Tag: Dressing

  • ಏರ್‌ಪೋರ್ಟ್‌ಗೆ ಬರ್ತಿದ್ದಂತೆ ರಶ್ಮಿಕಾ ಪ್ಯಾಂಟ್ ಎಲ್ಲಿ ಅಂದ್ರು ಫ್ಯಾನ್ಸ್- ವೀಡಿಯೋ ವೈರಲ್

    ಏರ್‌ಪೋರ್ಟ್‌ಗೆ ಬರ್ತಿದ್ದಂತೆ ರಶ್ಮಿಕಾ ಪ್ಯಾಂಟ್ ಎಲ್ಲಿ ಅಂದ್ರು ಫ್ಯಾನ್ಸ್- ವೀಡಿಯೋ ವೈರಲ್

    ಮುಂಬೈ: ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್, ಟಾಲಿವುಡ್‍ನಲ್ಲಿ ಸಖತ್ ಬೇಡಿಕೆ ಇರುವ ನಟಿ ಮಣಿಯರಲ್ಲಿ ಒಬ್ಬರು. ಸದ್ಯ ರಶ್ಮಿಕಾ ಮಂದಣ್ಣ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗಿದ್ದು, ನೆಟ್ಟಿಗರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

    ಇತ್ತೀಚೆಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿನ ಅವರ ಉಡುಗೆ ಟ್ರೋಲಿಗರಿಗೆ ಆಹಾರವಾಗಿದೆ. ಥರಹೇವಾರಿ ಕಾಮೆಂಟ್‍ಗಳ ಮೂಲಕ ನೆಟ್ಟಿಗರು ರಶ್ಮಿಕಾ ಕಾಲೆಳೆಯುತ್ತಿದ್ದಾರೆ. ಹಲವರು ನಟಿಯ ಬೆಂಬಲಕ್ಕೆ ನಿಂತಿದ್ದು, ಉಡುಪು ಅವರವರ ಇಷ್ಟ. ಇದನ್ನೆಲ್ಲಾ ಪ್ರಶ್ನಿಸುವುದು ನಿಲ್ಲಿಸುವುದು ಯಾವಾಗ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅವರು ಬಿಳಿ ಟಿಶರ್ಟ್ ಹಾಗೂ ಶಾರ್ಟ್ಸ್ ತೊಟ್ಟಿದ್ದಾರೆ. ಈ ವೀಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ವೀಡಿಯೋ ಇದೀಗ ಸಿಕ್ಕಾಪಟ್ಟೆ ಶೇರ್ ಆಗುತ್ತಿದೆ. ಇದನ್ನೂ ಓದಿ: 5ಜಿ ವಿರುದ್ಧ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿ ವಜಾ- 20 ಲಕ್ಷ ದಂಡ ವಿಧಿಸಿದ ದೆಹಲಿ ಹೈ ಕೋರ್ಟ್

     

    View this post on Instagram

     

    A post shared by Viral Bhayani (@viralbhayani)

    ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋವನ್ನು ಇನ್‌ಸ್ಟಾ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಕೆಲವು ಅಭಿಮಾನಿಗಳು ರಶ್ಮಿಕಾ ನಿಮ್ಮ ಪ್ಯಾಂಟ್ ಎಲ್ಲಿ ಎಂದು ಕೇಳುತ್ತಿದ್ದಾರೆ. ಕೆಲವರು ರಶ್ಮಿಕಾ ನೀವು ಸಖತ್ ಹಾಟ್ ಎಂದು ಕಾಮೆಂಟ್ ಹಾಕಿದ್ದಾರೆ. ಯಾವ ಟ್ರೋಲ್‍ಗಳಿಗೂ ತಲೆಕೆಡಿಸಿಕೊಳ್ಳುವುದಿಲ್ಲ, ಟ್ರೋಲ್‍ಗಳಿಗೂ ಅವರು ಉತ್ತರ ಕೊಡುವುದಿಲ್ಲ ಎಂಬುದು ಅಭಿಮಾನಿಗಳಿಗೆ ಗೊತ್ತಿರುವ ವಿಚಾರ ಆಗಿದೆ.  ಇದನ್ನೂ ಓದಿ: ನಾನು 5ಜಿ ವಿರೋಧಿ ಅಲ್ಲ, ಅದರ ಸಮಸ್ಯೆಗಳನ್ನು ತಡೆಯಬೇಕು: ಜೂಹಿ ಚಾವ್ಲಾ

    ರಶ್ಮಿಕಾ ಮಂದಣ್ಣ ಕೈಯಲ್ಲಿ ಈಗ ಹಲವು ಸಿನಿಮಾಗಳು ಇದ್ದು, ಬಾಲಿವುಡ್‍ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಸಿದ್ದಾರ್ಥ್ ಮಲ್ಹೋತ್ರ ಜೊತೆ ಮಿಷನ್ ಮಜ್ನು ಹಾಗೂ ವಿಕಾಸ್ ಬಹ್ಲ್ ಅವರ ನಿರ್ದೇಶನದ ಗುಡ್ ಬೈ ಚಿತ್ರಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ.

  • ರಣವೀರ್ ಸಿಂಗ್ ಸ್ಟೈಲ್- ಸಿಕ್ಕಾಪಟ್ಟೆ ವೈರಲ್

    ರಣವೀರ್ ಸಿಂಗ್ ಸ್ಟೈಲ್- ಸಿಕ್ಕಾಪಟ್ಟೆ ವೈರಲ್

    ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಸದಾ ತಮ್ಮ ವಿಭಿನ್ನ ಹಾಗೂ ಫಂಕಿ ಸ್ಟೈಲ್ ನಿಂದಲೇ ಸುದ್ದಿಯಲ್ಲಿರುತ್ತಾರೆ. ಈಗಲೂ ಸಹ ರಣವೀರ್ ಸಿಂಗ್ ವಿಭಿನ್ನ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ.

     

    View this post on Instagram

     

    A post shared by Ranveer Singh (@ranveersingh)

    ನಟ ರಣವೀರ್ ಸಿಂಗ್ ಆಗಾಗ ತಮ್ಮ ಫಂಕಿ ಸ್ಟೈಲ್‍ನಿಂದಲೇ ಅಭಿಮಾನಿಗಳಿಗೆ ಸಪ್ರ್ರೈಸ್ ಹೆಸರಿನಲ್ಲಿ ಶಾಕ್ ಕೊಡುತ್ತಿರುತ್ತಾರೆ. ಈಗಲೂ ಸಹ ಫಂಕಿ ಲುಕ್‍ನಿಂದಲೇ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ. ನೀಲಿ ಬಣ್ಣದ ಗುಸ್ಸಿಯ, ಪ್ಯಾಂಟು, ಟಾಪು ಹಾಕಿಕೊಂಡು, ಬೂದು ಬಣ್ಣದ ಟೋಪಿ, ಕೂದಲನ್ನೂ ಉದ್ದಕ್ಕೆ ಬಿಟ್ಟು, ಕೊಲಿಂಗ್ ಗ್ಲಾಸ್ ಹಾಕಿಕೊಂಡು ವಿಭಿನ್ನವಾಗಿ ರೆಡಿಯಾಗಿದ್ದಾರೆ. ಈ ಫೊಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Ranveer Singh (@ranveersingh)

    ರಣವೀರ್ ಸಿಂಗ್ ಲುಕ್ ನೋಡಿದ ಸೆಲೆಬ್ರಿಟಿಗಳು, ನಟ್ಟಿಗರು ಸಖತ್ತಾಗಿ ಕಮೆಂಟ್ ಮಾಡುತ್ತಿದ್ದಾರೆ. ಆಲಿಯಾ ಭಟ್ ಜೋಯಾ ಆಖ್ತರ್, ಟೈಗರ್ ಶ್ರಾಫ್ ಹೀಗೆ ಸಾಕಷ್ಟು ಮಂದಿ ಕಮೆಂಟ್ ಮಾಡಿದ್ದಾರೆ. ನಟಿ ಪೂಜಾ ಹೆಗ್ಡೆ ಸಹ ರಣವೀರ್ ಲುಕ್ ನೋಡಿ ದಂಗಾಗಿ ಹುಚ್ಚ ಅಂತ ತಮಾಷೆಗೆ ಕಮೆಂಟ್ ಮಾಡಿದ್ದಾರೆ.

     ರಣವೀರ್ ಸಿಂಗ್ ಹಾಗೂ ದೀಪಿಕಾ ಅಭಿನಯದ 83 ಸಿನಿಮಾ ರಿಲೀಸ್ ಆಗಬೇಕಿದೆ. ಸೂರ್ಯವಂಶಿ, ಜಯೇಶ್‍ಭಾಯ್ ಜೋರ್‍ದಾರ್ ಹಾಗೂ ಸರ್ಕಸ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

  • ಪುರುಷರಿಗಾಗಿ ಇಲ್ಲಿದೆ 6 ಸಿಂಪಲ್ ಡ್ರೆಸ್ಸಿಂಗ್ ಟಿಪ್ಸ್

    ಪುರುಷರಿಗಾಗಿ ಇಲ್ಲಿದೆ 6 ಸಿಂಪಲ್ ಡ್ರೆಸ್ಸಿಂಗ್ ಟಿಪ್ಸ್

    ಗಿನ ಪೀಳಿಗೆಯ ಪುರುಷರು ಡ್ರೆಸ್ಸಿಂಗ್ ಬಗ್ಗೆ ಸ್ವಲ್ಪವಾದ್ರೂ ಕಾಳಜಿ ವಹಿಸ್ತಾರೆ. ಆದ್ರೆ ಯಾವ ವಯಸ್ಸಿನಲ್ಲಿ ಯಾವ ರೀತಿಯ ಬಟ್ಟೆ ಧರಿಸಬೇಕು? ಸಂದರ್ಭಕ್ಕೆ ತಕ್ಕಂತೆ ಹೇಗೆ ಡ್ರೆಸ್ ಧರಿಸಿಬೇಕು? ದಿನನಿತ್ಯ ಹಲವಾರು ಡಿಸೈನ್ ಬಟ್ಟೆಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತವೆ. ಇದರಲ್ಲಿ ಯಾವ ಡ್ರೆಸ್ ಒಗ್ಗುತ್ತದೆ? ಶೂ ಹೇಗಿರಬೇಕು ಎಂಬುದರ ಬಗ್ಗೆ ಸಾಕಷ್ಟು ಗೊಂದಲಗಳಿರುತ್ತವೆ. ಅವೆಲ್ಲದಕ್ಕೆ ಉತ್ತರವಾಗಿ ಇಲ್ಲಿದೆ 6 ಡ್ರೆಸ್ಸಿಂಗ್ ಟಿಪ್ಸ್;

    1. ವಯಸ್ಸಿಗೆ ತಕ್ಕಂತೆ ಡ್ರೆಸ್ ಮಾಡಿಕೊಳ್ಳಿ
    ಪಿಯುಸಿ ಮೆಟ್ಟಿಲೇರಿದಾಗ ಧರಿಸೋ ಬಟ್ಟೆಗೂ, ಡಿಗ್ರಿಗೆ ಕಾಲಿಟ್ಟಾಗ ತೊಡಬೇಕಾದ ಉಡುಗೆಗೂ ಹಾಗೂ ಆಫೀಸಿಗೆ ಹೋಗುವಾಗ ಹಾಕೋ ಉಡುಗೆಗೂ ವ್ಯತ್ಯಾಸವಿರಬೇಕು. ಕಾಲಕ್ಕೆ ತಕ್ಕಂತೆ ಹಾಗೂ ವಯಸ್ಸಿಗೆ ತಕ್ಕಂತೆ ಡ್ರೆಸ್ಸಿಂಗ್ ಇರಲಿ. ಆಯಾ ಕಾಲದ ಟ್ರೆಂಡ್‍ಗೆ ತಕ್ಕಂತೆ ಜ್ಯಾಕೆಟ್ ಹಾಗೂ ಶೂಗಳನ್ನ ಆಯ್ಕೆ ಮಾಡಿಕೊಳ್ಳಿ. ಹೆಚ್ಚಾಗಿ ಗ್ರಾಫಿಕ್ಸ್ ಅಥವಾ ಚಿತ್ರಗಳಿರುವ ಟೀ ಶರ್ಟ್‍ಗಳನ್ನ ಕಾಲೇಜಿಗೆ ಹೋಗೋ ಯುವಕರು ಹಾಕಬಹುದು. ಆದ್ರೆ ಮಧ್ಯವಯಸ್ಕರು ಪ್ಲೇನ್ ಟೀ ಶರ್ಟ್‍ಗಳನ್ನ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಇನ್ನು ಆಫೀಸಿಗೆ ಹೋಗುವಾಗ ಫಾರ್ಮಲ್ಸ್ ಧರಿಸೋದು ಕಡ್ಡಾಯವಾದ್ರಿಂದ ಫಾರ್ಮಲ್ ಶರ್ಟ್ ಹಾಗೂ ಕಾಲರ್ ಇರುವ ಪೋಲೋ ಟೀ ಶರ್ಟ್‍ಗಳನ್ನ ಧರಿಸಬಹುದು.

    ಇದು ಬೇಡ

    2. ಯಾವ ರೀತಿಯ ಪ್ಯಾಂಟ್ ತೊಡಬೇಕು
    ಹಿಂಭಾಗದಲ್ಲಿ ಜೋತು ಬೀಳುವಂತಿರೋ ಲೋ ವೇಯಿಸ್ಟ್ ಜೀನ್ಸ್ ಗಳು ಫ್ಯಾಶ್‍ನೆಬಲ್ ಎನ್ನುವುದಕ್ಕಿಂತ ನೋಡುಗರಿಗೆ ಮುಜುಗರ ಉಂಟು ಮಾಡುತ್ತದೆ. ಆದ್ದರಿಂದ ಡೀಸೆಂಟ್ ಆಗಿ ಕಾಣುವಂತೆ ಪ್ಯಾಂಟ್ ಧರಿಸಿ. ಅಲ್ಲದೆ ಅಲ್ಲಲ್ಲಿ ಹರಿದಂತೆ ಕಾಣುವ ರಿಪ್ಡ್ ಜೀನ್ಸ್/ಡಿಸ್ಟ್ರೆಸ್ಡ್ ಜೀನ್ಸ್ ಹಾಗೂ ಬೇರೆ ಬೇರೆ ಬಣ್ಣದ ಜೀನ್ಸ್ ಯುವಕರು ಧರಿಸಬಹುದು. ಫಾರ್ಮಲ್ ಲುಕ್ ಬೇಕು ಅಂತಿದ್ದರೆ ಇಂತಹ ಜೀನ್ಸ್ ಖಂಡಿತ ಧರಿಸಬೇಡಿ. ಪ್ಲೇನ್ ಜೀನ್ಸ್ ಅಥವಾ ಫಾರ್ಮಲ್ ಪ್ಯಾಂಟ್‍ಗಳನ್ನ ಧರಿಸಿ.

    .

    3. ಪಾದರಕ್ಷೆಯ ಬಗ್ಗೆಯೂ ಕಾಳಜಿ ಇರಲಿ
    ಸಂದರ್ಭಕ್ಕೆ ತಕ್ಕಂತೆ ಚಪ್ಪಲಿ ಅಥವಾ ಶೂ – ಯಾವುದು ಧರಿಸಬೇಕು ಅನ್ನೋದನ್ನ ನಿರ್ಧರಿಸಿ. ಕಚೇರಿ ಅಥವಾ ಪಾರ್ಟಿಗಳಿಗೆ ಹೋಗುವಾಗ ಸಾಕ್ಸ್ ಮತ್ತು ಫಾರ್ಮಲ್ ಶೂ ಧರಿಸಿ. ಔಟಿಂಗ್‍ಗೆಂದು ಹೋಗುವಾಗ ಲೇಸ್ ಇರುವ ಶೂ ಅಥವಾ ಸಡಿಲವಾದ ಸ್ಲಿಪ್ ಆನ್ ಶೂ ಧರಿಸಿದ್ರೆ ಆರಾಮಾಗಿರಬಹುದು. ಅಥವಾ ಬೆಲ್ಟ್ ಚಪ್ಪಲಿ ಧರಿಸಿದ್ರೂ ಕೂಡ ಕೂಲ್ ಆಗಿರಬಹುದು. ಆದ್ರೆ ಸಾಕ್ಸ್ ಹಾಕಿಕೊಂಡು ಬೆಲ್ಟ್ ಚಪ್ಪಲಿ ಎಂದಿಗೂ ಧರಿಸಬೇಡಿ.

    4. ಶರ್ಟ್/ಟಿ ಶರ್ಟ್ ಫಿಟ್ಟಿಂಗ್ ಸರಿಯಿರಲಿ
    ನೀವು ಹಾಕೋ ಶರ್ಟ್ ಅಥವಾ ಟೀ ಶರ್ಟ್‍ಗಳು ನಮ್ಮ ಸೈಜಿಗೆ ಫಿಟ್ ಆಗುವಂತಿರಲಿ. ಅತಿಯಾದ ಉದ್ದನೆಯ, ಅತಿಯಾದ ಟೈಟ್ ಅಥವಾ ತುಂಬಾ ತುಂಡಗಿರುವ ಶರ್ಟ್/ ಟಿ ಶರ್ಟ್ ನಿಮ್ಮ ಲುಕ್ಕನ್ನು ಹಾಳು ಮಾಡುತ್ತವೆ.

    5. ಜ್ಯಾಕೆಟ್ ಇರಲಿ
    ಎಲ್ಲಾ ಸಮಾರಂಭಗಳಿಗೂ ಫಾರ್ಮಲ್ ಶರ್ಟ್ ಪ್ಯಾಂಟ್ ಧರಿಸೋ ಬದಲು ಆಗಾಗ ನಿಮ್ಮ ಉಡುಪಿಗೆ ಮತ್ತಷ್ಟು ಮೆರುಗು ನೀಡೋ ಜ್ಯಾಕೆಟ್ ಧರಿಸಿ. ಜೀನ್ಸ್ ಮತ್ತು ಬೋಟ್ ನೆಕ್ ಟೀ ಶರ್ಟ್ ಧರಿಸಿ ಅದರ ಮೇಲೊಂದು ಜ್ಯಾಕೆಟ್ ಧರಿಸಿದ್ರೆ ವಿಭಿನ್ನವಾಗಿ ಕಾಣೋದ್ರಲ್ಲಿ ಸಂಶಯವಿಲ್ಲ.

    6. ಟೈಂ ನೋಡಿಕೊಳ್ಳದಿದ್ರೂ ವಾಚ್ ಕಟ್ಟಿ
    ಅತ್ಯಂತ ಒಳ್ಳೆಯ ಡ್ರೆಸ್ ತೊಟ್ಟು ನಿಮ್ಮ ಕೈ ಖಾಲಿ ಖಾಲಿಯಾಗಿ ಕಂಡರೆ ಏನ್ ಚಂದ? ಹಾಗಾಗಿ ನಿಮ್ಮ ಉಡುಪಿಗೆ ಹೊಂದುವಂತ ವಾಚ್ ಕಟ್ಟಿಕೊಳ್ಳಿ. ಮೊಬೈಲ್‍ನಲ್ಲೇ ಟೈಂ ನೋಡಿಕೊಳ್ಳಬಹುದಲ್ಲ ಅಂತಿದ್ರೂ ಕೈಗೆ ಒಂದು ಕೈಗಡಿಯಾರ ಇದ್ದರೆ ಚಂದ.

     

  • ಬೇಸಿಗೆಯಲ್ಲಿ ಕೂಲ್ ಆಗಿರಲು ನಿಮ್ಮ ಡ್ರೆಸ್ಸಿಂಗ್ ಹೇಗಿರಬೇಕು? ಇಲ್ಲಿದೆ 8 ಟಿಪ್ಸ್

    ಬೇಸಿಗೆಯಲ್ಲಿ ಕೂಲ್ ಆಗಿರಲು ನಿಮ್ಮ ಡ್ರೆಸ್ಸಿಂಗ್ ಹೇಗಿರಬೇಕು? ಇಲ್ಲಿದೆ 8 ಟಿಪ್ಸ್

     

    ಷ್ಟು ದಿನ ಚಳಿಗಾಲವಿತ್ತು. ಯಾವುದೇ ಉಡುಪು ತೊಟ್ಟರೂ ಅದರ ಮೇಲೆ ಜ್ಯಾಕೆಟ್ ಅಥವಾ ಸ್ವೆಟರ್ ಮತ್ತು ಸ್ಟೋಲ್ ಧರಿಸಿ ಬೆಚ್ಚಗಿರುತ್ತಿದ್ರಿ. ಆದ್ರೆ ಚಳಿಗಾಲ ಕಳೆದು ಇನ್ನೇನು ಬೇಸಿಗೆ ಸಮೀಪಿಸುತ್ತಿದೆ. ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು ಅಂದ್ರೆ ನಮ್ಮ ಆಹಾರ, ಉಡುಗೆ- ತೊಡುಗೆಯೂ ಬದಲಾಗಬೇಕು. ಬೇಸಿಗೆಯಲ್ಲಿ ಕೂಲ್ ಆಗಿರಲು ಯಾವ ರೀತಿ ಉಡುಪು ಧರಿಸಬೇಕು ಅನ್ನೋದಕ್ಕೆ ಇಲ್ಲಿದೆ 7 ಟಿಪ್ಸ್:

     

    1. ಸಡಿಲವಾದ ಉಡುಪು ಧರಿಸಿ
    ಬೇಸಿಗೆಯಲ್ಲಿ ನಿಮ್ಮ ಉಡುಪು ಸಡಿಲವಾಗಿದ್ದಷ್ಟೂ ಆರಾಮಾಗಿ ಇರಬಹುದು. ಬಿಗಿಯಾದ ಉಡುಪು ತೊಡುವುದರಿಂದ ಸೆಕೆ ಉಂಟಾಗಿ ದೇಹ ಹೆಚ್ಚು ಬೆವರುತ್ತದೆ. ಹೀಗಾಗಿ ಸಡಿಲವಾದ ಬಟ್ಟೆ ತೊಟ್ಟರೆ ಕೂಲ್ ಆಗಿ ಇರಬಹುದು. ಸ್ಲೀವ್‍ಲೆಸ್ ಧರಿಸಿ ಹೊರಗೆ ಸುತ್ತಾಡಿದ್ರೆ ಮೈ ಕೈ ಟ್ಯಾನ್ ಆಗುತ್ತದೆ. ಹೀಗಾಗಿ ಹೊರಗೆ ಓಡಾಡುವಾಗ ಫುಲ್ ಸ್ಲೀವ್ಸ್ ಇರೋ ಬಟ್ಟೆ ಧರಿಸಿದ್ರೆ ಒಳ್ಳೆಯದು. ಟೈಟ್ ಟೀ ಶರ್ಟ್ ಮತ್ತು ಟೈಟ್ ಜೀನ್ಸ್ ತೊಡುವುದರ ಬದಲು ಆರಾಮಾದ ಕುರ್ತಾ, ಧೋತಿ ಪ್ಯಾಂಟ್ ಧರಿಸಿದ್ರೆ ಕೂಲ್ ಆಗಿರಬಹುದು.

    2. ಕಾಟನ್ ಬಟ್ಟೆಗಳನ್ನ ಧರಿಸಿ
    ಪಾಲಿಸ್ಟರ್ ಮತ್ತು ರೇಯಾನ್ ಬಟ್ಟೆಗಿಂತ ಕಾಟನ್ ಉಡುಪುಗಳು ಬೇಸಿಗೆಗೆ ಸೂಕ್ತ. ಕಾಟನ್ ಬಟ್ಟೆ ಬೆವರನ್ನು ಬೇಗನೆ ಹೀರುತ್ತದೆ ಹಾಗೂ ಬೇಗನ ಒಣಗುತ್ತದೆ. ಆದ್ದರಿಂದ ಕಾಟನ್ ಬಟ್ಟೆಗಳನ್ನೇ ಹೆಚ್ಚಾಗಿ ಧರಿಸಿ.

    3. ಬಟ್ಟೆಗಳನ್ನ ಸ್ವಚ್ಛವಾಗಿಟ್ಟುಕೊಳ್ಳಿ
    ಬೇಸಿಗೆಯಲ್ಲಿ ದೇಹದಲ್ಲಿ ಹೆಚ್ಚು ಬೆವರು ಬರೋದ್ರಿಂದ ಕುತ್ತಿಗೆ ಹಾಗೂ ತೋಳಿನ ಭಾಗಗಳಲ್ಲಿ ಕಲೆಗಳಾಗುತ್ತವೆ. ಹಾಗೂ ಬಟ್ಟೆಯನ್ನ ಒಂದು ಬಾರಿ ತೊಟ್ಟು ಒಗೆಯದೇ ಹಾಗೇ ಧರಿಸಿದ್ರೆ ದುರ್ವಾಸನೆ ಬರುತ್ತದೆ. ಆದ್ದರಿಂದ ಒಂದು ಬಾರಿ ಧರಿಸಿದ ಉಡುಪನ್ನು ಶುಭ್ರವಾಗಿ ಒಗೆದ ನಂತರವೇ ಮತ್ತೊಮ್ಮೆ ಧರಿಸಿ.

    4. ಬೀಡಿಂಗ್ ಹಾಗೂ ಮೆಟಲ್ ವರ್ಕ್ ಇರುವಂತಹ ಬಟ್ಟೆಗಳನ್ನ ದೂರವಿಡಿ
    ಚಂದದ ಕಸೂತಿ ಮಾಡಿರುವ ಉಡುಪು ಧರಿಸಿದ್ರೆ ಗ್ರ್ಯಾಂಡ್ ಆಗಿ ಕಣ್ತೀರ ನಿಜ. ಆದ್ರೆ ಬೇಸಿಗೆಯಲ್ಲಿ ಇಂತಹ ಉಡುಪುಗಳನ್ನ ಸಾಧ್ಯವಾದಷ್ಟು ಅವಾಯ್ಡ್ ಮಾಡಿ. ಬಟ್ಟೆಯ ಜೊತೆಗೆ ಮಣಿ, ಬೀಡಿಂಗ್ ಮತ್ತು ಮೆಟಲ್ ವರ್ಕ್ ಇದ್ದರೆ ಅದರ ತೂಕವೂ ಹೆಚ್ಚಾಗುತ್ತದೆ. ಕೆಲವೊಮ್ಮೆ ವರ್ಕ್ ಮಾಡಿದ ಉಡುಪು ಮೈಗೆ ಚುಚ್ಚುವುದಲ್ಲದೆ ಹೆಚ್ಚು ಬೆವರುವಂತೆ ಮಾಡುತ್ತದೆ.

    5. ಹೊರಗೆ ಸುತ್ತಡುವಾಗ ಹ್ಯಾಟ್, ಸ್ಕಾರ್ಫ್ ಮತ್ತು ಸನ್‍ಗ್ಲಾಸಸ್ ಜೊತೆಯಲ್ಲಿರಲಿ
    ಹೊರಗೆ ಸುತ್ತಲು ಹೋದಗ ಸ್ಕಾರ್ಫ್, ಸನ್‍ಗ್ಲಾಸ್ ಮತ್ತು ಟೋಪಿಯನ್ನು ಬಳಸಿ. ಮನೆಯಿಂದ ಹೊರಡುವ ಮುನ್ನ ಸನ್‍ಸ್ಕ್ರೀನ್ ಹಚ್ಚಿಕೊಳ್ಳಲು ಮರೆಯಬೇಡಿ. ಅಂಗಡಿಗೆ ಅಥವಾ ಇಲ್ಲೇ ಸ್ವಲ್ಪ ದೂರ ಹೋಗಿ ಬರುವಿರಾದ್ರೆ ಛತ್ರಿ ಬಳಸಿ ನಿಮ್ಮ ತ್ವಚೆ ಟ್ಯಾನ್ ಆಗದಂತೆ ಮುನ್ನೆಚ್ಚರಿಕೆ ವಹಿಸಿ.

    6. ಲೈನಿಂಗ್ ಇಲ್ಲದ ಉಡುಪು ಧರಿಸಿ
    ಟಾಪ್, ಕೋಟ್ ಅಥವಾ ಸ್ಕರ್ಟ್‍ಗಳಲ್ಲಿ ಲೈನಿಂಗ್ ಇದೆ ಎಂದರೆ ನೀವು ಎರಡು ಪದರದ ಬಟ್ಟೆಯನ್ನು ಧರಿಸಿರ್ತೀರ. ಅದರಿಂದ ಹೆಚ್ಚು ಬೆವರುತ್ತೀರ. ಹೀಗಾಗಿ ಲೈನಿಂಗ್ ಇಲ್ಲದಂತಹ ಬಟ್ಟೆಯನ್ನ ಧರಿಸಿ. ಕಾಟನ್ ಉಟುಪುಗಳು ಬೇಸಿಗೆಗೆ ಹೇಳಿ ಮಾಡಿಸಿದ್ದು.

    7. ತಿಳಿ ಬಣ್ಣದ ಉಡುಪನ್ನೇ ಆಯ್ಕೆ ಮಾಡಿಕೊಳ್ಳಿ
    ಗಾಢ ಬಣ್ಣದ ಉಡುಪುಗಳು ಬಿಸಿಲನ್ನ ಹೆಚ್ಚು ಹೀರಿಕೊಳ್ಳುತ್ತವೆ. ಕಪ್ಪು ಬಣ್ಣದ ಉಡುಪು ಬಿಸಿಲನ್ನ ಹೀರಿಕೊಂಡು ಹೊರಹೋಗಲು ಬಿಡುವುದಿಲ್ಲ. ಹೀಗಾಗಿ ಬೇಸಿಗೆಯಲ್ಲಿ ಹೆಚ್ಚಾಗಿ ತಿಳಿ ಬಣ್ಣದ ಉಡುಪನ್ನ ಧರಿಸಿ. ಬಿಳಿ ಬಣ್ಣದ ಉಡುಪು ಹೆಚ್ಚು ಬಿಸಿಲನ್ನ ಹೀರಿಕೊಳ್ಳುವುದಿಲ್ಲ. ಹೀಗಾಗಿ ಬಿಳಿ, ತಿಳಿ ಗುಲಾಬಿ, ತಿಳಿ ಹಳದಿಯಂತಹ ಬಣ್ಣಗಳ ಉಡುಪನ್ನ ಧರಿಸಿ.

    8. ಆಭರಣಗಳನ್ನ ಆದಷ್ಟೂ ಕಡಿಮೆ ತೊಟ್ಟುಕೊಳ್ಳಿ
    ಬೇಸಿಗೆಯಲ್ಲಿ ಹೆಚ್ಚು ಬೆವರೋದ್ರಿಂದ ಹೆಚ್ಚಾಗಿ ಆಭರಣ ತೊಟ್ಟುಕೊಂಡರೆ ಮತ್ತೆ ಕಿರಿಕಿರಿಯಾಗುತ್ತದೆ. ಹೀಗಾಗಿ ಆಭರಣಗಳನ್ನ ಸಾಧ್ಯವಾದಷ್ಟು ಕಡಿಮೆ ತೊಟ್ಟುಕೊಳ್ಳಿ. ಲೈಟ್ ಆಗಿದ್ದಷ್ಟೂ ನೀವು ಕೂಲ್ ಆಗಿರಬಹುದು ಅನ್ನೋದನ್ನ ಮರೀಬೇಡಿ.