Tag: Dr. vishnuvardhan Bangalore

  • ಮೇಘನಾ ರಾಜ್‍ಗೆ ಸಿಕ್ತು ವಿಷ್ಣುವರ್ಧನ್ ಪುತ್ರಿಯಿಂದ ಸ್ಪೆಷಲ್ ಗಿಫ್ಟ್!

    ಮೇಘನಾ ರಾಜ್‍ಗೆ ಸಿಕ್ತು ವಿಷ್ಣುವರ್ಧನ್ ಪುತ್ರಿಯಿಂದ ಸ್ಪೆಷಲ್ ಗಿಫ್ಟ್!

    ಬೆಂಗಳೂರು: ನಟ ಡಾ. ವಿಷ್ಣುವರ್ಧನ್ ಅವರ ಮಗಳು ನಟಿ ಮೇಘನಾ ರಾಜ್ ಅವರಿಗೆ ತಂದೆ ಹಾಕಿಕೊಳ್ಳುತ್ತಿದ್ದ ಅಪರೂಪದ ವಸ್ತುವನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಇಂದು ಡಾ. ವಿಷ್ಣುವರ್ಧನ್ ಇಲ್ಲದಿದ್ದರೂ ಅವರ ಅಭಿಮಾನಿಗಳ ಮನದಲ್ಲಿ ಸದಾ ಉಳಿದುಕೊಂಡಿದ್ದಾರೆ. ಡಾ. ವಿಷ್ಣುವರ್ಧನ್ ಅವರು ಬಳಸುತ್ತಿದ್ದ ವಾಚ್ ನ್ನ ಮಗಳು ಕೀರ್ತಿ ಅವರಿಂದ ನಟಿ ಮೇಘನಾ ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ.

    ಈ ಬಗ್ಗೆ ನಟಿ ಮೇಘನಾ ತಮ್ಮ ಟ್ಟಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. “ವಿಷ್ಣುವರ್ಧನ್ ಅವರ ಮಗಳು ಕೀರ್ತಿ ಅವರಿಂದ ನನಗೆ ವಿಷ್ಣುವರ್ಧನ್ ಬಳಸುತ್ತಿದ್ದ ವಾಚ್ ಉಡುಗೊರೆಯಾಗಿ ಸಿಕ್ಕಿದೆ. ಇದೊಂದು ಅದ್ಭುತ ಉಡುಗೊರೆಯಾಗಿದೆ. ಧನ್ಯವಾದಗಳು ಕೀರ್ತಿ ಅಕ್ಕ” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಕೀರ್ತಿ ಅವರು ನೀಡಿರುವ ವಾಚ್ ಹಾಕಿಕೊಂಡು ಮೆಘನಾ ಸೆಲ್ಫಿ ಕ್ಲಿಕ್ಕಿಸಿಕೊಂಡು ಆ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

    ಡಾ. ವಿಷ್ಣುವರ್ಧನ್ ಅವರ ಕುಟುಂಬಕ್ಕೆ ಮೇಘನಾ ರಾಜ್ ಕುಟುಂಬ ಬಹಳ ಹತ್ತಿರವಾಗಿದೆ. ಮೇಘನಾ ರಾಜ್ ಅವರ ತಂದೆ ಸುಂದರ್ ರಾಜ್ ಮತ್ತು ವಿಷ್ಣುವರ್ಧನ್ ಅವರು ಆತ್ಮೀಯ ಸ್ನೇಹಿತರಾಗಿದ್ದು, ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದಾರೆ.

    ಮೇಘನಾ ರಾಜ್ ಚಿಕ್ಕವಯಸ್ಸಿನಲ್ಲಿ ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿ, ಅವರ ಜೊತೆ ಮಾತನಾಡಿ ಸಮಯ ಕಳೆದಿದ್ದಾರೆ. ಇಂದಿಗೂ ವಿಷ್ಣುವರ್ಧನ್ ಅಂದರೆ ಮೇಘನಾ ರಾಜ್ ಅಭಿಮಾನವಿದೆ. ಸದ್ಯಕ್ಕೆ ಮೇಘನಾ ರಾಜ್ ಅಭಿನಯದ ‘ಇರುವುದೆಲ್ಲವ ಬಿಟ್ಟು’ ಸಿನಿಮಾ ಇದೇ ತಿಂಗಳಲ್ಲಿ ಬಿಡುಗೆಡೆಗೆ ಸಿದ್ಧವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv