Tag: drinker

  • ಕುಡಿದ ಮತ್ತಿನಲ್ಲಿ ಕಾರುಗಳ ಗ್ಲಾಸ್ ಒಡೆದು ಸೈಕೋ ಪಾತ್‍ನಂತೆ ವರ್ತಿಸಿದ ಯುವಕ

    ಕುಡಿದ ಮತ್ತಿನಲ್ಲಿ ಕಾರುಗಳ ಗ್ಲಾಸ್ ಒಡೆದು ಸೈಕೋ ಪಾತ್‍ನಂತೆ ವರ್ತಿಸಿದ ಯುವಕ

    ಬೆಂಗಳೂರು: ಕುಡಿದ ಮತ್ತಿನಲ್ಲಿ ಯುವಕನೋರ್ವ ಕಾರುಗಳ ಗ್ಲಾಸ್ ಒಡೆದು ಸೈಕೋ ಪಾತ್ ರೀತಿಯಲ್ಲಿ ವರ್ತಿಸಿರುವ ಘಟನೆ ಸಿಲಿಕಾನ್ ಸಿಟಿಯ ಕಂಗೇರಿಯಲ್ಲಿ ನಡೆದಿದೆ.

    ಈ ಘಟನೆ ನಿನ್ನೆ ರಾತ್ರಿ ನಡೆದಿದ್ದು, ಸೈಕೋ ರೀತಿಯಲ್ಲಿ ವರ್ತಿಸಿದ ಯುವಕನನ್ನು ಅಶೋಕ್ ಎಂದು ಗುರುತಿಸಲಾಗಿದೆ. ಕಂಠಪೂರ್ತಿ ಕುಡಿದು ಯುವಕನೋರ್ವ ನಡುರಸ್ತೆಯಲ್ಲೆ ಹುಚ್ಚಾಟವಾಡಿದ್ದಾನೆ. ರಾಡ್ ಹಿಡಿದು ಸಿಕ್ಕ ಸಿಕ್ಕ ಕಾರ್ ಗ್ಲಾಸ್ ಒಡೆದು ಹಾಕಿದ್ದಾನೆ. ಬರೋಬ್ಬರಿ 8ಕ್ಕೂ ಹೆಚ್ಚು ಕಾರ್ ಹಾಗೂ ವಾಹನಗಳ ಗ್ಲಾಸ್ ಒಡೆದು ಹಾಕಿದ್ದಾನೆ.

    ಇದಲ್ಲೆದೆ ಬಿಬಿಎಂಪಿ ವಾಹನದ ಗ್ಲಾಸ್ ಕೂಡ ಅಶೋಕ್ ರಾಡಿನಿಂದ ಒಡೆದು ಹಾಕಿದ್ದು, ಈ ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪೊಲೀಸರು ಆರೋಪಿ ಅಶೋಕನನ್ನು ಬಂಧಿಸಿದ್ದು, ಈತ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದಾನೆ ಎಂದು ತಿಳಿದು ಬಂದಿದೆ. ಯುವಕನ ಈ ಎಲ್ಲ ಹುಚ್ಚಾಟ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

  • ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ದಾಂಧಲೆ!

    ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ದಾಂಧಲೆ!

    ತುಮಕೂರು: ಕಂಠ ಪೂರ್ತಿ ಕುಡಿದ ಆಟೋ ಚಾಲಕನೋರ್ವ ಅರೆಬೆತ್ತಲಾಗಿ ನಡು ರಸ್ತೆಯಲ್ಲೇ ದಾಂಧಲೆ ನಡೆಸಿದ ಘಟನೆ ಜಿಲ್ಲೆಯ ತಿಪಟೂರು ಬಸ್ ನಿಲ್ದಾಣದ ಬಳಿ ನಡೆದಿದೆ.

    ಆಟೋ ಚಾಲಕ ಅಶೋಕ ಎಂಬಾತ ಅವಾಂತರ ಸೃಷ್ಟಿಸಿದ ಕುಡುಕ ಮಹಾಷಯ. ಮಂಗಳವಾರ ರಾತ್ರಿ ಕಂಠಪೂರ್ತಿ ಕುಡಿದ ಆಟೋ ಚಾಲಕ ಅರೆಬೆತ್ತಲಾಗಿ ನಡು ರಸ್ತೆಯಲ್ಲೇ ದಾಂಧಲೆ ನಡೆಸಿದ್ದಾನೆ. ನಡು ರಸ್ತೆಯಲ್ಲಿ ಬಸ್ ಸೇರಿದಂತೆ ವಾಹನಗಳನ್ನು ಅಡ್ಡಗಟ್ಟಿ ಕಲ್ಲು ತೂರಿದ್ದಾನೆ. ಪರಿಣಾಮ ಹಲವು ಬಸ್ ಗಳ ಗಾಜು ಪುಡಿಪುಡಿಯಾಗಿವೆ.

    ಅಶೋಕನ ರಂಪಾಟ ತಡೆಯಲು ಬಂದ ಸಾರ್ವಜನಿಕರ ಮೇಲೆಯೂ ದೊಣ್ಣೆ ಹಿಡಿದು ಹಲ್ಲೆ ನಡೆಸಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಆಟೋ ಚಾಲಕ ಎಣ್ಣೆ ಮತ್ತಿನಲ್ಲಿ ಪೊಲೀಸರ ವಾಹನವನ್ನೂ ಸಹ ಜಖಂಗೊಳಿಸಿದ್ದಾನೆ. ಸುಮಾರು ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಪೊಲೀಸರು ಕುಡುಕ ಆಟೋಚಾಲಕನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಘಟನೆ ಸಂಬಂಧ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಹಾಗೂ ಅರೆಬೆತ್ತಲಾಗಿ ಅವಾಂತರ ಸೃಷ್ಟಿಸಿದಕ್ಕೆ ಪೊಲೀಸರು ದೂರು ದಾಖಲಿಸಿಕೊಂಡು ಕುಡುಕನನ್ನು ಬಂಧಿಸಿದ್ದಾರೆ.

    https://www.youtube.com/watch?v=7fWPL8He_rs

  • ಲಾಕ್ ಮುರಿದು ಹತ್ತಿಕೊಳ್ಳುವಾಗ ಬುಲೆಟ್ ಪಲ್ಟಿ- ಪೊಲೀಸರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಕಳ್ಳರು!

    ಲಾಕ್ ಮುರಿದು ಹತ್ತಿಕೊಳ್ಳುವಾಗ ಬುಲೆಟ್ ಪಲ್ಟಿ- ಪೊಲೀಸರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಕಳ್ಳರು!

    ಬೆಂಗಳೂರು: ಕಳ್ಳರಿಬ್ಬರು ಕುಡಿದ ಮತ್ತಿನಲ್ಲಿ ಬುಲೆಟ್ ಬೈಕ್ ಕದಿಯಲು ಹೋಗಿ ತಾವಾಗಿಯೇ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ನಗರದ ಚಾಮರಾಜಪೇಟೆಯಲ್ಲಿ ನಡೆದಿದೆ.

    ಕುಡುಕರ ಕಷ್ಟಗಳು ಒಂದಲ್ಲ ಎರಡಲ್ಲ, ಕುಡಿದ ಮತ್ತಿನಲ್ಲಿ ಏನೇನೂ ಮಾಡುತ್ತಾರೆ ಎಂಬುದು ಸ್ವತಃ ಅವರಿಗೆ ತಿಳಿದಿರುವುದಿಲ್ಲ. ಅಂತೆಯೇ ಇಲ್ಲಿ ಇಬ್ಬರು ಕುಡುಕ ಮಹಾಶಯರು ಕೈಯಲ್ಲಿ ಕಾಸಿಲ್ಲ ಅಂತ ಕಳ್ಳತನಕ್ಕೆ ಹೋಗಿ ರೆಡ್ ಹ್ಯಾಂಡಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಾರೆ.

    ಮಂಗಳವಾರ ರಾತ್ರಿ ಚಾಮರಾಜಪೇಟೆಯ ರಾಕೇಶ್ ಎಂಬವರ ಮನೆ ಮುಂದೆ ನಿಂತಿದ್ದ ಬುಲೆಟ್ ಕದಿಯಲು ಕುಡುಕ ಕಳ್ಳರಿಬ್ಬರು ಯತ್ನಿಸಿ, ಬೈಕಿನ ಲಾಕ್ ಕೂಡ ಮುರಿದು ಹತ್ತಿಕೊಳ್ಳುವ ಭರದಲ್ಲಿ ಬೈಕನ್ನು ಬೀಳಿಸಿಕೊಂಡಿದ್ದಾರೆ. ಬೈಕನ್ನು ಎತ್ತಲು ಹರಸಾಹಸ ಪಡುತ್ತಿರುವಾಗ ಗಸ್ತಿನಲ್ಲಿದ್ದ ಪೊಲೀಸರಿಗೆ ಇಬ್ಬರೂ ಸಿಕ್ಕಿಬಿದ್ದಿದ್ದಾರೆ.

    ಮೊದಲೇ ಕುಡಿದ ಮತ್ತಿನಲ್ಲಿದ್ದ ಕಳ್ಳರಿಗೆ ಪೊಲೀಸರು ಬಂದ ಅರಿವಿಲ್ಲದೆ ಬೈಕ್ ಎತ್ತಿಕೊಳ್ಳುವ ಭರದಲ್ಲೇ ನಿರತರಾಗಿದ್ದರು. ಈ ವೇಳೆ ಪೊಲೀಸರು ಬಂದು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕಳ್ಳರ ಇಡೀ ದೃಶ್ಯಾವಳಿಗಳು ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ.