Tag: Dragon Capsule Docks

  • ಇಲ್ಲಿಂದ ಭೂಮಿಯನ್ನು ನೋಡುವುದೇ ಸೌಭಾಗ್ಯ – ಬಾಹ್ಯಾಕಾಶ ನಿಲ್ದಾಣದಿಂದ ಶುಭಾಂಶು ಮೊದಲ ಸಂದೇಶ!

    ಇಲ್ಲಿಂದ ಭೂಮಿಯನ್ನು ನೋಡುವುದೇ ಸೌಭಾಗ್ಯ – ಬಾಹ್ಯಾಕಾಶ ನಿಲ್ದಾಣದಿಂದ ಶುಭಾಂಶು ಮೊದಲ ಸಂದೇಶ!

    – ತಲೆ ಭಾರವಾದಂತಿದೆ, ಕೆಲವೇ ದಿನಗಳಲ್ಲಿ ಇದಕ್ಕೆ ಹೊಂದಿಕೊಳ್ಳುತ್ತೇವೆ

    ನವದೆಹಲಿ: 140 ಕೋಟಿ ಭಾರತೀಯರ ಕನಸನ್ನು ಹೊತ್ತು ಅಂತರಿಕ್ಷಕ್ಕೆ ತೆರಳಿರುವ ಭಾರತೀಯ ವಾಯುಪಡೆಯ (IAF) ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (International Space Station) ತಲುಪಿದ ಬಳಿಕ ಮೊದಲ ಸಂದೇಶವನ್ನು ಹಂಚಿಕೊಂಡಿದ್ದಾರೆ.

    ಬಾಹ್ಯಾಕಾಶ ನಿಲ್ದಾಣ ತಲುಪಿದ ಬಳಿಕ ಮೊದಲ ಬಾರಿಗೆ ಮಾತನಾಡಿರುವ ಶುಕ್ಲಾ (Shubhanshu Shukla), ನಾನು ಈ ಕ್ಷಣಕ್ಕಾಗಿ ಎದುರು ನೋಡುತ್ತಿದ್ದೆ. ನಿಮ್ಮ ಪ್ರೀತಿ, ಆಶೀರ್ವಾದದಿಂದ ಐಎಸ್‌ಎಸ್‌ ತಲುಪಿದ್ದೇನೆ. ಇಲ್ಲಿಂದ ಭೂಮಿಯನ್ನು ನೋಡುವುದೇ ಸೌಭಾಗ್ಯ ಅಂತ ಭಾವುಕರಾಗಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿ – ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿದ ಮೊದಲ ಭಾರತೀಯ ಶುಕ್ಲಾ

    ನಾವು ಹೀಗೆ ನಿಂತಿರೋದು ಸುಲಭ ಅಂತಾ ಕಾಣಿಸಬಹುದು. ಆದರೆ ಇದು ಕಷ್ಟಕರ. ತಲೆ ಭಾರವಾದಂತಿದೆ, ಸ್ವಲ್ಪ ಕಷ್ಟವಾಗುತ್ತಿದೆ. ಕೆಲವೇ ದಿನಗಳಲ್ಲಿ ಇದಕ್ಕೆ ಹೊಂದಿಕೊಳ್ಳುತ್ತೇವೆ. ಇದು ಮೊದಲ ಹೆಜ್ಜೆ, ಇನ್ನೂ 14 ದಿನ ನಾವಿಲ್ಲಿರುತ್ತೇವೆ. ಅನೇಕ ವಿಜ್ಞಾನದ ಪ್ರಯೋಗಗಳನ್ನು ಮಾಡಲಿದ್ದೇವೆ. ನಿಮ್ಮೊಂದಿಗೆ ಮಾತನಾಡುತ್ತೇವೆ ಎಂದಿದ್ದಾರೆ ಶುಕ್ಲಾ. ಇದನ್ನೂ ಓದಿ: ಡಾಕಿಂಗ್‌ ನಂತರದ ಪ್ರಕ್ರಿಯೆ ಶುರು – ಸಂಜೆ 6 ಗಂಟೆ ವೇಳೆಗೆ ಬಾಹ್ಯಾಕಾಶ ನಿಲ್ದಾಣದೊಳಕ್ಕೆ ಅಧಿಕೃತ ಎಂಟ್ರಿ

    ಇದು ನಮ್ಮ ಅಂತರಿಕ್ಷ ಯಾನದ ಹೆಜ್ಜೆಯೂ ಹೌದು. ಡ್ರಾಗನ್‌ನಲ್ಲಿದ್ದಾಗ ನಿಮ್ಮ‌ಜೊತೆ ಮಾತನಾಡಿದ್ದೆ. ಇಲ್ಲಿಂದ ನಂತರವೂ ಮಾತನಾಡುತ್ತೇನೆ. ಈ ಯಾನವನ್ನು ಅತ್ಯಾಕರ್ಷಕ ಮಾಡೋಣ. ನಾವೆಲ್ಲರೂ ಕೂಡ ಉತ್ಸಾಹದಿಂದ ಭಾಗಿಯಾಗುತ್ತೇವೆ. ನಾನು ತುಂಬಾ ಉತ್ಸಾಹದಿಂದಿದ್ದೇನೆ. ನನ್ನ ತೋಳಿನಲ್ಲಿ ತ್ರಿವರ್ಣ ಧ್ವಜದ ಜೊತೆ ನಡೆಯುತ್ತಿದ್ದೇನೆ, ಮುಂದಿನ 14 ದಿನ ಇನ್ನಷ್ಟು ಆಕರ್ಷಕವಾಗಿರಲಿದೆ. ಜೈ ಹಿಂದ್, ಜೈ ಭಾರತ… ಅಂತ ಶುಕ್ಲಾ ಹೇಳಿದ್ದಾರೆ. ಇದನ್ನೂ ಓದಿ: NASA Axiom-4 Mission | ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ

    ಶುಕ್ಲಾ ಗಗನಯಾತ್ರಿ ʻ634ʼ
    ಇದಕ್ಕೂ ಹ್ಯಾಚ್‌ ತೆರೆಯುತ್ತಿದ್ದಂತೆ ಐಎಸ್‌ಎಸ್‌ನ ಸಿಬ್ಬಂದಿ ಶುಕ್ಲಾ ಸೇರಿದಂತೆ ಇತರ ನಾಲ್ವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಶುಕ್ಲಾಗೆ ಗಗನಯಾತ್ರಿ ಸಂಖ್ಯೆ-634 ನೀಡಲಾಯಿತು. ಇದನ್ನೂ ಓದಿ: ಚೆನ್ನಾಗಿ ನಿದ್ರೆ ಮಾಡಿದೆ..: ಅಂತರಿಕ್ಷ ಪ್ರಯಾಣದ ಅನುಭವ ಬಿಚ್ಚಿಟ್ಟ ಶುಭಾಂಶು ಶುಕ್ಲಾ

    ʻಡ್ರ್ಯಾಗನ್‌ʼ ನೌಕೆ ಡಾಕಿಂಗ್‌ ಪೂರ್ಣ
    ಬುಧವಾರ (ಜೂ.25) ಮಧ್ಯಾಹ್ನ 12:03ರ ವೇಳೆಗೆ ಆಕ್ಸಿಯಂ-4 ಮಿಷನ್‌ ಅಡಿಯಲ್ಲಿ (NASA Axiom 4 Mission) ಉಡಾವಣೆ ಆಗಿದ್ದ ಸ್ಪೇಸ್‌ಎಕ್ಸ್‌ನ ʻಡ್ರ್ಯಾಗನ್‌ʼ ನೌಕೆ ಗುರುವಾರ (ಜೂ.26) ಸಂಜೆ 4:01 ಗಂಟೆ ವೇಳೆಗೆ ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕ್‌ (ಕೂಡಿಸುವುದು) ಆಯಿತು. ಇದಾದ 2 ಗಂಟೆಗಳ ನಂತರ ಹ್ಯಾಚ್‌ ತೆರೆಯಿತು. ಬಳಿಕ ಶುಕ್ಲಾ (Shubhanshu Shukla) ಸೇರಿ ನಾಲ್ವರು ಗಗನಯಾತ್ರಿಗಳು ಐಎಸ್‌ಎಸ್‌ನೊಳಗೆ ಅಧಿಕೃತವಾಗಿ ಪ್ರವೇಶಿಸುವ ಮೂಲಕ ಹೆಮ್ಮೆಯ ಕ್ಷಣಕ್ಕೆ ಸಾಕ್ಷಿಯಾದರು. ಐಎಸ್‌ಎಸ್‌ ಪ್ರವೇಶಿಸುತ್ತಿದ್ದಂತೆ ನಿಲ್ದಾಣದ ಸಿಬ್ಬಂದಿ ಪರಸ್ಪರ ಅಪ್ಪಿಕೊಂಡು ಬರಮಾಡಿಕೊಂಡರು.

  • ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿ – ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿದ ಮೊದಲ ಭಾರತೀಯ ಶುಕ್ಲಾ

    ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿ – ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿದ ಮೊದಲ ಭಾರತೀಯ ಶುಕ್ಲಾ

    ನವದೆಹಲಿ: ಭಾರತೀಯ ವಾಯುಪಡೆಯ (IAF) ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸುರಕ್ಷಿತವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (International Space Station) ಸೇರಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಶುಕ್ಲಾ ಪಾತ್ರರಾಗಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು 140 ಕೋಟಿ ಭಾರತೀಯರೂ (Indians) ಕೊಂಡಾಡಿದ್ದಾರೆ.

    ಬುಧವಾರ (ಜೂ.25) ಮಧ್ಯಾಹ್ನ 12:03ರ ವೇಳೆಗೆ ಆಕ್ಸಿಯಂ-4 ಮಿಷನ್‌ ಅಡಿಯಲ್ಲಿ (NASA Axiom 4 Mission) ಉಡಾವಣೆ ಆಗಿದ್ದ ಸ್ಪೇಸ್‌ಎಕ್ಸ್‌ನ ʻಡ್ರ್ಯಾಗನ್‌ʼ ನೌಕೆ ಗುರುವಾರ (ಜೂ.26) ಸಂಜೆ 4:01 ಗಂಟೆ ವೇಳೆಗೆ ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕ್‌ (ಕೂಡಿಸುವುದು) ಆಯಿತು. ಇದಾದ 2 ಗಂಟೆಗಳ ನಂತರ ಹ್ಯಾಚ್‌ ತೆರೆಯಿರು. ಬಳಿ ಶುಕ್ಲಾ (Shubhanshu Shukla) ಸೇರಿ ನಾಲ್ವರು ಗಗನಯಾತ್ರಿಗಳು ಐಎಸ್‌ಎಸ್‌ನೊಳಗೆ ಅಧಿಕೃತವಾಗಿ ಪ್ರವೇಶಿಸುವ ಮೂಲಕ ಹೆಮ್ಮೆಯ ಕ್ಷಣಕ್ಕೆ ಸಾಕ್ಷಿಯಾದರು. ಐಎಸ್‌ಎಸ್‌ ಪ್ರವೇಶಿಸುತ್ತಿದ್ದಂತೆ ನಿಲ್ದಾಣದ ಸಿಬ್ಬಂದಿ ಪರಸ್ಪರ ಅಪ್ಪಿಕೊಂಡು ಬರಮಾಡಿಕೊಂಡರು. ಇದನ್ನೂ ಓದಿ: ಡಾಕಿಂಗ್‌ ನಂತರದ ಪ್ರಕ್ರಿಯೆ ಶುರು – ಸಂಜೆ 6 ಗಂಟೆ ವೇಳೆಗೆ ಬಾಹ್ಯಾಕಾಶ ನಿಲ್ದಾಣದೊಳಕ್ಕೆ ಅಧಿಕೃತ ಎಂಟ್ರಿ

    ಹೇಗಿತ್ತು ಹ್ಯಾಚ್ ತೆರೆಯುವ ಪ್ರಕ್ರಿಯೆ?
    * ಸಾಫ್ಟ್ ಕ್ಯಾಪ್ಚರ್ (ಡಾಕಿಂಗ್ ಪೂರ್ಣ) – ಮೊದಲಿಗೆ ಡಾಕಿಂಗ್‌ ಪೂರ್ಣಗೊಂಡ ನಂತರ ಬಾಹ್ಯಾಕಾಶ ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ಸಂಪರ್ಕಗೊಂಡಿತು.
    * ಹಾರ್ಡ್ ಮೇಟ್ (ಮೆಕ್ಯಾನಿಕಲ್ ಲಾಚಿಂಗ್) – ಅಂದ್ರೆ ಐಎಸ್‌ಎಸ್‌ ಮತ್ತು ನೌಕೆಯ ನಡುವೆ ಸೀಲ್ ಭದ್ರಪಡಿಸಿಕೊಳ್ಳಲು ಲಾಚ್‌ಗಳು ಮತ್ತು ಹುಕ್ಸ್‌ ಜೋಡಿಸಲಾಯಿತು. ಬಳಿಕ ನೌಕೆಯಲ್ಲಿ ಯಾವುದೇ ರೀತಿಯ ಸೋರಿಕೆಯಾಗುತ್ತಿದೆಯೇ ಅನ್ನೋದನ್ನ ಪರಿಶೀಲಿಸಿಕೊಳ್ಳಲಾಯಿತು.
    * ಸುರಕ್ಷಿತ ವಾತಾವರಣ ಖಚಿತಪಡಿಸಿಕೊಳ್ಳಲು ಬಾಹ್ಯಾಕಾಶ ನೌಕೆ ಮತ್ತು ಬಾಹ್ಯಾಕಾಶ ನಿಲ್ದಾಣದ ನಡುವಿನ ಒತ್ತಡವನ್ನು ಸಮೀಕರಿಸಲಾಯಿತು.
    * ಸೂಟ್ ಡಾಫಿಂಗ್ ಮತ್ತು ಸಿಸ್ಟಮ್: ಬಳಿಕ ಗಗನಯಾತ್ರಿಗಳು ತಮ್ಮ ಹೆಲ್ಮೆಟ್‌, ಸೂಟ್‌ಗಳನ್ನು ತೆಗೆದುಹಾಕಿ ಎಲ್ಲ ವ್ಯವಸ್ಥೆಗಳು ಸ್ಥಿರವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡರು.
    * ಇದೆಲ್ಲ ಪ್ರಕ್ರಿಯೆ ಮುಗಿದ ಬಳಿಕ ಹ್ಯಾಚ್‌ ತೆರೆದುಕೊಳ್ಳುತ್ತಿದ್ದಂಎತ ಗಗನಯಾತ್ರಿಗಳು ಅಧಿಕೃತವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದರು. ಇದನ್ನೂ ಓದಿ: NASA Axiom-4 Mission | ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ

    41 ವರ್ಷದ ಬಳಿಕ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಕಾಶ ಕೇಂದ್ರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಮೂಲಕ ಬಾಹ್ಯಾಕಾಶವನ್ನು ತಲುಪಿದ 2ನೇ ಭಾರತೀಯ ಎಂಬ ಇತಿಹಾಸ ನಿರ್ಮಿಸಿದ್ದಾರೆ. 1984ರಲ್ಲಿ ಸೋವಿಯತ್ ಕಾರ್ಯಾಚರಣೆಯ ಭಾಗವಾಗಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಬಾಹ್ಯಾಕಾಶ ಪ್ರಯಾಣ ಬೆಳೆಸಿದ್ದರು. ಇದಾದ 4 ದಶಕಗಳ ನಂತರ, ಗ್ರೂಪ್ ಕ್ಯಾಪ್ಟನ್ ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣಿಸಿರುವ 2ನೇ ಭಾರತೀಯ ಗಗನಯಾತ್ರಿಯಾಗಿದ್ದಾರೆ. ಆದ್ರೆ ಬಾಹ್ಯಾಕಾಶ ನಿಲ್ದಾಣದೊಳಗೆ ಪ್ರವೇಶಿಸಿದ ಮೊದಲ ಭಾರತೀಯ ಶುಕ್ಲಾ ಅವರೇ ಆಗಿದ್ದಾರೆ.

    ಗಮನಿಸಬೇಕಾದ ಮುಖ್ಯಾಂಶಗಳು
    ನಾಲ್ವರು ಗಗನಯಾನಿಗಳು 14 ದಿನ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸ್ತವ್ಯ ಇರಲಿದ್ದಾರೆ. ಈ ವೇಳೆ ಗಗನಯಾನಿಗಳು ಪ್ರಧಾನಿ ನರೇಂದ್ರ ಮೋದಿ, ಶಾಲಾ ವಿದ್ಯಾರ್ಥಿಗಳು ಹಾಗೂ ಬಾಹ್ಯಾಕಾಶ ಕ್ಷೇತ್ರದ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸುವ ನಡೆಸಲಿದ್ದಾರೆ. ಶುಕ್ಲಾ ಅವರು ಐಎಸ್‌ಎಸ್‌ನಲ್ಲಿ ಆಹಾರ ಮತ್ತು ಪೌಷ್ಟಿಕತೆಗೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸಲಿದ್ದಾರೆ. ಇಸ್ರೋ ಹಾಗೂ ಬಯೊಟೆಕ್ನಾಲಜಿ ಇಲಾಖೆ ಇದಕ್ಕೆ ಸಹಯೋಗ ನೀಡಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಎಫ್‌ 35ಗೆ ಪಾರ್ಕಿಂಗ್‌ ಶುಲ್ಕ ವಿಧಿಸಲು ಮುಂದಾದ ತಿರುವನಂತಪುರ ಏರ್‌ಪೋರ್ಟ್‌

  • ಡಾಕಿಂಗ್‌ ನಂತರದ ಪ್ರಕ್ರಿಯೆ ಶುರು – ಸಂಜೆ 6 ಗಂಟೆ ವೇಳೆಗೆ ಬಾಹ್ಯಾಕಾಶ ನಿಲ್ದಾಣದೊಳಕ್ಕೆ ಅಧಿಕೃತ ಎಂಟ್ರಿ

    ಡಾಕಿಂಗ್‌ ನಂತರದ ಪ್ರಕ್ರಿಯೆ ಶುರು – ಸಂಜೆ 6 ಗಂಟೆ ವೇಳೆಗೆ ಬಾಹ್ಯಾಕಾಶ ನಿಲ್ದಾಣದೊಳಕ್ಕೆ ಅಧಿಕೃತ ಎಂಟ್ರಿ

    – ಹ್ಯಾಚ್ ತೆರೆಯುವ ಪ್ರಕ್ರಿಯೆಯ ಹಂತಗಳು ಹೇಗಿರಲಿದೆ?

    ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಇತಿಹಾಸ ನಿರ್ಮಿಸಿದ್ದಾರೆ. ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಐತಿಹಾಸಿಕ ಕ್ಷಣವನ್ನು ಇಡೀ ಭಾರತವೇ ಕೊಂಡಾಡುತ್ತಿದೆ. ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್‌ಎಕ್ಸ್‌ನ ʻಡ್ರ್ಯಾಗನ್‌ʼ ನೌಕೆ (Dragon Capsule Docks) ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕ್‌ ಆಗಿದೆ. ಸಂಜೆ 6 ಗಂಟೆ ವೇಳೆಗೆ ಹ್ಯಾಚ್ (ಬಾಹ್ಯಾಕಾಶ ನಿಲ್ದಾಣದೊಳಕ್ಕೆ ಪ್ರವೇಶಿಸಲು ತೆರೆಯುವ ಬಾಗಿಲು) ತೆರೆಯಲಿದೆ.

    ಬುಧವಾರ (ಜೂ.25) ಮಧ್ಯಾಹ್ನ 12:03ರ ವೇಳೆಗೆ ಉಡಾವಣೆ ಆಗಿದ್ದ ಆಕ್ಸಿಯಂ-4 ನೌಕೆ ಗುರುವಾರ (ಜೂ.26) ಸಂಜೆ 4 ಗಂಟೆ ವೇಳೆಗೆ ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕ್‌ (ಕೂಡಿಸುವುದು) ಆಗಿದೆ. ಕೆಲವು ನಿಮಿಷಗಳಲ್ಲೇ ಡಾಕಿಂಗ್‌ ಮುಂದಿನ ಪ್ರಕ್ರಿಯೆ ಶುರುವಾಗಿದ್ದು, ಸಂಜೆ 6 ಗಂಟೆ ವೇಳೆಗೆ ಹ್ಯಾಚ್‌ ತೆರೆಯಲಿದ್ದು, ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದೊಳಕ್ಕೆ (International Space Station) ಪ್ರವೇಶಿಸಲಿದ್ದಾರೆ.

    ಸದ್ಯ ಬಾಹ್ಯಾಕಾಶದಲ್ಲಿ ಸುರಕ್ಷತೆ ಮತ್ತು ಗಾಳಿಯ ವಾತಾವರಣ ನಿರ್ಣಾಯಕವಾಗಿರುವುದರಿಂದ ಡಾಕಿಂಗ್‌ ನಂತರದ ಪ್ರಕ್ರಿಯೆ ಪೂರ್ಣಗೊಳ್ಳಲು 2 ಗಂಟೆಗಳ ಸಮಯ ತೆಗೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.

    ಹ್ಯಾಚ್ ತೆರೆಯುವ ಪ್ರಕ್ರಿಯೆಯ ಹಂತಗಳು:
    * ಸಾಫ್ಟ್ ಕ್ಯಾಪ್ಚರ್ (ಡಾಕಿಂಗ್ ಪೂರ್ಣ) – ಮೊದಲಿಗೆ ಡಾಕಿಂಗ್‌ ಪೂರ್ಣಗೊಂಡ ನಂತರ ಬಾಹ್ಯಾಕಾಶ ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ಸಂಪರ್ಕಗೊಳ್ಳುತ್ತದೆ.
    * ಹಾರ್ಡ್ ಮೇಟ್ (ಮೆಕ್ಯಾನಿಕಲ್ ಲಾಚಿಂಗ್) – ಅಂದ್ರೆ ಐಎಸ್‌ಎಸ್‌ ಮತ್ತು ನೌಕೆಯ ನಡುವೆ ಸೀಲ್ ಭದ್ರಪಡಿಸಿಕೊಳ್ಳಲು ಲಾಚ್‌ಗಳು ಮತ್ತು ಹುಕ್ಸ್‌ ಜೋಡಿಸಲಾಗುತ್ತದೆ. ಬಳಿಕ ನೌಕೆಯಲ್ಲಿ ಯಾವುದೇ ರೀತಿಯ ಸೋರಿಕೆಯಾಗುತ್ತಿದೆಯೇ ಅನ್ನೋದನ್ನ ಪರಿಶೀಲಿಸಿಕೊಳ್ಳಲಾಗುತ್ತದೆ.
    * ಸುರಕ್ಷಿತ ವಾತಾವರಣ ಖಚಿತಪಡಿಸಿಕೊಳ್ಳಲು ಬಾಹ್ಯಾಕಾಶ ನೌಕೆ ಮತ್ತು ಬಾಹ್ಯಾಕಾಶ ನಿಲ್ದಾಣದ ನಡುವಿನ ಒತ್ತಡವನ್ನು ಸಮೀಕರಿಸಲಾಗುತ್ತದೆ.
    * ಸೂಟ್ ಡಾಫಿಂಗ್ ಮತ್ತು ಸಿಸ್ಟಮ್: ಇದೆಲ್ಲ ಮುಗಿದ ಬಳಿಕ ಗಗನಯಾತ್ರಿಗಳು ತಮ್ಮ ಹೆಲ್ಮೆಟ್‌, ಸೂಟ್‌ಗಳನ್ನು ತೆಗೆದುಹಾಕಿ ಎಲ್ಲ ವ್ಯವಸ್ಥೆಗಳು ಸ್ಥಿರವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ.
    * ಇದೆಲ್ಲ ಪ್ರಕ್ರಿಯೆ ಮುಗಿದ ಬಳಿಕ ಹ್ಯಾಚ್‌ ತೆರೆಯಲಾಗುತ್ತದೆ, ಬಳಿಕ ಗಗನಯಾತ್ರಿಗಳು ಅಧಿಕೃತವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಧಿಕೃತವಾಗಿ ಪ್ರವೇಶಿಸಲಿದ್ದಾರೆ.

    41 ವರ್ಷದ ಬಳಿಕ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಕಾಶ ಕೇಂದ್ರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಮೂಲಕ ಬಾಹ್ಯಾಕಾಶವನ್ನು ತಲುಪಿದ 2ನೇ ಭಾರತೀಯ ಎಂಬ ಇತಿಹಾಸ ನಿರ್ಮಿಸಿದ್ದಾರೆ. 1984ರಲ್ಲಿ ಸೋವಿಯತ್ ಕಾರ್ಯಾಚರಣೆಯ ಭಾಗವಾಗಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಬಾಹ್ಯಾಕಾಶ ಪ್ರಯಾಣ ಬೆಳೆಸಿದ್ದರು. ಇದಾದ 4 ದಶಕಗಳ ನಂತರ, ಗ್ರೂಪ್ ಕ್ಯಾಪ್ಟನ್ ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣಿಸಿರುವ 2ನೇ ಭಾರತೀಯ ಗಗನಯಾತ್ರಿಯಾಗಿದ್ದಾರೆ.

    ಗಮನಿಸಬೇಕಾದ ಮುಖ್ಯಾಂಶಗಳು
    ನಾಲ್ವರು ಗಗನಯಾನಿಗಳು 14 ದಿನ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸ್ತವ್ಯ ಇರಲಿದ್ದಾರೆ. ಈ ವೇಳೆ ಗಗನಯಾನಿಗಳು ಪ್ರಧಾನಿ ನರೇಂದ್ರ ಮೋದಿ, ಶಾಲಾ ವಿದ್ಯಾರ್ಥಿಗಳು ಹಾಗೂ ಬಾಹ್ಯಾಕಾಶ ಕ್ಷೇತ್ರದ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸುವ ನಡೆಸಲಿದ್ದಾರೆ. ಶುಕ್ಲಾ ಅವರು ಐಎಸ್‌ಎಸ್‌ನಲ್ಲಿ ಆಹಾರ ಮತ್ತು ಪೌಷ್ಟಿಕತೆಗೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸಲಿದ್ದಾರೆ. ಇಸ್ರೋ ಹಾಗೂ ಬಯೊಟೆಕ್ನಾಲಜಿ ಇಲಾಖೆ ಇದಕ್ಕೆ ಸಹಯೋಗ ನೀಡಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಬಾಹ್ಯಾಕಾಶದಿಂದ ಭೂಮಿಗೆ ʻಶುಕ್ಲʼ ಸಂದೇಶ
    ಇದಕ್ಕೂ ಮುನ್ನ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ತಮ್ಮ ಚೊಚ್ಚಲ ಸುಂದರ ಅನುಭವಗಳನ್ನು ಬಾಹ್ಯಾಕಾಶದಿಂದಲೇ ಹಂಚಿಕೊಂಡಿದ್ದರು. ಡ್ರ್ಯಾಗನ್‌ ಕ್ಯಾಪ್ಸೂಲ್‌ ನೌಕೆಯಲ್ಲಿ ಕೂತು ಮಾತನಾಡಿದ್ದ ಶುಕ್ಲ ಬಾಹ್ಯಾಕಾಶದಿಂದ ನಮಸ್ಕಾರ! ಈ ಅದ್ಭುತ ಸವಾರಿಯಲ್ಲಿ ನಾನು ಒಬ್ಬ ಅನುಭವಿ ಮತ್ತು ಮೂವರು ಹೊಸಬರು ಇದ್ದುದರಿಂದ ನಾನು ಇಲ್ಲಿಗೆ ಬರಲು ತುಂಬಾ ರೋಮಾಂಚನಗೊಂಡಿದ್ದೇನೆ. ಲಾಂಚ್‌ಪ್ಯಾಡ್‌ನಲ್ಲಿ ಕುಳಿತಾಗ, ನಾನು ಯೋಚಿಸುತ್ತಿದ್ದದ್ದು ಹೋಗೋಣ ಎಂದಷ್ಟೇ. 30 ದಿನಗಳ ಕ್ವಾರಂಟೈನ್ ನಂತರ, ನಾನು ಸಿದ್ಧನಾಗಿದ್ದೆ. ಉಡಾವಣೆ ಬೇರೇನೋ ಆಗಿತ್ತು. ನಂತರ ಇದ್ದಕ್ಕಿದ್ದಂತೆ ಮೌನ.. ನಿರ್ವಾತದಲ್ಲಿ ನಾನು ತೇಲುತ್ತಿದ್ದೆ. ಅದು ವರ್ಣನಾತೀತ. ಅದ್ಭುತ, ವಿನಮ್ರ ಭಾವನೆ ಎಂದು ಅನುಭವ ಹಂಚಿಕೊಂಡಿದ್ದರು.

    ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇದು ಕೇವಲ ನನ್ನ ಸಾಧನೆಯಲ್ಲ, ಇದು ನಮ್ಮ ದೇಶದಲ್ಲಿ ಹಲವಾರು ಜನರು ಹಂಚಿಕೊಂಡ ಸಾಮೂಹಿಕ ಸಾಧನೆ. ನಾನು ಇಲ್ಲಿ ಬಹಳಷ್ಟು ನಿದ್ದೆ ಮಾಡುತ್ತಿದ್ದೇನೆ. ನಾನು ಇನ್ನೂ ಶೂನ್ಯ ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳುತ್ತಿದ್ದೇನೆ. ಬಾಹ್ಯಾಕಾಶದಲ್ಲಿ ಹೇಗೆ ನಡೆಯುವುದು, ತಿನ್ನುವುದು ಎಂಬುದನ್ನೆಲ್ಲ ಮಗುವಿನಂತೆ ಕಲಿಯುತ್ತಿದ್ದೇನೆ. ನಾನು ಪ್ರತಿ ಕ್ಷಣವನ್ನು ನಿಜವಾಗಿಯೂ ಆನಂದಿಸುತ್ತಿದ್ದೇನೆ. ತಪ್ಪುಗಳನ್ನು ಮಾಡುವುದು, ಸರಿ ಮಾಡುವುದು, ವಾಸ್ತವವಾಗಿ ಬೇರೆಯವರು ಸಹ ಅವುಗಳನ್ನು ಮಾಡುವುದನ್ನು ನೋಡುವುದು ಇನ್ನೂ ಹೆಚ್ಚು ಖುಷಿಯಾಗುತ್ತದೆ. ಇಲ್ಲಿಯವರೆಗೆ ಒಂದು ಮೋಜಿನ, ಅವಾಸ್ತವಿಕ ಸಮಯ ಕಳೆದಿದೆ. ಮುಂದೆ ಇನ್ನೂ ಹೆಚ್ಚಿನದು ಇರಲಿದೆ ಎಂದು ನನಗೆ ಖಚಿತವಾಗಿದೆ. ಮುಂದೆ ಏನಾಗುತ್ತದೆ ಎಂದು ಎದುರು ನೋಡುತ್ತಿದ್ದೇನೆ ಎಂದು ಶುಕ್ಲಾ ತಮಗಾದ ಅನುಭವ ಬಿಚ್ಚಿಟ್ಟಿದ್ದರು.

  • NASA Axiom-4 Mission | ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ

    NASA Axiom-4 Mission | ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ

    ನವದೆಹಲಿ: ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತೊಯ್ದಿದ್ದ ಸ್ಪೇಸ್‌ಎಕ್ಸ್‌ನ ʻಡ್ರ್ಯಾಗನ್‌ʼ (Dragon Capsule) ನೌಕೆ ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕ್‌ (Docks) ಆಗಿದೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಐತಿಹಾಸಿಕ ಕ್ಷಣವಾಗಿದೆ.

    ಬುಧವಾರ ಮಧ್ಯಾಹ್ನ 12:03ರ ವೇಳೆಗೆ ಉಡಾವಣೆ ಆಗಿದ್ದ ಆಕ್ಸಿಯಂ-4 ನೌಕೆ ಇಂದು ಸಂಜೆ 4 ಗಂಟೆಗೆ ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (International Space Station) ಡಾಕ್‌ (ಕೂಡಿಸುವುದು) ಆಗಿದೆ. ಇದನ್ನೂ ಓದಿ: 

    41 ವರ್ಷದ ಬಳಿಕ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಕಾಶ ಕೇಂದ್ರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಮೂಲಕ ಬಾಹ್ಯಾಕಾಶವನ್ನು ತಲುಪಿದ 2ನೇ ಭಾರತೀಯ ಎಂಬ ಇತಿಹಾಸ ನಿರ್ಮಿಸಿದ್ದಾರೆ. 1984ರಲ್ಲಿ ಸೋವಿಯತ್ ಕಾರ್ಯಾಚರಣೆಯ ಭಾಗವಾಗಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಬಾಹ್ಯಾಕಾಶ ಪ್ರಯಾಣ ಬೆಳೆಸಿದ್ದರು. ಇದಾದ 4 ದಶಕಗಳ ನಂತರ, ಗ್ರೂಪ್ ಕ್ಯಾಪ್ಟನ್ ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣಿಸಿರುವ 2ನೇ ಭಾರತೀಯ ಗಗನಯಾತ್ರಿಯಾಗಿದ್ದಾರೆ. ಇದನ್ನೂ ಓದಿ: ಚೆನ್ನಾಗಿ ನಿದ್ರೆ ಮಾಡಿದೆ..: ಅಂತರಿಕ್ಷ ಪ್ರಯಾಣದ ಅನುಭವ ಬಿಚ್ಚಿಟ್ಟ ಶುಭಾಂಶು ಶುಕ್ಲಾ

    ಗಮನಿಸಬೇಕಾದ ಮುಖ್ಯಾಂಶಗಳು
    ನಾಲ್ವರು ಗಗನಯಾನಿಗಳು 14 ದಿನ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸ್ತವ್ಯ ಇರಲಿದ್ದಾರೆ. ಈ ವೇಳೆ ಗಗನಯಾನಿಗಳು ಪ್ರಧಾನಿ ನರೇಂದ್ರ ಮೋದಿ, ಶಾಲಾ ವಿದ್ಯಾರ್ಥಿಗಳು ಹಾಗೂ ಬಾಹ್ಯಾಕಾಶ ಕ್ಷೇತ್ರದ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸುವ ನಡೆಸಲಿದ್ದಾರೆ. ಶುಕ್ಲಾ ಅವರು ಐಎಸ್‌ಎಸ್‌ನಲ್ಲಿ ಆಹಾರ ಮತ್ತು ಪೌಷ್ಟಿಕತೆಗೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸಲಿದ್ದಾರೆ. ಇಸ್ರೋ ಹಾಗೂ ಬಯೊಟೆಕ್ನಾಲಜಿ ಇಲಾಖೆ ಇದಕ್ಕೆ ಸಹಯೋಗ ನೀಡಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಎಫ್‌ 35ಗೆ ಪಾರ್ಕಿಂಗ್‌ ಶುಲ್ಕ ವಿಧಿಸಲು ಮುಂದಾದ ತಿರುವನಂತಪುರ ಏರ್‌ಪೋರ್ಟ್‌

    axiom 4 launch shubhanshu shukla

    ಬಾಹ್ಯಾಕಾಶದಿಂದ ಭೂಮಿಗೆ ʻಶುಕ್ಲʼ ಸಂದೇಶ
    ಇದಕ್ಕೂ ಮುನ್ನ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ತಮ್ಮ ಚೊಚ್ಚಲ ಸುಂದರ ಅನುಭವಗಳನ್ನು ಬಾಹ್ಯಾಕಾಶದಿಂದಲೇ ಹಂಚಿಕೊಂಡಿದ್ದರು. ಡ್ರ್ಯಾಗನ್‌ ಕ್ಯಾಪ್ಸೂಲ್‌ ನೌಕೆಯಲ್ಲಿ ಕೂತು ಮಾತನಾಡಿದ್ದ ಶುಕ್ಲ ಬಾಹ್ಯಾಕಾಶದಿಂದ ನಮಸ್ಕಾರ! ಈ ಅದ್ಭುತ ಸವಾರಿಯಲ್ಲಿ ನಾನು ಒಬ್ಬ ಅನುಭವಿ ಮತ್ತು ಮೂವರು ಹೊಸಬರು ಇದ್ದುದರಿಂದ ನಾನು ಇಲ್ಲಿಗೆ ಬರಲು ತುಂಬಾ ರೋಮಾಂಚನಗೊಂಡಿದ್ದೇನೆ. ಲಾಂಚ್‌ಪ್ಯಾಡ್‌ನಲ್ಲಿ ಕುಳಿತಾಗ, ನಾನು ಯೋಚಿಸುತ್ತಿದ್ದದ್ದು ಹೋಗೋಣ ಎಂದಷ್ಟೇ. 30 ದಿನಗಳ ಕ್ವಾರಂಟೈನ್ ನಂತರ, ನಾನು ಸಿದ್ಧನಾಗಿದ್ದೆ. ಉಡಾವಣೆ ಬೇರೇನೋ ಆಗಿತ್ತು. ನಂತರ ಇದ್ದಕ್ಕಿದ್ದಂತೆ ಮೌನ.. ನಿರ್ವಾತದಲ್ಲಿ ನಾನು ತೇಲುತ್ತಿದ್ದೆ. ಅದು ವರ್ಣನಾತೀತ. ಅದ್ಭುತ, ವಿನಮ್ರ ಭಾವನೆ ಎಂದು ಅನುಭವ ಹಂಚಿಕೊಂಡಿದ್ದರು. ಇದನ್ನೂ ಓದಿ: ಜೈ ಹಿಂದ್‌.. ಜೈ ಭಾರತ್..‌: ಬಾಹ್ಯಾಕಾಶದಿಂದಲೇ ಶುಭಾಂಶು ಶುಕ್ಲಾ ಮೊದಲ ಸಂದೇಶ

    ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇದು ಕೇವಲ ನನ್ನ ಸಾಧನೆಯಲ್ಲ, ಇದು ನಮ್ಮ ದೇಶದಲ್ಲಿ ಹಲವಾರು ಜನರು ಹಂಚಿಕೊಂಡ ಸಾಮೂಹಿಕ ಸಾಧನೆ. ನಾನು ಇಲ್ಲಿ ಬಹಳಷ್ಟು ನಿದ್ದೆ ಮಾಡುತ್ತಿದ್ದೇನೆ. ನಾನು ಇನ್ನೂ ಶೂನ್ಯ ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳುತ್ತಿದ್ದೇನೆ. ಬಾಹ್ಯಾಕಾಶದಲ್ಲಿ ಹೇಗೆ ನಡೆಯುವುದು, ತಿನ್ನುವುದು ಎಂಬುದನ್ನೆಲ್ಲ ಮಗುವಿನಂತೆ ಕಲಿಯುತ್ತಿದ್ದೇನೆ. ನಾನು ಪ್ರತಿ ಕ್ಷಣವನ್ನು ನಿಜವಾಗಿಯೂ ಆನಂದಿಸುತ್ತಿದ್ದೇನೆ. ತಪ್ಪುಗಳನ್ನು ಮಾಡುವುದು, ಸರಿ ಮಾಡುವುದು, ವಾಸ್ತವವಾಗಿ ಬೇರೆಯವರು ಸಹ ಅವುಗಳನ್ನು ಮಾಡುವುದನ್ನು ನೋಡುವುದು ಇನ್ನೂ ಹೆಚ್ಚು ಖುಷಿಯಾಗುತ್ತದೆ. ಇಲ್ಲಿಯವರೆಗೆ ಒಂದು ಮೋಜಿನ, ಅವಾಸ್ತವಿಕ ಸಮಯ ಕಳೆದಿದೆ. ಮುಂದೆ ಇನ್ನೂ ಹೆಚ್ಚಿನದು ಇರಲಿದೆ ಎಂದು ನನಗೆ ಖಚಿತವಾಗಿದೆ. ಮುಂದೆ ಏನಾಗುತ್ತದೆ ಎಂದು ಎದುರು ನೋಡುತ್ತಿದ್ದೇನೆ ಎಂದು ಶುಕ್ಲಾ ತಮಗಾದ ಅನುಭವ ಬಿಚ್ಚಿಟ್ಟಿದ್ದರು.