Tag: Dragon

  • ಪ್ರಶಾಂತ್ ನೀಲ್ ವಿಸ್ಮಯ ಲೋಕ – 15 ಕೋಟಿ ವೆಚ್ಚದ ಸೆಟ್

    ಪ್ರಶಾಂತ್ ನೀಲ್ ವಿಸ್ಮಯ ಲೋಕ – 15 ಕೋಟಿ ವೆಚ್ಚದ ಸೆಟ್

    ಸ್ಟಾರ್ ಇಮೇಜ್ ಇರುವ ಸ್ಟಾರ್ ಚಿತ್ರಗಳ ನಿರ್ದೇಶಕ ಪ್ರಶಾಂತ್ ನೀಲ್ (PrashanthNeel) ಚಿತ್ರ ಮಾಡ್ತಿದ್ದಾರೆ ಅಂದ್ರೆ ಅದು ನೂರು ಕೋಟಿ ಬಜೆಟ್ ಮೀರುವುದಂತೂ ನಿಶ್ಚಿತ. ಇದೀಗ ಪ್ರಶಾಂತ್ ನೀಲ್ ಅಡ್ಡದಿಂದ ನಯಾ ನ್ಯೂಸ್ ಬಂದಿದೆ. ಮುಂಬರುವ ಚಿತ್ರಕ್ಕಾಗಿ ಪ್ರಶಾಂತ್ ನೀಲ್ 15 ಕೋಟಿ ರೂ. ವೆಚ್ಚದಲ್ಲಿ ಕೃತಕ ಮನೆ ಅಂದರೆ ಸೆಟ್ ಅನ್ನ ನಿರ್ಮಿಸಿದ್ದಾರಂತೆ.

    ಬರೋಬ್ಬರಿ 15 ಕೋಟಿ ರೂ. ವೆಚ್ಚ ಅಂದ್ರೆ ಯೋಚಿಸಿ ಆ ಸೆಟ್ ಹೇಗಿರಬೇಡ. ಇಷ್ಟು ದುಡ್ಡಿನಲ್ಲಿ ಸೈಟ್ ಖರೀದಿಸಿ ಮನೆಯನ್ನೇ ಕಟ್ಟಿಸಿಕೊಳ್ಳಬಹುದಿತ್ತು. ಹೀಗಿರುವಾಗ ಸೆಟ್‌ಗಾಗಿ ಇಷ್ಟೊಂದು ಕೋಟಿ ಖರ್ಚು ಮಾಡಬೇಕಾ ಎಂದು ಆಶ್ಚರ್ಯವಾಗೋದು ಖಂಡಿತ. ಆದರೆ ಪ್ರಶಾಂತ್ ನೀಲ್ ಇಷ್ಟ ಪಡುವ ಮ್ಯಾಜಿಕಲ್ ಲೋಕವೇ ಬೇರೆ. ಅವರ ಕಲ್ಪನಾ ಲಹರಿಗೆ ತಕ್ಕಂತೆ ಬಣ್ಣ, ಅದಕ್ಕೆ ತಕ್ಕಂತೆ ಸಲಕರಣೆ ಹಾಗೂ ವಿಂಗಡನೆ ನೈಜ ಬೆಳಕು ಇರಬೇಕು. ಇದೇ ಕಾರಣಕ್ಕೆ ಮುಂಬರುವ ಜೂ.ಎನ್‌ಟಿಆರ್ ಚಿತ್ರಕ್ಕಾಗಿ ಹೈದ್ರಾಬಾದ್‌ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಒಂದು ಮನೆಯ ಸೆಟ್ ನಿರ್ಮಿಸಲಾಗಿದೆ.

    ಪ್ರಶಾಂತ್ ನೀಲ್ ಹಾಗೂ ಜೂ.ಎನ್‌ಟಿಆರ್ (JR.NTR) ನಟನೆಯ ಈ ಚಿತ್ರಕ್ಕೆ `ಡ್ರ್ಯಾಗನ್’ (Dragon) ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೆಲ ಭಾಗಗಳಲ್ಲಿ ಮೊದಲ ಶೆಡ್ಯೂಲ್ ಚಿತ್ರೀಕರಣ ನಡೆದಿದೆ. ಇದೀಗ ಎರಡನೇ ಶೆಡ್ಯೂಲ್ ಚಿತ್ರೀಕರಣಕ್ಕಾಗಿ ನಾಯಕನ ಪಾತ್ರದಲ್ಲಿ ಬರುವ ಮನೆಗಾಗಿ ಇಷ್ಟೊಂದು ಬಿಗ್ ಬಜೆಟ್‌ನಲ್ಲಿ ಸೆಟ್ ಹಾಕಲಾಗಿದೆ.

    ಪ್ರತಿಯೊಂದರಲ್ಲೂ ಪರ್ಟಿಕ್ಯುಲರ್ ಇರುವ ಪ್ರಶಾಂತ್ ನೀಲ್, ನಾಯಕನ ಪಾತ್ರಕ್ಕೆ ಬೇಕಾದ ಸೆಟ್ ಮನೆಯ ವಿನ್ಯಾಸವನ್ನೂ ಹೇಳಿ ಮಾಡಿಸಿದ್ದಾರಂತೆ. ಇಲ್ಲಿಯೇ ಎರಡನೇ ಶೆಡ್ಯೂಲ್ ಶೂಟಿಂಗ್ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಇದೇ ಭಾಗದಲ್ಲಿ ನಟಿ ರುಕ್ಮಿಣಿ ವಸಂತ್ ಕೂಡ ಜಾಯಿನ್ ಆಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಯಾವುದರ ಕುರಿತೂ ಚಿತ್ರತಂಡದಿಂದ ಅಧಿಕೃತ ಘೋಷಣೆ ಇಂದಿಗೂ ಹೊರಬಂದಿಲ್ಲ.

    15 ಕೋಟಿ ರೂ. ವೆಚ್ಚದಲ್ಲಿ ಸೆಟ್ ನಿರ್ಮಿಸಿದ ಪ್ರೊಡಕ್ಷನ್ ಕಂಪನಿ ಯಾವುದು ಗೊತ್ತೇ? ಅದುವೇ ಮೈತ್ರಿ ಮೂವಿ ಮೇಕರ್ಸ್. ಇದೇ ಬ್ಯಾನರ್ ಹಿಂದೆ ಅದ್ಧೂರಿ ಪುಷ್ಪ ಸಿರೀಸ್‌ಗಳನ್ನ ನಿರ್ಮಿಸಿತ್ತು. ಪುಷ್ಪ ಮುಂದಿನ ಸೀಕ್ವೆಲ್ ಆರಂಭವಾಗೋದ್ರ ಮಧ್ಯದ ಗ್ಯಾಪ್‌ನಲ್ಲಿ ಡ್ರ್ಯಾಗನ್ ಚಿತ್ರವನ್ನು ತರುತ್ತಿದೆ ಈ ಸಂಸ್ಥೆ. ಅಂದಹಾಗೆ ಈ ಚಿತ್ರ 250 ಕೋಟಿ ರೂ. ಬಜೆಟ್‌ನ ಚಿತ್ರ ಎನ್ನಲಾಗುತ್ತಿದೆ. ಇದೀಗ 15 ಕೋಟಿ ಮನೆಯೇ ಆಶ್ಚರ್ಯ ಮೂಡಿಸುತ್ತಿದೆ. ಮುಂದೆ ಇನ್ನೆಷ್ಟು ಅದ್ಭುತ ಕಥೆಗಳು ಕಿವಿಗೆ ಬೀಳುತ್ತವೋ ಎಂದು ಕಾದು ನೋಡ್ಬೇಕಿದೆ.

  • ಕಯಾದು ಸೌಂದರ್ಯಕ್ಕೆ ಕ್ಯೂ ನಿಂತ ಅರ್ಧ ಡಜನ್ ಸಿನಿಮಾ!

    ಕಯಾದು ಸೌಂದರ್ಯಕ್ಕೆ ಕ್ಯೂ ನಿಂತ ಅರ್ಧ ಡಜನ್ ಸಿನಿಮಾ!

    ಕೇವಲ ಒಂದೇ ಒಂದು ಹಿಟ್ ಸಿನಿಮಾ, ನಟಿ ಕಯಾದು ಲೋಹರ್ (Kayadu Lohar) ಅವರ ವೃತ್ತಿ ಜೀವನವನ್ನೇ ಬದಲಾಯಿಸಿದೆ. ತಮಿಳಿನ ʻಡ್ರ್ಯಾಗನ್ʼ (Dragon) ಚಿತ್ರ ಈ ಸುಂದರಿಯನ್ನು ರಾತ್ರೋರಾತ್ರಿ ತಾರೆಯನ್ನಾಗಿಸಿತು. ಈಗ ಸುಮಾರು ಆರು ಚಿತ್ರಗಳು ಅವರ ನಟನೆಯನ್ನು ಬಯಸಿ ಕ್ಯೂ ನಿಂತಿವೆ!

    ಕಯಾದುಗೆ ಕಾಲಿವುಡ್‌ನಲ್ಲಿ ಮಾತ್ರವಲ್ಲ, ಟಾಲಿವುಡ್‌ನಲ್ಲೂ ಅದೃಷ್ಟದ ಬಾಗಿಲು ತೆರೆದಿದೆ. ಶ್ರೀ ವಿಷ್ಣು ಮತ್ತು ಅಲ್ಲೂರಿ ಚಿತ್ರಗಳ ಮೂಲಕ ತೆಲುಗು ಚಿತ್ರರಂಗಕ್ಕೆ (Telugu Cinima) ಪಾದಾರ್ಪಣೆ ಮಾಡಿದಾಗ ಇವರ ಕಡೆ ಯಾರೂ ಹೆಚ್ಚು ಗಮನ ಹರಿಸಿರಲಿಲ್ಲ. ಡ್ರ್ಯಾಗನ್ ಸೂಪರ್ ಹಿಟ್ ಆದ ನಂತರ ಕಯಾದು ಹಾಟ್ ಫೇವರಿಟ್ ಹೀರೋಯಿನ್ ಆಗಿದ್ದು, ತೆಲುಗು ಚಿತ್ರಗಳಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ತೆಲುಗಿನ ನಟ ವಿಶ್ವಕ್ ಸೇನ್ ನಟನೆಯ ‘ಫಂಕಿ’ ಚಿತ್ರಕ್ಕೂ ಕಯಾದು ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ.

    ಜಿ.ವಿ. ಪ್ರಕಾಶ್ ಕುಮಾರ್ ಮತ್ತು ಕಯಾದು ಅಭಿನಯದ ಮುಂಬರುವ ಚಿತ್ರ ‘ಇಮ್ಮಾರ್ಟಲ್’ನ (Immortal) ಫಸ್ಟ್-ಲುಕ್ ಪೋಸ್ಟರ್ ಈಗಾಗಲೇ ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ. ಮರಿಯಪ್ಪನ್ ಚಿನ್ನಾ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರದ ಪೋಸ್ಟರ್ ಯುವ ಜನರನ್ನು ಆಕರ್ಷಿಸುತ್ತಿದೆ. ಈ ಪೋಸ್ಟರ್‌ನಲ್ಲೂ ʻಡ್ರ್ಯಾಗನ್ʼನ ಚಿತ್ರವಿದ್ದು, ನಟಿಯ ಯಶಸ್ಸಿನ ಛಾಯೇ ಎದ್ದು ಕಾಣುತ್ತಿದೆ.

    ಸಧ್ಯ ತಮಿಳಿನಲ್ಲಿ ‘ಇದಯಂ ಮುರಳಿ’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆ ಮಾಡಲಾಗಿತ್ತು. ಈ ಸಿನಿಮಾ ಜೂನ್‌ ಇಲ್ಲವೇ ಜುಲೈನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇವುಗಳ ಜೊತೆಗೆ ಇನ್ನೂ ಆರು ಚಿತ್ರಗಳಲ್ಲಿ ನಟಿಸಲು ಕಯಾದು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

    2021ರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ ‘ಮುಗಿಲ್‌ಪೇಟೆ’ ಚಿತ್ರದಲ್ಲಿ ಕಯಾದು ನಾಯಕಿಯಾಗಿ ನಟಿಸಿದ್ದರು.

  • ಪ್ರಶಾಂತ್ ನೀಲ್ ಚಿತ್ರಕ್ಕೆ ಕರಣ್‍ ಜೋಹಾರ್ ಎಂಟ್ರಿ

    ಪ್ರಶಾಂತ್ ನೀಲ್ ಚಿತ್ರಕ್ಕೆ ಕರಣ್‍ ಜೋಹಾರ್ ಎಂಟ್ರಿ

    ಬಾಲಿವುಡ್‍ ನಟ, ನಿರ್ದೇಶಕ, ನಿರ್ಮಾಪಕ ಕರಣ್ ಜೋಹಾರ್‍  (Karan Johar)ಕನ್ನಡದ ಹೆಸರಾಂತ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಸಹಾಯ ಮಾಡಿದ್ದಾರೆ ಎನ್ನುವ ವಿಚಾರವೊಂದು ದಕ್ಷಿಣದ ಸಿನಿ ರಂಗದಲ್ಲಿ ಕೇಳಿ ಬರುತ್ತಿದೆ. ಪ್ರಶಾಂತ್ ನೀಲ್ ಹೊಸ ಚಿತ್ರಕ್ಕೆ ಕರಣ್ ಜೋಹಾರ್ ಅವರೇ ಟೈಟಲ್‍ ಹೆಸರಿಸಿದ್ದಾರೆ ಎನ್ನೋದು ಅದರ ತಾತ್ಪರ್ಯ.

    ಟಾಲಿವುಡ್ ನಟ ಜ್ಯೂ.ಎನ್‌ಟಿಆರ್- ಪ್ರಶಾಂತ್ ನೀಲ್ (Prashanth Neel) ಕಾಂಬಿನೇಷನ್ ಸಿನಿಮಾದ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾದಿದ್ದರು. ಮೊನ್ನೆಯಿಂದ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಈ ಜೋಡಿ ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡಲಾಗಿದೆ. ಹಾಗಂತ ಅನಧಿಕೃತ ಘೋಷಣೆಯಾಗಿದೆ.

    ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ‌’ಡ್ರ್ಯಾಗನ್’ (Dragon) ಎಂದು ಪ್ರಶಾಂತ್ ನೀಲ್ ಜಬರ್‌ದಸ್ತ್ ಆಗಿರುವ ಟೈಟಲ್ ಇಟ್ಟಿದ್ದಾರೆ. ಈ ಹಿಂದೆ ರಿಲೀಸ್ ಆಗಿರುವ ತಾರಕ್ ಪೋಸ್ಟರ್‌ಗೂ ಇದೀಗ ಇಟ್ಟಿರುವ ‘ಡ್ರ್ಯಾಗನ್’ ಟೈಟಲ್‌ಗೂ ಹೊಂದುವಂತಿದೆ. ಈ ಟೈಟಲ್ ಸೂಚಿಸಿದ್ದು ಕರಣ್ ಜೋಹಾರ್ ಅಂತಿದ್ದಾರೆ. ಆದರೆ ಚಿತ್ರತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

    ಸದ್ಯ ಜ್ಯೂ.ಎನ್‌ಟಿಆರ್ ಅವರು ವಾರ್ 2, ದೇವರ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಎರಡು ಪ್ರಾಜೆಕ್ಟ್‌ಗಳ ನಂತರ ಪ್ರಶಾಂತ್ ನೀಲ್ ಜೊತೆಗಿನ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ ಜ್ಯೂ.ಎನ್‌ಟಿಆರ್ ಎನ್ನಲಾಗಿದೆ.

     

    ಜ್ಯೂ.ಎನ್‌ಟಿಆರ್ ಇದೇ ಮೇ 20ರಂದು ತಮ್ಮ 1ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ದಾರೆ. ಈ ವೇಳೆ, ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾದ ಶೂಟಿಂಗ್ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ.

  • ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಪತಂಗೋತ್ಸವ- ಗಾಳಿಪಟದಲ್ಲಿ ಕುಲಭೂಷಣ್ ಜಾಧವ್‍ರನ್ನ ಬಿಡುಗಡೆಗೊಳಿಸಿ ಎಂದು ಪಾಕಿಸ್ತಾನಕ್ಕೆ ಮನವಿ

    ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಪತಂಗೋತ್ಸವ- ಗಾಳಿಪಟದಲ್ಲಿ ಕುಲಭೂಷಣ್ ಜಾಧವ್‍ರನ್ನ ಬಿಡುಗಡೆಗೊಳಿಸಿ ಎಂದು ಪಾಕಿಸ್ತಾನಕ್ಕೆ ಮನವಿ

    ಬೆಳಗಾವಿ: ನಗರದ ಹೊರವಲಯದ ಬೃಹತ್ ಮೈದಾನದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮಾಜಿ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ನಾಲ್ಕು ದಿನಗಳ ಕಾಲ 8ನೇ ಅಂತರಾಷ್ಟ್ರೀಯ ಪತಂಗ ಉತ್ಸವ ನಡೆಯಲಿದೆ.

    ಕಳೆದ ಬಾರಿಕ್ಕಿಂತ ಈ ಬಾರಿ ಅತ್ಯಂತ ವಿಭಿನ್ನ ಬಗೆ ಬಗೆಯ ಗಾಳಿಪಟಗಳು ಭಾಗವಹಿಸಿದ್ದಾರೆ. ಈ ಬಾರಿಯ ಪತಂಗೋತ್ಸವಲ್ಲಿ, ಪಾಕಿಸ್ತಾನದಲ್ಲಿ ಬಂಧನದಲ್ಲಿರುವ ಭಾರತೀಯ ಕುಲಭೂಷಣ್ ಜಾಧವ್ ಅವರನ್ನು ಬಿಡುಗಡೆಗೊಳಿಸಿ ಎಂದು ಪಾಕಿಸ್ತಾನಕ್ಕೆ ಮನವಿ ಮಾಡುವ ಗಾಳಿಪಟವಿತ್ತು.

    ಡ್ರ್ಯಾಗನ್ ಪತಂಗದ ವಿಶೇಷ ಎಂದರೆ ಭೂಮಿ ಮೇಲೆ 15 ಕೆಜಿ ಇರುತ್ತೆ. ಆಕಾಶದಲ್ಲಿ ಹಾರಾಡಿದ್ದರೆ 150 ಕೆಜಿ ಭಾರವಾಗುತ್ತದೆ. ಅಲ್ಲದೇ ಈ ಬಾರಿ ಲಂಡನ್, ಇಂಗ್ಲೆಂಡ್, ಅಮೆರಿಕಾ, ಫ್ರಾನ್ಸ್ ಸೇರಿದಂತೆ ಒಟ್ಟು 12 ವಿದೇಶಗಳಿಂದ ಸುಮಾರು 25 ವಿದೇಶಿಗರು ಮತ್ತು ದೇಶದ ನಾನಾ ಭಾಗಗಳಿಂದ 23 ಜನರು ಈ ಅಂತರಾಷ್ಟ್ರೀಯ ಪತಂಗೋತ್ಸವದಲ್ಲಿ ಭಾಗಿಯಾಗಿದ್ದರು.