Tag: dravid

  • ಬ್ರಿಟಿಷ್ ಹೈಕಮಿಷನರ್‌ಗೆ ಕನ್ನಡ ಪಾಠ ಹೇಳಿಕೊಟ್ಟ ದ್ರಾವಿಡ್

    ಬ್ರಿಟಿಷ್ ಹೈಕಮಿಷನರ್‌ಗೆ ಕನ್ನಡ ಪಾಠ ಹೇಳಿಕೊಟ್ಟ ದ್ರಾವಿಡ್

    ಬೆಂಗಳೂರು: ಭಾರತದ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರಿಗೆ ಟೀಮ್ ಇಂಡಿಯಾ ಮಾಜಿ ಆಟಗಾರ, ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಕನ್ನಡ ಪಾಠ ಮಾಡಿದ್ದಾರೆ.

    ಅಲೆಕ್ಸ್ ಎಲ್ಲಿಸ್ ದ್ರಾವಿಡ್ ಅವರನ್ನು ಶನಿವಾರ ಬೆಂಗಳೂರಿನಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ದ್ರಾವಿಡ್ ಕನ್ನಡ ಪದವನ್ನು ಅಲೆಕ್ಸ್ ಎಲ್ಲಿಸ್ ಹೇಳಿಕೊಟ್ಟಿದ್ದಾರೆ.

    ರಾಹುಲ್ ದ್ರಾವಿಡ್ “ಬೇಗ ಓಡಿ” ಎಂದು ಹೇಳಿದರೆ ಅಲೆಕ್ಸ್ ಎಲ್ಲಿಸ್ ಮುಂದುವರಿಸಿತ್ತಾ, “ಬೇಗ ಓಡಿ ಒನ್ ರನ್” ಎಂದು ಹೇಳಿ ನಕ್ಕಿದ್ದಾರೆ. ಇದನ್ನೂ ಓದಿ : ಮಸಾಲೆ ದೋಸೆ ಸವಿದು ಬೊಂಬಾಟ್ ಗುರು ಅಂದ್ರು ಭಾರತದ ಬ್ರಿಟಿಷ್ ಹೈಕಮಿಷನರ್! 

    ಅಲೆಕ್ಸ್ ಎಲ್ಲಿಸ್ ಈ ವಿಡಿಯೋವನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ಭಾಷೆಗಳಲ್ಲಿ ಕ್ರಿಕೆಟ್ ಅನುಭವ ಭಾಗ 2. ಇಂದು ನಾವು ಬೆಂಗಳೂರಿನಲ್ಲಿ ದಕ್ಷಿಣದಲ್ಲಿದ್ದೇವೆ. ಟೀಚರ್, ಕೋಚ್ ಆಗಿರುವ ದ್ರಾವಿಡ್ ನನಗೆ ಕನ್ನಡ ಹೇಳಿಕೊಟ್ಟಿದ್ದಾರೆ ಎಂದು ಹೇಳಿ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋಗೆ 1 ಲಕ್ಷಕ್ಕೂ ಹೆಚ್ಚು ವ್ಯೂ ಬಂದಿದ್ದು, 7 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

  • ಡ್ರೆಸ್ಸಿಂಗ್ ರೂಮಿನಲ್ಲಿ ಟೀಂ ಇಂಡಿಯಾ ಸಂಭ್ರಮ – ಅದ್ಭುತ ಗೆಲುವು ಎಂದ ದ್ರಾವಿಡ್

    ಡ್ರೆಸ್ಸಿಂಗ್ ರೂಮಿನಲ್ಲಿ ಟೀಂ ಇಂಡಿಯಾ ಸಂಭ್ರಮ – ಅದ್ಭುತ ಗೆಲುವು ಎಂದ ದ್ರಾವಿಡ್

    ಕೊಲಂಬೋ: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾದ ಜಯ ಅದ್ಭುತ ಗೆಲುವು ಎಂದು ಕೋಚ್ ರಾಹುಲ್ ದ್ರಾವಿಡ್ ಬಣ್ಣಿಸಿದ್ದಾರೆ.

    3 ವಿಕೆಟ್‍ಗಳ ರೋಚಕ ಗೆಲುವಿನ ನಂತರ ಡ್ರೆಸ್ಸಿಂಗ್ ರೂಮಿನಲ್ಲಿ ಸಂಭ್ರಮ ಮನೆ ಮಾಡಿತ್ತು. ಈ ವೇಳೆ ಆಟಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಶ್ರೀಲಂಕಾ ಉತ್ತಮವಾಗಿ ಆಟವಾಡಿತು. ನಾವು ಅತ್ಯುತ್ತಮವಾಗಿ ಚಾಂಪಿಯನ್ ತಂಡದಂತೆ ಪ್ರತಿಕ್ರಿಯಿಸಿದ್ದೇವೆ. ನೀವೆಲ್ಲರೂ ಚೆನ್ನಾಗಿ ಆಡಿದ್ದೀರಿ. ಅದ್ಭುತ ಗೆಲುವು ಎಂದು ಹೇಳಿ ತಂಡವನ್ನು ಹೊಗಳಿದ್ದಾರೆ.

    ಇನ್ನೂ ಒಂದು ಪಂದ್ಯ ಇರುವಂತೆ ಸರಣಿ ಗೆದ್ದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ದ್ರಾವಿಡ್ ಟ್ರೆಂಡಿಂಗ್ ಆಗಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ದ್ರಾವಿಡ್ ಅವರ ಕೋಚ್ ಶೈಲಿಯನ್ನು ಮೆಚ್ಚಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    2 ವಿಕೆಟ್ ತೆಗೆದು 69 ರನ್ ಹೊಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ದೀಪಕ್ ಚಹರ್ ರಾಹುಲ್ ದ್ರಾವಿಡ್ ಅವರ ಬಗ್ಗೆ ಮಾತನಾಡಿ, ಭಾರತ ಎ ತಂಡದಲ್ಲಿ ಆಡುತ್ತಿದ್ದಾಗ ರಾಹುಲ್ ದ್ರಾವಿಡ್ ಏಳನೇ ಕ್ರಮಾಂಕದಲ್ಲಿ ನನ್ನ ಸಾಮಥ್ರ್ಯವನ್ನು ಗುರುತಿಸಿದ್ದರು ಎಂದು ಉಲ್ಲೇಖಿಸಿದ್ದರು. ಇದನ್ನೂ ಓದಿ : ಸಹ ಆಟಗಾರನ ಫುಟ್‍ಬಾಲ್ ಆಟಕಂಡು ನೆಲದಲ್ಲಿ ಹೊರಳಾಡಿ ನಕ್ಕ ಕೊಹ್ಲಿ

    ಪಂದ್ಯದ ಸಮಯದಲ್ಲೇ ದೀಪಕ್ ಚಹರ್ ಅವರ ಸಹೋದರ ರಾಹುಲ್ ಚಹರ್ ಅವರಿಗೆ ದ್ರಾವಿಡ್ ಸಲಹೆ ನೀಡುತ್ತಿದ್ದ ಫೋಟೋಗಳು ಸಹ ವೈರಲ್ ಆಗುತ್ತಿದೆ. ಸಾವಿರ ಪದಗಳಲ್ಲಿ ಹೇಳುವುದನ್ನು ಒಂದು ಚಿತ್ರ ಹೇಳುತ್ತದೆ. ದ್ರಾವಿಡ್ ಟೀಂ ಇಂಡಿಯಾದ ಕೋಚ್ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಭಾರತ ತಂಡವನ್ನು ಯಾವುದೇ ಕಾರಣಕ್ಕೂ ಕಡಿಮೆ ಅಂದಾಜು ಮಾಡಬೇಡಿ ಎಂದು ಆಸ್ಟ್ರೇಲಿಯಾ ಮಾಜಿ ಆಟಗಾರ ಜಸ್ಟಿನ್ ಲ್ಯಾಂಗರ್ ಈ ಹಿಂದೆ ಹೇಳಿದ ಮಾತು ಮತ್ತೆ ನಿಜವಾಗಿದೆ ಎಂದು ಜನ ಹೇಳುತ್ತಿದ್ದಾರೆ

    https://twitter.com/arun_vatsa12/status/1417755157127852033

    ಗೆಲ್ಲಲು 276 ರನ್ ಗಳ ಗುರಿಯನ್ನು ಪಡೆದ ಭಾರತ ಸೂರ್ಯ ಕುಮಾರ್ ಯಾದವ್, ದೀಪಕ್ ಚಹರ್ ಅವರ ಅರ್ಧಶತಕದಿಂದ 49.1 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 277 ರನ್ ಹೊಡೆದು ಜಯಗಳಿಸಿತು.

    193 ರನ್ ಗಳಿಸಿದ್ದಾಗ ಸೂರ್ಯಕುಮಾರ್ ಯಾದವ್ 7ನೇಯವರಾಗಿ ಔಟಾದಾಗ ಭಾರತ ಸೋಲಿನತ್ತ ಮುಖಮಾಡಿತ್ತು. ಆದರೆ ಮುರಿಯದ 8ನೇ ವಿಕೆಟಿಗೆ ದೀಪಕ್ ಚಹರ್ ಮತ್ತು ಭುವನೇಶ್ವರ್ ಕುಮಾರ್ 84 ಎಸೆತಗಳಲ್ಲಿ 84 ರನ್ ಜೊತೆಯಾಟವಾಡಿ ಭಾರತ ಸರಣಿ ಗೆಲ್ಲುವಂತೆ ಮಾಡಿದರು.

    https://twitter.com/anshuman7345/status/1417742743485308928

    ಇದಕ್ಕೂ ಮೊದಲು 6ನೇ ವಿಕೆಟಿಗೆ ಸೂರ್ಯಕುಮಾರ್ ಯಾದವ್ ಮತ್ತು ಕೃನಾಲ್ ಪಾಂಡ್ಯ 44 ರನ್ ನಂತರ 7ನೇ ವಿಕೆಟಿಗೆ ಕೃನಾಲ್ ಪಾಂಡ್ಯ ಮತ್ತು ಚಹರ್ 49 ರನ್ ಜೊತೆಯಾಟವಾಡಿ ಪಂದ್ಯವನ್ನು ಭಾರತದತ್ತ ತಿರುಗಿಸಿದರು.

  • 8ನೇ ವಿಕೆಟಿಗೆ 84 ರನ್ ಜೊತೆಯಾಟ – ರೋಚಕ ಜಯ, ಭಾರತಕ್ಕೆ ಸರಣಿ

    8ನೇ ವಿಕೆಟಿಗೆ 84 ರನ್ ಜೊತೆಯಾಟ – ರೋಚಕ ಜಯ, ಭಾರತಕ್ಕೆ ಸರಣಿ

    – ಒಂದು ಪಂದ್ಯ ಇರುವಂತೆಯೇ ಸರಣಿ ಜಯ
    – ದೀಪಕ್ ಚಹರ್, ಸೂರ್ಯಕುಮಾರ್ ಯಾದವ್ ಚೊಚ್ಚಲ ಅರ್ಧಶತಕ

    ಕೊಲಂಬೋ: ಸೋಲಿನತ್ತ ಮುಖ ಮಾಡಿದ್ದ ಟೀಂ ಇಂಡಿಯಾ ಮೂರು ವಿಕೆಟ್‍ಗಳಿಂದ ಎರಡನೇ ಪಂದ್ಯವನ್ನು ಕೊನೆಯ ಓವರಿನಲ್ಲಿ ರೋಚಕವಾಗಿ ಜಯಗಳಿಸಿದೆ. ಈ ಮೂಲಕ ಇನ್ನು ಒಂದು ಪಂದ್ಯ ಇರುವಂತೆಯೇ ಏಕದಿನ ಸರಣಿಯನ್ನು ಗೆದ್ದುಕೊಂಡಿದೆ.

    ಗೆಲ್ಲಲು 276 ರನ್ ಗಳ ಗುರಿಯನ್ನು ಪಡೆದ ಭಾರತ ಸೂರ್ಯ ಕುಮಾರ್ ಯಾದವ್, ದೀಪಕ್ ಚಹರ್ ಅವರ ಅರ್ಧಶತಕದಿಂದ 49.1 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 277 ರನ್ ಹೊಡೆದು ಜಯಗಳಿಸಿತು.

    193 ರನ್ ಗಳಿಸಿದ್ದಾಗ ಸೂರ್ಯಕುಮಾರ್ ಯಾದವ್ 7ನೇಯವರಾಗಿ ಔಟಾದಾಗ ಭಾರತ ಸೋಲಿನತ್ತ ಮುಖಮಾಡಿತ್ತು. ಆದರೆ ಮುರಿಯದ 8ನೇ ವಿಕೆಟಿಗೆ ದೀಪಕ್ ಚಹರ್ ಮತ್ತು ಭುವನೇಶ್ವರ್ ಕುಮಾರ್ 84 ಎಸೆತಗಳಲ್ಲಿ 84 ರನ್ ಜೊತೆಯಾಟವಾಡಿ ಭಾರತ ಸರಣಿ ಗೆಲ್ಲುವಂತೆ ಮಾಡಿದರು.

    ಇದಕ್ಕೂ ಮೊದಲು 6ನೇ ವಿಕೆಟಿಗೆ ಸೂರ್ಯಕುಮಾರ್ ಯಾದವ್ ಮತ್ತು ಕೃನಾಲ್ ಪಾಂಡ್ಯ 44 ರನ್ ನಂತರ 7ನೇ ವಿಕೆಟಿಗೆ ಕೃನಾಲ್ ಪಾಂಡ್ಯ ಮತ್ತು ಚಹರ್ 49 ರನ್ ಜೊತೆಯಾಟವಾಡಿ ಪಂದ್ಯವನ್ನು ಭಾರತದತ್ತ ತಿರುಗಿಸಿದರು.

    ಭಾರತದ ಪರ ಸೂರ್ಯಕುಮರ್ ಯಾದವ್ 53 ರನ್(44 ಎಸೆತ, 6 ಬೌಂಡರಿ), ಮನೀಷ್ ಪಾಂಡೆ 37 ರನ್(31 ಎಸೆತ, 3 ಬೌಂಡರಿ) ಹೊಡೆದು ಔಟಾದರು. ದೀಪಕ್ ಚಹರ್ ಔಟಾಗದೇ 69 ರನ್(82 ಎಸೆತ, 7 ಬೌಂಡರಿ, 1 ಸಿಕ್ಸರ್), ಭುವನೇಶ್ವರ್ ಕುಮಾರ್ ಔಟಾಗದೇ 19 ರನ್(28 ಎಸೆತ, 2 ಬೌಂಡರಿ) ಹೊಡೆದರು.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಶ್ರೀಲಂಕಾ ಆವಿಷ್ಕಾ ಫೆರ್ನಾಂಡೋ 50 ರನ್(71 ಎಸೆತ, 4 ಬೌಂಡರಿ, 1 ಸಿಕ್ಸರ್), ಮಿನೋದ್ ಭನುಕಾ 36 ರನ್(42 ಎಸೆತ, 6 ಬೌಂಡರಿ), ಧನಂಜಯ ಡಿಸಿಲ್ವಾ 32 ರನ್(45 ಎಸೆತ, 1 ಬೌಂಡರಿ), ಚರಿತ್ ಅಸಲಂಕಾ 65 ರನ್(68 ಎಸೆತ, 6 ಬೌಂಡರಿ) ಹೊಡೆದರೆ ಕೊನೆಯಲ್ಲಿ ಚಮಿಕಾ ಕರುಣರತ್ನೆ 44 ರನ್(33 ಎಸೆತ, 5 ಬೌಂಡರಿ) ಹೊಡೆದ ಪರಿಣಾಮ ತಂಡ 275 ರನ್ ಗಳಿಸಿತು.

    ಭಾರತ ಇತರೇ ರೂಪದಲ್ಲಿ 21 ರನ್( ಲೆಗ್‍ಬೈ 6, ನೋಬಾಲ್ 2, 13 ವೈಡ್) ಬಿಟ್ಟುಕೊಟ್ಟಿತ್ತು. ಶುಕ್ರವಾರ ಮೂರನೇ ಹಾಗೂ ಕೊನೆಯ ಪಂದ್ಯ ಕೊಲಂಬೋದಲ್ಲಿ ನಡೆಯಲಿದೆ.

  • ವಿಶ್ವ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಂಬಳ ಪಡೆಯೋ ಕೋಚ್ ರವಿಶಾಸ್ತ್ರಿ!

    ವಿಶ್ವ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಂಬಳ ಪಡೆಯೋ ಕೋಚ್ ರವಿಶಾಸ್ತ್ರಿ!

    ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಕೋಚ್ ಗಳಿಗೆ ನೀಡುವ ಸಂಭಾವನೆ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರು ಮಾಸಿಕ 36 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಈ ಮೂಲಕ ಮೂಲಕ ವಿಶ್ವದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಕೋಚ್ ರವಿಶಾಸ್ತ್ರಿ ಆಗಿದ್ದಾರೆ.

    ಬಿಸಿಸಿಐ ಬಿಡುಗಡೆಗೊಳಿಸಿದ ಪಟ್ಟಿಯ ಅನ್ವಯ ರವಿಶಾಸ್ತ್ರಿ ಅವರು 2018 ಏಪ್ರಿಲ್ ನಿಂದ ಜುಲೈ 2018 ಅವಧಿಯಲ್ಲಿ ತಿಂಗಳಿಗೆ 36 ಲಕ್ಷ ರೂ. ನಂತೆ 1,89,37,500 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಇನ್ನು ಅಂಡರ್ 19 ತಂಡದ ಕೋಚ್ ಆಗಿರುವ ದ್ರಾವಿಡ್ 40,50,000 ರೂ. ಗಳನ್ನು 2018 ಮಾರ್ಚ್ ತಿಂಗಳಿನಲ್ಲಿ ಪಡೆದಿದ್ದಾರೆ. ಈ ಹಿಂದೆ ದ್ರಾವಿಡ್ ವಾರ್ಷಿಕವಾಗಿ ದ್ರಾವಿಡ್ 4.86 ಕೋಟಿ ರೂ. ಗಳನ್ನು ಪಡೆದಿದ್ದರು.

    ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ರವಿ ಶಾಸ್ತ್ರಿ ಅವರನ್ನು 2017 ಜುಲೈ ನಲ್ಲಿ ನೇಮಕಗೊಂಡಿದ್ದರು. ಬಿಸಿಸಿಐ ಅಹ್ವಾನಿಸಿದ್ದ ಕೋಚ್ ಹುದ್ದೆಯ ಅರ್ಜಿಗೆ ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ಸಹ ಅರ್ಜಿ ಸಲ್ಲಿಸಿದ್ದರು. ಸದ್ಯ ಬಿಸಿಸಿಐ ಅಂಡರ್ 19 ತಂಡದ ಕೋಚ್ ಹುದ್ದೆಗೆ ದ್ರಾವಿಡ್ ರೊಂದಿನ ಒಪ್ಪಂದವನ್ನು ನವೀಕರಿಸಿದ್ದು, 2019 ರ ವರೆಗೂ ದ್ರಾವಿಡ್ ಕೋಚ್ ಆಗಿ ಮುಂದುವರೆಯಲಿದ್ದಾರೆ.

    ದ್ರಾವಿಡ್ ಅವರ ತರಬೇತಿಯಲ್ಲಿ ಅಂಡರ್ 19 ತಂಡ ವಿಶ್ವಕಪ್ ಎತ್ತಿಹಿಡಿದಿತ್ತು. ಈ ಬಾರಿಯ ಐಪಿಎಲ್ ಟೂರ್ನಿಯಲ್ಲೂ ದ್ರಾವಿಡ್ ಬಾಯ್ಸ್ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು.

  • 13 ವರ್ಷಗಳ ಹಿಂದೆ ದ್ರಾವಿಡ್ ನಿರ್ಮಿಸಿದ್ದ ದಾಖಲೆ ಮುರಿದ ಪೂಜಾರ

    13 ವರ್ಷಗಳ ಹಿಂದೆ ದ್ರಾವಿಡ್ ನಿರ್ಮಿಸಿದ್ದ ದಾಖಲೆ ಮುರಿದ ಪೂಜಾರ

    ರಾಂಚಿ: ಮೂರನೇ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಅವರು 502 ಬಾಲ್‍ಗಳನ್ನು ಎದುರಿಸಿ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಮರಿಯುವ ಮೂಲಕ ಟೀಂ ಇಂಡಿಯಾ ಪರ ಅತ್ಯಧಿಕ ಬಾಲನ್ನು ಎದುರಿಸಿದ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಚೇತೇಶ್ವರ ಪೂಜಾರ 4ನೇ ದಿನದಾಟದಲ್ಲಿ 502 ಎಸೆತಗಳನ್ನು ಎದುರಿಸಿ 202 ರನ್(21 ಬೌಂಡರಿ) ಬಾರಿಸುವ ಮೂಲಕ ಪಾಕ್ ವಿರುದ್ಧ ದ್ರಾವಿಡ್ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.

    2004ರ ಏಪ್ರಿಲ್‍ನಲ್ಲಿ ರಾಹುಲ್ ದ್ರಾವಿಡ್ ಪಾಕಿಸ್ತಾನ ವಿರುದ್ಧ ರಾವಲ್ಪಿಂಡಿಯಲ್ಲಿ ನಡೆದ ಮೂರನೇ ಟೆಸ್ಟ್ ನ ಮೊದಲನೇ ಇನ್ನಿಂಗ್ಸ್ ನಲ್ಲಿ 270 ರನ್(495 ಎಸೆತ, 34 ಬೌಂಡರಿ, 1 ಸಿಕ್ಸರ್) ಬಾರಿಸಿದ್ದರು. ಈಗ ಪೂಜಾರ 502 ಬಾಲ್‍ಗಳನ್ನು ಫೇಸ್ ಮಾಡುವ ಮೂಲಕ 13 ವರ್ಷದ ಹಿಂದೆ ದ್ರಾವಿಡ್ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ. ದ್ರಾವಿಡ್ ದ್ವಿಶತಕ ಸಾಧನೆಯಿಂದಾಗಿ ಭಾರತ ಈ ಪಂದ್ಯವನ್ನು ಇನ್ನಿಂಗ್ಸ್ ಮತ್ತು 131 ರನ್‍ಗಳಿಂದ ಗೆದ್ದುಕೊಂಡಿತ್ತು. ವಿಶೇಷ ಏನೆಂದರೆ ಇವರಿಬ್ಬರು ಆರಂಭಿಕ ಆಟಗಾರು ಔಟಾದ ಬಳಿಕ ಬಂದು ಈ ಸಾಧನೆ ಮಾಡಿದ್ದಾರೆ.

    ಇಂಗ್ಲೆಂಡಿನ ಆಟಗಾರನಿಗೆ ವಿಶ್ವದಾಖಲೆಯ ಪಟ್ಟ:
    ಅತಿ ಹೆಚ್ಚು ಬಾಲನ್ನು ಎದುರಿಸಿದ ವಿಶ್ವ ದಾಖಲೆ ಇಂಗ್ಲೆಂಡಿನ ಸರ್ ಲಿನೋನಾರ್ಡ್ ಹಟ್ಟನ್ ಹೆಸರಿನಲ್ಲಿದೆ. 1938ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 847 ಬಾಲಿಗೆ ಹಟ್ಟನ್ 364 ರನ್ ಹೊಡೆದಿದ್ದರು.

    ಮೂರನೇ ಅತ್ಯಧಿಕ ಸ್ಕೋರ್: ಚೇತೇಶ್ವರ ಪೂಜಾರ ಅವು ಈ ಸಾಧನೆಯ ಜೊತೆಗೆ ಆಸ್ಟ್ರೇಲಿಯಾ ವಿರುದ್ಧ ಎರಡು ದ್ವಿಶತಕ ಹೊಡೆದ ಸಚಿನ್, ಲಕ್ಷ್ಮಣ್ ಅವರ ಕ್ಲಬ್ ಸೇರಿದ್ದಾರೆ. ಪೂಜಾರ ಈ ಹಿಂದೆ 2013ರಲ್ಲಿ ಹೈದರಬಾದ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ನಲ್ಲಿ 202 ರನ್ ಗಳಿಸಿದ್ದರು. ಪೂಜಾರ ಇಂಗ್ಲೆಂಡ್ ವಿರುದ್ಧದ ಅಹಮದಾಬಾದ್‍ನಲ್ಲಿ ನಡೆದ ಟೆಸ್ಟ್ ನಲ್ಲಿ ವೈಯಕ್ತಿಕ ಗರಿಷ್ಠ 206 ರನ್ ಬಾರಿಸಿದ್ದರು.

    ಭಾರತದ ಭಾರೀ ಮೊತ್ತ: ಮೂರನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 360 ರನ್‍ಗಳಿಸಿದ್ದ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 210 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 603 ರನ್‍ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿದೆ. ನಿನ್ನೆ 130 ರನ್‍ಗಳಿಸಿದ್ದ ಪೂಜಾರ ಇಂದು ದ್ವಿಶತಕ ಹೊಡೆದರೆ, 18 ರನ್‍ಗಳಿಸಿದ್ದ ವೃದ್ಧಿಮಾನ್ ಸಹಾ ಇಂದು 117 ರನ್(233 ಎಸೆತ, 8 ಬೌಂಡರಿ, 1 ಸಿಕ್ಸರ್) ಬಾರಿಸಿ ಔಟಾದರು.

    ಇವರಿಬ್ಬರು ಏಳನೇ ವಿಕೆಟ್‍ಗೆ 466 ಎಸೆತಗಳಲ್ಲಿ 199 ರನ್ ಜೊತೆಯಾಟವಾಡುವ ಮೂಲಕ ಭಾರತ ಭಾರೀ ಮೊತ್ತವನ್ನು ಪೇರಿಸಿದೆ. ಜಡೇಜಾ ಔಟಾಗದೇ 54 ರನ್(55 ಎಸೆತ, 5 ಬೌಂಡರಿ, 2 ಸಿಕ್ಸರ್) ಬಾರಿಸಿದರೆ, ಉಮೇಶ್ ಯಾದವ್ 16 ರನ್ ಹೊಡೆದರು.

    ಬೈ 14, ಲೆಗ್ ಬೈ 5 ರನ್ ನೀಡಿ ಇತರೇ ರೂಪದಲ್ಲಿ 19 ರನ್ ಬಿಟ್ಟುಕೊಟ್ಟ ಕಾರಣ ಭಾರತ 600 ರನ್‍ಗಳ ಗಡಿಯನ್ನು ದಾಟಿತ್ತು.

    ಕುತೂಹಲ ಘಟ್ಟದಲ್ಲಿ ಟೆಸ್ಟ್: ನಾಲ್ಕನೇಯ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 7.2 ಓವರ್‍ಗಳಲ್ಲಿ 2 ವಿಕೆಟ್ ಕಳೆದುಕೊಂಡು 23 ರನ್ ಗಳಿಸಿದೆ. ಡೇವಿಡ್ ವಾರ್ನರ್ ಮತ್ತು ನಥನ್ ಲಿಯಾನ್ ಔಟಾಗಿದ್ದು, ಕ್ರೀಸ್‍ನಲ್ಲಿ ಮ್ಯಾಟ್ ರೇನ್ ಷಾ ಇದ್ದಾರೆ. ಎರಡು ವಿಕೆಟ್‍ಗಳನ್ನು ಜಡೇಜಾ ಕಬಳಿಸಿದ್ದಾರೆ. ನಾಳೆ ಕೊನೆಯ ದಿನವಾಗಿದ್ದು ಪಂದ್ಯ ಏನಾಗಲಿದೆ ಎನ್ನುವ ಕುತೂಹಲ ಹೆಚ್ಚಾಗಲಿದೆ.

    77 ಓವರ್ ಎಸೆದ ಕೀಫ್: ಸ್ಪಿನ್ನರ್ ಸ್ಟೀವ್ ಓ ಕೀಫ್ ಮೊದಲ ಇನ್ನಿಂಗ್ಸ್ ನಲ್ಲಿ 77 ಓವರ್ ಎಸೆಯುವ ಮೂಲಕ ಆಸ್ಟ್ರೇಲಿಯಾ ಪರವಾಗಿ ಭಾರತದ ವಿರುದ್ಧ ಅತಿ ಹೆಚ್ಚು ಓವರ್ ಎಸೆದ ಬೌಲರ್ ಆಗಿದ್ದಾರೆ. ಕೀಫ್ 77 ಓವರ್‍ನಲ್ಲಿ 17 ಓವರ್ ಮೇಡನ್ ಮಾಡಿ 199 ರನ್ 3 ವಿಕೆಟ್ ಕಿತ್ತಿದ್ದಾರೆ.