Tag: Draupadi Murmu

  • ಬ್ರಿಟನ್ ರಾಣಿ ಎಲಿಜಬೆತ್ ಶಕೆ ಅಂತ್ಯ – ಲಕ್ಷಾಂತರ ಮಂದಿ ಸಮಕ್ಷಮದಲ್ಲಿ ಅಂತಿಮ ಯಾತ್ರೆ

    ಬ್ರಿಟನ್ ರಾಣಿ ಎಲಿಜಬೆತ್ ಶಕೆ ಅಂತ್ಯ – ಲಕ್ಷಾಂತರ ಮಂದಿ ಸಮಕ್ಷಮದಲ್ಲಿ ಅಂತಿಮ ಯಾತ್ರೆ

    ಲಂಡನ್: ಬ್ರಿಟನ್ (Britain) ರಾಣಿ ಎಲಿಜಬೆತ್ (Elizabeth 11) ಶಕೆ ಇದೀಗ ಅದ್ಧೂರಿಯಾಗಿ ಮುಗಿಯುತ್ತಿದೆ. ಬೆಳಗ್ಗೆ ಆರೂವರೆಯಿಂದ ಸುದೀರ್ಘವಾಗಿ ನಡೆಯುತ್ತಿರುವ ಅಂತ್ಯಕ್ರಿಯೆಯ ಅಂತಿಮ ವಿಧಾನಗಳು ಲಕ್ಷಾಂತರ ಜನರ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರುತ್ತಿವೆ. ಭಾರತದ ಕಾಲಮಾನ ಮಧ್ಯರಾತ್ರಿ 12 ಗಂಟೆ ಹೊತ್ತಿಗೆ ಅಂತ್ಯಸಂಸ್ಕಾರ (Funeral) ದ ಪ್ರಕ್ರಿಯೆಗಳು ಮುಗಿಯಲಿವೆ.

    1964ರಲ್ಲಿ ವಿನ್‍ಸ್ಟನ್ ಚರ್ಚಿಲ್ (Winston Churchill) ಅಂತ್ಯಕ್ರಿಯೆಯನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗಿತ್ತು. ಇದಾದ ನಂತರ ಬ್ರಿಟನ್‍ನಲ್ಲಿ ಇಂತಹ ಕಾರ್ಯಕ್ರಮ ನಡೆದಿರೋದು ಇದೇ ಮೊದಲು. ಬೆಳಗ್ಗೆ ವೆಸ್ಟ್ ಮಿನಿಸ್ಟರ್ ಹಾಲ್‍ (Wet Minister Hall) ನಿಂದ ವೆಸ್ಟ್ ಮಿನಿಸ್ಟರ್ ಅಬೆ ಚರ್ಚ್‍ಗೆ ರಾಣಿ ಎಲಿಜಬೆತ್ ಪಾರ್ಥಿವ ಶರೀರವನ್ನು ರಾಯಲ್ ನೇವಿಯ ಸ್ಟೇಟ್ ಗನ್ ಕ್ಯಾರೇಜ್‍ನಲ್ಲಿ ಕೊಂಡೊಯ್ಯಲಾಯಿತು. ಮಾರ್ಗಮಧ್ಯೆ ಪಾರ್ಲಿಮೆಂಟ್ ವೃತ್ತದಲ್ಲಿ ಗಾರ್ಡ್ ಆಫ್ ಹಾನರ್ ಸಲ್ಲಿಸಲಾಯ್ತು. ನಂತರ ವೆಸ್ಟ್ ಮಿನಿಸ್ಟರ್ ಅಬೆಯಲ್ಲಿ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು.

    ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu), ಅಮೆರಿಕಾ ಅಧ್ಯಕ್ಷ ಜೋ ಬೈಡನ್ (Joe Biden) ಸೇರಿ ವಿಶ್ವದ 2ಸಾವಿರ ಗಣ್ಯರು ರಾಣಿ ಎಲಿಜಬೆತ್‍ಗೆ ಅಂತಿಮ ನಮನ ಸಲ್ಲಿಸಿದ್ರು. 2 ನಿಮಿಷ ಇಡೀ ದೇಶ ಮೌನಾಚರಣೆ ಮೂಲಕ ಗೌರವ ಸಲ್ಲಿಸಿತು. ರಾಣಿ ಎಲಿಜಬೆತ್ 96 ವರ್ಷ ಬದುಕಿದ್ದಕ್ಕೆ ದ್ಯೋತಕವಾಗಿ 96 ಬಾರಿ ಗಂಟೆ ಮೊಳಗಿಸಲಾಯಿತು. ಅಲ್ಲಿಂದ ರಾಣಿಯ ಅಂತಿಮ ಯಾತ್ರೆ ವೆಲ್ಲಿಂಗ್ಟನ್ ಆರ್ಚ್, ನಂತರ ವಿಂಡ್ಸರ್ ಕ್ಯಾಸೆಲ್‍ವರೆಗೆ ಶಾಸ್ತ್ರೋಕ್ತವಾಗಿ ನಡೀತು. ಇದನ್ನೂ ಓದಿ: ಮಹಿಳಾ ಪೇದೆ ಹತ್ಯೆ ಪ್ರಕರಣ – ಠಾಣೆಯಲ್ಲೇ ಇದ್ಳು ಹಂತಕಿ!

    ನಂತರ ಮತ್ತೊಂದು ಸೇವೆಗಾಗಿ ರಾಣಿ ಪಾರ್ಥಿವ ಶರೀರವನ್ನು ಸೇಂಟ್ ಜಾರ್ಜ್ ಚರ್ಚ್‍ಗೆ ಕೊಂಡೊಯ್ಯಲಾಯಿತು. ಇಲ್ಲಿಯೇ ಕೊಹಿನೂರ್ ವಜ್ರ (Kohinoor Diamond) ಸಹಿತ ಕಿರೀಟ ಮತ್ತಿತರ ರಾಜಸತ್ತೆಯ ಲಾಂಛನಗಳನ್ನು ತೆಗೆಯುವ ಪ್ರಕ್ರಿಯೆ ನಡೀತು. ಇನ್ನು ಕೆಲವೇ ಹೊತ್ತಲ್ಲಿ ವೆಸ್ಟ್ ಮಿನಿಸ್ಟರ್ ಡೀನ್ ಡೇವಿಡ್ ಹೋಯಲ್‍ನಲ್ಲಿ ರಾಣಿ ಅಂತ್ಯಕ್ರಿಯೆ ಕೆಲವೇ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆಯಲಿದೆ. ಕಳೆದ ವರ್ಷ ಸಾವನ್ನಪ್ಪಿದ್ದ ಪತಿ ಪ್ರಿನ್ಸ್ ಫಿಲಿಪ್ ಸಮಾಧಿ ಪಕ್ಕದಲ್ಲಿಯೇ ರಾಣಿಯ ಅಂತ್ಯಕ್ರಿಯೆ ನಡೆಯಲಿದೆ. ಸೆಪ್ಟೆಂಬರ್ 8ರಂದು 96 ವರ್ಷದ ರಾಣಿ ಎಲಿಜಬೆತ್ ಇಹಲೋಕ ತ್ಯಜಿಸಿದ್ರು.

    Live Tv
    [brid partner=56869869 player=32851 video=960834 autoplay=true]

  • ಇಂದು ಬ್ರಿಟನ್ ರಾಣಿ ಎಲಿಜಬೆತ್-2 ಅಂತ್ಯಕ್ರಿಯೆ – ದ್ರೌಪದಿ ಮುರ್ಮು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಭಾಗಿ

    ಇಂದು ಬ್ರಿಟನ್ ರಾಣಿ ಎಲಿಜಬೆತ್-2 ಅಂತ್ಯಕ್ರಿಯೆ – ದ್ರೌಪದಿ ಮುರ್ಮು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಭಾಗಿ

    ಲಂಡನ್: ಇಂದು ಬ್ರಿಟನ್‍ನ ರಾಣಿ 2ನೇ ಎಲಿಜಬೆತ್ (Queen Elizabeth II) ಅಂತ್ಯಕ್ರಿಯೆ ನೆರವೇರಲಿದ್ದು ಲಂಡನ್‍ನಲ್ಲಿ(London) ಭಾರೀ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಸೇರಿ 500ಕ್ಕೂ ಹೆಚ್ಚು ವಿಶ್ವದ ನಾಯಕರು ಅಂತ್ಯಕ್ರಿಯೆಯಲ್ಲಿ(Funeral) ಭಾಗಿ ಆಗಲಿದ್ದಾರೆ. ಅಂತ್ಯಕ್ರಿಯೆಗೆ 10 ಲಕ್ಷ ಜನರು ಸೇರುವ ಹಿನ್ನೆಲೆ ಬ್ರಿಟನ್‍ನಲ್ಲಿ(Britain) ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಇದನ್ನೂ ಓದಿ: ಜನರಿಗೆ ಸಿಕ್ರೇಟ್ ಲೆಟರ್- 2085 ರವರೆಗೂ ತೆರೆಯದಿರಲು ರಾಣಿ ಸೂಚನೆ

    ವಿಶ್ವದ ನಾಯಕರು ಬಸ್‍ನಲ್ಲಿ ಅಂತ್ಯಕ್ರಿಯೆಗೆ ಆಗಮಿಸಿದರೆ, ಅಮೆರಿಕ ಅಧ್ಯಕ್ಷ ಬೈಡನ್‍ಗೆ (Joe Biden) ತಮ್ಮ ವಿಶೇಷ ಭದ್ರತಾ ವಾಹನ ಬೀಸ್ಟ್‌ನಲ್ಲಿ ಬರಲು ಅವಕಾಶ ಕೊಡಲಾಗಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೆರವಣಿಗೆ ಆರಂಭವಾಗಲಿದ್ದು, ಮಧ್ಯರಾತ್ರಿ 12 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ. ಇದನ್ನು ಎಲ್‍ಇಡಿ ಸ್ಕ್ರೀನ್ (LED Screen), ಥಿಯೇಟರ್‌ಗಳಲ್ಲಿ ನೇರಪ್ರಸಾರ (Live) ಮಾಡಲು ಸಿದ್ಧತೆ ನಡೆಸಲಾಗಿದೆ.

    ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬ್ರಿಟನ್ ರಾಣಿ ಎಲಿಜಬೆತ್-2 ಅವರು, ಸ್ಕಾಟ್ಲೆಂಡ್ ನ ಬಾಲ್ಮೊರಲ್ ಕ್ಯಾಸ್ಟಲ್ ನಲ್ಲಿ ಸೆ. 8ರಂದು ನಿಧನರಾಗಿದ್ದರು. 25ನೇ ವಯಸ್ಸಿಗೆ ಬ್ರಿಟನ್ ರಾಣಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಎಲಿಜಬೆತ್-2 ತಮ್ಮ 96ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇವರು 1923ರಿಂದ ಬ್ರಿಟನ್‍ನ ರಾಣಿಯಾಗಿದ್ದರು. 1952ರಲ್ಲಿ ತನ್ನ ತಂದೆ ಜಾರ್ಜ್ VIರ ಮರಣದ ನಂತರ ಎಲಿಜಬೆತ್-2 ಅವರು ಬ್ರಿಟನ್‍ನ ಆಡಳಿತವನ್ನು ವಹಿಸಿಕೊಂಡರು. ಬ್ರಿಟನ್ ಅಲ್ಲದೇ ಇತರ 15 ದೇಶಗಳಿಗೂ ಅವರು ರಾಣಿಯಾಗಿದ್ದರು. ಇದನ್ನೂ ಓದಿ: ಬ್ರಿಟನ್ ರಾಣಿ ಎಲಿಜಬೆತ್-2 ಇನ್ನಿಲ್ಲ

    ಫಾರ್ಚೂನ್ ವರದಿ ಪ್ರಕಾರ ರಾಣಿ ಎಲಿಜಬೆತ್-2 ಸುಮಾರು 500 ಮಿಲಿಯನ್ ಡಾಲರ್  (ಭಾರತೀಯ ರೂಪಾಯಿಗಳಲ್ಲಿ ಸುಮಾರು 3,985 ಕೋಟಿ ರೂ.) ಸಂಪತ್ತನ್ನು ಬಿಟ್ಟು ಹೋಗಿದ್ದಾರೆ. ಈ ಸಂಪತ್ತಿಗೆ ಅವರ ಪುತ್ರ ಪ್ರಿನ್ಸ್ ಚಾರ್ಲ್ಸ್ (Prince Charles) ವಾರಸುದಾರ ಆಗಲಿದ್ದಾರೆ. ಜೊತೆಗೆ ಬ್ರಿಟನ್‍ನ ಮುಂದಿನ ರಾಜ ಇವರೇ ಆಗಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಎಲಿಜಬೆತ್-II ಅಂತ್ಯಕ್ರಿಯೆ ಹಿನ್ನೆಲೆ ಬ್ರಿಟನ್‍ಗೆ ತೆರಳಿದ ದ್ರೌಪದಿ ಮುರ್ಮು

    ಎಲಿಜಬೆತ್-II ಅಂತ್ಯಕ್ರಿಯೆ ಹಿನ್ನೆಲೆ ಬ್ರಿಟನ್‍ಗೆ ತೆರಳಿದ ದ್ರೌಪದಿ ಮುರ್ಮು

    ಲಂಡನ್: ಸೆಪ್ಟೆಂಬರ್ 19 ರಂದು ನಡೆಯಲಿರುವ ಬ್ರಿಟನ್ ರಾಣಿ ಎಲಿಜಬೆತ್-II (Elizabeth II) ಅಂತ್ಯಕ್ರಿಯೆಯಲ್ಲಿ (Funeral) ಭಾಗವಹಿಸಲು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (Indian President Draupadi Murmu) ಇಂಗ್ಲೆಂಡ್‍ಗೆ ತೆರಳಿದ್ದಾರೆ.

