Tag: Drips

  • ಪ್ರಸಾದ ಸೇವಿಸಿ ಅಸ್ವಸ್ಥಗೊಂಡ 300 ಮಂದಿಗೆ ರಸ್ತೆಯಲ್ಲೇ ಡ್ರಿಪ್ಸ್!

    ಪ್ರಸಾದ ಸೇವಿಸಿ ಅಸ್ವಸ್ಥಗೊಂಡ 300 ಮಂದಿಗೆ ರಸ್ತೆಯಲ್ಲೇ ಡ್ರಿಪ್ಸ್!

    ಮುಂಬೈ: ಪ್ರಸಾದ ಸೇವಿಸಿ ಅಸ್ವಸ್ಥಗೊಂಡ 300 ಮಂದಿಯನ್ನು ರಸ್ತೆಯಲ್ಲೇ ಸಾಲಾಗಿ ಮಲಗಿಸಿ ಡ್ರಿಪ್ಸ್‌ ಹಾಕಿರುವ ಘಟನೆ ಮಹಾರಾಷ್ಟ್ರದಲ್ಲಿ (Maharastra) ನಡೆದಿದೆ.

    ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಲೋನಾರ್‌ನ ಸೋಮಥಾನ ಗ್ರಾಮದಲ್ಲಿ ಒಂದು ವಾರದಿಂದ ʼಹರಿಣಂ ಸಪ್ತಾಹʼ ಎಂಬ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿತ್ತು. ಅಂತೆಯೇ ಕಾರ್ಯಕ್ರಮದ ಕೊನೆಯ ದಿನವಾದ ಮಂಗಳವಾರ ರಾತ್ರಿ ಪ್ರಸಾದ ವಿತರಣೆ ಮಾಡಲಾಗಿತ್ತು. ಹೀಗೆ ಪ್ರಸಾದ ಸೇವಿಸಿದ ಬಳಿಕ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 300 ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡರು.

    ಸೋಮಠಾಣಾ ಮತ್ತು ಖಾಪರಖೇಡ್ ಗ್ರಾಮಗಳ ಭಕ್ತರು ರಾತ್ರಿ 10 ಗಂಟೆಗೆ ದೇವಸ್ಥಾನಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸಿದರು. ಪ್ರಸಾದವನ್ನು ಸೇವಿಸಿದ ನಂತರ ಅವರು ಹೊಟ್ಟೆ ನೋವು, ವಾಕರಿಕೆ ಮತ್ತು ವಾಂತಿ ಆರಂಭವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ರಸ್ತೆಯಲ್ಲೇ ಚಿಕಿತ್ಸೆ ಯಾಕೆ..?: ಅಸ್ವಸ್ಥರಾದವರನ್ನು ಬೀಬಿ ಗ್ರಾಮದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಬೆಡ್‌ಗಳ ಕೊರತೆಯಿಂದಾಗಿ ಬಹುತೇಕ ರೋಗಿಗಳು ಆಸ್ಪತ್ರೆಯ ಹೊರಭಾಗದ ರಸ್ತೆಯಲ್ಲೇ ಚಿಕಿತ್ಸೆ ಪಡೆಯಬೇಕಾಯಿತು. ಮರಗಳಿಗೆ ಕೊಕ್ಕೆ ಹಾಕಿದ್ದ ಹಗ್ಗಗಳ ಮೇಲೆ ಡ್ರಿಪ್ಸ್‌ ಬಾಟ್ಲಿಗಳನ್ನು ಅಳವಡಿಸಲಾಗಿತ್ತು. ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

    ಈ ಸಂಬಂಧ ಸ್ಥಳೀಯರು ಪ್ರತಿಕ್ರಿಯಿಸಿ, ಸೋಮಠಾಣಾದಲ್ಲಿ ಧಾರ್ಮಿಕ ಕಾರ್ಯಕ್ರಮದ ಆರನೇ ದಿನವಾಗಿತ್ತು. 400 ರಿಂದ 500 ಮಂದಿಗೆ ಹನ್ನೊಂದನೇ ದಿನಂದು ಪ್ರಸಾದ ವಿತರಿಸಲಾಯಿತು. ಆ ಬಳಿಕ ಅನೇಕರು ಅಸ್ವಸ್ಥಗೊಂಡರು. ಸದ್ಯ ಅವರೆಲ್ಲ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದರ್ಶನ್ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಕೊಟ್ಟ ದಿನಸಿ ಸಾಮಾಗ್ರಿ ಪೌರಕಾರ್ಮಿಕರಿಗೆ ವಿತರಣೆ

    ಇತ್ತ ಎಲ್ಲ ರೋಗಿಗಳ ಆರೋಗ್ಯ ಸ್ಥಿರವಾಗಿದ್ದು, ಬಹುತೇಕರು ಇಂದು ಡಿಸ್ಚಾರ್ಜ್ ಆಗಿದ್ದಾರೆ. ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದರೆ ಅಂಬುಲೆನ್ಸ್ ಮತ್ತು ಇತರ ಅಗತ್ಯ ಉಪಕರಣಗಳೊಂದಿಗೆ ವೈದ್ಯರ ತಂಡವನ್ನು ನಿಯೋಜಿಸಲಾಗಿದೆ. ಪ್ರಸಾದದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಸಂಬಂಧ ತನಿಖೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಪಾಟೀಲ್ ತಿಳಿಸಿದ್ದಾರೆ.

  • ಡ್ರಿಪ್ಸ್ ಹಾಕಿದ ಐದೇ ನಿಮಿಷಕ್ಕೆ ಗರ್ಭಿಣಿ ಸಾವು

    ಡ್ರಿಪ್ಸ್ ಹಾಕಿದ ಐದೇ ನಿಮಿಷಕ್ಕೆ ಗರ್ಭಿಣಿ ಸಾವು

    ಬೆಂಗಳೂರು: ಡ್ರಿಪ್ಸ್ ಹಾಕಿದ ಐದೇ ನಿಮಿಷಕ್ಕೆ ಗರ್ಭಿಣಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಅರ್ಪಿತ(24) ಮೃತಪಟ್ಟ ಗರ್ಭಿಣಿ. ಅರ್ಪಿತ ನಗರದ ಪೀಣ್ಯದ ಇಎಸ್‍ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೋಗಿದ್ದಾಗ ವೈದ್ಯರು ಅವರಿಗೆ ಡ್ರಿಪ್ಸ್ ಹಾಕಿದ್ದಾರೆ. ಡ್ರಿಪ್ಸ್ ಹಾಕಿದ ಐದೇ ನಿಮಿಷದಲ್ಲಿ ಉಸಿರಾಟದ ತೊಂದರೆಯಿಂದ ಅರ್ಪಿತ ಮೃತಪಟ್ಟಿದ್ದಾರೆ.

    ಅರ್ಪಿತಗೆ ಡ್ರಿಪ್ಸ್ ಹಾಕುವ ವೇಳೆ ಯಾವುದೇ ಹಿರಿಯ ವೈದ್ಯರು ಇರಲಿಲ್ಲ ಹಾಗೂ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಟ್ರೈನಿ ಡಾಕ್ಟರ್ ಗಳ ಎಡವಟ್ಟಿನಿಂದ ಅರ್ಪಿತ ಮೃತಪಟ್ಟಿದ್ದಾಳೆ ಎಂದು ಆರೋಪಿಸಿ ಕುಟುಂಬಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಈ ಬಗ್ಗೆ ಆರ್‍ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 700 ವರ್ಷದ ಆಲದ ಮರಕ್ಕೆ ಡ್ರಿಪ್ಸ್ ಹಾಕಿ ಚಿಕಿತ್ಸೆ!

    700 ವರ್ಷದ ಆಲದ ಮರಕ್ಕೆ ಡ್ರಿಪ್ಸ್ ಹಾಕಿ ಚಿಕಿತ್ಸೆ!

    ನವದೆಹಲಿ: 700 ವರ್ಷ ಹಳೆಯ ಆಲದ ಮರವನ್ನು ರಕ್ಷಿಸಲು ತೆಲಂಗಾಣದ ಅಧಿಕಾರಿಗಳು ಡ್ರಿಪ್ಸ್ ಹಾಕಿ ಚಿಕಿತ್ಸೆ ನೀಡುತ್ತಿದ್ದಾರೆ.

    ಮರದ ಕೆಲವು ಕೊಂಬೆಗಳಿಗೆ ಗೆದ್ದಲು ಹಿಡಿದಿದೆ. ಮರವನ್ನು ಗೆದ್ದಲಿನಿಂದ ಉಳಿಸಲು ಅಧಿಕಾರಿಗಳು ಕ್ರಿಮಿನಾಶಕವನ್ನು ಡ್ರಿಪ್ ಮೂಲಕ ಕೊಂಬೆಗಳಿಗೆ ನೀಡುತ್ತಿದ್ದಾರೆ.

    ಮಹಬೂಬ್ ನಗರದಲ್ಲಿರುವ ಪಿಳ್ಳಲಮರಿ ಅಥವಾ ಪೀರ್ಲಾ ಮರ್ರಿ ಎಂದು ಕರೆಯಲ್ಪಡುವ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಈ ಆಲದ ಮರ ಮೂರು ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಪ್ರಪಂಚದಲ್ಲೇ ಎರಡನೇ ದೊಡ್ಡ ಆಲದ ಮರ ಇದಾಗಿದೆ.

    ಕಳೆದ ಡಿಸೆಂಬರ್ ನಲ್ಲಿ ಗೆದ್ದಲು ಹುಳುಗಳ ಕಾಟದಿಂದ ಒಂದು ಕೊಂಬೆ ಮುರಿದು ಬಿದ್ದಿತ್ತು. ಇದಾದ ನಂತರ ಸಾರ್ವಜನಿಕ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗೆದ್ದಲು ಹುಳಗಳಿಂದ ಮರವನ್ನು ರಕ್ಷಿಸಲು ಪ್ರತಿ ಎರಡು ಮೀಟರ್ ಗೆ ರಾಸಾಯನಿಕ ಕ್ಲೋರಿಪಿರಿಫೊಸ್ ಕ್ರಿಮಿನಾಶಕವನ್ನು ಡ್ರಿಪ್ ಮೂಲಕ ಮರಕ್ಕೆ ಕೊಡಲಾಗುತ್ತಿದೆ. ರೋಗಿಗಳಿಗೆ ಡ್ರಿಪ್ ಹಾಕಿ ವೈದ್ಯರು ಗಮನಿಸುವಂತೆ ಆಲದ ಮರವನ್ನು ಗಮನಿಸಲಾಗುತ್ತಿದೆ ಎಂದು ತಿಳಿಸಿದರು.

    ಮೊದಲಿಗೆ ಮರದ ಕಾಂಡಕ್ಕೆ ತೂತುಗಳನ್ನು ಮಾಡಿ ನೇರವಾಗಿ ಕ್ರಿಮಿನಾಶಕವನ್ನು ಹಾಕಿದೆವು. ಆದರೆ ಈ ಪ್ರಯತ್ನ ಫಲ ಕೊಡದ ಹಿನ್ನೆಲೆಯಲ್ಲಿ ಈಗ ಕೊಂಬೆಗಳಿಗೆ ಕ್ರಿಮಿನಾಶಕದ ಡ್ರಿಪ್ಸ್ ಹಾಕಿಸಲಾಗುತ್ತಿದೆ ಎಂದು ತಿಳಿಸಿದರು.

    ರಾಸಾಯನಿಕ ಇರುವ ನೀರನ್ನು ಮರಕ್ಕೆ ಕೊಡಲಾಗುತ್ತಿದೆ. ಗೆದ್ದಲು ಹಿಡಿದು ಬೀಳುವಂತೆ ಆಗಿರುವ ದೊಡ್ಡ ಕೊಂಬೆಗಳಿಗೆ ಬೀಳದಂತೆ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾ ಅರಣ್ಯಾಧಿಕಾರಿ ಚುಕ್ಕಾ ಗಂಗಾ ರೆಡ್ಡಿ ಅವರು ತಿಳಿಸಿದ್ದಾರೆ.

    ಆಲದ ಮರದ ಆರೋಗ್ಯ ಈಗ ಸ್ಥಿರವಾಗಿದೆ. ಉನ್ನತ ಅಧಿಕಾರಿಗಳ ಜೊತೆ ಮಾತನಾಡಿ ಸ್ವಲ್ಪ ದಿನಗಳ ನಂತರ ಸಾರ್ವಜನಿಕ ವೀಕ್ಷಣೆ ಅನುವು ಮಾಡಿಕೊಡಲಾಗುತ್ತದೆ. ಆದರೆ ಈ ಸಮಯ ಪ್ರವಾಸಿಗರು ಸ್ವಲ್ಪ ದೂರದಿಂದ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.

    ಜಿಲ್ಲಾಧಿಕಾರಿ ರೊನಾಲ್ಡ್ ರೋಸ್ ಅವರೇ ಖುದ್ದು ಮರದ ಆರೋಗ್ಯವನ್ನು ಗಮನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

    https://www.youtube.com/watch?v=M681UNaVAO4