Tag: dr. yathindra

  • ಸಿದ್ದರಾಮಯ್ಯ ಪುತ್ರ ಸಂಚರಿಸ್ತಿದ್ದ ಕಾರು ಡಿಕ್ಕಿ- ಬೈಕ್ ಸವಾರನಿಗೆ ಗಾಯ

    ಸಿದ್ದರಾಮಯ್ಯ ಪುತ್ರ ಸಂಚರಿಸ್ತಿದ್ದ ಕಾರು ಡಿಕ್ಕಿ- ಬೈಕ್ ಸವಾರನಿಗೆ ಗಾಯ

    ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬಟಕುರ್ಕಿ ಗ್ರಾಮದಲ್ಲಿ ನಡೆದಿದೆ.

    ಪ್ರವಾಹದಿಂದ ತತ್ತರಿಸಿದ್ದ ಬಾದಾಮಿಯ ಜನತೆಯ ಅಹವಾಲು ಸ್ವೀಕರಿಸಲು ಯತೀಂದ್ರ ಅವರು ಬೆಂಬಲಿಗ ಜೋಗಿನ್ ಅವರ ಕಾರಿನಲ್ಲಿ ಬಂದಿದ್ದರು. ಈ ವೇಳೆ ಕಾರು, ಈರಣ್ಣ ಪಟ್ಟಣಶೆಟ್ಟಿ ಅನ್ನೋರ ಬೈಕ್ ಗೆ ಡಿಕ್ಕಿ ಹೊಡೆದಿದೆ.

    ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರ ರಸ್ತೆ ಪಕ್ಕದ ಹೊಲಕ್ಕೆ ಹೋಗಿ ಬಿದ್ದಿದ್ದಾರೆ. ಘಟನೆಯಲ್ಲಿ ಬೈಕ್ ಸವಾರ ಈರಣ್ಣ ಪಟ್ಟಣಶೆಟ್ಟಿಗೆ ಸಣ್ಣ-ಪುಟ್ಟ ಗಾಯಗಳಾಗಿದೆ. ಗಾಯಾಳುವನ್ನು ಕೂಡಲೇ ಬಾಗಲಕೊಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಘಟನೆ ಬಳಿಕ ಅಧಿಕಾರಿಗಳಿಗೆ ಗಾಯಾಳು ಬೈಕ್ ಸವಾರನ ಚಿಕಿತ್ಸೆ ಬಗ್ಗೆ ಗಮನ ಹರಿಸುವಂತೆ ಶಾಸಕ ಡಾ.ಯತೀಂದ್ರ ಅವರು ತಮ್ಮ ಬೆಂಬಲಿಗರಿಗೆ ಸೂಚಿಸಿದ್ದಾರೆ.

  • ಪ್ರಚಾರದ ವೇಳೆ ಮಗನನ್ನು ನೆನೆದು ಭಾವುಕರಾದ ಸಿಎಂ

    ಪ್ರಚಾರದ ವೇಳೆ ಮಗನನ್ನು ನೆನೆದು ಭಾವುಕರಾದ ಸಿಎಂ

    ಮೈಸೂರು: ವರುಣಾದಲ್ಲಿ ತಮ್ಮ ಮಗ ಡಾ. ಯತೀಂದ್ರ ಪರ ಪ್ರಚಾರ ಮಾಡ್ತಿರೋ ಸಿಎಂ ಸಿದ್ದರಾಮಯ್ಯ ಇಂದು ಭಾವುಕರಾದ್ರು.

    ನನ್ನ ಮಗ ರಾಕೇಶ್ ನೆನೆಪಾಗ್ತಿದ್ದಾನೆ. ಅವನಿದ್ದಿದ್ರೆ ಪ್ರಚಾರಕ್ಕೆ ಬರ್ತಿರಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರವನ್ನು ಅವನೇ ನೋಡಿಕೊಳ್ಳುತ್ತಿದ್ದ. ಆದ್ರೆ ಮನುಷ್ಯ ಹುಟ್ಟಿದ ಮೇಲೆ ಸಾಯಲೇಬೇಕು. ಅವನು ಕಾಯಿಲೆ ಇತ್ತು, ಸತ್ತು ಹೋದ ಅಂತ ಮಗನನ್ನು ನೆನೆಪಿಸಿಕೊಂಡು ಕಣ್ಣೀರು ಹಾಕಿದ್ರು.

    ನಾನು ವರುಣಾದಲ್ಲಿ 30 ಸಾವಿರ ವೋಟುಗಳ ಅಂತರದಿಂದ ಗೆದ್ದಿದ್ದೇನೆ. ಅದಕ್ಕಿಂತ ಹೆಚ್ಚು ಮತಗಳಿಂದ ಯತೀಂದ್ರ ಗೆಲ್ತಾನೆ ಅಂತ ಮುಖ್ಯಮಂತ್ರಿ ಭಾವುಕ ಭಾಷಣ ಮಾಡಿದ್ರು.

    ಮಣ್ಣಿನ ಮಗನಿಗೆ ಮತ ಹಾಕ್ತಿರೋ? ಅವನ್ಯಾರಿಗೋ ಮತ ಹಾಕ್ತೀರಾ? ಅವನಿಗೂ ಕ್ಷೇತ್ರಕ್ಕೂ ಸಂಬಂಧ ಏನು? ಅವರ ಮಗ, ಇವರ ಮಗ ಅಂದವ್ರಿಗೆ ಮತ ಹಾಕ್ತೀರಾ? ವರುಣಾ ಮತ್ತು ಚಾಮುಂಡೇಶ್ವರಿ ನನ್ನ ಕಣ್ಣು ಅಂತ ಸಿದ್ದರಾಮಯ್ಯ ಯಡಿಯೂರಪ್ಪರ ಕಿರಿಯ ಮಗ ವಿಜಯೇಂದ್ರ ಹೆಸರು ಹೇಳದೇ ವಾಗ್ದಾಳಿ ನಡೆಸಿದ್ರು.

  • ನನ್ನ ಕ್ಷೇತ್ರದಲ್ಲಿ ಸಿಎಂ ಮಗ ಬಂದು ಕಾಮಗಾರಿಗೆ ಚಾಲನೆ ನೀಡ್ತಾರೆ- ಜಿಟಿಡಿ ಆಕ್ರೋಶ

    ನನ್ನ ಕ್ಷೇತ್ರದಲ್ಲಿ ಸಿಎಂ ಮಗ ಬಂದು ಕಾಮಗಾರಿಗೆ ಚಾಲನೆ ನೀಡ್ತಾರೆ- ಜಿಟಿಡಿ ಆಕ್ರೋಶ

    ಬೆಂಗಳೂರು: ಮುಖ್ಯಮಂತ್ರಿ ಪುತ್ರ ಡಾ ಯತೀಂದ್ರ ವಿರುದ್ಧ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

     

    ನನ್ನ ಕ್ಷೇತ್ರದಲ್ಲಿ ಕಾರ್ಯಕ್ರಮಗಳಿಗೆ ಭಾಗವಹಿಸಲು ಅವಕಾಶ ನೀಡ್ತಿಲ್ಲ. ಮುಖ್ಯಮಂತ್ರಿಗಳ ಮಗ ಬಂದು ಕಾಮಗಾರಿಗೆ ಚಾಲನೆ ನೀಡ್ತಾರೆ. ಮುಖ್ಯಮಂತ್ರಿ ಇಲ್ಲೇ ಸ್ಪರ್ಧೆ ಮಾಡ್ತಾರೆ ಅನ್ನೋ ಕಾರಣಕ್ಕೆ ಸಿದ್ದರಾಮಯ್ಯ ಅವರ ಆಪ್ತ ಮರೀಗೌಡ ಧಮ್ಕಿ ಹಾಕ್ತಾರೆ. ಪೊಲೀಸರನ್ನು ಬಿಟ್ಟು ಕೇಸ್ ಹಾಕ್ತಾರೆ ಅಂತ ವಿಧಾನಸಭೆಯಲ್ಲಿ ಜಿಟಿ ದೇವೇಗೌಡ ವಾಗ್ದಾಳಿ ನಡೆಸಿದ್ರು.

    ಇತ್ತ ನನ್ನ ಮಗ ಕಾರ್ಯಕ್ರಮಕ್ಕೆ ಹೋಗಿದ್ದಾನೋ ಇಲ್ವೋ ಅಂತ ನನಗೆ ಗೊತ್ತಿಲ್ಲ ಅಂತ ಸಿಎಂ ಹೇಳಿದ್ರೂ ನಂತರ ಹೋಗಿದ್ದಾನೆ ಅಂದ್ರು. ಈ ಹಿನ್ನೆಲೆಯಲ್ಲಿ ಸಿಎಂ ವಿರುದ್ಧ ಜಿಟಿಡಿ ಹಕ್ಕುಚ್ಯುತಿ ಮಂಡನೆಗೆ ಮುಂದಾದ್ರು. ಆಗ ಸದನದಲ್ಲಿ ಆಡಳಿತ-ವಿಪಕ್ಷ ಸದಸ್ಯರ ನಡುವೆ ಗಲಾಟೆ ನಡೆಯಿತು.

    (more…)