Tag: Draw

  • 1 ಕೋಟಿ ಡ್ರಾ ಮಾಡಿದ್ರೆ 2 ಲಕ್ಷ ಕಟ್ಟಿ

    1 ಕೋಟಿ ಡ್ರಾ ಮಾಡಿದ್ರೆ 2 ಲಕ್ಷ ಕಟ್ಟಿ

    ನವದೆಹಲಿ: ಡಿಜಿಟಲ್ ವ್ಯವಹಾರವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬ್ಯಾಕಿನಿಂದ ವರ್ಷಕ್ಕೆ 1 ಕೋಟಿ ರೂ.ಗೂ ಅಧಿಕ ಹಣವನ್ನು ಡ್ರಾ ಮಾಡಿದರೆ ಶೇ.2 (2 ಲಕ್ಷ ರೂ.) ಟಿಡಿಎಸ್ ಗೆ ಪಾವತಿಸಬೇಕು ಎನ್ನುವ ಪ್ರಸ್ತಾಪವನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ.

    ಇಲ್ಲಿಯವರೆಗೆ ನಗದು ಹಣವನ್ನು ಬ್ಯಾಕಿನಿಂದ ಡ್ರಾ ಮಾಡಿದರೆ ಯಾವುದೇ ಟಿಡಿಎಸ್ ಇರುತ್ತಿರಲಿಲ್ಲ. ಈ ಬಾರಿಯ ಬಜೆಟ್‍ನಲ್ಲಿ ಈ ಪ್ರಸ್ತಾಪ ಇರಲಿದೆ ಎನ್ನುವ ನಿರೀಕ್ಷೆ ಮೊದಲೇ ಮಾಡಲಾಗಿತ್ತು.

    ಮುಖ್ಯಾಂಶಗಳು:
    * 2013-14ರಲ್ಲಿ 6.38 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹಣೆ ಆಗಿತ್ತು. 2018-19ರಲ್ಲಿ 11.37 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹವಾಗಿದೆ. ನೇರ ತೆರಿಗೆ ಸಂಗ್ರಹಣೆಯಲ್ಲಿ ಶೇ.78ರಷ್ಟು ಏರಿಕೆ ಕಂಡಿದೆ.

    * 250 ಕೋಟಿ ರೂ. ವ್ಯವಹಾರ(turn over)ವನ್ನು ಹೊಂದಿರುವ ಕಾರ್ಪೋರೇಟರ್ ಕಂಪನಿಗಳ ಮೇಲಿನ ಶೇ.25ರಷ್ಟಿದ್ದು, ಯಾವುದೇ ಬದಲಾವಣೆಗಳಿಲ್ಲ. 400 ಕೋಟಿ ರೂ. ವ್ಯವಹಾರವನ್ನು ಹೊಂದಿರುವ ಕಂಪನಿಗಳು ಸಹ ಶೇ.25 ತೆರಿಗೆ ವ್ಯಾಪ್ತಿಗೆ ಒಳಪಡುತ್ತವೆ. ಅಂದ್ರೆ ಶೇ.99.3ರಷ್ಟು ಕಂಪನಿಗಳು ಶೇ.25 ಕಾರ್ಪೋರೇಟ್ ಟ್ಯಾಕ್ಸ್ ವ್ಯಾಪ್ತಿಯಲ್ಲಿ ಒಳಪಡಲಿವೆ. ಕೇವಲ ಶೇ.0.7 ಕಂಪನಿಗಳು ಮಾತ್ರ ಶೇ.25ರ ಟ್ಯಾಕ್ಸ್ ವ್ಯಾಪ್ತಿಯಿಂದ ಹೊರ ಬರಲಿವೆ.

    * ಇಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಸಾಲದ ಪಡೆದ ವ್ಯಕ್ತಿಗೆ ವಿನಾಯ್ತಿ ಸಿಗಲಿದೆ. ಸಾಲ ಮರುಪಾವತಿಸುವ ಮೊತ್ತದಲ್ಲಿನ 1.5 ಲಕ್ಷ ರೂ.ಗೆ ತೆರಿಗೆ ವಿನಾಯ್ತಿ ಲಭ್ಯವಾಗಲಿದೆ.
    * ಸ್ಟಾರ್ಟ್ ಅಪ್ ಅಥವಾ ಈ ಯೋಜನೆ ಮೂಲಕ ಆರಂಭವಾದ ನಿಧಿಗೆ ತೆರಿಗೆ ವಿನಾಯ್ತಿ.