    ಖಾಸಗಿ ವಿಮಾನದಲ್ಲಿ ಇಂಗ್ಲೆಂಡ್‍ಗೆ ತೆರಳಿದ್ದ ದ್ರೌಪದಿ ಮುರ್ಮು ಇಂದು ಮುಂಜಾನೆ ಲಂಡನ್‍ಗೆ ಬಂದಿಳಿದಿದ್ದು, ಭಾರತದ ಪರವಾಗಿ ರಾಜಮನೆತನಕ್ಕೆ ಸಂತಾಪ ಸೂಚಿಸಲಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ದ್ರೌಪದಿ ಮುರ್ಮು ಲಂಡನ್‍ನಲ್ಲಿ ರಾಣಿ ಎಲಿಜಬೆತ್-II ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದೇನೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಬಳಿಕ ದ್ರೌಪದಿ ಮುರ್ಮು ಕೈಗೊಳ್ಳುತ್ತಿರುವ ಮೊದಲ ವಿದೇಶಿ ಪ್ರವಾಸ ಇದಾಗಿದೆ. ಇದನ್ನೂ ಓದಿ: ಎಲಿಜಬೆತ್ ಅಂತಿಮ ದರ್ಶನಕ್ಕೆ ಚೀನಾ ನಿಯೋಗಕ್ಕಿಲ್ಲ ಅನುಮತಿ

    ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬರುವ ಎಲ್ಲ ದೇಶಗಳ ಗಣ್ಯರು ಸರ್ಕಾರಿ ವಿಮಾನದ ಬದಲಾಗಿ ಖಾಸಗಿ ವಿಮಾನದಲ್ಲಿ ಬರಲು ಬ್ರಿಟನ್ ಅರಮನೆ ಮನವಿ ಮಾಡಿಕೊಂಡಿತ್ತು. ಹೀಗಾಗಿ ದ್ರೌಪದಿ ಮುರ್ಮು ಅವರು ಖಾಸಗಿ ವಿಮಾನದಲ್ಲಿ ಇಂಗ್ಲೆಂಡ್‍ಗೆ ತೆರಳಿದ್ದರು. ಇದನ್ನೂ ಓದಿ: ವಿಮ್ಸ್ ದುರಂತ: ಇಂದು ಸಚಿವ ಸುಧಾಕರ್ ಭೇಟಿ – ಕರೆಂಟ್ ಸಮಸ್ಯೆಯಿಂದ ಸಾವಾಗಿಲ್ಲ ಎಂದ ಶ್ರೀರಾಮುಲು

    ಸೆಪ್ಟೆಂಬರ್ 8 ರಂದು ಎಲಿಜಬೆತ್-II ವಯೋಸಹಜ ಕಾಯಿಲೆಯಿಂದಾಗಿ ಸ್ಕಾಟ್ಲೆಂಡ್ ಅರಮನೆಯಲ್ಲಿ ಕೊನೆಯುಸಿರೆಳೆದಿದ್ದರು. 96 ವರ್ಷದ ರಾಣಿ ಕಳೆದ ವರ್ಷ ಅಕ್ಟೋಬರ್‌ನಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. 1923ರಿಂದ ಬ್ರಿಟನ್ ರಾಣಿಯಾಗಿದ್ದರು. ರಾಣಿ ನಿಧನದ ಬಳಿಕ ಗಣ್ಯರು ಸಂತಾಪ ಸೂಚಿಸಿದ್ದರು. ರಾಣಿಯ ಗೌರವಾರ್ಥವಾಗಿ ಭಾರತವು ಸೆಪ್ಟೆಂಬರ್ 11 ರಂದು ರಾಷ್ಟ್ರೀಯ ಶೋಕಾಚರಣೆಯ ದಿನವನ್ನಾಗಿ ಘೋಷಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಈ ಬಾರಿ ದಸರಾ ಉದ್ಘಾಟನೆ – ಸಿಎಂ

    ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಈ ಬಾರಿ ದಸರಾ ಉದ್ಘಾಟನೆ – ಸಿಎಂ

    ಬೆಂಗಳೂರು/ಮೈಸೂರು: ಈ ಬಾರಿ ಮೈಸೂರು ದಸರಾ (Mysuru Dasara) ಮಹೋತ್ಸವವನ್ನು ರಾಷ್ಟ್ರಪತಿ (President of India) ದ್ರೌಪದಿ ಮುರ್ಮು (Draupadi Murmu) ಅವರು ಉದ್ಘಾಟಿಸಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ತಿಳಿಸಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ, ಸೆ.26 ರಂದು ನಡೆಯಲಿರುವ ದಸರಾ ಮಹೋತ್ಸವವನ್ನು ರಾಷ್ಟ್ರಪತಿಗಳು ಉದ್ಘಾಟಿಸಲಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಗೇಮಿಂಗ್ ಆ್ಯಪ್ ಸ್ಕ್ಯಾಮ್- ಉದ್ಯಮಿ ಮನೆಯಿಂದ 12 ಕೋಟಿ ನಗದು ವಶ

    ದಸರಾ ಉದ್ಘಾಟನೆಗೆ ಯಾರನ್ನು ಕರೆಯಬೇಕು ಎಂದು ಚರ್ಚೆ ನಡೆಯುತ್ತಿದ್ದಾಗ ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಷ್ಟ್ರಪತಿಗಳೂ ಬರಲು ಒಪ್ಪಿಕೊಂಡಿದ್ದಾರೆ. ಅವರಿಂದಲೇ ದಸರಾ ಉದ್ಘಾಟನೆಯಾಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 6 ತಿಂಗಳು ರಜೆ ಹಾಕಿ- ಡೀನ್ ವಿರುದ್ಧ ಸಚಿವ ಸೋಮಣ್ಣ ಗರಂ

    ಈಗಾಗಲೇ ಪೂರ್ವಭಾವಿ ಸಭೆಯಲ್ಲಿ ರಾಷ್ಟ್ರಪತಿ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿತ್ತು. ರಾಷ್ಟ್ರಪತಿಗಳಿಗೂ ಅಧಿಕೃತವಾಗಿ ಪತ್ರ ಬರೆದು, ಅವರೊಂದಿಗೆ ಮಾತನಾಡಿದ್ದೆವು. ದಸರಾ ಉದ್ಘಾಟನೆಗೆ ಒಪ್ಪಿ ರಾಷ್ಟ್ರಪತಿ ಅವರಿಂದ ಈಗ ಪತ್ರ ಬಂದಿದೆ. ಹಾಗಾಗಿ ಅವರಿಂದಲೇ ಈ ಬಾರಿ ದಸರಾ ಉದ್ಘಾಟನೆಯಾಗಲಿದೆ. ರಾಷ್ಟ್ರಪತಿಗಳಿಗೆ ಈಗ ನಿಯೋಜಿಸಿರುವ ಭದ್ರತೆಯೊಂದಿಗೆ ನಮ್ಮ ಕಡೆಯಿಂದಲೂ ವಿಶೇಷ ಭದ್ರತಾ ವ್ಯವಸ್ಥೆ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

    ಕಳೆದ ಬಾರಿ ರಾಜಕೀಯ ಮುತ್ಸದ್ಧಿ ಎಸ್.ಎಂ ಕೃಷ್ಣ ಅವರು ದಸರಾ ಉದ್ಘಾಟನೆ ನೆರವೇರಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಉಪರಾಷ್ಟ್ರಪತಿ ಚುನಾವಣೆ – NDA ಅಭ್ಯರ್ಥಿಗೆ BSP ಬೆಂಬಲ

    ಉಪರಾಷ್ಟ್ರಪತಿ ಚುನಾವಣೆ – NDA ಅಭ್ಯರ್ಥಿಗೆ BSP ಬೆಂಬಲ

    ಲಕ್ನೋ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬೆಂಬಲ ನೀಡಿದ್ದ ಬಿಎಸ್‌ಪಿ ಈಗ ಉಪರಾಷ್ಟ್ರಪತಿ ಚುನಾವಣೆಯಲ್ಲೂ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್‌ಗೆ ಬೆಂಬಲ ನೀಡಲು ನಿರ್ಧರಿಸಿದೆ. ಈ ಬಗ್ಗೆ ಪಕ್ಷದ ವರಿಷ್ಠೆ, ಮಾಜಿ ಮುಖ್ಯಮಂತ್ರಿ ಮಾಯಾವತಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

    ಇಂದು ಟ್ವಿಟ್ ಮಾಡಿರವ ಅವರು, ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಒಮ್ಮತ ಮೂಡದ ಕಾರಣ ಚುನಾವಣೆ ನಡೆದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈಗ ಅದೇ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 6 ರಂದು ಚುನಾವಣೆಯೂ ನಡೆಯಲಿದೆ. ಇದನ್ನೂ ಓದಿ: ರಾಹುಲ್ ಗಾಂಧಿಗೆ ವಿಭೂತಿ ಹಚ್ಚಿ ಮುರುಘಾಶ್ರೀಗಳಿಂದ ಲಿಂಗಧಾರಣೆ

    ದೊಡ್ಡ ಸಾರ್ವಜನಿಕ ಹಿತಾಸಕ್ತಿ ಮತ್ತು ಪಕ್ಷದ ಸ್ವಂತ ಚಳುವಳಿಯ ದೃಷ್ಟಿಯಿಂದ, ಉಪರಾಷ್ಟ್ರಪತಿ ಹುದ್ದೆಯ ಚುನಾವಣೆಯಲ್ಲಿ ಜಗದೀಪ್ ಧನಕರ್ ಅವರಿಗೆ ಬೆಂಬಲ ನೀಡಲು ಬಿಎಸ್‌ಪಿ ನಿರ್ಧರಿಸಿದೆ ಮತ್ತು ನಾನು ಇಂದು ಔಪಚಾರಿಕವಾಗಿ ಘೋಷಿಸುತ್ತಿದ್ದೇನೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಈ ಒಂದು ಸಣ್ಣ ತಪ್ಪಿನಿಂದ ಚಿನ್ನದ ಪದಕ ಕೈತಪ್ಪಿತು – ಪಿ.ವಿ.ಸಿಂಧು ವಿಷಾದ

    ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಜಗದೀಪ್ ಧನಕರ್ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದರೆ, ವಿರೋಧ ಪಕ್ಷಗಳು ಮಾರ್ಗರೇಟ್ ಆಳ್ವ ಅವರನ್ನು ತಮ್ಮ ಅಭ್ಯರ್ಥಿ ಎಂದು ಘೋಷಿಸಿವೆ. ಆಗಸ್ಟ್ 6ರಂದು ಈ ಚುನಾವಣೆ ನಡೆಯಲಿದೆ. ಬಿಎಸ್‌ಪಿ ಲೋಕಸಭೆಯಲ್ಲಿ 10 ಮತ್ತು ರಾಜ್ಯಸಭೆಯಲ್ಲಿ ಓರ್ವ ಸದಸ್ಯರನ್ನು ಹೊಂದಿದೆ.

    Live Tv
    [brid partner=56869869 player=32851 video=960834 autoplay=true]

  • ಮಹಿಳಾ ಸಬಲೀಕರಣ ನನ್ನ ಮೊದಲ ಆದ್ಯತೆ – ಅಧಿಕಾರ ಸ್ವೀಕರಿಸಿದ ದ್ರೌಪದಿ ಮುರ್ಮು

    ಮಹಿಳಾ ಸಬಲೀಕರಣ ನನ್ನ ಮೊದಲ ಆದ್ಯತೆ – ಅಧಿಕಾರ ಸ್ವೀಕರಿಸಿದ ದ್ರೌಪದಿ ಮುರ್ಮು

    ನವದೆಹಲಿ: 15ನೇ ರಾಷ್ಟ್ರಪತಿಯಾಗಿ ಇಂದು ದ್ರೌಪದಿ ಮುರ್ಮು ಅಧಿಕಾರ ಸ್ವೀಕರಿಸಿದ್ದಾರೆ.

    ಸೆಂಟ್ರಲ್ ಹಾಲ್‍ನಲ್ಲಿ ಮುರ್ಮು ಅವರಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಎನ್.ವಿ.ರಮಣ ಅವರು ಪ್ರಮಾಣ ವಚನ ಬೋಧಿಸಿದರು.

    ಈ ವೇಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಪ್ರಧಾನಿ ಮೋದಿ ಆದಿಯಾಗಿ ಸಚಿವರು ಸಂಸದರು ಉಪಸ್ಥಿತರಿದ್ದರು. ಇದನ್ನೂ ಓದಿ: ದೇಶದ ಚರಿತ್ರೆಯಲ್ಲಿ ಬುಡಕಟ್ಟು ಮಹಿಳೆಗೆ ರಾಷ್ಟ್ರಪತಿ ಪಟ್ಟ – ಇಂದು ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕಾರ

    ಅಧಿಕಾರ ಸ್ವೀಕರಿಸಿದ ನಂತರ ಭಾಷಣ ಮಾಡಿದ ಅವರು, ನಾನು ಹುಟ್ಟಿದಾಗ ದೇಶ ಸ್ವಾತಂತ್ರ್ಯ ಸಂಭ್ರಮದಲ್ಲಿತ್ತು. ಈಗ 75 ವರ್ಷದ ಸಂಭ್ರಮದಲ್ಲಿ ನಾನು ರಾಷ್ಟ್ರಪತಿಯಾಗುತ್ತಿದ್ದೇನೆ. ಏಕ್ ಭಾರತ್ ಶ್ರೇಷ್ಠ ಭಾರತ್ ನಿರ್ಮಾಣಕ್ಕಾಗಿ ಕೆಲಸ ಮಾಡುವೆ. ಮಹಿಳಾ ಸಬಲೀಕರಣ ನನ್ನ ಮೊದಲ ಆದ್ಯತೆ ಎಂದು ಹೇಳಿದರು.

    ಬಡವರು ಕನಸು ಕಾಣಬಹುದು, ಅದನ್ನು ನನಸು ಮಾಡಿಕೊಳ್ಳಬಹುದು. ನನ್ನ ಹಳ್ಳಿಯಲ್ಲಿ ಕಾಲೇಜಿಗೆ ತೆರಳಿದ ಮೊದಲ ಮಹಿಳೆ ನಾನು. ಸ್ವಾತಂತ್ರ್ಯ ಭಾರತದಲ್ಲಿ ಹುಟ್ಟಿದ ಮೊದಲ ರಾಷ್ಟ್ರಪತಿಯಾಗಿದ್ದೇನೆ. ಸಂವಿಧಾನದ ಮೇಲೆ ಪೂರ್ಣ ನಿಷ್ಠೆ ಇಟ್ಟು ಕೆಲಸ ಮಾಡುವೆ ಎಂದು ಪ್ರತಿಜ್ಞೆ ಮಾಡಿದರು. ಇದನ್ನೂ ಓದಿ:  ಗಾಂಜಾ ಗ್ಯಾಂಗ್ ಹಿಡಿಯಲು ಹೋಗಿ ಭೀಕರ ಅಪಘಾತ: ಸ್ವಗ್ರಾಮಕ್ಕೆ ಆಗಮಿಸಿದ ಪಿಎಸ್‍ಐ ಮೃತದೇಹ 

    ದ್ರೌಪದಿ ಮುರ್ಮು ಒಡಿಶಾದ ಮಯೂರ್ ಭಂಜ್ ಜಿಲ್ಲೆಯ ಬೈದಪೋಸಿ ಗ್ರಾಮದವರಾಗಿದ್ದಾರೆ. 20 ಜೂನ್ 1958 ಜನಿಸಿದ ಅವರು ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ಮುರ್ಮು ದೇಶದ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿಯಾಗಿದ್ದು, ಸ್ವಾತಂತ್ರ್ಯೊತ್ತರ ಜನಿಸಿದ ವ್ಯಕ್ತಿಯೊಬ್ಬರು ರಾಷ್ಟ್ರಪತಿಯಾಗಿತ್ತಿರುವುದು ಇದೇ ಮೊದಲು. ದ್ರೌಪದಿ ಮುರ್ಮು ಪದಗ್ರಹಣ ಹಿನ್ನೆಲೆಯಲ್ಲಿ ಸ್ವಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಯಕ್ಷಗಾನದ ಭಾಗವತಿಕೆ ಮೂಲಕ ರಾಷ್ಟ್ರಪತಿಗೆ ಸ್ವಾಗತ ಕೋರಿದ ಬಾಲೆ

    ಯಕ್ಷಗಾನದ ಭಾಗವತಿಕೆ ಮೂಲಕ ರಾಷ್ಟ್ರಪತಿಗೆ ಸ್ವಾಗತ ಕೋರಿದ ಬಾಲೆ

    ಕಾರವಾರ: ಯಕ್ಷಗಾನದ ಭಾಗವತಿಕೆ ಮೂಲಕ ಬಾಲೆಯೊಬ್ಬಳು ರಾಷ್ಟ್ರಪತಿಗೆ ಸ್ವಾಗತ ಕೋರಿದ್ದಳು. ಈ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

    ಮೊಟ್ಟ ಮೊದಲ ಬಾರಿಗೆ ಬುಡಕಟ್ಟು ಜನಾಂಗದ ಮಹಿಳೆ ದ್ರೌಪದಿ ಮುರ್ಮು ಅವರು ದೇಶದ ಪ್ರತಿಷ್ಠಿತ ರಾಷ್ಟ್ರಪತಿ ಸ್ಥಾನ ಅಲಂಕರಿಸಿರುವುದಕ್ಕೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮಾಳಕೋಡ್ ಗ್ರಾಮದ ಬಾಲಕಿ ಚಿಂತನಾ ಹೆಗಡೆ ಯಕ್ಷಗಾನದ ಭಾಗವತಿಕೆ ಮೂಲಕ ದ್ರೌಪದಿ ಮುರ್ಮು ಅವರಿಗೆ ಸ್ವಾಗತ ಕೋರುವ ಮೂಲಕ ಇದೀಗ ಸುದ್ದಿಯಾಗಿದ್ದಾರೆ. ಇದನ್ನೂ ಓದಿ: ಮರಳು ಮೂಟೆ ಅಳವಡಿಸಿದ ನಂತರ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಘು ವಾಹನ ಸಂಚಾರ: ಬಿ.ಸಿ.ನಾಗೇಶ್

    ‘ಹೆಜ್ಜೆ ಇಟ್ಟಿಹಳು ದ್ರೌಪದಿ..ರಾಷ್ಟ್ರಪತಿಯ ಭವನದಲ್ಲಿ..ಭಾರತ ಮಹಾಭಾರತವಾಗಲಿ..ಧರ್ಮರಾಯನ ನ್ಯಾಯಾಂಗ ಸಂವಿಧಾನ ವಿಹುದು..ಭೀಮ ಬಲದ ಸೇನಾಬಲ ವಿಹುದು’ ಎಂದು ಬಡಗು ತಿಟ್ಟು ಶೈಲಿಯಲ್ಲಿ ಚಿಂತನಾ ಹಾಡಿದ್ದಾಳೆ.

    ಉಡುಪಿಯ ಅರವಿಂದ ಚಿಪ್ಳೂಣ್ಕರ್ ಅವರು ಈ ಹಾಡನ್ನು ರಚಿಸಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ದ್ರೌಪದಿ ಮುರ್ಮು ಗೆಲುವಿಗೆ ಪುಟಿನ್ ಅಭಿನಂದನೆ ಸಂದೇಶ

    ದ್ರೌಪದಿ ಮುರ್ಮು ಗೆಲುವಿಗೆ ಪುಟಿನ್ ಅಭಿನಂದನೆ ಸಂದೇಶ

    ಮಾಸ್ಕೋ: ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಭಿನಂದನೆ ಸಲ್ಲಿಸಿದ್ದಾರೆ.

    ಪುಟಿನ್ ಈ ಕುರಿತು ಟ್ವೀಟ್ ಮಾಡಿದ್ದು, ನಾವು ಭಾರತದೊಂದಿಗಿನ ವಿಶೇಷ ಸವಲತ್ತುಗಳ ಕಾರ್ಯತಂತ್ರದ ಪಾಲುದಾರಿಕೆಯ ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ. ರಾಷ್ಟ್ರದ ಮುಖ್ಯಸ್ಥರಾಗಿ ನಿಮ್ಮ ಚಟುವಟಿಕೆಗಳು ನಮ್ಮ ಸ್ನೇಹಪರ ರಾಷ್ಟ್ರಗಳ ಪ್ರಯೋಜನಕ್ಕಾಗಿ ಮತ್ತು ಬಲವಾದ ಅಂತರರಾಷ್ಟ್ರೀಯ ಸ್ಥಿರತೆ, ಭದ್ರತೆಯ ಹಿತಾಸಕ್ತಿಗಳು ವಿವಿಧ ಕ್ಷೇತ್ರಗಳಲ್ಲಿ ರಷ್ಯಾ-ಭಾರತದ ರಾಜಕೀಯ ಮಾತುಕತೆ ಮತ್ತು ಉತ್ಪಾದಕ ಸಹಕಾರದ ಮತ್ತಷ್ಟು ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ವಿಮಾನದಲ್ಲಿದ್ದ ಪ್ರಯಾಣಿಕರ ಜೀವ ಉಳಿಸಿದ ತೆಲಂಗಾಣ ರಾಜ್ಯಪಾಲ 

    ಒಡಿಶಾದ ಮಯೂರ್‍ಭಂಜ್ ಜಿಲ್ಲೆಯವರಾದ ಮುರ್ಮು ಅವರು, ಸಂಸದರು ಮತ್ತು ಶಾಸಕರ ಮತಗಳ ಎಣಿಕೆಯಲ್ಲಿ 64 ಪ್ರತಿಶತಕ್ಕೂ ಹೆಚ್ಚು ಮಾನ್ಯ ಮತಗಳನ್ನು ಪಡೆದ ನಂತರ ಜಂಟಿ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ವಿರುದ್ಧ ಹೆಚ್ಚಿನ ಅಂತರದಿಂದ ಗೆದ್ದಿದ್ದಾರೆ.

    ಮುರ್ಮು ಅವರು ಭಾರತದ ಮೊದಲ ಬುಡಕಟ್ಟು ಅಧ್ಯಕ್ಷರಾಗುವ ಮೂಲಕ ಇತಿಹಾಸವನ್ನು ಬರೆದರು. ಮುರ್ಮು ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಜನಿಸಿದ ಭಾರತದ ಮೊದಲ ರಾಷ್ಟ್ರಪತಿಯಾಗಲಿದ್ದಾರೆ. ಉನ್ನತ ಹುದ್ದೆಗೆ ಆಯ್ಕೆಯಾದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.

    ಮುರ್ಮು ಅವರು ಜುಲೈ 25 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದನ್ನೂ ಓದಿ: ನಿಮ್ಮದೆಲ್ಲಾ ಬಯಲಿಗೆ ಎಳೆಯುತ್ತೇನೆ ಜಸ್ಟ್ ವೇಟ್: ಎಂ.ಸಿ.ಸುಧಾಕರ್‌ಗೆ ಸಚಿವ ಸುಧಾಕರ್ ವಾರ್ನಿಂಗ್ 

    Live Tv
    [brid partner=56869869 player=32851 video=960834 autoplay=true]

  • ಯಾರಿಗೂ ಭಯಪಡದೆ ಸಂವಿಧಾನದ ಪಾಲಕರಾಗಬೇಕು: ದ್ರೌಪದಿ ಮುರ್ಮುಗೆ ಅಭಿನಂದಿಸಿದ ಯಶವಂತ್ ಸಿನ್ಹಾ

    ಯಾರಿಗೂ ಭಯಪಡದೆ ಸಂವಿಧಾನದ ಪಾಲಕರಾಗಬೇಕು: ದ್ರೌಪದಿ ಮುರ್ಮುಗೆ ಅಭಿನಂದಿಸಿದ ಯಶವಂತ್ ಸಿನ್ಹಾ

    ನವದೆಹಲಿ: ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಅವರು ರಾಷ್ಟ್ರಪತಿ ಚುನಾವಣೆ ಸೋಲಿನ ಬೆನ್ನಲ್ಲೇ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದರು.

    ಪ್ರಕಟಣೆಯಲ್ಲಿ ಏನಿದೆ?
    2022ರ ರಾಷ್ಟ್ರಪತಿ ಚುನಾವಣೆಯಲ್ಲಿ ಜಯಗಳಿಸಿದ ದ್ರೌಪದಿ ಮುರ್ಮು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಭಾರತದ 15ನೇ ರಾಷ್ಟ್ರಪತಿಯಾಗಿ ಅವರು ಭಯಪಡದೆ ಸಂವಿಧಾನದ ಪಾಲಕರಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನಿಜವಾಗಿ, ಪ್ರತಿಯೊಬ್ಬ ಭಾರತೀಯನೂ ಇದನ್ನೇ ಆಶಿಸುತ್ತಾರೆ. ನಾನು ದ್ರೌಪದಿ ಮುರ್ಮು ಅವರಿಗೆ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ. ಇದನ್ನೂ ಓದಿ: 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ – ದೇಶದ ಪ್ರಥಮ ಪ್ರಜೆಯಾದ ಬುಡಕಟ್ಟು ಮಹಿಳೆ

    Presidential Polls 2022: Yashwant Sinha says 'no personal fight with Droupadi Murmu', but... | India News | Zee News

    ಈ ಚುನಾವಣೆಯಲ್ಲಿ ನನ್ನನ್ನು ಒಮ್ಮತದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ವಿರೋಧ ಪಕ್ಷದ ರಾಜಕೀಯ ಪಕ್ಷಗಳ ನಾಯಕರಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದ ಹೇಳುತ್ತೇನೆ. ನನಗೆ ಮತ ಹಾಕಿದ ಎಲೆಕ್ಟೋರಲ್ ಕಾಲೇಜಿನ ಎಲ್ಲ ಸದಸ್ಯರಿಗೂ ನಾನು ಧನ್ಯವಾದ ಹೇಳುತ್ತೇನೆ. ಭಗವದ್ಗೀತೆಯಲ್ಲಿ ಭಗವಾನ್ ಕೃಷ್ಣನು ಬೋಧಿಸಿದ ಕರ್ಮಯೋಗದ ತತ್ವದಿಂದ ಮಾರ್ಗದರ್ಶಿಸಲ್ಪಟ್ಟ ‘ಫಲವನ್ನು ನಿರೀಕ್ಷಿಸದೆ ನಿಮ್ಮ ಕರ್ತವ್ಯವನ್ನು ಮಾಡಿ’ ವಿರೋಧ ಪಕ್ಷಗಳ ಪ್ರಸ್ತಾಪವನ್ನು ನಾನು ಸ್ವೀಕರಿಸಿದೆ. ನನ್ನ ದೇಶದ ಮೇಲಿನ ಪ್ರೀತಿಯಿಂದ ನಾನು ನನ್ನ ಕರ್ತವ್ಯವನ್ನು ಆತ್ಮಸಾಕ್ಷಿಯಾಗಿ ನಿರ್ವಹಿಸಿದ್ದೇನೆ.

    ಚುನಾವಣೆಯ ಫಲಿತಾಂಶದ ಹೊರತಾಗಿಯೂ, ಇದು ಭಾರತೀಯ ಪ್ರಜಾಪ್ರಭುತ್ವಕ್ಕೆ ಎರಡು ಪ್ರಮುಖ ರೀತಿಯಲ್ಲಿ ಪ್ರಯೋಜನವನ್ನು ನೀಡಿದೆ ಎಂದು ನಾನು ನಂಬುತ್ತೇನೆ. ಮೊದಲನೆಯದಾಗಿ, ಇದು ಹೆಚ್ಚಿನ ವಿರೋಧ ಪಕ್ಷಗಳನ್ನು ಸಾಮಾನ್ಯ ವೇದಿಕೆಗೆ ತಂದಿತು. ಅಧ್ಯಕ್ಷೀಯ ಚುನಾವಣೆಯ ಆಚೆಗೆ ಪ್ರತಿಪಕ್ಷಗಳ ಏಕತೆಯನ್ನು ಮುಂದುವರಿಸಲು – ವಾಸ್ತವವಾಗಿ, ಮತ್ತಷ್ಟು ಬಲಪಡಿಸಲು ನಾನು ಅವರಿಗೆ ಶ್ರದ್ಧೆಯಿಂದ ಮನವಿ ಮಾಡುತ್ತೇನೆ. ಉಪಾಧ್ಯಕ್ಷರ ಚುನಾವಣೆಯಲ್ಲೂ ಅದು ಸ್ಪಷ್ಟವಾಗಿ ಗೋಚರಿಸಬೇಕು.


    ಎರಡನೆಯದಾಗಿ, ನನ್ನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ರಾಷ್ಟ್ರ ಮತ್ತು ಸಾಮಾನ್ಯ ಜನರ ಮುಂದೆ ಪ್ರಮುಖ ವಿಷಯಗಳ ಬಗ್ಗೆ ವಿರೋಧ ಪಕ್ಷಗಳ ಅಭಿಪ್ರಾಯಗಳು, ಕಾಳಜಿಗಳು ಮತ್ತು ಬದ್ಧತೆಗಳನ್ನು ಎತ್ತಿ ತೋರಿಸಲು ನಾನು ಪ್ರಯತ್ನಿಸಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ವಿರೋಧ ಪಕ್ಷಗಳು ಮತ್ತು ಅವರ ನಾಯಕರ ವಿರುದ್ಧ ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆ ಮತ್ತು ರಾಜ್ಯಪಾಲರ ಕಚೇರಿಯ ಅಬ್ಬರದ ಮತ್ತು ಅತಿರೇಕದ ಶಸ್ತ್ರಾಸ್ತ್ರಗಳ ಬಗ್ಗೆ ನಾನು ತೀವ್ರ ಕಳವಳ ವ್ಯಕ್ತಪಡಿಸಿದೆ. ಇದನ್ನೂ ಓದಿ: ನೆರೆ ರಾಜ್ಯ ಕೇರಳದಲ್ಲಿ ಮಂಕಿಪಾಕ್ಸ್‌ ಪ್ರಕರಣ; ಕರ್ನಾಟಕದಲ್ಲಿ ಹೈ ಅಲರ್ಟ್‌ – ಮಾರ್ಗಸೂಚಿ ಪ್ರಕಟ

    ಈ ಸಂಸ್ಥೆಗಳನ್ನು ಇಂಜಿನಿಯರ್‌ಗಳ ಪಕ್ಷಾಂತರ ಮತ್ತು ಪ್ರತಿಪಕ್ಷಗಳ ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳನ್ನು ಉರುಳಿಸಲು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಷ್ಟು ಪ್ರಮಾಣದ ರಾಜಕೀಯ ಭ್ರಷ್ಟಾಚಾರವನ್ನು ಭಾರತ ಎಂದೂ ಕಂಡಿರಲಿಲ್ಲ. ಇದು, ಧ್ರುವೀಕರಣದ ವಿಷಪೂರಿತ ರಾಜಕೀಯದೊಂದಿಗೆ ಸೇರಿಕೊಂಡು, ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಕೋಮು ಸೌಹಾರ್ದಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ.

    ನಾನು ಭೇಟಿ ನೀಡಿದ ಎಲ್ಲ ರಾಜ್ಯಗಳ ಸಿಎಂ, ನಾಯಕರು, ಸಂಸದರು ಮತ್ತು ವಿರೋಧ ಪಕ್ಷಗಳಿಗೆ ಸೇರಿದ ಶಾಸಕರಲ್ಲಿ ನನ್ನ ಅಭಿಪ್ರಾಯಗಳು ಬಲವಾದ ಅನುರಣನವನ್ನು ಕಂಡುಕೊಂಡಿದ್ದಕ್ಕಾಗಿ ನನಗೆ ಸಂತೋಷವಾಗಿದೆ. ಸಾಮಾನ್ಯ ಜನರು ಕೂಡ ಈ ಅಭಿಪ್ರಾಯಗಳನ್ನು ಬೆಂಬಲಿಸಿದ್ದಾರೆ.

    ಅಂತಿಮವಾಗಿ, ನನ್ನ ದೇಹದಲ್ಲಿ ಕೊನೆಯ ಉಸಿರು ಇರುವವರೆಗೂ, ನಾನು ನಂಬಿದ ಉದ್ದೇಶಕ್ಕಾಗಿ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದರು.

    Live Tv
    [brid partner=56869869 player=32851 video=960834 autoplay=true]

  • ಮುಗೀತು ರಾಷ್ಟ್ರಪತಿ ಚುನಾವಣೆ, 21ಕ್ಕೆ ಫಲಿತಾಂಶ – ದ್ರೌಪದಿ ಮುರ್ಮು ಪ್ರಥಮ ಪ್ರಜೆ ಆಗೋದು ಖಚಿತ

    ಮುಗೀತು ರಾಷ್ಟ್ರಪತಿ ಚುನಾವಣೆ, 21ಕ್ಕೆ ಫಲಿತಾಂಶ – ದ್ರೌಪದಿ ಮುರ್ಮು ಪ್ರಥಮ ಪ್ರಜೆ ಆಗೋದು ಖಚಿತ

    ನವದೆಹಲಿ: ದೇಶಾದ್ಯಂತ ರಾಷ್ಟ್ರಪತಿ ಚುನಾವಣೆಗೆ ಮತದಾನ ಮುಗಿದಿದೆ. ಬೆಳಗ್ಗೆ 10 ಗಂಟೆಗೆ ಶುರುವಾದ ವೋಟಿಂಗ್ ಸಂಜೆ 5 ಗಂಟೆಯವರೆಗೂ ನಡೀತು. ಒಟ್ಟು ಶೇಕಡಾ 99.18ರಷ್ಟು ಮತಗಳು ಚಲಾವಣೆ ಆದವು. ಸಂಸತ್ ಭವನದಲ್ಲಿ ಸಂಸದರು, ರಾಜ್ಯಗಳಲ್ಲಿ ಶಾಸನ ಸಭೆಗಳಲ್ಲಿ ಶಾಸಕರು ತಮ್ಮ ಹಕ್ಕು ಚಲಾಯಿಸಿದ್ರು.

    ಸಂಸತ್ ಭವನದಲ್ಲಿ ಪ್ರಧಾನಿ ಮೋದಿ, ಸಚಿವರು, ಸಂಸದರು ವೋಟ್ ಹಾಕಿದ್ರು. ಕೋವಿಡ್ ಕಾರಣ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್‍ಕೆ ಸಿಂಗ್ ಪಿಪಿಇ ಕಿಟ್ ಧರಿಸಿ ಮತ ಚಲಾಯಿಸಿದ್ರು. ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಮತ್ತು ಹೆಚ್‍ಡಿ ದೇವೇಗೌಡರು ವ್ಹೀಲ್ ಚೇರ್‍ನಲ್ಲಿ ಬಂದು ವೋಟ್ ಹಾಕಿದ್ರು. ಬಿಜೆಪಿಯ ಇಬ್ಬರು ಸೇರಿ 8 ಸಂಸದರು ಮತದಾನದಿಂದ ದೂರ ಉಳಿದ್ರು. ಇತ್ತ ಬೆಂಗಳೂರಿನ ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ, ಸಚಿವರು, ವಿಪಕ್ಷ ನಾಯಕರು, ಶಾಸಕರು ಮತ್ತು ಇಬ್ಬರು ಸಂಸದರು ಮತದಾನ ಮಾಡಿದ್ರು. ಜುಲೈ 21ರಂದು ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ: ದೇಶದಲ್ಲಿ ಮಂಕಿಪಾಕ್ಸ್‌ ಭೀತಿ – ಅಂತಾರಾಷ್ಟ್ರೀಯ ಪ್ರಯಾಣಿಕರ ತಪಾಸಣೆಗೆ ಕೇಂದ್ರ ಸೂಚನೆ

    ಸದ್ಯದ ಲೆಕ್ಕಾಚಾರದ ಪ್ರಕಾರ ಎನ್‍ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಶೇಕಡಾ 60ಕ್ಕೂ ಹೆಚ್ಚು ಮತ ಪಡೆದು ವಿಜಯಶಾಲಿ ಆಗಲಿದ್ದಾರೆ. ಮುರ್ಮು ಅವರಿಗೆ ಎನ್‍ಡಿಎ ಪಕ್ಷಗಳಲ್ಲದೇ, ಬಿಜೆಡಿ, ಟಿಡಿಪಿ, ವೈಎಸ್‍ಆರ್‍ಸಿಪಿ, ಜೆಡಿಎಸ್, ಬಿಎಸ್‍ಪಿ, ಅಕಾಲಿದಳ, ಶಿವಸೇನೆ, ಜೆಎಂಎಂ ಬೆಂಬಲ ನೀಡಿವೆ. ಅಲ್ಲದೇ ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳ ಕೆಲ ಸದಸ್ಯರಿಂದ ಕ್ರಾಸ್ ವೋಟಿಂಗ್ ನಡೆದಿದೆ ಎನ್ನಲಾಗುತ್ತಿದೆ. ಟಿಎಂಸಿ 12 ಶಾಸಕರು ಮುರ್ಮುಗೆ ವೋಟ್ ಹಾಕಿದ್ದಾರೆ ಎನ್ನಲಾಗುತ್ತಿದೆ. ಐವರು ಕಾಂಗ್ರೆಸ್ ಶಾಸಕರು ಕೂಡ ಕ್ರಾಸ್ ವೋಟ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ – ಮೊದಲ ಬಾರಿ ಸಾರ್ವಜನಿಕವಾಗಿ ವ್ಹೀಲ್ ಚೇರ್‌ನಲ್ಲಿ ಕಾಣಿಸಿಕೊಂಡ ಹೆಚ್‌ಡಿಡಿ

    ತೆಲಂಗಾಣದ ಕಾಂಗ್ರೆಸ್ ಶಾಸಕಿ, ಮಾಜಿ ನಕ್ಸಲ್ ಸೀತಕ್ಕ ಅವರು ಮುರ್ಮುಗೆ ಮತ ಹಾಕಿದ್ರು. ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಹಾಕಿದ್ದೇನೆ ಅಂದ್ರು. ಬುಡಕಟ್ಟು ಜನರೇ ಹೆಚ್ಚಿರುವ ಮುಲುಗು ಕ್ಷೇತ್ರವನ್ನು ಸೀತಕ್ಕ ಪ್ರತಿನಿಧಿಸ್ತಿದ್ದಾರೆ. ವಿಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾಗೆ ಮೂರು ಲಕ್ಷದಷ್ಟು ಮತ ಬೀಳುವ ನಿರೀಕ್ಷೆ ಇದೆ. ಈ ಚುನಾವಣೆಯಲ್ಲಿಯೂ ಬಿಜೆಪಿ ಹಣ ಕೊಟ್ಟುಮತ ಖರೀದಿ ಮಾಡಿದೆ ಎಂದು ಯಶವಂತ ಸಿನ್ಹಾ ಗಂಭೀರ ಆರೋಪ ಮಾಡಿರೋದು ಗಮನಾರ್ಹ ವಿಚಾರ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ- ವ್ಹೀಲ್ ಚೇರ್‌ನಲ್ಲಿ ಬಂದು ಮತ ಹಾಕಿದ ಮನಮೋಹನ್ ಸಿಂಗ್

    Live Tv
    [brid partner=56869869 player=32851 video=960834 autoplay=true]