Tag: Drink & Drive

  • ಮದ್ಯ ಸೇವಿಸಿ ಕಾರು ಚಾಲನೆ – ಸರಣಿ ಅಪಘಾತದಲ್ಲಿ ಯುವಕ ಸಾವು

    ಮದ್ಯ ಸೇವಿಸಿ ಕಾರು ಚಾಲನೆ – ಸರಣಿ ಅಪಘಾತದಲ್ಲಿ ಯುವಕ ಸಾವು

    ಬೆಂಗಳೂರು: ಮದ್ಯ ಸೇವಿಸಿ ಕಾರು ಚಾಲನೆ ಮಾಡಿ ಸರಣಿ ಅಪಘಾತ ಮಾಡಿರುವ ಘಟನೆ ಸಿಲಿಕಾನ್ ಸಿಟಿಯ ರಿಚ್ಮಂಡ್ ವೃತ್ತದಲ್ಲಿ ಗುರುವಾರ ರಾತ್ರಿ ನಡೆದಿದೆ.

    ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ ಆರೋಪಿಯನ್ನು ರೋಹಿತ್ ಕೇಡಿಯಾ ಎಂದು ಗುರುತಿಸಲಾಗಿದೆ. ಈ ಸರಣಿ ಅಪಘಾತದಲ್ಲಿ ಇನ್ಶೂರೆನ್ಸ್ ಕಂಪನಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಕಿರಣ್ (23) ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮತ್ತೋರ್ವ ಕಾರು ಚಾಲಕ ಶ್ರೀಕಾಂತ್‍ಗೆ ಗಾಯವಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮಧ್ಯರಾತ್ರಿ ರೋಹಿತ್ ಕೇಡಿಯಾ ಕಂಠಪೂರ್ತಿ ಕುಡಿದು ಕಾರು ಓಡಿಸಿಕೊಂಡು ಬಂದಿದ್ದಾನೆ. ನಂತರ ರಿಚ್ಮಂಡ್ ವೃತ್ತದ ಸಿಗ್ನಲ್ ಅಲ್ಲಿ ನಿಂತಿದ್ದ ಕಿರಣ್ ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ ಕಾರು ನಿಯಂತ್ರಣಕ್ಕೆ ಸಿಗದೆ, ಮೊತ್ತೊಂದು ಕಾರಿಗೂ ಡಿಕ್ಕಿ ಆಗಿದೆ. ಅದರಲ್ಲಿದ್ದ ಡ್ರೈವರ್ ಶ್ರೀಕಾಂತ್‍ಗೆ ಗಂಭೀರವಾಗಿ ಗಾಯವಾಗಿದ್ದು, ಆತನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

    ಆರೋಪಿ ರೋಹಿತ್ ಕೇಡಿಯಾನನ್ನು ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಧೀಶರು ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೊಪ್ಪಿಸಿ ಆದೇಶ ನೀಡಿದ್ದಾರೆ. ಈ ಸಂಬಂಧ ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಮದ್ಯದ ಜೊತೆಗೆ ಡ್ರಗ್ಸ್ ತೆಗೆದುಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಆರೋಪಿಯ ರಕ್ತದ ಮಾದರಿ ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪೊಲೀಸರು ರವಾನೆ ಮಾಡಿದ್ದಾರೆ.

  • ಟ್ರಾಫಿಕ್ ಪೊಲೀಸರಿಗೂ ತಟ್ಟಿತು ಕೊರೋನಾ ವೈರಸ್ ಎಫೆಕ್ಟ್

    ಟ್ರಾಫಿಕ್ ಪೊಲೀಸರಿಗೂ ತಟ್ಟಿತು ಕೊರೋನಾ ವೈರಸ್ ಎಫೆಕ್ಟ್

    ಬೆಂಗಳೂರು: ಕೊರೊನಾ ವೈರಸ್ ಎಫೆಕ್ಟ್ ನಗರದ ಟ್ರಾಫಿಕ್ ಪೊಲೀಸರಿಗೂ ತಟ್ಟಿದೆ. ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಕೊರೊನಾ ವೈರಸ್ ಧೃಡಪಟ್ಟ ಹಿನ್ನೆಲೆಯಲ್ಲಿ ನಗರದ ಟ್ರಾಫಿಕ್ ಪೊಲೀಸರು ಡ್ರಿಂಕ್ & ಡ್ರೈವ್ ಚೆಕ್ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

    ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು, ಈಗಾಗಲೇ ಬೆಂಗಳೂರಿಗೆ ಕೊರೊನಾ ಬಂದಿರುವ ವಿಚಾರ ತಿಳಿದು ನಮ್ಮ ಸಿಬ್ಬಂದಿ ಭಯಗೊಂಡಿದ್ದಾರೆ. ಡ್ರಿಂಕ್ & ಡ್ರೈವ್ ಚೆಕ್ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಬಾಯಿ ವಾಸನೆ ಮೂಲಕ ನಾವು ಡ್ರಿಂಕ್ & ಡ್ರೈವ್ ಚೆಕ್ ಮಾಡಬೇಕು. ನಂತರ ಡಿಡಿ ಮಿಷಿನ್‍ನಲ್ಲಿ ಚೆಕ್ ಮಾಡುವುದು. ಹಾಗಾಗಿ ನಮಗೂ ಕೊರೊನಾ ವೈರಸ್ ತಗುಲುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೆಂಗಳೂರು ಟೆಕ್ಕಿಗೆ ಕೊರೋನಾ ಬಂದಿದ್ದು ಹೇಗೆ?

    ಈಗಾಗಲೇ ಕೆಲ ವಿದೇಶಗಳಲ್ಲಿ ಹ್ಯಾಂಡ್ ಶೇಕ್ ಮಾಡುವುದು, ಪರಸ್ಪರ ಚುಂಬಿಸುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ನಮ್ಮ ಮೇಲಾಧಿಕಾರಿಗಳ ಗಮನ ಹರಿಸಬೇಕು, ನಮಗೂ ಫ್ಯಾಮಿಲಿಗಳಿವೆ. ಏನಾದರೂ ಹೆಚ್ಚು ಕಮ್ಮಿಯಾದರೆ ಯಾರು ಹೊಣೆ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಇದನ್ನೂ ಓದಿ: 24 ವರ್ಷದ ಬೆಂಗ್ಳೂರು ಟೆಕ್ಕಿಗೆ ಕೊರೋನಾ ವೈರಸ್

    ಬೆಂಗಳೂರಿನಲ್ಲಿ ಕೆಲಸ ಮಾಡುವ ಹೈದರಾಬಾದ್ ಮೂಲದ ಟೆಕ್ಕಿಗೆ ಕೊರೊನಾ ವೈರಸ್ ಪತ್ತೆಯಾಗಿದ್ದು, ಟೆಕ್ಕಿಗೆ ಹೈದರಾಬಾದ್‍ನಲ್ಲಿ ಚಿಕಿತ್ಸೆ ಮುಂದುವರಿದಿದೆ. ಇದರ ಎಫೆಕ್ಟ್ ಈಗ ಪೊಲೀಸರಿಗೂ ತಟ್ಟಿದೆ.

  • ಬೆಂಗ್ಳೂರಲ್ಲಿ ಮಾಜಿ ಶಾಸಕರ ಪುತ್ರನ ಅವಾಂತರ- ಡ್ರಂಕ್&ಡ್ರೈವ್ ಪ್ರಶ್ನಿಸಿದ್ದಕ್ಕೆ ಎಂಎಲ್‍ಎ ಅಭ್ಯರ್ಥಿ ಎಂದು ಅವಾಜ್

    ಬೆಂಗ್ಳೂರಲ್ಲಿ ಮಾಜಿ ಶಾಸಕರ ಪುತ್ರನ ಅವಾಂತರ- ಡ್ರಂಕ್&ಡ್ರೈವ್ ಪ್ರಶ್ನಿಸಿದ್ದಕ್ಕೆ ಎಂಎಲ್‍ಎ ಅಭ್ಯರ್ಥಿ ಎಂದು ಅವಾಜ್

    ಬೆಂಗಳೂರು: ಮಧ್ಯರಾತ್ರಿಯಲ್ಲಿ ಮಾಜಿ ಶಾಸಕರ ಪುತ್ರನ ಅವಾಂತರ ನಡೆದಿದೆ. ಕುಡಿದ ಅಮಲಿನಲ್ಲಿ ಮುಂದಿನ ಎಂಎಲ್‍ಎ ಅಭ್ಯರ್ಥಿ ಎಂದು ಪೊಲೀಸರಿಗೆ ಅವಾಜ್ ಹಾಕಿ ಸ್ಟೇಷನ್ ಮೆಟ್ಟಿಲೇರಿದ್ದಾರೆ.

    ಉಡುಪಿ ಮಾಜಿ ಶಾಸಕ ಜಯರಾಮ ಶೆಟ್ಟಿ ಪುತ್ರ ರತನ್ ಶೆಟ್ಟಿ ಮಂಗಳವಾರ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಡಿಡಿ ಚೆಕ್ ಮಾಡುತ್ತಿದ್ದ ಪೊಲೀಸರು ರತನ್ ಶೆಟ್ಟಿ ಇದ್ದ ಕಾರು ಚಾಲಕನನ್ನ ಡ್ರಂಕ್ & ಡ್ರೈವ್ ತಪಾಸಣೆ ನಡೆಸಿದ್ದರು.

    ಈ ವೇಳೆ ರತನ್ ಶೆಟ್ಟಿ ತಾನು ಮುಂದಿನ ಎಂಎಲ್‍ಎ ಅಭ್ಯರ್ಥಿ. ನನ್ನನ್ನೇ ತಡೆಯುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಪೊಲೀಸರು ಹಾಗೂ ರತನ್ ನಡುವೆ ಮಾತಿನ ಚಕಮಕಿಯಾಗಿದೆ. ಪೊಲೀಸರು ರತನ್‍ ರನ್ನ ವಶಕ್ಕೆ ಪಡೆದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

    ನಂತರ ಕರ್ತವ್ಯ ನಿರತ ಪೊಲೀಸರಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಇತ್ತ ರತನ್ ಶೆಟ್ಟಿ ಸಹ ಪೊಲೀಸರು ತನ್ನನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ. ನಂತರ ರತನ್ ಗೆ ಕುಡಿದ ಅಮಲಿನಲಿನಿಂದ ಆದ ಎಡವಡ್ಡು ಅರಿವಾಗಿದೆ. ಇದೀಗ ಕ್ಷಮಾಪಣೆ ಪತ್ರ ಬರೆದು ಕೊಟ್ಟು ವಾಪಸ್ ಹೋಗಿದ್ದಾರೆ.