Tag: Drama Junior

  • ‘ಡ್ರಾಮಾ ಜೂನಿಯರ್ಸ್’ ಚಾಂಪಿಯನ್ ಆದ ರಿಷಿಕಾ ಕುಂದೇಶ್ವರ, ವಿಷ್ಣು

    ‘ಡ್ರಾಮಾ ಜೂನಿಯರ್ಸ್’ ಚಾಂಪಿಯನ್ ಆದ ರಿಷಿಕಾ ಕುಂದೇಶ್ವರ, ವಿಷ್ಣು

    ಜೀ ಕನ್ನಡ ವಾಹಿನಿಯ ಅತ್ಯಂತ ಪ್ರತಿಷ‍್ಠಿತ ಕಾಮಿಡಿ ಶೋ  ಡ್ರಾಮಾ ಜೂನಿಯರ್‌ ಸೀಸನ್‌5  (Drama Junior) ತೆರೆ ಬಿದ್ದಿದೆ. ಈ ಸೀಸನ್ ನ ವಿನ್ನರ್ (Winner) ಆಗಿ ಮಂಗಳೂರಿನ ರಿಷಿಕಾ ಕುಂದೇಶ್ವರ (Rishika Kundeswara) ಮತ್ತು ಕುಣಿಗಲ್ ನ ವಿಷ್ಣು  (Vishnu Kunigal) ಜಂಟಿಯಾಗಿ ಟ್ರೋಫಿ ಗೆದ್ದಿದ್ದಾರೆ.

    ಪೌರಾಣಿಕ, ವ್ಯಕ್ತಿಚಿತ್ರ, ಐತಿಹಾಸಿಕ, ಜನಪದೀಯ ಶಾಸ್ತ್ರೀಯ ಮತ್ತು ಕಾಮಿಡಿ ವಿಭಾಗದಲ್ಲಿ ವಾಕ್ಪಟುತ್ವ ಮತ್ತು ಭಾವಾಭಿನಯದ ಮೂಲಕ ತೀರ್ಪುಗಾರರ ಮತ್ತು ಕನ್ನಡಿಗರ ಮೆಚ್ಚುಗೆ ಗಳಿಸಿ ಸೀಸನ್‌ನಲ್ಲಿ ಅತಿ ಹೆಚ್ಚು ಅವಾರ್ಡ್‌ಗಳೊಂದಿಗೆ ರಿಷಿಕಾ  ಫೈನಲ್‌ಗೆ ಲಗ್ಗೆ ಹಾಕಿದ್ದರು. ರಿಷಿಕಾ ಹಿರಿಯ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಮತ್ತು ಸಂಧ್ಯಾ ದಂಪತಿಯ ಪುತ್ರಿ.

    ವಿಷ್ಣು ಕುಣಿಗಲ್  ಅವರು ವೆಂಕಟೇಶ್, ರಾಜೇಶ್ವರಿ ದಂಪತಿ ಪುತ್ರ. ರನ್ನರ್ ಅಪ್  ಮಹಾಲಕ್ಷ್ಮಿ, ಸೆಕೆಂಡ್ ರನ್ನರ್ ಅಪ್  ಇಂಚರ ಟ್ರೋಫಿ ಗೆದ್ದುಕೊಂಡಿದ್ದಾರೆ. ಬಹುಮುಖ ಪ್ರತಿಭೆಯಾಗಿರುವ ರಿಷಿಕಾ  ಅಲ್ಲಮಪ್ರಭು ನಾಟಕದಲ್ಲಿ ಭಕ್ತಿ ಭಾವನಾತ್ಮಕ ವಚನ  ಹೇಳುತ್ತಾ ಭಕ್ತಿಯ ಪರಾಕಾಷ್ಠೆ  ತೋರಿದ್ದರು.

     

    ತೀರ್ಪುಗಾರರಾದ ರವಿಚಂದ್ರನ್‌, ಲಕ್ಷ್ಮೀ, ರಚಿತಾರಾಮ್ ,  ರಂಗ ಮೇಷ್ಟ್ರು ಅರುಣ್‌ ಸಾಗರ್‌, ರಾಜು ತಾಳಿಕೋಟೆ ಅವರು ವಿಶೇಷವಾಗಿ ಮೆಚ್ಚಿಕೊಂಡಿದ್ದರು. ವಿಷ್ಣು ಕುಣಿಗಲ್ ಕಾಮಿಡಿ ಸ್ಕಿಟ್ ಗಳಿಂದ ತೀರ್ಪುಗಾರರ ಮೆಚ್ಚುಗೆ ಜತೆಗೆ ಅಭಿಮಾನಿ ವರ್ಗ ಹೊಂದಿದ್ದರು.

  • ಡ್ರಾಮಾ ಜ್ಯೂನಿಯರ್ ಪಟ್ಟ ಪಡೆದ ಸಮೃದ್ಧಿ: ಲಕ್ಷ ಲಕ್ಷ ಬಹುಮಾನ ಪಡೆದ ಡ್ರಾಮಾ ಕ್ವೀನ್

    ಡ್ರಾಮಾ ಜ್ಯೂನಿಯರ್ ಪಟ್ಟ ಪಡೆದ ಸಮೃದ್ಧಿ: ಲಕ್ಷ ಲಕ್ಷ ಬಹುಮಾನ ಪಡೆದ ಡ್ರಾಮಾ ಕ್ವೀನ್

    ರ್ನಾಟಕದ ಅತಿ ದೊಡ್ಡ ಮಕ್ಕಳ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್ ಸೀಸನ್ 4 ಗ್ರಾಂಡ್ ಫಿನಾಲೆ ಗೆ ಅದ್ಧೂರಿಯಾಗಿ ತೆರೆ ಬಿದ್ದಿದೆ . ಜೀ ಕನ್ನಡ ವಾಹಿನಿ ಹೆಮ್ಮೆಯಿಂದ ಪ್ರಸ್ತುತ ಪಡಿಸಿದ್ದ ಈ ಶೋ ಸತತ 23 ವಾರಗಳ ಕಾಲ ಇಡೀ ಕರುನಾಡನ್ನು ರಂಜಿಸಿ ಇಂದು ಕರ್ನಾಟಕದ ಮನೆಮನೆಯ ಮುದ್ದಾದ ಕಾರ್ಯಕ್ರಮವಾಗಿದೆ. ಇನ್ನು ಈ ಸೀಸನ್ ನ ವಿಜೇತರಾಗಿ ಕುಂದಾಪುರದ ಸಮೃದ್ಧಿ ಎಸ್ ಮೊಗವೀರ್ ರವರು ಹೊರಹೊಮ್ಮಿದ್ದಾರೆ.

    ತಮ್ಮ ಅದ್ಭುತ ಅಭಿನಯದ ಮೂಲಕ ಮನಸೂರೆಗೊಂಡಿದ್ದ 15 ಮಕ್ಕಳು ಫೈನಲ್ ಗೆ ಆಯ್ಕೆಯಾಗಿದಿದ್ದು ವಿಶೇಷವಾಗಿತ್ತು. ಅವರಲ್ಲಿ ನಾಲ್ಕು ಮಕ್ಕಳು ಪ್ರಶಸ್ತಿ ಗೆಲ್ಲುವ ಹಂತಕ್ಕೆ ತಲುಪಿದ್ದು ತ್ರಿವಳಿ ರತ್ನಗಳು ಉತ್ತಮರಲ್ಲಿ ಅತ್ಯುತ್ತಮರನ್ನು ವಿಜೇತರನ್ನಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರತಿಯೊಬ್ಬ ಮಗುವಿಗೂ ಪದಕ ನೀಡುವ ಮೂಲಕ ಉಳಿದ 11 ಪ್ರತಿಭೆಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದ ಗುಣಮಟ್ಟ ಹಾಗು ವಿಶೇಷತೆಗೆ ಸಾಕ್ಷಿಯಂತೆ  ಇಬ್ಬರು ಪ್ರತಿಭೆಗಳು ಚಾಮರಾಜನಗರದ ಗೌತಮ್ ರಾಜ್ ಮತ್ತು ಉಡುಪಿಯ ಸಾನಿಧ್ಯ ಆಚಾರ್ ಸಮಬಲ ಸಾಧಿಸಿಕೊಂಡು ಎರಡನೇ ಸ್ಥಾನ ಪಡೆದಿದ್ದಾರೆ ಹಾಗು ತಲಾ ಮೂರು ಲಕ್ಷ ರೂಪಾಯಿ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ:ವರುಣ್ ತೇಜ್ ಜೊತೆ ಲಾವಣ್ಯ ತ್ರಿಪಾಠಿ ಮದುವೆ?

    ಇನ್ನು  ಮಂಗಳೂರಿನ ವೇದಿಕ್ ಅವರು ಮೂರನೇ ಸ್ಥಾನ ಪಡೆದು ಜನಮೆಚ್ಚುಗೆಗಳಿಸಿದರು. ಈ ಸೀಸನ್ ವಿಶಿಷ್ಟ ಪ್ರತಿಭೆಯಾಗಿ ವೇದಿಕೆಗೆ ಆಗಮಿಸಿದ ರಾಯಚೂರಿನ ಕುಳ್ಳ ಸಿಂಗಂ ಖ್ಯಾತಿಯ ಅರುಣ್ ಅವರಿಗೆ ವಿಶೇಷ ಬಹುಮಾನವಾಗಿ ಒಂದು ಲಕ್ಷ ರುಪಾಯಿ ನಗದು ಬಹುಮಾನವನ್ನು ಸಹ ನೀಡಿ  ವೇದಿಕೆ ಸಾರ್ಥಕತೆ ಮೆರೆಯಿತು. ಅಷ್ಟೇ ಅಲ್ಲದೆ ಈ ಎಲ್ಲಾ ಬಹುಮಾನಗಳು ಆ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಕೆ ಆಗುತ್ತಿರುವುದು ವಿಶೇಷ. ಈ ಶೋ ನಿರ್ದೇಶಕ ಹಾಗು ಜೀ ಕನ್ನಡ ವಾಹಿನಿಯ ನಾನ್ ಫಿಕ್ಷನ್ ಮುಖ್ಯಸ್ಥರಾದ ಶರಣಯ್ಯ ಅವರು ಮಾತನಾಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿಭಾಯಿಸಿದ ಎಲ್ಲಾ ಕಾರ್ಮಿಕರನ್ನು, ಮೆಂಟರ್ ರನ್ನು, ತೀರ್ಪುಗಾರರನ್ನು , ಕ್ಯಾಮರಾ ಮ್ಯಾನ್ಗಳನ್ನು, ಸ್ಕಿಟ್ ಬರಹಗಾರರಿಗೆ ಪ್ರಶಂಸೆ ನೀಡಿದರು.

    ವಾಹಿನಿಯ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ರವರು ಮಾತನಾಡಿ ಎಲ್ಲಾ ಮಕ್ಕಳಿಗೂ ಅಭಿನಂದಿಸಿ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿ ವೀಕ್ಷಕರನ್ನು ನಕ್ಕು ನಗಿಸಲು  ಕಾಮಿಡಿ ಕಿಲಾಡಿಗಳು ಸೀಸನ್ 4 ಶುರುವಾಗಲಿದೆ ಎಂದು ಮಾಹಿತಿ ನೀಡಿದರು.  ಜೊತೆಗೆ  ಎಂದಿನಂತೆ ಈ ಸೀಸನ್ ನಲ್ಲೂ  ನಿರ್ದೇಶಕ  ಯೋಗರಾಜ್ ಭಟ್,  ನವರಸನಾಯಕ ಜಗ್ಗೇಶ್ ಮತ್ತು ಕ್ರೇಜಿ ಕ್ವೀನ್ ರಕ್ಷಿತಾ ರವರು ತೀರ್ಪುಗಾರರಾಗಿ ಮುಂದುವರೆಯುತ್ತಾರೆ ಜೊತೆಗೆ ಮಾಸ್ಟರ್ ಆನಂದ್  ನಿರೂಪಕರಾಗಿರುತ್ತಾರೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಡ್ರಾಮಾ ಜ್ಯೂನಿಯರ್ ನೋಡಲು ಮನೆ ಬಿಟ್ಟು ಬೆಂಗಳೂರಿನತ್ತ ಬಂದ 4 ಮಕ್ಕಳು

    ಡ್ರಾಮಾ ಜ್ಯೂನಿಯರ್ ನೋಡಲು ಮನೆ ಬಿಟ್ಟು ಬೆಂಗಳೂರಿನತ್ತ ಬಂದ 4 ಮಕ್ಕಳು

    ಬಳ್ಳಾರಿ: ಖಾಸಗಿವಾಹಿನಿಯಲ್ಲಿ ಬರುವ ‘ಡ್ರಾಮಾ ಜ್ಯೂನಿಯರ್’ ರಿಯಾಲಿಟಿ ಶೋ ನೋಡಲು ಮನೆ ಬಿಟ್ಟು ಬೆಂಗಳೂರಿನತ್ತ ಮಕ್ಕಳು ಓಡಿ ಬಂದಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಚಂದ್ರಶೇಖರ್ ಹಾಗೂ ವೀರೇಶ್ ಅವರ ಮಕ್ಕಳು ಬೇಸಿಗೆ ರಜೆ ನೀಡಿದ ಹಿನ್ನೆಲೆಯಲ್ಲಿ ಬಳ್ಳಾರಿಯ ನಾಲ್ಕು ಹೆಣ್ಣು ಮಕ್ಕಳು ಮನೆಯಲ್ಲಿ ಆಟವಾಡುತ್ತಿದ್ದರು. ಆಟ ಆಡುವುದು ಬಿಟ್ಟು ಓದಿನ ಕಡೆ ಗಮನ ಕೊಡಿ ಎಂದು ತಂದೆ-ತಾಯಿ ಗದರಿದ್ದಾರೆ. ನಾವು ಕೂಡ ನಮ್ಮ ಕಾಲ ಮೇಲೆ ನಿಲ್ಲಬೇಕು ಎಂದು ನಿರ್ಧಾರ ಮಾಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಬಸ್ ಹತ್ತಿ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ:  ಹಂಪಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಿಂತನೆ: ವಚನಾನಂದ ಮಹಾಸ್ವಾಮೀಜಿ 

    ನಿನ್ನೆ ಸಂಜೆ ಆರು ಘಂಟೆಗೆ ಕುರಗೋಡು ಬೆಂಗಳೂರು ಬಸ್ ಹತ್ತಿದ್ದ ನಾಲ್ಕು ಜನ ಮಕ್ಕಳ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಿದ್ದಾರೆ. ಈ ಮಕ್ಕಳನ್ನು ನೋಡಿದ ಬಸ್ ನಿರ್ವಾಹಕ ಅನುಮಾನಗೊಂಡು ನೀವು ಯಾರು ಎಲ್ಲಿಗೆ ಹೋಗುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಮಕ್ಕಳು ಯಾವುದನ್ನು ಹೇಳದೇ ಎಲ್ಲವನ್ನೂ ಮರೆ ಮಾಚಿದ್ದಾರೆ.

    Kempegowda Bus Station - Wikipedia

    ಯಾವಾಗ ಬೆಂಗಳೂರು ತಲುಪಿದ್ರೋ, ಆಗ ಬೆಂಗಳೂರು ನಗರ ನೋಡಿ ಗಾಬರಿಯಿಂದ ಎಲ್ಲವನ್ನೂ ತಿಳಿಸಿದ್ದಾರೆ. ಆಗ ಬಸ್ ಚಾಲಕ ಹಾಗೂ ನಿರ್ವಾಹಕ ನೇರವಾಗಿ ಬೆಂಗಳೂರಿನ ಉಪ್ಪರಪೇಟೆ ಪೊಲೀಸ್ ಠಾಣೆಗೆ ಮಕ್ಕಳನ್ನು ಒಪ್ಪಿಸಿದ್ದಾರೆ. ಬಳಿಕ ಪೋಷಕರಿಗೆ ಮಾಹಿತಿ ನೀಡಿ ಪೋಷಕರಿಗೆ ಮಕ್ಕಳನ್ನು ಒಪ್ಪಿಸಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ, ವೀರಮದಕರಿ ನಾಯಕ ಮೂರ್ತಿ ಅನಾವರಣಗೊಳಿಸಿದ ಕಿಚ್ಚ ಸುದೀಪ್ 

  • ಹಿಂದಿಯ ಜನಪ್ರಿಯ ಕಾರ್ಯಕ್ರಮಕ್ಕೆ ಕನ್ನಡತಿ ಚಿತ್ರಾಲಿ ಆಯ್ಕೆ

    ಹಿಂದಿಯ ಜನಪ್ರಿಯ ಕಾರ್ಯಕ್ರಮಕ್ಕೆ ಕನ್ನಡತಿ ಚಿತ್ರಾಲಿ ಆಯ್ಕೆ

    ಬೆಂಗಳೂರು: ಹಿಂದಿಯ ದೊಡ್ಡ ಜನಪ್ರಿಯ ಕಾರ್ಯಕ್ರಮವೊಂದಕ್ಕೆ `ಡ್ರಾಮಾ ಜೂನಿಯರ್’ ನ ವಿನ್ನರ್ ಚಿತ್ರಾಲಿ ಆಯ್ಕೆಯಾಗಿದ್ದಾಳೆ.

    ಖಾಸಗಿ ವಾಹಿನಿಯ ಜನಪ್ರಿಯ ಕಾರ್ಯಕ್ರಮವಾಗಿದ್ದ `ಡ್ರಾಮಾ ಜೂನಿಯರ್’ ನ ಮೊದಲ ಸೀಸನ್ ನಲ್ಲಿ ಪುಟ್ಟ ಬಾಲಕಿ ಚಿತ್ರಾಲಿ ವಿನ್ನರ್ ಆಗಿದ್ದಳು. ಆಕೆಯ ನಟನೆಗೆ ಕನ್ನಡದ ಜನತೆಯೇ ಮನಸೋತಿದ್ದರು. ಈಗ ಹಿಂದಿಯ ಕಾರ್ಯಕ್ರಮಕ್ಕೂ ಆಯ್ಕೆ ಆಗಿದ್ದಾಳೆ.

    ಮೇ 8 ರಂದು ಹಿಂದಿಯ ಜೀ ವಾಹಿನಿಯಲ್ಲಿ ಪ್ರಸಾರ ಆಗುವ `ಇಂಡಿಯಾಸ್ ಬೆಸ್ಟ್ ಡ್ರಾಮೇಬಾಜ್ ಸೀಸನ್ 3′ ನ ಆಡಿಷನ್ ನ ನಡೆದಿತ್ತು. ಆ ಆಡಿಷನ್ ನಲ್ಲಿ ಚಿತ್ರಾಲಿ ಕೂಡ ಭಾಗವಹಿಸಿದ್ದಳು. ಆಡಿಷನಲ್ಲಿ ಚಿತ್ರಾಲಿಯ ಅಭಿನಯ ನೋಡಿ ತೀರ್ಪುಗಾರರಾದ ನಟಿ ಸೋನಾಲಿ ಬೆಂದ್ರೆ, ಅನುರಾಗ್ ಬಸು ಹಾಗೂ ವಿವೇಕ್ ಒಬೆರಾಯ್ ಫಿದಾ ಆಗಿದ್ದರು. ಈಗ ಆ ಕಾರ್ಯಕ್ರಮಕ್ಕೆ ಆಯ್ಕೆಯಾಗುವ ಮೂಲಕ ಹಿಂದಿಯಲ್ಲಿ ಕನ್ನಡದ ಕಂದ ಕಾಲಿಟ್ಟಿದ್ದಾಳೆ.

    ಚಿತ್ರಾಲಿ ಡ್ರಾಮಾ ಜೂನಿಯರ್ ಆದ ಮೇಲೆ ಸುದೀಪ್ ನಿರ್ಮಾಣದ `ವಾರಸ್ಧಾರ’ ಧಾರಾವಾಹಿಯ ಲೀಡ್ ರೋಲ್ ನಲ್ಲಿ ಅಭಿನಯಿಸಿದ್ದಳು. ನಂತರ ನಟ ರಕ್ಷಿತ್ ಶೆಟ್ಟಿ ನಿರ್ಮಾಣದ `ಭೀಮಸೇನಾ ನಳಮಹರಾಜ’ ಚಿತ್ರದಲ್ಲಿ ಚಿತ್ರಾಲಿ ಒಂದು ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಕೆಲ ಸಿನಿಮಾಗಳನ್ನು ಸಹ ಮಾಡಿದ್ದಾಳೆ.