Tag: Dream school expo

  • ಪಬ್ಲಿಕ್ ಟಿವಿ ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋ – ಪೋಷಕರೇ ಭಾಗವಹಿಸಿ ಶಾಲೆಗಳ ಮಾಹಿತಿ ತಿಳಿಯಿರಿ

    ಪಬ್ಲಿಕ್ ಟಿವಿ ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋ – ಪೋಷಕರೇ ಭಾಗವಹಿಸಿ ಶಾಲೆಗಳ ಮಾಹಿತಿ ತಿಳಿಯಿರಿ

    ಬೆಂಗಳೂರು: ಪಬ್ಲಿಕ್ ಟಿವಿಯ ಸ್ಕೂಲ್‍ನ ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋದ 2ನೇ ಆವೃತ್ತಿ ಚಾಲನೆಗೆ ಕ್ಷಣಗಣನೆ ಆರಂಭವಾಗಿದೆ. ನಮ್ಮ ಮಕ್ಕಳು ಉತ್ತಮ ಸ್ಕೂಲ್‍ನಲ್ಲಿ ಓದಬೇಕು, ಒಳ್ಳೆಯ ಕೋರ್ಸ್ ಮಾಡಬೇಕೆಂಬ ಪೋಷಕರ ಕನಸಿಗೆ ಮಾಹಿತಿ ನೀಡಲು ವೇದಿಕೆ ಸಜ್ಜಾಗುತ್ತಿದೆ.

    ಬೆಂಗಳೂರಿನ ವಿಜಯನಗರದ ಎಂಸಿ ಲೇಔಟ್ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋ ನಡೆಯಲಿದೆ. ಸುಮಾರು 20ಕ್ಕೂ ಹೆಚ್ಚು ಶಾಲೆಗಳು ಈ ಎಕ್ಸ್‌ಪೋನಲ್ಲಿ ಭಾಗವಹಿಸಲಿದೆ. ತಜ್ಞ ಶಿಕ್ಷಕರು ಪೋಷಕರಿಗೆ ಮಕ್ಕಳ ಬೆಳವಣಿಗೆ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ. 2 ದಿನಗಳ ಈ ಎಕ್ಸ್‌ಪೋ ಶನಿವಾರ ಬೆಳಿಗ್ಗೆ 10.30ಕ್ಕೆ ಆರಂಭವಾಗಲಿದ್ದು, ಭಾನುವಾರವೂ ಎಕ್ಸ್‌ಪೋ ಇರಲಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋ – ಒಂದೇ ಸೂರಿನಲ್ಲಿ ಶಾಲೆಗಳ ಮಾಹಿತಿ

    ರಾಯಲ್ ಕಾನ್ಕಾರ್ಡ್, ಸಂಸಿದ್ ಮಿಲ್ಜ್ ಸ್ಪಾನ್ಸರ್ ಗಳಾಗಿದ್ದು, ಗೋಲ್ಡನ್ ಸ್ಪಾನ್ಸರ್ ಆಗಿ ಅಹಮ್ ಆತ್ಮಾ ವಿದ್ಯಾಲಯ, ಆರ್ಕಿಡ್ಸ್ ಭಾಗವಹಿಸಲಿದೆ. ಪೋಷಕರಿಗಾಗಿ ಮಾಹಿತಿ ಪೂರ್ಣ ಸಂವಾದ, ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆ ನಡೆಯಲಿದೆ. ಸ್ಪರ್ಧಿಗಳಿಗೆ ಉಚಿತ ಗಿಫ್ಟ್‌ಗಳನ್ನ ರೇವಾ ಯೂನಿವರ್ಸಿಟಿ ನೀಡಲಿದ್ದು, ಸ್ಟೇಷನರಿ ಗಿಫ್ಟ್ ಸಿಪಿಸಿ ಬುಕ್ಸ್ ನೀಡಲಿದೆ. ಇನ್ನು ಸ್ಥಳದಲ್ಲೇ ಆಡ್ಮಿಶನ್ ಮಾಡಲು ಅವಕಾಶವಿದೆ. ಪ್ರವೇಶ ಉಚಿತವಾಗಿದ್ದು, ತಪ್ಪದೇ ಪೋಷಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕಿದೆ.

  • ಇಂದಿನಿಂದ ಪಬ್ಲಿಕ್ ಟಿವಿ ಡ್ರೀಮ್ ಸ್ಕೂಲ್ ಎಕ್ಸ್‌ಪೋ – ಒಂದೇ ವೇದಿಕೆಯಲ್ಲಿ ಪ್ರತಿಷ್ಠಿತ ಶಾಲೆಗಳ ಬಗ್ಗೆ ಮಾಹಿತಿ

    ಇಂದಿನಿಂದ ಪಬ್ಲಿಕ್ ಟಿವಿ ಡ್ರೀಮ್ ಸ್ಕೂಲ್ ಎಕ್ಸ್‌ಪೋ – ಒಂದೇ ವೇದಿಕೆಯಲ್ಲಿ ಪ್ರತಿಷ್ಠಿತ ಶಾಲೆಗಳ ಬಗ್ಗೆ ಮಾಹಿತಿ

    ಬೆಂಗಳೂರು; ನಗರದಲ್ಲಿಂದು ಪಬ್ಲಿಕ್ ಟಿವಿ ಡ್ರೀಮ್ ಸ್ಕೂಲ್ ಎಕ್ಸ್ ಪೋಗೆ ಚಾಲನೆ ನೀಡಲಿದೆ. ಈ ಎಕ್ಸ್ ಪೋದಲ್ಲಿ ಏನೆಲ್ಲಾ ಸಿಗ್ಬೋದು ಅನ್ನೋದನ್ನ ನೀವು ಸಹ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

    ನಿಮ್ಮ ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕು..? ಶಿಕ್ಷಣ ನೀಡುವ ಶಾಲೆಗಳು ಯಾವುದು..? ಎಲ್ಲಿ ಓದಿದರೆ ಮಕ್ಕಳ ಭವಿಷ್ಯಕ್ಕೆ ಒಳ್ಳೆಯದು..? ಈ ರೀತಿ ಯೋಚನೆ ಮಾಡ್ತಿರೋ ಪೋಷಕರಿಗೆ ಡ್ರೀಮ್ ಸ್ಕೂಲ್ ಎಕ್ಸ್ ಪೋವನ್ನು ಪಬ್ಲಿಕ್ ಟಿವಿ ಆಯೋಜಿಸಿದೆ.


    ಪಬ್ಲಿಕ್ ಟಿವಿ ಕಳೆದ ಬಾರಿ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಗಾಯತ್ರಿ ವಿಹಾರದಲ್ಲಿ ವಿದ್ಯಾಪೀಠ ಕಾರ್ಯಕ್ರಮ ಆಯೋಜಿಸಿತ್ತು. ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿ ವಿವಿಧ ಕೋರ್ಸ್ ಗಳ ಬಗ್ಗೆ, ಶಿಕ್ಷಣ ಸಂಸ್ಥೆಗಳ ಮಾಹಿತಿ ಪಡೆದಿದ್ದರು. ಈ ಕಾರ್ಯಕ್ರಮ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಬಾರಿ ಡ್ರೀಮ್ ಸ್ಕೂಲ್ ಎಕ್ಸ್ ಪೋ ಆಯೋಜಿಸಿದೆ. ಇಂದು ಹಾಗೂ ನಾಳೆ ಬೆಂಗಳೂರಿನ ಕುಮಾರ್ ಕೃಪ ರಸ್ತೆಯ ಲಲಿತ್ ಅಶೋಕ್ ಹೋಟೆಲ್‍ನ ಕಾಳಿಂಗ ಹಾಲ್‍ನಲ್ಲಿ ಕಾರ್ಯಕ್ರಮ ನಡೆಯಲಿದೆ.  ಇದನ್ನೂ ಓದಿ: ಪಬ್ಲಿಕ್ ಟಿವಿ ಡ್ರೀಮ್ ಸ್ಕೂಲ್ ಎಕ್ಸ್‌ಪೋಗೆ ಭೇಟಿ ನೀಡಿ ಪರಿಹಾರವನ್ನು ಕಂಡುಕೊಳ್ಳಿ


    2 ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ಹೆಸರಾಂತ ಅಂತರಾಷ್ಟ್ರೀಯ ಶಾಲೆಗಳು, ವಸತಿ ಶಾಲೆಗಳು, ಕಿಂಡರ್ ಗಾರ್ಡನ್, ಮಾಂಟೆಸ್ಸರಿ ಸ್ಕೂಲ್‍ಗಳ, ಮಾಹಿತಿ ಹಾಗೂ ವೈಜ್ಞಾನಿಕ ಕಲಿಕೆಗೆ ನೆರವಾಗುವ ಎಲ್ಲ ಮಾಹಿತಿಗಳನ್ನು ಒಂದೇ ವೇದಿಕೆ ಸಿಗಲಿದೆ.

    ಈ ಎಕ್ಸ್ ಪೋದಲ್ಲಿ 20ಕ್ಕೂ ಹೆಚ್ಚು ಶಾಲೆಗಳು ವಿಶೇಷ ಉಪನ್ಯಾಸಗಳು, ಡ್ರಾಯಿಂಗ್ ಸ್ಪರ್ಧೆ, ಕ್ವಿಜ್, ಮ್ಯಾಜಿಕ್ ಶೋ, ಸ್ಥಳದಲ್ಲಿ ಅಡ್ಮಿಷನ್ಸ್ ಸಹ ಮಾಡಬಹುದು. ಬೆಳಗ್ಗೆ 9.30ರಿಂದ ಸಂಜೆ 6:30ರವರೆಗೆ ಈ ಕಾರ್ಯಕ್ರಮ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಬ್ಲಿಕ್ ಟಿವಿ ಡ್ರೀಮ್ ಸ್ಕೂಲ್ ಎಕ್ಸ್‌ಪೋಗೆ ಭೇಟಿ ನೀಡಿ ಪರಿಹಾರವನ್ನು ಕಂಡುಕೊಳ್ಳಿ

    ಪಬ್ಲಿಕ್ ಟಿವಿ ಡ್ರೀಮ್ ಸ್ಕೂಲ್ ಎಕ್ಸ್‌ಪೋಗೆ ಭೇಟಿ ನೀಡಿ ಪರಿಹಾರವನ್ನು ಕಂಡುಕೊಳ್ಳಿ

    ಬೆಂಗಳೂರು: ಮಕ್ಕಳನ್ನು ಯಾವ ಶಾಲೆ ಸೇರಿಸಬೇಕು? ಉತ್ತಮ ಶಿಕ್ಷಣ ನೀಡುವ ಶಾಲೆಗಳು ಯಾವುದು? ಎಲ್ಲಿ ಓದಿದರೆ ಮಕ್ಕಳ ಭವಿಷ್ಯಕ್ಕೆ ಒಳ್ಳೆಯದು? ಈ ರೀತಿ ಯೋಚನೆ ಮಾಡುತ್ತಿರುವ ಪೋಷಕರಿಗೆ ಗುಡ್ ನ್ಯೂಸ್ ಎಂಬಂತೆ ಪಬ್ಲಿಕ್ ಟಿವಿ `ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋ’ ಕಾರ್ಯಕ್ರಮವನ್ನು ಆಯೋಜಿಸಿದೆ.

    ಹೌದು. ಪಬ್ಲಿಕ್ ಟಿವಿ ಕಳೆದ ಬಾರಿ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಗಾಯತ್ರಿ ವಿಹಾರದಲ್ಲಿ ವಿದ್ಯಾಪೀಠ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿ ವಿವಿಧ ಕೋರ್ಸ್ ಬಗ್ಗೆ ಅತಿಥಿಗಳಿಂದ ಉಪನ್ಯಾಸ, ಶಿಕ್ಷಣ ಸಂಸ್ಥೆಗಳ ಮಾಹಿತಿಯನ್ನು ಪಡೆದುಕೊಂಡಿದ್ದರು. ಈ ಕಾರ್ಯಕ್ರಮ ಯಶಸ್ವಿಯಾದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಯುನಿಕ್ ಸ್ಕೂಲ್ ಎಕ್ಸ್‌ಪೋ- 2018 ರ `ಡ್ರೀಮ್ ಸ್ಕೂಲ್ಸ್’ ಕಾರ್ಯಕ್ರಮವನ್ನು ಆಯೋಜಿಸಿದೆ.

    ಡಿಸೆಂಬರ್ 22 ಹಾಗೂ 23 ರಂದು ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಲಲಿತ್ ಅಶೋಕ್ ಹೋಟೆಲ್‍ನ ಕಾಳಿಂಗಾ ಹಾಲ್-2 ರಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

    ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಹೆಸರಾಂತ ಅಂತರಾಷ್ಟ್ರೀಯ ಶಾಲೆಗಳು, ವಸತಿ ಶಾಲೆಗಳು, ಕಿಂಡರ್ ಗಾರ್ಡನ್, ಮಾಂಟೆಸ್ಸರಿ, ಟಾಪ್ ಸ್ಕೂಲ್‍ಗಳ ಮಾಹಿತಿ ಹಾಗು ವೈಜ್ಞಾನಿಕ ಕಲಿಕೆಗೆ ನೆರವಾಗುವ ಎಲ್ಲಾ ಮಾಹಿತಿಗಳು ಒಂದೇ ಕಡೆಯಲ್ಲಿ ಸಿಗಲಿದೆ.

    ಏನೆಲ್ಲ ಇರಲಿದೆ?
    ಒಂದೇ ಮಳಿಗೆಯಲ್ಲಿ 20ಕ್ಕೂ ಹೆಚ್ಚು ಶಾಲೆಗಳು, ವಿಶೇಷ ಉಪನ್ಯಾಸಗಳು, ಡ್ರಾಯಿಂಗ್ ಸ್ಪರ್ಧೆ, ಕ್ವಿಜ್ ಸ್ಪರ್ಧೆ, ಮ್ಯಾಜಿಕ್ ಶೋ, ಭಾಗವಹಿಸಿದ್ದ ಸ್ಪರ್ಧೆಗಳಿಗೆ ಗಿಫ್ಟ್,  ಸ್ಥಳದಲ್ಲೇ ಅಡ್ಮಿಶನ್ ಮಾಡಬಹುದಾಗಿದೆ.

    ಮುಖ್ಯ ಪ್ರಾಯೋಜಕರು
    ನ್ಯೂ ಬಾಲ್ಡ್ ವಿನ್ ಇಂಟರ್‍ನ್ಯಾಷನಲ್ ಸ್ಕೂಲ್

    ಪ್ಲಾಟಿನಂ ಪ್ರಾಯೋಜಕರು
    ಬಿಜಿಎಸ್ ಇಂಟರ್ ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್

    ಗೋಲ್ಡ್ ಪ್ರಾಯೋಜಕರು
    ಶ್ರೀ ಜಗದ್ಗುರು ರೇಣುಕಾಚಾರ್ಯ ಪಬ್ಲಿಕ್ ಸ್ಕೂಲ್
    ಕೇಂಬ್ರಿಡ್ಜ್ ಸ್ಕೂಲ್

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
    ಬಸವರಾಜ್. ಸಿ – 96066 66031
    ಮಂಜುನಾಥ್. ಎನ್ – 99000 60891

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv