Tag: drain

  • ಯುಗಾದಿ ಮುನ್ನಾ ದಿನವೇ 2 ಜೀವ ಬಲಿ – ಚರಂಡಿ ಸ್ವಚ್ಛಗೊಳಿಸುವಾಗ ವಿಷಕಾರಿ ಗಾಳಿ ಸೇವಿಸಿ ಪೌರಕಾರ್ಮಿಕರಿಬ್ಬರು ಸಾವು

    ಯುಗಾದಿ ಮುನ್ನಾ ದಿನವೇ 2 ಜೀವ ಬಲಿ – ಚರಂಡಿ ಸ್ವಚ್ಛಗೊಳಿಸುವಾಗ ವಿಷಕಾರಿ ಗಾಳಿ ಸೇವಿಸಿ ಪೌರಕಾರ್ಮಿಕರಿಬ್ಬರು ಸಾವು

    ದಾವಣಗೆರೆ: ಚರಂಡಿ ಸ್ವಚ್ಛಗೊಳಿಸುವ ವೇಳೆ ವಿಷಕಾರಿ ಗಾಳಿ ಸೇವಿಸಿ ಪೌರಕಾರ್ಮಿಕರು (Pourakarmikas) ಇಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ಬಲಿಯಾಗಿವೆ ಎಂಬ ಆರೋಪ ಕೇಳಿಬಂದಿದೆ.

    ದಾವಣಗೆರೆ (Davanagere) ಜಿಲ್ಲೆಯ ಜಗಳೂರು ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸತ್ಯಪ್ಪ (45) ಹಾಗೂ ಮೈಲಪ್ಪ (42) ಸಾವನ್ನಪ್ಪಿದ ಪೌರಕಾರ್ಮಿಕರು. ಇದನ್ನೂ ಓದಿ: ಬಿಜೆಪಿಯ ಮತ್ತೊಂದು ವಿಕೆಟ್ ಪತನ- ಎಂಎಲ್‍ಸಿ ಸ್ಥಾನಕ್ಕೆ ಚಿಂಚನಸೂರ್ ರಾಜೀನಾಮೆ

    ಯುಗಾದಿ ಹಬ್ಬದ ಹಿನ್ನೆಲೆ ಬಹುದಿನಗಳಿಂದ ತುಂಬಿದ್ದ ಚರಂಡಿ ಸ್ವಚ್ಛತೆಗೆ ಬಸವನಕೋಟೆ ಗ್ರಾಪಂ ಪಿಡಿಓ ಶಶಿಧರ ಪಾಟೀಲ್ ಆದೇಶ ಹೊರಡಿಸಿದ್ದರು. ಪಿಡಿಓ ಅದೇಶದ ಹಿನ್ನೆಲೆ ಯಾವುದೇ ಮುಂಜಾಗ್ರತಾ ಕ್ರಮಗಳಿಲ್ಲದೆ ಸತ್ಯಪ್ಪ ಮತ್ತು ಮೈಲಪ್ಪ ಚರಂಡಿ ಸ್ವಚ್ಛತೆ ಮಾಡಿದ್ದಾರೆ.

    ಚರಂಡಿ ಸ್ವಚ್ಛಗೊಳಿಸುವಾಗ ವಿಷ ಗಾಳಿ ಸೇವಿಸಿ ಇಬ್ಬರೂ ಅಸ್ವಸ್ಥರಾಗಿದ್ದರು. ತೀವ್ರ ಅಸ್ವಸ್ಥಗೊಂಡ ಕಾರ್ಮಿಕರನ್ನು ಹತ್ತಿರದ ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಸ್ಥಿತಿ ಗಂಭೀರವಾದ ಹಿನ್ನೆಲೆ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು. ಇದನ್ನೂ ಓದಿ: ಕುಡಿದು ಗಲಾಟೆ ಮಾಡುತ್ತಿದ್ದವನ ಪ್ರಶ್ನೆ ಮಾಡಿದ ಸಂಬಂಧಿಯನ್ನೇ ಕೊಂದ- ಮತ್ತೋರ್ವನಿಗೆ ಗಾಯ

    ಚಿಕಿತ್ಸೆ ಫಲಕಾರಿ ಆಗದೇ ಇಬ್ಬರೂ ಪೌರಕಾರ್ಮಿಕರು ಮೃತಪಟ್ಟಿದ್ದಾರೆ. ಬೀಳಚೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ‌ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • 4 ತಿಂಗಳ ಭ್ರೂಣ ಶಿಶು ಚರಂಡಿಯಲ್ಲಿ ಪತ್ತೆ

    4 ತಿಂಗಳ ಭ್ರೂಣ ಶಿಶು ಚರಂಡಿಯಲ್ಲಿ ಪತ್ತೆ

    ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ 4 ತಿಂಗಳಿನ ಭ್ರೂಣ ಶಿಶುವೊಂದು ಚರಂಡಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

    ಭ್ರೂಣ ಶಿಶುವನ್ನು ಎಸೆದಿರುವ ಬಗ್ಗೆ ಮಕ್ಕಳ ಸಹಾಯವಾಣಿಗೆ ಕರೆ ಬಂದ ಹಿನ್ನೆಲೆಯಲ್ಲಿ ಅಂಗನವಾಡಿ ಮೇಲ್ವಿಚಾರಕಿ, ಅಂಗನವಾಡಿ ಕಾರ್ಯಕರ್ತರು, ಮಕ್ಕಳ ಸಹಾಯವಾಣಿ ಸಿಬ್ಬಂದಿಯವರೊಂದಿಗೆ ತಾವರಗೇರಾ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    POLICE JEEP

    ಭ್ರೂಣವನ್ನು ಪಟ್ಟಣ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಸಹಕಾರದೊಂದಿಗೆ ತಾವರಗೇರಾ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪರೀಕ್ಷಿಸಲಾಗಿದೆ. ಇದು 4 ರಿಂದ 5 ತಿಂಗಳಿನ ಭ್ರೂಣವಾಗಿದ್ದು, ಭ್ರೂಣವು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಇದನ್ನೂ ಓದಿ: ಪಿಎಸ್‍ಐ ಹಗರಣ ಕೇಸ್‌- ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಕೆ

    ಈ ಕೃತ್ಯವನ್ನು ಎಸಗಿದವರನ್ನು ಪತ್ತೆ ಮಾಡಿ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೋಟಗಾರ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರತಿ ಜಿಲ್ಲೆಯ ಯುವ ಮೋರ್ಚಾ ಕಾರ್ಯಕರ್ತರಿಂದ ಪ್ರವೀಣ್ ಕುಟುಂಬಕ್ಕೆ ಸಹಾಯ: ತೇಜಸ್ವಿ ಸೂರ್ಯ

    Live Tv
    [brid partner=56869869 player=32851 video=960834 autoplay=true]

  • ಚರಂಡಿಗೆ ಬಿದ್ದ 20ಕ್ಕೂ ಅಧಿಕ ಮಕ್ಕಳಿದ್ದ ಶಾಲಾ ಬಸ್

    ಚರಂಡಿಗೆ ಬಿದ್ದ 20ಕ್ಕೂ ಅಧಿಕ ಮಕ್ಕಳಿದ್ದ ಶಾಲಾ ಬಸ್

    ಭೋಪಾಲ್: ಭಾರೀ ಮಳೆಯಿಂದಾಗಿ 20ಕ್ಕೂ ಅಧಿಕ ಮಕ್ಕಳಿದ್ದ ಶಾಲಾ ಬಸ್‍ವೊಂದು ಚರಂಡಿಗೆ ಬಿದ್ದ ಘಟನೆ ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ನಡೆದಿದೆ.

    ಗ್ರಾಮಸ್ಥರ ಗುಂಪು ಟ್ರ್ಯಾಕ್ಟರ್ ಮತ್ತು ಹಗ್ಗವನ್ನು ಬಳಸಿ ಚರಂಡಿಯಲ್ಲಿ ಸಿಲುಕಿದ್ದ ಬಸ್‌ನ್ನು ಹೊರತೆಗೆದರು. ಘಟನೆ ಸಂಬಂಧಿಸಿ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಒಕ್ಕಲಿಗ ಸಮರ – ಜಮೀರ್ ವಿರುದ್ಧ ಆಪ್ತ ಚೆಲುವರಾಯಸ್ವಾಮಿ ಸಂಧಾನ, ಸಿದ್ದು ಸೈಲೆಂಟ್

    ಈ ವೀಡಿಯೋದಲ್ಲಿ ಬಸ್ ಚರಂಡಿಯಲ್ಲಿ ಸಿಲುಕಿದೆ. ಈ ಸಂದರ್ಭದಲ್ಲಿ ನೀರೆಲ್ಲವೂ ಬಸ್‍ನೊಳಗೆ ಬರುತ್ತಿದ್ದಂತೆ ಸಹಾಯಕ್ಕಾಗಿ ಬಸ್‍ನಲ್ಲಿದ್ದ ಮಕ್ಕಳು ಕೂಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲೇ ಇದ್ದ ಗ್ರಾಮಸ್ಥರು ಬಂದು ಬಸ್‍ನಲ್ಲಿದ್ದ ಮಕ್ಕಳನ್ನು ಕಾಪಾಡಿದ್ದಾರೆ. ಇದನ್ನೂ ಓದಿ: ಗಬ್ಬೆದ್ದು ನಾರುತ್ತಿದೆ ಬೆಂಗಳೂರಿನ ಚೆಂದದ ಹಲಸೂರು ಕೆರೆ..!

    ಮಧ್ಯಪ್ರದೇಶದ ಈ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD) ಮಧ್ಯಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗುವ ಎಚ್ಚರಿಕೆಯನ್ನು ಆರೆಂಜ್ ಅಲರ್ಟ್ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಮಳೆಯಿಂದ ರಸ್ತೆಯೆಲ್ಲಾ ಜಲಾವೃತ – ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಪೊಲೀಸ್ ಹಾಗೂ ಪತ್ನಿ ಡ್ರೈನೇಜ್ ಗುಂಡಿಗೆ

    ಮಳೆಯಿಂದ ರಸ್ತೆಯೆಲ್ಲಾ ಜಲಾವೃತ – ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಪೊಲೀಸ್ ಹಾಗೂ ಪತ್ನಿ ಡ್ರೈನೇಜ್ ಗುಂಡಿಗೆ

    ಲಕ್ನೋ: ಮಳೆ ನೀರಿನಿಂದ ಜಲಾವೃತವಾದ ರಸ್ತೆಗಳಲ್ಲಿ ಚಲಿಸುವುದು ಎಷ್ಟು ಅಪಾಯಕಾರಿ ಎಂಬುದು ಈ ಘಟನೆಯೇ ಸಾಕ್ಷಿ. ದಾರಿಯೇ ಕಾಣದ ರಸ್ತೆಯಲ್ಲಿ ಪ್ರಯಣಿಸುತ್ತಿದ್ದ ಪೊಲೀಸ್ ಹಾಗೂ ಪತ್ನಿ ಸ್ಕೂಟರ್ ಸಮೇತವಾಗಿ ತೆರೆದ ಚರಂಡಿಗೆ ಬಿದ್ದಿದ್ದಾರೆ.

    ನೀರಿನಿಂದ ಜಲಾವೃತವಾಗಿ ರಸ್ತೆಯೇ ಕಾಣದ ದಾರಿಯಲ್ಲಿ ಸಾಗುತ್ತಿದ್ದ ದಂಪತಿ ಸ್ಕೂಟರ್ ಸಮೇತವಾಗಿ ಡ್ರೈನೇಜ್ ಗುಂಡಿಗೆ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ಘಟನೆಯಿಂದ ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಕಾಬೂಲ್ ಗುರುದ್ವಾರ ದಾಳಿ: 3 ಗಂಟೆಗಳ ಕಾಲ ದೇವಾಲಯ ರಕ್ಷಿಸಲು ಹೋರಾಡಿದ ತಾಲಿಬಾನ್

    ಡ್ರೈನೇಜ್‌ಗೆ ಬಿದ್ದ ದಂಪತಿಯನ್ನು ಸ್ಥಳೀಯರು ತಕ್ಷಣವೇ ರಕ್ಷಿಸಲು ಧಾವಿಸಿದ್ದಾರೆ. ದಂಪತಿ ಗುಂಡಿಗೆ ಬೀಳುವ ವೀಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದನ್ನು ನಿವೃತ್ತ ಐಎಎಸ್ ಅಧಿಕಾರಿ ಸೂರ್ಯ ಪ್ರತಾಪ್ ಸಿಂಗ್ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಯುಪಿಯ ಸ್ಮಾರ್ಟ್ ಸಿಟಿ ಅಲಿಗಢ, ಇದಕ್ಕೆ ಯಾರಿಗೆ ಧನ್ಯವಾದ ಹೇಳಬೇಕು? ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಅಗ್ನಿಪಥ್ ಪ್ರತಿಭಟನೆಗಳ ನಡುವೆ, ಅಗ್ನಿವೀರರಿಗೆ ಆನಂದ್ ಮಹೀಂದ್ರಾ ಕೊಟ್ರು ಬಿಗ್ ಆಫರ್

    ಘಟನೆ ಬಗ್ಗೆ ವಿವರಿಸಿದ ಪೊಲೀಸ್ ಅಧಿಕಾರಿ ದಯಾನಂದ್ ಸಿಂಗ್, ನಾವು ಸ್ಕೂಟರ್‌ನಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದೆವು. ಮಳೆ ನೀರಿನಿಂದ ರಸ್ತೆ ತುಂಬಿದ್ದು, ನಮ್ಮ ಎದುರು ಚರಂಡಿ ಇದ್ದ ವಿಷಯ ತಿಳಿದಿರಲಿಲ್ಲ. ಹೀಗಾಗಿ ಸ್ಕೂಟರ್ ಸಮೇತ ಚರಂಡಿಯಲ್ಲಿ ಬಿದ್ದೆವು, ನಮಗೆ ಸ್ವಲ್ಪ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.

    Live Tv

  • ಚರಂಡಿ ನೀರಲ್ಲಿ ಕೊತ್ತಂಬರಿ ಸೊಪ್ಪು ತೊಳೆದು ಮಾರಾಟ- ವೀಡಿಯೋ ನೋಡಿ

    ಚರಂಡಿ ನೀರಲ್ಲಿ ಕೊತ್ತಂಬರಿ ಸೊಪ್ಪು ತೊಳೆದು ಮಾರಾಟ- ವೀಡಿಯೋ ನೋಡಿ

    ಭೋಪಾಲ್: ತರಕಾರಿ ಮಾರಾಟಗಾರನೊಬ್ಬನು ಭೋಪಾಲ್‍ನ ಸಿಂಧಿ ಮಾರ್ಕೆಟ್‍ನ ಚರಂಡಿ ನೀರಿನಲ್ಲಿ ಕೊತ್ತಂಬರಿ ಸೊಪ್ಪನ್ನು ತೊಳೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

    ವೀಡಿಯೋದಲ್ಲಿ ಏನಿದೆ?
    ತರಕಾರಿ ಮಾರಾಟಗಾರನೊಬ್ಬ ಚರಂಡಿ ನೀರಿನಲ್ಲಿ ತರಕಾರಿ ತೊಳೆಯುತ್ತಿದ್ದಾನೆ. ಇದನ್ನು ಗಮನಿಸಿದ ವ್ಯಕ್ತಿ ಕೊಳಕು ನೀರಿನಲ್ಲಿ ತಿನ್ನುವ ತರಕಾರಿಗಳನ್ನು ತೊಳೆಯಬೇಡಿ ಎಂದು ವ್ಯಕ್ತಿ ಪದೇ ಪದೇ ಹೇಳುತ್ತಿದ್ದರೂ, ಮಾರಟಗಾರನು ಗಮನ ಕೊಡಲಿಲ್ಲ. ಈ ದೃಶ್ಯ ನೋಡಿದರೆ ನಿನ್ನ ಬಳಿ ಯಾರೂ ತರಕಾರಿ ಖರೀದಿಸುವುದಿಲ್ಲ ಎಂದು ವ್ಯಕ್ತಿ ಹೇಳುತ್ತಿದ್ದರೂ, ಸಹ ಮಾರಾಟಗಾರ ನಿರ್ಲಕ್ಷ್ಯ ಮಾಡುತ್ತಾ ಚರಂಡಿ ನೀರಿನಲ್ಲೇ ಸೊಪ್ಪನ್ನು ತೊಳೆದು ಮಾರಾಟ ಮಾಡಲು ಸಿದ್ಧವಾಗಿಟ್ಟಿರುವುದನ್ನು ನಾವು ಈ ವೀಡಿಯೋದಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ:  ಕಡಿಮೆ ಆಹಾರ ತಿನ್ನಿ: ಕಿಮ್ ಜಾಂಗ್ ಉನ್ ಮನವಿ

    ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಮಾರಾಟಗಾರನ ವಿರುದ್ಧವಾಗಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭೋಪಾಲ್‍ನ ಆಹಾರ ಮತ್ತು ನಾಗರಿಕ ಸರಬರಾಜು, ಸ್ಥಳೀಯ ಆರೋಗ್ಯ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಮಾರಾಟಗಾರನ ಬಗ್ಗೆ ತಿಳಿದು ಕಠಿಣ ಕ್ರಮ ಕೈಗೊಳ್ಳಬೇಕು, ನಾಗರಿಕರ ಆರೋಗ್ಯದೊಂದಿಗೆ ಯಾರೂ ಆಟವಾಡುವಂತಿಲ್ಲ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

  • ನಾಪತ್ತೆಯಾಗಿದ್ದ ಬಾಲಕಿ ಕೆರೆಯಲ್ಲಿ ಶವವಾಗಿ ಪತ್ತೆ

    ನಾಪತ್ತೆಯಾಗಿದ್ದ ಬಾಲಕಿ ಕೆರೆಯಲ್ಲಿ ಶವವಾಗಿ ಪತ್ತೆ

    – ಮನೆಯ ಬಳಿ ಸೈಕಲ್ ಸವಾರಿ ಮಾಡುವಾಗ ಮಿಸ್ಸಿಂಗ್
    – ಸೈಕಲ್ ಪತ್ತೆಯಾದ 2 ಕಿ.ಮೀ ದೂರದಲ್ಲಿ ಶವವಾಗಿ ಪತ್ತೆ

    ಹೈದರಾಬಾದ್: ಗುರುವಾರ ಸಂಜೆಯಿಂದ ನಾಪತ್ತೆಯಾಗಿದ್ದ 12 ವರ್ಷದ ಬಾಲಕಿ ಇಂದು ಶವವಾಗಿ ಕೆರೆಯಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ಬಾಲಕಿಯನ್ನು ಸುಮೇಧಾ ಕಪುರಿಯಾ ಎಂದು ಗುರುತಿಸಲಾಗಿದೆ. ಸುಮೇಧಾ ಕೊನೆಯದಾಗಿ ಹೈದರಾಬಾದ್‍ನ ವಸತಿ ಪ್ರದೇಶವಾದ ನೆರೆಡ್‍ಮೆಟ್‍ನ ಕಾಕತಿಯಾ ನಗರದಲ್ಲಿ ತನ್ನ ಮನೆಯ ಹೊರಗೆ ಸೈಕಲ್ ಸವಾರಿ ಮಾಡುತ್ತಿದ್ದಳು. ಆದರೆ ಬಾಲಕಿಯ ಸೈಕಲ್ ಪತ್ತೆಯಾದ ಸ್ಥಳದಿಂದ 2 ಕಿ.ಮೀ ದೂರದಲ್ಲಿರುವ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಬಾಲಕಿಗಾಗಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾದ ಕೆಲವೇ ಗಂಟೆಗಳ ನಂತರ ಮೃತದೇಹ ಪತ್ತೆಯಾಗಿದೆ.

    ಸುಮೇಧಾ 5ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಈಕೆ ಗುರುವಾರ ಸಂಜೆ ನಾಪತ್ತೆಯಾಗಿದ್ದಳು. ನಂತರ ಪೋಷಕರು ಮಗಳಿಗಾಗಿ ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಕೂಡಲೇ ಪೋಷಕರು ನೆರೆಡ್‍ಮೆಟ್ ಪೊಲೀಸರಿದೆ ನಾಪತ್ತೆ ದೂರ ದಾಖಲಿಸಿದ್ದರು. ತಕ್ಷಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದರು. ಬಾಲಕಿ ಸೈಕಲ್ ತುಳಿಯುತ್ತಿದ್ದಾಗ ಚರಂಡಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

    ನನ್ನ ಮಗಳು ಚರಂಡಿಗೆ ಬಿದ್ದಿದ್ದಾಳೆ ಎಂದರೆ ನಾನು ನಂಬಲ್ಲ. ಹೀಗಾಗಿ ಅವಳ ಸಾವಿನ ಬಗ್ಗೆ ತನಿಖೆ ನಡೆಸಬೇಕಾಗಿದೆ. ಏನೋ ಸಂಭವಿಸಿದಂತೆ ತೋರುತ್ತದೆ ಎಂದು ಬಾಲಕಿ ತಾಯಿ ಸುಕನ್ಯಾ ಕಪುರಿಯಾ ಆಗ್ರಹಿಸಿದ್ದಾರೆ.

    ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ತಂಡಗಳು ಬಾಲಕಿಯ ಗುಲಾಬಿ ಬಣ್ಣದ ಸೈಕಲ್ ಅನ್ನು ಮನೆಗೆ ಹತ್ತಿರವಿರುವ ತೆರೆದ ಚರಂಡಿಯಲ್ಲಿ ಪತ್ತೆ ಮಾಡಿದೆ. ಕಳೆದ ಎರಡು ದಿನಗಳಿಂದ ಹೈದರಾಬಾದ್‍ನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವಾರು ಚರಂಡಿಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಬಾಲಕಿ ಚರಂಡಿಗೆ ಬಿದ್ದಿರಬಹುದೆಂದು ಶಂಕಿಸಿ ರಕ್ಷಣಾ ಪಡೆ ಪೊಲೀಸರಿಗೆ ಚರಂಡಿ ತೆರೆಯಲು ಸಹಾಯ ಮಾಡಿದ್ದಾರೆ.

    ಚರಂಡಿಯಲ್ಲಿ ಬಾಲಕಿ ಪತ್ತೆಯಾಗಿಲ್ಲ. ಆದರೆ ಸ್ವಲ್ಪ ಸಮಯದ ನಂತರ ಸಮೀಪದ ಕೆರೆಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಸದ್ಯಕ್ಕೆ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಸ್ಥಳದಲ್ಲಿ ಮಗಳ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ಗುರುವಾರ ರಾತ್ರಿಯೇ ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ. ನಾವು ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡುತ್ತಿದ್ದೇವೆ. ಸದ್ಯ ತನಿಖೆಗಾಗಿ ನಾಲ್ಕು ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಅದೇ ಕಾಲೋನಿಯ ಮನೆಯೊಂದರ ಹೊರಗಿನ ಕ್ಯಾಮೆರಾದಿಂದ ಪಡೆದ ಸಿಸಿಟಿವಿ ದೃಶ್ಯಾವಳಿಯಲ್ಲಿ ಬಾಲಕಿ ತನ್ನ ಸೈಕಲ್‍ನಲ್ಲಿ ಹೋಗುತ್ತಿರುವನ್ನು ಕಾಣಬಹುದು ಎಂದು ಸಹಾಯಕ ಪೊಲೀಸ್ ಆಯುಕ್ತ ಶಿವಕುಮಾರ್ ಹೇಳಿದರು.

  • ಊಟದ ತಟ್ಟೆಯನ್ನು ಚರಂಡಿ ನೀರಲ್ಲಿ ತೊಳೆದ ವಿದ್ಯಾರ್ಥಿಗಳು

    ಊಟದ ತಟ್ಟೆಯನ್ನು ಚರಂಡಿ ನೀರಲ್ಲಿ ತೊಳೆದ ವಿದ್ಯಾರ್ಥಿಗಳು

    ಭೋಪಾಲ್: ಮಧ್ಯ ಪ್ರದೇಶದ ಶಾಲೆಯೊಂದರಲ್ಲಿ ಬಿಸಿಯೂಟ ಸೇವಿಸಿದ ಬಳಿಕ ವಿದ್ಯಾರ್ಥಿಗಳು ಚರಂಡಿ ನೀರಿನಲ್ಲಿ ತಟ್ಟೆ ತೊಳೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ಹಿಂದೆ ಮಧ್ಯ ಪ್ರದೇಶದ ಶಾಲಾ ಮಕ್ಕಳಿಗಾಗಿ ಮಧ್ಯಾಹ್ನದ ಬಿಸಿಯೂಟ ತಯಾರಿಕೆ ಮಾಡುವುದಕ್ಕೆ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಇದೇ ಬೆನ್ನಲ್ಲಿ ಮಕ್ಕಳು ತಟ್ಟೆಯನ್ನು ಚರಂಡಿ ನೀರಿನಲ್ಲಿ ತೊಳೆದಿರುವ ಪ್ರಕರಣ ಬಾರೀ ಚರ್ಚೆಗೆ ಗ್ರಾಸವಾಗಿದೆ.

    ರಾಜ್ಯದ ಸಾಗರ್ ಜಿಲ್ಲೆಯ ಮಾಕ್ರೋನಿಯಾ ಪ್ರದೇಶದಲ್ಲಿ ಈ ನಡೆದಿದೆ. ವಿದ್ಯಾರ್ಥಿಗಳ ಕೈಯಲ್ಲಿ ಕೆಲಸ ಮಾಡಿಸಿ ನಿಯಮವನ್ನು ಉಲ್ಲಂಘಿಸಲಾಗಿದೆ. ಮಕ್ಕಳಿಗೆ ಬಿಸಿಯೂಟವನ್ನು ಪೂರೈಕೆ ಮಾಡುವ ಸ್ವಯಂ ಸೇವಾ ಸಂಸ್ಥೆಗಳೇ ಊಟದ ಬಳಿಕ ಮಕ್ಕಳ ತಟ್ಟೆಗಳನ್ನು ತೊಳೆಯುವುದು, ಉಳಿದ ಎಲ್ಲಾ ನೈರ್ಮಲ್ಯ ಕ್ರಮಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಆದರೆ ಈ ನಿಯಮವನ್ನು ಶಾಲೆ ನಿರ್ಲಕ್ಷಿಸಿದೆ.

    ಮಕ್ಕಳು ಚರಂಡಿ ನೀರಿನಲ್ಲಿ ತಟ್ಟೆ ತೊಳೆಯುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಎಚ್.ಪಿ. ಕುರ್ಮಿ ಎಚ್ಚೆತ್ತುಕೊಂಡಿದ್ದು, ಈ ಘಟನೆ ಬಗ್ಗೆ ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರಿಗೆ ಸಂಪೂರ್ಣ ಮಾಹಿತಿ ನೀಡುವಂತೆ ಆದೇಶ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ಖಾಡ್ವಾ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಕೈಯಲ್ಲಿ ಶಾಲಾ ಶೌಚಾಲಯಗಳನ್ನು ಸ್ವಚ್ಛಗೊಳಿಸಿರುವ ಘಟನೆ ನಡೆದಿತ್ತು. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ 5 ಅಂಕ ಹೆಚ್ಚು ಕೊಡುವುದಾಗಿ ಹೇಳಿ ಶಾಲಾ ಮುಖ್ಯೋಪಾಧ್ಯಾಯರು ಮಕ್ಕಳ ಕೈಯಲ್ಲಿ ಕೆಲಸ ಮಾಡಿಸುತ್ತಿದ್ದಾರೆ ಎಂದು ಓರ್ವ ವಿದ್ಯಾರ್ಥಿ ಹೇಳಿದ್ದನು. ಆದರೆ ಈ ಬಗ್ಗೆ ಅಲ್ಲಿನ ಜಿಲ್ಲಾಧಿಕಾರಿ ಮಾತನಾಡಿ, ಮಕ್ಕಳು ಅವರ ಶಾಲೆ ಕೆಲಸ ಮಾಡಿದರೆ ತಪ್ಪಿಲ್ಲ. ಆದರೆ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ಮಕ್ಕಳಿಗೆ ಬಲವಂತವಾಗಿ ಕೆಲಸ ಮಾಡಿಸುವುದು ತಪ್ಪು ಎಂದು ಹೇಳಿದ್ದರು.

  • ಚರಂಡಿಯಲ್ಲಿ 8 ಅಡಿ ಉದ್ದದ ಮೊಸಳೆ ಪತ್ತೆ

    ಚರಂಡಿಯಲ್ಲಿ 8 ಅಡಿ ಉದ್ದದ ಮೊಸಳೆ ಪತ್ತೆ

    ಮುಂಬೈ: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚರಂಡಿಯಲ್ಲಿ 8 ಅಡಿ ಉದ್ದದ ಮೊಸಳೆಯೊಂದು ಪತ್ತೆಯಾಗಿದೆ.

    ರತ್ನಗಿರಿಯ ಚಿಪ್ಲುನ್‍ನ ಪ್ರವಾಸಿ ರೆಸಾರ್ಟಿನ ಚರಂಡಿಯಲ್ಲಿ 8 ಅಡಿ ಮೊಸಳೆಯನ್ನು ಕಂಡು ಜನರು ದಂಗಾಗಿ ಹೋಗಿದ್ದಾರೆ. ಚರಂಡಿಯಲ್ಲಿ ಸಿಲುಕಿದ್ದ ಮೊಸಳೆಯ ವೈರಲ್ ಆಗುತ್ತಿದೆ. ಈ ಘಟನೆ ಚಿಪ್ಲುನ್‍ನ ದಾದರ್ ನಲ್ಲಿ ನಡೆದಿದ್ದು, ಜನರು ಮೊದಲು ಇದು ಮುಂಬೈನ ಸಬ್ ಅರ್ಬನ್ ದೃಶ್ಯ ಎಂದು ಅನುಮಾನ ವ್ಯಕ್ತಪಡಿಸಿದ್ದರು.

    ರತ್ನಗಿರಿಯಲ್ಲಿ ಜೋರಾಗಿ ಮಳೆ ಆಗಿತ್ತು. ಮಳೆಯಿಂದಾಗಿ ವಶಿಷ್ಠಿ ನದಿಯಿಂದ ಇಲ್ಲಿಗೆ ಬಂದಿರಬಹುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

    ವಿಚಿತ್ರ ಧ್ವನಿ ಬಂದಾಗ ಅಲ್ಲಿ ಓಡಾಡುತ್ತಿದ್ದ ಜನ ಬಗ್ಗಿ ಚರಂಡಿಯನ್ನು ನೋಡಿದಾಗ ಮೊಸಳೆ ಇರುವುದನ್ನು ಗಮನಿಸಿದ್ದಾರೆ. ಮೊಸಳೆ ಇರುವುದನ್ನು ಕಂಡು ಅರಣ್ಯಾಧಿಕಾರಿ ಹಾಗೂ ಅಗ್ನಿಶಾಮಕ ದಳಕ್ಕೆ ಕೂಡಲೇ ಮಾಹಿತಿ ನೀಡಿದ್ದಾರೆ. ಬಳಿಕ ಅಗ್ನಿಶಾಮಕ ದಳ ಹಾಗೂ ಅರಣ್ಯ ಅಧಿಕಾರಿಗಳು ಮೊಸಳೆಯನ್ನು ರಕ್ಷಿಸಿದ್ದಾರೆ.

    ಹವಮಾನದ ಕಾರಣದಿಂದಾಗಿ ಈ ಕ್ಷೇತ್ರದಲ್ಲಿ ಈ ರೀತಿ ಆಗುವುದು ಸಾಮಾನ್ಯ. ಸದ್ಯ ನಾವು ಮೊಸಳೆಯನ್ನು ಸುರಕ್ಷಿತವಾಗಿ ಚರಂಡಿಯಿಂದ ಹೊರ ತೆಗೆದು ನದಿಗೆ ಬಿಟ್ಟಿದ್ದೇವೆ ಎಂದು ಅರಣ್ಯ ಅಧಿಕಾರಿ ವಿ.ಕೆ ಸುರ್ವೆ ತಿಳಿಸಿದ್ದಾರೆ.

  • ಚರಂಡಿಯಲ್ಲಿ ಪತ್ತೆಯಾಯ್ತು ಮನುಷ್ಯರ ತಲೆಬುರುಡೆ!

    ಚರಂಡಿಯಲ್ಲಿ ಪತ್ತೆಯಾಯ್ತು ಮನುಷ್ಯರ ತಲೆಬುರುಡೆ!

    ಬೆಳಗಾವಿ(ಚಿಕ್ಕೋಡಿ): ಅಥಣಿ ಪಟ್ಟಣದ ವಿಕ್ರಮಪುರ ನಗರದ ಚರಂಡಿಯಲ್ಲಿ ಎರಡು ತಲೆ ಬುರುಡೆ ಪತ್ತೆಯಾಗಿದೆ.

    ಇಂದು ವಿಕ್ರಮಪುರ ನಗರದ ನಿವಾಸಿ ಡಾ.ರಾಮ್ ಕುಲಕರ್ಣಿ ಎಂಬುವವರ ಮನೆಯ ಮುಂದಿನ ಚರಂಡಿಯಲ್ಲಿ ತಲೆ ಬುರುಡೆ ಪತ್ತೆಯಾಗಿದೆ. ಪುರಸಭೆ ಕಾರ್ಮಿಕರು ಸ್ವಚ್ಛತಾ ಕಾರ್ಯ ಮಾಡುವಾಗ ಚರಂಡಿಯಲ್ಲಿ ಎರಡು ತಲೆ ಬುರುಡೆ ಸಿಕ್ಕಿದೆ.

    ಎರಡು ತಲೆ ಬುರುಡೆಯನ್ನು ಚರಂಡಿಯಿಂದ ಹೊರತೆಗೆದಾಗ ಸ್ಥಳೀಯರು ಅದನ್ನು ಕಂಡು ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಅಮವಾಸ್ಯೆ ಇದ್ದ ಕಾರಣಕ್ಕೆ, ವಾಮಾಚಾರ ಮಾಡಲು ತಲೆ ಬುರುಡೆಗಳನ್ನು ಉಪಯೋಗಿಸಿಕೊಂಡು ಬಳಿಕ ಅದನ್ನು ಚರಂಡಿಯಲ್ಲಿ ಎಸೆದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

    ಯಾರು ಈ ಬುರುಡೆಗಳನ್ನು ಚರಂಡಿಯಲ್ಲಿ ಎಸೆದಿದ್ದು ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ತಲೆ ಬುರುಡೆ ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv