರಕ್ರಿಯೆ ನಡೆಯಬೇಕಾಗಿದೆ. ಟ್ರ್ಯಾಕ್​​ನಲ್ಲಿ ಸುಮಾರು 15 ಮಾದರಿ ಪರೀಕ್ಷೆಗಳು ನಡೆಯಬೇಕಿದೆ. ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರು, ರೈಲ್ವೆ ಸುರಕ್ಷತೆ ಮತ್ತು ರೈಲ್ವೆ ಮಂಡಳಿಯಿಂದ ಅನುಮೋದನೆಯ ಬಳಿಕ ಹಳದಿ ಮಾರ್ಗದಲ್ಲಿ ಕಮಾಲ್ ಸೃಷ್ಟಿಸಲಿದೆ.

    ಮುಂದಿನ ದಿನಗಳಲ್ಲಿ ಕಾಳೇನ ಅಗ್ರಹಾರದಿಂದ ನಾಗವಾರ ಮಾರ್ಗ, ಏರ್‌ಪೋರ್ಟ್‌ ಮಾರ್ಗದಲ್ಲೂ ಡ್ರೈವರ್ ಲೆಸ್‌ ಮೆಟ್ರೋ ಓಡಾಟ ನಡೆಸಲು ಸಕಲ ತಯಾರಿ ನಡೆಸಲಾಗಿದೆ. ಆರಂಭಿಕವಾಗಿ ಹಳದಿ ಮಾರ್ಗದಲ್ಲಿ ಪ್ರಾರಂಭ ಮಾಡಿ ನೀಲಿ ಮಾರ್ಗಕ್ಕೆ ವಿಸ್ತರಣೆ ಬಳಿಕ ನೇರಳೆ, ಹಸಿರು ಮಾರ್ಗಕ್ಕೂ ಈ ವ್ಯವಸ್ಥೆ ಅಳವಡಿಸಲು ಚಿಂತನೆಯನ್ನು BMRCL ಅಧಿಕಾರಿಗಳು ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  • ಬೆಂಗಳೂರಿಗೆ ಬಂತು ಡ್ರೈವರ್‌ಲೆಸ್ ಮೆಟ್ರೋ

    ಬೆಂಗಳೂರಿಗೆ ಬಂತು ಡ್ರೈವರ್‌ಲೆಸ್ ಮೆಟ್ರೋ

    ಬೆಂಗಳೂರು: ಬೆಂಗಳೂರಿಗರು ಕಾತುರದಿಂದ ಕಾಯುತ್ತಿದ್ದ ಡ್ರೈವರ್ ರಹಿತ ಹಳದಿ ಮೆಟ್ರೋ (Driverless Metro) ಕೊನೆಗೂ ಬೆಂಗಳೂರಿನ (Bengaluru) ಹೆಬ್ಬಗೋಡಿ (Hebbagodi) ಡಿಪೋಗೆ ತಲುಪಿದೆ.

    ಇಂದು (ಬುಧವಾರ) ಬೆಳಗ್ಗಿನ ಜಾವ 3:30ರ ಸುಮಾರಿಗೆ 6 ರೈಲಿನ ಕೋಚ್‌ಗಳು ಸುರಕ್ಷಿತವಾಗಿ ಹೆಬ್ಬಗೋಡಿ ಡಿಪೋಗೆ ತಲುಪಿರುವುದಾಗಿ ‘ನಮ್ಮ ಮೆಟ್ರೋ’ ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತವಾಗಿ ತಿಳಿಸಿದೆ. ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಮಾರ್ಗಕ್ಕಾಗಿ ಚೀನಾದಿಂದ ಈ ರೈಲಿನ ಬೋಗಿಗಳನ್ನು ತರಿಸಲಾಗಿದೆ. ಇದನ್ನೂ ಓದಿ: 89 ವರ್ಷ ವಯಸ್ಸಿನ ಅಜ್ಜನಿಗೆ ಡಾಕ್ಟರೇಟ್

    ಟ್ರ‍್ಯಾಕ್‌ನಲ್ಲಿ ಚಲಿಸುವ ಮೊದಲು ಕೆಲವೊಂದು ಪರೀಕ್ಷೆಗಳನ್ನು ನಡೆಸಬೇಕಿದೆ. ಇದಾದ ಬಳಿಕ ಟ್ರ‍್ಯಾಕ್‌ನಲ್ಲಿ 15 ಪರೀಕ್ಷೆಗಳನ್ನು ಮಾಡಬೇಕಿದೆ. ನಂತರ ಸಂಶೋಧನಾ ವಿನ್ಯಾಸಗಳು ಮತ್ತು ಗುಣಮಟ್ಟ ಸಂಸ್ಥೆ, ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರು, ಕಮಿಷನರ್ ಆಫ್ ಮೆಟ್ರೋ ರೈಲ್ವೆ ಸುರಕ್ಷತೆ ಮತ್ತು ರೈಲ್ವೆ ಮಂಡಳಿಯಿಂದ ಅನುಮೋದನೆ ಅಗತ್ಯವಿದೆ. ಇದನ್ನೂ ಓದಿ: ಮಾಜಿ ಸಚಿವ ಗೋಪಾಲಯ್ಯಗೆ ಕೊಲೆ ಬೆದರಿಕೆ – ಮಾಜಿ ಕಾರ್ಪೊರೇಟರ್ ಪದ್ಮರಾಜ್ ವಿರುದ್ಧ ಎಫ್‌ಐಆರ್

    ನಾಲ್ಕು ತಿಂಗಳ ಕಾಲ 37 ಪರೀಕ್ಷೆಗಳು ನಡೆಯಲಿದ್ದು,  ಒಟ್ಟು 45 ದಿನಗಳವರೆಗೆ ಸಿಗ್ನಲಿಂಗ್ ಪರೀಕ್ಷೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ. ಹಳದಿ ಮಾರ್ಗ ಪ್ರಮುಖ ಮೆಟ್ರೋ ಕಾರಿಡಾರ್ ಆಗಿದ್ದು, ದಕ್ಷಿಣ ಬೆಂಗಳೂರನ್ನು ಎಲೆಕ್ಟ್ರಾನಿಕ್ ಸಿಟಿಯೊಂದಿಗೆ ಸಂಪರ್ಕಿಸುತ್ತದೆ. ಇದನ್ನೂ ಓದಿ: ಮಗನನ್ನು ಕೊಂದ ಸುಚನಾ ಸೇಠ್‌ಗೆ ಯಾವುದೇ ಮಾನಸಿಕ ಖಿನ್ನತೆ ಇಲ್ಲ

  • ಚೆನ್ನೈ ತಲುಪಿದ ಚಾಲಕ ರಹಿತ ಹಳದಿ ಮೆಟ್ರೋ- ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಬೆಂಗಳೂರಿಗೆ ರವಾನೆ

    ಚೆನ್ನೈ ತಲುಪಿದ ಚಾಲಕ ರಹಿತ ಹಳದಿ ಮೆಟ್ರೋ- ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಬೆಂಗಳೂರಿಗೆ ರವಾನೆ

    ಚೆನ್ನೈ: ಬಹುನಿರೀಕ್ಷಿತ ಚಾಲಕ ರಹಿತ ಹಳದಿ ಮೆಟ್ರೋ ರೈಲು (Driverless Yellow Metro Train) ಚೀನಾದಿಂದ (China) ಹೊರಟು ಮಂಗಳವಾರ ಚೆನ್ನೈ ಬಂದರು (Chennai Port) ತಲುಪಿದೆ. ಮಂಗಳವಾರ ಬೆಳಗ್ಗೆ ಬೋಗಿಗಳು ಚೆನ್ನೈ ಬಂದರಿಗೆ ಆಗಮಿಸಿದ್ದು, ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಮಾರ್ಗಕ್ಕಾಗಿ ಈ ಬೋಗಿಗಳನ್ನು ಚೀನಾದಿಂದ ತರಿಸಲಾಗಿದೆ.

    ಚೆನ್ನೈ ಬಂದರಿನಲ್ಲಿ ಕಾರ್ಗೋ ಶಿಪ್‌ನಿಂದ (Cargo Ship) ಬೋಗಿಗಳನ್ನು ಅನ್‌ಲೋಡ್ ಮಾಡಲಾಗಿದೆ. ಇದಾದ ಬಳಿಕ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ರೈಲು ಆಗಮಿಸಲಿದೆ. ಚೀನಾದಿಂದ ರವಾನೆಯಾದ ಮೊದಲ ಚಾಲಕ ರಹಿತ ರೈಲು ಚೆನ್ನೈ ಬಂದರಿಗೆ ಆಗಮಿಸಿರುವ ಕುರಿತು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ (BMRCL) ಖಚಿತಪಡಿಸಿದೆ. ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಈ ಬೋಗಿಗಳನ್ನು ರಸ್ತೆ ಮೂಲಕ ಬೆಂಗಳೂರಿಗೆ (Bengaluru) ಸಾಗಿಸಲಾಗುತ್ತದೆ. ಕಸ್ಟಮ್ ಕ್ಲಿಯರೆನ್ಸ್ ಸುಮಾರು 5 ದಿನಗಳನ್ನು ತೆಗೆದುಕೊಳ್ಳಬಹುದು. ಫೆಬ್ರವರಿ 18ರ ಒಳಗೆ ರೈಲು ಬೆಂಗಳೂರಿಗೆ ತಲುಪುವ ಸಾಧ್ಯತೆಯಿದೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವ್ಹಾಣ್ ತಿಳಿಸಿದ್ದಾರೆ. ಇದನ್ನೂ ಓದಿ: ರಾಜಕೀಯ ಸ್ವಾರ್ಥಕ್ಕಾಗಿ ದೇಶ ಒಡೆಯುವ ಮಾತು, ರಾಷ್ಟ್ರವೆಂದರೆ ಕೇವಲ ಒಂದು ತುಂಡು ಭೂಮಿ ಅಲ್ಲ: ಡಿಕೆ ಸುರೇಶ್‌ ಹೇಳಿಕೆ ವಿರುದ್ಧ ಮೋದಿ ಕಿಡಿ

    ರಾತ್ರಿಯ ವೇಳೆಗೆ ಮಾತ್ರ ಈ ಬೋಗಿಗಳನ್ನು ರಸ್ತೆ ಮುಖಾಂತರ ಸಾಗಿಸಬಹುದು. ಹೆಬ್ಬಗೋಡಿಗೆ ತಲುಪಿದ ಬಳಿಕ ಟ್ರ್ಯಾಕ್‌ನಲ್ಲಿ ಚಲಿಸುವ ಮೊದಲು ಕೆಲವೊಂದು ಪರೀಕ್ಷೆಗಳನ್ನು ನಡೆಸಬೇಕಿದೆ. ಇದಾದ ಬಳಿಕ ಟ್ರ್ಯಾಕ್‌ನಲ್ಲಿ 15 ಪರೀಕ್ಷೆಗಳನ್ನು ಮಾಡಬೇಕಿದೆ. ನಂತರ ಸಂಶೋಧನಾ ವಿನ್ಯಾಸಗಳು ಮತ್ತು ಗುಣಮಟ್ಟ ಸಂಸ್ಥೆ, ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರು, ಕಮಿಷನರ್ ಆಫ್ ಮೆಟ್ರೋ ರೈಲ್ವೆ ಸುರಕ್ಷತೆ ಮತ್ತು ರೈಲ್ವೆ ಮಂಡಳಿಯಿಂದ ಅನುಮೋದನೆ ಅಗತ್ಯವಿದೆ. ಇದನ್ನೂ ಓದಿ: ಕಾಂಗ್ರೆಸ್‌ 40 ಸ್ಥಾನಗಳನ್ನಾದರೂ ಉಳಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ: ಮೋದಿ ವ್ಯಂಗ್ಯ

    ನಾಲ್ಕು ತಿಂಗಳ ಕಾಲ 37 ಪರೀಕ್ಷೆಗಳು ನಡೆಯಲಿದ್ದು, ಒಟ್ಟು 45 ದಿನಗಳವರೆಗೆ ಸಿಗ್ನಲಿಂಗ್ ಪರೀಕ್ಷೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ. ಹಳದಿ ಮಾರ್ಗ ಪ್ರಮುಖ ಮೆಟ್ರೋ ಕಾರಿಡಾರ್ ಆಗಿದ್ದು, ದಕ್ಷಿಣ ಬೆಂಗಳೂರನ್ನು ಎಲೆಕ್ಟ್ರಾನಿಕ್ ಸಿಟಿಯೊಂದಿಗೆ ಸಂಪರ್ಕಿಸುತ್ತದೆ. ಇದನ್ನೂ ಓದಿ:  ಅಯೋಧ್ಯೆಯಲ್ಲಿ ಹೊಸ ಮಸೀದಿ – ಮೆಕ್ಕಾದಿಂದ ಬಂದಿದೆ ಪವಿತ್ರ ಇಟ್ಟಿಗೆ

  • ಜನವರಿ 27ರಿಂದ ಚಾಲಕ ರಹಿತ ಮೆಟ್ರೋ ಆರಂಭ

    ಜನವರಿ 27ರಿಂದ ಚಾಲಕ ರಹಿತ ಮೆಟ್ರೋ ಆರಂಭ

    ಮುಂಬೈ: ಚಾಲಕ ರಹಿತ ಮೆಟ್ರೋ ಸಂಚಾರವನ್ನು ಜನವರಿ 27 ರಿಂದ ಮೊದಲ ಬಾರಿಗೆ ಮುಂಬೈನಲ್ಲಿ ಆರಂಭಿಸಲಾಗುತ್ತಿದೆ ಎಂದು ಅಲ್ಲಿನ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಘೋಷಿಸುವ ಮೂಲಕ ಮುಂಬೈ ಜನರಿಗೆ ಸಿಹಿ ಸುದ್ದಿ ನೀಡಿದ್ದಾರೆ.

    ಸ್ವಯಂ ಚಾಲಿತ ಮೆಟ್ರೋ ಟ್ರೈನ್ ಕಾರ್ಯಚರಣೆ ಪರೀಕ್ಷೆ ನಂತರ ಜನವರಿ 27ರಂದು ಮೊದಲ ಚಾರ್ಕೋಪ್ ಮೆಟ್ರೋ ಕಾರ್ಶೆಡ್‍ಗೆ ತಲುಪಲಿದೆ. ಮತ್ತು ಇನ್ನೂ ಎರಡು ಮೆಟ್ರೋ ಟ್ರೈನ್ ಗಳ ಮಾರ್ಗಗಳನ್ನು ಯೋಜಿಸಿ ಈ ವರ್ಷದ ಮೇ ತಿಂಗಳಿನಿಂದ ಆರಂಭಿಸಲಾಗುತ್ತದೆ ಎಂದು ಹೇಳಿದರು.

    ಚಾಲಕ ರಹಿತ ಮೆಟ್ರೋ ಟ್ರೈನ್ ಸ್ವಯಂ ಚಲಿಸುವುದರಿಂದ ಮೊದಲ 6 ತಿಂಗಳವರೆಗೂ ಜನರಿಗೆ ಇದು ಸುರಕ್ಷಿತವಲ್ಲ ಎಂದು ಆತಂಕಗೊಳಿಸಬಹುದು. ಆದರೆ ಟ್ರೈನ್ ನನ್ನು ಮೋಟಾರು ಚಾಲಕ ನಿರ್ವಹಿಸುತ್ತಿರುತ್ತಾನೆ. ಅಲ್ಲದೆ ಟ್ರೈನ್ ಸರಿಸುಮಾರು 80 ಕಿಮೀ ವೇಗದಲ್ಲಿ ಮಾತ್ರ ಚಲಿಸುತ್ತದೆ. ಜೊತೆಗೆ ಚಾಲಕ ರಹಿತ ಮೆಟ್ರೋನ ಒಂದು ಕೋಚ್ ನಲ್ಲಿ 50 ಜನ ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟಾರೆ ಟ್ರೈನ್ ನಲ್ಲಿ ಸುಮಾರು 2,280 ಮಂದಿ ಪ್ರಯಾಣಿಸಬಹುದು ಎಂದರು.

    ಈ ನೂತನ ಮೆಟ್ರೋ 2ಎ ಟ್ರೈನ್ ದಹಿಸಾರ್ ನಿಂದ ಡಿಎನ್ ನಗರಕ್ಕೆ ಮತ್ತು ಮೆಟ್ರೋ7 ದಹಿಸಾರ್ ನಿಂದ ಅಧೇರಿ ಪೂರ್ವಕ್ಕೆ ಚಲಿಸುತ್ತದೆ. 7 ವರ್ಷಗಳ ನಂತರ ವರ್ಸೋವಾ-ಅಂಧೇರಿ-ಘಾಟ್ಕೋಪರ್‍ವರೆಗೆ 11 ಕಿಮೀ ವರೆಗೂ ಮೊದಲ ಬಾರಿಗೆ ದೇಶದ ವಾಣಿಜ್ಯ ಬಂಡಾಯವು ಮೆಟ್ರೋ ರೈಲನ್ನು ಆರಂಭಿಸಿದೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಂಬೈ ಮೆಟ್ರೋ ಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಂಎಂಆರ್‍ಡಿಎ) ಅಂತಿಮ ಹಂತದಲ್ಲಿದ್ದು, ಮೆಟ್ರೋ ಮಾರ್ಗಗಳು ಮತ್ತು ಮೆಟ್ರೋ ನಿಲ್ದಾಣಗಳ ನಿರ್ಮಾಣ ಕುರಿತಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಮಾರ್ಗದರ್ಶನದಲ್ಲಿ ಮತ್ತಷ್ಟು ಅಭಿವೃದ್ದಿಗೊಳಿಸಲಾಗುವುದು ಎಂದು ತಿಳಿಸಿದರು