    * 45 ಲಕ್ಷ ರೂ.ವರೆಗಿನ ಗೃಹಸಾಲ ಪಡೆಯುವ ತೆರಿಗೆದಾರನಿಗೆ 3.5 ಲಕ್ಷ ರೂ.ವರೆಗೆ ತೆರಿಗೆ ವಿನಾಯ್ತಿ. ಈ ಮೊದಲು 2 ಲಕ್ಷದವರೆಗೆ ಮಾತ್ರ ವಿನಾಯ್ತಿಯನ್ನು ನೀಡಲಾಗಿತ್ತು.
    * ಕಲೆಕ್ಷನ್ ಪೇಮೆಂಟ್ ಸೌಲಭ್ಯದ ಮೇಲಿನ ಮರ್ಚಂಟ್ ಡಿಸ್ಕೌಂಟ್ ರೇಟ್ ಕಡಿತಗೊಳಿಸಲಾಗಿದೆ.

    * 120 ಕೋಟಿ ಜನರು ಆಧಾರ ಕಾಡ್ ಹೊಂದಿದ್ದಾರೆ. ಯಾರ ಬಳಿ ಪಾನ್ ಕಾರ್ಡ್ ಇಲ್ಲವೋ ಅವರೆಲ್ಲರೂ ಆಧಾರ್ ಮೂಲಕ ಟ್ಯಾಕ್ಸ್ ರಿಟರ್ನ್ ಗೆ ಅರ್ಜಿ ಸಲ್ಲಿಸಬಹುದು.
    * ನಗದು ವ್ಯವಹಾರ ಕಡಿಮೆಗೊಳಿಸು ಉದ್ದೇಶದಿಂದ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಒಂದು ವರ್ಷದಲ್ಲಿ ಓರ್ವ 1 ಕೋಟಿ ರೂ.ಗೂ ಅಧಿಕ ಹಣ ಡ್ರಾ ಮಾಡಿದ್ರೆ ಶೇ.2 (2 ಲಕ್ಷ ರೂ.) ಟಿಡಿಎಸ್ ಗೆ ಪಾವತಿಸಬೇಕು.
    * 2 ಕೋಟಿಯಿಂದ 5 ಕೋಟಿವರೆಗೆ ಆದಾಯ ವ್ಯಾಪ್ತಿಗೆ ಬರುವವರು ಶೇ.3ರಷ್ಟು ಉಪತೆರಿಗೆ(ಸರ್ ಚಾರ್ಜ್) ಮತ್ತು 5 ಕೋಟಿಗೂ ಮೇಲ್ಪಟ್ಟವರಿಗೆ ಶೇ.7 ರಷ್ಟು ಸರ್‍ಚಾರ್ಜ್ ಹೆಚ್ಚಿಸಲಾಗಿದೆ.

  • ನೀವು ಎಟಿಎಂ ಎದುರು ಸರತಿ ಸಾಲಿನಲ್ಲಿ ನಿಂತು ಹಣ ಪಡೆದುಕೊಳ್ಳುತ್ತೀರಾ? ಹಾಗಾದ್ರೆ ಈ ಸ್ಟೋರಿ ಓದಿ

    ನೀವು ಎಟಿಎಂ ಎದುರು ಸರತಿ ಸಾಲಿನಲ್ಲಿ ನಿಂತು ಹಣ ಪಡೆದುಕೊಳ್ಳುತ್ತೀರಾ? ಹಾಗಾದ್ರೆ ಈ ಸ್ಟೋರಿ ಓದಿ

    ಬೆಳಗಾವಿ/ಚಿಕ್ಕೋಡಿ: ಎಟಿಎಂ ಎದುರು ಸರತಿ ಸಾಲಿನಲ್ಲಿ ನಿಂತಾಗ ಕೈಯಲ್ಲಿ ನಿಮ್ಮ ಎಟಿಎಂ ಕಾರ್ಡ್ ಹಿಡಿದುಕೊಳ್ಳುವಾಗ ಎಚ್ಚರವಾಗಿರಿ. ಯಾಕಂದ್ರೆ ನಿಮ್ಮ ಎಟಿಎಂ ಮೇಲೆ ಇರುವ ನಂಬರ್ ನೋಡಿ ಹಾಗೂ ನಿಮ್ಮ ಜೊತೆಗೆ ಬಂದು ನಿಮ್ಮ ಪಿನ್ ಸಂಖ್ಯೆ ಕದ್ದು ನೋಡಿ ನಿಮ್ಮ ಹಣ ಕದಿಯುತ್ತಾರೆ.

    ಇಬ್ಬರು ಯೋಧರು ಸೇರಿ 8 ಜನರ ಬ್ಯಾಂಕ್ ಅಕೌಂಟಿಗೆ ಕನ್ನ ಹಾಕಿ 3 ಲಕ್ಷಕ್ಕೂ ಅಧಿಕ ಹಣವನ್ನು ವಿವಿಧ ಎಟಿಎಂಗಳಿಂದ ಹಣ ವಿಥ್ ಡ್ರಾ ಮಾಡಿದ್ದ ಖತರ್ನಾಕ್ ಖದೀಮನನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ. ಬಿಹಾರ ರಾಜ್ಯದ ಗಯಾ ಜಿಲ್ಲೆಯ ಡುಮರಿ ಗ್ರಾಮದ ರೋಹಿತೇಶ್ ಕುಮಾರ್ ಬಂಧಿತ ಆರೋಪಿ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ 8 ಗ್ರಾಹಕರ ಬ್ಯಾಂಕ್ ಅಕೌಂಟ್ ಹಣ ಹ್ಯಾಕ್ ಮಾಡಿ ಬೆಳಗಾವಿ, ಕೊಲ್ಲಾಪುರ, ಕೋಲ್ಕತ್ತಾ ಸೇರಿದಂತೆ ವಿವಿಧ ನಗರಗಳ ಎಟಿಎಂ ಕೇಂದ್ರಗಳಿಂದ ಈ ಖದೀಮ ಹಣ ಡ್ರಾ ಮಾಡಿಕೊಂಡಿದ್ದನು. ಈ ಖತರ್ನಾಕ್ ರೋಹಿತೇಶ್ ಎಟಿಎಂ ಕೇಂದ್ರಗಳ ಎದುರು ಸರತಿ ಸಾಲಿನಲ್ಲಿ ನಿಂತು ಎಟಿಎಂ ಸಂಖ್ಯೆಯನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದ. ಬಳಿಕ ಎಟಿಎಂ ಡ್ರಾ ಮಾಡುವ ಸಂದರ್ಭದಲ್ಲಿ ಕದ್ದು ಪಾಸ್‍ವರ್ಡ್ ನೋಡಿ ನಮೂದಿಸಿಕೊಳ್ಳುತ್ತಿದ್ದನು. ಬಳಿಕ ಅಲ್ಲಿಂದ ತೆರಳಿ ಆನ್ಲೈನ್ ಅಪ್ಲಿಕೇಶನ್ ಮೂಲಕ ಗ್ರಾಹಕರ ಕೊನೆಯ 4 ಎಟಿಎಂ ಸಂಖ್ಯೆ ಹಾಗೂ ಪಾಸ್ವರ್ಡ್ ಬಳಿಸಿ ಹಣ ಎಗಿರಿಸುತ್ತಿದ್ದನು.

    ಹುಕ್ಕೇರಿ ತಾಲೂಕಿನ ಯೋಧರಾದ ಶಿವಾನಂದ ಮುರಗಿ ಅವರ 2 ತಿಂಗಳು ವೇತನ 80 ಸಾವಿರ ಹಾಗೂ ಮಾರುತಿ ನಾಶಿಪುಡಿ ಅವರ 34 ಸಾವಿರ ರೂ.ಗಳು ಸೇರಿದಂತೆ ಒಟ್ಟು 8 ಜನರ 3 ಲಕ್ಷಕ್ಕೂ ಅಧಿಕ ಹಣಕ್ಕೆ ಈ ಖದೀಮ ಕನ್ನ ಹಾಕಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಹುಕ್ಕೇರಿ ಪೊಲೀಸರು ತನಿಖೆ ಆರಂಭಿಸಿದಾಗ ಇಂಥ ಪ್ರಕರಣದಲ್ಲೇ ಮಹಾರಾಷ್ಟ್ರ ಪೊಲೀಸರು ವ್ಯಕ್ತಿಯನ್ನು ಬಂಧಿಸಿರುವ ಮಾಹಿತಿ ಬರುತ್ತದೆ. ಆಗ ಹುಕ್ಕೇರಿ ಪೊಲೀಸರು ಮಹಾರಾಷ್ಟ್ರ ಪೊಲೀಸರನ್ನು ಸಂಪರ್ಕಿಸಿದಾಗ ಹಣ ಕಳ್ಳತನ ಮಾಡಿದ್ದಾಗಿ ಕಳ್ಳ ರೋಹಿತೇಶ್ ಒಪ್ಪಿಕೊಂಡಿದ್ದಾನೆ.

    ಅಲ್ಲದೆ ಎರಡು ಬಾರಿ ಈತ ಹುಕ್ಕೆರಿಗೆ ಬಂದು ಜನರ ಎಟಿಎಂ ಸಂಖ್ಯೆ ಹಾಗೂ ಪಿನ್ ನಮೂದಿಸಿಕೊಂಡು ಹೋಗಿರುವುದಾಗಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ. ಸದ್ಯ ಈತ ಮಹರಾಷ್ಟ್ರ ಜೈಲಿನಲ್ಲಿ ಇದ್ದು ಹುಕ್ಕೇರಿ ಪೊಲೀಸರು ಈತನನ್ನು ಹುಕ್ಕೇರಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

    ಹುಕ್ಕೇರಿ ಪೊಲೀಸ್ ಠಾಣೆ ಹಾಗೂ ಮಹರಾಷ್ಟ್ರ ರಾಜ್ಯದ ಕೊಲ್ಲಾಪುರ ಪೊಲೀಸ್ ಠಾಣೆಯಲ್ಲಿ ಖದೀಮನ ವಿರುದ್ಧ ಪ್ರಕರಣ ದಾಖಲಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv