Tag: Dr Vishnuvardhan

  • ವಿಷ್ಣುವರ್ಧನ್ ಅಭಿಮಾನಿಗಳಿಗೆ ಗೆಲುವು – ಸಮಾಧಿ ಸಮೀಪ ಬರ್ತ್‌ಡೇಗೆ ಸಿಕ್ತು ಅನುಮತಿ

    ವಿಷ್ಣುವರ್ಧನ್ ಅಭಿಮಾನಿಗಳಿಗೆ ಗೆಲುವು – ಸಮಾಧಿ ಸಮೀಪ ಬರ್ತ್‌ಡೇಗೆ ಸಿಕ್ತು ಅನುಮತಿ

    ರ್ನಾಟಕ ರತ್ನ ಡಾ.ವಿಷ್ಣುವರ್ಧನ್ (Dr.Vishnuvardhan) ಅವರ 75ನೇ ಹುಟ್ಟುಹಬ್ಬ ಆಚರಿಸಲು ಸಜ್ಜಾಗಿರುವ ಫ್ಯಾನ್ಸ್‌ಗೆ ಖುಷಿ ಸುದ್ದಿ ಸಿಕ್ಕಿದೆ. ವಿಷ್ಣು ಸಮಾಧಿ ಇರುವ ಅಭಿಮಾನ್ ಸ್ಟುಡಿಯೋ (Abhiman Studio) ಅಕ್ಕಪಕ್ಕದಲ್ಲಿ ಕಾರ್ಯಕ್ರಮ ಆಯೋಜನೆಗೆ ಕೊನೆಗೂ ಪೊಲೀಸರು ಅನುಮತಿ ಕೊಟ್ಟಿದ್ದಾರೆ.

    ಸಮಾಧಿ ಜಾಗ ವಿವಾದ ಕೋರ್ಟ್‌ನಲ್ಲಿರುವ ಕಾರಣ ಕಾರ್ಯಕ್ರಮಕ್ಕೆ ಬೆಳಗ್ಗೆ ಪೊಲೀಸರು ಅನುಮತಿ ಕೊಡಲು ನಿರಾಕರಿಸಿದ್ದರು. ಈ ಸಂಬಂಧ ಡಾ. ವಿಷ್ಣುಸೇನಾ ಸಮಿತಿ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಡಿಸಿಪಿ ಅನಿತಾರನ್ನು ಭೇಟಿಯಾಗಿ ಮನವಿ ಮಾಡಿದ್ದರು. ಸಂಜೆ ಹೊತ್ತಿಗೆ ಷರತ್ತು ಬದ್ಧ ಅನುಮತಿ ಕೊಟ್ಟಿದ್ದು, ಅಭಿಮಾನ್ ಸ್ಟುಡಿಯೋ ಬಳಿ ಯಾರೂ ಹೋಗದೇ ನಿಗದಿ ಮಾಡಿರುವ ಜಾಗದಲ್ಲೇ ಸಂಭ್ರಮಾಚರಣೆ ಮಾಡುವಂತೆ ಡಿಸಿಪಿ ಸೂಚಿಸಿದ್ದಾರೆ.

    ಡಿಸಿಪಿ ಒಪ್ಪಿಗೆಯ ಬೆನ್ನಲ್ಲೇ ಅಭಿಮಾನ ಸ್ಟುಡಿಯೋಗೆ 200 ಮೀಟರ್ ಅಂತರದಲ್ಲಿ 2 ಎಕರೆ ಜಾಗ ಬಾಡಿಗೆ ಪಡೆದು ವಿಷ್ಣು ಹುಟ್ಟುಹಬ್ಬ ಆಚರಣೆಗೆ ಫ್ಯಾನ್ಸ್ ಸಿದ್ಧತೆ ನಡೆಸಿದ್ದಾರೆ. ರಕ್ತದಾನ, ಅನ್ನದಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

  • ದಿ.ಡಾ.ವಿಷ್ಣುವರ್ಧನ್, ಸರೋಜಾದೇವಿಯವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಗೆ ನಟಿಯರ ಮನವಿ

    ದಿ.ಡಾ.ವಿಷ್ಣುವರ್ಧನ್, ಸರೋಜಾದೇವಿಯವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಗೆ ನಟಿಯರ ಮನವಿ

    – ಕ್ಯಾಬಿನೆಟ್‌ನಲ್ಲಿ ಚರ್ಚಿಸುವುದಾಗಿ ಸಿಎಂ ಭರವಸೆ

    ಬೆಂಗಳೂರು: ಕಾವೇರಿ ನಿವಾಸದಲ್ಲಿ ಇವತ್ತು ಕನ್ನಡ ಚಿತ್ರರಂಗದ ಹಿರಿಯ ನಟಿಯರು ಸಿಎಂ ಸಿದ್ದರಾಮಯ್ಯನವರನ್ನು (Siddaramaiah) ಭೇಟಿ ಮಾಡಿದರು. ಹಿರಿಯ ನಟಿಯರಾದ ಜಯಮಾಲ, ಶೃತಿ, ಮಾಳವಿಕ ಭೇಟಿ ಮಾಡಿ ಮಾತುಕತೆ ನಡೆಸಿದರು.

    ಸೆಪ್ಟಂಬರ್ 18ಕ್ಕೆ ವಿಷ್ಣುವರ್ಧನ್ (Dr Vishnuvardhan) ಅವರ 75ನೇ ಬರ್ತ್ ಡೇ. ಅವತ್ತು ದಿವಂಗತ ಡಾ.ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ (Posthumous Karnataka Ratna Award) ಘೋಷಣೆ ಮಾಡುವಂತೆ ಮನವಿ ಮಾಡಿದರು. ಅಲ್ಲದೆ ದಿವಂಗತ ನಟಿ ಸರೋಜಾದೇವಿ (Saroja Devi) ಅವರಿಗೂ ಮರಣೋತ್ತರ ಕರ್ನಾಟಕ ರತ್ನ ನೀಡಿ ಗೌರವಿಸಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಳ್ಳಾರಿಯಿಂದ ಪದೇ ಪದೇ ಕರೆತರಲು ಸಾಧ್ಯವಿಲ್ಲ: ದರ್ಶನ್‌ ಪರ ವಕೀಲ

    ಇನ್ನು ಸಿಎಂ ಭೇಟಿ ಬಳಿಕ ಮಾತನಾಡಿದ ಹಿರಿಯ ನಟಿ ಜಯಮಾಲಾ, ದಿವಂಗತ ವಿಷ್ಣುವರ್ಧನ್ ಅವರಿಗೆ 75ನೇ ವರ್ಷದ ಹುಟ್ಟುಹಬ್ಬದಂದು ಮರಣೋತ್ತರ ಕರ್ನಾಟಕ ರತ್ನ ಕೊಡಬೇಕು. ವಿಷ್ಣುವರ್ಧನ್ ಹಾಗೂ ಸರೋಜಾದೇವಿ ಅವರಿಗೆ ಕರ್ನಾಟಕ ರತ್ನ ಕೊಡಬೇಕು. ರಸ್ತೆಗೆ ಸರೋಜಾದೇವಿ ಹೆಸರು ಇಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವೆ. ಸಚಿವ ಸಂಪುಟ ಸಭೆಯಲ್ಲಿ ಮಾತಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ. ವಿಷ್ಣುವರ್ಧನ್, ಸರೋಜಾದೇವಿ ಅವರ ಜೊತೆ ಕೆಲಸ ಮಾಡಿದ್ದೇವೆ. ನಾವು ಕಲಾವಿದರು, ನಮಗೆ ಯಾವುದೇ ಜಾತಿ ಇಲ್ಲ, ರಾಜಕೀಯವಿಲ್ಲ. ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಚಿತ್ರದುರ್ಗದಲ್ಲಿ ನಿರಂತರ ಮಳೆಗೆ ಬೆಳೆಹಾನಿ – ಜಮೀನುಗಳಿಗೆ ಅಧಿಕಾರಿಗಳ ಭೇಟಿ, ಪರಿಶೀಲನೆ

    ಇದೇ ವೇಳೆ ಹಿರಿಯ ನಟಿ ಶೃತಿ ಮಾತನಾಡಿ, ವಿಷ್ಣುವರ್ಧನ್ ಸರ್ ಅವರ ಅಭಿಮಾನಿಯಾಗಿ ನಾವು ಬಂದಿದ್ದೇವೆ. ಕರ್ನಾಟಕ ರತ್ನ ನೀಡಬೇಕೆಂದು ಮನವಿ ಮಾಡಿದ್ದೇವೆ. ಸರೋಜಾ ದೇವಿ ಅವರಿಗೂ ಕರ್ನಾಟಕ ರತ್ನ ಕೊಡಬೇಕು ಪಕ್ಷಾತೀತವಾಗಿ ನಾವೆಲ್ಲ ಬಂದಿದ್ದೇವೆ. ನಾವೆಲ್ಲರೂ ಕಲಾವಿದರು, ಇದರಲ್ಲಿ ರಾಜಕೀಯ ಇಲ್ಲ ಎಂದರು. ಇದನ್ನೂ ಓದಿ: ವಿಷ್ಣು ಸ್ಮಾರಕ ವಿಚಾರ – ನಾಳೆ ಸಿಎಂ ಭೇಟಿಯಾಗಲಿರುವ ಭಾರತಿ ವಿಷ್ಣುವರ್ಧನ್

    ಇನ್ನು ಮಾಳವಿಕಾ ಅವಿನಾಶ್ ಮಾತನಾಡಿ, ವಿಷ್ಣುವರ್ಧನ್, ಸರೋಜಾದೇವಿ ಅವರಿಗೆ ಕರ್ನಾಟಕ ರತ್ನ ಕೊಡಬೇಕು. ಮಲ್ಲೇಶ್ವರಂನಲ್ಲಿ ಸರೋಜಾದೇವಿ ಅವರ ನಿವಾಸವಿದೆ. ಆ ರಸ್ತೆಗೆ ಸರೋಜಾದೇವಿ ಹೆಸರು ಇಡಬೇಕು. ಸಿಎಂ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರಿಗೆ ಕಠಿಣ ಶಿಕ್ಷೆ ಅವಶ್ಯಕ, ಕೇಂದ್ರದ ತನಿಖೆ ಆಗಲಿ: ಡಾ.ಮಂಜುನಾಥ್

  • ವಿಷ್ಣು ಸಮಾಧಿ ಇದ್ದ ಅಭಿಮಾನ್ ಸ್ಟುಡಿಯೋ ಮುಟ್ಟುಗೋಲು?

    ವಿಷ್ಣು ಸಮಾಧಿ ಇದ್ದ ಅಭಿಮಾನ್ ಸ್ಟುಡಿಯೋ ಮುಟ್ಟುಗೋಲು?

    ಬೆಂಗಳೂರು: ವಿವಾದದಿಂದ ಕೂಡಿದ್ದ ಬೆಂಗಳೂರಿನ ಅಭಿಮಾನ್ ಸ್ಟುಡಿಯೋ (Abhiman Studio) ಮುಟ್ಟುಗೋಲು ಹಾಕಲು ಅರಣ್ಯ ಇಲಾಖೆ (Forest Department) ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ.

    ಇದೇ ಆಗಸ್ಟ್ 7 ರಂದು ರಾತ್ರೋರಾತ್ರಿ ಅಭಿಮಾನ್ ಸ್ಟುಡಿಯೋದಲ್ಲಿದ್ದ ಕನ್ನಡದ ಮೇರುನಟ ಸಾಹಸಸಿಂಹ ಡಾ. ವಿಷ್ಣುವರ್ಧನ್ (Dr Vishnuvardhan) ಅವರ ಸಮಾಧಿಯನ್ನ ಧ್ವಂಸ ಮಾಡಲಾಗಿತ್ತು. ಈ ಕಾರಣಕ್ಕೆ ಭಾರೀ ವಿವಾದಕ್ಕೀಡಾಗಿದ್ದ ಜಾಗವನ್ನ ಇದೀಗ ಸರ್ಕಾರ ವಶಪಡಿಸಿಕೊಳ್ಳುವಂತೆ ಅರಣ್ಯ ಇಲಾಖೆ ಡಿಸಿ ಜಗದೀಶ್ ಅವರಿಗೆ ಪತ್ರ ಬರೆದಿದೆ.

    ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ, ಮೈಲಸಂದ್ರ ಗ್ರಾಮಕ್ಕೆ ಸೇರಿದ ಸರ್ವೇ ನಂ, 26ರಲ್ಲಿ ಅಭಿಮಾನ್ ಸ್ಟುಡಿಯೋಗೆ ಸರ್ಕಾರ ನೀಡಿರುವ ಅರಣ್ಯ ಪ್ರದೇಶ ಆದೇಶವನ್ನು ರದ್ದು ಪಡಿಸಿ ಹಿಂಪಡೆಯುವ ಬಗ್ಗೆ ಅರಣ್ಯ ಇಲಾಖೆ ಪತ್ರದಲ್ಲಿ ಉಲ್ಲೇಖಿಸಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್ ರವೀಂದ್ರಕುಮಾರ್ ಅವರು ಪತ್ರ ಬರೆದಿದ್ದಾರೆ. ಇದನ್ನೂ ಓದಿ: ರೋಷನ್ ಕೋಟಿ ಕೋಟಿ ಒಡೆಯ ಎಂದವರಿಗೆ ಅನುಶ್ರೀ ಕ್ಲ್ಯಾರಿಟಿ ಏನು?

     

    ಪತ್ರದಲ್ಲಿ ಏನಿದೆ?
    ಸರ್ಕಾರಿ ಆದೇಶದ ಅನ್ವಯ ಏಪ್ರಿಲ್‌ 09, 1969 ರಂದು 20 ಎಕರೆ ಪ್ರದೇಶವನ್ನು ಟಿ ಎನ್ ಬಾಲಕೃಷ್ಣ ಅವರಿಗೆ ಅಭಿಮಾನ್ ಚಿತ್ರ ಸ್ಟುಡಿಯೋ ಸ್ಥಾಪಿಸುವ ಸಲುವಾಗಿ 20 ವರ್ಷಗಳ ಅವಧಿಗೆ ಗೇಣಿ ಆಧಾರದ ಮೇಲೆ ನೀಡಲಾಗಿತ್ತು. ಸರ್ಕಾರಿ ಆದೇಶದಲ್ಲಿ ಅಭಿಮಾನ್ ಸ್ಟಡಿಯೋ ಅಭಿವೃದ್ಧಿ ಹೊರತಾಗಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸದಿರಲು ಮಾರಾಟ/ ಪರಭಾರೆ ಕೊಡದಿರಲು ಷರತ್ತು ವಿಧಿಸಲಾಗಿತ್ತು. ಇದನ್ನೂ ಓದಿ: ಕೆಜಿಎಫ್ ಖ್ಯಾತಿಯ ಹರೀಶ್ ರಾಯ್ ಸಹಾಯಕ್ಕೆ ನಿಂತ ಧ್ರುವ ಸರ್ಜಾ

    ಉಲ್ಲಂಘನೆಯಾದಲ್ಲಿ ಮಂಜೂರಾತಿ ರದ್ಧುಪಡಿಸಿ ಭುಮಿಯನ್ನು ಸರ್ಕಾರ ಹಿಂಪಡೆಯಲಾಗುವುದು ಎನ್ನುವ ಆದೇಶ ಸ್ಪಷ್ಟವಾಗಿ ನಮೂದಿಸಲಾಗಿತ್ತು. ಇದನ್ನ ಮನವಿ ಪತ್ರದಲ್ಲಿ ಮತ್ತೆ ಸೂಚಿಸಿ ಅರಣ್ಯ ಇಲಾಖೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

    ಬಾಲಕೃಷ್ಣ ನಿಧನದ ಬಳಿಕ ಅವರ ಮಕ್ಕಳಾದ ಗಣೇಶ್ ಹಾಗೂ ಮೊಮ್ಮಗ ಕಾರ್ತಿಕ್ ಅನಧಿಕೃತವಾಗಿ 10 ಎಕರೆ ಆಸ್ತಿ ಮಾರಾಟ ಮಾಡಿದ್ದಾರೆ ಎಂದು ನಮೂದಿಸಲಾಗಿದೆ. ಅಭಿಮಾನ್ ಸ್ಟುಡಿಯೋ ನವೀಕರಣ ಮಾಡುವ ಸಲುವಾಗಿ ಬೇಕಾಗುವ ಹಣಕ್ಕಾಗಿ ಆಸ್ತಿ ಮಾರಾಟಕ್ಕೆ ಅನುಮತಿ ಕೇಳಿ ಮಾರಿದ್ದರು. ಇಲ್ಲಿಯೂ ಉದ್ದೇಶವನ್ನು ಉಲ್ಲಂಘನೆ ಮಾಡಿದ್ದಾರೆ ಎಂಬುದಾಗಿ ಪತ್ರದಲ್ಲಿ ಉಲೇಖವಾಗಿದೆ.

  • ವಿಷ್ಣು ಸಮಾಧಿ ನೆಲಸಮ; ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತನಾಡ್ಬೇಡಿ – ಫ್ಯಾನ್ಸ್‌ಗೆ ಅನಿರುದ್ಧ್ ಮನವಿ

    ವಿಷ್ಣು ಸಮಾಧಿ ನೆಲಸಮ; ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತನಾಡ್ಬೇಡಿ – ಫ್ಯಾನ್ಸ್‌ಗೆ ಅನಿರುದ್ಧ್ ಮನವಿ

    ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ಡಾ. ವಿಷ್ಣುವರ್ಧನ್ (Dr Vishnuvardhan) ಅವರ ಸಮಾಧಿಯನ್ನು ಅಭಿಮಾನಿಗಳ ವಿರೋಧದ ನಡುವೆಯೇ ಗುರುವಾರ ರಾತ್ರೋರಾತ್ರಿ ತೆರವು ಮಾಡಲಾಗಿತ್ತು. ಈ ಕುರಿತು ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ (Anirudh) ಪ್ರತಿಕ್ರಿಯೆ ನೀಡಿ, ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತನಾಡ್ಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

    ಸಮಾಧಿ ನಿರ್ಮಾಣ ಮಾಡಲಾದ ಜಾಗ ವಿವಾದಾತ್ಮಕ ಸ್ಥಳ ಇತ್ತು ಎಂಬುದು ನಮಗೆ ಗೊತ್ತಿರಲಿಲ್ಲ. ನಾವು ಅಲ್ಲೇ ಹೋಗಿ ಸಂಸ್ಕಾರ ಮಾಡಬೇಕು ಅಂದುಕೊಂಡಿದ್ದೆವು. ಕುಮಾರಸ್ವಾಮಿ ಅವರು ಹೇಳಿದ್ರು ದೇವೇಗೌಡರು ಹೇಳಿದ್ದಾರೆ. ವಿಷ್ಣುವರ್ಧನ್ ಅವರಿಗೆ ಅವರದ್ದೇ ಆದ ಗೌರವ ಇದೆ. ಹಾಗಾಗಿ ಅಭಿಮಾನ್ ಸ್ಟುಡಿಯೋದಲ್ಲಿ ಗೌರವಯುತವಾಗಿ ಮಾಡಿ ಎಂದಿದ್ರು. ಹಾಗಾಗಿ ನಾವು ಒಪ್ಪಿಕೊಂಡಿದ್ದೆವು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾತ್ರೋರಾತ್ರಿ ವಿಷ್ಣು ಸಮಾಧಿ ನೆಲಸಮ – ಅಭಿಮಾನಿಗಳಿಂದ ತೀವ್ರ ಆಕ್ರೋಶ

    ದಯವಿಟ್ಟು ಅಭಿಮಾನಿಗಳು ದೂರ ಆಗಬೇಡಿ. ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತಾನಾಡಬೇಡಿ. ಏನೇ ಇದ್ದರೂ ನನ್ನನ್ನೇ ನೇರವಾಗಿ ಸಂಪರ್ಕ ಮಾಡಿ. ಅಭಿಮಾನಿಗಳ ಪ್ರಯತ್ನದಿಂದ ಬೆಂಗಳೂರಿನಲ್ಲೇ ಸ್ಮಾರಕ ಆದರೆ ತುಂಬಾ ಒಳ್ಳೆಯದು. ಬೇಕಿದ್ದರೆ ಸರ್ಕಾರದ ಬಳಿ ಮಾತನಾಡಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 3.15 ಕೋಟಿ ವಂಚನೆ ಆರೋಪ; ನಟ ಧ್ರುವ ಸರ್ಜಾ ವಿರುದ್ಧ ಎಫ್‌ಐಆರ್

    ನಾನು ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಕೊಡಿ ಎಂದು ಕೇಳಿದ್ದೇನೆ. ಕೇವಲ ಅಪ್ಪಾವ್ರಿಗೆ ಮಾತ್ರ ಅಲ್ಲ. ಎಲ್ಲಾ ಕಲಾವಿದರಿಗೂ ಕೊಟ್ಟು ಗೌರವಿಸಿ ಎಂದು ಕೇಳಿದ್ದೇನೆ. ಚಿತ್ರರಂಗದ ಪರವಾಗಿ ನಾನೇ ಧ್ವನಿ ಎತ್ತಿದ್ದೇನೆ. ಅಲ್ಲದೇ ಈ ಬಗ್ಗೆ ಲೇಖನ ಕೂಡ ಬರೆದಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಪರಭಾಷೆಯಲ್ಲಿ ಸಿನಿಮಾ ಮಾಡಲ್ಲ ಅಂದಿದ್ದಕ್ಕೆ ನೋಟಿಸ್ ಕಳುಹಿಸಿದ್ದಾರೆ – ಧ್ರುವ ಮ್ಯಾನೇಜರ್ ಸ್ಪಷ್ಟನೆ

    ಬೆಂಗಳೂರಲ್ಲೇ ಅಪ್ಪಾವ್ರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ 2 ಕೋಟಿ ರೂ. ಹಣ ಕೊಟ್ಟಿತ್ತು. ಆದರೆ ಆ ಜಾಗ ಕೋರ್ಟ್ನಲ್ಲಿದ್ದಿದ್ದರಿಂದ ಸರ್ಕಾರಕ್ಕೆ ಜಾಗ ಕೊಂಡುಕೊಳ್ಳಲು ಆಗಲಿಲ್ಲ. ಕೇವಲ 2 ಎಕ್ರೆ ಜಾಗ ಕೊಡಿ ಎಂದು ಕೇಳಿದ್ದೆವು. ಅಭಿಮಾನ್ ಸ್ಟುಡಿಯೋ ಜಾಗವನ್ನ ಮನಸ್ಸು ಮಾಡಿದ್ರೆ ಸರ್ಕಾರವೇ ವಶ ಪಡಿಸಿಕೊಳ್ಳಬಹುದಾಗಿತ್ತು. ಆದರೆ ಸರ್ಕಾರ ಆ ಕೆಲಸ ಮಾಡಲಿಲ್ಲ. ಹೀಗಾಗಿ ನಾವು ಮೈಸೂರಿಗೆ ಹೋದೆವು ಎಂದು ಹೇಳಿದ್ದಾರೆ.

    ಭಾರತೀ ಅಮ್ಮ ಈ ಬಗ್ಗೆ ತಿಳಿದು ತುಂಬಾ ನೊಂದುಕೊಂಡಿದ್ದಾರೆ. ಯಾರೇ ಈ ರೀತಿ ನಡೆದುಕೊಂಡಿದ್ದರೂ ಶಿಕ್ಷೆ ಆಗಲಿ ಎಂದಿದ್ದಾರೆ. ಅದು ಖಾಸಗಿ ಜಾಗ ಆಗಿದ್ದರೂ ಭಾವನಾತ್ಮಕವಾಗಿ ಸಮಾಧಿ ಇದ್ದ ಜಾಗ, ಅದು ಕನ್ನಡಿಗರ ಜಾಗವಾಗಿತ್ತು. ಬಾಲಣ್ಣ ಅವರ ಮೇಲೆ ನಮಗೆ ತುಂಬಾ ಗೌರವ ಇದೆ ಎಂದಿದ್ದಾರೆ.

  • ರಾತ್ರೋರಾತ್ರಿ ವಿಷ್ಣು ಸಮಾಧಿ ನೆಲಸಮ – ಅಭಿಮಾನಿಗಳಿಂದ ತೀವ್ರ ಆಕ್ರೋಶ

    ರಾತ್ರೋರಾತ್ರಿ ವಿಷ್ಣು ಸಮಾಧಿ ನೆಲಸಮ – ಅಭಿಮಾನಿಗಳಿಂದ ತೀವ್ರ ಆಕ್ರೋಶ

    ಬೆಂಗಳೂರು: ಅಭಿಮಾನಿಗಳ ವಿರೋಧದ ನಡುವೆಯೂ ಡಾ.ವಿಷ್ಣುವರ್ಧನ್‌ ಅವರ ಸಮಾಧಿಯನ್ನ ತೆರವುಗೊಳಿಸಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

    ಹೈಕೋರ್ಟ್‌ ಸೂಚನೆ ಮೇರೆಗೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಮಾಧಿಯನ್ನ ರಾತ್ರೋರಾತ್ರಿ ತೆರವುಗೊಳಿಸಲಾಗಿದೆ. ಇದರಿಂದ ಆಘಾತಕ್ಕೆ ಒಳಗಾಗಿರುವ ವಿಷ್ಣು ಅಭಿಮಾನಿಗಳು ಸರ್ಕಾರ, ಪೊಲೀಸ್‌ ಇಲಾಖೆ ಹಾಗೂ ವಾಣಿಜ್ಯ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: `ಅನ್‌ಲಾಕ್ ರಾಘವ’ ಖ್ಯಾತಿಯ ಮಿಲಿಂದ್‌ಗೆ ಲಾಟ್ರಿ; ನಾಲ್ಕು ಚಿತ್ರಗಳಿಗೆ ಸಹಿ ಮಾಡಿದ ನಟ

    35 ವರ್ಷಗಳ ಕಲಾಸೇವೆ ಮತ್ತು 200 ಕನ್ನಡ ಚಲನಚಿತ್ರದಲ್ಲಿ ಅಭಿನಯಿಸಿ ಕನ್ನಡಿಗರ ಮನಗೆದ್ದ ಡಾ.ವಿಷ್ಣುವರ್ಧನ್‌ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಕೆಂಗೇರಿಯಲ್ಲಿರುವ ಅಭಿಮಾನ್‌ ಸ್ಟುಡಿಯೋ ಆವರಣದಲ್ಲಿ ನಡೆಸಲಾಗಿತ್ತು. ನಂತರದಲ್ಲಿ ವಿಷ್ಣು ಸಮಾಧಿಯನ್ನು ಸಂರಕ್ಷಿಸಿ, ಅದನ್ನು ಸ್ಮಾರಕವಾಗಿ ಘೋಷಿಸಬೇಕೆಂಬ ಹೋರಾಟ ನಡೆಯುತ್ತಲೇ ಇತ್ತು. ಆದ್ರೆ ಹೈಕೋರ್ಟ್‌ ಸೂಚನೆ ಮೇರೆ ರಾತ್ರೋರಾತ್ರಿ ಸಮಾಧಿಯನ್ನ ತೆರವುಗೊಳಿಸಲಾಗಿದೆ. ಇದನ್ನೂ ಓದಿ: ಸಂವಿಧಾನ, ಮತದಾನದ ಹಕ್ಕು ರಕ್ಷಣೆಗಾಗಿ ರಾಹುಲ್ ಗಾಂಧಿ ಹೋರಾಟಕ್ಕೆ ಸಂಪೂರ್ಣ ಬೆಂಬಲ: ಡಿಕೆಶಿ

    ಮೈಸೂರಿನಲ್ಲುಂಟು ವಿಷ್ಣು ಸ್ಮಾರಕ
    ಸದ್ಯ ಮೈಸೂರಿನಲ್ಲಿ ಈಗಾಗಲೇ ಒಟ್ಟು 2.75 ಎಕ್ರೆ ಪ್ರದೇಶದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಆಗಿದೆ. ವಿಷ್ಣು ಸಿನಿಮಾದಲ್ಲಿನ ಪ್ರಶಸ್ತಿಗಳೂ ಸ್ಮಾರಕದ ಮ್ಯೂಸಿಯಂನಲ್ಲಿದೆ. ವಿಶೇಷವಾದ ವಿಷ್ಣು ಪುತ್ಥಳಿಯನ್ನೂ ನಿರ್ಮಿಸಲಾಗಿದೆ. ನಟನ ಚಲನಚಿತ್ರ ಪ್ರಯಾಣದ ಗ್ಯಾಲರಿ, ವಿಷ್ಣು ಅವರ ಅಪರೂಪದ 600ಕ್ಕೂ ಹೆಚ್ಚು ಫೋಟೋಗಳು, ವಿಷ್ಣು ಬಳಸುತ್ತಿದ್ದ ವಸ್ತುಗಳು, ಬಟ್ಟೆ ಇಲ್ಲಿ ನೋಡಬಹುದಾಗಿದೆ. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ವಿಷ್ಣುವರ್ಧನ್ ಸ್ಮಾರಕಕ್ಕೆ ಸೆಪ್ಟೆಂಬರ್ 15, 2020 ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ವಿಷ್ಣು ಸ್ಮಾರಕದಲ್ಲಿ ಎರಡು ಕ್ಲಾಸ್ ರೂಮ್ ಕೂಡ ನಿರ್ಮಾಣ ಮಾಡಲಾಗಿದೆ. ಆಡಿಟೋರಿಯಂ ಕೂಡ ಇಲ್ಲಿ ನಿರ್ಮಿಸಲಾಗಿದೆ. ಇದನ್ನೂ ಓದಿ: ಅಸಂಬದ್ಧ ವಿಶ್ಲೇಷಣೆ.. ದೇಶದ ಜನತೆ ಕ್ಷಮೆಯಾಚಿಸಿ: ರಾಗಾ ‘ಮತಗಳ್ಳತನ’ ಆರೋಪಕ್ಕೆ ಚುನಾವಣಾ ಆಯೋಗ ಆಕ್ರೋಶ 

  • ನಟ ವಿಷ್ಣುವರ್ಧನ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ಮನವಿ

    ನಟ ವಿಷ್ಣುವರ್ಧನ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ಮನವಿ

    – ಸಿಎಂ ಭೇಟಿಯಾಗಿ ಮನವಿ ಸಲ್ಲಿಸಿದ ವಿಷ್ಣು ಅಳಿಯ ಅನಿರುದ್ಧ್‌

    ದಿವಂಗತ ಸಾಹಸಸಿಂಹ ವಿಷ್ಣುವರ್ಧನ್‌ (Vishnuvardhan) ಅವರಿಗೆ ಮರಣೋತ್ತರ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿ ಪ್ರದಾನಕ್ಕೆ ಮನವಿ ಸಲ್ಲಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವಿಷ್ಣು ಅಳಿಯ ಅನಿರುದ್ಧ್‌ ಮನವಿ ಮಾಡಿದ್ದಾರೆ.

    ಸೆಪ್ಟೆಂಬರ್ 18 ರಂದು ವಿಷ್ಣುವರ್ಧನ್ ಅವರ 75ನೇ ಜನ್ಮದಿನ. ಈ ವಿಶೇಷ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿ, ಇದು ಅವರ ಅಪಾರ ಅಭಿಮಾನಿಗಳ ಆಕಾಂಕ್ಷೆ ಎಂದು ಅನಿರುದ್ಧ್‌ (Aniruddha Jatkar) ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ತಲೈವಾನ್ ತಲೈವಿ ಟ್ರೈಲರ್‌ ರಿಲೀಸ್ – ವಿಜಯ್ ಸೇತುಪತಿ-ನಿತ್ಯಾ ಮಸ್ತ್ ಮಸ್ತ್..!

    ಚಲನಚಿತ್ರ ರಂಗ, ಕಲಾರಂಗಕ್ಕೆ ವಿಷ್ಣು ಅವರ ಕೊಡುಗೆ ಅಪಾರ. ಇನ್ನೂ ಅವರಿಗೆ ಕೇಂದ್ರದಿಂದಲೂ ಪದ್ಮಶ್ರೀ ಪ್ರಶಸ್ತಿ ಕೊಟ್ಟಿಲ್ಲ. ಕರ್ನಾಟಕ ಸರ್ಕಾರದಿಂದಲೂ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿಲ್ಲ. ಹೀಗಾಗಿ, ಅವರ 75ನೇ ವರ್ಷದ ವಿಶೇಷ ಸಂದರ್ಭದಲ್ಲಾದರೂ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವಂತೆ ಅನಿರುದ್ಧ್ ಮನವಿ ಮಾಡಿದ್ದಾರೆ.

  • ಡಾ.ವಿಷ್ಣುವರ್ಧನ್ ಆಪ್ತ, ನಿರ್ದೇಶಕ ವಿ.ಆರ್. ಭಾಸ್ಕರ್ ನಿಧನ

    ಡಾ.ವಿಷ್ಣುವರ್ಧನ್ ಆಪ್ತ, ನಿರ್ದೇಶಕ ವಿ.ಆರ್. ಭಾಸ್ಕರ್ ನಿಧನ

    ಟ ಡಾ.ವಿಷ್ಣುವರ್ಧನ್ (Dr. Vishnuvardhan) ಅವರಿಗೆ ಬಹುಕಾಲ ಸಹಾಯಕರಾಗಿದ್ದ ನಟ, ಸಾಹಿತಿ ಹಾಗೂ ನಿರ್ದೇಶಕ ವಿ.ಆರ್. ಭಾಸ್ಕರ್ (V.R Bhaskar) ಇಂದು ಮುಂಜಾನೆ 3 ಗಂಟೆಗೆ ವಿಧಿವಶರಾಗಿದ್ದಾರೆ (Passed away). ಅನಾರೋಗ್ಯದಿಂದ ಬಳಲುತ್ತಿದ್ದ ಭಾಸ್ಕರ್ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

    ವಿಷ್ಣುವರ್ಧನ್ ಅವರಿಗೆ ಸಹಾಯಕರಾಗುವುದರ ಜೊತೆಗೆ ತೀರಾ ಆತ್ಮೀಯರೂ ಆಗಿದ್ದರು. ಈ ಒಡನಾಟವೇ ಅವರನ್ನು ನಟರನ್ನಾಗಿ, ನಿರ್ದೇಶಕರನ್ನಾಗಿ ಮತ್ತು ಬರಹಗಾರರನ್ನಾಗಿ ಮಾಡಿತ್ತು. ಇತ್ತೀಚೆಗಷ್ಟೇ ಅವರು ಮಗನ ಬಗ್ಗೆ ವಿಡಿಯೋವೊಂದನ್ನು ಮಾಡಿ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಮಗನಿಗೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು. ನಂತರ ಮಗನನ್ನು ಮತ್ತು ಪತ್ನಿಯನ್ನೂ ಕಳೆದುಕೊಂಡರು. ಇದನ್ನೂ ಓದಿ:ಬಾಲಿವುಡ್‌ಗೆ ಸಾಯಿ ಪಲ್ಲವಿ- ಸ್ಟಾರ್‌ ನಟನ ಪುತ್ರನಿಗೆ ‘ಫಿದಾ’ ಬ್ಯೂಟಿ ನಾಯಕಿ

    ರುದ್ರ ನಾಗ, ಕರ್ತವ್ಯ, ನನ್ನ ಶತ್ರು ಪೊಲೀಸ್ ಮತ್ತು ದಾದಾ, ರುದ್ರ ವೀಣೆ, ದಾದಾ, ಆರಾಧನೆ, ಕರುಳಿನ ಕುಡಿ, ಕದಂಬ, ಸುಪ್ರಭಾತ, ರುದ್ರ, ಲಯನ್ ಜಗಪತಿ ರಾವ್, ಒಂದಾಗಿ ಬಾಳು, ಡಿಸೆಂಬರ್ 31, ಹೃದಯವಂತ, ನೀನು ನಕ್ಕರೆ ಹಾಲು ಸಕ್ಕರೆ, ರವಿವರ್ಮ, ಏಕದಂತ, ಡಾಕ್ಟರ್ ಕೃಷ್ಣ, ಗಾಡ್ ಫಾದರ್, ಆಪ್ರಮಿತ್ರ, ಆಪ್ತರಕ್ಷಕ ಸೇರಿದಂತೆ  ‌ವಿಷ್ಣುವರ್ಧನ್ ಅವರ ಹಲವು ಸಿನಿಮಾಗಳಿಗೆ ಸಂಭಾಷಣೆ, ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

    ಅನುರಾಗ ದೇವತೆ, ಮನೆಮನೆ ರಾಮಾಯಣ, ಸಕಲಕಲಾವಲ್ಲಭ, ಹೃದಯಾಂಜಲಿ, ಪಂಜಾಬಿ ಹೌಸ್, ಮುಂತಾದ ಸಿನಿಮಾಗಳಿಗೆ ವಿ.ಆರ್.ಭಾಸ್ಕರ್ ನಿರ್ದೇಶಕರು. ಇಂದು ಮೈಸೂರಿನ (Mysore) ಚಾಮುಂಡಿ ಬೆಟ್ಟದ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಜಮಾನ ಪ್ರೀಮಿಯರ್ ಲೀಗ್ ಶುರು: ಡಾ.ವಿಷ್ಣು ಹೆಸರಿನಲ್ಲಿ ಅಭಿಮಾನಿಗಳ ಅಭಿಮಾನ

    ಯಜಮಾನ ಪ್ರೀಮಿಯರ್ ಲೀಗ್ ಶುರು: ಡಾ.ವಿಷ್ಣು ಹೆಸರಿನಲ್ಲಿ ಅಭಿಮಾನಿಗಳ ಅಭಿಮಾನ

    ಇಂದಿನಿಂದ ಎರಡು ದಿನಗಳ ಕಾಲ ಡಾ.ವಿಷ್ಣುವರ್ಧನ್ ಹೆಸರಿನಲ್ಲಿ ಅವರ ಅಭಿಮಾನಿಗಳು ‘ಯಜಮಾನ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿದೆ. ಹಲವು ತಂಡಗಳು ಈ ಲೀಗ್ ನಲ್ಲಿ ಭಾಗಿಯಾಗಿದ್ದು, ಕ್ರಿಕೆಟ್ ಪಂದ್ಯಾವಳಿಯನ್ನು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಇಂದು ಉದ್ಘಾಟಿಸಿದ್ದಾರೆ. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?

    ಐಪಿಎಲ್, ಸಿಸಿಎಲ್, ಬಿಸಿಎಲ್ ಹೀಗೆ ಹಲವು ಹೆಸರಿನಲ್ಲಿ ಸಿಲೆಬ್ರಿಟಿ ಕ್ರಿಕೆಟ್ ಲೀಗ್ ನೋಡಿದವರು ಇದೀಗ ಡಾ.ವಿಷ್ಣು ಹೆಸರಿನ ವೈಪಿಎಲ್ ನೋಡುವ ಭಾಗ್ಯವನ್ನು ವಿಷ್ಣು ಅವರ ಅಭಿಮಾನಿಗಳು ಕ್ರಿಕೆಟ್ ಪ್ರೇಮಿಗಳಿಗೆ ಕಲ್ಪಿಸಿಕೊಟ್ಟಿದ್ದು ವಿಶೇಷ. ಹಲವು ತಂಡಗಳು ಈ ವೈಪಿಎಲ್ ನಲ್ಲಿ ಈಗಾಗಲೇ ಭಾಗಿಯಾಗಿ ಕ್ರಿಕೆಟ್ ಆಡುತ್ತಿವೆ. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್

    ಮೇ 7 ಮತ್ತು 8 ರಂದು ಪಂದ್ಯಾವಳಿ ಆಯೋಜನೆಯಾಗಿದ್ದು, ಇದರ ಪ್ರಯುಕ್ತವಾಗಿ ಥೀಮ್ ಸಾಂಗ್ ಕೂಡ ನಿನ್ನೆ ಬಿಡುಗಡೆಯಾಗಿದೆ. ಪ್ರಮೋದ್ ಮೆರವಂತೆ ಸಾಹಿತ್ಯ, ಹೇಮಂತ್ ಜೋಯಿಸ್ ಸಂಗೀತ ಹಾಗೂ ಚೇತನ್ ನಾಯ್ಕ ಅವರ ಕಂಠಸಿರಿಯಲ್ಲಿ ಈ ಥೀಮ್ ಸಾಂಗ್ ಮೂಡಿ ಬಂದಿದೆ. 12 ತಂಡಗಳಿಗೆ ಈ ಹಾಡು ಉತ್ತೇಜನ ನೀಡಲಿದೆ. ಇದನ್ನೂ ಓದಿ : ಹೆಸರಾಂತ ಹಾಸ್ಯ ಕಲಾವಿದ ಮೋಹನ್ ಜೂನೇಜ ಇನ್ನಿಲ್ಲ

    ಇಂದು ಬೆಳಗ್ಗೆ ಬೆಂಗಳೂರಿನ ಮಾಗಡಿ ಮುಖ್ಯರಸ್ತೆಯ ಗಿಡ್ಡೇನಹಳ್ಳಿ ಗಾಡಿ ಬಳಿ ಪಂದ್ಯಗಳು ನಡೆಯಲಿದ್ದು, ಅಸಂಖ್ಯಾತ ಅಭಿಮಾನಿಗಳು ಈ ಮೈದಾನದಲ್ಲಿ ಜಮಾಯಿಸಿದ್ದಾರೆ. ‘ಯಜಮಾನ್ರೆಗೆ ಕ್ರಿಕೆಟ್ ಅಂದರೆ ಪ್ರಾಣ. ಈ ಹಿಂದೆ ವೃತ್ತಿ ನಿರತ ಕ್ರಿಕೆಟ್ ಆಟಗಾರರ ಜತೆಯೂ ಯಜಮಾನರಾದ ಡಾ.ವಿಷ್ಣು ಸರ್ ಕ್ರಿಕೆಟ್ ಆಡಿದ್ದಾರೆ. ಪ್ರತಿ ವರ್ಷವೂ ಅವರು ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡುತ್ತಿದ್ದರು. ಅದನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ’ ಅಂತಾರೆ ವೀರಕಪುತ್ರ ಶ್ರೀನಿವಾಸ್.

    ಬೆಂಗಳೂರು ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ಯದುನಂದನ್ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ಆನಂದ್ ಸೇರಿದಂತೆ ಹಲವು ಪದಾಧಿಕಾರಿಗಳು ಈ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದಾರೆ. ಈ ಪಂದ್ಯಾವಳಿಯ ನೇತೃತ್ವವನ್ನು ವೀರಕಪುತ್ರ ಶ್ರೀನಿವಾಸ್ ವಹಿಸಿಕೊಂಡಿದ್ದಾರೆ. ವೀರಲೋಕ ಸೇರಿದಂತೆ ಹಲವು ಟೀಮ್ ಗಳು ಈ ಪಂದ್ಯಾವಳಿಯಲ್ಲಿ ಭಾಗಿಯಾಗಿರುವುದು ವಿಶೇಷ.

  • ಅಂದು ವಿಷ್ಣು ಹೆಸರಿನಲ್ಲಿ ‘ಉಪ್ಪಿನಕಾಯಿ’ ಇಂದು ‘ಮೆಡಿಕಲ್ ಸ್ಟೋರ್’

    ಅಂದು ವಿಷ್ಣು ಹೆಸರಿನಲ್ಲಿ ‘ಉಪ್ಪಿನಕಾಯಿ’ ಇಂದು ‘ಮೆಡಿಕಲ್ ಸ್ಟೋರ್’

    ಮ್ಮ ನೆಚ್ಚಿನ ನಟನ ಹೆಸರಿನಲ್ಲಿ ಅಭಿಮಾನಿಗಳು ನಾನಾ ರೀತಿಯ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಡಾ.ವಿಷ್ಣು ವರ್ಧನ್ ಅವರ ಹೆಸರಿನಲ್ಲಿ ಈಗಾಗಲೇ ಸಾಕಷ್ಟು ಜನಪರ ಕೆಲಸಗಳು ಆಗಿವೆ. ಅವುಗಳ ಜತೆ ಡಾ.ವಿಷ್ಣು ಹೆಸರಿನಲ್ಲೇ ಕೆಲ ಉತ್ಪನ್ನಗಳು ಕೂಡ ಮಾರುಕಟ್ಟೆಗೆ ಬಂದಿವೆ. ಇದನ್ನೂ ಓದಿ : ಹಿಂದಿ ರಾಷ್ಟ್ರ ಭಾಷೆ : ನಾನು ಕನ್ನಡ ಪಂಡಿತನೂ, ಹಿಂದಿ ಪಂಡಿತನೂ ಹೌದು -ಯೋಗರಾಜ್ ಭಟ್

    ಮಂಗಳೂರಿನ ಅಭಿಮಾನಿಯೊಬ್ಬರು ಮಿಡಿ ಉಪ್ಪಿನಕಾಯಿಯನ್ನು ಮಾರುತ್ತಿದ್ದರು. ಅವರು ವಿಷ್ಣುವರ್ಧನ್ ಅವರು ಮಹಾನ್ ಅಭಿಮಾನಿ. ಯಜಮಾನ ಸಿನಿಮಾ ನೋಡಿದ ನಂತರ ತಮ್ಮ ಮಿಡಿ ಉಪ್ಪಿನಕಾಯಿಗೆ ‘ಯಜಮಾನ ಮಿಡಿ ಉಪ್ಪಿನಕಾಯಿ’ ಎಂದು ಹೆಸರಿಟ್ಟರು. ಈಗ ಅದು ಅದೇ ಹೆಸರಿನಲ್ಲೇ ಫೇಮಸ್ ಆಗಿದೆ. ಇದನ್ನೂ ಓದಿ : ಪುನೀತ್‌ಗೆ ಅವಮಾನ: ತಿರುಪತಿ ತಿರುಮಲ ದೇವಸ್ಥಾನಕ್ಕೆ ಅಭಿಮಾನಿಗಳು ಮುತ್ತಿಗೆ

    ಈಗ ಮತ್ತೊಬ್ಬ ದೊಡ್ಡ ಅಭಿಮಾನಿ ಡಾ.ವಿಷ್ಣುವರ್ಧನ್ ಅವರ ಹೆಸರಿನಲ್ಲೇ ಅವರ ಕೋಟಿಗೊಬ್ಬ ಸಿನಿಮಾವನ್ನು ಸ್ಫೂರ್ತಿಯಾಗಿ ತಗೆದುಕೊಂಡು ಮೆಡಿಕಲ್ ಶಾಪ್ ತೆರೆದಿದ್ದಾರೆ. ಈ ವಿಷಯವನ್ನು ಡಾ. ವಿಷ್ಣು ಸೇನಾ ಸಮಿತಿಯ ಅಧಿಕೃತ ವೆಬ್ ಸೈಟ್ ನಲ್ಲಿ ಹಂಚಿಕೊಂಡಿದ್ದು, ಈ ಮೆಡಿಕಲ್ ಶಾಪ್ ಅನ್ನು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಉದ್ಘಾಟಿಸಿದ್ದಾರೆ. ‘ಯಜಮಾನ್ರ ಮೇಲಿನ ಅಗಾಧ ಅಭಿಮಾನದ ಕಾರಣಕ್ಕಾಗಿ ಕೋಟಿಗೊಬ್ಬ ಹೆಸರಿಟ್ಟು, ಮೆಡಿಕಲ್ ಶಾಪ್ ಒಳಗೂ ವಿಷ್ಣು ಅವರ ದೊಡ್ಡ ಫೋಟೋ ಇಟ್ಟಿದ್ದಾರೆ. ಹೀಗೆ ಇಟ್ಟು ಪೂಜಿಸುತ್ತಾ ಇರುವುದು ಡಾ.ವಿಷ್ಣು ಅವರ ಅಪ್ಪಟ ಅಭಿಮಾನಿ ಹಾಸನದ ವಿಜಯ್ ಬಿಳಿಮಗ್ಗ’ ಎಂದು ಬರೆದುಕೊಂಡಿದ್ದಾರೆ ವೀರಕಪುತ್ರ ಶ್ರೀನಿವಾಸ್. ಇದನ್ನೂ ಓದಿ : ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್

    ಇದರ ಹೊರತಾಗಿಯೂ ವಿಷ್ಣು ಅವರ ಹೆಸರಿನಲ್ಲಿ ಐಎಎಸ್ ಉಚಿತ ಕೋಚಿಂಗ್ ನೀಡಲಾಗುತ್ತಿದೆ. ಕನ್ನಡ ಶಾಲೆಗಳನ್ನು ದತ್ತು ಪಡೆಯಲಾಗಿದೆ. ಸಾವಿರಾರು ಗಿಡಗಳನ್ನು ನಡೆಲಾಗಿದೆ. ರಕ್ತದಾನ ಶಿಬಿರ, ಅನ್ನದಾನ ಶಿಬಿರದಂತೆ ಕಾರ್ಯಗಳನ್ನು ಅಭಿಮಾನಿಗಳು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ.

  • ಫ್ಯಾನ್ಸ್ ಒತ್ತಾಯದ ಮೇರೆಗೆ ವಿಷ್ಣುದಾದ ಇತಿಹಾಸ ಬರೆದ ಮೂವೀ ರೀ-ರಿಲೀಸ್

    ಫ್ಯಾನ್ಸ್ ಒತ್ತಾಯದ ಮೇರೆಗೆ ವಿಷ್ಣುದಾದ ಇತಿಹಾಸ ಬರೆದ ಮೂವೀ ರೀ-ರಿಲೀಸ್

    ನ್ನಡ ಚಿತ್ರರಂಗವೇ ಎಂದೂ ಮರೆಯಲು ಅಸಾಧ್ಯವಾದ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿನಾಯದ ಸಿನಿಮಾ ಮತ್ತೆ ಚಂದನವನದಲ್ಲಿ ರೀ-ರಿಲೀಸ್ ಆಗುತ್ತಿದೆ. ಕನ್ನಡ ಸಿನಿಲೋಕದಲ್ಲೇ ವಿಜೃಂಭಿಸಿದ ‘ಕೃಷ್ಣ ನೀ ಬೇಗನೆ ನಾರೋ’ ಸಿನಿಮಾ ಮತ್ತೆ ರಿಲೀಸ್ ಆಗುತ್ತಿದೆ. ಈ ಸುದ್ದಿ ಕೇಳಿ ದಾದಾನ ಅಭಿಮಾನಿಗಳು ಖುಷ್ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

    ಆಂಗ್ರಿ ಮ್ಯಾನ್ ಆಗಿಯೇ ಸಿನಿಲೋಕಕ್ಕೆ ಕಾಲಿಟ್ಟ ಸಂಪತ್ ಕುಮಾರ್ ನಂತರ ಇಡೀ ಸಿನಿರಸಿಕರ ಮನದಲ್ಲಿ ದಾದಾ ಆಗಿ ಮೆರೆಯುತ್ತಿದ್ದಾರೆ. ವಿಷ್ಣು ಅವರ ಸೃಜನಶೀಲ ನಡೆ, ಕನ್ನಡ ಸಿನಿಮಾರಂಗಕ್ಕೆ ಅವರು ಕೊಟ್ಟ ಕೊಡುಗೆಯನ್ನು ಯಾರು ಮರೆಯುವಂತಿಲ್ಲ. ಇವರು ಮಾಡಿದ ಆಲ್ ಮೋಸ್ಟ್ ಸಿನಿಮಾಗಳು ಸಿನಿಲೋಕದಲ್ಲಿ ಹೊಸದೊಂದು ಅಲೆಯನ್ನು ಸೃಷ್ಟಿ ಮಾಡಿತ್ತು.

    ವಿಷ್ಣು ಸಿನಿಮಾಗೆ ಮತ್ತೆ ಬಿಡುಗಡೆ ಭಾಗ್ಯ

    ಅದೇ ರೀತಿ 1986ರಲ್ಲಿ ತೆರೆಕಡ ‘ಕೃಷ್ಣ ನೀ ಬೇಗನೆ ಬಾರೋ’ ಸಿನಿಮಾ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಈ ಸಿನಿಮಾವನ್ನು ಭಾರ್ಗವ ಅವರು ನಿರ್ದೇಶನ ಮಾಡಿದ್ದರು. ಈ ಸಿನಿಮಾ 1983ರಲ್ಲಿ ಹಿಂದಿಯಲ್ಲಿ ರಿಲೀಸ್ ಆದ ‘ಸೌತೇನ್’ ಸಿನಿಮಾದ ರಿಮೇಕ್ ಆಗಿದ್ದರೂ, ‘ಕೃಷ್ಣ ನೀ ಬೇಗನೆ ಬಾರೋ’ ಸಿನಿಮಾದಲ್ಲಿನ ಕಲಾವಿದರ ಅಭಿನಾಯ ಮೂಲ ನಟರನ್ನು ಮರೆಸಿತ್ತು. ಹಿಂದಿಯಾ ‘ಸೌತೇನ್’ ನಲ್ಲಿಯೂ ದಿಗ್ಗಜರೇ ನಟಿಸಿದ್ದರೂ, ಕನ್ನಡದ ಕಲಾವಿದರೂ ಕಮಾಲ್ ಮಾಡಿದ್ದರು.

    ಈ ಸಿನಿಮಾದಲ್ಲಿ ವಿಷ್ಣುವರ್ಧನ್, ಭವ್ಯ, ಕಿಮ್ ಮತ್ತು ಮುಖ್ಯಮಂತ್ರಿ ಚಂದ್ರು ನಟಿಸಿದ್ದರು. ಅಲ್ಲದೇ ಬಾಕ್ಸಾಫೀಸ್‍ನಲ್ಲಿ ಸೂಪರ್ ಹಿಟ್ ಆಗಿದ್ದು, ಕನ್ನಡ ಕಲಾವಿದರ ಬಗ್ಗೆ ಇಡೀ ಭಾರತೀಯ ಚಿತ್ರರಂಗ ಮಾತನಾಡುವಂತೆ ಮಾಡಿತ್ತು. ಅದಕ್ಕೆ ಈ ಸಿನಿಮಾವನ್ನು ರೀ-ರಿಲೀಸ್ ಮಾಡಲಾಗುತ್ತಿದೆ.

    10 Interesting Facts about Vishnuvardhan – DADA of Kannada Cinema - MetroSaga

    ಹೊಸ ರೂಪದಲ್ಲಿ ಕೃಷ್ಣ!
    ‘ಕೃಷ್ಣ ನೀ ಬೇಗನೆ ಬಾರೋ’ ಸಿನಿಮಾವನ್ನು ಮುನಿರಾಜು ಅವರು ರೀ-ರಿಲೀಸ್ ಮಾಡುತ್ತಿದ್ದ, ಈ ಸಿನಿಮಾಗೆ ಹೊಸ ರೂಪವನ್ನು ನೀಡುತ್ತಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘ಕೃಷ್ಣ ನೀ ಬೇಗನೆ ಬಾರೋ’ ಸಿನಿಮಾವನ್ನು ನಾನು ಸಿನಿಮಾಸ್ಕೋಪ್, 7.1 ಸೌಂಡ್ ಎಫೆಕ್ಟ್, ಡಿ ಐ, ಕಲರಿಂಗ್ ಎಲ್ಲವನ್ನು ಮಾಡಿಸಿ, ಹೊಚ್ಚ ಹೊಸ ಸಿನಿಮಾದ ಹಾಗೆ ಮಾಡಿದ್ದೇನೆ. ಆಗ ಈ ಸಿನಿಮಾ ಈಸ್ಟ್‍ಮನ್ ಕಲರ್ ಇತ್ತು. ಈಗಿನ ಟ್ರೆಂಡ್‍ಗೆ ತಕ್ಕಂತೆ ಸಿನಿಮಾಗಳನ್ನು ಮಾಡುತ್ತಿದ್ದೇನೆ. ಏಪ್ರಿಲ್ ಮೊದಲವಾರ ಅಥವಾ ಎರಡನೇ ವಾರ ಈ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

    ಫ್ಯಾನ್ಸ್ ಒತ್ತಾಯ!
    ನಾನು ಹೆಚ್ಚು ಅಣ್ಣಾವ್ರ ಸಿನಿಮಾಗಳನ್ನು ರೀ-ರಿಲೀಸ್ ಮಾಡುತ್ತಿದ್ದೆ. ಆದರೆ ದಾದಾನ ಸಿನಿಮಾಗಳನ್ನು ರಿಲೀಸ್ ಮಾಡಬೇಕು ಎಂದು ಅಭಿಮಾನಿಗಳು ಕೇಳಿಕೊಂಡರು. ಅದಕ್ಕೆ ಈ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದೆ. ಹೊಸ ರೀತಿಯಲ್ಲಿ ಸಿನಿಮಾವನ್ನು ತಯಾರು ಮಾಡುತ್ತಿದ್ದೇನೆ. ಈ ಸಿನಿಮಾವನ್ನು ಅದ್ದೂರಿಯಾಗಿ ರಿಲೀಸ್ ಮಾಡಬೇಕು ಎಂದುಕೊಂಡಿದ್ದೇನೆ. ಅಪ್ಪು ಸಿನಿಮಾವಿರುವುದರಿಂದ ಏಪ್ರಿಲ್ ನಲ್ಲಿ ಸಿನಿಮಾ ರಿಲೀಸ್ ಮಾಡಲು ನಿರ್ಧಾರಿಸಿದ್ದೇನೆ ಎಂದು ತಿಳಿಸಿದರು. ಒಟ್ಟಿನಲ್ಲಿ ಈ ಸುದ್ದಿ ಕೇಳಿದ ಅಭಿಮಾನಿಗಳು ಸಖತ್ ಖುಷಿಯಲ್ಲಿ ಇದ್ದಾರೆ.